murali nath

Comedy Others

3  

murali nath

Comedy Others

ತಿರುಗು ಭಾಣ

ತಿರುಗು ಭಾಣ

1 min
36ಇದು ಆಂಧ್ರಪ್ರದೇಶದ ಒಬ್ಬ TTE ನಿವೃತ್ತಿ ಯಾಗುವ ಸಮಯದ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದು . ಆದರೆ ಇದನ್ನು ವಿಡಿಯೋ ಮಾಡಿ ಮಸಾಲೆ ಸೇರಿಸಿ ಮತ್ತೆಲ್ಲೋ ನಡೆದ ಹಾಗೆ ತೋರಿಸಿ ವಾಟ್ಸಪ್ ಮೂಲಕ ಹಲವರು ಹರಿದು ಬಿಟ್ಟಿದ್ದಾರೆ . ಇರಲಿ ನೀವೂ ಓದಿ ಚೆನ್ನಾಗಿದೆ.


ಒಮ್ಮೆ ಟ್ರೈನ್ ನಲ್ಲಿ ನಾಲ್ಕು ಜನ ಕಾಲೇಜ್ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದರು. ಅವರ ಮುಂದಿನ ಸೀಟಿನಲ್ಲಿ ಹಳ್ಳಿಯವನಂತೆ ಕಾಣುವ ವೃದ್ಧರು ಕುಳಿತಿದ್ದರು. ಎಲ್ಲರೂ ಹಿಂದಿನ ಸ್ಟೇಷನ್ ನಲ್ಲಿ ಇಳಿದು ಅಕ್ಕಪಕ್ಕದಲ್ಲಿ ಬೇರೆ ಯಾರೂ ಇರಲಿಲ್ಲ. ಈ ಸಮಯದಲ್ಲಿ ಈ ಹುಡುಗರಿಗೆ ಮೋಜು ಮಸ್ತಿ ಮಾಡೋಕೆ ಮತ್ತಷ್ಟು ಅನುಕೂಲ ಆಯ್ತು. ಎಲ್ಲಾ ಸೇರಿ ಒಂದು ತಮಾಷೆ ಮಾಡೋಣ ಅಂತ ನಿರ್ಧರಿಸಿದರು . ಅವರಲ್ಲಿ ಒಬ್ಬ ಹೇಳಿದ ಚೈನ್ ಎಳೆಯೋಣ ಟ್ರೈನ್ ನಿಲ್ಲುತ್ತೆಮಜಾ ಇರುತ್ತೆ . ಎರಡು ಸಾವಿರ ರೂಪಾಯಿ ಫೈನ್ ಹಾಕ್ತಾರೆ .ಎಲ್ಲರ ಹತ್ತಿರ ಇರೋ ಹಣ ಕೂಡಿಸಿ ಇಟ್ಟುಕೊಂಡು ಇರೋಣ ಕೇಳಿದ್ರೆ ಕೊಟ್ಟು ಬಿಡೋಣ.ಇಲ್ಲದಿದ್ದರೆ ಜೈಲಿಗೆ ಹೋಗಬೇಕಾಗುತ್ತೆ ಅಂದ ಅವರಲ್ಲೊಬ್ಬ. ಒಪ್ಪಿ ಎಲ್ಲರೂ ತಮ್ಮಲಿದ್ದ ಹಣ ಕೊಟ್ಟರು. ಅಷ್ಟರಲ್ಲಿ ಒಬ್ಬ ನಾವೇಕೆ ಕೊಡಬೇಕು ಇಲ್ಲೊಬ್ಬ ಬಕ್ರ ಇಲ್ವಾ ಇವನೇ ಚೈನ್ ಎಳೆದದ್ದು ಅಂದ್ರೆ ಆಯ್ತು ಅಂತ ಹೊಸ idea ಕೊಟ್ಟ. ಅದೂ ಸರಿ ಅಂತ ಚೈನ್ ಎಳೆದರು ಟ್ರೈನ್ ನಿಲ್ತು ರೈಲ್ವೇ ಪೊಲೀಸ್ ಸಿಬ್ಬಂದಿ ಬಂದ್ರು .

ಯಾರು ಚೈನ್ ಎಳೆದಿದ್ದು ಅಂದ ತಕ್ಷಣ ಎಲ್ಲರೂ ಅಲ್ಲಿ ಸುಮ್ಮನೆ ನೋಡ್ತಾ ಕೂತಿದ್ದ ವ್ಯಕ್ತಿ ಕಡೆ ಬೆರಳು ತೋರಿಸಿದರು. ಅವನು ಹೌದು ಸ್ವಾಮಿ ನಾನೇ ಚೈನ್ ಎಳೆದಿದ್ದು . ಇವರು ನನ್ನಹತ್ತಿರ ಇದ್ದ ಎರಡು ಸಾವಿರ ಕಿತ್ಕೊಂಡಿದರೆ ಬೇಕಾದ್ರೆ ಇವನ ಶರ್ಟ್ ಜೇಬಲ್ಲಿ ನೋಡಿ ಎಲ್ಲಾ ಐನೂರುಗಳ ನೋಟುಗಳು ಅಂದ. ಅವರೆಲ್ಲ ಬೆಪ್ಪರಂತೆ ಕಣ್ಣು ಬಿಟ್ರು . ಅಷ್ಟರಲ್ಲಿ ಎಲ್ಲರನ್ನೂ ಹೊರಗೆ ಎಳೆದುಕೊಂಡು ಹೋದ್ರು . ಇವನು ಕೂತಕಡೆ ಅನಾಯಾಸವಾಗಿ ಎರಡು ಸಾವಿರ ಬಂತು ಅಂತ ನಗ್ತಾ ಇದ್ದ.


Rate this content
Log in

Similar kannada story from Comedy