ಡಾಕ್ಟರ್ ವಿಲಿಯಮ್ಸ್
ಡಾಕ್ಟರ್ ವಿಲಿಯಮ್ಸ್
ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆಯಿತೆನ್ನಲಾದ ಪವಾಡವೆಂದೇ ಹೇಳಬೇಕು. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸುಮಾರು ನಲವತ್ತು ವರ್ಷ ಆಸುಪಾಸಿನ ವ್ಯಕ್ತಿ ಒಂದು ಹಳೆಯ ಶಾರದಾ ದೇವಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದರು . ಆತನ ಹೆಸರು ರಾಜ ಗೋ ಪಾಲ್ ಶಾಸ್ತ್ರಿ . ಮೂರು ಜನ ಗಂಡು ಮಕ್ಕಳು. ದೇವಾಲಯದ ಅದಾಯದಲ್ಲೇ ಹೇಗೊ ಜೀವನ ನಿರ್ವಹಣೆ ಮಾಡಿಕೊಂಡು ನೆಮ್ಮದಿ ಇಂದಿದ್ದರು.
ಒಂದು ದಿನ ರಾಜಗೋಪಾಲ್ ಪೂಜೆ ಮುಗಿಸಿ ಕೊಂಡು ಬಂದವರೇ ಸಹಿಸಲಾಗದ ಹೊಟ್ಟೆ ನೋವು ಅಂತ ಹೇಳಿ ನೆಲದಲ್ಲಿ ಹೊರಳಾಡ್ತಿ ದ್ದಾರೆ. ಕಣ್ಣಲ್ಲಿ ನೀರು. ಹೆಂಡತಿ ಮಕ್ಕಳಗೆ ಏನು ಮಾಡಬೇಕೋ ತಿಳಿಯಲಿಲ್ಲ .ಅವಳಿಗೆ ತಿಳಿದ ಮನೆ ಔಷಧಿಗೂ ಕಡಿಮೆ ಆಗದಿದ್ದಾಗ ಪಕ್ಕದ ಮನೆಯವರ ಸಹಾಯದಿಂದ ಮನೆಗೆ ಹತ್ತಿರವಿದ್ದ ಒಂದು ಅಸತ್ರೆಗೆ ಬಂದರು. ಆ ಆಸ್ಪತ್ರೆ ಒಬ್ಬ ಕ್ರೈಸ್ತ ಪಾದ್ರಿ ಡಾಕ್ಟರ್ ವಿಲಿಯಮ್ಸ್ ನಡೆಸುತ್ತಿದ್ದು ಒಳ್ಳೆಯ ಹೆಸರು ಗಳಿಸಿತ್ತು. ಎಲ್ಲ ರೀತಿಯ ತಪಾ ಸಣೆಗಳನ್ನ ಮಾಡಿ ಕೆಲವು ಮಾತ್ರೆಗಳನ್ನು ಕೊ ಟ್ಟು ಡಾಕ್ಟರ್ ಹೇಳಿದರು. ನಿಮಗೆ ಒಂದು ಶಸ್ತ್ರ ಚಿಕಿತ್ಸೆ ಆಗಲೇ ಬೇಕಿದೆ. ಮತ್ತೆ ಹೀಗೆ ನೋವು ಬರುವುದರೊಳಗೆ ನೀವು ಬಂದು ಅಡ್ಮಿಟ್ ಆಗಿ. ನಿಮಗೂ ತಕ್ಷಣ ಹಣದ ವ್ಯವಸ್ಥೆ ಮಾಡಿಕೊಳ್ಳ ಬೇಕಾದರೆ ಕಷ್ಟ ಅಂತ ನನಗೂ ಗೊತ್ತು.ಅದ ಕ್ಕೋಸ್ಕರ ಹದಿನೈದು ದಿನ ಸಮಯ ಇದೆ ಅಂತ ಹೇಳುತ್ತಿದ್ದೇನೆ. ನಿಮ್ಮ ಪರಿಸ್ಥಿತಿ ನೋಡಿದರೆ ಈ ಗಲೇ ಅಡ್ಮಿಟ್ ಆಗಬೇಕು ಬೇಡ ,ನೋವು ಬರದ ಹಾಗೆ ಮಾತ್ರೆ ಕೊಟ್ಟಿದ್ದೇನೆ ಧೈರ್ಯವಾಗಿರಿ ಅಂತ ಹೇಳಿ ಹತ್ತು ಪೈಸೆ ಹಣ ತೆಗದು ಕೊಳ್ಳದೆ ಕಳುಹಿಸಿ ಕೊಟ್ಟರು. ಮನೆಗೆ ಬಂದು ಹೆಂಡತಿ ಹೇಳಿದಳು ದೇವರಂತ ಡಾಕ್ಟರ್ ಈ ಕಾಲದಲ್ಲಿ ಇಷ್ಟು ಒಳ್ಳೆ ಯವರು ಇರ್ತಾರಾ ಅಂದರೆ , ದೊಡ್ಡ ಮಗ ಅದೆ ಲ್ಲ ಉಪಾಯ ಬೇರೆ ಎಲ್ಲೋ ಆಪ ರೇಷನ್ ಗೆ ಹೋಗದೆ ಇಲ್ಲೇ ಬರಲಿ ಅಂತ ಹೀಗೆ ಮಾಡ್ತಾರೆ ಅಂದ. ಎರಡನೆಯವನು ಅದೆಲ್ಲಾ ಸುಳ್ಳು ಅವ ರಿಗೆ ಈ ಊರಲ್ಲಿ ಒಳ್ಳೆಯ ಹೆಸರಿದೆ. ಅವರು ಹಣಕ್ಕಾಗಿ ಆಸ್ಪತ್ರೆ ನಡೆಸುತ್ತಿಲ್ಲ ಅಂತ ಅವನಿಗೆ ತಿಳಿದದ್ದನ್ನ ಹೇಳಿದ. ಈಗ ಆಪರೇಷನ್ ಗೆ ಹಣ ಏನು ಮಾಡೋದು ಅಂತ ಯೋಚಿಸಿ. ಅಂತ ಅಮ್ಮ ಅವರಿಬ್ಬರ ಬಾಯಿ ಮುಚ್ಚಿಸಿದರು. ರಾಜ್ ಗೋಪಾಲ್ ನ ಅಣ್ಣ ಒಬ್ಬರು ಮಾತ್ರ ಸಹಾಯ ಮಾಡಬಹುದು. ಕಾರಣ ಅಣ್ಣ ಸ್ಥಿತಿ ವಂತ ಇಬ್ಬರು ಮಕ್ಕಳು ವಿದೇಶದಲ್ಲಿ ಇದ್ದಾರೆ.
ಅವನಿಗೆ ಐವತ್ತು ಸಾವಿರ ಏನೂ ಕಷ್ಟ ಆಗಲಾ ರದು . ಮಾರನೆ ದಿನವೇ ದೊಡ್ಡಪ್ಪನ ಮನೆಗೆ
ಎರಡನೇ ಮಗ ಹೊರಟ. ಬಹಳ ದಿನಗಳಿಂದ
ದೊಡ್ಡಪ್ಪನ ಕಡೆಯಿಂದ ಯಾವ ಸಮಾಚಾರವೂ ತಿಳಿದಿರಲಿಲ್ಲ. ಆದರೂ ತಮ್ಮನ ವಿಷಯದಲ್ಲಿ
ಅನುಕಂಪ ಇದ್ದೇ ಇರುತ್ತೆ. ನನ್ನ ಜೊತೆಗೆ ಬಂದು ಬಿಡ್ತಾರೆ ತಮ್ಮನಿಗೆ ಆಪರೇಷನ್ ಅಂತ ತಿಳಿದರೆ ಬಹಳ ನೊಂದು ಬಿಡ್ತಾರೆ ಅವರ ಹತ್ತಿರ ಕಾರ್ ಇರಬಹುದು , ಕಾರಲ್ಲೇ ಹೋಗೋಣ ಬಸ್ ಬೇಡ ಅಂದರೆ ನನಗೆ ಬಸ್ ಚಾರ್ಜ್ ಉಳಿಯತ್ತೆ ಅಂತ ತಲೆಯಲ್ಲಿ ಏನೇನೋ ಆಸೆಗಳನ್ನು ಹೊತ್ತು ಬಸ್ ನಲ್ಲಿ ಬಂದ .ಮನೆಗೆ ಬೀಗ . ಪಕ್ಕದ ಮನೆ ಯಲ್ಲಿ ವಿಚಾರಿಸಿದ ಅವರು ಅಮೇರಿಕಾಗೆ ಹೋ ಗಿ ಹದಿನೈದು ದಿನಗಳಾಯ್ತು ಅಂತ ತಿಳಿದು ಬುದ್ಧಿ
ಮಂಕಾಯ್ತ
ು. ವಾಪಸ್ ಹೊರಟು ಬಂದ.
ಒಂದು ವಾರ ಕಳೆದಿದೆ .ವಿಷಯ ತಿಳಿದು ದೇವಸ್ಥಾನಕ್ಕೆ ಬರೋ ಭಕ್ತರು ಹತ್ತು ಸಾವಿರ ರೂಪಾಯಿ ಸೇರಿಸಿ ಕೊಟ್ಟರು. ಉಳಿದ ಹಣದ ಚಿಂತೆ ಯಲ್ಲೇ ಅಂದು ಮಲಗಿದ್ದಾಗ ಮಧ್ಯ ರಾತ್ರಿ ಮತ್ತೆ ನೋವು ಹೆಚ್ಚಾಗಿ ಅದೇ ಆಸ್ಪತ್ರೆಗೆ ಬಂದಾಯ್ತು.
ಬೆಳಗಿನ ಜಾವ ಆಪರೇಷನ್ ಆಯಿತು.
ಮಕ್ಕಳು ಡಾಕ್ಟರ್ ಬಳಿ ಬಂದು ಅವರ ಕಷ್ಟ ಹೇಳಿ ಕೊಂಡಾಗ ಎಲ್ಲಾ ಸೇರಿ ಮೂವತ್ತೆರಡು ಸಾವಿರ
ಕಟ್ಟಿ ಸಾಕು ಅಂದರು .ಮೂರು ದಿನ ಆದ ಮೇಲೆ ಡಿಸ್ಚಾರ್ಜ್ ಮಾಡಲು ಡಾಕ್ಟರ್ ಹೇಳಿ ಇನ್ನೇನೂ
ತೊಂದರೆ ಇಲ್ಲ ಮನೆಗೆ ಹೋಗಿ ಆಂದಾಗ ಮಕ್ಕ ಳು ಹಣದ ವ್ಯವಸ್ಥೆ ಮಾಡಲು ಹೋಗಿದ್ದಾರೆ .ಅವರು ಬಂದ ಮೇಲೆ ಹಣ ಕಟ್ಟಿ ಹೋಗ್ತೀವಿ ಅಂದಾಗ ಮೂವತ್ತೆರಡು ಸಾವಿರ ಕಟ್ಟಿದ್ದೀರಲ್ಲ ಅಷ್ಟೇ ನಾನು ಹೇಳಿದ್ದು ಅಂದರು .ಇಲ್ಲಾ ಡಾಕ್ಟರ್
ಅವರಿವರು ಕೊಟ್ಟ ಹತ್ತು ಸಾವಿರ ಇಲ್ಲೇ ಇದೆ ನೋಡಿ ಅಂತ ತೋರಿಸಿದರು ,ಇವರ ತಾತ ಅಂತ ಹೇಳಿಕೊಂಡು ಬೆಳಗ್ಗೆ ಒಬ್ಬರು ವಯಸ್ಸಾದವರು ಬಂದು ರಾಜ ಗೋಪಾಲ್ ನನ್ನ ಮಗ ಏನೊ ಮನಸ್ಥಾಪಕ್ಕೆ ಅವನು ಆಗಲೇ ಮನೆ ಬಿಟ್ಟು ಬಂದ. ನಾನು ಹಣ ಕೊಟ್ಟರೆ ಅವನು ತೆಗೆದು ಕೊಳ್ಳಲ್ಲ ಅದಕ್ಕೆ ನಾನೇ ಈ ಹಣಕಟ್ಟಿ ಹೋಗೋಣ ಅಂತ ಬಂದೆ ಅಂತ ಹೇಳಿ ಕಟ್ಟಿ ದ್ದಾರೆ.ನಾನೂ ಆಗ ರಿಸೆಪ್ಷನ್ ನಲ್ಲೇ ಇದ್ದೆ ಅಂದರು .ನಮ್ಮ ಅಪ್ಪ ಸತ್ತು ಇಪ್ಪತ್ತು ವರ್ಷ ಆಯ್ತು. ಹೋಗಲಿ ಅವರು ಹೇಗಿದ್ದರು ಹೇಳಿ ಅಂದಾಗ ಕುಳ್ಳಗೆ ಬೆಳ್ಳಗೆ ಇದ್ದು ಕಾವಿ ಪಂಚೆ ಮಾತ್ರ ನಾನು ನೋಡಿದೆ .ಷರ್ಟ್ ಇರಲಿಲ್ಲ ಅಂತ ಹೇಳುತ್ತಾ ರಾಜ ಗೋಪಾಲ್ ಮಲಗಿದ್ದ ಕಡೆ ತಿರುಗಿ ನೋಡಿದಾಗ ಅವರ ತಲೆ ಹತ್ತಿರ ಇಟ್ಟು ಕೊಂಡಿದ್ದ ಫೋಟೋ ನೋಡಿ ಇವರೇ ಇವರೇ ಬಂದಿದ್ದು ಅಂದಾಗ ಮಾತೇ ಹೊರಡದಾಯ್ತು. ಡಾಕ್ಟರ್ ಇವರು ನಮ್ಮ ಗುರುಗಳು .ಇವರು ಇಲ್ಲಿಗೆಲ್ಲಾ ಬರಲ್ಲ. ಇವರು ಕಂಚಿ ಮಹಾ ಸ್ವಾಮಿ ಗಳು. ಒಂದು ನಿಮಿಷ ಬಂದೆ ಅಂತ ಡಾಕ್ಟರ್ ಅಲ್ಲಿಂದ ಓಡಿದರು .ಕಾರಣ ಯಾರೋ ಬ್ಲಾಕ್ ಮ್ಯಾಜಿಕ್ ಮಾಡೋರು ಇರಬಹುದು ಬ್ಯಾಂಕ್ ಗೆ ಇನ್ನೂ ಹಣ ಕಟ್ಟಿಲ್ಲದೇ ಇದ್ದರೆ ಆ ನೋಟು ಗಳು ನಕಲಿ ಇರಬಹುದೇ ಅಂತ ಅವರ ಯೋಚ ನೆ ಆಗಿತ್ತು. ಆದರೆ ಅದು ಅಸಲಿ ನೋಟುಗಳೇ ಆಗಿತ್ತು. ಮತ್ತೆ ವಾಪಸ್ ಬಂದು ಸರಿಯಾಗಿದೆ ಅಂದಾಗ ಡಾಕ್ಟರ್ ಹಣ ಕಟ್ಟಿದರೆ ನಿಮ್ಮವರು ರಸೀದಿ ಕೊಡೋದಿಲ್ಲವೇ ಅಂದಾಗ ಅದನ್ನು
ಅಲ್ಲೇ ಬಿಟ್ಟು ಹೋಗಿದಾರೆ ನಿಮಗೆ ಕೊಡಕ್ಕೆ ಅಂತ ನಮ್ಮವರು ಅಲ್ಲೇ ಇಟ್ಟು ಕೊಂಡಿದ್ದಾರೆ
ಅಂದರು. ಮತ್ತೆ ಏನೋ ಹೊಳೆದಂತೆ ಓಡಿ ಬಂದು ರಿಜಿಸ್ಟರ್ ತೆಗೆದು ನೊಡಿದರು. ಏಕೆಂದರೆ
ಹಣ ಕಟ್ಟುವವವರ ಹತ್ತಿರ ರುಜು ಮಾಡಿಸಿ ಕೊಳ್ಳುತ್ತಾರೆ. ಆ ವ್ಯಕ್ತಿ ರುಜು ಮಾಡುವಾಗ ಅಲ್ಲೇ ಇದ್ದರು .ನೋಡಿ ಯಾವ ಭಾಷೆ ಅಂತಾನೆ ತಿಳಿಯದೆ ನಕ್ಕು ಸುಮ್ಮನಾಗಿದ್ದರು. ಆದರೆ ಈಗ
ಆ ಜಾಗ ಖಾಲಿ .ಏನಾಯ್ತು ಅಂಥ ಡಾಕ್ಟರ್ ಗೂ ಆಶ್ಚರ್ಯ.
ಹದಿನೈದು ದಿನ ಆದ ಮೇಲೆ ಮತ್ತೆ ತಪಾಸಣೆ ಗಾಗಿ ಬಂದಾಗ ಡಾಕ್ಟರ್ ವಿಲಿಯಮ್ಸ್ ಟೇಬಲ್ ಮೇಲೆ ಅದೇ ಗುರುಗಳ ಫೋಟೋ ರಾಜ ಗೋ ಪಾಲ್ ಅದರ ಬಗ್ಗೆ ಏನೂ ಕೇಳಲಿಲ್ಲ. ಸುಮ್ಮನೆ ನೋಡುತ್ತಾ ಕೂತಿದ್ದರು.