Vaman Acharya

Abstract Inspirational Others

4  

Vaman Acharya

Abstract Inspirational Others

ಡಾಕ್ಟರ್ ಅಂದರೆ ಹೀಗಿರಬೇಕು

ಡಾಕ್ಟರ್ ಅಂದರೆ ಹೀಗಿರಬೇಕು

5 mins
475



 ಅಂದು ಹನುಮನ ಹಳ್ಳಿ ನಿವಾಸಿಗಳಿಗೆ ಕರಾಳ ದಿನ. ಅಬಾಲ ವೃದ್ಧರು ವಿಚಿತ್ರವಾದ ಕಾಯಿಲೆಯಿಂದ ಸಂಕಟ ಪಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ದೂರ ದರ್ಶನದಲ್ಲಿ ಪ್ರಸಾರವಾಗುವದನ್ನು ವೀಕ್ಷಿಸುತ್ತ ಇದ್ದ ಪವನಪುರ ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅನಿಕೇತನ ಮನಸ್ಸು ಕರಗಿತು. ಹನುಮನ ಹಳ್ಳಿ ಅನಿಕೇತನಿಗೆ ಅವಿನಾಭಾವ ಸಂಭಂಧ. 

ಹನುಮನ ಹಳ್ಳಿ ಬಿಟ್ಟು ಇಪ್ಪತ್ತೈದು ವರ್ಷ ಕಳೆದರೂ  ಅನಿಕೇತನಿಗೆ ಬಾಲ್ಯದ ನೆನಪುಗಳು ಮರುಕಳಿಸಿತು. ಸಾವನ್ನಪ್ಪಿದವರಲ್ಲಿ ಸಾಹುಕಾರ್ ಶಂಭುನಾಥ, ಅವರ ಪತ್ನಿ ಗಿರಿಜಮ್ಮ ನೋಡಿ  ಅನಿಕೇತನಿಗೆ ದು:ಖ ತಡೆಯಲು ಆಗಲಿಲ್ಲ. ಕಾಲೇಜು ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡಿದ ಅವರನ್ನು ಮರೆಯಲು ಆಗುವದೇ? 

ಜೀವ ಕಳೆದುಕೊಂಡವರು ಒಬ್ಬರೇ, ಇಬ್ಬರೇ, ಅನೇಕ ಪರಿಚಯದವರು. ಅನಿಕೇತನ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು. ಆಗ ಸಮಯ ಸಾಯಂಕಾಲ ಆರು ಗಂಟೆ. ಅದೇ ತಾನೆ ಆಸ್ಪತ್ರೆಯಿಂದ ಮನೆಗೆ ಬಂದ ಸಮಯ. ಹನುಮನ ಹಳ್ಳಿ ಗ್ರಾಮದ ದೃಶ್ಯಗಳು ಭಯಾನಕವಾಗಿರುವದು ದುರದೃಷ್ಟ.  ಗ್ರಾಮದ ಜನರು ಬಳಲುತ್ತ ಇರುವ ಕಾಯಿಲೆ ಯಾವುದು ಎಂದು ಡಾ. ಅನಿಕೇತನಿಗೆ ಲಕ್ಷಣಗಳ ಮೇಲೆ ಗೊತ್ತಾಯಿತು. ಅದಕ್ಕೆ ಬೇಕಾದ ಚಿಕಿತ್ಸೆ ಕೂಡಾ  ತಿಳಿಯಿತು. 

    

ಹನುಮನ ಹಳ್ಳಿ ಯಾವುದೇ ವೈದ್ಯಕೀಯ ಸೌಲಭ್ಯ ಇರದೇ ಇರುವದರಿಂದ ಜನರು ದೇವರಿಗೆ ಮೊರೆ ಹೋದರು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದು  ಆರು ಕಿಲೋಮೀಟರ್ ದೂರ ಹೊಸಹಳ್ಳಿ ಗ್ರಾಮ. ಅಲ್ಲಿಗೆ ಹೋಗಲು ವಾಹನ ಸೌಕರ್ಯ ಇಲ್ಲ. ಹದಗೆಟ್ಟ ರಸ್ತೆ. ಅನಿಕೇತನಿಗೆ ತಾನು ವೈದ್ಯನಾಗಿರುವುದು ರೋಗಿಗಳ ಸೇವೆ ಮಾಡುವುದಕ್ಕೆ. ಪವನಪುರದಿಂದ ಹನುಮನ ಹಳ್ಳಿ 25 ಕಿಲೋಮೀಟರ್ ದೂರ. ಪವನಪುರ ನಗಲ ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿಲೋಮೀಟರ. ಹನುಮನ ಹಳ್ಳಿ  ರಾಷ್ಟ್ರೀಯ ಹೆದ್ದಾರಿಯಿಂದ ಐದು ಕಿಲೋಮೀಟರ್ ಒಳಭಾಗದಲ್ಲಿದೆ.  ಒಳ ರಸ್ತೆ  ಮಣ್ಣು, ಕಲ್ಲುಗಳ ತುಂಡು ಹಾಗೂ ಮುಳ್ಳುಗಳಿಂದ ಇರುವದು. ಮಳೆಗಾಲದಲ್ಲಿ, ನಡಿಗೆಯ ಮೂಲಕ ಅಥವಾ ವಾಹನದ ಮೂಲಕ ಗ್ರಾಮವನ್ನು ತಲುಪುವುದು ಅಸಾಧ್ಯ. ಎಷ್ಟೇ ಕಷ್ಟ  ಇದ್ದರೂ ಅನಿಕೇತ ಹೋಗುವ ನಿರ್ಧಾರ ಮಾಡಿದ. ಸಮಯ ವಿಳಂಬ ಮಾಡದೇ ಅಲ್ಲಿಗೆ ಹೋಗುವ ವಿಚಾರ ಹಾಗೂ ಉದ್ದೇಶ  ಪತ್ನಿಗೆ ಹೇಳಿದ. ಅನಿಕೇತನ ಹಠಾತ್ ನಿರ್ಧಾರ ಪತ್ನಿ ಡಾ.ಸುಮನ್ ಗೆ ತುಂಬಾ ಕಳವಳವಾಯಿತು. ಅನಿಕೇತನಿಗೆ ಹನುಮನ ಹಳ್ಳಿ ಜೊತೆಗೆ  ಇರುವ ಒಡನಾಟ ಆಕೆಗೆ ಗೊತ್ತಿತ್ತು. ಅವಳು ತನ್ನ ಗಂಡನಿಗೆ,


"ಅನಿ, ಅಸಾಧ್ಯವಾದ ಕೆಲಸ ಮಾಡುವ ತೀರ್ಮಾನ ಮಾಡುವ ಮೊದಲು ಸರಿಯಾಗಿ  ವಿಚಾರಿಸು. ಆತುರದ ನಿರ್ಧಾರ ಸರ್ವಥಾ ಬೇಡ. ಇಂತಹ ಕೆಲಸಕ್ಕೆ ಸರಕಾರ, ಸಂಘ ಸಂಸ್ಥೆಗಳು ಇವೆ. ನಿರ್ಧಾರ ತೆಗೆದುಕೊಳ್ಳುವದು ನಿನ್ನ ವಿವೇಕಕ್ಕೆ ಬಿಟ್ಟಿದ್ದು," ಎಂದಳು ಗಂಭೀರವಾಗಿ.


"ಸುಮ, ನಿನಗೆ ತಿಳಿದಹಾಗೆ ನನ್ನ ಆತ್ಮೀಯರು ಜೀವ ಕಳೆದುಕೊಂಡಿದ್ದಾರೆ. ಪ್ರಸ್ತುತ ನಾನು ಅಲ್ಲಿಗೆ ಹೋಗುವದು ಅನಿವಾರ್ಯ."

ಪತ್ನಿಯನ್ನು ಒಪ್ಪಿಸಲು ಪತಿಗೆ ಹರಸಹಾಸ ಮಾಡ ಬೇಕಾಯಿತು. ಕೊನೆಗೆ ಆಕೆ ಒಪ್ಪಿಗೆ ಕೊಟ್ಟಳು. 


ಅಲ್ಲಿಗೆ ಹೋಗಲು ಬೇಕಾಗುವ ಔಷಧ ಸಾಮಗ್ರಿಗಳು ಜೊತೆಗೆ ಇಬ್ಬರು ಕಿರಿಯ ಡಾಕ್ಟರ್ ಹಾಗೂ ಇಬ್ಬರು ನರ್ಸ ವ್ಯವಸ್ಥೆ ಮಾಡಿಕೊಂಡು ವ್ಯಾನ್ ನಲ್ಲಿ ಹೊರಟೇ ಬಿಟ್ಟ. ಸರಿಯಾಗಿ ರಾತ್ರಿ ಎಂಟು ಗಂಟೆಗೆ ಅನಿಕೇತ ಹಾಗೂ ಅವನ ಟೀಮ್ ನವರು ಹನುಮನ ಹಳ್ಳಿ ತಲುಪಿದರು. ಬಿಡುವ ಮೊದಲು ಹನುಮನ ಹಳ್ಳಿ ಗ್ರಾಮ ಪಂಚಾಯತ್ ಚೇರ್ಮನ್ ಮಂಜುನಾಥ ಅವರಿಗೆ ತಿಳಿಸಿರುವದರಿಂದ ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದರು. ಆ ದಿವಸ ವಿದ್ಯುಚ್ಛಕ್ತಿ ತೊಂದರೆ ಕೊಡಲಿಲ್ಲ. ಆಗಲೇ ರೋಗಿಗಳ ಪರಿಸ್ಥಿತಿ ಗಂಭೀರವಾಗಿತ್ತು. ವಿಶ್ರಾಂತಿ ತೆಗೆದುಕೊಳ್ಳದೇ ನೂರಾರು ರೋಗಿಗಳ ಶುಶ್ರೂಷೆ ಮಾಡುವ ದಕ್ಕೆ ಬೆಳಗಿನ ಐದು ಗಂಟೆ ಆಯಿತು. ಒಂದೆರಡು ರೋಗಿಗಳನ್ನು ಹೊರತುಪಡಿಸಿ  ಎಲ್ಲರೂ ಗುಣಮುಖರಾದರು. ಡಾ.ಅನಿಕೇತನ ಸಮಯೋಚಿತ ನಿರ್ಧಾರ ತಂದಿತು ಎಲ್ಲರಿಗೂ ಹರ್ಷೋದ್ಗಾರ.

ಮರುದಿನ ಅನಿರುದ್ಧ ಹಾಗೂ ಅವನ ತಂಡದವರು ವಿಶ್ರಾಂತಿ ತೆಗೆದುಕೊಂಡರು. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟೋಪಚಾರ ಮುಗಿಸಿ ಮೂರು ಗಂಟೆಗೆ ಪವನಪುರ ವಾಪಸ್ ಹೊರಡಲು ಸಿದ್ದ ರಾದರು.   ಅನಿಕೇತ  ತನ್ನ ಹತ್ತು ವರ್ಷಗಳ ವೈದ್ಯಕೀಯ ಅನುಭವದಿಂದ ಉತ್ತಮ ಹೆಸರು ಗಳಿಸುವದಲ್ಲದೇ ಸಾಕಷ್ಟು ಹಣ ಗಳಿಸಿದ್ದ. ಹೆಂಡತಿ  ಡಾ. ಸುಮನ್ ಜೊತೆಗೆ ಪವನಪುರ ನಗರದಲ್ಲಿ 50 ಹಾಸಿಗೆಗಳ ಸಂಜೀವನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ.  ಸುಮನ ತಂದೆ ತಾಯಿ ಕೂಡಾ ಡಾಕ್ಟರ್ ಇರುವದರಿಂದ  ಅವರಿಂದ ಏಕೈಕ ಪುತ್ರಿಗೆ ಬಂದ ಬಳುವಳಿ ಈ ಆಸ್ಪತ್ರೆ. ಮದುವೆಯ ನಂತರ, ಅನಿಕೇತ ಅದೇ ಆಸ್ಪತ್ರೆ ಯಲ್ಲಿ ವೃತ್ತಿ ಮುಂದುವರೆಸಿ ಪ್ರಖ್ಯಾತ ಡಾಕ್ಟರ್ ಆದ. 

ಹನುಮನಹಳ್ಳಿಗೆ ಹೋಗುವ ನಿರ್ಧಾರವು ಅವನ ಮುಂದಿನ ವೃತ್ತಿ ಜೀವನದ ಮೇಲೆ ಪರಿಣಾಮ ಆಗದಂತೆ ನೋಡಿಕೊಳ್ಳುವದಾಗಿ ಪತ್ನಿಗೆ ಆಗಲೇ ವಿವರಿಸಿದ್ದ. ಜೀವನದಲ್ಲಿ ಬಂದ ಇಂತಹ ಸಮಾಜ ಸೇವೆ ಅಲ್ಲದೇ  ತನ್ನ ಬಂಧು ಬಾಂಧವರ ಆರೈಕೆ ಮಾಡುವ ಸದವಕಾಶವನ್ನು ಬಿಡಬಾರದು ಎನ್ನುವದು ಆತನ ಇಚ್ಛೆ. 

ಸುತ್ತ ಮುತ್ತಲಿನ ಗ್ರಾಮಸ್ಥರು ಅನಿಕೇತನ ಭೇಟಿ ಆಗಲು ಆಗಮಿಸಿದರು. ಅವರೆಲ್ಲರೂ ಒಕ್ಕೊರಲಿನಿಂದ ಉಪಕಾರ ಮಾಡಿರುವದಕ್ಕೆ ಚಿರಋಣಿ ಎಂದರು. ಅವರ ಇನ್ನೊಂದು ಬೇಡಿಕೆ ಕೇಳಿ ಅನಿಕೇತ ತಬ್ಬಿಬ್ಬಾದ. 


ಅಂತಹ ಬೇಡಿಕೆಯಾದರೂ ಯಾವುದು?

ಅವರಲ್ಲಿ ಒಬ್ಬ, "ಡಾಕ್ಟರ್ ಸಾಹೇಬರೇ, ನೀವು ಇಲ್ಲಿಯೇ ಇರಬೇಕು. ಅಂಜನೇಯ ದೇವಸ್ಥಾನದ ಪಕ್ಕದಲ್ಲಿ ಇರುವ ನನ್ನ ಒಂದು ಎಕರೆ ಜಮೀನು ನಿಮಗೆ ಆಸ್ಪತ್ರೆ ಕಟ್ಟಲು ದಾನ ಕೊಡುವೆ. ಆಸ್ಪತ್ರೆ ಆದರೆ ಸುತ್ತಮುತ್ತ ಇರುವ ಹತ್ತು ಗ್ರಾಮಗಳ ಜನರಿಗೆ ಉಪಯೋಗವಾಗುವದು," ಎಂದ ಶಿವಕುಮಾರ್ 

ಅವನು ಬೇರೆ ಯಾರೂ ಆಗಿರದೇ ದಿವಂಗತ ಸಾಹುಕಾರ ಶಂಭುನಾಥ ಹಾಗೂ ದಿವಂಗತ ಗಿರಿಜಮ್ಮಅವರ ಏಕೈಕ ಪುತ್ರ. 


"ಸರ್, ನಿಮ್ಮ ಆಸ್ಪತ್ರೆ ಕಟ್ಟಲು ಎಲ್ಲಾ ಗ್ರಾಮಗಳಿಂದ ಹಣ  ಸಂಗ್ರಹ ಮಾಡುವ ಜವಾಬ್ದಾರಿ ನನ್ನದು,"  ಎಂದ ಉತ್ಸಾಹಿ ಯುವಕ ವಿನಯ ಕುಮಾರ್.

"ಡಾಕ್ಟರ್ ಜಿ, ಕಟ್ಟಡ ಕಟ್ಟಲು ನೀರು ಬೇಕು. ಆ ಒಂದು ಎಕರೆ ಜಾಗದಲ್ಲಿ  ನನಗೆ ನೀರಿನ ಸೆಲೆ ಗುರುತಿಸುವ ಹಾಗು ಬಾವಿ ನಿರ್ಮಿಸುವ  ಅನುಭವ ಇದೆ. ಇದನ್ನು  ಮಾಡಿಕೊಡುವ ಕೆಲಸ ನನ್ನದು," ಎಂದ ನಿವೃತ್ತ ಶಿಕ್ಷಕ ಚಂದ್ರಶೇಖರ. 

"ಅನಿರುದ್ಧ ಅವರೇ, ಬಾವಿ ಕಟ್ಟುವದಕ್ಕೆ ತಗಲುವ ಖರ್ಚು ನಾನು ವಹಿಸುತ್ತೇನೇ, ಎಂದ ಹಿರಿಯ ರೈತ ಕಮಲಾಕರ.

"ಡಾಕ್ಟರ್ ಸಾಹೇಬರೇ, ಪಂಪ್ ಸೆಟ್ ಹಾಗೂ ಅದಕ್ಕೆ ರೂಮ ಕಟ್ಟಲು ಬರುವ ಖರ್ಚು ನಾನು ಕೊಡುವೆ," ಎಂದ ಪಕ್ಕದ ಹೊಸದುರ್ಗ ಗ್ರಾಮದ ಪಟೇಲ್ ಶಂಕರಪ್ಪ.

ಗ್ರಾಮದ ಏಕೈಕ ಶತಾಯುಷಿ ಮಾಣಿಕಮ್ಮ ಡಾ. ಅನಿಕೇತನಿಗೆ ಶುಭ ಹಾರೈಸಿ ಆಶೀರ್ವಾದ ಮಾಡಿದಳು. 

ಹೀಗೆ ಅನೇಕ ಜನರು ಮುಂದೆ ಬಂದರು. ಜನರ ಪ್ರೀತಿ, ಸೌಹಾರ್ದತೆ, ಹಾಗೂ ನಿಷ್ಕಲ್ಮಷ ಮನಸ್ಸು ಕಂಡು ಅನಿಕೇತನಿಗೆ ಮಾತು ಬರದೇ ಒಂದು ನಿಮಿಷ ಭಾವುಕನಾಗಿ ಕಣ್ಣಲ್ಲಿ ಆನಂದಭಾಷ್ಪ ಬಂದವು.


"ಗ್ರಾಮಸ್ಥರೇ, ನೀವು ನನ್ನ ಮೇಲೆ ಇಟ್ಟುಕೊಂಡ ಪ್ರೀತಿ, ವಿಶ್ವಾಸಕ್ಕೆ  ಏನು ಹೇಳಲಿ ಶಬ್ದಗಳು ಸಿಗುತ್ತ ಇಲ್ಲ. ಇಲ್ಲಿ ಆಸ್ಪತ್ರೆ ಕಟ್ಟುವ ಯೋಜನೆ ಆಮೇಲೆ ಮಾಡೋಣ. ನಿಮ್ಮ ಇಂತಹ ಪ್ರೀತಿ,ವಾತ್ಸಲ್ಯ ನೀವು ನನಗೆ ಕೊಡುವ ಉಡುಗೊರ ಅಷ್ಟೇ ಸಾಕು. ಇನ್ನು ಮುಂದೆ ವಾರದಲ್ಲಿ ಒಂದು ಸಲ ತಪ್ಪದೇ  ಬಂದು ಹೋಗುವೆ," ಎಂದ. 

ಭಾರವಾದ ಮನಸ್ಸಿನಿಂದ ಅನಿಕೇತ ಹಾಗೂ ಅವನ ತಂಡದವರು ಹೊರಟರು. ಬೀಳ್ಕೊಡಲು ಇಡೀ ಗ್ರಾಮ ವಾಸಿಗಳು ಇದ್ದರು. ಅವರು ಹನುಮನ ಹಳ್ಳಿ  ಬಿಡುವಾಗ ಸಾಯಂಕಾಲ ಐದು ಗಂಟೆ. ಎರಡು ಕಿಲೋಮೀಟರ್ ಮುಂದೆ ಹೋದಮೇಲೆ ಆರು ಜನರ ಗುಂಪು ವ್ಯಾನ್ ತಡೆದರು. ಅನಿಕೇತ ವಾಹನ ನಿಲ್ಲಿಸಿ ಯಾರು ಎಂದು ಕೇಳಿದ. 

ಆ ಗುಂಪಿನಲ್ಲಿ ಒಬ್ಬ,  "ಶಿವಕುಮಾರ್ ನಿಮಗೆ ಕೂಡುವ ಒಂದು ಎಕರೆ ಜಮೀನು ಅದು ನನಗೆ ಸೇರಿದ್ದು. ಅವನು ಬರಿ ಸುಳ್ಳು ಹೇಳುವನು. ನಾನು ನಿಮಗೆ ಅದನ್ನು ಕೊಡುವದಿಲ್ಲ. ಒಂದು ವೇಳೆ ಅವನು ಜಮೀನು ನಿಮಗೆ ದಾನ ಕೊಟ್ಟರೇ ನಾನು ಸುಮ್ಮನೆ ಇರುವದಿಲ್ಲ," ಎಂದ.


ಅದಕ್ಕೆ ಅನಿಕೇತ ,"ಪ್ರೀತಿಯಿಂದ ಯಾರಾದರೂ ಸ್ಥಳ  ಆಸ್ಪತ್ರೆ ಕಟ್ಟಲು ಕೊಟ್ಟರೆ ಯಾಕೆ ವಿರೋಧ ಮಾಡುವಿರಿ?  ಆಸ್ಪತ್ರೆ ಆದರೆ ಎಲ್ಲರಿಗೂ ಉಪಯೋಗ. ನಿಮಗೂ ಉಪಯೋಗ. ಅಂದಹಾಗೆ ನೀನು ಯಾರು?" "ಡಾಕ್ಟರ್ ಸಾಹೇಬರೇ, ನನ್ನ ಹೆಸರು ಮಹಾದೇವ. ಈ ಗ್ರಾಮದಲ್ಲಿ ಎಲ್ಲರಿಗೂ ನಾನು ಭಯಂಕರ. ಇವರೆಲ್ಲ ನನ್ನ ಮಿತ್ರರು. ನನ್ನನ್ನು ನೋಡಿ ಜನ ಹೆದರುವರು," ಎಂದ. 


ಅಷ್ಟರಲ್ಲಿ ಗ್ರಾಮದ ಯುವಕರ ತಂಡ  ಓಡುತ್ತ  ಬಂದು, "ಸರ್, ಇವರೆಲ್ಲ ಕುಡುಕರ ಗ್ಯಾಂಗ್. ನಿಶೆಯಲ್ಲಿ ಏನೇನೋ ಮಾತನಾಡುವರು," ಎಂದ ಒಬ್ಬ.

ಹಾಸ್ಯದ ಪ್ರಸಂಗದಿಂದ ಅನಿಕೇತ ಹಾಗೂ ಅವನ ತಂಡದವರಿಗೆ ನಗು ತಡೆಯಲು ಆಗದೇ ಜೋರಾಗಿ ನಕ್ಕರು.  ಯುವಕರು ಹಾಸ್ಯದಲ್ಲಿ ಭಾಗಿ ಆದರು. 

ಅನಿಕೇತ ಪ್ರತಿ ಭಾನುವಾರ ತಪ್ಪದೇ ಹನುಮನ ಹಳ್ಳಿಗೆ  ಬರುವದಾಗಿ ಹೇಳಿದ. ಮಾತು ಕೊಟ್ಟಂತೆ ಪ್ರತೀ ಭಾನುವಾರ ಬರುವದನ್ನು ತಪ್ಪಿಸಲಿಲ್ಲ. ಒಂದು ವರ್ಷದ ನಂತರ ಭಾನುವಾರ ಡಾ.ಅನಿಕೇತನಿಗೆ ಹನುಮನ ಹಳ್ಳಿಯಿಂದ ಪವನಪೂರ ಬರಲು ಮಧ್ಯ ರಾತ್ರಿ ಆಯಿತು. ಬಹಳ ಶ್ರಮ ಆಗಿರುವದರಿಂದ ಬೇಗನೆ ನಿದ್ರೆ ಬಂದಿತು. 

ಶಿವಕುಮಾರ್ ದಾನ ಕೊಟ್ಟ ಒಂದು ಎಕರೆ ಜಾಗದ ಕಾಗದ ಪತ್ರ ಪರಿಶೀಲಿಸಿದ ಮೇಲೆ ತಿಳಿದು ಬಂದಿತು ಅದಕ್ಕೆ ಕಾನೂನು ಸಮಸ್ಯೆ ಇದೆ. ನಂತರ ಕಾನೂನು ತೊಡಕು ಸರಿಪಡಿಸಿದರು. ಲಾಯರ್ ಸಲಹೆಯಂತೆ ಟ್ರಸ್ಟ್ ರಚನೆ ಆಯಿತು. ಒಂದು ದಿವಸ ಭೂಮಿ ಪೂಜೆ ಸಂಭ್ರಮದಿಂದ ನೆರವೇರಿಸಿದರು. ಕಾಗದ ಪತ್ರಗಳು ಸಿದ್ಧವಾಗಿ ಕಟ್ಟಡಕ್ಕೆ ಬೇಕಾಗುವ ಧನ ಸಂಗ್ರಹ, ಬ್ಯಾಂಕ್ ನಿಂದ ಸಾಲದ ವ್ಯವಸ್ಥೆ ಆಯಿತು. ನಾಲ್ಕು ವರ್ಷ ಆದಮೇಲೆ ಕಟ್ಟಡ ಸಿದ್ಧವಾಯಿತು. ಆಸ್ಪತ್ರೆ ಹೆಸರು 'ಶಂಭುನಾಥ ಗಿರಿಜಮ್ಮ ಟ್ರಸ್ಟ್ ಮೆಮೋರಿಯಲ್ ಆಸ್ಪತ್ರೆ' ಎಂದು ನಾಮಕರಣ ಮಾಡಿದರು. ಟ್ರಸ್ಟ ನಲ್ಲಿ ಶಿವಕುಮಾರ ಸೇರಿದಂತೆ ಡಾ.ಅನಿಕೇತ ಒಬ್ಬ ಟ್ರಸ್ಟಿ. ಆಸ್ಪತ್ರೆ ಉದ್ಘಾಟನೆ ರಾಜ್ಯದ ಆರೋಗ್ಯ ಮಂತ್ರಿ ನೆರವೇರಿಸಿದರು. ಸರಕಾರದವರು ಒಂದು ಅಂಬ್ಯುಲೆನ್ಸ ಒದಗಿಸಿದರು. ಸುತ್ತಮುತ್ತಲಿನ  ಹತ್ತು ಗ್ರಾಮವಾಸಿಗಳಿಗೆ ಆಗಿರುವ ಸಂತೋಷ ಅಪರಿಮಿತ. ಇವೆಲ್ಲದರ  ಶ್ರೇಯಸ್ಸಿಗೆ ಪಾತ್ರರಾದವರು ಡಾ. ಅನಿಕೇತ, ಶಿವಕುಮಾರ, ಹನುಮನ ಹಳ್ಳಿಯ ಮತ್ತು ಇತರ ಗ್ರಾಮವಾಸಿಗಳು. 


ಇವೆಲ್ಲ ಬೆಳವಣಿಗೆಗಳು ಆಗಿರುವದು ಡಾ.ಅನಿಕೇತನ ಕನಸಿನಲ್ಲಿ. ಆತ ಮನಸ್ಸಿನಲ್ಲಿ ಅಂದುಕೊಂಡ, ನನ್ನ ಕನಸು ನನಸಾಗುವದೇ?

ಎರಡು ವರ್ಷಗಳ ನಂತರ ಗ್ರಾಮಸ್ದರ ಒಂದು ಇಚ್ಚೆ ಸಾಕಾರವಾಯಿತು. ಹನುಮನ ಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಹಾಗೂ ಹೊಸಹಳ್ಳಿಯವರೆಗೆ ಪಕ್ಕಾ ಸಿಮೆಂಟ್ ರೋಡ ಆಯಿತು. ನಂತರ ಈ ಭಾಗದಲ್ಲಿ ಸರಕಾರಿ ಬಸ್ ಓಡಾಡುವ ವ್ಯವಸ್ಥೆ ಆಯಿತು.

ಗ್ರಾಮಸ್ಥರೆಲ್ಲರು ಅನಿಕೇತನಿಗೆ ಡಾಕ್ಟರ್ ಎಂದರೆ ಹೀಗಿರಬೇಕು ಎಂದು ಪ್ರಶಂಸೆ ಮಾಡಿದರು.


 


 






Rate this content
Log in

Similar kannada story from Abstract