ರಾಮನಿಗೆ ಸಿಕ್ಕಳು ರಮಾ
ರಾಮನಿಗೆ ಸಿಕ್ಕಳು ರಮಾ
ಬೆಳಗಿನ ಎಂಟು ಗಂಟೆ ಸಮಯ ಸೋಮನೂರು ಗ್ರಾಮದಲ್ಲಿ ಮೋಡ ಕವಿದ ವಾತಾವರಣ. ಇಲ್ಲಿಂದ ಪವನ್ ಪೂರ್ ಟೌನ್ ಮೂರು ಕಿಲೋಮೀಟರ್ ದೂರ. ರಸ್ತೆ ಪರಿಸ್ಥಿತಿ ತುಂಬಾ ಗಂಭೀರ. ಗ್ರಾಮದ ಸ್ವಲ್ಪ ಮುಂದೆ ತೆಗ್ಗು ದಿನ್ನೆ ಗಳಿರುವ ರುವ ಬೆಟ್ಟದ ಮುಖಾಂತರ ಹೋಗುವ ಇಕ್ಕಟ್ಟಾದ ಮಾರ್ಗ. ಬಸ್, ವ್ಯಾನ್ ಗಳು ಆ ಮಾರ್ಗ ದಾಟಲು ಪಡುವ ಕಷ್ಟ ಬಹಳ. ಎಷ್ಟೋ ಸಲ ಅಪಘಾತಗಳು ಕೂಡಾ ಆಗಿದೆ. ಗ್ರಾಮ ವಾಸಿಗಳು ಸರಕಾರಕ್ಕೆ ಕೊಟ್ಟ ದೂರು ಗಳನ್ನು ಸರಕಾರ ನಿರ್ಲಕ್ಷ್ ಮಾಡಿದ್ದಾರೆ. ಇದರಿಂದ ಗ್ರಾಮ ನಿವಾಸಿಗಳು ರೊಚ್ಚಿಗೆದ್ದಾರೆ.
ಸೋಮನೂರು ಗ್ರಾಮದ ಬೆಟ್ಟದ ಮೇಲೆ ಪುರಾತನ ಪಾಳು ಬಿದ್ದ ದೇವಸ್ಥಾನ. ಪಕ್ಕದಲ್ಲಿ ತೆರೆದ ಬಾವಿ. ನೀರು ಉಪಯೋಗ ಮಾಡದೇ ಇದ್ದರೂ ಸ್ವಚ್ಚ ವಾಗಿದ್ದು ತಳ ಕಾಣಿಸುತ್ತಿತ್ತು. ಬಾವಿ ನೀರು ವರ್ಷದ ಹನ್ನೆರಡು ತಿಂಗಳು ಹಾಗೆ ಇರುತ್ತವೆ. ಮಳೆ ಆಗದೇ ಇದ್ದರೂ ಬಾವಿ ನೀರು ಕಡಿಮೆ ಆಗುವದಿಲ್ಲ. ಇದು ವಿಚಿತ್ರ ವಾದರೂ ಸತ್ಯ. ದೇವಸ್ಥಾದಲ್ಲಿ ಪ್ರವೇಶ ಮಾಡಿದವರು ಹೊರಗೆ ಬರುವದು ಕಠಿಣ. ಆಗಿನ ಶಿಲ್ಪಿಗಳು, ವಾಸ್ತು ಶಾಸ್ತ್ರ ತಜ್ಞರು ಹಾಗೂ ತಂತ್ರಜ್ಞಾನ ತಜ್ಞರು ಇವರೆಲ್ಲರ ಪರಿಶ್ರಮದ ಅದ್ಭುತ ಕೊಡುಗೆ ದೇವಸ್ಥಾನ. ಬಾವಿ ಮತ್ತು ದೇವಸ್ಥಾನ ಇವೆರಡು ಇಲ್ಲಿನ ಸೋಜಿಗ. ದೇವಸ್ಥಾನ ಒಳಗೆ ಗೈಡ್ ಜೊತೆಗೆ ಹೋಗುವದು ಹಾಗೂ ವಾಪಸ್ ಬರುವದು ಸುರಕ್ಷಿತ.
ಪವನ್ ಪೂರ್ ಪ್ರವಾಸಿ ತಾಣಕ್ಕೆ ಬಂದ ಪ್ರವಾಸಿಗರು ಮೊದಲು ಸೋಮನೂರು ಪುರಾತನ ದೇವಸ್ಥಾನ ನೋಡಲು ಬರುವರು. ಬಾವಿಯಲ್ಲಿ ಯಾರೂ ಇಳಿಯಬಾರದು ಎಂದು ಅಲ್ಲಿ ದೊಡ್ಡದಾದ ತ್ರಿಭಾಷೆಯಲ್ಲಿ ಇರುವ ನಾಮಫಲಕ. ಗೈಡ್ ಎಚ್ಚರಿಕೆ ಕೊಟ್ಟರೂ ಓರ್ವ ಯುವತಿ ಕಾಲು ತೊಳೆದು ಕೊಳ್ಳಲು ಬಾವಿಯಲ್ಲಿ ಇಳಿದೇ ಬಿಟ್ಟಳು. ಮೆಟ್ಟಲು ಇಳಿಯುವಾಗ ಆಕೆ ಕಾಲು ಜಾರಿ ನೀರು ಆಳವಿರುವ ಸ್ಥಳದಲ್ಲಿ ಹೋದಳು. ಬಾವಿಯಲ್ಲಿ ಜಲ ಚರ ಪ್ರಾಣಿಗಳ ವಾಸ. ಅವುಗಳಿಂದ ಅಪಾಯ ಆಗಬಹುದು.
ಪ್ರವಾಸಿಗರು ಯುವತಿ ಮುಳುಗಿದ ಆಳವಾದ ನೀರಿನಲ್ಲಿ ಇರುವ ದೃಶ್ಯ ನೋಡಿ ಗಾಬರಿ ಆದರು. ಮೇಲೆ ಇದ್ದವರಿಗೆ ಬಾವಿಯ ನೀರು ಸ್ಪಟಿಕದಂತೆ ಸ್ಪಷ್ಟ ವಾಗಿ ಇರುವದರಿಂದ ಆಕೆ ಮೇಲೆ ಇದ್ದವರಿಗೆ ಕಾಣಿಸಿದಳು. ಆಕೆಗೆ ಈಜು ಬರದೇ ಇರುವದರಿಂದ ಮೇಲೆ ಬರಲೇ ಇಲ್ಲ. ಇದನ್ನು ಗಮನಿಸಿದ ಗೈಡ್ ತಡ ಮಾಡದೇ ತನ್ನ ಜೀವಕ್ಕೆ ಅಪಾಯ ಎಂದು ಲೆಕ್ಕಿಸದೆ ನೀರಿನಲ್ಲಿ ಹಾರಿದ. ಸುದೈವದಿಂದ ಯುವ ಗೈಡ್ ಆ ಯುವತಿಯನ್ನು ಹೊರಗೆ ತರುವದರಲ್ಲಿ ಯುವಕ ಯಶಸ್ವಿ ಆದ. ಆಕೆಯನ್ನು ಮೇಲೆ ತಂದು ಅಲ್ಲಿಯೇ ಇರುವ ಕಟ್ಟೆ ಮೇಲೆ ಮಲಗಿಸಿದ. ಗಾಬರಿಯಿಂದ ಆಕೆ ನೀರು ಕುಡಿಯುವದರಿಂದ ಹೊಟ್ಟೆ ಉಬ್ಬಿ ಎಚ್ಚರ ತಪ್ಪಿ ಹೋಗಿತ್ತು.
ಪ್ರವಾಸಿಗರಲ್ಲಿ ಇರುವ ಒಬ್ಬ ವಯಸ್ಸಾದ ಮಹಿಳೆ ಬಂದು ಯುವತಿಯ ಹೊಟ್ಟೆ ಒತ್ತಿ ಬಾಯಿಯಿಂದ ನೀರು ಹೊರಗೆ ಬರುವಂತೆ ಮಾಡಿದಳು. ಆ ಗೈಡ್ ಹತ್ತಿರ ಪ್ರಥಮ ಚಿಕಿತ್ಸೆ ಕಿಟ್ ಇರುವ ದರಿಂದ ಶುಶೃಷೆ ಮಾಡಿ ಎಚ್ಚರ ಬರುವಂತೆ ಮಾಡಿದ. ಆ ವಯಸ್ಸಾದ ಮಹಿಳೆ ಬೇರೆ ಯಾರೂ ಆಗಿರದೆ ಆ ಯುವತಿಯ ತಾಯಿ ಅನುರಾಧ.
ಒಂದು ಜೀವ ಉಳಿಸಿದ ಆ ಯುವಕ ಗೈಡ್ ಯಾರು? ಆ ಯುವತಿ ಯಾರು? ಇವೆಲ್ಲ ಪ್ರಶ್ನೆಗಳು ಉದ್ಭವ ವಾದವು.
ಆ ಯುವಕ, ಪವನ್ ಪೂರ್ ನಗರದ ರಘುನಾಥ್ ದೇಸಾಯಿ ಹಾಗೂ ಮಂದಾಕಿನಿ ಅವರ ಏಕೈಕ ಪುತ್ರ. ಒಂದು ಕಾಲದಲ್ಲಿ ರಘುನಾಥ್ ಅವರು ಪವನ್ ಪುರ್ ದ ದೊಡ್ಡ ಜಮೀನ್ದಾರ. ಅವರ ಐಷ ಆರಾಮ್ ಜೀವನಕ್ಕಾಗಿ ಜಮೀನುಗಳನ್ನು ಮಾರಿ ನಿರ್ಗತಿಕಾರಾದರು. ಇರುವ ಮನೆ ಒಂದು ಉಳಿಯಿತು. ಮಂದಾಕಿನಿ ಸಾಧ್ವಿ ಇದ್ದು ಪತಿಗೆ ಬುದ್ಧಿವಾದ ಹೇಳಿದರೂ ಕೇಳಲೇ ಇಲ್ಲ. ಇಪ್ಪತ್ತೈದು ವರ್ಷದ ರಘುರಾಮ್, ಹತ್ತನೇ ತರಗತಿ ಪರೀಕ್ಷೆ ಬಹಳ ಸಲ ಕೊಟ್ಟರೂ ಪಾಸಾಗಲೇ ಇಲ್ಲ. ಉಂಡಾಡಿ ಆಗಿ ಅಡ್ಡಾಡುವದು ಅವನ ತಂದೆ ತಾಯಿಗೆ ದೊಡ್ಡ ಚಿಂತೆ ಆಯಿತು. ಅವನು ಮಾತೃಭಾಷೆ ಕನ್ನಡದ ಜೊತೆಗೆ ಇಂಗ್ಲಿಷ್ ನಿರರ್ಗಳ ಮಾತನಾಡುವ ಪ್ರತಿಭೆ ಅವನಲ್ಲಿ ಇರುವದು ವಿಶೇಷ. ಇದಲ್ಲದೆ ಅವನ ತಾಯಿ ತವರುಮನೆ ಮಹಾ ರಾಷ್ಟ-ತೆಲ0ಗಾಣದ ಬಾರ್ಡರ್ ಊರು ಕರಿಮೇರಿ. ರಘುರಾಮ್ ಅಲ್ಲಿ ಬಹಳ ದಿವಸ ವಾಸವಾಗಿದ್ದ. ಅದರಿಂದ ತೆಲಗು, ಮರಾಠಿ ಮಾತನಾಡಲು ಕಲಿತ.
ಒಂದು ದಿವಸ ಪವನ್ ಪುರ್ ಹೋಟೆಲ್ ಟ್ಯೂರಿಸ್ಟ್ ನ ಮಾಲೀಕ ಜಯಚಂದ್ರ ಅವರು ರಘುರಾಮ್ ನ ಪ್ರತಿಭೆ ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿ ಪ್ರವಾಸಿಗಾರನ್ನು ಆಕರ್ಷಿಸಿ ವ್ಯಾಪಾರ ಬೆಳೆಸುವ ಉದ್ದೇಶ ಇಟ್ಟುಕೊಂಡು ಪ್ರವಾಸಿಗರ ಅನುಕೂಲಕ್ಕೆ ರಘುರಾಮ್ ನಿಗೆ ಗೈಡ್ ಎಂದು ಕೆಲಸ ಕೊಟ್ಟರು. ಕ್ರಮೇಣ ಅವನಿಗೆ ಟೆಂಪೋ ಟ್ರಾವೆಲ್ಲರ್ ವಾಹನ ಕೊಡಿಸಿ ಡ್ರೈವರ್ ಕಮ್ ಗೈಡ್ ಮಾಡಿದರು. ಕೇವಲ ಆರು ತಿಂಗಳು ಗಳಲ್ಲಿ ಹೋಟೆಲ್ ಟ್ಯೂರಿಸ್ಟ್ ವ್ಯಾಪಾರ ದ್ವಿಗುಣ ವಾಯಿತು. ಪ್ರವಾಸಿ ಕೇಂದ್ರದ ಎಲ್ಲ ಪ್ರೇಕ್ಷಣಿಯ ಸ್ಥಳ ಗಳ ಮಾಹಿತಿ ಒಂದು ತಿಗಳಲ್ಲೇ ಅರಿತು ಕೊಂಡ ರಘುರಾಮ್ ನಾಲ್ಕು ಭಾಷೆಗಳಲ್ಲಿ ಪ್ರವಾಸಿಗರಿಗೆ ವಿವರಿಸುವ ಕಲೆ ಕರಗತ ಮಾಡಿಕೊಂಡ.
ಎಡವಟ್ಟು ಮಾಡಿಕೊಂಡ ಯುವತಿ ಮನೋರಮಾ, ತಾಯಿ ಜೊತೆಗೆ ಮೂರು ನೂರು ಕಿಲೋಮೀಟರ್ ದೂರ ಇರುವ ಬೆಂಗಳೂರು ನಗರದಿಂದ ತಮ್ಮ ಕಾರ್ ನಲ್ಲಿ ಪವನ್ ಪುರ್ ಗೆ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಬಂದರು. ಮನೋರಮ ಎಚ್ಚರ ವಾದಕೂಡಲೇ ಮೊದಲು ನೋಡಿದ್ದು ರಘು ರಾಮ್. ಆತ ತನಗೆ ಮರು ಜೀವನ ಕೊಟ್ಟಿರುವದು ತಿಳಿದು ಅವನ ಮೇಲೆ ಪ್ರೀತಿ ಅಂಕುರ ವಾಯಿತು. ರಘುರಾಮ್ ನಿಗೆ ಧನ್ಯವಾದ ಹೇಳಲು ಕೈಕುಲಿಸುವದಲ್ಲದೆ ಬಿಗಿಯಾಗಿ ಅಪ್ಪಿಕೊಂಡಳು. ಇದನ್ನು ನೋಡಿದ ತಾಯಿ ಅನುರಾಧ ಗೆ ಕಸವಿಸಿ ಆಯಿತು. ಯುವಕನ ಸಹಾಸ ಮೆಚ್ಚುಗೆ ಆದರೂ ಮಗಳು ಈ ರೀತಿ ಮಾಡುವಳು ಎಂದು ಭಾವಿಸಿರಲಿಲ್ಲ. ಇತರ ಪ್ರವಾಸಿಗರಿಗೆ ಆಶ್ಚರ್ಯ ವಾಗಿ ಮೂಕ ಪ್ರೇಕ್ಷಕ ರಂತೆ ನೋಡಿದರು.
“ಏ ಮನೋ, ಏನು ಮಾಡುತ್ತಾ ಇದ್ದಿ ಮೈ ಮೇಲೆ ಎಚ್ಚರ ಇದೆಯಾ?” ಎಂದು ಕೇಳಿದಳು ಅನುರಾಧ.
“ಅಮ್ಮ, ನನಗೆ ಪೂರ್ತಿ ಎಚ್ಚರ ವಿದೆ. ನನಗೆ ಪುನರ್ ಜೀವನ ಕೊಟ್ಟ ಈ ಯುವಕನ ಮೇಲೆ ಪ್ರೀತಿ ಆಗಿದೆ. ಮದುವೆ ಆದರೆ ಇವನ ಜೊತೆಗೆ,” ಎಂದಳು.
“ಮನೋ ಬೇಟಾ, ಕುಲ, ಗೋತ್ರ, ವಿದ್ಯಾಭ್ಯಾಸ, ಹಾಗೂ ನಡತೆ ಗೊತ್ತಿರದ ಅ
ಪರಿಚಿತನ ಜೊತೆಗೆ ಹೇಗೆ ಮದುವೆ ಆಗುವೆ?”
“ಯುವಕನ ಬಗ್ಗೆ ವಿವರ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ,” ಎಂದಳು ಧೈರ್ಯದಿಂದ.
ಅದೇ ವರ್ಷ ಎಮ್ ಎ (ಸಮಾಜ ಶಾಸ್ತ್ರ) ದಲ್ಲಿ ಫಸ್ಟ್ ಕ್ಲಾಸ್ ಬಂದು ಪಿ ಎಚ್ ಡಿ ಮಾಡುವ ಸಿದ್ಧತೆಯಲ್ಲಿ ಇದ್ದಳು ಮನೋರಮ. ತಾಯಿ ಅನುರಾಧ ನಿವೃತ್ತ ಕಾಲೇಜ್ ಪ್ರಾಧ್ಯಪಕಿ ಇದ್ದರೆ ತಂದೆ ಮಧುಸೂದನ್ ನಿವೃತ್ತ ಡೆಪ್ಯೂಟಿ ಕಮಿಷನರ್. ಬೆಂಗಳೂರು, ಜಯನಗರದಲ್ಲಿ ವಿಶಾಲ ವಾದ ಮನೆ, ಎರಡು ಕಾರುಗಳು ಹಾಗೂ ಕೆಲಸಗಾರರು. ಒಂದು ವಾರದ ಹಿಂದೆ ಅಷ್ಟೇ ಮನೋರಮ ಗೆ ಸೂರ್ಯಕಾ0ತ್ ಎನ್ನುವ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಮದುವೆ ನಿಶ್ಚಯ ಆಗಿತ್ತು.
“ಮನೋರಮ, ನೀನು ವಿದ್ಯಾ ವಂತೆ ಇದ್ದು ಬಾವಿಯಲ್ಲಿ ಇಳಿಯುವ ದು:ಸಹಾಸ ಏಕೆ ಮಾಡಿದೆ?” ಎಂದು ಕೇಳಿದ ರಘುರಾಮ್.
“ರಘುರಾಮ್ ಅವರೇ, ನಾನು ಇಲ್ಲಿನ ನಿರ್ದೇಶನಗಳನ್ನು ನಿರ್ಲಕ್ಷ್ಯ ಮಾಡಿರುವದು ನಿಜ. ಇದು ಅಪರಾಧ. ಬಾವಿಯಲ್ಲಿ ಇಳಿಯುವಾಗ ಯಾವುದೋ ಮೊಂಡು ಧೈರ್ಯ ಬಂದು ಹಾಗೆ ಮಾಡಿದೆ. ನಿನ್ನನ್ನು ದೇವರು ಕಳಿಸಿ ನನ್ನನು ಕಾಪಾಡಿದ.”
ಆಗ ಸಮಯ ಸಾಯಂಕಾಲ ಐದು ಗಂಟೆ. ಎಲ್ಲರೂ ವಾಪಸ್ ಪವನ್ ಪುರ್ ಹೋಗುವ ಸಿದ್ಧತೆ ನಡೆದಿತ್ತು. ಕೆಲವು ಪ್ರವಾಸಿಗರು ದೇವಸ್ಥಾನ ದಲ್ಲಿ ಸಿಕ್ಕಿ ಹಾಕೊಂಡು ಹೊರಗೆ ಬರಲು ಆಗದೇ ಪರದಾಡುತ್ತಿದ್ದರು.
ಅನುರಾಧ ತನ್ನ ಪತಿಗೆ ಮೊಬೈಲ್ ನಿಂದ ಕರೆ ಮಾಡಿ ಆಗಿರುವ ಘಟನೆಗಳ ವಿವರ ಕೊಟ್ಟಳು. ಇದನ್ನು ಕೇಳಿದ ಮಧುಸೂದನ್ ಗಾಬರಿ ಆಗಿ ಮಗಳನ್ನು ಕರೆಯಲು ಹೇಳಿದರು.
ಮನೋರಮ ಬಂದು ಮೊಬೈಲ್ ಸಂಭಾಷಣೆ ಮುಂದುವರೆಸಿದಳು.
“ಇದೇನು ಮನೋ, ನಿನ್ನ ಆವಾ0ತರ?”
“ಅಪ್ಪಾಜಿ, ಆಗಿದ್ದು ಆಗಿ ಹೋಯಿತು. ರಘುರಾಮ್ ನ ರೂಪದಲ್ಲಿ ದೇವರು ಬಂದು ನನಗೆ ಮರು ಜೀವ ಕೊಟ್ಟ.”
“ಅದೆಲ್ಲ ಸರಿ ಮಗಳೇ. ರಘು ರಾಮ್ ಗೆ ನಾವು ಚಿರಋಣಿ ಗಳು. ಅವನು ಕೇಳಿದಷ್ಟು ಹಣ ಕೇಳಿದರೆ ಕೊಡಬಹುದಾಗಿತ್ತು. ಆದು ಬಿಟ್ಟು ನೀನು ಅವನನ್ನು ಪ್ರೀತಿ ಏಕೆ ಮಾಡಿದೆ? ನನಗೇನೂ ತೋಚದೆ ಹಾಗೆ ಆಗಿದೆ.”
“ಅಪ್ಪಾಜಿ, ನೀವು ಗಾಬರಿ ಆಗುವ ಅವಶ್ಯಕತೆ ಇಲ್ಲ. ಏನು ಆಗುವದು ಅದು ಒಳ್ಳೆಯದಕ್ಕೆ ಆಗುವದು. ನಾನು ಈಗ ಪ್ರಭುದ್ದಳು. ನನ್ನ ಜೀವನ ಹೇಗೆ ರೂಪಿಸಬೇಕು ಬೇಕು ಎನ್ನುವ ನಿರ್ಣಯ ತೆಗೆದುಕೊಳ್ಳಲು ನಾನು ಸ್ವತಂತ್ರಳು. ನೀವಿಬ್ಬರು ನನಗೆ ಆಶೀರ್ವಾದ ಮಾಡಿ.”
ಇದನ್ನು ಕೇಳಿದ ತಂದೆಗೆ ಮಾತು ಬರದೇ ಹೋಯಿತು.
“ಆಯಿತು ಮಗಳೇ, ನಾನು ನಾಳೆ ಪವನ್ ಪುರ್ ಬರುತ್ತೇನೆ. ನಿನ್ನ ಸಂತೋಷ ನಮ್ಮ ಸಂತೋಷ.” ಎಂದರು.
ದೂರದಲ್ಲಿ ನಿಂತ ರಘುರಾಮ್ ಹೀಗೆಲ್ಲ ಆಗುವದು ಎಂದು ಅಂದುಕೊಂಡಿರಲಿಲ್ಲ. ಅನುರೀಕ್ಷಿತ್ ಭಾಗ್ಯ ಬಂದಿರುವದಕ್ಕೆ ಹಿರಿ ಹಿರಿ ಹಿಗ್ಗಿದ.
ತಾಯಿ, ಮಗಳು ಬಂದು ರಘುರಾಮ್ ನಿಗೆ ಕೈ ಜೋಡಿಸಿ ಮುಂದಿನ ಕ್ರಮದ ಬಗ್ಗೆ ಕೇಳಿದರು. ಆ ಸಮಯದಲ್ಲಿ ರಘುರಾಮ್,
“ಮ್ಯಾಡಮ್ ಅನುರಾಧ ಅವರೇ, ನೀವು ಹಿರಿಯರು. ಹಾಗೆ ಕೈ ಜೋಡಿಸ ಬಾರದು.
ನಾವಿಬ್ಬರೂ ಬಾಳಸಂಗಾತಿ ಆಗುವದು ದೇವರ ಇಚ್ಛೆ ಇದ್ದರೆ ಯಾರಿಂದಲೂ ತಪ್ಪಿಸಲು ಆಗುವದಿಲ್ಲ,” ಎಂದ.
“ಹೌದು ನೀನು ಹೇಳುವದು ಸತ್ಯ ರಘುರಾಮ್,” ಎಂದರು ಅನುರಾಧ.
ಕೆಲವು ಪ್ರವಾಸಿಗರು ದೇವಸ್ಥಾನ ದಲ್ಲಿ ಸಿಕ್ಕಿ ಹಾಕಿ ಕೊಂಡಿರುವದು ತಿಳಿದು ರಘುರಾಮ್ ಒಳಗೆ ಹೋಗಿ ಎಲ್ಲರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ.
ಎಲ್ಲ ಪ್ರವಾಸಿಗರು ತಾವು ತಂಗಿದ ಹೋಟೆಲ್ ಮುಟ್ಟಿದಾಗ ಸಾಯಂಕಾಲ ಆರು ಗಂಟೆ.
ಮರುದಿವಸ ಬೆಳಗಿನ ಒಂಭತ್ತು ಗಂಟೆಗೆ ಪವನ್ ಪುರ್ ಗೆ ಮನೋರಮ ತಂದೆ ಮಧುಸೂದನ್ ಅವರ ಆಗಮನ. ಆಶ್ಚರ್ಯ ವೆಂದರೆ ಸರಿಯಾಗಿ ಅದೇ ಸಮಯಕ್ಕೆ ಸೂರ್ಯಕಾಂತ್ ಅವರ ಆಗಮನ.
ಮಧುಸೂದನ್ ಹಾಗೂ ಸೂರ್ಯಕಾಂತ್ ಮೊದಲೇ ಅಂದುಕೊಂಡಂತೆ ಮನೋರಮ ಗೆ ತನ್ನ ನಿರ್ಧಾರ ಕೈ ಬಿಡುವಂತೆ ಮನಸ್ಸು ಪರಿವರ್ತನೆ ಮಾಡುವ ಕೆಲಸ ಆಕೆ ತಂದೆ ಮಧುಸೂದನ್ ಮಾಡಿದರೆ, ಸೂರ್ಯಕಾಂತ್ ಅವರು ರಘುರಾಮ್ ಭೇಟಿ ಆಗಿ ಆತನಿಗೆ ಚತುರೋಪಾಯಗಳು ಅಂದರೆ ಸಾಮ, ದಾನ, ಭೇದ ಹಾಗೂ ದಂಡ ದಿಂದ ಚರ್ಚೆ ಮಾಡಿದರೂ ಅವುಗಳು ನೀರರ್ಥಕ ವಾದವು. ರಾಘುರಾಮ್ ಸಮರ್ಪಕ ಉತ್ತರ ಕೊಟ್ಟ ಮೇಲೆ ಸೂರ್ಯಕಾಂತ್ ನಿಗೆ ನಿರಾಸೆ ಆಗಿ ಬಂದ ದಾರಿಗೆ ಸುಂಕ ಇಲ್ಲ ಎಂದು ಅಲ್ಲಿಂದ ಕಾಲು ಕಿತ್ತಿದರು.
ಅದರಂತೆ ಮಧುಸೂದನ್ ಅವರು ತಮ್ಮ ಮಗಳಿಗೆ ತಿಳಿಸಿ ಹೇಳುವದರಲ್ಲಿ ವಿಫಲರಾದರು. ಕೊನೆಗೆ ಮಧುಸೂದನ್,
“ಮನೋ ಬೇಟಾ, ನಿನ್ನ ಇಚ್ಛೆಗೆ ವಿರುದ್ಧವಾಗಿ ಹೋಗುವದಿಲ್ಲ. ನಿಮ್ಮಿಬ್ಬರಿಗೂ ನಾವು ಶುಭ ಕೋರುತ್ತೇವೆ,” ಎಂದರು.
ಆಗ ಮನೋರಮ,
“ಮಧು, ನೀವು ಏನು ಮಾಡುತ್ತಿರೋ ಎನ್ನುವ ಭಯ ಕಾಡಿತು. ಈಗ ನನ್ನ ಮನಸ್ಸು ನಿರಾಳವಾಯಿತು,” ಎಂದಳು.
ಅಲ್ಲಿಯೇ ಇದ್ದ ರಘುರಾಮ್ ನಿಗೆ ಸಂತೋಷವಾಗಿ,
‘ರಾಮನಿಗೆ ಸಿಕ್ಕಳು ರಮಾ’. ನಮ್ಮಿಬ್ಬರನ್ನೂ ಬೆರ್ಪಡಿಸುವದು ಅಸಾಧ್ಯ,” ಎಂದ.
ಇದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.