STORYMIRROR

Vinay Shetti

Romance Tragedy

2.8  

Vinay Shetti

Romance Tragedy

NALLA ENNALE NINNA

NALLA ENNALE NINNA

248 mins
4.5K


     ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಹಾಸಿಗೆಯ ಮೇಲೆ ಉರುಳಿದಳು ಸುಮಾ. ಫೇಸ್ ಬುಕ್ ತೆಗೆದು ಅದರಲ್ಲಿಯಾ ವಿಡಿಯೋಗಳನ್ನು ಸುಂದರವಾದ ಫೋಟೋಗಳನ್ನು ನೋಡತೊಡಗಿದಳು. ದಿನಾಲೂ ರಾತ್ರಿ ಊಟವಾದ ಮೇಲೆ ಅವಳು ಫೇಸ್ ಬುಕ್ ದಲ್ಲಿ ಒಂದು ಸಾರಿ ಹಾಗೆ ಕಣ್ಣು ಹಾಯಿಸಿ ಮಲಗುವದು ವಾಡಿಕೆ. ಮನೆಯಲ್ಲಿ ಏಕಾಂಗಿ ಆಗಿ ಇರುತ್ತಿದ್ದಳು. ಗಂಡ ಮನು ಮದುವೆಯಾದ ೮ ವರ್ಷಕ್ಕೆ ಆಕ್ಸಿಡೆಂಟ್ ದಲ್ಲಿ ತೀರಿಕೊಂಡಿದ್ದ. ಅಂದಿನಿಂದ ಅವಳು ಒಂಟಿಯಾಗಿದ್ದಳು. ಮನೆಯಲ್ಲಿ ಅತ್ತೆ ಶಾಂತಮ್ಮ ಜೊತೆಗೆ ಇರುತ್ತಿದ್ದಳು. ಶಾಂತಮ್ಮ ಸಹ ಹೆಸರಿನಂತೆ ಶಾಂತ ಸ್ವಭಾವದವರು. ಅವರಿಗೆ ಒಬ್ಬನೇ ಮಗ ಮನು. ಅವನು ತೀರಿಕೊಂಡ ಮೇಲೆ ತಾವೇ ನಿಂತು ಸೊಸೆಗೆ ಮತ್ತೊಂದು ಮದುವೆಯನ್ನು ಮಾಡುವದಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಸಹ ಸುಮಾ ಮರು ಮಾಡುವೆ ಮಾಡಿಕೊಳ್ಳಲು ತಯಾರಾಗಿರಲಿಲ್ಲ. ಸುಮಾಳ ತಂದೆ ತಾಯಿ ಅವಳ ಮದುವೆಯಾದ ೨ ವರ್ಷಕ್ಕೆ ತೀರ್ಥಯಾತ್ರೆಗೆ ಹೋದಾಗ ಕಾಶಿಯಲ್ಲಿ ಉಕ್ಕಿ ಹರಿಯುವ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅಂದಿನಿಂದ ಶಾಂತಮ್ಮ ಸುಮಾಳಿಗೆ ತಾಯಿ ತಂದೆಯ ಸ್ಥಾನವನ್ನು ತುಂಬಿದ್ದರು. ಗಂಡ ಮನು ಅಂತೂ ಅವಳನ್ನು ಬಿಟ್ಟು ಒಂದು ಕ್ಷಣ ಇರುತ್ತಿರಲಿಲ್ಲ. 

     ಮನು, ಜೀವಂತವಿದ್ದಾಗಲೇ, ಅವನು ಸುಮಾಳ ಬುದ್ಧಿಮತ್ತೆಯನ್ನು ಕಂಡುಕೊಂಡು ಅವಳಿಗೆ ಎಂ ಎ ಓದಿಸಿದ್ದ. ಮನುನ ತಂದೆ ಸಾಕಷ್ಟು ಶ್ರೀಮಂತರು. ಆರ್ಥಿಕವಾಗಿ ಸಬಲರಾಗಿದ್ದರು. ಅವರು ತೀರಿಕೊಂಡ ಮೇಲೆ ಇದ್ದ ಎಲ್ಲ ಬ್ಯುಸಿನೆಸ್ಸ್ಸ್ ಕ್ಲೋಸ್ ಮಾಡಿದ ಮನು ತಾನು ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. civil ಎಂಜಿನೀರ್ ಆಗಿದ್ದ ಮನು, ಕಟ್ಟಡಗಳ ಕಾಂಟ್ರಾಕ್ಟ್ ತೆಗೆದುಕೊಂಡು ಚನ್ನಾಗೇ ಕೆಲಸ ಮಾಡುತ್ತಾ ರಂಗನೂರಿನಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ. ಹಾಗೆ ಅವನು ಒಂದು ದಿನ ಯಾವುದೋ ೩೦ ಅಂತಸ್ತಿನ ಬಿಲ್ಡಿಂಗ್ ಕಟ್ಟಡದ ವೀಕ್ಷಣೆ ಮಾಡಲು ಹೋದಾಗ ಸ್ಲಾಬ್ ಕುಸಿದು ಅವನು ಮತ್ತ್ತು ಇನ್ನು ೪ ಜನ ತೀರಿಕೊಂಡಿದ್ದರು. 

   ಮನು ಮೃತನಾದ ಮೇಲೆ ತಾಯಿ ಶಾಂತಮ್ಮ ಎದೆಗುಂದಲಿಲ್ಲ. ಸುಮಳನ್ನೇ ತನ್ನ ಮಗ ಮತ್ತು ಮಗಳನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನು ತೀರಿಕೊಂಡ ಬಳಿಕ ಕೆಲವು ದಿನ ಸುಮಾ ಮ್ಲಾನವಾದನಳಾಗಿ ಸದಾ ಗಂಡನ ನೆನಪಲ್ಲಿ ಕೊರಗುತ್ತಿದ್ದರೆ, ಶಾಂತಮ್ಮ ಅವಳಿಗೆ ತಿಳಿ ಹೇಳಿ ಅವಳನ್ನು ರಂಗನೂರಿನಲ್ಲಿ ಇದ್ದ ಕಾಲೇಜು ಸೇರಿಸಿ ಅಲ್ಲಿ ಲೆಕ್ಚರರ್ ಕೆಲಸ ಮಾಡುವಂತೆ ತಿಳಿ ಹೇಳಿ, ತಮಗೆ ಪರಿಚಯವಿದ್ದವರ ಕಡೆಯಿಂದ ಕಾಲೇಜಿನಲ್ಲಿ ಸುಮಾಳಿಗೆ ಕೆಲಸ ಕೊಡಿಸಿದ್ದರು. 

   ಮೊದ ಮೊದಲು, ಸುಮಾ, ಕಾಲೇಜಿನಲ್ಲಿ ಪಾಠ ಹೇಳಲು ಭಯ ಪಡುತ್ತಿದ್ದರೂ ಸಹ ಅವಳ ಸಹಪಾಠಿಗಳು ಅವಳನ್ನು ಪ್ರೋತ್ಸಾಹಿಸಿದ್ದರಿಂದ ಅವಳಿಗೆ ಕ್ರಮೇಣ ಧೈರ್ಯ ಬಂದು ಅವಳು ಈಗ ಚನ್ನಾಗಿ ಪಾಠ ಮಾಡುತ್ತಿದ್ದಳು. 

   ಸುಮಾ ನೋಡಲು ತುಂಬಾ ಸುಂದರವಾಗಿದ್ದಳು. ಅವಳ ಸುಂದರತೆ ಮತ್ತು ಒಳ್ಳೆಯ ಮೃದು ಸ್ವಭಾವವನ್ನುಕಂಡ ಅತ್ತೆ ಶಾಂತಮ್ಮ, ಅವಳಿಗೆ ಹಲವಾರು ಬಾರಿ ಅವಳಿಗೆ ಮತ್ತೊಂದು ಮದುವೆ ಮಾಡಲು ಪ್ರಯತ್ನಿಸಿದ್ದರು ಸಹ ಸುಮಾ ಮಾತ್ರ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಒಂದೇ ಮಾತು ಹೇಳಿದ್ದಳು. 

*"ಅಮ್ಮ, ಬಲವಂತ ಮಾಡಬೇಡಿ. ನಾನು ನಿಮ್ಮನ್ನು ಆಗಲಿ ಇರಲಾರೆ. ಒಂದು ವೇಳೆ ನೀವು ಬಲವಂತ ಮಾಡಿದರೆ ನಾನು ನಿಮಗಿಂತ ಮೊದಲೇ ಸಾಯಬೇಕಾಗುತ್ತೆ"*

*"ಅಲ್ಲಮ್ಮ, ಒಂದು ವೇಳೆ ನಾನು ಬೇಗನೆ ಸತ್ತರೆ, ಮುಂದೆ ನಿನ್ನ ಗತಿಯೇನು ತಾಯಿ. ಅದಕ್ಕ್ರೆ ನಿನ್ನ ಸುರಕ್ಷೆ ಸಲುವಾಗಿ ನಾನು ಹೇಳೋದು"*

*"ಅಮ್ಮ, ಈಗ ನನಗೆ ವಯಸ್ಸು ೪೦. ಈ ವಯಸ್ಸಿನಲ್ಲಿ ನಾನೇನಾದರೂ ಮತ್ತೆ ಮಾಡುವೆ ಆದರೆ ನೋಡಿದ ಜನ ನನ್ನ ಬಗ್ಗೆ ಏನು ತಿಳಿದುಕೊಂಡಾರು. ಅಲ್ಲದೆ ನನ್ನ ಮಾಡುವೆ ಮಾಡಿದ ನಿಮ್ಮನ್ನು ಹೇಗೆಲ್ಲ ಅಂದುಕೊಳ್ಳುತ್ತಾರೆ ನಿಮಗೆ ಗೊತ್ತಿಲ್ಲಮ್ಮ. ನಾವು ಸಮಾಜದಲ್ಲಿ ಇರುವವರು, ನಮಗೆ ಸಮಾಜ ಮುಖ್ಯ ಅಲ್ಲದೆ, ನಾವು ಸಮಾಜವನ್ನು ಕೆಣಕಲು ಸಾಧ್ಯವಲ್ಲಮ್ಮ. ಅದಕ್ಕೆ ನನ್ನನ್ನು ಬಲವಂತ ಮಾಡಬೇಡಿ"*

ಎಂದು ಉತ್ತರಿಸಿದಾಗ, ಶಾಂತಮ್ಮ ಸಹ ತಮ್ಮ ಹಠ ಬಿಡದೆ, 

*"ಆಯ್ತಮ್ಮಾ, ಆದರೆ ನೀನು ಒಬ್ಬಂಟಿಯಾದಾಗ ಅದೇ ಸಮಾಜ ನಿನ್ನ ನೆರವಿಗೆ ಬರುತ್ತೆ ಅಂತ ನೀನು ಭಾವಿಸಿದ್ದಾರೆ ಅದು ತಪ್ಪು. ಒಂದು ಹೆಣ್ಣಿಗೆ ಒಂದು ಗಂಡಿನ ಆಸರೆ ಇದ್ದಾರೆ ಮಾತ್ರ ಅವಳು ಸುರಕ್ಷಿತಳು. ಹೊಲಕ್ಕೆ ಯಾವಾಗಲೂ ಬೇಲಿ ಇರಬೇಕು. ಇಲ್ಲವಾದರೆ ದನಗಳು ಹೊಲಕ್ಕೆ ನುಗ್ಗಲು ಪ್ರಯತ್ನ ಮಾಡ್ತಾವಷ್ಟೇ"*

ಎಂದಾಗ ಈ ಮಾತಿಗೆ ನಕ್ಕು ಸುಮಾ, 

*" ಅಮ್ಮ ನನ್ನನ್ನು ನೀವು ಹೊಲ, ಅಂದರೆ ಜೀವವಿಲ್ಲದ ವಸ್ತುವನ್ನು ಮಾಡಿದಿರಿ. ಇರಲಿ, ಸರಿಯಾಗಿಯೇ ಹೇಳಿದಿರಿ. ನಾನು ಈಗ ಒಂದು ರೀತಿಯಲ್ಲಿ ಜೀವವಿಲ್ಲದ ಮನುಷ್ಯ ಆದರೆ ನನ್ನ ಜೀವ ಈಗ ಇರುವದು ನಿಮ್ಮಲ್ಲಿ. ನಿಮ್ಮ ಸೇವೆ ಮಾಡುವದಕ್ಕೆ ನನಗೆ ಅವಕಾಶ ಮಾಡಿಕೊಡಿ. ಇರುವಷ್ಟು ದಿನ ನಿಮ್ಮ ಸೇವೆಯಲ್ಲಿ ನನ್ನ ಜೀವನ ಕಳೆದುಬಿಡುತ್ತೇನೆ"*

ಎಂದು ಉತ್ತರ ನೀಡಿದಾಗ ಶಾಂತಮ್ಮ, ಅವಳಿಗೆ ಏನು ಹೇಳಬೇಕು ಅಂತ ಗೊತ್ತಾಗದೆ ಸುಮ್ಮನೆ ಇದ್ದರು. 

ಅತ್ತೆ ಸೊಸೆ, ಇಬ್ಬರೂ ಆ ಮನೆಯಲ್ಲಿ ಅತ್ತೆ ಸೊಸೆ ಹಾಗಿರದೆ, ತಾಯಿ ಮಗಳ ಹಾಗಿದ್ದರು. ಸುಮಾ ಮನೆಯಲ್ಲಿದ್ದರೆ ಒಂದು ಕ್ಷಣ ಶಾಂತಮ್ಮನನ್ನು ಆಗಲಿ ಇರುತ್ತಿರಲಿಲ್ಲ. ಶಾಂತಮ್ಮಲೂ ಸಹ ಅಷ್ಟೇ. ಸುಮಾಳನ್ನು ಒಂದು ಕ್ಷಣ ತಮ್ಮ ಕಣ್ಣಿನಿಂದ ಮರೆಯಾಗದಂತೆ ತಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಲಿದ್ದರು. ಅವಳು ಕಾಲೇಜಿಗೆ ಹೋಗಿ ಬರುವಷ್ಟರಲ್ಲಿ ಮನೆಯ ಎಲ್ಲ ಕೆಲಸಗಳನ್ನು ಅವರು ಮಾಡಿ ಮುಗಿಸುತ್ತಿದ್ದರು. ಸುಮಾ ಮನೆಗೆ ಬಂದ ಮೇಲೆ ಅವಳಿಗೆ ಮಾಡಲು ಬೇರೆ ಕೆಲಸ ಇರುತ್ತಿರಲಿಲ್ಲ. ಅವಳು ಶಾಂತಮ್ಮ ಕೆಲಸ ಮಾಡುವದಕ್ಕೆ ಆಕ್ಷೇಪ ತೆಗೆದರೂ ಸಹ ಶಾಂತಮ್ಮ, 

*"ನೀನು ದಣಿದು ಬಂದಿರುತ್ತಿ. ನಿಂಗ್ಯಾಕಮ್ಮ ಈ ಕೆಲಸದ ಉಸಾಬರಿ. ಅದಕ್ಕೆ ನಾನಿದ್ದೇನೆ. ನೀನು ಸುಮ್ಮನೆ ಹಾಯಾಗಿರಮ್ಮ ಸಾಕು."*

*"ಅಂದರೆ ನೋಡಿದವರು, ಅತ್ತೆಯಿಂದ ಕೆಲಸ ಮಾಡಿಸಿಕೊಂಡು ಮೆರಿತಾಳೆ ಅಂತ ನನಗೆ ಅನ್ನುತ್ತಾರೆ"*

*"ಆಡುವವರಿಗೆನಮ್ಮ ಹೀಗಿದ್ದರೂ ಆಡುತ್ತಾರೆ ಹಾಗಿದ್ದರೂ ಆಡುತ್ತಾರೆ. ಅದನ್ನೆಲ್ಲ ತಲೆಗೆ ಹಚ್ಚಿಕೊಂಡರೆ ಜೀವನ ಮಾಡುವದು ಅಷ್ಟರಲ್ಲೇ ಇದೆ."*

*"ನಾನು ತಲೆಯಲ್ಲಿ ತೆಗೆದುಕೊಂಡಿಲ್ಲ ಆದರೆ ಅವರು ಆಡುವದನ್ನು ನಾನು ನಿಮಗೆ ಹೇಳಿದೆ"*

*"ಹುಚ್ಚು ಹುಡುಗಿ. ಅದನ್ನೆಲ್ಲ ಯೋಚಿಸಬೇಡ. ನಮ್ಮ ಜೀವನ ನಮ್ಮದು. ಅದಲ್ಲದೆ, ನಾನು ಕೆಲಸ ಮಾಡುವದರಿಂದ ನನಗೂ ಸಹ ವ್ಯಾಯಾಮವಾದಂತಾಗಿ ಮೈ ಹಗುರವಾಗುತ್ತದೆ."*

ಎಂದು ಹೇಳಿದಾಗ ಅವರ ಮಾತಿಗೆ ಎದುರಾಡುವದಕ್ಕೆ ಸಾಧ್ಯವಾಗಲಿಲ್ಲ ಸುಮಾಳಿಗೆ. ಅವರ ಇಚ್ಛೆಯಂತೆ ಅವರನ್ನು ಬಿಟ್ಟು, ಸುಮ್ಮನಿದ್ದಳು. ಅಲ್ಲದೆ, ತಾನೂ ಸಹ ಫ್ರೀ ಇದ್ದಾಗ ಅವರ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಳು. 

    ಸುಮಾ ಹೇಳಿ ಕೇಳಿ ಸುಂದರಿ. ಅವಳು ಮದುವೆಯಾಗಿ ಹೊಸದಾಗಿ ಮನೆಗೆ ಬಂದಾಗ ತುಂಬಾ ಚನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದಳು. ಆವಾಗ ಗಂಡ ಜೀವಂತವಾಗಿದ್ದ. ಜೀವನದ ಉತ್ಸಾಹ ತುಂಬಾ ಇತ್ತು. ಅವಳ ಅಂದವನ್ನು ನೋಡಿ, ಎಷ್ಟೋ ಬಾರಿ ಶಾಂತಮ್ಮಲೇ ಅವಳಿಗೆ ದೃಷ್ಟಿ ತೆಗೆಯುತ್ತಿದ್ದರು. ಅವಳನ್ನು ತಮ್ಮ ಸೊಸೆ ಅಂತ ಎಲ್ಲರಿಗೂ ಅಭಿಮಾನದಿಂದ ಹೇಳುತ್ತಿದ್ದರು. ಹೆಣ್ಣು ಮಕ್ಕಳ ಗುಂಪಿನಲ್ಲಿ ಶಾಂತಮ್ಮ ಮತ್ತು ಸುಮಾ ಮಾಡೆಲ್ ಗಳಾಗಿದ್ದರು. ಎಲ್ಲ ಅತ್ತೆಯಂದಿರು ತಮ್ಮ ತಮ್ಮ ಸೊಸೆಯರ ಕಂಪ್ಲೇಂಟ್ ಮಾಡುತ್ತಿದ್ದರೆ, ಇವರಿಬ್ಬರು ಅಲ್ಲಿ ರೋಲ್ ಮಾಡೆಲ್ ಆಗಿದ್ದರು. ಇಂಥ ಸೊಸೆ ತಮಗೆ ಸಿಗಲಿಲ್ಲವಲ್ಲ ಎಂದು ಅತ್ತೆಯರು ಹೊಟ್ಟೆ ಕಿಚ್ಚು ಪಡುತ್ತಿದ್ದರೆ, ಇಂಥ ಅತ್ತೆ ನಮಗೆ ಸಿಗಲಿಲ್ಲವಲ್ಲ ಅಂತ ಸೊಸೆಯಂದಿರು ಹಲಬುತ್ತಿದ್ದರು. 

     ಶಾಂತಮ್ಮನವರು ಕಡಿಮೆ ಆಸಾಮಿ ಏನಲ್ಲ. ಯಾರಾದರೂ ಗಂಡಸರು ಮನೆಗೆ ಬಂದರೆ, ಅವರ ಹಾವ ಭಾವ ಎಲ್ಲ ಗಮನಿಸುತ್ತಿದ್ದರು. ಅವರೇನಾದರೂ ತಮ್ಮ ಸೊಸೆ ಮೇಲೆ ಕೆಟ್ಟ ದೃಷ್ಟಿ ಹಾಯಿಸಿದರೆ, ಅವರನ್ನು ಆದಷ್ಟು ಬೇಗನೆ ಮನೆಯಿಂದ ಸಾಗು ಹಾಕುತ್ತಿದ್ದರು. ಮತ್ತೆ ಅವರು ಮನೆಗೆ ಬರದಂತೆ ಅವರಿಗೆ ಏನಾದರೊಂದು ನೆಪ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ಸೊಸೆಯನ್ನು ಕಾಯುತ್ತಿದ್ದರು. 

    ಈಗ ೩ ತಿಂಗಳ ಹಿಂದೆ ಶಾಂತಮ್ಮ ಹಾಗೆ ರಾತ್ರಿ ಊಟಮಾಡಿ ಮಲಗಿಕೊಂಡಿದ್ದಾಗ ಬೆಳಗಿನ ಜಾವ ೪-೩೦ ಕ್ಕೆ, ಅವರಿಗೆ ಸ್ವಲ್ಪ ಎದೆ ನೋಯುತ್ತಿದೆ ಅಂತ ಸುಮಾಳನ್ನು ಎಬ್ಬಿಸಿದಾಗ ಅವಳು ಸ್ವಲ್ಪ ಹೊತ್ತು ಅವರ ಎದೆಯನ್ನು ತಿಕ್ಕಿದ್ದಳು. ನಂತರ ಅವರ ಎದೆ ನೋವು ಕಡಿಮೆಯಾಗಿದ್ದರೂ, ಸುಮಾ ಕಾಲೇಜಿಗೆ ರೆಡಿ ಆಗಿ ಹೋಗುವ ಹೊತ್ತಿಗೆ ಅವರ ಉಸಿರು ನಿಂತು ಹೋಗಿತ್ತು. 

     ಅತ್ತೆಯನ್ನು ಕಳೆದುಕೊಂಡ ಸುಮಾ ಜೀವನದಲ್ಲಿ ಏಕಾಂಗಿಯಾಗಿದ್ದಳು. ಅತ್ತೆ ಇದ್ದಷ್ಟು ದಿನ ಕುಲು ಕುಲು ಎನ್ನುತ್ತಿದ್ದ ಮನೆ, ಶಾಂತಮ್ಮನವರ ಸಾವಿನಿಂದ ಬಿಕೋ ಎನ್ನುತ್ತ್ತಿತ್ತು. 

   ಜೀವನದಲ್ಲಿ ಏಕಾಂಗಿಯಾಗಿ ಇಂದಿಗೂ ಇರದ ಸುಮಾ, ಅತ್ತೆಯ ಸಾವಿನ ನಂತರ, ಬದುಕಿನಲ್ಲಿ ಮೊದಲಬಾರಿಗೆ ತನ್ನನ್ನು ತಾನು ತಬ್ಬಲಿ, ಅನಾಥೆ ಎಂದು ಭಾವಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾಗ, ಅವಳನ್ನು ಆ ಏಕಾಕಿತನದಿಂದ ಹೊರಗೆ ತಂದಿದ್ದು ಅವಳ ಜಾಬ್. ಲೆಕ್ಚರರ್ ಜಾಬ್ ಮಾಡುತ್ತಿದ್ದ ಅವಳು ರಂಗನೂರಿನ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದಳು. ಡಿಗ್ರಿ ಕ್ಲಾಸಗಳಿಗೆ ಇಂಗ್ಲಿಷ್ ವಿಷಯ ಬೋಧನೆ ಮಾಡುತ್ತಿದ್ದಳು. 

    ಸುಮಾ ಮೊದಲಿನಿಂದಲೂ ಕಾನ್ವೆಂಟಿನಲ್ಲಿ ಕಲಿತವಳಾಗಿದ್ದರಿಂದ, ಅವಳ ಇಂಗ್ಲಿಷ್ ತುಂಬಾ ಚನ್ನಾಗಿತ್ತು. ಮಾತಾಡುತ್ತಿದ್ದರೆ, ಅವಳ ಲ್ಯಾಂಗ್ವೇಜ್ ನೋಡಿದ ಮತ್ತು ಕೇಳಿದವರೆಲ್ಲ ತುಂಬಾ ಆಶ್ಚರ್ಯ ಪಡುತ್ತಿದ್ದರು. ಪಾಠ ಹೇಳುವಾಗಲೂ ಅಷ್ಟೇ, ತುಂಬಾ ಕಾನ್ಸನ್ಟ್ರೇಟ್ ಆಗಿ ಪಾಠ ಮಾಡಿ ಎಲ್ಲರಿಗೂ ತಿಳಿಯುವಂತೆ ಬೋಧಿಸುತ್ತಿದ್ದಳು. 

     ಕಾಲೇಜು ಎಂದ ಮೇಲೆ ಎಲ್ಲ ತರಹ ಸ್ಟೂಡೆಂಟ್ಸ್ ಇರುತ್ತಾರೆ. ಹುಡುಗರು ಮತ್ತು ಹುಡುಗಿಯರು ಕಂಬೈನ್ಡ್ ಆಗಿದ್ದ ಕಾಲೇಜು ಅಂದ ಮೇಲೆ ಕೇಳುವ ಹಾಗೆ ಇರಲಿಲ್ಲ. ಈ ರೀತಿ ಕಂಬೈನ್ಡ್ ಇದ್ದಾಗ ಹುಡುಗರ ತುಂಟತನ ಅಧಿಕವಾಗಿರುತ್ತದೆ. ಎಷ್ಟೇ ಅವರನ್ನು ಹಿಡಿದು ಸಮಾಧಾನ ಪಡಿಸಿದರೂ ಸಹ ಅವರು ತಮ್ಮ ತುಂಟಾಟವನ್ನು ಬಿಡುತ್ತಿರಲಿಲ್ಲ. ಮನದಲ್ಲಿ ಸುಮಾ ಗಂಡು ಹುಡುಗರು ಹಾಗೆ ತುಂಟಾಟ ಮಾಡಿದರೆ ಚೆನ್ನ ಎಂದು ಅಂದುಕೊಂಡರೂ ಸಹ ಕಾಲೇಜು ಲೆಕ್ಚರರ್ ಆಗಿ ಅವರನ್ನು ಹದ್ದುಬಸ್ತಿನಲ್ಲಿ ಇಡುವದು ಅಷ್ಟೇ ಮುಖ್ಯವಾಗಿತ್ತು. 

     ಸಹಜ ರೂಪಾವತಿಯಾದ ಸುಮಾ ನೋಡಲು ತುಂಬಾ ಸುಂದರವಾಗಿದ್ದಳು. ವಿಶಾಲವಾದ ಮೀನಿನ ಆಕಾರದಲ್ಲಿ ಇರುವ ಕಣ್ಣುಗಳು. ಕೊರೆದಂತಿರುವ ಹುಬ್ಬು, ಚೂಪಾದ ನಾಸಿಕ, ಆಕರ್ಷಕವಾದ ಅಂಗ ಸೌಷ್ಟವ, ರೇಶಿಮೆಯಂತಾ ತಲೆಗೂದಲು. ಯಾರಾದರೂ ಅವಳನ್ನು ನೋಡಿದರೆ, ನೋಡುತ್ತಲೇ ಇರುತ್ತಿದ್ದರು. ಅವಳ ರೂಪದಿಂದ ಆಕರ್ಷಿತವಾಗದೆ ಉಳಿದವರು ಯಾರೂ ಇರಲಿಲ್ಲ ಕಾಲೇಜಿನಲ್ಲಿ. ಅವಳನ್ನು ತಮ್ಮ ಕಡೆಗೆ ಆಕರ್ಷಿಸಲು ಸ್ಟೂಡೆಂಟ್ಸ್ ಸಹ ತುಂಬಾ ಪ್ರಯತ್ನ ಮಾಡುತ್ತಿದ್ದರು. ಅಂತಹ ಸುರಸುಂದರಿ ಸುಮಾ. 

    ಮದುವೆಯಾದಾಗ ಗಂಡನ ಸಲುವಾಗಿ ತುಂಬಾ ಚನ್ನಾಗಿ ಅಪ್ಸರೆ ನಾಚುವ ಹಾಗೆ ತನ್ನನ್ನು ತಾನು ಅಲಂಕಾರ ಮಾಡಿಕೊಳ್ಳುತ್ತಲಿದ್ದಳು. ಆದರೆ ಗಂಡ ತೀರಿಕೊಂಡ ಮೇಲೆ, ಅವಳಿಗೆ ಅಲಂಕಾರ ಮಾಡಿಕೊಳ್ಳುವದನ್ನು ಬಿಟ್ಟಿದ್ದಳು. ಅತ್ತೆ ಶಾಂತಮ್ಮ ಇದ್ದಾಗ ಯಾವುದಾದರೂ ಕಾರ್ಯಕ್ರಮ ಇದ್ದರೆ ಅವರೇ ಅವಳಿಗೆ ಬಲವಂತ ಮಾಡಿ ಅವಳು ಅಲಂಕಾರ ಮಾಡಿಕೊಳ್ಳುವಂತೆ ಮಾಡುತ್ತಿದ್ದರು. ಆದರೆ ಈಗ ಅವರು ಹೋದ ಮೇಲೆಯಂತೂ ಸುಮಾ ತನ್ನನ್ನು ತಾನು ಅಲಂಕರಿಸುವದು ಬಿಟ್ಟುಬಿಟ್ಟಿದ್ದಳು. 

     ಆದರೂ ಸಹ ಅವಳು ಸಹಜ ಸುಂದರಿಯಾಗಿದ್ದರಿಂದ, ಅವಳು ಎಷ್ಟೇ ಸರಳವಾಗಿದ್ದರೂ ಸಹ ಅವಳ ಸೌಂದರ್ಯ ಅವಳನ್ನು ಇನ್ನಷ್ಟು ಸುಂದರಳನ್ನಾಗಿ ಮಾಡಿತ್ತು. ದೇವಾಲಯಕ್ಕೆ ಕಳಶವಿದ್ದಂತೆ ಅವಳ ಗಂಭೀರತೆ ಅವಳನ್ನು ಇನ್ನಷ್ಟು ಸುಂದರಿಯನ್ನಾಗಿ ಮಾಡಿತ್ತು. ಎಷ್ಟೋ ಗಂಡು ಹುಡುಗರು ಅವಳ ಮೇಲೆ ಪ್ರೇಮ ಕಾವ್ಯವನ್ನು ಬರೆಯುತ್ತಿದ್ದರು. ಆದರೆ ಯಾರೂ ಅವಳಿಗೆ ಕೊಡುವ ಧೈರ್ಯ ಮಾಡಿರಲಿಲ್ಲ. ಅವಳ ಗಾಂಭೀರ್ಯ ಅವಳ ಹತ್ತಿರ ಗಂಡಸರು ಸುಳಿಯದಂತೆ ಮಾಡಿತ್ತು. 

     ದಿನ ಬೆಳಿಗ್ಗೆ ಇದ್ದು ತನ್ನ ಮನೆಯ ಕೆಲಸವನ್ನು ಮುಗಿಸಿ, ಕಾಲೇಜಿಗೆ ಹೋಗುತ್ತಿದ್ದಳು. ಅಲ್ಲಿ ಬೆಳಿಗ್ಗೆ ೯ ಘಂಟೆಯಿಂದ ಮಧ್ಯಾನ್ಹ ೩ ಘಂಟೆಯವರೆಗೆ ಡ್ಯೂಟಿ ಮಾಡಿ ೪ ಘಂಟೆಗೆಲ್ಲ ಮನೆಗೆ ಬಂದು ಊಟ ಮಾಡಿ ೫ ಘಂಟೆಗೆ ಮನೆ ಸ್ವಚ್ಛ ಮಾಡಿ ೬ ಘಂಟೆಗೆ ದೇವರ ಪೂಜೆಯನ್ನು ಮಾಡಿ, ನಂತರ ಅಡುಗೆ ಮಾಡಿ ೭ ಘಂಟೆಯಿಂದ ೯ ಘಂಟೆಯವರೆಗೆ ಟಿ ವಿ ನೋಡುತ್ತಿದ್ದಳು. ಟಿ ವಿ ಯಲ್ಲಿ ಪ್ರಣಯದ ಸನ್ನಿವೇಶಗಳು ಬಂದಾಗ ಅವಳಿಗೆ ತನ್ನ ಗಂಡ ನೆನಪಾಗುತ್ತಿದ್ದ. ಮನೆಯಲ್ಲಿದ್ದಾಗ ಸದಾ ಅವಳನ್ನು ಹಿಡಿದಿಟ್ಟುಕೊಂಡಿರುತ್ತಿದ್ದ. ಅವನು ಮಹಾ ರಸಿಕ. ರಸಿಕತೆ ಎನ್ನುವದು ಅವನ ತುಂಟಾಟದಲ್ಲಿ ಕಂಡು ಬರುತ್ತಿತ್ತು. ಅಂತಹ ಗಂಡ. ಅದಕ್ಕೆ ಅವಳು ಅಂತಹ ಸನ್ನಿವೇಶ ಬಂದರೆ ಸಡನ್ ಆಗಿ ಚಾನೆಲ್ ಬದಲಾಯಿಸಿ ಬಿಡುತ್ತಿದ್ದಳು. 

     ಸರಿಯಾಗಿ ೯ ಘಂಟೆಗೆ ಊಟ ಮಾಡಿ, ೯.೩೦ ಕ್ಕೆಲ್ಲ ಹಾಸಿಗೆ ಮೇಲೆ ಉರುಳಿಕೊಂಡು ತನ್ನ ಮೊಬೈಲ್ ದಲ್ಲಿ ಫೇಸ್ ಬುಕ್ ಓಪನ್ ಮಾಡಿ ಅದರಲ್ಲಿಯ ಫೋಟೋಸ್, ವೀಡಿಯೋಸ್ ನೋಡುತ್ತಿದ್ದಳು. ಯಾರಾದರೂ ಜೋಡಿಯಾಗಿ ತಮ್ಮ ಫೋಟೋಗಳನ್ನು ಹಾಕಿದ್ದಾರೆ ಅವರ ಚಿತ್ರದ ಬದಲಾಗಿ ತನ್ನ ಮತ್ತು ಮನು ಚಿತ್ರವನ್ನು ಅಲ್ಲಿ ಕಲ್ಪಿಸಿಕೊಂಡು ಆನಂದ ಪಡುತ್ತಿದ್ದಳು. ಸಾಕಷ್ಟು ಬಾರಿ ಅವನ ನೆನಪಿನಲ್ಲಿಯೇ ರಾತ್ರಿ ಮಲಗಿದಾಗ ಅವನ ಹೆಸರನ್ನು ಕನವರಿಸುತ್ತಿದ್ದಳು.

 

  ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಹಾಸಿಗೆಯ ಮೇಲೆ ಉರುಳಿದಳು ಸುಮಾ. ಫೇಸ್ ಬುಕ್ ತೆಗೆದು ಅದರಲ್ಲಿಯಾ ವಿಡಿಯೋಗಳನ್ನು ಸುಂದರವಾದ ಫೋಟೋಗಳನ್ನು ನೋಡತೊಡಗಿದಳು. ದಿನಾಲೂ ರಾತ್ರಿ ಊಟವಾದ ಮೇಲೆ ಅವಳು ಫೇಸ್ ಬುಕ್ ದಲ್ಲಿ ಒಂದು ಸಾರಿ ಹಾಗೆ ಕಣ್ಣು ಹಾಯಿಸಿ ಮಲಗುವದು ವಾಡಿಕೆ. ಮನೆಯಲ್ಲಿ ಏಕಾಂಗಿ ಆಗಿ ಇರುತ್ತಿದ್ದಳು. ಗಂಡ ಮನು ಮದುವೆಯಾದ ೮ ವರ್ಷಕ್ಕೆ ಆಕ್ಸಿಡೆಂಟ್ ದಲ್ಲಿ ತೀರಿಕೊಂಡಿದ್ದ. ಅಂದಿನಿಂದ ಅವಳು ಒಂಟಿಯಾಗಿದ್ದಳು. ಮನೆಯಲ್ಲಿ ಅತ್ತೆ ಶಾಂತಮ್ಮ ಜೊತೆಗೆ ಇರುತ್ತಿದ್ದಳು. ಶಾಂತಮ್ಮ ಸಹ ಹೆಸರಿನಂತೆ ಶಾಂತ ಸ್ವಭಾವದವರು. ಅವರಿಗೆ ಒಬ್ಬನೇ ಮಗ ಮನು. ಅವನು ತೀರಿಕೊಂಡ ಮೇಲೆ ತಾವೇ ನಿಂತು ಸೊಸೆಗೆ ಮತ್ತೊಂದು ಮದುವೆಯನ್ನು ಮಾಡುವದಕ್ಕೆ ಎಷ್ಟೇ ಪ್ರಯತ್ನ ಮಾಡಿದರೂ ಸಹ ಸುಮಾ ಮರು ಮಾಡುವೆ ಮಾಡಿಕೊಳ್ಳಲು ತಯಾರಾಗಿರಲಿಲ್ಲ. ಸುಮಾಳ ತಂದೆ ತಾಯಿ ಅವಳ ಮದುವೆಯಾದ ೨ ವರ್ಷಕ್ಕೆ ತೀರ್ಥಯಾತ್ರೆಗೆ ಹೋದಾಗ ಕಾಶಿಯಲ್ಲಿ ಉಕ್ಕಿ ಹರಿಯುವ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅಂದಿನಿಂದ ಶಾಂತಮ್ಮ ಸುಮಾಳಿಗೆ ತಾಯಿ ತಂದೆಯ ಸ್ಥಾನವನ್ನು ತುಂಬಿದ್ದರು. ಗಂಡ ಮನು ಅಂತೂ ಅವಳನ್ನು ಬಿಟ್ಟು ಒಂದು ಕ್ಷಣ ಇರುತ್ತಿರಲಿಲ್ಲ. 

     ಮನು, ಜೀವಂತವಿದ್ದಾಗಲೇ, ಅವನು ಸುಮಾಳ ಬುದ್ಧಿಮತ್ತೆಯನ್ನು ಕಂಡುಕೊಂಡು ಅವಳಿಗೆ ಎಂ ಎ ಓದಿಸಿದ್ದ. ಮನುನ ತಂದೆ ಸಾಕಷ್ಟು ಶ್ರೀಮಂತರು. ಆರ್ಥಿಕವಾಗಿ ಸಬಲರಾಗಿದ್ದರು. ಅವರು ತೀರಿಕೊಂಡ ಮೇಲೆ ಇದ್ದ ಎಲ್ಲ ಬ್ಯುಸಿನೆಸ್ಸ್ಸ್ ಕ್ಲೋಸ್ ಮಾಡಿದ ಮನು ತಾನು ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. civil ಎಂಜಿನೀರ್ ಆಗಿದ್ದ ಮನು, ಕಟ್ಟಡಗಳ ಕಾಂಟ್ರಾಕ್ಟ್ ತೆಗೆದುಕೊಂಡು ಚನ್ನಾಗೇ ಕೆಲಸ ಮಾಡುತ್ತಾ ರಂಗನೂರಿನಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ. ಹಾಗೆ ಅವನು ಒಂದು ದಿನ ಯಾವುದೋ ೩೦ ಅಂತಸ್ತಿನ ಬಿಲ್ಡಿಂಗ್ ಕಟ್ಟಡದ ವೀಕ್ಷಣೆ ಮಾಡಲು ಹೋದಾಗ ಸ್ಲಾಬ್ ಕುಸಿದು ಅವನು ಮತ್ತ್ತು ಇನ್ನು ೪ ಜನ ತೀರಿಕೊಂಡಿದ್ದರು. 

   ಮನು ಮೃತನಾದ ಮೇಲೆ ತಾಯಿ ಶಾಂತಮ್ಮ ಎದೆಗುಂದಲಿಲ್ಲ. ಸುಮಳನ್ನೇ ತನ್ನ ಮಗ ಮತ್ತು ಮಗಳನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನು ತೀರಿಕೊಂಡ ಬಳಿಕ ಕೆಲವು ದಿನ ಸುಮಾ ಮ್ಲಾನವಾದನಳಾಗಿ ಸದಾ ಗಂಡನ ನೆನಪಲ್ಲಿ ಕೊರಗುತ್ತಿದ್ದರೆ, ಶಾಂತಮ್ಮ ಅವಳಿಗೆ ತಿಳಿ ಹೇಳಿ ಅವಳನ್ನು ರಂಗನೂರಿನಲ್ಲಿ ಇದ್ದ ಕಾಲೇಜು ಸೇರಿಸಿ ಅಲ್ಲಿ ಲೆಕ್ಚರರ್ ಕೆಲಸ ಮಾಡುವಂತೆ ತಿಳಿ ಹೇಳಿ, ತಮಗೆ ಪರಿಚಯವಿದ್ದವರ ಕಡೆಯಿಂದ ಕಾಲೇಜಿನಲ್ಲಿ ಸುಮಾಳಿಗೆ ಕೆಲಸ ಕೊಡಿಸಿದ್ದರು. 

   ಮೊದ ಮೊದಲು, ಸುಮಾ, ಕಾಲೇಜಿನಲ್ಲಿ ಪಾಠ ಹೇಳಲು ಭಯ ಪಡುತ್ತಿದ್ದರೂ ಸಹ ಅವಳ ಸಹಪಾಠಿಗಳು ಅವಳನ್ನು ಪ್ರೋತ್ಸಾಹಿಸಿದ್ದರಿಂದ ಅವಳಿಗೆ ಕ್ರಮೇಣ ಧೈರ್ಯ ಬಂದು ಅವಳು ಈಗ ಚನ್ನಾಗಿ ಪಾಠ ಮಾಡುತ್ತಿದ್ದಳು. 

   ಸುಮಾ ನೋಡಲು ತುಂಬಾ ಸುಂದರವಾಗಿದ್ದಳು. ಅವಳ ಸುಂದರತೆ ಮತ್ತು ಒಳ್ಳೆಯ ಮೃದು ಸ್ವಭಾವವನ್ನುಕಂಡ ಅತ್ತೆ ಶಾಂತಮ್ಮ, ಅವಳಿಗೆ ಹಲವಾರು ಬಾರಿ ಅವಳಿಗೆ ಮತ್ತೊಂದು ಮದುವೆ ಮಾಡಲು ಪ್ರಯತ್ನಿಸಿದ್ದರು ಸಹ ಸುಮಾ ಮಾತ್ರ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಒಂದೇ ಮಾತು ಹೇಳಿದ್ದಳು. 

*"ಅಮ್ಮ, ಬಲವಂತ ಮಾಡಬೇಡಿ. ನಾನು ನಿಮ್ಮನ್ನು ಆಗಲಿ ಇರಲಾರೆ. ಒಂದು ವೇಳೆ ನೀವು ಬಲವಂತ ಮಾಡಿದರೆ ನಾನು ನಿಮಗಿಂತ ಮೊದಲೇ ಸಾಯಬೇಕಾಗುತ್ತೆ"*

*"ಅಲ್ಲಮ್ಮ, ಒಂದು ವೇಳೆ ನಾನು ಬೇಗನೆ ಸತ್ತರೆ, ಮುಂದೆ ನಿನ್ನ ಗತಿಯೇನು ತಾಯಿ. ಅದಕ್ಕ್ರೆ ನಿನ್ನ ಸುರಕ್ಷೆ ಸಲುವಾಗಿ ನಾನು ಹೇಳೋದು"*

*"ಅಮ್ಮ, ಈಗ ನನಗೆ ವಯಸ್ಸು ೪೦. ಈ ವಯಸ್ಸಿನಲ್ಲಿ ನಾನೇನಾದರೂ ಮತ್ತೆ ಮಾಡುವೆ ಆದರೆ ನೋಡಿದ ಜನ ನನ್ನ ಬಗ್ಗೆ ಏನು ತಿಳಿದುಕೊಂಡಾರು. ಅಲ್ಲದೆ ನನ್ನ ಮಾಡುವೆ ಮಾಡಿದ ನಿಮ್ಮನ್ನು ಹೇಗೆಲ್ಲ ಅಂದುಕೊಳ್ಳುತ್ತಾರೆ ನಿಮಗೆ ಗೊತ್ತಿಲ್ಲಮ್ಮ. ನಾವು ಸಮಾಜದಲ್ಲಿ ಇರುವವರು, ನಮಗೆ ಸಮಾಜ ಮುಖ್ಯ ಅಲ್ಲದೆ, ನಾವು ಸಮಾಜವನ್ನು ಕೆಣಕಲು ಸಾಧ್ಯವಲ್ಲಮ್ಮ. ಅದಕ್ಕೆ ನನ್ನನ್ನು ಬಲವಂತ ಮಾಡಬೇಡಿ"*

ಎಂದು ಉತ್ತರಿಸಿದಾಗ, ಶಾಂತಮ್ಮ ಸಹ ತಮ್ಮ ಹಠ ಬಿಡದೆ, 

*"ಆಯ್ತಮ್ಮಾ, ಆದರೆ ನೀನು ಒಬ್ಬಂಟಿಯಾದಾಗ ಅದೇ ಸಮಾಜ ನಿನ್ನ ನೆರವಿಗೆ ಬರುತ್ತೆ ಅಂತ ನೀನು ಭಾವಿಸಿದ್ದಾರೆ ಅದು ತಪ್ಪು. ಒಂದು ಹೆಣ್ಣಿಗೆ ಒಂದು ಗಂಡಿನ ಆಸರೆ ಇದ್ದಾರೆ ಮಾತ್ರ ಅವಳು ಸುರಕ್ಷಿತಳು. ಹೊಲಕ್ಕೆ ಯಾವಾಗಲೂ ಬೇಲಿ ಇರಬೇಕು. ಇಲ್ಲವಾದರೆ ದನಗಳು ಹೊಲಕ್ಕೆ ನುಗ್ಗಲು ಪ್ರಯತ್ನ ಮಾಡ್ತಾವಷ್ಟೇ"*

ಎಂದಾಗ ಈ ಮಾತಿಗೆ ನಕ್ಕು ಸುಮಾ, 

*" ಅಮ್ಮ ನನ್ನನ್ನು ನೀವು ಹೊಲ, ಅಂದರೆ ಜೀವವಿಲ್ಲದ ವಸ್ತುವನ್ನು ಮಾಡಿದಿರಿ. ಇರಲಿ, ಸರಿಯಾಗಿಯೇ ಹೇಳಿದಿರಿ. ನಾನು ಈಗ ಒಂದು ರೀತಿಯಲ್ಲಿ ಜೀವವಿಲ್ಲದ ಮನುಷ್ಯ ಆದರೆ ನನ್ನ ಜೀವ ಈಗ ಇರುವದು ನಿಮ್ಮಲ್ಲಿ. ನಿಮ್ಮ ಸೇವೆ ಮಾಡುವದಕ್ಕೆ ನನಗೆ ಅವಕಾಶ ಮಾಡಿಕೊಡಿ. ಇರುವಷ್ಟು ದಿನ ನಿಮ್ಮ ಸೇವೆಯಲ್ಲಿ ನನ್ನ ಜೀವನ ಕಳೆದುಬಿಡುತ್ತೇನೆ"*

ಎಂದು ಉತ್ತರ ನೀಡಿದಾಗ ಶಾಂತಮ್ಮ, ಅವಳಿಗೆ ಏನು ಹೇಳಬೇಕು ಅಂತ ಗೊತ್ತಾಗದೆ ಸುಮ್ಮನೆ ಇದ್ದರು. 

ಅತ್ತೆ ಸೊಸೆ, ಇಬ್ಬರೂ ಆ ಮನೆಯಲ್ಲಿ ಅತ್ತೆ ಸೊಸೆ ಹಾಗಿರದೆ, ತಾಯಿ ಮಗಳ ಹಾಗಿದ್ದರು. ಸುಮಾ ಮನೆಯಲ್ಲಿದ್ದರೆ ಒಂದು ಕ್ಷಣ ಶಾಂತಮ್ಮನನ್ನು ಆಗಲಿ ಇರುತ್ತಿರಲಿಲ್ಲ. ಶಾಂತಮ್ಮಲೂ ಸಹ ಅಷ್ಟೇ. ಸುಮಾಳನ್ನು ಒಂದು ಕ್ಷಣ ತಮ್ಮ ಕಣ್ಣಿನಿಂದ ಮರೆಯಾಗದಂತೆ ತಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಲಿದ್ದರು. ಅವಳು ಕಾಲೇಜಿಗೆ ಹೋಗಿ ಬರುವಷ್ಟರಲ್ಲಿ ಮನೆಯ ಎಲ್ಲ ಕೆಲಸಗಳನ್ನು ಅವರು ಮಾಡಿ ಮುಗಿಸುತ್ತಿದ್ದರು. ಸುಮಾ ಮನೆಗೆ ಬಂದ ಮೇಲೆ ಅವಳಿಗೆ ಮಾಡಲು ಬೇರೆ ಕೆಲಸ ಇರುತ್ತಿರಲಿಲ್ಲ. ಅವಳು ಶಾಂತಮ್ಮ ಕೆಲಸ ಮಾಡುವದಕ್ಕೆ ಆಕ್ಷೇಪ ತೆಗೆದರೂ ಸಹ ಶಾಂತಮ್ಮ, 

*"ನೀನು ದಣಿದು ಬಂದಿರುತ್ತಿ. ನಿಂಗ್ಯಾಕಮ್ಮ ಈ ಕೆಲಸದ ಉಸಾಬರಿ. ಅದಕ್ಕೆ ನಾನಿದ್ದೇನೆ. ನೀನು ಸುಮ್ಮನೆ ಹಾಯಾಗಿರಮ್ಮ ಸಾಕು."*

*"ಅಂದರೆ ನೋಡಿದವರು, ಅತ್ತೆಯಿಂದ ಕೆಲಸ ಮಾಡಿಸಿಕೊಂಡು ಮೆರಿತಾಳೆ ಅಂತ ನನಗೆ ಅನ್ನುತ್ತಾರೆ"*

*"ಆಡುವವರಿಗೆನಮ್ಮ ಹೀಗಿದ್ದರೂ ಆಡುತ್ತಾರೆ ಹಾಗಿದ್ದರೂ ಆಡುತ್ತಾರೆ. ಅದನ್ನೆಲ್ಲ ತಲೆಗೆ ಹಚ್ಚಿಕೊಂಡರೆ ಜೀವನ ಮಾಡುವದು ಅಷ್ಟರಲ್ಲೇ ಇದೆ."*

*"ನಾನು ತಲೆಯಲ್ಲಿ ತೆಗೆದುಕೊಂಡಿಲ್ಲ ಆದರೆ ಅವರು ಆಡುವದನ್ನು ನಾನು ನಿಮಗೆ ಹೇಳಿದೆ"*

*"ಹುಚ್ಚು ಹುಡುಗಿ. ಅದನ್ನೆಲ್ಲ ಯೋಚಿಸಬೇಡ. ನಮ್ಮ ಜೀವನ ನಮ್ಮದು. ಅದಲ್ಲದೆ, ನಾನು ಕೆಲಸ ಮಾಡುವದರಿಂದ ನನಗೂ ಸಹ ವ್ಯಾಯಾಮವಾದಂತಾಗಿ ಮೈ ಹಗುರವಾಗುತ್ತದೆ."*

ಎಂದು ಹೇಳಿದಾಗ ಅವರ ಮಾತಿಗೆ ಎದುರಾಡುವದಕ್ಕೆ ಸಾಧ್ಯವಾಗಲಿಲ್ಲ ಸುಮಾಳಿಗೆ. ಅವರ ಇಚ್ಛೆಯಂತೆ ಅವರನ್ನು ಬಿಟ್ಟು, ಸುಮ್ಮನಿದ್ದಳು. ಅಲ್ಲದೆ, ತಾನೂ ಸಹ ಫ್ರೀ ಇದ್ದಾಗ ಅವರ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಳು. 

    ಸುಮಾ ಹೇಳಿ ಕೇಳಿ ಸುಂದರಿ. ಅವಳು ಮದುವೆಯಾಗಿ ಹೊಸದಾಗಿ ಮನೆಗೆ ಬಂದಾಗ ತುಂಬಾ ಚನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದಳು. ಆವಾಗ ಗಂಡ ಜೀವಂತವಾಗಿದ್ದ. ಜೀವನದ ಉತ್ಸಾಹ ತುಂಬಾ ಇತ್ತು. ಅವಳ ಅಂದವನ್ನು ನೋಡಿ, ಎಷ್ಟೋ ಬಾರಿ ಶಾಂತಮ್ಮಲೇ ಅವಳಿಗೆ ದೃಷ್ಟಿ ತೆಗೆಯುತ್ತಿದ್ದರು. ಅವಳನ್ನು ತಮ್ಮ ಸೊಸೆ ಅಂತ ಎಲ್ಲರಿಗೂ ಅಭಿಮಾನದಿಂದ ಹೇಳುತ್ತಿದ್ದರು. ಹೆಣ್ಣು ಮಕ್ಕಳ ಗುಂಪಿನಲ್ಲಿ ಶಾಂತಮ್ಮ ಮತ್ತು ಸುಮಾ ಮಾಡೆಲ್ ಗಳಾಗಿದ್ದರು. ಎಲ್ಲ ಅತ್ತೆಯಂದಿರು ತಮ್ಮ ತಮ್ಮ ಸೊಸೆಯರ ಕಂಪ್ಲೇಂಟ್ ಮಾಡುತ್ತಿದ್ದರೆ, ಇವರಿಬ್ಬರು ಅಲ್ಲಿ ರೋಲ್ ಮಾಡೆಲ್ ಆಗಿದ್ದರು. ಇಂಥ ಸೊಸೆ ತಮಗೆ ಸಿಗಲಿಲ್ಲವಲ್ಲ ಎಂದು ಅತ್ತೆಯರು ಹೊಟ್ಟೆ ಕಿಚ್ಚು ಪಡುತ್ತಿದ್ದರೆ, ಇಂಥ ಅತ್ತೆ ನಮಗೆ ಸಿಗಲಿಲ್ಲವಲ್ಲ ಅಂತ ಸೊಸೆಯಂದಿರು ಹಲಬುತ್ತಿದ್ದರು. 

     ಶಾಂತಮ್ಮನವರು ಕಡಿಮೆ ಆಸಾಮಿ ಏನಲ್ಲ. ಯಾರಾದರೂ ಗಂಡಸರು ಮನೆಗೆ ಬಂದರೆ, ಅವರ ಹಾವ ಭಾವ ಎಲ್ಲ ಗಮನಿಸುತ್ತಿದ್ದರು. ಅವರೇನಾದರೂ ತಮ್ಮ ಸೊಸೆ ಮೇಲೆ ಕೆಟ್ಟ ದೃಷ್ಟಿ ಹಾಯಿಸಿದರೆ, ಅವರನ್ನು ಆದಷ್ಟು ಬೇಗನೆ ಮನೆಯಿಂದ ಸಾಗು ಹಾಕುತ್ತಿದ್ದರು. ಮತ್ತೆ ಅವರು ಮನೆಗೆ ಬರದಂತೆ ಅವರಿಗೆ ಏನಾದರೊಂದು ನೆಪ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ಸೊಸೆಯನ್ನು ಕಾಯುತ್ತಿದ್ದರು. 

    ಈಗ ೩ ತಿಂಗಳ ಹಿಂದೆ ಶಾಂತಮ್ಮ ಹಾಗೆ ರಾತ್ರಿ ಊಟಮಾಡಿ ಮಲಗಿಕೊಂಡಿದ್ದಾಗ ಬೆಳಗಿನ ಜಾವ ೪-೩೦ ಕ್ಕೆ, ಅವರಿಗೆ ಸ್ವಲ್ಪ ಎದೆ ನೋಯುತ್ತಿದೆ ಅಂತ ಸುಮಾಳನ್ನು ಎಬ್ಬಿಸಿದಾಗ ಅವಳು ಸ್ವಲ್ಪ ಹೊತ್ತು ಅವರ ಎದೆಯನ್ನು ತಿಕ್ಕಿದ್ದಳು. ನಂತರ ಅವರ ಎದೆ ನೋವು ಕಡಿಮೆಯಾಗಿದ್ದರೂ, ಸುಮಾ ಕಾಲೇಜಿಗೆ ರೆಡಿ ಆಗಿ ಹೋಗುವ ಹೊತ್ತಿಗೆ ಅವರ ಉಸಿರು ನಿಂತು ಹೋಗಿತ್ತು. 

     ಅತ್ತೆಯನ್ನು ಕಳೆದುಕೊಂಡ ಸುಮಾ ಜೀವನದಲ್ಲಿ ಏಕಾಂಗಿಯಾಗಿದ್ದಳು. ಅತ್ತೆ ಇದ್ದಷ್ಟು ದಿನ ಕುಲು ಕುಲು ಎನ್ನುತ್ತಿದ್ದ ಮನೆ, ಶಾಂತಮ್ಮನವರ ಸಾವಿನಿಂದ ಬಿಕೋ ಎನ್ನುತ್ತ್ತಿತ್ತು. 

   ಜೀವನದಲ್ಲಿ ಏಕಾಂಗಿಯಾಗಿ ಇಂದಿಗೂ ಇರದ ಸುಮಾ, ಅತ್ತೆಯ ಸಾವಿನ ನಂತರ, ಬದುಕಿನಲ್ಲಿ ಮೊದಲಬಾರಿಗೆ ತನ್ನನ್ನು ತಾನು ತಬ್ಬಲಿ, ಅನಾಥೆ ಎಂದು ಭಾವಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾಗ, ಅವಳನ್ನು ಆ ಏಕಾಕಿತನದಿಂದ ಹೊರಗೆ ತಂದಿದ್ದು ಅವಳ ಜಾಬ್. ಲೆಕ್ಚರರ್ ಜಾಬ್ ಮಾಡುತ್ತಿದ್ದ ಅವಳು ರಂಗನೂರಿನ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದಳು. ಡಿಗ್ರಿ ಕ್ಲಾಸಗಳಿಗೆ ಇಂಗ್ಲಿಷ್ ವಿಷಯ ಬೋಧನೆ ಮಾಡುತ್ತಿದ್ದಳು. 

    ಸುಮಾ ಮೊದಲಿನಿಂದಲೂ ಕಾನ್ವೆಂಟಿನಲ್ಲಿ ಕಲಿತವಳಾಗಿದ್ದರಿಂದ, ಅವಳ ಇಂಗ್ಲಿಷ್ ತುಂಬಾ ಚನ್ನಾಗಿತ್ತು. ಮಾತಾಡುತ್ತಿದ್ದರೆ, ಅವಳ ಲ್ಯಾಂಗ್ವೇಜ್ ನೋಡಿದ ಮತ್ತು ಕೇಳಿದವರೆಲ್ಲ ತುಂಬಾ ಆಶ್ಚರ್ಯ ಪಡುತ್ತಿದ್ದರು. ಪಾಠ ಹೇಳುವಾಗಲೂ ಅಷ್ಟೇ, ತುಂಬಾ ಕಾನ್ಸನ್ಟ್ರೇಟ್ ಆಗಿ ಪಾಠ ಮಾಡಿ ಎಲ್ಲರಿಗೂ ತಿಳಿಯುವಂತೆ ಬೋಧಿಸುತ್ತಿದ್ದಳು. 

     ಕಾಲೇಜು ಎಂದ ಮೇಲೆ ಎಲ್ಲ ತರಹ ಸ್ಟೂಡೆಂಟ್ಸ್ ಇರುತ್ತಾರೆ. ಹುಡುಗರು ಮತ್ತು ಹುಡುಗಿಯರು ಕಂಬೈನ್ಡ್ ಆಗಿದ್ದ ಕಾಲೇಜು ಅಂದ ಮೇಲೆ ಕೇಳುವ ಹಾಗೆ ಇರಲಿಲ್ಲ. ಈ ರೀತಿ ಕಂಬೈನ್ಡ್ ಇದ್ದಾಗ ಹುಡುಗರ ತುಂಟತನ ಅಧಿಕವಾಗಿರುತ್ತದೆ. ಎಷ್ಟೇ ಅವರನ್ನು ಹಿಡಿದು ಸಮಾಧಾನ ಪಡಿಸಿದರೂ ಸಹ ಅವರು ತಮ್ಮ ತುಂಟಾಟವನ್ನು ಬಿಡುತ್ತಿರಲಿಲ್ಲ. ಮನದಲ್ಲಿ ಸುಮಾ ಗಂಡು ಹುಡುಗರು ಹಾಗೆ ತುಂಟಾಟ ಮಾಡಿದರೆ ಚೆನ್ನ ಎಂದು ಅಂದುಕೊಂಡರೂ ಸಹ ಕಾಲೇಜು ಲೆಕ್ಚರರ್ ಆಗಿ ಅವರನ್ನು ಹದ್ದುಬಸ್ತಿನಲ್ಲಿ ಇಡುವದು ಅಷ್ಟೇ ಮುಖ್ಯವಾಗಿತ್ತು. 

     ಸಹಜ ರೂಪಾವತಿಯಾದ ಸುಮಾ ನೋಡಲು ತುಂಬಾ ಸುಂದರವಾಗಿದ್ದಳು. ವಿಶಾಲವಾದ ಮೀನಿನ ಆಕಾರದಲ್ಲಿ ಇರುವ ಕಣ್ಣುಗಳು. ಕೊರೆದಂತಿರುವ ಹುಬ್ಬು, ಚೂಪಾದ ನಾಸಿಕ, ಆಕರ್ಷಕವಾದ ಅಂಗ ಸೌಷ್ಟವ, ರೇಶಿಮೆಯಂತಾ ತಲೆಗೂದಲು. ಯಾರಾದರೂ ಅವಳನ್ನು ನೋಡಿದರೆ, ನೋಡುತ್ತಲೇ ಇರುತ್ತಿದ್ದರು. ಅವಳ ರೂಪದಿಂದ ಆಕರ್ಷಿತವಾಗದೆ ಉಳಿದವರು ಯಾರೂ ಇರಲಿಲ್ಲ ಕಾಲೇಜಿನಲ್ಲಿ. ಅವಳನ್ನು ತಮ್ಮ ಕಡೆಗೆ ಆಕರ್ಷಿಸಲು ಸ್ಟೂಡೆಂಟ್ಸ್ ಸಹ ತುಂಬಾ ಪ್ರಯತ್ನ ಮಾಡುತ್ತಿದ್ದರು. ಅಂತಹ ಸುರಸುಂದರಿ ಸುಮಾ. 

    ಮದುವೆಯಾದಾಗ ಗಂಡನ ಸಲುವಾಗಿ ತುಂಬಾ ಚನ್ನಾಗಿ ಅಪ್ಸರೆ ನಾಚುವ ಹಾಗೆ ತನ್ನನ್ನು ತಾನು ಅಲಂಕಾರ ಮಾಡಿಕೊಳ್ಳುತ್ತಲಿದ್ದಳು. ಆದರೆ ಗಂಡ ತೀರಿಕೊಂಡ ಮೇಲೆ, ಅವಳಿಗೆ ಅಲಂಕಾರ ಮಾಡಿಕೊಳ್ಳುವದನ್ನು ಬಿಟ್ಟಿದ್ದಳು. ಅತ್ತೆ ಶಾಂತಮ್ಮ ಇದ್ದಾಗ ಯಾವುದಾದರೂ ಕಾರ್ಯಕ್ರಮ ಇದ್ದರೆ ಅವರೇ ಅವಳಿಗೆ ಬಲವಂತ ಮಾಡಿ ಅವಳು ಅಲಂಕಾರ ಮಾಡಿಕೊಳ್ಳುವಂತೆ ಮಾಡುತ್ತಿದ್ದರು. ಆದರೆ ಈಗ ಅವರು ಹೋದ ಮೇಲೆಯಂತೂ ಸುಮಾ ತನ್ನನ್ನು ತಾನು ಅಲಂಕರಿಸುವದು ಬಿಟ್ಟುಬಿಟ್ಟಿದ್ದಳು. 

     ಆದರೂ ಸಹ ಅವಳು ಸಹಜ ಸುಂದರಿಯಾಗಿದ್ದರಿಂದ, ಅವಳು ಎಷ್ಟೇ ಸರಳವಾಗಿದ್ದರೂ ಸಹ ಅವಳ ಸೌಂದರ್ಯ ಅವಳನ್ನು ಇನ್ನಷ್ಟು ಸುಂದರಳನ್ನಾಗಿ ಮಾಡಿತ್ತು. ದೇವಾಲಯಕ್ಕೆ ಕಳಶವಿದ್ದಂತೆ ಅವಳ ಗಂಭೀರತೆ ಅವಳನ್ನು ಇನ್ನಷ್ಟು ಸುಂದರಿಯನ್ನಾಗಿ ಮಾಡಿತ್ತು. ಎಷ್ಟೋ ಗಂಡು ಹುಡುಗರು ಅವಳ ಮೇಲೆ ಪ್ರೇಮ ಕಾವ್ಯವನ್ನು ಬರೆಯುತ್ತಿದ್ದರು. ಆದರೆ ಯಾರೂ ಅವಳಿಗೆ ಕೊಡುವ ಧೈರ್ಯ ಮಾಡಿರಲಿಲ್ಲ. ಅವಳ ಗಾಂಭೀರ್ಯ ಅವಳ ಹತ್ತಿರ ಗಂಡಸರು ಸುಳಿಯದಂತೆ ಮಾಡಿತ್ತು. 

     ದಿನ ಬೆಳಿಗ್ಗೆ ಇದ್ದು ತನ್ನ ಮನೆಯ ಕೆಲಸವನ್ನು ಮುಗಿಸಿ, ಕಾಲೇಜಿಗೆ ಹೋಗುತ್ತಿದ್ದಳು. ಅಲ್ಲಿ ಬೆಳಿಗ್ಗೆ ೯ ಘಂಟೆಯಿಂದ ಮಧ್ಯಾನ್ಹ ೩ ಘಂಟೆಯವರೆಗೆ ಡ್ಯೂಟಿ ಮಾಡಿ ೪ ಘಂಟೆಗೆಲ್ಲ ಮನೆಗೆ ಬಂದು ಊಟ ಮಾಡಿ ೫ ಘಂಟೆಗೆ ಮನೆ ಸ್ವಚ್ಛ ಮಾಡಿ ೬ ಘಂಟೆಗೆ ದೇವರ ಪೂಜೆಯನ್ನು ಮಾಡಿ, ನಂತರ ಅಡುಗೆ ಮಾಡಿ ೭ ಘಂಟೆಯಿಂದ ೯ ಘಂಟೆಯವರೆಗೆ ಟಿ ವಿ ನೋಡುತ್ತಿದ್ದಳು. ಟಿ ವಿ ಯಲ್ಲಿ ಪ್ರಣಯದ ಸನ್ನಿವೇಶಗಳು ಬಂದಾಗ ಅವಳಿಗೆ ತನ್ನ ಗಂಡ ನೆನಪಾಗುತ್ತಿದ್ದ. ಮನೆಯಲ್ಲಿದ್ದಾಗ ಸದಾ ಅವಳನ್ನು ಹಿಡಿದಿಟ್ಟುಕೊಂಡಿರುತ್ತಿದ್ದ. ಅವನು ಮಹಾ ರಸಿಕ. ರಸಿಕತೆ ಎನ್ನುವದು ಅವನ ತುಂಟಾಟದಲ್ಲಿ ಕಂಡು ಬರುತ್ತಿತ್ತು. ಅಂತಹ ಗಂಡ. ಅದಕ್ಕೆ ಅವಳು ಅಂತಹ ಸನ್ನಿವೇಶ ಬಂದರೆ ಸಡನ್ ಆಗಿ ಚಾನೆಲ್ ಬದಲಾಯಿಸಿ ಬಿಡುತ್ತಿದ್ದಳು. 

     ಸರಿಯಾಗಿ ೯ ಘಂಟೆಗೆ ಊಟ ಮಾಡಿ, ೯.೩೦ ಕ್ಕೆಲ್ಲ ಹಾಸಿಗೆ ಮೇಲೆ ಉರುಳಿಕೊಂಡು ತನ್ನ ಮೊಬೈಲ್ ದಲ್ಲಿ ಫೇಸ್ ಬುಕ್ ಓಪನ್ ಮಾಡಿ ಅದರಲ್ಲಿಯ ಫೋಟೋಸ್, ವೀಡಿಯೋಸ್ ನೋಡುತ್ತಿದ್ದಳು. ಯಾರಾದರೂ ಜೋಡಿಯಾಗಿ ತಮ್ಮ ಫೋಟೋಗಳನ್ನು ಹಾಕಿದ್ದಾರೆ ಅವರ ಚಿತ್ರದ ಬದಲಾಗಿ ತನ್ನ ಮತ್ತು ಮನು ಚಿತ್ರವನ್ನು ಅಲ್ಲಿ ಕಲ್ಪಿಸಿಕೊಂಡು ಆನಂದ ಪಡುತ್ತಿದ್ದಳು. ಸಾಕಷ್ಟು ಬಾರಿ ಅವನ ನೆನಪಿನಲ್ಲಿಯೇ ರಾತ್ರಿ ಮಲಗಿದಾಗ ಅವನ ಹೆಸರನ್ನು ಕನವರಿಸುತ್ತಿದ್ದಳು.ಈ ರೀತಿಯಾಗಿ ಅವಳು ತನ್ನ ಜೀವನ ಸಾಗಿಸುತ್ತಿದ್ದಳು.


2

      ಎಂದಿನಂತೆ ಕಾಲೇಜಿಗೆ ಹೋದಾಗ ಅಲ್ಲಿ ಪ್ರಿನ್ಸಿಪಾಲರು ಮೀಟಿಂಗ್ ತೆಗೆದುಕೊಳ್ಳುವವರಿದ್ದು, ಎಲ್ಲ ಪ್ರಾಧ್ಯಾಪಕರಿಗೆ ತಮ್ಮ ಚೇಂಬರ್ ಗೆ ಬರುವಂತೆ ಸೂಚಿಸಿದ್ದರು. ಸುಮಾ ಚೇಂಬರ್ ಗೆ ಹೋದಾಗ ಅಲ್ಲಿ ಕಾಲೇಜು ದಲ್ಲಿಯ ಎಲ್ಲ ಪ್ರಾಧ್ಯಾಪಕರು ಕುಳಿತಿದ್ದರು. ಎಲ್ಲರೂ ಬಂದ ನಂತರ ಪಿನ್ಸಿಪಾಲರು ಮಾತನಾಡಲು ಪ್ರಾರಂಭಿಸಿದರು.

*"ನೋಡಿ, ಈಗ ಪ್ರಿಪರೇಟರಿ ಎಕ್ಸಾಮ್ ಶುರುವಾಗುವದರಲ್ಲಿದೆ. ಯೂನಿವರ್ಸಿಟಿಯವರು ನಮಗೆ ಈ ಪ್ರಿಪರೇಟರಿ ಎಕ್ಷಮ ತುಂಬಾ ಸ್ಟ್ರಿಕ್ಟ್ ಆಗಿರಬೇಕು ಅಂತ ಹೇಳಿದ್ದಾರೆ. ಅಲ್ಲದೆ, ತುಂಬಾ ಟಫ್ ಆದ ಪ್ರಶ್ನೆ ಪತ್ರಿಕೆ ತಯಾರು ಮಾಡಬೇಕು ಅಂತ ಸಹ ಹೇಳಿದ್ದಾರೆ. ಯಾಕೆಂದರೆ, ಇನ್ನು ಮುಂದೆ ಸ್ಟಡಿ ಇನ್ನೂ ಸ್ಟ್ರಿಕ್ಟ್ ಆಗುವದಿದ್ದು, ವಿದ್ಯಾರ್ಥಿಗಳಿಗೆಲ್ಲ ಅದನ್ನು ಎದುರಿಸುವ ಧೈರ್ಯ ಬರಲಿ ಅಂತ ಈ ವಿಚಾರವಿದೆ. ಅದಕ್ಕೆ ನೀವೆಲ್ಲ ತಯಾರಿಸುವ ಪ್ರಶ್ನೆ ಪತ್ರಿಕೆಗಳಲ್ಲಿ ಅರ್ಧದಷ್ಟು ತುಂಬಾ ಟಫ್ ಪ್ರಶ್ನೆಗಳನ್ನು ಹಾಕಬೇಕು. ಜಾಣರಾದವರು ಪಾಸ್ ಆಗುವಂತಿರಬೇಕು. ನಿಮ್ಮ ನಿಮ್ಮ ವಿಷಯಗಳ ಮೇಲೆ ಹೇಗೆ ಪ್ರಶ್ನೆಗಳನ್ನು ತಯಾರು ಮಾಡುತ್ತೀರಿ ಅಂತ ನಿಮಗೆ ಬಿಟ್ಟಿದ್ದು. ಆದರೆ ಒಂದು ಮಾತು, ನೀವು ತಯಾರಿಸುವ ಪ್ರಶ್ನೆ ಪತ್ರಿಕೆ ಮೊದ್ಲು ಯೂನಿವೆರ್ಸಿಟಿಯವರು ಪರಿಶೀಲಿಸುತ್ತಾರಂತೆ ಅದಕ್ಕೆ ನೀವು ಎರಡು ದಿನದಲ್ಲಿ ನಿಮ್ಮ ನಿಮ್ಮ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ರೆಡಿ ಮಾಡಿ ಕೊಟ್ಟಲ್ಲಿ, ಅದನ್ನು ನಾನು ಯೂನಿವೆರ್ಸಿಟಿಗೆ ಕಳುಹಿಸುವೆ. ಇದನ್ನೇ ಹೇಳಲಿಕ್ಕೆ ನಿಮ್ಮನ್ನು ಕರೆದಿದ್ದು."*

ಎಂದು ಹೇಳಿದಾಗ, ಸುಮಾಳಿಗೆ ಬರಬರುತ್ತ ಯೂನಿವೆರ್ಸಿಟಿಯವರು ತಮ್ಮ ಮೇಲೆ ಬಂಧನ ಹಾಕುತ್ತಿದ್ದಾರೆ ಅಂತ ಅನ್ನಿಸತೊಡಗಿತು. ಆದರೂ ಅವರ ಮಾತನ್ನು ಮೀರುವಂತೆ ಇರಲಿಲ್ಲವಾದ್ದರಿಂದ ಪ್ರಿನ್ಸಿಪಾಲ್ರ ಮಾತಿಗೆ ಒಪ್ಪಿಗೆ ಸೂಚಿಸಿದರು. ನಂತರ ಎಲ್ಲರೂ ಹೊರಗೆ ಬಂದು ಸ್ಟಾಫ್ ರೂಮ್ ಕಡೆಗೆ ಹೊರಟಾಗ, ಮುತ್ತಯ್ಯನವರು

*"ಅಲ್ರಿ ಮೇಡಂ, ಈ ಮುಂಡೆವಕ್ಕೆ ಸರಳ ಇದ್ದ ಪ್ರಶ್ನೆ ತಿಳ್ಯಂಗಿಲ್ಲ. ಇನ್ನ ಟಫ್ ಪ್ರಶ್ನೆ ತಗದ್ರ ಮುಂಡೇವು ಒಂದೂ ಪಾಸಾಗುದಿಲ್ಲ. ಸಾಯುತನಕ ಡಿಗ್ರಿ ಕಾಲೇಜು ದಾಗ ಇರ್ತಾವ"*

ಎಂದಾಗ ಅವರ ಮಾತನ್ನು ಕೇಳಿದ ಸುಮಾ ನಗುತ್ತ

*"ಹಾಗಲ್ಲ ಮುತ್ತಯ್ಯನವರೇ, ನಾವು ತಯಾರಿಸುವ ಪ್ರಶ್ನೆ ಪತ್ರಿಕೆ ಸರಳವಾಗಿದ್ದರೂ ಟಫ್ ಆಗಿರಬೇಕು. ನಾನು ಹೇಳಬಯಸುವದೇನೆದರೆ, ಸರಳವಾದ ಪ್ರಶ್ನೆಯನ್ನೇ ಸ್ವಲ್ಪ ಬೇರೆ ರೀತಿಯಲ್ಲಿ ಕನ್ಫ್ಯೂಸ್ ಆಗುವ ಹಾಗೆ ತೆಗೆದರೆ ಸರಳ ಪ್ರಶ್ನೆಗಳೇ ಟಫ್ ಪ್ರಶ್ನೆಗಳಾಗುತ್ತವೆ."*

*"ಹೌದೇನ್ರೀ ಬಾಯಾರ, ನಿಮ್ಮ್ದೇನ್ರಿ ಇಂಗ್ಲಿಷ್ದಾಗ ಒಂದ್ಯಾಡ ಶಬ್ದಆಕಡೆ ಈಕಡೆ ಮಾಡಿದ್ರ ಆತು. ಇಂಗ್ಲೀಷದಾಗ ಇರೋದ 26 ಅಕ್ಷರ. ಅದರಾಗ ಹೇರಾ ಪೆರಿ ಮಾಡಿದರಾಗ್ತದ. ತಾನ ಟಫ್ ಅನಸತೈತ್ರಿ. ನಮ ಗತಿ ಹೇಳ್ರಿ. ಹಿಂದಿನ ಸಲ ನಾನು ಹುಡುಗುರ್ ಕಲಿಲಿ ಅಂತ ಒಂದೆರಡು ಟಫ್ ಪ್ರಶ್ನೆ ತೆಗೆದ್ರ, ಆ ಮುಂಡೇವು ಆನ್ಸರ್ ಪೇಪರ್ ದಾಗ ನೀವು ಲ ಸಾ ಅ ಮತ ಮ ಸಾ ಅ ಕಲಿಸಿಲ್ಲರಿ ಅದಕ್ಕ ನಾವು ಉತ್ರ ಬರಿಯುದಿಲ್ಲಾರೀ, ಅಂತ ಬರೀಬೇಕಾ ಮುಂಡೇವು"*

ಎಂದು ಹೇಳುತ್ತಾ ತಮ್ಮ ಗೋಳು ಹೊಯ್ದುಕೊಂಡರು. 

ಅವರ ಭಾಷೆ ಮತ್ತು ಅವರ ಅನುಭವ ಕೇಳಿದ ಸುಮಾ ಮನಸಾರೆ ನಕ್ಕಳು. ಅಷ್ಟರಲ್ಲಿ ಹಿಂದಿನಿಂದ 

*"ಏಯ್, ನೋಡೋ ಮುತ್ತು ಉದುರುತ್ತಿವೆ. ಡ್ರೀಮ್ ಗರ್ಲ್ ನಗ್ತಿದ್ದಾಳೆ"*

ಎಂದು ಪಿಸು ಧ್ವನಿಯಲ್ಲಿ ಯಾರೋ ಅಂದಿದ್ದು ಕೇಳಿಸಿತು. ಸುಮಾ ಥಟ್ಟನೆ ನಗು ನಿಲ್ಲಿಸಿ ಹಿಂತಿರುಗಿ ನೋಡಿದಾಗ ಯಾರೂ ಇರಲಿಲ್ಲ. ಅವಳಿಗೆ ಗೊತ್ತು ತನ್ನ ಸ್ಟೂಡೆಂಟ್ಸ್ ತನಗೆ ಅಂದಿದ್ದು. ಆದರೆ ಅವಳು ಅದನ್ನೇ ಕೇರ್ ಮಾಡದೆ ಮನದಲ್ಲಿ ಸುಮ್ಮನೆ ನಕ್ಕು ತನ್ನ ಪಾಡಿಗೆ ತಾನು ಹೋದಳು. 

     ಕಾಲೇಜು ಮುಗಿಸಿ ತನ್ನ ಪಾಡಿಗೆ ತನ್ನ ಕಾರಿನಲ್ಲಿ ಮನೆಗೆ ಹೋದಳು. ಕಾರ್ ಪಾರ್ಕ್ ಮಾಡಿ ಒಳಗೆ ಹೋಗಿ ಎಂದಿನಂತೆ ತನ್ನ ಕೆಲಸವನ್ನು ಮುಗಿಸಿ, ಕಾಫಿ ಕುಡಿಯುತ್ತ ಯಾವ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ತೆಗೆಯಬೇಕು ಎಂದು ಯೋಚನೆ ಮಾಡತೊಡಗಿದಳು. ಒಂದು ಘಂಟೆಯವರೆಗೆ ಯೋಚನೆ ಮಾಡಿ, ಕೊನೆಗೆ ತನ್ನ ಪ್ರಕಾರ ಸ್ಟೂಡೆಂಟ್ಸ್ ಗಳಿಗೆ ಟಫ್ ಅನ್ನಿಸುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿದಳು. ಅವಳು ತನ್ನ ಕೆಲಸ ಮುಗಿಸಿ ಗಡಿಯಾರ ನೋಡಿದಾಗ ಸಮಯ ರಾತ್ರಿ ೯ ಘಂಟೆ ಆಗಿತ್ತು. ಊಟ ಮಾಡುತ್ತಾ ಟಿ ವಿ ನೋಡತೊಡಗಿದಳು. ಅದರಲ್ಲಿ ಕವಿರತ್ನ ಕಾಳಿದಾಸ ಮೂವಿ ಪ್ರಸಾರವಾಗುತ್ತಿತ್ತು. ಕಾಳಿದಾಸ ರತ್ನಕಲೆಯ ಮನೆಯಲ್ಲಿ ಪ್ರಣಯದ ಮಾತುಗಳು ನಡೆದಿತ್ತು. ಯಾಕೋ ಏನೋ ಸುಮಾಳಿಗೆ ಅವರಾಡುತ್ತಿದ್ದ ಮಾತುಗಳನ್ನು ಕೇಳಿದಾಗ ಮನದಲ್ಲಿ ತನ್ನ ಮತ್ತು ತನ್ನ ಗಂಡನ ನಡುವೆ ಇದೆ ರೀತಿ ಅವರಾಡುತ್ತಿದ್ದ ಪ್ರಣಯದ ಮಾತುಗಳು ನೆನಪಾದವು. ಹಾಗೆ ಅವುಗಳನ್ನು ಮೆಲಕು ಹಾಕುತ್ತ, ಊಟ ಮುಗಿಸಿದಳು. ನಂತರ ಟಿ ವಿ ಆಫ್ ಮಾಡಿ, ಎಂದಿನಂತೆ ಬೆಡ್ ರೂಮಿಗೆ ಹೋಗಿ, ಬಾತ್ ರೂಮಿಗೆ ಹೋಗಿ ಮುಖ ತೊಳೆದುಕೊಂಡು ಬಂದಳು. ಮುಖ ಒರೆಸಿಕೊಳ್ಳುತ್ತ ಹಾಗೆ ಬೆಡ್ರೂಮಿನಲ್ಲಿರುವ ಕನ್ನಡಿಯ ಮುಂದೆ ನಿಂತಾಗ ತನ್ನ ಪ್ರತಿಬಿಂಬ ಅವಳಿಗೆ ಕಾಣತೊಡಗಿತು. 

    ಇಷ್ಟು ಸುಂದರವಾಗಿರುವ ತಾನು, ಏಕಾಂಗಿ ಬದುಕು ನಡೆಸುತ್ತಿರುವ ಬಗ್ಗೆ ಯೋಚನೆ ಮಾಡಿದಾಗ, ಎಲ್ಲ ನಾವು ಪಡೆದುಕೊಂಡು ಬಂದಿದ್ದು ಎಂದು ಒಂದು ಸಲ ಅನ್ನಿಸಿದರೂ ಸಹ, ಮತ್ತೊಂದು ಸಲ, ನನ್ನ ಮನಸ್ಸನ್ನು,ಪ್ರೀತಿಯನ್ನು ಆರಾಧಿಸುವವರಿಲ್ಲದೆ ತನ್ನ ಹೃದಯದ ಬಡಿತ ಕೇಳುವವರಿಲ್ಲದೆ ಮಿಡಿವ ಹೃದಯ ಕೇವಲ ಜೀವಂತ ಇರುವದಕ್ಕೆ ಮಿಡಿಯುತ್ತಿದೆಯಾ ಎಂದು ಅಂದುಕೊಂಡಳು. ತನ್ನ ಕೈಯಿಂದ ತನ್ನ ಮುಖವನ್ನು ಸವರಿಕೊಳ್ಳುತ್ತಾ, ತನ್ನ ಗಂಡನ ನೆನಪು ಮಾಡಿಕೊಳ್ಳುತ್ತ. ಅವರೇ ತನ್ನ ಕೆನ್ನೆಯನ್ನು ಸವರುತ್ತಿದ್ದಾರೆ ಅಂತ ಭಾವಿಸಿಕೊಂಡಳು. 

    ಊಟ ಮಾಡುವಾಗ ನೋಡಿದ ದೃಶ್ಯಗಳನ್ನು ನೆನಪಿಸಿಕೊಂಡು ಹಾಗಿದ್ದರೆ ಎಷ್ಟು ಚನ್ನ ಅಂತ ಅನ್ನಿಸತೊಡಗಿತು. ಆದರೆ ತಾನು ಮಾತ್ರ ಪಡೆದುಕೊಂಡು ಬಂದಿದ್ದೆ ಇಷ್ಟು ಅಂತ ಅಂದುಕೊಂಡು ನಿರಾಶಳಾದಳು. 

    ವಯಸ್ಸಿನ ಪ್ರಕಾರ ಮನಸ್ಸು ಏನೇನೋ ಬಯಸುತ್ತದೆ. ಆದರೆ ಜೀವನ ಮಾತ್ರ ಮನಸ್ಸು ಮತ್ತು ವಯಸ್ಸಿನ ಪ್ರಕಾರ ನಡೆದುಕೊಳ್ಳುವದಿಲ್ಲ. ಅದು ಮನಸ್ಸು ಮತ್ತು ವಯಸ್ಸನ್ನು ತನ್ನ ಪ್ರಕಾರವಾಗಿ ನಡೆಸಿಕೊಳ್ಳುತ್ತದೆ. ಜೀವನದಲ್ಲಿ ಅಂದುಕೊಂಡಿದ್ದು ವಯಸ್ಸು ಮಾತು ಮನಸ್ಸು ಪಡೆದುಕೊಂಡರೆ ತಮ್ಮ ಜೀವನ ತುಂಬಾ ಸುಂದರ. ಆದರೆ ಅಂದುಕೊಂಡಿದ್ದು ವಯಸ್ಸಿನ ಪ್ರಕಾರ ಮನಸು ನಡೆಸಿಕೊಡದೆ ಹೋದರೆ ಮಾತ್ರ ಅದೇ ಜೀವನ ತುಂಬಾ ಕಹಿ. ತನ್ನ ಜೀವನ ಸಿಹಿಯೋ ಕಹಿಯೋ ಎಂದು ಒಂದು ಕ್ಷಣ ನಿರ್ದರಿಸಲಾಗದೆ ಗೊಂದಲಕ್ಕೆ ಬಿದ್ದಳು ಸುಮಾ. 

ನಂತರ ತಲೆ ಕೊಡವಿಕೊಂಡು ಇರುವಷ್ಟು ದಿನ ಚನ್ನಾಗಿದ್ದರಾಯಿತು ಎಂದುಕೊಂಡು ಹಾಸಿಗೆ ಮೇಲೆ ಉರುಳಿದಳು. 

ಎಂದಿನಂತೆ ತನ್ನ ಮೊಬೈಲಿನಲ್ಲಿ ಫೇಸ್ ಬುಕ್ ತೆಗೆದು ಮತ್ತೆ ನೋಡತೊಡಗಿದಳು. ಅಲ್ಲಿ ಹಲವಾರು ಪೋಸ್ಟ್ಗಳು ಬಂದಿದ್ದವು. ಎಲ್ಲವನ್ನು ನೋಡಿದ ಅವಳಿಗೆ ಹಿಂದಿನ ದಿನ ತನಗೆ ಫ್ರೆಂಡ್ ಆದ ಅಭಿ ಟೈಮ್ ಲೈನ್ ತೆಗೆದು ನೋಡತೊಡಗಿದಳು. ಅದರಲ್ಲಿ ಒಂದು ಕೋಟ್ ಹೀಗಿತ್ತು. 

*"ಮನ ಬಿಚ್ಚಿ ಹೇಳ್ತಿನಿ 

ಮನ ಕೊಟ್ಟು ಕೇಳ್ತಿರಾ

ಕಣ್ತುಂಬಾ ನೋಡ್ತೀನಿ 

ಕನಸಲ್ಲಿ ಬರ್ತೀರಾ

ಸಮುದ್ರದಲ್ಲಿ ನೋಡ್ತೀನಿ 

ಮುತ್ತಾಗಿ ಸಿಗ್ತೀರಾ

ಮಧುರವಾಗಿ ಕೇಳ್ತೀನಿ 

ಮಾತೊಂದು ಆಡ್ತೀರಾ

ನಿಮಗಾಗಿ ಕಾಯ್ತಿನಿ 

ಮುಂದಿನ ಜನುಮದಲ್ಲಾದರೂ

ನನ್ನ ಪ್ರೇಯಸಿಯಾಗ್ತಿಯ?"*

ಆ ಸಾಲುಗಳನ್ನು ನೋಡುತ್ತಿದ್ದರೆ ಸುಮಾಳಿಗೆ ಅವುಗಳನ್ನು ತನ್ನನ್ನೇ ಉದ್ದೇಶಿಸಿ ಬರೆದಂತಿದೆ ಅಂತ ಅನ್ನಿಸತೊಡಗಿತು. ಆದರೂ ಆ ಪೋಸ್ಟ್ ಯಾರಿಗೆ ಟ್ಯಾಗ್ ಮಾಡಲಾಗಿದೆ ಎಂದು ನೋಡಿದಾಗ ಅದು ಯಾರಿಗೂ ಟ್ಯಾಗ್ ಮಾಡಿರಲಿಲ್ಲ. ಅದನ್ನು ಕಂಡು ಸಮಾಧಾನಗೊಂಡಳು. ಆದರೂ ಅಂತಹ ಸುಂದರವಾದ ಸಾಲುಗಳನ್ನು ನೋಡುತ್ತಲೇ ಮನಸ್ಸು ಯಾಕೋ ಮಧುರಗಾನವನ್ನು ಹೌದೋ ಅಲ್ಲವೋ ಎನ್ನುವಂತೆ ಹಾಡತೊಡಗಿತು. 

     ಒಬ್ಬ ಪ್ರೇಯಸಿಯನ್ನು ಎಷ್ಟು ಅಂತ ಪ್ರೀತಿಸುವದಕ್ಕೆ ಈ ಹುಡುಗರು ತುದಿಗಾಲಲ್ಲಿ ನಿಂತಿರ್ತಾರೆ. ಈ ಜನುಮವಷ್ಟೇ ಅಲ್ಲ ಮುಂದಿನ ಜನುಮನಿಂದ ತನಕ ಸಹ ಕಾಯಲು ಸಿದ್ಧರಾಗಿರುತ್ತಾರೆ. ತಾಳ್ಮೆ ಬಹಳ ಇದ್ದಂತಿದೆ ಈ ಮನುಷ್ಯನಿಗೆ, ಅಂತ ತಾನೇ ಅಂದುಕೊಂಡಳು. ಅವನು ಬರೆದ ಸಾಲುಗಳನ್ನು ಮತ್ತೆ ಮತ್ತೆ ಓಡತೊಡಗಿದಾಗ, ಅವಳಿಗೆ ಆ ವ್ಯಕ್ತಿ ಯಾರನ್ನೋ ಪ್ರೀತಿಸಿರಬೇಕು ಅವನು ಅವಳನ್ನು ಓಲೈಸುವದಕ್ಕೆ ಹೀಗೆಲ್ಲ ಬರೆದು ಹಾಕುತ್ತಿರಬೇಕು ಎಂದುಕೊಂಡಳು. ಹೃದಯದ ಬಡಿತಗಳು ತನ್ನ ಭಾವನೆಯನ್ನು ಹೇಳಿದಾಗ ಅವು ಅಕ್ಷರ ರೂಪ ತಾಳಿ ಹೀಗೆ ಬಂದಿರಬಹುದು ಎಂದುಕೊಂಡಳು. 

ಮತ್ತೆ ಅವಳು ತನ್ನ ಟೈಮ್ ಲೈನ್ ಗೆ ಬಂದು ತನಗೆ ಬಂದ ಪೋಸ್ಟ್ಗಳನ್ನು ನೋಡತೊಡಗಿದಳು. ಆದರೂ ಅವಳಿಗೆ ಅಭಿ ಹಾಕಿದ್ದ ಸಾಲುಗಳು ಮತ್ತೆ ಮತ್ತೆ ನೆನಪಾಗತೊಡಗಿದವು. ಅವಳಿಗೆ ತನ್ನ ಟೈಮ್ ಲೈನ್ ದಲ್ಲಿ ಪೋಸ್ಟ್ ಆದ ಪೋಸ್ಟುಗಳ ಮೇಲೆ ಗಮನ ಸರಿಯಾಗಿ ಹರಿಸುವದಕ್ಕೆ ಆಗಲಿಲ್ಲ. 

    ಮತ್ತೆ ಅಭಿಯ ಟೈಮ್ ಲೈನ್ ಗೆ ಹೋಗಿ ಅಲ್ಲಿ ತಾನು ಹಿಂದಿನ ದಿನ ಅವನ ಒಂದು ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಕ್ಕೆ ಏನಾದರೂ ರಿಪ್ಲೈ ಬಂದಿದೆಯೇ ಎಂಬ ಕುತೂಹಲದಿಂದ ತೆಗೆದು ನೋಡಿದಾಗ, ಅವಳು ಮಾಡಿದ್ದ ಕಾಮೆಂಟಿಗೆ ಅವನು ಲೈಕ್ ಮಾಡಿದ್ದ. ಮತ್ತೆ ಮರು ಕಾಮೆಂಟ್ ಮಾಡಿರಲಿಲ್ಲ. 

ಅದನ್ನು ನೋಡಿ ಸಮಾಧಾನಗೊಂಡ ಸುಮಾ, ಇವತ್ತು ಪೋಸ್ಟ್ ಮಾಡಿದ ಲೈನ್ ಗಳಿಗೆ ಏನಾದರೊಂದು ಉತ್ತರ ಕೊಡಬೇಕು ಅನ್ನಿಸತೊಡಗಿತು. ಹಾಗೆ ಅಂದುಕೊಳ್ಳುತ್ತಿರುವಾಗಲೇ ಮನಸ್ಸು ಎರಡು ಭಾಗವಾಯಿತು. ಒಂದು ಮನಸ್ಸು "ಬೇಡ ಮುಂದುವರಿಯುವದು ಬೇಡ" ಎಂದು ಹೇಳುತ್ತಿದ್ದಾರೆ, ಇನ್ನೊಂದು ಮನಸ್ಸು "ಇದೇನು ಕೇವಲ ಫೇಸ್ ಬುಕ್ ಎದಿರು ಬದಿರು ಅಲ್ಲವಲ್ಲ ಕಾಮೆಂಟ್ ಮಾಡಿದರೆ ಏನು ತಪ್ಪು" ಎಂದು ಹೇಳುತ್ತಿತ್ತು. ಕೊನೆಗೆ ಎರಡನೆಯ ಮನಸ್ಸು ಮೊದಲನೆಯ ಮನಸ್ಸಿನ ಮಾತಿನ ಮೇಲೆ ತನ್ನ ಪ್ರಭುತ್ವ ಸಾಧಿಸಿತು. ಕೊನೆಗೆ ಸುಮಾ ಮತ್ತೊಮ್ಮೆ ವಿಚಾರ ಮಾಡಿ ಮತ್ತೆ ಕಾಮೆಂಟ್ ಬಾಕ್ಸ್ ದಲ್ಲಿ ಹೀಗೆ ಕಾಮೆಂಟ್ ಮಾಡಿದಳು. 

*"ಮನದಲ್ಲಿ ಸಾವಿರ ಮಾತಿದೆ

ಹೇಳೋಕಾಗೋಲ್ಲ

ಕಣ್ಣ ತುಂಬಾ ನೀರಿದೆ 

ಅಳೋಕಾಗೋಲ್ಲ

ಹೃದಯಕ್ಕೆ ಭಾರವಾದ ನೋವಿದೆ

ತೋರಿಸೊಕ್ಕಾಗೋಲ್ಲ

ಯಾಕೆಂದ್ರೆ ನಾವು ಅಂದುಕೊಂಡ ಹಾಗೆ 

ಯಾವುದು ನಡೆಯೋಲ್ಲ"*

ಎಂದು ಬರೆದು ಪೋಸ್ಟ್ ಮಾಡಿದಳು. ನಂತರ ಅವಳು ನೆಮ್ಮದಿಯಾಗಿ ನಿದ್ದೆ ಹೋದಳು. ಅವಳಿಗೆ ತನ್ನನ್ನು ಉದ್ದೇಶಿಸಿ ಯಾರೋ ಏನೋ ಹೇಳಿದ್ದಾರೆ ಎಂದು ಅದಕ್ಕೆ ತಾನು ಸಮರ್ಪಕವಾಗಿ ಉತ್ತರ ನೀಡಿದ್ದೇನೆ ಅಂತ ತಿಳಿದುಕೊಂಡು ನೆಮ್ಮದಿಯ ನಿದ್ರೆ ಮಾಡಿದಳು. 

    ಮರುದಿನ ಮತ್ತೆ ಕಾಲೇಜಿಗೆ ಹೋಗಿ ಹಿಂದಿನ ದಿನ ತಾನು ತಯಾರಿಸಿದ ಪ್ರಶ್ನೆ ಪತ್ರಿಕೆಯನ್ನು ಪ್ರಿಂಟ್ ಹಾಕಿಸಿ ಅದರ ಪ್ರತಿಯನ್ನು ಪ್ರಿನ್ಸಿಪಾಲರಿಗೆ ಕೊಟ್ಟಳು. ಅವಳ ನೀಟಾದ ಕೆಲಸ ಕಂಡ ಪಿನ್ಸಿಪಾಲರು, ಅವಳ ಕೆಲಸವನ್ನ ಮೆಚ್ಚಿಕೊಂಡು ಶ್ಲಾಘಿಸಿದರು. ಅವರಿಗೆ ವಂದನೆ ತಿಳಿಸಿ ಮತ್ತೆ ತನ್ನ ಕಾರ್ಯದಲ್ಲಿ ತೊಡಗಿದಳು. 

    ಅಂದು ಡಿಗ್ರಿಯ 2 ನೇ ವರ್ಷದ ತರಗತಿಯಲ್ಲಿ ಅವಳು ತನ್ನ ಕ್ಲಾಸ್ ತೆಗೆದುಕೊಳ್ಳಬೇಕಾಗಿತ್ತು. ಸಮಯದ ಪ್ರಕಾರ ಬೆಲ್ಲ ಆಗುತ್ತಿರುವಂತೆ ಕ್ಲಾಸಿಗೆ ಹೋದಳು. ಕ್ಲಾಸ್ ರೂಮಿನಲ್ಲಿ ಎಂಟ್ರಿ ಆದಾಗ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಗೌರವ ಸೂಚಿಸಿದರು. ಅದನ್ನು ಕಂಡೂ ಕಾಣದಂತೆ, ತನ್ನದೇ ಶೈಲಿಯಲ್ಲಿ ಅವರಿಗೆ ಕುಳಿತುಕೊಳ್ಳಲು ತಿಳಿಸಿ, ತಾನೂ ಸಹ ತನ್ನ ಸೀಟಿನಲ್ಲಿ ಕುಳಿತು ಪುಸ್ತಕ ತೆಗೆದು ಪಾಠ ಹೇಳಲು ಆರಂಭಿಸಿದಳು. ಹಿಂದಿನ ದಿನದಿಂದ ಶೇಕ್ಷಪೀಯರನ ರೋಮಿಯೋ ಜೂಲಿಯಟ್ ಪಾಠವನ್ನು ಒಂದು ಹಂತದವರೆಗೆ, ಹೇಳಿದ್ದ ಸುಮಾ ಅದೇ ಪಾಠವನ್ನು ಈಗ ಮುಂದುವರೆಸುತ್ತಿದ್ದಳು. 

*"ರೋಮಿಯೋ ಪ್ರಪಂಚವೇ ಮೆಚ್ಚಿದ ದೊಡ್ಡ ಪ್ರೇಮಿ. ಜೂಲಿಯಟ್ ಕಡೆಗ್ಗೆ ಅವನ ಪ್ರೇಮ ತುಂಬಾ ಅಗಾಧವಾದದ್ದು. ಪ್ರೇಮಕ್ಕೆ ಒಂದು ಅರ್ಥ ಕಲ್ಪಿಸಿದ್ದೆ ಶೇಕ್ಷಪೀಯರ. ಈ ನಾಟಕದ ಮೂಲಕ ರೋಮಿಯೋ ಮುಖಾಂತರ ಶೇಕ್ಷಪೀಯರ ತನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡಿದ್ದಾನೆ. ರೋಮಿಯೋ, ತನ್ನ ಪ್ರೇಮ ನಿವೇದನನ್ನು ಮಾಡುವಾಗ ಹೇಳುತ್ತಾನೆ, "ಪ್ರಿಯೆ, ನಿನ್ನನ್ನು ನಾನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ನನ್ನ ಹೃದಯದ ಬಡಿತ ಸಹ ನಿನ್ನ ಹೆಸರಿನಲ್ಲಿ ಬಡಿದುಕೊಳ್ಳುತ್ತದೆ. ನಿನ್ನ ಪ್ರೇಮಕ್ಕಾಗಿ ನಾನು ಕಾಯುತ್ತೇನೆ. ಅದೆಷ್ಟೇ ದಿನಗಳಾಗಲಿ, ತಿಂಗಳುಗಳಾಗಲಿ, ವರ್ಷಗಳಾಗಲಿ, ಜನ್ಮಗಳಾಗಲಿ ಕಾಯುತ್ತೇನೆ. ನೀನು ನನ್ನನ್ನು ಈ ಜನ್ಮದಲ್ಲಿ ಪ್ರೇಮಿಸಲಿಕ್ಕೆ ಆಗದಿದ್ದರೂ ಪರವಾಯಿಲ್ಲ. ಕನಿಷ್ಠ ಮುಂದಿನ ಜನ್ಮದಲ್ಲಾದರೂ ನನ್ನನ್ನು ಪ್ರೇಮಿಸು. ಮುಂದಿನ ಜನ್ಮ ಸಹ ನಿನ್ನ ಪ್ರೇಮಕ್ಕಾಗಿ ಜಾತಕ ಪಕ್ಷಿಯಂತೆ ನಿನಗಾಗಿ ನಿನ್ನನ ಪ್ರೇಮಕ್ಕಾಗಿ ಕಾಯುತ್ತಿರುತ್ತೇನೆ"*

ಎಂದು ಹೇಳುತ್ತಿರುವಾಗ, ಅವಳಿಗೆ ಹಿಂದಿನ ದಿನ ರಾತ್ರಿ ತಾನು ಫೇಸ್ ಬುಕ್ ನಲ್ಲಿ ಓದಿದ ಸಾಲುಗಳು ನೆನಪಾಯಿತು. ಆ ಸಾಲುಗಳಲ್ಲಿ ಸಹ ಪ್ರೇಮ ನಿವೇದನೆ ಮಾಡಿ, ಮುಂದಿನ ಜನ್ಮದವರೆಗೂ ಕಾಯುತ್ತೇನೆ ಅಂತ ಹೇಳಿದ ಸಾಲುಗಳು ನೆನಪಾಗಿ ಅವಳ ಮನ ಆ ಸಾಲುಗಳನ್ನು ಮೆಲಕು ಹಾಕತೊಡಗಿತು. ಇದರಿಂದ ಅವಳು ತಾನು ಮಾಡುತ್ತಿದ್ದ ಪಾಠದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗಲಿಲ್ಲ. 

ವಿದ್ಯಾರ್ಥಿಗಳು, ಮಾತ್ರ ಪಾಠವನ್ನವು ತದೇಕಚಿತ್ತರಾಗಿ ಆಸಕ್ತಿಯಿಂದ ಕೇಳುತ್ತಿದ್ದರು. ಅವರ ವಯಸ್ಸೇ ಹಾಗೆ. ಪ್ರೀತಿ ಪ್ರೇಮದಲ್ಲಿ ಬೀಳುವ ವಯಸ್ಸು. ವಿವೇಕವಿಲ್ಲದ ವಯಸ್ಸಿನಲ್ಲಿ ಅವರಿಗೆ ಆಗುವದು ಮೋಹ. ಅದಕ್ಕೆ ಪ್ರೀತಿ ಎನ್ನುವದಿಲ್ಲ. ಹೃದಯಗಳು ಅರಿತು ಒಂದಾದರೆ, ಅದು ಪ್ರೀತಿ. ಅದು ಶಾಶ್ವತ. ಆದರೆ ಹೃದಯ ಅರಿಯದೆ ಬಾಹ್ಯದಲ್ಲಿ ಆಕರ್ಷಿತರಾಗೋದು ಅದು ಮೋಹ. ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಸಹ ಲವ್ ಆಗೋದು ತುಂಬಾ ಸಾಮಾನ್ಯ. ಆದ್ದರಿಂದಲೇ ಅವರಿಗೆ ರೋಮಿಯೋ ಜೂಲಿಯಟ್ ಪಾಠ ಇಷ್ಟ. ಅವರು ಆ ಪಾಠವನ್ನು ಹೇಳುವಾಗ ತಮ್ಮ ತಾವೇ ರೋಮಿಯೋ, ಜೂಲಿಯಟ್ ಅಂತ ಭಾವಿಸ್ಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದರು. ಅಂತಹ ಪರಿಣಾಮ ಭರಿತ ಶಕ್ತಿ ಶೇಕ್ಷಪೀಯರ ರಚಿಸಿದ ಕೃತಿಗಳಲ್ಲಿದ್ದರೆ, ಆ ಕೃತಿಗಳಿಗೆ ತನ್ನ ಭೋದನೆಯ ಮೂಲಕ ಇನ್ನಷ್ಟು ಮೆರಗು ತುಂಬುತ್ತಿದ್ದವಳು ಸುಮಾ. ಆದರೆಅವಳು ಮೊದಲ ಬಾರಿಗೆ ತನ್ನ ಏಕಾಗ್ರತೆಯನ್ನು ಪಾಠ ಹೇಳುವಾಗ ಕಳೆದುಕೊಂಡಿದ್ದಳು. ಅವಳಿಗೆ ಮುಂದೆ ಪಾಠ ಮಾಡುವಾದವು ಆಗಲಿಲ್ಲ. ಅರ್ಧಕ್ಕೆ ಪಾಠ ನಿಲ್ಲಿಸಿ, ಸ್ಟಾಫ್ ರೂಮಿಗೆ ಹೊರಟಳು. 


3


ಅವಳು ಪಾಠ ಅರ್ಧಕ್ಕೆ ನಿಲ್ಲಿಸಿದ್ದರಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ನಿರಾಶೆಯಾಯಿತು. ಸುಮಾ ನೇರವಾಗಿ ಸ್ಟಾಫ್ ರೂಮಿಗೆ ಬಂದು ಸುಮ್ಮನೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದಳು. ನಿಮಿಷದ ನಂತರ, ಪಿರಿಯಡ್ ಮುಗಿದ ಬೆಲ್ ಆಯಿತು. ಆದರೂ ಸುಮಾ ಹಾಗೆ ಕುಳಿತಿದ್ದಳು. ಕ್ಲಾಸ್ ಮುಗಿಸಿಕೊಂಡು ಬಂದ್ ಕಾವೇರಿ, ಸುಮಾಳನ್ನು ನೋಡಿದವಳೇ, ಅವಳ ಹತ್ತಿರ ಬಂದು ಅವಳ ಹಣೆಯ ಮೇಲೆ ಕೈಯಿಟ್ಟು,

*"ಯಾಕೆ ಸುಮಿ ಹುಷಾರಿಲ್ವಾ?"*

ಎಂದಾಗ ಎಚ್ಛೆತ್ತುಗೊಂಡ ಸುಮಾ 

*"ಹಾಗೇನಿಲ್ಲಮ್ಮಾ, ಯಾಕೋ ಸ್ವಲ್ಪ ಬೇಜಾರಾಯ್ತು ಅದಕ್ಕೆ ಸುಮ್ಮನೆ ಕುಳಿತಿದ್ದೆ"*

*"ಸಂಗಾತಿ ಜೊತೆಯಲ್ಲಿರಬೇಕಾದ ವಯಸ್ಸಿನಲ್ಲಿ, ಆಸರೆ ಇಲ್ಲದೆ ಹೋದರೆ, ಹೀಗೆ ಆಗುತ್ತೆ. ಈಗಲಾದರೂ ಏನಾಯ್ತು. ಇನ್ನೊಂದು ಮದುವೆ ಮಾಡಿಕೊಂಡು ಸುಖವಾಗಿ ಇರಬಹುದು."*

ಎಂದು ಹೇಳಿದಾಗ ಅವಳ ಮಾತಿಗೆ ಸುಮಾ ನಗುತ್ತ, 

*"ಅಲ್ಲ ಕಾವೇರಿ ನನ್ನ ವಯಸ್ಸು ಈಗ ಸುಮಾರು 40 ವರ್ಷ ದಾಟಿದೆ. ಹರೆಯದವಳು ಅನ್ನೋ ಹಾಗಿಲ್ಲ. ಮುದುಕಿ ಅನ್ನುವದಕ್ಕೂ ಆಗೋಲ್ಲ. ವಿಶ್ವಾಮಿತ್ರ ಸೃಷ್ಟಿಸಿದ ತ್ರಿಶಂಕು ಸ್ವರ್ಗದ ಹಾಗೆ ತ್ರಿಶಂಕು ವಯಸ್ಸಿನಲ್ಲಿದಿನಿ. ಅಲ್ಲದೆ, ನನ್ನ ಮನಸ್ಸಿನ ತುಂಬಾ ಮನು ತುಂಬಿಕೊಂಡಿದ್ದು ಅವನನ್ನು ಅಲ್ಲಿಂದ ಕಳುಹಿಸಲು ನನ್ನಿಂದ ಸಾಧ್ಯವಿಲ್ಲ"* 

    ಎಂದು ಹೇಳಿದಾಗ ಕಾವೇರಿ ಅವಳ ಮಾತು ಕೇಳಿ ನಕ್ಕು ಸುಮ್ಮನಾದಳು. ಅವಳ ಸ್ವಭಾವ ಹಾಗೆ. ತುಂಬಾ ಚನ್ನಾಗಿ ಕಾಳಜಿ ಮಾಡುತ್ತಲೇ. ಅಲ್ಲದೆ, ಈ ಕಾಲೇಜಿನಲ್ಲಿ ತಾನು ಮತ್ತು ಅವಳು ಇಬ್ಬರೇ ಹೆಣ್ಣು ಮಕ್ಕಳು. ಹೀಗಾಗಿ ಅವಳಿಗೆ ಸುಮಾಳ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ಇತ್ತು. 

     ಕಾವೇರಿ ಮತ್ತೆ ತನಗೆ ಕ್ಲಾಸ್ ಇದೆ ಅಂತ ಹೇಳಿ ಹೋದಳು. ಸುಮಾಳಿಗೆ ಬೇರೆ ಕ್ಲಾಸ್ ಇರಲಿಲ್ಲ. ಸುಮಾ ಕುಳಿತಿದ್ದಳು. ಸ್ವಲ್ಪ ಹೊತ್ತಿನ ನಂತರ ಅವಳಿಗೆ ಕುಳಿತು ಕುಳಿತು ಬೇಜಾರಾಗಿ ಲೈಬ್ರರಿಗೆ ಹೋಗಿ ಏನಾದರೂ ಓದಿದರಾಯಿತೆಂದುಕೊಂಡು ಅಲ್ಲಿಗೆ ಹೋದಳು. ಅಲ್ಲಿ ಹೋಗಿ ಕೈಗೆ ಸಿಕ್ಕ ಕಾದಂಬರಿಯನ್ನು ತೆಗೆದುಕೊಂಡು ಓದಲು ಕುಳಿತಳು. ಸುಮಾ ತನಗೆ ಬೇಸರವಾದಾಗ ಕಾಂದಂಬರಿ ಓದುತ್ತಿದ್ದಳು. ಅವಳು ತನ್ನ ಕೈಗೆ ಸಿಕ್ಕ ಕಾದಂಬರಿ ತೆಗೆದುಕೊಂಡು ಬಂದು ಕುಳಿತಳು. ಲೆಕ್ಚರರ್ ಲೈಬ್ರರಿಯಲ್ಲಿ ಕುಳಿತಿದ್ದರಿಂದ ಅಲ್ಲಲಿ ಮಾತನಾಡುತ್ತ ಕುಳಿತಿದ್ದ ವಿದ್ಯಾರ್ಥಿಗಳೆಲ್ಲ ಸೀರಿಯಸ್ ಆಗಿ ಓದುತ್ತಿರುವಂತೆ ಕುಳಿತರು. ಆದರೆ, ಸುಮಾಳಿಗೆ ಗೊತ್ತು, ಅವರಲ್ಲಿ ಕೆಲವು ಗಂಡು ಹುಡುಗರು ತನ್ನನು ನೋಡಲೆಂದೇ ಕುಳಿತಿದ್ದಾರೆ ಅಂತ. ಅವಳು ಅದಕ್ಕೆಲ್ಲ ಗಮನ ಕೊಡದೆ ತಾನು ತಂದ ಪುಸ್ತಕವನ್ನು ನೋಡಿದಳು. ಅದು ತ್ರಿವೇಣಿ ಬರೆದ "ಸೋತು ಗೆದ್ದವಳು" ಕಾದಂಬರಿಯಾಗಿತ್ತು. ತ್ರಿವೇಣಿ ಸುಮಾಳ ಅಚ್ಚು ಮೆಚ್ಚಿನ ಲೇಖಕಿ. ಇಲ್ಲಿಯವರೆಗೆ ತ್ರಿವೇಣಿಯವರ ಎಲ್ಲ ಕಾದಂಬರಿಗಳನ್ನು ಓದಿದ್ದರು ಇದೊಂದು ಪುಸ್ತಕ ಓದುವಾದಾಗಿರಲಿಲ್ಲ. ಇಂದು ಹೇಗೋ ಸಮಯವಿತ್ತು. ಓದಿದರಾಯಿತು ಎಂದುಕೊಂಡು ಪುಟ ತೆರೆದು ಓದತೊಡಗಿದಳು. 

    ಆ ಕಾಂದಂಬರಿಯನ್ನು ಓದುತ್ತಿದ್ದಂತೆ ಅವಳು ಅದರಲ್ಲಿಯೇ ಲೀನವಾದಳು. ತನ್ನನ್ನೇ ಆ ಕಾದಂಬರಿಯ ನಾಯಕಿಯಾಗಿ ಕಲ್ಪಿಸಿಕೊಂಡು ಪಾತ್ರವನ್ನು ಅನುಭವಿಸತೊಡಗಿದಳು. ಕಥಾ ನಾಯಕಿಯಂತೆ ತನ್ನದೂ ಸಹ ಒಂಟಿ ಜೀವನ. ಅವಳ ಒಂಟಿತನದಲ್ಲಿ ಸುಮಾ ತನ್ನನ್ನು ತಾನು ಕಂಡುಕೊಂಡಳು. ಲೇಖಕಿ ನಾಯಕಿಯ ಪಾತ್ರದಲ್ಲಿ ಸೃಷ್ಟಿಸಿದ ಏಕಾಂಗಿತನ, ಯಾರೋ ತನ್ನಿಂದ ದೂರಾಗಿ ಹೋದಾಗ ಪಡುವ ವೇದನೆ, ಏಕಾಂಗಿತನದ ಜೀವನದಲ್ಲಿ ಒಂದು ಹೆಣ್ಣನ್ನು ಪರ ಪುರುಷರು ನೋಡುವ ದೃಷ್ಟಿ ತನ್ನ ಜೀವನದ ಘಟನೆಗಳನ್ನು ಕಥಾ ರೂಪವಾಗಿ ಆ ಕಾದಂಬರಿಯಲ್ಲಿ ಬರೆಯಲಾಗಿದೆ ಎಂಬ ಭಾವನೆಗೆ ಬಂದಳು. ಮೊದಲ ಬಾರಿಗೆ ಆ ಕಾದಂಬರಿಯನ್ನು ಸುಮಾ ಓದಿದ್ದರಿಂದ ಅದರಲ್ಲಿ ಬರುವ ಪಾತ್ರಗಳಿಗೆ ಮಾರು ಹೋಗಿದ್ದಳು. ಆ ಕಾದಂಬರಿ ತನಗಾಗಿ ಬರೆಯಲಾಗಿದೆ ಎಂದುಕೊಂಡು, ಇನ್ನೊಮ್ಮೆ ಅದನ್ನು ನಿರಾತಂಕವಾಗಿ ಭಾವನೆಗಳ ಸಮೇತ ಓದಬೇಕೆಂದುಕೊಂಡಳು. ಕಾದಂಬರಿಯನ್ನು ತೆಗೆದುಕೊಂಡು ಎದ್ದು ಲೈಬ್ರರಿಯನ್ ಹತ್ತಿರ ಬಂದು ಲೈಬ್ರರಿ ರಿಜಿಸ್ಟರ್ ದಲ್ಲಿ ಎಂಟ್ರಿ ಮಾಡಿ ಅದನ್ನು ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಕೊಂಡು ಬಂದಳು. ಕಾಲೇಜಿನ ಅವಧಿ ಮುಗಿದಿದ್ದರಿಂದ ನೇರವಾಗಿ ಕಾರು ಹತ್ತಿ ಮನೆಗೆ ಬಂದಳು. 

    ಮನೆಗೆ ಬಂದವಳೇ, ಹಸಿದ ಹೊಟ್ಟೆಗೆ ಸ್ವಲ್ಪ ಊಟ ಮಾಡಿ, ಮೂರು ಸಂಜೆಯಾಗಿದ್ದರಿಂದ ಪೂಜೆ ಮಾಡಿ ಕೈಯಲ್ಲಿ ಕಾಫಿ ಹಿಡಿದುಕೊಂಡು ಸುಮ್ಮನೆ ಕಾಂಪೌಂಡ್ ಒಳಗೆ ಇರುವ ಜೋಕಾಲಿಯಲ್ಲಿ ಕುಳಿತು ಕಾಫಿ ಹೀರುತ್ತಾ, ಕಾದಂಬರಿಯ ಸನ್ನಿವೇಶಗಳನ್ನು ನೆನಪಿಸಿಕೊಳ್ಳತೊಡಗಿದಳು. ನಾಯಕಿಯ ಗಂಡ ನಾಯಕಿಯನ್ನು ತುಂಬಾ ಪ್ರೀತಿಸುತ್ತಿದ್ದ. ಅವಳು ಅಲಂಕಾರ ಮಾಡಿಕೊಂಡರೆ ಅದನ್ನು ಅವನು ಕೆಡಿಸುವ ತನಕ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಇಂತಹ ಅನೇಕ ಪ್ರಣಯಭರಿತ ಪ್ರಸಂಗಗಳನ್ನು ತುಂಬಾ ಚನ್ನಾಗಿ ಕಾದಂಬರಿಯಲ್ಲಿ ಸೃಷ್ಟಿಸಲಾಗಿತ್ತು. ಅವುಗಳನ್ನು ಓದುತ್ತಿದ್ದರೆ, ಯಾರಿಗಾದರೂ ತಮ್ಮ ಸಂಗಾತಿಯನ್ನು ಬಿಟ್ಟು ಹೋಗದೆ ಇರುವಂತ ಆಸೆಯಾಗುತ್ತಿತ್ತು. 

   ಇಂತಹ ಪ್ರಸಂಗಗಳನ್ನು ತನ್ನ ಜೀವನದಲ್ಲಿ ಸುಮಾ ಕಂಡುಕೊಂಡಿದ್ದಳು ಮನು ಜೀವಂತವಿದ್ದಾಗ. ಆದರೆ ಈಗ ಅವೆಲ್ಲ ಕೇವಲ ನೆನಪುಗಳು ಮಾತ್ರ. ಹಳೆ ಸುಖದ ನೆನಪುಗಳನ್ನು ಮಾಡಿಕೊಳ್ಳುವಾಗ ಅದರಲ್ಲಿಯೂ ಏನೋ ಸುಖ ಇರುತ್ತೆ. ಹಾಗೆ ಅದೇ ಗುಂಗಿನಲ್ಲಿ ಮುಳುಗಿದ್ದ ಸುಮಾಳಿಗೆ ಕತ್ತಲೆಯಾಗಿದ್ದು ಗೊತ್ತಾಗಲಿಲ್ಲ. ಪಕ್ಕದ ಮನೆಯ ಲೈಟ್ ಹಾಕಿದಾಗ ಎಚ್ಚರಗೊಂಡ ಸುಮಾ, ಅವಾಗ ಅವಳಿಗೆ ಕತ್ತಲೆಯಾಗಿದೆ ಅಂತ ಗೊತ್ತಾಗಿ ಹೋಗಿ ತಾನು ಮನೆಯ ಲೈಟ್ ಹಾಕಿದಳು. ಅಡುಗೆ ಮನೆಗೆ ಹೋಗಿ ಅನ್ನಮಾಡಿಕೊಂಡು ಊಟ ಮಾಡಿ ಸ್ವಲ್ಪ ಹೊತ್ತು ಟಿ ವಿ ನೋಡಬೇಕು ಎಂದುಕೊಂಡು ಹಾಕಿದಾಗ, ಯಾಕೋ ಅವಳಿಗೆ ಟಿವಿ ಕಡೆಗೆ ನೋಡುವ ಮನಸ್ಸಾಗಲಿಲ್ಲ. ಆಫ್ ಮಾಡಿದವಳೇ ಎಲ್ಲ ಡೋರ್ ಲಾಕ್ ಮಾಡಿ ಬೆಡ್ ರೂಮಿಗೆ ಹೋದಳು. 

    ಮಂಚದ ಬದಿ ಇರುವ ಟೇಬಲ್ ಮೇಲೆ ತಾನು ಲೈಬ್ರರಿಯಿಂದ ತಂದ ಪುಸ್ತಕವನ್ನು ಇಟ್ಟಿದ್ದಳು. ಅದನ್ನು ತೆಗೆದುಕೊಂಡು ಬೆಡ್ ಮೇಲೆ ಮಲಗಿಕೊಂಡು ಮತ್ತೊಮ್ಮೆ ಅದನ್ನು ನಿಧಾನವಾಗಿ ಓದತೊಡಗಿದಳು. ಸಾವಕಾಶವಾಗಿ ಪ್ರತಿ ಸನ್ನಿವೇಶವನ್ನು ತನ್ನ ಕಣ್ಣ ಮುಂದೆ ತಂದುಕೊಂಡು ಓದುತ್ತಿದ್ದಾಗ, ನಾಯಕಿ ಮತ್ತು ಅವಳ ಗಂಡನ ಪ್ರಣಯದ ಸನ್ನಿವೇಶ ಬಂದಾಗ ತನ್ನ ಗಂಡನ ನೆನಪಾಗಿ ಭಾವೋದ್ವೇಗಕ್ಕೆ ಒಳಗಾದಳು. ಮನುನ ನೆನಪಾಗಿ ಅವಳ ಕಣ್ಣಲ್ಲಿ ನೀರು ಬಂತು. ಇಷ್ಟು ದಿನ ಅವನ ನೆನಪು ಅವಳಿಗೆ ಹಿತ ನೀಡುತ್ತಿತ್ತು. ನೆನಪುಗಳೇ ಹಾಗೆ. ಅದರಲ್ಲಿಯೂ ಮನಸ್ಸಿನ ಭಾವನೆಗೆಳನ್ನು ಮುದಗೊಳಿಸುವ ಪ್ರಣಯದ ನೆನಪುಗಳಿಗೆ ಅದರದೇ ಆದ ಶಕ್ತಿ ಇರುವದು. ಒಬ್ಬ ಮನುಷ್ಯ ಇಲ್ಲದಿದ್ದರೂ ಇರುವ ಹಾಗೆ ಮಾಡುವದೇ ಆ ನೆನಪು. ಆ ಪುಸ್ತಕವನ್ನು ಓದುತ್ತಿದ್ದಂತೆ, ಅವಳಿಗೆ ಅವನ ಇಲ್ಲದಿರುವಿಕೆ ಅನುಭವಕ್ಕೆ ಬರತೊಡಗಿತು. ಒಬ್ಬ ವ್ಯಕ್ತಿ ದೂರದಲ್ಲಿದ್ದರೆ ಅವನು ಇದ್ದಾನೆ ಇಂದಲ್ಲ ನಾಳೆ ಬರುತ್ತಾನೆ ಎಂಬ ಭರವಸೆ ಇರುತ್ತದೆ. ಆದರೆ ಇಲ್ಲದಿರುವ ವ್ಯಕ್ತಿ, ಬರುತ್ತಾನೆಂಬ ಭರವಸೆ ಇರುವದೇ ಇಲ್ಲ ಅಲ್ಲದೆ, ಅವನ ನೆನಪು ಮಾತ್ರ ಅವ್ನ ಇರುವಿಕೆಯನ್ನು ಮನಸ್ಸಿನಲ್ಲಿ ತೋರಿಸಿಕೊಡುತ್ತದೆ, ಆದರೆ ಪ್ರಾಕ್ಟಿಕಲ್ ದಲ್ಲಿ ಅದು ಅಸಾಧ್ಯದ ಮಾತು. ಮೊದಮೊದಲು ಮನು ತನ್ನ ಹತ್ತಿರವೇ ಇದ್ದಾನೆ ಎಂದುಕೊಂಡ ಸುಮಾ ಅವನನ್ನು ನೆನಪಿಸಿಕೊಳ್ಳುತ್ತಾ, ಅವನ ಇರುವಿಕೆಯನ್ನು ಫೀಲ್ ಮಾಡಿಕೊಳ್ಳುತ್ತಲಿದ್ದಳು. ಆದರೆ ಈಗ ಅವಳಿಗೆ ಪ್ರಾಕ್ಟಿಕಲ್ ಆಗಿ ಅವನು ಇಲ್ಲದಿರುವದು, ಫೀಲ್ ಆಗ್ತಿತ್ತು. ಸುಮಾರು ಹೊತ್ತು ಹಾಗೆ ಅವನ ನೆನಪಿನಲ್ಲಿಯೇ ಕಣ್ಣಲ್ಲಿ ನೀರು ತುಂಬಿಕೊಂಡು ಮಲಗಿದ್ದಳು. ನಿದ್ರೆ ಬರುತ್ತಿರಲಿಲ್ಲ.  

    ಪಕ್ಕದ ಮನೆಯ ಮುದುಕಪ್ಪ ತನ್ನ ಮನೆಯಲ್ಲಿ ಟೇಪ್ ರೆಕಾರ್ಡ್ ದಲ್ಲಿ ಹಾಡೊಂದು ಹಾಕಿದ್ದ 

*"ಮೇರಾ ಜೀವನ್ ಕೋರ ಕಾಗಜ ಕೋರಾ ಹಿ ರೆಹೆಗಯಾ

ಜೋ ಲಿಖಾ ಥಾ ಆಸುವೋ ಕೆ ಸಂಗ ಬೆಹೆಗಯಾ"*

ತಾನು ಫೀಲ್ ಮಾಡಿಕೊಳ್ಳುತ್ತಿರುವ ವಿಷಯಕ್ಕೂ ಆ ಹಾಡಿಗೂ ಎಷ್ಟು ಹತ್ತಿರದ ಸಂಭಂದವಿದೆ ಅಂತ ಯೋಚನೆ ಮಾಡುತ್ತಿದ್ದಳು. ಅಷ್ಟರಲ್ಲಿ ಆ ಮುದುಕಪ್ಪನ ಹೆಂಡತಿ 

*"ಅಯ್ಯೋ ನಿನ್ ಹಾಡಿಗಾಷ್ಟು ಬೆಂಕಿ ಹಾಕ, ಯಾವಾಗ ನೋಡಿದ್ರು ಅಳುಬುರುಕ ಹಾಡನ್ನೇ ಹಾಕೊಂಡು ಕೂತಿರ್ತೀಯ. ಹಗಲ್ಲೆನ್ನೋದಿಲ್ಲ ರಾತ್ರಿ ಎನ್ನೋದಿಲ್ಲ. ಸಾಕು ಆಫ್ ಮಾಡು ನಾನು ಮಲಗಬೇಕು"*

ಎಂದು ಸಲಿಗೆಯಿಂದ ತನ್ನ ಗಂಡನನ್ನು ಬೈದಾಗ, ಅವಳ ಧ್ವನಿಗೆ ಹೆದರಿದ ಮುದುಕಪ್ಪ ಹಾಡನ್ನು ತೆಗೆದುಬಿಟ್ಟ. 

   ಪಕ್ಕದ ಮನೆ ಮುದುಕ ಮುದುಕಿಯರು ವಯಸ್ಸಾದರೂ ಸಹ ಜಗಳಾಡುವದನ್ನು ಬಿಟ್ಟಿರಲಿಲ್ಲ. ಎಲ್ಲಿಯೋ ಹೇಳಿದಂತೆ, ಯಾವಾಗಲೂ ಜಗಳಾಡುತ್ತಾ ಇರುವ ದಂಪತಿಗಳ ನಡುವೆ ಪ್ರೀತಿ ಹೆಚ್ಚಾಗಿ ಇರುತ್ತದೆ ಅಂತ. ಆದರೆ ತಾನು ಮತ್ತು ಮನು ಮಾತ್ರ ಯಾವತ್ತಿಗೂ ಜಗಳಾಡಿರಲಿಲ್ಲ. ಹಾಗಾದರೆ ತಮ್ಮ ನಡುವೆ ಪ್ರೀತಿ ಇರಲಿಲ್ಲವೇ? ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡಳು. ಜಗಳಾಡಿದರೆ ಮಾತ್ರ ಪ್ರೀತಿ ಎನ್ನುವದಾದರೆ ಪ್ರಪಂಚದಲ್ಲಿ ಇರುವ ಎಲ್ಲ ಗಂಡ ಹೆಂಡಿರು ತಮ್ಮ ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳಲು ತಮ್ಮ ಸಂಗಾತಿಯ ಜೊತೆಗೆ ಯುದ್ಧವನ್ನೇ ಮಾಡುತ್ತಿದ್ದರು ಎಂದುಕೊಂಡು ನಕ್ಕು ಮತ್ತೆ ನಾರ್ಮಲ್ ಆದಳು

     ಯಾವತ್ತೋ ಇಲ್ಲದಿರೋ ಇಂತಹ ವಿಚಾರಗಳು ಇವತ್ತೇ ಯಾಕೆ ಬರ್ತಿವೆ ಅಂತ ಯೋಚಿಸುತ್ತಿದ್ದಾಗ ಅವಳಿಗೆ ನೆನಪಾಗಿದ್ದು, ಹಿಂದಿನ ದಿನ ತಾನು ಓದಿದ ತನ್ನ ಹೊಸ ಫೇಸ್ ಬುಕ್ ಫ್ರೆಂಡ್ ಹಾಕಿದ ಕೋಟ್(quote). ಅವಳಿಗೆ ತಾನು ಇವತ್ತು ಫೇಸ್ ಬುಕ್ ನೋಡಿಲ್ಲ ಎಂದು ನೆನಪಾಯಿತು. ಹೇಗೂ ನಿದ್ರೆ ಬರುತ್ತಿರಲಿಲ್ಲ. ಬೆಡ್ ಮೇಲಿಂದ ಇದ್ದು, ಬಾಲ್ಕನಿಗೆ ಹೋಗಿ ಅಲ್ಲಿ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ದಲ್ಲಿ ಫೇಸ್ ಬುಕ್ ತೆಗೆದಳು. 

     ಮೊದಲು ತನ್ನ ಟೈಮ್ ಲೈನ್ ನೋಡಿದಳು. ಅವತ್ತು ಸಹ ಅವಳಿಗೆ ಸಾಕಷ್ಟು ಫ್ರೆಂಡ್ ರಿಕ್ವೆಸ್ಟ್ ಗಳು ಬಂದಿದ್ದವು. ಆದರೆ ಅವುಗಳನ್ನು ಯಾವುದನ್ನೂ ಒಪ್ಪಿಕೊಳ್ಳದೆ ಎಲ್ಲವುಗಳನ್ನು ಡಿಲೀಟ್ ಮಾಡಿದಳು. ಹಾಗೆ ಫೇಸ್ ಬುಕ್ ನೋಡತೊಡಗಿದಾಗ ಅವಳಿಗೆ ಅಭಿ ಹಾಕುತ್ತಿದ್ದ ಪೋಸ್ಟ್ ನೆನಪಾಯಿತು. ಹಾಗೆ ತನ್ನ ಟೈಮ್ ಲೈನ್ ದಲ್ಲಿ ಅವನು ಇವತ್ತು ಏನಾದರೂ ಪೋಸ್ಟ್ ಹಾಕಿದ್ದಾನೆಯೇ ಎಂದು ಅವನ ಪೋಸ್ಟ್ ಬಗ್ಗೆ ನೋಡತೊಡಗಿದಳು. ಕಳೆದೆರಡು ದಿನಗಳಿಂದ ಅವನ ಪೋಸ್ಟ್ ಮತ್ತು ಅದರಲ್ಲಿದ್ದ ಲೇಖನಗಳು ಅವಳನ್ನು ಬಹಳವಾಗಿ ಆಕರ್ಷಿಸಿದ್ದವು. ಅದೇ ಆಕರ್ಷಣೆ ಅವಳನ್ನು ಇವತ್ತು ಮತ್ತೆ ಅಭಿಯ ಪೋಸ್ಟ್ ಹುಡುಕುವ ರೀತಿ ಮಾಡಿತ್ತು. ಹಾಗೆ ಹುಡುಕುತ್ತಿರುವಾಗ ಅವನು ಇಂದೂ ಸಹ ಪೋಸ್ಟ್ ಹಾಕಿದ್ದ. ಮತ್ತೆ ಬರವಣಿಗೆಯಲ್ಲಿಯೇ ಇತ್ತು. 

ಈ ಸಲ ಅದು ಹಿಂದಿಯಲ್ಲಿತ್ತು. 

*"ಹಮ್ ಓ ಹೈ ಜೋ ಆಂಖೊ ಮೇ ಆಂಖೆ 

ಡಾಲ್ ಕೆ ಸಚ್ ಜಾನ ಲೇಟೇಹೈ 

ತುಜಸೇ ಮೊಹಬ್ಬತ್ತ ಹುಯಿ ಬಸ್ 

ಇಸಿಲಿಯೆ ತೆರೆ ಝೂಟ್ ಭೀ ಸಚ್ ಮಾನ ಲೇಟೇ ಹೈ"*

(ನಾವು ಕಣ್ಣಲ್ಲಿ ಕಣ್ಣಿಟ್ಟು ಸತ್ಯವನ್ನು ತಿಳಿದುಕೊಳ್ಳುತ್ತೇವೆ. ನಿನ್ನೊಂದಿಗೆ ಪ್ರೀತಿಯಾಗಿದ್ದರಿಂದಲೇ ಸುಳ್ಳನ್ನು ಸಹ ಸತ್ಯವೆಂದು ತಿಳಿದುಕೊಳ್ಳುತ್ತೇವೆ)

ಇದು ಮಿರ್ಜಾ ಗಾಲಿಬ ಬರೆದ ಶಾಯರಿ. ಒಂದು ಕ್ಷಣ ಅದನ್ನು ಓದಿದ ಅವಳಿಗೆ ಮೈ ಝಂ ಎಂದು ಅನ್ನಿಸತೊಡಗಿತು. ಅದನ್ನು ತನ್ನನ್ನು ಉದ್ದೇಶಿಸಿ ಬರೆಯಲಾಗಿದೆಯೇ ಎಂದು ಒಂದು ಕ್ಷಣ ಅಂದುಕೊಂಡರೂ ಸಹ, ಅವನು ಹೇಗಿದ್ದರೂ ಅಪರಿಚಿತ, ತನಗೆ ಏಕೆ ಈ ರೀತಿಯಾಗು ಹೇಳುವ ಪ್ರಸಂಗ ಬರುತ್ತದೆ ಅಂತ ಅಂದುಕೊಂಡಳು. ಸುಮಾ ಮಿರ್ಜಾ ಗಾಲಿಬನ ಶಾಯರಿಗಳನ್ನು ಕಾಲೇಜು ದಿನಗಳಲ್ಲಿ ಓದಿದ್ದಳು. ಅದಕ್ಕೆ ಕೇವಲ ಶಬ್ದ ರಚನೆಗಳಿಂದ ಮತ್ತು ಅರ್ಥಗಳಿಂದ ಆ ಸಾಲುಗಳು ಅವನದೇ ಅಂತ ಗೊತ್ತಾಗಿತ್ತು. 

ಸುಂದರವಾದ ಸಾಲುಗಳು. ಅದಕ್ಕೆ ತನ್ನದೇ ರೀತಿಯಲ್ಲಿ ಉತ್ತರ ಕೊಡಬೇಕು ಎಂದುಕೊಂಡ ಸುಮಾ ಯೋಚನೆ ಮಾಡಿ ಅದಕ್ಕೆ ಉತ್ತರವಾಗಿ ಕಾಮೆಂಟ್ ಬಾಕ್ಸಿನಲ್ಲಿ 

*" ಹರ್ ಏಕ್ ಬಾತ್ ಫೆ ಕೆಹೆತೆ ಹೊ ತುಮ,

 ಕಿ ತೂ ಕ್ಯಾ ಹೈ 

ತುಮ ಹಿ ಕಹೋ ಕಿ ಎ ಅಂದಾಜ್ ಎ ಗುಫ್ಟಗೂ ಕ್ಯಾ ಹೈ"*

*(ಪ್ರತಿ ಮಾತಿನಲ್ಲಿ ನೀನು ಏನು ಎಂದು ಹೇಳುತ್ತಿ. ನೀನೆ ಹೇಳು ಈ ಗುಫ್ಟಗೂ ಏನು ಅಂತ)*

ಎಂದು ಬರೆದು ಅದನ್ನು ಕಾಮೆಂಟ್ ಬಾಕ್ಸಿನಲ್ಲಿ ಹಾಕಿದಳು. 

ಹಾಗೆ ಕಾಮೆಂಟ್ ಮಾಡುತ್ತಲೇ ಅವಳಿಗೆ ಮನದಲ್ಲಿ ನಗು ಬಂತು. ಪಾಪ ಅವನು ಏನೋ ಒಂದು ಬರೆದು ಹಾಕಿದರೆ, ತಾನು ಅವನಿಗೆ ಸವಾಲಾಗುವ ರೀತಿಯಲ್ಲಿ ಕಾಮೆಂಟ್ ಮಾಡಿ ಹಾಕುತ್ತೇನೆ. ಅವನು ಅದನ್ನು ಹೇಗೆ ತೆಗೆದುಕೊಳ್ಳುತ್ತಾನೋ. 

ತನ್ನ ಕಾಲೇಜು ದಿನಗಳಲ್ಲಿ ತನ್ನ ಗೆಳತಿಯೊಬ್ಬಳು ಮಿರ್ಜಾ ಗಾಲಿಬನ ತುಂಬಾ ದೊಡ್ಡ ಫ್ಯಾನ್ ಆಗಿದ್ದಳು. ಅವಳು ದಿನಾಲು ಒಂದು ಶಾಯರಿಯನ್ನು ಆಫ್ ಪಿರಿಯಡ್ ಇದ್ದಾಗ ಅದನ್ನು ಲೆಕ್ಚರರ್ ಪಾಠ ಮಾಡುತ್ತಿದ್ದ ಜಾಗದಲ್ಲಿ ನಿಂತು ಅವರ ರೀತಿಯಲ್ಲಿ ಪಾಠ ಮಾಡಿದ ಹಾಗೆ ಹೇಳುತ್ತಿದ್ದಳು. ಅವಳು ಹೇಳುವದನ್ನು ಕೇಳಿ ಕೇಳಿ ಹಲವಾರು ಶಾಯರಿಗಳು ಸುಮಾಳಿಗೆ ಬಾಯಿಪಾಠ ಆಗಿದ್ದವು. ಇದು ಸಹ ಅವುಗಳಲ್ಲಿ ಒಂದು. ಸುಮಾಳಿಗೆ ಸುಮ್ಮನಿರಲಾಗದೆ, ಅವಳು ಮತ್ತೆ ತನಗೆ ನೆನಪಿಗೆ ಬಂದ ಇನ್ನೊಂದು ಶಾಯರಿಯನ್ನು ತನ್ನ ಟೈಮ್ ಲೈನ್ ದಲ್ಲಿ ಹಾಕಿದಳು. ಅದು ಹೀಗಿತ್ತು. 

*"ಹಜಾರೊ ಖ್ವಾಯಿಶೆ ಐಸೇ ಕಿ 

ಹರ್ ಖ್ವಾಯಿಶೆ ಪರ್ ದಂ ನಿಕಲೆ

ಬಹುತ್ ನಿಕಲೆ ಮೇರೇ ಅರಮಾನ್

ಲೇಕಿನ್ ಫರ್ ಭೀ ಕಮ್ ನಿಕಲೆ"*

ಎಂದು ಬರೆದು ತನ್ನ ಟೈಮ್ ಲೈನ್ ದಲ್ಲಿ ಪೋಸ್ಟ್ ಮಾಡಿದಳು. ಮನದಲ್ಲಿ ನಗುತ್ತಿದ್ದಳು. ಅವನು ಒಂದು ವೇಳೆ ತನ್ನ ಪೋಸ್ಟ್ ನೋಡಿದರೆ ಹೇಗೆ ಪ್ರತಿಕ್ರಿಯೆ ಮಾಡಬಹುದು ಎಂದು ಅಂದಾಜು ಮಾಡುತ್ತಿದ್ದಳು. ಒಂದು ವೇಳೆ ಅವನು ತನ್ನ ಪೋಸ್ಟ್ ನೋಡಿದರೆ ಅವನು ತಾನೊಬ್ಬನೇ ಜಾಣನಲ್ಲ ತನ್ನ ಜಾಣತನಕ್ಕೆ ಸವಾಲಾಗುವವರು ಇರುವರು ಅಂತ ತಿಳಿದುಕೊಳ್ಳುತ್ತಾನೆ ಅಂತ ಅಂದುಕೊಂಡಳು. ಆದರೆ ಆಗಿದ್ದೆ ಬೇರೆ. 

     ಅವಳೇನೋ ಅವನು ಹೇಗೆ ಪ್ರತಿಕ್ರಯಿಸಬಹುದು ಎಂದು ಯೋಚಿಸುತ್ತಿರುವಾಗಲೇ, ಅವಳ ಮೊಬೈಲ್ ಮೆಸೇಜ್ ಬಂದ ಸದ್ದು ಮಾಡಿತು. ಅದನ್ನು ತೆಗೆದು ನೋಡಿದಾಗ, ತನ್ನ ಮೆಸೇಜ್ ಗೆ ಒಂದು ಲೈಕ್ ಬಂದಿದ್ದು ಅದರ ಜೊತೆಗೆ ಕಾಮೆಂಟ್ ಕೂಡ ಮಾಡಲಾಗಿತ್ತು. 

ಅದನ್ನು ತೆಗೆದು ನೋಡಿದಾಗ 

*"ಸುಭಾನಲ್ಲಾ ಕ್ಯಾ ಬಾತ್ ಹೈ"*

ಎಂದು ತಾನು ಹಾಕಿದ ಮೆಸೇಜ್ ಕಾಮೆಂಟ್ ಬಾಕ್ಸಿನಲ್ಲಿ ಅಭಿ ಇದೀಗ ಕಾಮೆಂಟ್ ಮಾಡಿ ಕಳುಹಿಸಿದ್ದ. ಜೊತೆಗೆ ಅದರ ಕೆಳಗೆ 

*"ಈ ಜಗತ್ತಿನಲ್ಲಿ ನಮ್ಮದು ಅನ್ನುವ ವಸ್ತು ಯಾವುದು ಇಲ್ವಾ?

ಒಂದು ವೇಳೆ ಇದ್ದಾರೆ ಅದು ಕೇವಲ ನಮ್ಮನ್ನು ಇಷ್ಟ ಪಡುವ 

ಇನ್ನೊಂದು ಸುಂದರ ಹೃದಯ ಮಾತ್ರ"*

ಎಂದು ಹೇಳಿ ಕಳುಹಿಸಿದ್ದ. ಒಬ್ಬ ರಾಜ ಮತ್ತೊಬ್ಬ ರಾಜನ ಮೇಲೆ ಯುದ್ಧ ಸಾರಿದಂತೆ ಒಂದು ರೀತಿಯಲ್ಲಿ ಬರೆದು ತನ್ನ ಕಾಮೆಂಟ್ ಬಾಕ್ಸಿಗೆ ಹಾಕಿದ್ದ. ಅದನ್ನು ಓದಿದ ಸುಮಾ ಯಾರೀತ, ತಾನು ಒಂದು ರೀತಿಯಿಂದ ಏನೋ ಬರೆದು ಹಾಕಿದರೆ, ಅವನೂ ಸಹ ಅದಕ್ಕೆ ಸರಿಯಾಗಿಯೇ ಉತ್ತರ ನೀಡುವಂತೆ ಹೇಳ್ತಾನಲ್ಲ , ಎಂದು ಅವನ ಬಗ್ಗೆ ಸಣ್ಣ ಕುತೂಹಲ ಮೂಡಿತು. ಆದರೆ ಅವನು ನೀಡಿದ ಉತ್ತರಕ್ಕೆ ಸುಮಾ ಪ್ರತ್ಯುತ್ತರ ನೀಡದೆ ಸುಮ್ಮನಾದಳು. 

                                       



4


ಇನ್ನು ಮಲಗಬೇಕೆಂದುಕೊಂಡು ಹಾಸಿಗೆಯ ಮೇಲೆ ಹೊರಳಿ ಅಲಾರಾಂ ಸೆಟ್ ಮಾಡಿದರಾಯಿತು ಎಂದುಕೊಂಡು ಮೊಬೈಲಿನಲ್ಲಿ ಅಲಾರಾಂ ಸೆಟ್ ಮಾಡುತ್ತಿರಬೇಕಾದರೆ, ಫೇಸ್ ಬುಕ್ ಮೆಸ್ಸೆಂಜರ್ ದಲ್ಲಿ ಏನೋ ಮೆಸೇಜ್ ಬಂತು. ತನಗೆ ಯಾರೂ ಫೇಸ್ ಬುಕ್ ಮೆಸ್ಸೆಂಜರ್ ದಲ್ಲಿ ಯಾರೂ ಮೆಸೇಜ್ ಮಾಡುವದಿಲ್ಲ. ಅಂತಹದರಲ್ಲಿ ತನಗೆ ಮೆಸೇಜ್ ಯಾರು ಮಾಡಿದರಬಹುದು, ಎಂದು ಕುತೂಹಲದಿಂದ ಮೆಸ್ಸೆಂಜರ್ ಆಪ್ ತೆಗೆದು ನೋಡಿದಾಗ ಒಂದು ಕ್ಷಣ ಬೆಚ್ಚಿ ಬಿದ್ದಳು. ತನಗೆ ಮೆಸೇಜ್ ಮಾಡಿದವ ಅಭಿ. ಈಗ ತಾನೇ ಅವನ ಪೋಸ್ಟಿಗೆ ತಾನೊಂದು ಕಾಮೆಂಟ್ ಹಾಕಿ, ತನ್ನ ಪೋಸ್ಟಿಗೆ ಅವನು ಕಾಮೆಂಟ್ ಹಾಕಿದ್ದ. ಅವನು ಈಗ ತನಗೆ ಮೆಸ್ಸೆಂಜರ್ ಮೂಲಕ ಮೆಸೇಜ್ ಕಳುಹಿಸಿದ್ದಾನೆ. ಒಂದು ಕ್ಷಣ ಮೆಸ್ಸೆಂಜರ್ ತೆಗೆದು ನೋಡುವದೇ ಬೇಡ ಅಂತ ಅಂದುಕೊಂಡರೂ ಸಹ ಮನುಷ್ಯ ಸಹಜ ಕುತೂಹಲದಿಂದ, ಮೆಸ್ಸೆಂಜರ್ ಓಪನ್ ಮಾಡಿದಳು. ಅದರಲ್ಲಿ ಅವನು ಕನ್ನಡದಲ್ಲಿಯೇ ಮೆಸೇಜ್ ಮಾಡಿದ್ದ. 

*"ನನ್ನ ಮೆಸ್ಸೇಜ್ ಓದಿ ಅದಕ್ಕೆ ಕಾಮೆಂಟ್ ಮಾಡಿದ್ದಕ್ಕೆ ಧನವಾದಳು."*

ಅದನ್ನು ಓದಿದ ಸುಮಾ ಸುಮ್ಮನೆ ಮೆಸ್ಸೆಂಜರ್ ದಿಂದ ಹೊರಗೆ ಬಂದಳು. ಏನೂ ಉತ್ತರ ನೀಡಲಿಲ್ಲ. ಆದರೆ, ಮನಸ್ಸು ಆತ ತನಗೆ ಧನ್ಯವಾದ ಹೇಳುತ್ತಿರುವಾಗ ತಾನು ಒಂದು ಥ್ಯಾಂಕ್ಸ್ ಹೇಳಿದರೆ ತನಗೇನು ನಷ್ಟವಾಗುವದಿಲ್ಲ. ಅವನು ತನಗೆ ಗೌರವ ನೀಡುತ್ತಿರುವಾಗ, ತಾನು ಅವನಿಗೆ ಕನಿಷ್ಠ ಥ್ಯಾಂಕ್ಸ್ ಹೇಳದೆ ಇದ್ದರೆ, ಅದು ಸೊಕ್ಕು ತೋರಿಸಿದಂತಾಗುತ್ತದೆ ಎಂದುಕೊಂಡು ಆಫ್ ಮಾಡಿದ ಮೊಬೈಲ್ ಮತ್ತೆ ಆನ್ ಮಾಡಿ, ಮೆಸ್ಸೆಂಜರ್ ಗೆ ಹೋಗಿ ಅವನಿಗೆ 

*"ಥ್ಯಾಂಕ್ಸ್ ಫಾರ್ ಕಾಂಪ್ಲಿಮೆಂಟ್ಸ್"*

ಎಂದಷ್ಟೇ ಬರೆದು ಮೆಸ್ಸೆಂಜರ್ ಹೊರಗೆ ಬಂದು ಆಫ್ ಮಾಡಿ ಮಲಗಿದಳು. ಆದರೆ ಮತ್ತೆ ಅವನ ಮೆಸ್ಸೇಜ್ ಬಂತು. ಅದಕ್ಕೆ ಲಕ್ಷಗೊಡದೆ ಮಲಗಿಕೊಂಡು ಬಿಟ್ಟಳು. 

     ಮರುದಿನ ಕಾಲೇಜಿಗೆ ಹೋದಾಗ ಸುಮಾ ಉತ್ಸಾಹದಿಂದ ಇದ್ದಳು ಹಿಂದಿನ ದಿನ ಗಾಲಿಬನ ಶಾಯರಿಯನ್ನು ಬಹಳ ದಿನಗಳ ನಂತರ ಅವಳಿಗೆ ಸಿಕ್ಕಿದ್ದ ಕಾರಣ ಏಕೋ ಮನ ಉಲ್ಲಸಿತವಾಗಿತ್ತು. ಗಾಲಿಬನ ಶಾಯರ್ರಿಗಳೇ ಹಾಗೆ ಇರುವದು 2-3 ಸಾಲು. 10 ರಿಂದ 12 ಶಬ್ದಗಳು. ಆದರೆ ಅದರ ಅರ್ಥ ತುಂಬಾ ಗಾಢವಾಗಿದ್ದು, ವಿಶೇಷವಾಗಿ ಹೃದಯಕ್ಕೆ ನೇರವಾಗಿ ತಾಕುತ್ತಿದ್ದವು. ಆ ಪ್ರತಿ ಶಬ್ದದ ತಾಳ ಹೃದಯ ಬಡಿತಕ್ಕೆ ಹೊಂದುವಂತಿರುತ್ತಿತ್ತು. ಅದರಲ್ಲಿ ಹಿಂದಿ ಭಾಷೆಯ ಜೊತೆಗೆ ಉರ್ದು ಭಾಷೆ ಸೇರಿಕೊಂಡು ಹಾಲಿನ ಜೊತೆಗೆ ಜೇನು ಕೂಡಿದಂತಹ ಅನುಭವ ಆಗುತ್ತಿತ್ತು. ಇಂದು ಪಾಠ ಮಾಡುವಾಗ ತನ್ನ ಕ್ಲಾಸಿನಲ್ಲಿ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಗಾಲಿಬನ ಶಾಯರಿ ಬಗ್ಗೆ ತಿಳಿಸಿ, ಅವರಿಗೂ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡಿದರಾಯಿತೆಂದುಕೊಂಡಳು. 

    ಅಂತೆಯೇ ಅವಳು ತನ್ನ ಪಾಠ ಹೇಳಲು ಕ್ಲಾಸಿಗೆ ಹೋಗಿ ಮತ್ತೆ ರೋಮಿಯೋ ಜೂಲಿಯಟ್ ಪಾಠವನ್ನು ಹೇಳುತ್ತಿದ್ದಳು. 

*"ಶೇಕ್ಷಪೀಯರ್, ತನ್ನ ಪ್ರೇಮ ಕಾವ್ಯದಲ್ಲಿ ದುರಂತ ಸೃಷ್ಟಿಸಿದ. ಅವನು ಸೃಷ್ಟಿಸಿದ ದುರಂತದಿಂದಲೇ ಅವನ ಪ್ರೇಮ ಕಾವ್ಯ ಉತ್ತುಂಗಕ್ಕೆ ಏರಿದ್ದು. ಪ್ರೀತಿ ಮಾಡುತ್ತಿರುವ ಹೃದಯಗಳನ್ನು ಮನೆತನದ ಹಗೆತನ ಸೃಷ್ಟಿ ಮಾಡಿ ಅವರ ಪ್ರೇಮ ದುರಂತಕ್ಕೀಡಾಗುವಂತೆ ಮಾಡಿದ. ಅವನು ಸೃಷ್ಸ್ಟಿಸಿದ ದುರಂತವೇ ಅವನ ಕಾವ್ಯದಲ್ಲಿ ಖಳನಾಯಕನ ಪಾತ್ರ ಮಾಡಿದೆ"*

ಎಂದು ಹೇಳಿ ವಿದ್ಯಾರ್ಥಿಗಳ ಮುಖಗಳನ್ನು ನೋಡಿದಾಗ, ಅವರ ಮುಖದಲ್ಲಿ ತಾವೇ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತಾವೇ ಅನುಭವಿಸಿ ಬಂದಿದ್ದೇವೆ ಎಂಬ ಭಾವ ಇತ್ತು. ಅದನ್ನು ಗಮನಿಸಿದ ಸುಮಾ, 

*"ಫ್ರೆಂಡ್ಸ್, ಈಗ ಒಂದು ಕೆಲಸ ಮಾಡೋಣ. ನೀವು ಸರದಿಯಂತೆ ಈ ಪ್ರೇಮ ಕಾವ್ಯದ ಮೇಲೆ ನಿಮ್ಮ ನಿಮ್ಮ ಅನಿಸಿಕೆ ಇಲ್ಲಿ ನನ್ನ ಜಾಗದಲ್ಲಿ ನಿಂತು ಹೇಳಿ. ನಾನು ಈಗ ಸ್ಟೂಡೆಂಟ್ ಆಗಿ ನಿಮ್ಮ ಬೆಂಚಿನ ಮೇಲೆ ಕುಳಿತುಕೊಳ್ಳುವೆ. ನಿಮ್ಮ ಅಭಿಪ್ರಾಯ ನನಗೆ ತಿಳಿಯಬೇಕು. ಆದರೆ ಒಂದು ನೆನಪಿರಲಿ. ನಿಮ್ಮ ಅಭಿಪ್ರಾಯ ಕೇವಲ ಪಾಠದಲ್ಲಿ ಬಂದ ವಿಷಯಕ್ಕೆ ಮಾತ್ರ ಸೀಮಿತವಾಗಿರಬೇಕು."*

ಎಂದು ಹೇಳಿ, ಮುಂದಿನ ಬೆಂಚಿನಲ್ಲಿ ಒಬ್ಬ ಹುಡುಗಿ ಪಕ್ಕಕ್ಕೆ ತಾನು ಒಂದು ಸ್ಟೂಡೆಂಟ್ ತರಹ ಕುಳಿತುಕೊಂಡಳು. ವಿದ್ಯಾರ್ಥಿಗಳಲ್ಲಿ ಅವಳು ತಮಗೆ ತಮ್ಮ ಭಾವನೆಗಳನ್ನು ಎಕ್ಸ್ಪ್ರೆಸ್ ಮಾಡುವದಕ್ಕೆ ಅವಕಾಶ ನೀಡಿದ್ದಕ್ಕೆ ಸಂತೋಷ ವ್ಯಕ್ತವಾಗುತ್ತಿತ್ತು. ಒಬ್ಬೊಬ್ಬರಾಗಿ ಬಂದು ತಮ್ಮ ಭಾವನೆ ಹೇಳತೊಡಗಿದರು. ಒಬ್ಬ ಸ್ಟೂಡೆಂಟ್ ಬಂದು 

*"ಹಲೋ ಫ್ರೆಂಡ್ಸ್, ನನ್ನ ಹೆಸರು ರಾಕೇಶ್. ನಾನು ಈ ಕಾವ್ಯವನ್ನು ಕೇಳಿದ ಮೇಲೆ, ನನಗೆ ಅನ್ನಿಸಿದ ವಿಷಯವೆಂದರೆ, ಪ್ರೀತಿ ಎನ್ನುವದು ಒಂದು ರೀತಿ ಕಹಿ ಮತ್ತು ಸಿಹಿ ಎರಡೂ ಅನುಭವವನ್ನು ಕೊಡುತ್ತದೆ. ಸಕ್ಸಸ್ ಆದರೆ ಅದು ಸಿಹಿ, ಆಗದೆ ಹೋದರೆ ಅದು ಕಹಿ. ಈ ಕಾವ್ಯದಲ್ಲಿ ಮೊದಲು ನಾಯಕ ಸಿಹಿ ಅನುಭವಿಸಿದರೂ ಸಹ ನಂತರದಲ್ಲಿ ಕಹಿ ಅನುಭವವಾಗಿ ಕೊನೆಗೆ ದುರಂತ ನಡೆದಿದೆ"*

ಎಂದು ಹೇಳಿ ಮುಗಿಸಿದ. 

ನಂತರ ಇನ್ನೊಬ್ಬ ಬಂದು

*"ನನ್ನ ಹೆಸರು ಪ್ರೀತಮ್, ನನ್ನ ಪ್ರಕಾರ ಈ ಪ್ರೇಮ ಕಾವ್ಯ ಕೇಳಿದಾಗ ಪ್ರೀತಿ ಮಾಡುವಾಗ ಮೊದಲು ಅವರ ಕುಟುಂಬವನ್ನು ನೋಡಿಕೊಂಡು ಅದರ ಬಗ್ಗೆ ಅರ್ಥ ಮಾಡಿಕೊಂಡು ಪ್ರೀತಿಸಬೇಕು. ಒಂದು ವೇಳೆ ಅವರು ಪ್ರೀತಿಗೆ ಅಡ್ಡಗೋಡೆಯಾದ್ರೆ ಸಮಸ್ಯೆ ಅಲ್ಲವೇ. ಅದಕ್ಕೆ"*

ಎಂದು ಹೇಳಿದಾಗ ಅವನ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು. ಸುಮಾ ಸಹ ಮನಃಪೂರ್ವಕವಾಗಿ ನಕ್ಕಳು. 

     ಹಾಗೆ ಒಬ್ಬರ ನಂತರ ಒಬ್ಬರು ಬಂದು ತಮ್ಮ ಅಭಿಪ್ರಾಯವನ್ನು ಹೇಳತೊಡಗಿದರು. ಹುಡುಗರ ಸರದಿಯ ನಂತರ ಹುಡುಗಿಯರು ಸರದಿಯ ಪ್ರಕಾರ ಬಂದು ಹೇಳತೊಡಗಿದರು. ಮೊದಮೊದಲು ಅವರು ತಮ್ಮ ಅಭಿಪ್ರಾಯ ಹೇಳಲು ನಾಚಿಕೊಂಡರೂ ಸಹ, ಸುಮಾ ಅವರನ್ನು ಪ್ರೋತ್ಸಾಹಿಸಿದ್ದರಿಂದ, ಅವರು ಸಹ ನಿರ್ಭಿತೆಯಿಂದ ಹೇಳತೊಡಗಿದರು. ಹುಡುಗಿಯರ ಪೈಕಿ ಒಬ್ಬ ಹುಡುಗಿ ಮಾತ್ರ ದಿಟ್ಟವಾಗಿ ತನ್ನ ಅಭಿಪ್ರಾಯ ತಿಳಿಸಿದಳು. 

*"ನನ್ನ ಹೆಸರು ರಚನಾ. ಈ ಪ್ರೇಮ ಕಾವ್ಯವನ್ನು ನಾನು ಕೇಳಿದಾಗ, ಇದು ಕೇವಲ ಒಂದು ಪ್ರೇಮ ಕಾವ್ಯವಾಗಿರದೆ, ಅದು ಹೃದಯದ ಬಡಿತವಾಗಿದೆ ಅಂತ ನನ್ನ ಭಾವನೆ. ಮನುಷ್ಯನಿಗೆ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುವದಕ್ಕೆ ಮೆದುಳು ಬೇಕು. ಆದ್ರೆ ಪ್ರೀತಿಗೆ ಕೇವಲ ಹೃದಯ ಮಾತ್ರ ಸಾಕು ಅಂತ ಹೇಳುತ್ತದೆ. ಪ್ರೀತಿ ಎಂಬ ಅನುಭೂತಿ ಅನುಭುವಸುವ ಒಂದು ಸುಂದರ ಕಲ್ಪನೆ. ಅದನ್ನು ಕೇವಲ ಅನುಭವಿಸಬೇಕು. ಪ್ರೀತಿಸುವಾಗ ಮಿಡಿಯುವ ಹೃದಯಗಳು ಯೋಚನೆ ಮಾಡುವದಿಲ್ಲ. ಬದಲಾಗಿ ಕೇವಲ ನಿಷ್ಕಲ್ಮಶ ಪ್ರೀತಿ ಮಾಡುತ್ತವೆ. ಆ ನಿಷ್ಕಲ್ಮಶ ಪ್ರೀತಿಯಲ್ಲಿ ಬೇರೆಯವರಿಗೆ ತಲೆ ಹಾಕಲು ಹಕ್ಕಿಲ್ಲದಿದ್ದರೂ ಸಹ ತಮ್ಮ ಸ್ವಾರ್ಥಕ್ಕೋಸ್ಕರ, ಅವರು ಪ್ರೀತಿಯ ಹಾಲಿನಲ್ಲಿ ಹುಳಿ ಹಿಂಡಿ ಪ್ರೀತಿಯನ್ನು ವಿಫಲಗೊಳಿಸುವದರಲ್ಲೇ ಆನಂದ ಪಡುವರು. ಅವರು ಪ್ರೀತಿ ವಿಫಲಗೊಳಿಸುವದರಲ್ಲಿ ಆನಂದ ಪಡುತ್ತಾರೆ ಆದರೆ, ಅದರಿಂದ ಹೃದಯಗಳು ಎಷ್ಟು ಮಿಡಿಯುತ್ತವೆ ಅಂತ ಮಾತ್ರ ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಆ ವಿಫಲತೆಗೆ ಇನ್ನೊಂದು ಹೆಸರೆಂದರೆ ಡಿಪ್ರೆಶನ್ ಅಥವಾ ಸೆಲ್ಫಿಶ್ ನೆಸ್ ಅಂತ ಸಹ ಅನ್ನಬಹುದು. ಯಾಕೆಂದರೆ ಅಲ್ಲಿ ಅವರು ಹೃದಯಗಳನ್ನು ಗಮನಿಸುವದಿಲ್ಲ. ಬದಲಾಗಿ ತಮ್ಮ ಇಚ್ಛೆ ಪ್ರಕಾರ ಪ್ರೀತಿ ಒಡೆದು ಹೋದರೆ ಸಾಕು ಅಂತ ಅವರ ಭಾವನೆ. ಅದಕ್ಕೆ ಹೆಚ್ಚಾಗಿ ಪ್ರೇಮ ಕಥೆಗಳಲ್ಲಿ ವಿಫಲತೆ ಜಾಸ್ತಿ ಕಾಣೋದು. ಆದರೆ ಅದೇ ಪ್ರೇಮಕ್ಕೆ, ಹೃದಯಾಂತರಾಳದಿಂದ ಪ್ರೋತ್ಸಾಹ ನೀಡಿದರೆ ಸಫಲತೆ ಆಗುವದರಲ್ಲಿ ಸಂದೇಹವಿಲ್ಲ. ಇನ್ನೂ ಪ್ರೀತಿ ಪ್ರೇಮ ವಿಷಯದಲ್ಲಿ ನಾವು ಹೃದಯದಿಂದ ಬಡವರಾಗಿದ್ದೇವೆ, ಅಂತ ಹೇಳಲಿಕ್ಕೆ ಇಚ್ಛೆ ಪಡ್ತೀನಿ"*

ಎಂದು ಹೇಳಿ ಆ ಯುವತಿ ತನ್ನ ಮಾತು ಮುಗಿಸಿದಳು. ಅವಳ ಮಾತು ಮುಗಿದ ಮೇಲೆ, ಎಲ್ಲರೂ ಚಪ್ಪಾಳೆ ತಟ್ಟಿದರು. ಸುಮಾ ಸಹ ಅವಳ ಮಾತಿಗೆ ಮರುಳಾಗಿ ತನಗೆ ಅರಿವಿಲ್ಲದಂತೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದಳು. ಹಾಗೆ ರಚನಾ ತನ್ನ ಮಾತನ್ನು ಮುಗಿಸಿ ಸುಮಾ ಹತ್ತಿರ ಬಂದಾಗ, *"ರಚನಾ, ರಿಯಲಿ ವಂಡರ್ಫುಲ್. ತುಂಬಾ ಚನ್ನಾಗಿ ಎಕ್ಸ್ಪ್ರೆಸ್ ಮಾಡಿದೆ ಭಾವನೆಗಳನ್ನು. ನಿಜವಾಗಿ."*

ಎಂದು ಹೇಳುತ್ತಿರುವಷ್ಟರಲ್ಲಿ, ಅವಳ ಗೆಳತಿಯೊಬ್ಬಳು,

*"ಮಿಸ್, ಅವಳು ಸಹ ಲವ್ ಮಾಡಿ ಮಾಡುವೆ ಫಿಕ್ಸ್ ಮಾಡಿಕೊಂಡಿದ್ದಾಳೆ ಅದಕ್ಕೆ ಅವಳಿಗೆ ಅದರ ಎಕ್ಸ್ಪೀರಿಯೆನ್ಸ್ ಇದೆ"*

ಎಂದು ಹೇಳಿದಾಗ ಎಲ್ಲರೂ ನಗತೊಡಗಿದರು. ರಚನಾ ನಾಚಿ ನೀರಾದಳು. 

*"ರಚನಾ ಕಂಗ್ರಾಟ್ಸ್. ನೀನು ಲವ್ ಮಾಡಿದ್ದರಿಂದ ನಿನಗೆ ಈ ರೀತಿಯಾಗಿ ಭಾವನೆಗಳನ್ನು ಹಂಚಿಕೊಳ್ಳುವದಕ್ಕೆ ಸಾಧ್ಯವಾಗಿದ್ದು."*

*"ಹೌದು ಮಿಸ್"*

*"ಸರಿ ಲವ್ ಹೇಗೆ ಮಾಡಿದಿರಿ"*

ಎಂದು ಕುತೂಹಲದಿಂದ ಸುಮಾ ಅವಳನ್ನು ಕೇಳಿದಳು. ಎಷ್ಟಾದರೂ ಹೆಣ್ಣು ಮನಸ್ಸು, ಅದು ಕ್ಲಾಸ್ ತಾನು ಲೆಕ್ಚರರ್ ಅಂತ ಮರೆತಿದ್ದಳು. ಪ್ರೀತಿಯ ವಿಷಯ ಅವಳಿಗೆ ಆ ರೀತಿ ತನ್ನನ್ನು ತಾನು ಮರೆಯುವಂತೆ ಮಾಡಿತ್ತು. ಅವಳ ಪ್ರಶ್ನೆಯಿಂದ ರಚನಾ ನಾಚುತ್ತ, 

*"ಮಿಸ್, ಅದು .. ಅದು .. "*

ಎಂದು ಹೇಳುತ್ತಾ ತುಂಬಾ ನಾಚಿದಳು. ಅವಳ ನಾಚಿದ್ದು ನೋಡಿದ ಸುಮಾ 

*"ಹೋಗಲಿ ಬಿಡು, ಅದು ನಿನ್ನ ಪರ್ಸನಲ್ ವಿಷಯ ನಾನು ಬಹುಶ ಕೆಳಬಾರದಾಗಿತ್ತು"*

ಎಂದು ಹೇಳಿದಾಗ ರಚನಾ,

*"ಹಾಗೇನಿಲ್ಲ ಮಿಸ್, ಆದರೆ ನಾನು ನಿಮ್ಮ ಹತ್ತಿರ ಪರ್ಸನಲ್ ಆಗಿ ಹೇಳುತ್ತೇನೆ ಇಲ್ಲಿ ಬೇಡ"*

ಎಂದು ಹೇಳಿದಳು. ಅಷ್ಟರಲಿ ಬೆಲ್ ಸದ್ದಾಯಿತು. ಸುಮಾ ಸ್ಟಾಫ್ ರೂಮಿನ ಕಡೆಗೆ ಹೊರಟಳು. ಹೋಗುವಾಗ ಹಾಗೆ, ಹುಡುಗರು ಮತ್ತು ಹುಡುಗಿಯರು ಎಷ್ಟು ರೀತಿಯಾಗಿ ಪ್ರೀತಿಯ ಬಗ್ಗೆತಮ್ಮ ವ್ಯಾಖ್ಯಾನ ನೀಡಿದ್ದರು ಎಂದು ಯೋಚನೆ ಮಾಡುತ್ತಾ ಹೋದಳು. ಸ್ಟಾಫ್ ರೂಮಿಗೆ ಹೋಗುವಷ್ಟರಲ್ಲಿ ಕಾವೇರಿ, ಟಿಫನ್ ಮಾಡುವದಕ್ಕೆ ಸುಮಾಳ ದಾರಿ ಕಾಯುತ್ತ ಕುಳಿತಿದ್ದಳು. ಸುಮಾ ಬರುತ್ತಿದ್ದಂತೆ ಅವಳಿಗೆ ತನ್ನ ಜೊತೆಗೆ ಟಿಫಿನ್ ಮಾಡಲು ಕರೆದು ಬಲವಂತ ಮಾಡಿ ತನ್ನ ಟಿಫಿನದಲ್ಲಿ ಅವಳಿಗೂ ತಿನ್ನಿಸಿದಳು. ಅವಳ ಜೊತೆ ಮಾತನಾಡುತ್ತ ಹಾಗೆ ಕ್ಲಾಸಿನಲ್ಲಿ ನಡೆದ ಎಲ್ಲ ವಿಷಯವನ್ನು ಸುಮಾ ಮರೆತುಬಿಟ್ಟಳು. ಅವಳು ಟಿಫಿನ್ ಮಾಡಿ ಮುಗಿಸಿದಾಗ, ಮುಂದೆ ಅವಳಿಗೆ ಕ್ಲಾಸ್ ಇರಲಿಲ್ಲ. ಹಾಗೆ ಸುಮ್ಮನೆ ಕುಳಿತಿರುವ ಬದಲು, ಲೈಬ್ರರಿಕಡೆಗೆ ಹೋದರಾಯಿತು ಎಂದುಕೊಂಡು ಸ್ಟಾಫ್ ರೂಮಿನಿಂದ ಹೊರಗೆ ಬಂದಾಗ, ಅಲ್ಲಿ ರಚನಾ ನಿಂತಿದ್ದಳು. ಅವಳನ್ನು ನೋಡುತ್ತಿದ್ದಂತೆ, ಸುಮಾಳಿಗೆ ಅವಳು ಕ್ಲಾಸ್ ರೂಮಿನಲ್ಲಿ ಹೇಳಿದ ವಿಷಯ ನೆನಪಾಯಿತು. ಲವ್ ಸ್ಟೋರಿ ಅಂದರೆ ಒಂದು ರೀತಿಯಲ್ಲಿ ಇಂಟೆರೆಸ್ಟಿಂಗ್ ವಿಷಯ. ಆದರೂ ಇಲ್ಲಿ ತಾನು ಲೆಕ್ಚರರ್ ಎಂಬುದನ್ನು ನೆನಪಿಸಿಕೊಂಡು, ಮನದಲ್ಲಿ ಕುತೂಹಲವಿದ್ದರೂ ಸಹ, ಅದನ್ನು ತೋರಗೊಡದೆ, 

*"ಹೇಳು ರಚನಾ"*

ಎಂದಾಗ ಆ ಯುವತಿ ತಲೆ ತಗ್ಗಿ ನಾಚುತ್ತಾ, ಒಂದು ರೀತಿಯಲ್ಲಿ ಖುಷಿಯಾದ ಮನದಿಂದ, 

*"ಏನಿಲ್ಲ ಮಿಸ್, ನೀವು ನನ್ನ ಲವ್ ಸ್ಟೋರಿ ಬಗ್ಗೆ ಕೇಳಿದಿರಲ್ಲ, ಅದನ್ನೇ ಹೇಳೋಣ ಅಂತ ಬಂದೆ"*

*"ಓ ಅದಾ, ಸರಿ ಹೇಳಮ್ಮ"*

*"ನಾನು ಮತ್ತು ನನ್ನ ವುಡ್ ಬಿ ಇಬ್ರೂ ಫೇಸ್ಬುಕ್ ದಲ್ಲಿ ಭೇಟಿಯಾಗಿದ್ದೆವು. ಮೊದಲು ಬರಿ ಸ್ನೇಹಿತರಾಗಿದ್ದೆವು. ನಂತರ ಹಾಗೆ ಇಬ್ಬರೂ ಚಾಟ್ ಮಾಡುತ್ತಾ ಮಾಡುತ್ತಾ, ಒಬ್ಬರ ಫೋಟೋ ಒಬ್ಬರು ಎಕ್ಸ್ಚೇಂಜ್ ಮಾಡಿಕೊಂಡು ಮಾತನಾಡುತ್ತಿದ್ದೆವು. ಹಾಗೆ ಮಾತನಾಡುತ್ತಲೇ, ಅವರ ಜೊತೆಗೆ ನನ್ನ ಲವ್ ಆಯಿತು. ನಾನು ಈ ವಿಷಯ ಮನೆಯವರಿಗೆ ತಿಳಿಸಲು ಹೆದರಿದ್ದೆ. ಆದರೆ ಅವರೇ ತಮ್ಮ ತಂದೆ ತಾಯಿಗಳನ್ನು ಕರೆದುಕೊಂಡು ನಮ್ಮ ಮನೆಯ ತನಕ ಬಂದು, ಮದುವೆ ವಿಷಯ ಪ್ರಸ್ತಾಪ ಮಾಡಿದಾಗ, ನನ್ನ ತಂದೆ, ಸಹ ಒಪ್ಪಿಕೊಂಡರು"*

ಎಂದು ಹೇಳಿದಳು ಅವಳ ಮಾತನ್ನು ಕೇಳಿದ ಸುಮಾ 

*"ಅಂದರೆ ನಿನ್ನದು ಫೇಸ್ ಬುಕ್ ಲವ್"*

ಎಂದು ನಕ್ಕಳು. ಅದಕ್ಕೆ ರಚನಾ ಹೌದು ಎಂದು ತಲೆಯಲ್ಲಾಡಿಸಿದಳು. 

*"ಆಯ್ತು ನಿನಗೆ ಒಳ್ಳೆಯದಾಗಲಿ."*

ಎಂದು ಹೇಳಿ ಅಲ್ಲಿಂದ ಲೈಬ್ರರಿಗೆ ಹೊರಟಳು ಸುಮಾ. ಫೇಸ್ ಬುಕ್ ದಲ್ಲಿ ಲವ್ ಆಗಿದ್ದ ವಿಷಯ ಮೊದಲ ಬಾರಿಗೆ ಕೇಳಿದ್ದಳು. ಸಾಮಾಜಿಕ ಜಾಲತಾಣಕ್ಕೆ ಇಷ್ಟೊಂದು ಶಕ್ತಿಯೇ,ಎಂದು ಯೋಚಿಸುತ್ತಿದ್ದಳು. ಲೈಬ್ರರಿಗೆ ಹೋಗಿ ಮರುದಿನ ತಾನು ಪಾಠ ಹೇಳಬೇಕಾಗಿದ್ದ ವಿಷಯದ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿ, ನಂತರ ಮನೆಗೆ ಹೋದಳು. 

                         



5

 

     ಎಂದಿನಂತೆ, ಕೆಲಸ ಮುಗಿಸಿ, ರಾತ್ರಿ ಫೇಸ್ ಬುಕ್ ತೆಗೆಯುತ್ತಿರುವಾಗ, ಅವಳಿಗೆ ರಚನಾಳ ಪ್ರಸಂಗ ನೆನಪಾಯಿತು. ಒಂದು ಕ್ಷಣ ಅದನ್ನು ನೆನಪಿಸಿಕೊಂಡು ಮನದಲ್ಲಿ ಹುಚ್ಚು ಹುಡುಗಿ ಎಂದು ಅಂದುಕೊಳ್ಳುತ್ತ ಫೇಸ್ ಬುಕ್ ಓಪನ್ ಮಾಡಿದಳು. 

    ಅವಳು ಓಪನ್ ಮಾಡುತ್ತಿದ್ದಂತೆ, ಅವಳ ಮೆಸ್ಸೆಂಜರ್ ದಲ್ಲಿ ಮೆಸೇಜ್ ಬಂದು ಕುಳಿತಿದ್ದವು. ಅವುಗಳನ್ನು ಆಮೇಲೆ ನೋಡಿದರಾಯಿತು ಎಂದುಕೊಂಡು ಮೊದಲು ತನ್ನ ಟೈಮ್ ಲೈನ್ ನೋಡಿದಳು. ಅವಳು ತನ್ನ ಟೈಮ್ ಲೈನ್ ನೋಡುತ್ತಿದ್ದಂತೆ, ಅವಳಿಗೆ ಆಶ್ಚರ್ಯವಾಯಿತು. ಅವಳು ತನ್ನ ಮನಸ್ಸಿನ ಸಮಾಧಾನಕ್ಕೆ ಹಾಕಿದ್ದ ಪೋಸ್ಟಗಳಿಗೆ ಅಭಿ ಎಲ್ಲದಕ್ಕೂ ಲೈಕ್ ಮಾಡಿದ್ದ. ಅಲ್ಲದೆ ಕೆಲವೊಂದಕ್ಕೆ *"mam your posts are super"* ಅಂತ ಸಹ ಕಾಮೆಂಟ್ ಮಾಡಿ ಕಳುಹಿಸಿದ್ದ. 

ಅದನ್ನು ನೋಡಿದ ಸುಮಾ, ಅವನು ತನ್ನ ಎಲ್ಲ ಪೋಸ್ಟಗಳನ್ನು ನೋಡಿದ್ದಾನೆ ಎಂದು ಅವಳಿಗೆ ಗೊತ್ತಾಯಿತು. ಅವನು ಇಂದು ಏನು ಪೋಸ್ಟ್ ಹಾಕಿದ್ದಾನೆ ಅಂತ ಅವನ ಟೈಮ್ ಲೈನ್ ತೆಗೆದು ನೋಡಿದಾಗ, ದಿನಾಲು ಅವನು ಒಂದಾದರೂ ಪೋಸ್ಟ್ ಹಾಕುತ್ತಿದ್ದ. ಆದರೆ ಇಂದು ಮಾತ್ರ ಅವನು ಯಾವುದೇ ಪೋಸ್ಟ್ ಹಾಕಿರಲಿಲ್ಲ. ಅವನು ಪೋಸ್ಟ್ ಹಾಕುವಾದಾಗ ಇರುತ್ತಿದ್ದ ಅವನೆಡೆಗಿನ ಕುತೂಹಲ ಇಂದು ಕಾಳಜಿಯಾಗತೊಡಗಿತ್ತು. ಬಹುಶ ಅವನು ಊರಲ್ಲಿ ಇರಲಿಕ್ಕಿಲ್ಲ, ಇಲ್ಲ ಅವನ ನೆಟ್ ಮುಗಿದಿರಬಹುದು, ಇಲ್ಲ ಬ್ಯಾಟರಿ ಹೋಗಿರಬಹುದು ಇತ್ಯಾದಿಯಾಗಿ ಅಂದುಕೊಂಡು ತನ್ನ ಮನಸ್ಸಿಗೆ ತಾನೇ ಸಮಾಧಾನ ಪಡಿಸಿಕೊಂಡಳು. 

ಯಾಕೋ ಇಂದು ತಾನು ಯಾವುದಾದರೊಂದು ಒಳ್ಳೆಯ ಪೋಸ್ಟ್ ಹಾಕಬೇಕೆಂದುಕೊಂಡು ಸುಮಾರು ೧೫ ನಿಮಿಷ ಯೋಚನೆ ಮಾಡಿ ಕೊನೆಗೆ ಈ ಕೆಳಗಿನಂತೆ ಪೋಸ್ಟ್ ಹಾಕಿದಳು. 

*"ಬೇತಾಬ ಆಂಖೆ ಬೆಚೈನ್ ದಿಲ್

ಬೇವಫಾ ಸಾಸೆ ಬೇಬಸ್ ಜಿಂದಗಿ

ಬೆಹಾಲ್ ಹಮ್ ಬೆಖಬರ್ ತುಮ "*

ಎಂದು ಎಂದಿನಂತೆ ಅವಳು ಪೋಸ್ಟ್ ಹಾಕಿದರೂ ಸಹ, ಆ ಪೋಸ್ಟ್ ಅಭಿ ನೋಡಲಿ ಅವನು ಅದಕ್ಕೆ ಪ್ರತಿಯಾಗಿ ಏನಾದರೂ ಹಾಕಲಿ ಎಂದು ಮನದಲ್ಲಿ ಅಂದುಕೊಂಡೆ ಹಾಕಿದ್ದಳು. ಆ ರೀತಿ ಅವಳು ಪೋಸ್ಟ್ ಹಾಕಿ ಉಳಿದ ತನ್ನ ಟೈಮ್ ಲೈನ್ ದಲ್ಲಿ ಬಂದ ಪೋಸ್ಟ್ಗಳನ್ನು ನೋಡುತ್ತಿರುವಾಗ ತನ್ನ ಯಾವುದೋ ಪೋಸ್ಟಿಗೆ ಯಾರೋ ಲೈಕ್ ಕೊಟ್ಟಿರುವದು ಮೆಸೇಜ್ ಬಂತು. ಯಾರು ಇಷ್ಟು ಬೇಗನೆ ತನ್ನ ಪೋಸ್ಟಿಗೆ ಲೈಕ್ ಕೊಟ್ಟಿರಬಹುದು ಎಂದುಕೊಂಡು ತೆಗೆದು ನೋಡಿದರೆ, ಈಗ ತಾನೇ ಹಾಕಿದ ಪೋಸ್ಟಿಗೆ ಅಭಿ ಲೈಕ್ ಕೊಟ್ಟಿದ್ದಾನೆ. ಅದನ್ನು ಕಂಡ ಸುಮಾಳಿಗೆ ಒಂದು ಕ್ಷಣ ತಲೆ ಓದಲಿಲ್ಲ. ತಾನು ತನ್ನ ಪೋಸ್ಟ್ ಹಾಕಿ ಇನ್ನು ೫ ನಿಮಿಷ ಸಹ ಆಗಿಲ್ಲ ಅಷ್ಟರಲ್ಲಿ ಅವನು ಲೈಕ್ ಮಾಡಿಬಿಟ್ಟಿದ್ದಾನೆ. ಅಂದರೆ, ಅವನು ಆನ್ಲೈನ್ ದಲ್ಲಿ ಇದ್ದಾನೆ ಫೇಸ್ ಬುಕ್ ನೋಡ್ತಿದ್ದಾನೆ. ಆದರೆ ಅವನು ಇವತ್ತು ಯಾಕೋ ಪೋಸ್ಟ್ ಹಾಕಿಲ್ಲ, ಎಂದುಕೊಳ್ಳುವಷ್ಟರಲ್ಲಿ, ಅವಳ ಮೆಸ್ಸೆಂಜರ್ ಗೆ ಯಾರೋ ಮೆಸೇಜ್ ಕಳುಹಿಸಿದರು. ಅದನ್ನು ತೆಗೆದು ನೋಡಿದಾಗ ಅಭಿ 

*ಹಾಯ್*"

ಎಂದು ಬರೆದು ಕಳುಹಿಸಿದ್ದ. ಅದನ್ನು ನೋಡಿದ ಸುಮಾ, ಆ ಮೆಸೇಜ್ ಗೆ ಉತ್ತರ ಹೇಳದೆ ಹೊರಗೆ ನಿರ್ಗಮಿಸಬೇಕೇನುವಷ್ಟರಲ್ಲಿ, ಅವಳು ಅವನು ಹೀಗೇಕೆ ಇಲ್ಲಿ ಮೆಸೇಜ್ ಕಳುಹಿಸುತ್ತಿದ್ದಾನೆ ಎಂದುಕೊಂಡು 

*"ಹೇಳಿ"*

ಎಂದು ಅವನಿಗೆ ಮೆಸೇಜ್ ಟೈಪ್ ಮಾಡಿ ಕಳುಹಿಸಿದಳು. ಸಾವಕಾಶವಾಗಿ ಅವರಿಬ್ಬರ ನಡುವೆ ಚಾಟ್ ಶುರುವಾಯಿತು.

*"ಹೇಗಿದ್ದೀರಿ?"*

*"ಜೀವಂತವಾಗಿದ್ದೀನಿ ಅಷ್ಟೇ"*

*"ಒಹ್ ನೀವು ಸಿಟ್ಟಿನಲ್ಲಿದ್ದೀರಿ ಅಂದಹಾಗಾಯಿತು."*

*"ನನಗೇಕೆ ಸಿಟ್ಟು?"*

*"ನಿಮ್ಮ ಉತ್ತರ ಹಾಗಿತ್ತು"*

*"ಅದು ನಾನು ನಾರ್ಮಲ್ ಆಗಿದ್ದಾಗ ಕೊಡುವ ಉತ್ತರ"*

*"ಅಂದರೆ ಸಿಟ್ಟು ಬಂದಾಗ ಇದಕ್ಕಿಂತಲೂ ಕೆಟ್ಟ ರೀತಿಯಲ್ಲಿ ಉತ್ರ ಕೊಡ್ತೀರಿ ಅಂದಂಗಾಯ್ತು"*

ಎಂದಾಗ ಅದಕ್ಕೆ ಉತ್ತರ ನೀಡದೆ ಸುಮ್ಮನೆ ಕುಳಿತುಕೊಂಡಳು. ಮುಂದೆ ಏನು ಮಾಡುತ್ತಾನೆ ನೋಡೋಣ ಎಂದುಕೊಂಡಳು. ಒಂದೆರಡು ನಿಮಿಷ ಸುಮ್ಮನಾದ ಅವನು,

*"ನಿಮ್ಮ ಊರು ಎಲ್ಲಿದೆ?"*

*"ಭೂಮಿಯ ಮೇಲಿದೆ"*

ಎಂದು ಉತ್ತರಿಸಿದಳು. 

*"ನಿಮ್ ಊರಿನ ಹೆಸರು ಹೇಳ್ರಿ ಅಂತ ನಾನು ಕೇಳಿದ್ದು"*

*"ಅದೆಲ್ಲ ನಿಮಗ್ಯಾಕ್ರೀ?"*

*"ಸುಮ್ಮನೆ ಕೇಳಿದೆ"*

*"ನಾನು ಸುಮ್ಮನೆ ಹೇಳೊಲ್ಲ. ನಿಮಗೆ ಬೇರೆ ಕೆಲಸ ಇಲ್ವಾ. ಹೆಣ್ಣುಮಕ್ಕಳನ ಮಾತಾಡಿಸುತ್ತ ಇರೋದೇ ನಿಮ್ ಕೆಲಸಾನ?"*

*"ಅಯ್ಯೋ, ಹಾಗೆಲ್ಲ ಹೇಳಬೇಡಿ, ನಾನು ತುಂಬಾ ಡಿಸೆಂಟ್ ಮ್ಯಾನ್"*

*"ಇಷ್ಟರಲ್ಲೇ ಗೊತ್ತಾಗ್ತಾ ಇದೆ"*

*"ಹೋಗ್ಲಿ ಫೇಸ್ ಬುಕ್ ಪ್ರೊಫೈಲ್ ದಲ್ಲಿ ನಿಮ್ಮ ಹೆಸರು ನಿಮ್ಮ ರಿಯಲ್ ನೇಮ್ ಇಲ್ಲ ಹಾಗೆ ಬೇರೆ ಹೆಸರಿನಲ್ಲಿ ಫೇಸ್ ಬುಕ್ ಪ್ರೊಫೈಲ್ ಕ್ರಿಯೇಟ್ ಮಾಡಿದ್ದೀರಾ?"*

*"ಇಂಥ ಮನೆಹಾಳ ಕೆಲಸಗಳನ್ನು ನಿಮ್ಮಂಥವರೇ ಮಾಡೋದು"*

*"ಒಹ್ ಅಂದರೆ ಅದು ನಿಮ್ಮ ರಿಯಲ್ ನೇಮ್ ಅಂದಹಾಗಾಯಿತು. ಸರಿ, ನಿಮ್ಮ ಇವತ್ತಿನ ಪೋಸ್ಟ್ ತುಂಬಾ ಚನ್ನಾಗಿದೆ"*

*"ಥ್ಯಾಂಕ್ಸ್"*

*"ನಂ ಪೋಸ್ಟ್ ನೋಡಿದ್ರ"*

*"ನನಗೆ ಬೇರೆಯವರ ಪೋಸ್ಟ್ ನೋಡುವ ಅಭ್ಯಾಸವಿಲ್ಲ"*

*"ಹಾಗಾದರೆ ನಾನು ಬೇರೆಯವರ ಪೋಸ್ಟ್ ನೋಡ್ತೀನಿ ಅಂತ ನಿಮಗೆ ಅನ್ನಿಸ್ತಾಇದೆಯ?"*

*"ನನ್ನ ಟೈಮ್ ಲೈನ್ ಪೋಸ್ಟ್ ನೋಡಿ ಕಾಮೆಂಟ್ ಮಾಡಿದ್ದು ಕಂಡ ಮೇಲೆ ನಾನು ಹೇಳಿದ್ದು."*

*"ಓ ಹೊ ಈಗಾಗಲೇ ನೀವು ಎಲ್ಲ ವಿಷಯ ತಿಳಿದುಕೊನಿದ್ದಿರಿ"*

*"ಹೌದು*"

*"ಸರಿ, ನನ್ನ ಪೋಸ್ಟ್ ನಿಮಗೆ ಹೇಗೆ ಅನ್ನಿಸಿದವು?*"

*"ಅಷ್ಟೇನೂ ಚನ್ನಾಗಿಲ್ಲ"*

*"ಹೋಗಲಿ ಬಿಡಿ, ನನ್ನಪೋಸ್ಟ್ ನಿಮ್ಮ ಟೇಸ್ಟ್ ಗೆ ಸಿಗುತ್ತಿಲ್ಲ."*

*"ನೀವು ಮ್ಯಾರೀಡ್?"*

*"ಯಾಕೆ ಅನ್ ಮ್ಯಾರೀಡ್ ಆಗಿದ್ರೆ ಹುಡುಗನ್ ಹುಡ್ಕತಿರಾ?"*

*"ಇಲ್ಲ ನಾನೇ ಪ್ರೊಪೋಸ್ ಮಾಡ್ತೀನಿ "*

ಎಂದಾಗ ಅವನ ಮಾತಿನಿಂದ ಗಾಬರಿಯಾದ ಸುಮಾ, ಅವನೇನಾದರೂ ಹಾಗೆ ಮಾಡಿಬಿಟ್ಟಾನು ಎಂದು ಹೆದರಿ

*"ಹೌದು ಮ್ಯಾರೀಡ್. ಈಗೇನ್ ಮಾಡ್ತೀರಾ?"*

*"ನೀವು ಮ್ಯಾರೀಡ್ ಅಂದ ಮೇಲೆ ಇನ್ನೆನ ಮಾಡೋಕಾಗುತ್ತೆ"*

*"ಓಕೆ ಗುಡ್ ನೈಟ್"*

*"ಅಯ್ಯೋ ಸ್ವಲ್ಪ ತಡಿರಿ ನಿಮ್ ಜೊತೆ ಮಾತಾಡಬೇಕು"*

*"ನಿಮ್ ಪರಿಚಯ ಸಹ ನಂಗೆ ಇಲ್ಲ. ನೀವ್ಯಾರಿ ನಂ ಜೊತೆ ಮಾತಾಡೋಕೆ?"*

*"ನಿಮ್ ಫ್ರೆಂಡ್ ರೀ ಫೇಸ್ ಬುಕ್ ಫ್ರೆಂಡ್"*

*"ನೀವು ಫ್ರೆಂಡ್ ಆದ ಮಾತ್ರಕ್ಕೆ ನಾನು ಮಾತಾಡಬೇಕು ಅಂತ ಯಾವುದಾದರೂ ರೂಲ್ ಇದೆ ಏನ್ರಿ?"*

*"ಅಯ್ಯೋ ಹಾಗಲ್ಲ ನಾನು ಹೇಳಿದ್ದು. ಫ್ರೆಂಡ್ಸ್ ಜೊತೆ ಮಾತಾಡಿದ್ರೆ ಮನಸು ಹಗುರವಾಗುತ್ತದೆ ಅದಕ್ಕೆ ಹೇಳಿದೆ"*

*"ಅಂದರೆ ನಿಮಗೆ ಏನಾದರೂ ಮನಸ್ಸಿನಲ್ಲಿ ದುಃಖ ಇದೆಯಾ?"*

*"ಹಾಗೇನಿಲ್ಲರೀ, ದುಃಖ ಇದ್ರೆ ಮಾತ್ರ ಫ್ರೆಂಡ್ಸ್ ಜೊತೆಗೆ ಮಾತಾಡ್ತಾರ?"*

*"ನೀವೇ ಹೇಳಿದ್ರಿ ಮನಸು ಹಗುರವಾಗುತ್ತದೆ ಅಂತ, ಅದಕ್ಕೆ ಇರಬಹುದೇನೋ ಅಂತ ಅಂದ್ಕೊಂಡೆ"*

*"ರೀ ನೀವು ತುಂಬಾ ಹುಷಾರು. ನಿಮ್ ಜೊತೆ ಮಾತಾಡೋದು ಅಷ್ಟು ಸರಳ ಅಲ್ಲ ಅಂತ ನಂಗೆ ಅನ್ನಿಸ್ತಾ ಇದೆ"*

*"ಹೋಗ್ಲಿ ಮಾತಾಡಬೇಡಿ, ಹೋಗ್ತೀನಿ ಗುಡ್ ನೈಟ್"*

ಎಂದು ಅವನನ್ನು ಚಾಟ್ ಮಾಡುತ್ತಲೇ ಕಾಡತೊಡಗಿದಳು.

*"ರೀ, ಇರ್ಲಿ ಬಿಡಿ. ಇನ್ನೊಂದು ಸ್ವಲ್ಪ ಹೊತ್ತು ಚಾಟ್ ಮಾಡೋಣ ನಂತ್ರ ನಾನು ಹೋಗ್ತೀನಿ"*

ಎಂದು ಅವನು ಗೋಗರೆಯುವದನ್ನು ಕಂಡ ಅವಳಿಗೆ ನಗು ಉಕ್ಕಿ ಬರುತ್ತಿತ್ತು. ಆದರೆ ಅವನನ್ನು ಆ ರೀತಿಯಾಗಿ ಕಾಡುತ್ತಿದ್ದರೆ ಅವಳಿಗೆ ಮಜಾ ಬರುತ್ತಿತ್ತು. ಮಾತಿನಿಂದ ವ್ಯಕ್ತಿ ಒಳ್ಳೆಯವನು ಇರಬಹುದು ಎಂದುಕೊಂಡಳು. ಆದರೆ, ಫೇಸ್ ಬುಕ್ ಜನ ಹೇಗೆ ಇರ್ತಾರೋ ಅವರ ಸಹವಾಸ ಹೇಗಿರುತ್ತದೆಯೋ ಗೊತ್ತಿಲ್ಲ. ಇನ್ನು ಸ್ವಲ್ಪ ಹೊತ್ತು ನೋಡೋಣ, ಅವನ ಸ್ವಭಾವ ಅವನ ಮಾತಿನಿಂದ ಗೊತ್ತಾಗುತ್ತಿದೆ. ಒಂದು ವೇಳೆ ಸರಿ ಅನ್ನಿಸದಿದ್ದರೆ ಬ್ಲಾಕ್ ಮಾಡಿದರೆ ಆಯಿತು ಎಂದುಕೊಂಡಳು. ಫೇಸ್ ಬುಕ್ ದಲ್ಲಿ ಅವಳು ಇಲ್ಲಿಯವರೆಗೆ ಯಾರ ಜೊತೆಗೂ ಚಾಟ್ ಮಾಡಿರಲಿಲ್ಲ. ಯಾಕೆಂದರೆ ಅವಳಿಗೆ ಫೇಸ್ ಬುಕ್ ದಲ್ಲಿ ಫ್ರೆಂಡ್ಸ್ ಅಂತ ಇದ್ದದ್ದು ಅವಳ ಸ್ಟೂಡೆಂಟ್ಸ್. ಹೀಗಾಗೋ ಓಪನ್ ಮೈಂಡೆಡ್ ವ್ಯಕ್ತಿಗಳ ಜೊತೆಗೆ ಮಾತನಾಡುವ ಅವಕಾಶವೇ ಅವಳಿಗೆ ಸಿಕ್ಕಿರಲಿಲ್ಲ. ಬಹಳ ದಿನಗಳ ನಂತರ ಒಬ್ಬ ವ್ಯಕ್ತಿ ಸಿಕ್ಕಿದ್ದಾನೆ. ಅದೂ ಅಪರಿಚಿತ. ತನ್ನನ್ನು ತಾನೇ ಪರಿಚಯ ಮಾಡಿಕೊಳ್ಳುತ್ತಲಿದ್ದಾನೆ. ಆದ್ರೆ ಅವನು ಎಲ್ಲಿಯೋ ಕುಳಿತು ತನ್ನ ಜೊತೆಗೆ ಚಾಟ್ ಮಾಡುತ್ತಾ ಮಾತಾಡುತ್ತಿದ್ದಾನೆ. ಮುಖತವಾಗಿ ಅಲ್ಲ. ಹೇಗೂ ತನ್ನ ಫೋಟೋ ಫೇಸ್ ಬುಕ್ ದಲ್ಲಿ ಹಾಕಿಲ್ಲ ಮತ್ತು ಇಷ್ಟು ದಿನ ತಾನೂ ಸಹ ಯಾರ ಜೊತೆಗೂ ಹೀಗೆ ಮೋಡಾತ ಮಾಡುತ್ತಾ ಮಾತಾಡಿಲ್ಲ. ಅವಕಾಶ ಸಿಕ್ಕಿದ್ದರೆ ತಾನೇ ಮಾತಾಡೋದು. ನೋಡಿದರಾಯಿತು ಎಂದುಕೊಂಡು ಅವನಿಗೆ ಮತ್ತೆ ಮಾತನಾಡಿಸತೊಡಗಿದಳು. 

*"ಸರಿ ಹೇಳಿ, ಆದರೆ ನಿಮ್ಮ ಜೊತೆಗೆ ಮಾತನಾಡಬೇಕಾದರೆ ನನ್ನದು ಒಂದು ಕಂಡೀಶನ್ ಇದೆ"*

*"ಹೇಳಿ*"

*"ಯಾವುದೇ ಕಾರಣಕ್ಕೂ ವಯಕ್ತಿಕ ವಿಚಾರವಾಗಲಿ ಮತ್ತು ಅಶ್ಲೀಲ ವಿಚಾರವಾಗಲಿ ಮಾತಾಡಬಾರದು. ಒಂದು ವೇಳೆ ಅಂತಹ ಮಾತೇನಾದರೂ ಬಂದರೆ, ನಾನು ನಿಮ್ಮನ್ನ ಬ್ಲಾಕ್ ಮಾಡ್ತೀನಿ"*

*"ಅಯ್ಯೋ, ನಾನು ಹಾಗೆಲ್ಲ ಮಾತಾಡೋಲ್ಲರೀ, ನನಗೆ ಅಶ್ಲೀಲ ಅಂದ್ರೆ ಆಗೋದೇ ಇಲ್ಲ. ಇನ್ನು ನಿಮ್ಮ ಪರ್ಸನಲ್ ವಿಷಯ ಕೇಳೋಕೆ ನಾನೇನಾದರೂ ನಿಮ ಲವರ್?. ಸುಮ್ನೆ ಫ್ರೆಂಡ್ಶಿಪ್ ದಲ್ಲಿ ಮಾತಾಡೋ ಕಾಮನ್ ಥಿಂಗ್ಸ್ ಮಾತಾಡಿಕೊಂಡರಾಯ್ತು"*

*"ಹಾಗಿದ್ರೆ ಓಕೆ. ಆದ್ರೂ ನನ್ನ ಕಂಡೀಶನ್ ನಿಮ್ ತಲೆಯಲ್ಲಿ ಪಿನ್ ಆಗಿರಲಿ"*

*"ಡನ್ ಡಣಾ ಡನ್ ಡನ್"*

ಎಂದು ಉತ್ತರಿಸಿದ. ಅವನ ಉತ್ತರ ನೋಡಿದ ಸುಮಾಳಿಗೆ ನಗು ತಡೆದುಕೊಳ್ಳುವದಕ್ಕೆ ಆಗಲಿಲ್ಲ. ಎಷ್ಟೇ ಆಗಲಿ ಹುಡುಗರು ಮಂಗನಂತಹ ಸ್ವಭಾವದವರು. ಅವರು ಸ್ವಲ್ಪ ಅವಕಾಶ ಸಿಕ್ಕರೂ ಸಾಕು ತಮ್ಮ ಬಾಲ ಬಿಚ್ಚುತ್ತಾರೆ. ಎಂದು ಅಂದುಕೊಂಳ್ಳುವಷ್ಟರಲ್ಲಿಯೇ 

*"ಮ್ಯಾಮ್, ನಿಮ್ಮನ್ನ ಏನು ಅಂತ ಕರೆಯಲಿ?"*

*"ನಿಮಗೆ ನನ್ನನ್ನ ಏನು ಅಂತ ಕರೆಯಬೇಕು ಅಂತ ಅನ್ನಿಸ್ತಿದೆ?"*

*"ಅದು ನಿಮ್ಮ ವಯಸ್ಸು ಎಷ್ಟು ಎಂದು ತಿಳಿದರೆ ತಾನೇ ನಿಮ್ಮನ್ನು ಸಂಭೋದಿಸುವದಕ್ಕೆ ನನ್ನ ಶಬ್ದ ಸಂಗ್ರಹದಿಂದ ಶಬ್ದಗಳನ್ನು ಜೋಡಿಸಿ ಆಯ್ಕೆ ಮಾಡುತ್ತೇನೆ"*

ಎಂದು ಬರೆದು ಕಳಿಸಿದಾಗ ಉಮಾ ಮನದಲ್ಲಿ, ಅವನ ಮಾತಿನಲ್ಲಿ ಸ್ವಲ್ಪ ವಿಭಿನ್ನತೆಯನ್ನು ಫೀಲ್ ಮಾಡತೊಡಗಿದಳು. ಯಾಕೆಂದರೆ, ಎಲ್ಲರೂ ಮೇಡಂ ಅಂತ ಕರೆಯುವರು ಇಲ್ಲವಾದರೆ ಅಕ್ಕ ಅನ್ನುವರು ಹೀಗೆ ಏನಾದರೊಂದು ಕರೆಯಬೇಕಾದರೆ ಇವನು ಮಾತ್ರ ತನ್ನ ವಯಸ್ಸಿನ ಮೇಲೆ ತನ್ನನ್ನು ಏನು ಸಂಭೋದಿಸಬೇಕು ಅಂತ ನಿರ್ಧರಿಸುತ್ತೇನೆ ಅಂತ ಹೇಳ್ತಿದ್ದಾನೆ. ಹಾಗಿದ್ದರೆ ಇವನು ಎಲ್ಲರಂತಲ್ಲ. ಚುರುಕಾಗಿದ್ದಾನೆ ಅಲ್ಲದೆ ಸೆನ್ಸ್ ಆಫ್ ಹ್ಯುಮರ ತುಂಬಾ ಇದೆ ಅಂತ ಕಾಣುತ್ತೆ. ಇಂಥವರಿಗೆ ಹಲವಾರು ಹೊಸ ವಿಷಯಗಳು ಗೊತ್ತಿರುತ್ತವೆ. ಇವರಿಂದ ವಿಷಯ ತಿಳಿದುಕೊಳ್ಳೋಕೆ ತುಂಬಾ ಇರುತ್ತದೆ ಅಂದುಕೊಂಡಳು. ಆದರೂ ಅವನನ್ನು ಕಾಡುವದಕ್ಕೆ ಅವಳಿಗೆ ಮನಸ್ಸಾಗಿತ್ತು ಅದಕ್ಕೆ ಅವಳು,

*"ನಿಮ್ಮ ವಯಸ್ಸು ಮೊದಲು ಹೇಳಿ"*

ಎಂದು ಬರೆದು ಕಳುಹಿಸಿದಳು. 

*"25"*

ಎಂದು ಕೂಡಲೇ ಉತ್ತರಿಸಿದ. 

*"40"*

ಎಂದು ಸುಮಾ ತನ್ನ ವಯಸ್ಸನ್ನು ಹೇಳಿ ಉತ್ತರಿಸಿದಳು.

*"ಒಹ್, ನೀವು ಅಷ್ಟು ದೊಡ್ಡವರ?"*

*"ನಿಮ ಸಲುವಾಗಿ ಸಣ್ಣವರಾಗಲಿಕ್ಕೆ ಬರೋದಿಲ್ವಲ್ಲ ಏನ್ ಮಾಡೋದು"*

ಎಂದು ಉತ್ತರ ಟೈಪ್ ಮಾಡುವಾಗ ಅವಳಿಗೆ ನಗು ಉಕ್ಕಿ ಬರುತ್ತಿತ್ತು. ನಗುತ್ತಲೇ ಅವನ ಪ್ರಶ್ನೆಗೆ ಉತ್ತರಿಸುತ್ತಿದ್ದಳು. ಅತ್ತ ಕಡೆಯಿಂದ ಅವನ ಮುಖದಲ್ಲಿ ಪ್ರತಿಕ್ರಿಯೆ ಯಾವ ರೀತಿ ಇತ್ತು ಅಂತ ಮಾತ್ರ ಗೊತ್ತಾಗುತ್ತಿರಲಿಲ್ಲ. ಆದರೆ ಒಂದು ಮಾತ್ರ ನಿಜ ಅವನು ಸಹ ಗೊಂದಲದಲ್ಲಿ ಬಿದ್ದಿರಬಹುದು ಎಂದುಕೊಂಡು ಅವನ ಮುಖ ನೋಡುವಂತಿದ್ದರೆ ಹೇಗೆ ಎಂದು ಯೋಚನೆ ಮಾಡುತ್ತಿದ್ದಳು. 

ಅಷ್ಟರಲ್ಲಿ ಅತ್ತಿಂದ ಅಭಿ ಉತ್ತರಿಸಿದ 

*"ಹೋಗ್ಲಿ ಬಿಡಿ, ವಯಸ್ಸಿನ ಅಂತರ ಇದ್ರೇನಾಯ್ತು. ಫ್ರೆಂಡ್ಸ್ ಆಗಲಿಕ್ಕೆ ವಯಸ್ಸು ಇಂಪಾರ್ಟೆಂಟ್ ಅಲ್ವಲ್ಲ"*

ಅವನ ಉತ್ತರ ನೋಡಿದ ಸುಮಾ, ಅವನ ಮಾತು ಸಹ ಅವಳಿಗೆ ಒಂದು ರೀತಿಯಲ್ಲಿ ಸರಿ ಅನ್ನಿಸಿತು. ಆದರೆ ಅದಕ್ಕೆ ಒಮ್ಮೆಲೇ ಒಪ್ಪಿಕೊಳ್ಳಬಾರದೆಂದುಕೊಂಡು

*"ಆದರೂ, ನಿಮಗಿಂತ ವಯಸ್ಸಲ್ಲಿ ದೊಡ್ಡವಳಾದ ನನ್ನ ಜೊತೆಗೆ ಫ್ರೆಂಡ್ಶಿಪ್ ಮಾಡೋಕೆ ನಿಮಗೇಕೆ ಇಷ್ಟು ಇಂಟ್ರೆಸ್ಟ್ ಅಂತ ನಿಮಗೆ ಕೇಳಬಹುದಾ?"*

*"ಹಾಗೇನಿಲ್ಲ. ನೀವು ಒಂದು ರೀತಿಯಲ್ಲಿ ಮೆಚರ್ ಮೈಂಡ್ ಉಳ್ಳವರು. ನಿಮ್ಮಂಥವರ ಜೊತೆಗೆ ಫ್ರೆಂಡ್ಶಿಪ್ ಮಾಡೋದಕ್ಕೆ ಒಂದು ರೀತಿಯಲ್ಲಿ ಒಳ್ಳೆಯದು ಅಂತ ಅಂದೊಂದಿದ್ದಿನಿ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ಒಬ್ಬ ಎಕ್ಷ ಪೀರಿಯನ್ಸ್ ವುಮನ್ ಜೊತೆಗೆ ಫ್ರೆಂಡ್ಶಿಪ್ ಆದ್ರೆ ಒಂದು ರೀತಿ ನನಗೂ ಒಳ್ಳೆಯದು. ಯಾಕೆಂದರೆ ನೀವು ಮೆಚರ್ ಮೈಂಡ್ ದವರು ಆಗಿದ್ದರಿಂದ, ನೀವು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಅಂತ ಅಂದ್ಕೊದ್ದೀನಿ.*"

ಈ ಉತ್ತರವನ್ನು ನೋಡಿದಾಗ ಸುಮಾ ಸ್ವಲ್ಪ ಗಂಭೀರಳಾದಳು. ಅವನು ಹೇಳಿದ್ದರಲ್ಲಿ ಅರ್ಥವಿದ್ದರೂ ಸಹ ತನ್ನ ಸ್ನೇಹ ಆತ ದುರುಪಯೋಗಮಾಡಿಕೊಳ್ಳುವದಿಲ್ಲವೆಂದು ಹೇಗೆ ನಂಬುವದು ಎಂಬ ಸಣ್ಣ ಸಂಶಯ ಅವಳ ಮನದಲ್ಲಿ ಬಂತು. ಅದಕ್ಕೆ ಅವಳು 

*"ನಿಮಗೆ ಗರ್ಲ್ ಫ್ರೆಂಡ್ಸ್ ಯಾರಿಲ್ಲವೇ?"* 

ಎಂದು ಅವನಿಗೆ ಕೇಳಿದಾಗ, ಅವನು ಅತ್ತಲಿಂದ 

*"ಜೊತೆ ಕಲಿತವರೆಲ್ಲ ಗಂಡನ ಜೊತೆಗೆ ಹಾಯಾಗಿದ್ದಾರೆ. ಅವರಿಗೆಲ್ಲ ನಮ್ಮಂಥವರ ಜೊತೆಗೆ ಮಾತನಾಡಲಿಕ್ಕೆ ಸಮಯವೆಲ್ಲಿ. ಅವರಿಗೆ ಮೊದಲು ಸರಿಯಾಗಿ ಜೀವನ ನಡೆಸಬೇಕು, ನಂತರ ಅದೇ ಗಂಡ ಅವರಿಗೆ ಬೇಸರವಾಗಬೇಕು. ಆವಾಗ ಮಾತ್ರ ನಮ್ಮಂಥವರು ನೆನಪಾಗುತ್ತೇವೆ. ಅಲ್ಲಿಯತನಕ ನಮ್ಮಂಥವರಿಗೆ ಈಗಿರುವ ಇಂಟರೆಸ್ಟ್ ಆವಾಗ ಇರುವದಿಲ್ಲ. ಅದಕ್ಕೆ ಇಂಟರೆಸ್ಟ್ ಇರುವಾಗಲೇ ಕೆಲವು ಕಾರ್ಯಗಳನ್ನು ಮಾಡಬೇಕು. 70 ರ ಹರೆಯದಲ್ಲಿ ಹನಿ ಮೂನ್ ಮಾಡಲು ಸಾಧ್ಯವೇ?"*

ಎಂದು ಅವನು ಉತ್ತರ ಕಳುಹಿಸಿದಾಗ ಅವನ ಮಾತನ್ನು ಕೇಳಿದ ಸುಮಾಳಿಗೆ ನಗು ತಡೆಯುವದಕ್ಕಾಗಲಿಲ್ಲ. ಹೊಟ್ಟೆ ತುಂಬಾ ನಕ್ಕಳು. ಅವನು ಹೇಳುವದರಲ್ಲಿ ಒಂದು ರೀತಿಯ ಅರ್ಥವಿತ್ತು. ಅವನು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತಾನೆ ಎಂದು ಅರ್ಥಮಾಡಿಕೊಂಡಳು. ಕೊನೆಗೆ ಅವನಿಗೆ ಒಂದೇ ದಿನಕ್ಕೆ ತುಂಬಾ ಸಲಿಗೆ ಕೊಡಬಾರ್ದು ಎಂದುಕೊಂಡು

*"ಓಕೆ, ನನಗೆ ನಿದ್ರೆ ಬರುತ್ತಿದೆ. ಮಲಗ್ತೀನಿ"*

ಎಂದು ಬರೆದು ಕಳುಹಿಸಿದಾಗ, ಅವನು

*"ನಾಳೆ ಸಿಕ್ತಿರಾ?"*

*"ನೋಡೋಣ, ಪ್ರಯತ್ನ ಮಾಡ್ತೀನಿ"*

*"ಅಲ್ರಿ, ದಿನ ಒಂದು ಸಲಾ ಆದ್ರೂ ಫೇಸ್ ಬುಕ್ಕಿನಲ್ಲಿ ಬಂದು ಹೋಗ್ತೀರಿ ನಂಗೆ ಗೊತ್ತು. ಸುಮ್ಮನೆ ಬರ್ತೀನಿ ಅಂತ ಹೇಳಿದ್ರೆ ಆಗೋಲ್ವಾ?"*

ಎಂದು ಮೆಸೇಜ್ ಬಂದಾಗ, ಸುಮಾ

*"ಗೊತ್ತಿದ್ದೂ ಕೇಳ್ತೀರಲ್ಲ"*

*"ಸರಿ ಹಾಗಾದ್ರೆ ನಾಳೆ ಕರೆಕ್ಟ್ ಆಗಿ ನೈಟ್ ಬರ್ತೀನಿ"*

ಎಂದು ಹೇಳಿದಾಗ ಸುಮಾ ಅವನ ಮೆಸ್ಸೇಜ್ ಗೆ ಯಾವುದೇ ರೆಸ್ಪಾನ್ಸ್ ಕೊಡದೆ ಮಲಗಿದಳು 

ಎಷ್ಟೋ ದಿನಗಳ ನಂತರ ಸುಮಾ, ಮನಃಪೂರ್ವಕವಾಗಿ ನಕ್ಕಿದ್ದಳು. ಬಾಲ್ಯದಲ್ಲಿ ಅವಳಿಗಿದ್ದ ತುಂಟತನ, ಎಷ್ಟೋ ವರ್ಷಗಳ ನಂತರ, ಅಭಿ ಜೊತೆಗೆ ಚಾಟ್ ಮಾಡುವ ಸಮಯದಲ್ಲಿ ಹೊರಗೆ ಬಂದಿತ್ತು. ಅದು ಅವಳಿಗೆ ಗೊತ್ತಿಲ್ಲದೇನೇ. ಪೂರ್ತಿಯಾಗಿ ಚಾಟ್ ಮಾಡಿ ಮುಗಿಸಿದ ಬಳಿಕ ಅವಳಿಗೆ ತಾನು ಎಷ್ಟು ತುಂಟನದಲ್ಲಿ ವರ್ತಿಸಿದೆ ಎಂದು ತನ್ನ ತನಗೆ ಅನ್ನಿಸತೊಡಗಿತು. ಆದರೂ ಮನಸ್ಸಿಗೆ ಒಂದು ರೀತಿಯಿಂದ ಏನೋ ಹಿತ ಅನ್ನಿಸುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯ ಮುದುಕ 

*"ಅಕೇಲಿ ಹೇ ಚಲೇ ಆವೋ ಜಹಾ ಹೊ

ಕಹಾ ಆವಾಜ ದೇ ತುಮ ಕೋ ಕಹಾ ಹೊ"*

ಅಂತ ಮೊಹಮ್ಮದ ರಫಿಯ ಹಾಡು ಹಾಕಿದಾಗ, ಯಾಕೋ ಏನೋ ಒಂದು ಮಧುರತೆ ಅವಳ ಮನದಲ್ಲಿ ತುಂಬಿ ಬಂತು. ಆ ಮಧುರತೆಯನ್ನು ನೆನಪಿಸಿಕೊಳ್ಳುತ್ತಾ, ಅವಳು ಬಹಳ ದಿನಗಳ ನಂತರ, ಗಾಢ ನಿದ್ರೆಗೆ ಜಾರಿದಳು. 


6

    ಮರುದಿನ ಭಾನುವಾರವಾಗಿದ್ದರಿಂದ, ಅವಳು ಸ್ವಲ್ಪ ತಡವಾಗಿಯೇ ಎದ್ದಳು. ಎದ್ದವಳೇ, ಮೊದಲು ಮನೆ ಸ್ವಚ್ಛ ಮಾಡಿ, ಕಾಫಿ ಮಾಡಿಕೊಂಡು ಹಾಲ್ ಗೆ ಬಂದು, ಬಹಳ ದಿನಗಳ ನಂತರ ಅವಳು ತನ್ನ ಹೋಂ ಥೀಯೇಟರ್ ದಲ್ಲಿ ಹಾಡು ಹಾಕಿಕೊಂಡು ಕೇಳತೊಡಗಿದಳು. 

ಯಾವಾಗಲೋ ಒಂದು ಪೆನ್ ಡ್ರೈವ್ ದಲ್ಲಿ ತನಗೆ ಬೇಕಾದ ಹಾಡುಗಳನ್ನು ಹಾಕಿ ತಂದಿಟ್ಟುಕೊಂಡಿದ್ದಳು. ಆದರೆ ಅದನ್ನು ಯಾವತ್ತಿಗೂ ಹಚ್ಚುವ ಪ್ರಸಂಗ ಬಂದಿರಲಿಲ್ಲ. ಪ್ರಸಂಗ ಅಲ್ಲ ಅವಳಿಗೆ ಕೇಳುವ ಮೂಡು ಬಂದಿರಲಿಲ್ಲ. ಆದ್ರೆ ಇವತ್ತು ಮಾತ್ರ ಯಾಕೋ ಹಾಡು ಕೇಳಬೇಕು ಅಂತ ಅನ್ನಿಸಿತು. ಹಾಗೆ ಹೋಂ ಥೀಯೇಟರ್ ಆನ್ ಮಾಡಿದಾಗ, ಹಾಡು ಬರತೊಡಗಿತು. 

*"ಕಂಗಳು ತುಂಬಿರಲು ಕಂಬನಿ ಧಾರೆಯಲಿ 

ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ಮೇಣದ ದೀಪದಂತೆ ನೊಂದು ನೊಂದು ನೀರಾದೆ"*

ಆ ಹಾಡು ಅವಳ ಕಿವಿಗೆ ಬೀಳುತ್ತಿದ್ದಂತೆ ಅವಳಿಗೆ ಗಂಡ ಮನು ನೆನಪಾದ. ಅವನನ್ನು ಕಳೆದುಕೊಂಡ ಹೊಸದರಲ್ಲಿ ಅವನ ನೆನಪಿನಲ್ಲಿ ಈ ಹಾಡನ್ನು ಕೇಳುತ್ತ, ಅವನನ್ನೇ ನೆನಪಿಸಿಕೊಳ್ಳುತ್ತಾ ಕೂರುತ್ತಿದ್ದಳು. ಇವತ್ತು ಬಹಳ ದಿನಗಳ ನಂತರ ಮತ್ತೆ ಈ ಹಾಡು ಕಿವಿಗೆ ಬಿದ್ದಾಗ, ಹಿಂದಿನ ದಿನ ರಾತ್ರಿ ಹೊಸ ಫ್ರೆಂಡ್ ಜೊತೆಗೆ ಮಾಡಿದ ಚಾಟ್ ಎಲ್ಲ ನೆನಪಿನಿಂದ ದೂರಾಗಿ ಮತ್ತೆ, ಅಲ್ಲಿ ಮನು ಸ್ಥಾಪಿತನಾದ. ಹಾಗೆ ಗಂಡನ ನೆನಪಿನ ಜೊತೆಗೆ ಹಿಂದಿನ ದಿನದ ಹೊಸ ಫ್ರೆಂಡ್ ಅಭಿಯನ್ನು ತಾಳೆ ಮಾಡಿ ಯೋಚನೆ ಮಾಡುತ್ತಿರುವಾಗ, ಮನುನ ತುಂಟತನ ಅಭಿಯ ಮಾತಿನಲ್ಲಿ ಕಾಣುತ್ತಿತ್ತು. ಆದ್ರೆ, ಮನು ಕಣ್ಣ ಮುಂದೆ ಇದ್ದು ತುಂಟತನ ಮಾಡುತ್ತಿದ್ದ ಆದರೆ ಅಭಿ ಚಾಟ್ ಮುಖಾಂತರ ತುಂಟತನ ಮಾಡಿದ್ದ. ಅವನು ಹೇಗೆ ಗೊತ್ತಿಲ್ಲ, ಅವನ ಸ್ವಭಾವದ ಪರಿಚಯವಿಲ್ಲ. ಅವನ ಧ್ವನಿ ಸಹ ಕೇಳಿಲ್ಲ. ಅಲ್ಲದೆ ಅವನ ಹೆಸರೊಂದು ಬಿಟ್ಟರೆ ಉಳಿದ ಯಾವ ವಿಷಯವೂ ಗೊತ್ತಿಲ್ಲ. ಅಂತಹದರಲ್ಲಿ, ಕೇವಲ ಅವನ ಮಾತಿನಿಂದ ಅದೂ ಚಾಟ್ ಮುಖಾಂತರ ಅವನ ಹೋಲಿಕೆಯನ್ನು ಗಂಡನ ಜೊತೆಗೆ ಮಾಡತೊಡಗಿದ್ದಳು. ಸ್ವಲ್ಪ ಹೊತ್ತು ಹಾಗೆ ಯೋಚನೆ ಮಾಡಿದಾಗ ಅವಳು ತನ್ನ ಮನದಲ್ಲಿಯೇ ನಾನೇಕೆ ಈ ರೀತಿಯಾಗಿ ಹೋಚಿಸುತ್ತಿದ್ದೇನೆ? ನನಗೆ ಏನಾದರೂ ಆಗಿದೆಯಾ? ನನ್ನ ಮನಸ್ಸಿಗೆ ಯಾಕೆ ಈ ರೀತಿ ಆಗ್ತಿದೆ? ಏನೋ ಹೇಳಲಾರದ ಆನಂದ ಒಂದು ಕಡೆ ಆದರೆ ಯಾವುದೋ ರೀತಿಯ ಅವ್ಯಕ್ತ ಹೇಳಲಾರದಂಥ ವೇದನೆಯಂಥ ಭಾವನೆ ತನ್ನ ಮನ ಕಾಡುತ್ತಿದೆ. ಅದು ಏಕೆ ಹೀಗೆ? ಎಂದು ತನ್ನನ್ನು ತಾನು ಕೇಳಿಕೊಂಡಾಗ ಅವಳಿಗೆ ಉತ್ತರ ದೊರೆಯಲಿಲ್ಲ. 

ಕೊನೆಗೆ ತಾನೇ ಬೇಸತ್ತು ಹೋಂ ಥಿಯೇಟರ್ ಆಫ್ ಮಾಡಿ ಮನೆಗೆಲಸದ ಕಡೆಗೆ ಗಮನ ಹರಿಸಿದಳು. 

    ವಾರ ಪೂರ್ತಿ ಮನೆಯಲ್ಲಿ ಸರಿಯಾಗಿ ಇರುತ್ತಿರಲಿಲ್ಲವಾದ್ದರಿಂದ, ಮಧ್ಯಾನ್ಹದವರೆಗೆ ಸುಮಾ ಮನೆಯನ್ನು ಸ್ವಚ್ಛ ಮಾಡಿದಳು. ಊಟದ ಸಮಯವಾಯಿತು. ಊಟ ಮಾಡಲು ಹೋಗಬೇಕೆನ್ನುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಹೋಗಿ ಬಾಗಿಲು ತೆಗೆದಾಗ, ಅವಳ ಗೆಳತೀ ಶಾಂತ ಬಂದ್ದಳು. ಅವಳನ್ನು ಕಂಡ ಕೂಡಲೇ ಸುಮಾಳಿಗೆ ಎಲ್ಲಿಲ್ಲದ ಸಂತೋಷ ಉಕ್ಕಿ ಬಂತು. ಗೆಳತಿಯನ್ನು ಅಪ್ಪಿಕೊಂಡು ಅವಳನ್ನು ಒಳಗೆ ಬರಮಾಡಿಕೊಂಡಳು. ಶಾಂತ ಬೇಡ ಬೇಡ ಎಂದರೂ ಸಹ ಅವಳನ್ನು ಬಿಡದೆ, ತನ್ನ ಜೊತೆಗೆ ಊಟಕ್ಕೆ ಕುಳ್ಳರಿಸಿಕೊಂಡು ಬಲವಂತವಾಗಿ ಊಟ ಮಾಡಿಸಿದಳು. 

    ಶಾಂತಾಳ ಮದುವೆ ಆದ ನಂತರ ಅವಳೊಂದಿಗೆ ಭೇಟಿಯಾಗಿರಲಿಲ್ಲ. ಶಾಂತ ಸಹ ಮದುವೆಯಾದ 10 ವರ್ಷಗಳ ನಂತರ ತನ್ನ ಗಂಡನನ್ನು ಕಳೆದುಕೊಂಡಿದ್ದಳು ಎಂದು ಕೇಳಿದ್ದಳು. ಆದರೆ ನಂತರ ಶಾಂತ ಎಲ್ಲಿ ಇರುವಳು ಅಂತ ಮಾತ್ರ ತಿಳಿದಿರಲಿಲ್ಲ. ಬಹಳ ವರ್ಷಗಳ ನಂತರ ಇಬ್ಬರೂ ಗೆಳತಿಯರು ಭೇಟಿಯಾಗಿದ್ದರು. ಊಟ ಮಾಡಿಕೊಂಡು ಹಾಲ್ ದಲ್ಲಿ ಸೋಫಾ ಮೇಲೆ ಕುಳಿತು ಸುಮಾ,

*"ಸಾರೀ ಶಾಂತ. ನಿನ್ನ ಹಸ್ಬೆಂಡ್ ಹೋದರು ಎಂದು ತಿಳಿದು ತುಂಬಾ ಸಂಕಟವಾಯಿತು. ಆದರೆ ಆ ವೇಳೆಯಲ್ಲಿ ನೀನು ಎಲ್ಲಿದ್ದೆ, ನಂತರ ಎಲ್ಲಿ ಹೋದೆ ಅಂತಾನೆ ಗೊತ್ತಾಗಲಿಲ್ಲ. ಅದಕ್ಕೆ ನಿನ್ನ ಕಾಂಟಾಕ್ಟ್ ಮಾಡುವದಕ್ಕಾಗಲಿಲ್ಲ. ಈಗ ಹೇಗಿದ್ದಿ?"*

ಎಂದು ಅವಳ ಗಂಡನ ಮರಣಕ್ಕೆ ತನ್ನ ದುಃಖವನ್ನು ವ್ಯಕ್ತಪಡಿಸುತ್ತ ಕೇಳಿದಾಗ ಶಾಂತ,

*"ಹೌದು ಕಣೆ, ಏನೋ ಅಕಸ್ಮಾತಾಗಿ ನನ್ನ ಗಂಡ ತೀರಿಕೊಂಡ. ನೋಡು ದೇವರು ಎಲ್ಲವನ್ನೂ ಚನ್ನಾಗಿ ಅನುಭವಿಸಲು ಕೊಟ್ಟು, ಕೊನೆಗೆ ತಡೆಯಲಾರದ ದೊಡ್ಡ ಹೊಡೆತ ಕೊಟ್ಟುಬಿಡುತ್ತಾನೆ. ನನ್ನ ಜೀವನದಲ್ಲಿ ಸಹ ಹಾಗೆ ಆಗಿದ್ದು. ನಾನು ನನ್ನ ಗಂಡನ ಮರಣದ ನಂತರ ಏನು ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದೆ. ಇಲ್ಲೇ ಕುಂತರೂ ನಿಂತರೂ ಅವರದೇ ನೆನಪು ಕಾಡುತ್ತಿತ್ತು. ಒಂದು ನಿಮಿಷ ನನ್ನ ಬಿಟ್ಟು ಇರುತ್ತಿರಲಿಲ್ಲ. ಕುಂತರೂ ನಿಂತರೂ ನನ್ನ ಜೊತೆಗೆ ಇರುತ್ತಿದ್ದರು. ಅಂಥವರು ಒಮ್ಮೆಲೇ ನನ್ನನು ಬಿಟ್ಟು ಹೋದಾಗ ನನಗಾದ ಆಘಾತ ಅಷ್ಟಿಷ್ಟಲ್ಲ. ಒಂದು ಸಲ ಅಲ್ಲ ಹಲವಾರು ಬಾರಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡಿದೆ. ಆದರೆ ನನಗಿದ್ದ 4 ವರ್ಷದ ಮಗನ ಸಲುವಾಗಿ ನಾನು ಜೀವಂತವಾಗಿರಬೇಕಾಯಿತು. ಏನು ಮಾಡಿದರೂ ನನಗೆ ಹಗಲು ರಾತ್ರಿ ಅವರದೇ ನೆನಪು ಕಾಡುತ್ತಿತ್ತು. ಹಗಲಿನಲ್ಲಿ ನನ್ನ ಸೆರಗು ಹಿಡಿದುಕೊಂಡು ಮನೆ ತುಂಬಾ ನನ್ನ ಬೆನ್ನ ಹಿಂದೆ ಸುತ್ತುತ್ತಿದ್ದಾರೆ, ರಾತ್ರಿ ನಾನು ಅವರ ತೋಳಿನ ಆಸರೆಯಲ್ಲಿ ಅವರ ಎದೆ ಮೇಲೆ ನನ್ನ ತಲೆಯನ್ನಿಟ್ಟು ಬಂಧನದಲ್ಲಿ ತೃಪ್ತಿಯ ನಿದ್ದೆ ಮಾಡುತ್ತಿದ್ದೆ. ನಿಜ ಹೇಳ್ತಿನಿ ಸುಮಾ, ಅವರು ತೀರಿಕೊಂಡ ಮೇಲೆ ನನಗೆ ಹಾಸಿಗೆ ಎಂದರೆ ಮುಳ್ಳಿನ ಹಾಸಿಗೆಯಾಗಿತ್ತು. ಅಂದಿನಿಂದ ನಾನು ನೆಲದ ಮೇಲೆ ಮಲಗತೊಡಗಿದ್ದೆ. ಕೊನೆಗೆ ನಾನು ಮನೆಯಲ್ಲಿಯೇ ಇದ್ದರೆ ಅವರನ್ನು ಮರೆಯುವದಕ್ಕೆ ಆಗುವದಿಲ್ಲ ಎಂದುಕೊಂಡು ಕೊನೆಗೆ ನಾನು ಊರನ್ನೇ ಬಿಟ್ಟು ಬೆಂಗಳೂರಿಗೆ ಹೋಗಿ ನನ್ನ ಪರಿಚಯದವರ ಸಹಾಯದಿಂದ ಅಲ್ಲಿ ನೌಕರಿ ಹಿಡಿದೆ. ನನ್ನ ಜೀವನಕ್ಕೊಂದು ಆಧಾರವಾಯಿತು. 

    ಬೆಂಗಳೂರಿನಲ್ಲಿ ನೌಕರಿ ಅಂದರೆ ಮಷೀನ್ ತರಹ ಜೀವನ. ಒತ್ತಡದ ಜೀವನ. ಅಂತ ಒತ್ತಡದ ಜೀವನಕ್ಕೆ ಮೊದಲು ಹೊಂದಿಕೊಳ್ಳುವದು ತುಂಬಾ ಕಷ್ಟವಾಯಿತು. ನಂತರ ಅದೇ ಒಳ್ಳೆಯದು ಎಂದು ಅಂದುಕೊಂಡೆ. ಯಾಕೆಂದರೆ, ಕೆಲಸದ ಒತ್ತಡದಲ್ಲಿ ಮನಸ್ಸಿನ ಒತ್ತಡವನ್ನು ಮರೆಯುವದು ಸುಲಭವಾದ ದಾರಿ ನನಗಾಗಿತ್ತು. 

     ನಾನು ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಕರೆದೊಯ್ಯಲು ಕಂಪನಿ ವ್ಯಾನ್ ಬರುತ್ತಿತ್ತು. ಅದರಲ್ಲಿ ಸುಮಾರು 15 ಜನರು ಹೋಗುತ್ತಿದ್ದೆವು. ಬೆಳಿಗ್ಗೆ ನಮ್ಮನ್ನು ಕರೆಯಲು ಬಂದ ವ್ಯಾನ್ ಸಾಯಂಕಾಲ ಆಫೀಸ್ ಮುಗಿದ ಮೇಲೆ ನಮ್ಮನ್ನು ಬಿಡಲು ಬರುತ್ತಿತ್ತು. ಮಗನಿಗೆ ಅಲ್ಲಿಯೇ ಸ್ಕೂಲ್ಗೆ ಸೇರಿಸಿದ್ದೆ. ನಾನು ಹಾಗೆ ಆಫೀಸ್ ಗೆ ವ್ಯಾನ್ ದಲ್ಲಿ ಹೋಗಿ ಬರುವದು ಮಾಡುತ್ತಿರುವಾಗ, ನನ್ನ ಜೊತೆಗೆ ನನ್ನ ಆಫೀಸ್ ದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಎನ್ನುವ ವ್ಯಕ್ತಿಯ ಪರಿಚಯವಾಯಿತು. ಅಮೃತ್ ನನಗಿಂತ 5 ವರ್ಷ ಚಿಕ್ಕವನು. ಅವನು ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಭಾವನೆಗಳನ್ನು ಚನ್ನಾಗಿ ಅರಿತುಕೊಂಡ. ಅವನು ನನ್ನ ಜೊತೆಗೆ ಸ್ನೇಹದಿಂದ ಇದ್ದ. ಹಾಗೆ ನಮ್ಮ ಫ್ರೆಂಡ್ಶಿಪ್ ಒಂದು ಹಂತಕ್ಕೆ ತಲುಪಿತು. ಅವನ ಫ್ರೆಂಡ್ಶಿಪ್ ದಲ್ಲಿ ನಾನು ನನ್ನ ಗಂಡನನ್ನು ಮರೆಯುವಹಾಗೆ ಮಾಡಿದ್ದ. 

   ಒಂದು ಸಲ ಹಾಗೆ ನಾವಿಬ್ಬರೂ ಮಾತನಾಡುತ್ತಿರಬೇಕಾದರೆ, ಅವನು ನನಗೆ ಮತ್ತೊಂದು ಮದುವೆಯಾಗಲು ಸಜೆಸ್ಟ್ ಮಾಡಿದ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಅದೇ ವಿಷಯ ಕುರಿತು ಇಬ್ಬರಲ್ಲಿ ಸುಮಾರು 2 ತಿಂಗಳ ತನಕ ಚರ್ಚೆ ಮಾಡಿದೆವು. ಕೊನೆಗೆ ಅವನು ನನಗೆ ನಾನು ಒಪ್ಪುವದಾದರೆ, ತಾನು ನನ್ನನ್ನು ಮದುವೆಯಾಗುತ್ತೇನೆ ನನಗೆ ಬಾಳು ಕೊಡುತ್ತೇನೆ ಅಂತ ಹೇಳಿದ. ನಾನು ಅದಕ್ಕೆ ಮೊದಲು ಒಪ್ಪಲಿಲ್ಲ. ಯಾಕೆಂದರೆ, ಅವನು ನನಗಿಂತ ವಯಸ್ಸಿನಲ್ಲಿ 5 ವರ್ಷ ಚಿಕ್ಕವನು. ಅದು ಸಾಧ್ಯವಿಲ್ಲ ಮತ್ತು ಸಮಾಜ ಒಪ್ಪುವದಿಲ್ಲ ನಮ್ಮನ್ನು ನೋಡಿ ನಗುತ್ತಾರೆ ಎಂದು ಹೇಳಿದ್ದೆ. ಆದರೆ ಅವನು ನಮ್ಮ ಜೀವನ ನಮ್ಮ ವಿಷಯ ಅದಕ್ಕೂ ಸಮಾಜಕ್ಕೂ ಸಂಭಂದವಿಲ್ಲ. ನಮ್ಮ ಜೀವನ ಸುಖವಾಗಿರುವದು ಮುಖ್ಯ ಅದನ್ನು ಗಮನದಲ್ಲಿಟ್ಟುಕೊಂಡು ಯೋಚನೆ ಮಾಡಲು ನನಗೆ ಹೇಳಿದಾಗ, ನನಗೂ ಅವನ ಮಾತು ಸರಿ ಅನ್ನಿಸಿತು. ಯಾಕೆಂದರೆ, ಎಷ್ಟು ದಿನ ಅಂತ ಹೀಗೆ ಇರೋದು. ಶಕ್ತಿ ಇರುವತನಕ ನಮಗೆ ಸಾಮರ್ಥ್ಯ್ ಉಂಟು. ಯೌವನ ರೂಪ ಇರುವತನಕ ನಾವು ಜೀವನವನ್ನು ಚನ್ನಾಗಿ ಅನುಭವಿಸಲು ಸಾಧ್ಯ. ಅದಕ್ಕೆ ಕೊನೆಗೆ ನಾನು ಅವರನ್ನು ಮದುವೆಯಾಗಲು ಒಪ್ಪಿಕೊಂಡೆ. ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ಸುಮಾರು 2 ವರ್ಷಗಳಿಂದ ನಾವು ಗಂಡ ಹೆಂಡಿರಾಗಿ ಬಾಳುವೆ ಮಾಡುತ್ತಿದ್ದೇವೆ. ನನ್ನ ಮಗನನ್ನು ಅವರು ಚನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ನಿಜ ಹೇಳ್ತಿನಿ, ಒಂದು ದಿನವೂ ಅವರು ನನ್ನ ಮೊದಲ್ನೇ ಗಂಡನನ್ನು ನೆನಪಿಗೆ ಬರದಂತೆ ನಾನು ಅವರ ಯೋಚನೆಯಲ್ಲಿ ಕೊರಗದಂತೆ ನೋಡಿಕೊಂಡಿದ್ದಾರೆ. ನನ್ನ ಮೊದಲಿನ ಗಂಡ ಇಷ್ಟು ಚನ್ನಾಗಿ ನೋಡಿಕೊಳ್ಳುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಅಮೃತ್ ಮಾತ್ರ ನನ್ನ ತುಂಬಾ ಚನ್ನಾಗಿ ನೋಡಿಕೊಳ್ಳುತ್ತಲಿದ್ದಾರೆ."*

ಎಂದು ಹೇಳಿ ತನ್ನ ಮಾತನ್ನು ಮುಗಿಸಿದಳು. ಅವಳಾಡಿದ ಮಾತನ್ನು ಕೇಳುತ್ತ ಕುಳಿತಿದ್ದ ಸುಮಾ,

*"ಅಲ್ಲ ಶಾಂತ, ನೀನು ನಿನಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾದೆಯಾ?"*

*"ಅದಕ್ಕೇನು ತಪ್ಪು? ಸುಮಾ ನೀನೆ ಯೋಚನೆ ಮಾಡು. ನಾನು ಈ ವಿಷಯ ನಿನಗೆ ಹೇಳಿದ್ದರಿಂದ ನಿನಗೆ ಗೊತ್ತಾಯಿತು ಅದಕ್ಕೆ ನೀನು ನನ್ನನ್ನ ಈ ಪ್ರಶ್ನೆ ಕೇಳಿದೆ. ಆದರೆ, ನಾನೇ ವಯಸ್ಸಿನ ವಿಷಯ ಹೇಳದೆ ಇದ್ದರೆ ನಿನಗೆ ಹೇಗೆ ಗೊತ್ತಾಗುತ್ತಿತ್ತು. ಅದಲ್ಲದೆ ಒಂದು ವೇಳೆ ಗೊತ್ತಾದರೂ ನೀನು ಏನು ಮಾಡಲಿಕ್ಕೆ ಸಾಧ್ಯ? ನಾವಿಬ್ಬರು ಬಾಳುವೆ ಮಾಡುವವರು ಒಪ್ಪಿದ ಮೇಲೆ ಬೇರೆಯವರ ಅಭಿಪ್ರಾಯ ತೆಗೆದುಕೊಂಡು ನನಗೇನಾಗಬೇಕಾಗಿದೆ? ಅಲ್ವೇ?"*

ಎಂದು ಅವಳು ಖಡಾ ಖಂಡಿತವಾಗಿ ಹೇಳಿದಾಗ. ಅವಳಿಗೆ ಏನು ಉತ್ತರ ಕೊಡಬೇಕೋ ಎಂದು ತಿಳಿಯಲಾಗದೆ ಸುಮಾ ಸುಮ್ಮನೆ ಕುಳಿತಳು. ಶಾಂತ ಹೇಳಿದ ರೀತಿಯಲ್ಲಿ ಯೋಚನೆ ಮಾಡಿದಾಗ ಅವಳು ಹೇಳುವದರಲ್ಲಿ ಸಹ ಒಂದು ಅರ್ಥ ಇದೆ ಅಂತ ಅನ್ನಿಸತೊಡಗಿತು. 

ಜೀವನ ತನ್ನದು ತಾವು ತಮ್ಮ ಜೀವನದಲ್ಲಿ ಏನು ಬೇಕಾದರೂ ನಿರ್ಣಯ ತೆಗೆದುಕೊಳ್ಳಲು ಬದ್ಧರು. ಆದರೆ ಅದನ್ನು ಮತ್ತೊಬ್ಬರು ಯಾರು ಯಾಕೆ ಪ್ರಶ್ನೆ ಮಾಡಬೇಕು. ಅವರಿಗೆ ತಮ್ಮ ಜೀವನದ ನಿರ್ಣಯ ನಿರ್ಧರಿಸಲು ಹಕ್ಕು ಏನು ಇರುವದು? ಅಂತ ಹಕ್ಕಿಲ್ಲದ ಬೇರೆಯವರು ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂದರೆ, ನಮ್ಮ ಸ್ವಂತ ಜೀವನದಲ್ಲಿ ನಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಮಗಿಲ್ಲವೇ? ಎಂದು ಸುಮಾ ಯೋಚಿಸತೊಡಗಿದಳು. ಅವಳು ಹಾಗೆ ಸುಮ್ಮನೆ ಕುಳಿತುಕೊಂಡು ಯೋಚನೆ ಮಾಡುತ್ತಿರಬೇಕಾದರೆ ಶಾಂತ ಅವಳನ್ನು ಎಚ್ಚರಗೊಳಿಸಿದಳು. 

*"ಏಯ್ ಸುಮಾ, ಎಲ್ಲಿ ಕಳೆದುಕೊಂಡುಬಿಟ್ಟೆ?"*

ಎಂದಾಗ ಸುಮಾ ಪೆಚ್ಚಾದ ನಗು ನಗುತ್ತ,

*"ಏನಿಲ್ಲ, ನಿನ್ನ ಎಲ್ಲ ಯೋಚನೆಗಳನ್ನು ನಾನು ಯೋಚನೆ ಮಾಡುತ್ತಿದ್ದೇನೆ ಅಷ್ಟೇ"*

*"ನೀನು ಯಾಕೆ ಇನ್ನೊಂದು ಮದುವೆ ಮಾಡಿಕೊಳ್ಳಬಾರದು?"*

*"ಬೇಡ ಶಾಂತ. ಯಾಕೋ ನನಗೆ ಈಗ ಇರುವ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಅಲ್ಲದೆ, ನನ್ನ ಗಂಡನ ನೆನಪು ನನಗೆ ಅವರು ಇಲ್ಲವೆಂದ ಭಾವನೆ ಇಂದಿಗೂ ಇಲ್ಲ. ಅದಕ್ಕಾಗೇ ನಾನು ಯೋಚನೆ ಮಾಡಿಲ್ಲ."*

*"ಅಯ್ಯೋ ಹುಚ್ಚಿ, ನೀನು ಇನ್ನೂ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವದಕ್ಕೆ ಕಲಿತಿಲ್ಲ. ಇಂದಿನ ಸಮಾಜ ಒಂದು ಸಲ ಹತ್ತಿರದಿದ್ನ ನೋಡು. ನಿನಗೆ ಗೊತ್ತಾಗುತ್ತೆ. ಸುಮಾ ನಿಜವಾಗಿ ನಿನ್ನ ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತೆ ಕಣೆ. ನೀನು ನಮ್ಮ ಕಾಲೇಜು ದಲ್ಲಿ ಬ್ಯೂಟಿ ಕ್ವೀನ್. ನೀನು ಇಂತಹ ಸನ್ಯಾಸಿ ಬಾಳನ್ನು ಬಾಳುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಈಗಲೂ ನಿನ್ನನ್ನ ನೀನು ಕನ್ನಡಿಯ ಮುಂದೆ ನಿಂತುಕೊಂಡು ನೋಡಿಕೋ. ನಿನ್ನ ಮಾಸದ ಸೌಂದರ್ಯ ಮತ್ತು ನಿನ್ನ ಕಣ್ಣುಗಳ್ಳಲ್ಲಿರುವ ಯಾರನ್ನೋ ನಿರೀಕ್ಷಿಸುವ ಪರಿ ನೋಡಿದರೆ ನಿನಗೆ ಮತ್ತೊಂದು ಮದುವೆ ಅಥವಾ ಒಂದು ಆಸರೆಯ ಅವಶ್ಯಕತೆ ಇದೆ ಕಣೆ. ಈಗಲಾದರೂ ನನ್ನ ಮಾತು ಕೇಳು ದೊಡ್ಡ ಮನಸ್ಸು ಮಾಡು"*

ಎಂದು ಹೇಳಿದಾಗ ಸುಮಾ ಅವಳನ್ನೇ ನೋಡುತ್ತಾ

*"ಶಾಂತ, ನೀನೊಂದು ಕಲ್ಲಿನ ಜೊತೆಗೆ ಮಾತಾಡುತ್ತಿದ್ದಿ ಕಣೆ"*

ಎಂದಷ್ಟೇ ಹೇಳಿದಳು. ಮುಂದೆ ಶಾಂತ ಹೆಚ್ಚಿಗೆ ಏನೂ ಮಾತನಾಡಲಿಲ್ಲ. ಸುಮಾಳಿಗೆ ಈ ವಿಷಯದಲ್ಲಿಒತ್ತಾಯ ಮಾಡುವಂತೆ ಇರಲಿಲ್ಲ. ನಂತರ ಇಬ್ಬರೂ ಗೆಳತಿಯರು ಸಾಯಂಕಾಲದವರೆಗೆ ಹಿಂದಿನ ಹಳೆಯ ದಿನಗಳನ್ನು ನೆನೆದು ಮಾತನಾಡುತ್ತಿದ್ದರು. ಸಾಯಂಕಾಲ ಆಗುತ್ತಿದ್ದಂತೆ ಶಾಂತಾ ಹೊರಡಲು ತಯಾರಾದಳು. ಸುಮಾಳಿಗೆ ಅವಳನ್ನು ಕಳುಹಿಸಿಕೊಡಲು ಇಚ್ಛೆ ಇಲ್ಲದಿದ್ದರೂ ಸಹ ಬಲವಂತ ಮಾಡುವಂತೆ ಇರಲಿಲ್ಲ. ಶಾಂತ ಹೋಗುತ್ತಿರುವಾಗ 

*"ಸುಮಾ, ಒಂದು ವಿಷಯ ಹೀಗೆ ಹೇಳ್ತಿನಿ ಅಂತ ತಪ್ಪು ತಿಳಿಯಬೇಡ. ನಾನು ಹೇಳಿದ ವಿಷಯ ಇನ್ನೊಮ್ಮೆ ಯೋಚನೆ ಮಾಡು ಪ್ಲೀಸ್"*

ಎಂದು ಹೇಳಿ ಅಲ್ಲಿಂದ ಹೋದಳು. ಅವಳ ಮಾತಿಗೆ ಸುಮಾ ಏನನ್ನೂ ಉತ್ತರಿಸದೆ ಸುಮ್ಮನೆ ನಗುವಿನಿಂದ ಉತ್ತರ ಕೊಟ್ಟಳು. 

     ಶಾಂತ ಹೋದ ಮೇಲೆ ಸುಮಾ ಮನೆಯ ಒಳಗೆ ಬಂದಳು. ಇಷ್ಟು ಹೊತ್ತು ಶಾಂತ ಇದ್ದಿದ್ದರಿಂದ ಮನೆ ತುಂಬಿದಂತಾಗಿತ್ತು. ಈಗ ಮತ್ತೆ ಅದೇ ಒಂಟಿತನ ಅವಳನ್ನು ಕಾಡತೊಡಗಿತು. 

    ಬಿಕೋ ಎನ್ನುತ್ತಿದ್ದ ಮನೆಯಲ್ಲಿ ಮತ್ತೆ ಸುಮಾ ಒಂಟಿಯಾಗಿ ಕುಳಿತಿದ್ದಳು. ಶಾಂತ ಅವಳಿಗೆ ಹೇಳಿ ಹೋದ ವಿಚಾರವನ್ನು ಯೋಚಿಸುತ್ತಲೇ ಕುಳಿತಿದ್ದಳು. ಅವಳು ಹೇಳಿರುವದಲ್ಲಿ ಸಹ ಏನು ತಪ್ಪಿದೆ ಅಂತ ಒಂದು ರೀತಿಯಾಗಿ ಯೋಚಿಸುತ್ತಿದ್ದರೆ, ಅವಳು ಮಾಡಿದ್ದು ಸರಿಯೇ ಎಂದು ಇನ್ನೊಂದು ರೀತಿಯಿಂದ ಯೋಚನೆ ಮಾಡತೊಡಗಿದಳು. ಈಗಿದ್ದ ರೀತಿಯಲ್ಲಿ ಒಂಟಿಯಾಗಿ ಇದ್ದರೆ ಹೇಗೆ ಎಂದು ಯೋಚನೆ ಮಾಡತೊಡಗಿದಳು. 

   ಒಂಟಿತನ. ಅದು ಅನುಭವಿಸಿದವರಿಗೆ ಗೊತ್ತು. ಒಂಟಿತನವೆನ್ನುವದು ಮೂಡ್ ಮತ್ತು ಪ್ರಸಂಗದ ಅನುಸಾರವಾಗಿ ಪ್ರತಿಫಲ ನೀಡುತ್ತದೆ. ಒಬ್ಬಂಟಿಯಾಗಿರುವದು ಅಂದರೆ, ಯಾರೂ ಬೇಡವಾಗಿ ಎಲ್ಲರಿಂದ ದೂರ ಇರುವದು ಎಂಬ ಅರ್ಥ ಒಂದು ಕಡೆಯಾದರೆ, ಭಾವನಾ ಜೀವಿಗಳಿಗೆ ಒಂಟಿತನ ಎನ್ನುವದು ತುಂಬಾ ಹಬ್ಬವಿದ್ದ ಹಾಗೆ. ಒಂದರ್ಥದಲ್ಲಿ ಏಕಾಂಗಿ ಆಗಿ ಇರಲು ಎಷ್ಟೋ ಭಾವನಾ ಜೀವಿಗಳು ಹಂಬಲಿಸುತ್ತಾರೆ. ಆದರೆ ತನ್ನವರನ್ನು ಕಳೆದುಕೊಂಡಾಗ ಆಗುವ ಮನದ ನೋವು ಮತ್ತು ಏನೋ ಒಂದು ಅವ್ಯಕ್ತವಾದ ಅನುಭವ ಒಂಟಿಯಾಗಿದ್ದಾಗ ಅದನ್ನು ಅನುಭವಿಸುವ ಒಂಟಿತನ, ಎಲ್ಲರೂ ನರಕವನ್ನು ತೋರಿಸಿಬಿಡುತ್ತವೆ. ಆದರೆ ತಾನು ಅನುಭವಿಸುತ್ತಿರುವದು ಮಾತ್ರ, ನರಕ ಸದೃಶ್ಯ ಒಂಟಿತನ. ಮನಸ್ಸಿಗೆ ಅನ್ನಿಸುವದೇನೆಂದರೆ ತನ್ನ ಜೊತೆಗೆ ಯಾರಾದರೂ ತನ್ನವರು ಎಂದು ತಿಳಿದುಕೊಂಡು ಇರಬೇಕು. ಆದ್ರೆ ಜೀವನದಲ್ಲಿ ತನ್ನವರು ಎಂಬುವವರು ಎಲ್ಲರೂ ಹೋಗಿಬಿಟ್ಟಿದ್ದಾರೆ. ನನಗೆ ನಾನೇ ತಾನೇ ಎಲ್ಲ, ಎಂದು ಮನದಲ್ಲಿ ಅಂದುಕೊಂಡಳು. 



7

   ಶಾಂತ ಬಂದು ತನ್ನ ತಲೆಗೆ ಹುಳ ಬಿಟ್ಟು ಹೋಗಿದ್ದಳು. ಅದು ಒಳಗೆ ಕೊರೆಯುತ್ತಲಿತ್ತು. ಅದನ್ನೇ ಯೋಚನೆ ಮಾಡುತ್ತಾ, ಸುಮಾ ಮನಸ್ಸಿಗೆ ಬೇಜಾರು ಪಟ್ಟುಕೊಂಡಳು. ಒಂದು ರೀತಿಯಲ್ಲಿ ಶಾಂತ ಬಂದಿದ್ದು ಅವಳಿಗೆ ಸ್ವಲ್ಪ ಚೇಂಜ್ ಆಗಿತ್ತು. ಆದರೆ ಅವಳು ಬಿಟ್ಟು ಹೋದ ವಿಚಾರ ಮಾತ್ರ, ತಲೆ ಕೊರೆಯುವಂತೆ ಮಾಡಿತ್ತು. ಕೊನೆಗೆ ಸುಮಾ ಏನನ್ನೂ ನಿರ್ಧಾರ ಮಾಡದೆ, ತಲೆ ಕೊಡವಿಕೊಂಡು ಎದ್ದಳು. 

    ಸಾಯಂಕಾಲವಾಗಿದ್ದರಿಂದ, ಅಡುಗೆ ಮಾಡಿ ರಾತ್ರಿ ಊಟ ಮಾಡಿ ಎಂದಿನಂತೆ ಹಾಸಿಗೆ ಮೇಲೆ ಉರುಳಿದಾಗ ಅವಳು ಗಡಿಯಾರವನ್ನು ನೋಡಿದಾಗ ಅದು ಸಮಯ ರಾತ್ರಿ 9.30 ಘಂಟೆ ತೋರಿಸುತ್ತಿತ್ತು. ಸ್ವಲ್ಪ ಹೊತ್ತು ಎಂದಿನಂತೆ ಫೇಸ್ ಬುಕ್ ನೋಡಿದರಾಯಿತು ಎಂದುಕೊಂಡ ಸುಮಾ, ಫೇಸ್ ಬುಕ್ ಓಪನ್ ಮಾಡಿ ತನ್ನ ಟೈಮ್ ಲೈನ್ ನೋಡತೊಡಗಿದಳು. ಮನಸ್ಸಿಗೆ ಯಾಕೋ ತುಂಬಾ ಬೇಜಾರಾಗಿತ್ತು. ಏನು ಮಾಡುವದು ಅಂತ ತಿಳಿಯುತ್ತಿರಲಿಲ್ಲ. ಅವಳಿಗೆ ಮೂಡ್ ಇರಲಿಲ್ಲವಾದ್ದರಿಂದ ಅವಳು ಒಂದು ರೀತಿಯಲ್ಲಿ ಏಕಾಂಗಿಯಂತೆ ತನ್ನನು ತಾನು ಭಾವಿಸತೊಡಗಿದಳು. ಅದೇ ವ್ಯಥೆಯಲ್ಲಿ ಅವಳಿಗೆ ಎಲ್ಲಿಯೋ ಓದಿದ ಒಂದು ಸಾಲು ನೆನಪಾಯಿತು. ಅದನ್ನೇ ಬರೆದಳು. 

*"ಕಾಶ್ ಹಮ್ ಭೀ ಆಜ್ 

ಖತಂ ಹೊ ಜಾಯೆ 

ಬೀತೆ ಸಾಲ್ ಕಿ ತರಾ

ದುನಿಯಾ ಸೆ ವಿದಾ ಹೊ ಜಾಯೆ"*

ಎಂದು ಬರೆದು ಅದನ್ನು ಫೇಸ್ ಬುಕ್ ದಲ್ಲಿ ಪೋಸ್ಟ್ ಮಾಡಿದಳು. ಅದನ್ನು ಬರೆಯುವಾಗ ಮತ್ತು ಪೋಸ್ಟ್ ಮಾಡುವಾಗ ಅವಳ ಮನಸ್ಸಿಗೆ ಯಾಕೋ ಬಹಳ ವೇದನೆಯಾಗಿತ್ತು. ಕಣ್ಣಂಚಿನಲ್ಲಿ ನೀರು ಬಂದಿತ್ತು. ಏಕಾಂಗಿತನದ ಜೀವನದಿಂದ ರೋಸಿ ಹೋಗಿದ್ದ ಅವಳು, ಇಂದಿನವರೆಗೆ ಅವಳು ತನ್ನ ಏಕಾಂಗಿತನವನ್ನು ಬೇರೆಯವರು ಗೊತ್ತು ಹಿಡಿಯದ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದಳು. ಆದರೆ ಇಂದು ಮಾತ್ರ ಶಾಂತ ಬಂದು ಅವಳಲ್ಲಿದ್ದ ಏಕಾಂಗಿತನವನ್ನು ಕೆಣಕಿ ಅವಳಿಗೆ ಮನಸ್ಸಿನಲ್ಲಿ ಮಲಗಿದ್ದ ಅವಳ *"ಬೇಕು"* ಅನ್ನೋದನ್ನ ಎಬ್ಬಿಸಿ, ಕೆಣಕಿ ಹೋಗಿಬಿಟ್ಟಿದ್ದಳು. ಆ ಕೆಣಕಿದ ಪರಿಣಾಮದಿಂದಲೇ ಸುಮಾಳಿಗೆ ಹೇಳಲಾರದ ವೇದನೆ ಆರಂಭವಾಗಿತ್ತು. ತನ್ನ ಬೇಕುಗಳನ್ನೂ ಅವಳು ಹೇಳುವ ಪರಿಸ್ಥಿತಯಲ್ಲಿ ಇರಲಿಲ್ಲ. ಆದರೆ, ಅವಳಿಗೆ ತನಗೆ ಬೇಕಾದುದನ್ನು ಕೇಳಿ ಪಡೆಯುವ ಆಸೆ ಇದ್ದರೂ ಅದನ್ನು ಪೂರೈಸುವವರು ಯಾರೂ ಇರಲಿಲ್ಲ. 

    ಹಾಗೆ ಅವಳು ಪೋಸ್ಟ್ ಮಾಡಿ ತನ್ನ ಕಣ್ಣಲ್ಲಿನ ನೀರನ್ನು ಒರೆಸಿಕೊಂಡು, ಕೊನೆಗೆ ಅವಳು ಮಲಗಬೇಕೆಂದು ಹಾಗೆ ಮಗ್ಗುಲು ಬದಲಾಯಿಸಿದಳು. ಅಲ್ಲಿಯೇ ದಿಂಬಿನ ಹತ್ತಿರ ಫೋನ್ ಇತ್ತು ಕಣ್ಣು ಮುಚ್ಚ್ಚಿದಳು. 5 ನಿಮಿಷದಲ್ಲಿ ಅವಳ ಮೊಬೈಲ್ ಯಾವುದೋ ಮೆಸೇಜ್ ಬಂದ ಸದ್ದು ಮಾಡಿತು. ಮೆಸೇಜ್ ಬಂದ ಸದ್ದನ್ನು ಕೇಳಿದ ಸುಮಾ, ಯಾರಿಂದ ಮೆಸೇಜ್ ಬಂದಿರಬಹುದು ಎಂದು ಸಹ ನೋಡದೆ, ತನ್ನ ಮನದ ದುಃಖದಲ್ಲಿ ತಾನಿದ್ದುಬಿಟ್ಟಳು. ಒಂದರ ಮೇಲೆ ಒಂದು ಸತತವಾಗಿ 18 ಮೆಸೇಜ್ ಗಳು ಬಂದವು. ಅವುಗಳನ್ನು ನೋಡಲೇ ಇಲ್ಲ. ಹಾಗೆ ಛಾವಣಿ ನೋಡುತ್ತಾ ಮಲಗಿದ್ದಳು. 

    ರಾತ್ರಿ ಸುಮಾರು 10.30 ಘಂಟೆ ಯಾಗಿತ್ತು. ಪಕ್ಕದ ಮನೆ ಮುದುಕ ಮತ್ತೆ ಪ್ರತಿದಿನದ ವಾಡಿಕೆಯಂತೆ ಹಾಡು ಹಾಕಿದ 

*"ಕಾಟೊ ಸೆ ಖೀಚ್ ಕೆ ಈ ಆಚಲ್ 

ಟೋಡ್ ಕೆ ಬಂಧನ್ ಬಾಂದೇ ಪಾಯಲ್ 

ಕೋಇ ನ ರೋಕೋ ದಿಲ್ ಕಿ ಉಡಾನ್ ಕೋ 

ದಿಲ್ ಓ ಚಲಾ 

ಆಜ್ ಫರ್ ಜೀನ್ ಕಿ ತಮನ್ನಾ ಹೈ

ಆಜ್ ಫಿರ್ ಮರನೆ ಕ ಇರಾದ ಹೈ"*

ಅಂತ ಹಾಡು ಬರತೊಡಗಿತು. ಮಲಗಿದ್ದಲ್ಲಿಂದಲೇ ಆ ಹಾಡನ್ನು ಕೇಳುತ್ತಿದ್ದ ಸುಮಾ, ಸುಖ ಮತ್ತು ದುಃಖ ಎರಡೂ ಮಿಶ್ರಿತ ಹಾಡನ್ನು ಕೇಳುತ್ತಿದ್ದಂತೆ ಅವಳಿಗೆ, ತಾನು ಜೀವನದಲ್ಲಿ ಒಂದು ರೀತಿಯಲ್ಲಿ ಸುಖವನ್ನು ಕಂಡಿದ್ದೇನೆ ದುಃಖವನ್ನು ಸಹ ಕಂಡಿದ್ದೇನೆ. ಈಗ ತನ್ನವರು ಅಂತ ಯಾರು ಇಲ್ಲ, ಅದಕ್ಕೆ ತಾನು ನೊಂದುಕೊಂಡು ಆಗುವದಾದರೂ ಏನಿದೆ ಎಂದುಕೊಂಡಳು. ಮನಸ್ಸಿಗೆ ಹಿಡಿದಿದ್ದ ಕಾರ್ಮೋಡ ಸ್ವಲ್ಪ ಸರಿದಂತಾಯಿತು. ಹಾಗೆ ಅವಳು ತಲೆಯಲ್ಲಿದ್ದ ಯೋಚನೆಯನ್ನೆಲ್ಲ ಕೊಡವಿಕೊಂಡು ಎದ್ದು ಕುಳಿತು ಇನ್ನು ತನಗೆ ನಿದ್ದೆ ಬರುವದಿಲ್ಲ ಎಂದುಕೊಂಡು ಬರುವಾತನಕವಾದರೂ ಫೇಸ್ ಬುಕ್ ನೋಡಿದರಾಯಿತು ಎಂದುಕೊಂಡು ಮೊಬೈಲ್ ಬದಲಾಗಿ ಅಲ್ಲೇ ಮಂಚದ ಹತ್ತಿರವಿದ್ದ ಕಂಪ್ಯೂಟರ್ ಆನ್ ಮಾಡಿದಳು. ಫೇಸ್ ಬುಕ್ ಎಂಟರ್ ಆದಳು.

      ಸುಮಾ ಫೇಸ್ ಬುಕ್ ಎಂಟರ್ ಆಗುತ್ತಿದ್ದಂತೆ, ಅವಳ ಟೈಮ್ ಲೈನ್ ದಲ್ಲಿ ಅವಳ ಯಾವುದೋ ಒಂದು ಪೋಸ್ಟಗೆ ಯಾರೋ ಕಾಮೆಂಟ್ ಮಾಡಿದ್ದರ ಬಗ್ಗೆ ತೋರಿಸುತ್ತಿತ್ತು. ಅದರ ಮೇಲೆ ಕ್ಲಿಕ್ ಮಾಡಿದಾಗ, ಅಭಿ ತನ್ನದೊಂದು ಪೋಸ್ಟ್ ಮೇಲೆ ಕಾಮೆಂಟ್ ಮಾಡಿದ್ದ ಅಂತ ತೋರಿಸುತ್ತಿತ್ತು. ಅವನು ಏನಂತ ಕಾಮೆಂಟ್ ಮಾಡಿರಬಹುದು ಎಂದು ತೆಗೆದು ನೋಡಿದಾಗ, ಅವಳು ೧ ಘಂಟೆ ಹಿಂದೆ ಹಾಕಿದ ಪೋಸ್ಟಗೆ ಅವನು *"rubbish thought"* ಎಂದು ಕಾಮೆಂಟ್ ಮಾಡಿದ್ದ. ಅದನ್ನು ನೋಡುತ್ತಲೇ ಅವಳ ಮನದಲ್ಲಿ ಒಂದು ತರಹ ಏನೋ ಆಯಿತು. ಕೂಡಲೇ ಅವಳ ಮೆಸ್ಸೆಂಜರ್ ದಲ್ಲಿ ಅಭಿ ಮೆಸ್ಸೇಜ್ ಮಾಡಿದ್ದ. 

*"ಇಂಥ ಆಲೋಚನೆ ಮಾಡುವ ಪ್ರಸಂಗ ಏನು ಬಂದಿದೆ?"*

ಎಂದು ಬರೆದು ಮೆಸೆಂಜರ್ ದಲ್ಲಿ ಕಳುಹಿಸಿದ್ದ. ಅದನ್ನು ನೋಡುತ್ತಿದ್ದಂತೆ ಸುಮಾಳಿಗೆ ಒಂದು ತೆರೆನಾದ ಸಿಟ್ಟು ಬಂದು

*"ಅದನ್ನು ಕೇಳಲು ನೀವು ಯಾರು?"*

ಎಂದು ಪ್ರತ್ಯುತ್ತರ ಬರೆದು ಕಳುಹಿಸಿದರು. ಇಬ್ಬರ ನಡುವೆ ಚಾಟ್ ದಲ್ಲಿ ಅಕ್ಷರಗಳ ರೂಪದಲ್ಲಿಒಂದು ತೆರನಾದ ಸಮರ ಶುರುವಾಯಿತು. 

*"ನಾನು ನಿಮ್ಮ ಫ್ರೆಂಡ್"*

*"ಫ್ರೆಂಡ್ ಆದ ಮಾತ್ರಕ್ಕೆ ನನ್ನ ಪೋಸ್ಟಗೆ ನೀವು ಈ ರೀತಿ ಯಾಕೆ ಹೇಳಿದಿರಿ?"*

*"ಫ್ರೆಂಡ್ ಮಾಡಿದ ಎಲ್ಲ ಪೋಸ್ಟಗಳನ್ನು ಒಪ್ಪಿಕೊಳ್ಳುವ ಬೇಕೂಫ ನಾನಲ್ಲ. ನಿಮ್ಮ ಪೋಸ್ಟ್ ನೋಡುತ್ತಿದ್ದಂತೆ ನನಗೆ ನೀವು ದುಃಖದಲ್ಲಿ ಇರುವಿರಿ ಅಂತ ಅನ್ನಿಸತೊಡಗಿದೆ. ಅದಕ್ಕೆ ನೀವು ಒಂದು ವೇಳೆ ನೀವು ಹಾಕಿದಂಥ ಪೋಸ್ಟ್ ತರಹ ಆಲೋಚನೆ ಮಾಡಿರಬಹುದು ಎಂದು ಅಂದುಕೊಂಡು ನಾನು ಹಾಗೆ ಪೋಸ್ಟ್ ಮಾಡಿದೆ."*

ಅವನ ಈ ಉತ್ತರವನ್ನು ನೋಡುತ್ತಿದ್ದಂತೆ ಸುಮಾ ಗಾಬರಿಯಾದಳು. ತನ್ನ ಮನದಲ್ಲಿದ್ದ ವಿಷಯವನ್ನು ಹೇಗೆ ಸರಿಯಾಗಿ ಊಹಿಸಿದ್ದಾನೆ ಈತ, ಎಂದು ಅಂದುಕೊಳ್ಳತೊಡಗಿದಳು. ಆ ವಿಚಾರ ಮಾಡುತ್ತಲೇ ಅವಳು ಅವನ ಚಾಟ್ ಕ್ಕೆ ಉತ್ತರ ನೀಡಲಿಲ್ಲ. ಅವನು ಸ್ವಲ್ಪ ಹೊತ್ತು ಕಾಯ್ದು ನಂತರ,

*"ನಾನು ಸರಿಯಾಗಿ ಊಹೆ ಮಾಡಿದೆನಲ್ಲವೇ?"*

ಎಂದು ಮತ್ತೆ ಮೆಸೇಜ್ ಕಳುಹಿಸಿದಾಗ, ಅದನ್ನು ಕಂಡ ಸುಮಾ

*"ಹಾಗೇನಿಲ್ಲ"*

ಎಂದು ಮರು ಟೈಪ್ ಮಾಡಿ ಅವನಿಗೆ ಉತ್ತರಿಸಿದಳು. ಆದರೆ ಅವನು ಅಷ್ಟಕ್ಕೇ ಬಿಡದೆ, ಅವಳ ಮನವನ್ನು ಇನ್ನೂ ಬಗೆಯುವಂತೆ

*"ಹಾಗಾದರೆ ನಿಜ ಹೇಳಿ, ಯಾಕೆ ನೀವು ದುಃಖದಿಂದ ಇದ್ದೀರಿ. ಅಂತಹ ವಿಷಯವಾದರೂ ಏನು?"*

ಎಂದು ಬರೆದು ಕಳುಹಿಸಿದ. 

*"ಅದು ನನ್ನ ವಯಕ್ತಿಕ ವಿಷಯ. ಅದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ. ನೀವು ನನ್ನ ಜೊತೆ ಫ್ರೆಂಡ್ಶಿಪ್ ಮಾಡುವಾಗ ನನ್ನ ವಯಕ್ತಿಕ ವಿಷಯಕ್ಕೆ ತಲೆ ಹಾಕುವದಿಲ್ಲ ಅಂತ ಹೇಳಿದ್ದಿರಿ. ನೆನಪಿದೆಯೇ? ಮತ್ತೆ ನನ್ನ ವಯಕ್ತಿಕ ವಿಷಯಕ್ಕೆ ತಲೆ ಹಾಕಿದರೆ ಬ್ಲಾಕ್ ಮಾಡಿ ಬಿಡ್ತೀನಿ"*

ಎಂದು ಬರೆದು ಅವನಿಗೆ ಹೆದರಿಸುವದಕ್ಕೆ ಕಳುಹಿಸಿದಳು. ಆದರೆ ಅವನು

*"ಹೌದ? ಅಂದರೆ ನಿಮಗೆ ಫ್ರೆಂಡ್ಸ್ ಮತ್ತು ಫ್ರೆಂಡ್ಶಿಪ್ ಮೇಲೆ ನಂಬಿಕೆ ಇಲ್ಲ ಎಂದ ಹಾಗಾಯಿತು"*

ಎಂದು ಉತ್ತರ ಕಳುಹಿಸಿದಾಗ, ಅವನ ಉತ್ತರ ಸುಮಾಳಿಗೆ ಒಂದು ತೆರನಾದ ಉದ್ದಟತನ ಎನಿಸಿತು. ಅದಕ್ಕೆ ಅವಳು 

*"ಹೌದು ಇಲ್ಲ ಎಂದರೆ ಏನು ಮಾಡುವಿರಿ? ನಾನಂತೂ ನಿಮ್ಮ ಎದುರಿಲ್ಲ"*

ಎಂದು ತನ್ನ ಹಠವನ್ನು ಬಿಡದಂತೆ ಅವನಿಗೆ ಉತ್ತರಿಸಿದಾಗ, ಅಭಿ,

*"ಎದುರಿಲ್ಲ ಎಂದರೆ ಏನೂ ಮಾಡಲಿಕ್ಕೆ ಆಗುವದಿಲ್ಲ ಎಂದು ನೀವು ತಿಳಿದುಕೊಂಡರೆ ತಪ್ಪು. ಒಂದು ಕೆಲಸ ಮಾಡಿ, ಒಂದು ಕ್ಷಣ ನೀವು ಕಣ್ಣು ಮುಚ್ಚಿಕೊಂಡು ನಿಮ್ಮ ಮನಸ್ಸಿನಿಂದ ನಾನು ಹೇಳಿದ ಮಾತನ್ನು ಯೋಚನೆ ಮಾಡಿ. ಆಗ ನಿಮಗೆ ಗೊತ್ತಾಗುತ್ತದೆ, ನಾನು ಹೇಳಿದ್ದು ಸರಿಯೋ ತಪ್ಪೋ ಅಂತ ನಾನು ವೈಟ್ ಮಾಡ್ತೀನಿ"*

ಎಂದು ಮೆಸೇಜ್ ಬಂತು. ಅದನ್ನು ಓದಿದ ಸುಮಾ ಅವನ ಉತ್ತರ ಕಂಡು ಅವಕ್ಕಾದಳು. ಈ ಮನುಷ್ಯ ಎಷ್ಟು ನಿಖರವಾಗಿ ನನ್ನ ಮನಸ್ಸನ್ನು ಓದುತ್ತಿದ್ದಾನೆ. ಇವನೇನಾದರೂ ತನ್ನ ಪರಿಚಯದವನಿರಬಹುದಾ ಎಂದು ಯೋಚನೆ ಮಾಡತೊಡಗಿದಳು. ಹಾಗೆ ಯೋಚಿಸುತ್ತಲೇ, 

*"ನೀವೇನು ಹೇಳೋದು, ನನಗೆ ಎಲ್ಲ ಗೊತ್ತು. ನಿಮ್ಮಿಂದ ಕಲಿಯಬೇಕಾಗಿಲ್ಲ. ನೀವೇನು ದೊಡ್ಡ ಪಂಡಿತರೂ ಅಲ್ಲ. ಸ್ನೇಹಿತರ ಸ್ನೇಹಕ್ಕೆ ಲಿಮಿಟ್ ಒಂದು ಹಂತದವರೆಗೆ ಮಾತ್ರ ಇರುತ್ತದೆ. ಅಷ್ಟೇ. ಎಲ್ಲೇ ಮೀರಿದರೆ ಅದು ಫ್ರೆಂಡ್ಶಿಪ್ ಆಗಿ ಉಳಿಯುವದಿಲ್ಲ."*

ಎಂದು ಅವನ ಉತ್ತರಕ್ಕೆ ಪ್ರತ್ಯುತ್ತರ ನೀಡಿದಾಗ, ಒಮ್ಮೆಲೇ ಅವನ ಚಾಟ್ ರೀತಿ ಬದಲಾಯಿತು. ನೇರವಾಗಿ ಬಾಣ ಬಿಟ್ಟಂತೆ

*"ಅಂದರೆ ನಿಮ್ಮ ಇವತ್ತಿನ ದುಃಖಕ್ಕೆ ನಿಮ್ಮ ಯಾರೋ ಫ್ರೆಂಡ್ಸ್ ಕಾರಣ ಎಂದ ಹಾಗಾಯಿತು."*

ಎಂದು ಅವನಿಂದ ಸಂದೇಶ್ ಬರುತ್ತಲೇ, ಸುಮಾಳಿಗೆ ಭೂಮಿಯೇ ತಿರುಗಿದಂತಾಯಿತು. ಎಷ್ಟು ನಿಖರವಾಗಿ ಅವನು ಹೇಳಿದ, ಅವನಿಗೆ ಹೇಗೆ ಗೊತ್ತಾಯ್ತು? ಅವನೇನಾದರೂ ತನ್ನ ಮನೆಯ ಸುತ್ತ ಮುತ್ತ ಇರುವನೇ? ಇದ್ದರೂ ನನ್ನ ಮತ್ತು ಶಾಂತಾಳ ನಡುವೆ ಆದ ಮಾತು ಅವನು ಕೇಳಿರುವದಕ್ಕೆ ಸಾಧ್ಯವೇ ಇಲ್ಲ. ಮಾತು ನಡೆದಿದ್ದು ಮನೆಯ ಒಳಗೆ. ಅಲ್ಲಿ ಯಾರೂ ಇರಲಿಲ್ಲ. ಆದರೂ ಅವನು ಇಷ್ಟು ಕರೆಕ್ಟ್ ಆಗಿ ಗೆಸ್ ಮಾಡಲು ಹೇಗೆ ಸಾಧ್ಯ ಎಂದು ನಿಧಾನವಾಗಿ ಕುತೂಹಲ ಬೆಳೆಯಿತು ಜೊತೆಗೆ ಅಭಿಯ ಬಗ್ಗೆ ಒಂದು ತರಹ ಭಯ ಸಹ ಶುರುವಾಯಿತು. ಅದೇ ಕುತೂಹಲ ಬೆರೆತ ಭಯದಲ್ಲಿ ಅವಳು ಚಾಟ್ ಮುಂದುವರೆಸಿದಳು

*"ನಿಮಗೆ ಹೇಗೆ ಗೊತ್ತು?"*

*"ಇವತ್ತು ನಾನು ಫೇಸ್ ಬುಕ್ಕಿಗೆ ಬಂದ ಕೂಡಲೇ ನಿಮ್ಮ ಪೋಸ್ಟ್ ಕಾಣಿಸಿತು. ಅದನ್ನು ಓದಿದಾಗ ನೀವು ದುಃಖದಲ್ಲಿ ಇದ್ದೀರಿ ಎಂದು ಅಂದುಕೊಂಡೆ. ನಿಮ್ಮ ಪೋಸ್ಟಿಗೆ ಕಾಮೆಂಟ್ ಮಾಡಬಾರದು ಎಂದು ಅಂದುಕೊಂಡಿದ್ದೆ. ಆದರೆ ನೀವು ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಹೇಗೆ ಎಂಬ ಸಂಶಯ ಬಂತು ಅದಕ್ಕೆ rubbish thought ಎಂದು ಕಾಮೆಂಟ್ ಮಾಡಿದೆ. ಆದರೆ ನೀವು ಈಗ ನನ್ನ ಜೊತೆಗೆ ಚಾಟ್ ಮಾಡುತ್ತಿದ್ದ ರೀತಿಯನ್ನು ನೋಡಿದಾಗ ಒಬ್ಬ ಫ್ರೆಂಡ್ ಗೆ ಮತ್ತೊಬ್ಬ ಫ್ರೆಂಡ್ ಯಾವುದೇ ಸಂದರ್ಭದಲ್ಲಿ ಈ ರೀತಿಯಾಗಿ ಉತ್ತರ ನೀಡುವದಿಲ್ಲ. ಆದರೆ ನೀವು ಮಾತ್ರ ಖಾರವಾಗಿ ನಿಮ್ಮ ಒಬ್ಬ ಫ್ರೆಂಡ್ ಗೆ ಉತ್ತರ ನೀಡುವದನ್ನು ಕಂಡು, ಇಂದು ನೀವು ನಿಮ್ಮ ಯಾವರೋ ಫ್ರೆಂಡ್ ಕಡೆಯಿಂದ ನೋವು ಅನುಭವಿಸಿದ್ದೀರಿ ಎಂದು ಅನ್ನಿಸಿತು. ಅಲ್ಲದೆ, ಅವರು ನಿಮ್ಮ ಅತೀ ಕ್ಲೋಸ್ ಫ್ರೆಂಡ್ ಆಗಿರಬೇಕು. ಮತ್ತು ನಿಮ್ಮ ಜೀವನದ ಬಗ್ಗೆ ಏನೋ ಇಂಪಾರ್ಟೆಂಟ್ ವಿಷಯ ಹೇಳಿರುತ್ತಾರೆ ಆದರೆ ಅದು ಅವರು ಹೇಳಿದ ಹಾಗೆ ಮಾಡುವದು ನಿಮ್ಮಿಂದ ಸಾಧ್ಯವಲ್ಲ ಎಂದುಕೊಂಡು ನಿಮಗೆ ಜೀವನ ಬೇಸರವಾದವರ ಹಾಗೆ ಆಗಿ, ನೀವು ಈ ರೀತಿ ಪೋಸ್ಟ್ ಹಾಕಿ ನನ್ನ ಜೊತೆಗೆ ಹೀಗೆ ಮಾತನಾಡುತ್ತಿರುವಿರಿ ಎಂದು ಅರಿತುಕೊಂಡೆ. ಒಂದು ವಿಷಯ ಏನೆಂದರೆ, ನೀವು ನನಗನ್ನಿಸಿದ ಹಾಗೆ ಸಾಯಂಕಾಲದಿಂದ ವೇದನೆ ಅನುಭವಿಸುತ್ತಿರುವಿರಿ. ಸರಿ ಅಲ್ಲವೇ?"*

   ಎಂದು ಅವನು ಉದ್ದನಾಗಿ ಬರೆದು ಕಳುಹಿಸಿದಾಗ, ಉಮಾ ಅದನ್ನು ಓದುತ್ತಲೇ ದಂಗಾದಳು. ಒಬ್ಬ ವ್ಯಕ್ತಿಗೆ ಈ ರೀತಿಯಾಗಿ ನಿಖರವಾಗಿ ಊಹೆ ಮಾಡುವದಕ್ಕೆ ಆಗುವದೇ? ಆದರೆ ಈ ವ್ಯಕ್ತಿ ಮಾತ್ರ ನೂರಕ್ಕೆ ನೂರು ಕಂಡವನಂತೆ ಮಾತನಾಡುತ್ತಿದ್ದಾನೆ. ಅಂದರೆ ಇವನು ಅಂತಿಥವನಲ್ಲ. ತಾನು ತಿಳಿದುಕೊಂಡಿರುವಂತೆ ಇವನು ಸಾಮಾನ್ಯದವನಲ್ಲ. ತುಂಬಾ ಚಾಣಾಕ್ಷ, ಎಂಬ ತೀರ್ಮಾನಕ್ಕೆ ಬಂದಳು. ಕೊನೆಗೆ ಅವನು ಊಹೆ ಮಾಡಿದ ರೀತಿಯನ್ನು ಕಂಡ ಅವಳು ಅವನ ಮಾತಿಗೆ ಸೋಲದೆ ಇರಲಾರದೆ ಹೋದಳು. 

*"ಹೌದು, ನೀವು ಹೇಳಿದ್ದು ಕರೆಕ್ಟ್. ಇವತ್ತು ನನ್ನ ಒಬ್ಬ ಫ್ರೆಂಡ್ ಆಡಿದ ಮಾತಿನಿಂದ ನನಗೆ ನೋವಾಗಿದೆ ಅದಕ್ಕೆ ಜೀವನ ಬೇಸರ ಬಂತು. ಅದಕ್ಕೆ ನಾನು ಈ ರೀತಿಯಾಗಿ ಪೋಸ್ಟ್ ಮಾಡಿದೆ"*

ಎಂದು ಟೈಪ್ ಮಾಡಿ ಅವನಿಗೆ ಉತ್ತರಿಸಿದಳು. ಅವಳು ಕೊಟ್ಟ ಉತ್ತರ, ಒಬ್ಬ ಮನುಷ್ಯ ತಾನು ತಪ್ಪು ಮಾಡಿ ಒಪ್ಪಿಕೊಂಡಂತಿತ್ತು. ಅತ್ತಲಿಂದ ಅಭಿ,

*"ಹೋಗಲಿ ಬಿಡಿ, ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡರೆ, ಕೊನೆವರೆಗೂ ಕೊರಗುವದೇ ಆಗುತ್ತದೆ. ಒಂದು ಮಾತು ಹೇಳ್ತಿನಿ ಕೇಳಿ. ನಾವು ಕೊರಗುತ್ತ ಕುಳಿತರೆ, ಸಾಯೋ ತನಕ ಕೊರಗುತ್ತಾಳೆ ಹೋಗಬೇಕಾಗುತ್ತದೆ. ಜೀವನ ಇರುವದು 4 ದಿನ ಮಾತ್ರ. ಒಂದು ದಿನ ಬಾಲ್ಯ ಒಂದು ದಿನ ಯೌವನ, ಮತ್ತೊಂದು ದಿನ ವೃದ್ಯಾಪ ಮತ್ತು ಕೊನೆ ದಿನ ಆ ಮೂರು ದಿನದ ಮತ್ತು ನಮ್ಮ ಸುತ್ತಲೂ ಇರುವ ಸಮಸ್ಯೆಗಳನ್ನು ಯೋಚನೆ ಮಾಡುವದರಲ್ಲಿ ಕಳೆಯುತ್ತದೆ. ಅದರಲ್ಲಿ ಒಂದು ದಿನ ನಮ್ಮ ಜೀವನದಲ್ಲಿ ಯೌವನದಲ್ಲಿ ಎಲ್ಲವನ್ನು ಅನುಭವಿಸಬೇಕಾಗುತ್ತದೆ, ಅದೇ ಒಂದು ದಿನವನ್ನು ನಾವು ನಾಲ್ಕನೆಯ ದಿನ ಮಾಡಬೇಕಾದ ಕೆಲಸವನ್ನು ಮಾಡುತ್ತಾ ಕುಳಿತರೆ, ಹೇಗೆ. ಜೀವನದ ಪ್ರಪಂಚವನ್ನು ಅನುಭವಿಸಿ ಆನಂದಿಸುವದು ಹೇಗೆ? ಅನುಭವಿಸುವದು ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ವಿನಾಕಾರಣ ಕಳೆದುಕೊಳ್ಳುವ ಈ ತೆರನಾದ ಪ್ರಸಂಗಗಳನ್ನು ಅವಾಯ್ಡ್ ಮಾಡುವದು ಸೂಕ್ತ ಅಂತ ನನ್ನ ಭಾವನೆ."*

ಎಂದು ಮತ್ತೆ ಉದ್ದನಾದ ಮೆಸೇಜ್ ಕಳುಹಿಸಿದಾಗ, ಅದನ್ನು ಓದಿದ ಸುಮಾ, ಅವನಿಗೆ

*"ತತ್ವಜ್ಞಾನಿಯಂತೆ ಹೇಳುತ್ತಿರುವಿರಲ್ಲ. ನಿಮಗೆ ಎಲ್ಲ ತಿಳಿದವರ ಹಾಗೆ."*

*"ಇದಕ್ಕೆ ತತ್ವಜ್ಞಾನಿ ಆಗಬೇಕಾಗಿಲ್ಲ. ಕೇವಲ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಸಾಕು. ಯಾರಿಗಾದರೂ ಗೊತ್ತಾಗುವದು. ಒಂದು ಮಾತು ಹೇಳಬಹುದಾ, ನೀವು ತಪ್ಪು ತಿಳಿದುಕೊಳ್ಳುವದಿಲ್ಲ ಎಂದರೆ"*

*"ಹೇಳಿ"*

*"ಪ್ರತಿ ಗಂಡಸಿಗೂ ತನಗೊಬ್ಬಳು ಸುಂದರ ಹುಡುಗಿ ಅಥವಾ ಹೆಂಡತಿ ಬೇಕೆಂದು ಬಯಸುತ್ತಾನೆ. ಅಲ್ಲದೆ ಅವನು ಅವಳು ರೂಪವತಿ ಆಗಿರಬೇಕು, ಗುಣವತಿ ಆಗಿರಬೇಕು, ಪ್ರಪಂಚದಲ್ಲಿ ತನ್ನ ಹೆಂಡತಿ ಹಾಗೆ ಬೇರೆಯವರ ಹೆಂಡತಿ ಇರಬಾರದು ಎಂದು ಅಂದುಕೊಳ್ಳುತ್ತಾನೆ. ಅದರಂತೆ ಒಂದು ಹೆಣ್ಣಿನ ಮನಸ್ಸನು ನೋಡಿದಾಗ ಅವಳು ಸಹ ಗಂಡಸಿನ ಮನಸ್ಸಿನ ಯೋಚನೆಯಂತೆ ವ್ಯತಿರಿಕ್ತವಾಗಿರುವದಿಲ್ಲ. ಅವಳಿಗೂ ತನ್ನ ಗಂಡ ಸ್ವಭಾವದಿಂದ ಒಳ್ಳೆಯವನಾಗಿರಬೇಕು, ತಾನು ಹೇಳಿದಂತೆ ಕೇಳಬೇಕು, ತನ್ನನ್ನು ಯಾವಾಗಲೂ ಪ್ರೀತಿಸುತ್ತಾಳೆ ಇರಬೇಕು, ಬೇರೆ ಹೆಣ್ಣನ್ನು ನೋಡಬಾರದು, ಚಟ ಇರಬಾರದು, ಯಾವಾಗಲೂ ಅವನ ತೋಳಿನಾಸರೆಯಲ್ಲಿ ತನ್ನ ತಲೆ ಇತ್ತು ಮಲಗಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ ಮದುವೆಯಾದ ಮೇಲೆ ನಡೆಯುವದೇನು? ಗಂಡ ಹೆಂಡತಿಯನ್ನು ಬಿಟ್ಟು ಬೇರೆಯವರ ಹೆಂಡಂದಿರು ಅವನ ಕಣ್ಣಿಗೆ ಸುಂದರಳಾಗಿ ಕಾಣುತ್ತಾರೆ. ಮನೆಯಲ್ಲಿ ಅವನ ಮಾತು ನಡೆಯುವದು ಇಂದಿನ ದಿನಮಾನದಲ್ಲಿ ದುಸ್ತರ. ಆದ್ದರಿಂದ ಅವನು ಮದಿರೆಯ ನಶೆಗೂ ಇಲ್ಲ, ಸಾಧ್ಯವಾದಷ್ಟು ಮನೆಯಿಂದ ಹೊರಗೆ ಇರುವದಕ್ಕೆ ಬಯಸುತ್ತಾನೆ. ಇತ್ತ ಕಡೆ ಹೆಂಡತಿಯಾದವಳು ತನ್ನ ಗಂಡನನ್ನ ಸಂಶಯದಿಂದ ನೋಡುವದು, ಅವನನ್ನು ಹೀಯಾಳಿಸುವದು, ಬೇರೆ ಗಂಡಂದಿರ ಜೊತೆಗೆ ಅವನನ್ನು ಕಂಪೇರ್ ಮಾಡುವವರು, ಮಾಡುತ್ತಿರುತ್ತಾರೆ. ಇದು ಇಂದಿನ ಪ್ರಪಂಚದಲ್ಲಿ ನಡೆಯುತ್ತಿರುವ ಪ್ರಾಕ್ಟಿಕಲ್ ಥಿಂಗ್ಸ್"*

ಎಂದು ಬರೆದು ಸುಮಾಳಿಗೆ ಕಳುಹಿಸಿದಾಗ ಅವನ ವ್ಯಾಖ್ಯಾನವನ್ನು ಕಂಡ ಸುಮಾ ದಂಗಾದಳು. ಎಷ್ಟು ಕರೆಕ್ಟ್ ಆಗಿ ಯೋಚನೆ ಮಾಡಿದ್ದಾನೆ. ಅವನು ಹೇಳಿರುವದರಲ್ಲಿ ಯಾವುದೇ ವಿಷಯ ಸುಳ್ಳಲ್ಲ. ಅದರಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ, ಎಂದು ಯೋಚಿಸುತ್ತಲೇ 

*"ಹೌದು ನೀವು ಹೇಳುವದು ಸರಿ"*

ಎಂದು ಉತ್ತರಿಸಿದಳು. ಅವನ ಜೊತೆ ಚಾಟ್ ಮಾಡುತ್ತಾ ಸುಮಾ ನಿಧಾನವಾಗಿ ಮರಳಿ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದಳು. ಅವಳ ಉತ್ತರವನ್ನು ಕಂಡ ಅಭಿ,

*"ಅಂದರೆ ನೀವು ಈಗ ಸಾಮಾನ್ಯ ಸ್ಥಿತಿಗೆ ಸಾವಕಾಶವಾಗಿ ಬರುತ್ತಿರುವಿರಿ ಎಂದ ಹಾಗಾಯಿತು"*

ಎಂದು ಬರೆದು ಅವಳಿಗೆ ಕಳುಹಿಸಿ ಮತ್ತೆ ಅವಳನ್ನು ಕೆಣಕುವಂತೆ ಮಾಡಿದ. 

*"ನಾನು ಎಷ್ಟಾದರೂ ಮನುಷ್ಯಳು. ಇಡುವ ಹೆಜ್ಜೆ ತಪ್ಪುವದು ಸಹಜವಲ್ಲವೇ?"*

*"ಕಾಲುಗಳ ಮೇಲೆ ನಡೆಯುವಾಗ ಹೆಜ್ಜೆ ತಪ್ಪಿದರೆ ಮೈಯನ್ನು ಸಂಭಾಳಿಸಬಹುದಾಗಿದೆ. ಆದರೆ ಜೀವನದ ಹೆಜ್ಜೆಗಳ ಮೇಲೆ ನಡೆಯುವಾಗ ಒಂದು ಸಣ್ಣ ಹೆಜ್ಜೆ ಇಡುವದು ಏರು ಪೇರಾದರೆ ಇಡೀ ಜೀವನದುದ್ದಕ್ಕೂ ನಾವು ಹೇಳಲಾರದ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಅದಕ್ಕೆ ನನ್ನದು ನಿಮ್ಮಲ್ಲಿ ಒಂದು ವಿನಂತಿ ಏನೆಂದರೆ, ಇನ್ನು ಮುಂದಾದರೂ ನೀವು ತಪ್ಪು ಯೋಚನೆ ಮಾಡಬೇಡಿ. ಯಾರ ಮಾತಿಗೂ ಕಿವಿಗೊಡಬೇಡಿ. ನಿಮ್ಮ ಜೀವನದಲ್ಲಿ ನೀವು ಸ್ವಂತಂತ್ರರು ನೀವು ಹ್ಯಾಪಿ ಆಗಿರಲು ಏನು ಬೇಕು ಅದನ್ನಷ್ಟು ಮಾಡಿ. ನಾನು ಹೀಗೆ ಮಾಡುವದರಿಂದ ಸಮಾಜ ನನ್ನ ನೋಡಿ ನಗುತ್ತದೆ ಅಂದಾಗಲಿ ನಾನು ಹೀಗೆ ಮಾಡಿದರೆ ಹೇಗಿರುತ್ತದೆ ಅಂತ ಯೋಚನೆ ಮಾತ್ರ ಮಾಡಬೇಡಿ. ಅದರಿಂದಲೇ ದುಃಖದ ಸೆಲೆ ಉತ್ಪತ್ತಿಯಾಗುವದು."*

ಎಂದು ಹೇಳಿದಾಗ ಅವನ ಮಾತಿಗೆ ಅವಳಿಗೆ ಇಲ್ಲವೆನ್ನಲಾಗಲಿಲ್ಲ. ಕೊನೆಗೆ ಅವಳು ತಾನು ಸೋತಂತೆ 

*"ಆಯ್ತು. ನಿಮ್ಮ ಸಲಹೆಗೆ ಧನ್ಯವಾದಗಳು"*

ಎಂದು ಉತ್ತರ ಬರೆದು ಕಳುಹಿಸಿದಳು. ಅದಕ್ಕೆ ಅವನು 

*"ಥ್ಯಾಂಕ್ಸ್ ಎಲ್ಲ ಬೇಡ. ನಾನು ಹೇಳಿದ್ದರಿಂದ ನಿಮ್ಮ ಮನಸ್ಸಿನ ದುಗುಡ ಕಡಿಮೆಯಾಗಿ ನೀವು ಮೊದಲಿನಂತಾದರೆ ಸಾಕು. ಅಲ್ಲಿಗೆ ನಾನು ಹೇಳಿದ ವಿಷಯ ಸಾರ್ಥಕವಾಗುತ್ತದೆ"*

ಎಂದು ಬರೆದು ಹೇಳಿದಾಗ, ಸುಮಾ 

*"ಆಯ್ತಪ್ಪ, ನಿಮ್ಮಿಂದ ನನ್ನ ಡಿಪ್ರೆಶನ್ ಕಡಿಮೆಯಾಗಿದೆ, ಅಲ್ಲ ಸಂಪೂರ್ಣವಾಗಿ ಹೋಗಿ ಬಿಟ್ಟಿದೆ. ಈಗ ನಾನು ನಾರ್ಮಲ್ ಆಗಿದ್ದೇನೆ"*

ಎಂದು ಹೇಳಿದಾಗ ಅವನು ನಗುತ್ತಿರುವ ಬೊಂಬೆಯ ಚಿತ್ರವನ್ನು ಅವಳಿಗೆ ಉತ್ತರ ರೂಪದಲ್ಲಿ ಕಳುಹಿಸಿದ. ಅದನ್ನು ನೋಡುತ್ತಿದ್ದಂತೆ ಸುಮಾಳಿಗೆ ಅವನು ತನ್ನನ್ನು ಡಿಪ್ರೆಶನ್ ದಿಂದ ಹೊರಗೆ ತಂದು ತನಗಿಂತ ಅವನು ಸ್ವತಃ ಸಂತೋಷ್ ಪಡುತ್ತಿದ್ದಾನೆ ಎಂದು ಭಾವಿಸಿಕೊಂಡಳು. ಆ ರೀತಿಯಾಗ್ಯೆ ಅವನು ನಗುತ್ತಿರುವ ಬೊಂಬೆಯ (emoji) ಚಿತ್ರವನ್ನು ಕಳಿಸಿದ್ದ. ಅವನ ಮಾತಿನ ಧಾಟಿ, ವೈಖರಿಯನ್ನು ಕಂಡ ಸುಮಾ ಅವನಿಗೆ ಈಗ ತಾನು ಪ್ರಶ್ನೆ ಕೇಳಲು ಪ್ರಾರಂಭಿಸಿದಳು. 

*"ಒಂದು ಮಾತು ನಿಮ್ಮನ್ನು ಕೇಳಬಹುದೇ?"*

ಎಂದು ಕೇಳಿದಾಗ 

*"ಯಾಕೆ ಕೇಳಬಾರದು ಕೇಳಿ. ನನ್ನ ಫ್ರೆಂಡ್ಶಿಪ್ ಆದ ಮೇಲೆ ನೀವು ನನ್ನನ್ನ ಪ್ರಶ್ನೆ ಮೊದಲಬಾರಿಗೆ ಕೇಳುತ್ತಿರುವಿರಿ. ಅಂಜಬೇಡಿ ಯಾವ ವಿಷಯವಾದರೂ ಸಂಕೋಚವಿಲ್ಲದೆ ಕೇಳಿ"*

ಎಂದು ಉತ್ತರಿಸಿದಾಗ, ಅವನ ಉತ್ತರದ ವೈಖರಿಯನ್ನು ನೋಡಿದ ಸುಮಾ, 

*"ನನ್ನ ಪ್ರಶ್ನೆಗೆ ಸತ್ಯವಾದ ಉತ್ತರ ಹೇಳ್ತೀರಾ?"*

*"ಸಂಶಯವಿದ್ದರೆ ಹೇಳಿ. ಆಣೆ ಮಾಡ್ತೀನಿ ನಂತ್ರ ನಿಮಗೆ ನಂಬಿಕೆ ಬಂದ್ರೆ ಕೇಳಿ"*

ಎಂದು ಉತ್ತರಿಸಿದ. ಅವನ ಉತ್ತರ ಕೊಟ್ಟ ರೀತಿಯನ್ನು ನೋಡಿದ ಉಮಾಳಿಗೆ ನಗು ಬಂತು. ನಗುತ್ತಲೇ ತನಗೆ ಕೇಳಬೇಕೆನಿಸಿದ ಪ್ರಶ್ನೆಯನ್ನು ಕೇಳತೊಡಗಿದಳು.

*"ನಿಜವಾಗಿಯೂ ನಿಮ್ಮ ಮದುವೆಯಾಗಿಲ್ಲವೇ?"*

*"ಇಲ್ಲ ಸತ್ಯವಾಗಿಯೂ ಇಲ್ಲ. ಯಾಕೆ?"*

*"ಜೀವನದ ಎಲ್ಲ ವಿಷಯಗಳನ್ನು ನಾಲ್ಕು ಸಾಲಿನಲ್ಲಿ ಹೇಳಿ ನನಗೆ ಧೈರ್ಯ ತುಂಬಿದಿರಲ್ಲ ಅದಕ್ಕೆ ಕೇಳಿದೆ. ನನಗೇನೋ ನೀವು ಮದುವೆಯಾದವರಿರಬೇಕು, ಅನುಭವದಿಂದಲೇ ಈ ಮಾತು ಹೇಳುತ್ತಿರುವಿರಿ ಅಂತ ಅಂದುಕೊಂಡಿದ್ದೆ"*

*"ಇಲ್ಲ ರೀ, ನನಗಿನ್ನೂ ಮದುವೆಯಾಗೋ ಇಚ್ಛೆ ಇಲ್ಲ."*

*"ಯಾಕೆ?"*

*"ಅದು ಮತ್ತೆ ಯಾವಾಗಲಾದರೊಮ್ಮೆ ಹೇಳುತ್ತೇನೆ ಈಗ ಬೇಡ."*

ಎಂದು ಅವನು ಉತ್ತರಿಸಿದಾಗ, ಅವನ ಉತ್ತರ ಕಂಡು ಸುಮಾಳಿಗೆ, ಅವನೂ ಸಹ ತನ್ನ ಹಾಗೆ ಯಾವುದೇ ವೇದನೆ ಅನುಭವಿಸಿರಬಹುದು ಅದಕ್ಕೆ ಈಗ ಉತ್ತರ ಹೇಳುವ ಸ್ಥಿತಿಯಲ್ಲಿ ಇಲ್ಲ ಅಂತಾ ಅಂದುಕೊಂಡಳು. ಆದರೆ ಹೆಣ್ಣು ಸಹಜ ಕುತೂಹಲ ಅವಳನ್ನು ಆ ವಿಷ್ಯವಾಗಿ ಕಾಡತೊಡಗಿತು. 

*"ನೀವು ಮದುವೆಯಾಗಿಲ್ಲ. ನಿಮಗೆ ವೈವಾಹಿಕ ಜೀವನದ ಅನುಭವ ಇಲ್ಲ. ಆದರೂ ನೀವು ಇಷ್ಟು ನಿಖರವಾಗಿ ಹೇಗೆ ಎಲ್ಲ ವಿಷಯ ಹೇಳಿದಿರಿ?"*

*"ಎಲ್ಲ ವಿಷಯ ತಿಳಿದುಕೊಳ್ಳಲು ಮಾಡುವೆ ಆಗಲೇ ಬೇಕು ಅಂತೇನಿಲ್ಲ. ಸಮಾಜವನ್ನು ಸ್ಟಡಿ ಮಾಡುತ್ತಿದ್ದಾರೆ ವಿಷಯ ಗೊತ್ತೇ ಆಗುತ್ತೆ"*

*"ಅದು ಹೇಗೆ? ಸ್ವಲ್ಪ ಬಿಡಿಸಿ ಹೇಳಿ"*

*"ನನ್ನ ಪಕ್ಕದ ಮನೆಯಲ್ಲಿ ಗಂಡ ಹೆಂಡಂದಿರು ಇದ್ದಾರೆ ಅವರು ಯಾವಾಗಲೂ ಜಗಳಾಡುತ್ತಾರೆ. ಅವರ ಕಂಪ್ಲೇಂಟ್ ಏನಿದ್ದರೂ ನನ್ನ ಮುಂದೆ. ಒಂದು ಸಲ ಅವಳ ಗಂಡನಿಗೆ ಆರೋಗ್ಯ ತಪ್ಪಿದಾಗ ಅವಳು ದನದ ಡಾಕ್ಟರ್ ಕರೆಸಿದ್ದಳು ಯಾಕೆ ಹಾಗೆ ಮಾಡಿದೆ ಎಂದು ನಾನು ಕೇಳಿದಾಗ ಅವಳು ಕೊಟ್ಟಿದ್ದ ಉತ್ತರ ಅವಳ ಮಾತಿನಲ್ಲಿ ಹೇಳ್ತಿನಿ ಕೇಳಿ.

*ಏನು ಮಾಡೋದು, ನನ್ನ ಗಂಡನ್ನ ಮನುಷ್ಯ ಅಂತ ನಾನು ಹೇಗೆ ತಿಳಿದುಕೊಳ್ಳಲಿ. 

ಬೆಳಿಗ್ಗೆ ಕೋಳಿಯ ಹಾಗೆ ಬೇಗನೆ ಏಳ್ತಾನೆ. ಕಾಗೆಯ ಹಾಗೆ ಅರ್ಧ ಮಾರ್ಧ ಸ್ನಾನ. ಕೋತಿಯ ಹಾಗೆ ಕಸಿದುಕೊಂಡು ಟಿಫಿನ್ ಮಾಡ್ತಾನೆ. ಕುದುರೆಯ ಹಾಗೆ ಕೆನೆಯುತ್ತ ಕೆಲಸಕ್ಕೆ ಹೋಗುತ್ತಾನೆ. ಕತ್ತೆ ತರ ಕೆಲಸ ಮಾಡ್ತಾನೆ. ಮನೆಗೆ ಬಂದು ನನ್ನನ್ನು ನೋಡಿ ನಾಯಿ ತರ ಬೊಗಳ್ತಾನೆ. ಮೊಸಳೆ ತರ ರಾತ್ರಿ ಊಟ ಮಾಡ್ತಾನೆ. ಕೋಣನ ಹಾಗೆ ಬಿದ್ದುಕೊಳ್ತಾನೆ. ಇಷ್ಟೆಲ್ಲಾ ನಾನು ಡಾಕ್ಟರ್ಗೆ ಹೇಳ್ತಿದ್ರೆ ಗೂಬೆ ಹಾಗೆ ಕಣ್ಣು ಬಿಟ್ಕೊಂಡು ನೋಡ್ತಾನೆ. ಈಗ ನೀನೆ ಹೇಳು ಇಂಥ ಪ್ರಾಣಿಗಳ ಗುಣ ಇರೋ ವ್ಯಕ್ತಿಗೆ ಆರೋಗ್ಯ ಸರಿ ಮಾಡಲು ಮನುಷ್ಯನ ಟ್ರೀಟ್ ಮಾಡೋ ಡಾಕ್ಟರ್ ಕಡೆಯಿಂದ ಸಾಧ್ಯವಿಲ್ಲ ಎಂದು ನಾನು ಗೊತ್ತು ಮಾಡಿಕೊಂಡೆ ಪ್ರಾಣಿಗಳ ಡಾಕ್ಟರ್ ಕರೆಸಿದ್ದು*

ಎಂದು ನನ್ನ ಮುಂದೆ ಹೇಳಿದಳು. ಆದರೆ ಗಂಡನೆಂಬ ಪ್ರಾಣಿ ಸಹ ಅವನೂ ಹಾಗೆ, ಅವನೂ ತನ್ನ ಹೆಂಡತಿ ವಿರುದ್ಧ ನನ್ನ ಮುಂದೆಯೇ ಕಂಪ್ಲೇಂಟ್ ಹೇಳಿದ್ದ. ಅವನ ಮಾತಿನಲ್ಲಿ ಹೇಳಬೇಕಾದರೆ 

ಈಗಿನ ದಿನಮಾನಗಳಲ್ಲಿ ಗಂಡಸಾಗಿ ಹುಟ್ಟುವದೆ ಒಂದು ಶಾಪ. ತಾಯಿ ಎದುರಿಗೆ ಮಗ ಹೆಂಡತಿಯ ಜೊತೆಗೆ ಪ್ರೀತಿಯಿಂದ ಮಾತನಾಡಿದರೆ ಅವನು ಹೆಂಡತಿ ಗುಲಾಮ. ತಾಯಿಯ ಜೊತೆಗೆ ಒಳ್ಳೆ ರೀತಿಯಲ್ಲಿ ಮಾತನಾಡಿದರೆ, ತಾಯಿ ಸೆರಗು ಹಿಡಿದುಕೊಂಡು ಅಲೆದಾಡೋ ಮಗ. ಮಕ್ಕಳು ಒಳ್ಳೆಯ ರೀತಿಯಿಂದ ಬೆಳೆಯಬೇಕೆಂದು ಅವರನ್ನು ಒಂದೆರಡು ಏಟು ಹೊಡೆದರೆ ನಿರ್ದಯಿ. ಅವರನ್ನು ಏನೂ ಕೇಳದೆ ಇದ್ದರೆ ಜವಾಬ್ದಾರಿಯಿಲ್ಲದವನು. ಮನೆಯಿಂದ ಹೊರಗೆ ಉಳಿದುಕೊಂಡರೆ ಬೇಜವಾಬ್ದಾರ. ಮನೆಯಲ್ಲಿ ಕುಳಿತುಕೊಂಡರೆ ಉಪಯೋಗವಿಲ್ಲದವನು. ಹೆಂಡತಿಯನ್ನು ಅವಳು ಹೇಳಿದ ಹಾಗೆ ನೌಕರಿ ಮಾಡಲು ಕಳುಹಿಸದಿದ್ದರೆ, ಸಂಶಯ ಸ್ವಭಾವದವನು ಕಳುಹಿಸಿದರೆ, ಹೆಂಡತಿಯನ್ನು ದುಡಿಸುವವ. ಹೀಗೆ ಇದ್ದರೆ ಸುಖದಿಂದ ಸಂಸಾರ ಮಾಡುವದಕ್ಕೆ ಹೇಗೆ ಸಾಧ್ಯ ಎಂದು ನನ್ನನ್ನೇ ಕೇಳುತ್ತಾರೆ.ಏನು ಮಾಡಬೇಕು"*

ಎಂದು ಬರೆದು ಕಳುಹಿಸಿದಾಗ, ಅವನು ಬರೆದ ವಿಷ್ಯವನ್ನು ಓದಿದ ಸುಮಾಳಿಗೆ ನಗು ತಡೆಯುವದಕ್ಕಾಗಲಿಲ್ಲ. ಬಿದ್ದು ಬಿದ್ದು ನಕ್ಕಳು ಕಣ್ಣು ತುಂಬಾ ನೀರು ಬಂತು. ಹಾಗೆ ಅವನ ಮಾತಿನಿಂದ ಅವಳ ಮನದಲ್ಲಿದ್ದ ವ್ಯಥೆ ಸಂಪೂರ್ಣವಾಗಿ ಕರಗಿ ಹೋಗಿತ್ತು.

*"ಸರಿ ನೀವು ಏನು ಕೆಲಸ ಮಾಡುವದು?"*

ಎಂದು ಅವಳು ಅಭಿಯನ್ನು ಪ್ರಶ್ನಿಸಿದಳು. 

*"ನಾನು ಒಂದು ದೊಡ್ಡ ಕಂಪನಿಯಲ್ಲಿ ಚಿಕ್ಕ ಕೆಲಸಗಾರ"*

ಎಂದು ಉತ್ತರಿಸಿದರೂ ಸಹ ಅದರಲ್ಲಿಯೂ ಅವನ ತುಂಟತನ ಎದ್ದು ಕಾಣುತ್ತಿತ್ತು. ಅವನು ಸುಮಾಳ ಪ್ರಶ್ನೆಗೆ ಉತ್ತರಿಸಿ, ಅವನೂ ಸಹ ಒಂದು ಪ್ರಶ್ನೆ ಕೇಳಿದ

*"ನೀವು ಹೌಸ್ ವೈಫ್?"*

ಎಂದಾಗ ಅವನಿಗೆ ಹೇಗೆ ಉತ್ತರ ಹೇಳಬೇಕು ಅಂತ ಮಾತ್ರ ಅವಳಿಗೆ ಗೊತ್ತಾಗಲಿಲ್ಲ. ಅವಳು ಎಂದಿಗೂ ಯಾರಿಗೂ ಸುಳ್ಳು ಹೇಳುತ್ತಿರಲಿಲ್ಲ. ಏನು ಮಾಡುವದು ಎಂದು ಯೋಚನೆ ಮಾಡಿ, ಇದ್ದದ್ದು ಹೇಳಿದರಾಯಿತು ಎಂದುಕೊಂಡು

*"ನಾನು ಎಕ್ಷ ಹೌಸ್ ವೈಫ್. ಈಗ ನಾನು ಕೆಲಸದಲ್ಲಿ ಇದ್ದೀನಿ"*

*"ಒಹ್ ನೈಸ್. ಒಂದು ವಿಷಯ ತಿಳಿಯಲಿಲ್ಲ. ಎಕ್ಷ ಹೌಸ್ ವೈಫ್ ಅಂದ್ರೆ?"*

*"ನನ್ನ ಹಸ್ಬೆಂಡ್ ಇಲ್ಲ. ಅದಕ್ಕೆ ಎಕ್ಷ ಹೌಸ್ ವೈಫ್ ಅಂತ ಹೇಳಿದ್ದು"*

*"ಒಹ್, ಡೈವೋರ್ಸ್?"*

ಎಂದಾಗ ಅವಳ ಎದೆ ಒಮ್ಮೆಲೇ ಢವಗುಟ್ಟಿತು. ಅವನ ಪ್ರಶ್ನೆಗೆ ಉತ್ತರಿಸುತ್ತಾ ಹೋದರೆ ಅವನು ತನ್ನ ಎಲ್ಲ ವಿಷಯ ತಿಳಿದುಕೊಳ್ಳುವ ಸಂಭವ ಇದೆ ಅಂದುಕೊಂಡು ಸ್ವಲ್ಪ ಖಾರವಾಗಿಯೇ

*"ಏನ್ರಿ, ಎಕ್ಷ ಹೌಸ್ ವೈಫ್ ಅಂದ ಕೂಡಲೇ ಡೈವೋರ್ಸ್ ಆಗಿದೆ ಎಂದು ಹೇಗೆ ಹೇಳಿದಿರಿ? ಬೇರೆ ವಿಷಯವೂ ಇರಬಹುದಲ್ಲ"*

*"ಎಕ್ಷ ಹೌಸ್ ವೈಫ್ ಆಗಬೇಕಾದರೆ ಎರಡೇ ಪೊಸ್ಸಿಬಿಲಿಟಿ ಇರ್ತವೆ. ಒಂದು ಡೈವೋರ್ಸ್ ಇನ್ನೊಂದು ಅಂದರೆ ಹಸ್ಬೆಂಡ್ ತೀರಿ ಹೋದರೆ ಮಾತ್ರ ಆ ಪಟ್ಟ ಬರುತ್ತದೆ. ಆದರೆ ಎರಡನೆಯದನ್ನು ಯಾಕೆ ನೇರವಾಗಿ ಕೇಳಬೇಕು ಎಂದುಕೊಂಡು ಆ ರೀತಿ ಕೇಳಿದೆ"*

*"ಎರಡನೆಯದು"*

ಎಂದು ಚುಟುಕಾಗಿ ಉತ್ತರ ನೀಡಿದಳು. ಅತ್ತಲಿಂದ ಒಂದು ನಿಮಿಷ ಯಾವುದೇ ಉತ್ತರ ಬರಲಿಲ್ಲ. ಮುಂದೆ ಅವನು ಏನು ಕೇಳಬಹುದು ಎಂದುಕೊಂಡು ಸುಮಾ, ಅವನ ಮುಂದಿನ ಮಾತಿಗಾಗಿ ವೇಟ್ ಮಾಡುತ್ತಿದ್ದಳು. ಆದರೆ ಅತ್ತಲಿಂದ ಅಭಿ ಕಳುಹಿಸಿದ್ದು ಒಂದೇ ಪದ 

*"ಸಾರೀ"*

ಅದನ್ನು ನೋಡಿ ಸುಮಾಳಿಗೆ ಅವನ ಬಗ್ಗೆ ಮತ್ತೆ ಕನಿಕರ ಬಂದು,

*"ಯಾಕೆ ಸಾರೀ ಹೇಳ್ತಿದಿರಿ?"*

*"ನಿಮ್ಮ ಹಸ್ಬೆಂಡ್ ಇಲ್ಲ ಅನ್ನೋ ವಿಷಯ ಕೇಳಿ ಏನೋ ಒಂದು ತರಹ ವೇದನೆ ಮನಸ್ಸಿಗೆ ಆಯಿತು. ಅದಕ್ಕೆ ಸಾರೀ ಅಂದೇ"*

*"ಪರವಾಯಿಲ್ಲ ಬಿಡಿ"*

*"ನನಗೆ ಗೊತ್ತಿರಲಿಲ್ಲ. ಅಲ್ಲದೆ ನೀವು ಸ್ಟೇಟಸ್ ದಲ್ಲಿ ಇದರ ಬಗ್ಗೆ ಏನೂ ಹೇಳಿಲ್ಲ ಅದಕ್ಕೆ ಗೊತ್ತಾಗಲಿಲ್ಲ"*

*"ಹೌದು ನಾನು ಏನೂ ಹಾಕಿಲ್ಲ. ನಾನು ಫೇಸ್ ಬುಕ್ಕಿನಲ್ಲಿ ತೀರಾ ಇತ್ತೀಚಿಗೆ ಬರ್ತಿದ್ದೇನೆ. ಮೊದಲಿನಿಂದಲೂ ಬರ್ತಿರಲಿಲ್ಲ. ಆದ್ರೆ ನನ್ನ ಸ್ಟೂಡೆಂಟ್ಸ್ ನನಗೆ ಫೇಸ್ ಬುಕ್ ಗೆ ಬರಲು ತುಂಬಾ ಒತ್ತಾಯ ಮಾಡಿದರು. ಅಲ್ಲದೆ, ನನಗೂ ಸಹ ಹೊತ್ತು ಕಳೆಯುವದಕ್ಕೆ ಏನಾದರೂ ಒಂದು ಸಾಧನ ಬೇಕಾಗಿತ್ತು. ಅದಕ್ಕೆ ಫೇಸ್ ಬುಕ್ ಆಯ್ಕೆ ಮಾಡಿಕೊಂಡೆ"*

*"ಮಕ್ಕಳು?"*

*"ಇಲ್ಲ"*

*"ಒಹ್ ಐ ಆಮ್ ಎಕ್ಷಟ್ರೀಮ್ಲಿ ಸಾರೀ. ನನ್ನ ಪ್ರಶೆಯಿಂದ ನಿಮಗೆ ನೋವಾಗಿರಬೇಕು"*

*"ಹಾಗೇನಿಲ್ಲ. ಈಗೆಲ್ಲ ಅದು ರೂಢಿಯಾಗಿದೆ. ಸತ್ಯ ಯಾವತ್ತಿದ್ರೂ ಸತ್ಯ ತಾನೇ. ನಾವು ಸುಳ್ಳು ಹೇಳಿದರೆ ಅದು ಸತ್ಯವಾಗಿ ಬದಲಾಗುವದಿಲ್ಲವಲ್ಲ. ಅದಕ್ಕೆ ಸತ್ಯ ಹೇಳುವದು ಬೆಟರ್. ಒಂದು ಸಲ ಸುಳ್ಳು ಹೇಳಿದರೆ, ಮೇಲಿಂದ ಮೇಲೆ ಸುಳ್ಳನ್ನೇ ಹೇಳಬೇಕಾಗುತ್ತೆ. ಅದಕ್ಕೆ ಬದಲಾಗಿ ಸತ್ಯವನ್ನು ಹೇಳಿದರೆ ಒಳ್ಳೆಯದಲ್ಲವೇ?"*

ಎಂದು ಅವನಿಗೆ ಸಮಜಾಯಿಸಿ ನೀಡುತ್ತಾ ಬರೆದು ಕಳುಹಿಸಿದಾಗ, ಅವನು

*"ನೀವು ಅಂದಿದ್ದು ನಿಜ. ಆದರೆ ನನಗೆ ಒಂದು ಮಾತು ಸಂತೋಷವಾಗುತ್ತಿದೆ. ನೀವು ಎಷ್ಟೇ ಚಾಟ್ ಮಾಡಿದರೂ ಸಹ ನಿಮ್ಮ ಬಗ್ಗೆ ನೀವು ನಿಜ ಹೇಳ್ಕೊಂಡಿದ್ದೀರಿ. ಅದಕ್ಕೆ ನಾನು ನಿಮ್ಮಂಥ ಫ್ರೆಂಡ್ ಪಡೆದಿದ್ದಕ್ಕೆ ಖುಷಿ ಪಡ್ತೀನಿ"*

*"ನಾನು ಬೇಕಾದ್ರೆ ಸತ್ಯ ಹೇಳಿ ಸಾಯ್ತಿನಿ. ಆದರೆ ಸುಳ್ಳು ಹೇಳಿ ಮಾತ್ರ ಬದುಕಿರೋಲ್ಲ"*

*"ನಿಜ ಕಣ್ರೀ. ನಾನು ಅದೇ ಸ್ವಭಾವದವನು."*

ಎಂದು ಬರೆದು ಕಳುಹಿಸಿದ. ಮುಂದೆ ಏನು ಮಾತಾಡಬೇಕು ಎಂದು ಸುಮಾ ಸಂದಿಗ್ದದಲ್ಲಿ ಬಿದ್ದಳು. ಅವನು ಏನಾದರೂ ತನ್ನನ್ನು ಕೇಳುವ ಮೊದಲೇ ತಾನೇ ಅವನನ್ನು ಕೇಳಬೇಕು ಅಂದುಕೊಂಡಳು. ಅತ್ತ ಕಡೆಯಿಂದಲೂ ಸಹ ಏನೂ ಮೆಸೇಜ್ ಇರಲಿಲ್ಲ. ಬಹುಶ ಅವನು ಸಹ ತನ್ನ ಪರಿಸ್ಥಿತಿಯಲ್ಲಿ ಇರಬಹುದು ಎಂದುಕೊಂಡಳು. ಕೊನೆಗೆ ತಾನೇ

*"ನಿಮ್ಮ ಮದುವೆ ಯಾಕಾಗಿಲ್ಲ"*

ಎಂದು ಅವನನ್ನು ಪ್ರಶ್ನಿಸಿ ಪ್ರಶ್ನೆ ಬರ್ದು ಕಳುಹಿಸಿದಾಗ ಅತ್ತಲಿಂದ ಅವನು

*"ಗೊತ್ತಿಲ್ಲ. ನನ್ನ ತಂದೆ ತಾಯಿ ನನಗೆ ಬಹಳ ಒತ್ತಾಯ ಮಾಡ್ತಿದ್ದಾರೆ ಆದರೆ ನನಗೆ ಯಾಕೋ ಏನೋ ಈಗಲೇ ಮದುವೆಯಾಗೋ ಮನಸ್ಸಿಲ್ಲ."*

*"ವಯಸ್ಸು ಮೀರಿದರೆ ನಿಮಗೆ ಸಿಗೋದು ಮುದುಕಿ. ಹುಡುಗಿ ಅಲ್ಲ"*

ಎಂದು ಬರೆದು ಕಳುಹಿಸಿ ಅದಕ್ಕೆ ತಾನೇ ನಗತೊಡಗಿದಳು. ಆದರೆ ಅಷ್ಟರಲ್ಲಿ ಅವನು 

*"ಒಂದು ಮಾತು ಕೇಳ್ತೀನಿ ತಪ್ಪು ತಿಳಿಯಬೇಡಿ. ನಿಮ್ಮ ವಯಸ್ಸು ನೋಡಿದರೆ ನೀವು ಇನ್ನೊಂದು ಮಾಡುವೆ ಆಗಬಹುದಾಗಿತ್ತಲ್ಲ. ಯಾಕಾಗಿಲ್ಲ"*

ಎಂದು ಬರೆದು ಕಳುಹಿಸಿದಾಗ ಸುಮಾ ಆ ಪ್ರಶ್ನೆಯನ್ನು ನೋಡಿ ಗೊಂದಲಕ್ಕೆ ಬಿದ್ದಳು. ಏನು ಉತ್ತರ ಕೊಡಬೇಕು ಎನ್ನುವದು ಅವಳಿಗೆ ಹೊಳೆಯಲಿಲ್ಲ. ಅವನ ಪ್ರಶ್ನೆ ನೋಡುತ್ತಿದ್ದಂತೆ ಅವಳಿಗೆ ಮೈ ಸಣ್ಣಗೆ ಬೆವರಿತು. ನಿಧಾನವಾಗಿ ಮತ್ತೆ ಯಾವ ವಿಷಯದಿಂದ ಇವತ್ತು ತನ್ನ ಮೂಡ್ ಕೆಟ್ಟಿತ್ತೋ ಮತ್ತೆ ಅದೇ ವಿಷಯ ಇಲ್ಲಿ ಬರ್ತಿದೆ, ಎಂದುಕೊಂಡ ಸುಮಾ ಕೂಡಲೇ ಅವನಿಗೆ,

*"ಸರಿ ರಾತ್ರಿ ಬಹಳವಾಗಿದೆ, ನಾಳೆ ನೋಡೋಣ. ಗುಡ್ ನೈಟ್"*

ಎಂದು ಹೇಳಿ ಚಾಟ್ ಎಂಡ್ ಮಾಡಿ ಫೇಸ್ ಬುಕ್ ಮೆಸ್ಸೆಂಜರ್ ದಿಂದ ಹೊರಗೆ ಬಂದಳು. ಅವನ ಉತ್ತರಕ್ಕೂ ಕಾಯಲಿಲ್ಲ. ಕಂಪ್ಯೂಟರ್ ಆಫ್ ಮಾಡಿದವಳೇ ಹೋಗಿ ಮಂಚದ ಮೇಲೆ ಮಲಗಿಕೊಂಡಳು. ಅವಳ ತಲೆಯಲ್ಲಿ ಮನು ಹೇಳಿದ ವಿಚಾರ ಬೃಹತ್ ಆಕಾರ ತಾಳಿಕೊಂಡು ತಲೆ ಸುತ್ತತೊಡಗಿತು. ಸುಮ್ಮನೆ ಕಣ್ಣು ಮುಚ್ಚಿಕೊಂಡಳು. ಹಾಗೆ ಅದೇ ಯೋಚನೆ ಮಾಡುತ್ತಾ ಅವಳಿಗೆ ನಿದ್ರೆ ಹತ್ತಿತು. 




8

    ಕನಸಿನಲ್ಲಿ ಅವಳಿಗೆ ತಾನು ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಕುಳಿತಿರುವಂತೆಯೂ ಮತ್ತು ಅದರಿಂದ ಯಾವನೋ ಒಬ್ಬ ಯುವಕ ಮೊಬೈಲ್ ಒಳಗಿನಿಂದ ಹೊರಗೆ ಬರುತ್ತಿರುವಂತೆ ಭಾಸವಾಗತೊಡಗಿತು. ಹಾಗೆ ಅವಳು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅದರ ಕಡೆ ನೋಡುತ್ತಿರುವಾಗ ಆ ಯುವಕ ಅದರಿಂದ ಹೊರಗೆ ಬಂದು ಅವಳ ಎದುರಿಗೆ ಕೈ ಕಟ್ಟಿಕೊಂಡು ನಿಂತಹಾಗೆ ಆಯಿತು. ಅವನನ್ನು ನೋಡುತ್ತಲೇ ಸುಮಾ ಹಾಗೆ ಅವನನ್ನೇ ದಿಟ್ಟಿಸಿ ನೋಡುತ್ತಾ ಕುಳಿತುಕೊಂಡು ಬಿಟ್ಟಳು. ಆ ಯುವಕ ಅವಳಿಂದ ಸ್ವಲ್ಪ ದೂರದಲ್ಲಿ ನಿಂತು ಅವಳನ್ನೇ ದಿಟ್ಟಿಸಿ ನೋಡುತ್ತಾ ನಗುತ್ತಲಿದ್ದ. ಏನು ಮಾಡಬೇಕು ಎಂದು ಯೋಚನೆ ಮಾಡುವಷ್ಟರಲ್ಲಿ ಅವಳಿಗೆ ಎಚ್ಚರವಾಯಿತು. ಹಾಸಿಗೆಯಲ್ಲಿ ಎದ್ದು ಕುಳಿತ ಅವಳು, ಸುಮ್ಮನೆ ಐದು ನಿಮಿಷ ಕುಳಿತಳು. ಕನಸಿನಲ್ಲಿ ಕಂಡ ವಿಷಯ ಪದೇ ಪದೇ ಕಣ್ಣ ಮುಂದೆ ಬರುತ್ತಿತ್ತು. ಯಾಕೋ ಏನೋ ಗೊತ್ತಿಲ್ಲ ಮತ್ತೆ ಮತ್ತೆ ಮನಸ್ಸು ಅದೇ ದೃಶ್ಯವನ್ನು ನೋಡಲು ಬಯಸುತ್ತಿತ್ತು. ಆದರೆ ಮತ್ತೊಂದು ಕಡೆಗೆ ಅವಳ ವಿವೇಕ ಮಾತ್ರ, ಅವಳನ್ನು ಎಚ್ಚರಿಸುತ್ತಿತ್ತು. ಇಂತಹ ಯೋಚನಾಲಹರಿಯಲ್ಲಿ ಕುಳಿತ ಅವಳನ್ನು ಮನೆಯ ಕಾಲಿಂಗ್ ಬೆಲ್ ಎಚ್ಚರಿಸಿತು. ಹಾಲಿನವಳು ಬಂದು ಬೆಲ್ ಬಾರಿಸಿದ್ದಳು. 

   ತನ್ನ ಯೋಚನಾಲಹರಿಯಿಂದ ಹೊರಗೆ ಬಂದ ಸುಮಾ, ಹಾಲು ತೆಗೆದುಕೊಂಡು ಕಾಯಿಸಿ ಮತ್ತೆ ತಯಾರಾಗಿ ಅವಳು ಕಾಲೇಜಿಗೆ ಹೋರಾಡಲು ಅನುವಾದಳು. ತನ್ನ ಮೊಬೈಲ್ ತೆಗೆದುಕೊಳ್ಳಲು ಅದರ ಹತ್ತಿರ ಬಂದಾಗ ಅವಳಿಗೆ ಮತ್ತೆ ಕನಸಿನ ನೆನಪಾಯಿತು. ಒಂದು ಕ್ಷಣ ಮೊಬೈಲ್ ತೆಗೆದುಕೊಳ್ಳಲು ಕೈ ಹಿಂದೇಟು ಹಾಕಿತು. ಕೊನೆಗೆ ಮೊಬೈಲ್ ತೆಗೆದುಕೊಂಡು ನೇರವಾಗಿ ಕಾಲೇಜಿಗೆ ಹೋದಳು. 

      ಸುಮಾ ಕಾಲೇಜಿಗೆ ಹೋಗಿ ತನ್ನ ಪಾಠ ಮಾಡಲು ಕ್ಲಾಸ್ ಒಳಗೆ ಹೋದಳು. ಅವಳು ಒಳಗೆ ಹೋದಾಗ ವಿದ್ಯಾರ್ಥಿಗಳಲ್ಲಿ ಎರಡು ಗುಂಪುಗಳಾಗಿ ಏನೋ ಡಿಸ್ಕಶನ್ ನಡೆದಿತ್ತು. ಹುಡುಗರು ಒಂದುಕಡೆ ಆಗಿದ್ದರೆ ಇನ್ನೊಂದುಕಡೆ ಹುಡುಗಿಯರಿದ್ದರು. ತುಂಬಾ ಡೀಪ್ ಡಿಸ್ಕಶನ್ ನಡೀತಿತ್ತು ಅಂತ ಕಾಣುತ್ತೆ. ಸುಮಾ ಕ್ಲಾಸ್ ರೂಮ್ ಎಂಟರ್ ಆಗುತ್ತಿದಂತೆ, ಅವರ ಡಿಸ್ಕಶನ್ ನಿಂತಿತು. ಯಾಕೋ ಏನೋ ಅವರೆಲ್ಲರೂ ಎರಡು ಗುಂಪುಗಳಾಗಿ ಡಿಸ್ಕಶನ್ ಮಾಡುತ್ತಿರಬೇಕಾದರೆ ವಿಷಯವೇನಿರಬಹುದು ಎಂದು ಸುಮಾ ಅಂದುಕೊಂಡಳು. ವಿದ್ಯಾರ್ಥಿಗಳ ಮುಖವನ್ನು ನೋಡಿದಾಗ ಅವರ ಡಿಸ್ಕಶನ್ ತಾನು ಬಂದಿದ್ದರಿಂದ ಅರ್ಧಕ್ಕೆ ನಿಂತಹಾಗೆ ಕಾಣುತ್ತಿತ್ತು. ಅವರ ಮುಖದಲ್ಲಿ ಇನ್ನೂ ಡಿಸ್ಕಶನ್ ಮಾಡುವ ಹಂಬಲ ಕಾಣುತ್ತಿತ್ತು. ಅದನ್ನು ಸುಮಾ ಗಮನಿಸಿದಳು. ಹಾಗೆ ಕ್ಯಾಶುಯಲ್ ಆಗಿ,

*"ಏನು ನಿಮ್ಮ ನಿಮ್ಮಲ್ಲಿ ಡಿಸ್ಕಶನ್ ನಡೆದಿತ್ತು?"*

ಎಂದಾಗ ಒಬ್ಬ ಹುಡುಗಿ ಎದ್ದು ನಿಂತು

*"ಮೇಡಂ, ನಮ್ಮಲ್ಲಿ ಹುಡುಗರು ಮತ್ತು ನಾವು ಹುಡುಗಿಯರು ಕೂಡಿಕೊಂಡು 2 ಗ್ರೂಪ್ ಆಗಿವೆ. ವಿಷಯವೇನೆಂದರೆ, ಫ್ರೆಂಡ್ಸ್ ಆದ ಹುಡುಗರು ಅಥವಾ ಹುಡುಗಿಯರು ಲವರ್ ಆಗಬಹುದೇ ಎಂದು."*

ಇದನ್ನು ಕೇಳಿದ ಸುಮಾಳಿಗೆ ಯಾಕೋ ವಿದ್ಯಾರ್ಥಿಗಳು ಆರಿಸಿಕೊಂಡಿರುವ ವಿಷಯದಲ್ಲಿ ಆಸಕ್ತಿ ಬಂತು. ಅವಳಿಗೂ ಯಾಕೋ ಪಾಠ ಮಾಡುವ ಮೂಡ್ ಇರಲಿಲ್ಲ. ಅವರ ಡಿಸ್ಕಶನ್ ಮುಗಿದಿರಲಿಲ್ಲ. ಆಯ್ತು ಅವರ ಡಿಸ್ಕಶನ್ ಒಂದು ಅಂತ್ಯಕ್ಕೆ ತಂದರಾಯಿತು ಎಂದುಕೊಂಡಳು. ಕೆಲವು ವಿಷಯಗಳಲ್ಲಿ ಸುಮಾ ವಿದ್ಯಾರ್ಥಿಗಳಿಗೆ ತುಂಬಾ ಅಚ್ಚು ಮೆಚ್ಚು. ಅವಳು ಯಾವುದೇ ವಿಷಯವಿದ್ದರೂ ಅದನ್ನು ಕೊನೆ ತನಕ ಮುಟ್ಟಿಸಿ, ವಿದ್ಯಾರ್ಥಿಗಳಿಂದಲೇ ಅದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸಿ, ಅವರ ನಡುವೆ ಯಾವಾಗಲೂ ಭಿನ್ನಾಭಿಪ್ರಾಯ ಬರದಂತೆ ಮಾಡುತ್ತಿದ್ದಳು. ಇಂದಿನ ವಿಷಯ ಕೇಳಿದಾಗ ಅವಳಿಗೆ ಯಾಕೋ ಕುತೂಹಲ ಬಂದಿತು. ತಾನು ಸಹ ಈ ವಿಷಯವನ್ನು ಅವರ ವಿಚಾರದಿಂದ ತಿಳಿದುಕೊಂಡರಾಯಿತು ಎಂದುಕೊಂಡಳು, ಅಭಿ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ. 

*":ಸ್ಟೂಡೆಂಟ್ಸ್, ಆಯ್ತು ಇಂದು ಪಾಠ ಬೇಡ. ಒಂದು ವಿಷಯವನ್ನು ನೀವು ಹಿಡಿದಿದ್ದೀರಾ ಅದಕ್ಕೆ ಆ ವಿಷಯ ಪೂರ್ತಿಯಾಗಲಿ. ಅಂದ ಹಾಗೆ ಫ್ರೆಂಡ್ ಲವರ್ ಆಗಬೇಕು ಎನ್ನುವವರು ಒಂದು ಕಡೆ ಕುಳಿತುಕೊಳ್ಳಿ. ಬೇಡ ಎನ್ನುವವರು ಇನ್ನೊಂದು ಕಡೆ ಕುಳಿತುಕೊಳ್ಳಿ."*

ಎಂದು ಹೇಳಿದಾಗ ವಿದ್ಯಾರ್ಥಿಗಳು. ತಮ್ಮ ತಮ್ಮಲ್ಲಿ ಚರ್ಚೆ ಮಾಡಿ ಕೆಲವು ಜನರು ಒಂದು ಕಡೆ ಕೆಲವು ಜನರು ಇನ್ನೊಂದು ಕಡೆಗೆ ಕುಳಿತುಕೊಂಡರು. ಆಗ ಸುಮಾ

*"ಲವರ್ ಆಗಲಿ ಎನ್ನುವ ಗ್ರೂಪ್ಪಿನಿಂದ ಒಬ್ಬರು ಬಂದು ಯಾಕೆ ಆಗಬೇಕು ಎಂದು ಇಲ್ಲಿ ಹೇಳಬೇಕು. ಆದರೆ ಸಮಯ ಕೇವಲ 5 ನಿಮಿಷ. ನಂತರ ಈ ಗ್ರೂಪ್ ದಿಂದ ಒಬ್ಬರು ಬಂದು ಅದಕ್ಕೆ ಪ್ರತ್ಯುತ್ತರ ಹೇಳಬೇಕು. ನೋಡೋಣ ನಿಮ್ಮ ವಿಚಾರ ಶಕ್ತಿ ಹೇಗಿದೆ ಅಂತ"*

ಎಂದು ಹೇಳಿ ತನ್ನ ಕುರ್ಚಿಯಲ್ಲಿ ಕುಳಿತುಕೊಂಡಳು. ಮೊದಲ್ನೇ ಗ್ರೂಪ್ಪಿನಿಂದ ಒಬ್ಬ ಯುವಕ ಬಂದ. 

*"ಸ್ನೇಹಿತರೆ, ನನ್ನ ಪ್ರಕಾರ ಫ್ರೆಂಡ್ ಇದ್ದವನು ಲವರ್ ಆಗಬಹುದು. ಯಾಕೆಂದರೆ ಫ್ರೆಂಡ್ಶಿಪ್ದಲ್ಲಿ ಮತ್ತೊಬ್ಬ ಫ್ರೆಂಡಿನ ಎಲ್ಲ ವಿಚಾರಗಳನ್ನು ಒಬ್ಬ ಫ್ರೆಂಡ್ ಆಗಿ ತಿಳಿದುಕೊಳ್ಳುವದಕ್ಕೆ ಅವಕಾಶವಿದೆ. ಅಲ್ಲದೆ, ಒಬ್ಬ ಫ್ರೆಂಡ್ ಮುಂದೆ ಇನ್ನೊಬ್ಬ ಫ್ರೆಂಡ್ ತನ್ನ ಹೆತ್ತವರಿಗಾಗಲಿ, ಒಡಹುಟ್ಟಿದವರಿಗಾಗಲಿ ಅಷ್ಟೇ ಅಲ್ಲದೆ, ಹೆಂಡತಿಗಾಗಲಿ ಹೇಳದೆ ಇರುವ ಮಾತನ್ನು ಒಬ್ಬ ಫ್ರೆಂಡ್ ಗೆ ಹೇಳುತ್ತಾನೆ. ಕಾರಣ ಇಷ್ಟೇ. ಫ್ರೆಂಡ್ ಆದವನು ಮತ್ತೊಬ್ಬ ಫ್ರೆಂಡಿನ ಮನಸ್ಸನ್ನು ತಿಳಿದುಕೊಂಡಿರುವದರಿಂದ ಮಾತ್ರ ಇದು ಸಾಧ್ಯ. ಅದಕ್ಕೆ, ಒಬ್ಬರಿಗೊಬ್ಬರು ಮೊದ್ಲಿನಿಂದ ಫ್ರೆಂಡ್ ಆಗಿರುವದರಿಂದ ಅವರ ಮಧ್ಯೆ ಅಂಡರ್ಸ್ಟ್ಯಾಂಡಿಂಗ್ ಇರುತ್ತೆ. ಅದಕ್ಕೆ ಫ್ರೆಂಡ್ ಲವ್ ಆಗಬಹುದು ಅಂತ ನನ್ನ ಅಭಿಪ್ರಾಯ."*

ಎಂದು ಹೇಳಿ ತನ್ನ ಮಾತನ್ನು ಮುಗಿಸಿದ. ಅವನು ತನ್ನ ಮಾತನ್ನು ಮುಗಿಸಿದ ನಂತರ ವಿರುದ್ಧ ಗ್ರೂಪ್ಪಿನಿಂದ ಒಬ್ಬ ಯುವತಿ ಬಂದಳು. ಅವಳು ತನ್ನ ಮಾತನ್ನು ಪ್ರಾರಂಭಿಸಿದಳು. 

*"ಗೆಳೆಯರೇ, ಇದೀಗ ನನ್ನ ಫ್ರೆಂಡ್, ಒಬ್ಬ ಫ್ರೆಂಡ್ ಲವರ್ ಆಗಬಹುದು ಎಂದು ಹೇಳಿದರು. ಅಲ್ಲದೆ ಯಾಕೆ ಆಗ ಬೇಕು ಅಂತ ಕಾರಣ ಸಹ ಹೇಳಿದರು. ಆದರೆ ಅವರು ಕೊಟ್ಟ ಕಾರಣವನ್ನು ನಾನು ವಿರೋಧಿಸಿ ಫ್ರೆಂಡ್ ಲವರ್ ಆಗಲು ಆಗುವದಿಲ್ಲ ಎಂದು ಹೇಳಬಯಸುತ್ತೇನೆ. ಯಾಕೆಂದರೆ, ಒಬ್ಬ ಫ್ರೆಂಡ್ ಮತ್ತೊಬ್ಬ ಫ್ರೆಂಡ್ ಗೆ, ಒಬ್ಬ ಫ್ರೆಂಡ್ ಅಂತ ತಾನೇ ತನ್ನೆಲ್ಲ ವಿಷಯವನ್ನು ಹೇಳುವದು. ಅಂದರೆ ನಾವು ವಿಷಯವನ್ನು ಹೇಳುವಾಗ ಯಾರಿಗೆ ಹೇಳುತ್ತೇವೆ ಅವರನ್ನು ನಮ್ಮ ಫ್ರೆಂಡ್ ಅಂತ ತಿಳಿದುಕೊಂಡಿರುತ್ತೇವೆ. ಆದರೆ ಲವರ್ ಅಂತ ಮಾತ್ರ ತಿಳಿದುಕೊಂಡಿರುವದಿಲ್ಲ. ಅದಕ್ಕೆ ನನ್ನ ಅಭಿಪ್ರಾಯದ ಪ್ರಕಾರ್ ಫ್ರೆಂಡ್ ಲವರ್ ಆಗಬೇಕಾದರೆ ಅವನು ನಮ್ಮ ಫ್ರೆಂಡ್ಶಿಪ್ ವೀಕ್ನೆಸ್ಸ್ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾನೆ ಅಂತ ಅರ್ಥ ಮಾಡಿಕೊಳ್ಳಬೇಕಾಗುತ್ತೆ. ಅಂದರೆ ನನ್ನ ಪ್ರಕಾರ ವೀಕ್ನೆಸ್ಸ್ ಬಳಸಿಕೊಂಡು ಒಬ್ಬ ಫ್ರೆಂಡ್ ಲವರ್ ಆದರೆ ಅದನ್ನು ಒಪ್ಪಿಕೊಳ್ಳುವದಕ್ಕೆ ಒಂದು ತರಹ ಮನಸ್ಸಿಗೆ ಕಷ್ಟವಾಗುತ್ತದೆ. ಅದು ಒಂದು ರೀತಿಯಿಂದ ಬ್ಲಾಕ್ ಮೇಲ್ ಅಂತ ನಾನು ಅಂದ್ಕೋತೀನಿ"*

ಎಂದು ಹೇಳಿ ತನ್ನ ಮಾತನ್ನು ಮುಗಿಸಿದಳು. ಸುಮಾ ಎರಡೂ ಗ್ರೂಪ್ಪಿನ್ ಮಾತನ್ನು ಕೇಳಿಸಿಕೊಕೊಂಡಿದ್ದಳು. ಇಬ್ಬರ ಪ್ರಕಾರ ಮಾತು ಒಂದು ತೆರನಾಗಿ ಸರಿಯಾಗಿಯೇ ಇತ್ತು. ಯಾರದೂ ತಪ್ಪು ಯಾರದು ಸರಿ ಅಂತ ನಿರ್ಣಯ ಮಾತ್ರ ಮಾಡುವದಕ್ಕಾಗುತ್ತಿರಲಿಲ್ಲ. ಕೊನೆಗೆ ಅವರ ಮಾತುಗಳನ್ನು ಕೇಳಿ, 

*"ನೋಡಿ, ನಿಮ್ಮ ಎರಡೂ ಗ್ರೂಪ್ಸ್ ವಿಚಾರಗಳು ಒಂದು ರೀತಿಯಿಂದ ಸರಿಯಾಗಿಯೇ ಇದೆ. ಒಂದು ಹೇಳಿಕೆಯ ಪ್ರಕಾರ ವಿಚಾರ ಮಾಡಲಾಗಿ ಒಂದು ತಪ್ಪು ಕಾಣಿಸಿದರೆ ಇನ್ನೊಂದು ರೀತಿಯಲ್ಲಿ ವಿಚಾರ ಮಾಡಿದಾಗ ಅದು ಸರಿಯಾಗಿ ಇದೆ. ಆದ್ದರಿಂದ ಎರಡೂ ಅಭಿಪ್ರಾಯಗಳನ್ನು ಒಟ್ಟಾರೆಯಾಗಿ ನೋಡಿದಾಗ ತಿಳಿದುಬರುವ ಸುಂದರವಾದ ವಿಚಾರ ಏನೆಂದರೆ, ನೀವುಗಳು ಮಾಡಿದ ವಿಚಾರ ಸರಿಯಾಗಿ ಇದ್ದರೂ ಎರಡೂ ಅರ್ಧ ಅರ್ಧ ವಿಚಾರಗಳು. ಒಬ್ಬ ವ್ಯಕ್ತಿ ಫ್ರೆಂಡ್ ಆಗಬೇಕಾದರೆ ಲವರ್ ಯಾಕೆ ಆಗಬಾರದು. ಅದು ವ್ಯಕ್ತಿ ಮತ್ತು ಅವರ ಸ್ವಭಾವ, ಪರಿಸ್ಥಿತಿ ಮೇಲೆ ಹೋಗುತ್ತದೆ. ಅದಕ್ಕೆ ನೀವು ಮಾಡಿದ ವಿಚಾರ ಪೂರ್ತಿ ಸರಿ ಅನ್ನುವದಕ್ಕೂ ಬರುವದಿಲ್ಲಪೂರ್ತಿ ತಪ್ಪು ಅನ್ನಲು ಸಹ ಬರುವದಿಲ್ಲ."*

ಎಂದು ಹೇಳುತ್ತಾ ಅವರ ಸಮಸ್ಯೆಯನ್ನು ಬಗೆಹರಿಸಿದಳು. ಅವಳೇನೋ ಸ್ಟೂಡೆಂಟ್ಸ್ ಸಮಸ್ಯೆ ಬಗೆ ಹರಿಸಿದ್ದಳು. ಆದರೆ ಅವರು ಸಾದರಪಡಿಸಿದ ತಮ್ಮ ವಿಚಾರಧಾರೆಯನ್ನು ಮಾತ್ರ ಯೋಚನೆ ಮಾಡಿದಾಗ, ಅವಳಿಗೆ ಅಭಿ ನೆನಪಾದ. ಒಂದು ಕ್ಷಣ ತನ್ನ ಮನವನ್ನೇ ಅವಳು ಪ್ರಶ್ನಿಸಿದಳು. ಅವನನ್ನು ನೋಡಿಲ್ಲ, ಧ್ವನಿ ಸಹ ಕೇಳಿಲ್ಲ. ಆದರೆ ಯಾಕೆ ಅವನು ತನ್ನನ್ನ ಕಾಡುತ್ತಿದ್ದಾನೆ? ಅವನಲ್ಲಿರುವ ಆಕರ್ಷಣೆ ಏನು? 

ಎಷ್ಟೇ ಯೋಚನೆ ಮಾಡಿದರೂ ಅವಳಿಗೆ ತನ್ನ ಪ್ರಶ್ನೆಗೆ ತನ್ನ ಮನದಿಂದ ಉತ್ತರ ದೊರೆಯಲಿಲ್ಲ. ನಂತರ ಆ ಯೋಚನೆಯನ್ನು ಬದಿಗೊತ್ತಿ, ತನ್ನ ಕೆಲಸದಲ್ಲಿ ಮುಳುಗಿದಳು. 

   ಮತ್ತೆ ರಾತ್ರಿ ಫೇಸ್ ಬುಕ್ಕಿನಲ್ಲಿ ಎಂಟ್ರಿ ಕೊಟ್ಟಳು. ಅಷ್ಟರಲ್ಲಿ ಅಭಿ ಅವಳಿಗೆ ಮೆಸೆಂಜರ್ ದಲ್ಲಿ ಒಂದು ಮೆಸೇಜ್ ಕಳುಹಿಸಿದ್ದ. 

*"ಖುಷ್ ನಸೀಬ ಹೋತೇ ಹೈ ಬಾದಲ್ 

ಜೋ ದೂರ ರೆಹೆಕರ್ ಭೀ ಜಮೀನ ಪರ ಬರ್ಸಾತೆ ಹೈ

ಔರ್ ಏಕ್ ಬದನಸೀಬ್ ಹಮ್ ಹೈ 

ಜೋ ಏಕ್ ಹಿ ದುನಿಯಾ ಮೇ ರೆಹೆಕರ್ ಭೀ ಮಿಲನ್ ಕೋ ತರಸ್ತೆ ಹೈ"*

(ಮೋಡಗಳ ದೂರವಿದ್ದರೂ ಸಹ ಭೂಮಿಗೆ ಮಳೆ ಸುರಿಸುತ್ತ ಇದ್ದು ಅದೃಷ್ಟವಂತವಾಗಿವೆ. ನಾವು ಇದೆ ಭೂಮಿಯಲ್ಲಿ ಇದ್ದರೂ ಸಹ ಭೇಟಿಯಾಗಲು ಚಡಪಡಿಸುತ್ತೇವೆ)

ಸುಮಾ ಅದನ್ನು ನೋಡುತ್ತಿದ್ದಂತೆ, ಅವಳಿಗೆ ಗೊತ್ತಾಯಿತು. ಅದು ಅಭಿ ಬೇಕಂತಲೇ ಹಾಕಿರಬಹುದು ಎಂದುಕೊಂಡಳು. ಅವಳು ಅಭಿಯ ಪೋಸ್ಟ್ ನೋಡುತ್ತಿದ್ದಂತೆ ಅದರ ಅರ್ಥವನ್ನು ತಿಳಿದುಕೊಂಡ ಅವಳು, ಅವನು ತನ್ನನ್ನು ಮುಖಾ ಮುಖಿಯಾಗಿ ಭೇಟಿಯಾಗಲು ಬಯಸುತ್ತಿರುವನೆಂದು ಅಂದುಕೊಂಡಳು. ಆದರೆ ಆ ಪೋಸ್ಟಿಗೆ ಅವಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಾಗಿ ತನ್ನ ಟೈಮ್ ಲೈನ್ ಗೆ ಹೋಗಿ ಅಲ್ಲಿ ತಾನು ಒಂದು ಪೋಸ್ಟ್ ಹಾಕಿದಳು. 

*"ದರ್ದ್ ಕೋ ಮುಸಕುರಾಕರ್ ಸೆಹೆನಾ ಕ್ಯಾ ಸೀಖಲಿಯಾ

ಲೋಗೋ ಕೋ ಲಗತ್ತಾ ಹೈ ಕಿ ಮುಜೆ ತಕಲೀಫ್ ತೊ ನಹಿ ಹೋತಿ"*

ಎಂದು ಹಾಕಿದಳು. ಅಭಿ ಇನ್ನೂ ಆನ್ಲೈನ್ ಗೆ ಬಂದಿರಲಿಲ್ಲ. ಹಾಗೆ ತನಗೆ ಗೊತ್ತಿಲ್ಲದಂತೆ ಅವನ ದಾರಿ ಕಾಯುತ್ತ ಕುಳಿತುಕೊಂಡಳು. ಅವಳ ಟೈಮ್ ಲೈನ್ ದಲ್ಲಿ ಬೇರೆಯವರು ಹಾಕಿದ್ದ ಸಾಕಷ್ಟು ಪೋಸ್ಟ್ ಗಳನ್ನೂ ನೋಡತೊಡಗಿದಳು. ಅಷ್ಟರಲ್ಲಿ ಅವಳ ಸ್ಟೂಡೆಂಟ್ಸ್ ಬೆಳಿಗ್ಗೆ ಕಾಲೇಜಿನಲ್ಲಿ ಆದ ಡಿಸ್ಕಶನ್ ಚರ್ಚೆ ಮಾಡಿ ಪೋಸ್ಟ್ಗಳನ್ನು ಹಾಕಿದ್ದರು. ಅವುಗಳನ್ನೇ ನೋಡುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಅಭಿ ಆನ್ಲೈನ್ ಗೆ ಬಂದು ಮೆಸ್ಸೆಂಜರ್ ದಲ್ಲಿ *"ಹೈ"* ಎಂದು ಮೆಸೇಜ್ ಮಾಡಿದ. ಸುಮಾ ಅದನ್ನು ನೋಡಿಯೂ ನೋಡಂತೆ ಸ್ವಲ್ಪ ಅವಾಯ್ಡ್ ಮಾಡಿದರಾಯಿತು ಎಂದುಕೊಂಡು ಸುಮ್ಮನೆ ಕುಳಿತಳು. ಸ್ವಲ್ಪ ಹೊತ್ತು ನೋಡಿದ ಅಭಿ, ಮತ್ತೆ ಅವಳಿಗೆ 

*"ಮತ್ತೆ ವೇಥ್ಯೆಯಾ"*

ಎಂದು ಪ್ರಶ್ನೆ ಹಾಕಿ ಕಳುಹಿಸಿದ. ಅದನ್ನು ನೋಡುತ್ತಿದ್ದಂತೆ ಅವಳಿಗೆ ಮೈ ಉರಿದಂತಾಯಿತು. ಕೂಡಲೇ ಮೆಸೆಂಜರ್ ಗೆ ಹೋಗಿ,

*"ದಿನಾಲು ವ್ಯೆಥೆ ಪ್ರತಿ ಮನುಷ್ಯನಿಗೆ ಇರುತ್ತಾ?"*

ಎಂದು ಅವನಿಗೆ ಕೇಳಿದಾಗ ಅವನು

*"ನನಗೇನು ಗೊತ್ತು, ನೀವು ನನ್ನ ಮಾತಿಗೆ ಪ್ರತಿಕ್ರಿಯೆ ನೀಡಲಿಲ್ಲವಾದ್ದರಿಂದ ಮತ್ತೆ ವ್ಯಥೆಯ ಕಥೆ ಮುಂದುವರಿದಿರಬಹುದು ಅಂತ ತಿಳಿದುಕೊಂಡು ಈ ರೀತಿಯಾಗಿ ಬರೆದೆ"*

*"ನೀವು ತುಂಬಾ ಅವಸರದವರು"*

*"ಹೌದ್ರಿ ಈಗ ಲೈಫ್ ತುಂಬಾ ಫಾಸ್ಟ್ ಅದಕ್ಕೆ ಯಾವದೇ ವಿಷಯವಾದರೂ ತಡೆಯೋಕಾಗೋಲ್ಲ. ಫಾಸ್ಟ್ ಇದ್ರೆ ಮಾತ್ರ ಲೈಫ್ ನಡೆಯುತ್ತೆ"*

*"ನಿಮ್ಮ ಲೈಫ್ ಫಾಸ್ಟ್ ಇರಬಹುದು ಆದರೆ ನನ್ನ ಲೈಫ್ ನಾರ್ಮಲ್ ಆಗಿದೆ. ಅದು ನೋಡುವವರ ದೃಷ್ಟಿ ಮೇಲೆ ಅವಲಂಬಿತ"*

*"ಹೋಗ್ಲಿ ಬಿಡಿ, ಲೈಫ್ ಬಗ್ಗೆ ಇಷ್ಟೆಲ್ಲಾ ಡಿಸ್ಕಶನ್ ಈಗ ಬೇಕಾ? ಬೇರೆ ಮಾತನಾಡೋಣ. ಅಂದ ಹಾಗೆ ನಾನು ನಿಮಗೊಂದು ಪೋಸ್ಟ್ ಹಾಕಿದ್ದೆ ಅದಕ್ಕೆ ನೀವು ಪ್ರತಿಕ್ರಿಯೆ ನೀಡಲಿಲ್ಲ."*

ಎಂದು ತನ್ನ ಪೋಸ್ಟ್ ಬಗ್ಗೆ ಕೇಳಿದ. ಅವಳ ಅಭಿಪ್ರಾಯ ಕೇಳುವ ನಿಟ್ಟಿನಲ್ಲಿ ಈ ಪ್ರಶ್ನೆ ಹಾಕಿದ್ದ. 

*"ನಿಮ್ಮ ಪೋಸ್ಟ್ ನೋಡಿದೆ ಆದರೆ ಕಾಮೆಂಟ್ ಮಾಡಿಲ್ಲ"*

*"ಅದೇ ಯಾಕೆ ಮಾಡಿಲ್ಲ?"*

*"ನನಗೆ ಅವಶ್ಯಕತೆ ಅನ್ನಿಸಲಿಲ್ಲ"*

*"ರೀ ಇದು ತುಂಬಾ ಅನ್ಯಾಯ. ನಾನು ನಿಮ್ಮ ಸಲುವಾಗಿ ಹುಡುಕಿ ಹುಡುಕಿ ಪೋಸ್ಟ್ ಹಾಕಿದರೆ ಅದಕ್ಕೆ ಕಾಮೆಂಟ್ ಮಾಡುವದು ಬಿಟ್ಟು ಅನ್ಯಾಯ ಅಂತೀರಲ್ಲ"*

*"ಮತ್ತೇನು ಮಾಡುವದು. ಯಾವಾಗ ನೋಡಿದರೂ ಏನಾದರೊಂದು ಪೋಸ್ಟ್ ಹಾಕಿ ಕಾಮೆಂಟ್ ಮಾಡಲು ಬರದಿರುವ ಹಾಗೆ ಪ್ರತಿಕ್ರಿಯೆ ನೀಡದ ಹಾಗೆ ಹಾಕಿದರೆ ಹೇಗೆ ಪ್ರತಿಕ್ರಿಯೆ ನೀಡಬೇಕು?"*

ಎಂದು ಅವನಿಗೆ ಮರು ಪ್ರಶ್ನೆ ಹಾಕಿದಳು. 

*" ಅಂದರೆ ನಿಮಗೆ ಪೋಸ್ಟ್ ಇಷ್ಟ ಆಗಿದ್ದರೂ ಸಹ ನೀವು ಕಾಮೆಂಟ್ ಮಾಡಲು ಹಿಂದೇಟು ಹಾಕಿದ್ದೀರಿ ಅಂದ ಹಾಗಾಯ್ತು."*

ಎಂದು ಬರೆದು ಹಾಕಿದಾಗ ಅದನ್ನು ನೋಡಿದ ಸುಮಾ

*"ಇಷ್ಟ ಆಯಿತು ಅಂತಲ್ಲ ಕಷ್ಟ ಆಯಿತು ಅಂತ"*

ಎಂದು ಅವನಿಗೆ ತನ್ನ ಉತ್ತರ ಕಳಿಸಿದಾಗ, 

*"ಹೌದಾ? ಅಷ್ಟು ಕಠಿಣವಾಗಿತ್ತಾ. ಹೋಗಲಿ ಅದನ್ನೂ ಓದಿದ ನಿಮಗೆ ಏನು ಅನ್ನಿಸಿತು ಅಂತ ಹೇಳಬಾರದೇ?"*

*"ಹೇಳುವ ಅವಶ್ಯಕತೆಯಿಲ್ಲ ಅಂತ ಅಂದೊಕಿತೀನಿ"*

*"ಯಾಕೆ"*

*"ಅವಶ್ಯಕತೆಯಿಲ್ಲ ಅಷ್ಟೇ"*

ಎಂದು ಅವಳು ತನ್ನ ಹಠ ಬಿಡದೆ ಉತ್ತರ ನೀಡಿದಾಗ, 

*"ಓಹೊ ಅಂದರೆ ನಿಮ್ಮ ಮನಸ್ಸಿನಲ್ಲಿ ಏನು ಇದೆ ಅಂತ ನಾನು ತಿಳಿದುಕೊಳ್ಳಬಾರದು ಅಂತ ನೀವು ತೀರ್ಮಾನ ಮಾಡಿಕೊಂಡಿರುವಿರಿ ಅಂದ ಹಾಗಾಯ್ತು"*

*"ಅದು ನನ್ನಿಷ್ಟ. ನಿಮ್ಮೊಂದಿಗೆ ಎಲ್ಲ ಶೇರ್ ಮಾಡಬೇಕೆಂದೇನೂ ನಮ್ಮ ನಡುವೆ ಕರಾರು ಇಲ್ಲವಲ್ಲ"*

ಎಂದಾಗ ಅವನು ಅಳುಮುಖದ ಎಮೋಜಿ ಒಂದು ಪೋಸ್ಟ್ ಮಾಡಿ, ಅದರ ಜೊತೆಗೆ 

*"ನಾನು ಒಳ್ಳೆ ಫ್ರೆಂಡಿಗೆ ಒಂದು ಪೋಸ್ಟ್ ಹಾಕಿದರೆ ಆ ನನ್ನ ಫ್ರೆಂಡ್ ನನಗೆ ಹೀಗೆ ಉತ್ತರ ನೀಡುತ್ತಾರೆ ಅಂದರೆ ನನಗೆ ಕಷ್ಟವಾಗುತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲೇ ಎಂದು ಯೋಚನೆ ಮಾಡುತ್ತಿರುವೆ"*

ಎಂದು ಒಂದು ರೀತಿಯಲ್ಲಿ ದುಃಖ ತೋರಿಸಿದಂತೆ ಬರೆದು ಇನ್ನೊಂದು ರೀತಿಯಲ್ಲಿ ಹಾಸ್ಯ ಅದರಲ್ಲಿ ಕೂಡಿರುವಂತೆ ಬರೆದು ಕಳುಹಿಸಿದಾಗ, ಅದನ್ನು ನೋಡಿದ ಸುಮಾಳಿಗೆ ನಗು ತಡೆಯುವದಾಗಲಿಲ್ಲ. ಆದರೂ ಅವನನ್ನು ಇನ್ನಷ್ಟು ಕಾಡಬೇಕು ಅಂತ ಅವಳಿಗೆ ಅನ್ನಿಸಿ

*"ಮಾಡಿಕೊಳ್ಳಿ, ಅದಕ್ಕೆ ನನ್ನ ಅಪ್ಪಣೆ ಏನೂ ಬೇಕಾಗಿಲ್ವಲ್ಲ"*

ಎಂದು ಉತ್ತರಿಸಿ ನಗತೊಡಗಿದಳು. ಅಭಿ ಸಹ ಅಷ್ಟಕ್ಕೇ ಬಿಡದೆ

*"ಅಂದರೆ ನಾನು ಸತ್ತರೆ ನಿಮಗೆ ಸಂತೋಷವಾಗುತ್ತದೆ ಅಂದ ಹಾಗಾಯಿತು"*

*"ಅದು ಸಾಯುವವರ ಮೇಲೆ ಸತ್ತ ರೀತಿಯ ಮೇಲೆ ಡಿಪೆಂಡ್ ಆಗುತ್ತೆ"*

ಎಂದು ನಗುತ್ತಲೇ ಉತ್ತರಿಸಿದಳು. ಅವಳು ತನ್ನ ಉತ್ತರವನ್ನು ಟೈಪ್ ಮಾಡಿ ಕಳುಹಿಸುತ್ತಿರುವಂತೆ ಇತ್ತ ಅವಳಿಗೆ ಅಭಿಯನ್ನು ಚಾಟ್ ದಲ್ಲಿ ಕಾಡಲು ತುಂಬಾ ಮಜಾ ಬರುತ್ತಿತ್ತು. ಎದಿರು ಬದಿರು ಇಲ್ಲದ್ದರಿಂದ ಅವಳಿಗೆ ಇಷ್ಟೆಲ್ಲಾ ಮಾತುಗಳನ್ನು ಶಬ್ದಗಳ ರೂಪದಲ್ಲಿ ಬರೆದು ಕಳುಹಿಸುವದಕ್ಕೆ ಸಾಧ್ಯವಾಗಿತ್ತು. ಸುಮಾಳ ಉತ್ತರವನ್ನು ನೋಡಿದ ಅಭಿ,

*" ಒಂದು ಮಾತು ಕೇಳ್ತೀನಿ ತಪ್ಪು ತಿಳಿಬೇಡಿ. ನಾನು ಸಾಯುವುದರಿಂದ ನಿಮಗೇನು ಲಾಭ?"*

 ಈ ಪ್ರಶ್ನೆ ಓದುತ್ತಿದ್ದ ಸುಮಾಳಿಗೆ ಒಂದು ವೇಳೆ ಅವನೇನಾದರೂ ತಾನು ಹುಡುಗಾಟಿಕೆಗೆ ಆಡಿದ ಮಾತಿಗೆ ಏನಾದರೂ ಮಾಡಿಕೊಂಡರೆ ಹೇಗೆ? ಎಂಬ ಚಿಂತೆ ಒಂದು ಕ್ಷಣ ಬಂದರೂ, ಅವನ ಸ್ವಭಾವವನ್ನು ಚಾಟ್ ಮೂಲಕ ಅರಿತಿದ್ದ ಅವಳು ಹಾಗೇನು ಮಾಡಿಕೊಳ್ಳುವುದಿಲ್ಲ ಎಂದು ತನ್ನಲ್ಲಿ ತಾನೇ ಅಂದುಕೊಂಡು ಅವನಿಗೆ,

*" ನನಗೇನೂ ಲಾಭವಿಲ್ಲ. ಮತ್ತು ನನಗೇನು ನಷ್ಟ ಸಹ ಇಲ್ಲ. ಏನೋ ಮಾತಿಗೆ ಬಂತು ನೀವು ಕೇಳಿದಿರಿ, ನಾನು ಉತ್ತರಿಸಿದೆ. ಹಾಗಂತ ನೀವು ನಿಜವಾಗಿ ಮಾಡಿಕೊಳ್ಳಬೇಡಿ"*

 ಎಂದು ಬರೆದು ಅವನಿಗೆ ಉತ್ತರ ನೀಡಿ, ಒಂದುವೇಳೆ ಅವನು ತನ್ನ ಕಣ್ಣ ಮುಂದೆ ಇದನ್ನು ಓದಿದ್ದರೆ ಅವನ ಮುಖಭಾವ ಹೇಗೆ ಇರಬಹುದು ಎಂದುಕೊಂಡು ತನ್ನೊಳಗೆ ತಾನೇ ನಗತೊಡಗಿದಳು. ಅತ್ತಲಿಂದ ಅಭಿ

*" ನಿಮ್ಮ ಉತ್ತರ ನೋಡಿದರೆ, ನೀವು ನನ್ನನ್ನು ಸಾಯಲು ಬಿಡುವುದಿಲ್ಲ ಮತ್ತು ಬದುಕಲು ಹೇಳುವುದಿಲ್ಲ ಎಂದ ಹಾಗಾಯಿತು. ನನ್ನನ್ನು ತ್ರಿಶಂಕು ಸ್ಥಿತಿಯಲ್ಲಿ ಇಡುವ ನಿರ್ಧಾರಕ್ಕೆ ಬಂದ ಆ ನಿಮ್ಮ ಮನಸ್ಸಿಗೆ, ಥ್ಯಾಂಕ್ಸ್ ಹೇಳಬೇಕೋ, ಸಾರಿ ಹೇಳಬೇಕೋ, ಎಂದು ಒಂದೂ ಚೂರು ಸಹ ತಿಳಿಯುತ್ತಿಲ್ಲ. ಮನುಷ್ಯರ ಮನಸ್ಥಿತಿ ಹೇಗಿರುತ್ತದೆ ಅಂತ ಸ್ವಲ್ಪ ಸ್ವಲ್ಪವಾಗಿ ಇತ್ತೀಚಿಗೆ ಅರ್ಥವಾಗುತ್ತಿದೆ"*

 ಎಂದು ಬರೆದು ಉತ್ತರ ಹಾಕಿದಾಗ, ಸುಮಾ

*" ಮನುಷ್ಯರ ಮನಸ್ಥಿತಿ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ನೀವು ಎಷ್ಟು ವೇಗವಾಗಿ ಮತ್ತು ನಿಖರವಾಗಿ ಪ್ರತಿಕ್ರಿಯೆ ನೀಡುತ್ತೀರಿ, ಎಂಬ ವಿಷಯವನ್ನು ನೋಡುತ್ತಿದ್ದರೆ ನಿಮಗೆ ನೀವು ಹೇಳಿದಂತೆ ಸ್ವಲ್ಪ ಸ್ವಲ್ಪವೇ ಮನುಷ್ಯರ ಅರ್ಥವಾಗುತ್ತಿದೆ ಎಂಬ ವಿಷಯ ಸಂಪೂರ್ಣ ಸುಳ್ಳು. ಆದರೆ ಒಂದು ಮಾತ್ರ ನಾನು ಗಮನಿಸಿದ್ದು ಏನೆಂದರೆ, ನಿಮಗೆ ಮನಸ್ಸಿನಲ್ಲಿ ಪ್ರೀತಿಸುವ ಗುಣವಿದೆ, ಅದರ ಜೊತೆಗೆ ತುಂಟಾಟ ಸಹ ಅದಕ್ಕಿಂತಲೂ ಸ್ವಲ್ಪ ಹೆಚ್ಚಾಗಿದೆ. ಹೌದಲ್ಲವೇ"*

 ಇದನ್ನು ಪೋಸ್ಟ್ ಮಾಡುತ್ತಿದ್ದಂತೆ ಪ್ರೀತಿಯ ವಿಷಯ ನಾನು ಏಕೆ ಬರೆದೆ ಎಂದು ಸುಮಾ ಒಂದು ಕ್ಷಣ ಸ್ವತಹ ಯೋಚನೆ ಮಾಡಿದರೂ ಸಹ, ಹೇಗೋ ವಿಷಯ ಬಂದಿದೆ ತಿಳಿದುಕೊಂಡರೆ ಆಯಿತು ಎಂದು ತನ್ನನ್ನು ತಾನು ಸಮಾಧಾನಪಡಿಸಿ ಕೊಂಡಳು.

*" ನೀವು ಮೈಂಡ್ ರೀಡ್ ಮಾಡುತ್ತೀರಾ?"*

 ಎಂಬ ಪ್ರಶ್ನೆ ಧುತ್ತನೆ ಅವನ ಕಡೆಯಿಂದ ಅಕ್ಷರ ರೂಪದಲ್ಲಿ ಮೂಡಿದಾಗ

*" ಹಾಗೇನಿಲ್ಲ, ಮನುಷ್ಯನ ಮನಸ್ಥಿತಿಯ ಮೇಲೆ ಅರಿವಾಗುವ ಸಾಧ್ಯತೆ ಹೆಚ್ಚು. ಆದರೆ ನಾನು ಮಾಡಿದ್ದು ಕೇವಲ ಊಹೆ ಮಾತ್ರ. ಈಗ ಹೇಳಿ ನಾನು ಹೇಳಿದ್ದು ನಿಜವೋ ಸುಳ್ಳೋ"*

*" ಒಂದು ರೀತಿಯಲ್ಲಿ ನೀವು ಹೇಳಿದ್ದು ನಿಜ. ನಿಮ್ಮ ಮಾತಿನ ಮೇಲೆ ನನಗೆ ಈಗ ಸ್ವಲ್ಪ ಸ್ವಲ್ಪವಾಗಿ, ನಾನು ಯಾರನ್ನೋ ಪ್ರೀತಿಸುತ್ತಿರುವೆ ಅಂತ ನನಗೆ ಅನ್ನಿಸುತ್ತಿದೆ. ಆದರೆ ನನಗೆ ನಿಖರತೆ ಅದರ ಬಗ್ಗೆ ಇಲ್ಲ"*

 ಎಂದಾಗ ಅವನು ಉತ್ತರ ಕಂಡ ಸುಮಾ, ಕುತೂಹಲದಿಂದ

*" ನಿಮ್ಮ ಪ್ರೀತಿ ನಿಮ್ಮ ವೈಯಕ್ತಿಕ ವಿಷಯ. ಆದರೂ ನನಗಿರುವ ಕುತೂಹಲದಿಂದ ನಿಮ್ಮನ್ನು ಕೇಳುತ್ತಿದ್ದೇನೆ. ಯಾರನ್ನು ಪ್ರೀತಿಸುತ್ತಿರುವುದು ಅಂತ ತಿಳಿದುಕೊಳ್ಳಬಹುದೇ?"*

 ಎಂದು ಅವನಿಗೆ ಬರೆದು ಕಳುಹಿಸಿದಾಗ

*" ನನಗೂ ಸಹ ನಿಖರವಾಗಿ ಗೊತ್ತಿಲ್ಲ. ಆದರೆ ನೀವು ಹೇಳಿದ ಮೇಲೆ ನನಗೆ ಖಾತ್ರಿ ಆಗುತ್ತಿರುವ ವಿಷಯ ಏನೆಂದರೆ, ಯಾರನ್ನೋ ನಾನು ಪ್ರೀತಿಸುತ್ತಿರುವೆ"*

 ಈ ಉತ್ತರ ಕಂಡಾಗ, ಸುಮಾಳ ಎದೆ ಒಂದು ರೀತಿಯಲ್ಲಿ ಭಯದಿಂದ ನಡುಗಿತು. ಆ ಭಯದಲ್ಲಿ ಸಹ ಒಂದು ತೆರನಾದ ಅವಳಿಗೆ ಗೊತ್ತಾಗದ ರೀತಿಯಲ್ಲಿ ಸಂತೋಷ ಸಹ ಅಡಗಿತ್ತು. ಪ್ರೀತಿ ಎಂಬ ವಿಷಯವೇ ಹಾಗೆ. ಭಯಮಿಶ್ರಿತ ಸಂತೋಷ, ಯಾವಾಗಲೂ ಪ್ರೀತಿಯಲ್ಲಿ ಇರುತ್ತದೆ. ಅದು ಪ್ರೀತಿ ಮಾಡುವವರಿಗೆ ಗೊತ್ತು. ಆದರೂ ಅವನು ಯಾರನ್ನು ಪ್ರೀತಿ ಮಾಡ್ತಿದ್ದಾನೆ ಅಂತ ತಿಳಿದುಕೊಳ್ಳುವ ಕುತೂಹಲ ದಿಂದ ಅವನನ್ನು ಬಿಡದೇ,

*" ಯಾರನ್ನು ಪ್ರೀತಿಸುತ್ತಿರುವುದು ಅಂತ ಅವರ ಹೆಸರನ್ನು ಹೇಳಬಾರದೆ?"*

*" ಈಗಲೇ ಹೇಳುವುದರಿಂದ ಪ್ರಯೋಜನವಿಲ್ಲ. ಈಗ ನನಗೆ ನಾನು ಪ್ರೀತಿಸುತ್ತಿದ್ದೇನೆ ಎಂಬ ವಿಷಯ ನನಗೆ ಖಾತ್ರಿಯಾಯಿತು. ಆದರೆ ಇದು ಕೇವಲ ನನ್ನ ಕಡೆಯಿಂದ ಮಾತ್ರ. ಆಕಡೆಯಿಂದ ಸಹ ಅದಕ್ಕೇನಾದರೂ ಉತ್ತರ ಬಂದಲ್ಲಿ ನಾನು ನಿಮಗೆ ಹೇಳುತ್ತೇನೆ."*

 ಎಂದು ಅವನು ತಾನು ಪ್ರೀತಿಸುವ ಹೆಣ್ಣಿನ ಹೆಸರನ್ನು ಸಸ್ಪೆನ್ಸ್ ದಲ್ಲಿ ಇಟ್ಟಾಗ, ಸುಮಾ ಬೇಜಾರು ಪಟ್ಟುಕೊಂಡರು. ಅಷ್ಟರಲ್ಲಿ ಅವನಿಂದ ಮತ್ತೊಂದು ಪ್ರಶ್ನೆ ಹೊಸ ರೂಪದಲ್ಲಿ ಬಂದಿತು.

*" ಪ್ರೀತಿಸುವವರ ಮನಸ್ಥಿತಿ ಹೇಗಿರುತ್ತದೆ ಸ್ವಲ್ಪ ತಿಳಿಸಿಕೊಡಿ. ಯಾಕೆಂದರೆ ಇದು ನನ್ನ ಫಸ್ಟ್ ಎಕ್ಸ್ಪೀರಿಯೆನ್ಸ್. ಇದರ ಬಗ್ಗೆ ನನಗೇನು ಗೊತ್ತಿಲ್ಲ. ನಿಮ್ಮಿಂದ ತಿಳಿಯಬೇಕು"*

 ಎಂದು ಕೇಳಿದಾಗ, ಸುಮಾ

*" ಅಯ್ಯೋ, ಅದನ್ನು ಹೇಗೆ ಹೇಳುವುದು?"*

*" ಅಲ್ಲ, ನೀವು ಎಷ್ಟಾದರೂ ಅನುಭವ ಹೊಂದಿರುವವರು. ಅದಕ್ಕಾಗಿ ನಿಮ್ಮಿಂದ ತಿಳಿದುಕೊಳ್ಳಲು ಕೇಳಿದ್ದೇನೆ. ದಯವಿಟ್ಟು ಉತ್ತರ ಹೇಳಿ."*

*" ಕಾಲ ಬದಲಾವಣೆಯಾಗಿದ್ದರಿಂದ ಕಾಲಕ್ಕೆ ತಕ್ಕಂತೆ ಪ್ರೀತಿ ಮಾಡೋ ವಿಧ ಸಹ ಬದಲಾಗಿದೆ"*

*" ಹೋಗಲಿ ನೀವು ಹಳೆಯ ಕಾಲದವರು ಎಂದು ತಿಳಿದುಕೊಳ್ಳೋಣ. ನಿಮ್ಮ ಕಾಲದಲ್ಲಿಯೇ ಯಾವ ರೀತಿಯಾಗಿ ಪ್ರೀತಿಸುತ್ತಿದ್ದೀರಿ ಅಂತ ಹೇಳಲು ಸಾಧ್ಯವೇ? ಪ್ಲೀಸ್"*

 ಎಂದು ಗೋಗರೆದುಕೊಂಡು ಸುಮಾಳನ್ನು ಕೇಳಿದಾಗ, ಅವಳು

*" ಮೊದಲು ಈಗಿನ ತರಹ ಮೊಬೈಲ್ ಇದ್ದಿರಲಿಲ್ಲ. ಆವಾಗ ಇದ್ದಿದ್ದು ಕೇವಲ ಪ್ರೇಮಪತ್ರ ಮಾತ್ರ. ಬರವಣಿಗೆಯ ಮೂಲಕ ಪ್ರೇಮನಿವೇದನೆ ಯಾಗುತ್ತಿತ್ತು. ಈಗ ನಿಮಗೆಲ್ಲ ಮೊಬೈಲ್, ಇಂಟರ್ನೆಟ್, ಎಷ್ಟು ಚಾಟ್ ಮಾಡು ವಿಧಗಳು, ಮತ್ತು ನೇರವಾಗಿ ಫೋನ್ ಮುಖಾಂತರವೇ ಮಾತನಾಡುವ ಈ ಕಾಲದಲ್ಲಿ ನಾನು ಹೇಳಿದ ವಿಷಯಗಳು ಚಲಾವಣೆಯಲ್ಲಿ ಇಲ್ಲದೆ ಇದ್ದದ್ದು"*

*" ದಯವಿಟ್ಟು ತಪ್ಪು ತಿಳಿಯಬೇಡಿ. ನಿಮ್ಮ ಒಂದು ಪರ್ಸನಲ್ ವಿಷಯ ನಾನು ಕೇಳಲು ಇಚ್ಛೆ ಪಡುತ್ತೇನೆ. ನೀವು ಯಾರಿಗಾದರೂ ಲವ್ ಲೆಟರ್ ಬರೆದಿದ್ದೀರಾ?"*

*" ಇಲ್ಲ"*

*" ಹೋಗಲಿ, ಯಾವುದಾದರೂ ಬರೆದ ಲವ್ ಲೆಟರ್ ಓದಿರುವಿರಿ?"*

*" ಸಾಕಷ್ಟು ಓದಿದ್ದೇನೆ."*

*" ಹಾಗಾದರೆ ನನ್ನ ಸಲುವಾಗಿ ಒಂದು ಕೆಲಸ ಮಾಡುವಿರಾ?"*

*" ಏನು"*

*" ಲವ್ ಲೆಟರ್ ಹೇಗೆ ಬರೆಯುತ್ತಾರೆ ಅಂತ, ನೀವು ಒಂದು ಮೊಡೆಲ್ ಲವ್ ಲೆಟರ್ ಬರೆದು ನನಗೆ ಹೇಳುತ್ತೀರಾ?"*

*" ಅಯ್ಯೋ ರಾಮ, ಅವೆಲ್ಲ ಆಗುವುದಿಲ್ಲ."*

*" ಹಾಗಾದರೆ ನಿಮಗೆ ಬರೆಯಲು ಬರುವುದಿಲ್ಲ ಅಂತ ಹೇಳಿ. ನಾನು ಒತ್ತಾಯ ಮಾಡುವುದಿಲ್ಲ"*

 ಎಂದು ಅಭಿ ಬರೆದು ಕಳುಹಿಸಿದಾಗ, ಅದನ್ನು ಓದಿದ ಸುಮಾಳಿಗೆ ಅವಳ ಅಹಂಗೆ ಪೆಟ್ಟು ಬಿದ್ದಂತಾಯಿತು. ತಾನು ಎಷ್ಟಾದರೂ ಕಾಲೇಜ್ ಲೆಕ್ಚರರ್. ಸಾಕಷ್ಟು ಸ್ಟೂಡೆಂಟ್ಸ್ ಗಳಿಗೆ ಪಾಠಹೇಳಿದ ಅನುಭವವಿದೆ. ಅದರಲ್ಲಿಯೂ ಶೇಕ್ಷಪೀಯರ್ ಬರೆದ ರೋಮಿಯೋ-ಜೂಲಿಯಟ್ ಅಂತಹ ರೋಮ್ಯಾಂಟಿಕ್ ಪಾಠ ಹೇಳಿದ ಅನುಭವ ತುಂಬಾ ಇದ್ದು, ನನಗೆ ಮಾತ್ರ ಲವ್ ಲೆಟರ್ ಬರೆಯುವದಕ್ಕೆ ಆಗುವುದಿಲ್ಲ ಎಂದು ಹೇಳುತ್ತಿರುವ ಎಳಸು, ಇವನಿಗೆ ಬರದೇ ತೋರಿಸಬೇಕು, ಅಂತಾ ನಿರ್ಧಾರ ಮಾಡಿಕೊಂಡು, ಸ್ವಲ್ಪ ಖಾರವಾಗಿಯೇ

*" ನಾನು, ಕಾಲೇಜ್ ಲೆಕ್ಚರರ್. ಅದರಲ್ಲಿಯೂ ಸಹ ನನ್ನ ಸಬ್ಜೆಕ್ಟ್ ಇಂಗ್ಲಿಷ್. ನನಗೆ ಬರೆಯುವುದು ಆಗುವುದಿಲ್ಲವೆಂದು ಮಾತ್ರ ಹೇಳಬೇಡಿ. ನಾನು ನಿಮ್ಮ ಮಾತನ್ನು ಚಾಲೆಂಜ್ ಆಗಿ ಸ್ವೀಕರಿಸಿ, ನಾಳೆ ನಿಮಗೊಂದು ಲವ್ ಲೆಟರ್ ಬರೆದು ತೋರಿಸುತ್ತೇನೆ"*

*" ಗುಡ್, ಇದನ್ನು ನಿಮ್ಮಿಂದ ನಾನು ನಿರೀಕ್ಷೆ ಮಾಡಿದ್ದೆ. ಆದರೆ, ನನ್ನ ಪ್ರಕಾರ ನಾಳೆ ನೀವು ಬರೆಯುವುದು ಆಗುವುದಿಲ್ಲ."*

*" ಅದೇಕೆ. ಯಾವ ಭರವಸೆ ಮೇಲೆ ನೀವು ಹಾಗೆ ಹೇಳುತ್ತಿರುವಿರಿ?"*

*" ಇಂದಿನವರಿಗೆ ನೀವು ಲವ್ ಲೆಟರ್ ಬರೆದಿಲ್ಲ. ನಿಮಗೆ ಲವರ್ ಅಂತ ಯಾರು ಇಲ್ಲ. ಅಲ್ಲದೆ ಈಗ ನೀವು ಬರೆಯಲು ಹೊರಟಿರುವುದು ನಿಮ್ಮ ಜೀವನದ ಫಸ್ಟ್ ಲವ್ ಲೆಟರ್. ನಾನು ಕೇಳಿ ತಿಳಿದುಕೊಂಡ ಪ್ರಕಾರ, ಜೀವನದಲ್ಲಿ ಬರೆಯುವ ಫಸ್ಟ್ ಲವ್ ಲೆಟರ್, ಒಂದೇ ಏಟಿಗೆ, ಒಂದೇ ಹಾಳೆಯಲ್ಲಿ ಮುಗಿಯುವುದಿಲ್ಲ. ಬೇಕಾದರೆ ಪರೀಕ್ಷೆ ಮಾಡಿಕೊಳ್ಳಿ."*

*" ಆದರೆ ನೋಡಿಯೇ ಬಿಡೋಣ"*

 ಎಂದು ಚಾಲೆಂಜಿಂಗ್ ರೀತಿಯಲ್ಲಿ ಸುಮಾ ಉತ್ತರ ನೀಡಿದಾಗ,

*" ನೀವು ಯಾರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಲವ್ ಲೆಟರ್ ಬರೆಯುತ್ತೀರಿ?"*

*" ನಿಮಗ್ಯಾಕೆ ಬೇಕು? ನಾನು ಯಾರನ್ನಾದರೂ ಮನಸ್ಸಿನಲ್ಲಿ ನೆನೆಸಿಕೊಂಡು ಬರೆಯಬಲ್ಲೆ"*

*" ಹಾಗಾಗುವುದಕ್ಕೆ ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಕಡೆಗೆ ಪ್ರೀತಿ ಬೆಳೆದಾಗ ಮಾತ್ರ, ಆ ವ್ಯಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದರೆ ಮಾತ್ರ ಆ ಲವ್ ಲೆಟರ್ ಗೆ ಒಂದು ಅರ್ಥ, ಸುಂದರತೆ ಬರುತ್ತದೆ. ಮನಸ್ಸಿನ ಭಾವನೆಗಳನ್ನು ಅಕ್ಷರರೂಪದಲ್ಲಿ ಪತ್ರದಲ್ಲಿ ಇಳಿಸುವುದು ಎಂದರೆ, ಹೃದಯದ ಬಡಿತವನ್ನು ಅಕ್ಷರದ ಮೂಲಕ ಕಾಣಿಸುವುದರ ಉದ್ದೇಶವೇ ಲವ್ ಲೆಟರ್. ಹಾಗೆ ಬರೆಯಬೇಕಾದರೆ, ನಿಮಗೊಬ್ಬ ಪ್ರೇಮಿ ಹುಟ್ಟಿ ಕೊಳ್ಳಲೇಬೇಕು. ಅಂದಾಗ ಮಾತ್ರ ಅದು ಸಾಧ್ಯ"*

 ಎಂದು, ಅವನು ಹೇಳಿದಾಗ, ಅವನ ವ್ಯಾಖ್ಯಾನವನ್ನು ಕಂಡ ಸುಮ ದಂಗಾದಳು. ಅವನು ಹೇಳಿದ ಪ್ರತಿ ಮಾತು ಸರಿಯಾಗಿಯೇ ಇತ್ತು. ನಾನು ಚಾಲೆಂಜ್ ಮಾಡುವುದಕ್ಕಿಂತ ಮೊದಲು ವಿಷಯವನ್ನು ಅವಳು ಯೋಚನೆ ಮಾಡಿರಲಿಲ್ಲ. ಆದರೆ ಚಾಲೆಂಜ್ ಮಾಡಿದ್ದಾಗಿದೆ, ಗೆಲ್ಲಲೇಬೇಕು, ಎಂದುಕೊಂಡು,

*" ಒಂದು ಅರ್ಥದಲ್ಲಿ ನೀವು ಹೇಳಿದ್ದು ಸರಿ, ಆದರೆ, ನಾನು random ಆಗಿ ಬರೆದು ಕಳುಹಿಸುತ್ತೇನೆ"*

*" ಬೇಡ, random ಆಗಿ ಎಲ್ಲರೂ ಬರೆಯುತ್ತಾರೆ. ನಿರ್ದಿಷ್ಟವಾಗಿ, ಒಬ್ಬ ವ್ಯಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುವ ಪ್ರಯತ್ನ ಮಾಡಿದರೆ ಅದು ನಿಜವಾದ ಚಾಲೆಂಜ್"*

 ಎಂದು ಬರೆದು, ತನ್ನ ಚಾಟ್ ಮುಖಾಂತರವೇ ಅವಳಲ್ಲಿದ್ದ ಅಹಂಗೆ ಮೇಲಿಂದ ಮೇಲೆ ಪೆಟ್ಟು ಕೊಡುತ್ತಿದ್ದ, ಅವಳು ಸಹ ಸೋಲದೆ,

*" ಆಯ್ತು, ನಿಮ್ಮ ಮಾತನ್ನೇ ಪರಿಗಣಿಸುತ್ತೇನೆ. ಆದರೆ ನಾನು ಯಾರನ್ನು ನನ್ನ ಲವರ್ ಅಂತ ತಿಳಿದುಕೊಳ್ಳಬೇಕು?"*

*" ನೀವು ತಪ್ಪು ಇದು ಕೊಳ್ಳುವುದಿಲ್ಲ ಎಂದರೆ ನಾನೊಂದು ಮಾತು ಹೇಳಬಹುದೇ."*

*" ಹೇಳಿ, ಪರವಾಯಿಲ್ಲ"*

*" ನಿಮಗಂತೂ ಪ್ರಸ್ತುತ ಯಾರೂ ಲವರ್ ಇಲ್ಲ. ನೀವು ನಿಮ್ಮ ಭಾವನೆಗಳನ್ನು ಒಂದು ಹೆಣ್ಣಾಗಿ ಒಂದು ಗಂಡಿಗೆ ತಿಳಿಸಬೇಕೆಂದು ಇರುವಾಗ, ನಿಮ್ಮ ಮನಸ್ಸಿನಲ್ಲಿ ಯಾರಾದರೂ ಗಂಡಸು ಇರಲೇಬೇಕು. ಇದ್ದರೆ ಚನ್ನ. ಒಂದು ಕೆಲಸ ಮಾಡಿ. ಲವ್ ಲೆಟರ್ ಬರೆದು ಮುಗಿಸುವ ತನಕ, ನನ್ನನ್ನು ನಿಮ್ಮ ಲವ್ವರ್ ಅಂತ ತಿಳಿದುಕೊಂಡು, ನಿಮ್ಮ ಪ್ರೇಮ ನಿವೇದನೆಯನ್ನು ನನಗೆ ಲವ್ ಲೆಟರ್ ಮೂಲಕ ಹೇಳಿಕೊಳ್ಳಬಹುದು. ಅದು ನೀವು ಒಪ್ಪಿಕೊಂಡರೆ ಮಾತ್ರ"*

 ಈ ಸಾಲುಗಳನ್ನು ಓದಿದ ಸುಮಾ, ಒಂದು ಕ್ಷಣ ಅದಕ್ಕೆ ಏನು ಉತ್ತರ ಕೊಡಬೇಕು ಅಂತ ತಿಳಿಯಲಿಲ್ಲ. ಚಾಲೆಂಜ್ ಮಾಡಿದ್ದಾಗಿದೆ. ತಾನು ಸೋಲಬಾರದು, ಎಂದುಕೊಂಡು

*" random ಆಗಿ ಬರೆದರೆ ಏನಾಗುತ್ತದೆ?"*

*" ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸುವ ಆಗುವುದಿಲ್ಲ. ಅದಕ್ಕಾಗಿಯೇ ನನ್ನನ್ನು ನಿಮ್ಮ ಲವರ್ ಅಂತ ತಿಳಿದುಕೊಂಡು ಬರೆಯಿರಿ."*

 ಎಂದು ಬರೆದು ಕಳುಹಿಸಿದಾಗ, ಸುಮಾಳಿಗೂ ಸಹ ಅವನು ಹೇಳಿದ್ದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಅರಿವಾದಾಗ, ಅದಕ್ಕೆ ಒಪ್ಪಿಕೊಂಡಳು. ತಾನು ಒಪ್ಪಿಕೊಂಡಿರುವುದಾಗಿ ಸಹ ಅವನಿಗೆ ಮೆಸೇಜ್ ಕಳುಹಿಸಿದಾಗ,

*" ಬೆಸ್ಟ್ ಆಫ್ ಲಕ್. ನಾಳೆ ನೋಡೋಣ, ನಿಮ್ಮ ಮನಸ್ಸಿನ ಭಾವನೆಗಳನ್ನು, ನನಗೆ ಬರೆಯುವ ಲವ್ ಲೆಟರ್ ದಲ್ಲಿ ಯಾವ ರೀತಿಯಾಗಿ ಇರುತ್ತವೆ ಅಂತ"*

*" ಖಂಡಿತವಾಗಿ"*

 ಎಂದು ಪ್ರತ್ಯುತ್ತರ ನೀಡಿದ ಸುಮಾ ಅಂದಿನ ಚಾಟ್ ಅನ್ನು ಮುಗಿಸಿದಳು. ಅಭಿ ಮರುದಿನ ಮತ್ತೆ ಭೇಟಿಯಾಗುವುದಾಗಿ ತಿಳಿಸಿ ಆಫ್ ಲೈನಿಗೆ ಹೋಗಿಬಿಟ್ಟ.




9

*" ನಲ್ಲ*" ಎಂದು ಬರೆದಳು. ಅದನ್ನು ನೋಡುತ್ತಿದ್ದಂತೆ ಅಭಿಯಂಥ ಯುವಕನಿಗೆ ಇಂಥ ಸಂಭೋಧನೆ ಸರಿಯಾಗುವುದಿಲ್ಲ ಎಂದು ಒಳಮನಸ್ಸಿಗೆ ಅನ್ನಿಸಿತು. ಅದನ್ನು ಕಾಟು ಹಾಕಿದಳು. ಮತ್ತೆ ಸ್ವಲ್ಪ ಯೋಚನೆ ಮಾಡಿ*" ಪ್ರಿಯಕರ"* ಎಂದು ಬರೆದು ಮುಂದೆ ಬರೆಯಬೇಕೆಂದು ಯೋಚನೆ ಮಾಡುವಷ್ಟರಲ್ಲಿ, ಅವಳ ಮನಸ್ಸಿಗೆ ಪ್ರಿಯಕರ ಎಂಬ ಶಬ್ದ ಹಳೆ ಕಾಲದ್ದು, ಈಗ ಯಾರು ಆ ರೀತಿಯಾಗಿ ಬರೆಯುವುದಿಲ್ಲ. ಅಲ್ಲದೆ ಅದು ಓದುವವರಿಗೆ ಸಹ ಸರಿ ಎನಿಸುವುದಿಲ್ಲ ಎಂದು ಅಂದುಕೊಂಡು ಅದನ್ನು ಸಹ ರದ್ದು ಮಾಡಿದಳು. ಕೊನೆಗೆ ಹಾಳೆ ಹೊಲಸು ಕಾಣುತ್ತಿದ್ದರಿಂದ ಆ ಹಾಳೆಯನ್ನು ಹರಿದುಹಾಕಿ ಮತ್ತೊಂದು ಹಾಳೆಯನ್ನು ತೆಗೆದುಕೊಂಡರು. ಅದರ ಮೇಲೆ ಹೊಸದಾಗಿ *" ನನ್ನ ಹೃದಯ"* ಎಂದು ಸಂಬೋಧನೆ ಮಾಡಿ ಲೆಟರ್ ಬರೆಯಲು ಪ್ರಾರಂಭ ಮಾಡಬೇಕು ಎನ್ನುವಷ್ಟರಲ್ಲಿ, ಅವಳಿಗೆ ತಾನು ಮಾಡಿದ ಸಂಬೋಧನೆಯನ್ನು ನೋಡಿದಾಗ, ಯಾವುದೋ ಹಾರ್ಟ್ ಸ್ಪೆಷಲಿಸ್ಟ್ ಡಾಕ್ಟರ್ ಲೆಟರ್ ಹೆಡ್ ಹಾಗೆ ಅನ್ನಿಸತೊಡಗಿತು. ಅದನ್ನು ಸಹ ರದ್ದು ಮಾಡಿದಳು. ಮತ್ತೆ ಏನನ್ನು ಸಂಬೋಧಿಸಿ ಬರೆಯಬೇಕು ಎಂದು ಯೋಚನೆ ಮಾಡುತ್ತಿರುವಾಗ, ಅವಳಿಗೆ ಒಂದು ಹಾಡು ನೆನಪಾಯಿತು.

*" ನಲ್ಲ ಎನ್ನಲೇ ನಿನ್ನ

 ಇನಿಯಾ ಎಂದು ಕೂಗಲೆ ನಿನ್ನ

 ನನ್ನೆದೆಯಾಳದಲಿ ನೆಲೆಸಿರುವ ದೇವರೇ ನಿನ್ನ

 ಏನೆಂದು ಕರೆಯಲಿ ಏನೆಂದು ನುಡಿಯಲ್ಲಿ

 ಗೆಳೆಯ ಪ್ರಿಯ ಗೆಳೆಯ"*

 ಈ ಹಾಡು ನೆನಪಾಗುತ್ತದೆ ಅವಳು*" ಒಲವಿನ ಗೆಳೆಯನೆ"* ಎಂದು ಸಂಬೋಧನೆ ಮಾಡಿ ಲವ್ ಲೆಟರ್ ಬರೆಯತೊಡಗಿದಳು.

       ಕೆಲವು ಸಾಲುಗಳನ್ನು ಬರೆದಾಗ, ಅವಳಿಗೆ ಹೇಗೆ ಮುಂದುವರಿಯಬೇಕು ಎಂದು ಗೊತ್ತಾಗಲಿಲ್ಲ. ಏನೇನೋ ಯೋಚನೆ ಮಾಡಿದರೂ ಸಹ, ಪ್ರೇಮ ನಿವೇದನೆಯನ್ನು ಯಾವ ರೀತಿಯಾಗಿ ಬರೆಯಬೇಕೆಂಬ ವಿಷಯ ಅವಳ ತಲೆಗೆ ಹೊಳೆಯಲಿಲ್ಲ. ಆ ಹಾಳೆಯನ್ನು ಸಹ ಹರಿದುಹಾಕಿ, ಮತ್ತೊಂದು ಹಾಳೆ ತೆಗೆದುಕೊಂಡು ಮತ್ತೆ ಮೊದಲಿನಿಂದಲೇ ಬರೆಯತೊಡಗಿದಳು. ಈ ರೀತಿಯಾಗಿ ಸುಮಾರು 18 ಹಾಳೆಗಳನ್ನು ತನಗೆ ಗೊತ್ತಿಲ್ಲದೆ ಹರಿದು ಹಾಕಿದಳು. ಅದಷ್ಟೇ ಹಾಳೆಗಳನ್ನು ಅರ್ಧಕ್ಕೆ ಬರೆದು ಸರಿ ಅನಿಸದಿದ್ದರೆ ಹರಿದು ಹಾಕುತ್ತಿದ್ದರೆ, ಅವಳ ಮನದಲ್ಲಿ ಹಟ ಇನ್ನಷ್ಟು ಗಟ್ಟಿಯಾಗುತ್ತಿತ್ತು. ಹೇಗಾದರೂ ಮಾಡಿ ಬರೆಯಲೇಬೇಕು ಎಂದು ಹಟತೊಟ್ಟ ಅವಳು ಕೊನೆಗೆ ಈ ಕೆಳಗಿನಂತೆ ಬರೆದಳು.

* ಒಲವಿನ ಗೆಳೆಯ,

 ಇಂದಿನವರೆಗೆ ನಿನ್ನನ್ನು ನಾನು ಕಣ್ಣಾರೆ ನೋಡಿರುವುದಿಲ್ಲ. ನಿನ್ನ ಧ್ವನಿಯನ್ನು ಸಹ ಕೇಳಿಲ್ಲ. ಆದರೂ ಹೃದಯ ನಿನಗಾಗಿ ಮಿಡಿಯುತ್ತಿದೆ. ನನ್ನ ಪ್ರೇಮ ನಿವೇದನೆಯನ್ನು ನಿನಗೆ ಮಾಡಿಕೊಳ್ಳಲು, ನಿನಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದು ಕೇವಲ ಪತ್ರವಲ್ಲ ನನ್ನ ಹೃದಯದ ಬಡಿತ. ಪ್ರತಿ ಅಕ್ಷರದಲ್ಲೂ ನಿನ್ನ ಹೆಸರು ಇದೆ. ನನ್ನ ಪ್ರತಿ ಉಸುರಿನಲ್ಲೂ ನಿನ್ನ ನೆನಪಿದೆ. ಉಸಿರು ತೆಗೆದುಕೊಂಡಾಗ ಮತ್ತು ಬಿಟ್ಟಾಗ ನಿನ್ನದೇ ಹೆಸರಿನ ಉಸಿರು ನನ್ನ ಎದೆಯಿಂದ ಒಳಗಿ ಹೋಗುವುದು ಬರುವುದು ಮಾಡುತ್ತಿದೆ. ನಿನ್ನನ್ನು ಯಾವಾಗ ನೋಡಿದೆನೆಂದು ಮನವು ಯೋಚನೆ ಮಾಡುತ್ತಿದ್ದೆ. ಮೊದಲ ದಿನ ನೀನು ನಿನ್ನ ಅಕ್ಷರದ ಮೂಲಕ ನಿನ್ನ ಪರಿಚಯ ನನಗೆ ಮಾಡಿಕೊಂಡಾಗ, ನಿನ್ನಲ್ಲಿದ್ದ ಸ್ನೇಹ ಭಾವನೆಯನ್ನು ನಾನು ಗುರುತಿಸಿ, ನಿನ್ನೊಂದಿಗೆ ಅಕ್ಷರ ರೂಪದಲ್ಲಿಯೇ ಮಾತನಾಡುತ್ತ ಹೊರಟೆ. ಆದರೆ ಗೊತ್ತಿಲ್ಲದೆ, ನಿನ್ನ ಪ್ರೇಮಪಾಶಕ್ಕೆ ನಾನು ಸಿಲುಕಿಕೊಂಡೆ. ಹೇಗೆ ಸಿಲುಕಿಕೊಂಡೆ ಎಂಬುವರು ಇಂದಿಗೂ ನನಗೆ ಒಗಟು. ಯಾವಾಗಲೂ ಒಬ್ಬಂಟಿಯಾಗಿ ಇರುತ್ತಿದ್ದ ನನ್ನನ್ನು, ನನ್ನ ಜೊತೆಗೆ ಮತ್ತೊಬ್ಬರು, ನನ್ನ ಹೃದಯಕ್ಕೆ ಹತ್ತಿರವಾದವರು ಇದ್ದಾರೆ ಎಂಬ ಭಾವನೆ ನಿನ್ನ ಅಕ್ಷರಗಳಿಂದ ನನ್ನಲ್ಲಿ ಮೂಡತೊಡಗಿತು. ಕೆಲವು ಬಾರಿ ನನಗೆ ಅನ್ನಿಸುವುದೆಂದರೆ, ನೀನು ನನಗೆ ಬರೆದು ಕಳುಹಿಸುತ್ತಿರುವ ಪ್ರತಿ ಅಕ್ಷರದಲ್ಲಿ, ನೀನೇ ಕಾಣುತ್ತಿ. ಆದರೆ ನಿನ್ನನ್ನು ಇಂದಿನವರೆಗೆ ನಾನು ನೋಡಿಲ್ಲ. ನಿನ್ನ ಧ್ವನಿಯನ್ನು ಕೇಳುವ ಮನಸ್ಸು ತುಂಬಾ ಆಗಿದೆ. ಆದರೆ, ಸಮಾಜದ ನಿರ್ಬಂಧದಿಂದ ನಾನು ಮುಂದುವರಿಯದೇ ಇರುವೆನು. ಕೆಲವು ಬಾರಿ ನನಗೆ ಅನ್ನಿಸುವುದೆಂದರೆ, ಇದೇ ರೀತಿಯಾಗಿ ನಿನ್ನ ಸಾಮೀಪ್ಯದಲ್ಲಿ ಯಾವಾಗಲೂ, ನಿನ್ನ ಹೃದಯದ ಬಡಿತದಲ್ಲಿ ನನ್ನ ಹೆಸರನ್ನು ಕೇಳುತ್ತ ಈ ಲೋಕವನ್ನೇ ಮರೆಯಬೇಕೆಂಬ ಆಸೆ. ಆದರೆ ಆ ಆಸೆ ಆಸೆಯಾಗಿಯೇ ಉಳಿದುಬಿಡುವದೇನೋ ಎಂಬ ಅವ್ಯಕ್ತವಾದ ಭಯ ನನ್ನನ್ನು ಕಾಡುತ್ತಿದೆ. ನನ್ನ ಮನದಾಳದ ಮಾತನ್ನು ನಾನು ಯಾವ ರೀತಿ ಹೇಳಬೇಕೆಂದು, ಪರಿತಪಿಸುತ್ತಿದ್ದಾಗ ನೀನು ನನಗೆ ಒಡ್ಡಿದ ಪಂದ್ಯದಿಂದ, ಮೊದಲು ಹಟದಿಂದ ಈ ಲವ್ ಲೆಟರ್ ಬರೆಯುವ ನಿರ್ಧಾರಕ್ಕೆ ಬಂದರೂ ಸಹ, ಬರೆಯುತ್ತ ಬರೆಯುತ್ತ ನನ್ನ ಹೃದಯ ನಿನಗಾಗಿ ಮಿಡಿಯುತ್ತಿದೆ. ಈ ವಿಷಯ ಲವ್ ಲೆಟರ್ ಬರೆಯುವ ವೇಳೆಯಲ್ಲಿ ನನಗೆ ಗೊತ್ತಾಯ್ತು. ಆದರೆ, ಕೆಲವು ಬಾರಿ ಯೋಚನೆ ಮಾಡಿದಾಗ ಈ ರೀತಿಯ ಸಪ್ರೇಮ ನಮ್ಮಿಬ್ಬರ ನಡುವೆ ಆಗಿದ್ದು ಸರಿಯೋ ತಪ್ಪೋ ಎಂಬ ನಿರ್ಧಾರವನ್ನು ನಾನು ಮಾಡಲಾಗಿರುವುದಿಲ್ಲ. ಕಾರಣ ನನಗೆ ಗೊತ್ತಿಲ್ಲ. ಮನದಲ್ಲಿಯ ಎಲ್ಲ ಮಾತನ್ನು ನಿನಗೆ ಹೇಳಿದ್ದೇನೆ. ಇಂತಿ ನಿನ್ನ ಪ್ರೀತಿಯ"*

 ಇಂದು ಈ ರೀತಿಯಾಗಿ ಲವ್ ಲೆಟರ್ ಬರೆದಿದ್ದಳು. ಅದನ್ನು ಬರೆದು ಮುಗಿಸಿದ ಮೇಲೆ, ಒಂದು ಸಲ ಓದಿದರಾಯಿತೆಂದುಕೊಂಡು ಅದನ್ನು ಓದತೊಡಗಿದಳು. ತಾನು ಬರೆದ ಪತ್ರವನ್ನು ತಾನೆ ಓದುತ್ತಿದ್ದಂತೆ ಸುಮಾಳಿಗೆ, ಅದರಲ್ಲಿ ಬರೆದ ಎಲ್ಲ ವಿಷಯಗಳು ತನ್ನ ಹೃದಯದ ಅಂತರಾಳದಿಂದ ಮೂಡಿಬಂದಿವೆ ಏನು ಅಂತ ಅನ್ನಿಸತೊಡಗಿತು. ಆದರೆ ನಿಜವಾಗಿ ಹಾಗೆ ಆಗಿತ್ತು. ಪತ್ರ ಬರೆಯಲು ಕುಳಿತಾಗ ಸುಮಾಳ ಮನಸ್ಸಿನಲ್ಲಿದ್ದ ಹಠ, ಮಾಯವಾಗಿ ಅಲ್ಲಿ ಒಂದು ಚಿಕ್ಕದಾದ ಪ್ರೇಮದ ಹೃದಯ ಜೀವಂತವಾಗಿತ್ತು. ಅಭಿ ಯನ್ನು ತನ್ನ ಪ್ರಿಯಕರನ ಎಂದು ತಿಳಿದುಕೊಂಡು, ಅವನನ್ನೇ ನೆನಪಿಸಿಕೊಳ್ಳುತ್ತಾ ಬರೆದ ಪ್ರೇಮಪತ್ರದಲ್ಲಿ, ತನ್ನ ಮನದಾಳದ ಮಾತನ್ನು ಬರೆದು ಬಿಟ್ಟಿದ್ದಳು. ಬರೆಯುವಾಗ ಅವಳಿಗೆ ಅಷ್ಟೇನೂ ಲವ್ ಫೀಲಿಂಗ್ ಬರಲಿಲ್ಲ. ಆದರೆ, ತಾನು ಬರೆದ ಪತ್ರವನ್ನು ತಾನು ಓದುತ್ತಿದ್ದಂತೆ, ಅವಳಿಗೆ ಒಂದು ವಿಷಯ ಖಾತ್ರಿಯಾಯಿತು. ತನಗೆ ಗೊತ್ತಿಲ್ಲದೇ ತಾನು ಅಭಿಯನ್ನು ಪ್ರೀತಿಸುತ್ತಿರುವೆ ಏನು ಎಂದು. ಒಂದು ಕ್ಷಣ ತನ್ನ ಯೋಚನೆಗೆ ತಾನೆ ದಂಗಾದಳು. ವಯಸ್ಸಿನ ಅಂತರ ಒಂದುಕಡೆಯಿಂದ ಕಾಡುತ್ತಿದ್ದರೆ, ಕಡಿಮೆ ಒಂಟಿತನ ಅವಳನ್ನು ಸುತ್ತಲೂ ಆವರಿಸಿಕೊಂಡಿತ್ತು.

 ಒಂಟಿತನದ ಫೆಸಿಲಿಜಂ ಅವಳನ್ನು ಪ್ರೇಮಕ್ಕೆ ಹಾತೊರೆಯುವಂತೆ ಮಾಡಿತ್ತು. ಹಾಗೆ ಒಂದು ಕ್ಷಣ, ಆ ಪತ್ರವನ್ನು ತನ್ನ ಮುಖದ ಎದುರಿಗೇ ಹಿಡಿದು ಅದನ್ನೇ ನೋಡತೊಡಗಿದಾಗ, ಅಲ್ಲೇ ಟೇಬಲ್ ಮೇಲೆ ಇದ್ದ ತನ್ನ ಸತ್ತ ಗಂಡನ ಫೋಟೋವನ್ನು ನೋಡುತ್ತಿದ್ದಂತೆ ಅವಳಿಗೆ ನಾನೇನು ಪಾಪ ಮಾಡಿದ್ದೇನೆ ಎಂದು ಅನ್ನಿಸತೊಡಗಿತು. ಟೊಂಕದ ಮೇಲೆ ಕೈಯಿಟ್ಟುಕೊಂಡು ನಿಂತಿದ್ದವನು ಫೋಟೋದಲ್ಲಿ, ತನ್ನನ್ನೇ ನೋಡಿ ನಗುತ್ತಿರುವಂತೆ ಅವಳಿಗೆ ಭಾಸವಾಗತೊಡಗಿತು. ಒಂದು ಸಲ ಅವನ ಜೀವಿತಕಾಲದಲ್ಲಿ ಅವನಾಡಿದ ಮಾತು ಸುಮಾಳ ನೆನಪಿಗೆ ಬಂತು.

*" ಪ್ರೀತಿ ಸಿಗದವನು ನಿಜವಾಗಿ ಅನಾಥ. ತಂದೆ-ತಾಯಿ ಇಲ್ಲದಿದ್ದರೂ ಅನಾಥ ನಲ್ಲ. ಒಬ್ಬಂಟಿಯಾದ ಅಂತಹ ವ್ಯಕ್ತಿಗೆ ಯಾರಾದರೂ ಪ್ರೀತಿ ತೋರಿಸಿದರೆ, ಅವರ ಪ್ರೀತಿ ಅಪಾರವಾಗಿರುತ್ತದೆ, ನಿಜವಾಗಿರುತ್ತದೆ, ಕಾಳಜಿ ಪೂರಕವಾಗಿರುತ್ತದೆ. ಅದರಲ್ಲಿ ಕಲ್ಮಶ ಎಂದಿಗೂ ಇರುವುದಿಲ್ಲ"*

 ಎಂದು ಹೇಳಿದ ಅವನ ಮಾತು ನೆನಪಿಸಿಕೊಂಡಳು. ತನ್ನ ಬಗ್ಗೆ ತಾನು ಯೋಚನೆ ಮಾಡಿದಾಗ, ಮತ್ತು ಗೆಳತಿ ಶಾಂತಾಳ ಜೀವನವನ್ನು ನೆನಪು ಮಾಡಿಕೊಂಡಾಗ, ನನ್ನ ಗಂಡ ಹೇಳಿದ ವಿಷಯ ಮತ್ತು ಶಾಂತ ತನ್ನ ಮುಂದೆ ಹೇಳಿದ ವಿಷಯ ಎರಡು ಸರಿ ಅಂತ ಅನ್ನಿಸತೊಡಗಿತು. ತಾನು ಹೇಗಿದ್ದರೂ ಒಬ್ಬಂಟಿ. ನನಗಂತೂ ಯಾರು ಆಸರೆಯಿಲ್ಲ. ಬಂಧುಬಳಗದವರ ಅಂತೂ ಇಲ್ಲವೇ ಇಲ್ಲ. ಒಂದು ರೀತಿಯಲ್ಲಿ ತಾನು ಸ್ವಾತಂತ್ರಗಳು. ತನ್ನ ಜೀವನ ತನ್ನ ಮನಸ್ಸು ಬಂದಂತೆ ನಡೆಸುವುದು ತನಗಿದ್ದ ಹಕ್ಕು. ಅದನ್ನು ಪ್ರತಿಭಟಿಸಲು ಸ್ವಂತದವರು ಅಂತ ಯಾರೂ ಇರಲಿಲ್ಲ. ಅಷ್ಟಾಗಿಯೂ ಪ್ರೀತಿಸಿದರೆ ತಪ್ಪೇನು ಎಂಬ ಭಾವನೆ ಅವಳ ಮನಸ್ಸಿಗೆ ಬಂತು.

 ಅವಳ ಮನಸ್ಸು ಒಂದು ರೀತಿಯಿಂದ ಹೀಗೆ ಯೋಚನೆ ಮಾಡುತ್ತಿದ್ದರೆ, ಇನ್ನೊಂದು ಮನಸ್ಸು, ಅವಳಿಗೆ, ನೀನು ಮಾಡುತ್ತಿರುವುದು ತಪ್ಪು, ಇಷ್ಟು ವಯಸ್ಸಾದ ಮೇಲೆ ನಿನಗೆ ಪ್ರೇಮದ ಅವಶ್ಯಕತೆಯಾದರೂ ಏನಿದೆ. ಜೀವನದಲ್ಲಿ ಹೆಣ್ಣಿಗೆ ಗಂಡ ನೊಬ್ಬನೆ ಪ್ರಿಯಕರ. ಇನ್ನೊಬ್ಬ ಇಂದಿಗೂ ಪ್ರಿಯಕರನ ಆಗುವುದಿಲ್ಲ. ನನ್ನ ನೆನಪು ಇನ್ನೂ ಮನಸ್ಸಿನಲ್ಲಿ ಮಾಸದೇ ಉಳಿದಿರುವಾಗ, ಇನ್ನೊಬ್ಬನನ್ನು ಪ್ರಿಯಕರ ಎಂದು ಒಪ್ಪುವುದು ಮೆಚ್ಚುವ ಮಾತಲ್ಲ., ಎಂದು ಹೇಳುತ್ತಿತ್ತು.

 ಎರಡೂ ರೀತಿಯ ಮಾತುಗಳು ತನ್ನ ಮನಸ್ಸಿನಿಂದ ಬರುತ್ತಿದ್ದದನ್ನು ಯೋಚನೆ ಮಾಡಿದ ಸುಮಾ ಗೊಂದಲದಲ್ಲಿ ಬಿದ್ದಳು. ಕೊನೆಗೆ ಮೊದಲ ಮನಸ್ಸಿನ ಮಾತೆ ಗೆದ್ದಿತು. ನನಗಂತೂ ಯಾರು ಇಲ್ಲ. ತಾನು ಅಭಿಯನ್ನು ಪ್ರೀತಿಸಿದ್ದಾಗಿದೆ, ಮುಂದೆ ಹೋಗುತ್ತ ನೋಡೋಣ. ಅವನಿಂದಲೇ ಏನಾದರೂ ಪ್ರಪೋಸಲ್ ಬಂದರೆ ಅದರ ಯೋಚನೆ ಮಾಡಿದರಾಯಿತು ಎಂದುಕೊಂಡು, ಪತ್ರ ಬರೆದು ಮುಗಿಸಿದ ತೃಪ್ತ ಭಾವನೆಯಿಂದ ಅದನ್ನು ಮಡಿಚಿ ಟೇಬಲ್ ಮೇಲೆ ಇಟ್ಟು, ಮಂಚದ ಮೇಲೆ ಹೋಗಿ ಮಲಗಿಕೊಂಡಾಗ ಕೂಡಲೇ ಅವಳಿಗೆ ಗಾಢನಿದ್ರೆ ಆವರಿಸಿಕೊಂಡಿತ್ತು.

 ಮರುದಿನ ಬೆಳಿಗ್ಗೆ ಸುಮಾ ಎದ್ದಾಗ, ಅವಳಿಗೆ ತಿಳಿಯದ ಹಾಗೆ ಅವಳ ಮನಸ್ಸಿನಲ್ಲಿ ಯಾವುದೋ ಉತ್ಸಾಹ ತುಂಬಿ ತುಳುಕುತ್ತಿತ್ತು. ಹಿಂದಿನ ರಾತ್ರಿ ನಾನು ಬರೆದು ಮುಗಿಸಿದ ಲವ್ ಲೆಟರ್, ಅವಳ ಮನಸ್ಸಿಗೆ ತುಂಬಾ ಹಿಡಿಸಿತ್ತು. ಬೇಗನೆ ಎದ್ದವಳೇ ಸ್ನಾನ ಮಾಡಿ ಕಾಫಿ ಕುಡಿಯುತ್ತಾ ಸೋಫಾದ ಮೇಲೆ ಕುಳಿತುಕೊಂಡಳು, ತಾನು ಬರೆದ ಲವ್ ಲೆಟರ್ ತಾನೇ ಸುಮಾರು ಸಲ ಓದಿ ಮನದಲ್ಲಿಯೇ ಆನಂದಿಸಿದಳು. ಪ್ರತಿಬಾರಿಯೂ ತಾನು ಬರೆದ ಲವ್ ಲೆಟರ್ ಓದುತ್ತಿದ್ದಾಗ, ಅವಳಿಗೆ ಮನಸ್ಸಿನಲ್ಲಿ ಹೇಳಲಾಗದಂತಹ ಮಧುರವಾದ ಫೀಲಿಂಗ್ ಬರುತ್ತಿತ್ತು. ತಾನು ಯಾವುದೋ ಕಲ್ಪನಾಲೋಕದಲ್ಲಿ ಇದ್ದ ಹಾಗೆ ಭಾಸವಾಗುತ್ತಿತ್ತು. ಅಲ್ಲದೆ ಅವರು ಬರೆದ ಲವ್ ಲೆಟರ್ ಪ್ರತಿ ಶಬ್ದಗಳನ್ನು ಓದಿದಾಗ, ಪ್ರೀತಿ ತುಂಬಿದ ಶಬ್ದಗಳು, ಗುಲಾಬಿ ಹೂವಿನಂತೆ ಅವಳ ಕಣ್ಣಿಗೆ ಕಾಣುತ್ತಿದ್ದವು. ಮನಸ್ಸಿನಿಂದ ಓದಿದಾಗ, ಹೃದಯದ ಬಡಿತ ಯಾರನ್ನು ನೆನೆದುಕೊಂಡು ವಿರಹದಲ್ಲಿ ತನ್ನ ವೇದನೆಯನ್ನು ಹೇಳಿದ ರೀತಿಯಾಗಿ ತಾನೆ ಅನುಭವಿಸುತ್ತಿದ್ದಳು. ಪ್ರತಿ ಶಬ್ದದಲ್ಲೂ ತನ್ನ ಒಂಟಿತನವನ್ನು ಹೋಗಲಾಡಿಸಲು, ಹೇಳದೇ ಇದ್ದರೂ ಸಹ ಬರೆಯುವಾಗ ಮಾತ್ರ ಅವಳಿಗೆ ತನ್ನ ರಕ್ಷಣೆಗೆ ಮತ್ತು ತನ್ನ ಹೃದಯ ಕಾವಲಿಗೆ ಯಾರೋ ಒಬ್ಬರು ಇದ್ದಾರೆ ಎಂಬ ಅನುಭವ ಬರುತ್ತಿತ್ತು. ಹೇಳಲು ಬರಲಾರದ ಅಂತಹ ಅನುಭವ ಆ ಪತ್ರವನ್ನು ಓದಿದಾಗ ಅವಳಿಗೆ ಆಗುತ್ತಿತ್ತು.

 ಹಲವಾರು ಬಾರಿ ಆ ಪತ್ರವನ್ನು ಓದಿದ ಸುಮಾ, ಪ್ರತಿಬಾರಿ ಪತ್ರವನ್ನು ಓದಿದಾಗಲೂ ತನ್ನ ಮೊಬೈಲನ್ನು ತೆಗೆದು ಅಭಿ ಆನ್ಲೈನ್ ಗೆ ಬಂದಿದ್ದಾನೆ ಎಂದು ಪರಿಶೀಲಿಸುತ್ತಿದ್ದಳು. ಅವಳಿಗೆ ಮನಸ್ಸಿನ ಉದ್ವೇಗವನ್ನು, ಉತ್ಸಾಹವನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಒಂದು ವೇಳೆ ಅಭಿ, ಆನ್ಲೈನಲ್ಲಿ ಇದ್ದರೆ ಅವನಿಗೆ ಕೂಡಲೇ ತಾನು ಬರೆದ ಪ್ರೇಮಪತ್ರವನ್ನು ತಿಳಿಸುವ ಅವಸರದಲ್ಲಿ ಇದ್ದಳು. ಆದರೆ ಅಭಿ ಆನ್ಲೈನಲ್ಲಿ ಇರಲಿಲ್ಲ. ನಿರಾಶೆಗೊಂಡ ಸುಮಾ, ಸಾಯಂಕಾಲ ಹೇಗಾದರೂ ಸಿಗುತ್ತಾನೆ ಎಂದು ತನ್ನನ್ನು ತಾನು ಸಮಾಧಾನಪಡಿಸಿ ಕೊಂಡು, ಡ್ಯೂಟಿಗೆ ಹೋದಳು.

 ಕಾಲೇಜ್ ತಲುಪಿದಾಗಲೂ ಅಷ್ಟೇ, ಸುಮಾ ನಾನು ಬರೆದ ಪ್ರೇಮ ಪತ್ರದ ಗುಂಗಿನಲ್ಲಿಯೇ ಉಳಿತು ಬಿಟ್ಟಿದ್ದಳು. ಅಂದು ತರಗತಿಯಲ್ಲಿ ಕ್ಲಾಸ್ ಹೇಳುವಾಗ, ಪ್ರಣಯದ ಸನ್ನಿವೇಶವನ್ನು, ತಾನು ಬರೆದ ಪ್ರೇಮ ಪತ್ರದ ಗುಂಗಿನಲ್ಲಿಯೇ ತುಂಬಾ ರಸವತ್ತಾಗಿ ಹೇಳಿದ್ದಳು. ವಿದ್ಯಾರ್ಥಿಗಳಿಗೂ ಸಹ ಇಂದು, ಸುಮಾ ಬೇರೆ ರೀತಿಯಲ್ಲಿಯೇ ಪಾಠ ಮಾಡುತ್ತಿರುವಳು ಎಂದು ಅನ್ನಿಸತೊಡಗಿತು. ಸಾಮಾನ್ಯವಾಗಿ ಒಬ್ಬ ಲೆಕ್ಚರರ್ ಪಾಠವನ್ನು ಹುಡುಗರಿಗೆ ತಿಳಿಯುವಂತೆ ಮಾಡುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳನ್ನು ಪಾತ್ರದ ಒಳಗಡೆಗೆ ಹೋಗುವ ರೀತಿಯಲ್ಲಿ ಪಾಠ ಮಾಡುವುದು ತುಂಬಾ ಕಷ್ಟದ ಕೆಲಸ. ಆದರೆ, ಇಂದು ಸುಮಾ ಪಾಠವನ್ನು ಹೇಳುವಾಗ ಆ ಮಟ್ಟಕ್ಕೆ ತಲುಪಿದ್ದಳು. ಅದರಿಂದಲೇ ವಿದ್ಯಾರ್ಥಿಗಳಿಗೆ, ಹಿಂದಿನ ಪಾಠ ತುಂಬಾ ಚೆನ್ನಾಗಿ ಹೇಳಿರುತ್ತಾರೆ ಎಂಬ ಭಾವನೆಗೆ ಬಂದಿದ್ದರು. ಸುಮಾಳ ಕ್ಲಾಸು ಶುರುವಾದಮೇಲೆ ಮುಗಿಯುವ ತನಕ, ವಿದ್ಯಾರ್ಥಿಗಳು ಮತ್ತು ಸುಮಾ, ಎಲ್ಲರೂ ಕೂಡಿಯೇ ಪಾತ್ರದಲ್ಲಿ ಹರಿಸಿಕೊಂಡು ಬಂದಿದ್ದರು. ಕ್ಲಾಸ್ ಮುಗಿಯುವವರೆಗೆ ಹೇಳಿದ ಪಾಠದಲ್ಲಿ, ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿ, ಮತ್ತು ಸುಮಾ ಲೆಕ್ಚರರ್ ಆಗಿ ಉಳಿದಿದ್ದೆಲ್ಲ. ಪಾಠದ ಪಾತ್ರದಲ್ಲಿಯೇ ಅವರು ಎಲ್ಲರೂ ತಲ್ಲೀನರಾಗಿದ್ದರು. ಪ್ರೇಮದ ಹೊಸ ವ್ಯಾಖ್ಯಾನವನ್ನು ಸುಮಾ ಹೊಸ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟಿದ್ದಳು.

*" ಪ್ರೇಮವೆಂಬುದು ಒಂದು ಸುಂದರ ಅನುಭವ. ಕೇವಲ ಮನಸ್ಸಿಗೆ ಸಂಬಂಧಿಸಿದ ಪ್ರೇಮ, ದಯದ ಬಡಿತವನ್ನು ಹಿತವಾಗಿ ಮಿತವಾಗಿ ಬಡಿಯುತ್ತಾ, ಕಣ್ಣುಗಳು ಯಾರನ್ನೋ ಕಾಯುತ್ತ, ತನ್ನ ಸಂಗಾತಿಯ ಆಗಮನವನ್ನು ನೋಡುತ್ತಿರುವ ನಯನಗಳು ಸುಂದರ ಶಾಂತ ಸಮುದ್ರಕ್ಕೆ ಸಮನಾಗಿದ್ದು, ಇಂತಹ ವೇಳೆಯಲ್ಲಿ ನಯನಗಳನ್ನು ನೋಡಲಾಗಿ, ಮನಸ್ಸಿನಲ್ಲಿರುವ ಪ್ರೇಮದ ಭಾವನೆಯನ್ನು, ಕಣ್ಣಿನಲ್ಲಿ ಓದುವುದು ಸಾಧ್ಯವಾಗುತ್ತದೆ. ಪ್ರಿಯತಮ ಅಥವಾ ಪ್ರಿಯತಮೆಯ ನಿರೀಕ್ಷೆಯಲ್ಲಿ ಕುಳಿತಿರುವ ಪ್ರತಿವ್ಯಕ್ತಿಯ ಕಣ್ಣಿನಲ್ಲಿ, ಪ್ರೇಮಸಾಗರ ಕಂಡುಬರುತ್ತದೆ. ಪ್ರೇಮ ಸಾಗರವನ್ನು ದಿಟ್ಟಿಸಿ ನೋಡುತ್ತಿರುವಾಗ, ಹೃದಯಾಂತರಾಳದಲ್ಲಿ ನಡೆಯುವ ಮಧುರತೆಯಿಂದ ಬಡಿಯುವ ಪ್ರೇಮದ ಬಡಿತ ಕೇಳಿ ಬರುತ್ತದೆ. ಪ್ರಿಯತಮನ ಆಗಮನದ ನಿರೀಕ್ಷೆಯಲ್ಲಿ ಕುಳಿತ ಪ್ರಿಯತಮೆಯು, ಅವನು ಬರುವುದು ತಡವಾಗುತ್ತಿರುವಂತೆ ಅವನಿಗಾಗಿ ಮೀಸಲಿಟ್ಟ ತನ್ನ ಪ್ರೇಮ, ಯೌವನ ನಿಮಿಷ ನಿಮಿಷಕ್ಕೂ ಹಳೆಯದಾಗಿ ಹೋಗುತ್ತಿದೆ, ಆದಷ್ಟು ಬೇಗನೆ ಬರಬಾರದೇ, ಎಂಬ ನಿರೀಕ್ಷೆ ಭರಿತ ವಿರಹದ ಕೂಗು ಹೃದಯದ ಬಡಿತದಿಂದ 

 ಒಂದೇ ಉಸಿರಿನಲ್ಲಿ ಕೇಳಿಸುತ್ತಿರುತ್ತದೆ. ಪ್ರಿಯತಮನ ಆಗಮನವನ್ನು ನಿರೀಕ್ಷಿಸುತ್ತಿರುವ ಪ್ರಿಯತಮೆ, ಅವಳ ಚಂಚಲತೆ ಆದಷ್ಟು ಬೇಗ ತನ್ನ ಪ್ರಿಯತಮನನ್ನು ಕಾಣುವ ಹಂಬಲ, ನೋಡಲಿಕ್ಕೆ ಕಾಣುವುದು ಸಹಜವಾದರೂ ಸಹ, ಸೂಕ್ಷ್ಮವಾಗಿ ಆ ದೃಶ್ಯವನ್ನು ನೋಡಿದಾಗ, ಅಂತಹ ಅನುಭವವನ್ನು ಅನುಭವಿಸುವುದರಿಂದ ಆಗುವ ಸಂತೋಷ, ಎಷ್ಟೇ ದುಡ್ಡು ಕೊಟ್ಟರು ಸಿಗಲಾರದು. ಅಂಥ ಪ್ರೇಮವೇ ಪವಿತ್ರವಾದ ಪ್ರೇಮ. ನಿಷ್ಕಲ್ಮಶ ಪ್ರೇಮ. ಇಂಥ ಪ್ರೇಮದಲ್ಲಿ ಯಾವುದೇ ಕಪಟತನ ಇರುವುದಿಲ್ಲ. ಪ್ರೇಮವೆಂದರೆ ಕೇವಲ ದೇಹದ ಬೆಸುಗೆಯಲ್ಲ. ಯಾವುದೋ ಆಸೆಯನ್ನು ತೋರಿಸಿ ಒಲಿಸಿಕೊಳ್ಳುವುದು ಪ್ರೇಮವಲ್ಲ. ಹೃದಯದಿಂದ ಹೃದಯಕ್ಕೆ ಬೆಸುಗೆ ಹಾಕುವ ಮಧುರತೆ ಪ್ರೇಮ. ಪ್ರಿಯತಮೆ, ಪ್ರಿಯತಮನ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳುವ ವಿಷಯವನ್ನು ಗಮನಿಸಿದಾಗ, ಆ ಪಿಸುಮಾತಿನ ದ್ವನಿಯಲ್ಲಿ, ಶಾಂತವಾದ ಸ್ವರ ಸಂಗೀತದಂತೆ ಕೇಳಿ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ. ಪ್ರಿಯತಮೆಯು ಆಸೆಪಟ್ಟು ಪ್ರಿಯತಮನನ್ನು ಏನನ್ನೋ ಕೇಳಿದಾಗ, ಅವನು ಅದನ್ನು ಈಡೇರಿಸುವುದಾಗಿ ಕೊಡುವ ಭರವಸೆ ಕೊಡುವ ನಿಟ್ಟಿನಲ್ಲಿ, ಅವಳ ಕೈಯನ್ನು ಮೃದುವಾಗಿ ಹಿಡಿದು ಅವಳ ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತಿರುವಾಗ, ಅವನ ಕೈ ಸ್ಪರ್ಶದಿಂದ ಸಿಗುವ ಭರವಸೆ ಮಾತಿನಲ್ಲಿ ವ್ಯಕ್ತಪಡಿಸಿದರು ಸಿಗುವುದಿಲ್ಲ. ಅದೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಭರವಸೆ ಈಡೇರಿಸುವ ಮಾತನ್ನು ಹೇಳುತ್ತಿರುವಾಗ, ಅವನ ಬಾಹುಗಳಲ್ಲಿ ತಾನು ಎಂದಿಗೂ ಸುರಕ್ಷಿತ ಎಂಬ ಭಾವನೆ ಪ್ರಿಯತಮೆಗೆ ಬರುತ್ತದೆ. ಇಂತಹ ಪವಿತ್ರವಾದ ಪ್ರೇಮ, ಕೇವಲ ನಾಲ್ಕು ಅಕ್ಷರಗಳಲ್ಲಿ ಸೀಮಿತವಾಗಿ, ಅದಕ್ಕೊಂದು ಅರ್ಥ, ಅಪಾರ್ಥ ಕಲ್ಪಿಸಿಕೊಂಡು, ಪ್ರೇಮವೆಂಬ ಶಬ್ದಕ್ಕೆ ಅಪಚಾರ ಮಾಡುತ್ತಿರುವ ವ್ಯಕ್ತಿಗಳೆಲ್ಲ ನನ್ನ ಪ್ರಕಾರ ನಿಜವಾದ ಖಳನಾಯಕರು. ಇಂಥವರಿಂದಲೇ ಪ್ರೇಮ ಇಂದು ಹಾಸ್ಯಾಸ್ಪದ ವಸ್ತುವಾಗಿದೆ. ವಿಫಲತೆಯ ಉತ್ತುಂಗಕ್ಕೆ ಪ್ರೇಮ ಹೋಗಬೇಕಾದರೆ, ಇಂಥವರಿಂದಲೇ ಸಾಧ್ಯ. ಪ್ರೀತಿಸುವವರ ಮನಸ್ಥಿತಿ, ಪ್ರೇಮದ ಪರಿಣಯದ ಬಗ್ಗೆ ಗೊತ್ತಿರದ ಇವರು, ಪ್ರೇಮವನ್ನು ವಿಫಲಗೊಳಿಸುವಲ್ಲಿ ಮಾತ್ರ ಕ್ರೂರತೆ ಮೆರೆಯುವುದು ನಿಜಕ್ಕೂ ಘೋರ."*

 ಪಾಠ ಮಾಡುತ್ತಾ, ಅಭಿಯನ್ನು ತನ್ನ ಪ್ರಿಯತಮನನ್ನಾಗಿ ಮನದಲ್ಲಿ ಕಲ್ಪಿಸಿಕೊಂಡು, ಪ್ರೇಮಕ್ಕೆ ತನ್ನದೇ ಆದ ವ್ಯಾಖ್ಯಾನವನ್ನು ಕೊಟ್ಟು, ವಿದ್ಯಾರ್ಥಿಗಳನ್ನು ಪ್ರೇಮಲೋಕಕ್ಕೆ ಕೊಂಡೊಯ್ದಿದ್ದರು. ವಿದ್ಯಾರ್ಥಿಗಳ ಆದರೂ ಅಷ್ಟೇ, ಪ್ರೇಮಲೋಕದಲ್ಲಿ ಸುತ್ತಾಡಿಕೊಂಡು ಮೈಮನ ಹಗುರ ಮಾಡಿಕೊಂಡು, ಸುಮಾಳ ಕ್ಲಾಸ್ ಮುಗಿದಾಗ, ಯಾವುದೋ ಲೋಕದಿಂದ ಮತ್ತೆ ಧರೆಗಿಳಿದುಬಂದಂತೆ ಆಗಿತ್ತು. ಪಿರಿಯಡ್ ಮುಗಿದ ಸಂಕೇತವಾಗಿ ಬೆಲ್ ಹೊಡೆದಾಗ, ವಿದ್ಯಾರ್ಥಿಗಳಿಗೆ ಸಿಟ್ಟು ಬಂದಿತ್ತು. ಇನ್ನೊಂದು ಗಂಟೆಯಾದರೂ ಸುಮಾ ಕ್ಲಾಸ್ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.

10

 ಕ್ಲಾಸ್ ಮುಗಿಸಿದ ಸುಮಾ, ನಾನು ಹೇಳಿರುವ ಪಾಠದ ಗುಂಗಿನಲ್ಲಿ, ತನ್ನನ್ನು ಅಭಿಯನ್ನು ಕಲ್ಪಿಸಿಕೊಂಡು, ನಿಧಾನವಾಗಿ ಸ್ಟಾಫ್ ರೂಮಿನ ಕಡೆಗೆ ನಡೆದಿದ್ದಳು. ಇನ್ನೇನು ಸ್ಟಾಪ ರೂಮಿನೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಬಂದ ಕಾವೇರಿ, ಸುಮಾಳ ಭುಜವನ್ನು ಹಿಡಿದು,

*" ಏನೇ ಸುಮಿ, ಇಂದು ತುಂಬಾ ರೋಮ್ಯಾಂಟಿಕ್ ಆಗಿ ಕ್ಲಾಸ್ ಹೇಳಿದಂತೆ."*

 ಎಂದು ನೋಡಿದಾಗ ಅವಳ ಮಾತನ್ನು ಕೇಳಿ ಬೆಚ್ಚಿಬಿದ್ದ ಸುಮಾ,

*" ನಿನಗೆ ಯಾರು ಹೇಳಿದರು?"*

*" ಅಮ್ಮಣಿ, ನಿಮಗೆ ಗೊತ್ತಿಲ್ಲ. ನೀನು ಪಾಠಹೇಳುತ್ತಿರುವ ಸ್ಟೂಡೆಂಟ್ಸ್, ನಿನಗೆ ಲೈನ್ ಹೊಡೆಯುತ್ತಾರೆ. ಅಲ್ಲದೆ ನಾನು ಕ್ಲಾಸ್ ಮುಗಿಸಿ ಬರುತ್ತಿರುವಾಗ, ಎಲ್ಲ ಸ್ಟೂಡೆಂಟ್ಸ್ ಕ್ಲಾಸ್ ರೂಮಿನ ಮುಂದೆ ನಿಂತುಕೊಂಡು, ಇಂದು ನೀನು ಬೇರೆ ರೀತಿಯಾಗಿಯೇ ಅವರ ಕಣ್ಣಿಗೆ ಕಾಣುತ್ತಿರುವುದಾಗಿ, ಮತ್ತು ಪ್ರೇಮ ದೇವತೆಯಾಗಿ ಇಂದು ಅವರ ಕಣ್ಣಿಗೆ ಕಂಡುಬಂದಿರುವುದಾಗಿ ಮಾತನಾಡುತ್ತಿದ್ದರು. ಅವರು ಮಾತನಾಡಿದ್ದನ್ನು ಕೇಳಿದ ನಾನು ನೀನು ಇದೇ ರೀತಿಯಾಗಿ ಪಾಠ ಮಾಡಿರಬೇಕು ಎಂದು ಊಹಿಸಿದೆ. ಹೇಳಿಕೇಳಿ ನಿನ್ನದು ಮೊದಲೇ ಇಂಗ್ಲೀಷ್ ವಿಷಯ. ಕನ್ನಡ ವಿಷಯದಲ್ಲಿ ಆಗಿದ್ದರೆ, ಪ್ರೀತಿ ಪ್ರೇಮಕ್ಕೆ ಮಡಿ ಇರುತ್ತಿತ್ತು. ಆದರೆ ಇಂಗ್ಲಿಷ್ ವಿಷಯದಲ್ಲಿ ಮಾತ್ರ ಯಾವುದೇ ರೀತಿಯಿಂದ ಮಡಿ-ಮೈಲಿಗೆ ಇರುವುದಿಲ್ಲ, ಏನಿದ್ದರೂ ಸ್ಟ್ರೈಟ್ ಫಾರ್ವರ್ಡ್. ಅಂತಹದರಲ್ಲಿ, ಇಂದು ನೀನು ಮಾಡಿಕೊಂಡಿರುವ ವಿಶೇಷ ಅಲಂಕಾರ, ನಿನ್ನ ಸ್ಟೂಡೆಂಟ್ಸ್ ಗಳನ್ನು ಹುಟ್ಟು ಹಿಡಿಸುವುದು ಸಹಜ. ಇಂಥ ಪರಿಸ್ಥಿತಿಯಲ್ಲಿ ನೀನು ತುಂಬಾ ರೋಮ್ಯಾಂಟಿಕ್ ಆಗಿ ಪಾಠ ಹೇಳಿದರೆ, ಮಂಗಗಳಿಗೆ ಸರಿ ಕುಡಿಸಿದಂತೆ ಆಗುವುದು ಸಹಜವಲ್ಲವೆ"*

 ಎಂದು ನುಡಿದಾಗ, ಅವಳ ಮಾತನ್ನು ಕೇಳಿದ ಸುಮಾ ನಕ್ಕು,

*" ಕಾವೇರಿ, ನಾನು ಹೇಳುತ್ತಿರುವ ವಿಷಯ ಮತ್ತು ಭಾಷೆ ಹಾಗಿದೆ. ಅದರಲ್ಲಿ ನೀನು ಹೇಳುವ ರೀತಿಯಲ್ಲಿ ಮಡಿ ಮೈಲಿಗೆಯಿಂದ ಹೇಳಿದರೆ, ಅದನ್ನು ಅನುಭವಿಸಿಕೊಂಡು ಹೇಳಿದಂತೆ ಆಗುವುದಿಲ್ಲ. ಅದಕ್ಕೆ, ವಿದ್ಯಾರ್ಥಿಗಳನ್ನು ತನ್ಮಯತೆಯಿಂದ ಹಿಡಿದಿಟ್ಟುಕೊಳ್ಳಲು ಕೆಲವು ಬಾರಿ ಇಂತಹ ಟ್ರಿಕ್ ಕೆಲಸಕ್ಕೆ ಬರುತ್ತವೆ."*

 ಎಂದು ಹೇಳಿ ಅವಳನ್ನೇ ನೋಡುತ್ತಾ ಕುಳಿತುಕೊಂಡಳು.

ಕಾವೇರಿ ಹೇಳಿದ ಮಾತನ್ನೇ ಮನದಲ್ಲಿ ಯೋಚನೆ ಮಾಡುತ್ತಾ ತನ್ನ ಸ್ಟೂಡೆಂಟ್ಸ್ ತನ್ನ ಬಗ್ಗೆ ಹಾಗೆಲ್ಲ ಯೋಚನೆ ಮಾಡುತ್ತಾರೆ ಎಂದು ಯೋಚಿಸತೊಡಗಿದಳು. ತನ್ನ ರೂಪ ಮತ್ತು ಡ್ರೆಸ್ ಸೆನ್ಸ್ ಇದಕ್ಕೆ ಕಾರಣವಾಗಿರಬಹುದು ಎಂದು ಅಂದುಕೊಂಡಳು. ತನ್ನ ರೂಪದ ಬಗ್ಗೆ ತನಗೆ ಹೆಮ್ಮೆ ಅನ್ನಿಸತೊಡಗಿತು. ಅಲ್ಲದೆ ಇಂದು ಅವಳು ತನಗೆ ಗೊತ್ತಿಲ್ಲದೇ ವಿಶೇಷ ಆಸಕ್ತಿ ವಹಿಸಿಕೊಂಡು ಡ್ರೆಸ್ಸಿಂಗ್ ಮಾಡಿಕೊಂಡು ಬಂದಿದ್ದಳು. ಕಾವೇರಿ ತನ್ನ ಡ್ರೆಸ್ ಸೆನ್ಸ್ ಬಗ್ಗೆ ಹೇಳಿದಾಗ ತಾನು ಯಾಕೆ ಇಂದು ಈ ತರಹ ತನಗೆ ಗೊತ್ತಿಲ್ಲದೇ ವಿಶೇಷವಾಗಿ ಅಲಂಕರಿಸಿಕೊಂಡು ಬಂದಿರುವರೇ ಎಂದು ತನಗೆ ತಾನೇ ಪ್ರಶ್ನಿಸಿಕೊಂಡಾಗಅವಳ ಮನ ಇದಕ್ಕೆ ನಿನ್ನನ್ನು ಮೆಚ್ಚುವದಕ್ಕೋಸ್ಕರ ಮತ್ತು ನೀನು ಮೆಚ್ಚಿದವನಿಗೋಸ್ಕರ ಎಂದು ಉತ್ತರಿಸಿತು. ಆ ಉತ್ತರ ಮಧುರತೆಯಿಂದ ಕೂಡಿಡಿತ್ತು. ಈ ರೀತಿಯಾದ ಯೋಚನೆಯಿಂದ ಮನ ಪುಳಕಗೊಂಡಿತ್ತು. ಆ ಮಧುರತೆಯಿಂದಲೇ, ಅವಳ ಡ್ಯೂಟಿ ಟೈಮ್ ಕಳೆದು ಹೋಯ್ತು. 

    ಸಾಯಂಕಾಲ ಮಂಡೆಗೆ ಬಂದು ರಾತ್ರಿಯಾಗುವದನ್ನು ಕಾಯುತ್ತ ಕುಳಿತು. ನಿಮಿಷಕ್ಕೊಮ್ಮೆ ಗಡಿಯಾರ ನೋಡುತ್ತಿದ್ದಳು. ಎಂದೂ ಇಲ್ಲದ ಗಡಿಯಾರ ಇಂದು ಸಾವಕಾಶವಾಗಿ ಓಡುತ್ತಿದೆ ಅಂತ ಅವಳಿಗೆ ಅನ್ನಿಸ್ತಾ ಇತ್ತು. ಹಾಳಾದ ಸಮಯ ಯಾಕೆ ನಿಧಾನವಾಗಿ ಓಡ್ತಿದೆ ಎಂದು ಅಂದುಕೊಂಡಳು. ಕೊನೆಗೆ ಕಾಲ ಕಳೆಯಲು ಟಿವಿ ಹಚ್ಚಿಕೊಂಡು ಕುಳಿತಳು. ಯಾವುದೋ ಫಿಲಂ ಬರುತ್ತಿತ್ತು. ಅದರೆಅಲ್ಲಿ ನಾಯಕಿ ಪ್ರೇಮದಲ್ಲಿ ಬಿದ್ದು ನಾಯಕನನ್ನು ಕಲ್ಪಿಸಿಕೊಳ್ಳುತ್ತಿದ್ದಳು. ಆ ದೃಶ್ಯ ನೋಡಿದ ಸುಮಾಳಿಗೆ ಅಭಿ ನೋಡಲು ಹೇಗಿರಬಹುದು ಎಂಬ ಕುತೂಹಲ ಮೂಡಿತು. ಅವನ ಮಾತನಾಡಿದ ಪ್ರಕಾರ ಅವನ ಮಾತಿನಿಂದ ಅವನ ರೂಪವನ್ನು ಮನದಲ್ಲಿ ಕಲ್ಪಿಸಿಕೊಳ್ಳತೊಡಗಿದಳು. ತನಗಿಂತಲೂ ವಯಸ್ಸಿನಲ್ಲಿ ಚಿಕ್ಕವನು. ತೆಳ್ಳಗೆ ಬೆಳ್ಳಗೆ ಒಳ್ಳೆ ಸ್ಟೈಲಿಶ್ ಆಗಿ ಇರಬಹುದು ಎಂದುಕೊಂಡಳು. ಒಂದು ಸಲ ಫೇಸ್ ಬುಕ್ಕಿನಲ್ಲಿ ಅವನ ಪ್ರೊಫೈಲ್ ಗೆ ಹೋಗಿ ನೋಡಿದರಾಯಿತು, ಅವನ ಫೋಟೋ ಇದ್ದ್ರೂ ಇರಬಹುದು ಎಂದುಕೊಂಡು ಮೊಬೈಲ್ ನಲ್ಲಿ ಅವನ ಪ್ರೊಫೈಲ್ ಓಪನ್ ಮಾಡಿ ಹುಡುಕಿದಾಗ ಎಲ್ಲಿಯೂ ಅವನ ಫೋಟೋ ಕಾಣಲಿಲ್ಲ. ಮನಸ್ಸಿಗೆ ಸ್ವಲ್ಪ ನಿರಾಶೆ ಅನ್ನಿಸಿತು. ಒಂದು ಸಲ ಅವನಿಗೆ ತನ್ನ ಫೋಟೋ ಕಳುಹಿಸಲು ಹೇಳಬೇಕು ಎಂದು ಅಂದುಕೊಂಡರೂ ಸಹ, ಅವನೇನಾದರೂ ತನ್ನ ಫೋಟೋ ಕೇಳಿದರೆ ಹೇಗೆ ಎಂದು ಸ್ವಲ್ಪ ದಿಗಿಲಾಯಿತು. ನೋಡೋಣ ಸಂದರ್ಭ ಹೇಗೆ ಬರುತ್ತದೆ ಅವಾಗ ನೋಡಿದರಾಯಿತೆಂದುಕೊಂಡಳು. 

    ರಾತ್ರಿಯಾಯಿತು ಊಟ ಮಾಡಿಕೊಂಡು ಬೆಡ್ ರೂಮಿಗೆ ಬಂದು ಹಾಸಿಗೆಯ ಮೇಲೆ ಉರುಳಿಕೊಂಡಳು. ಕೈಯಲ್ಲಿ ಮೊಬೈಲ್ ಹಿಡಿದು ಫೇಸ್ ಬುಕ್ ಆನ್ ಮಾಡುತ್ತಿರುವಾಗ ಅವಳ ಮನದಲ್ಲಿ ಒಂದು ರೀತಿಯ ಭಯ ಮಿಶ್ರಿತ ಮಧುರ ಕಂಪನ ಶುರುವಾಯಿತು. ಅವನು ಏನು ಕೇಳುತ್ತಾನೋ, ತಾನು ಹೇಗೆ ಉತ್ತರಿಸಬೇಕೋ ಎಂದು ಗೊತ್ತಾಗದೆ ಸ್ವಲ್ಪ್ ಗಲಿಬಿಲಿಗೊಂಡಳು. ಧೈರ್ಯ ಮಾಡಿ ಫೇಸ್ ಬುಕ್ಕನ್ನು ಓಪನ್ ಮಾಡಿ ನೇರವಾಗಿ ಮೆಸ್ಸೆಂಜರ್ ದಲ್ಲಿ ಹೋಗಿ ನೋಡಿದಾಗ ಅಭಿ ಆಫ್ ಲೈನ್ ದಲ್ಲಿ ಇದ್ದ. ಇನ್ನೂ ಬಂದಿರಲಿಲ್ಲ. ಅವನು ಆನ್ಲೈನ್ ಗೆ ಬಂದಿರಬಹುದೆಂದುಕೊಂಡಿದ್ದ ಅವಳಿಗೆ ನಿರಾಶೆಯಾಯಿತು. ಅವನು ಬರಬಹುದು ಎಂದುಕೊಂಡು ದಾರಿ ಕಾಯತೊಡಗಿದಳು. 15 ನಿಮಿಷ ಕಳೆದರೂ ಅವನು ಬರಲಿಲ್ಲ. ಮನದಲ್ಲಿ ಸ್ವಲ್ಪ ಅಸಹನೆ ಉಂಟಾಗತೊಡಗಿತು. ಬರಬೇಕಾದ ವ್ಯಕ್ತಿ ಹೇಳಿದ ಸಮಯಕ್ಕೆ ಬರದೇ ಹೋದಲ್ಲಿ ಕಾಯುವ ವ್ಯಕ್ತಿಗೆ ಈ ರೀತಿ ಅಸಹನೆಯಾಗುವದು ಸಹಜ. ಅದೇ ರೀತಿಯ ಅಸಹನೆ ಸುಮಾಗೆ ಆಗತೊಡಗಿತು. 

   ಅರ್ಧ ಘಂಟೆಯಾದರೂ ಆಸಾಮಿ ನಾಪತ್ತೆಯಾಗಿದ್ದ. ಸುಮಾಗೆ ಅಸಹನೆ ಜೊತೆಗೆ ನಿರಾಶೆಯಾಗತೊಡಗಿತು. ನಿರಾಶೆಯಾಗುತ್ತಿದ್ದಂತೆ ಮನಸ್ಸಿನಲ್ಲಿ ಯಾವುದೋ ಅವ್ಯಕ್ತ ವೇದನೆಯಿಂದ ಎದೆಗೆ ಚುಚ್ಚಿದಂತಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ತನ್ನ ಹಣೆ ಬರಹವೇ ಇಷ್ಟು. ತಾನು ಯಾರನ್ನು ಹಚ್ಚಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಅವರು ಬೇಗನೆ ತನ್ನಿಂದ ದೂರವಾಗುತ್ತಾರೆ ಎಂದುಕೊಂಡಳು. ಅಷ್ಟರಲ್ಲಿ ಮೆಸ್ಸೆಂಜರ್ ದಲ್ಲಿ ಮೆಸೇಜ್ ಬಂದದ್ದನ್ನು ಸೂಚಿಸಿ ಮೊಬೈಲ್ ಸಪ್ಪಳ ಮಾಡಿತು. ಒಮ್ಮೆಲೇ ತನಗಿರಿವಿಲ್ಲದಂತೆ ಅವಳು ಖುಷಿಯಿಂದ ಮೊಬೈಲ್ ಹಿಡಿದು ನೋಡಿದಾಗ ಅಭಿ ಮೆಸೇಜ್ ಮಾಡಿದ್ದ. 

*"ಅನಿವಾರ್ಯ ಕಾರಣದಿಂದ ಈಗ ನಿಮ್ಮ ಜೊತೆ ಮಾತನಾಡುವದಾಗುವದಿಲ್ಲ. ನೀವು ಕಾಯುತ್ತಿರುವಿರಿ ಅಂತ ತಿಳಿದುಕೊಂಡೆ ನಾನು ಮೆಸೇಜ್ ಮಾಡಿದ್ದೇನೆ. ರಾತ್ರಿ 12.30 ರ ವರೆಗೆ ಬಿಡುವಿಲ್ಲ. ಸಂದಿಗ್ಧ ಪರಿಸ್ಥಿತಿ. 12.30 ಕ್ಕೆ ಆನ್ಲೈನ್ ಗೆ ಬರುತ್ತೇನೆ. ನೀವು ಎಚ್ಚರವಿದ್ದರೆ, ನಿಮಗೆ ತೊಂದರೆಯಾಗದಿದ್ದರೆ ಮಾತನಾಡೋಣ. ಟೇಕ್ ಕೇರ್"*

ಎಂದು ಬರೆದು ಮೆಸೇಜ್ ಹಾಕಿ ಆಫ್ ಲೈನ್ ಗೆ ಹೋಗಿ ಬಿಟ್ಟಿದ್ದ. 

ಅವನ ಮೆಸೇಜ್ ಕಂಡು ಸುಮಾಳಿಗೆ ನಿರಾಶೆಯಾಯಿತು. ಜೊತೆಗೆ ಚಿಂತೆ ಹತ್ತಿತ್ತು. ಅವನೇನೋ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವೆ ಎಂದು ಹೇಳಿದ್ದ. ಅವನಿಗೇನಾದರೂ ಅಪಾಯವಾಗಿದೆಯೇ ಇಲ್ಲ ಅವನೇನಾದರೂ ಅಪಾಯದಲ್ಲಿ ಸಿಲುಕಿರುವನೇ ಎಂದು ಮನಸ್ಸು ಅವನ ಬಗ್ಗೆ ಯೋಚಿಸತೊಡಗಿತು. ಅವನ ಮಾತಿನಿಂದ ಅವನು ಸಭ್ಯ ಆಗಿದ್ದರಿಂದ ಅವನು ಅಪ್ಪಯಕ್ಕೆ ಸಿಲುಕಿರಲಾರ. ಮತ್ತೇನೋ ಅರ್ಜೆಂಟ್ ಕೆಲಸವಿರಬಹುದು ಎಂದುಕೊಂಡು ತನ್ನ ಮನಸ್ಸಿಗೆ ತಾನೇ ಸಮಾಧಾನ ಪಡಿಸಲು ಯತ್ನಿಸಿದಳು. ಆದರೂ ಮನದ ತುಂಬಾ ದುಗುಡ ತುಂಬಿಕೊಂಡಿತ್ತು. 

   ಇನ್ನೊಮ್ಮೆ ಅವ್ನೆಷ್ಟಾದರೂ ತನಗೆ ಅಪರಿಚಿತ. ತನಗೂ ಅವನಿಗೂ ಸಂಬಂಧವಿಲ್ಲ. ಆದರೂ ತನಗೆ ಅವನ ಬಗ್ಗೆ ಇಷ್ಟ್ಯಾಕೆ ಕಕ್ಕುಲತೆ? ತನಗೇನಾಗಬೇಕಾಗಿದೆ? ಅವನಿಂದ ಎಂದು ಅಂದುಕೊಂಡರೂ ಇನ್ನೊಂದು ಮನಸ್ಸು ನೀನು ಅವನನ್ನು ಪ್ರೀತಿಟಿಸುತ್ತಿರುವದರಿಂದ ಈ ರೀತಿ ಆಗತೊಡಗಿದೆ ಎಂದು ಉತ್ತರಿಸಿತು. ಸುಮಾ ಸುಮ್ಮನೆ ಛಾವಣಿ ನೋಡುತ್ತಾ ಮಲಗಿದ್ದಳು. ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆ ಬರಲಿಲ್ಲ. ಕ್ಷಣಕ್ಕೊಮ್ಮೆ ಗಡಿಯಾರದ ಕಡೆಗೆ ನೋಡುತ್ತಿದ್ದಳು. 11.30 ಘಂಟೆಯಾಗಿತ್ತು. 

     ತನ್ನ ಎದೆಯ ಬಡಿತ ತನಗೆ ಚನ್ನಾಗಿ ಕೇಳುವಷ್ಟು ಪ್ರಶಾಂತ ವಾತಾವರಣ ಏರಿಯಾ ದಲ್ಲಿ ನೆಲೆಸಿತ್ತು. ಹೆಚ್ಚು ಕಡಿಮೆ ಎಲ್ಲರೂ ಮಲಗಿಕೊಂಡಿದ್ದರು. ಪಕ್ಕದ ಮನೆಯ ಆಂಟಿ ತನ್ನ ಮನೆಯಲ್ಲಿ ಸಾವಕಾಶವಾಗಿ ಹಾಡನ್ನು ಹಚ್ಚಿಕೊಂಡಿದ್ದಳು. ಅಂತಹ ಪ್ರಶಾಂತವಾದ ವಾತಾವರಣದಲ್ಲಿ ಸಹ ಆಂಟಿ ಹಚ್ಚಿದ ಹಾಡು ಸುಮಾಳಿಗೆ ಕೇಳಿಸುತ್ತಿತ್ತು. 

*"ಜಿಂದಗಿ ಪ್ಯಾರ ಕಾ ಗೀತ್ ಹೈ

ಇಸ್ಕೊ ಹರ್ ದಿಲ್ ಕೋ ಗಾನ ಪಡೆಗಾ 

ಜಿಂದಗಿ ಗಮ್ ಕಾ ಸಾಗರ್ ಭೀ ಹೈ 

ಹಸ್ ಕೆ ಉಸ್ ಪಾರ ಜಾನಾ ಪಡೆಗಾ"*

ಎಂಬ ಹಾಡನ್ನು ಕೇಳುತ್ತಿದ್ದರೆ, 

ಆ ಹಾಡು ತನ್ನನ್ನು ತನ್ನ ಪರಿಸ್ಥಿತಿಯನ್ನು ತೋರಿಸಿ ತನಗೆ ಹೇಳುವಂತೆ ಹಾಡು ಹಾಕಿದಂತಾಗಿತ್ತು. 

 ಹಾಗೆ ಆ ಹಾಡನ್ನು ಕೇಳುತ್ತಾ ಸುಮಾ ಭಾವೋದ್ವೇಗಕ್ಕೆ ಒಳಗಾದಳು. ಯಾವುದೋ ಒಂದು ಅವ್ಯಕ್ತವಾದ ದುಃಖದ ಭಾವನೆ ಅವಳ ಮನವನ್ನು ತುಂಬಿತು. ಕಣ್ಣೀರು ತಾನಾಗಿ ಕಣ್ಣಿನಿಂದ ಹೊರಗೆ ಬಂದು ತಲೆಯ ಕೆಳಗಿದ್ದ ದಿಂಬನ್ನು ಹಸಿ ಮಾಡತೊಡಗಿತು. ಛಾವಣಿಯನ್ನು ದಿಟ್ಟಿಸುತ್ತಾ ಮಲಗಿದ್ದ ಸುಮಾಳ ಕಣ್ಣಿಗೆ ಚಾವಣಿ ಕಣ್ಣೀರಿನಿಂದ ಮಸುಕಾಗಿ ಕಾಣತೊಡಗಿತು. ಮನದಲ್ಲಿ ತನ್ನ ಹಣೆ ಬರಹವೇ ಇಷ್ಟು, ಎಂದು ಅಂದುಕೊಳ್ಳುತ್ತಿರುವಾಗಲೇ ಅವಳ ಮೊಬೈಲ್ ಯಾವುದು ಮೆಸೇಜ್ ಬಂದಿದ್ದನ್ನು ಹೇಳುತ್ತಾ ಸದ್ದು ಮಾಡಿತು. ಸದ್ದು ಕೇಳಿದ ಸುಮಾ ಕೂಡಲೇ ಕೀ ಕೊಟ್ಟ ಬೊಂಬೆಯಂತೆ ನನ್ನ ತಲೆ ಹತ್ತಿರವೇ ಇಟ್ಟುಕೊಂಡಿದ್ದ ಮೊಬೈಲ್ ತೆಗೆದು ನೋಡಿದಾಗ, ಅಭಿ ಮೆಸೇಜ್ ಮಾಡಿದ್ದ.

*" ಹಲೋ"*

 ಅವನು ಮಾಡಿದ ಮೆಸೇಜ್ ನೋಡುತ್ತಿದ್ದಂತೆ, ಸುಮಾಳ ಮನಸ್ಸಿನಲ್ಲಿ ಉತ್ಸಾಹದ ತರಂಗಗಳು ಎದ್ದವು. ಅವಳು ಸಹ ಪ್ರತ್ಯುತ್ತರವನ್ನು ಅವನ ರೀತಿಯಲ್ಲಿಯೇ ನೀಡಿದಾಗ, ಅವನು ಅತ್ತಕಡೆಯಿಂದ

*" ಸಾರೀ, ನಿಮ್ಮನ್ನು ವೇಟ್ ಮಾಡಿಸಲಿಕ್ಕೆ ಹಚ್ಚಿದೆ ಅಂತ ಕಾಣುತ್ತೆ. ದಯವಿಟ್ಟು ಕ್ಷಮಿಸಿ"*

 ಎಂದು ಮೆಸೇಜ್ ಕಳುಹಿಸಿದಾಗ ಅದನ್ನು ಓದಿದ ಸುಮಾ, ಅವನ ಮೇಲೆ ಇದ್ದ ಸಿಟ್ಟು ಸಾವಕಾಶವಾಗಿ ಕಡಿಮೆಯಾಯಿತು.

 ಇಂತಹ ವಿಷಯಗಳಲ್ಲಿ ಆಗುವುದು ಹೀಗೆ. ಭಯಂಕರವಾದ ಸಿಟ್ಟು ತಾವು ನಿರೀಕ್ಷಿಸುವ ವ್ಯಕ್ತಿ ಬರಲಾರದೆ ಇದ್ದಾಗ ಈ ರೀತಿಯಲ್ಲಿ ಸಿಟ್ಟು ಬರುವದು ಸಹಜ. ಆದರೆ ಅದೇ ವ್ಯಕ್ತಿ ಮುಂದೆ ಬಂದಾಗ ಆ ಸಿಟ್ಟು ಕೂಡಲೇ ಬೆಂಕಿಯ ಮೇಲೆ ನೀರು ಹಾಕಿದಾಗ ತಣ್ಣಗಾಗುವಂತೆ ತಣ್ಣಗಾಗಿಬಿಡುತ್ತದೆ. ಎಲ್ಲರ ವಿಷಯದಲ್ಲಿ ಈ ರೀತಿ ಆಗುವುದು ಸರ್ವೇಸಾಮಾನ್ಯ. ಅದೇ ರೀತಿಯಾಗಿ ಸುಮಾಳಿಗೆ ಸಹ ಆಯ್ತು. ಇಷ್ಟು ಹೊತ್ತಿನ ತನಕ ಅಭಿ ಮೇಲೆ ಇದ್ದ ಸಿಟ್ಟು ಅವನು ಮಾಡಿದ ಕೇವಲ ಒಂದು ಮೆಸೇಜ್ ನೋಡುತ್ತಿದ್ದಂತೆ, ಕರಗಿ ಹೋಗಿಬಿಟ್ಟಿತು. ಆದರೂ ಸಹ ಅವಳು, ತನ್ನ ಸಿಟ್ಟನ್ನು ತೋರಿಸುವುದಕ್ಕೋಸ್ಕರ

*" ಹೌದು, ನೀವು ನನ್ನನ್ನು ರಾತ್ರಿಯಿಂದ ಕಾಯಿಸುತ್ತಿರುವಿರಿ"*

*" ಅದಕ್ಕೆ ಅಂತಾನೆ ನಾನು ಮೊದಲೇ ಹೇಳಿದ್ದೆ. ನನ್ನದು ಇಂದು ತಡವಾಗುತ್ತದೆ ಅಂತ"*

*" ಯಾಕೆ ತಡವಾಯಿತು ಅಂತ ತಿಳಿದುಕೊಳ್ಳಬಹುದೇ?"*

*" ನಾನು ಅದನ್ನು ಯಾಕೆ ಹೇಳಬೇಕು ಅಂತ ನಿಮ್ಮನ್ನು ಕೇಳಬಹುದೇ?"*

*" ನನಗೆ ನೀವು ಮಾಡಿದ ಪ್ರಾಮೀಸ್ ಪ್ರಕಾರ, ನನ್ನ ವೇಳೆಗೆ ನೀವು ಸರಿಯಾಗಿ ಬರಬೇಕಾಗಿತ್ತು. ಬರದೇ ತಪ್ಪು ಮಾಡಿದವರು ನೀವು ಆಗಿದ್ದರಿಂದ, ಕಾರಣ ಹೇಳುವುದು ನಮ್ಮ ಕರ್ತವ್ಯ ಅಂತ ನಾನು ಭಾವಿಸುತ್ತೇನೆ"*

*" ಪ್ರಾಮಿಸ್ ಮಾಡಿದ್ದು ಏನು ನಿಜ ಆದರೆ ಕೆಲವೊಂದು ಬಾರಿ ಗಂಡಸರಿಗೆ ಸಂಕಷ್ಟಗಳು ಎದುರಾಗಿಬಿಡುತ್ತದೆ. ನಾವು ಎಷ್ಟೇ ಪ್ರಯತ್ನ ಮಾಡಿದರೂ ಆ ಸಂಕಷ್ಟಗಳಿಂದ ಹೊರಬರಲು ಸ್ವಲ್ಪವಾದರೂ ಸಮಯ ಬೇಕಾಗುತ್ತೆ. ಅಂತಹದೇ ಒಂದು ಸಂಕಷ್ಟ ಇಂದು ನಮಗೆ ಬಂದ ಕಾರಣ, ನಾನು ತಡವಾಗಿ ಬರುತ್ತೇನೆ ಅಂತ ನಿಮಗೆ ಮೊದಲೇ ಸೂಚನೆ ಕೊಟ್ಟಿದ್ದೆ."*

 ಈ ವಾಕ್ಯವನ್ನು ಓದುತ್ತಿದ್ದಂತೆ ಸುಮಾಳಿಗೆ, ಅವನೇನಾದರೂ ಯಾವುದಾದರೂ ತೊಂದರೆಗೆ ಸಿಕ್ಕಿಹಾಕಿಕೊಂಡಿರುವನೇ ಎಂಬ ಸಂಶಯ ಮನದಲ್ಲಿ ಕಾಡತೊಡಗಿತು. ಏನೇ ಆದರೂ ತಿಳಿದುಕೊಂಡುಬಿಡೋಣ ಎಂದು, ತಾನು ಸಹ ಪಟ್ಟುಬಿಡದೆ

*" ಅಂತಹ ರಾಜಕಾರ್ಯ ಏನು ಹೇಳಿ"*

*" ಹೇಳದಿದ್ದರೆ?"*

 ಎಂದು ಪ್ರಶ್ನಾರ್ಥಕವಾಗಿ ಉತ್ತರಿಸಿದಾಗ ಸಿಟ್ಟಿನಿಂದ

*" ನಿಮ್ಮಿಷ್ಟ, ಏನು ಫ್ರೆಂಡ್ ಒಬ್ಬನು ಕೇಳ್ತಾ ಇದ್ದಾರೆ ಅಂತ ತಿಳಿದುಕೊಂಡು ಹೇಳುವ ಹಾಗಿದ್ದರೆ ಹೇಳಿ. ನಿಮಗೆ ಏನಾದರೂ ತೊಂದರೆಯಾದರೆ ನಾನೇನಾದರೂ ಸಲಹೆ ಕೊಡಬಲ್ಲಿರಿ ಎಂದು ತಿಳಿದುಕೊಂಡು ನಾನು ನಿಮ್ಮನ್ನು ಕೇಳಿದ್ದೆ. ನನಗೇನು ನಿಮ್ಮ ವಿಷಯದಲ್ಲಿ ಇಂಟರೆಸ್ಟ್ ಇಲ್ಲ. ಆದರೆ ಫ್ರೆಂಡ್ಶಿಪ್ ಮಾಡಿದ್ದರಿಂದ ಕೇಳ ಬೇಕಾಗಿರುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿಕೊಂಡು ಕೇಳಿದ್ದೇನೆ"*

*" ಸರಿ, ಹೇಳುತ್ತೇನೆ ಕೇಳಿ"*

 ಎಂದು ಹೇಳಿ ಏನನ್ನು ಟೈಪ್ ಮಾಡತೊಡಗಿದನು. ಅವನ ಮೆಸೇಜು ಬರುವುದು ತಡವಾಗುತ್ತಿದ್ದಂತೆ, ಸುಮಾಳ ಮನಸ್ಸಿನಲ್ಲಿ ಹಲವಾರು ವಿಚಾರಗಳು ಬಂದು ಹೋಗತೊಡಗಿದವು. ಎಂತಹ ಮನುಷ್ಯನ್ ಇರಬಹುದು, ಅಥವಾ ಇಂಥ ಮುದ್ದ ಮನುಷ್ಯನನ್ನು ಯಾರಾದರೂ ಗೋಳು ಹೊಯ್ದು ಕೊಂಡಿರಬಹುಡೇ ಎಂದು ನೂರೆಂಟು ವಿಚಾರಗಳು ಒಂದೆರಡು ನಿಮಿಷದಲ್ಲಿ ಅವಳ ಮನಸ್ಸಿನಲ್ಲಿ ಬಂದುಹೋದವು. ಹೇಗೂ ಅವನು ತಿಳಿಸುತ್ತಾನೆ ಎಂದುಕೊಂಡು ಅವನ ಮೆಸೇಜು ಬರುವವರಿಗೆ ಕಾಯುತ್ತಾ ಸುಮ್ಮನೆ ಕುಳಿತುಕೊಂಡಳು.

*" ನನ್ನ ಫ್ರೆಂಡ್, ಒಂದು ಹುಡುಗಿಯನ್ನು ಲವ್ ಮಾಡಿದ್ದಾನೆ. ಅವಳು ಸಹ ಅವನನ್ನು ಲವ್ ಮಾಡಿದ್ದಾಳೆ. ಆದರೆ ಅವರಿಬ್ಬರ ನಡುವೆ ಯಾವುದೋ ವಿಷಯಕ್ಕೆ ಭಿನ್ನಾಭಿಪ್ರಾಯ ಬಂದು, ಆ ಹುಡುಗಿ ಹುಡುಗನ ಮನೆಗೆ ಹೋಗಿ ಎಲ್ಲ ವಿಷಯವನ್ನು ತಿಳಿಸಿ, ದೊಡ್ಡ ರಾದ್ಧಾಂತ ಎಬ್ಬಿಸಿ ಬಿಟ್ಟಿದ್ದಾಳೆ. ಈ ವಿಷಯ ಹುಡುಗನಿಗೆ ಗೊತ್ತಾದಾಗ ಅವನು, ನಮ್ಮ ಫ್ರೆಂಡ್ಸ್ ಗಳನ್ನೆಲ್ಲಾ ಕೂಡಿಸಿ ಸಹಾಯ ಕೇಳಿದಾಗ ನಾವೆಲ್ಲ ಇಲ್ಲವೆನ್ನಲಾಗದೆ, ಆ ಹುಡುಗಿ ಮತ್ತು ಅವರ ಮನೆಯವರ ಹತ್ತಿರ ಹೋಗಿ, ಅವರೆಲ್ಲರನ್ನೂ ಸಮಾಧಾನಪಡಿಸಿ ನಂತರ ಅವರನ್ನು ಕರೆದುಕೊಂಡು ಹುಡುಗನ ಮನೆಗೆ ಹೋಗಿ, ಅಲ್ಲಿ ಅವನ ತಂದೆ ತಾಯಿಗಳಿಗೆ ಸಮಾಧಾನ ಮಾಡಿ, ಕೊನೆಗೆ ಎಲ್ಲರನ್ನೂ ಅವರಿಬ್ಬರ ಮದುವೆಗೆ ಒಪ್ಪಿಸಿ ಆ ಪ್ರಕರಣವನ್ನು ಸುಖಾಂತ್ಯ ಮಾಡಿ ಬರಬೇಕಾದರೆ ಸಾಕು ಸಾಕಾಗಿ ಹೋಯಿತು. ಎರಡು ಮನೆಗೆ ತಿರುಗಾಟ ಇದ್ದ ಕಾರಣ, ನಾನು ತಡವಾಗಿ ಬರಬೇಕಾದ ಪ್ರಸಂಗ ಉಂಟಾಯಿತು. ಆದರೂ ನೀವು ನನ್ನ ದಾರಿ ಕಾಯುತ್ತಿರಿ ಎಂದುಕೊಂಡು, ಹೇಗೂ ಎರಡು ನಿಮಿಷ ಸಮಯವನ್ನು ತೆಗೆದುಕೊಂಡು, ಮುಂಚಿತವಾಗಿ ನಿಮಗೆ ವಿಷಯ ತಿಳಿಸಿದ ರಾಯ್ ಚಂದು ಮೆಸೇಜ್ ಹಾಕಿದ್ದೆ. ಆದರೆ ನೀವು ನನ್ನ ಮೆಸೇಜ್ ನೋಡಿದರೂ ಸಹ, ವಿಷಯ ತಿಳಿಯದೇ ಇದ್ದ ಕಾರಣ ನೀವು ನನ್ನ ಮೇಲೆ ಕೋಪಿಸಿಕೊಂಡು ಇರುವಿರಿ. ತಪ್ಪು ಎಷ್ಟಾದರೂ ನನ್ನದು. ಆದ್ದರಿಂದ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಐ ಆಮ್ ಸಾರೀ."*

 ಎಂದು ದೀರ್ಘವಾಗಿ ಎಲ್ಲ ಕಥೆಯನ್ನು ಕಾರಣಗಳ ಸಮೇತ ಬರೆದು ತಿಳಿಸಿದಾಗ, ಅದನ್ನು ಓದಿದ ಸುಮಾ, ಮನದಲ್ಲಿ ಅಭಿ ಬಗ್ಗೆ ಹೆಮ್ಮೆ ಪಟ್ಟುಕೊಂಡರು. ಪ್ರೇಮಿಗಳನ್ನು ಒಂದು ಮಾಡಿಸುವ ನಿಟ್ಟಿನಲ್ಲಿ, ಅವನು ಮಾಡಿದ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಅಂತ ಅವಳಿಗೆ ಅನಿಸತೊಡಗಿತ್ತು.

*" ಕಂಗ್ರಾಟ್ಸ್, ಕೊನೆಗೂ ಪ್ರೇಮಿಗಳನ್ನು ಒಂದು ಮಾಡಿದ ನಿಮ್ಮ ಸಾಹಸಕ್ಕೆ ನನ್ನದೊಂದು ಮೆಚ್ಚುಗೆ"*

 ಎಂದು ಹೇಳುತ್ತ ತನ್ನ ಚಪ್ಪಾಳೆಯ ಚಿಹ್ನೆಯನ್ನು ಅವನಿಗೆ ಕಳುಹಿಸಿದಳು. ಅದನ್ನು ನೋಡಿ ಅವನು ಸಂತೋಷಗೊಂಡು, ಮಗು ನಕ್ಕ ಚಿತ್ರವನ್ನು ಅದಕ್ಕುತ್ತರವಾಗಿ ಮರಳಿ ಕಳುಹಿಸಿದ.

 ಅದನ್ನು ನೋಡುತ್ತಾ ಮನದಲ್ಲಿ ನಗುತ್ತಿದ್ದಾಗ, ಅಭಿ ಮತ್ತೆ ಮೆಸೇಜ್ ಮಾಡಿದ್ದ.

*" ನಿನ್ನೆ ನಾನು ಹೇಳಿದ್ದ ವಿಷಯ ಏನಾಯ್ತು? ಲವ್ ಲೆಟರ್ ಬರೆದಿದ್ದೀರಾ?"*

*" ಹೌದು. ಬರೆದು ಮುಗಿಸಿದ್ದೇನೆ"*

*" ಅದನ್ನು, ನನಗೆ ಕಳುಹಿಸಬಹುದು"*

 ಎಂದಾಗ, ತನ್ನ ಹತ್ತಿರವೇ ಇಟ್ಟುಕೊಂಡಿದ್ದ ಹಿಂದಿನ ದಿನ ಬರೆದ ಲವ್ ಲೆಟರ್ ಅನ್ನು ಮೊಬೈಲಿನಿಂದ ಫೋಟೋ ತೆಗೆದು, ಅವನ್ನು ಅವನಿಗೆ ಅಪ್ಲೋಡ್ ಮಾಡಿದಳು. ಸ್ವಲ್ಪ ಹೊತ್ತು ಅವನಿಂದ ಯಾವುದೇ ಮೆಸೇಜ್ ಬರಲಿಲ್ಲ. ತಾನು ಕಳುಹಿಸಿದ ಲವ್ ಲೆಟರನ್ನು ಓದುತ್ತಿರಬಹುದು ಎಂದುಕೊಂಡು ಅವನ ಪ್ರತ್ಯುತ್ತರಕ್ಕಾಗಿ ಕಾಯುತ್ತಾ ಕುಳಿತಳು.

ಕೊನೆಗೆ ಅವನು ಆ ಲೆಟರ್ ಓದಿ ರಿಪ್ಲೈ ಮಾಡಿದ. 

*"ಚನ್ನಾಗಿದೆ"*

ಇಷ್ಟೇ ರಿಪ್ಲೈ ನೋಡಿದ ಸುಮಾಳಿಗೆ ಮೈಯಲ್ಲ ಉರಿದು ಹೋಯಿತು. ತಾನು ಎಷ್ಟೆಲ್ಲಾ ಕಷ್ಟಪಟ್ಟುಕೊಂಡು ಅಂತಹ ಲವ್ ಲೆಟರ್ ಬರೆದು ಅಭಿಪ್ರಾಯ ಕೇಳಿದರೆ ಈ ಪ್ರಾಣಿ ಅದನ್ನು ಅರ್ಥ ಮಾಡಿಕೊಳ್ಳದೆ, ಕೇವಲ ಚನ್ನಾಗಿದೆ ಅಂತ ಮಾತ್ರ ಹೇಳುತ್ತಾನಲ್ಲ ಎಂದುಕೊಂಡು 

*"ಅಂದರೆ ನಿಮಗೆ ಅರ್ಥವಾಗಿಲ್ಲ ಅಂದಹಾಗಾಯಿತು"*

ಎಂದು ಅವನನ್ನು ಕುಟುಕುವ ರೀತಿಯಲ್ಲಿ ರಿಪ್ಲೈ ಕಳುಹಿಸಿದಳು. 

*"ಹಾಗೇನಿಲ್ಲ, ಮನಸ್ಸಿನ ಭಾವನೆಗಳನ್ನು ಸುಂದರವಾಗಿ ಚಿತ್ರಿಸಿ ಹೇಳಿರುವಿರಿ. ಒಂದು ಮಾತು ನಿಮ್ಮ ಕೈ ಬರಹ ಮಾತ್ರ ತುಂಬಾ ಮುದ್ದಾಗಿದೆ. ಆದರೆ ಲೆಟರ್ ಸ್ಟೈಲ್ ಮಾತ್ರ ಓಲ್ಡ್ ಸ್ಟೈಲ್. ಈಗಿನ ಕಾಲದ ತರಹ ಬರೆಯಬಹುದಾಗಿತ್ತು"*

ಎಂದು ಉತ್ತರ ಕಳುಹಿಸಿದಾಗ, ಅವನು ಕಳುಹಿಸಿದ ಉತ್ತರ ನೋಡಿದ ಸುಮಾ,

*"ನಾನು ನನಗೆ ಹೇಗೆ ಇಷ್ಟ ಹಾಗೆ ಬರೆದಿದ್ದೇನೆ. ಹೀಗೆ ಬರೆಯಬೇಕೆಂದು ನಮ್ಮ ನಡುವೆ ಕರಾರು ಇರಲಿಲ್ಲ. ಅದಕ್ಕೆ ನಿಮಗೆ ಈ ಮಾತು ಹೇಳುವ ಅಧಿಕಾರವಿಲ್ಲ"*

*"ಓ ಹೊ ಹಾಗೇ ವಿಷಯ. ಸರಿ, ನೀವು ಹೇಳಿದ ಮಾತನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ ಒಂದು ವಿಷಯ ಯೋಚನೆ ಮಾಡಿ. ನೀವು ಒಂದು ಲವ್ ಲೆಟರ್ ಓದಬೇಕಾದರೆ ಅದರಲ್ಲಿ ಪ್ರೀತಿಯೆನ್ನುವದು ನಿಮ್ಮ ಮನಸ್ಸಿನಿಂದ ಬಂದಿರಬೇಕು ಮತ್ತು ಪ್ರತಿ ಮಾತು ನೇರವಾಗಿ ಹೃದಯವನ್ನು ತಾಕುವಂತಿರಬೇಕು. ನಿಮ್ಮಲ್ಲಿ ಅದು ಚನ್ನಾಗಿ ವ್ಯಕ್ತವಾಗಿದೆ. ಆದರೆ ಸ್ಟೈಲ್ ಮಾತ್ರ ಹಳೇದು"*

ಎಂದು ಹೇಳಿದಾಗ, ಇವನಿಗೆ ಹೇಗೆ ಹೇಳಬೇಕು ಎನ್ನುವದು ಗೊತ್ತಾಗದೆ, ಕೊನೆಗೆ ಸುಮಾ

*"ಹಾಗಾದ್ರೆ ಒಂದು ಕೆಲಸ ಮಾಡಿ. ನನ್ನನ್ನು ನಿಮ್ಮ ಲವರ್ ಅಂತ ತಿಳಿದುಕೊಂಡು ನನಗೆಒಂದು ನಿಮ್ಮ ಸ್ಟೈಲ್ ದಲ್ಲಿ ಲೆಟರ್ ಬರೆದು ಕಳಿಸಿ"*

ಎಂದು ಅವನಿಗೆ ಬರೆದು ಕಳುಹಿಸಿದಾಗ ಅವನು ಗಾಬರಿ ಬಿದ್ದವನಂತೆ 

*"ಅಯ್ಯೋ ಅದು ಬೇಡ ಬಿಡಿ, ನನ್ನ ಲ್ಯಾಂಗ್ವೇಜ್ ನಿಮಗೆ ಸರಿ ಅನ್ನಿಸುವದಕ್ಕಿಲ್ಲ."*

ಎಂದು ಬರೆದು ಕಳುಹಿಸಿದಾಗ

*"ಹಾಗಾದರೆ ನೀವು ಸೋತಿರಿ ಅಂತ ಒಪ್ಪಿಕೊಳ್ಳಿ"*

ಎಂದು ಹೇಳು ಅವನ ಅಹಂ ಕೆಣಕುವಂತೆ ಅವನಿಗೆ ಬರೆದು ಕಳುಹಿಸಿದಾಗ ಅವನು 

*"ಹಾಗೇನಿಲ್ಲ. ನಾನು ಪ್ರಯತ್ನ ಮಾಡಬಲ್ಲೆ. ಆದರೆ ನಿಮ್ಮಷ್ಟು ಚನ್ನಾಗಿ ಬರೆಯಲು ಆಗಲಿಕ್ಕಿಲ್ಲ ನಿಮ್ಮ ಮುಂದೆ ನಾನು ಹಾಸ್ಯಾಸ್ಪದ ವಸ್ತುವಾಗಿಬಿಡುತ್ತೀನೋ ಎಂಬ ಭಯ ಮಾತ್ರ"*

ಎಂದು ಅವನು ಬರೆದು ಕಳುಹಿಸಿದ ಉತ್ತರವವನ್ನು ನೋಡಿದಾಗ, ಸುಮಾ ನಗತೊಡಗಿದಳು. ಅವನು ತನ್ನ ಮಾತಿಗೆ ಅಂಜುತ್ತಿರುವನು ಎಂದು ಅಂದುಕೊಳ್ಳುತ್ತ

*"ಭಯ ಪಡಬೇಡಿ. ನಾನು ಆ ಕಾರಣಕ್ಕೆ ಹೇಳುತ್ತಿಲ್ಲ. ಇಂದಿನ ಮಾಡ್ರನ್ ಲವರ್ ಯಾವ ರೀತಿಯಲ್ಲ್ಗಿ ಬರೆಯುತ್ತಿರಿ ಎಂದು ನೋಡೋ ಕುತೂಹಲ ನನಗಿದೆ. ಅದಕ್ಕೆ ನಿಮ್ಮನ್ನು ಕೇಳಿದೆ ಬರೆಯುತ್ತೀರಾ?"*

ಎಂದು ಅವನಿಗೆ ಕೇಳಿದಾಗ ಅವನು,

*"ಆಯ್ತು, ನೀವು ಕೇಳುತ್ತಿರುವಿರಿ ಅಂತ ಒಂದು ಪ್ರಯತ್ನ ಮಾಡಬಹುದು"*


*"ಯಾವಾಗ ಕಳುಹಿಸುತ್ತೀರಿ?"*

*"ಬೆಳಿಗ್ಗೆ 5 ಘಂಟೆಗೆ"*

*"ನಿಜವಾಗಿ?"*

*"ಹೌದು, ನಾನೇನೋ ಈಗಲೇ ಬರೆಯುತ್ತಿದ್ದೆ, ಆದರೆ ದಣಿವು ಬಹಳವಾಗಿದೆ ಅದಕ್ಕಾಗಿ ನನಗೆ ನಿದ್ದೆಯ ಅವಶ್ಯಕತೆ ಇದೆ. ಸ್ವಲ್ಪ ಮಲಗಿ ಎದ್ದರೆ, ಮನಸ್ಸು ಫ್ರೆಶ್ ಆಗಿರುತ್ತದೆ. ಫ್ರೆಶ್ ಆದ ಮನಸ್ಸಿನಿಂದ ಫ್ರೆಶ್ ಲವ್ ಲೆಟರ್ ಬರೆದರೆ, ಅದು ಸಹ ಫ್ರೆಶ್ ಆಗಿರುತ್ತದೆ"*

*"ಸರಿ ಬೆಸ್ಟ್ ಆ ಲಕ್, ಈಗ ರೆಸ್ಟ್ ತೆಗೆದುಕೊಳ್ಳಿ. ನಾನು ಮಲಗುತ್ತೇನೆ. ಸರಿಯಾಗಿ ಬೆಳಿಗ್ಗೆ 5 ಘಂಟೆಗೆ ನಾನು ಆನ್ಲೈನ್ ಬರುತ್ತೇನೆ. ನೋಡೋಣ ನಿಮ್ಮ ಫ್ರೆಶ್ ಲವ್ ಲೆಟರ್"*

*"ಸರಿ, ಹಾಗೆ ಆಗ್ಲಿ. ನಿದ್ರೆ ಮಾಡಿ"*

ಎಂದು ಹೇಳಿ ಅಭಿ ಆಫ್ ಲೈನ್ ಗೆ ಹೋಗಿ ಬಿಟ್ಟನು. 

ಸುಮಾ ಹಾಸಿಗೆಯ ಮೇಲೆ ಮಲಗಿಕೊಂಡು ನಿದ್ರಿಸಲು ಪ್ರಯತ್ನ ಪಟ್ಟಳು. ಆದರೆ ಅವಳಿಗೆ ನಿದ್ರೆ ಸಮೀಪ ಸುಳಿಯಲಿಲ್ಲ. ಅಭಿಯ ಬಗ್ಗೆಯೇ ಯೋಚನೆ ಮಾಡತೊಡಗಳು. ಅವನ ಟೈಮ್ ಸೆನ್ಸ್ ಕಾಮನ್ ಸೆನ್ಸ್ ನೋಡಿದರೆ ಮತ್ತು ಅವನ ರೀತಿಯನ್ನು ಗಮನಿಸಲಾಗಿ, ಅವನು ತುಂಬಾ ಪ್ರಾಂಪ್ಟ್ ಹಾಗಿರುವ ಹಾಗಿದೆ. ತನ್ನಿಂದ ಬೇರೆಯವರು ತೊಂದರೆಗೆ ಒಳಗಾಗಬಾರದು ಎಂಬ ಮನೋಭಾವನೆಯಿಂದಲೇ ಅವನು ತನಗೆ ಇಂದು ತಾನು ಬರುವದು ಲೇಟ್ ಆಗುತ್ತೆ ಅಂತ ತಿಳಿಸಿದ್ದ. ಅವನು ಇಂದು ಹೋಗಿದ್ದಾದ್ರೂ ಎಲ್ಲಿ ಇಬ್ಬರು ಪ್ರೇಮಿಗಳನ್ನು ಒಂದು ಮಾಡಲು. ಅದಕ್ಕೆ ಅವನು ಯಾವ ರೀತಿ ಪ್ರಯತ್ನ ಮಾಡಿದನೋ ಗೊತ್ತಿಲ್ಲ. ಆದರೆ ಅವರನ್ನು ಒಂದು ಮಾಡಿದ್ದು ಮಾತ್ರ ಮೆಚ್ಚವ ಕೆಲಸ. ಇಂಥ ವ್ಯಕ್ತಿ ತನ್ನ ಬಾಳಲ್ಲಿ ಬಂದಿರುವನು ಇಲ್ಲ ಬರುವ ಪ್ರಯತ್ನ ಮಾಡುತ್ತಿರುವನೋ ಎಂಬ ಗೊಂದಲದಲ್ಲಿ ಸುಮಾ ಬಿದ್ದಳು. ಆದರೆ ಅವಳಿಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ. 

   ಇದೆ ಯೋಚನೆ ಮಾಡುತ್ತಲೇ ಸುಮಾ ಪೂರ್ತಿ ರಾತ್ರಿ ನಿದ್ರಿಸಲಿಲ್ಲ. ಮೇಲಿಂದ ಮೇಲೆ ಗಡಿಯಾರದ ಕಡೆಗೆ ನೋಡುತ್ತಿದ್ದಳು ರಾತ್ರಿ ಅಭಿ ಆಫ್ ಲೈನ್ ಗೆ ಹೋದಾಗ ಸಮಯ ಮಧ್ಯರಾತ್ರಿ 2 ಘಂಟೆಯಾಗಿತ್ತು. ನಂತರದಲ್ಲಿ ಅವಳು 5 ಘಂಟೆಯವರೆಗೆ ಅದೇ ಅವನದೇ ಯೋಚನೆ ಮಾಡುತ್ತಾ ಮಲಗಿದ್ದಳು. ನಿದ್ರೆ ಹತ್ತಿರಲಿಲ್ಲ. ಅಷ್ಟರಲ್ಲಿ 5 ಘಂಟೆಯಾಯಿತು. ಐದು ನಿಮಿಷದಲ್ಲಿ ಅವಳ ಮೊಬೈಲ್ ಸದ್ದು ಮಾಡಿತು. ಕೂಡಲೇ ಅವಳು ತನ್ನ ಮೊಬೈಲ್ ತೆಗೆದು ನೋಡಿದಾಗ ಅಭಿ ಮೆಸೇಜ್ ಮಾಡಿದ್ದ. 

*"ಹಲೋ, ನಿಮಗೆ ತಿಳಿಸಿದಂತೆ ನಾನು ಸರಿಯಾಗಿ 5 ಘಂಟೆಗೆ ಮೂಡಣದಲ್ಲಿ ಉದಯಿಸುವ ಸೂರ್ಯನ ಹಾಗೆ ಉದಯವಾಗಿದ್ದೇನೆ. ನೀವು ಎಚ್ಚರ ಇದ್ದೀರಾ ಇಲ್ಲ ನಾನು ನಿಮ್ಮನು ಎಚ್ಚರಿಸಬೇಕಾ?"*

ಎಂದು ಅವನು ಬರೆದ ಅಕ್ಷರಗಳನ್ನು ನೋಡುತ್ತಲೇ, ಸುಮಾಳಿಗೆ ಬೆಳಿಗ್ಗೆ ಫ್ರೆಶ್ ಆದ ತಂಪಾದ ವಾತಾವರಣದಲ್ಲಿ ಅವನ ಶಬ್ದಗಳು ತುಂಬಾ ಹಿತ ನೀಡಿದವು. ಅವಳು ಸಹ 

*"ನಿಮ್ಮ ದಾರಿಯನ್ನು ಕಾಯುತ್ತಿದ್ದೇನೆ. ನಿಮ್ಮಂತೆ ನನನಿಗೂ ಸಹ ಕುತೂಹಲ ಇದೆ. ತೋರಿಸಿ ನಿಮ್ಮ ಆಧುನಿಕ ಪ್ರೇಮ ಪತ್ರವನ್ನು"*

ಎಂದಾಗ ಅವನು ಅತ್ತಲಿಂದ 

*"ವೇಟ್"*

ಎಂದು ಹೇಳಿ ಒಂದು ನಿಮಿಷದ ಬಳಿಕ ಒಂದು ಫೋಟೋ ಕಳುಹಿಸಿದ. ಅದು ಅವನು ಬರಿದ ಪ್ರೇಮ ಪತ್ರವಾಗಿತ್ತು. ಅದನ್ನು ಓದತೊಡಗಿದಳು.

*"ಓ ಮೈ ಡಿಯರ್ ಡಾರ್ಲಿಂಗ್,

ನಿನ್ನನ್ನು ನಾನು ನೋಡಿದಾಗಿನಿಂದ ನನ್ನ ಮನದ ಹಾರ್ಡ್ ಡಿಸ್ಕ್ ದಲ್ಲಿ ನೀನೊಂದು ಪ್ರೋಗ್ರಾಮ್ ಆಗಿಬಿಟ್ಟೆ. ಅಂದಿನಿಂದ ಬೇರೆ ಹುಡುಗಿಯರು ತಮ್ಮ ಪ್ರೋಗ್ರಾಮ್ ನನ್ನ ಮನದ ಹಾರ್ಡ್ ಡಿಸ್ಕ್ ದಲ್ಲಿ ಹಾಕಬೇಕೆಂದರೂ ಸಹ ನೀನು ಮತ್ತು ನಿನ್ನ ನೆನಪು, ನಿನ್ನ ಮಾತುಗಳು, ಆ ಹುಡುಗಿಯರ ವೈರಸ್ ಬರದಂತೆ ನನ್ನ ಮನದ ಹಾರ್ಡ್ ಡಿಸ್ಕ್ ಅನ್ನು ಕಾಪಾಡುತ್ತಿವೆ. ನಿನ್ನನ್ನು ನೋಡಿದಾಗಿನಿಂದ ನನ್ನ ಮನದ ಹಾರ್ಡ್ ಡಿಸ್ಕ್ ಬೇರೆ ಪ್ರೋಗ್ರಾಮ್ ರನ್ ಮಾಡುತ್ತಿಲ್ಲ. ಕೇವಲ ನಿನ್ನ ನೆನಪನ್ನು ರನ್ ಮಾಡುತ್ತಿದೆ. ಹೀಗಾಗಿ ನನ್ನ ಜೀವನದಲ್ಲಿ ನಾನೊಬ್ಬ ಆಶಿಕ್ ಆಗಿ ಬಿಟ್ಟಿರುವೆ ಅಂದರೂ ಸಹ ತಪ್ಪಾಗುವದಿಲ್ಲ. 

     ಇನ್ನೊಂದು ಮಾತು ನಾನು ಹೇಳುವದೇನೆದರೆ, ನಾನು ಒಬ್ಬ ಪ್ರೀತಿಯ ಪೂಜಾರಿ. ನಿನ್ನನ್ನು ನನ್ನ ಮನದ ದೇವಾಲಯದಲ್ಲಿ ನಿನ್ನನ್ನು ನನ್ನ ದೇವಿ ಅಂತ ಸ್ಥಾಪಿಸಿ, ನಿನ್ನ ಪೂಜೆಯನ್ನು ನಾಂದೇ ನನ್ನ ಹೃದಯದಿಂದ ಮಾಡಲು ಇಚ್ಛೆ ಇದೆ. ನಿನ್ನನ್ನು ನಾನು ಕಣ್ಣಿಂದ ನೋಡಿಲ್ಲ. ಆದರೆ ಮನದಲ್ಲಿ ನಿನ್ನ ರೂಪವನ್ನು ಕಲ್ಪಿಸಿಕೊಂಡು ಅದನ್ನೇ ನೆನಪಿಸಿಕೊಂಡು ಆನಂದ ಪಡುತ್ತಿರುವೆನು. ನಿನ್ನ ಮಾತು ಮತ್ತು ನಿನ್ನ ಕೈ ಬರಹದಂತೆ ನೀನು ಸಹ ಸುಂದರವಾಗಿರಬಹುದು ಎಂದು ಭಾವಿಸಿದ್ದೇನೆ. ಭಾವಿಸಿದ್ದೇನೆ ಎಂದರೆ ತಪ್ಪಾಗುತ್ತದೆ, ಆದರೆ ನೀನು ಸುಂದರವಾಗಿಯೇ ಇರುವೆ ಅಂತ ನನ್ನ ಮನಸ್ಸು ಹೇಳುತ್ತಿದೆ. ನನ್ನ ಮನಸ್ಸು ಇಂದಿನವರೆಗೆ ನನಗೆ ಯಾವುದೇ ತಪ್ಪು ಸಂದೇಶ ಕೊಟ್ಟಿಲ್ಲ. ಬಹಳ ದಿನಗಳಿಂದ ನನ್ನ ಹೃದಯದ ಬಡಿತವನ್ನು ನಿನಗೆ ಅರಿವು ಮಾಡಿಕೊಡಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈಗ ಸಮಯ ಒದಗಿಬಂದಿದೆ. ನೀನು ನನ್ನ ಪ್ರೇಮ ದೇವತೆ. ನೀನು ನನ್ನ ಹೃದಯ ದೇವತೆ. ನೀನು ನನ್ನ ಇಷ್ಟಾರ್ಥ ದೇವತೆ, ನೀನು ನನ್ನ ಉಸಿರಿನ ದೇವತೆ. ನನ್ನ ಪ್ರೇಮ ನಿವೇದನೆಯನ್ನು ನೀನು ತಿರಸ್ಕಾರ ಮಾಡಿದ್ರೆ, ನನ್ನ ಹೃದಯ ನನ್ನ ಒಪ್ಪಿಗೆ ಇಲ್ಲದೆ, ತನ್ನ ಬಡಿತವನ್ನು ನಿಲ್ಲಿಸಿಬಿಡುತ್ತದೆ. ನೀನು ಕೇವಲ ನನಗೆ ಉತ್ತರಿಸದೆ ಇದ್ದಲ್ಲಿ ನನ್ನ ಮನಸ್ಸು ಕೋಮಾದಲ್ಲಿ ಹೋದ ಹಾಗಿರುತ್ತದೆ. ಅಂಥದರಲ್ಲಿ ನೀನು ಒಂದು ವೇಳೆ ನನ್ನ ಪ್ರೀತಿ ತಿರಸ್ಕಾರ ಮಾಡಿದಲ್ಲಿ ನಾನು ಬದುಕಿರುವದಕ್ಕೆ ಸಾಧ್ಯವೇ ಇಲ್ಲ. ಹಾಗಂತ ನಾನು ನಿನ್ನನ್ನು ನನ್ನ ಪ್ರೀತಿಸು ಅಂತ ನಿನಗೆ ಅಂಗಲಾಚಿಕೊಳ್ಳುತ್ತಿಲ್ಲ. ಆದರೆ ನೀನು ನನ್ನನ್ನು ಪ್ರೀತಿಸಲೇ ಬೇಕು ಅಂತ ಒತ್ತಾಯ ಮಾಡುತ್ತಿದ್ದೇನೆ. ಯಾವಾಗಲೋ ಹಿಂದೆ ಒಂದು ಮೂವಿ ನೋಡಿದ ನೆನಪು ಅದರಲ್ಲಿ ಹೇಳಿರುವಂತೆ ಒಂದು ಮಾತು ಇದೆ I love you. you must love me. ಅಂದರೆ ನೀನು ನನ್ನನ್ನು ಪ್ರೀತಿಸಲೇ ಬೇಕು. ಒಂದು ವೇಳೆ ನೀನು ಇಲ್ಲ ಅಂತ ಅಂದರೆ ನಾನೇನು ನಿನ್ನನ್ನು ಕೊಳ್ಳುವದಿಲ್ಲ. ಆದರೆ ನನ್ನ ಪ್ರೀತಿಸದ ನೀನು ಮತ್ತೆ ಯಾರನ್ನೂ ಸಹ ಪ್ರೀತಿಸದಂತೆ ನಾನು ನೋಡಿಕೊಳ್ಳಬೇಕಾಗುತ್ತದೆ. ಇದನ್ನು ಒಂದು ರೀತಿ ಪ್ರೇಯಿಯಿಂದ ಕೊಡುತ್ತಿರುವ ಬೆದರಿಕೆಅಂತ ತಿಳಿದುಕೊಂಡರೂ ಪರವಾಯಿಲ್ಲ. ಆದರೆ ನನ್ನ ಮನಸ್ಸಿನಲ್ಲಿ ಇರುವದನ್ನು ನಿನ್ನ ಮುಂದೆ ಹೇಳಿದ್ದೇನೆ. 

ದಿಲ್ ಕಿ ಧಡಕನ್ ಔರ್ ಮೇರಿ ಸದಾ ಹೈ ತು

ಮೇರಿ ಪೆಹೆಲಿ ಔರ್ ಆಖರಿ ವಫಾ ಹೈ ತು

ಚಾಹಾ ಹೈ ತುಜೆ ಚಾಹತ್ ಸೆ ಭೀ ಬಡ್ಕರ್

ಮೇರಿ ಚಾಹತ್ ಔರ್ ಚಾಹತ್ ಕಿ ಇಂತಿಹಾ ಹೈ ತು 

ನೀನು ನನ್ನ ಪ್ರೇಮದ ಪರೀಕ್ಷೆಯಾಗಿರುವೆ. ಪರೀಕ್ಷೆ ನನ್ನದು ಮತ್ತು ನಿನ್ನದಾದರೂ ಈ ಪ್ರೇಮ ಪರೀಕ್ಷೆಯಲ್ಲಿ ಪ್ರೇಮದ ಪ್ರಶ್ನೆ ನನ್ನದಾದರೂ ಸಹ ಉತ್ತರ ಮಾತ್ರ ನಿನ್ನದು. ಉತ್ತರವನ್ನು ನೀನೆ ಹೇಳಬೇಕು ಮತ್ತು ಬರೆಯಬೇಕು ಅಲ್ಲದೆ, ಅಂಕಗಳನ್ನು ಸಹ ನೀನೆ ಕೊಡಬೇಕು. ದಯವಿಟ್ಟು ನನ್ನನ್ನು ನೀನು ಲವ್ ಮಾಡುತ್ತೀಯಾ ಅಂತ ಅಂದುಕೊಂಡಿದ್ದೇನೆ. ನೀನು ಮಾಡಲೇ ಬೇಕು. ಇಂತಿ ನಿನ್ನ ಪ್ರೀತಿಯ ಅಭಿ"*


       11

 ಅವನು ಕಳುಹಿಸಿದ ಪತ್ರವನ್ನು ಬರುತ್ತಿರುವಂತೆ ಸುಮಾಳಿಗೆ ತುಂಬಾ ನಗು ಉಕ್ಕಿ ಬಂತು. ನಗುತ್ತಲೇ ಅವಳು

*" ಇದೇನು ಪ್ರೇಮಪತ್ರವೊ ಇಲ್ಲ ಭಯೋತ್ಪಾದಕರು ಭಯ ಹುಟ್ಟಿಸುವ ರೀತಿಯಲ್ಲಿ ಬರೆದ ಭಯಪತ್ರವೊ?"*

 ಎಂದು ಅವನಿಗೆ ಪ್ರಶ್ನೆಯನ್ನು ಕಳುಹಿಸಿದಾಗ, ಅತ್ತಕಡೆಯಿಂದ ಅಭಿ

*" ಈಗಿನ ಕಾಲದ ಪ್ರೇಮಪತ್ರಗಳು ಹೀಗಿರುತ್ತವೆ. ನೀವೇದನೆ ಎನ್ನುವುದು ಇಲ್ಲವೇ ಇಲ್ಲ. ಏನೇ ಇದ್ದರೂ ಒಂದು ಹೊಡೆತ ಎರಡು ತುಂಡು ಅದರಲ್ಲಿ ಇರುವ ಅರ್ಥವೇನೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನೀನು ನನ್ನನ್ನು ಪ್ರೀತಿಸಲೇಬೇಕು ಎಂದು ಕಡ್ಡಾಯವಾಗಿ ಪ್ರೀತಿ ಮಾಡು ಎಂದು ಹೇಳುವಂತಹ ಲವ್ ಲೆಟರ್."*

*" ಈ ರೀತಿಯಾಗಿ ಯಾರಾದರೂ ಲವ್ ಲೆಟರ್ ಬರೆಯುತ್ತಾರೆ?"*

*" ಬರೆಯುವದಿಲ್ಲ ಎಂದು ನೀವು ಹೇಗೆ ಅಂದುಕೊಳ್ಳುತ್ತೀರಿ? ಎಲ್ಲರ ಮೆಂಟಾಲಿಟಿ ಒಂದೇ ತರಹದಲ್ಲಿ ಇರುವುದಿಲ್ಲ. ಸ್ವಭಾವದ ಮೇಲೆ ಅವರು ಬರೆಯುವ ಲವ್ ಲೆಟರ್ ಸ್ವಭಾವಕ್ಕೆ ಅನುಗುಣವಾಗಿ ಇರುತ್ತದೆ. ಯಾವ ರೀತಿಯಾಗಿ ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ ಎಂಬ ಚಿತ್ರಣ ಮುಖ್ಯವಲ್ಲ. ಬದಲಾಗಿ ಪ್ರೀತಿಸಿದ್ದೀನಿ ಪ್ರೀತಿಸಲೇಬೇಕು ಎಂದು ವ್ಯಕ್ತಪಡಿಸುವುದು ಅವಶ್ಯಕ. ಅದಕ್ಕೆ ಈ ರೀತಿಯಾಗಿ ಲವ್ ಲೆಟರ್ ನಿರ್ಮಿಸಿದ್ದೇನೆ"*

 ಇದನ್ನು ಓದುತ್ತಿದ್ದಂತೆ ಸುಮಾಳಿಗೆ ಹೈಸ್ಕೂಲಿನಲ್ಲಿ ಇರುವ ತುಂಟ ಹುಡುಗನೊಬ್ಬ ಪ್ರೇಮಪತ್ರ ಬರೆದ ರೀತಿಯಲ್ಲಿ ಅವಳಿಗೆ ಭಾಸವಾಯಿತು. ಕೊನೆಗೆ ಅವಳು

*" ನನ್ನ ಪ್ರಕಾರ ಈ ರೀತಿಯಾಗಿ ಲವ್ ಲೆಟರ್ ಬರೆದರೆ ಯಾರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ಆದರೆ ಹೇಳುವ ಶೈಲಿ ಮಾತ್ರ ಭಿನ್ನವಾಗಿ ಆಕರ್ಷಕವಾಗಿದ್ದರೆ ಮಾತ್ರ ಯಾವುದಾದರೂ ಹುಡುಗಿ ಯೋಚನೆ ಮಾಡಬಹುದು"*

 ಈ ವಾಕ್ಯಗಳಿಗೆ ಒಂದೇ ನಿಮಿಷದಲ್ಲಿ ಎತ್ತಲಿಂದ ಅಭಿ ಉತ್ತರಿಸಿದ

*" ಬೇರೆಯವರ ಮಾತು ಬೇಡ. ನೀವೇ ನನ್ನ ಲವ್ವರ್ ಅಂತ ಅಂದುಕೊಳ್ಳಿ. ಈಗ ಹೇಳಿ. ನನ್ನನ್ನು ನೀವು ಪ್ರೀತಿಸುತ್ತೀರಾ?"*

 ನೇರವಾಗಿ ಅವನು ಕೇಳಿದ ಪ್ರಶ್ನೆಯನ್ನು ನೋಡಿದಾಗ, ಒಂದು ಕ್ಷಣ ಸುಮಾಳ ಎದೆಯಲ್ಲಿ ಸಣ್ಣದಾಗಿ ಕಂಪನ ಶುರುವಾಯಿತು. ಅವನು ಇಷ್ಟೊಂದು ನೇರವಾಗಿ ತನ್ನನ್ನೇ ತನ್ನ ಪ್ರಿಯತಮೆ ಎಂದುಕೊಂಡು ಈ ಪ್ರಶ್ನೆ ಕೇಳುತ್ತಾನೆ ಅಂತ ಮಾತ್ರ ಅವಳು ಅಂದುಕೊಂಡಿರಲಿಲ್ಲ. ಆದರೆ, ಅವಳು ಯೋಚನೆ ಮಾಡದೇ ಇರುವಂತಹ ಪ್ರಸಂಗದಲ್ಲಿ ಆ ಪ್ರಶ್ನೆಯನ್ನು ಕೇಳಿ ಬಿಟ್ಟಿದ್ದ. ಉತ್ತರ ಹೇಳುವದೋ ಬೇಡವೋ ಎಂಬ ಗೊಂದಲದಲ್ಲಿ ಸುಮಾ ಬಿದ್ದಳು. ಅವಳಿಂದ ಉತ್ತರ ಬರದ ಕಾರಣ ಅಭಿ ಮತ್ತೆ ಮೆಸೇಜ್ ಕಳುಹಿಸಿದ

*" ಹೇಳಿ, ನನ್ನನ್ನು ನೀವು ಲವ್ ಮಾಡ್ತೀರಾ? ನಾನೇನು ಬೇರೆಯವರ ತರಹ, ನಿಮಗೆ ಯಾವುದೇ ರೀತಿಯಿಂದ ಆಶ್ವಾಸನೆ ಕೊಡುವುದಿಲ್ಲ. ಆದರೆ ಒಂದು ಮಾತ್ರ ಸತ್ಯ. ನನ್ನ ಹೃದಯ ಮಾತ್ರ ನಿಮ್ಮ ಹೆಸರಿನಲ್ಲಿಯೇ ಬಡಿದುಕೊಳ್ಳುತ್ತಿದೆ. ಅದಕ್ಕಾಗಿ ನಾನು ನೇರವಾಗಿಯೇ ಕೇಳುತ್ತಿದ್ದೇನೆ."*

 ಎಂದು ಮತ್ತೆ ಅವನು ಮೆಸೇಜ್ ಕಳುಹಿಸಿದಾಗ ಅದನ್ನು ಓದಿದ ಸುಮಾ, ಉತ್ತರ ಹೇಳುವುದಕ್ಕೆ ಒದ್ದಾಡತೊಡಗಿದಳು. ಕೊನೆಗೆ,

*" ಬೆಳಗಾಯಿತು, ನಾನು ಕೆಲಸಕ್ಕೆ ಹೋಗಬೇಕು. ಇನ್ನೊಮ್ಮೆ ಮಾತನಾಡೋಣ"*

 ಎಂದು ಅವನಿಗೆ ಮೆಸೇಜ್ ಕಳುಹಿಸಿದಾಗ, ಆತ,

*" ಆಯ್ತು, ಈಗಲೇ ಹೇಳಿ ಎಂದು ನಾನು ನಿಮ್ಮನ್ನು ಬಲವಂತ ಮಾಡುವುದಿಲ್ಲ. ರಾತ್ರಿ ಭೇಟಿಯಾದಾಗ ನಿಮ್ಮ ನಿರ್ಧಾರವನ್ನು ತಿಳಿಸಿ. ನಿಮ್ಮ ನಿರ್ಧಾರ ನನ್ನ ಪರವಾಗಿ ಇರುತ್ತದೆ ಅಂತ ನನ್ನ ಭಾವನೆ."*

 ಎಂದು ಹೇಳಿ ಅವನು ಆಫ್ ಲೈನಿಗೆ ಹೋಗಿಬಿಟ್ಟ. ಆಗ ಸುಮಾ ಸಹ ತನ್ನ ಮೊಬೈಲ್ ಆಫ್ ಮಾಡಿ, ಹಾಸಿಗೆಯಿಂದ ಎದ್ದು, ಮನೆಯ ಕೆಲಸಗಳನ್ನು ಮಾಡತೊಡಗಿದಳು. ಅಭಿ ನೇರವಾಗಿ ಕೇಳಿದ ಪ್ರಶ್ನೆಯಿಂದ, ಅವಳು ಅನ್ಯಮನಸ್ಕಳಾಗಿ ಇದ್ದಳು. ಏಕಾಂಗಿಯಾಗಿ ಇಷ್ಟು ದಿನ ಇದ್ದ ತಾನು ಪ್ರೀತಿಯಿಂದ ವಂಚಿತಳಾಗಿ ಇದ್ದೇನೆ ಎಂಬ ಭಾವನೆ ಅವಳನ್ನು ಮೊದಲಿನಿಂದಲೂ ಕಾಡುತ್ತಿತ್ತು. ಯಾರಾದರೂ ತನ್ನನ್ನು ಪ್ರೀತಿಸುವುದು ಇರಬೇಕೆಂದು ಅವಳು ಸದಾ ಅಂದುಕೊಳ್ಳುತ್ತಲೆ ಇದ್ದಳು. ಹಾಗೆ ಅವಳು ಅಂದುಕೊಳ್ಳುತ್ತಿರುವಾಗ, ಅವಳನ್ನು ಪ್ರೀತಿಸುವವರು ಯಾರೂ ಇರಲಿಲ್ಲ. ಆದರೆ ಈಗ, ನೇರವಾಗಿ ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿರುವ, ತನ್ನ ಪ್ರೀತಿಯನ್ನು ತೋರ್ಪಡಿಸುತ್ತಿದ್ದರು ಆವಾಗ, ಅವನಿಗೆ ಉತ್ತರ ಹೇಳಿದ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದಳು ಸುಮಾ. ಅವಳಿಗೆ ಪ್ರೀತಿ ಏನೋ ಬೇಕಾಗಿತ್ತು. ಆದರೆ, ತನ್ನ ಪರಿಸ್ಥಿತಿಯನ್ನು ಯೋಚನೆ ಮಾಡಿದಾಗ, ತಾನೊಬ್ಬ ವಿಧವೆ, ಅಲ್ಲದೆ ವಯಸ್ಸು 40 ಆಗಿದೆ. ತನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವ ವ್ಯಕ್ತಿ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವನು. ನಾನಾದರೂ, ಜೀವನ ನಿರ್ವಹಣೆ ಮಾಡಿ, ಗಂಡನೊಂದಿಗೆ ಬಾಳುವೆಯನ್ನು ಮಾಡಿದ್ದೇನೆ. ಆದರೆ ಆ ವ್ಯಕ್ತಿ, ಇನ್ನೂ ಮದುವೆಯಾಗಿಲ್ಲ. ಅಂಥವನನ್ನು ತಾನು ಪ್ರೇಮಿಸಬಹುದ? ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು. ನನಗಂತೂ ಪ್ರೀತಿಯ ಅವಶ್ಯಕತೆ ಇದ್ದೇ ಇದೆ. ಆದರೆ, ಆ ವ್ಯಕ್ತಿ ಕೇವಲ ತನ್ನನ್ನು ಆಟವಾಡಿಸಲು ಪ್ರೀತಿಯ ನಾಟಕ ಮಾಡಿದರೆ ಹೇಗೆ ಎಂಬ ಕೆಟ್ಟ ವಿಚಾರ ಸಹ ಅವಳ ಮನಸ್ಸಿನಲ್ಲಿ ಬಂತು. ಆದರೆ ಅವನ ಮಾತನ್ನು ಮತ್ತು ನೇರ ನುಡಿಯನ್ನು ಅವಳು ನೆನಪಿಸಿಕೊಂಡಾಗ, ಅಂಥ ವ್ಯಕ್ತಿ ಅವನ್ನೆಲ್ಲವೆಂದು ಅವಳಿಗೆ ಅನ್ನಿಸುತ್ತಿತ್ತು. ಯಾವುದು ತೀರ್ಮಾನ ಮಾಡಲಾಗದೆ, ಸ್ನಾನ ಮಾಡಿ ತಿಂಡಿ ತಿಂದು ಕಾಲೇಜಿಗೆ ಹೊರಟಳು.

      ಕಾರ್ ಡ್ರೈವ್ ಮಾಡಿಕೊಂಡು ಕಾಲೇಜಿನ ಕಡೆಗೆ ಮಾಡುತ್ತಾ ಹೊರಟಾಗ, ಅಭಿ, ನನಗೆ ಕೇಳಿದ ಪ್ರಶ್ನೆ ಕಣ್ಣ ಮುಂದೆ ಬರುತ್ತಿತ್ತು.

*" ನನ್ನನ್ನು ಪ್ರೀತಿಸುತ್ತೀರಾ?"*

      ಪ್ರಶ್ನೆ ಎಷ್ಟು ಚಿಕ್ಕದಾಗಿ ಸರಳವಾಗಿತ್ತೋ, ಆ ಪ್ರಶ್ನೆಗೆ ಉತ್ತರ ಹೇಳುವುದು ಅಷ್ಟೇ ಕಷ್ಟವಾಗಿತ್ತು. ಸಮಸ್ಯೆಗಳ ಸುರಿಮಳೆ, ಮತ್ತು ಸಮಾಜದ ಭಯ, ತನ್ನ ವ್ಯಕ್ತಿತ್ವ, ಮನಸು, ಇತ್ಯಾದಿಗಳನ್ನು ಮನಸ್ಸು ಯೋಚನೆ ಮಾಡತೊಡಗಿತ್ತು. ಆದರೆ ಅದಕ್ಕೆ ಸಮರ್ಪಕವಾದ ಉತ್ತರವನ್ನು ಹುಡುಕುವುದು ಮಾತ್ರ ತುಂಬಾ ಕಷ್ಟದಾಯಕವಾಗಿತ್ತು. ಒಂದುವೇಳೆ ಈ ವಿಷಯ ಬೇರೆಯವರಿಗೆ ಗೊತ್ತಾದರೆ ಅವರು ಏನು ಅಂದುಕೊಳ್ಳುತ್ತಾರೆ, ತನ್ನನ್ನು ನೋಡುವ ದೃಷ್ಟಿ ಹೇಗಿರುತ್ತದೆ, ಅಲ್ಲದೆ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬಂದರೆ ಹೇಗೆ ಎಂಬ ಯೋಚನೆ ಅವಳನ್ನು ಕೊರೆಯುತ್ತಿತ್ತು. ಮತ್ತೊಂದು ನಿಮಿಷಕ್ಕೆ, ಎಷ್ಟಾದರೂ ತನ್ನದು ಒಂಟಿ ಜೀವನ, ಅಲ್ಲದೆ ತಾನು ಮಾಡಿದ್ದು ಸರಿ ತಪ್ಪು ಎಂದು ಹೇಳುವುದಕ್ಕೆ ಯಾರು ಇಲ್ಲ. ಹೀಗಾದರೂ ತನ್ನ ಜೀವನ ತನ್ನ ಕೈಯಲ್ಲಿ ಇರುವದರಿಂದ, ಮತ್ತು ತನಗೆ ಪ್ರೀತಿಯ ಅವಶ್ಯಕತೆ ಇದ್ದ ಕಾರಣ, ಒಪ್ಪಿಕೊಳ್ಳುವುದು ಜಾಣತನ ಎಂದು ಅನ್ನಿಸುತ್ತಿತ್ತು.

      ಇದೇ ಯೋಚನೆಯಲ್ಲಿ ಅವಳು ಕಾಲೇಜಿಗೆ ಬಂದು ತಲುಪಿದಳು. ನೇರವಾಗಿ ಅವಳು ಶಿಕ್ಷಕರ ಕೊಠಡಿಗೆ ಹೋಗಿ, ತನ್ನದು ಯಾವ ಕ್ಲಾಸ್ ಇದೆಯೆಂದು ತಿಳಿದುಕೊಂಡು, ಕ್ಲಾಸಿನಲ್ಲಿ ಹೋದಳು.

      ಇಂದು ಸಹ ಅವಳು ರೋಮಿಯೋ ಜೂಲಿಯೆಟ್ ಪಾಠವನ್ನು ಮುಂದುವರಿಸ ಬೇಕಾಗಿತ್ತು. ತನ್ನ ಮನದಲ್ಲಿ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ದೊರಕಿಸಿಕೊಂಡರಾಯಿತು ಎಂದುಕೊಂಡು, ವಿದ್ಯಾರ್ಥಿಗಳನ್ನು ಉದ್ದೇಶಿಸಿ

*" ನೋಡಿ, ನೀವು ಈಗ ಮುಕ್ಕಾಲು ಭಾಗ ರೋಮಿಯೋ-ಜೂಲಿಯಟ್ ಪಾಠವನ್ನು ತಿಳಿದುಕೊಂಡಿರುವುದು. ನಾನು ನಿಮಗೆ ಈಗ ಒಂದು ಪ್ರಶ್ನೆ ಕೇಳುತ್ತೇನೆ. ನೀವು ಬಂದು ಅದಕ್ಕೆ ಉತ್ತರ ಹೇಳಬೇಕು. ಆದರೆ, ನಿಮ್ಮ ಉತ್ತರ ಪ್ರಾಕ್ಟಿಕಲ್ ಆಗಿ ಇರಬೇಕು."*

 ಎಂದು ಹೇಳಿದಾಗ ವಿದ್ಯಾರ್ಥಿಗಳಲ್ಲಿ, ಅವಳು ಏನು ಪ್ರಶ್ನೆ ಹೇಳಬಹುದೆಂಬ ಕುತೂಹಲ ಮುಖದಲ್ಲಿ ಕಾಣತೊಡಗಿತು. ನಿಧಾನವಾಗಿ ಒಂದು ಕ್ಷಣ ಕಣ್ಣು ಮುಚ್ಚಿದ ಸುಮಾ, ಸಾವಕಾಶವಾಗಿ ಕಣ್ಣು ತೆರೆದು, ವಿದ್ಯಾರ್ಥಿಗಳನ್ನೇ ನೋಡುತ್ತಾ,

*" ನಿಮ್ಮ ಪ್ರಕಾರ, ಪ್ರೀತಿ ಮಾಡಲು ವಯಸ್ಸು ದೊಡ್ಡ ಬರುತ್ತದೆಯೇ? ಮತ್ತು, ಬೇಕಾದವರು ಬೇಕಾದವರನ್ನು ಪ್ರೀತಿಸಬಹುದು? ಇದು ನನ್ನ ಪ್ರಶ್ನೆ. ಇದಕ್ಕೆ, ಇಷ್ಟು ದಿನ ನೀವು ಓದಿದ ರೋಮಿಯೋ-ಜೂಲಿಯಟ್ ಪಾಠವನ್ನು ಆಧಾರವಾಗಿಟ್ಟುಕೊಂಡು, ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಉತ್ತರ ಹೇಳಬೇಕು"*

 ಎಂದು ನನ್ನ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಹಾಕಿದಾಗ, ಒಂದು ಕ್ಷಣ ಅಲ್ಲಿ ಮೌನ ಸ್ಥಾಪಿತವಾಯಿತು. ವಿದ್ಯಾರ್ಥಿಗಳಿಗೆ ಪ್ರಶ್ನೆ ಏನು ಸುಲಭದ ಪ್ರಶ್ನೆಯಾಗಿ ಇದ್ದರೂ ಸಹ, ಅದಕ್ಕೆ ವಿವರಣೆ ನೀಡುವುದು ಅಷ್ಟು ಸರಳವಾಗಿರಲಿಲ್ಲ. ಭಾವನೆಗಳಿಗೆ ಅಕ್ಷರ ರೂಪವನ್ನು ಕೊಡುವುದು ಕಷ್ಟ ಸಾಧ್ಯ. ಅಲ್ಲದೆ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದು ಸಹ ತುಂಬಾ ಕಷ್ಟದ್ದು. ಆದರೂ ಅಂತಹ ಕಷ್ಟದ ಪ್ರಶ್ನೆಯನ್ನು, ಸರಳವಾಗಿಯೇ ಸುಮಾ ವಿದ್ಯಾರ್ಥಿಗಳಿಗೆ ಕೇಳಿದ್ದಳು. ಒಂದೆರಡು ಕ್ಷಣ ವಿದ್ಯಾರ್ಥಿಗಳು ಅವಳು ಕೇಳಿದ ಪ್ರಶ್ನೆಯನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಕಳೆದು ನಂತರ, ಒಬ್ಬ ವಿದ್ಯಾರ್ಥಿ ಎದ್ದುನಿಂತು,

*" ಪ್ರೀತಿಯೆನ್ನುವುದು ಮನಸ್ಸಿಗೆ ಸಂಬಂಧಿಸಿದ ವಿಷಯ. ಪ್ರೀತಿಸುವುದಕ್ಕೆ ಯಾವುದೇ ಅರ್ಹತೆ ಬೇಕಾಗಿಲ್ಲ. ಆದರೆ, ಎರಡು ಮನಸುಗಳು ಒಂದನ್ನೊಂದು ಅರ್ಥಮಾಡಿಕೊಂಡರೆ ಆ ಪ್ರೀತಿ ಸಫಲವಾಗಿರುತ್ತವೆ. ಪ್ರೀತಿ ಮಾಡುವವರಿಗೆ ಮತ್ತು ಪ್ರೀತಿಸುವ ಹೃದಯಗಳಿಗೆ ವಯಸ್ಸಿನ ಮಿತಿ ಹಾಕುವುದು ಸರಿಯಲ್ಲ. ಕೆಲವರಿಗೆ, ತಮ್ಮ ವಯಸ್ಸಿನವರಿಂದ ಪ್ರೀತಿ ಸಿಗಬಹುದು, ಇನ್ನು ಕೆಲವರಿಗೆ ತಮಗಿಂತ ಚಿಕ್ಕವರಿಂದ ಲು ಪ್ರೀತಿ ಸಿಗಬಹುದು, ಮತ್ತೆ ಕೆಲವರಿಗೆ ತಮಗಿಂತ ವಯಸ್ಸಾದ ಅವರಿಂದ ಪ್ರೀತಿ ಸಿಗುವ ಸಂಭವವೂ ಅಲ್ಲಗಳೆಯುವಂತಿಲ್ಲ. ಅದಕ್ಕೆ, ನನ್ನ ಪ್ರಕಾರ ಪ್ರೀತಿಗೆ ವಯಸ್ಸು ಅಡ್ಡ ಬರಬಾರದು ಎಂದು ನನ್ನ ಭಾವನೆ"*

 ಎಂದು ಹೇಳಿ ತನ್ನ ಉತ್ತರವನ್ನು ಮುಗಿಸಿದಾಗ, ಅವನ ಮಾತಿನಲ್ಲಿದ್ದ ಸತ್ಯವನ್ನು ಉಮಾ ಗಮನಿಸಿದಳು. ಅವನ ನಂತರ ಒಂದು ಹುಡುಗಿ ಎದ್ದು ನಿಂತು,

*" ಪ್ರೀತಿ ಮನಸ್ಸಿನಲ್ಲಿರಬೇಕು, ಮನಸ್ಸಿನಿಂದ ಪ್ರೀತಿ ಶುರುವಾಗಬೇಕು, ಇದು ಪ್ರೀತಿಯ ಅಡಿಪಾಯ. ಆದರೆ, ದೇಹದಿಂದ ಶುರುವಾಗುವ ಪ್ರೀತಿ ನೀತಿಯಲ್ಲ ಎಂದು ನನ್ನ ಭಾವನೆ. ಪರಿಶುದ್ಧವಾದ ಪ್ರೀತಿಯಲ್ಲಿ ಪೂಜ್ಯ ಭಾವನೆಯನ್ನು ಕಾಣಬಹುದಾಗಿದೆ. ಅಂಥ ಪ್ರೀತಿಗೆ ನಿಷ್ಕಲ್ಮಶ ಪ್ರೀತಿ ಎಂದು ಮೊದಲಿನಿಂದಲೂ ಭಾವಿಸಿಕೊಂಡು ಬರಲಾಗುತ್ತಿದೆ. ಇಂಥ ನಿಷ್ಕಲ್ಮಶ ಪ್ರೀತಿ ಮಾಡುವುದಕ್ಕೆ, ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ. ಪ್ರೀತಿಗೆ ವಯಸ್ಸಿಲ್ಲ ಎಂದಮೇಲೆ, ಪ್ರೀತಿಸುವ ಹೃದಯಕ್ಕೆ ಮತ್ತು ವ್ಯಕ್ತಿಗಳಿಗೆ ವಯಸ್ಸು ನಿರ್ಬಂಧ ಯಾವ ರೀತಿ ಆಗುತ್ತದೆ. ಅದು ಸಾಧ್ಯವಿಲ್ಲ ಎಂದು ನನ್ನ ಭಾವನೆ"*

 ಎಂದು ಹೇಳಿ ಪ್ರೀತಿಯ ವ್ಯಾಖ್ಯಾನವನ್ನು ಹೇಳಿದಳು. ಹೀಗೆ ಒಬ್ಬೊಬ್ಬರಾಗಿ ಪ್ರೀತಿಯ ಬಗ್ಗೆ ತಮಗೆ ತೋಚಿದ ಅಭಿಪ್ರಾಯಗಳನ್ನೆಲ್ಲ ಹೇಳಿದಾಗ, ಮೊದಲೆರಡು ಬಂದ ಅಭಿಪ್ರಾಯಗಳು ಸುಮಾಳ ಮನಸ್ಸಿನಲ್ಲಿ ಅಚ್ಚಾಗಿ ನಿಂತವು.

      ಮೊದಲಿಗೆ ಹೇಳಿದ ಇಬ್ಬರು ವಿದ್ಯಾರ್ಥಿಗಳು, ವಯಸ್ಸಿನ ನಿರ್ಬಂಧತೆಯನ್ನು ತಮ್ಮ ಉತ್ತರದಲ್ಲಿ ತೆಗೆದುಹಾಕಿದರು. ಅವರ ದೃಷ್ಟಿ, ಮತ್ತು ವಿಚಾರವನ್ನು ಕೂಲಂಕುಶವಾಗಿ ಸೂಕ್ಷ್ಮತೆಯಿಂದ ನೋಡಿದಾಗ, ಅವರಿಬ್ಬರು ಹೇಳಿದ ವಿಷಯ ಸತ್ಯವೆಂದು ಸುಮಾಳಿಗೆ ಮನವರಿಕೆಯಾಗತೊಡಗಿತು. ಪ್ರೀತಿಗೆ ವಯಸ್ಸಿಲ್ಲ, ಪ್ರೀತಿ ಮಾಡುವವರಿಗೆ ವಯಸ್ಸಿನ ನಿರ್ಬಂಧತೆ ಮಾಡುವುದು ಸರಿಯಲ್ಲ. ಈ ದೃಷ್ಟಿಯಿಂದ ನೋಡಿದಾಗ, ಕೇವಲ ಪ್ರೀತಿಸುವದನ್ನು ಅಷ್ಟೇ ಮಾಡಬೇಕು, ಹೊರತಾಗಿ, ವಯಸ್ಸು, ಸ್ಟೇಟಸ್, ಇತ್ಯಾದಿಗಳನ್ನೆಲ್ಲಾ ನೋಡಬಾರದು ಎಂಬ ಅಂಶ ಅವಳ ಮನಸ್ಸಿಗೆ ತುಂಬಾ ಹಿಡಿಸಿತು.

       ಅಷ್ಟರಲ್ಲಿ ತರಗತಿ ಮುಗಿದ ಸಂಕೇತವಾಗಿ ಬೆಲ್ ಬಾರಿಸಿದಾಗ, ಸುಮಾ ಪುಸ್ತಕ ಹಿಡಿದುಕೊಂಡು ಮತ್ತೆ ತರಗತಿಯಿಂದ ಹೊರಗೆ ಬಿದ್ದಳು. ಹರೀಶ ಕೇಳಿದ ಪ್ರಶ್ನೆಗೆ, ಅವಳಿಗೆ ಒಂದು ರೀತಿಯಲ್ಲಿ ಉತ್ತರ ದೊರಕಿದಂತಾಯಿತು. ತನ್ನದು ಎಷ್ಟಾದರೂ ನಿಷ್ಕಲ್ಮಶ ಪ್ರೇಮ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಈ ವಿಷಯ ಮತ್ತೊಬ್ಬರಿಗೆ ಗೊತ್ತಾದರೆ ತನ್ನನ್ನು ಯಾವ ದೃಷ್ಟಿಯಿಂದ ನೋಡಬಹುದೆಂದು ಸಂಕೋಚ, ಭಯ ಅವಳನ್ನು ಕಾಡತೊಡಗಿತು. ಅದೇ ಚಿಂತೆಯಲ್ಲಿ ಅವಳು ಸ್ಟಾಪ್ ರೂಮಿಗೆ ಬಂದಳು.


12

ಸ್ಟಾಫ್ ರೂಮಿನ ಒಳಗೆ ಬರುತ್ತಿದ್ದಂತೆ ಕಾವೇರಿ ಸಹ ಮತ್ತೊಂದು ಕಡೆಯಿಂದ ಬಂದಳು. ಇಬ್ಬರಿಗೂ ಒಂದು ಪಿರಿಯಡ್ ಆಫ್ ಇತ್ತು. ಕಾರಣ ಸುಮ್ಮನೆ ಅದು ಇದು ಮಾತನಾಡುತ್ತ ಕುಳಿತರು. ಹಾಗೆ ಮಾತನಾಡುತ್ತಿರುವಾಗ ಕಾವೇರಿ ಸುಮಾ ಯಾವುದೋ ವಿಷಯವಾದ ಬಗ್ಗೆ ಚಿಂತಿಸುತ್ತಿರುವದಾಗಿ ಕಂಡುಕೊಂಡಳು ಅವಳ ಅನ್ಯಮಸ್ಕಳಾಗಿರುವದು ಕಂಡು ಅವಳು

*"ಸುಮಾ, ಏನಾಯ್ತು? ಯಾಕೋ ನೀನು ಮುಂಚಿನಂತಿಲ್ಲ. ಮನಸ್ಸಿನಲ್ಲಿ ಏನೋ ಇದೆ. ಏನು ವಿಷಯ ಅಂತ ಹೇಳಬಾರದೇ?"*

*"ಹಾಗೇನಿಲ್ಲ. ಏನೋ ವಿಷಯ ಮನಸ್ಸನ್ನು ಕಾಡುತ್ತಿದೆ"*

*"ಏನು ಅಂತ ಹೇಳಬಾರದೇ?"*

*"ಏನಿಲ್ಲ, ನನಗೆ ಬೇಕಾದವರೊಬ್ಬರು ಲವ್ ನಲ್ಲಿ ಬಿದ್ದಿದ್ದಾರೆ. ಅದು ಹೇಗೆಂದರೆ, ಅವಳು ನನ್ನ ವಯಸ್ಸಿನವಳು. ಅವಳು ಲವ್ ಮಾಡಿದ ಹುಡುಗ ಅವಳಿಗಿಂತ ಸುಮಾರು ೧೧ ವರ್ಷ ಚಿಕ್ಕವನು. ಇದು ಸಾಧ್ಯವೇ ಅಂತ ಯೋಚನೆ ಮಾಡುತ್ತಿದ್ದೇನೆ ಅಷ್ಟೇ"*

ಎಂದಾಗ ಈ ಮಾತನ್ನು ಕೇಳಿದ ಕಾವೇರಿ ನಗುತ್ತ, 

*"ಅಲ್ಲ ಸುಮಾ ಒಂದು ವಿಷಯ ತಿಳಿಸು. ಮನುಷ್ಯನಿಗೆ ಪ್ರೀತಿಯೆನ್ನುವದು ಯಾವಾಗ ಹುಟ್ಟುತ್ತದೆ ಅಂತ ನಿಂಗೇನಾದರೂ ಗೊತ್ತಾ? ನಾವು ಹುಟ್ಟುತ್ತಲೇ ಪ್ರೀತಿಯನ್ನು ಪಡೆದುಕೊಂಡು ಬರ್ತೀವಿ. ಆದರೆ ಕೆಲವು ಬಾರಿ ಆ ಪ್ರೀತಿ ನಡುವೆ ಹೋಗಿಬಿಡುತ್ತದೆ. ಈಗ ನೀನಿಲ್ಲವೇ ನೀನು ಹುಟ್ಟುತ್ತಲೇ, ನಿನ್ನ ತಂದೆ ತಾಯಿ ಪ್ರೀತಿ ಪಡೆದುಕೊಂಡೆ. ನಂತರ ನೀನು ನಿನ್ನ ಗಂಡನ ಪ್ರೀತಿ ಪಡೆದುಕೊಂಡೆ. ನಿನ್ನ ಗಂಡ ತೀರಿಕೊಂಡ ಬಳಿಕ ನಿನ್ನ ಅತ್ತೆಯ ಪ್ರೀತಿಯನ್ನು ಪಡೆದೆ. ಆದರೆ ನೀನು ಈಗ ನಿನ್ನ ಅತ್ತೆಯನ್ನು ಕಳೆದುಕೊಂಡ ಮೇಲೆ, ನಿಂಗೆ ಸಿಗುತ್ತಿದ್ದ ಪ್ರೀತಿ ಈಗ ಇಲ್ಲ. ನಾವೆಲ್ಲಾ ನಿನ್ನನ್ನು ಪ್ರೀತಿಸ್ತೇವೆ. ಆದರೆ ನಿನ್ನವರು ಅಂತ ಇರೋ ಮನುಷ್ಯರಿಂದ ನಿನಗೆ ಸಿಗೋ ಪ್ರೀತಿ ನಮ್ಮಿಂದ ಸಿಗೋದಿಲ್ಲ. ಅದಕ್ಕೆ ಹೇಳೋದು, ಪ್ರೀತಿಸುವವರು ಇರ್ಬೇಕು ಅಂತ. ಅವಳು ತನಗಿಂತ ಚಿಕ್ಕವನನ್ನು ಪ್ರೀತಿಸಿದ್ದರೆ ಏನಾಯ್ತು? ಪ್ರೀತಿ ಪ್ರೀತಿ ತಾನೇ.? ಪ್ರೀತಿ ಇಂಥ ವಯಸ್ಸಿನವರಿಂದಲೇ ಇದೆ ರೀತಿಯಾಗಿ ಸಿಗಬೇಕು ಅಂತ ಏನಾದರೂ ನಿಯಮವಿದೆಯಾ? ನೋಡು ಪ್ರೀತಿ ಎನ್ನುವದು ಒಂದು ಅನುಭೂತಿ. ಅದನ್ನು ಅನುಭವಿಸಬೇಕು. ಅಲ್ಲದೆ, ಪ್ರೀತಿ ಎನ್ನುವದು ಒಂದು ಕಲೆ ಅದನ್ನು ಮನಸ್ಸಿನಿಂದ ನೋಡಬೇಕು. ಕಣ್ಣಿನಿಂದಲ್ಲ. ಕಣ್ಣಿನಿಂದ ಕೇವಲ ಅಂದವನ್ನು ನೋಡಲು ಮಾತ್ರ ಸಾಧ್ಯ ಪ್ರೀತಿಯನ್ನಲ್ಲ. ಪ್ರೀತಿ ಸಿಗುವದು ತುಂಬಾ ದುರ್ಲಭ. ಅದರಲ್ಲಿ ನಾವು ಪ್ರೀತಿಸುವವರು ನಮಗೆ ಸಿಗುತ್ತಾರೋ ಇಲ್ವೋ. ಆದರೆ ನಮ್ಮನ್ನು ಪ್ರೀತಿಸುವವರು ಸಿಕ್ಕರೆ ಮಾತ್ರ, ಬಿಡಲೇಬಾರದು ಎಂದು ನನ್ನ ಅಭಿಪ್ರಾಯ."*

ಎಂದಾಗ ಅವಳ ಮಾತನ್ನೇ ಗಮನವಿಟ್ಟು ಕೇಳುತ್ತಿದ್ದ ಸುಮಾ, 

*"ಒಂದು ವೇಳೆ ಹುಡುಗಿ ಹುಡುಗನಿಗಿಂತ ದೊಡ್ಡವಳಿದ್ದರೆ?"*

*"ನನ್ನ ಪ್ರಕಾರ ಏನಾಗುತ್ತೆ? ಪ್ರೀತಿಗೆ ವಯಸ್ಸಿದೆಯಾ? ಇಷ್ಟೇ ವಯಸ್ಸಿನವರು ಪ್ರೀತಿಸಬೇಕು ಅಂತ ರೂಲ್ಸ್ ಏನಾದ್ರೂ ಇದೆಯಾ? ಇಲ್ಲವಲ್ಲ. ಪ್ರೀತಿಸುವದು ಪ್ರೀತಿ ಪಡೆದುಕೊಳ್ಳುವದು ಮುಖ್ಯ. ವಯಸ್ಸಲ್ಲ. ಒಂದು ಮಾತು ಹೇಳು ಹಿಂದಿ ಚಲನಚಿತ್ರ ನಟ ಸೈಫ್ ಅಲಿ ಖಾನ್ ಮತ್ತು ಅಮೃತ ಸಿಂಗ್ ಇಬ್ಬರ ವಯಸ್ಸೂ ಸಹ ಗಮನಿಸು ಅವರೂ ಸಹ ನೀನು ಹೇಳಿದಂತೆ ಅಲ್ಲವೇ? ಆದರೂ ಅವರು ಪ್ರೀತಿಸಿದರು. ಈಗ ಬೇರೆಯಾಗಿರುವರು ಅದು ಬೇರೆ ಮಾತು. ಆದರೆ ಮೊದಲು ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತಲ್ವೇ? ಅದಕ್ಕೆ ಹೇಳೋದು ಪ್ರೀತಿ ಕುರುಡು ಅಂತ."**

ಎಂದು ಸಮರ್ಪಕವಾಗಿ ಅದಕ್ಕೆ ವಿವರಣೆ ನೀಡಿದಾಗ, ಸುಮಾ ಅದರಿಂದ ಸಮಾಧಾನಗೊಂಡಳು. ಆದರೆ ಸಮಾಜದ ವಿಷಯವಾಗಿ ಅವಳು ಚಿಂತಿಸತೊಡಗಿದಳು 

*"ಕಾವೇರಿ, ಒಂದು ವೇಳೆ ಈ ರೀತಿಯಾದಲ್ಲಿ ಸಮಾಜದಲ್ಲಿ ಗೊತ್ತಾದರೆ ಹೇಗೆ?"*

*"ಅಯ್ಯೋ ಮಂಕೆ, ಇಂದಿನ ಸಮಾಜಕ್ಕೆ ನಮ್ಮಕಡೆಗೆ ಲಕ್ಷಕೊಡುವ ವ್ಯವಧಾನವಾದರೂ ಎಲ್ಲಿದೆ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿರುತ್ತಾರೆ. ಮತ್ತೊಬ್ಬರ ಕಡೆಗೆ ಲಕ್ಷಕೊಡುವ ಸಮಯ ಯಾರಿಗೂ ಇಲ್ಲ. ನಿಮ್ಮ ಮನೆಯಲ್ಲಿ ಎಷ್ಟು ಜನ ಅಂತ ನನಗೆ ಗೊತ್ತಿಲ್ಲ. ಅಲ್ಲದೆ ನಮ್ಮ ಮನೆಯಲ್ಲಿ ಎಷ್ಟು ಜನ ಇದ್ದೇವೆ ಅಂತ ನಿನಗೆ ಗೊತ್ತಿಲ್ಲ. ಅಂತಹದರಲ್ಲಿ ನೀನು ಹೇಳಿದ ವಿಷಯವನ್ನು ಅಷ್ಟಾಗಿ ಯಾರೂ ಗಮನಿಸುವದಿಲ್ಲ. ಅಲ್ಲದೆ, ಪ್ರೀತಿ ನಮ್ಮ ವಿಷಯ ನಮ್ಮ ವಯಕ್ತಿಕ ವಿಷಯ. ಅದರಲ್ಲಿ ತಲೆ ಹಾಕುವದಕ್ಕೆ ಯಾರಿಗೂ ಅಧಿಕಾರವಿಲ್ಲ. ಬೇರೆಯವರಿಗೆ ಅಧಿಕಾರ ನೀಡಿದರೆ, ಅವರು ನಮ್ಮನ್ನು ತಮ್ಮ ಕುದುರೆಯನ್ನಾಗಿ ಮಾಡಿಕೊಂಡು ನಮ್ಮ ಮೇಲೆ ಸವಾರಿ ಮಾಡುತ್ತಾರೆ. ಅವರ ಕೈಯಲ್ಲಿ ನಮ್ಮ ಜುಟ್ಟನ್ನು ಇಂದಿಗೂ ಕೊಡಬಾರದು. ಅಲ್ಲದೆ, ನ್ ನಾವು ಅವರನ್ನವು ನಮ್ಮ ವಯಕ್ತಿಕ ವಿಷಯಗಳಲ್ಲಿ ಬಿಟ್ಟುಕೊಳ್ಳಬಾರದು. ಒಂದು ವೇಳೆ ಬಿಟ್ಟುಕೊಂಡರೆ ಮಾತ್ರ ನಮ್ಮ ಜೀವನದಲ್ಲಿ ನಾವು ನಾವಾಗಿ ಉಳಿಯುವದಿಲ್ಲ. ಅವರು ಹೇಳಿದಂತೆ ಜೀವನ ನಡೆಸುವದಕ್ಕೆ ನಮಗೆ ಆಗುವದು ಇಲ್ಲ. ಅದಕ್ಕೆ ಸಮಾಜವನ್ನು ಈ ವಿಷಯದಲ್ಲಿ ತರಬೇಡ. ಅದನ್ನು ಅದಕ್ಕೆ ಅಂತ ಇದ್ದ ಸ್ಥಾನದಲ್ಲಿ ಇತ್ತು ಬಿಡು. ನಮ್ಮ ವಯಕ್ತಿಕ ಜೀವನಕ್ಕೂ ಮತ್ತು ಸಮಾಜಕ್ಕೂ ಅಂತರವಿರಲಿ."*

ಎಂದು ದೀರ್ಘವಾಗಿ ಭಾಷಣ ಮಾಡಿದಂತೆ ತನ್ನ ಅನಿಸಿಕೆಯನ್ನು ಹೇಳಿದಾಗ, ಸುಮಾಳಿಗೆ ಒಂದು ವಿಷಯ ಸ್ಪಷ್ಟವಾಯಿತು. ಜೀವನ್ ಒಂದು ವಯಕ್ತಿಕ ವಿಷಯ ಅದನ್ನು ಸಮಾಜದ ಜೊತೆಗೆ ಬೆರೆಸಬಾರದು. ಈ ವಿಷಯದಿಂದ ಅವಳಿಗೆ ಮನಸ್ಸು ತುಂಬಾ ಆಹ್ಲಾದಕರವಾಗಿ ಹಾರಾಡತೊಡಗಿತು. ಅಲ್ಲದೆ ಅವಳು ಮನಸ್ಸಿನಲ್ಲಿ ಇಂದು ತನ್ನ ಮನದಲ್ಲಿಯ ನಿರ್ಧಾರವನ್ನು ಹೇಳಿದರಾಯಿತು ಎಂದು ತೀರ್ಮಾನಿಸಿದಳು. 

ಡ್ಯೂಟಿ ಮುಗಿಸಿಕೊಂಡು ಮನೆಗೆ ಬಂದಳು. ಮನಸ್ಸು ತುಂಬಾ ಪ್ರಫುಲ್ಲವಾಗಿತ್ತು. ಎಲ್ಲ ಕೆಲಸಗಳು ಕೆಲವೇ ನಿಮಿಷದಲ್ಲಿ ಮುಗಿದವು. ದಿನ ನಿತ್ಯ ಮಾಡುತ್ತಿದ್ದ ಕೆಲಸಗಳೆಲ್ಲ ಇಂದು ತುಂಬಾ ಸರಳವಾಗಿ ಯಾವುದೇ ಬೇಸರವಿಲ್ಲದೆ ಮುಗಿದಿದ್ದವು. ಬಹಳ ದಿನಗಳ ನಂತರ ಯಾಕೋ ಸಿಹಿ ತಿನ್ನಬೇಕು ಅನ್ನಿಸಿಕೊಂಡು ತಾನೇ ಕೇಸರಿ ಭಾತ್ ಮಾಡಿಕೊಂಡಳು. ಊಟದ ವೇಳೆಯಲ್ಲಿ ಸ್ಪೂನ್ ತೆಗೆದುಕೊಂಡು ಬಾಯಿಗೆ ಮೊದಲ ತುತ್ತು ಕೇಸರಿ ಭಾತ್ ಹಾಕಿಕೊಳ್ಳುತ್ತಿರುವಾಗ ಒಂದು ವೇಳೆ ಅಭಿ ತನ್ನ ಎದುರಿಗೆ ಇದ್ದಾರೆ, ಅವನಿಗೆ ಮೊದಲು ತುತ್ತು ಹಾಕಿ ಅವನಿಂದ ತಾನು ತುತ್ತು ಹಾಕಿಸಿಕೊಳ್ಳುತ್ತಿದ್ದೆ ಅಂದು ಅಂದುಕೊಂಡಳು. ತನ್ನ ವಿಚಾರ ಧಾರೆಗೆ ತಾನೇ ನಾಚಿಕೊಂಡಳು ಕಲ್ಪನೆ ಮಾಡಿಕೊಳ್ಳುವದರಲ್ಲಿ ಸಹ ಸುಖವಿದೆ. ಕೇವಲ ಕಲ್ಪನೆ ಆದರೂ ಸಹ ಅದು ನಿಜವೆನ್ನಿಸುವಂತೆ ಕಲ್ಪನೆ ಮಾಡಿಕೊಳ್ಳುವದರಲ್ಲಿ ಸುಖ ತುಂಬಾನೇ ಇದೆ. ಹಾಗೆ ತಾನೇ ಏನೇನೋ ಕಲ್ಪನೆ ಮಾಡುತ್ತಾ, ಅವಳು ಸಮಯ ಕಳೆದಳು. 

ರಾತ್ರಿ ಆಯಿತು. ಬೆಡ್ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿದಳು. ಅಭಿ ಆನ್ಲೈನ್ ಗೆ ಬರಲು ಇನ್ನೂ ಸಮಯವಿತ್ತು. ಹಾಗೆ ಚಾವಣಿಯನ್ನು ದಿಟ್ಟಿಸಿ ನೋಡುತ್ತಾ ಮಲಗಿದಾಗ ಪಕ್ಕದ ಮನೆಯ ಮುದುಕ ಹಾಡು ಹಚ್ಚಿದ್ದ. 

*"ತಾರೆಯು ಬಾನಿಗೆ 

ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ

ನೀ ನನ್ನಾ ಬಾಳಿಗೆ

ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ

ನೀ ನನ್ನಲ್ಲಿ ಕಣ್ಣಲ್ಲಿ ಮನದಲ್ಲಿ"*

ಎಂದು ಹಾಡು ಕೇಳುತ್ತಿದ್ದರೆ ಯಾಕೋ ಅವಳಿಗೆ ಗೊತ್ತಿಲ್ಲದೇ ಅವಳ ಮೈ ಎಲ್ಲ ಝಂ ಅಂದಿತು. ಅಭಿ ಇಷ್ಟರಲ್ಲಿ ಆನ್ಲೈನ್ ಗೆ ಬರುವ ಸಮಯವಾಗಿತ್ತು. ಅವನ ದಾರಿಯನ್ನು ಕಾಯುತ್ತ ಕುಳಿತುಕೊಂಡಿದ್ದಳು. 

ರಾತ್ರಿ ಆಯಿತು. ಅಭಿ ಆನ್ಲೈನ್ ಗೆ ಬರುವ ಸಮಯವಾಗುತ್ತಿದ್ದಂತೆ ಅವಳಿಗೆ ಏನೋ ರೋಮಾಂಚನ. ಹೇಳಿಕೊಳ್ಳಲು ಬರಲಾಗದಂತಹ ಭಾವನೆ ಮನಸ್ಸಿನಲ್ಲಿ ಬರತೊಡಗಿತು. ಅದನ್ನು ಹೇಳಲು ಬಾರದು ಅನುಭವಿಸಲುಬಾರದು ಅಂತ ವಿನೂತನವಾದ ಭಾವನೆ. ಹೃದಯವೆಲ್ಲ ಹರುಷದಿಂದ ತೇಲಾಡುತ್ತಿತ್ತು. ಮೈಯೆಲ್ಲಾ ಹಗುರಾಗಿತ್ತು. ಯಾವುದೋ ವ್ಯಕ್ತ ಪಡಿಸಲಾರದ ಸಂತೋಷ ಎದೆಯ ತುಂಬೆಲ್ಲ ತುಂಬಿಕೊಂಡು, ತಾನಿನ್ನೂ 20 ರ ಹರೆಯದ ಹುಡುಗಿಯಂತೆ ತನ್ನನು ತಾನೇ ಭಾವಿಸಕೊಳ್ಳತೊಡಗಿದಳು. ಯಾರೋ ತನ್ನನ್ನು ಬಯಸಿರುವ ವ್ಯಕ್ತಿ ಇಷ್ಟರಲ್ಲಿಯೇ ತನ್ನನ್ನು ಮಾತನಾಡಿಸುವನಿದ್ದಾನೆ. ಮೊದಲ ಬಾರಿಗೆ ಒಬ್ಬ ಗಂಡಸು ವ್ಯಕ್ತಿಯ ಜೊತೆಗೆ ಒಂದು ಹೆಣ್ಣು ಮಾತನಾಡಲು ನಾಚಿಕೆ ಪಡುವಳೋ ಅದೇ ರೀತಿಯಾದ ನಾಚಿಕೆ ಅವಳಿಗೆ ಬರತೊಡಗಿತು. 

   ಸಮಯ ಸರಿಯುತ್ತಿತ್ತು. ಗಡಿಯಾರದ ಕಡೆಗೆ ನೋಡುತ್ತಾ ಸಮಯ ಸರಿದಂತೆಲ್ಲಅವಳ ರೋಮಾಂಚನತೆ ಉತ್ಕರ್ಷಕ್ಕೇರತೊಡಗಿತು. ಬೆಳದಿಂಗಳ ಚಂದ್ರನ ಬೆಳಕಿಗೆ ಸಾಗರದ ಅಲೆಗಳು ಉಕ್ಕುವಂತೆ ಅವಳ ಭಾವನೆಗಳು ಉಕ್ಕಿ ಬರುತ್ತಿದ್ದವು. ಹುಣ್ಣಿಮೆ ಬೆಳದಿಂಗಳ ಕೊಡುವ ಚಂದಿರನಂತೆ ಅಭಿಯನ್ನು ತನ್ನ ಕಲ್ಪನೆಯಲ್ಲಿ ತುಂಬಿಕೊಂಡಳು. ತಂಪಾದ ಸವಿಯಾದ ರಾತ್ರಿ. ಬೆಡ್ ಪಕ್ಕದಲ್ಲಿ ಕಿಟಕಿ ಅದರಿಂದ ತಣ್ಣಗೆ ಸೂಸಿ ಬರುತ್ತಿದ್ದ ತಂಗಾಳಿ ಮೈಗೆ ಹಿತವನ್ನು ನೀಡುತ್ತಿತ್ತು. ಯಾವುದೋ ರೀತಿಯ ಮಧುರ ಅನುಭವ ಅವಳಿಗೆ ಆ ಸೂಸು ಗಾಳಿ ಸೋಕಿದಾಗ ಆಗುತ್ತಿತ್ತು. ಜೊತೆಗೆ ಪ್ರಿಯಕರನ ಆಗಮನದ ದಾರಿ ಕಾಯುತ್ತಿರಬೇಕಾದರೆ, ಅವಳ ಮೊಬೈಲ್ ಸದ್ದು ಮಾಡಿತು. ತೆಗೆದು ನೋಡಿದಾಗ ಅಭಿ ಆನ್ಲೈನ್ ಗೆ ಬಂದಿದ್ದ. 

*"ಹಲೋ ಹೇಗಿದ್ದೀರ?"*

ಎಂದು ಕೇಳಿ ಮೆಸೇಜ್ ಹಾಕಿದ್ದ. ಅದನ್ನು ನೋಡಿದ ಅವಳು ಮನದಲ್ಲಿಯೇ ನಾಚುತ್ತ 

*"ಚೆನ್ನಾಗಿದ್ದೀನಿ. ನೀವು ಹೇಗಿದ್ದೀರ?"*

ಎಂದು ಬರೆದು ಅವನಿಗೆ ಕಳುಹಿಸಿದಳು. ಮೊದಲ ಬಾರಿಗೆ ಅವಳು ಅವನನ್ನು ಹೇಗಿದ್ದೀರಿ ಎಂದು ವಿಚಾರಿಸಿದ್ದಳು. ಅದನ್ನು ಓದಿದ ಅಭಿ

*"ಏನು ಎಂದೂ ಇಲ್ಲದ್ದು ಇವತ್ತು ವಿಶೇಷ ಕಾಳಜಿ ಮಾಡುತ್ತಿರುವಿರಿ.?"*

ಎಂದು ಪ್ರಶ್ನಿಸಿ ಬರೆದು ಹಾಕಿದಾಗ ಅವಳು

*"ಹಾಂ. ನಿಮಗೆ ಹೇಗೆ ಗೊತ್ತಾಯಿತು? ಯಾಕೆ ಮಾಡಬಾರದೇ?"*

*"ಹಾಗೇನಿಲ್ಲ, ಪ್ರತಿ ದಿನ ನೀವು ಚಾಟ್ ಮಾಡೋ ರೀತಿ ಇಂದು ನೀವು ಬರೆದ ರೀತಿ ತುಂಬಾ ವ್ಯತ್ಯಾಸ ಇದೆ. ಅಲ್ಲದೆ, ಇವತ್ತಿನ ನಿಮ್ಮ ಅಕ್ಷರಗಳನ್ನು ನೋಡಲಾಗಿ ಯಾಕೋ ನನಗೆ ನಿಮಗೆ ನನ್ನ ಮೇಲೆ ತುಂಬಾ ಅಕ್ಕರೆ ಬಂದಂತೆ ಕಾಣುತ್ತಿದೆ"*

ಎಂದು ಬರೆದು ಕಳುಹಿಸಿದ. ಅದನ್ನು ಓದಿದ ಸುಮಾ, ಈ ವ್ಯಕ್ತಿಗೆ ತನ್ನ ಶಬ್ದಗಳಿಂದ ತನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ, ತುಂಬಾ ಕ್ಲವೆರ್ ಇದ್ದಾನೆ ಈಆ ಎಂದುಕೊಂಡು,

*"ಅದಕ್ಕೆ ನೀವೇ ಕಾರಣರಲ್ಲವೇ?"*

*"ಹೌದಾ? ನಾನು ಹೇಗೆ ಕಾರಣ? ಸ್ವಲ್ಪ ಬಿಡಿಸಿ ಹೇಳಬಾರದೇ?"*

*"ಹೋಗಿ, ನೀವು ತುಂಬಾ ತುಂಟತನ ಮಾಡ್ತೀರಾ ಮಗುವಿನ ಹಾಗೆ"*

*"ಹೌದಾ? ಹಾಗಾದರೆ ನಾನಿನ್ನೂ ಮಗು ಅಂತ ತಿಳಿದುಕೊಂಡು ನನಗೆ ತಿಳಿಸಿ ಹೇಳಿ ಮತ್ತೆ"*

*"ಮೊದಲು ಲವ್ ಲೆಟರ್ ಬರೆಯಲು ಹೇಳಿದವರಾರು?"*

*"obviously, ನಾನೇ"*

*"ನೀವು ಬರೆಯಲು ಹೇಳಿದಿರಿ, ನಾನು ಮೊದಲು ಬರೆಯಲು ಕುಳಿತಾಗ ಏನು ಬರೆಯಬೇಕು ಅಂತ ಮಾತ್ರ ತಿಳಿಯಲಿಲ್ಲ. ನಿಮ್ಮ ಮೇಲಿನ ಹಠಕ್ಕೆ ಬರೆದು ತೋರಿಸಲು ಕುಳಿತೆ. ಹಾಗೆ ಬರೆಯುತ್ತ ಬರೆಯುತ್ತ ನನ್ನ ಮನಸ್ಸಿನ ನಿಜವಾದ ವಿಷಯ ಬರೆದೂ ಬಿಟ್ಟು ನಿಮಗೆ ಅದನ್ನು ಕಳುಹಿಸಿಯೂ ಬಿಟ್ಟೆ. ಮೊದಮೊದಲು ಇದು ನನ್ನ ನಿಮ್ಮ ನಡುವೆ ಪಂದ್ಯ ಅಂತ ನಾನು ತಿಳಿದುಕೊಂಡಿದ್ದೆ. ಆದರೆ ನಂತರದಲ್ಲಿ ನನಗೆ ಗೊತ್ತಾಗಿದ್ದು, ಲವ್ ಲೆಟರ್ ದಲ್ಲಿ ಬರೆದ ವಿಷಯ ಕೇವಲ ಪಂದ್ಯಕ್ಕಾಗಿ ಅಲ್ಲ, ನನ್ನ ಮನಸ್ಸಿನ ಪದಗಳನ್ನೇ ಅದರಲ್ಲಿಯವ ಪ್ರತಿ ಶಬ್ದದಲ್ಲಿ ಅಡಗಿದೆ ಅಂತ"*

ಎಂದು ಬರೆದು ಕಳುಹಿಸಿ, ಅವನ ಪ್ರತಿಕ್ರಿಯೆಗಾಗಿ ಕಾಯುತ್ತ ಕುಳಿತಳು. ಸ್ವಲ್ಪ ಹೊತ್ತು ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತ ಅವಳಿಗೆ ಪ್ರತಿ ಸೆಕೆಂಡ್ ಮುಳ್ಳಿನ ಮೇಲೆ ನಿಂತಂತಹ ಅನುಭವ. ಅವನು ತನ್ನ ಮಾತುಗಳನ್ನು ಯಾವರೀತಿಯಾಗಿ ತೆಗೆದುಕೊಳ್ಳುತ್ತಾನೋ ಎಂಬ ಭಯ. ಅಲ್ಲದೆ, ಅವನೇನಾದರೂ ತನ್ನ ಜೊತೆಗೆ ಪ್ರಾಕ್ಟಿಕಲ್ ಜೋಕ್ ಮಾಡಿದರೆ ತಾನು ಫೂಲ್ ಆಗುವದರಲ್ಲಿ ಸಂಶಯವಿಲ್ಲ. ಫೂಲ್ ಆದ್ರೆ ಚಿಂತೆಯಿಲ್ಲ. ಆದ್ರೆ ಹೃದಯ ಮಾತ್ರ ಒಡೆದು ಹೋಗುತ್ತದೆ. ಅದನ್ನು ತಾಳಿಕೊಳ್ಳುವ ಶಕ್ತಿ ತನ್ನ ಹತ್ರ ಇಲ್ಲ, ಎಂದು ಚಿಂತಿಸುತ್ತಿರುವಾಗ, ಅಭಿ,

*"ನೀವು ತಪ್ಪು ತಿಳಿಯುವದಿಲ್ಲವೆಂದರೆ, ನೀವು ಒಪ್ಪಿಕೊಂಡರೆ ಮೆಸೆಂಜರ್ ದಿಂದ ನಿಮಗೆ ಕಾಲ್ ಮಾಡಬುದೇ?"*

ಅವನು ಹಾಗೆ ಕೇಳುತ್ತಿದ್ದಂತೆ, ಅನಿರೀಕ್ಷಿತವಾದ ಅವನ ಪ್ರಶ್ನೆಯಿಂದ ಅವಳು ನಡುಗತೊಡಗಿದಳು. ಅಭಿ ಹಾಗೆ ಕೇಳುತ್ತಾನೆ ಎಂದು ಅವಳು ಅಂದುಕೊಂಡಿರಲಿಲ್ಲ. ಅವನೇನೋ ಮೆಸೇಜ್ ಕಳುಹಿಸಿ ತನ್ನ ಉತ್ತರ ಹೇಳಬಹುದು ಎಂದುಕೊಂಡಿದ್ದ ಅವಳಿಗೆ ಅವನು ಕಾಲ್ ಮಾಡಲೇ ಎಂದು ವಿನಂತಿ ಪೂರ್ವಕವಾಗಿ ಬರೆದು ಕಳುಹಿಸಿದಾಗ, ಅವಳಿಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. ಆ ಪ್ರಶ್ನೆಗೆ ಅವಳು ಮಾನಸಿಕವಾಗಿ ತಯಾರಾಗಿರಲಿಲ್ಲ. ಧುತ್ತನೆ ಎದುರಾದ ಪ್ರಶ್ನೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಮಾತ್ರ ಅವಳಿಗೆ ತಿಳಿಯದೆ ಗಲಿಬಿಲಿಗೊಂಡಳು. ಅವಳಿಂದ ಬಹಳ ಹೊತ್ತು ಉತ್ತರ ಬರದಿದ್ದರಿಂದ, ಅಭಿ ಮತ್ತೆ ಅವಳಿಗೆ ಮೆಸೇಜ್ ಮಾಡಿದ.

*"ಯಾಕೆ ಏನಾಯ್ತು? ನಾನು ನಿಮಗೆ ಕಾಲ್ ಮಾಡುವದು ಬೇಡವೇ? ನೀವು ಒಪ್ಪಿಕೊಂಡರೆ ಮಾತ್ರ ಕಾಲ್ ಮಾಡುವೆ ಅಂತ ಹೇಳಿದ್ದೇನೆ. ನಿಮ್ಮ ಉತ್ತರ ಏನು? ಬೇಡ ಅಂದರೆ ನಾನು ಒತ್ತಾಯ ಮಾಡುವದಿಲ್ಲ."*

ಎಂದು ಬರೆದು ಕಳುಹಿಸಿದಾಗ, ಅದನ್ನು ಓದಿದ ಸುಮಾ, 

*"ಹಾಗೇನಿಲ್ಲ, ನಾನು ನಿಮ್ಮಿಂದ ಈ ಪ್ರಶ್ನೆ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕೆ ಏನು ಉತ್ತರ ಕೊಡಬೇಕು ಅಂತ ಯೋಚನೆಯಲ್ಲಿದ್ದೆ"*

*"ಹೌದಾ, ಹಾಗಾದರೆ ಏನು ನಿಮ್ಮ ಉತ್ತರ?"*

*"ಅದನ್ನು ಇಲ್ಲಿಯೇ ಮೆಸೇಜ್ ಮುಖಾಂತರ ಹೇಳಿದರೆ ಆಗಯುವದಿಲ್ಲವೇ?"*

*"ಅಂದರೆ, ನನಗೆ ಕಾಲ್ ಮಾಡುವದು ಬೇಡ ಅಂತ ಪರೋಕ್ಷವಾಗಿ ಹೇಳ್ತಿದ್ದೀರಾ ಅಂದ ಹಾಗಾಯಿತು."*

*"ಹಾಗಲ್ಲ, ಇಲ್ಲಿ ಹೇಳಿದರೆ ನಡೆಯುವದಿಲ್ಲವೇ ಎಂದು ಕೇಳುತ್ತಿದ್ದೇನೆ"*

*"ಕೆಲವೊಂದು ಭಾವನೆಗಳನ್ನು ಅಕ್ಷರ ರೂಪದಲ್ಲಿ ಕಳುಹಿಸಿದರೆ ಅರ್ಥವಾದರೂ ಸಹ, ಧ್ವನಿ ಕೇಳುತ್ತ ಮಾತಾಡುತ್ತ ಭಾವನೆಗಳನ್ನು ಹೇಳಿದರೆ ಅದಕ್ಕೆ ಒಂದು ನಿಜವಾದ ಅರ್ಥ ಬರುತ್ತದೆ ಅಂತಾ ನನ್ನ ಭಾವನೆ"*

*"ಅಂದರೆ ನೀವು ನಿಮ್ಮ ಭಾವನೆಯನ್ನು ಮಾತಿನ ಮುಖಾಂತರ ನನಗೆ ಹೇಳಲು ಬಯಸಿದ್ದೀರಿ ಅಂದ ಹಾಗಾಯಿತು."*

*"ಯಾಕೆ ತಪ್ಪಾ? ಮಾತಿನ ಮೂಲಕ ನಾನು ಹೇಳಬಾರದೇ?"*

*"ಇದಕ್ಕೆ ನನ್ನ ಹತ್ತಿರ ಉತ್ತರವಿಲ್ಲ."*

*"ನನ್ನ ಮಾತು ಕೇಳಿದರೆ ಉತ್ತರ ತಾನಾಗೇ ಬರುತ್ತೆ"*

*"ನಂಗೇನು ಗೊತ್ತಾಗುತ್ತಿಲ್ಲ"*

*"ಗೊತ್ತಾಗುವದು ಬೇಡ, ಅನುಭವಕ್ಕೆ ಬಂದರೆ ಸಾಕು. ಅದಕ್ಕೆ ನಾನು ಕಾಲ್ ಮಾಡಲು ನಿಮ್ಮ ಒಪ್ಪಿಗೆ ಕೇಳಿಕೊಂಡಿದ್ದು"*

ಅವನು ಇಷ್ಟು ಬೇಡಿಕೊಳ್ಳುತ್ತಿರುವಾಗ ಅವನಿಗೆ ಬೇಡ ಅಂತ ಹೇಳಲು ಅವಳಿಗೆ ಸಾಧ್ಯವಾಗಲಿಲ್ಲ. ಅಲ್ಲದೆ, ಅವನು ಮಾತಿನಲ್ಲಿ ಏನೋ ಹೇಳುತ್ತೇನೆ ಅಂತ ಹೇಳಿದ್ದ, ಏನು ಹೇಳಬಹುದು? ಹೇಗೆ ಹೇಳಬಹುದು? ಎಂಬ ಕುತೂಹಲ ಅವಳಿಗೆ ಇತ್ತು. ಅವಳ ಮಾಡುವೆ ಹಿರಿಯರ ಇಚ್ಛೆಯ ಪ್ರಕಾರವಾಗಿತ್ತು. ಹೀಗಾಗಿ ಲವ್ ಫೀಲಿಂಗ್ ಅವಳಿಗೆ ಮದುವೆಯಾದಮೇಲೆ ಬಂದಿತ್ತು. ಆದರೆ ಅವಳ ಗೆಳತಿಯರು ಸಾಕಷ್ಟು ಜನ ಲವ್ ಮಾಡಿ ಅದರ ಫೀಲಿಂಗ್ ಇವಳ ಮುಂದೆ ಹೇಳಿಕೊಂಡಾಗ, ಅವಳಿಗೆ ಏನೋ ಒಂದು ತರಹ ರೋಮಾಂಚನವಾಗುತ್ತಿತ್ತು. ಆ ಎಲ್ಲ ವಿಷಯಗಳು ಅವಳ ನೆನಪಿಗೆ ಬಂದವು. ಅಲ್ಲದೆ, ಅವನು ಕೇವಲ ಫೋನ್ ಮಾಡಲು ಮಾತ್ರ ಕೇಳುತ್ತಿದ್ದಾನೆ. ಭೇಟಿಯಾಗಲು ಅಲ್ಲವಲ್ಲ ಎಂದುಕೊಂಡು, ತನ್ನ ನಡುಗುವ ಕೈಗಳಿಂದಲೇ ಅವನಿಗೆ 

*"ಆಯ್ತು ಮಾಡಿ"*

ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಿದಳು. ಅದಷ್ಟೇ ಟೈಪ್ ಮಾಡುವಾಗ ಅವಳ ಕೈ ನಡುಗತೊಡಗಿತು. ಮೆಸೇಜ್ ಕಳುಹಿಸಿದ್ದಳು. ಅದನ್ನು ಓದಿದ ಅಭಿ,

*"ಎರಡು ನಿಮಿಷ ಮಾಡ್ತೀನಿ ವೇಟ್ ಮಾಡಿ"*


13

ಎಂದು ಪ್ರತ್ಯುತ್ತರ ನೀಡಿದ. ಹಾಗೆ ತನ್ನ ಕೈಯಲ್ಲಿ ಅವಳು ಮೊಬೈಲ್ ಹಿಡಿದುಕೊಂಡಿದ್ದಳು. ಅವನ ಮಾತಿಗೆ, ಅವಳಿಗೆ ಮೈ ನಡುಗುತ್ತಿತ್ತು. ತಾನು ಕೈ ಹಿಡಿದ ಗಂಡನನ್ನು ಪ್ರೀತಿಸಿದರೂ ಅದರ ಅನುಭವವೇ ಬೇರೆ ಈಗ ಆಗುತ್ತಿರುವ ಅನುಭವವೇ ಬೇರೆ. ಏನೋ ಭಯ, ಅದರಲ್ಲಿಯೇ ಹಿತ ಸಹ ಅನ್ನಿಸುತ್ತಿತ್ತು. ಆದರೆ ಗಂಡನ ಪ್ರೀತಿ ನೆನಪಾಗಿ ಅವಳಿಗೆ ಒಂದು ಕ್ಷಣ ತಾನು ತಪ್ಪು ಮಾಡುತ್ತಿರುವೆ ಅಂತ ಅನ್ನಿಸತೊಡಗಿದರೂ ಸಹ ಅಲ್ಲಿಯೇ ಟೇಬಲ್ ಮೇಲೆ ಇದ್ದ ಅವನ ಫೋಟೋ ನೋಡಿದಾಗ ಅವನು ನಗುಮುಖದಿಂದ, ನಾನಂತೂ ನಿನ್ನ ಹತ್ತಿರವಿಲ್ಲ, ನಿನ್ನನ್ನು ಪ್ರೇಮಿಸುವವನಿಗೆ ಬೇಡ ಅಂತ ಯಾಕೆ ಅನ್ನುತ್ತಿ? ಎಂದು ಹೇಳಿದಂತಾಯಿತು. ಅದು ಕನಸೋ ಭ್ರಮೆಯೋ ಅಂತ ಅವಳಿಗೆ ಒಂದೂ ಗೊತ್ತಾಗಲಿಲ್ಲ. ಹಾಗೆ ತನ್ನ ಗಂಡನ ಫೋಟೋ ಕಡೆಗೊಮ್ಮೆ ಮತ್ತೊಮ್ಮೆ ಮೊಬೈಲ್ ಕಡೆಗೆ ನೋಡುತ್ತಾ ಸುಮ್ಮನೆ ಕುಳಿತಳು. ಅಷ್ಟರಲ್ಲಿ ಮೊಬೈಲ್ ರಿಂಗ್ ಆಯಿತು. ಅದನ್ನು ನೋಡುತ್ತಲೇ ಸ್ಕ್ರೀನ್ ಮೇಲೆ ಅಭಿಯ ಮೆಸೆಂಜರ್ ದಿಂದ ಅವನ ಕಾಲ್ ಬರುತ್ತಿತ್ತು. ಅದನ್ನು ನೋಡುತ್ತಲೇ ಅವಳ ಹಣೆಯ ಮೇಲೆ ಬೆವರು ಬಂದಿತು, ಕೈಗಳು ನಡುಗತೊಡಗಿದವು. ಹೊರಗಿನಿಂದ ಬಂದ ತಂಪಾದ ಗಾಳಿ ಅವಳ ಮುಂಗುರುಳನ್ನು ಹಾರಾಡುವಂತೆ ಮಾಡಿತು. ಎದೆ ಬಡಿತ ಜೋರಾಯಿತು 

   ಹಾಗೆ ಅವಳು ನಡುಗುವ ಕೈಗಳಿಂದ ಸ್ಕ್ರೀನ್ ಮೇಲೆ ತನ್ನ ಬೆರಳನ್ನು ಸವರಿ, ಕಾಲ್ ಸ್ವೀಕರಿಸಿ, ಹಾಗೆ ಫೋನ್ ತನ್ನ ಕಿವಿಗೆ ಇಟ್ಟುಕೊಂಡಳು. 

    ಅವಳು ಸುಮ್ಮನೆ ತನ್ನ ಕಿವಿಗೆ ಫೋನ್ ಹಿಡಿದುಕೊಂಡಿದ್ದಳು. ಅತ್ತಲಿಂದಲೂ ಸಹ ಯಾವುದೇ ಧ್ವನಿ ಇರಲಿಲ್ಲ. ಎಲ್ಲಿಯಾದರೂ ನೆಟ್ವರ್ಕ್ ಪ್ರಾಬ್ಲಮ್ ಆಗಿ ಅತ್ತಕಡೆಯಿಂದ ಧ್ವನಿ ಕೇಳುತ್ತಿಲ್ಲವೇ ಎಂದು ಅವಳು ಕಿವಿಗೆ ಹಿಡಿದ ಫೋನ್ ಮುಖದ ಎದುರಿಗೆ ಹಿಡಿದು, ನೆಟ್ವರ್ಕ್ ಸರಿಯಾಗಿ ಇದೆ ಎಂದು ಖಾತ್ರಿ ಮಾಡಿಕೊಳ್ಳುತ್ತಿರುವಷ್ಟರಲ್ಲಿಯೇ ಅತ್ತಕಡೆಯಿಂದ 

*"ಫೋನ್ ನಿಮ್ಮ ಕಿವಿ ಹತ್ತಿರವೇ ಇರಲಿ. ಹಿತವಾಗಿದೆ ನಿಮ್ಮ ಕಿವಿಯೋಲೆಯ ಸದ್ದು"*

ಎಂದು ಒಂದು ಗಂಡಸಿನ ಮಧುರವಾದ ಧ್ವನಿ ಹಿತವಾಗಿ ಬಂದು ಅವಳ ಕಿವಿಗೆ ಅಪ್ಪಳಿಸಿತು. ಆ ಧ್ವನಿಯನ್ನು ಕೇಳುತ್ತಿದ್ದಂತೆ ಸುಮಾಳಿಗೆ ಏನೋ ಹಿತವಾದ ಫೀಲಿಂಗ್ ಆಗತೊಡಗಿತು. ನಿಧಾನವಾಗಿ ಫೋನ್ ಕಿವಿಗೆ ಹಿಡಿದುಕೊಂಡೆ, ಸಾವಕಾಶವಾಗಿ ತನ್ನ ಬೆನ್ನನ್ನು ದಿಂಬಿಗೆ ಆನಿಸಿಕೊಂಡು ಕುಳಿತಳು. ಅವನ ಧ್ವನಿಯಲ್ಲಿ ಮಾಂತ್ರಿಕ ರೀತಿಯ ತರಂಗಗಳು ಇವೆ ಅಂತ ಅವಳಿಗೆ ಅನ್ನಿಸತೊಡಗಿತು. ಯಾರನ್ನಾದರೂ ಒಂದೇ ಮಾತಿನಲ್ಲಿ ವಶೀಕರಣ ಮಾಡುವಂಥ ಧ್ವನಿ. ಬಹಳ ಜನ ಗಂಡಸರಿಗೆ ಆ ರೀತಿಯ ಧ್ವನಿ ಇರುವದಿಲ್ಲ. ಕೆಲವೇ ವ್ಯಕ್ತಿಗಳು ತಮ್ಮ ಧ್ವನಿಯ ಮುಖಾಂತರವಾಗಿ, ಎಲ್ಲರನ್ನೂ ವಶ ಮಾಡಿಕೊಳ್ಳಬಹುದಾದ ತಾಕತ್ತು ಹೊಂದಿರುತ್ತಾರೆ. ಹಾಗೆ ಕೇವಲ ಧ್ವನಿ ಒಂದಿದ್ದರೆ ಸಾಲದು, ಪ್ರತಿ ಮಾತಿನಲ್ಲೂ ಸಹ ಹಾವ ಭಾವಗಳ ಏರಿಳಿತ ಶಬ್ದ ಉಚ್ಚಾರಣೆ ಒಂದು ಕಲೆ. ಅಮಿತಾಭ್ ಬಚ್ಚನ್, ನಾನಾ ಪಾಟೇಕರ್, ರಾಜ್ ಕುಮಾರ್ ಇತ್ಯಾದಿ ಚಿತ್ರ ನಟರು ಕೇವಲ ತಮ್ಮ ಧ್ವನಿಯಿಂದಲೇ ಇಡೀ ಚಿತ್ರವನ್ನು ಯಶಸ್ವಿ ಮಾಡುವದರಲ್ಲಿ ಪ್ರಮುಖರು. ಅಂತಹ ಧ್ವನಿ ಇದ್ದವರು ತುಂಬಾ ಕಡಿಮೆ. 

ಅಭಿ ಗಂಭೀರವಾಗಿ ಮಾತನಾಡಿದರೂ ಸಹ, ಅವನ ಮಾತಿನಲ್ಲಿ ಗಂಭೀರತೆ ಇದ್ದರೂ ಸಹ ಅವನ ಆಡಿದ ವಾಯ್ಸ್ ಟೋನ್ ಗಮನಿಸಿದಾಗ ಅದನ್ನು ಕೇಳಿದ ಸುಮಾಳಿಗೆ ಒಂದು ಹಿತವಾದ ಭಾವನೆ ಆಗಿತ್ತು. ಚಳಿಗಾಲದಲ್ಲಿ ತನಗೆ ಎಲ್ಲಿಂದಲೋ ಬಿಸಿಯಾದ ಹಿತವಾದ ಗಾಳಿ ಬಡಿದ ರೀತಿಯಲ್ಲಿ ಅವಳಿಗೆ ಅನುಭವವಾಯಿತು. ಅವನ ಮಾತು ಕೇಳಿದ ಅವಳು ಅವನು ತುಂಬಾ ಸೂಕ್ಷ್ಮ ಅಂತ ಅಂದುಕೊಂಡಳು. ಯಾಕೆಂದರೆ, ತನ್ನ ಕಿವಿಯೋಲೆ ಘಂಟೆಯ ರೀತಿಯಲ್ಲಿ ಜೋತಾಡುತ್ತಿದ್ದವು. ಅವಳು ಫೋನ್ ತನ್ನ ಕಿವಿಗೆ ಹಚ್ಚಿಕೊಳ್ಳುವಾಗ, ಅದರ ಸಪ್ಪಳ ಕೇಳಿಯೇ ಅವನು ಆ ರೀತಿಯಾಗಿ ಹೇಳಿರಬೇಕಾದರೆ, ಅವನು ತುಂಬಾ ಸೂಕ್ಷ್ಮಮತಿ ಇರಲೇಬೇಕು ಅಂತ ನಿರ್ಧಾರಕ್ಕೆ ಬಂದಳು. ಅವನಷ್ಟೇ ತಗ್ಗಿದ ಧ್ವನಿಯಲ್ಲಿ 

*"ಹೇಗಿದ್ದೀರಿ?"*

ಎಂದು ಅವನನ್ನು ಕೇಳಿದಳು. ಅದನ್ನು ಕೇಳಿದ ಅಭಿ ದೀರ್ಘ ಉಸಿರು ತೆಗೆದುಕೊಂಡ ಸಪ್ಪಳ ಅವಳಿಗೆ ಕೇಳಿಸಿತು. 

*"ಇಷ್ಟು ಹೊತ್ತು ಹೇಗಿದ್ದೇನೋ ಗೊತ್ತಿಲ್ಲ, ಆದರೆ ಈಗ ಮಾತ್ರ ನನಗೆ ಅನ್ನಿಸುತ್ತಿದೆ ಅದೇನೆಂದರೆ ನಾನು ಹಾಲಿನಲ್ಲಿ ಕರ್ಪೂರ ಬೆರೆಸಿ ಬೆಳದಿಂಗಳನ್ನು ಕೂಡಿಸಿ ಆದ ಸ್ವರ್ಗದಂತಹ ಹಿಮಪರ್ವತದ ಮೇಲೆ ಇದ್ದೇನೆ "*

ಅವನ ಭಾಷಾ ಪಾಂಡಿತ್ಯ ಕೇಳಿದ ಅವಳು ಒಂದು ಕ್ಷಣ ದಂಗಾದಳು. ಇಂದಿನ ಕಾಲದಲ್ಲಿ ಇಂತಹ ಭಾಷ ಪಾಂಡಿತ್ಯ ಇರುವವರು ವಿರಳ. ಅಂತಹದರಲ್ಲಿ ಈತ ಈ ರೀತಿಯಾಗಿ ಹೇಳುತ್ತಿರಬೇಕಾದರೆ, ಇವನು ಸಾಮಾನ್ಯದವನಲ್ಲ, ಎಂದುಕೊಂಡು

*"ಕವಿತ್ವ ತುಂಬಾ ಚನ್ನಾಗಿದೆ"*

ಎಂದು ಉತ್ತರಿಸಿದಳು. ಅದಕ್ಕೆ ಅವನು ಮೆಲುವಾಗಿ ನಕ್ಕು

*"ನಿಮಗೆ ನನ್ನ ಮಾತಿನಿಂದ ಕವಿತ್ವ ಅಂತ ಅನ್ನಿಸ್ತಾ ಇದೆ. ಆದರೆ ನಿಮ್ಮ ಒಲೆಯ ಸದ್ದು ಕೇಳಿದ ಕೂಡಲೇ ನಾನು ಯಾವ ರೀತಿಯ ನಶೆಯಲ್ಲಿದ್ದೇನೆ ಅಂತಾ ಮಾತ್ರ ನಿಮಗೆ ಗೊತ್ತಾಗೊಲ್ಲ, ಅದನ್ನು ಹೇಳಿದರೆ ಬರುವದಿಲ್ಲ ಅನುಭವಿಸಬೇಕು ಅಷ್ಟೇ"*

*"ಹೌದಾ?"*

ಎಂದು ಒಂದು ರೀತಿಯ ಚಕಿತಳಾಗಿ ಸುಮಾ ಅವನನ್ನು ಕೇಳಿದಳು. 

*"ಚಲುವಾದ ಸಖಿಯೇ ತಂಗಾಳಿಗೆ ಹೇಳಿ ಕಳಿಸಿರುವೆ

ನಿನ್ನ ಬಳಿ ಬಂದು ನಿನ್ನಂದವ ಹೊಗಳಲು 

ನನ್ನ ಮನದಾಳದ ಮಾತುಗಳೆನ್ನವನ್ನು ನಿನಗೆ ತಿಳಿಸಲೆಂದು 

ಆದರೆ, ತಂಗಾಳಿಯು ಮರಳಿ ಬರುವಂತೆ ಕಾಣುತಿದೆ

ನಿನ್ನಂದವ ಹೋಗಲು ಪದಗಳು ಸಾಲದಾದವು ಎನ್ನುತಿದೆ"*

ಎಂದು ಹೇಳಿ ಸುಮ್ಮನಾದ. ಕೂಡಲೇ ಅವನ ಪದ್ಯ ರೂಪದ ಮಾತನ್ನು ಕೇಳಿದ ಸುಮಾ ಆಗೇ ಕಣ್ಣು ಮುಚ್ಚಿಕೊಂಡು ಇನ್ನೊಮ್ಮೆ ಅದನ್ನು ಅವನ ಬಾಯಿಂದ ಕೇಳಬೇಕೆನ್ನಿಸಿತು. 

*"ಕವಿತ್ವ ತುಂಬಾ ಚನ್ನಾಗಿದೆ. ಎಲ್ಲಿ ಇದನ್ನೇ ಪಡೆದುಕೊಂಡ್ರಿ?"*

*"ಯಾವಾಗ್ಲೋ ಓದಿದ್ದ ನೆನಪು. ಹಾಗೆ ನಿಮ್ಮ ಧ್ವನಿ ಕೇಳಿ ನೆನಪಾಯಿತು ಹೇಳಿದೆ"*

*"ಹೌದಾ? ಕೇವಲ ನನ್ನ ಧ್ವನಿ ಕೇಳಿ ಈ ರೀತಿಯಾದರೆ ನನ್ನನ್ನು ನೋಡಿದರೆ ಹೇಗೆ ಯಾವರೀತಿ ನಿಮ್ಮಿಂದ ಮಾತು ಬರಬಹುದು ಅಂತ ತಿಳ್ಕೊಳ್ಳಬಹುದಾ?"*

ಎಂದು ಕೇಳಿದಳು. ಹಾಗೆ ಅವಳು ಅವನಿಗೆ ಕೇಳುತ್ತಿರುವಾಗ ಇಷ್ಟು ಹೊತ್ತು ಅವಳ ಮನದಲ್ಲಿದ್ದ ಅಂಜಿಕೆ, ಗಾಬರಿ, ಎಲ್ಲ ಮಾಯವಾಗಿ, ತಾನೇನೋ ಯಾವುದೋ ದೇಶದ ರಾಣಿಯ ಹಾಗೆ ಫೀಲಿಂಗ್ ಬರತೊಡಗಿತ್ತು. 

ಅವಳ ಮಾತನ್ನು ಕೇಳಿದ ಅಭಿ,

*"ಹಜಾರೊ ಕ್ವಾಯಿಷ್ ಐಸೆ ಕಿ 

ಹರ್ ಕ್ವಾಯಿಷ ಫೆ ದಂ ನಿಕಲೆ

ಬಹುತ್ ನಿಕಲೆ ಮೇರೇ ಅರಮಾನ್

ಲೇಕಿನ್ ಫಿರ್ ಭೀ ಕಮ್ ನಿಕಲೆ"*

ಈ ಶಾಯರಿಯನ್ನು ಅವನ ಬಾಯಿಂದ ಕೇಳಿದ ಸುಮಾ ದಂಗಾದಳು. ಅವನಾಡಿದ ಪ್ರತಿ ಶಬ್ದದಲ್ಲಿ ಪರಿಪೂರ್ಣತೆ ಪರಿಪಕ್ವತೆ ಎದ್ದು ಕಾಣುತ್ತಿತ್ತು. ಹೆಚ್ಚಾಗಿ ಹಿಂದಿ ಭಾಷೆ ಕನ್ನಡದವರು ಮಾತನಾಡುವಾಗ ಮಾತನಾಡುವ ರೀತಿಯಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾಗಿ, ಉಚ್ಚಾರಣೆ ಪೂರ್ತಿಯಾಗಿ ಸರಿಯಾಗಿ ಬರುವದಿಲ್ಲ. ಅಲ್ಲದೆ, ಶಾಯರಿ ಹೇಳುವಾಗ ಶಾಯರಿಗಿಂತ ಮುಖ್ಯವಾಗಿ, ಹೇಳುವವನ ರೀತಿ ತುಂಬಾ ಮುಖ್ಯವಾಗಿರುತ್ತದೆ. ಹೇಳುವ ರೀತಿಯಲ್ಲಿ ಭಾವನೆಗಳು ಬರುವಂತೆ ಮತ್ತು ಅವನ ಮಾತುಗಳು ಮನಸ್ಸಿಗೆ ನಾಟುವಂತೆ ಪರಿಕಲ್ಪಿಸಿಕೊಂಡು ಹೇಳುವದು ಒಂದು ಕಲೆ. ಅದೇ ರೀತಿಯಾಗಿ ಅಭಿ ಮಿರ್ಜಾ ಗಾಲಿಬನ ಶಾಯರಿಯನ್ನು ಅವಳಿಗೆ ಹೇಳಿದಾಗ ಅದನ್ನು ಕೇಳಿದ ಅವಳು ಅಚ್ಚರಿಗೊಂಡಿದ್ದಳು. 

ಅವಳಿಗೆ ಅಭಿಯ ಮುಂದೆ ತಾನು ಏನೂ ಅಲ್ಲ ಅಂತ ಅನ್ನಿಸತೊಡಗಿತು. ನಿಧಾನವಾಗಿ 

*"ಈ ರೀತಿಯಾಗಿ ಶಾಯರಿ ಹೇಳುವದು ನೀವು ಎಲ್ಲಿ ಕಲಿತಿರಿ? ಇಲ್ಲಿಯವರಿಗೆ ಈ ರೀತಿಯಾಗಿ ಹೇಳಲು ಬರುವದಿಲ್ಲ."*

ಈ ಮಾತಿಗೆ ಅವನು ನಗುತ್ತ

*"ಸರಿಯಾಗಿ ಕಂಡು ಹಿಡಿದಿರಿ. ನಾನು ಡೆಲ್ಲಿಯಲ್ಲಿ ಇದ್ದಾಗ ಕಲಿತದ್ದು. ಅಲ್ಲಿ ಸಾಕಷ್ಟು ಕಡೆ ಮೆಹಫಿಲ್ ನಡಿತಾ ಇದ್ವು ಅಲ್ಲಿ ಹೋಗುತ್ತಿದ್ದೆ. ಅದನ್ನು ನೋಡುತ್ತಾ ನೋಡುತ್ತಾ ಕಲಿತುಕೊಂಡೆ"*

*"ಹಾಗಾ, ಸರಿ. ಇನ್ನೊಂದು ಮಾತು"*

*"ಕೇಳಿ ಯಾವುದೇ ಮಾತಿದ್ದರೂ ಸಂಕೋಚ ಬೇಡ"*

*"ನಂಗೆ ಲೆಟರ್ ಬರೆಯಲು ಯಾಕೆ ಹೇಳಿದಿರಿ?"*

*"ನೋಡಿ, ಮನುಷ್ಯನ ಮನಸ್ಸು ಒಂದು ತರಹ ಲಾಕರ ಇದ್ದಂತೆ. ಎಲ್ಲ ವಿಷಯಗಳು ಬಾಯಿಂದ ಹೊರಗೆ ಬರುವದಿಲ್ಲ. ಆದರೆ ಗಮನವಿಟ್ಟು ಬರೆಯಬೇಕಾದರೆ, ನಾವು ಬೇಡ ಅಂತ ಅಂದುಕೊಂಡರೂ ಸಹ ಅವು ಅಕ್ಷರ ರೂಪದಲ್ಲಿ ಹೊರಗೆ ಬರುತ್ತವೆ. ಅದರಿಂದ ಮನುಷ್ಯನ ಮನಸ್ಸಿನಲ್ಲಿ ಏನಿದೆ ಅಂತ ಸುಲಭವಾಗಿ ಕಂಡು ಹಿಡೊಬೋದು. ಅದಕ್ಕೆ ನಿಮಗೆ ಬರೆಯಲು ಹೇಳಿದೆ"*

ಈ ಮಾತನ್ನು ಕೇಳಿದ ಸುಮಾ, ಅವನು ಎಷ್ಟು ಚನ್ನಾಗಿ ತನ್ನ ಮನದಲ್ಲಿ ಪ್ರೀತಿ ಹುಟ್ಟಿಸಿ ಅದನ್ನು ತನ್ನ ಕೈಯಿಂದಲೇ ಹೇಳಿಸಿಕೊಂಡ ಎಂದು ಅಂದುಕೊಂಡಳು 

*"ಈಗ ನೀವು ಹೇಳುತ್ತಿರುವದನ್ನು ಕೇಳುತ್ತಿದ್ದರೆ ನೀವು ಹೇಳಿದ ಮಾತು ನಿಜ ಅಂತ ಅನ್ನಿಸುತ್ತಿದೆ. ಏನೋ ಬರೆಯಲು ಹೋದರು ಮನಸ್ಸಿನ ಮಾತು ಬರವಣಿಗೆಯಲ್ಲಿ ಬರುವದು ನಿಜ"*

ಎಂದು ಅವಳು ಹೇಳುವಾಗ ಅವಳಿಗೆ ಸ್ವಲ್ಪ ನಾಚಿಕೆಯಾಯಿತು.

*"ಅದಕ್ಕೆ ತಾನೇ ಈ ಟ್ರಂಪ್ ಕಾರ್ಡ್ ಉಪಯೋಗ ಮಾಡಿದ್ದು"*

*"ಹೌದಾ, ಸರಿ, ಒಂದು ಮಾತು ಕೇಳ್ತೀನಿ, ನೀವು ನನ್ನ ನೋಡದೆ ನನ್ನ ಜೊತೆ ಮಾತಾಡದೆ ಬರಿ ಚಾಟ್ ಮಾಡಿ ಯಾಕೆ ಆ ರೀತಿಯಾಗಿ ಲೆಟರ್ ಬರೆಯಲು ಹೇಳಿದಿರಿ?"*

*"ನಿಮ್ಮ ಪೋಸ್ಟಿಂಗ್ ನೋಡಿದೆ, ನೀವು ಉದಾಸವಾಗಿದ್ದಿರ ಎಂದು ಅಂದ್ಕೊಂಡೆ. ಆದರೆ ನಿಮ್ಮ ಪೋಸ್ಟಿಂಗ್ ದಲ್ಲಿ ಮೆಸೇಜ್ ತುಂಬಾ ಚೆನ್ನಾಗಿದ್ದವು. ಆದ್ರೆ ಯಾವುದೋ ರೀತಿಯಿಂದ ನಿಮಗೆ ಒಂಟಿತನ ಕಾಡ್ತಿದೆ ಅಂತ ಅನ್ನಿಸ್ತು. ಆವಾಗಿನಿಂದ ನಿಮ್ಮನ್ನು ಸ್ಟಡಿ ಮಾಡತೊಡಗಿದೆ. ಯಾಕೋ ಏನೋ ಗೊತ್ತಿಲ್ಲ ನಿಮ್ಮ ಜೊತೆ ಚಾಟಿಂಗ್ ಮಾಡಬೇಕೆನ್ನಿಸಿತು. ಮಾಡುತ್ತಾ ಹೋದೆ. ಆದರೆ ನನಗೆ ಗೊತ್ತಿಲ್ಲದಂತೆ ನಾನು ನಿಮ್ಮ ಕಡೆಗೆ ಆಕರ್ಷಿತನಾದೆ. ಮೊದಮೊದಲು ಆಗಿರಲಿಲ್ಲ. ಆದರೆ ನಂತರದಲ್ಲಿ ನಿಮ್ಮ ಪೋಸ್ಟ್ ಸಲುವಾಗಿ ಮಾತಾಡಬೇಕಾದ್ರೆ ಯಾಕೋ ನಿಮ್ಮ ಕಡೆಗೆ ನನ್ನ ಮನಸ್ಸು ವಾಲತೊಡಗಿತು. ಅದಕ್ಕೆ ನಿಮ್ಮ ಮನಸ್ಸಿನಲ್ಲಿ ಏನಿದಿಯೋ ಎಂದು ತಿಳಿದುಕೊಳ್ಳೋಣ ಅಂತ ನಾನು ವಿಧ ವಿಧವಾಗಿ ಪ್ರಯತ್ನ ಮಾಡಿದಾಗ ನೀವು ಒಂಟಿತನದ ಫೆಸಿಲಿಸಂದಿಂದ ಬಳಲುತ್ತಿರುವಿರಿ ಅಂತ ಅಂದುಕೊಂಡೆ. ಯಾಕೋ ನನಗೆ ಗೊತ್ತಿಲ್ಲದೇ ನೀವು ನನಗೆ ಇಷ್ಟವಾಗುತ್ತ ಹೋದಿರಿ. ಕೊನೆಗೆ ನಾನು ನನ್ನ ಮನಸಿನ ಭಾವನೆಗಳನ್ನು ನಿಮಗೆ ಹೇಳಬೇಕೆಂದುಕೊಂಡರೂ ಸಹ ನನಗೆ ಹೇಳುವದಕ್ಕೆ ಆಗಲಿಲ್ಲ. ಹೇಳಿದರೆ ಎಲ್ಲಿ ನೀವು ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡು ನನ್ನ ಫ್ರೆಂಡ್ಶಿಪ್ ತೊರೆದುಬಿಡುತ್ತಿರೋ ಎಂಬ ಭಯ ಕಾಡಿತ್ತು. ಅದಕ್ಕೆ ಕೊನೆಗೆ ಎಲ್ಲಿಯೋ ಒಂದು ಸಲ ಓದಿದ್ದು ನೆನಪಿಗೆ ಬಂತು. ಹಾಗಾಗಿ ನಿಮ್ಮ ಜೊತೆಗೆ ಚಾಟ್ ಮಾಡುತ್ತಾ, ನಿಮಗೊಂದು ಪ್ರೇಮ ಪತ್ರ ಬರೆಯಲು ಸವಾಲು ಹಾಕಿ ಅದನ್ನು ನೀವು ಒಪ್ಪಿಕೊಳ್ಳುವಹಾಗೆ ಮಾಡಿದೆ. ನನ್ನ ಉದ್ದೇಶ ಮಾತ್ರ ಇಷ್ಟೇ ಇತ್ತು, ನಿಮ್ಮ ಮನಸ್ಸಿನಲ್ಲಿ ಏನು ಭಾವನೆಗಳಿವೆ ಅಂತ ತಿಳಿದುಕೊಳ್ಳುವದಕ್ಕೆ ಇಷ್ಟೆಲ್ಲಾ ಕಷ್ಟ ಪಡಬೇಕಾಯಿತು. ಆದರೆ ನನಗೆ ನಿಮ್ಮ ಜೊತೆಗೆ ಮಾತನಾಡೋವಾಗ ಮಾತ್ರ ಏನೋ ಒಂದು ರೀತಿಯ ಹಿತವಾದ ಅನುಭವ ಆಗುತ್ತಿತ್ತು. ಏನು ಅಂತ ಮಾತ್ರ ಹೇಳಲು ಸಾಧ್ಯವಿಲ್ಲ. ಮಾತಿನಲ್ಲಿ ಹೇಳುವದಕ್ಕೆ ಆಗಲಾರದ ವಿಚಿತ್ರವಾದ ಅನುಭೂತಿ, ಅಲ್ಲದೆ, ನಿಮ್ಮ ಜೊತೆಗೆ ಮಾತನಾಡುತ್ತಿದ್ದರೆ ಪ್ರಪಂಚವೇ ಬೇಕಾಗಿಲ್ಲ ಎಂಬ ಭಾವ. ಯಾಕೋ ಗೊತ್ತಿಲ್ಲ. ನಿಮ್ಮ ಜೊತೆಗೆ ಕಾಲ್ ಮಾಡಿ ಮಾತನಾಡಬೇಕು ಅಂತ ನಾನು ಎಷ್ಟು ಸಲ ಅಂದುಕೊಂಡರು ಸಹ ನಿಮ್ಮನ್ನು ಕೇಳಲು ಧೈರ್ಯ ಸಾಲಲಿಲ್ಲ. ಆದರೆ ನಿಜ ಹೇಳ್ತಿನಿ ನಿಮ್ಮ ಪ್ರತಿ ಪೋಸ್ಟ್ ದಲ್ಲಿ ಇರುವ ಸಂದೇಶ ಮತ್ತು ನಿಮ್ಮ ಪ್ರತಿ ಸಂದೇಶದಲ್ಲಿ ಇರುವ ಅರ್ಥ, ಕೇವಲ ಹೃದಯವಿದ್ದವರಿಗಾಗಿ ಅಂತ ನಾನು ಅರ್ಥ ಮಾಡ್ಕೊಂಡಿದ್ದೆ. ಕೊನೆಗೆ ನೀವು ಇಂದು ನನಗೆ ಪತ್ರ ಕಳಿಸಿದಾಗ, ಅದನ್ನು ಓದಿದ ನನಗೆ ತಡೆದುಕೊಳ್ಳುವದಾಗಲಿಲ್ಲ ಅದಕ್ಕೆ ನಿಮ್ಮನ್ನು ಕಾಲ್ ಮಾಡ್ಲೆ ಎಂದು ಕೇಳಿಯೇ ಬಿಟ್ಟೆ. ನಿಜ ಹೇಳ್ತಿನಿ ಒಂದು ವೇಳೆ ನೀವು ಇಂದು ನಂಗೆ ಕಾಲ್ ಮಾಡಲು ಬೇಡ ಅಂದಿದ್ರೆ, ನಾಳೆಯಿಂದ ನಾನು ನಿಮ್ಮನ್ನು ಮಾತನಾಡಿಸುತ್ತಲೇ ಇರಲಿಲ್ಲ. ಇಂದು ನನ್ನನ್ನು ನಾನೇ ಅಗ್ನಿ ಪರೀಕ್ಷೆಗೆ ಒಳಪಡಿಸಿಕೊಂಡು ನಿಮ್ಮನ್ನು ಕೇಳಿದ್ದೆ. ನೀವು ಒಂದು ವೇಳೆ ನಕಾರಾತ್ಮಕವಾಗಿ ಉತ್ತರ ನೀಡಿದ್ದರೆ ಮಾತ್ರ, ನಾನು ನನ್ನನ್ನು ಮಾತ್ರ ಕ್ಶಮಿಸಿಕೊಳ್ಳುತ್ತಿರಲಿಲ್ಲ. ಪಾಪದ ಮನೋಭಾವದಿಂದ ನಾನು ಕೊರಗುತ್ತಿದ್ದೆ. ಇದನ್ನೆಲ್ಲಾ ಚಾಟ್ ಮುಖಾಂತರ ಹೇಳಿದ್ರೆ ಅರ್ಥ ಆಗೋಲ್ಲ. ಅದಕ್ಕೆ ನಾನು ನನ್ನ ಮನಸ್ಸಿನ ಭಾವನೆ ನಿಮ್ಮ ಮುಂದೆ ಹೇಳಿಕೊಂಡೆ. ನನಗೀಗ ಸಮಾಧಾನವಾಯ್ತು."*

ಎಂದು ಹೇಳುತ್ತಿರುವಾಗ, ಸುಮಾ ಅವನ ಮಾತುಗಳನ್ನು ದಿಂಬಿಗೆ ಒರಗಿಕೊಂಡು ಕಣ್ಣು ಮುಚ್ಚಿಕೊಂಡು ಕೇಳುತ್ತಿದ್ದರೆ, ಅವನೇ ತನ್ನ ಪಕ್ಕದಲ್ಲಿ ಕುಳಿತು ಮಾತನಾಡಿದ ರೀತಿಯಲ್ಲಿ ಅನುಭವ ಆಗುತ್ತಿತ್ತು. ತನಗೆ ಯಾರೋ ಆಸರೆ ಇರದ ವೇಳೆಯಲ್ಲಿ ಆಸರೆಯಾಗಿ ಬಂದವಂತೆ ಅಭಿ ಮಾತನಾಡುತ್ತಿದ್ದ. ಅವನ ಮಾತಿನಲ್ಲಿ ತಾನು ಸುರಕ್ಷಿತ ಎಂಬ ಭಾವನೆ ಅವಳಿಗೆ ಬರುತ್ತಿತ್ತು. ತನ್ನನ್ನೂ ಸಹ ಯಾರೋ ಪ್ರೀತಿಸುವವರು ಇದ್ದಾರೆ ಎಂಬ ವಿಷಯ ಅರಿತಾಗ ಹೃದಯ ಮಾತ್ರ ಉಯಾಲೆಯಲ್ಲಿ ತೂಗುತ್ತಿತ್ತು. ಅವನು ಮಾತಾಡಿ ಮುಗಿಸಿದ ಮೇಲೆ, ಸುಮಾ

*"ನಿಮ್ಮ ಮಾತು ನಿಜ. ನನಗೆ ಯಾರೂ ಇಲ್ಲದೆ ಒಂಟಿತನದಿಂದ ಬಳಲುತ್ತಿದ್ದಾಗ ನನ್ನ ಒಂಟಿತನವನ್ನು ಹೋಗಲಾಡಿಸಿದವರು ನೀವು. ನನಗೆ ಗೊತ್ತಿಲ್ಲದೇ ಮೊದಮೊದಲು ಕೇವಲ ಟೈಮ್ ಪಾಸ್ ಅಂದುಕೊಂಡು ಚಾಟ್ ಮಾಡ್ತಿದ್ದೆ. ಆದ್ರೆ ನೀವು ನನ್ನನ್ನ ಹಠಕ್ಕೆ ಕೆಡವಿದಾಗ ಸಹ ನನಗೆ ಯಾವುದೇ ಅಂತ ಹೇಳಿಕೊಳ್ಳುವಂಥ ಭಾವನೆ ಇರಲಿಲ್ಲ. ಆದ್ರೆ ಮನಸ್ಸಿಟ್ಟು ಬರೆಯುತ್ತಿರುವಾಗ ನನಗೆ ಗೊತ್ತಿಲ್ಲದೇ, ನನ್ನ ಹೃದಯ ತಾನಾಗೇ ಹೇಳಿದ ವಿಷಯ ಪತ್ರದಲ್ಲಿ ಬಂದಿದೆ. ನಾನು ಅದನ್ನು ಬರಿಯುವಾಗ ಮಾತ್ರ ನನಗೇನೂ ಗೊತ್ತಿರಲಿಲ್ಲ. ಆದರೆ ಬರೆಯುತ್ತ ಹೋದಂತೆ ನನಗೇನಾಯಿತು ಅಂತ ನನಗೆ ತಿಳಿಯಲಿಲ್ಲ. ಆದರೆ ಬರೆದು ಮುಗಿಸಿದ ಮೇಲೆ ನನಗನ್ನಿಸಿದ್ದು ಅಂದ್ರೆ, ನನಗೆ ಏನೋ ಆಗಿದೆ. ನನಗೆ ಏನೋ ಬೇಕಾಗಿದೆ ಅಂತ.ಆದರೆ ಇಷ್ಟು ದಿನ ಇಲ್ಲದ್ದು ಈಗ ಏಕೆ ಅಂತ ಆಸೆ ಬಂತು ಅಂತ ನನಗೆ ಗೊತ್ತಿಲ್ಲ. ನಾನು ಏನನ್ನೋ ಹುಡುಕುವಾಗ ಆಕಸ್ಮಿಕವಾಗಿ ಬಂದಿದ್ದು ಅಂತ ಅಂದ್ಕೊದ್ದೀನಿ."*

ಎಂದು ಹೇಳಿ ಸುಮ್ಮನಾದಳು. ಅವಳ ಮಾತನ್ನ ಕೇಳುತ್ತಿದ್ದ ಅಭಿ, 

*"ನನಗೂ ಏನೋ ಹೇಳಲಾರದ ಅನುಭವ. ಆದರೆ, ಹೇಳಲೇಬೇಕು ಎನ್ನುವ ತವಕ ತುಂಬಾ ಕಾಡುತ್ತಿತ್ತು. ಅದಕ್ಕೆ ಸಮಯ ಬೇಕಾಗಿತ್ತು. ಇಂದು ಆ ಸುದಿನ ಅಂತ ನಾನು ಅಂದ್ಕೋತೀನಿ. ಅಂದ ಹಾಗೆ ನಿಮಗೆ ಒಂದು ಮಾತು ಹೇಳ್ತಿನಿ ತಪ್ಪು ತಿಳಿಬೇಡಿ. ನಿಮ್ಮ ವಾಯ್ಸ್ ತುಂಬಾ ರೋಮ್ಯಾಂಟಿಕ್ ಆಗಿದೆ. ಯಾಕೋ ನನಗೆ ನಿಮ್ಮ ವಾಯ್ಸ್ ಕೇಳುತ್ತಲೇ ಇರಬೇಕು ಅಂತ ಅನ್ನಿಸ್ತಾ ಇದೆ. ಹಾಗೆ ಮಾತಾಡಿ"*

ಎಂದಾಗ ಅವಳಿಗೆ ತನ್ನ ವಾಯ್ಸ್ ಬಗ್ಗೆ ತನಗೆ ಅಭಿಮಾನ ಬಂತು. ಅದು ಅವನು ಹೇಳಿದ ಮೇಲೆ ತನ್ನ ವಾಯ್ಸ್ ತಾನೇ ಗಮನಿಸಿ ನೋಡಿದಳು. ಅವನ ಮಾತಿಗೆ ಅಭಿಮಾನದ ಜೊತೆಗೆ ನಗು ಸಹ ಬಂತು. 

*"ನಾನು ಎಷ್ಟಾದ್ರೂ ಪ್ರಾಧ್ಯಾಪಕ ವೃತ್ತಿಯನ್ನು ಮಾಡುವವಳು. ನಂಗೆ ಜೋರಾದ ಧ್ವನಿಯಲ್ಲಿ ಮಾತಾಡಿ ಅಭ್ಯಾಸ. ಇವತ್ತಷ್ಟೇ ಸಾವಕಾಶವಾಗಿ ಮಾತಾಡ್ತಿದ್ದೀನಿ"*

*" ಆ ವಿಷಯಾನೇ ಬೇರೆ ಈ ವಿಷಯಾನೇ ಬೇರೆ. ಅದು ಮೆದುಳಿಗೆ ಕೆಲಸ ಕೊಟ್ಟು, ಕಣ್ಣಿಂದ ನೋಡುತ್ತಾ ಮಾತನ್ನಾಡುವಾಗ ಅದೇ ರೀತಿಯಾಗಿ ಮಾತು ನಾವು ಬೇಡವೆಂದರೂ ಬರುತ್ತದೆ. ಆದರೆ ಇಲ್ಲಿ ಹೃದಯದ ಬಡಿತ ತಾನಾಗಿಯೇ ಮಾತಿನ ರೂಪವನ್ನು ಪಡೆದುಕೊಂಡು ಹೊರಗೆ ಬರುತ್ತವೆ. ಇಲ್ಲಿ ಯಾವುದೇ ಫಿಲ್ಟರ್ ಇರುವದಿಲ್ಲ. ಸೆನ್ಸಾರ್ ಇರುವದಿಲ್ಲ. ಹೃದಯಕ್ಕೆ ಅಸಲಿಗೆ ಯಾವುದೇ ನಿರ್ಬಂಧ ಇರುವದಿಲ್ಲ. ಏನೇ ನಿರ್ಬಂಧ ಇದ್ದರೂ ಅದು ತಲೆ ಮತ್ತು ಬಾಯಿ ನಡುವೆ ಮಾತ್ರ ಇರುತ್ತೆ."*

*"ಹೌದು ನೀವು ಹೇಳುವದು ಸರಿ."*

*"ನಿಮ್ಮ ಸಬ್ಜೆಕ್ಟ್ ಏನು?"*

*"ಇಂಗ್ಲಿಷ್"*

*"ಒಹ್ ಆ ಲ್ಯಾಂಗ್ವೇಜ್ ರೊಮ್ಯಾಂಟಿಕ ಲ್ಯಾಂಗ್ವೇಜ್. ಇಂಗ್ಲಿಷ್ ಅಂದ್ರೇನೆ ರೋಮ್ಯಾಂಟಿಕ್ ಆಗಿರುತ್ತೆ ನೀವು ಆ ಲ್ಯಾಂಗ್ವೇಜ್ ದಲ್ಲಿ ಪ್ರಭುತ್ವ ಪಡೆದುಕೊಂಡಿದ್ದೀರಾ. ಅದನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಅಂತ ನಿಮಗೆ ಚನ್ನಾಗಿ ಗೊತ್ತಿರುವದರಿಂದ ನಿಮ್ಮ ವಾಯ್ಸ್ ಕೇಳಿ ರೋಮ್ಯಾಂಟಿಕ್ ವೇವ್ಸ್ ಬರುತ್ತೆ. ಆದರೆ ಅದನ್ನು ಕಂಡು ಹಿಡಿಬೇಕು ಅಷ್ಟೇ. ವಾಯ್ಸ್ ಫ್ರೀಕ್ವೆನ್ಸಿ ಸಹ ಒಂದು ರೀತಿಯಿಂದ ಮನುಷ್ಯನ ಬಗ್ಗೆ, ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಗಡಸು ವಾಯ್ಸ್ ದವರು ಸಾವಕಾಶವಾಗಿ ಮಾತಾಡುತ್ತಿರುತ್ತಾರೆ. ಅವರು ಕೋಪಿಷ್ಠರು, ಹಠವಾದಿಗಳು, ಅಂದುಕೊಂಡಿದ್ದನ್ನು ಸಾಧಿಸುವವರು ಆಗಿರುತ್ತಾರೆ. ಆದರೆ ಮನದಲ್ಲಿ ಮಾತ್ರ ಏನಿದೆ ಅಂತ ಯಾರಿಗೂ ಬಿಟ್ಟು ಕೊಡುವದಿಲ್ಲ. ನಗುತ್ತ ನಗಿಸುತ್ತಾ ಮಾತನಾಡಿಸೋ ಜನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡಿರುತ್ತಾರೆ. ಅವರು ಯಾರಿಗೂ ಕೇಡು ಬಯಸುವದಿಲ್ಲ. ಆದರೆ ಅವರ ಮನಸ್ಸು ಮಾತ್ರ ಮೃದುವಾಗಿರುತ್ತದೆ. ಇನ್ನು ಹೆಣ್ಣು ಮಕ್ಕಳ ವಿಷಯಕ್ಕೆ ಬರುವದಾದರೆ, ನಗುತ್ತ ಮಾತನಾಡೋ ಹೆಣ್ಣು ಮಕ್ಕಳು ಸೀರಿಯಸ್ ಆಗಿ ಯೋಚನೆ ಮಾಡುವದಿಲ್ಲ. ಒಂದು ತರ ತರ್ಲೆ ಇದ್ದಂಗೆ ಇರ್ತವೆ. ತುಂಬಾ ಸೀರಿಯಸ್ ಆಗಿ ಎಲ್ಲರನ್ನು ದಿಟ್ಟಿಸಿ ನೋಡುವ ಹೆಣ್ಣು, ಮನದಲ್ಲಿ ಏನಾದರೊಂದು ಸ್ಕೆಚ್ ಹಾಕುತ್ತ ಇರ್ತಾರೆ. ಅಂಥವರಿಗೆ ಬೇರೆಯವರು ಸುಖವಾಗಿರುವದು ನೋಡುವದಕ್ಕೆ ಆಗೋಲ್ಲ. ಸುಖವಾಗಿರುವದನ್ನು ನೋಡಿದರೆ ಅವರು ಅಲ್ಲಿ ಏನಾದರೂ ಹುಳಿ ಹಿಂಡುವ ಪ್ರಯತ್ನ ಮಾಡೇ ಮಾಡ್ತಾರೆ. ಇನ್ನು ಸುಮ್ಮನೆ ಸ್ಟೈಲಿಂಗ್ ಫೇಸ್ ಇದ್ದವರು ನೋಡಲಿಕ್ಕೆ ಸೀರಿಯಸ್ ಆಗಿ ಇದ್ದರೂ ಸಹ, ತೂಕದಲ್ಲಿ ಮಾತಾಡುತ್ತಾರೆ. ಅವರು ನೋಡಲು ಎಷ್ಟು ಸಿಂಪಲ್ ಆಗಿ ಇರ್ತಾರೋ ಮನದಲ್ಲಿ ಅಷ್ಟೇ ರೊಮ್ಯಾಂಟಿಕ ಫೀಲಿಂಗ್ ದಲ್ಲಿ ಇರುತ್ತಾರೆ. ಅಂಥವರ ಜೊತೆಗೆ ಲೈಫ್ ಲೀಡ್ ಮಾಡೋದರಲ್ಲಿ ತುಂಬಾ ಸ್ಯಾಟಿಸ್ಫ್ಯಾಕ್ಷನ್ ಇರುತ್ತೆ."*

ಇದನ್ನೆಲ್ಲಾ ಕೇಳಿ ಸುಮಾ, ಚಕಿತಳಾದಳು. ಅವನು ಹೇಳುವದರಲ್ಲಿ ಎಷ್ಟು ಸತ್ಯ ಇದೆ ಅಂತ ಅವಳಿಗೆ ಅನ್ನಿಸಿತು. ಅವನ ಮಾತನ್ನು ಕೇಳಿದ ಮೇಲೆ ಸುಮಾ ತನ್ನ ಜೊತೆ ಇದ್ದವರ ಬಗ್ಗೆ ಯೋಚನೆ ಮಾಡುತ್ತಿರಬೇಕಾದರೆ, ಅವನು ಹೇಳಿದ್ದ ಮಾತು ಅಕ್ಷರ ಷ ನಿಜ ಅಂತ ಅನ್ನಿಸಿತು. ಅವನು ಹೇಳಿದ್ದ ಒಂದೊಂದು ಮಾತು ಅವಳಿಗೆ ನಿಜ ಅಂತ ಅನ್ನಿಸ್ತಿದ್ದವು. 

*"ಹೌದು ನೀವು ಹೇಳಿದ್ದು ತುಂಬಾ ನಿಜ. ಒಂದು ಮಾತು ನೀವು ನನ್ನನ್ನು ನೀವು ಹೇಳಿದ ಕೆಟಗರಿಯಲ್ಲಿ ಯಾವುದಕ್ಕೆ ಹೋಲಿಸ್ತೀರಿ?"*

*"ಕಡೆಯದು. ಹೌದು ನೀವು ಲಾಸ್ಟ ಹೇಳಿದಿನಲ್ಲ ಅದೇ ಕೆಟಗರಿ"*

ಅದನ್ನು ಕೇಳುತ್ತಲೇ ಸುಮಾಳಿಗೆ ಮೈ ಮೇಲೆಲ್ಲಾ ತಾವರೆ ಹೂವು ಬಿದ್ದಂತೆ ಆಯಿತು. ಏನೋ ಒಂದು ರೀತಿಯಲ್ಲಿ ಮೈಯಲ್ಲ ಬಿಸಿಯಾದಂತೆ ಅನ್ನಿಸತೊಡಗಿತು. ಅವ್ನು ಮಾತಾಡುತ್ತಲೇ ಉದಾಹರಣೆ ಕೊಡುತ್ತಲೇ ಒಂದು ರೀತಿಯಾಗಿ ರೋಮ್ಯಾಂಟಿಕ್ ಆಗಿ ಮಾತಾಡುತ್ತಿದ್ದರೆ, ಅದನ್ನು ಕೇಳುತ್ತಿದ್ದ ಸುಮಾ ಮಾತ್ರ ಮಂಜಿನಂತೆ ತನಗರಿವಿಲ್ಲದೆ ಕರಗುತ್ತಿದ್ದಳು. 


14


ಕೊನೆಗೆ ಅವಳಿಗೆ ಅವನ ಮಾತಿಗೆ ಏನು ಹೇಳಬೇಕು ಅಂತ ಗೊತ್ತಾಗ್ದೇ 

*"ನನಗೇನು ತಿಳಿಯುತ್ತಿಲ್ಲ. ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ"*

*"ಇಂಥ ನಿನ್ನ ಮುಗ್ದತೆ ನನಗೆ ಇಷ್ಟ ಆಗೋದು. ನಿಮ್ಮ ಮನೇಲಿ ಯಾರ್ಯಾರಿದಿರಿ?"*

*"ಯಾರಿಲ್ಲ ಸಧ್ಯಕ್ಕೆ ನಾನೊಬ್ಬಳೇ. ಗಂಡ ತೀರಿ ಹೋಗಿದ್ದಾರೆ ಅತ್ತೆ ಇತ್ತೀಚಿಗೆ ಹೋಗಿಬಿಟ್ರು."*

*"ಒಹ್ ನೀವು ನಿಜವಾಗಿಯೂ ಏಕಾಂಗಿಯಾಗಿರುವಿರಿ"*

*"ಹೌದು. ನಿಮ್ಮ ಮನೆಯಲ್ಲಿ?"*

*"ನನ್ನ ತಾಯಿ ಮತ್ತು ತಂದೆ ಇಬ್ರೂ ಡೆಲ್ಲಿದಲ್ಲಿ ಇದಾರೆ. ನಾನು ಇಲ್ಲೇ ಜಾಬ್ ಮಾಡಿಕೊಂಡಿದ್ದೇನೆ. 2 ವರ್ಷ ಆಯ್ತು ಇಲ್ಲಿ ಬಂದು. ಇಲ್ಲಿ ಅಷ್ಟಾಗಿ ಯಾರೂ ಪರಿಚಯದವರು ಇಲ್ಲ. ನಾನು ನನ್ನ ಮನಸ್ಥಿತಿಗೆ ಹೊಂದಿದರೆ ಮಾತ್ರ ಫ್ರೆಂಡ್ಶಿಪ್ ಮಾಡ್ಕೋತೀನಿ. ಸಾಕಷ್ಟು ಜನ ಫ್ರೆಂಡ್ಸ್ ಇದ್ರೂ ನನ್ನ ಟೇಸ್ಟ್ ಗೆ ಹೊಂದಿಕೊಳ್ಳುವಂತೆ ಯಾರು ಸಿಗಲಿಲ್ಲ. ಡೆಲ್ಲಿಯಲ್ಲಿ ನನ್ನ ತಾಯಿ ನನಗೆ ಕನ್ನಡ ಓದೋದು ಬರಿಯೋದು ಹೇಳಿಕೊಟ್ರು. ತ ರಾ ಸು ಕಾದಂಬರಿಗಳು ಇಷ್ಟ. ಅವರ ಎಲ್ಲ ಕಾದಂಬರಿ ಓದಿದ್ದಿನಿ. ಹಾಗೆ ಒಂದು ಸಲ ಫೇಸ್ ಬುಕ್ ನೋಡುವಾಗ ನಿಮ್ಮ ಟೈಮ್ ಲೈನ್ ನೋಡಿದೆ. ಯಾಕೋ ನಿಮ್ಮ ಪೋಸ್ಟ್ ಅಟ್ಟ್ರಕ್ಟಿವ್ ಅನ್ನಿಸ್ತು. ಅದಕ್ಕೆ ನಿಮ್ಮ ಪೋಸ್ಟಗಳನ್ನು ಸ್ವಲ್ಪ ಬೇರೆ ದೃಷ್ಟಿಯಿಂದ ನೋಡಿದಾಗ ನೀವು ಮೋಸ್ಟ್ಲಿ ಒಬ್ಬಂಟಿಯಾಗಿ ಇದ್ದಿರಬಹುದು ಅಂದುಕೊಂಡೆ. ಖಿನ್ನತೆ, ಮನ ಭಗ್ನತೆ ಗಮನಿಸಿದೆ. ಯಾಕೋ ಅದರಿಂದ ನಿಮ್ಮನ್ನು ಹೊರಗೆ ತರಬೇಕೆಂದು ಮನಸ್ಸು ಹೇಳಿತು. ಅದಕ್ಕೆ ನಿಮ್ಮ ಜೊತೆಗೆ ಸುಮ್ನೆ ಮೆಸೇಜ್ ಗೆ ರಿಪ್ಲೈ ಮಾಡುತ್ತಾ ಹೋದೆ, ಚಾಟ್ ಮಾಡೋ ಅವಕಾಶ ಸಿಕ್ತು, ಮುಂದಿನದು ನಿಮಗೆ ಗೊತ್ತಿದೆ."*

ಅವನ ಎಲ್ಲ ಮಾತುಗಳನ್ನು ಕೇಳುತ್ತಲಿದ್ದ ಸುಮಾ, ಅವನ ಮಾತಿಗೆ ಪರವಶಳಾಗಿದ್ದಳು. ಇನ್ನೂ ಅವನು ಹಾಗೆ ಮಾತನಾಡುತ್ತಲಿರಬೇಕು ತಾನು ಕೇಳುತ್ತಲೇ ಇರಬೇಕು ಅಂತ ಅವಳ ಮನ ಬಯಸುತ್ತಿತ್ತು. ಅವನು ಸುಮ್ಮನಾದಾಗ, ಅವಳು 

*"ನನ್ನ ಮಾತು ಕೇಳಿ ನಿಮಗೆ ಏನು ಅನ್ನಿಸ್ತು ಅಂತ ನಾನು ತಿಳಿದುಕೊಳ್ಳಬಹುದೇ?"*

ಎಂದಾಗ ಹಿತವಾಗಿ ಸಣ್ಣಗೆ ಒಂದು ನಗೆ ನಕ್ಕು,

*"ರೋಜ್ ಈ ದಿಲ್ ಬೆಕಾರಾರ್ ಹೋತಾ ಹೈ

ಕಾಶ್ ಕೆ ತುಮ ಸಮಜ್ ಸಕ್ತೆ ಕಿ 

ಚುಪ್ ರೆಹೆನೆವಾಲೋ ಕೋ ಭೀ ಕಿಸಿ ಸೆ ಪ್ಯಾರ್ ಹೋತಾ ಹೈ"*

ಎಂದು ಹೇಳಿದ. ಅವನು ಹೇಳಿದ ರೀತಿಯಿಂದ ಅವನು ಈ ಮಾತನ್ನು ತನ್ನ ಹೃದಯದಿಂದ ಹೇಳುತ್ತಿದ್ದಂತೆ ಅವಳಿಗೆ ಭಾಸವಾಯಿತು. ಅವನು ಶಬ್ದಗಳನ್ನು ತನ್ನ ಬಾಯಿಂದ ಹೇಳಿದ್ದರೂ ಅವನ ಉಚ್ಚಾರಣೆಯಲ್ಲಿ ಮತ್ತು ಧ್ವನಿಯ ಏರಿಳಿತದಲ್ಲಿ ಅವನ ಮನದ ಮಾತು ಶಾಯರಿ ರೂಪದಲ್ಲಿ ಹೊರಗೆ ಬಂದಿತ್ತು. ಅದನ್ನು ಕೇಳುತ್ತಲೇ ಅವಳು ತನಗರಿವಿಲ್ಲದಂತೆ ಕನಸಿನ ಲೋಕಕ್ಕೆ ಹೋದಳು. ಅಷ್ಟರಲ್ಲಿ ಅವನು,

*"ನಿಮ್ಮನೊಂದು ಮಾತು ಕೇಳಬಹುದಾ?"*

ಎಂದಾಗ ಮಧುರವಾದ ಪಿಸು ಧ್ವನಿಯಲ್ಲಿ 

*"ಕೇಳಿ ಪರವಾಯಿಲ್ಲ"*

*"ನನ್ನ ಮಾತು ಕೇಳಿದ ಮೇಲೆ ನಿಮಗೆ ಏನು ಅನ್ನಿಸ್ತು?"*

ಎಂದು ಕೇಳಿದಾಗ ಅವಳಿಗೆ ಆ ಪ್ರಶ್ನೆಗೆ ಏನು ಉತ್ತರಿಸಬೇಕು ಎಂದು ಗೊತ್ತಾಗಲಿಲ್ಲ. ಏನು ಅಂತ ಹೇಳಬೇಕು ಎಂದು ತಾನೇ ಗೊಂದಲದಲ್ಲಿ ಬಿದ್ದಳು. ಆದರೂ ಅವನಿಗೆ ಏನಾದರೊಂದು ಉತ್ತರ ಕೊಡಲೇ ಬೇಕಾಗಿತ್ತು. 

*"ನನಗೆ ನಿಮ್ಮ ಹಾಗೆ ಮಾತನಾಡಲು ಬರುವದಿಲ್ಲ. ಆದರೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನೀವು ಒಬ್ಬ ಅಸಾಧಾರಣ ವ್ಯಕ್ತಿ ಅಂತ ಅಂದ್ಕೊಡ್ದಿದೀನಿ. ನಿಮಗೆ ಎಲ್ಲ ಗೊತ್ತು ಮತ್ತೊಬ್ಬರ ಮನಸ್ಸನ್ನು ಓದುವದು ತುಂಬಾ ಚನ್ನಾಗಿ ಅಭ್ಯಾಸ ಮಾಡಿಕೊಂಡಿರುವಿರಿ. ಪಾಂಡಿತ್ಯ ತುಂಬಾ ಇದೆ. ನಿಮ್ಮ ಪಾಂಡಿತ್ಯದ ಮುಂದೆ ನಾನು ಏನೂ ಅಲ್ಲ. ಮನಸ್ಸು ಒಳ್ಳೆಯದು ಮೃದು ಸ್ವಭಾವದವರು. ಯಾರಾದರೂ ನಿಮ್ಮ ಪ್ರೀತಿಗೆ ಮನಸೋಲುವದು ತುಂಬಾ ಸಹಜ"*

*"ಹಾಗಾದರೆ ನೀವು?"*

ಎಂದು ಪ್ರಶ್ನೆ ಕೇಳಿದಾಗ ಸುಮಾ ಡೈರೆಕ್ಟ್ ಆಗಿ ಅವನು ಈ ರೀತಿ ಕೇಳಿದ್ದರಿಂದ, ಮನದಲ್ಲಿ ತುಂಬಾ ನಾಚಿಕೊಂಡಳು. 

*"ಇಷ್ಟೆಲ್ಲಾ ಹೇಳಿದ ಮೇಲೆ ನಾನು ಹೇಳಿದ್ದರಲ್ಲಿಯೇ ನೀವು ನಿಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು ಅದರಲ್ಲಿಯೇ ಉತ್ತರವಿದೆ"*

ಎಂದು ಹೇಳಿದಾಗ ಅವನು ಮಾದಕವಾಗಿ ನಗುತ್ತ,

*"ಒಹ್ ಸರಿ. ಮತ್ತೇನಾದರೂ ನಿಮಗೆ ನನ್ನ ಬಗ್ಗೆ ಕೇಳುವದಿದ್ದರೆ ಕೇಳಿ "*

*"ನಿಮ್ಮ ಹವ್ಯಾಸಗಳೇನು?"*

*"ಸಂಗೀತ, ಶಾಯರಿ ಮತ್ತು ಫ್ರೆಂಡ್ಸ್ ಹಾಗು ಓದುವದು. ನಿಮ್ಮದು?"*

*"ಓದೋ ಹುಚ್ಚು ತುಂಬಾ ಇದೆ. ಯಾವಾಗಲೂ ಓದ್ತಾ ಇರಬೇಕು ಅನ್ನಿಸ್ತಿದೆ. ಪ್ರಾಧ್ಯಾಪಕ ವೃತ್ತಿ ನನಗೆ ತೃಪ್ತಿ ನೀಡಿದೆ. ಅದರಲ್ಲಿ ನಾನು ಖುಷಿ ಪಡ್ತೀನಿ. ಸ್ಟೂಡೆಂಟ್ಸ್ ಜೊತೆ ಇದ್ದಾಗ ನಾನು ನೋಡಲು ಗಂಭೀರವಾಗಿದ್ದರೂ ಸಹ, ಮನದಲ್ಲಿಯೇ ಅವರ ಜೊತೆಗೆ ನಾನು ಸಹ ಒಬ್ಬ ಸ್ಟೂಡೆಂಟ್ ಆಗಿರುತ್ತೇನೆ. ಮೊದಲಿನಿಂದಲೂ ನಾನು ತ್ರಿವೇಣಿ ಅವರ ಕಾದಂಬರಿ ಓದುತ್ತೇನೆ. ಅವರ ಎಲ್ಲ ಕಾದಂಬರಿಗಳು ನನ್ನ ಹತ್ತಿರ ಇವೆ."*

*"ಸರಿ ನಿಮಗೂ ಕೂಡ ಒಳ್ಳೆ ಹವ್ಯಾಸಗಳಿವೆ"*

*"ಥ್ಯಾಂಕ್ಸ್"*

*"ನಿಮಗೊಂದು ಮಾತು ಹೇಳುವದಿದೆ"*

*"ಹೇಳಿ, ನನ್ನ ನೀವು ತಾವು ಎಂದು ಬಹು ವಚನದಲ್ಲಿ ಮಾತಾಡಿಸಬೇಡಿ. ಯಾಕೋ ತುಂಬಾ ದೂರದಲ್ಲಿರುವಿರಿ ಅಂತ ನನಗನ್ನಿಸುವದು. ಅಭಿ ಎಂದು ಎರಡಕ್ಷರದಲ್ಲಿ ಕರೆದರೆ ಸಾಕು. ಬಹುವಚನ ಪ್ರಯೋಗ ಬೇಡ"*

*"ಇದು ಸ್ವಲ್ಪ ಕಷ್ಟದ ಕೆಲಸ"*

*"ಪರವಾಯಿಲ್ಲ ಸ್ವಲ್ಪ ಕಷ್ಟವಾದರೂ ನಷ್ಟವೇನಿಲ್ಲವಲ್ಲ"*

*'ಸರಿ, ಪ್ರಯತ್ನ ಮಾಡ್ತೀನಿ. ನಾನೊಂದು ಮಾತು ನಿಮ್ಮನ್ನು ಕೇಳಬಹುದೇ?"*

*"ಧಾರಾಳವಾಗಿ"*

*"ನೀವು ನೋಡಲು ಹೇಗಿರುವಿರಿ?"*

*"6 ಅಡಿ ಎತ್ತರ. ಗುಂಡಗಿನ ಮುಖ. ಕಪ್ಪು ಕಣ್ಣುಗಳು. ಸ್ವಲ್ಪ ಉದ್ದವಾದ ರೌಂಡ್ ಇರುವ ಮೂಗು. ಅದರ ಕೆಳಗೆ ಮೀಸೆ ಮತ್ತು ಫ್ರೆಂಚ್ ಕಟ್ ಗಡ್ಡ, ೫೪ ಇಂಚು ಎದೆ ಹೆಣ್ಣು ಮಕ್ಕ್ಳು ಅಟ್ರಾಕ್ಟ್ ಆಗೋ ತರ ಫಿಗರ್ ಶರ್ಟ್ ಸೈಜ್ 38 ಪ್ಯಾಂಟ್ ಸೈಜ್ 40 ಶೂ ಸೈಜ್ 9. ಮತ್ತೇನಾದರೂ ವಿವರ ಬೇಕಾ?"*

ಎಂದು ಕೇಳಿ ನಗತೊಡಗಿದ. ಅವಳೂ ಸಹ ಅವನ ಸ್ವ ವಿವರಣೆಯನ್ನು ಕೇಳಿ ಬಿದ್ದು ಬಿದ್ದು ನಗತೊಡಗಿದಳು. ಅವಳು ನಗುವದನ್ನು ನಿಲ್ಲಿಸಿದ ಮೇಲೆ 

*"ಶಾಂತ ಹುಣ್ಣಿಮೆ ರಾತ್ರಿಯಲ್ಲಿ ಸಮುದ್ರದ ಅಲೆಗಳ ಜೊತೆಗೆ ಗೆಜ್ಜೆನಾದ ಕೇಳಿದಂತಿತ್ತು ನಿಮ್ಮ ನಗುವಿನ ಧ್ವನಿ."*

ಎಂದು ಹೇಳಿದಾಗ ಅವಳು ನಿಜಕ್ಕೂ ತನ್ನನ್ನು ತಾನು ಸಮುದ್ರದ ಅಲೆಗಳಂತೆ ಹೋಲಿಸಿಕೊಳ್ಳತೊಡಗಿದಳು. ಅವಳ ಪರಿಸ್ಥಿತಿಯೂ ಹಾಗೆ ಇತ್ತು. ಅಲೆಗಳು ಏರಿ ಹೊಡೆದು ಭೋರ್ಗೆರೆಯುವಂತೆ ಅವಳು ಮನಸ್ಸು ಬಿಚ್ಚಿ ಹೃದಯಾಂತರಾಳದಿಂದ ನಗುತ್ತಿದ್ದಳು. ಅವಳು ನಗುವದೇ ಅಪರೂಪ. ಅಭಿ ತನ್ನನ್ನು ಹೋಲಿಕೆ ಮಾಡಿದ್ದನ್ನು ಕೇಳಿದ ಅವಳು 

*"ನಿಮ್ಮ ಜೊತೆಗೆ ಹೀಗೆ ಮಾತಾಡುತ್ತಿದ್ದರೆ, ನನಗೆ ತುಂಬಾ ಜಂಭ ಬರುತ್ತದೆ,ಅದು ಬರಲು ನೀವು ಕಾರಣರಾಗ್ತೀರಾ."*

*"ಆದ್ರೆ ಆಗಲಿ ಬಿಡಿ. ನಿಮ್ಮಂಥವರು ಹಾಗೆ ಜಂಭದಿಂದ ಇದ್ರೆ ತಾನೇ ಅದಕ್ಕೊಂದು ಅರ್ಥ"*

*"ಹೋಗ್ರಿ ನೀವು ಅಸಾಧ್ಯರಪ್ಪ"*

*"ನೀವೇನು ಕಮ್ಮಿ ಇಲ್ಲ ರೀ. ಕೇವಲ ನಿಮ್ಮ ನಗುವಿನಿಂದ ಯಾರನ್ನಾದರೂ ಮರಳು ಮಾಡುವಿರಿ"*

ಹಾಗೆ ಮಾತಾಡುತ್ತಿರುವಾಗ ಸುಮಾಳಿಗೆ ಗಡಿಯಾರದ ಕಡೆಗೆ ಲಕ್ಷ ಹೋಯಿತು. ಆರು ಮುಕ್ಕಾಲು ಘಂಟೆಯಾಗಿತ್ತು. 

*"ಸರಿ ಟೈಮ್ ಆಯ್ತು ಹೋಗ್ತೀನಿ"*

*"ಆಯ್ತು. ಮತ್ತೆ ಯಾವಾಗ ಸಿಗೋದು?"*

*"ನೈಟ್ ಸೇಮ್ ಟೈಮ್"*

*"ಓಕೆ ಬೈ"*

ಎಂದು ಹೇಳಿ ಸುಮಾ ತನ್ನ ಮೊಬೈಲ್ ಆಫ್ ಮಾಡಿದಳು. 

ಹಾಸಿಗೆಯಿಂದ ಇದ್ದ ಸುಮಾ ಮನೆಗೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ತುಂಬಾ ಉಲ್ಲಸಿತಳಾಗಿದ್ದ ಅವಳು ಮನೆಗೆಲಸ ಮಾಡುವದು ಅವಳಿಗೆ ತುಂಬಾ ಹಗುರವಾಗಿತ್ತು ಖುಷಿಯಲ್ಲಿ. ಡ್ಯೂಟಿಗೆ ಟೈಮ್ ಆಗತೊಡಗಿತ್ತು. ಲಗುಬಗೆಯಿಂದ ಸ್ನಾನ ಮಾಡಿ ಡ್ಯೂಟಿ ಗೆ ಹೋಗಲು ತಯಾರಾದಳು. ಎಂದೂ ಇಲ್ಲದೆ ಇಂದು ಅವಳಿಗೆ ತಯಾರಾಗಲು ತುಂಬಾ ಉತ್ಸಾಹ ಬಂದಿತ್ತು. ವಿಶೇಷವಾಗಿ ತನ್ನನ್ನು ತಾನು ಅಲಂಕರಿಸಿಕೊಂಡಳು. ಆಕಾಶ ನೀಲಿ ಬಣ್ಣದ ಪ್ಲೈನ್ ಸೀರೆ ಉಟ್ಟುಕೊಂಡು ಲೈಟ್ ಆಗಿ ಮುಖಕ್ಕೆ ಪೌಡರ್ ಹಚ್ಚಿಕೊಂಡಳು. ಅವಳು ಗಂಡ ತೀರಿಕೊಂಡಾಗಿನಿಂದ ಕೆಂಪು ಬಿಂದಿ ಬದಲಾಗಿ ಕಪ್ಪು ಬಿಂದಿ ಹಚ್ಚಿಕೊಳ್ಳುತ್ತಿದ್ದಳು. ಅದು ಅವಳ ಹಣೆ ಮೇಲೆ ಹಚ್ಛೆ ಹಾಕಿದ ರೀತಿಯಲ್ಲಿ ಕಾಣುತ್ತಿತ್ತು. ಇಂದು ಅವಳು ಸ್ವಲ್ಪ ದೊಡ್ಡದಾದ ಬಿಂದಿಯನ್ನು ಹಚ್ಚಿಕೊಂಡಳು. ಸಡಿಲಾಗಿ ಹೆಣಲು ಹಾಕಿಕೊಂಡಳು. ಅವಳು ಸಡಿಲಾಗಿ ಹೆಣಲು ಹಾಕಿಕೊಂಡಾಗ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಅದು ಅವಳಿಗೆ ಗೊತ್ತಿತ್ತು. ಡ್ರೆಸ್ಸಿಂಗ್ ಟೇಬಲ್ ಡ್ರಾವೆರ್ ತೆಗೆದಾಗ ಅಲ್ಲಿ ವಿಧ ವಿಧವಾದ ಪೆರ್ಫ್ಯೂಮ್ ಇದ್ದವು. ಅವುಗಳಲ್ಲಿ ತನಗಿಷ್ಟವಾದ ಲ್ಯಾವೆಂಡರ್ ವಾಸನೆಯ ಪೆರ್ಫ್ಯೂಮ್ ಹಾಕಿಕೊಂಡಾಗ ಅದರ ಸುವಾಸನೆಯಿಂದ ರೂಮೆಲ್ಲಾ ಪರಿಮಳ ತುಂಬಿತು. ಅವಳು ತುಂಬಾ ಖುಷಿಯಾದಾಗ ಮಾತ್ರ ಆ ಪೆರ್ಫ್ಯೂಮ್ ಹಾಕಿಕೊಳ್ಳುತ್ತಲಿದ್ದಳು. ಸಾಕ್ಷಾತ ದೇವಲೋಕದಿಂದ ಧರೆಗಿಳಿದ ಅಪ್ಸರೆ ತರ ಕಾಣುತ್ತಿದ್ದಳು. 

  ರೆಡಿ ಆಗಿ ಕಾಲೇಜು ಕಡೆಗೆ ಹೊರಟಳು. ಅವಳು ಕಾಲೇಜಿನಲ್ಲಿ ಕಾರ್ ಪಾರ್ಕ್ ಮಾಡಿ ಸ್ಟಾಫ್ ರೂಮ್ ಕಡೆಗೆ ಹೊರಟರೆ, ಅವಳನ್ನು ನೋಡುತ್ತಿದ್ದ ಸ್ಟೂಡೆಂಟ್ಸ್ ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದರು. ಅವಳ ರೂಪದಲ್ಲಿ ಯಾವುದೇ ರೀತಿಯಿಂದ ಕೊಂಕು ತೆಗೆಯುವದಕ್ಕೆ ಸಾಧ್ಯವಾಯಿಲ್ಲದಂತೆ ಸಿಂಪಲ್ ಆಗಿ ಅಲಂಕಾರ ಮಾಡಿಕೊಂಡಿದ್ದಳು. 

    ಸ್ಟಾಫ್ ರೂಮಿನಲ್ಲಿ ಕಾಲಿಡುತ್ತಿದ್ದಂತೆ ಅಲ್ಲಿದ್ದ ಕಾವೇರಿ ಅವಳನ್ನು ನೋಡಿ, ಗಂಡಸರ ಹಾಗಿ ತುಟಿ ರೌಂಡ್ ಮಾಡಿ ಸಿಳ್ಳೆ ಹಾಕಿ 

*"ಏನೇ ಸುಮಾ, ಒಳ್ಳೆ ರೋಮ್ಯಾಂಟಿಕ್ ಆಗಿ ಕಾಣೋ ತರ ರೆಡಿ ಆಗಿ ಬಂದಿರುವೆಯಲ್ಲೇ? ಏನು ವಿಶೇಷ?"*

*"ಏನಿಲ್ಲ, ಯಾಕೆ ನಾನು ಹಾಗೆ ರೆಡಿ ಆಗಬಾರ್ದ?"*

*"ಎಂದೂ ಇಲ್ಲದ ಈ ಮೇಕ್ ಅಪ್ ಇವತ್ಯಾಕೆ ಅಂತ?"*

*"ಹಾಗೇನಿಲ್ಲ ಒಂದೇ ತರ ಇರೋಕೆ ನಾನೇನು ಕಲ್ಲು ಬಂಡೆಯಾ? ಯಾಕೋ ನನಗೆ ಇವತ್ತು ಈ ತರ ಡ್ರೆಸ್ ಮಾಡಿಕೊಳ್ಳಬೇಕು ಅಂತ ಅನ್ನಿಸ್ತು ಅದಕ್ಕೆ ಮಾಡ್ಕೊಂಡೆ"*

*"ಲೇ ಸುಮಿ, ಇವತ್ತು ಯಾರಾದ್ರೂ ಹುಡುಗರು ಆತ್ಮಹತ್ಯೆ ಮಾಡಕೊಳ್ಳೋದು ಗ್ಯಾರಂಟಿ ಕಣೆ"*

ಎಂದಾಗ ಸುಮಾ ಅವಳನ್ನು ಒಮ್ಮೆಲೇ ನೋಡಿ ಗಂಭೀರವಾಗಿ 

*"ಯಾಕೆ ಕಾವೇರಿ?"*

ಎಂದು ಮುಗ್ಧರಂತೆ ಕೇಳಿದಾಗ, ಕಾವೇರಿ ನಗುತ್ತ

*"ಮತ್ತೇನೇ, ಸುಮಿ ನೀನು ಇಂದು ದೇವಲೋಕದ ಅಪ್ಸರೆಯಂತೆ ಕಾಣುತ್ತಿರುವೆ. ಯಾರಾದರೂ ಸ್ಟೂಡೆಂಟ್ಸ್ ಆತ್ಮಹತ್ಯೆ ಮಾಡಿಕೊಂಡರೆ ನೀನೆ ಅದಕ್ಕೆ ಜವಾಬ್ದಾರಿ. ಇಲ್ಲವಾದರೆ ಇಂದು ಸ್ಟೂಡೆಂಟ್ಸ್ ಕನಸಿನಲ್ಲಿ ನೀನು ಮೋಹಿನಿಯಾಗಿ ಅಡ್ಡಾಡುವದು ಮಾತ್ರ 100 ಪರ್ಸೆಂಟ್ ಗ್ಯಾರಂಟಿ"*

ಎಂದು ಹೇಳಿ ನಗುತ್ತಿರುವಾಗ, ಸುಮಾ ಅವಳ ಮಾತನ್ನು ಕೇಳಿ ತಾನು ನಕ್ಕಳು. 

ಅವಳ ಮಾತಿಗೆ ಸುಮಾ ನಗುತ್ತ

*"ಹೋಗೆ"*

ಎಂದು ಹೇಳಿ ತನ್ನ ಕ್ಲಾಸ್ ಕಡೆಗೆ ಹೊರಟಳು. ಅವಳು ಕ್ಲಾಸಿಗೆ ಹೋಗುತ್ತಿರಬೇಕಾದರೆ, ಸ್ಟೂಡೆಂಟ್ಸ್ ಎಲ್ಲರೂ ಅವಳನ್ನು ನೋಡುತ್ತಲೇ ಇದ್ದರು. ನೇರವಾಗಿ ನೋಡದಿದ್ದರೂ ಸಹ ಅವಳನ್ನು ಕಳ್ಳಗಣ್ಣಿನಿಂದ ನೋಡುತ್ತಿದ್ದರು. ಅವಳಿಗೆ ಅದು ಗೊತ್ತಿದ್ದರೂ ಸಹ ತನಗೇನು ಗೊತ್ತಿಲ್ಲದವರಂತೆ ಸುಮ್ಮನೆ ಹೋದಳು. ಕ್ಲಾಸ್ ರೂಮಿನಲ್ಲಿ ಹೋದಾಗ ಎಲ್ಲ ಸ್ಟೂಡೆಂಟ್ಸ್ ಎದ್ದು ಅವಳಿಗೆ ಗೌರವ ಸೂಚಿಸಿದರು. ಅವರಿಗೆ ಕುಳಿತುಕೊಳ್ಳುವಂತೆ ಹೇಳಿ ತಾನು ಸಹ ತನ್ನ ಚೇರ್ ಮೇಲೆ ಕುಳಿತುಕೊಂಡಳು. ಅಷ್ಟರಲ್ಲಿ ಒಂದು ಹುಡುಗಿ ಎದ್ದು ನಿಂತು

*"ಮ್ಯಾಮ್, ಇಂದು ನಿಮ್ಮ ಬರ್ತ್ ಡೇ ಇದೆಯಾ?"*

ಎಂದಾಗ ಆ ಹುಡುಗಿಯ ಕಡೆಗೆ ಆಶ್ಚರ್ಯದಿಂದ ನೋಡುತ್ತಾ, 

*"ಇಲ್ವಲ್ಲ ಯಾಕೆ?"*

*"ಏನಿಲ್ಲ ಮ್ಯಾಮ್, ಇಂದು ತುಂಬಾ ಚನ್ನಾಗಿ ಕಾಣುತ್ತಿದ್ದೀರಾ ಸ್ಪೆಷಲ್ ಕೇರ್ ತಗೊಂಡು ಡ್ರೆಸ್ ಮಾಡಿಕೊಂಡಿದ್ದೀರಿ ಅದಕ್ಕೆ ಎಲ್ಲರ ಪರವಾಗಿ ಕೇಳಿದೆ. ಒಂದು ವೇಳೆ ಇಂದು ನಿಮ್ಮ ಬರ್ತ್ ಡೇ ಇದ್ದರೆ ನಾವೆಲ್ಲರೂ ನಿಮಗೆ ವಿಶ್ ಮಾಡಬೇಕು ಅಂತ ಮಾಡಿದ್ವಿ"*

ಎಂದು ಹೇಳಿದಾಗ, ಅವಳಿಗೆ ಇಂದು ತನಗೆ ಒಂದು ರೀತಿಯಿಂದ ಅವರು ಹೇಳಿದಂತೆ ಬರ್ತ್ ಡೇ ಇದ್ದಂತೆ. ಇಂದು ಅಭಿಯ ಜೊತೆಗೆ ಮಾತನಾಡಿದ ಕಾರಣ, ಅವನಿಂದ ಹೊಸ ಮನುಷ್ಯಳಾಗಿದ್ದೇನೆ. ಅದಕ್ಕೆ ಸ್ಟೂಡೆಂಟ್ಸ್ ಹೇಳಿದ ರೀತಿಯಲ್ಲಿ ಇಂದು ನನ್ನ ಹೊಸ ಜನ್ಮದ ಬರ್ತ್ ಡೇ, ಅಂತ ಅಂದುಕೊಂಡು, 

*"ಒಂದು ರೀತಿಯಲ್ಲಿ ನೀವು ಹೇಳಿದ್ದು ಸರಿ. ಅದಕ್ಕೆ ಈ ತರಹ ಇದ್ದೀನಿ ಇವತ್ತು."*

ಎಂದು ಹೇಳಿದ ಮೇಲೆ, ಎಲ್ಲರೂ ಸರದಿಯಂತೆ ಬಂದು ಅವಳಿಗೆ ಬರ್ತ್ ಡೇ ವಿಶ್ ಮಾಡಿ ಹೋಗಿ ತಮ್ಮ ತಮ್ಮ ಜಾಗೆಯ ಮೇಲೆ ಕುಳಿತುಕೊಂಡರು. ಅವರು ತನಗೆ ಬರ್ತ್ ಡೇ ವಿಶ್ ಮಾಡುತ್ತಿರುವದನ್ನು ಕಂಡ ಸುಮಾ ಮನದಲ್ಲಿ ತುಂಬಾ ಆನಂದಿಸಿದಳು. ಅವಳು ಇಂದು ಬೆಳಿಗ್ಗೆಯಿಂದ ನಿಜವಾಗಿ ಹೊಸ ಹುಟ್ಟು ಪಡೆದ ಹಾಗಾಗಿತ್ತು. ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ ಕುಳಿತಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ. ಒಂದು ರೀತಿಯ ಅಯೋಮಯ ಮಧುರ ಭಾವನೆ ಅವಳ ಮನದ ತುಂಬಾ ತುಂಬಿತ್ತು. ಅಂತಹದರಲ್ಲಿ ಇಂದು ತನ್ನ ಸ್ಟೂಡೆಂಟ್ಸ್ ತನ್ನ ಬರ್ತ್ ಡೇ ಎಂದು ತಿಳಿದುಕೊಂಡು ವಿಶ್ ಬೇರೆ ಮಾಡ್ತಿದ್ದಾರೆ. ಅವರ ಉತ್ಸಾಹ ಕಂಡು ಅವಳಿಗೂ ಉತ್ಸಾಹ ಇಮ್ಮಡಿಸಿತು. ಇದಕ್ಕೆಲ್ಲ ಕಾರಣ ಅಭಿ. ಹಾಗಂದುಕೊಂಡೆ ಅವಳು ಅಂದಿನ ಪಾಠವನ್ನು ಪ್ರಾರಂಭಿಸಿದಳು. ಅವಳು ಪಾಠ ಮಾಡಬೇಕೆನ್ನುವಷ್ಟರಲ್ಲಿ, ಸ್ಟೂಡೆಂಟ್ಸ್ ಪೈಕಿ ಒಬ್ಬಳು ಹುಡುಗಿ ಎದ್ದು ನಿಂತು

*"ಮ್ಯಾಮ್, ಒಂದು ರಿಕ್ವೆಸ್ಟ್."*

ಪುಸ್ತಕದ ಮೇಲೆ ಕಣ್ಣು ಆಡಿಸುತ್ತಲೇ ಅವಳತ್ತ ನೋಡದೆ, 

*"ಏನಮ್ಮ"*

*"ಮ್ಯಾಮ್, ಇಂದು ನಿಮ್ಮ ಬರ್ತ್ ಡೇ. ಅದಕ್ಕೆ ಇವತ್ತು ಪಾಠ ಬೇಡ. ಬೇರೆ ಕಲ್ಚರಲ್ ಆಕ್ಟಿವಿಟೀಸ್ ಏನಾದ್ರೂ ಮಾಡೋಣ ಅಂತ ಅಂತಿದಾರೆ ಎಲ್ರೂ"*

ಅವಳು ಹಾಗೆ ಹೇಳಿದಾಗ ಸುಮಾ ಸುಮ್ಮನೆ ಒಂದು ಸಲ ತನ್ನೆದುರಿಗೆ ಕುಳಿತ ಸ್ಟೂಡೆಂಟ್ಸ್ ಗಳನ್ನೂ ನೋಡಿದಳು. ಅವಳಿಗೂ ಸಹ ಇಂದು ಯಾವುದೇ ಪಾಠ ಮಾಡುವ ಮೂಡ್ ಇರಲಿಲ್ಲ. ಹಾಗೆ ಅವರುಗಳನ್ನು ನೋಡುತ್ತಾ, 

*"ಸರಿ ಹಾಗಾದರೆ ನಾನು ಸ್ಟಾಫ್ ರೂಮಿಗೆ ಹೋಗ್ತೀನಿ ನೀವು ನಿಮಗೇನು ಬೇಕೋ ಮಾಡ್ಕೊಳ್ಳಿ"*

ಎಂದು ಹೇಳಿದಾಗ ಸ್ಟೂಡೆಂಟ್ಸ್ 

*"ಬೇಡ ಮ್ಯಾಮ್, ನೀವು ಇಲ್ಲೇ ಕೂತ್ಕೊಳ್ಳಿ. ನಿಮ್ಮ ಮುಂದೆ ನಮ್ಮ ಪರ್ಫಾರ್ಮೆನ್ಸ್ ತೋರಿಸ್ತೀವಿ"*

ಎಂದು ಒತ್ತಾಯ ಮಾಡತೊಡಗಿದರು. ಏಳಲು ತಯಾರಾದ ಸುಮಾ ಅವರ ಮಾತನ್ನು ಕೇಳಿ ಮತ್ತೆ ಚೇರ್ ಮೇಲೆ ಕುಳಿತುಕೊಂಡಳು. 

*"ಹೇಳಿ ಏನು ಮಾಡಬೇಕು ಅಂತ ಮಾಡಿರುವಿರಿ?"*

*"ನಿಮಗಿಷ್ಟವಾದದ್ದು ಹೇಳಿ ಮ್ಯಾಮ್ ಅದನ್ನೇ ಮಾಡೋಣ"*

"* ಸರಿ, ದಿನಾ ಸೀರಿಯಸ್ ಆಗಿ ಅದೇ ಪಾಠ ನಾನು ಹೇಳುವದು ನೀವು ಕೇಳುವದು ಆಗಿ ಹೋಗಿದೆ. ಇಂದು ಸ್ವಲ್ಪ ನಗೋ ಟಾಪಿಕ್ ಇರ್ಲಿ. ಜೋಕ್ಸ್ ಹೇಳಿ"*

ಎಂದಾಗ ಎಲ್ಲರಿಗೂ ಆ ಟಾಪಿಕ್ ಇಷ್ಟಾ ಆಯ್ತು. 

*"ಆದರೆ, ನಿಮ್ಮ ನಗಿವಿನ ಧ್ವನಿ ರೂಮ್ ಬಿಟ್ಟು ಆಚೆ ಹೋಗಬಾರದು"*

ಎಂದು ವಾರ್ನಿಂಗ್

ಕೊಟ್ಟಳು. ಅದಕ್ಕೆ ಅವರೆಲ್ಲರೂ ಒಪ್ಪಿಕೊಕೊಂಡರು. 

ಒಬ್ಬೊಬ್ಬರಾಗಿ ಬಂದು ಅವಳ ಪಕ್ಕದಲ್ಲಿ ನಿಂತುಕೊಂಡು ಜೋಕ್ ಹೇಳತೊಡಗಿದರು. 

ಕೆಲವರು ಟಿವಿ ಯಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ನೋಡಿದ ವಿಷಯಗಳನ್ನು ಅದರಲ್ಲಿ ಬಂದ ಜೋಕುಗಳನ್ನು ಹೇಳುತ್ತಿದ್ದರೆ ಕೆಲವರು ಎಲ್ಲಿಯೋ ಓದಿದ ಜೋಕುಗಳನ್ನು ಹೇಳುತ್ತಿದ್ದರು. ಅದರಲ್ಲೂ ಗಂಡು ಹುಡುಗರಿಗೆ ಇಂಥ ಅವಕಾಶ ಸಿಕ್ಕರೆ ಬಿಟ್ಟಾರೆಯೇ. ಮೊದಲೇ ಗಂಡು ಹುಡುಗರು ಮಂಗನ ಅಪರಾವತಾರ. ಅದರಲ್ಲೂ ತುಂಟ ಹುಡುಗರ ಜೋಕ್ ಕೇಳುವ ಹಾಗಿದ್ದವು. ಅವರು ತಮ್ಮ ಜೋಕಿನ ಜೊತೆಗೆ ಬಾಡಿ ಲ್ಯಾಂಗ್ವೇಜ್ ಸಹ ಕೂಡಿಸುತ್ತಿದ್ದುದರಿಂದ, ಅವರು ಹೇಳುವ ಜೋಕ್ ಇನ್ನೂ ಹೆಚ್ಚಾಗಿ ರಂಗೇರುತ್ತಿತ್ತು. ಅಂಥವರನ್ನು ನೋಡುತ್ತಿದ್ದಂತೆ ಅವಳಿಗೆ ಅಭಿ ನೆನಪಾದ. ಅವನು ಸಹ ಇದೆ ರೀತಿಯಾಗಿ ತುಂಟತನ ಮಾಡುತ್ತಿರುತ್ತಾನೆ. ಆ ಒಂದು ಪಿರಿಯಡ್ ದಲ್ಲಿ ಅವಳು ತನ್ನ ಸ್ಟೂಡೆಂಟ್ಸ್ ಹೇಳಿದ ಜೋಕ್ ಕೇಳಿ ನಕ್ಕು ನಕ್ಕು ಇಟ್ಟಳು. ಅವಳು ನಗುತ್ತಿದ್ದರೆ, ಅವಳ ಬಾಯಿಂದ ಮುತ್ತಿನ ಸುರಿಮಳೆ ಬಿಳುತ್ತಿರುವಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಅವಳು ನಗುತ್ತಿದ್ದ ಫೋಟೋ ಒಂದು ಹುಡುಗಿ ತನ್ನ ಮೊಬೈಲಿನಿಂದ ತೆಗೆದಳು ಅದನ್ನು ಸುಮಾ ಗಮನಿಸಲಿಲ್ಲ. ಕ್ಲಾಸ್ ಮುಗಿದಾಗ, ಸುಮಾ ಹೊರಟಳು. ಅಷ್ಟರಲ್ಲಿ ಆ ಹುಡುಗಿ ಸುಮಾಳ ಹಿಂದೆ ಬಂದಳು. 

**ಮ್ಯಾಮ್, ಒಂದು ನಿಮಿಷ"*

ಎಂದಾಗ ಹೊರಟಿದ್ದ ಸುಮಾ ನಿಂತುಕೊಂಡಳು. ಆ ಹುಡುಗಿ ಬಂದು ತನ್ನ ಮೊಬೈಲ್ ದಲ್ಲಿ ಸುಮಾ ನಗುತ್ತಿದ್ದ ಫೋಟೋ ಸೈಡ್ ಆಂಗಲ್ ದಿಂದ ತೆಗೆದಿದ್ದು ತೋರಿಸಿದಾಗ ಅವಳಿಗೆ ತುಂಬಾ ಆಶ್ಚರ್ಯವಾಯಿತು. ತಾನು ಇಷ್ಟು ಸುಂದರವಾಗಿ ಕಾಣುತ್ತಿರುವೆನೇ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಅವಳಿಗೆ ಆ ಫೋಟೋ ತನಗೆ ಕಳುಹಿಸಲು ಹೇಳಿದಳು. ಆ ಹುಡುಗಿ ಆ ಫೋಟೋ ಸುಮಾಳಿಗೆ ಕಳುಹಿಸಿದಾಗ ಅದನ್ನೇ ನೋಡುತ್ತಾ ಸ್ಟಾಫ್ ರೂಮಿಗೆ ಬಂದಳು. ಇವಳು ಬರುವದಕ್ಕಿಂತ ಮುಂಚಿತವಾಗಿ ಕಾವೇರಿ ಅಲ್ಲಿಗೆ ಬಂದು ಕುಳಿತಿದ್ದಳು. ಸುಮಾ ಬರುತ್ತಲೇ,

*"ಲೇ ಸುಮಿ, ಮನೆಗೆ ಹೋಗಿ ದೃಷ್ಠಿ ತೆಗೆಸಿಕೊಳ್ಳೇ ಯಾರ ಕಡೆಯಿಂದಾದ್ರೂ"*

ಎಂದು ಸಲಹೆ ನೀಡಿದಳು. ಸುಮಾ ಅದಕ್ಕೆ ಒಪ್ಪಿಕೊಂಡು ತಯಲ್ಲಾಡಿಸಿದಳು. ನಂತರ ಕಾವೇರಿ ಅವಳನ್ನು ಕರೆದು ತನ್ನ ಹತ್ತಿರ ಕುಳ್ಳರಿಸಿಕೊಂಡು

*"ಲೇ ಸುಮಿ, ಒಂದು ಮಾತು ಹೇಳ್ತಿನಿ ತಪ್ಪು ತಿಳಿಬೇಡ್ವೇ. ನೀನು ತುಂಬಾ ಸುಂದರವಾಗಿದ್ದಿಯ. ಅದು ನಿನಗೂ ಗೊತ್ತು. ಇನ್ನು ವಯಸ್ಸಿದೆ. ೦ ಅಂದ್ರೆ ಮಹಾ ವಯಸ್ಸೇನಲ್ಲ. ಇನ್ನೂ ಸಹ ನೀನು ಮತ್ತೊಂದು ಮದುವೆಯಾಗಬಹುದು. ನೀನು ಒಪ್ಪಿಕೊಂಡ್ರೆ ನಿನ್ನ ಹಿಂದೆ ಈಗಲೂ ಹೊಸ ಗಂಡು ಬಂದೆ ಬರುತವೆ ಕಣೆ ಒಂದು ಸಲ ಯೋಚನೆ ಮಾಡು. ನಿನ್ನಂಥ ಹೆಣ್ಣು, ಸುಮ್ಮನೆ ದಿಕ್ಕಿಲ್ಲದಂತೆ ಇರುವದು ಸರಿಯಲ್ಲ. ನಾನು ಹೇಳಿದ ಮಾತು ಚನ್ನಾಗಿ ಯೋಚನೆ ಮಾಡು"*

ಎಂದು ಹೇಳಿದಾಗ, ಸುಮಾ ಕಾವೇರಿಗೆ 

*"ಆಯ್ತಮ್ಮಾ ನನಗೂ ಒಂಟಿ ಜೀವನ ಸಾಕಾಗಿದೆ. ನೋಡೋಣ ಇನ್ನು ಸ್ವಲ್ಪ ದಿನ ಮನಸ್ಸು ಬದಲಾವಣೆ ಆಗುವ ಚಾನ್ಸ್ ಇದೆ ಅಂತ ಅಂದ್ಕೊಂಡಿದ್ದೀನಿ"*

ಎಂದು ಹೇಳಿದಾಗ ಅವಳ ಮಾತನ್ನು ಕೇಳಿದ ಕಾವೇರಿಗೆ ಆಶ್ಚರ್ಯ ಆಯ್ತು. ಒಮ್ಮೆಲೇ ಖುಷಿಯಿಂದ 

*"ಸುಮಿ ನೀನು ಹೇಳೋ ಮಾತು ನಿಜವೇನೇ"*

ಎಂದು ಕೇಳಿದಾಗ ಸುಮಾ,

*"ಅಯ್ಯೋ, ಹಾಗಲ್ಲಮ್ಮಾ ಆತುರಗೆಟ್ಟ ಆಂಜನೇಯನ ಹಾಗೆ ಆಡಬೇಡ. ನಾನು ಹೇಳಿದರ ಅರ್ಥ ಇಷ್ಟೇ. ನಾನು ಇನ್ನೂ ಪೂರ್ತಿಯಾಗಿ ಯೋಚನೆ ಮಾಡಿಲ್ಲ. ಮಾಡಿ ನಿರ್ಧಾರಕ್ಕೆ ಬಂದರೆ ನಾನು ನಿಂಗೆ ಹೇಳ್ತಿನಿ."*

*"ಅಯ್ಯೋ ತಾಯಿ, ಇದರಲ್ಲಿ ಯೋಚನೆ ಮಾಡುವಂಥ ವಿಷಯ ಏನಿದೆ? ನಿನಗೆ ಹಿಂದೆ ಮುಂದೆ ಯಾರಾದರೂ ಇದ್ದಾರಾ? ಅವರ ಅಭಿಪ್ರಾಯ ತೆಗೆದುಕೊಳ್ಳೋಕೆ, ಸುಮ್ನೆ ಹೂ ಅಂದ್ಬಿಡು, ಮುಂದಿನದು ನಾನು ನೋಡ್ತೀನಿ"*

*"ಏನು ನೋಡ್ತೀಯ?":*

ಎಂದು ನಗುತ್ತ ಸುಮಾ ಕೇಳಿದಾಗ

*"ಯಪ್ಪಾ, ನಿನಗೆ ಸೂಟ್ ಆಗುವ ಒಬ್ಬ ಹುಡುಗನನ್ನು"*

*"ಆಯ್ತು ನಾನು ನಿರ್ಧಾರ ಮಾಡಿದ ಮೇಲೆ ಹೇಳ್ತಿನಿ ಅಲ್ಲಿ ತನಕ ನನ್ನ ಕಾಡಬೇಡ ತಾಯಿ"*

ಎಂದು ತನ್ನ ಎರಡೂ ಕೈಗಳನ್ನು ಮುಗಿದು ಅವಳಿಗೆ ನಾಟಕೀಯವಾಗಿ ಹೇಳಿದಾಗ, ಅದನ್ನು ನೋಡಿ ಕಾವೇರಿ ನಕ್ಕಳು. ಆದರೂ ಸುಮಾ ತನ್ನ ಮನಸ್ಸು ಬದಲಾವಣೆ ಆಗುವದರಲ್ಲಿ ಇದೆ ಅಂತ ಹೇಳಿದಾಗ ನಿಜವಾಗಿ ಕಾವೇರಿ ತುಂಬಾ ಸಂತೋಷ್ ಪಟ್ಟುಕೊಂಡಳು. ಕಾವೇರಿ ಸುಮಾಳನ್ನು ತನ್ನ ಒಡ ಹುಟ್ಟಿದ ತಂಗಿಯಂತೆ ನೋಡುತ್ತಿದ್ದಳು. 40 ಅವಳು ನೊಂದುಕೊಂಡರೆ ಕಾವೇರಿ ತುಂಬಾ ಸಂಕಟ ಪಟ್ಟುಕೊಳ್ಳುತ್ತಿದ್ದಳು. ಅಲ್ಲದೆ, ಕಾವೇರಿ ಮನದಲ್ಲಿ ಸುಮಾಳನ್ನು ಒಂಟಿಯಾಗಿರುವದು ಮತ್ತು ಉದಾಸೀನತೆಯಿಂದ ಇರುವದನ್ನು ನೋಡಿ ಅವಳಿಗೆ ತಡೆಯುವದಕ್ಕಾಗದೆ ಸಾಕಷ್ಟು ಬಾರಿ ಅವಳಿಗೆ ಬುದ್ದಿ ಹೇಳಿ ತಿದ್ದುವದಕ್ಕೆ ಪ್ರಯತ್ನ ಮಾಡಿದ್ದಳು. ಆದರೆ ಸುಮಾ ಯಾವುದಕ್ಕೂ ಬಗ್ಗಿರಲಿಲ್ಲ. ಆದರೆ ಇಂದು ಅವಳು ಹೇಳುತ್ತಿದ್ದ ಮಾತನ್ನು ಕೇಳಿದಾಗ ಅವಳಿಗಿಂತಲೂ ಕಾವೇರಿಗೆ ಹೆಚ್ಚು ಸಂತೋಷವಾಗಿತ್ತು. 


15


ಕಾಲೇಜು ಮುಗಿಸಿಕೊಂಡು ಮನೆಗೆ ಬಂದು ಸುಮಾ, ಕಾಫಿ ಮಾಡಿಕೊಂಡು ಕುಡಿಯುತ್ತಾ ಸೋಫಾದ ಮೇಲೆ ಕುಳಿತುಕೊಂಡಳು. ಹಾಗೆ ಎದುರಿಗಿದ್ದ ಟಿವಿಯನ್ನು ಹಚ್ಚಿದಾಗ, ಅದರಲ್ಲಿ 

*"ಬಾಳ ಬಂಗಾರ ನೀನು, 

ಹಣೆಯ ಸಿಂಗಾರ ನೀನು 

ನಿನ್ನ ಕೈಲಾಡೋ ಬೊಂಬೆ ನಾನಯ್ಯ,*"

 ಅಂತ ಬಂಗಾರದ ಮನುಷ್ಯ ಚಿತ್ರದ ಹಾಡು ನಡೆಯುತ್ತಿತ್ತು. ಆ ಹಾಡನ್ನು ನೋಡುತ್ತಿದ್ದಂತೆ ಸುಮಾ, ನಾಯಕಿಯ ಜೊತೆಗೆ ತನ್ನನ್ನು ಹೋಲಿಸಿಕೊಂಡು ನಾಯಕನ ಜೊತೆಗೆ ಅಭಿ ಅನ್ನು ಹೋಲಿಸಿಕೊಂಡಳು. ಆ ರೀತಿಯಾಗಿ ತಮ್ಮಿಬ್ಬರನ್ನು ಹೋಲಿಸಿಕೊಂಡು ಆ ಹಾಡನ್ನು ನೋಡುತ್ತಿರುವಾಗ ಹೋಳಿಗೆ ನಿಜವಾಗಿಯೂ ಆ ಹಾಡು ತುಂಬಾ ತೃಪ್ತಿ ನೀಡಿತು. ಅದರಲ್ಲಿ ನಡುವೆ ನಾಯಕಿಯು ಭಾವುಕಳಾಗಿ

*" ನನ್ನೆದೆಯು ನಿನ್ನ

ಸೆರೆಮನೆಯೂ ಚಿನ್ನ

ಅದರಿಂದ ಎಂದು

ಬಿಡುಗಡೆಯು ಸಿಗದು"*

ಎಂಬ ಸಾಲುಗಳನ್ನು ಕೇಳುತ್ತಿದ್ದರೆ, ಅಭಿಯನ್ನು ತಾನು ತನ್ನ ಮನಸ್ಸಿನ ಮನೆಯಲ್ಲಿ ಬಂದಿ ಮಾಡಿಕೊಂಡು ಅವನನ್ನು ಯಾವ ಕಾರಣಕ್ಕೂ ತನ್ನಿಂದ ಅಗಲದಂತೆ ಮಾಡಿಬಿಡುತ್ತೇನೆ ಅಂತ ಅಂದುಕೊಂಡು, ಹಾಡಿನ ಜೊತೆಗೆ ಪ್ರಸ್ತುತ ತನ್ನ ಜೀವನದಲ್ಲಿ ನಡೆಯುತ್ತಿದ್ದ ಘಟನೆಯನ್ನು ತುಲುನೇ ಮಾಡತೊಡಗಿದಳು. ಏಕೋ ಗೊತ್ತಿಲ್ಲ ಮೊದಮೊದಲು ಆ ಹಾಡು ನೋಡುವಾಗ ಅವಳಿಗೆ ಬೇಸರವಾಗುತ್ತಿತ್ತು. ಆದರೆ ಇಂದು ಮಾತ್ರ ಅದೇ ಹಾಡನ್ನು ಪದೇಪದೇ ನೋಡುವಂತೆ ಮನಸ್ಸು ಪ್ರೇರೇಪಿಸುತ್ತಿತ್ತು.

    ಹಾಗೆ ಹಾಡನ್ನು ನೋಡುವುದು ಮುಗಿದಮೇಲೆ ಟಿವಿ ಆಫ್ ಮಾಡಿ ಹಾಗೆ ಸೋಫಾದ ಮೇಲೆ ಮಲಗಿಕೊಂಡು ಛಾವಣಿಯನ್ನು ನೋಡುತ್ತಾ ತನ್ನ ಜೊತೆಗೆ ಅಭಿಯನ್ನು ಕಲ್ಪಿಸಿಕೊಳ್ಳತೊಡಗಿದಳು. ಒಂದು ಕ್ಷಣ ಅವನು ಹೇಗಿರಬಹುದು ಎಂಬ ಕುತೂಹಲ ಬಂದಿತು. ಆದರೆ, ಅವನು ತಾನು ಹೇಗೆ ಇರುವೆ ಅಂತ ಹೇಳಿದ್ದ ವಾಕ್ಯಗಳನ್ನು ನೆನಪಿಸಿಕೊಂಡಾಗ, ಅವನು ಹೇಳಿದ ರೀತಿಯಲ್ಲಿ ಅವನನ್ನು ಕಲ್ಪಿಸಿಕೊಂಡು ನೋಡಿದಾಗ, ಅವನು ಸುಂದರವಾಗಿದ್ದಾನೆ ಎಂದು ಮಾತ್ರ ಅವಳಿಗೆ ಅರಿವಾಯಿತು. ನಾನೇನು ಕಮ್ಮಿ ಇಲ್ಲ. ತನ್ನ ರೂಪ ಸಹ ಚಂದುಳ್ಳಿ ಚೆಲುವೆಯ ರೂಪ. ಅದರಲ್ಲಿ ಅಲ್ಲಗಳೆಯುವಂತಿಲ್ಲ ವಿಷಯ ಏನು ಇಲ್ಲ.

      ಇದೇ ರೀತಿಯಾಗಿ ವಿಚಾರಮಾಡುತ್ತಾ ಸಂಜೆಯ ಅಡುಗೆಯನ್ನು ಮಾಡಿ ಊಟಕ್ಕೆ ಕುಳಿತಳು. ಅದೇ ಯೋಚನೆಯಲ್ಲಿ ಒಂದು ತರಹ ಮಧುರ ಭಾವನೆಯಿಂದ ಅವನನ್ನೇ ನೆನೆಯುತ್ತ ಊಟ ಮಾಡಿದರೂ ಸಹ ಅವಳಿಗೆ ಊಟದ ರುಚಿ ಗೊತ್ತಾಗಲಿಲ್ಲ. ಊಟದ ರುಚಿ ಗೊತ್ತಾಗದ ರೀತಿಯಂತೆ ಅವಳು ತನ್ನದೇ ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಳು. ಊಟ ಮುಗಿಸಿದ ಮೇಲೆ ಗಡಿಯಾರವನ್ನು ನೋಡುತ್ತಿದ್ದಂತೆ, 8 ಗಂಟೆ 20 ನಿಮಿಷ ಸಮಯ ತೋರುತ್ತಿತ್ತು. ಅದನ್ನು ನೋಡಿದ ಅವಳು, ಗಡಿಯಾರಕ್ಕೆ ಬೈದುಕೊಂಡಳು.

*" ಗಡಿಯಾರವೇ ನೀನು ತೋರಿಸುತ್ತಿದ್ದು ಸಮಯ 8: 20 ನಿಮಿಷ ಆದರೆ ನೀನು ಮಾತ್ರ ಪಕ್ಕ 420. ನಮಗೆ ಬೇಡವಾದಾಗ ಮಾತ್ರ ನೀನು ಒಲಂಪಿಕ್ ರೇಸ್ನ ರೀತಿಯಲ್ಲಿ ಸಮಯವನ್ನು ಮುಂದೆ ತೆಗೆದುಕೊಂಡು ಹೋಗುತ್ತೆ. ಆದರೆ ಈಗ ನನಗೆ ಸಮಯ ಮುಂದೆ ಹೋಗಬೇಕು ಎನ್ನುತ್ತಿರುವಾಗ ನೀನು ಮಾತ್ರ ನಿಧಾನವಾಗಿ ಆಮೆಗತಿಯಲ್ಲಿ ನಡೆಯುತ್ತಿರುವ. ನೀನು ನಿರ್ಜೀವವಾದ ವಸ್ತುವಾದರೂ ಸಹ ನಿನ್ನಲ್ಲಿ ಬೇರೆಯವರನ್ನು ಕಾಡುವ ಗುಣ ಹೆಚ್ಚಾಗಿದೆ. ಸಮಯವನ್ನು ನೋಡುತ್ತ ಪ್ರಲಾಪಿಸುವದು ಎಲ್ಲರ ಜೀವನದಲ್ಲಿ ನಡೆಯುವ ಒಂದು ಸಾಮಾನ್ಯ ಅಂಶವಿದ್ದರೂ ಸಹ, ಅವಸರವೇ ಅವರಿಗೆ ನಿಧಾನಗತಿಯ ವೇಗ ತೋರುತ್ತ, ನಿಧಾನವಿದ್ದವರಿಗೆ ಅವಸರದ ವೇಗದಲ್ಲಿ ನಿನ್ನ ರೂಪ ತೋರಿಸಿಕೊಳ್ಳುವ. ಈ ರೀತಿಯಾಗಿ ನೀನು ಮಾಡುವುದು ನಿನ್ನ ಕ್ರೂರತನದ ಪರಿಚಯ ಅಷ್ಟೇ"*

ಎಂದು ಮನಸ್ಸಿನಲ್ಲಿಯೇ ಗಡಿಯಾರವನ್ನು ಬೈದುಕೊಂಡಳು. ನಂತರ ತನ್ನ ವಿಚಾರಕ್ಕೆ ತಾನೇ ನಕ್ಕು ತಲೆ ಕೊಡವಿಕೊಂಡು ಎಲ್ಲ ಬಾಗಿಲುಗಳನ್ನು ಲಾಕ್ ಮಾಡಿ ಬೆಡ್ರೂಮಿಗೆ ಹೋಗಿ, ಬಾಲ್ಕನಿಯಲ್ಲಿರುವ ಚೇರ್ ಮೇಲೆ ಕುಳಿತುಕೊಂಡಳು. ಲೈಟು ಹಾಕಿಕೊಳ್ಳದೆ ಕತ್ತಲಲ್ಲಿ ಅವಳು ಕುಳಿತುಕೊಂಡಿದ್ದರಿಂದ ಬೇರೆ ಯಾರಿಗೂ ಅವಳು ಕಾಣುತ್ತಿರಲಿಲ್ಲ. ಫ್ರೆಶ್ ಆಗಿ ಬಂದ ಅವಳು ಲೈಟಾಗಿ ಡಿಯೋ ಮೈಯಿಗೆ ಹಚ್ಚಿಕೊಂಡಿದ್ದ ಕಾರಣ ತನ್ನ ಮೈಯಿಂದ ಹೊರಬರುತ್ತಿದ್ದ ಸುವಾಸನೆಯನ್ನು ತಾನೇ ಎಂಜಾಯ್ ಮಾಡುತ್ತ ಕುಳಿತುಕೊಂಡಿದ್ದರು.

ಅಷ್ಟರಲ್ಲಿ ಪಕ್ಕದ ಮನೆಯ ಮುದುಕ ಮತ್ತು ಮುದುಕಿಯರು ತಮ್ಮತಮ್ಮಲ್ಲಿ ಜಗಳ ಆಡತೊಡಗಿದರು. ದಿನಪೂರ್ತಿ ಸುಮ್ಮನೆ ಇರುವ ಅವರಿಬ್ಬರು, ರಾತ್ರಿಯಾದಂತೆ ಜಗಳ ಆಡುತ್ತಿದ್ದರು. ಜಗಳ ಹಾಡು ಹಚ್ಚುವ ಸಲುವಾಗಿ ಮಾತ್ರ. ಮುದುಕನಿಗೆ ಹಳೆಯ ಹಿಂದಿ ಹಾಡುಗಳು ಇಷ್ಟವಾಗುತ್ತಿದ್ದವು. ಅದೇ ಮುದುಕಿಗೆ ಕನ್ನಡದ ಹಳೆಯ ಹಾಡುಗಳು ಇಷ್ಟವಾಗುತ್ತಿದ್ದವು. ಅದಕ್ಕಾಗಿ ರಾತ್ರಿ ಹಾಡು ಹಚ್ಚಲು ಅವರಿಬ್ಬರ ನಡುವೆ ದಿನಾಲು ಕದನ ನಡೆಯುತ್ತಿತ್ತು. ಅದು ಒಂದು ರೀತಿಯಿಂದ ಸುಮಾಳಿಗೆ ಮನರಂಜನೆ ನೀಡುತ್ತಿತ್ತು. ಮೊದಮೊದಲು ಅವಳು ಅವರಿಬ್ಬರೂ ಆ ರೀತಿ ಜಗಳವಾಡುವುದನ್ನು ಕಂಡು, ತನ್ನ ಗಂಡನನ್ನು ನೆನಪಿಸಿಕೊಂಡು ದುಃಖ ಪಡುತ್ತಿದ್ದಳು. ಆದರೆ ತದನಂತರದಲ್ಲಿ ಅವರಿಬ್ಬರ ಜಗಳವನ್ನು ಮನರಂಜನೆಯ ದೃಷ್ಟಿಯಿಂದ, ನೋಡತೊಡಗಿ ಅದರಿಂದ ಮಜಾ ತೆಗೆದುಕೊಳ್ಳುತ್ತಿದ್ದಳು.

ಇಂದೂ ಸಹ ಅವರಿಬ್ಬರಲ್ಲಿ ಪ್ರತಿದಿನದಂತೆ ಜಗಳ ನಡೆದಿತ್ತು. ತಾನು ಹಿಂದಿ ಹಾಡು ಕೇಳುವುದಾಗಿ ಅದಕ್ಕೆ ಅಡ್ಡಿ ಮಾಡದಂತೆ ಮುದುಕ ಮುದುಕಿಗೆ ಹೇಳುತ್ತಿದ್ದ. ಮುದುಕಿ ತಾನು ಮೊದಲು ಕನ್ನಡ ಹಾಡು ಕೇಳುವುದಕ್ಕೆ ಅವಕಾಶ ಮಾಡಿಕೊಡಲು ಜಗಳ ತೆಗೆಯುತ್ತಿದ್ದರು. ಕೊನೆಗೆ ಮುದುಕ ಗೆದ್ದಿದ್ದ. ಅವನು ಹಾಡನ್ನು ಹಚ್ಚಿದ

*" ಗಾತಾ ರಹೇ ಮೇರಾ ದಿಲ್

ತೂಹೀ ಮೇರಿ ಮಂಜಿಲ್

ಕೈಯಿ ಬಿತೆ ನಾ ಎ ರಾತೇ

ಕೈಯಿ ಬಿತೆ ನಾ ಎ ದಿಲ್"*

ಎಂದು ಗೈಡ್ ಸಿನಿಮಾದ ಹಳೆಯ ಹಾಡನ್ನು ಹಚ್ಚಿದಾಗ, ಅದನ್ನು ಕೇಳುತ್ತ ಸುಮಾ ತನ್ಮಯ ಆದಳು. ತನ್ನ ಪರಿಸ್ಥಿತಿಗೆ ಅನುಗುಣವಾಗಿ ಮತ್ತು ತನ್ನ ಮನದ ಬಯಕೆಯನ್ನು ಆ ಹಾಡು ಅವಳಿಗೆ ಹೇಳುತ್ತಿತ್ತು. ಆ ಹಾಡಿನ ಮಾತಿನಲ್ಲಿಯೇ ಅವಳು ಮುಳುಗಿ ಹೋಗಿಬಿಟ್ಟಳು.

ಹಾಡು ಮುಗಿಯಿತು. ತನ್ನ ಮೊಬೈಲ್ ಆನ್ ಮಾಡಿ ಸಮಯ ನೋಡಿದಾಗ, ಎಂಟು ಮುಕ್ಕಾಲು ವಾಗಿತ್ತು. ಅಭಿ ಇನ್ನು ಆನ್ಲೈನ್ ಗೆ ಬರಲು ತುಂಬಾ ಸಮಯವಿತ್ತು. ಮತ್ತೆ ಬೇರೆ ಯಾವುದು ಹಾಡು ಬರುತ್ತದೆ ಎಂದು ಕಾಯತೊಡಗಿದಾಗ, ಈ ಬಾರಿ ಮುದುಕಿ ತನಗೆ ಬೇಕಾದ ಹಾಡನ್ನು ಹಚ್ಚಿದಳು. ಬಯಲುದಾರಿ ಚಿತ್ರದ ಹಾಡು

*" ಕನಸಲೂ ನೀನೆ

ಮನಸಲೂ ನೀನೆ

ನನ್ನಾಣೆ

ನಿನ್ನಾಣೆ

ಒಲಿದ ನಿನ್ನ

ಬಿಡೆನು ಚಿನ್ನ

ಇನ್ನು ಎಂದೆಂದಿಗೂ

ನಿನ್ನ ಎಂದೆಂದಿಗೂ"*

ಎಂದು ಹಾಡು ಮುಂದುವರಿಯುತ್ತದೆ ಅದನ್ನು ಕೇಳಿದ ಸುಮಾ ತಮಗರಿವಿಲ್ಲದಂತೆ ತುಂಬಾ ರೋಮ್ಯಾಂಟಿಕ್ ಮೂಡಿನಲ್ಲಿ ಹೊರಟುಹೋದಳು. ಹಾಡುಗಳಲ್ಲಿರುವ ಶಕ್ತಿಯೆಂದರೆ ಅದೇ. ಪದಗಳನ್ನು ಸಂಕೋಲೆಯಿಂದ ಬೆರೆಸಿ, ಪದ ಸಂಕೋಲೆಗಳು ಹೊಂದುವಂತೆ ಮಾಡುವವರಿಂದ ಸಂಗೀತದ ರೂಪದಲ್ಲಿ ಅವರ ಧ್ವನಿಯಿಂದ ಭಾವನೆಗಳನ್ನು ಬೆರೆಸಿ ಅದಕ್ಕೊಂದು ಅರ್ಥ ಬರುವ ರೀತಿಯಲ್ಲಿ ಸಂಯೋಜನೆ ಮಾಡಿದ ಪರಿಕಲ್ಪನೆ ಸಂಗೀತ ನಿರ್ದೇಶಕರದು ಆದರೆ, ಕೇಳುಗರ ಮನದಲ್ಲಿ ಯಾವ ವಿಷಯವೂ ಬರದೆ ಕೇವಲ ತಮ್ಮ ಜೀವನದ ಜೊತೆಗೆ ಆ ಹಾಡನ್ನು ಕಲ್ಪನೆ ಮಾಡಿಕೊಂಡು ಆನಂದಿಸುವದರಲ್ಲಿ ಮಾಡುವ ಮಾಂತ್ರಿಕತೆ ಸಂಗೀತಕ್ಕೆ ಇರುತ್ತದೆ. ಎಷ್ಟು ವಿಚಿತ್ರವಾದ ಕಲ್ಪನೆ. ಆದರೂ ಆ ಕಲ್ಪನೆ ಸತ್ಯ.

ಹಾಡು ಮುಗಿಯುತ್ತಿದ್ದಂತೆ ಸುಮಾ ಕುಳಿತಲ್ಲಿಯೇ ತೂಕಡಿಸತೊಡಗಿದಳು.

 ಅಷ್ಟರಲ್ಲಿ ಅವಳ ಕೈಯಲ್ಲಿದ್ದ ಮೊಬೈಲ್ ಸದ್ದು ಮಾಡಿತು. ತೂಕಡಿಸುತ್ತಿದ್ದ ಸುಮಾ ಎದ್ದು ಮೊಬೈಲ್ ನೋಡಿದಾಗ ಅಭಿ ಮೆಸೇಜ್ ಮಾಡಿದ್ದ. ಅವನ ಮೆಸೇಜ್ ಬಂದದ್ದು ಗೊತ್ತಾಗುತ್ತಲೇ ಸುಮಾಳ ಮೈಯಲ್ಲಿ ಏನೋ ಉತ್ಸಾಹ ಬಂದಂತಾಯಿತು. ಮೆಸೆಂಜರ್ ದಲ್ಲಿ

*" ಇಷ್ಟೇಕೆ ತಡ"*

 ಎಂದು ಬರೆದು ಕಳುಹಿಸಿದಾಗ ಅದನ್ನು ನೋಡಿದ ಅಭಿ,

*" ಹೊಟ್ಟೆ ಹಸಿದಿತ್ತು, ಊಟ ಮಾಡಿ ಬರಬೇಕಾದರೆ ತಡವಾಯಿತು"*

 ಎಂದು ಪ್ರತ್ಯುತ್ತರ ಬರೆದು ಕಳುಹಿಸಿದ.

*" ಈ ದಿನ ಮತ್ಯಾರಾದರೂ ಪ್ರೇಮಿಗಳನ್ನು ಒಂದುಗೂಡಿಸಲು ಹೋಗಿಲ್ಲವೇ?"*

*" ಈಗ ನಾನು ಹೋಗುವುದಿಲ್ಲ. ಆದರೆ ನನ್ನ ಪ್ರೇಮವನ್ನು ಒಂದುಗೂಡಿಸಲು ನನ್ನ ಸ್ನೇಹಿತರಿಗೆ ಹೇಳಿದರೆ ಅವರು, ನಿಯತ್ತಾಗಿ ನನ್ನನ್ನು ನಾನು ಪ್ರೇಮಿಸುವ ಅವಳ ಹತ್ತಿರ ಕರೆದುಕೊಂಡು ಹೋಗಿ ಒಂದುಗೂಡಿಸಿ ಬಿಡುತ್ತಾರೆ"*

*" ನೀವು ಹೇಳುತ್ತಿರುವ ಮಾತು ನಿಜವೇ?"*

*" ದೇವರಾಣೆಗೂ ಸತ್ಯ. ನನ್ನ ಗೆಳೆಯರ ಪಟಾಲಂ ನಿಮಗಿನ್ನೂ ಗೊತ್ತಿಲ್ಲ. ಬೇಕಾದರೆ ಪ್ರಾಣವನ್ನು ಕೊಡುತ್ತಾರೆ, ಬೇಡವಾದರೆ ಪ್ರಾಣವನ್ನು ತೆಗೆಯುತ್ತಾರೆ. ಆದರೆ ಸ್ನೇಹಿತರಿಗೆ ಮಾತ್ರ ಯಾವುದೇ ಸಹಾಯ ಕೇಳಿದರೂ ಇಲ್ಲ ಅಂತ ಮಾತ್ರ ಹೇಳುವುದಿಲ್ಲ. ಅದನ್ನೆಲ್ಲ ಬರೆದು ಹೇಳಲು ಆಗುವುದಿಲ್ಲ. ನೀವು ಒಪ್ಪಿಕೊಂಡರೆ ಮತ್ತೊಮ್ಮೆ ನಾನು ಕಾಲ್ ಮಾಡಿ ಮಾತನಾಡುವಾಗ ಎಲ್ಲವನ್ನು ಹೇಳುತ್ತೇನೆ"*

 ಎಂದು ಅವನು ಬರೆದು ಕಳುಹಿಸಿದಾಗ, ಅದನ್ನು ನೋಡಿದ ಸುಮಾ, ನನ್ನ ಜೊತೆ ಮಾತನಾಡಲು ಒಂದು ನೆಪ ಹುಡುಕುತ್ತಿದ್ದಾನೆ ಅಂತ ಅರ್ಥವಾಗಿ, ತನ್ನಲ್ಲಿ ತಾನೇ ನಗತೊಡಗಿದಳು.

*" ಅಕಸ್ಮಾತ ನಾನು ಬೇಡವೆಂದರೆ?"*

*" ದೇವಿಗೆ ನನ್ನ ಮೇಲೆ ಇನ್ನೂ ಕರುಣೆ ಬಂದಿಲ್ಲ, ಈ ಭಕ್ತ ಇನ್ನೂ ತಪಸ್ಸು ಮಾಡಬೇಕಾಗಿದೆ ಅಂತ ತಿಳಿದುಕೊಂಡು ಸುಮ್ಮನಾಗುತ್ತೇನೆ. ಮತ್ತೇನು ಮಾಡಲು ಸಾಧ್ಯ?"*

 ಇದನ್ನು ಓದಿದ ಸುಮಾ, ಗಹಗಹಿಸಿ ನಗತೊಡಗಿದಳು.

*" ನಾನು ಸಾಮಾನ್ಯ ಮನುಷ್ಯರು. ನನ್ನನ್ನು ದೇವರಿಗೆ ಹೋಲಿಸಬೇಡಿ."*

*" ನಾನು ಹೋಲಿಸುವ ದೇವರು ಪ್ರೇಮ ದೇವತೆ ಹೊರತು, ಸಂಹಾರ ಮಾಡುವ ರುದ್ರ ಕಾಳಿ ಅಥವಾ ಭದ್ರಕಾಳಿ ಅಲ್ಲ ಅಂತ ಅಂದುಕೊಂಡಿದ್ದೇನೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?"*

*" ಅದನ್ನು ಅಕ್ಷರ ರೂಪದಲ್ಲಿ ಬರೆದು ಕಳುಹಿಸಿದರೆ ನಿಮಗೆ ಅರ್ಥವಾಗುವುದಿಲ್ಲ, ನಾನು ಹೇಳಿರಬೇಕು ನೀವು ಕೇಳಿರಬೇಕು ಅಂದಾಗ ಮಾತ್ರ ಅರ್ಥವಾಗುತ್ತದೆ"*

 ಎಂದು ಬರೆದು ಹಾಕಿ ತನ್ನಲ್ಲಿ ತಾನೇ ನಗತೊಡಗಿದಳು. ಈ ರೀತಿಯಾಗಿ ಬರೆದು ಕಳುಹಿಸಿ ಅವನು ಕಾಲ್ ಮಾಡಬಹುದು ಎಂದು ಒಪ್ಪಿಗೆಯನ್ನು ಸೂಚಿಸಿದ್ದಳು.

     ಎರಡೇ ಸೆಕೆಂಡಿನಲ್ಲಿ ಮೊಬೈಲ್ ಕಾಲ್ ಬಂದಿತ್ತು. ಅದನ್ನು ನೋಡುತ್ತಲೇ ಅವಳು ನಗುತ್ತಾ ಕಾಲ್ ರಿಸೀವ್ ಮಾಡಿ, ಮೊಬೈಲ್ ತನ್ನ ಕಿವಿಗೆ ಹಿಡಿದಾಗ,

*" ರೀ, ನಂಗೆ ಏನಾಗುತ್ತದೆಯೋ ನನಗೆ ಗೊತ್ತಾಗ್ತಿಲ್ಲ. ಸುಂದರವಾದ ರಾತ್ರಿಯಲ್ಲಿ, ನಾನು ಮಲಗಿದರೂ ನನ್ನ ಮನಸ್ಸಿನಲ್ಲಿ ನೀವು ಬಂದು ನನ್ನ ಹೃದಯವನ್ನು ಚೆನ್ನಾಗಿ ಕುಟ್ಟುತ್ತಿರ. ನಾನು ನಿದ್ರೆ ಮಾಡಬೇಕೋ ಬೇಡವೋ?"*

 ಎಂದು ಹಾಸ್ಯದ ರೀತಿಯಲ್ಲಿ ಕೇಳಿದಾಗ,

*" ನೀವು ಮಾತ್ರ ಸುಮ್ಮನೆ ಇದ್ದೀರಾ? ನಾನು ಮಾಡುವ ಪ್ರತಿ ಕೆಲಸದಲ್ಲಿಯೂ ಬೆಳಿಗ್ಗೆಯಿಂದ ಎಷ್ಟು ಸಲ ತಡೆಹಾಕಲು ಬಂದಿದ್ದೀರಿ ಅಂತ ನಿಮಗೆ ಗೊತ್ತಾ? ಅನುಭವಿಸಿದ ನಾನು ಅದನ್ನು ಹೇಳಬೇಕಷ್ಟೇ."*

 ಎಂದಾಗ, ಅಭಿ ಆಶ್ಚರ್ಯದಿಂದ

*" ಹೌದೇ? ನೀವು ಹೇಳುತ್ತಿರುವ ವಿಷಯ ನಿಜವೇ?"*

 ಎಂದು ಆತುರದಿಂದ ಪ್ರಶ್ನಿಸಿದ.

*" ಒಂದು ಹೆಣ್ಣು, ಈ ರೀತಿಯಾಗಿ ಮನಸ್ಸು ಬಿಚ್ಚಿ ಹೇಳಬೇಕಾದರೆ ವಿಷಯ ನಿಜವಾದಲ್ಲಿ ಮಾತ್ರ ಹೇಳಲು ಸಾಧ್ಯ. ನಾನು ನಿಮ್ಮ ಹಾಗೆ ಕವಿಯತ್ರಿ ಅಲ್ಲ. ನನಗೆ ಸುತ್ತಿಬಳಸಿ ಮಾತನಾಡಲು ಬರುವುದಿಲ್ಲ. ಸುಳ್ಳಂತೂ ಜೀವನದಲ್ಲಿ ಹೇಳಿಲ್ಲ. ಇಲ್ಲದಮೇಲೆ ನೀವೇ ಅರ್ಥ ಮಾಡಿಕೊಳ್ಳಿ"*

*" ಅಂದಹಾಗೆ, ನೀವು ನನಗೆ ನಾನು ನಿಮಗೆ ಒಬ್ಬರಿಗೊಬ್ಬರು ಡಿಸ್ಟರ್ಬ್ ಮಾಡುತ್ತಿದ್ದೇವೆ ಅಂದ ಹಾಗಾಯಿತು"*

*" ಅಲ್ಲದೆ ಮತ್ತೇನು? ಈ ರೀತಿಯಾಗಿ ಕಾಡಿದರೆ ನಿಮಗೇನು ಬರುತ್ತದೆ?"*

*" ನಿಮಗೆ ಏನು ಸಿಗುತ್ತದೆಯೋ ನಮಗೂ ಅದೇ ಸಿಗುತ್ತದೆ. ಧ್ರುವ ಆಗುವುದು ನಿಜವಾದರೂ ಅಂಶ ಮಾತ್ರ ಒಂದೇ"*

*" ಮತ್ತೆ ನಿಮ್ಮ ತುಂಟತನ ಶುರುಮಾಡಿದ್ದೀರಿ"*

*" ನನ್ನ ತುಂಟತನ ನಿಮಗೆ ಇಷ್ಟವಿಲ್ಲವೇ?"*

*" ಹಾಗಂತ ನಾನು ಹೇಳಿದೆ ಏನು?"*

*" ಮತ್ತೆ ತುಂಟತನ ಎಂದು ನೀವು ಅಂದ ಕಾರಣ ನಾನು ಈ ರೀತಿಯಾಗಿ ಹೇಳಬೇಕಾಯಿತು"*

*" ಇಂದು ನಿಮ್ಮ ದಿನ ಹೇಗಿತ್ತು?"*

*" ಅಯ್ಯೋ, ಅದನ್ನು ಮಾತ್ರ ಕೇಳಬೇಡಿ. ದಿನವಿಡೀ ಪುರುಸೋತ್ತು ಇರಲಾರದ ಹಾಗೆ ಕೆಲಸವೊ ಕೆಲಸ. ಜೊತೆಗೆ ನೀವು ಬೇರೆ ಆಗಾಗ ಬಂದು ನನ್ನನ್ನು ಡಿಸ್ಟರ್ಬ್ ಮಾಡುತ್ತಿದ್ದೀರಿ. ಈಗ ನೀವೇ ಗೆಸ್ ಮಾಡಿ ನನ್ನ ದಿನ ಹೇಗೆ ಕಳೆದಿರಬಹುದು ಎಂದು. ನನ್ನದು ಈ ಪರಿಸ್ಥಿತಿ. ಇರಲಿ ಬಿಡಿ. ನಿಮ್ಮದು ಹೇಗೆ?"*

*"ಇಂದು ನನಗೆ ಹೊಸ ದಿನ ಹಾಗೆ ಕಂಡುಬಂದಿದೆ. ಎಂದಿನಂತೆ ನಾನು ಕಾಲೇಜಿಗೆ ಹೋದರೂ ಸಹ, ಇಂದು ನಾನು ಭೇಟಿಯಾದ ಸ್ಟೂಡೆಂಟ್ಸ್, ಫ್ರೆಂಡ್ಸ್ ತರಹ ನನ್ನನ್ನು ಕಂಡರು. ನಾನು ಸಹ ಅವರನ್ನು ನನ್ನ ಫ್ರೆಂಡ್ಸ್ ಅಂತಾನೆ ಟ್ವೀಟ್ ಮಾಡಿದೆ. ಸಾಕಷ್ಟು ನನ್ನನ್ನು ಅವರು ನಗಿಸಿ ನಗಿಸಿ ನನ್ನ ಮುಖದಲ್ಲಿ ನಗು ಯಾವಾಗಲೂ ಇರುವಂತೆ ಮಾಡಿದ್ದಾರೆ. ನಿಜ ಹೇಳಬೇಕೆಂದರೆ, ಇಂದು ಆದರೆ ಎಲ್ಲ ಘಟನೆಗಳು ನನ್ನ ಜೀವನದಲ್ಲಿ ಮರೆಯುವಂತಿಲ್ಲ."*

*" ಓಹೋ, ನಿಮ್ಮ ದಿನ ತುಂಬಾ ಚೆನ್ನಾಗಿ ಹೋಗಿದೆ. ನೀವು ಪುಣ್ಯವಂತರು"*

*" ಒಂದು ಮಾತು ಕೇಳಲಾ?"*

*" ಕೇಳಿ"*

*" ನೀವು ಒಬ್ಬಂಟಿಯಾಗಿ ಜೀವನ ಹೇಗೆ ಸಾಗಿಸುತ್ತಿವೆ?"*

*" ಏನು ಮಾಡೋದು, ಸಾಗಿಸಲಿ ಬೇಕಾಗುತ್ತದೆ. ನಾನೊಂದು ರೀತಿಯ ಭಾವಜೀವಿ. ಭಾವನೆಗಳಲ್ಲಿ ಬದುಕುವವನು. ಯಾವಾಗಲೂ ಕನಸನ್ನು ಕಾಣುತ್ತಲೇ ಇರುವ ವ್ಯಕ್ತಿ. ನಿಮಗೊಂದು ಮಾತು ಹೇಳಲು ಬಯಸುತ್ತೇನೆ. ಯಾವಾಗಲೂ ಕನಸನ್ನು ಕಾಣುವ ವ್ಯಕ್ತಿಗೆ ಬೇಸರ, ವ್ಯಥೆ, ಚಿಂತೆಗಳು ಕಾಣುವುದಿಲ್ಲವೆಂದು ಎಲ್ಲಿಯೋ ಓದಿದ ನೆನಪು. ಅದಕ್ಕೆ ನಾನು ಭಾವಜೀವಿಯಾಗಿ ಇರಲು ಬಯಸುತ್ತೇನೆ"*

*" ನಾನು ಸಹ ಭಾವಜೀವಿ. ಆದರೆ ನಿನ್ನೆಯ ತನಕ ನನ್ನ ಮನಸ್ಸಿನ ಭಾವನೆಗಳು ಬೇರೆ ರೀತಿಯಾಗಿದ್ದರು. ಆದರೆ ನಿನ್ನೆಯಿಂದ ಭಾವನೆಗಳು ಬೇರೆ ರೀತಿಯಾಗಿವೆ. ಮೊದಲು ನನ್ನನ್ನು ನಾನು ಬಾಡಿದ ಹೂವಿನಂತೆ ಪರಿಗಣಿಸುತ್ತಿದೆ. ಆದರೆ ನಿನ್ನೆಯಿಂದ ಮಾತ್ರ ಅರಳಿದ ಮಲ್ಲಿಗೆಯ ಹಾಗೆ ನನ್ನನ್ನು ನಾನು ಪರಿಕಲ್ಪಿಸಿಕೊಳ್ಳುತ್ತಿದ್ದೇನೆ. ಇದು ಒಂದು ತರಹ ನನಗೆ ವಿಶೇಷವಾದ ಅನುಭವ. ಮುದುಡಿದ ಹೂವನ್ನು, ಮತ್ತೆ ಅರಳುವಂತೆ ಮಾಡಿದವರು ನೀವು."*

*" ನೀವು ಮುದುಡಿದರೂ ಸಹ, ನಿಮ್ಮ ಪರಿಮಳ ಮಾತ್ರ ನಾನು ಗಮನಿಸಿ ನಿಮ್ಮನ್ನು ಅರಳುವಂತೆ ಪ್ರೇರೇಪಿಸಿದೆ. ನೀವು ಏನು ಅಂತ ನಿಮಗೆ ಗೊತ್ತಿಲ್ಲ. ನಾನು ನಿಮ್ಮನ್ನು ನೋಡಿಲ್ಲ ನೀನು ನನ್ನನ್ನು ನೋಡಿಲ್ಲ. ಇಬ್ಬರೂ ಒಂದು ರೀತಿ ಕುರುಡರಂತೆ ಇದ್ದೇವೆ. ಹೃದಯಗಳು ಒಂದೇ ರೀತಿಯಾಗಿ ಬಡಿದುಕೊಳ್ಳುತ್ತವೆ. ನಿಮಗೆ ನನ್ನನ್ನು ನೋಡಬೇಕು ಅಂತ ಅನ್ನಿಸಲಿಲ್ಲವೇ?"*

*"ಯಾಕೆ ಎನ್ನಿಸುವುದಿಲ್ಲ. ಆದರೆ ಯಾವುದಕ್ಕೂ ಸಮಯ ಬರಬೇಕು. ಒಂದು ವಿಷಯ ಹೇಳಬೇಕೆಂದರೆ, ಈ ರೀತಿಯಾದ ಕುರುಡು ಪ್ರೇಮ ಒಂದು ರೀತಿ ಹಿತವಾಗಿದೆ. ಕನಸುಗಳನ್ನು ಕಾಣಲು ತುಂಬಾ ಅನುಕೂಲವಾಗಿದೆ. ತೀರ ಅವಶ್ಯಕತೆ ಬರುವತನಕ ಹೀಗೆ ಇರೋಣ. ನಂತರ ನೋಡಿದರಾಯಿತು. ಅಷ್ಟಾಗಿ ದೊಡ್ಡವರು ಹೇಳಿದ್ದಾರೆ ಅಲ್ಲವೇ ಪ್ರೇಮ ಕುರುಡು ಅಂತ"*

*" ಹೌದು, ನೀವು ಹೇಳುವುದು ಸರಿ"*

*"ಈಗ ನಾವಿದ್ದ ಪರಿಸ್ಥಿತಿಯಲ್ಲಿ, ಮಧುರವಾದ ಅನುಭೂತಿಯನ್ನು ಹೊಂದುವುದರಲ್ಲಿ ಸುಖ ಕಾಣುತ್ತಿದ್ದೇನೆ. ಹೇಳಲಾರದಂಥ ಸುಖ ಈ ರೀತಿಯಾಗಿ ಸಿಗಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ನೋಡಬೇಕೆನ್ನುವ ತವಕ ಮನದ ತುಂಬಾ ಬಂದಿದ್ದರೂ ಸಹ, ನಿಲುಕದ ವಸ್ತುವಿನ ಹಾಗೆ ದೂರದಲ್ಲಿದ್ದುಕೊಂಡು ಮರೆಯಾದಾಗ, ಆಗುವ ಮನಸಿನ ಭಾವನೆ ಒಂದು ರೀತಿ ಹಿತವಾಗಿ ಕುತೂಹಲಕರವಾಗಿ ಇರುತ್ತದೆ. ಇಂತಹ ಹಿತವಾದ ಕುತೂಹಲದಲ್ಲಿ, ಪ್ರೇಮದ ಉತ್ಕಟತೆಯು ತುಂಬಾ ಎತ್ತರಕ್ಕೆ ಹೋಗುತ್ತದೆ ಎಂದು ನಾನು ಭಾವಿಸಿದ್ದೇನೆ. ಬೇಕು ಎಂದಾಗ ಸಿಗುವ ವಸ್ತುವಿನ ಬೆಲೆ ಗೊತ್ತಾಗುವುದಿಲ್ಲ. ಬೇಕು ಎಂದಾಗ ಸಿಗದೇ ಇರುವ ವಸ್ತು ಅದನ್ನು ಪಡೆಯಬೇಕೆಂಬ ಹಂಬಲ, ಅದಕ್ಕಾಗಿ ಮಾಡುವ ಪ್ರಯತ್ನ, ಇವೆಲ್ಲವೂ ಮಾನಸಿಕ ಸುಖದ ಅಂಶಗಳು. ಮನುಷ್ಯನಿಗೆ ಬೇಕಾಗಿತ್ತು ಮಾನಸಿಕ ಸುಖ. ಅಂತ ಸುಖ ಇದರಲ್ಲಿದೆ ಎಂದು ತಿಳಿದುಕೊಂಡೆ ಕುರುಡು ಪ್ರೇಮದಲ್ಲಿ ತಾಳ್ಮೆ ಇರುವವರಿಗೆ ಇದು ಕೊಳ್ಳೋಣ ಎಂದು ಭಾವಿಸಿ ನಿಮಗೆ ಈ ಮಾತು ಹೇಳುತ್ತಿದ್ದೇನೆ. ತಪ್ಪು ತಿಳಿಯಬೇಡಿ."*

*"ಹಾಗೇನಿಲ್ಲ, ನನ್ನದಾದರೂ ಇದೇ ಭಾವನೆ. ಭಾವನೆಗಳಿಗೆ ಬೆಲೆ ಕೊಡುವವನು ನಿಜವಾದ ಪ್ರೇಮಿ. ಹಾಗಿದ್ದಲ್ಲಿ ಮಾತ್ರ ಪ್ರೇಮಕ್ಕೆ ಗೌರವಯುತ ಸ್ಥಾನ ಸಿಗುವುದರಲ್ಲಿ ಸಂಶಯವಿಲ್ಲ."*

*"ಕೇವಲ ಗೌರವಯುತವಾಗಿ ಪ್ರೇಮವಿದ್ದರೆ ಸಾಲದು. ನಾವು ಸಹ ಪ್ರೇಮವಿರುವ ವ್ಯಕ್ತಿಗಳಾಗಿ ಒಬ್ಬರಿಗೊಬ್ಬರು ಅದೇ ಗೌರವವನ್ನು ಹೊಂದಿರಬೇಕು. ಅಂದರೆ ಮಾತ್ರ ಪ್ರೇಮ ಸಫಲ"*

*" ನಿಮ್ಮ ಮಾತು ನಿಜ. ಅದನ್ನು ನಾನು ಗೌರವಿಸುತ್ತೇನೆ"*

*" ಇಷ್ಟು ಗೌರವವಿದ್ದರೆ ಸಾಕು ನಾನು ಪುನೀತಳಾದೆನೆಂದು ಅಂದುಕೊಳ್ಳುತ್ತೇನೆ*"

*" ಮತ್ತೇನು ವಿಶೇಷ?"*

*" ನನ್ನ ವಿಶೇಷ ವ್ಯಕ್ತಿಯಾದ ನೀವು ನನಗೆ ಹೇಳಬೇಕು ನಿಮ್ಮದು ಏನು ವಿಶೇಷ*"

*" ನಾನು ಗಂಡು. ನನ್ನ ಹತ್ತಿರ ವಿಶೇಷ ಏನು ಇರುವುದಿಲ್ಲ. ನೀವು ಹೆಣ್ಣು, ಅಂದರೆ ನೀರಿನಲ್ಲಿ ಏಳುವ ತರಂಗಗಳಿದ್ದಂತೆ. ನೋಡಲು ಚಂದವಾಗಿ ಕಂಡರೂ ಸಹ, ತರಂಗಗಳಿಂದ ಶಕ್ತಿ ಹೊರಹೊಮ್ಮುತ್ತದೆ."*

*" ಕವಿತ್ವ ತುಂಬಾ ಚೆನ್ನಾಗಿದೆ. ಹೋಲಿಕೆ ಮಾಡುವದು ನಿಮ್ಮಿಂದ ಕಲಿಯಬೇಕು"*

*" ಕಾಡಿಸುವುದು ನಿಮ್ಮಿಂದ ಕಲಿಯಬೇಕು"*

*" ಮಾತು ನಿಮ್ಮಿಂದ ಕಲಿಯಬೇಕು"*

*" ವೈವಿಧ್ಯ ನಿಮ್ಮಿಂದ ಕಲಿಯಬೇಕು"*

*" ವಿಚಾರ ನಿಮ್ಮಿಂದ ಕಲಿಯಬೇಕು"*

*" ಕಲ್ಪನೆ ನಿಮ್ಮಿಂದ ಕಲಿಯಬೇಕು"*

*" ಕನಸು ಕಾಣುವುದು ನಿಮ್ಮಿಂದ ಕಲಿಯಬೇಕು"*

*" ಆ ಕನಸು ನನಸು ಮಾಡುವುದು ನಿಮ್ಮಿಂದ ಕಲಿಯಬೇಕು"*

*" ನಿಮ್ಮ ಮಾತು ನಾನು ಒಪ್ಪಲ್ಲ"*

*" ಈ ಮಾತು ನಾನು ಒಪ್ಪಲ್ಲ"*

 ಹೀಗೆ ಮಾತನಾಡುತ್ತಾ ಅವರಿಬ್ಬರು ಬೇರೆ ಲೋಕಕ್ಕೆ ಪ್ರಯಾಣ ಮಾಡಿದ್ದರು. ಎಷ್ಟು ಮಾತನಾಡಿದರು ಇನ್ನು ಮಾತನಾಡುವುದು ಇದೆ ಅಂತ ಇಬ್ಬರಿಗೂ ಅನ್ನಿಸುತ್ತಿತ್ತು, ಮಾತು ಮುಗಿಸಬೇಕು ಎಂಬ ಭಾವನೆ ಇಬ್ಬರಲ್ಲಿಯೂ ಇರಲಿಲ್ಲ. ಗಂಡು ಒಂದು ಹೂವಿನಂತೆ, ಹೆಣ್ಣು ಅದರ ಪರಿಮಳ ವಿದ್ದಂತೆ. ಹೊರಳಿದಾಗ ಪರಿಮಳ ಹೂವಿನಲ್ಲಿ ಇರಲೇಬೇಕು. ಅಂದಾಗ ಮಾತ್ರ ಹೂವಿನ ಜನ್ಮ ಸಾರ್ಥಕತೆ ಕಾಣುತ್ತದೆ.

   ಹಾಗೆ ಮಾತನಾಡುತ್ತಾ ಸುಮಾಳ ದೃಷ್ಟಿ, ಗಡಿಯಾರದ ಕಡೆಗೆ ಹೋದಾಗ ರಾತ್ರಿ ಒಂದೂವರೆ ಗಂಟೆಯಾಗಿತ್ತು. ಕೊನೆಗೆ, ಅವಳೇ ಸೋತು,

*" ಮಧ್ಯರಾತ್ರಿಯಾಗಿದೆ. ಮಲಗಿಕೊಳ್ಳುತ್ತೇನೆ"*

*" ನಿದ್ರೆ ಬಂತ?"*

*" ಇಲ್ಲ"*

*" ಮತ್ತೆ ಇನ್ನೂ ಸ್ವಲ್ಪ ಇರಬಾರದು?"*

*" ಬೇಡ, ಎಲ್ಲದಕ್ಕೂ ಒಂದು ಪರಿಧಿ ಇರುತ್ತದೆ. ಅದನ್ನು ದಾಟುವುದು ಇಬ್ಬರಿಗೂ ಒಳ್ಳೆಯದಲ್ಲ. ಮತ್ತೆ ನಾಳೆ ಸಿಗೋಣ. ಸುಖವಾಗಿ ನಿದ್ರೆ ಮಾಡಿ. ಯಾವುದು ಚಿಂತೆ ಮಾಡಬೇಡಿ. ಮಲಗಿ. ಗುಡ್ ನೈಟ್"*

 ಎಂದು ಹೇಳಿ ಫೋನ್ ಆಫ್ ಮಾಡಿದಳು. ತಾವಿಬ್ಬರೂ ಆಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸುಖ ನಿದ್ದೆಗೆ ಸುಮಾ ಜಾರಿದಳು.

16


ಮರುದಿನ ಕಾಲೇಜಿಗೆ ಹೋದಾಗ ತನ್ನ ಕ್ಲಾಸ್ ತೆಗೆದುಕೊಳ್ಳಲು ಕ್ಲಾಸಿಗೆ ಹೋದಳು. ಅಲ್ಲಿ ಪಾಠ ಮಾಡುತ್ತಿರಬೇಕಾದರೆ, ಒಂದು ಹುಡುಗಿ ತನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತಿದ್ದಳು. ಅದನ್ನು ಗಮನಿಸಿದ ಸುಮಾ, ಅವಳನ್ನು ಪಾಠದ ಮಧ್ಯ ಏನೂ ಕೇಳಲಿಲ್ಲ. ಪಿರಿಯಡ್ ಮುಗಿದ ಮೇಲೆ, ಕ್ಲಾಸ್ ಬಿಟ್ಟು ಹೊರಟಾಗ, ಆ ಹುಡುಗಿಯನ್ನು ಕರೆದಳು. ಆ ಹುಡುಗಿ ಅಳುತ್ತ ಸುಮಾಳನ್ನು ಹಿಂಬಾಲಿಸಿದಳು. ಸ್ಟಾಫ್ ರೂಮಿಗೆ ಹೋಗುವತನಕ ಏನೂ ಮಾತಾಡಲಿಲ್ಲ ಸುಮಾ. ಸ್ಟಾಫ್ ರೂಮಿಗೆ ಹೋಗುತ್ತಲೇ, ಚೇರ್ ಮೇಲೆ ಕುಳಿತು ಆ ಹುಡುಗಿಯನ್ನು ಮಾತನಾಡಿಸಿದಳು. 

*"ಏಕಮ್ಮಾ ನೀನು ಕ್ಲಾಸಿನಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತಿದ್ದೆ? ಮೈಯಲ್ಲಿ ಹುಷಾರಿಲ್ವಾ?"*

ಎಂದಾಗ ಆ ಹುಡುಗಿ ತನ್ನ ದುಃಖ ನುಂಗಿಕೊಳ್ಳುತ್ತ

*"ಹಾಗೇನಿಲ್ಲ ಮಾಮ್"*

*"ಮತ್ಯಾಕೆ ಅಳ್ತಾಯಿರುವೆ?"*

*"ಏನಿಲ್ಲ ಮ್ಯಾಮ್"*

ಎನ್ನುತ್ತಿರುವಂತೆ ಅವಳ ಕಣ್ಣಲ್ಲಿಯೇ ನೀರು ಜಾರಿ ಕೆನ್ನೆ ಮೇಲೆ ಬಂದು ಬಿದ್ದವು. ಸುಮಾ ಅವಳನ್ನು ನೋಡು ನೋಡುತ್ತಿರುವಂತೆ ಅವಳು ತನ್ನ ಕೈಯನ್ನು ಬಾಯಿಗೆ ಹಿಡಿದುಕೊಂಡು ಜೋರಾಗಿ ಅಳತೊಡಗಿದಳು. ಅದನ್ನು ನೋಡಿದ ಸುಮಾ ಅವಳನ್ನು ಸಂತೈಸಲು ಮುಂದಾದಾಗ, ಆ ಹುಡುಗಿ, ಸುಮಾಳನ್ನು ತಬ್ಬಿಕೊಂಡು ಅಳತೊಡಗಿದಳು. ಅವಳ ಬೆನ್ನ ಮೇಲೆ ಕೈಯಾಡಿಸುತ್ತ ಅವಳನ್ನು ಸಮಾಧಾನ ಪಡಿಸತೊಡಗಿದಳು. ಆದರೆ, ಯಾವ ಕಾರಣಕ್ಕೆ ಅವಳು ಅಳುತ್ತಿದ್ದಾಳೆ ಅಂತ ಮಾತ್ರ ಸುಮಾಳಿಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ಅವಳ ಜೊತೆ ಓದುತ್ತಿದ್ದ ಅವಳ ಗೆಳತೀ ಬಂದಳು. ಅವಳನ್ನು ನೋಡಿದ ಸುಮಾ ಅವಳನ್ನು ಕರೆದು ವಿಷ್ಯ ಕೇಳಿದಾಗ ಅವಳು ಹೇಳಿದಳು. 

*"ಮ್ಯಾಮ್, ಇವಳು ಫೇಸ್ ಬುಕ್ ಆಪರೇಟ್ ಮಾಡ್ತಾಳೆ. ಇವಳ ಜೊತೆಗೆ ಒಬ್ಬ ಹುಡುಗ ಸುಮಾರು 6 ತಿಂಗಳಿಂದ ಚಾಟ್ ಮಾಡ್ತಿದ್ದ. ಇಬ್ಬರ ನಡುವೆ ಪ್ರೀತಿ ಬೆಳೀತು. ನಂತರ ಕಾಲ್ ಮಾಡಿ ಮಾತಾಡ್ತಿದ್ರು. ಅವನು ಇವಳನ್ನೇ ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದ. ಅವಳು ಅದನ್ನು ನಂಬಿದ್ದಳು. ಕುಂತರೂ ನಿಂತರೂ ಅವನಂದೇ ಧ್ಯಾನವಾಗಿತ್ತು ಇವಳಿಗೆ. ಕೊನೆಗೆ ಆ ಹುಡುಗ ನಿನ್ನೆ ತಾನು ಬೇರೆ ಹುಡುಗಿಯ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿರುವದಾಗಿಯೂ ಮತ್ತು ಇವಳಿಗೆ ತನ್ನನ್ನು ಮರೆತುಬಿಡಬೇಕು ಅಂತ ಹೇಳಿದ. ಇದನ್ನು ಕೇಳಿದ ಇವಳು ಈ ರೀತಿಯಾಗಿ ಆ ಹುಡುಗನಿಗಾಗಿ ಪರಿತಪಿಸುತ್ತಿದ್ದಾಳೆ"*

ಎಂದು ಹೇಳಿದಾಗ, ಸುಮಾಳಿಗೆ ಶಾಕ್ ಆಯಿತು. ತನ್ನ ಹಾದಿಯಲ್ಲಿ ಹೋದ ಹುಡುಗಿ ಈಗ ಮೋಸಹೋಗಿದ್ದಾಳೆ. ಇವಳನ್ನು ನಂಬಿಸಿ, ಇವಳ ಹೃದಯದ ಜೊತೆಗೆ ಆಟವಾಡಿದ ಆ ಹುಡುಗ ಇಷ್ಟು ನಿಕೃಷ್ಟನಾಗಿರಬೇಕು. ಈ ಗಂಡಸರೇ ಇಷ್ಟು. ಹೆಣ್ಣನ್ನು ತಮ್ಮ ಆಳು ಅಂತ ತಿಳಿದುಕೊಳ್ಳುತ್ತಾರೆ. ಒಂದು ಹೆಣ್ಣಿನ ಮನಸ್ಸಿನ ಜೊತೆಗೆ ಮತ್ತು ಅವಳ ಹೃದಯದ ಜೊತೆಗೆ ಆಟವಾಡುವ ಅವಶ್ಯಕತೆ ಏನಿತ್ತು ಅವ್ನಿಗೆ. ಎಂದು ತನ್ನ ಮನದಲ್ಲಿಯೇ ಯೋಚನೆ ಮಾಡತೊಡಗಿದಳು. ಒಂದು ಸೇಲ್ ತನ್ನನ್ನು ಅಪ್ಪಿಕೊಂಡು ಅಳುತ್ತಿದ್ದ ಹುಡುಗಿಯನ್ನು ನೋಡಿದಾಗ ತನ್ನನ್ನು ತಾನೇ ನೋಡಿಕೊಂಡಂತಾಯಿತು. ನಾಳೆ ತನ್ನ ಪರಿಸ್ಥಿತಿ ಇದೆ ರೀತಿಯಾದರೆ ಹೇಗೆ ಅಂದುಕೊಳ್ಳತೊಡಗಿದಳು. ಆ ಹುಡುಗಿಯ ಪರಿಸ್ಥಿತಿ ನೋಡಿ ಅಭಿಯನ್ನು ನಂಬಬೇಕೋ ಬೇಡವೋ ಎಂಬ ಸಂದಿಗ್ಧಕ್ಕೆ ಸಿಲುಕಿಕೊಂಡಳು ಸುಮಾ. ಕೊನೆಗೆ ಆ ಹುಡುಗಿಯನ್ನು ಸಮಾಧಾನ ಪಡಿಸಿ, ಯಾವುದಕ್ಕೂ ಇರಲಿ ಎಂದು ಆ ಹುಡುಗನ ನಂಬರ್ ತೆಗೆದುಕೊಂಡಳು. 

    ನಂತರ ಆ ಹುಡುಗಿಯನ್ನು ಸಮಾಧಾನ ಮಾಡಿ ಅವಳನ್ನು ಕೇಳಿದಾಗ, ಈ ವಿಷಯ ಅವಳ ತಂದೆ ತಾಯಿಯರಿಗೆ ಗೊತ್ತೆಂದು ಮತ್ತು ಅವರು ಓಪನ್ ಮೈಂಡೆಡ್ ಇರುವದರಿಂದ ತನಗೆ ಯಾವುದೇ ಆಕ್ಷೇಪಣೆ ಮಾಡಿರುವದಿಲ್ಲ ಎಂದು ಹೇಳಿದಳು. ಹಾಗೂ ಹೀಗೂ ಮಾಡಿ ಅವಳನ್ನು ಸಮಾಧಾನ ಪಡಿಸಿ ಕಳುಹಿಸಿದಳು. 

   ಆ ಹುಡುಗಿ ಹೋಗುತ್ತಿದ್ದಂತೆ ಕಾವೇರಿ ಒಳಗೆ ಬಂದಳು. ಆ ಹುಡುಗಿಯರು ಅಲ್ಲಿಂದ ಹೋಗುವದನ್ನು ನೋಡಿದ ಅವಳು 

*"ಸುಮಿ, ಏನಾಯ್ತೆ?"*

ಎಂದು ಪ್ರಶ್ನಿಸಿದಾಗ, ಅವಳ ಕಡೆಗೆ ನೋಡಿದ ಸುಮಾ,

*"ಕಾವೇರಿ ಇವತ್ತು ನಂ ಜೊತೆ ಬರ್ಬೇಕು ನೀನು"*

*"ಎಲ್ಲಿಗೆ?"*

*"ಹೋಗ್ತಾ ಹೇಳ್ತಿನಿ"*

*"ಅಯ್ಯೋ ನಂಗೆ ಇನ್ನೊಂದು ಕ್ಲಾಸ್ ಇದೆಯಲ್ವೇ"*

*"ಪರವಾಯಿಲ್ಲ, ಒಂದು ಕೆಲಸ ಮಾಡು ನನಗೆ ಯಾವುದೇ ಪಿರಿಯಡ್ ಇಲ್ಲ, ನಾನು ಇಲ್ಲೇ ವೇಟ್ ಮಾಡ್ತೀನಿ, ನೀನು ಅರ್ಧಘಂಟೆ ಪಾಠ ಮಾಡಿ ಬಂದುಬಿಡು, ಇಬ್ಬರೂ ಕೂಡಿ ಹೋಗೋಣ, ನಿನ್ನ ನಿನ್ನ ಮನೆಗೆ ಡ್ರಾಪ್ ಮಾಡಿ ನಂತ್ರ ನಾನು ನನ್ನ ಮನೆಗೆ ಹೋಗ್ತೀನಿ. ಕೆಲಸ ಆದ್ಮೇಲೆ"*

*"ಏನು ಕೆಲಸ ಹೇಳ್ಬಾರದೇ?"*

*"ಹೋಗ್ತಾ ಹೇಳ್ತಿನಿ ಅಂತ ಹೇಳಿದೆನಲ್ಲ"*

*"ಅಯ್ಯೋ ಇವಳದು ಯಾವಾಗಲೂ ಬರಿ ಸಸ್ಪೆನ್ಸ್ ಮೈನ್ಟೈನ್ ಮಾಡಿಕೊಳ್ಳುವದರಲ್ಲೇ ಆಯ್ತು"*

ಎನ್ನುತ್ತಾ ತನ್ನ ಕ್ಲಾಸಿಗೆ ಹೋದಳು. ಅವಳು ಹೋದ ಮೇಲೆ ಸ್ಟಾಫ್ ರೂಮಿನಲ್ಲಿ ಯಾರೂ ಇರಲಿಲ್ಲ. ಸುಮಾ ತನ್ನ ಮೊಬೈಲ್ ತೆಗೆದು ಆ ಹುಡುಗನ ನಂಬರ್ ಗೆ ಡಯಲ್ ಮಾಡಿದಳು. ಅತ್ತಕಡೆಯಿಂದ ರಿಂಗ್ ಆಗುತ್ತಿತ್ತು. ಹುಡುಗನ ವಿಳಾಸ ಅವಳಿಗೆ ಬೇಕಾಗಿತ್ತು. ಅದಕ್ಕಾಗಿಯೇ ಅವಳು ಫೋನ್ ಮಾಡಿದ್ದಳು. ಕೊನೆಗೆ ಫೋನ್ ರಿಸೀವ್ ಮಾಡಿ ಅತ್ತಕಡೆಯಿಂದ 

*"ಹಲೋ"*

ಎಂದು ಒಂದು ಗಂಡಸಿನ ಧ್ವನಿ ಕೇಳಿದಾಗ, ಸುಮಾ

*"ನಮಸ್ಕಾರ ಸರ್, ನಿಮ್ ನಂಬರ್ ಗೆ ನಮ ಕಂಪನಿ ಒಂದು ಲಕ್ಕಿ ಡಿಪ್ ನಲ್ಲಿ ಬಹುಮಾನ ಬಂದಿದೆ. 20 ಸಾವಿರ ರೂಪಾಯಿ ನಗದು. ಅದನ್ನು ನಿಮಗೆ ತಲುಪಿಸಬೇಕು ನಿಮ್ಮ ಅಡ್ದ್ರೆಸ್ ಹೇಳ್ತೀರಾ? ನಾವೇ ಸ್ವತಃ ಬಂದು ಕೊಡ್ತೀವಿ."*

ಎಂದು ಹೇಳಿದಾಗ 20 ಸಾವಿರ ರೂಪಾಯಿ ಎಂದ ಕೂಡಲೇ ಮಾತನಾಡುತ್ತಿದ್ದ ವ್ಯಕ್ತಿ ಬೇರೆ ಮಾತನಾಡದೆ ತನ್ನ ಅಡ್ರೆಸ್ ಹೇಳಿದ. ಅದನ್ನು ಬರೆದುಕೊಂಡ ಸುಮಾ 1 ಘಂಟೆ ನಂತರ ಬರುವದಾಗಿ ಹೇಳಿದಳು. 

   20 ನಿಮಿಷದ ನಂತರ, ಕಾವೇರಿ ಕ್ಲಾಸ್ ಮುಗಿಸಿಕೊಂಡು ಬಂದಳು. ಕಾಲೇಜು ಟೈಮ್ ಮುಗಿಯಲ್ಲಿಕ್ಕೆ ಬಂದಿದ್ದರಿಂದ, ಇಬ್ಬರೂ ಪ್ರಿನ್ಸಿಪಾಲ ಗೆ ಹೇಳಿ ಅವರ ಪರವಾನಿಗೆ ತೆಗೆದುಕೊಂಡು ಅಲ್ಲಿಂದ ಹೊರಟರು. ನೇರವಾಗಿ ಸುಮಾ ಕಾರು ತಾನು ತೆಗೆದುಕೊಂಡ ಆ ಹುಡುಗನ ಮನೆ ಕಡೆಗೆ ಹೊರಟಳು. ಸುಮಾ ಹೋಗುತ್ತಾ ದಾರಿಯಲ್ಲಿ ಕಾವೇರಿಗೆ ಎಲ್ಲ ವಿಷಯವನ್ನು ತಿಳಿಸಿದಳು. ಸುಮಾ ಹೇಳಿದ ವಿಷಯವನ್ನು ಕೇಳಿದಾಗ ಕಾವೇರಿ ಕೇಳಿ ದಂಗಾದಳು. 

*"ಏನೇ ಸುಮಿ ಇದು, ನಮ್ಮ ಕಾಲದಲ್ಲಿ ಹೀಗೆಲ್ಲ ಇತ್ತ? ಇವೇನು ಇನ್ನೂ ತಿಳುವಳಿಕೆ ಬರದೇ ಇರುವ ವಯಸ್ಸಿನಲ್ಲಿ ಈ ರೀತಿ ಮಾಡ್ತಾವೆ. ಅದು ಸರಿ, ಈಗ ನೀನು ಎಲ್ಲಿಗೆ ಹೊರಟೆ? ಹುಡುಗನ ಹತ್ರಾನೇ"*

ಎಂದು ಕೇಳಿದಾಗ, ಸುಮಾ ಉತ್ತರ ಕೊಡದೆ, ಕೇವಲ ಕಾವೇರಿ ಕಡೆಗೆ ನೋಡಿ ನಕ್ಕಳು. ಅವಳ ನಗುವಿನಿಂದ ಕಾವೇರಿಗೆ ಅವಳು ತನ್ನನ್ನು ಆ ಹುಡುಗನ ಹತ್ತಿರ ಕರೆದುಕೊಂಡು ಹೊರಟಿದ್ದಾಳೆ ಅಂತ ಅರ್ಥವಾಯಿತು. 

*"ಅಯ್ಯೋ, ಇದೇನೇ ಸುಮಿ ಇಲ್ಲದ ಕಾರಬಾರು ನಮಗೆ. ನಿಂಗೆ ಬೇರೆ ಕೆಲಸ ಇಲ್ವಾ?ಇಲ್ಲದ್ದು ರಗಳೆ ಯಾಕೆ ಮೈ ಮೇಲೆ ಎಳೆದುಕೊಳ್ತಿಯಾ?"*

*"ಕಾವೇರಿ ಇದು ರಗಳೆ ಅಲ್ಲ. ಒಂದು ಹುಡುಗಿಯ ಜೀವನದ ಪ್ರಶ್ನೆ. ಒಂದು ವೇಳೆ ಆ ಹುಡುಗ ಮುಂದೆ ತಾನು ಜೀವನದಲ್ಲಿ ಸೆಟ್ಲ್ ಆದ ಮೇಲೆ ಇದೆ ಹುಡುಗಿಯ ಬಗ್ಗೆ ಇಲ್ಲ ಸಲ್ಲದ ಅಪವಾದ ಕೊಟ್ಟರೆ ಹೇಗೆ? ಅದಲ್ಲದೆ, ಅವಳು ಪ್ರೀತಿ ಮಾಡುತ್ತಿದ್ದ ವಿಷಯ ಆ ಹುಡುಗಿಯ ತಂದೆ ತಾಯಿಗೆ ಮತ್ತು ಅವಳ ಗೆಳತಿಯರಿಗೆ ಗೊತ್ತಿದೆ. ಇದರಿಂದ ಆ ಹುಡುಗಿಯ ಮುಂದಿನ ಭವಿಷ್ಯ ಕತ್ತಲಲ್ಲಿ ಬಿದ್ದರೆ ಹೇಗೆ? ಅದಕ್ಕೆ ನಾನು ಆ ಹುಡುಗನ ಹತ್ತಿರ ಹೋಗ್ತಿದ್ದೀನಿ"*

*"ಏನು ಹೋಗಿ ಜಗಳ ತೆಗೆದರೆ, ಇಷ್ಟು ದಿನ ಆದ ವಿಷಯ ಮರೆಯಾಗಿ ಬಿಡ್ತದ?"*

*"ಇಲ್ಲ ಹಾಗೇನಾಗುವದಿಲ್ಲ. ನಾನು ಅವನಿಗೆ ಅವನ ತಪ್ಪು ತಿಳಿಸೋಕೆ ಹೊರಟಿದ್ದೀನಿ. ಅವನು ತಿದ್ದಿಕೊಂಡರೆ ಒಳ್ಳೆಯದು. ಇಲ್ಲವಾದರೆ ಬೇರೆ ದಾರಿ ಯೋಚನೆ ಮಾಡ್ತೀನಿ ಒಟ್ಟಾರೆ ಆ ಹುಡುಗಿಗೆ ನ್ಯಾಯ ದೊರಕಿಸಿ ಕೊಡ್ತೀನಿ. ಅಷ್ಟು ಮಾತ್ರ ಹೇಳ್ತಿನಿ"*

ಎಂದು ಹೇಳಿದಾಗ ಅವಳನ್ನೇ ಅವಾಕ್ಕಾಗಿ ನೋಡುತ್ತಾ ಕುಳಿತುಬಿಟ್ಟಳು ಕಾವೇರಿ. ಅಷ್ಟರಲ್ಲಿ ಸುಮಾ ಆ ಹುಡುಗನ ಅಡ್ರೆಸ್ಸ್ ಇದ್ದ ಏರಿಯಾ ಕಡೆಗೆ ಬಂದ್ಲು. ಕಾರನ್ನು ಸಾವಕಾಶವಾಗಿ ನಡೆಸುತ್ತ ಕೊನೆಗೆ ಹುಡುಗ ಹೇಳಿದ ಅಡ್ರೆಸ್ ಹತ್ತಿರ ಬಂದಳು. ಹಾಗೆ ನೋಡುತ್ತಾ ಹೋಗುತ್ತಿರುವಾಗ, ಅಡ್ರೆಸ್ ಕಂಡಿತು. ಅಲ್ಲಿ ಮನೆಯ ಮುಂದೆ ಕಾರ್ ನಿಲ್ಲಿಸಿದಳು. ಮನೆಯ ಮುಂದೆ ಕಾರ್ ನಿಂತಿದ್ದು ಕಂಡು ಒಳಗಿನಿಂದ ಒಬ್ಬ ಯುವಕ ಬಂದ. ಅವನು ಬಂದು ಮನೆಯ ಮುಂದೆ ನಿಂತಾಗ ಸುಮಾ ಮತ್ತು ಕಾವೇರಿ ಕಾರಿನಿಂದ ಇಳಿದರು. ಅವರನ್ನು ನೋಡುತ್ತಿದ್ದಂತೆ ಅವನು ಗೇಟ್ ಹತ್ತಿರ ಬಂದು

*"ನಂಗೆ ಕಾಲ್ ಮಾಡಿದ್ದು ನೀವೇನಾ?"*

*"ಹೌದು"*

ಎಂದು ಸುಮಾ ಉತ್ತರಿಸಿದಾಗ, ಅವನ ಮುಖದಲ್ಲಿ ನಗು ಬಂದು, 

*"ಬನ್ನಿ ಒಳಕ್ಕೆ"*

ಎಂದು ಕರೆದುಕೊಂಡು ತನ್ನ ಮನೆಯ ಒಳಗಡೆ ಹೋದ. ಅವನನ್ನು ಹಿಂಬಾಲಿಸಿದ ಸುಮಾ ಮತ್ತು ಕಾವೇರಿ ಹಾಲಿನಲ್ಲಿ ಹೋಗಿ ಅಲ್ಲಿ ಇದ್ದ ಕುರ್ಚಿಯ ಮೇಲೆ ಕುಳಿತುಕೊಂಡರು. ಅಷ್ಟರಲ್ಲಿ ಆ ಯುವಕ ಒಳಗಿನಿಂದ ನೀರು ತೆಗೆದುಕೊಂಡು ಬಂದು ಕೊಟ್ಟ. ಸುಮಾ ಮತ್ತು ಕಾವೇರಿ ನೀರು ಕುಡಿಯುತ್ತಿರುವಾಗ, ಒಳಗಿನಿಂದ ಒಬ್ಬ ಮಹಿಳೆ ಬಂದಳು. ಮಧ್ಯ ವಯಸ್ಸಿನ ಹೆಣ್ಣುಮಗಳು. ಹಣೆ ತುಂಬಾ ಕುಂಕುಮ ಮತ್ತು ನೀಟಾಗಿ ಉಟ್ಟುಕೊಂಡಿದ್ದ ಸೀರೆ ನಗು ಮುಖ ಅವಳನ್ನು ನೋಡಿದರೆ ಗೌರವ ಕೊಡಬೇಕು ಎನ್ನಿಸುತ್ತಿತ್ತು. ಆ ರೀತಿಯಾಗಿ ಇದ್ದರು. ಆ ಮಹಿಳೆ ಬರುತ್ತಿದ್ದಂತೆ, ಆ ಯುವಕ 

*"ಇವರು ನಮ್ಮ ಮಮ್ಮಿ"*

ಎಂದು ಪರಿಚಯಿಸಿ ತನ್ನ ತಾಯಿಗೆ 

*"ಮಮ್ಮಿ ಇವರೇ ನಾನು ಹೇಳಿದ್ದೆನಲ್ಲ, ನನ್ನ ನಂಬರ್ ಗೆ ಬಹುಮಾನ ಬಂದಿದೆ ಅಂತ ಹೇಳಿ ನನಗೆ 20 ಸಾವಿರ ರೂಪಾಯಿಗಳನ್ನು ಕೊಡಲು ಬರುತ್ತೇನೆ ಅಂತ ಹೇಳಿದರು ಅಂತ ಅವರೇ ಇವರು. ದುಡ್ಡು ಕೊಡಲು ಬಂದಿದ್ದಾರೆ"*

ಎಂದು ಹೇಳಿದಾಗ ಅವನ ತಾಯಿ

*"ಸಂತೋಷ್"*

ಎಂದಷ್ಟೇ ಹೇಳಿ ಸುಮ್ಮನಾದರು. ಸುಮಾ ಅವನ ತಾಯಿಯನ್ನು ಮಾತನಾಡಿದ್ಸತೊಡಗಿದಳು. 

*"ಅಮ್ಮ ನಿಮಗೆಷ್ಟು ಮಕ್ಕಳು?"*

*"ಇವನೊಬ್ಬನೇ ಕಣಮ್ಮ. ಯಾಕೆ ಕೇಳ್ತಿದಿಯಮ್ಮ?"*

ಎಂದು ಪ್ರಶ್ನಾರ್ಥಕವಾಗಿ ಸುಮಾಳನ್ನೇ ನೋಡುತ್ತಾ ಕೇಳಿದಾಗ, ಒಂದು ಕ್ಷಣ ಸುಮ್ಮನಿದ್ದ ಸುಮಾ 

*"ತಪ್ಪು ತಿಳಿಯಬೇಡಿ ಅಮ್ಮ. ನಾನು ನಿಮ್ಮ ಮಗನಿಗೆ ಯಾವುದೇ ಬಹುಮಾನ ಕೊಡಲು ಬಂದಿಲ್ಲ. ಇವಳು ನನ್ನ ಸ್ನೇಹಿತೆ ಕಾವೇರಿ. ನಾವಿಬ್ಬರೂ ಕಾಲೇಜಿನಲ್ಲಿ ಲೆಕ್ಚರರ್ ಅಂತ ಕೆಲಸ ಮಾಡುತ್ತಿದ್ದೇವೆ. ನನ್ನ ಕಾಲೇಜಿನಲ್ಲಿ ಒಂದು ಹುಡುಗಿ ಇದೆ ಗೀತಾ ಅಂತ. ಅವಳು ನಿಮ್ಮ ಮಗ ಇಬ್ಬರೂ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾರೆ ನಂತರ ಒಬ್ಬರನ್ನೊಬ್ಬರು ಮಾತನಾಡಿಸಿದ್ದಾರೆ. ನಿಮ್ಮ ಮಗ ಅವಳಿಗೆ ತಾನು ಅವಳನ್ನು ಮದುವೆಯಾಗುವದಾಗಿ ಭರವಸೆ ನೀಡಿದ್ದಾನೆ. ಆ ಹುಡುಗಿಯ ಮನೆಯಲ್ಲಿ ಸಹ ಇವರಿಬ್ಬರ ಲವ್ ಗೆ ಒಪ್ಪಿಕೊಂಡಿದ್ದಾರೆ. ತಮ್ಮ ಮಗಳು ತಪ್ಪು ಹಾದಿ ಹಿಡಿಯುವದಿಲ್ಲವೆಂಬ ಭರವಸೆ ಅವರಿಗೆ. ಕೊನೆಗೆ ನಿಮ್ಮ ಮಗ, ಯಾವುದೋ ಬೇರೆ ಹುಡುಗಿಯ ಜೊತೆಗೆ ತನ್ನ ಎಂಗೇಜ್ಮೆಂಟ್ ಆಗುವದಿದೆ ಎಂದು ಹೇಳಿ ಮತ್ತು ಅವಳಿಗೆ ತನ್ನನ್ನು ಮರೆತುಬಿಡುವದಾಗಿ ಹೇಳಿದ್ದಾನೆ."*

ಎಂದು ಹೇಳಿದಾಗ ಎದುರಿಗೆ ಕುಳಿತ ರವಿ ಗಾಬರಿಯಾಗಿ ಇವರಿಬ್ಬರ ಕಡೆಗೆ ನೋಡುತ್ತಿದ್ದ. ಅವನ ಮುಖ ಬಿಳಚಿಕೊಂಡಿತ್ತು. ಅನಿರೀಕ್ಷಿತವಾಗಿ ಬರಸಿಡಿಲು ಬಂದು ಅವನ ಮೇಲೆ ಬಿದ್ದಂತಾಗಿತ್ತು. ಅಲ್ಲದೆ, ಸುಮಾ ಮತ್ತು ಕಾವೇರಿ ಹೇಳಿದ ಮಾತನ್ನು ಕೇಳುತ್ತ ಕುಳಿತಿದ್ದ ರವಿಯ ತಾಯಿ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು. ಸುಮಾ ಹೇಳುವದನ್ನು ಮುಗಿದ ಮೇಲೆ ಅವನ ತಾಯಿ ರವಿಯ ಕಡೆಗೆ ತಿರುಗಿಕೊಂಡು

*"ಏನೋ ರವಿ, ಹೀಗೆಲ್ಲ ಮಾಡಿದೀಯ? ಯಾಕೋ ಹೀಗೆ ಮಾಡಿದೆ? ಒಂದು ಹುಡುಗಿ ಮನಸ್ಸಿನ ಜೊತೆಗೆ ಮತ್ತು ಅವಳ ಭಾವನೆಗಳ ಜೊತೆಗೆ ಆಟವಾಡುವದಕ್ಕೆ ನಾಚಿಕೆ ಆಗಲಿಲ್ಲವೇ? ಇದೇನಾ ನೀನು ಸೆಲ್ ಹಿಡಿದುಕೊಂಡು ಮಾಡೋದು? ನಿಮ್ಮಂಥ ಮಕ್ಕಳು ಏನೋ ಸಾಧಿಸ್ತಾರೆ ಅಂತ ನಾವು ತಂದೆ ತಾಯಿ ನಿಮ್ಮನ್ನು ನಂಬಿ ಕೂತುಕೊಂಡರೆ ನೀನು ಈ ರೀತಿಯಾಗಿ ಮಾಡಿದೀಯ? ಯಾಕೆ?"*

ಎಂದು ಜೋರಾಗಿ ಅವನನ್ನು ಕೇಳಿದಾಗ ರವಿ, ತೊದಲುತ್ತ,

*"ಇಲ್ಲ ಅಮ್ಮ, ಅದು ಸುಮ್ನೆ ತಮಾಷೆ ಮಾಡೋಕೆ ಹೋಗಿ ಈ ರೀತಿಯಾಗಿದೆ"*

*"ಏನೋ, ಒಂದು ಹೆಣ್ಣಿನ ವಿಷಯದಲ್ಲಿ ತಮಾಷೆ ಮಾಡೋದಕ್ಕೆ ನೀನು ಯಾರು? ಒಂದು ವೇಳೆ ಅಕಸ್ಮಾತ ಆ ಹುಡುಗಿ ಏನಾದರೂ ಮಾಡಿಕೊಂಡಿದ್ದರೆ ಯಾರು ಹೊಣೆ ಆಗ್ತಿದ್ದರು? ಇವರು ಬಂದು ಹೇಳಿದರು ಸರಿ, ಇಲ್ಲವಾದರೆ ಇನ್ನೂ ಏನೇನೋ ರಾದ್ಧಾಂತ ಮಾಡುತ್ತಿದ್ದೆಯೋ ದೇವರೇ ಬಲ್ಲ"*

ಎಂದು ಹೇಳಿ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತರು. ಅವರ ಕಣ್ಣಿನಲ್ಲಿ ನೀರು ಬಂದಿತ್ತು. ಅಳುವದೊಂದೇ ಬಾಕಿ ಇತ್ತು. ಆದರೆ ಸುಮಾ ಮತ್ತು ಕಾವೇರಿ ಎದುರಿಗೆ ಅಳಬಾರದು ಎಂಬ ಕಾರಣಕ್ಕೆ ತಮ್ಮ ದುಃಖವನ್ನು ಹೊರಗೆ ಕಣ್ಣೀರಿನ ರೂಪದಲ್ಲಿ ಬಂದರೂ ಅವುಗಳನ್ನು ಅಲ್ಲಿಯೇ ಕಣ್ಣಿನಲ್ಲಿ ತಡೆ ಹಿಡಿದಿದ್ದರು. ಅವರ ಪರಿಸ್ಥಿತಿಯನ್ನು ಮನಗಂಡ ಸುಮಾ ಮತ್ತು ಕಾವೇರಿ ಮುಂದೆ ಏನು ಮಾತಾಡಬೇಕು ಎಂದು ಯೋಚನೆ ಮಾಡುತ್ತಾ ಒಬ್ಬರ ಮುಖವನ್ನೂಬ್ಬರು ನೋಡತೊಡಗಿದಾಗ, ಕಾವೇರಿ,

*"ನೋಡಪ್ಪ ರವಿ, ನೀನು ಚಿಕ್ಕ ಮಗುವಲ್ಲ. ಒಬ್ಬ ಹುಡುಗಿಯನ್ನು ನೀನು ಪ್ರೀತಿಸುತ್ತೇನೆ ಅಂತ ಹೇಳಿ ಅವಳ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸುತ್ತಿ ಅಂದ್ರೆ, ನೀನು ಯೋಚನೆ ಮಾಡುವ ಶಕ್ತಿ ಇದ್ದವನೇ. ಆದರೆ ಆ ಹುಡುಗಿ ಮತ್ತು ಅವಳ ಭವಿಷ್ಯದ ಬಗ್ಗೆ ಸಹ ನೀನು ಯೋಚನೆ ಮಾಡಬೇಕಾಗಿತ್ತಲ್ಲವೇ? ಕೇವಲ ನೀನು ನಿನ್ನ ಟೈಮ್ ಪಾಸ್ ಮಾತ್ರ ನೋಡಿದೆ ಅವಳ ಬಗ್ಗೆ ಯೋಚನೆ ಮಾಡಲಿಲ್ಲ. ಇದು ಸ್ವಾರ್ಥ ಅಂತ ನಿನಗೆ ಅನ್ನಿಸಲಿಲ್ಲವೇ? ಹುಡುಗಿಯರ ಮನಸ್ಸುತುಂಬಾ ಸೂಕ್ಷ್ಮ. ಅಂತ ಸೂಕ್ಷ್ಮ ಮನಸ್ಸಿನವರು ಏನಾದರೂ ಮಾಡಿಕೊಂಡರೆ ನಿನಗೆ ಮತ್ತು ನಿನ್ನ ತಂದೆತಾಯಿಗಳಿಗೆ ಕೆಟ್ಟು ಹೆಸರು ನೀನೆ ತಂದು ಕೊಡುತ್ತಿ. ಈಗ ನೀನೆ ಹೇಳು ನಿನ್ನನ್ನು ನಂಬಿ ಆ ಹುಡುಗಿ ನಿನಗೆ ಮನಸ್ಸು ಕೊಟ್ಟಿದ್ದಾಳೆ ಯಾಕೆ? ನೀನು ಅವಳನ್ನು ಪ್ರೀತಿಸುತ್ತಿ ಎಂದು. ಆದರೆ, ನೀನು ಅವಳ ರೀತಿಯಲ್ಲಿ ಎಂದಾದರೂ ಯೋಚನೆ ಮಾಡಿರುವೆಯ? ಒಂದು ಕ್ಷಣ ನೀನು ಆ ಹುಡುಗಿಯ ಜಾಗದಲ್ಲಿ ನಿಂತು ಯೋಚನೆ ಮಾಡಿದ್ದಾರೆ ನಿನಗೆ ಗೊತ್ತಾಗುತ್ತಿತ್ತು, ಮನಸ್ಸಿನ ಮೇಲೆ ಪರಿಣಾಮ ಏನಾಗುತ್ತದೆ ಅಂತ. ನೀನು ಒಂದು ಹೆಣ್ಣನ್ನು ಕೇವಲ ಹೆಣ್ಣು ಅಂತ ಮಾತ್ರಾನೇ ತಿಳಿದಿರುವೆ. ನೀವು ಗಂಡಸರು ಕೇವಲ ಬಾಹ್ಯ ಸೌಂದರ್ಯ ನೋಡಿ ಹೆಣ್ಣನ್ನು ಮರಳು ಮಾಡಲು ಪ್ರಯತ್ನ ಮಾಡ್ತೀರಿ. ಆದರೆ ಅವಳ ಮನಸ್ಸಿನ ಸೌಂದರ್ಯ ಮಾತ್ರ ಇಂದಿಗೂ ಪರಿಗಣಿಸುವದಿಲ್ಲ. ಒಂದು ವೇಳೆ ಹಾಗೆ ಪರಿಗಣಿಸಿದಲ್ಲಿ ಈ ಪ್ರಪಂಚದಲ್ಲಿ ಪ್ರೀತಿಗೆ ಎಂದೂ ಸೋಲು ಇರುವದಿಲ್ಲ. ನಾನೇನು ಹೆಚ್ಚಿಗೆ ಹೇಳುವದಿಲ್ಲ. ನೀನೆ ಯೋಚನೆ ಮಾಡು"*

ಎಂದು ಕಾವೇರಿ ಸುಮ್ಮನಾದಳು. ರವಿ ತಲೆ ತಗ್ಗಿಸಿಕೊಂಡು ಕುಳಿತಿದ್ದ. ಅವನ ತಾಯಿಯ ಕಣ್ಣೀರು ಕೆನ್ನೆಯ ಮೇಲೆ ಬಿದ್ದು, ಅವರ ಅಳುವಿನಿಂದ ಅವರ ಮನಸ್ಸಿಗೆ ನೋವಾಗಿದೆ ಅಂತ ಗೊತ್ತಾಗುತ್ತಿತ್ತು. ಸುಮ ಅವರನ್ನು ಕುರಿತು

*"ಅಮ್ಮ, ನಾವೇನು ನಿಮ್ಮ ಮಗನ ವಿರುದ್ಧ ಮಾತನಾಡುವದಕ್ಕಾಗಲಿ ಅಥವಾ ಅವನನ್ನು ಬೈಯುವದಕ್ಕಾಗಲಿ ಬಂದಿಲ್ಲ. ನಮಗೆ ಬೇಕಾಗಿದ್ದು ಇಷ್ಟೇ, ಗೀತಾ ಒಳ್ಳೆಯ ಹುಡುಗಿ. ಅವಳಿಗೆ ಅನ್ಯಾಯ ಆಗಬಾರದು. ತಿಳಿಯದ ವಯಸ್ಸಿನಲ್ಲಿ ಇಂಥವೆಲ್ಲ ಸಹಜ ಆದರೆ, ಅವರಿಗೆ ತಿಳಿಸಿ ಹೇಳಬೇಕಾದ ನಾವುಗಳು ಸರಿಯಾಗಿ ಹೇಳದಿದ್ದರೆ ಮತ್ತು ಅವರ ಕಡೆಗೆ ಸರಿಯಾಗಿ ಗಮನ ಕೊಡದಿದ್ದರೆ ಲೈಫ್ ಹಾಳುಮಾಡಿಕೊಂಡುಬಿಡುತ್ತಾರೆ. ನಂಗೆ ಗೊತ್ತು. ಬಾಯಲ್ಲಿ ಹೇಳೋದು ಸುಲಭ್ ಆದರೆ ಅನುಭವಿಸುವದು ಮಾತ್ರ ತುಂಬಾ ಕಷ್ಟ ಅಂತ. ಆದರೆ ಏನು ಮಾಡೋಕಾಗುತ್ತೆ, ಕೆಲವು ತಪ್ಪುಗಳನ್ನು ಮುಚ್ಚಿಡುವದಕ್ಕೆ ಆಗಿವದಿಲ್ಲ. ಆ ಹುಡುಗಿ ಇಂದು ನನ್ನ ಕ್ಲಾಸಿನಲ್ಲಿ ಸಂಕಟ ಪಟ್ಟುಕೊಂಡು ಅಳುವದನ್ನು ನೋಡುವದಕ್ಕೆ ನನ್ನಿಂದಾಗದೆ, ಕೊನೆಗೆ ಏನೋ ಪ್ರಯತ್ನ ಮಾಡಿ ನಿಮ್ಮ ಮನೆಗೆ ಬಂದೆ. ಒಂದು ವೇಳೆ ನಾನು ತಪ್ಪು ಹೇಳಿದರೆ ಕ್ಷಮಿಸಿ"*

ಎಂದು ಹೇಳಿದಾಗ ರವಿ ತಾಯಿ

*"ಹಾಗೆನ್ನಬೇಡಿ. ಇವನು ಹೀಗೆ ಆಗುವದಕ್ಕೆ ನೀವು ಹೇಳಿದಂತೆ ನಾನು ಸಹ ಒಂದು ರೀತಿಯಿಂದ ಕಾರಣಳಾಗುತ್ತೇನೆ. ಅವನ ಮೇಲೆ ನಿಗಾ ಇಲ್ಲದೆ, ನಮ್ಮ ಮಗ ಎಂದು ಸಲುಗೆ ಕೊಡುವದೇ ತಪ್ಪು. ನೀವು ಹೇಳುತ್ತಿದ್ದೀರಿ, ಹುಡುಗಿ ಒಳ್ಳೆಯವಳು ಅಂತ. ನಾನು ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ಅವರ ಮನೆಗೆ ಭೇಟಿ ಕೊಟ್ಟು ಸಾಧ್ಯವಾದರೆ, ಅವರು ಒಪ್ಪಿಕೊಂಡರೆ ಅದೇ ಹುಡುಗಿಯನ್ನು ನಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ತೀನಿ. ನೀವು ಅದರ ಬಗ್ಗೆ ಚಿಂತಿಸಬೇಡಿರಿ. ಇನ್ನು ಮುಂದೆ ಇವನಿಂದ ಈ ರೀತಿಯಾಗಿ ಆಗದಂತೆ ನೋಡಿಕೊಳ್ಳುವ ಜಬಾಬ್ದಾರಿ ನನ್ನದು. ಇನ್ನು ಇನ್ವನನ್ನು ನನ್ನ ನಿಗರಾಣಿಯಲ್ಲಿ ಇಟ್ಟುಕೊಳ್ಳುವೆನು"*

ಎಂದು ಅವರು ಹೇಳುತ್ತಿರುವಷ್ಟರಲ್ಲಿ ರವಿ,

*"ಮೇಡಂ, ದಯವಿಟ್ಟು ಕ್ಷಮಿಸಿ, ನಾನು ತಪ್ಪು ಮಾಡಿಬಿಟ್ಟೆ. ಕೇವಲ ಟೈಮ್ ಪಾಸ್ ಕ್ಕೋಸ್ಕರ ನಾನು ಈ ರೀತಿ ಮಾಡಿದ್ದೆ. ಆದರೆ ಅದು ಇಷ್ಟು ದೀರ್ಘವಾಗಿ ಮುಂದುವರೆದು ಇಂಥ ಪರಿಣಾಮ ನೀಡುತ್ತದೆ ಅಂತ ಮಾತ್ರ ನನಗೆ ಅನ್ನಿಸಿರಲಿಲ್ಲ. ನಮ್ಮ ತಾಯಿ ಹೇಳಿದಂತೆ ನಾನು ಮಾಡುತ್ತೇನೆ"*

ಎಂದು ಹೇಳಿ ಅವರ ಎದುರಲ್ಲಿಯೇ ಅವನು ಗೀತಳಿಗೆ ಫೋನ್ ಮಾಡಿ ಬಿಟ್ಟ. ಅವಳು ಮೊದಲು ಫೋನ್ ರೆಸಿವ್ ಮಾಡಿಕೊಳ್ಳಲಿಲ್ಲ. ಎರಡನೆಯ ಸಲ ಹಚ್ಚಿದಾಗ ರೆಸಿವ್ ಮಾಡಿಕೊಂಡಾಗ, ರವಿ ಅವಳಿಗೆ ನಡೆದ ವಿಷಯವನ್ನೆಲ್ಲ ಹೇಳಿ, ಫೋನ್ ಸುಮಾ ಕೈಗೆ ಕೊಟ್ಟ. ಸುಮಾ ಅವಳ ಜೊತೆಗೆ ಮಾತನಾಡಿ ಅವಳಿಗೆ ಧೈರ್ಯ ಹೇಳಿದಳು ಮತ್ತು ರವಿ ತನ್ನ ತಂದೆ ತಾಯಿಯರ ಜೊತೆಗೆ ಅವರ ಮನೆಗೆ ಬರುತ್ತಾನೆ ಎಂದೂ ಸಹ ತಿಳಿಸಿದಾಗ, ಗೀತಾ ಸುಮಾ ಮತ್ತು ಕಾವೇರಿಗೆ ಧನ್ಯವಾದ ಹೇಳಿದಳು.

ತಾವು ಬಂದ ಕಾರ್ಯ ಯಶಸ್ವಿಯಾಗಿ ಮುಗಿಯಿತು ಎಂದುಕೊಂಡು ಅಲ್ಲಿಂದ ಹೋರಾಡಲು ಅನುವಾದರು. ಆದರೆ ರವಿ ತಾಯಿ ಮಾತ್ರ ಅವರಿಬ್ಬರನ್ನು ಬಿಡದೆ, ಬಲವಂತವಾಗಿ ಅವರಿಬ್ಬರಿಗೆ ಊಟ ಮಾಡಿಸಿ ಅಲ್ಲಿಂದ ಬಿಳ್ಕೊಟ್ಟರು. 

17


  ಸುಮಾ ಡ್ರೈವ್ ಮಾಡುತ್ತಾ ಕಾವೇರಿಯನ್ನು ಬಿಡಲು ಅವಳ ಮನೆಯಕಡೆಗೆ ಹೊರಟಳು. ಸುಮಾಳ ಮನದಲ್ಲಿ ಏನೋ ಅನೂಹ್ಯವಾದ ಫೀಲಿಂಗ್ ಇತ್ತು. ಏಕೋ ಗೊತ್ತಿಲ್ಲ, ಒಂದು ರೀತಿಯಲ್ಲಿ ಮನಸ್ಸಿಗೆ ತುಂಬಾ ಸಮಾಧಾನವಾಗಿತ್ತು. ಪ್ರೇಮಿಗಳನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದಳು. ಅದರ ಪರಿಣಾಮ ಸ್ವಲ್ಪ ಹೊತ್ತಿನಲ್ಲಿ ಗೊತ್ತಾಗಬೇಕಾಗಿತ್ತು. ಅವಳು ತುಂಬಾ ಖುಷಿಯಾಗಿದ್ದಳು. ಅವಳು ಖುಷಿಯಾಗಿದ್ದುದನ್ನು ನೋಡಿದ ಕಾವೇರಿ

*"ಲೇ ಸುಮಿ, ಏನೇ ತುಂಬಾ ಸಂತೋಷ ಆದ ಹಾಗೆ ಕಾಣ್ತಿದೆ"*

*"ಹೌದು ಕಣೆ ಕಾವೇರಿ, ಏಕೋ ಗೊತ್ತಿಲ್ಲ, ಪ್ರೀತಿಸೋ ಹೃದಯಗಳನ್ನು ಒಂದು ಮಾಡಿದಾಗ ಮನಸ್ಸಿಗೆ ಆಗುವ ಖುಷಿ ಬೇರೆ ರೀತಿಯಾಗಿರುತ್ತದೆ. ಇದನ್ನು ಕೇಳಿದ್ದೆ, ಓದಿದ್ದೆ, ಆದರೆ ಇಂದು ನನ್ನ ಕೈಯಿಂದ ಒಂದು ಅಂತ ಕೆಲಸ ಆಗಿದೆ ಅಂತ ಸಂತೋಷವಾಗಿದೆ"*

*"ಲೇ ಮಂಕೆ, ಇನ್ನೂ ಪ್ರಾಬ್ಲಮ್ ಸಾಲ್ವೆ ಆಗಿಲ್ವೇ ಅದ್ಯಾಕೆ ಹಾಗೆ ಆತುರಗೆಟ್ಟ ಆಂಜನೇಯ ಆಡಿದ ಹಾಗೆ ಮಾಡ್ತಿ?"*

*"ನನ್ನ ಪ್ರಕಾರ ರವಿ ಮತ್ತು ಅವನ ತಾಯಿ ಇಬ್ಬರನ್ನೂ ನೋಡಿದಾಗ, ಅವರ ಹಾವ ಭಾವ ಗಮನಿಸಿದಾಗ, ಇದು ಸುಖಾಂತ್ಯವನ್ನು ಕಾಣುತ್ತದೆ ಅಂತ ಅನ್ನಿಸತೊಡಗಿದೆ. ಕಾದು ನೋಡಬೇಕಷ್ಟೆ. ಆದ್ರೆ ಇಂಥ ಒಂದು ಒಳ್ಳೆ ಕೆಲಸ ಮಾಡಿದ್ದು ಮನಸ್ಸಿಗೆ ಖುಷಿ ಕೊಡ್ತಿದೆ ಕಣೆ"*

ಎಂದು ತನ್ನ ವಿವರಣೆ ಕೊಟ್ಟಾಗ,

*"ಲೇ ಸುಮಿ, ಈ ಫೇಸ್ ಬುಕ್ಕು ಇವೆಲ್ಲ ಸೋಶಿಯಲ್ ಮೀಡಿಯಾಗಳು ಒಂದು ರೀತಿಯಲ್ಲಿ ಖುಷಿ ಕೊಟ್ಟರೂ ಅದು ದುರುಪಯೋಗವಾದಾಗ ಆಗುವ ಪರಿಣಾಮ ತುಂಬಾ ಘೋರ ಅಂತ ಅನ್ನಿಸುತ್ತೆ ನಂಗೆ"*

*"ಲೇ ಕಾವೇರಿ, ಎಲ್ಲ ವಿಷ್ಯದಲ್ಲೊ ಉಪಯೋಗ ದುರುಪಯೋಗ ಇದ್ದೆ ಇರುತ್ತೆ. ನಾವು ಹೇಗೆ ಅದನ್ನ ಉಪಯೋಗ ಮಾಡ್ತೀವಿ ಅದರ ಮೇಲೆ ಪರಿಣಾಮದ ವಿಚಾರ. ಈಗ ನೋಡು, ಪರಿಣಾಮ ಮೊದಲು ಕೆಟ್ಟದಾಗಿ ಅನುಭವವಾಗಿತ್ತು. ಆದರೆ ನಾವು ಅದನ್ನು ಕೆಟ್ಟದ್ದು ಎಂದು ತಿಳಿಸಿ ಹೇಳಿದಾಗ ಅದು ಒಳ್ಳೆಯದಾಗುವ ನಿಟ್ಟಿನಲ್ಲಿ ಹೋಗುತ್ತಿದೆಯಲ್ಲವೇ. ಹಾಗೆ ಎಲ್ಲ ವಿಷಯಗಳು"*

ಎಂದು ಹೇಳಿದಾಗ ಕಾವೇರಿ ಅವಳ ಮಾತಿಗೆ ಒಪ್ಪಿ ತಲೆಯಲ್ಲಾಡಿಸಿದಳು. ಅಷ್ಟರಲ್ಲಿ ಕಾವೇರಿ ಮನೆ ಬಂತು. ಸುಮಾ ಅವಳನ್ನು ಡ್ರಾಪ್ ಮಾಡಿ ತನ್ನ ಮನೆಗೆ ಹೋದಳು. ಮನೆಗೆ ಹೋಗುತ್ತಿದ್ದಂತೆ ಅವಳಿಗೆ ಬೇಸರವಾಗಿತ್ತು. ಹಾಗೆ ಡ್ರೆಸ್ ಚೇಂಜ್ ಮಾಡಿ, ಹಲ್ಲಿನಲ್ಲಿ ಟಿವಿ ನೋಡುತ್ತಾ ಸೋಫಾ ಮೇಲೆ ಒರಗಿದಾಗ, ಅವಳಿಗೆ ಗೊತ್ತಿಲ್ಲದಂತೆ ನಿದ್ರೆ ಹತ್ತಿತು. 

   ಸಾಯಂಕಾಲ 5 ಘಂಟೆಗೆ ಅವಳ ಫೋನ್ ರಿಂಗ್ ಆದಾಗ ಎಚ್ಚರಗೊಂಡಳು. ತನ್ನ ಸ್ಟೂಡೆಂಟ್ ಗೀತಾ ಫೋನ್ ಮಾಡಿದಳು. ಅವಳು ರವಿ ತನ್ನ ಫ್ಯಾಮಿಲಿ ಜೊತೆಗೆ ತನ್ನ ಮನೆಗೆ ಬಂದಿದ್ದನೆಂದೂ ಮತ್ತು ಅವರು ತನ್ನನ್ನು ಮದುವೆಯಾಗುವದಕ್ಕೆ ಒಪ್ಪಿದ್ದಾರೆಂದು ಅದಕ್ಕಾಗಿ ಧನ್ಯವಾದ ತಿಳಿಸಿದಳು. ಅದನ್ನು ಕೇಳಿದ ಸುಮಾ ಪೂರ್ತಿಯಾಗಿ ಸಮಾಧಾನ ಹೊಂದಿದಳು. ಇಂದು ಅಭಿ ಫೋನ್ ಮಾಡಿದಾಗ ಅವನಂತೆ ತಾನೂ ಸಹ ಪ್ರೇಮಿಗಳನ್ನು ತಿದ್ದಿ, ಒಂದು ಮಾಡಿರುವದನ್ನು ಹೇಳಿದರೆ ಅವನು ಖುಷಿ ಪಡುತ್ತಾನೆ ಎಂದುಕೊಂಡಳು. 

   ರಾತ್ರಿ ಊಟವಾದ ಮೇಲೆ ಮತ್ತೆ ಬೆಡ್ ರೂಮಿಗೆ ಬಂದು ಬಾಲ್ಕನಿ ಯಲ್ಲಿ ಚೇರ್ ಹಾಕಿಕೊಂಡು ಕುಳಿತುಕೊಂಡಳು. ಇಂದು ಪಕ್ಕದ ಮನೆಯ ಮುದುಕ ಮತ್ತು ಮುದುಕಿ ಯಾವುದೇ ಹಾಡು ಹಾಕಿರಲಿಲ್ಲ. ವಾತಾವರಣ ಪ್ರಶಾಂತವಾಗಿತ್ತು. ಹಾಗೆ ಸುಮ್ಮನೆ ಹೊರಗೆ ನೋಡತೊಡಗಿದಳು. ಬೀದಿಯಲ್ಲಿ ಹಾಕಿದ ಲೈಟ್ ಗಳು ಮತ್ತು ಹಾಗೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಜನಗಳನ್ನು ನೋಡುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ಹೋಗುತ್ತಿದ್ದ ವಾಹನಗಳು ಎಲ್ಲವನ್ನೂ ನೋಡುತ್ತಾ ಇರುವಾಗ ಅವಳಿಗೆ ಏನೋ ಆನಂದವಾಗತೊಡಗಿತ್ತು. ಒಂದು ಬೈಕ್ ನಲ್ಲಿ ಒಂದು ಹುಡುಗ ಮತ್ತು ಹುಡುಗಿ ಹೊರಟಿದ್ದರು. ಹುಡುಗ ಬೈಕ್ ರೈಡ್ ಮಾಡುತ್ತಿದ್ದ, ಹುಡುಗಿ ಅವನನ್ನು ಹಿಂದಿನಿಂದ ತನ್ನ ಕೈಗಳಿಂದ ಬಳಸಿಕೊಂಡು ಕುಳಿತಿದ್ದಳು. 

ಅದನ್ನು ನೋಡಿದ ಸುಮಾಳಿಗೆ ತನಗೂ ಹಾಗೆ ಸುತ್ತಾಡುವದಕ್ಕೆ ಆಸೆಯಾಯಿತು. ಮದುವೆಯಾದಾಗಿನಿಂದ ಅವಳಿಗೆ ಬೈಕ್ ಮೇಲೆ ಹಿಂದೆ ಈ ರೀತಿಯಾಗಿ ಕುಳಿತುಕೊಂಡು ಹೋಗವದೆಂದರೆ ತುಂಬಾ ಇಷ್ಟ. ಆದರೆ ಗಂಡ ಮಾತ್ರ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಗಂಡ ತೀರಿಕೊಂಡ ಮೇಲೆ ಅವಳ ಮನದಲ್ಲಿದ್ದ ಆಸೆಗಳೆಲ್ಲ ಸತ್ತು ಹೋದಂತೆ ಆಗಿದ್ದವು. ಆದರೆ ಈಗ ಅಭಿ ಸಿಕ್ಕಿಂದ ಮೇಲೆ ಅವಳಿಗೆ ಮತ್ತೆ ಆ ರೀತಿಯಾಗಿ ಆಸೆಗಳು ಮನಸ್ಸಿನಲ್ಲಿ ಚಿಗುರತೊಡಗಿದವು. ತನ್ನಲ್ಲಿ ಮತ್ತು ತನ್ನ ಮನಸ್ಸಿನಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ತಾನೇ ಗಮನಿಸುತ್ತಿದ್ದಳು. ಇತ್ತೀಚಿಗೆ ಅಭಿ ತನ್ನ ಜೊತೆ ಒಡನಾಟಿಯಾದ ಮೇಲೆ ತನ್ನ ಭಾವನೆಗಳು ಬೇರೆ ರೀತಿಯಾಗಿ ಬದಲಾಗುತ್ತಿವೆ ಅಂತ ಅವಳಿಗೆ ಅನ್ನಿಸತೊಡಗಿತು. ಮೊದಲಾದರೆ, ತಾನು ಯಾರಿಗಾಗಿ ಬದುಕಬೇಕು, ಯಾರಿಗಾಗಿ ತಾನು ಅಲಂಕಾರ ಮಾಡಿಕೊಳ್ಳಬೇಕು ಎಂತೆಲ್ಲ ಅನ್ನಿಸುತ್ತಿತ್ತು. ಆದರೆ ಅಭಿ ಸಿಕ್ಕ ಮೇಲೆ, ಅವನು ತನ್ನ ಕಣ್ಣ ಮುಂದೆ ಇಲ್ಲದೆ ಇದ್ದರೂ ಸರಿ ಅವನು ತನ್ನ ಹತ್ತಿರವೇ ಜೊತೆಗೆ ಇದ್ದನೆಂದು ತಿಳಿದುಕೊಂಡು ತನ್ನ ಮೇಲೆ ತಾನೇ ಆಸ್ಥೆ ವಹಿಸಿ ಅಲಂಕಾರ ಮಾಡಿಕೊಳ್ಳುವದು ಮತ್ತು ಖುಷಿಯಿಂದ ಇರುವದು ಮಾಡುವದನ್ನು ಕಂಡು ತನಗೆ ಒಂದು ರೀತಿಯಲ್ಲಿ ಆಶ್ಚರ್ಯವಾಗಿತ್ತು. 

   ಆದರೆ ಅವಳು ತನ್ನ ಬದಲಾವಣೆ ಜೊತೆಗೆ ತನ್ನ ವಯಸ್ಸನ್ನೂ ಪರಿಗಣಿಸಿದಾಗ ಮಾತ್ರ, ಏಕೋ ಒಂದು ರೀತಿಯಾಗತೊಡಗಿತು. ತಾನು ಮಾಡುತ್ತಿರುವದು ಸರಿಯಾ ತಪ್ಪ ಎಂದು ಒಂದು ಕಡೆ ಅಂದುಕೊಳ್ಳ ತೊಡಗಿದರೂ ಸಹ ತನಗೆ ಅವಶ್ಯಕತೆ ಇರುವದರಿಂದ ಮತ್ತು ತನಗ್ಯಾರು ಇಲ್ಲದಿರುವದರಿಂದ ತಾನು ಮಾಡುವದರಲ್ಲಿ ಏನೂ ತಪ್ಪಿಲ್ಲ ಎಂದು ಅಂದುಕೊಂಡಳು. 

    ಅಷ್ಟರಲ್ಲಿ ರಿಂಗ ಆಯಿತು. ಮೊಬೈಲ್ ನೋಡಿದಾಗ ಅಭಿ ಫೋನ್ ಮಾಡಿದ್ದ. ಕಾಲ್ ರೆಸಿವ್ ಮಾಡಿ 

*"ಹಲೋ"*

*"ಏನು ಮಾಡ್ತಿದ್ದೀರಾ?"*

*"ಏನಿಲ್ಲ ಸುಮ್ನೆ ಕುಳಿತಿದ್ದೆ. ಊಟ ಆಯ್ತಾ?"*

*"ಹಾ, ಈಗ ತಾನೇ ಮುಗಿತು"*

*"ಮತ್ತೇನು ವಿಶೇಷ?"*

*"ನೀವು ಹೇಳ್ಬೇಕು"*

*"ಏನಿಲ್ಲ. ನಾನು ನಿಮ್ಮ ತರ ಇವತ್ತು ಅಡ್ವೆಂಚರ್ ಮಾಡಿದೆ."*

*"ಹೌದಾ? ಏನದು?"*"

ಎಂದು ಕಾತರದಿಂದ ಕುತೂಹಲ ಭರಿತ ಧ್ವನಿಯಲ್ಲಿ ಕೇಳಿದ.

*"ನೀವು ಮೊನ್ನೆ ಲವರ್ಸ್ ನ್ನು ಒಂದು ಮಾಡಿದ್ದೀರಲ್ಲವೇ? ಅದೇ ರೀತಿ ಇಂದು ನಾನು ನನ್ನ ಸ್ಟೂಡೆಂಟ್ಸ್ ಪೈಕಿ ಒಬ್ಬಳ ಜೀವನ ಒಬ್ಬ ಹುಡುಗನಿಂದ ಹಾಳಾಗುವದನ್ನು ತಪ್ಪಿಸಿದೆ. "*

*"ಗ್ರೇಟ್, ಹೇಗೆ ಮಾಡಿದಿರಿ?"*

ಎಂದು ಹೇಳಿದಾಗ ಸುಮಾ ಅವನಿಗೆ ಎಲ್ಲ ವಿಷಯವನ್ನು ವಿವರವಾಗಿ ತಿಳಿಸಿದಳು. ಅದನ್ನು ಕೇಳಿದ ಅವನು

*"ಪರವಾಯಿಲ್ಲ ನೀವು ಧೈರ್ಯಸ್ಥರು"*

*"ನಿಮ್ಮಿಂದ ತಾನೇ ಅದನ್ನು ಕಲಿತಿದ್ದು"*

*"ಹೌದಾ? ಅಂದ್ರೆ ನಾನು ನಿಮ್ಮನ್ನು ಅಷ್ಟು ಇಂಪ್ರೆಸ್ ಮಾಡಿದ್ದಿನಾ?"*

*"ಅದು ನಿಮಗೆ ಗೊತ್ತಾಗೊಲ್ಲ. ಆದವರಿಗೆ ಗೊತ್ತಲ್ವೇ?"*

*"ಓ ಹೊ ಅಂದರೆ ನೀವು ನನ್ನಿಂದ ಧೈರ್ಯ ತಂದುಕೊಂಡು ಈ ಕೆಲಸ ಮಾಡಿರಿ ಅಂದ ಹಾಗಾಯ್ತು"*

*"ಹೌದು*"

ಎಂದು ಮಾತನಾಡುವಾಗ, ತನ್ನ ಸ್ಟೂಡೆಂಟ್ ಅನುಭವಿಸಿದ್ದ ಅನುಭವವನ್ನು ನೆನಪಿಸಿಕೊಂಡು ಸುಮಾ ಕೇಳಲೋ ಬೇಡವೋ ಅಂದುಕೊಳ್ಳುತ್ತಾ 

*"ಒಂದು ಮಾತು ಕೇಳ್ತೀನಿ ತಪ್ಪು ತಿಳಿಯಬೇಡಿ"*

*"ಕೇಳಿ ಅದಕ್ಕೇನಂತೆ"*

*"ನನ್ನ ಸುಟ್ಡೆಂಟ್ಸ್ ಈ ಸೋಶಿಯಲ್ ಮೀಡಿಯಾದಲ್ಲಿ ಹೊಕ್ಕು ಅನುಭವಿಸಿದ ಸಂಕಟ ನೋಡಿದ ಮೇಲೆ ನಿಮ್ಮನ್ನ ಕೇಳ್ತಾ ಇದೀನಿ. ಅವಳ ಹಾಗೆ ನನಗೇನಾದರೂ ನಿಮ್ಮಿಂದ ಅದೇ ರೀತಿಯಾಗಿ ಹೋಲಿಕೆಯಾಗವಂತೆ ಅನುಭವ ಆಗುವುದಿಲ್ಲವಷ್ಟೆ?"*

ಎಂದು ಅವಳು ನಿಧಾನವಾಗಿ ಮನಸ್ಸಿನಲ್ಲಿರುವ ಅಂಜಿಕೆಯನ್ನು ಮಾತಿನ ಮೂಲಕ ಹೊರಹಾಕುತ್ತ ಕೇಳಿದಾಗ, ಅತ್ತ ಕಡೆಯಿಂದ ಅಭಿ ಜೋರಾಗಿ ನಗತೊಡಗಿದ.ಅವನು ಹಾಗೆ ನಗತೊಡಗಿದಾಗ ಸುಮಾಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಗಿಬಿಟ್ಟಿತು. 

     ಹಾಗೆ ಬಹಳ ಹೊತ್ತು ನಕ್ಕು ನಕ್ಕು ಸುಸ್ತಾದವನಂತೆ ಉಸಿರು ಬಿಡುತ್ತ, ಒಮ್ಮೆಲೇ ಸೀರಿಯಸ್ ಆಗಿ

*"ಒಂದು ಮಾತು ಹೇಳ್ತಿನಿ ಕೇಳಿ. ನಾನು ಮನಸ್ಸು ಹೇಗೆ ಹೇಳುತ್ತೋ ಹಾಗೆ ಕೇಳೋ ಮನುಷ್ಯ. ನಿಮ್ ಜೊತೆ ಏನೋ ಫ್ರೆಂಡ್ಶಿಪ್ ಮಾಡಿಕೊಳ್ಳಬೇಕಂತ ಅನ್ನಿಸ್ತು ಮಾಡಿಕೊಂಡೆ, ಆದ್ರೆ ಬರ್ತಾ ಬರ್ತಾ ಅದು ಕೇವಲ ಫ್ರೆಂಡ್ಶಿಪ್ ಅಲ್ಲ ಬೇರೆ ಏನೋ ಅಂತ ನಂಗೆ ಅನ್ನಿಸತೊಡಗಿತು. ಆದ್ರೆ ಅದು ಏನು ಎಂತ ಮಾತ್ರ ನಂಗೆ ಗೊತ್ತಾಗಲಿಲ್ಲ. ಆದರೆ ನಿಜ ಹೇಳ್ತಿನಿ, ನಿಮ ಜೊತೆಗೆ ಮಾತಾಡದಿದ್ರೆ ಮಾತ್ರ ಜೀವಕ್ಕೆ ಸಮಾಧಾನ ಇರೋಲ್ಲ. ನಾನು ಎಂದೂ ನನ್ನ ಬುದ್ದಿ ಉಪಯೋಗಿಸಿ ಮತ್ತು ಯೋಚನೆ ಮಾಡಿ ನಿಮ್ ಜೊತೆ ಮಾತಾಡೋದಾಗ್ಲಿ ಹೇಳೊದಾಗ್ಲಿ ಮಾಡಿಲ್ಲ. ನಾನು ಮಾತಾಡೋವಾಗ ಹೃದಯ ಮಾತ್ರ ಏನು ಹೇಳುತ್ತೋ ಅದೇ ನಿಮ್ ಜೊತೆ ಮಾತಾಡಿದ್ದು. ಇದನ್ನು ನೀವು ಸರಿ ಅಂತೀರೋ ಇಲ್ಲ ತಪ್ಪು ಅಂತ ಅಂತೀರೋ ನಿಮಗೆ ಬಿಟ್ಟಿದ್ದು. ನನಗಂತೂ ಇದಕ್ಕಿಂತ ಹೆಚ್ಚಿಗೆ ಏನು ಹೇಳುವದೋ ಹೇಗೆ ಹೇಳುವದೋ ಅಂತ ಮಾತ್ರ ಗೊತ್ತಿಲ್ಲ"*

ಎಂದು ಹೇಳಿದಾಗ ಅವನ ಮಾತಿನಲ್ಲಿದ್ದ ಗಂಭೀರತೆಯನ್ನು ಅರಿತ ಸುಮಾ, ಅದಕ್ಕೆ ಏನು ಉತ್ತರಿಸಬೇಕು ಅಂತ ಮಾತ್ರ ಗೊತ್ತಾಗಲಿಲ್ಲ. ಒಂದು ಕ್ಷಣ ಅವಳ ಮನಸ್ಸಿಗೆ ನೋವಾಯಿತು. ಕೊನೆಗೆ 

*" ಸಾರೀ ರೀ, ನಾನು ತಪ್ಪು ತಿಳಿದುಕೊಂಡು ಬಿಟ್ಟಿದ್ದೆ ಅಂತ ಕಾಣುತ್ತೆ. ಏನು ಮಾಡೋದು ನನ್ನಕಣ್ಣ ಮುಂದೆ ಇಂತಹ ಪ್ರಸಂಗ ನಡೆದಾಗ, ನನ್ನ ಜಾಗದಲ್ಲಿ ನೀವಿದ್ದರೂ ಸಹ ಇದೆ ರೀತಿ ಆಗುತ್ತೆ."*

*"ನಾನೇನು ಬೇಜಾರು ಮಾಡ್ಕೊಂಡಿಲ್ಲ, ಪರವಾಯಿಲ್ಲ ಅದಕ್ಕಾಗಿ ನೊಂದುಕೊಳ್ಳಬೇಡಿ. ಸಿಟ್ಟಿನಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವದಲ್ಲ. ಅದನ್ನ ನೆನಪು ಮಾಡಿಕೊಳ್ಳಿ ಸಾಕು"*

ಎಂದು ಹೇಳಿದಾಗ ಅವಳಿಗೆ ಅವನ ಮಾತಿನಲ್ಲಿದ್ದ ಮರ್ಮ ಅರ್ಥವಾಯಿತು. 

*"ಊಟವಾಯ್ತಾ?"*

*"ಹಾಂ. ನಿಮ್ಮದು?"*

*"ಆಗಿದೆ"*

*"ನಿಮ್ಮನೊಂದು ಮಾತು ಕೇಳ್ತೀನಿ."*

*"ಕೇಳಿ"*

*"ನೀವು ತ್ರಿವೇಣಿಯವರ ಕಾದಂಬರಿ ಓದಿದ್ದೀರಿ ಅಂತ ಹೇಳಿದಿರಿ. ಆದ್ರೆ ನಿಮಗೆ ಅವರ ಯಾವ ಕಾದಂಬರಿ ತುಂಬಾ ಇಷ್ಟ?"*

*"ಎಲ್ಲಾನೂ ಇಷ್ಟಾನೇ. ಯಾಕೆ?"*

*"ಏನಿಲ್ಲ ಸುಮ್ನೆ ಕೇಳಿದೆ. ನಿಮ್ಮ ಟೇಸ್ಟ್ ತಿಳಿದುಕೊಳ್ಳಬೇಕು ಅನ್ನಿಸ್ತು ಅದಕ್ಕೆ. ನಾನು ಅವರ ಎಲ್ಲ ಕಾದಂಬರಿಗಳನ್ನು ತೆಗೆದುಕೊಂಡು ಬಂದಿದ್ದೇನೆ. ಅವುಗಳಲ್ಲಿ ಮೊದಲು ಯಾವದು ಓದಬೇಕು ಅಂತ ಗೊತ್ತಾಗಲಿಲ್ಲ ಅದಕ್ಕೆ ಎಲ್ಲಾನು ಹರವಿಕೊಂಡು ಕುಳಿತಿದ್ದೆ, ನೀವು ನೆನಪಾಡಿರಿ"*

*"ಹೌದ?"*

*"ಹೌದು. ಆದರೆ ಒಂದು ಸ್ಪೆಸಿಯಾಲಿಟಿ ಗಮನಿಸಿದೆ"*

*"ಏನು?"*

*"ಅವರ ಎಲ್ಲ ಟೈಟಲ್ ಉಪಯೋಗ ಮಾಡಿ ಒಂದು ಯಾವುದಾದರೂ ನಾಟಕದ ರೀತಿಯಲ್ಲಿ ಸಂಭಾಷಣೆ ಮಾಡಲು ಸಾಧ್ಯ ಅಂತ ಅನ್ನಿಸ್ತಿದೆ"*

*"ಹೌದ?"*

*"ಹಾ. ನಾನು ಅವರ ಎಲ್ಲ ಕಾದಂಬರಿಗಳ ಟೈಟಲ್ ಲಿಸ್ಟ್ ಕೊಡ್ತೀನಿ ನೀವು ಆ ಲಿಸ್ಟ್ ಉಪಯೋಗ್ ಮಾಡಿ ಒಂದು ಏನಾದರೂ ನಾಟಕದ ಸಂಭಾಷಣೆ ರೀತಿಯಲ್ಲಿ ರೆಡಿ ಮಾಡಿ ನಂಗೆ ಹೇಳ್ತೀರಾ?"*

*"ಅರೆ ಇದೊಳ್ಳೆ ನ್ಯಾಯವಾಯಿತಲ್ಲ. ನೀವಾದರೆ ಸುಮ್ಮನೆ ಕೇಳುವವರು ನಾನು ಮಾತ್ರ ಕಷ್ಟ ಪಟ್ಟು ನೀವು ಹೇಳಿದ ಕೆಲಸ ಮಾಡ್ಬೇಕಾ?"*

*"ಹೌದಲ್ವಾ ಹಾಗಾದರೆ ನಾನು ಏನು ಮಾಡಬೇಕು ಅಂತ ಹೇಳಿ"*

*" ನೀವು ಸಹ ತ ರಾ ಸು ಅವರ ಕಾದಂಬರಿ ಓಡುತ್ತೀರಲ್ವ?"*

*"ಹಾ"*

*"ಹಾಗಾದರೆ ಅವರ ಕಾದಂಬರಿಗಳ ಟೈಟಲ್ ಮೇಲೆ ನೀವು ಒಂದು ಸಂಭಾಷಣೆ ರೆಡಿ ಮಾಡಿ ಇಬ್ಬರೂ ಎಕ್ಸ್ಚೇಂಜ್ ಮಾಡೋಣ"*

*"ಅಂದ್ರೆ ನೀವು ನನಗೆ ಕೆಲಸ ಹಚ್ಚೊಕೆ ಪ್ಲಾನ್ ಮಾಡಿದ್ದೀರಿ ಅಂದ ಹಾಗಾಯಿತು"*

*"ಮತ್ತೆ ನಾನೊಬ್ಬಳೇ ಹಾಗೆ ಮಾಡಿದ್ರೆ ಏನು ಮಜಾ? ಇಬ್ಬರ ನಡುವೆ ಕಾಂಪಿಟೇಷನ್ ಇದ್ರೆ ಚನ್ನ"*

*"ಸರಿ. ಒಂದು ಕೆಲಸ ಮಾಡಿ, ನನಗೊಂದು ಯೋಚನೆ ಬಂತು. ನೀವು ಒಬ್ಬ ಹೆಂಡತಿ ಮಾತಾಡಿದ ಹಾಗೆ ಟೈಟಲ್ ಉಪಯೋಗ ಮಾಡಿ ಸಂಭಾಷಣೆ ರೆಡಿ ಮಾಡಿ. ನಾನು ಒಬ್ಬ ಗಂಡನ ರೀತಿಯಲ್ಲಿ ತ ರಾ ಸು ಅವರ ಕಾದಂಬರಿಗಳ ಟೈಟಲ್ ರೆಡಿ ಮಾಡಿ ಸಂಭಾಷಣೆ ರೆಡಿ ಮಾಡ್ತೀನಿ"*

ಎಂದಾಗ ಸುಮಾಳಿಗೆ ಅದು ಸರಿ ಅನ್ನಿಸಿ, ಒಪ್ಪಿಕೊಂಡಳು. 

ಅವಳು ಒಪ್ಪಿಕೊಂಡ ಕೂಡಲೇ ಅಭಿ ಅವಳಿಗೆ ತ್ರಿವೇಣಿಯವರ ಕಾದಂಬರಿಗಳ ಎಲ್ಲ ಟೈಟಲ್ ಕಳುಹಿಸಿದ. ಸುಮಾಳಿಗೆ ನಿದ್ರೆ ಹಾರಿ ಹೋಗಿತ್ತು. ಅವಳು ಆ ಲಿಸ್ಟ್ ತೆಗೆದುಕೊಂಡು ಟೇಬಲ್ ಮೇಲೆ ಕುಳಿತುಕೊಂಡು ಅದೇ ಲಿಸ್ಟ್ ನೋಡತೊಡಗಿದಾಗ ಮತ್ತೆ ಅಭಿ ಫೋನ್ ಮಾಡಿ

*"ಹದಿನೈದು ನಿಮಿಷ ಟೈಮ್. ಅಷ್ಟರಲ್ಲಿ ನೀವು ರೆಡಿ ಮಾಡಬೇಕು ಮತ್ತು ನಾನು ರೆಡಿ ಮಾಡೋ ಪ್ರಯತ್ನ ಮಾಡ್ತೀನಿ"*

ಎಂದಾಗ ಸುಮಾ ನಗುತ್ತ ಒಪ್ಪಿಕೊಂಡಳು. ಅಭಿ ಫೋನ್ ಡಿಸ್ಕನೆಕ್ಟ್ ಮಾಡಿದ. ಸುಮಾ ಒಂದು ರೀತಿಯಿಂದ ಗಂಭೀರವಾಗಿ ಅಭಿ ಕೊಟ್ಟ ತನ್ನ ಹೋಂ ವರ್ಕ್ ಮಾಡತೊಡಗಿದ್ಲು. 


18


ಸಾಕಷ್ಟು ಪ್ರಯತ್ನ ಮಾಡಿದ ಬಳಿಕ ಅವಳು ಒಂದು ಸಂಭಾಷಣೆಯನ್ನು ತಯಾರು ಮಾಡಿದಳು. ಮುಗಿಸಿ ಗಡಿಯಾರ ನೋಡಿದಾಗ ಅಭಿ ಕೊಟ್ಟ ಅವಧಿ ಮುಗಿಯಲು ಇನ್ನೂ 3 ನಿಮಿಷ ಬಾಕಿ ಇತ್ತು. ಅವನ ಕರೆಯ ದಾರಿಯನ್ನು ಕಾಯುತ್ತ ಕುಳಿತುಕೊಂಡಳು. ಅದೇ 3 ನಿಮಿಷ ಅವಳಿಗೆ 3 ಯುಗದಂತೆ ಕಾಡತೊಡಗಿತು. ಗಡಿಯಾರವನ್ನೇ ನೋಡುತ್ತಾ ಹಾಗೆ ತಾನು ಬರೆದ ಸಂಭಾಷಣೆಯನ್ನು ಅಲ್ಲಲ್ಲಿ ತಿದ್ದಿ ಸರಿ ಮಾಡುತ್ತಾ ಕುಳಿತುಕೊಂಡಳು. ಸರಿಯಾಗಿ 15 ನಿಮಿಷಗಳ ನಂತರ ಅವರ ಫೋನ್ ರಿಂಗ್ ಆಯ್ತು. ಎತ್ತಿಕೊಂಡಳು

*"ರೀ, ನೀವು ತುಂಬಾ ಕಷ್ಟದ ಕೆಲಸ ಹಚ್ಚಿದಿರಿ ನನಗೆ"*

ಎಂದು ಅಭಿ ಆಕ್ಷೇಪ ಭರಿತ ಧ್ವನಿಯಲ್ಲಿ ಹೇಳಿದ. 

*"ಹಾಗಾದರೆ ನೀವು ಸೋಲುಂಡಿರಿ ಎಂದು ಅಂದುಕೊಳ್ಳಬಹುದೇ?"*

*"ಅದು ಹೇಗೆ ಸಾಧ್ಯ? ಹಾಗೂ ಹೀಗೂ ಪ್ರಯತ್ನ ಮಾಡಿ ರೆಡಿ ಮಾಡಿದ್ದೇನೆ"*

*"ಹಾಗಾದರೆ ಹೇಳಿ"*

*"ಇಲ್ಲ ನೀವು ಮೊದಲು"*

*"ನೋಡಿ ಗಂಡ ಹೆಂಡಿರ ಜಗಳದಲ್ಲಿ ಮೊದಲು ಯಾವಾಗಲೂ ಗಂಡನೇ ಹೇಳೋದು. ಅದಕ್ಕೆ ನೀವು ಮೊದಲು ಹೇಳಿ"*

*"ಸರಿ.ಮಕ್ಕಳಿಲ್ಲದ ನಿಮ್ಮಮ್ಮ ಪಂಜರದ ಪಕ್ಷಿಯಾಗಿ ಪರಿಮಳದ ಉರುಳಲ್ಲಿರುವಾಗ ಅಕ್ಕಮ್ಮನ ಭಾಗ್ಯ ಪಾರಿಜಾತ ಪುಷ್ಪದಂತಹ ಬಂಗಾರಿಯಂತೆ ಹುಟ್ಟಿದ ನೀನು ಮದುವೆಯ ವಯಸ್ಸಿಗೆ ಬಂದೆ. ಮದುವೆಗಿಂತ ಮೊದಲು ಹೊಯ್ಸಳೇಶ್ವರ ವಿಷ್ಣುವರ್ಧನಂತೆ ಮೆರೆಯುತ್ತಿದ್ದ ನಾನು ನಮ್ಮ ಮನೆಗೆ ಬೆಳಕು ತಂಡ ಬಾಲಕನಾಗಿದೆ ಹೊರತು ಬೇಡದ ಮಗುವಾಗಿರಲಿಲ್ಲ ನನ್ನನ್ನು ಕಂಡವರೆಲ್ಲ ಆಹಾ ನೋಡು ಆ ಭಾಗ್ಯ ಶಿಲ್ಪಿ ಎನ್ನುತ್ತಾ ಎಲ್ಲ ಅವನ ಹೆಸರಲೇ ಎಂದು ಹೇಳಿ ಹರ್ಷಿಸುತ್ತಿದ್ದರು ಇಂಥ ಕೀರ್ತಿ ನಾರಾಯಣ ಆದ ನಾನು ಯಾರೋ ಹೇಳಿದ ಮಾತು ನಂಬಿ ಅಗ್ನಿ ರಥದಲ್ಲಿ ಆಕಸ್ಮಿಕವಾಗಿ ಖೋಟಾ ನೋಟು ನೋಡಲು ಬೆಳಕಿನ ಬೀದಿಯಲ್ಲಿ ಯಾಹ್ದು ಮರಳು ಸೇತುವೆ ಮೇಲೆ ಚಕ್ರ ತೀರ್ಥದ ಮುಖಾಂತರ ಚಂದವಳ್ಳಿಯ ತೋಟಕ್ಕೆ ನುಗ್ಗಿದಾಗ ನೀನು ನಿನ್ನ ಗೆಳತಿಯ ಜೊತೆಗೆ ಅಲ್ಲಿದ್ದೆ. ನೀವಿಬ್ಬರೂ ಮೊದಲ ನೋಟ ನನ್ನನ್ನು ನೋಡಿ ಮೆಚ್ಚಿದಾಗ ನನ್ನ ಪರಿಸ್ಥಿತಿ ಎರಡು ಹೆಣ್ಣು ಒಂದು ಗಂಡು ಎಂಬಂತಾಗಿತ್ತು. ಆದರೆ ನಾನು ನನ್ನ ಬದುಕಿನ ನಾಯಕಿ ಎಂದು ನಿನ್ನನ್ನು ನಿನ್ನ ಒಮ್ಮೆ ನಕ್ಕ ನಗು ನೋಡಿ ಆಯ್ಕೆ ಮಾಡಿದಾಗ ನೀನು ನನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋದೆ. ನನಗೇನು ಗೊತ್ತು ಅದು ನಾಗರ ಹಾವು ವಾಸಿಸುವ ಹುತ್ತ ಅಂತಾ. ಅದೊಂದು ಪಕ್ಕ ಚದುರಂಗದ ಮನೆ. ಆದರೂ ನಾನು ನಿನ್ನನು ಕಸ್ತೂರಿ ಕಂಕಣ ಕಟ್ಟಿಕೊಂಡು ಮದುವೆಯಾಗಿ ನನ್ನ ಮನೆಗೆ ಬಂದ ಮಹಾಲಕ್ಷ್ಮಿ ಅಂತ ತಿಳಿದಿದ್ದೆ. ನೀನು ಗೃಹ ಪ್ರವೇಶ ಮಾಡಿದಾಗ ನನಗೇನು ಗೊತ್ತು ನೀನೊಂದು ಮಸಣದ ಹೂವು ಎಂದು. ನಿನ್ನ ಮದುವೆಯಾದ ಮೇಲೆಯೇ ನನ್ನ ಕುರಡಾಗಿದ್ದ ಕಣ್ಣು ತೆರೆಯಿತು. ನೋಡಲು ಚಂದನದ ಗೊಂಬೆಯಾಗಿದ್ದ ನೀನು ನನ್ನನ್ನು ನಿನ್ನ ಕೈಯಲ್ಲಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಜೀತದ ಜೀವ ಮಾಡಿದೆ. ನಾನು ಪುರುಷಾವತಾರ ತಾಳಿ ತಿರುಗುಬಾಣ ಬಿಟ್ಟು ನಿನ್ನಲ್ಲಿರುವ ಕಾರ್ಕೋಟಕ ವಿಷ ತೆಗೆಯುವ ಪ್ರಯತ್ನ ಮಾಡಿದರೂ ಅದು ಸಫಲವಾಗದೆ ನನ್ನ ಪಾಲಿಗೆ ನೀನೊಂದು ಯಕ್ಷ ಪ್ರಶ್ನೆ ಆದೆ. ನಮ್ಮಿಬ್ಬರ ಪ್ರಥಮ ರಾತ್ರಿ ನಿನ್ನಿಂದ ರಕ್ತ ರಾತ್ರಿಯಾಗಿ ಚಕ್ರೇಶ್ವರನಂತಿದ್ದ ನನ್ನನು ಕಂಬನಿಯ ಕುಯಿಲು ತೆಗೆಯುವಂತೆ ಮಾಡಿ ನನ್ನ ಬಯಕೆಯ ಬೂದಿಯಾಗಿ ಬೆಂಕಿಯ ಬಲೆಯಲ್ಲಿ ಒದ್ದಾಡಿ ಕೇದಿಗೆ ವನ ದಲ್ಲಿ ಬಿಡುಗಡೆಯ ಬೇಡಿ ಕೇಳಿಕೊಂಡರೂ ಬೇಲಿ ಮೇಯ್ದ ಹೊಲದ ಹಾಗೆ ನನಗೆ ಬಿಡುಗಡೆ ಸಿಗದೇ ನೀನು ಹೇಳಿದಂತೆ ನಾಕು + ನಾಕು = ಒಂದು ಎಂದು ಹೇಳುತ್ತಾ ನನ್ನ ದುರ್ಗಾಸ್ತಮಾನವಾಗಿ ನಿನ್ನ ಕೈಗೊಂಬೆ ಆಗಿರುವೆ"*

ಎಂದು ಹೇಳಿ ತನ್ನ ಮಾತನ್ನು ಮುಗಿಸಿದಾಗ ಸುಮಾ ದಂಗು ಬಡಿದವರಂತೆ ಕೇಳುತ್ತ ಹಾಗೆ ಕುಳಿತಿದ್ದಳು. ಅವನ ಕರಾರುವಾಕ್ಕಾಗಿ ಹೇಳಿದ ರೀತಿ ಮತ್ತು ಪದ ಜೋಡಣೆ ಅವಳಿಗೆ ದಂಗು ಬಡಿಸಿದ್ದವು. ಒಂದೇ ಒಂದು ರೀತಿಯಲ್ಲಿ ಯಾವುದೇ ನ್ಯೂನ್ಯತೆ ಇಲ್ಲದೆ ಒಂದೇ ಸಾಲಿನಲ್ಲಿ ಎಲ್ಲ ಟೈಟಲ್ ಬರುವ ರೀತಿಯಲ್ಲಿ ಅವನು ಜೋಡಿಸಿದ ರೀತಿಯನ್ನು ಗಮನಿಸಿದಾಗ ಅವನ ಮೇಧಾವಿತನ ಅವಳಿಗೆ ಗೊತ್ತಾಗುತ್ತಿತ್ತು. ಅವನು ಹೇಳುವದನ್ನೇ ಕೇಳುತ್ತ ಹಾಗೆ ಮೈ ಮರೆತು ಕುಳಿತಾಗ, ಅವನು

*"ಹಲೋ, ನನ್ನ ಸರದಿ ಮುಗಿಯಿತು ಈಗೇನಿದ್ದರೂ ನಿಮ್ಮ ಸರದಿ"*

ಎಂದು ಹೇಳಿದಾಗ ತಾನು ಅವನಷ್ಟು ನೀಟಾಗಿ ಚನ್ನಾಗಿ ಬರೆದಿಲ್ಲ ಅಂತ ತಾನೇ ಅಂದುಕೊಂಡಳು.

*"ಹೋಗಲಿ ಬಿಡಿ, ನಾನೇನು ನಿಮ್ಮಷ್ಟು ಚನ್ನಾಗಿ ತಯಾರು ಮಾಡಿಲ್ಲ. ನೀವು ಗೆದ್ದಿರಿ ಅಂತ ನಾನೇ ಒಪ್ಪಿಕೊಳ್ಳುತ್ತೇನೆ"*

ಅಂದಾಗ ಅಭಿ ಸ್ವಲ್ಪ ಧ್ವನಿ ಏರಿಸಿ,

*"ಅದು ಸಾಧ್ಯವಿಲ್ಲ. ನೀವು ಕೇವಲ ನನ್ನದು ಕೇಳಿ ಗೆದ್ದಿರಿ ಎಂದು ಹೇಳಿದರೆ ನಾನು ಕೇಳುವದಿಲ್ಲ. ನೀವು ಏನು ಹೇಗೆ ತಯಾರು ಮಾಡಿರುವಿರೋ ಅದನ್ನು ನನಗೆ ಹೇಳಲೇಬೇಕು ನಾನು ಕೇಳಲೇಬೇಕು."*

ಎಂದು ಹಠ ಹಿಡಿದಾಗ, ಸುಮಾ ಬೇರೆ ದಾರಿಯಿಲ್ಲದೆ, 

*"ಸರಿ ಆದರೆ ನನ್ನ ಮಾತನ್ನು ಕೇಳಿ ನಾಗಬಾರದು"*

*"ಸತ್ಯವಾಗ್ಲೂ ನಗೋದಿಲ್ಲ ಪ್ಲೀಸ್ ಹೇಳಿ"*

ಎಂದಾಗ ಸುಮಾ ತ್ರಿವೇಣಿಯವರ ಕಾದಂಬರಿಗಳ ಟೈಟಲ್ ಬಳಸಿ ತಾನು ತಯಾರಿಸಿದ ಸಂಭಾಷಣೆ ಹೇಳತೊಡಗಿದಳು. 

*"ನಿಮ್ಮನ್ನು ಕಟ್ಟಿಕೊಂಡು ನಾನೇನು ಅನುಭವಿಸುತ್ತಿದ್ದೇನೆ ಅಂತಾ ಆ ದೇವರಿಗೆ ಗೊತ್ತು. ಬೆಳ್ಳಿ ಮೋಡದಲ್ಲಿ ಮೊದಲ ಹೆಜ್ಜೆ ಯೌವನದಲ್ಲಿತ್ತು ದೂರದ ಬೆಟ್ಟದ ಕಡೆಗೆ ಹೊರಟಾಗ ನನ್ನ ಹೃದಯ ಗೀತಾ ಹಣ್ಣೆಲೆ ಚಿಗುರಿದಾಗ ವಸಂತ ಗಾನವನ್ನು ನುಡಿಯುತ್ತಿತ್ತು. ತಾವರೆಯ ಕೊಳದ ಹತ್ತಿರ ನಮ್ಮ ಎರಡು ಮನಸು ಮಿಡಿದಾಗ ಯಾವ ಬೆಕ್ಕಿನ ಕಣ್ಣು ಬಿತ್ತೋ ದೇವರೇ ಬಲ್ಲ. ಕಂಕಣ ಕಟ್ಟಿಕೊಂಡು ಬರುವಾಗ ಎಲ್ಲರೂ ಅವಳ ಮಗಳು ಅವಳ ಮನೆಗೆ ಹೊರಟರೆಂದು ನಾನು ನನ್ನ ಬಾನು ಬೆಳಗಿತು ಎಂದುಕೊಂಡು ಬಂದಮೇಲೆ ಗೊತ್ತಾಯ್ತು, ನಾನಿಲ್ಲಿ ಒಂದು ಕೀಳು ಗೊಂಬೆ ನನ್ನ ಮನದ ಹೂವು ಹಣ್ಣು ಅಗಲ್ಲಿಲ್ಲ ನಾನಿರುವದು ಶರಪಂಜರದಲ್ಲಿ ಅಪಸ್ವರ ಹಾಡುತ್ತ ಅಂತ. ಅದು ನನ್ನ ಜೀವನದ ಮೊದಲ ಅಪಜಯ. ನೀವು ನನಗೊಂದು ಮುಚ್ಚಿದ ಬಾಗಿಲು. ಮೊದಮೊದಲು ನಿಮ್ಮಿಂದ ಮುಕ್ತಿ ಬಯಸಿ ಕಾಶಿಯಾತ್ರೆ ಮಾಡಬೇಕೆಂದು ಬಯಸಿದೆ. ಆದರೆ ನಿಮ್ಮನ್ನು ನಾನೊಂದು ಹೇನಾಗಿ ಮಣಿಸಲು ಬೇಕೆಂದೇ ಪಣ ತೊಟ್ಟು ಮೊದಲು ಸೋತಂತೆ ಮಾಡಿ ನಂತರ ನಿಮ್ಮನ್ನು ನನ್ನ ಕೈಗೊಂಬೆ ಮಾಡಿ ಸೋತು ಗೆದ್ದವಳು ಆಗಿರುವೆ"*

ಅವಳ ಮಾತು ಮುಗಿಯುತ್ತಿದಂತೆ ಅಭಿ

*"ವಾವ್, ಎಂಥ ಚಮತ್ಕಾರದ ಶಬ್ದಗಳನ್ನು ಜೋಡಿಸಿ ಚನ್ನಾಗಿ ಹೆಣೆದಿರಿ. ತುಂಬಾ ಮಜಾ ಬಂತು. ನಿಮ್ಮ ಪದಗಳ ಜೋಡಣೆ ಚನ್ನಾಗಿದೆ."*

*"ನಾನೇನು ಬಿಡಿ ಹೇಗಿದ್ದರೂ ಲೆಕ್ಚರರ್ ಆದರೆ ನೀವು ಮಾತ್ರ ಸಾಹಿತ್ಯ ಲೋಕಕ್ಕೆ ಅನನುಭವಿ ಆಗಿದ್ದರೂ ಸಹ ನನಗಿಂತಲೂ ಚನ್ನಾಗಿ ನೀವು ಶಬ್ದಜೋಡಣೆ ಮಾಡಿ ತುಂಬಾ ಚನ್ನಾಗಿ ಹೇಳಿದಿರಿ. ನಾನು ನಿಮಗೆ ನಿಜವಾಗಿ ಹಾಟ್ಸ್ ಆಫ್ ಹೇಳಬೇಕು"*

*"ಹಾಗೇನಿಲ್ಲ ನೀವು ನನಗೆ ಹಾಟ್ಸ್ ಆಫ್ ಹೇಳುವ ಬದಲಾಗಿ ನನ್ನ ಅಮ್ಮನಿಗೆ ಹೇಳ್ಬೇಕು. ನಾನು ಇಷ್ಟು ಚನ್ನಾಗಿ ಮಾತಾಡೋದು ಕಲಿತಿದ್ದು ಅವಳಿಂದ. ಅವಳೇ ನನ್ನ ಮೊದಲ ಗುರು. ನಮ್ಮ ಮಾತೃ ಭಾಷೆಯ ಅಭಿಮಾನದಿಂದ ನನಗೆ ಗೊತ್ತಾಗಲಿ ಎಂದು ಅವಳು ಮೊದಲಿಂದಿನಲೂ ನನಗೆ ಕನ್ನಡ ಭಾಷೆಯಲ್ಲಿ ಮಾತನಾಡಿಸುತ್ತಾ ವ್ಯವಹರಿಸುತ್ತ ಬಂದಳು. ಅವಳಿಂದಲೇ ನನಗೆ ಸಾಹಿತ್ಯದಲ್ಲಿ ಆಸಕ್ತಿ ಬಂದಿದ್ದು. ನನ್ನ ತಾಯಿ ನಂಗೆಲ್ಲ"*

ಎಂದು ಹೇಳಿದ. ಅವನು ಆ ರೀತಿಯಾಗಿ ಹೇಳಿದ್ದು ಕೇಳಿ, ಸುಮಾಳಿಗೆ ತನ್ನ ತಾಯಿ ನೆನಪಾದಳು. ಅವಳ ತಾಯಿ ಕೇವಲ ತಾಯಿಯಲ್ಲ, ಒಂದು ದೇವತೆ ಅಂದರೂ ತಪ್ಪಾಗಲಾರದು. ಅಂತ ತಾಯಿ. ಸುಮಾಳಿಗೆ ಮನಸ್ಸಿಗೆ ಏನಾದರೂ ನೋವಾದರೆ, ಅದನ್ನು ಕೇವಲ ಅವಳ ಮುಖ ನೋಡಿಕೊಂಡು ತಿಳಿದುಕೊಂಡುಬಿಡುತ್ತಿದ್ದಳು. ಅಲ್ಲದೆ ತನ್ನ ಸಮಸ್ಯೆಗಳಿಗೆ ಅವಳೇ ಪರಿಹಾರ ಸೂಚಿಸುತ್ತಿದ್ದಳು. ತನ್ನ ಮದುವೆ ನಿಶ್ಚಯವಾದಾಗ, ಸುಮಾ ಬಹಳವಾಗಿ ಗಾಬರಿಯಾಗಿದ್ದಳು. ತನ್ನ ಗಂಡ ಹೇಗೆ ಇರುವನೋ ಅವನ ಸ್ವಭಾವ ಹೇಗೋ ಎಂದು ಹಲವಾರು ಬಾರಿ ಯೋಚನೆ ಮಾಡಿದ್ದಾಗ, ಅವಳ ತಾಯಿ ಅವಳಿಗೆ

*"ಸುಮಿ, ನೋಡಮ್ಮ ನಿನ್ನ ಗಂಡ ಹೇಗೆ ಎಂತ ಯೋಚನೆ ಮಾಡಬೇಡ. ಯಾರು ನಮ್ಮನ್ನು ಪ್ರೀತಿಸುತ್ತಾರೋ ಅವರನ್ನು ಎಂದಿಗೂ ಬಿಡಬಾರದು. ನಾವು ಪ್ರೀತಿಸುವದಕ್ಕಿಂತ ನಮ್ಮನ್ನು ಪ್ರೀತಿಸುವರನ್ನು ನಮಗೆ ಸಿಕ್ಕಾಗ ಮಾತ್ರ ಅವರನ್ನು ಸಂಶಯದಿಂದ ಅಥವಾ ದೂರ ಮಾಡಬಾರದು. ಪ್ರೀತಿ ಸಿಗದಿದ್ದವರು ಅನಾಥರು"*

ಎಂದು ಹೇಳಿದ್ದರು. ಅವರ ಮಾತನ್ನು ಕೇಳಿದ ಸುಮಾ ತನ್ನ ಗಂಡನನ್ನು ತನ್ನ ತಾಯಿ ಹೇಳಿದ ರೀತಿಯ ದೃಷ್ಟಿಯಿಂದ ನೋಡಿದಾಗ ಅವಳ ಮಾತು ನಿಜ ಅನ್ನಿಸಿತು. ಅದರಂತೆ ಈಗ ಅಭಿ ತನ್ನ ತಾಯಿ ಬಗ್ಗೆ ಹೇಳಿದಾಗ ಸುಮಾಳಿಗೂ ಸಹ ತನ್ನ ತಾಯಿ ನೆನಪಾಯಿತು. ಅದಕ್ಕೆ ಅವಳು ಸುಮ್ಮನಾಗಿದ್ದಳು. ಅವಳು ಮೌನವಾಗಿರುವದನ್ನು ಕಂಡ ಅಭಿ,

*"ಯಾಕೆ ಏನಾಯ್ತು?"*

*"ಏನಿಲ್ಲ, ನೀವು ನಿಮ್ಮ ತಾಯಿ ಬಗ್ಗೆ ಹೇಳಿದಿರಲ್ಲ. ನನಗೆ ನನ್ನ ತಾಯಿ ನೆನಪಾದ್ಲು. ಒಬ್ಬ ತಾಯಿ ತನ್ನ ಮಕ್ಕಳಿಗೆ ಎಷ್ಟು ಮುಖ್ಯ ಅಂತ ಅವರು ಇದ್ದಾಗ ತಿಳಿಯೋದಿಲ್ಲ ಹೋದ ಮೇಲೆ ತಿಳಿಯುತ್ತದೆ."*

*"ಹೌದು ನೀವು ಹೇಳುವದು ನಿಜ"*

ಎಂದಷ್ಟೇ ಹೇಳಿದ ಅಭಿ. ಕೊನೆಗೆ ಸುಮಾ

*"ಯಾಕೋ ನನಗೆ ಮನಸ್ಸು ಸರಿಯಿಲ್ಲ ಮತ್ತೆ ಸಿಗೋಣ "*

ಎಂದು ಹೇಳಿ ಫೋನ್ ಕಟ್ ಮಾಡಿದಳು. ಹಾಗೆ ಅವಳು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಹಾಸಿಗೆ ಮೇಲೆ ಉರಳಿಕೊಂಡಾಗ ಅವಳ ತಾಯಿ ನೆನಪಾದಳು. ತಾಯಿಯ ನೆನಪಾಗಿ ಅವಳಿಗೆ ಕಣ್ಣಲ್ಲಿ ನೀರು ಬಂತು. ಹಾಗೆ ಕೆನ್ನೆ ಮೇಲೆ ಉರುಳಿದ ನೀರು ದಿಂಬನ್ನು ತೋಯಿಸತೊಡಗಿತು. ಹಾಗೆ ತನ್ನ ತಾಯಿ ಹೇಳಿದ ಮಾತು ನೆನಪಾಯಿತು. 

*"ಸಂಬಂಧ ಇಲ್ಲದೆ ಇದ್ದವರು ಅನಾಥರಲ್ಲ ಪ್ರೀತಿ ಇಲ್ದೆ ಇದ್ದವರು ಮತ್ತು ಸಿಗದವರು ಅನಾಥರು."*

ನಿಜ ತನ್ನ ತಾಯಿ ಹೇಳಿದ ಮಾತು ಮಾತ್ರ ನಿಜವಾಗಿ ಇದೆ. ಸಂಭಂದ ಇಲ್ಲದೆ ಇದ್ದವರು ಅನಾಥರಲ್ಲ. ತನಗೆ ಸಂಭದವಿದ್ದವರು ಈಗ ಯಾರೂ ಇಲ್ಲ ಒಬ್ಬಂಟಿ. ಪ್ರೀತಿ ಸಿಕ್ಕಾಗ ಮಾತ್ರ ಸಂಬಂಧಗಳು ನೆನಪಿಗೆ ಬರುವದಿಲ್ಲ. ಪ್ರೀತಿಗೆ ಆ ಶಕ್ತಿ ಇದೆ. ಅದಕ್ಕೆ ತನ್ನ ತಾಯಿ ಹೇಳಿದ್ದು ಸರಿ ಪ್ರೀತಿ ಸಿಗದೇ ಇದ್ದವರು ಅನಾಥರು ಅಂತ. ಈ ಮಾತನ್ನು ನೆನಪಿಸಿಕೊಂಡು ಸುಮಾ ತನ್ನ ಜೀವನವನ್ನು ಅವಲೋಕನ ಮಾಡಿದಾಗ, ಈಗ ಪ್ರೀತಿ ಸಿಗದೇ ತನ್ನವರನ್ನು ಕಳೆದುಕೊಂಡು ಅನಾಥಳಾಗಿದ್ದಳು. ಆದರೆ ಒಂದು ಹೃದಯ ತನ್ನನ್ನು ಪ್ರೀತಿಸುತ್ತಿದೆ ಅಂತ ಗೊತ್ತಾದಾಗ ಮಾತ್ರ ಅವಳಿಗೆ ತಾನು ಕಳೆದುಕೊಂಡಿದ್ದ ಸಂಭದಿಕರೆಲ್ಲ ನೆನಪಿಗೆ ಬರಲಿಲ್ಲ. ಹೃದಯದ ತುಂಬಾ ಬಾಡಿ ಹೋದ ಪ್ರೀತಿ ಮತ್ತೆ ಚಿಗುರೊಡೆದಿತ್ತು. ಅದನ್ನು ಪಡೆದೆ ತೀರಬೇಕು ಅಂತ ಸುಮಾ ನಿರ್ಧರಿಸಿದಳು. ಎಷ್ಟೇ ಆದರೂ ಅವಳಿಗೂ ಮನಸ್ಸು ಒಂಟಿತನದಿಂದ ರೋಸಿ ಹೋಗಿತ್ತು. ಅವಳಿಗೆ ತನ್ನ ಜೊತೆ ಯಾರಾದರೂ ಇರಬೇಕು ಅಂತ ಅನ್ನಿಸುತ್ತಿತ್ತು. ತನ್ನವರು, ತನ್ನ ಮನಸ್ಸನ್ನು ಬಲ್ಲವರು ತನ್ನ ಅರ್ಥ ಮಾಡಿಕೊಳ್ಳುವವರು ತನ್ನ ಭಾವನೆಗಳನ್ನು ಗೌರವಿಸುವವರು, ಈಗ ಅಭಿ ಅವಳಿಗೆ ಸಿಕ್ಕಿದ್ದ. ಅವನೂ ಸಹ ಅದೇ ತೆರನಾಗಿ ಅವಳ ಮನಸ್ಸಿನಲ್ಲಿ ಸುಪ್ತವಾಗಿದ್ದ ಅವಳ ಭಾವನೆಗಳನ್ನು ಬಡಿದು ಎಬ್ಬಿಸಿದ್ದ. ಅವನ ವಿಚಾರಧಾರೆಗಳು, ಅವನ ಟೇಸ್ಟ್ ತನಗೆ ಬೇಕಾದ ರೀತಿಯಲ್ಲಿ ಇದ್ದದ್ದರಿಂದ ಅವಳೂ ಸಹ ಅವನಿಗೆ ಸ್ಪಂದಿಸಿದ್ದಳು. 

ಒಂದು ಹೆಣ್ಣು ಯಾವುದೇ ಗಂಡಸಿಗೆ, ಕೂಡಲೇ ಸ್ಪಂದಿಸುವದಿಲ್ಲ. ಮೊದಲು ಅಳೆದು ತೂಗಿ ನೋಡಿ ತನಗೆ ಹೊಂದುವಂತಿದ್ದರೆ ಮತ್ತು ಭಾವನೆಗಳಿಗೆ ಸ್ಪಂದನೆ ಇದ್ದರೆ ಮಾತ್ರ ತನ್ನ ಕಡೆಯಿಂದ ಸ್ಪಂದಿಸುತ್ತಾಳೆ. ಹೆಣ್ಣಿಗೆ ದೇವರು ಅಂತಹ ಒಂದು ವರ ಕೊಟ್ಟಿದ್ದಾನೆ. ಇಂಥ ವಿಚಾರ ಗಂಡಸಿಗೆ ಮಾತ್ರ ಬರುವದಿಲ್ಲ. ಗಂಡು ಹೃದಯವಿದ್ದರೂ ಮೃದುತ್ವ ಸ್ವಲ್ಪ ಕಮ್ಮಿ. ಗಂಡಸು ತನ್ನ ವಿಚಾರದ ಜೊತೆಗೆ ತನ್ನ ಹೃದಯವನ್ನು ಜೋಡಿಸುತ್ತಾನೆ. ಆದರೆ ಹೆಣ್ಣು ಮಾತ್ರ ಹೃದಯದಿಂದಲೇ ಯೋಚಿಸಿ ಅದರಿಂದಲೇ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಅದೇ ಗಂಡು ಮತ್ತು ಹೆಣ್ಣು ವಿಚಾರ ಧಾರೆಯಲ್ಲಿ ಇರುವ ವ್ಯತ್ಯಾಸ. 

     ಹೀಗೆ ಯೋಚನೆ ಮಾಡುತ್ತಲೇ ಮಲಗಿಕೊಂಡಳು. ಅವಳು ಮರುದಿನ ಬೆಳಿಗ್ಗೆ ಎದ್ದಾಗ ಮನದ ತುಂಬಾ ರಾತ್ರಿ ಮಾಡುತ್ತಿದ್ದ ಯೋಚನೆ ಮುಂದುವರೆಯಿತು. ತಾನೇನೋ ತೀರ್ಮಾನ ತೆಗೆದುಕೊಂಡಿದ್ದಳು. ಆದರೆ ಅದು ಸರಿಯೋ ತಪ್ಪೋ ಎನ್ನುವ ಮತ್ತೊಂದು ರೀತಿಯಿಂದ ಯೋಚನೆ ಪ್ರಾರಂಭವಾಯಿತು. ಅದೇ ಯೋಚನೆಯಲ್ಲಿ ಅವಳು ಕಾಲೇಜಿಗೆ ಹೋದಳು. ಹಾಗೆ ಅದೇ ಯೋಚನೆ ಮಾಡುತ್ತಲೇ, ಅವಳು ಅಂದಿನ ಪಾಠವನ್ನು ಮಾಡಿದಳು. 


19


   ಅವಳ ಕ್ಲಾಸ್ಗಳೆಲ್ಲ ಮುಗಿದ ಮೇಲೆ ಸ್ಟಾಫ್ ರೂಮಿನಲ್ಲಿ ಒಬ್ಬಳೇ ಕುಳಿತುಕೊಂಡು ಯೋಚನೆ ಮಾದುತ್ತರಬೇಕಾದರೆ, ಕಾವೇರಿ ಅಲ್ಲಿಗೆ ಬಂದಳು. ಕಾವೇರಿ ಬಂದು ನೋಡಿದಾಗ ಸುಮಾ ಇನ್ನೂ ಏನೋ ಯೋಚನೆಯಲ್ಲಿಯೇ ಮುಳುಗಿದ್ದಳು. ಕಾವೇರಿ ಕಡೆಗೆ ತಿರುಗಿ ಸಹ ನೋಡಲಿಲ್ಲ. ಇದರಿಂದ ಕಾವೇರಿಗೆ ಸುಮಾ ಯಾವುದೋ ದೀರ್ಘವಾದ ಯೋಚನೆಯಲ್ಲಿ ಮುಳುಗಿದ್ದಾಳೆ ಅಂತ ತಿಳಿದುಕೊಂಡಳು. ಹಾಗೆ ಅವಳ ಸಮೀಪಕ್ಕೆ ಬಂದು ಅವಳ ಭುಜದ ಮೇಲೆ ಕೈ ಇಟ್ಟು

*"ಸುಮಿ, ಏನು ಯೋಚನೆ ಮಾಡುತ್ತಿರುವೆ?"*

ಎಂದು ಕೇಳಿದಾಗ, ಅವಳ ಧ್ವನಿ ಕೇಳಿ ಸುಮಾ ಒಮ್ಮೆಲೇ ಬೆಚ್ಚಿ ಬಿದ್ದಳು. ಕಾವೇರಿ ಆಗಮನ ಅವಳಿಗೆ ಅನಿರೀಕ್ಷಿತವಾಗಿತ್ತು. ಅವಳನ್ನು ನೋಡುತ್ತಲೇ ನಿಟ್ಟುಸಿರು ಬಿಟ್ಟ ಸುಮಾ

*"ಕಾವೇರಿ, ಎಲ್ಲಿಯಾದರೂ ಹೋಗೋಣ ನಡಿ. ನಿನ್ನ ಜೊತೆಗೆ ಸ್ವಲ್ಪ ಮಾತನಾಡಬೇಕಾಗಿದೆ"*

ಎಂದು ಹೇಳಿದಾಗ, ಕಾವೇರಿಗೆ ಆಶ್ಚರ್ಯವಾಯಿತು. ಸುಮಾ ಈ ರೀತಿಯಾಗಿ ಎಂದಿಗೂ ಹೇಳಿದ್ದಿಲ್ಲ. ಇಂದು ಈ ರೀತಿಯಾಗಿ ಹೇಳಬೇಕಾದರೆ ಏನೋ ಮುಖ್ಯ ವಿಷಯ ಇರಬೇಕು ಅಂತ ಅಂದುಕೊಂಡು, 

*"ಸರಿ, ನನ್ನ ಕ್ಲಾಸ್ ಮುಗಿತು. ಹೋಗೋಣ ನಡೆ"*

ಎಂದು ಹೇಳಿದಾಗ ಇಬ್ಬರೂ ಕೂಡಿ ಸ್ಟಾಫ್ ರೂಮಿನಿಂದ ಹೊರಗೆ ಬಂದು ಪ್ರಿನ್ಸಿಪಾಲ ಒಪ್ಪಿಗೆ ಪಡೆದು ಹೊರಟರು. ಸುಮಾ ಕಾರನ್ನು ಊರ ಹೊರಗಿನ ಗುಡಿಯ ಹತ್ತಿರ ತೆಗೆದುಕೊಂಡು ಬಂದು ನಿಲ್ಲಿಸಿದಳು. ಅದರಿಂದ ಕೆಳಗಿಳಿದು, ಗುಡಿಯ ಒಳಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದರು. ಕೈಯಲ್ಲಿ ಪ್ರಸಾದವಿತ್ತು. ಅದನ್ನು ತಿನ್ನುತ್ತಾ ಹಾಗೆ ಗುಡಿಯ ಅಂಗಳದಲ್ಲಿ ಇದ್ದ ಒಂದು ಗಿಡದ ಕೆಳಗೆ ಕುಳಿತು ಪ್ರಸಾದ ತಿನ್ನತೊಡಗಿದರು. 

ಸುಮಾ ಮಾತನ್ನು ಹೇಗೆ ಪ್ರಾರಂಭಿಸಬೇಕು ಅಂತ ಗೊತ್ತಾಗದೆ ಸ್ವಲ್ಪ ಗೊಂದಲದಲ್ಲಿ ಬಿದ್ದಿದ್ದಳು. ಕಾವೇರಿ ಅವಳು ಮಾತನಾಡುವದ ದಾರಿ ಕಾಯುತ್ತ ಕುಳಿತಿದ್ದಳು. ಹಾಗೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಾಗ, ಕಾವೇರಿಯೇ 

*"ಸುಮಿ, ಏನೋ ಮಾತಾಡಬೇಕು ಅಂತ ಕರ್ಕೊಂಡು ಬಂದೆ ಸುಮ್ಮ್ನೆ ಕುಳಿತಿದ್ದೀಯಲ್ಲ"*

*"ಏನಿಲ್ಲ ಕಾವೇರಿ, ಮಾತು ಹೇಗೆ ಪ್ರಾರಂಭಿಸಬೇಕು ಅಂತ ತಿಳಿತಾ ಇಲ್ಲ ಅದಕ್ಕೆ ಹೇಗೆ ಹೇಳೋದು ಅಂತ ಯೋಚನೆ ಮಾಡ್ತಿದ್ದೀನಿ"*

*"ಸಂಕೋಚ ಬೇಡ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನಿಸ್ಸಂಕೋಚವಾಗಿ ಹೇಳಿಬಿಡು."*

*"ಕಾವೇರಿ, ಸ್ವಲ್ಪ ದಿನದ ಹಿಂದೆ ನಿನಗೆ ನಾನು ನಮ್ಮ ವಯಸ್ಸಿನ ಮಹಿಳೆಯೊಬ್ಬಳು ನಮ್ಮ ವಯಸ್ಸಿಗಿಂತ ಚಿಕ್ಕ ಹುಡುಗನ ಜೊತೆಗೆ ಲವ್ ನಲ್ಲಿ ಬಿದ್ದಿದ್ದು ಹೇಳಿದ್ದೆ ನೆನಪಿದೆಯೇ?"*

ಎಂದಾಗ ಕಾವೇರಿಗೆ ಒಮ್ಮೆಲೇ ಸುಮಾ ತನ್ನ ಜೊತೆಗೆ ಈ ರೀತಿಯಾಗಿ ಹೇಳಿದ್ದು ನೆನಪಾಗಿ,

*"ಹೌದು ನೆನಪಿದೆ. ಏನಿವಾಗ?"*

*"ಆ ಮಹಿಳೆ ನಾನೇ"*

ಎಂದು ಹೇಳಿದಾಗ, ಕಾವೇರಿ ಅವಳನ್ನೇ ಗಾಬರಿಯಿಂದ ನೋಡುತ್ತಾ ಕುಳಿತಳು. ಸುಮಾ ತನ್ನ ಮಾತಿನಿಂದ ನೀಡಿದ ಶಾಕಿನಿಂದ ಕಾವೇರಿ ಚೇತರಿಸಿಕೊಂಡಿರಲಿಲ್ಲ. ಸುಮಾ ಅವಳತ್ತಲೇ ನೋಡುತ್ತಾ,

*"ಗಾಬರಿಯಾಗಬೇಡ, ನೀನು ತಿಳಿದಿರುವಂತೆ ಏನೂ ಆಗಿಲ್ಲ. ಆದರೆ, ನಾನು ಅವನನ್ನು ಪ್ರೀತಿಸುತ್ತಿದ್ದೇನೆ. ನನಗೆ ಗೊತ್ತಿಲ್ಲದೇ, ನನ್ನ ಮನಸ್ಸು ಅವನಿಗೆ ಕೊಟ್ಟು ಬಿಟ್ಟೆ. ನಾನು ವಿಧವೆ ಮತ್ತು ಏಕಾಂಗಿ, ಅವನು ನನಗೆ ತೋರಿಸಿದ ಪ್ರೀತಿಯಲ್ಲಿ ನಾನು ಕರಗಿಬಿಟ್ಟೆ. ನನಗೆ ಗೊತ್ತಿಲ್ಲದೇ, ನಾನು ಅವನ ಪ್ರೀತಿಯ ಎದುರಿಗೆ ಸೋತು ಹೋಗಿಬಿಟ್ಟೆ. ನಾನು ಅವನಲ್ಲಿ ಎಷ್ಟು ಮುಳುಗಿ ಹೋಗಿದ್ದೇನೆಂದು ಮಾತಿನಲ್ಲಿ ಹೇಳಲಿಕ್ಕೆ ಬರುವದಿಲ್ಲ. ಒಂದೊಂದು ಸಲ ನನಗೆ ಯೋಚನೆ ಬರುತ್ತದೆ. ಈ ಎಲ್ಲ ಕೆಲ್ಸಾ ಬಿಟ್ಟು ಅವನ ಹತ್ತಿರಕ್ಕೆ ಹೋಗಿ ಅವನ ಎದೆ ಮೇಲೆ ನನ್ನ ತಲೆ ಇತ್ತು ಕಣ್ಣು ಮುಚ್ಚಿಕೊಂಡು ಅವನ ಹೃದಯದ ಬಡಿತ ಕೇಳುತ್ತಲೇ ಹಾಗೆ ಇದ್ದು ಬಿಡಬೇಕು ಅಂತ. ಆದ್ರೆ ಕೆಲವು ಬಾರೆ ಯೋಚನೆ ಬರುತ್ತೆ, ಒಂದು ವೇಳೆ ಬೇರೆಯವರು ನನ್ನ ಈ ಪ್ರೀತಿನ ತಪ್ಪು ಭಾವಿಸಿದರೆ ಹೇಗೆ ಅಂತ. ಈ ಭಾವನೆ ಬಂದಾಗ ಮಾತ್ರ ನನ್ನ ತಲೆಗೆ ಏನೂ ಹೊಳೆಯದೆ, ಒಂದು ರೀತಿಯಲ್ಲಿ ನಾನು ತಪ್ಪು ಮಾಡಿಬಿಟ್ಟೆನೆ ಎಂಬ ಅಪರಾಧ ಮನೋಭಾವನೆ ನನ್ನನ್ನು ಕಾಣುತ್ತದೆ"*

ಎಂದು ಹೇಳಿ ಒಂದು ಕ್ಷಣ ತನ್ನ ತಲೆ ತಗ್ಗಿಸಿಕೊಂಡು ಸುಮ್ಮನಾದಳು. ಅವಳನ್ನೇ ದಿಟ್ಟಿಸಿ ನೋಡುತ್ತಾ ಕಾವೇರಿ ಕುಳಿತಾಗ ಒಮ್ಮೆಲೇ ಕಾವೇರಿಯ ಕೈ ಹಿಡಿದು ಸುಮಾ

*"ಕಾವೇರಿ, ನಿಜ ಹೇಳು. ನೀನು ನನ್ನ ಅಕ್ಕನ ಹಾಗೆ. ನಾನು ಮಾಡಿದ್ದು ತಪ್ಪು ಅಂತ ನಿನಗೇನಾದರೂ ಅನ್ನಿಸ್ತಿದೆಯಾ? ನನ್ನ ಮನಸ್ಸಿನಲ್ಲಿರುವ ವಿಷಯ ಕೇವಲ ನಿನ್ನ ಮುಂದೆ ಇತ್ತು ನಿಂಗೆ ಮಾತ್ರ ಹೇಳ್ತಿದ್ದೇನೆ. ನನಗೆ ಉತ್ತರ ಬೇಕು"*

ಎಂದು ಹೇಳುತ್ತಿರುವಾಗ ಕಾವೇರಿ ಅವಳ ಕಣ್ಣಲ್ಲಿ ನೀರು ನೋಡಿ ಅಧೀರಳಾದಳು. ಸುಮಾ ಎಂದು ಹೀಗೆ ಕಣ್ಣಲ್ಲಿ ನೀರು ತೆಗೆದಿರಲಿಲ್ಲ. ಅಲ್ಲದೆ, ಅವಳು ಮೊದಲಿನಿಂದಲೂ ಧೈರ್ಯವಂತೆ ಬೇರೆಯವರಿಗೆ ಧೈರ್ಯ ತುಂಬುತ್ತಿದ್ದಳು. ಆದರೆ ಇಂದು ಅವಳೇ ತನ್ನ ಧೈರ್ಯ ಕಳೆದುಕೊಂಡು ತನ್ನನ್ನು ಏನೋ ಕೇಳುತ್ತಿದ್ದಾಳೆ ಅದಕ್ಕೆ ಅವಳಿಗೆ ಹೇಗೆ ಸ್ಪಂದಿಸಬೇಕು ಅಂತ ತಿಳಿತಾ ಇಲ್ಲ ಕಾವೇರಿಗೆ. ಆದರೆ ಅವಳ ಮುಖ ನೋಡುತ್ತಿರುವಂತೆ ಕಾವೇರಿಗೆ ಅಯ್ಯೋ ಅನ್ನಿಸಿತು. ಸುಮಾಳ ಎಲ್ಲ ಕಥೆ ಗೊತ್ತಿದ್ದ ಕಾವೇರಿಗೆ ಅವಳ ಮನದಲ್ಲಿ ಏನು ನಡೀತಿದೆ ಅಂತ ಅರ್ಥ ಆಗುತ್ತಿತ್ತು. ಆದರೆ ಈ ಹೊತ್ತಿನಲ್ಲಿ ಏನು ಹೇಳಬೇಕು ಅಂತ ಮಾತ್ರ ಕಾವೇರಿಗೂ ಹೊಳೆಯಲಿಲ್ಲ. ಹಾಗೆ ಹೇಳುತ್ತಾ ಸುಮಾ ತನ್ನ ಮುಖವನ್ನು ಕಾವೇರಿಯ ಮಡಿಲಲ್ಲಿ ಇತ್ತು ಬಿಕ್ಕಿ ಬಿಕ್ಕಿ ಅಳತೊಡಗಿದಳು. 

ಕಾವೇರಿಗೆ ಸುಮಾಳ ಪರಿಸ್ಥಿತಿ ಅರ್ಥವಾಗಿತ್ತು. ಆದರೆ ಅವಳಿಗೆ ಈ ಹೊತ್ತಿನಲ್ಲಿ ನಿರ್ಧಾರ ತೆಗೆದುಕೊಂಡವರ ಹಾಗೆ ಏನೂ ಹೇಳಲು ಸಾಧ್ಯವಿರಲಿಲ್ಲ. ಅವಳು ಮಾಡಿದ್ದು ಸರಿ ಅಂತ ಹೇಳಿದರೆ ಒಂದು ಸಮಸ್ಯೆ. ಅದೇನೆಂದರೆ, ಅವಳು ಪ್ರೀತಿಸಿದವನು ವಯಸ್ಸಿನಲ್ಲಿ ಚಿಕ್ಕವನು ಅಲ್ಲದೆ ಒಂದು ವೇಳೆ ಸುಮಾ ಹೇಳಿದ ರೀತಿಯಲ್ಲಿ ಸಮಾಜ ಗುರುತಿಸಿದರೆ ಏನು ಮಾಡೋದು ಅಂತ. ಸುಮಾಳನ್ನು ಹಾಗೆ ಅಳಲು ಬಿಟ್ಟು ಯೋಚನೆ ಮಾಡಲು ಅವಳಿಗೆ ಮೊದಲು ತಾನು ಆ ಯುವಕನ ಜೊತೆಗೆ ಮಾತನಾಡಿದರೆ ಹೇಗೆ ಅಂತ ಅನ್ನಿಸಿತು. ಅಲ್ಲಿಯವರೆಗೆ ತನ್ನ ಸಲಹೆಯಾಗಲಿ ಅಥವಾ ನಿರ್ಧಾರವಾಗಲಿ ಹೇಳುವದು ಬೇಡ ಅಂತ ಅನ್ನಿಸಿತು. ಆ ನಿರ್ಧಾರಕ್ಕೆ ಬರುವ ಹೊತ್ತಿಗೆ ಸುಮಾಳ ದುಃಖ ಸಹ ಒಂದು ಹಂತಕ್ಕೆ ಬಂದಿತ್ತು. ಕೊನೆಗೆ ಸುಮಾಳನ್ನು ಸಮಾಧಾನ ಪಡಿಸುತ್ತಾ,

*"ಸುಮಿ ಒಂದು ಮಾತು ಹೇಳ್ತಿನಿ ತಪ್ಪು ತಿಳಿಬೇಡ"*

ಎಂದು ಹೇಳಿದಾಗ ಅವಳತ್ತಲೇ ನೋಡುತ್ತಾ ಸುಮಾ ತನ್ನ ಕಣ್ಣೆರನ್ನು ಒರೆಸಿಕೊಳ್ಳುತ್ತ,

*"ಏನು?"*

*"ನಾನು ಆತನ ಜೊತೆಗೆ ಮಾತನಾಡಬಹುದಾ? ಒಂದು ವೇಳೆ ಮಾತನಾಡಲು ಅವಕಾಶ ಸಿಕ್ಕಲ್ಲಿ ನಾನು ಅವನ ಜೊತೆಗೆ ಮಾತನಾಡಿದ ಮೇಲೆ ನಿನ್ನ ವಿಷಯದ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯ. ಈಗ ಪ್ರಪಂಚದಲ್ಲಿ ತುಂಬಾ ಬದಲಾವಣೆಗಳು ಆಗಿವೆ. ಜನ ಸಹ ಬದಲಾಯಿಸಿದ್ದಾರೆ. ಸ್ವಾರ್ಥದ ಮತ್ತು ಮೋಸದ ಪ್ರಪಂಚ ಇದು. ಯಾರ ಬಾಳಿನಲ್ಲಿ ಯಾರು ಬೇಕಾದವರು ಸಹ ಆಟವಾಡುವ ಕಾಲವಿದು. ಅಂಥದರಲ್ಲಿ ನೀನು ಇಷ್ಟು ಮುಂದುವರೆದಿದ್ದೀಯ ಅಂದ್ರೆ ನಾನು ಈಗ್ಲೇ ಏನೂ ಹೇಳಲು ಸಾಧ್ಯವಿಲ್ಲ. ಅದಕ್ಕೆ ನನಗೆ ಸ್ವಲ್ಪ ಸಮಯ ಬೇಕು ಮತ್ತು ಅವನ ಜೊತೆಗೆ ಮಾತನಾಡಿದಾಗ ಮಾತ್ರ ನಾನು ಇದಕ್ಕೆ ಉತ್ತರ ಹೇಳುವದಕ್ಕೆ ಸಾಧ್ಯ."*

ಕಾವೇರಿಯ ಮಾತನ್ನು ಕೇಳಿದ ಸುಮಾ ಒಂದು ಕ್ಷಣ ಸುಮ್ಮನೆ ಕುಳಿತಳು. 

*"ಕಾವೇರಿ, ಅವನು ನನಗೆ ಸಿಗೋದು ರಾತ್ರಿ ವೇಳೆಯಲ್ಲಿ ಮಾತ್ರ. ದಿನದಲ್ಲಿ ಅವನು ಸಿಗೋದಿಲ್ಲ."*

*"ಸುಮಿ, ಅವನ ಫೋನ್ ನಂಬರ್ ಆದ್ರೂ ಇರಬಹುದಲ್ಲವೇ?"*

*"ಇಲ್ಲ ನನ್ನ ನಂಬರ್ ಅವನ ಹತ್ತಿರವಿಲ್ಲ ಮತ್ತು ಅವನ ನಂಬರ್ ಅವನ ಹತ್ತಿರವಿಲ್ಲ."*

ಎಂದಾಗ ಈ ಮಾತಿನಿಂದ ಆಶ್ಚರ್ಯಗೊಂಡ ಕಾವೇರಿ, 

*"ಇದೇಗೆ ಸಾಧ್ಯ. ಇಷ್ಟೆಲ್ಲಾ ಮಾತಾಡಿದ್ದೀರಿ ಆದರೆ ನಿಮಗೆ ನಂಬರ್ ಗೊತ್ತಿಲ್ಲ ಎಂಬ ವಿಷಯ್ ನನಗೇನೋ ನಂಬಲಿಕ್ಕಾಗುವದಿಲ್ಲ"*

*"ಹಾಗೇನಿಲ್ಲ ಕಾವೇರಿ, ಫೇಸ್ ಬುಕ್ ಮೆಸೆಂಜರ್ ದಲ್ಲಿ ಕಾಲ್ ಮಾಡಲು ಸೌಲಭ್ಯವಿದೆ. ಅದೇ ರೀತಿಯಾಗಿ ನಾವು ಇಬ್ಬರೂ ಅದರಲ್ಲಿಯೇ ಮಾತನಾಡುತ್ತಿದ್ದೆವು. ಅವನೂ ಸಹ ನನ್ನ ನಂಬರೇ ಕೇಳಿಲ್ಲ ನಾನೂ ಸಹ ಅವನ ನಂಬರ್ ಕೇಳಿಲ್ಲ."*

*"ಹೋಗಲಿ ಅವನ ಫೋಟೋ ಆದ್ರೂ ಇದೆಯಲ್ಲವೇ?"*

*"ಇಲ್ಲ ನನ್ನ ಫೋಟೋ ಅವನ ಹತ್ತಿರವಿಲ್ಲ ಅವನ ಹತ್ತಿರ ನನ್ನ ಫೋಟೋ ಇಲ್ಲ"*

ಎಂದು ಹೇಳಿದಾಗ ಕಾವೇರಿ, 

*"ಇದೆಂತದೆ?ಒಬ್ಬರಿಗೊಬ್ಬರು ಮುಖ ಸಹ ನೋಡಿಕೊಂಡಿಲ್ಲ. ಅವನು ಹೇಗಿದ್ದಾನೆ ನೀನು ನೋಡಿಲ್ಲ ನೀನು ಹೇಗಿರುವೆ ಅಂತ ಅವನು ನೋಡಿಲ್ಲ. ಕೇವಲ ಚಾಟ್ ಮತ್ತು ಫೋನಿನಲ್ಲಿ ಮಾತನಾಡುವದರಿಂದ ಈ ತರ ಸಾಧ್ಯವಾ?"*

*"ಏನೋ ಗೊತ್ತಿಲ್ಲ. ಹೇಗಾಯ್ತು ಏನಾಯ್ತು ಅಂತ ಮಾತ್ರ ನನಗೆ ಗೊತ್ತಾಗಲಿಲ್ಲ. ನಮ್ಮಿಬ್ಬರಿಗೂ ಒಬ್ಬರಿಗೊಬ್ಬರ ವಿವರಗಳನ್ನು ಕೇಳುವ ಪ್ರಸಂಗವೇ ಬರಲಿಲ್ಲ."*

ಎಂದಾಗ ಕಾವೇರಿ ಬಾಯಿಂದ ಮಾತುಗಳೇ ಹೊರಡಲಿಲ್ಲ. ಕಥೆಯಲ್ಲಿ ಕೇಳಿದ್ದಳು ಸಿನಿಮಾದಲ್ಲಿ ನೋಡಿದ್ದಳು. ಒಬ್ಬರನ್ನೊಬ್ಬರು ನೋಡದೆ ಲವ್ ಮಾಡುವ ವಿಷಯವನ್ನು. ಆದರೆ ಇಲ್ಲಿ ತನ್ನ ಕಣ್ಣೆದುರಿಗೆ ಅದು ಆಗಿ ಹೋಗಿದೆ. ಕೊನೆಗೆ ಕಾವೇರಿ ಒಂದು ತೀರ್ಮಾನಕ್ಕೆ ಬಂದು

*"ಇಂದು ರಾತ್ರಿ ನಿನ್ನ ಮನೇಲಿ ಉಳ್ಕೋತೀನಿ. ನೈಟ್ ಅವನು ಕಾಲ್ ಮಾಡಿದಾಗ ನಾನು ಮಾತಾಡ್ತೀನಿ"*

ಎಂದು ಹೇಳಿದಾಗ, ಸುಮಾ ಅವಳಿಗೆ ಬೇಡ ಎಂದು ಹೇಳಲು ಮನಸ್ಸಾದರೂ ಸಹ ಹಾಗೆನ್ನಲಾಗದೆ ಸುಮ್ಮನೆ ಒಪ್ಪಿಕೊಂಡಳು. 

    ಕಾವೇರಿ ಸುಮಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅವಳಿಗೆ ಊಟ ಮಾಡಿಸಿದಳು. ನಂತರ ತನ್ನ ಮನೆಯವರಿಗೆ ತಾನು ಒಂದು ರಾತ್ರಿ ಸುಮಾಳ ಜೊತೆಗೆ ಅವಳ ಮನೆಯಲ್ಲಿ ಇದ್ದು ಮರುದಿನ ಬರುವದಾಗಿ ತಿಳಿಸಿ, ಸುಮಾಳ ಜೊತೆಗೆ ಅವಳ ಮನೆಗೆ ಹೊರಟಳು. 

        ಸುಮಾಳ ಮನೆಯ ಶಾಂತವಾದ ವಾತಾವರಣ ಕಂಡ ಕಾವೇರಿ ಹರ್ಷಿತಗೊಂಡಳು. ಅಂತಹ ಶಾಂತವಾದ ವಾತಾವರಣ ಅವಳ ಮನೆಯಲ್ಲಿ ಇರಲಿಲ್ಲ. ಕಾವೇರಿ ಬಂದಿದ್ದರಿಂದ ಸುಮ ಸಹ ಒಂದು ರೀತಿಯಲ್ಲಿ ಉತ್ಸಾಹದಿಂದ ಇದ್ದಳು. ಯಾರೋ ತನ್ನವರು ತನ್ನ ಮನೆಗೆ ಬಂದಿದ್ದಾರೆ, ಎಂದು ತಿಳಿದುಕೊಂಡು ಅತಿಥಿ ಸತ್ಕಾರದಲ್ಲಿ ಸುಮಾ ತನ್ನನ್ನು ತಾನು ತೊಡಗಿಸಿಕೊಂಡಳು. ಕಾವೇರಿ ಎಷ್ಟೇ ಬೇಡಿಕೊಂಡರು ಸಹ ಸುಮಾ ಅವಳ ಮಾತನ್ನು ಕೇಳದೆ, ಹಬ್ಬದ ಅಡಿಗೆಯನ್ನು ಮಾಡಿಬಿಟ್ಟಳು. ಸುಮಾಳಿಗೆ ಚೆನ್ನಾಗಿ ವಿವಿಧ ತರಹದ ಅಡುಗೆ ಮಾಡಲು ಬರುತ್ತಿತ್ತು. ಅದು ಕಾವೇರಿಗೆ ಸಹ ಗೊತ್ತಿತ್ತು. ಊಟ ಮಾಡುವಾಗ ಕಾವೇರಿ ಬೇಡ ಬೇಡ ಅಂತ ಹೇಳುತ್ತಲೇ ಸಾಕಷ್ಟು ಹೊಟ್ಟೆ ಬಿರಿಯುವ ರೀತಿಯಲ್ಲಿ ಊಟ ಮಾಡಿದಳು. ಊಟವಾದನಂತರ ಸುಮಾ ಮತ್ತು ಕಾವೇರಿ ಇಬ್ಬರು ಸುಮ್ಮನೆ ಮಾತು ಹೇಳುತ್ತಾ ಕುಳಿತುಕೊಂಡರು. ಅದೇ ವೇಳೆಯಲ್ಲಿ ಕಾವೇರಿ

*" ಸುಮಿ, ಇಷ್ಟು ದಿನ ನೀನು ಸಂನ್ಯಾಸಿನಿಯ ತರಹ ಇದ್ದೆ. ಈಗ ಒಮ್ಮೆಲೆ ಸಂಸಾರದ ಕಡೆ ಲಕ್ಷ ಕೊಡುವುದನ್ನು ನೋಡಿದರೆ, ನನಗೆ ಒಂದು ರೀತಿಯಲ್ಲಿ ಆನಂದವಾಗುತ್ತಿದೆ. ನನ್ನ ತಂಗಿಯೊಬ್ಬಳು ತನ್ನ ಬಾಳುವೆಯನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ ಎಂಬ ಸಮಾಧಾನ ನನಗೆ ಆಗುತ್ತಿದ್ದರೂ ಸಹ, ನೀನು ನೋಡದೆ ಪ್ರೇಮಿಸಿದ ವ್ಯಕ್ತಿಯನ್ನು ಅರಿತುಕೊಂಡು ನನ್ನ ಅಭಿಪ್ರಾಯ ಹೇಳುವ ತನಕ, ನೀನು ಮಾಡಿದ್ದು ಸರಿಯೋ ತಪ್ಪೋ ಎಂಬ ನಿರ್ಧಾರವನ್ನು ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಅದಕ್ಕೆ ಅಂತಲೇ ನಾನು, ಆ ವ್ಯಕ್ತಿಯ ಜೊತೆ ಮಾತನಾಡಬೇಕು ಎಂಬ ಏಕೈಕ ಉದ್ದೇಶದಿಂದ ನನ್ನ ನಿರ್ಧಾರವನ್ನು ಹೇಳಿಲ್ಲ."*

*" ಕಾವೇರಿ, ನೀನು ಹೇಳುವುದು ಒಂದು ರೀತಿಯಲ್ಲಿ ನಿಜವಾದರೂ, ಒಂದು ಸಲ ನೀನು ಅಭಿಯ ಜೊತೆಗೆ ಮಾತನಾಡಿದರೆ, ಅವರ ಸ್ವಭಾವದ ಬಗ್ಗೆ ಮತ್ತು ನಡುವಳಿಕೆಗಳ ಬಗ್ಗೆ ನಿನಗೆ ಚೆನ್ನಾಗಿ ಅರ್ಥವಾಗುತ್ತದೆ. ಆಗ ನೀನು ನನಗೆ ನಾನು ಮಾಡಿದ ಕೆಲಸಕ್ಕೆ ಪ್ರೋತ್ಸಾಹ ಕೊಡುತ್ತಿ. ಅಷ್ಟು ಮಾತ್ರ ನನಗೆ ಚೆನ್ನಾಗಿ ಗೊತ್ತು"*

 ಎಂದು ಹೇಳುತ್ತಿರುವಾಗ ಕಾವೇರಿ,

*" ನೋಡೋಣ. ನಿನ್ನ ಮಾತನ್ನು ಕೇಳುತ್ತಿದ್ದರೆ ನನಗೆ ಆ ವ್ಯಕ್ತಿಯ ಬಗ್ಗೆ ಕುತೂಹಲ ಮಾತ್ರ ಮೂಡುತ್ತಿದೆ. ಆದರೆ ನಿನ್ನ ಅಭಿಪ್ರಾಯಕ್ಕೆ ನನ್ನ ತೀರ್ಮಾನವನ್ನು ಹೇಳಲು ಮಾತ್ರ, ಅವನ ಜೊತೆ ಮಾತನಾಡಿದಾಗ ಮಾತ್ರ ಹೇಳಲು ಸಾಧ್ಯ"*

 ಎಂದು ಹೇಳಿದಾಗ ಸುಮಾ ನಗುತ್ತಾ,

*" ಇನ್ನು ಸ್ವಲ್ಪಹೊತ್ತು ಅಷ್ಟೇ ತಾನೇ. ಅದು ಸಹ ಆಗಿಹೋಗಲಿ"*

 ಎಂದು ಹೇಳಿದಾಗ ಪ್ರತಿಯಾಗಿ ಕಾವೇರಿ ಸಹ ನಕ್ಕುಬಿಟ್ಟಳು. ತದನಂತರದಲ್ಲಿ ಕಾವೇರಿ ಮತ್ತು ಸುಮಾ ತಮ್ಮ ಹಿಂದಿನ ಜೀವನದ ಬಗ್ಗೆ, ಹಳೆಯ ನೆನಪುಗಳನ್ನು ತೆಗೆಯುತ್ತಾ ಮಾತನಾಡುತ್ತಾ ತಮ್ಮಲ್ಲಿ ತಾವು ಮುಳುಗಿಹೋದರು. ಅಭಿ ಕರೆಮಾಡುವ ಸಮಯ ಹತ್ತಿರವಾಗಿತ್ತು. ಸಮಯವಾಗುತ್ತಿದ್ದಂತೆ ಸುಮಾ,

*" ಕಾವೇರಿ, ನಡಿ ಬೆಡ್ ರೂಮಿಗೆ ಹೋಗೋಣ. ಅಲ್ಲಿಯೇ ಕುಳಿತು ಮಾತನಾಡಿದರೆ ಆಯಿತು. ಇದೇ ವೇಳೆಯಲ್ಲಿ ಪಕ್ಕದಮನೆಯ ಮುದುಕ ಮುದುಕಿಯ ಜೊತೆಗೆ ಯುದ್ಧಮಾಡುತ್ತ ಒಳ್ಳೊಳ್ಳೆ ಹಾಡುಗಳನ್ನು ಹಾಕುತ್ತಾರೆ. ಕೇಳುತ್ತಿದ್ದರೆ ಮನಸ್ಸು ಉಲ್ಲಸಿತವಾಗುತ್ತದೆ. ನಾವು ಅಲ್ಲಿ ಕುಳಿತು, ಹಾಡು ಕೇಳುತ್ತ ಮಾತನಾಡೋಣ"*

 ಎಂದು ಹೇಳಿ ಕಾವೇರಿಯನ್ನು ಅಲ್ಲಿಂದ ಎಬ್ಬಿಸಿಕೊಂಡು ತನ್ನ ಬೆಡ್ ರೂಮಿಗೆ ಕರೆದುಕೊಂಡು ಹೋದಳು. ಬಾಲ್ಕನಿಯಲ್ಲಿ ಕುರ್ಚಿ ಹಾಕಿಕೊಂಡು ಇಬ್ಬರೂ ಕುಳಿತುಕೊಂಡರು. ಸುಮಾ ಹೇಳಿದ ರೀತಿಯಲ್ಲಿ, ಪಕ್ಕದಮನೆಯ ಮುದುಕ ಮುದುಕಿ ಜಗಳವಾಡುತ್ತಾ ಕೊನೆಗೆ, ಯಾರು ಗೆದ್ದರೂ ಅಂತ ಮಾತ್ರ ಗೊತ್ತಾಗಲಿಲ್ಲ. ಆದರೆ ಟೇಪ್ ರೆಕಾರ್ಡರ್ ದಿಂದ ಹಾಡು ಮಾತ್ರ ಕೇಳಿಸತೊಡಗಿತು.

*" ಜೀವನದ ಪಯಣದಲ್ಲಿ ನೀ ಬಂದೆ

 ಸಾವಿರದ ಸಂತೋಷ ಸಿಹಿ ತಂದೆ

 ಸಂಗಾತಿ ನೀನಾಗಿ ಸಂಚಾರಿ ನಾನಾಗಿ

  ಹಿಂದೆ ನೀನಿಂದು ಬಳಿಬಂದೆ"*

 ಎಂಬ ಹಳೆಯದಾದ ಮಧುರ ಹಾಡು ಕಿವಿಗೆ ಬಿದ್ದಾಗ, ಕಾವೇರಿ,

*" ಸುಮಿ, ನೀನಿರುವ ಪರಿಸ್ಥಿತಿಗೆ ಮತ್ತು ಈಗ ಕೇಳಿಸುತ್ತಿರುವ ಹಾಡಿಗೆ, ನಿನ್ನ ಹೃದಯದ ಬಡಿತ ಒಂದಕ್ಕೊಂದು ತಾಳೆಯಾಗುತ್ತಿವೆ ನೋಡು"*

 ಎಂದಾಗ ಸುಮಾ ಮುಳುಗು ನಗುತ್ತಾ,

*" ಇಂತಹ ಹಾಡುಗಳು ಸಹ ನನ್ನ ಪ್ರೀತಿಗೆ ಕಾರಣವಾಗಿರಬಹುದು ಅಂತ ನಾನು ಅಂದುಕೊಂಡಿದ್ದೇನೆ"*

 ಎಂದು ಹೇಳುತ್ತಾ, ಮತ್ತೆ ಏನನ್ನೋ ಹೇಳಬೇಕೆನ್ನುವಷ್ಟರಲ್ಲಿ, ಸುಮಾಳ ಫೋನು ರಿಂಗಾಯಿತು. ಅಭಿ ಫೋನ್ ಮಾಡಿದ್ದ, ಅದನ್ನು ನೋಡುತ್ತಲೇ ಸುಮಾ ಕಾವೇರಿಗೆ

*" ನೋಡು ಕಾವೇರಿ, ಸರಿಯಾದ ವೇಳೆಗೆ ಫೋನ್ ಮಾಡಿದ್ದಾರೆ. ಮೊದಲು ನಾನು ಮಾತನಾಡಿ ನಿನ್ನ ಕೈಗೆ ಕೊಡುತ್ತೇನೆ. ನಂತರ ನೀನು ಮಾತನಾಡು. ಆದರೆ ಒಂದು ವಿಷಯ, ಹಾಗೆ ಹೀಗೆ ಮಾತ್ರ ಮಾತನಾಡಿ ಮನಸ್ಸನ್ನು ನೋಯಿಸಬೇಡ"*

 ಎಂದು ಹೇಳುತ್ತಲೇ ಅಭಿಯ ಕರೆಯನ್ನು ಸ್ವೀಕರಿಸಿದ ಸುಮಾ, ತಗ್ಗಿದ ದ್ವನಿಯಲ್ಲಿ,

*" ಹಲೋ"*

 ಎಂದು ಹೇಳಿದಾಗ ಅತ್ತಲಿಂದ ಅಭಿ,

*" ಹೇಗಿದ್ದೀರಿ? ಯಾಕೋ ಗೊತ್ತಿಲ್ಲ ಇಂದು ಮಾತ್ರ ನೀವು ನನಗೆ ತುಂಬಾ ನೆನಪು ಆಗಿರುವಿರಿ. ಹೋದಲ್ಲಿ ಬಂದಲ್ಲಿ, ಕುಳಿತಲ್ಲಿ ನಿಂತಲ್ಲಿ, ನಿಮ್ಮ ನೆನಪು ಮಾತ್ರ ಬಹಳ ಕಾಡಿದೆ. ನನ್ನ ಮನಸ್ಸು ನನ್ನ ಸ್ಥಿಮಿತದಲ್ಲಿ ಇಲ್ಲ. ನನ್ನ ಹೃದಯದ ಬಡಿತ ನನ್ನ ಮಾತು ಕೇಳುತ್ತಿಲ್ಲ. ಯಾಕೆ ಅಂತ ಕಾರಣ ಮಾತ್ರ ನನಗೆ ಗೊತ್ತಾಗುತ್ತಿಲ್ಲ."*

 ಎಂದು ಸಾವಕಾಶವಾಗಿ ಅವನು ಹೇಳುತ್ತಿರುವಾಗ, ಸುಮಾ,

*" ಒಂದು ಮಾತು. ನನ್ನ ಪರಿಸ್ಥಿತಿಯನ್ನು ನಾನು ಅವಲೋಕನ ಮಾಡಿಕೊಂಡಾಗ ನನಗೆ ಕೆಲವು ಗೊಂದಲಗಳು ಆಗಿತ್ತು, ಅವುಗಳ ನಿವಾರಣೆಗಾಗಿ ನನ್ನ ಅಕ್ಕನ ತರಹ ಇರುವ, ಕಾವೇರಿ ಎನ್ನುವ ಅಕ್ಕನಿಗೆ ಹೇಳಿಕೊಂಡಾಗ, ಅವರು ನಿಮ್ಮ ಜೊತೆಗೆ ಮಾತನಾಡಬೇಕೆಂದು ನನ್ನ ಹತ್ತಿರ ಹೇಳಿದ್ದಾರೆ."*

*" ಹೌದಾ? ನನ್ನ ವಿಷಯ ಅವನಿಗೆ ನೀವು ತಿಳಿಸಿದ್ದೀರಾ?"*

*" ಹೌದು. ನನಗೆ ನನ್ನವರು ಅಂತ ತುಂಬಾ ಕ್ಲೋಸ್ ಆಗಿ ಇರುವವರು ಅವರೊಬ್ಬರೇ. ತಿಳಿಸದೇ ಇರುವದಕ್ಕೆ ಮಾತ್ರ ಸಾಧ್ಯವಿಲ್ಲ. ಇಷ್ಟು ದಿನ ತಿಳಿಸಿಲ್ಲ. ಆದರೆ ನನ್ನ ಮನಸ್ಸಿನ ಗೊಂದಲಗಳು, ವಿಷಯವನ್ನು ಅವರಿಗೆ ತಿಳಿಸುವಂತೆ ಮಾಡಿದ ಕಾರಣ, ನಾನು ತಿಳಿಸಬೇಕಾಯಿತು"*

*" ಪರವಾಯಿಲ್ಲ. ನಾನು ಮತ್ತು ನೀವು ಇಬ್ಬರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ತಪ್ಪು ಮಾಡಿರುವೆ ಎಂಬ ಮನೋಭಾವನೆ ಮಾತ್ರ ಇಟ್ಟುಕೊಳ್ಳಬೇಡಿ. ಅವರು ನನ್ನ ಜೊತೆಗೆ ಮಾತನಾಡಿದರು, ನೀವು ನನ್ನ ಜೊತೆಗೆ ಮಾತನಾಡಿದರು, ನನ್ನ ಅಭಿಪ್ರಾಯ, ನನ್ನ ನಿರ್ಧಾರ ಮಾತ್ರ ಒಂದೇ. ಅದರಲ್ಲಿ ಯಾವುದೇ ರೀತಿಯಿಂದ ಬದಲಾವಣೆಯಿಲ್ಲ. ಹೋಗಲಿ, ಅದನ್ನು ನಾವಿಬ್ಬರೂ ಮಾತನಾಡಿಕೊಳ್ಳೋಣ. ಎಷ್ಟಾದರೂ ಅದು ನಮ್ಮಿಬ್ಬರ ವಿಷಯ. ಅವರ ಹತ್ತಿರ ನಾನು ಯಾವಾಗ ಮಾತನಾಡಬಹುದು?"*

*" ಈಗಲೇ, ಇಲ್ಲಿಯೇ ಇದ್ದಾರೆ. ಅವರ ಕೈಯಲ್ಲಿ ಫೋನ್ ಕೊಡುತ್ತೇನೆ. ಮಾತನಾಡಿ"*

 ಎಂದು ಹೇಳಿ, ತನ್ನ ಕೈಯಲ್ಲಿದ್ದ ಫೋನನ್ನು ಕಾವೇರಿಯ ಕೈಯಲ್ಲಿ ಸುಮ ಕೊಟ್ಟಳು. ತನ್ನ ಕಿವಿಗೆ ಆ ಫೋನ್ ಹಿಡಿದುಕೊಂಡು ಕಾವೇರಿ

*" ಹಲೋ, ಹೇಗಿದ್ದೀರಿ?"*

*" ಚೆನ್ನಾಗಿದ್ದೇನೆ. ನೀವು ಹೇಗೆ ಇದ್ದೀರಿ? ಸುಮಾ ಅವರಿಗಿಂತ ನೀವು ದೊಡ್ಡವರು ಇರಬೇಕು ಅಂತ ಅಂದುಕೊಳ್ಳುತ್ತೀನಿ"*

*" ಹೌದು, ಅವಳು ನನ್ನ ತಂಗಿ. ಅವಳಿಗೆ ತಾಯಿ, ಅಕ್ಕ ಎಲ್ಲವೂ ನಾನೇ. ನಿಮ್ಮನ್ನು ಒಂದು ಮಾತು ಕೇಳಬೇಕಾಗಿದೆ"*

*" ಏನೇ ಮಾತಿದ್ದರೂ ನಿಸ್ಸಂಕೋಚವಾಗಿ ಕೇಳಿ ಪರವಾಯಿಲ್ಲ."*

*" ಥ್ಯಾಂಕ್ಸ್, ನನ್ನದೊಂದು ಪ್ರಶ್ನೆ. ಸುಮಾ ನಿಮಗಿಂತ ವಯಸ್ಸಿನಲ್ಲಿ ದೊಡ್ಡವಳು. ವಿಧವೆ ಕೂಡ. ಈ ವಿಷಯ ನಿಮಗೆ ಗೊತ್ತಿದೆಯೇ?"*

*" ಗೊತ್ತು ಹೇಳಿದ್ದಾರೆ"*

*" ನೀವು ವಯಸ್ಸಿನಲ್ಲಿ ಅವಳಿಗಿಂತ ಚಿಕ್ಕವರು. ಇದು ಸಹ ನಿಮಗೆ ಗೊತ್ತೇ?"*

*" ಗೊತ್ತು"*

*" ಹಾಗಿದ್ದರೂ ವಯಸ್ಸಿನಲ್ಲಿ ದೊಡ್ಡವಳಾದ ಸುಮಾಳನ್ನು, ನೀವು ಯಾಕೆ ಇಷ್ಟಪಡುತ್ತೀರಿ ಅಂತ ನಾನು ಕೇಳಬಹುದೇ?"*

*" ಮನಸ್ಸು, ಯಾವಾಗ ಯಾರಿಗೆ ಸೋಲುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಇದು ಮೊದಲನೆಯ ಮಾತು. ನಾನು ಮೊದಮೊದಲು ಅವರನ್ನು, ಒಬ್ಬ ಸ್ನೇಹಿತೆಯನ್ನಾಗಿ ತಿಳಿದುಕೊಂಡು ಮಾತನಾಡುತ್ತಿದ್ದೆ. ಆದರೆ ನನ್ನ ಹೃದಯ ಮಾತ್ರ ಅವರ ಕಡೆಗೆ ಯಾವಾಗ ಮತ್ತು ಯಾಕೆ ಹೋಯಿತು ಅಂತ, ಇಲ್ಲಿಯವರೆಗೆ ನಾನು ನನ್ನನ್ನು ಪ್ರಶ್ನೆ ಕೇಳಿಕೊಂಡರು ಅದಕ್ಕೆ ಉತ್ತರ ಸಿಕ್ಕಿಲ್ಲ. ಬಹುಶಃ ನನ್ನ ಪ್ರಕಾರ, ಇದಕ್ಕೆ ಪ್ರೀತಿ ಎಂದು ಕರೆಯಬಹುದು ಅಂತ ಕಾಣುತ್ತೆ"*

 ಎಂದು ತನ್ನ ಉತ್ತರವನ್ನು ಒಂದು ರೀತಿಯ ವ್ಯಾಖ್ಯಾನದಲ್ಲಿ ನೀಡಿದಾಗ, ಅವನ ಉತ್ತರದಲ್ಲಿರುವ ದೃಢತೆಯನ್ನು ಕಂಡ ಕಾವೇರಿಗೆ, ಅವನ ಮಾತಿನಲ್ಲಿ ಇರುವ ನಿಜಾಂಶ ಕಂಡುಬಂದಿತು. ಆದರೂ ಅವಳು ಮುಂದುವರೆದು,

*" ನಿಮ್ಮಿಬ್ಬರ ಈ ವಿಚಾರ, ನಿಮ್ಮ ಮನೆಯಲ್ಲಿ ಗೊತ್ತಿದೆಯಾ?"*

*" ನನ್ನ ವಿಚಾರ ಏನಿದ್ದರೂ ನನ್ನ ವೈಯಕ್ತಿಕವಾಗಿದ್ದು ಇರುತ್ತದೆ. ನನ್ನ ನಿರ್ಧಾರಕ್ಕೆ ನನ್ನ ಮನೆಯವರು ತಲೆ ಹಾಕುವುದಿಲ್ಲ. ಅವರು ಯಾವತ್ತಿದ್ದರೂ ನನ್ನ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ಸಂಶಯ ಬೇಡ"*

*" ಅಂದರೆ ಇಲ್ಲಿಯವರೆಗೆ ನೀವು ಈ ವಿಷಯವನ್ನು ನಿಮ್ಮ ಮನೆಯವರಿಗೆ ತಿಳಿಸಿಲ್ಲ"*

*" ತಿಳಿಸುವ ಅವಶ್ಯಕತೆ ಇಲ್ಲ ಅಂತ ಅಂದುಕೊಳ್ಳುತ್ತೇನೆ"*

*" ಅವಳಿಗೆ ಎಷ್ಟು ಆಸ್ತಿ ಇದೆ ಅಂತ ನಿಮಗೆ ಏನಾದರೂ ಗೊತ್ತಿದೆಯೇ"*

*" ನನಗೆ ಅವರ ಆಸ್ತಿ ಬೇಕಾಗಿಲ್ಲ. ವೇಳೆ ಇದ್ದರೂ ಸಹ, ಅದು ನನಗೆ ಸಂಬಂಧಪಟ್ಟಿರುವ ವಿಷಯವಲ್ಲ. ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ"*

*" ಅವಳು ನೋಡಲು ಹೇಗಿದ್ದಾಳೆ ಅಂತ ನಿಮಗೆ ಗೊತ್ತಾ?"*

*" ಇಲ್ಲ. ನನ್ನನ್ನು ಅವರು ನೋಡಿಲ್ಲ ಅವರನ್ನು ನಾನು ನೋಡಿಲ್ಲ"*

*" ಅವಳು ನೋಡಲಿಕ್ಕೆ ಕೊಳ್ಳಗೆ ಮತ್ತು ಕಪ್ಪಗಿದ್ದಾಳೆ. ಕರಿ ಮರದ ವಿಗ್ರಹದ ರೀತಿಯಲ್ಲಿರುವ ಅವಳನ್ನು ನೀವು ಹೇಗೆ ಪ್ರೀತಿ ಮಾಡಿದರೆ?"*

 ಎಂದಾಗ ಈ ಮಾತಿಗೆ ನಗುತ್ತಾ ಅಭಿ,

*" ರೂಪದಿಂದ ಪ್ರೇಮಿಸುವತಿದ್ದರೆ, ಜಗತ್ತಿನಲ್ಲಿ ಕುರೂಪಿಗಳು ಎಲ್ಲರೂ ಮದುವೆಯಾಗದೆ ಪ್ರೀತಿ ಮಾಡದೆ ಹಾಗೆ ಇರುತ್ತಿದ್ದರು. ಕೇವಲ ರೂಪವಂತರು ಮಾತ್ರ ಜೀವನದಲ್ಲಿ ಮುಂದೆ ಹೋಗುತ್ತಿದ್ದರು. ನಾನು ಮಾತ್ರ, ನೋಡಿದ್ದು ಹೃದಯವನ್ನು ಮತ್ತು ಹೃದಯದ ಬಡಿತವನ್ನು ಮಾತ್ರ. ಹೃದಯದ ಮಾತುಗಳು ಮತ್ತು ಬಡಿತ, ಅವರ ರೂಪವನ್ನು ಒಂದು ರೀತಿಯಲ್ಲಿ ನನ್ನ ಕಣ್ಣಮುಂದೆ ಬಂದು ನಿಲ್ಲಿಸಿದೆ. ನಾನು ಕಲ್ಪನೆಯಲ್ಲಿ ಅವರ ಮಾತಿನ ಪ್ರಕಾರ ಮತ್ತು ಹೃದಯದ ಬಡಿತದ ಪ್ರಕಾರ ಹೀಗೆ ಇರಬಹುದು ಅಂತ ಅಂದುಕೊಂಡಿರುವೆ. ಅದೇ ಕಾರಣಕ್ಕೆ ನಾನು ಅವರನ್ನು, ಅವರ ಫೋಟೋ ಕಳುಹಿಸಲು ಹೇಳಿರುವುದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ ಅನ್ನಿಸುವ ಕಾರಣ ಈ ವಿಷಯದ ಉತ್ತರ ಇಷ್ಟಕ್ಕೆ ಮಾತ್ರ ಸೀಮಿತ ಅಂತ ಹೇಳಲು ಬಯಸುತ್ತೇನೆ. ಆದರೆ ಒಂದು ಮಾತು, ಅವರು ರೂಪದಲ್ಲಿ ಹೇಗೆ ಇರಲಿ. ಕಪ್ಪಗಿರಲಿ, ಕುಳ್ಳಗಿರಲಿ, ಕುರೂಪಿಯಾಗಿದ್ದರೂ ಸರಿ, ಹೃದಯ ಮಾತ್ರ ತುಂಬಾ ಸುಂದರವಾಗಿದೆ. ಅಷ್ಟು ಮಾತ್ರ ನನಗೆ ಸಾಕು"*

*" ಈಗೇನು ಸರಿ ಮುಂದೆ ನಿಮ್ಮ ಮನಸ್ಸು ಇದೇ ರೀತಿಯಾಗಿ ಇರುತ್ತದೆ ಎಂದು ಹೇಗೆ ಭಾವಿಸಬೇಕು?"*

*"ಮುಂದಾಗುವ ಎಲ್ಲ ವಿಷಯಗಳನ್ನು ಇಂದೇ ಹೇಳಲಿಕ್ಕೆ ಬರುವುದಿಲ್ಲ. ನಂಬಿಕೆ ಇದ್ದರೆ, ನಂಬಿಕೆ ಜೊತೆಗೆ ಪ್ರೀತಿ ಇದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ ಅಂತ ನಾನು ಅಂದುಕೊಂಡಿದ್ದೇನೆ"*

*" ಅಕಸ್ಮಾತ್ ಬಂದರೆ? ಅದು ಇಬ್ಬರೊಳಗೆ ಒಬ್ಬರಿಂದ ಬರಬಹುದು, ಇಲ್ಲ ಮೂರನೇಯವರಿಂದಲೂ ಬರುವಂತ ಅವಕಾಶವಿದೆ ಹಾಗಂದುಕೊಂಡು ಕೇಳಿದರೆ ನೀವೇನು ಹೇಳುವಿರಿ?"*

*" ಒಬ್ಬರಿಗೊಬ್ಬರ ಮನಸ್ಸು ಬೆರೆತು ಕೊಂಡಾಗ, ಯಾವುದೇ ರೀತಿಯಿಂದ ಅಂತಹ ಅನಾಹುತವಾಗುವುದಿಲ್ಲ ಎಂದು ನಾನು ಭಾವಿಸಿಕೊಂಡಿರುವೆ. ಇಲ್ಲಿಯವರೆಗೆ ನನ್ನ ಜೀವನದಲ್ಲಿ, ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಸಹ, ಯಾವುದೇ ವಿಷಯದಲ್ಲಿ ಮುಂದುವರೆದಿದ್ದರೂ ಸಹ, ಅದಕ್ಕೆ ಎಷ್ಟೇ ಪ್ರತಿರೋಧ ಬಂದಿದ್ದರೂ ಸಹ, ನಾನು ಮಾತ್ರ ನನ್ನ ನಿರ್ಧಾರದಿಂದ ಹೆಜ್ಜೆ ಹಿಂದೆ ಇಟ್ಟಿರುವ ಮಾತೇ ಇಲ್ಲ. ಆದ್ದರಿಂದ, ಈ ವಿಷಯದಲ್ಲಿಯೂ ಸಹ ನನ್ನ ಅಭಿಪ್ರಾಯ ಅದೇ ರೀತಿಯಾಗಿ ಇರುತ್ತದೆ. ಅದರಲ್ಲಿ ಎರಡನೆಯ ಮಾತಿಲ್ಲ"*

 ಎಂದು ಅಭಿ ಗಟ್ಟಿತನದಿಂದ ತನ್ನ ನಿರ್ಧಾರವನ್ನು ಮಾತಿನಲ್ಲಿ ಹೇಳಿದಾಗ, ಅದನ್ನು ಕೇಳಿದ ಕಾವೇರಿ ಮುಂದೇನು ಮಾತನಾಡಬೇಕು ಎಂದು ತಿಳಿಯದೆ ಸುಮ್ಮನಾದಳು. ಆದರೆ ಅವಳಿಗೆ ಅವನ ಮಾತಿನ ವರಸೆ ತುಂಬಾ ಮೋಡಿ ಮಾಡಿತ್ತು. ಅದನ್ನು ಕಂಡುಕೊಂಡವಳು, ಸುಮಾ ಸರಿಯಾದ ವ್ಯಕ್ತಿಯನ್ನು ನೆಚ್ಚಿಕೊಂಡಿರುವುದು ಎಂದು ಅಂದುಕೊಂಡಳು. ಆದರೆ ಬಾಯಿಬಿಟ್ಟು ಮಾತ್ರ ಹೇಳಲಿಲ್ಲ. ಏಕೆಂದರೆ ಅವಳಿಗೆ ಇನ್ನೂ ತೃಪ್ತಿ ಆಗಿರಲಿಲ್ಲ. ಆದರೂ ಅವಳು ಅಭಿಯನ್ನು ಬಿಡಬಾರದು ಇನ್ನೊಂದು ಸ್ವಲ್ಪ ಕೇಳಬೇಕು ಎಂದುಕೊಂಡೆ

*" ನೀವು ಈ ರೀತಿಯಾಗಿ ಮಾತನಾಡುವುದಕ್ಕಿಂತ, ನಿಮ್ಮ ಫೋನ್ ನಂಬರ್ ಕೊಟ್ಟರೆ ನೇರವಾಗಿ ಫೋನ್ ಹಚ್ಚಿ ಮಾತನಾಡಬಹುದಲ್ಲ"*

 ಎಂದಾಗ ಈ ಮಾತಿಗೆ ಅಭಿ ನಗುತ್ತಾ,

*" ನನ್ನದೇನು ಅಭ್ಯಂತರವಿಲ್ಲ. ಇಲ್ಲಿಯವರೆಗೆ ನಮ್ಮಿಬ್ಬರ ಒಳಗೆ ಫೋನ್ ನಂಬರ್ ಬದಲಾವಣೆ ಮಾಡಿಕೊಂಡು ಅದರ ಮುಖಾಂತರವಾಗಿ ಮಾತನಾಡಬೇಕೆಂದು ನನಗೂ ಅನ್ನಿಸಿರಲಿಲ್ಲಾ ಮತ್ತು ಅವರಿಗೂ ಅನ್ನಿಸಿಲ್ಲ. ಅವರು ನನ್ನನ್ನು ನಂಬರ್ ಕೇಳಿಲ್ಲ ಮತ್ತು ನಾನು ಅವರನ್ನು ಕೇಳಿಲ್ಲ. ನಿಜ ಹೇಳಬೇಕೆಂದರೆ ನೀವು ಹೇಳುವವರಿಗೆ ಅದರ ಬಗ್ಗೆ ನಾನು ಯೋಚನೆ ಮಾಡಿರಲಿಲ್ಲ. ನೋಡೋಣ, ಅವಶ್ಯಕತೆ ಅನ್ನಿಸಿದರೆ ಮಾತ್ರ ಯಾರಿಗೆ ಅವಶ್ಯಕತೆ ಅನ್ನಿಸುತ್ತದೆಯೋ ಅವರು ಕೇಳಿದರಾಯಿತು ಅಂತ ಅಂದುಕೊಂಡಿದ್ದೇನೆ"*

*" ಅಂದರೆ ನೀವು ನಿಮ್ಮ ಫೋನ್ ನಂಬರ್ ಕೊಡುವುದಿಲ್ಲ ಎಂದ ಹಾಗಾಯಿತು"*

*" ಹಾಗೇನಿಲ್ಲ, ನೀವು ಕೇಳುತ್ತಿರುವಿರಿ ಬೇಕಾದರೆ ನಿಮಗೆ ಕೊಡುತ್ತೇನೆ. ಆದರೆ ನೀವು ನನಗೊಂದು ಪ್ರಾಮಿಸ್ ಮಾಡಬೇಕು. ನನ್ನ ನಂಬರ್ ನಿಮಗೆ ಹೇಳಿದರೂ ಸಹ, ನೀವು ಸುಮಾ ಅವರಿಗೆ ನಂಬರ್ ಹೇಳಬಾರದು. ಅವರಾಗಿ ನನ್ನನ್ನು ನಂಬರ್ ಕೇಳಿದಾಗ ಮಾತ್ರ ನಾನು ಅವರಿಗೆ ನನ್ನ ನಂಬರ್ ಕೊಡುತ್ತೇನೆ. ಅದಕ್ಕೆ ನಿಮಗೆ ಬೇಕಾದರೆ ಕೊಡುತ್ತೇನೆ. ನೀವು ಅವರಿಗೆ ತಿಳಿಸುವುದಿಲ್ಲವೆಂದು ನಿಮ್ಮ ಮನಸಾಕ್ಷಿಯಾಗಿ ಪ್ರಾಮಿಸ್ ಮಾಡಬೇಕು. ನಮ್ಮಿಬ್ಬರ ನಡುವೆ ಏನೇ ಆದರೂ ಸಹ ನಮ್ಮಿಬ್ಬರ ಅಂಡರ್ಸ್ಟ್ಯಾಂಡಿಂಗ್ ಮೇಲೆಯೇ ಆಗಿರುತ್ತದೆ ಅಂತ ಮಾತ್ರ ತಿಳಿದುಕೊಳ್ಳಿ. ನನ್ನ ಮೇಲೆ ನಂಬಿಕೆ ಇಡಿ. ಒಂದು ಮಾತ್ರ ಸತ್ಯ, ಒಂದು ವೇಳೆ ನೀವು ನನ್ನನ್ನು ನಂಬಿದಲ್ಲಿ ನನ್ನಿಂದ ಮಾತ್ರ ಯಾವುದೇ ನಂಬಿಕೆದ್ರೋಹವಾಗುವುದಿಲ್ಲವೆಂಬ ಗ್ಯಾರೆಂಟಿ ನಾನು ಕೊಡುತ್ತೇನೆ. ನನ್ನಿಂದ ಅನ್ಯಾಯವು ಸಹ ಆಗುವುದಿಲ್ಲ. ಇಷ್ಟು ಮಾತ್ರ ನಾನು ಹೇಳಬಲ್ಲೆ. ನನ್ನ ಮಾತನ್ನು ನೀವು, ಮನಸ್ಸಿನಿಂದ ಯೋಚನೆ ಮಾಡಿದರೆ ಗೊತ್ತಾಗುತ್ತದೆ"*

 ಎಂದು ಹೇಳಿ ತನ್ನ ಮಾತನ್ನು ಮುಗಿಸಿದಾಗ, ಅದನ್ನು ಕೇಳಿದ ಕಾವೇರಿ, ಹುಡುಗ ಚುರುಕಾಗಿದ್ದಾನೇ ಅಂತ ಅಂದುಕೊಂಡಳು. ಸುಮಾ ಒಳ್ಳೆಯ ಹುಡುಗನನ್ನು ಆರಿಸಿಕೊಂಡಿದ್ದಾಳೆ. ಆದರೆ ಈ ವಿಷಯದ ಬಗ್ಗೆ ಇನ್ನೂ ನಾನು ಸ್ವಲ್ಪ ಯೋಚನೆ ಮಾಡುವುದು ಒಳಿತು ಎಂದು ಅಂದುಕೊಂಡು ತನ್ನ ಮಾತನ್ನು ಅಲ್ಲಿಗೆ ಮುಗಿಸಿ, ಫೋನ್ ಸುಮಾಳ ಕೈಯಲ್ಲಿ ಕೊಟ್ಟಳು. ಅವರಿಬ್ಬರ ಮಾತು ಪ್ರಾರಂಭವಾದ ಮೇಲೆ, ಅವರಿಬ್ಬರ ನಡುವೆ ತಾನು ಶಿವಪೂಜೆಯಲ್ಲಿ ಕರಡಿ ಆಗುವುದು ಬೇಡವೆಂದುಕೊಂಡು, ಬಾಲ್ಕನಿಗೆ ಹೋಗಿ, ತಂಪಾದ ಗಾಳಿಯನ್ನು ಹಿತವಾಗಿ ಅನುಭವಿಸುತ್ತ ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತುಕೊಂಡು, ಸುಮಾ ಮತ್ತು ಅಭಿ ಇಬ್ಬರ ಬಗ್ಗೆ ಯೋಚನೆ ಮಾಡತೊಡಗಿದಳು.


20


      ಇದೆಂಥ ಸಂಬಂಧ. ಹೆಚ್ಚಾಗಿ, ಹುಡುಗ ವಯಸ್ಸಿನಲ್ಲಿ ದೊಡ್ಡವನಾಗಿರುತ್ತಾನೆ ಮತ್ತು ಹುಡುಗಿ ಚಿಕ್ಕವಳು ಆಗಿರುತ್ತಾಳೆ. ಪ್ರಪಂಚದಲ್ಲಿ ಈ ತೆರನಾದ ಪ್ರೇಮಗಳು ಕಾಣಸಿಗುತ್ತವೆ. ಇನ್ನೊಂದು ತೆರನಾಗಿ ನೋಡಿದರೆ ಎಲ್ಲೋ, ಪ್ರೇಮಿಗಳ ಪೈಕಿ ಹುಡುಗಿ ಸ್ವಲ್ಪ ದೊಡ್ಡ ವಯಸ್ಸಿನವಳು ಮತ್ತು ಹುಡುಗ ಸ್ವಲ್ಪ ಚಿಕ್ಕ ವಯಸ್ಸಿನವನು ಇರುತ್ತಾರೆ. ಆದರೆ, ಇವರಿಬ್ಬರ ವಿಷಯ ಸ್ವಲ್ಪ ಭಿನ್ನವಾಗಿದೆ. ಸುಮಾ ಒಬ್ಬ ವಿಧವೆ, ಜೊತೆಗೆ ತುಂಬಾ ಜಾಣೆ. ಕೆಲವು ವರ್ಷ ಗಂಡನ ಜೊತೆಗೆ ಸಂಸಾರ ಮಾಡಿದವಳು. ಅವಳಿಗೆ ತನ್ನದೇ ಆದಂಥ ಜವಾಬ್ದಾರಿ, ಜೊತೆಗೆ ಲೆಕ್ಚರರ್ ಕೆಲಸ ಮಾಡುತ್ತಿರುವ ಕಾರಣ ಅವಳ ಮೇಲೆ ಸಾಮಾಜಿಕ ಜವಾಬ್ದಾರಿ ಸಹ ಇದೆ. ಅಲ್ಲದೆ ವಯಸ್ಸು 40.

       ಅವಳನ್ನು ಪ್ರೀತಿಸುತ್ತಿರುವ ಹುಡುಗನ ವಯಸ್ಸು 25. ಇಬ್ಬರ ನಡುವೆ 12 ವರ್ಷ ವ್ಯತ್ಯಾಸವಿದೆ. ನೋಡಿದರೆ ಹುಡುಗ ವಯಸ್ಸಿನಲ್ಲಿ ಚಿಕ್ಕವನು. ಆದರೆ, ಆತನ ಮಾತುಗಳನ್ನು ಗಮನಿಸಿದಾಗ ಅವನ ಮಾತುಗಳಲ್ಲಿ ಮೆಚುರಿಟಿ ಕಂಡುಬಂದರು, ತನ್ನ ಹೃದಯದಿಂದ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇನ್ನೊಂದು ರೀತಿಯಲ್ಲಿ ನೋಡಿದಾಗ, ಅವನಿಗೆ ಮದುವೆಯಾಗಿಲ್ಲ, ಸಂಸಾರದ ಅನುಭವವಿಲ್ಲ, ಇಂಥ ವ್ಯಕ್ತಿ ಸುಮಾಳ ಜೊತೆಗೆ ಹೋಲಿಸಿ ನೋಡಿದಾಗ, ಕಾವೇರಿಗೆ ಅರ್ಥವಾಗಿದ್ದು ಒಂದೇ ಮಾತು. ಅವರಿಬ್ಬರ ನಡುವೆಯಾದ ಪ್ರೀತಿ. ನಿಜ, ದೊಡ್ಡವರು ಹೇಳಿದಂತೆ ಲವ್ ಇಸ್ ಬ್ಲೈಂಡ್. ಪ್ರೀತಿ ಕುರುಡು. ವಯಸ್ಸಿನ ನಿರ್ಬಂಧತೆ ಇಲ್ಲ. ಜಾತಿ, ಅಂತಸ್ತು, ಯಾವುದು ಅದರಲ್ಲಿ ಬರುವುದಿಲ್ಲ. ಬರುವುದು ಎಂದರೆ ಒಂದು ಗಂಡು ಮತ್ತು ಹೆಣ್ಣು ಅವರಿಬ್ಬರ ನಡುವಿನ ಪ್ರೀತಿ, ಆಕರ್ಷಣೆ, ಒಲವು ಮಾತ್ರ. ಪ್ರೀತಿಯ ರೀತಿಯಲ್ಲಿ ಇವರಿಬ್ಬರ ವಿಷಯವನ್ನು ಮನಸ್ಸಿನಿಂದ ಯೋಚನೆ ಮಾಡಿದರೆ, ಅವರಿಬ್ಬರ ಪ್ರೀತಿ ಮಧುರವಾಗಿರುವುದು ಅಂತ ಮಾತ್ರ ತಿಳಿದುಬರುತ್ತದೆ. ಆದರೆ, ಇದೇ ಪ್ರೀತಿಯನ್ನು ಸಮಾಜದ ದೃಷ್ಟಿಯಿಂದ ನೋಡಬೇಕಾದರೆ, ಸಮಾಜ ಇಂಥ ಪ್ರೀತಿಗೆ ಮಾನ್ಯತೆ ನೀಡುವುದೇ ಎಂಬ ದೊಡ್ಡ ಪ್ರಶ್ನೆ ಎದುರಾಗುತ್ತದೆ.

      ಜೀವನ ನಮ್ಮದು. ನಮಗೆ ಬೇಕಾದ ರೀತಿಯಲ್ಲಿ ಜೀವನ ಮಾಡುವ ಹಕ್ಕು ನಮಗಿದೆ. ನಮ್ಮ ಜೀವನಕ್ಕೆ ನಾವೇ ಅಧಿಪತಿಗಳು. ಅದು ನಮ್ಮ ವೈಯಕ್ತಿಕ ವಿಚಾರ. ಸಮಾಜವು ಕಟ್ಟಡಗಳನ್ನು ವಿಧಿಸಿದರೂ ಸಹ, ಕೆಲವು ವಿಚಾರಗಳಲ್ಲಿ ಹಳೆಯ ಸಂಪ್ರದಾಯಗಳು ಇಂದು ನಡೆಯುವುದಿಲ್ಲ. ತೀವ್ರಗತಿಯಾಗಿ ಚಲಿಸುತ್ತಿರುವ ಇಂದಿನ ದಿನಗಳಲ್ಲಿ, ಇಂಥ ಸಂಪ್ರದಾಯಗಳು ಹೇಳಲಿಕ್ಕೆ ಮಾತ್ರ ಚೆಂದವಿದ್ದರೂ ಸಹ, ಆಚರಣೆಯಲ್ಲಿ ಮಾತ್ರ ಅಸಾಧ್ಯದ ಮಾತು. ನಮ್ಮ ಜೀವನ ನಮ್ಮದು. ಒಳ್ಳೆಯ ರೀತಿಯಾಗಿ ಬದುಕಬೇಕಾಗಿರುವುದು ಮಾತ್ರ ನಮ್ಮ ಧ್ಯೇಯ. ಅವರಿಬ್ಬರೂ ಚೆನ್ನಾಗಿ ಜೀವನ ಮಾಡಿಕೊಂಡು ಹೋದಲ್ಲಿ, ಸಮಾಜ ಅವರಿಬ್ಬರ ವಿಷಯದಲ್ಲಿ ಮೂಗು ತೂರಿಸುವ ಪ್ರಶ್ನೆ ಬರುವುದಿಲ್ಲ. ಅವರಿಬ್ಬರೂ ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಂತಲ್ಲಿ, ಯಾವ ಸಮಾಜವನ್ನು ಸಹ ಎದುರಿಸುವ ಧೈರ್ಯ ಬಂದೇ ಬರುತ್ತದೆ. ಎಷ್ಟು ಪ್ರೇಮಕಥೆಗಳು, ಪ್ರೀತಿಯ ವಿರುದ್ಧ ನಿಂತು ಸಮಾಜವು, ಎಷ್ಟು ಬಾರಿ ಪ್ರೀತಿಗೆ ಶರಣಾಗಿದ್ದು ಉದಾಹರಣೆ ಸಾಕಷ್ಟಿವೆ. ಅದೇ ರೀತಿ ಪ್ರೀತಿ ಸಮಾಜದ ಕೈಯಲ್ಲಿ ಸಿಕ್ಕು ಒದ್ದಾಡಿ ಸತ್ತು ಹೋದ ಪ್ರಕರಣಗಳು ಸಹ ಸಾಕಷ್ಟಿವೆ. ತುಲನೆ ಮಾಡಿ ನೋಡುವ ಅವಶ್ಯಕತೆ ಇಲ್ಲ. ಇಂದಿನ ದಿನಗಳಲ್ಲಿ ಸಮಾಜಕ್ಕೆ, ಸಮಾಜದ ಜನರಿಗೆ ತಮ್ಮ ಕೆಲಸವೇ ತಮಗೆ ಅಧಿಕವಾದ ಹೊತ್ತಿನಲ್ಲಿ, ಇವರ ಕಡೆಗೆ ಲಕ್ಷ್ಯ ಕೊಡುವ ಸಮಯವಾದರೂ ಎಲ್ಲಿರುತ್ತದೆ. ಏನೇ ಆದರೂ, ಸುಮಾ ಮಾತ್ರ ತುಂಬಾ ಒಳ್ಳೆಯ ಹೆಣ್ಣುಮಗಳು. ಅವಳಿಗೆ ಮಾತ್ರ ಪ್ರೀತಿ ಸಿಗಬೇಕು. ಸುಮಾ ಒಂದು ರೀತಿಯಲ್ಲಿ ಮೇಣ ಇದ್ದಹಾಗೆ. ತುಂಬಾ ಮೃದು. ಜೀವನದಲ್ಲಿ ಸಾಕಷ್ಟು ನೋವುಗಳನ್ನು ಉಂಡವಳು. ಯಾರು ಇಲ್ಲದ ಅವಳಿಗೆ, ಈ ವ್ಯಕ್ತಿಯಾದರೂ ಅಸಲಿ ಯಾದರೆ ಅವಳ ಜೀವನಕ್ಕೊಂದು ಅರ್ಥ ಬರುತ್ತದೆ. ಅಲ್ಲದೆ ಹಿಂದಿನ ದಿನಗಳು ತುಂಬಾ ಕಷ್ಟಕರವಾಗಿವೆ. ಒಬ್ಬಂಟಿ ಹೆಣ್ಣು ಮಗಳು ಜೀವನ ನಡೆಸುವುದು ಸಹ ದುಸ್ತರವಾದ ಸಂದರ್ಭದಲ್ಲಿ, ಒಂಟಿ ಹೆಣ್ಣು ಮಗಳ ಮೇಲೆ, ಎಲ್ಲರ ಕಣ್ಣು ಇರುತ್ತದೆ. ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣ. ಏನೇ ಆದರೂ ಆ ಹುಡುಗ ಒಳ್ಳೆಯವನು ಅಂತ ಅನ್ನಿಸತೊಡಗಿದೆ. ನೇರ ಮಾತುಗಾರ. ಚಾಣಾಕ್ಷ. ಅವನು ಸುಮಾಳ ಜೊತೆಗೆ ಹೊಂದಿಕೊಂಡು ಹೋಗುತ್ತಾರೆಂಬ ಭರವಸೆ ಕಾವೇರಿಗೆ ಬರತೊಡಗಿತ್ತು. ಏನೇ ಆದರೂ ಸುಮಾಳಿಗೆ ಮಾತ್ರ ಒಳ್ಳೆಯದಾಗಲಿ ಎಂದು ಮನದಲ್ಲಿ ದೇವರಿಗೆ ಪ್ರಾರ್ಥಿಸಿ, ಅವಳಿಗೆ ಧೈರ್ಯ ಹೇಳಿ ಅವಳ ಪ್ರೀತಿಗೆ ಹಸಿರು ನಿಶಾನೆಯನ್ನು ತೋರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಕಾವೇರಿ ಬಂದಳು.

     ನಾನು ಇಷ್ಟೆಲ್ಲ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಮೇಲೆ, ಅವಳ ಮನಸ್ಸಿಗೆ ಒಂದು ತೆರನಾದ ಸಮಾಧಾನವಾಗಿತ್ತು. ಎಷ್ಟು ಹೊತ್ತಿನವರೆಗೆ ಯೋಚನೆಗಳಿಂದ ಬೋರ್ಗರೆದ ಅವಳ ಮನದ ಸಮುದ್ರ, ಈ ತೀರ್ಮಾನದಿಂದ ಮಾತ್ರ ಶಾಂತವಾಗಿ ಸಂತೋಷಭರಿತವಾದ ಹಿತವಾದ ತೆರೆಗಳು ಅವಳ ಮನದ ಸಮುದ್ರದಲ್ಲಿ ಬಂದಿದ್ದವು. ಹಾಗೆ ಕುಳಿತಲ್ಲಿಯೇ ಅವಳು, ಬೆಡ್ರೂಮಿನ ಒಳಗೆ ನೋಡಿದಾಗ, ಸುಮಾ ರಿಸಿಯ ಜೊತೆಗೆ ಏನು ಮಾತನಾಡುತ್ತಾ ನಗುತ್ತಿದ್ದಳು. ಅವಳ ನಗುವಿನಲ್ಲಿ, ಮುಖದಲ್ಲಿ, ಅವಳ ಪ್ರೇಮ ಮಾತ್ರ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಅದರಿಂದ ಅವಳು ತುಂಬಾ ಆನಂದದಿಂದ ಇದ್ದಾಳೆ ಎಂದು ಕಾವೇರಿಗೆ ಸ್ಪಷ್ಟವಾಗಿ ಗೊತ್ತಾಗಿತ್ತು. ಜೀವನಪರ್ಯಂತ ಸುಮಾ ಇದೇ ರೀತಿಯಾಗಿ ಪ್ರೀತಿಯನ್ನು ಅನುಭವಿಸುತ್ತ ಚೆನ್ನಾಗಿ ನಗುನಗುತ್ತಾ ಇರಲಿ ಎಂದು ಮನಸಾರೆ ಮನದಲ್ಲಿ ಹಾರೈಸಿದಳು. ಅವಳ ಮಾತು ಮುಗಿದ ಮೇಲೆ ತನ್ನ ನಿರ್ಧಾರ ಅವಳಿಗೆ ತಿಳಿಸಿ, ಧೈರ್ಯವಾಗಿ ಇವರು ಹೇಳಿದರಾಯಿತು ಎಂದು ಕೊಂಡಳು. ಕಾವೇರಿ ಹಾಗೆ ಸುಮಾಳನ್ನು ನೋಡುತ್ತ ಕುಳಿತಿರುವಾಗ, ಪಕ್ಕದ ಮನೆಯಿಂದ ಹಾಡು ಕೇಳಿಸತೊಡಗಿತು.

*" ಬಂಧನ್ ತೂತೆ ನ ಸಾರಿ ಜಿಂದಗಿ

 ಚಾರ್ ದಿನ್ ಕಿ ಜಿಂದಗಿ

 ಪ್ಯಾರ್ ಕಿಯೇ ಬಿನ್

 ಹಮ್ಮಿ ನಹಿ ಜೀನ*"

 ನಾಲ್ಕು ದಿನದ ಜೀವನದಲ್ಲಿ ಪ್ರೀತಿ ಇಲ್ಲದೆ ಬದುಕುವುದಕ್ಕೆ ನಮಗೆ ಸಾಧ್ಯವಿಲ್ಲ ಎಂದು ಆ ಹಾಡು ಅರ್ಥ ಕೊಡುತ್ತಿತ್ತು. ಆ ಹಾಡು, ಸುಮ ಮತ್ತು ಅಭಿ, ಅವರಿಗೂ ಈಗ ತಾನು ಕಾಣುತ್ತಿರುವ ಪ್ರಸಂಗಕ್ಕೆ ಅನ್ವಯವಾಗುತ್ತದೆ ಎಂದು, ಕಾವೇರಿ ಕಂಡುಕೊಂಡಳು. ಅದರಂತೆ ಆ ಭಾವನೆ ಬರುವ ರೀತಿಯಲ್ಲಿ ಬರೆದ ಕವಿ ಎಷ್ಟು ಚೆನ್ನಾಗಿ ಪ್ರೀತಿಯನ್ನು ಅರಿತುಕೊಂಡು ಬರೆದಿರಬಹುದು ಎಂದು ಯೋಚನೆ ಮಾಡುತ್ತ ಕುಳಿತಾಗ, ಸುಮಾ ತನ್ನ ಮಾತನ್ನು ಮುಗಿಸಿ, ಕಾವೇರಿ ಹತ್ತಿರ ಬಂದು ಮಾತನಾಡಿಸತೊಡಗಿದಳು.

*" ಏನು ಕಾವೇರಿ, ಏನೂ ಮಾತನಾಡದೆ ಸುಮ್ಮನೆ ಕುಳಿತುಕೊಂಡೇ ಅಲ್ಲ"*

 ಒಂದು ಕ್ಷಣ ಕಾವೇರಿ ಸುಮಾಳ ಮುಖವನ್ನು ನೋಡಿದಳು. ಅವಳ ಮುಖದಲ್ಲಿ ಸಾಯಂಕಾಲದವರೆಗೆ ದಣಿವೆಲ್ಲಾ ಹಾರಿಹೋಗಿತ್ತು. ಅಲ್ಲಿ ಒಂದು ಉಲ್ಲಾಸವಾದ, ಮತ್ತು ಪ್ರೇಮಮಾಯವಾದ ಕಿರಣ ಅವಳ ಮುಖದಲ್ಲಿ ಕಂಡುಬರುತ್ತಿತ್ತು. ಅದನ್ನೇ ನೋಡುತ್ತಾ, ಸಮಾಧಾನವಾಗಿ ಕಾವೇರಿ,

*" ಸುಮಾ, ಒಂದು ಮಾತು ಹೇಳುತ್ತೇನೆ. ನೀನು ಆಯ್ಕೆಮಾಡಿಕೊಂಡ ಹುಡುಗ ಮಾತ್ರ ಅಪ್ಪಟ ಚಿನ್ನ. ಹೃದಯವೆಂದರೆ ಗೊತ್ತು, ನಿರ್ಧಾರ ಮಾತ್ರ ಅಚಲ. ನಿರ್ದಿಷ್ಟವಾದ ಹೊಣೆಗಾರಿಕೆ ನಿಭಾಯಿಸುವುದು ಅವನಿಂದ ಆಗುತ್ತದೆ ಎಂದು ಅವನ ಮಾತಿನಲ್ಲಿ ಗೊತ್ತಾಗುತ್ತದೆ. ಅಲ್ಲದೆ, ಪ್ರೀತಿಯ ಬೆಲೆ ಆ ಹುಡುಗನಿಗೆ ಈಗಾಗಲೇ ಗೊತ್ತಾಗಿದೆ ಅಂತ ನಾನು ಅಂದುಕೊಂಡಿರುವೆ. ನಾನು ಹೇಳುವುದಿಷ್ಟೇ. ಹುಡುಗ ಒಳ್ಳೆಯವನೇ. ಆದರೆ, ನನಗಿಂತ ನೀನು ಅವನನ್ನು ಚೆನ್ನಾಗಿ ಅರಿತುಕೊಂಡು ನಿರ್ಧಾರಕ್ಕೆ ಬರಬೇಕು. ನಿನ್ನ ನಿರ್ಧಾರ ಯಾವಾಗಲೂ ಸರಿಯಾಗಿರುತ್ತದೆ ಎಂತಲೇ ನಾನು ಈ ಮಾತು ಹೇಳುತ್ತಿದ್ದೇನೆ. ಒಂದು ವೇಳೆ, ನನಗೆ ಹಾಗೇನಾದರೂ ಬೇರೆ ರೀತಿಯಲ್ಲಿ ಅನ್ನಿಸಿದ್ದರೆ, ನಕಾರಾತ್ಮಕವಾಗಿ ನೇರವಾಗಿ ಉತ್ತರ ಕೊಡಬೇಕಾಗಿ ಬರುತ್ತಿತ್ತು. ಆದರೆ, ಈಗ ಅವನ ಜೊತೆಗೆ ಮಾತನಾಡಿದ ವಿಷಯವನ್ನು ನಾನು ಮನಸ್ಸಿನಿಂದ ಯೋಚನೆ ಮಾಡಿದಾಗ, ನಕಾರಾತ್ಮಕ ಪ್ರತಿಕ್ರಿಯೆ ಕೊಡುವುದು ಮಾತ್ರ ನನ್ನಿಂದ ಸಾಧ್ಯವಿಲ್ಲ. ಆದರೆ ಅಂತಿಮ ನಿರ್ಧಾರ ಮಾತ್ರ ತೆಗೆದುಕೊಳ್ಳಬೇಕಾದವಳು ನೀನು."*

 ಎಂದು ಹೇಳಿದಾಗ ಕಾವೇರಿಯ ಮಾತನ್ನು ಕೇಳಿದ ಸುಮ, ಅವಳನ್ನೇ ನೋಡುತ್ತ ಕುಳಿತುಕೊಂಡಳು.



 ಕಾವೇರಿ ತನ್ನ ಮನದಲ್ಲಿರುವ ಮಾತನ್ನು ಸುಮಾಳಿಗೆ ತಿಳಿಸಿ ಅವಳ ಪ್ರೀತಿಗೆ ತನ್ನ ಅಂಕಿತವನ್ನು ತಿಳಿಸಿದ್ದಳು. ಆದರೆ ಕೊನೆಯದಾಗಿ ನಿರ್ಧಾರ ಮಾತ್ರ ಸುಮಾಳಿಗೆ ತೆಗೆದುಕೊಳ್ಳಲು ಬಿಟ್ಟಿದ್ದಳು. ಕಾವೇರಿಯ ಮಾತನ್ನು ಕೇಳಿದ ಸುಮಾ, ಒಂದು ರೀತಿಯಲ್ಲಿ ತನ್ನ ಪ್ರೀತಿಗೆ ಅವಳಿಂದ ಅಂಕಿತ ಸಿಕ್ಕಿದ್ದ ಕಾರಣ ಸಂತೋಷಪಟ್ಟಿದ್ದರು ಸಹ, ಕೊನೆಯ ನಿರ್ಧಾರ ತಾನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಾಗ, ಅದರ ಬಗ್ಗೆ ಯೋಚನೆ ಮಾಡುವುದಕ್ಕೇ ಅವಳ ಮನ ಹೆದರುತ್ತಿದ್ದು.

        ಮೊದಲಿನಿಂದಲೂ ಸುಮಾ, ಅದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ತನ್ನ ತಾಯಿಯ ಮೇಲೆ ಅವಲಂಬಿತರಾಗಿದ್ದಳು. ಮದುವೆಯಾದ ಮೇಲೆ ತನ್ನ ಗಂಡ ಮತ್ತು ಅತ್ತೆಯ ಮೇಲೆ ಅವಲಂಬಿತವಾಗಿದ್ದರೂ, ಆದರೆ ಈಗ ಅವರು ಈಗಇಲ್ಲದ ಕಾರಣ, ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳಬೇಕಾಗಿ ಬಂದಾಗ, ಸ್ವಲ್ಪ ಅಧೀರತೆ ಅವಳಿಗೆ ಉಂಟಾಯಿತು.

       ಒಂದು ಕಡೆ ತನ್ನನ್ನು ಬಯಸಿದ ಒಂದು ಮನಸ್ಸು, ಮತ್ತು ತನಗೂ ಇರುವ ಪ್ರೀತಿಯ ಅವಶ್ಯಕತೆ, ಅದರಂತೆ ತಾನು ಬಯಸಿದಂತೆ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನನ್ನು ಪ್ರೀತಿಸುತ್ತಿರುವುದಾಗಿ ನಿವೇದಿಸಿಕೊಂಡಿದ್ದರು ಸಹ, ವಯಸ್ಸಿನ ಅಂತರದಿಂದ ಮತ್ತು ಸಮಾಜದ ಭಯದಿಂದ ಪಾಸಿಟಿವ್ ಹಾಗೆ ನಿರ್ಧಾರ ತೆಗೆದುಕೊಳ್ಳಲು ಸುಮಾ ಅಸಮರ್ಥಳಾಗಿದ್ದಳು. ಸಮಾಜಕ್ಕೆ ಹೆದರಿ ತನ್ನ ಗಟ್ಟಿಯಾದ ನಿರ್ಧಾರವನ್ನು ಮಾಡಲು ಅವಳಿಗೆ ಆಗಿರದ ಕಾರಣ, ಕಾವೇರಿಯನ್ನು ಅವಲಂಬಿಸಿದ್ದಳು. ಆದರೆ ಯಾವಾಗ ಕಾವೇರಿ ತನ್ನ ಅಂಕಿತ ಹೇಳಿದರೂ ಸಹ, ಕೊನೆ ನಿರ್ಧಾರವನ್ನು ತನ್ನ ಮೇಲೆ ಬಿಟ್ಟಾಗ, ಮನಸ್ಸು ಡೋಲಾಯಮಾನವಾಗಿತ್ತು.

       ಕಾವೇರಿ ಏನು ತನ್ನ ನಿರ್ಧಾರವನ್ನು ಸುಮಾಳಿಗೆ ತಿಳಿಸಿ ನೆಮ್ಮದಿಯಾಗಿ ಮಲಗಿ ನಿದ್ರೆ ಹೋಗಿದ್ದಳು. ಆದರೆ ಅವಳ ಮಾತಿನಿಂದ ಸುಮಾ, ನಿದ್ರೆ ಹತ್ತಲಾರದೆ ತನ್ನ ನಿರ್ಧಾರದ ಬಗ್ಗೆ ತಾನೇ ಯೋಚನೆ ಮಾಡುತ್ತ ಕುಳಿತುಕೊಳ್ಳಬೇಕಾಯಿತು. ಒಂದು ಕಡೆ ಪ್ರೀತಿ ಪ್ರೇಮ ಮತ್ತು ತನಗೆ ಅದರ ಅವಶ್ಯಕತೆ, ಇನ್ನೊಂದು ಕಡೆಗೆ ಸಮಾಜ, ವಯಸ್ಸು ಮತ್ತು ಅದರ ವಿರೋಧ, ಇದನ್ನು ಯಾವ ರೀತಿಯಾಗಿ ಕೊನೆಗಾಣಿಸಬೇಕು ಮತ್ತು ಇದರ ಅಂತ್ಯ ಹೇಗಾಗುತ್ತದೆ ಎಂದು ಯೋಚನೆ ಮಾಡುತ್ತಾ ಇರುವಾಗ, ಕಾವೇರಿ ಹೇಳಿದ್ದ ಮಾತು ನೆನಪಾಯಿತು. ಇಂದಿನ ಸಮಾಜದಲ್ಲಿ ಜನರೆಲ್ಲಾ ಬ್ಯುಸಿ ಇರುವದರಿಂದ ಇಂಥ ವಿಷಯಗಳಿಗೆ ಅವರು ತಲೆ ಹಾಕುವ ಸಂದರ್ಭ ಕಡಿಮೆ ಅಲ್ಲದೆ, ಇದು ನನ್ನ ಜೀವನ ನಾನೇ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾದ ವ್ಯಕ್ತಿ. ಆದರೆ, ಈ ನಿರ್ಧಾರಕ್ಕೆ ಬೇರೆಯವರಿಗೆ ಅಡ್ಡ ಬರುವ ಹಕ್ಕು ಇಂದಿಗೂ ಇಲ್ಲ. ಎಂದು ಅಂದುಕೊಂಡಾಗ, ಅವಳ ಮನಸ್ಸಿಗೆ ಒಂದು ರೀತಿಯ ಸಮಾಧಾನವಾಯಿತು. ಒಂದು ಹಂತದಲ್ಲಿ ಅವಳು ತನ್ನ ಮನಸಾರೆ ಒಂದು ನಿರ್ಧಾರಕ್ಕೆ ಬಂದಿದ್ದಳು. ಹಾಗೆ ಅವಳು ಯೋಚನೆ ಮಾಡುತ್ತಾ ನಿರ್ಧಾರಕ್ಕೆ ಬಂದಾಗ, ಅವಳ ಮನಸ್ಸು ನಿರಾಳವಾಗಿತ್ತು. ಅದೇ ವೇಳೆಗೆ ತಂಪಾದ ಗಾಳಿ ಅವಳ ಮೈ ಸೋಕಿದಾಗ, ಆ ತಂಪಾದ ಗಾಳಿಯ ಅನುಭವ ಒಂದು ಹೊಸ ರೀತಿಯಲ್ಲಿ ಇರುವದು ಸುಮಾಳಿಗೆ ಭಾಸವಾಯಿತು. ಸುಮ್ಮನೆ ಬಾಲ್ಕನಿಯಲ್ಲಿ ಎದ್ದು ನಿಂತು ತನ್ನೆರಡೂ ಕೈಗಳನ್ನು ಅವಳು ಚಾಚಿ ಕಣ್ಣುಮುಚ್ಚಿಕೊಂಡು ತಂಪಾದ ಗಾಳಿ ತನ್ನ ಮೈ ಸೋಕುತ್ತಿರುವಾಗ, ಯಾರೋ ತನಗಾಗಿಯೇ ಈ ರೀತಿಯಾದ ಹಿತವಾದ ಗಾಳಿಯನ್ನು ತನ್ನ ಸಲುವಾಗಿ ಬೀಸುತ್ತಿದ್ದರೆ ಎಂದು ಭಾಸವಾಯಿತು. ಅದೇ ಗಾಳಿ ಮೂಗಿನ ಹೊಳ್ಳೆಗೆ ಬಡಿದಾಗ, ಒಂದು ರೀತಿಯಾದ ಅನೂಹ್ಯ ಪರಿಮಳ ಆ ಗಾಲಿಯಲ್ಲಿ ಇರುವದು ಅವಳು ಕಂಡುಕೊಂಡಳು. ಸುಮಾ, ತಾನು ಒಂದು ನಿರ್ಧಾರಕ್ಕೆ ಬಂದ ಮೇಲೆ, ಅವಳಿಗೆ ಮೊದಲ ಬಾರಿಗೆ, ತನ್ನ ಮೈ ಮನ ಹಗುರವಾಗಿರುವದು ಭಾಸವಾಯಿತು. ತಾನಿನ್ನೂ ಕಾಲೇಜು ಹುಡುಗಿ ತರಹ ಎಂದು ಅವಳಿಗೆ ಭಾಸವಾಗತೊಡಗಿತು. 

   ಇನ್ನು ತನ್ನ ಜೀವನದಲ್ಲಿ ಒಬ್ಬ ಸಂಗಾತಿ ಬರುವನು. ತನ್ನನ್ನು ಚನ್ನಾಗಿ ನೋಡಿಕೊಳ್ಳುವನು ಮತ್ತು ತನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ತನ್ನ ಮೇಲೆ ಪ್ರೇಮದ ಸುರಿಮಳೆ ಸುರಿಯುವನು. ಅಲ್ಲದೆ, ಅವನು ತನ್ನ ಮನಸ್ಸನ್ನು ಇಂದಿಗೂ ಬಾಡದಂತೆ ನೋಡಿಕೊಳ್ಳುವನು. ಅವನ ಹೃದಯದಲ್ಲಿ ತಾನು ತನ್ನ ಹೃದಯದಲ್ಲಿ ಅವನು ಇರುವಾಗ, ಇನ್ನು ಈ ಪ್ರಪಂಚದ ಪರಿವೆ ಇರುವದಿಲ್ಲ, ತಾನು ಸುಖಿಯಾಗಿರುವೆನು. ಇನ್ನು ಮುಂದೆ ತನಗೆ ಒಂಟಿತನ ಭಾದಿಸುವದಿಲ್ಲ. ನಾನಿನ್ನು ಒಂಟಿಯಲ್ಲ. ನಾನು ಇನ್ನು ಯೋಚನೆ ಮಾಡುತ್ತಾ ಕುರುವದು ಬೇಕಾಗಿಲ್ಲ. ತನ್ನ ಚಿಂತೆ ಒಂದು ಹಂತಕ್ಕೆ ಬಂದು ಮುಗಿಯುತ್ತದೆ. ಎಂದು ಸಂತೋಷಗೊಂಡಳು ಹಾಗೆ ಬಾಲ್ಕನಿಯಿಂದ ಒಳಗೆ ಬರುತ್ತಲೇ, ಟೇಬಲ್ ಮೇಲೆ ಇದ್ದ ತನ್ನ ಗಂಡನ ಫೋಟೋದ ಕಡೆಗೆ ಅವಳ ಲಕ್ಷ ಹೋಯಿತು. ಅದನ್ನೇ ದಿಟ್ಟಿಸಿ ನೋಡುತ್ತಿರುವಾಗ, ಅವಳ ಗಂಡನು ಒಳ್ಳೆಯ ಕೆಲಸ ಮಾಡಿರುವೆ ಎಂದು ಅವಳಿಗೆ ಹೇಳಿದ ಹಾಗೆ ಭಾಸವಾಯಿತು. ತನ್ನ ಮನಸ್ಸಿನಲ್ಲಿ ತನ್ನ ಗಂಡನನ್ನು ಇಟ್ಟುಕೊಂಡಿದ್ದಳು. ಆದರೆ ಈಗ ಅಭಿಯ ಆಗಮನದಿಂದ, ಅವಳ ಗಂಡ ಮನಸ್ಸಿನಿಂದ ಸ್ವಲ್ಪವೇ ಮಸುಕಾಗಿದ್ದ. ಸಾವಕಾಶವಾಗಿ ಅಭಿ ಅವಳ ಮನಸ್ಸನ್ನು ಆವರಿಸಿಕೊಂಡಿದ್ದ. ನೀರನ್ನು ನೆಲದ ಮೇಲೆ ಹರಿಬಿಟ್ಟಾಗ, ಅದು ಹೇಗೆ ಎಲ್ಲ ಕಡೆಗೆ ಹರಿಯುತ್ತ ಹೋಗುತ್ತದೆಯೋ ಅದೇ ರೀತಿಯಾಗಿ ಅಭಿ ಸಾವಕಾಶವಾಗಿ ತನ್ನ ಮನಸ್ಸಿನಲ್ಲಿ ಅವನ ಪ್ರೀತಿಯಿಂದ ತನ್ನ ಬೇರನ್ನು ಹರಡತೊಡಗಿದ್ದ. 

    ಹೇಗೂ ತನ್ನಒಂಟಿ ಜೀವನದಲ್ಲಿ ತನ್ನ ಗಂಡ ಇಷ್ಟು ದಿನ ಇದ್ದ.ಅದೂ ಮನಸ್ಸಿನಲ್ಲಿ. ಆದರೆ ಪ್ರಾಕ್ಟಿಕಲ್ ಆಗಿ ನೋಡಿದಾಗ ತನಗೂ ಸಹ ಒಬ್ಬ ಸಂಗಾತಿಯ ಅವಶ್ಯಕತೆ ಇರುವದು ಆ ಸಂಗಾತಿ ಅಭಿಯ ರೂಪದಲ್ಲಿ ಬಂದಿರುವದು. ತಾನು ಹೇಗೂ ನಿರ್ಧಾರ ಮಾಡಿಯಾಗಿದೆ, ಇನ್ನು ತಡ ಮಾಡಬಾರದು. ಆದಷ್ಟು ಬೇಗನೆ ಅಭಿಯನ್ನು ಕಾಣಬೇಕು ಅವನ ಜೊತೆಗೆ ಮಾತನಾಡಬೇಕು ಎಂದು ಅಂದುಕೊಂಡಳು. ಅವಳ ಮನ ಖುಷಿಯಿಂದ ಚಡಪಡಿಸಹತ್ತಿತು. ಯಾವಾಗ ತಾನು ಅಭಿಯ ಜೊತೆಗೆ ಮಾತನಾಡುತ್ತೇನೋ ತನ್ನ ನಿರ್ಧಾರವನ್ನು ಯಾವಾಗ ಅವನಿಗೆ ಹೇಳುತ್ತೇನೆಯೋ ತಿಳಿಸುತ್ತೇನು ಎಂದು ಮನಸ್ಸು ಒಂದೇ ಸಮನೆ ಚಡಪಡಿಸಹತ್ತಿತು. ಕೊನೆಗೆ ತಾಳಲಾರದೆ, ಅವನಿಗೆ ಒಂದು ಮೆಸೇಜ್ ಬರೆದು ಬಿಟ್ಟಳು. 

*"ಕರ್ ದೇ ನಜರೇ ಕರಮ್ ಮುಜ ಪರ್

ಮೈ ತುಜಫೆ ಏತಬಾರ ಕರದೂ 

ದೀವಾನಾ ಹೂ ತೇರಾ ಐಸಾ 

ಕಿ ದಿವಾನಗಿ ಕಿ ಹದ್ ಕೋ ಪಾರ ಕರದೂ"*

ಎಂದು ಬರೆದು ತಾನೇ ಅದನ್ನು ಹಲವಾರು ಬಾರಿ ಓದಿ, ಒಂದು ರೀತಿಯಲ್ಲಿ ಪ್ರೇಮದ ವಿರಹವನ್ನು ಅನುಭವಿಸಿದಳು. ಹಾಗೆ ಅದನ್ನು ಓದಿ ತಾನೇ ಸ್ವತಃ ಅನುಭವಿಸುತ್ತ, ಒಂದು ರೀತಿಯಲ್ಲಿ ಮನದಲ್ಲಿ ನಾಚುತ್ತ, ಅದನ್ನು ಪೋಸ್ಟ್ ಮಾಡಿದಳು. ಅವನು ಮೆಸೆಂಜರ್ ತೆಗೆದು ನೋಡಿದಾಗ ಆ ಸಾಲುಗಳು ಅವನಿಗೆ ಕಾಣುತ್ತೆ. ಅವನಿಂದ ಹೇಗೆ ಪ್ರತ್ಯುತ್ತರ ಬರುವದು ಎಂದು ದಾರಿ ಕಾಯುವದಷ್ಟೇ ಅವಳ ಕೆಲಸವಾಗಿತ್ತು. 


21


   ಮರುದಿನ ಅವನ ಫೋನ್ ನಂಬರ್ ಕೇಳಿ ತಿಳಿದುಕೊಂಡರಾಯಿತು ಎಂದುಕೊಂಡಳು. ಅವನು ಫೋನ್ ಮಾಡುವವರೆಗೆ ಅವಳಿಗೆ ಕಾಯದೆ ಬೇರೆ ದಾರಿ ಇರಲಿಲ್ಲ. ಹಾಗೆ ಅವನ ನೆನಪಿನಲ್ಲಿ ಹಾಸಿಗೆಯ ಮೇಲೆ ಉರುಳಿಕೊಂಡಳು. 

   ಅವನು ತನ್ನ ಹತ್ತಿರ ಇದ್ದಂತೆ, ತಾನು ಅವನ ತೋಳಿನ ಮೇಲೆ ತನ್ನ ತಲೆಯಿಟ್ಟು, ಅವನ ಮೃದುವಾದ ಅಪ್ಪುಗೆಯಲ್ಲಿ ಜಗತ್ತನ್ನೇ ಮರೆತಂತೆ, ಅವನು ತನ್ನನ್ನು ಪ್ರಪಂಚದ ಎಲ್ಲ ಬಂಧನಗಳನ್ನು ಮರೆಸುವಂತೆ, ಈ ರೀತಿಯಾಗಿ ಕನಸು ಕಾಣುತ್ತ ಮಲಗಿಕೊಂಡಳು. 

   ರಾತ್ರಿ ಪೂರ್ತಿ ನಿದ್ರೆಯಲ್ಲಿ ಅವಳಿಗೆ ಅದೇ ತೆರನಾದ ಮಧುರತೆಯ ಕನಸುಗಳು ಕಂಡು ಅವಳು ತುಂಬಾ ಪ್ರಫುಲ್ಲತೆಯನ್ನು ಅನುಭವಿಸಿದಳು. ಈ ರೀತಿಯಾಗಿ ಕನಸು ಕಾಣುತ್ತಲೇ ಅವಳು ಅರ್ಧ ನಿದ್ರೆ ಮತ್ತು ಅರ್ಧ ಎಚ್ಚರದ ಪರಿಸ್ಥಿತಿಯಲ್ಲಿ ರಾತ್ರಿ ಕಳೆದಳು. 

   ಬೆಳಿಗ್ಗೆ ಏಳುತ್ತಿರುವಂತೆ, ಅವಳಿಗೆ ಏನೋ ಹೊಸ ಮುಂಜಾವು ಕಂಡ ಹಾಗಾಯ್ತು. ಹೊಸ ಉಲ್ಲಾಸ ಮೈಯಲ್ಲಿ ತುಂಬಿ ತುಳುಕುತ್ತಿತ್ತು. ಏನೋ ಪ್ರತಿ ಕೆಲಸವೂ ತುಂಬಾ ಬೇಗ ಮತ್ತು ಯಾವುದೇ ಆಯಾಸವಿಲ್ಲದೆ ಮಾಡುವಂತಹ ಹುರುಪು ಮೈಯಲ್ಲಿ ತುಂಬಿತ್ತು. ಅವಳಿಗೆ ತನ್ನ ಮನೆಯ ಯಾವುದೇ ಕೆಲಸ ಅಂದು ಕಠಿಣ ಎನ್ನಿಸಲೇ ಇಲ್ಲ. ಎಲ್ಲ ಕೆಲಸ ಹಗುರವಾಗಿತ್ತು ಅವಳಿಗೆ. ತಾನು ತೆಗೆದುಕೊಂಡ ನಿರ್ಧಾರ ಅದಕ್ಕೆ ಕಾರಣವಾಗಿರಬಹುದು ಅಂತ ಅಂದುಕೊಂಡಳು. 

     ಅದೇ ಹುರುಪಿನಲ್ಲಿ ಸುಮಾ ಕಾಲೇಜಿಗೆ ಸಹ ಹೋದಳು. ಅಲ್ಲಿ ತನ್ನ ಆಫ್ ಪಿರಿಯಡ್ ದಲ್ಲಿ ಸ್ಟಾಫ್ ರೂಮಿನಲ್ಲಿ ಸುಮ್ಮನೆ ಕುಳಿತಾಗ ಅವಳಿಗೆ ಅಭಿ ನೆನಪಾದ. ಯೋಚನೆ ಮಾಡುತ್ತಿದ್ದಳು. ಅಭಿ ಎಷ್ಟು ಮಧುರವಾದ ಹೆಸರು. ಹೆಸರು ಉಚ್ಚಾರಣೆಯಲ್ಲಿ ತುಂಬಾ ಮಧುರತೆ ಅನುಭವ ಆಗುತ್ತದೆ. ಅದೇ ರೀತಿಯಾಗಿ, ಅವನ ಧ್ವನಿ ಸಹ ಗಡುಸಾಗಿದ್ದರೂ ಸಹ ಮೆಲ್ಲನೆಯ ಧ್ವನಿಯಲ್ಲಿ ಮಾತನಾಡುವಾಗ ಅವನ ಧ್ವನಿಯಲ್ಲಿ ಒಂದು ತರಹದ ಸೆಳೆತ ಇದೆ. ಯಾರನ್ನಾದರೂ ಆ ಧ್ವನಿ ಮರಳು ಮಾಡುವಷ್ಟು ಮಾದಕತೆ ಅದರಲ್ಲಿದೆ. ಮೊದಲ ಬಾರಿಗೆ ಅವನ ಧ್ವನಿ ಕೇಳಿದಾಗ ಸುಮಾಳಿಗೆ ಅದರಲ್ಲಿ ಆ ಮಾದಕತೆ ಇರುವದು ಸ್ಪಷ್ಟವಾಗಿ ಗೊತ್ತಾಗಿತ್ತು. ಆ ಧ್ವನಿಯಿಂದಲೇ ಅವಳ ಮನಸ್ಸು ಮೊದಲು ಚಂಚಲವಾಗಿದ್ದು. ಆ ಚಂಚಲತೆ ಬರಬರುತ್ತಾ ಪ್ರೀತಿಯ ಅಲೆಗಳನ್ನು ಸೃಷ್ಠಿಸಿದಾಗ ಆ ಅಲೆಗಳ ಸೆಳೆತಕ್ಕೆ ತಾನೇ ಸಿಕ್ಕಿ ಹಾಕಿಕೊಂಡಳು. ಎಂಥ ಸೆಳೆತ, ಎಂಥ ಮೋಡಿ. ಏನಿರಬಹುದು ತಾನು ಇಂದಿಗೂ ಸಹ ಯಾರ ಜೊತೆಗೆಗೂ ಸಹ ಆ ರೀತಿಯಾಗಿ ಬೆರೆತವಳಲ್ಲ. ತನ್ನ ಸಮೀಪ ಯಾರನ್ನು ಬರಗೊಡುತ್ತಿರಲಿಲ್ಲ ಸಹ. ಅಂಥದರಲ್ಲಿ, ಅಭಿ ಅವಳನ್ನಷ್ಟೇ ಅಲ್ಲ, ಅವಳ ಮನಸ್ಸನ್ನು ಸಹ ಸೇರಿಕೊಂಡು ಅವಳ ಉಸಿರಿನಲ್ಲಿ ಉಸಿರಾಗಿದ್ದ. ಇಷ್ಟು ದಿನ ಸುಮಾಳಿಗೆ ಸಮಾಜ, ವಯಸ್ಸಿನ ಅಂತರ ಬಗ್ಗೆ ಒಂದು ತೆರನಾದ ಭಯವಿತ್ತು. ಆದರೆ, ಈಗ ನಿನ್ನೆಯ ದಿನ ಕಾವೇರಿ ಹೇಳಿದ ಮೇಲೆ ತಾನು ತೆಗೆದುಕೊಂಡ ನಿರ್ಧಾರದಿಂದ, ಅವಳ ಭಯ ಹಾರಿಹೋಗಿತ್ತು. ನಿರ್ಧಾರ ಅಚಲವಾಗಿತ್ತು. ತಾನು ಬಾಳಬೇಕು. ತನಗಾಗಿ ಹುಡುಕಿಕೊಂಡು ಬಂದ ಪ್ರೀತಿಯನ್ನು ಸ್ವೀಕರಿಸಿ ಅನುಭವಿಸಬೇಕು. ತಾನು ಮನುಷ್ಯಳು, ತನಗೂ ಮನಸ್ಸು ಇದೆ, ಆಸೆ ಇದೆ, ಹಾಗೆ ನೋಡಿದರೆ ವಯಸ್ಸಾಗಿಲ್ಲ. ರೂಪವಿದೆ, ಯೌವನ ಸಹ ಇದೆ. ಅದೇ ಕಾರಣಕ್ಕೆ ಅಲ್ಲವೇ ಅವಳ ಸ್ಟೂಡೆಂಟ್ಸ್ ಸಹ ಅವಳ ರೂಪಕ್ಕೆ ಮಾರು ಹೋಗಿದ್ದು. ಆದರೆ ಪ್ರೀತಿಸುವ ಸಂಗಾತಿ ಇಲ್ಲದೆ ಹೋದರೆ ಇದೆಲ್ಲ ಇದ್ದು ಏನು ಫಲ? ಏನಾದರಾಗಲಿ ತನ್ನ ಈ ಪ್ರೀತಿ ಗೆಲ್ಲಲೇ ಬೇಕು. ಯಾವುದೇ ಕಾರಣಕ್ಕೂ ತನ್ನ ಪ್ರೀತಿಯನ್ನು ಸೋಲಲು ಬಿಡಬಾರದು. ಏನೇ ಆತಂಕ ಬರಲಿ ಎದುರಿಸಿ ನಿಲ್ಲುವೆ ಎಂದು ಗಟ್ಟಿ ಮನಸ್ಸು ಮಾಡಿ, ಧೈರ್ಯದಿಂದ ಕುಳಿತಿದ್ದಳು. 

      ಎಂದಿಗೂ ಇಲ್ಲದ ಅಭಿ ಇಂದು ಸುಮಾಳಿಗೆ ನೆನಪಿನಲ್ಲಿ ಬಂದು ಬಹಳಷ್ಟು ಕಾಡತೊಡಗಿದ. ಕುಂತರು ನಿಂತರು, ಎಲ್ಲಿ ನೋಡಿದರೂ ಏನು ಮಾತನಾಡಿದರು ಅಲ್ಲಿ ಅವಳಿಗೆ ಅಭಿ ಕಾಣಿಸುತ್ತಿದ್ದ. ಸಾಯಂಕಾಲ ಆಗುವವರಿಗೆ ಅವಳಿಗೆ ಕಾಯುವಷ್ಟು ಪುರುಸೊತ್ತು ಇರಲಿಲ್ಲ. ಎಂದಿಗೂ ಹೀಗೆ ಅವಳಿಗೆ ಆಗಿದ್ದಿಲ್ಲ. ಆದರೆ ಇಂದು ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು, ತನ್ನನ್ನು ತಾನೇ ಪ್ರಶ್ನಿಸಿಕೊಂಡಾಗ, ತನ್ನ ಹೃದಯ ಪ್ರೀತಿಯ ಹೊರತಾಗಿ ಇದ್ದರೂ ಉಳಿದ ಸಮಸ್ಯೆಗಳನ್ನೆಲ್ಲಾ ಅವರ ಹಾಕಿರುವುದರಿಂದ, ಈಗ ಅವಳ ಮನಸ್ಸಿನಲ್ಲಿ ಕೇವಲ ಪ್ರೀತಿ ಮಾತೃ ತುಂಬಿದ್ದ ಕಾರಣ, ಈ ರೀತಿ ಆಗುತ್ತಿತ್ತು. ಅಭಿಯ ನೆನಪಿನಲ್ಲಿ ಸುಮಾ ಹೇಗೆ ಸಾಯಂಕಾಲದವರೆಗೆ ಸಮಯವನ್ನು ಕಳೆದು ಎಂದು ಅವಳಿಗೆ ಗೊತ್ತಾಗಲಿಲ್ಲ. ಅವನು ತನ್ನ ಹತ್ತಿರ ಇರುವದಾಗಿ ಭಾವಿಸಿಕೊಂಡು ಸುಮಾ, ನೂರಾರು ತರಹದ ಬಣ್ಣಬಣ್ಣದ ಕನಸುಗಳನ್ನು ಕಂಡಿದ್ದಳು. ತನ್ನ ಕನಸಿನಲ್ಲಿ ಕಂಡ ದೃಶ್ಯಗಳನ್ನು ತಾನೇ ನೆನಪಿಸಿಕೊಂಡು ನಾಚಿ ನೀರಾಗಿದ್ದಳು.

      ಅಭಿ ನೋಡಲು ಹೇಗಿರಬಹುದು? ತನ್ನ ಹೆಸರಿನಂತೆ ಅವನ ರೂಪ ಇರಬಹುದೇ ಎಂದು ಅಂದಾಜು ಮಾಡತೊಡಗಿದಳು. ನಾನು ಅವನನ್ನು ನೋಡದೇ ಹೇಗೆ ಅವನ ರೂಪವನ್ನು ಅಂದಾಜು ಮಾಡುತ್ತಿದ್ದಳು, ಅದೇ ರೀತಿಯಾಗಿ ಅವನು ಸಹ ತನ್ನ ರೂಪದ ಬಗ್ಗೆ, ಇದೇ ತರಹದ ಅಂದಾಜು ಮಾಡಿರಬಹುದು ಎಂದು ಅಂದುಕೊಂಡಳು. ಇಂದು ಈ ವಿಷಯವನ್ನು ಅವನಿಗೆ ಕೇಳಿದರೆ ಆಯಿತು ಎಂಬ ನಿರ್ಧಾರಕ್ಕೆ ಬಂದು, ರಾತ್ರಿಯ ಊಟವನ್ನು ಮುಗಿಸಿ, ಬೆಡ್ರೂಮಿಗೆ ಹೋಗಿ ಅಭಿ ಕರೆ ಮಾಡುವುದನ್ನು ಕಾಯುತ್ತಾ ಕುಳಿತಳು. ಕ್ಷಣಕ್ಕೊಮ್ಮೆ ಗಡಿಯಾರವನ್ನು ನೋಡುತ್ತಿದ್ದಳು. ಆದರೆ ಅವಳು ಎಷ್ಟು ನೋಡಿದರೂ ಸಹ, ಗಡಿಯಾರ ಇಂದು ತುಂಬಾ ಸಾವಕಾಶವಾಗಿ ಚಲಿಸುತ್ತಿದೆ ಎಂದು ಅವಳಿಗೆ ಭಾಸವಾಗುತ್ತಿತ್ತು. ಎಷ್ಟು ನೋಡಿದರೂ ಗಡಿಯಾರ ಮುಂದಕ್ಕೆ ವೇಗವಾಗಿ ಚಲಿಸುತ್ತಿರಲಿಲ್ಲ.

       ಆ ಹೊತ್ತಿನಲ್ಲಿ ಪಕ್ಕದ ಮನೆಯಿಂದ ಹಾಡು ಕೇಳಿಸತೊಡಗಿತು.

*" ಜಿನು ಜಿನುಗೋ ಜೇನಹನಿ

 ಮಿನುಮಿನುಗೋ ತುಟಿಗೆ ಇಬ್ಬನಿ

ಈ ಸರಸದಲ್ಲಿ ಸಂಗಾತಿ ಸಂಪ್ರೀತಿ

 ನಲಿ ನಲಿ ನಲಿಯುತಿದೆ"*

 ಎಂಬ ಮಧುರವಾದ ಹಾಡು ಕಿವಿಗೆ ಬೀಳುತ್ತಿದ್ದಂತೆ ಆ ಹಾಡಿನ ಮಧುರತೆಯಲ್ಲಿ ಸುಮಾ ತನ್ನನ್ನು ತಾನು ಮರೆತು ಕನಸಿನ ಲೋಕಕ್ಕೆ ಜಾರಿದಳು. ಸ್ವಲ್ಪ ಹೊತ್ತಿನಲ್ಲಿಯೇ ಅವಳ ಮೊಬೈಲ್ ಸದ್ದು ಮಾಡತೊಡಗಿತು. ಕಣ್ಣುಮುಚ್ಚಿಕೊಂಡು ಕುಳಿತಿದ್ದ ಅವಳು, ಮೊಬೈಲ್ ಸದ್ದು ಕೇಳಿದ ತಕ್ಷಣ ಗಡಿಬಿಡಿಯಲ್ಲಿ ಮೊಬೈಲ್ ತೆಗೆದುಕೊಂಡು ಕಾಲ್ ರಿಸೀವ್ ಮಾಡಿಕೊಂಡು ಕಿವಿಗೆ ಹಿಡಿದಾಗ ಅತ್ತಕಡೆಯಿಂದ ಅಭಿ,

*" ಹಲೋ, ತುಂಬಾ ಚೆನ್ನಾಗಿರೋ ಸಂದೇಶವನ್ನೇ ಕಳಿಸಿದ್ದೀರಿ. ಓದಿ ಮನಸ್ಸಿಗೆ ಒಂದು ರೀತಿಯಾದ ಹಿತವಾದ ಅನುಭವ ನನಗಾಗಿದೆ"*

*" ಎಷ್ಟು ಹೊತ್ತು ಬರೋದು?"*

 ಎಂದು ಸ್ವಲ್ಪ ಆಕ್ಷೇಪಣೆಯ ಧ್ವನಿಯಲ್ಲಿ ಸುಮಾ ಪ್ರಶ್ನಿಸಿದಾಗ,

*" ಇಂದು ಕೆಲಸ ತುಂಬಾ ಜೋರಾಗಿತ್ತು. ಆಫೀಸಿನಿಂದ ಬರುವುದು ತಡವಾಯಿತು. ಬೆಳಿಗ್ಗೆಯಿಂದ ಹೊಟ್ಟೆಗೆ ಏನು ಹಾಕಿಕೊಂಡಿದ್ದಿಲ್ಲ ಕಾರಣ, ಮೊದಲು ಊಟ ಮಾಡಿ, ಕೈ ತೊಳೆದ ತಕ್ಷಣ ಮೊದಲು ಮಾಡಿದ ಕೆಲಸವೆಂದರೆ, ನಿಮಗೆ ಕಾಲ್ ಮಾಡಿದ್ದು"*

 ಎಂದು ಹೇಳಿದಾಗ ಅವನ ಧ್ವನಿಯಲ್ಲಿ ಊಟ ಮಾಡಿದ ನಂತರದ ಸಂತೃಪ್ತಿ ಅವಳಿಗೆ ಕಂಡುಬಂತು. ಜೋರಾಗಿ ಹಸಿವಾದಾಗ ಯಾವ ವ್ಯಕ್ತಿ ಚೆನ್ನಾಗಿ ಊಟ ಮಾಡಿ ನಂತರ ಮಾತನಾಡುವಾಗ, ಅವನ ಧ್ವನಿಯಲ್ಲಿ ಒಂದು ರೀತಿಯಾದ ಸಂತೃಪ್ತಿ ಹೊಂದಿದ ಭಾವನೆ ಕಂಡುಬರುತ್ತದೆ. ಅಂತ ತೃಪ್ತ ಭಾವನೆ ಧ್ವನಿಯಲ್ಲಿ ಸಹ ಕೇಳಿಬಂದಿತ್ತು.

*" ಹೋಗಲಿ, ನೀವು ನೋಡಲು ಹೇಗಿರುವೆರಿ ಅಂತ ನಿಮ್ಮ ಬಾಯಿಂದ ಕೇಳಬಹುದೇ?"*

*" ನನ್ನ ರೂಪವನ್ನು ನಾನೇ ನಿಮಗೆ ಹೇಳಲು ಹೇಗೆ ಸಾಧ್ಯ? ಇಷ್ಟು ಮಾತ್ರ ಹೇಳಬಲ್ಲೆ. ಎಲ್ಲ ಮನುಷ್ಯರಂತೆ ಎರಡು ಕಣ್ಣು, ಎರಡು ಕಿವಿ, ಒಂದೇ ಒಂದು ಮೂಗು, ಅದಕ್ಕೆ ಎರಡು ಹೊಳ್ಳೆ, ಕೆಂಪಗಾದ ತುಟಿ, ಅಗಲವಾದ ಹಣೆ, ಎಲ್ಲ ಇದೆ. ಒಂದು ಮಾತಿನಲ್ಲಿ ಹೇಳಬೇಕಾದರೆ, ಅಮ್ಮ ಹೇಳ್ತಾಳೆ ಕೃಷ್ಣನ ತರಹ ಇದ್ದೀನಿ ಅಂತ. ಇಷ್ಟರ ಮೇಲೆ ನೀವೇ ಊಹಿಸಿಕೊಳ್ಳಿ ಹೇಗೆ ಇದ್ದಿರಬಹುದು ನಾನು ಅಂತ."*

ಎಂದು ಅವನು ತನ್ನ ರೂಪದ ಬಗ್ಗೆ ಸುಮಾಳಿಗೆ ಹೇಳಿದಾಗ, ಅವನ ಮಾತಿನಿಂದ ಅವಳಿಗೆ ಅವನು ಯಾವ ರೀತಿ ಇರಬಹುದು ಎಂದು ಮಾತ್ರ ಅಂದಾಜು ಸಿಗಲಿಲ್ಲ. ಕೊನೆಗೆ ಅವಳ ಮೌನವನ್ನು ಗಮನಿಸಿದ ಅಭಿ,

*"ನೀವು ಒಪ್ಪಿಕೊಂಡರೆ ನಾನು ನನ್ನ ಫೋಟೋ ಕಳುಹಿಸಿಕೊಡಲೇ"*

ಎಂದು ನೇರವಾಗಿ ಕೇಳಿದ. ಸುಮಾಳ ಮನಸ್ಸು ಒಂದು ಕ್ಷಣ ಅವನ ಫೋಟೋ ನೋಡಬೇಕೆಂದುಕೊಂಡರೂ ಸಹ, ಬೇಡವೆಂದುಕೊಂಡಳು. ತನ್ನ ಕಲ್ಪನೆಯಲ್ಲಿ ಅವಳಿಗೆ ಅವನದೇ ಆದಂತಹ ಒಂದು ರೂಪವನ್ನು ಸುಮಾ ಕಲ್ಪಿಸಿಕೊಂಡಿದ್ದಳು. ಈಗ ಒಂದು ವೇಳೆ ಈಗ ತಾನು ಅಭಿಯ ಫೋಟೋ ನೋಡಿಬಿಟ್ಟರೆ, ಮುಂದೆ ಅವನನ್ನು ಭೇಟಿಯಾಗುವ ವೇಳೆ ತನಗೆ ಸಿಗುವ ಥ್ರಿಲ್ ಸಿಗಲಿಕ್ಕಿಲ್ಲ ಎಂದುಕೊಂಡು, ಮತ್ತು ಆ ಥ್ರಿಲ್ ದಿಂದ ತಪ್ಪಿಸಿಕೊಳ್ಳಬಾರದೆಂದು ಅಂದುಕೊಂಡು,

*" ಬೇಡ"*

 ಎಂದೋ ನಿರಾಕರಿಸಿದಳು. ಅವಳ ನಿರಾಕರಣೆಯನ್ನು ಕೇಳಿದ ಅಭಿ,

*" ಯಾಕೆ? ನನ್ನನ್ನು ನೋಡಲು ನಿಮಗೆ ಇಷ್ಟವಿಲ್ಲವೇ?"*

*" ಹಾಗೇನಿಲ್ಲ. ನೋಡಲಾರದ ವ್ಯಕ್ತಿಯನ್ನು ನೋಡಬೇಕೆನ್ನುವ ಕುತೂಹಲ ಮನದಲ್ಲಿ ಇರುವಾಗ, ಆ ವ್ಯಕ್ತಿಯನ್ನು ನೋಡುವ ಹಂಬಲ ಮನಸ್ಸು ಮಾಡುತ್ತಿರುವಾಗ, ಒಂದು ವೇಳೆ ನೀವು ನಿಮ್ಮ ಫೋಟೋ ತೋರಿಸಿದಲ್ಲಿ, ನನಗಿದ್ದ ಕುತೂಹಲ ಕರಗಿಹೋಗುವುದು. ನನ್ನ ಕುತೂಹಲವನ್ನು ಕುತೂಹಲವನ್ನು ಆಗಿಯೇ ಇರಲು ಬಿಡಿ. ಹೇಗಾದರೂ ನಾವಿಬ್ಬರೂ ಒಂದಲ್ಲ ಒಂದು ದಿನ ಭೇಟಿಯಾಗಲೇಬೇಕಲ್ಲ. ಆ ವೇಳೆಯಲ್ಲಿ ಒಬ್ಬರಿಗೊಬ್ಬರು ನೋಡಿಕೊಂಡರಾಯಿತು. ಒಬ್ಬರನ್ನೊಬ್ಬರು ಪ್ರತ್ಯಕ್ಷವಾಗಿ ನೋಡಬೇಕೆನ್ನುವ ಬಯಕೆಯ ಕುತೂಹಲ ಇಬ್ಬರಲ್ಲಿಯೂ ಇದ್ದರೆ, ಮನಸ್ಸು ಪರಸ್ಪರ ನೆನಪಿಸಿಕೊಳ್ಳುತ್ತದೆ. ಅದರಿಂದ ಇಬ್ಬರ ನಡುವೆ ಇರುವ ಪ್ರೀತಿ, ಕಾಲಕಳೆದಂತೆ ಹೆಚ್ಚಾಗುತ್ತದೆ ಹೊರತಾಗಿ ಕಡಿಮೆಯಾಗುವುದಿಲ್ಲ. ಇದು ನನ್ನ ಅಭಿಪ್ರಾಯ"*

*" ನಿಜ, ನಿಮ್ಮ ಮಾತಿನಲ್ಲಿ ಸತ್ಯಾಂಶ ಇದೆ. ಇದೇ ಕಾರಣಕ್ಕಾಗಿ ನಾನು ಇಷ್ಟು ದಿವಸ ನಿಮ್ಮ ಫೋಟೋ ಕಳಿಸು ಎಂದು ಹೇಳಿರಲಿಲ್ಲ, ಮತ್ತು ನನ್ನ ಫೋಟೋ ಕಳುಹಿಸಿರಲಿಲ್ಲ. ಯಾಕೋ ಇಂದು ನೀವು ನನ್ನ ರೂಪದ ಬಗ್ಗೆ ಕೇಳಿದಾಗ, ನನ್ನ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಕುತೂಹಲ, ನನ್ನನ್ನು ಆ ರೀತಿ ಹೇಳುವಂತೆ ಪ್ರೇರೇಪಿಸಿದೆ. ಅದಕ್ಕಾಗಿ ಕೇಳಿದೆ"*

*" ಪರವಾಯಿಲ್ಲ, ನಾನೇನು ತಿಳಿದುಕೊಂಡಿಲ್ಲ. ಆದರೂ ನಿಮ್ಮ ಶಬ್ದಗಳ ಜೋಡಣೆಯಿಂದ ಬಂದ ನಿಮ್ಮ ರೂಪದ ಬಗ್ಗೆ ಮಾತುಗಳು, ನನಗಿದ್ದ ನಿಮ್ಮ ರೂಪದ ಒಂದು ಅಂದಾಜನ್ನು ಇನ್ನೊಂದು ಹಂತಕ್ಕೆ ಅಂದಾಜು ಮಾಡುವಷ್ಟು ಸಾಕಾಗಿದೆ. ನನ್ನ ಹೃದಯದ ಬಡಿತ ಇದನ್ನೇ ಮೆಲುಕುಹಾಕುತ್ತಾ, ನಿಮ್ಮ ರೂಪವನ್ನು ಕಲ್ಪಿಸಿಕೊಳ್ಳುತ್ತದೆ. ಒಂದು ಮಾತು ಹೇಳುತ್ತೇನೆ. ಪ್ರೇಮದಲ್ಲಿ ಕಲ್ಪನೆಗೆ ತನ್ನದೇ ಆದಂತಹ ಒಂದು ಮತ್ತು ಇರುತ್ತದೆ. ಪ್ರೇಮದ ಮತ್ತು ಎಂದು ಅದಕ್ಕೆ ಹೇಳಬಹುದು. ಹೃದಯ ತನಗೆ ಬೇಕಾದವರನ್ನು ನೆನೆದು ಬಡಿದುಕೊಳ್ಳುತ್ತಿರುವ ಆಗ, ಪ್ರೀತಿಸಿದ ಇನ್ನೊಂದು ಹೃದಯ ಸಹ, ಬಡಿತಕ್ಕೆ ದೂರದಿಂದಲೇ ಸ್ಪಂದಿಸುತ್ತದೆ. ಹಾಗಂತ ನಾನು ಎಲ್ಲಿಯೋ ಓದಿದ ನೆನಪು."*

*" ನನ್ನ ಪ್ರಕಾರ ನೀವು ಹೇಳುವುದು ನಿಜ. ಹಿಂದೆಲ್ಲಾ ಏಕೋ ಗೊತ್ತಿಲ್ಲ, ದಿನಪೂರ್ತಿ ನಿಮ್ಮ ನೆನಪು ನನ್ನನ್ನು ಕಾಡುತ್ತಿತ್ತು. ಕುಳಿತರೂ ನಿಂತರೂ ಕೆಲಸ ಮಾಡಿದರೂ ಸಹ ಪ್ರತಿ ಕೆಲಸದಲ್ಲಿ ನೀವೇ ಕಾಣುತ್ತಿದ್ದೀರಿ. ಒಂದು ಮಾತು ಹೇಳಬಯಸುತ್ತೇನೆ. ದೇವರು ಕೊಟ್ಟ ದಿಲ್, ಅಂದರೆ ಹೃದಯ, ಒಂದು ಮಂಗ ಇದ್ದಂತೆ, ಯಾವಾಗ ಯಾವ ರೀತಿ ಎಲ್ಲಿ ನಡೆಯುತ್ತದೆ ಅಂತ ಮಾತ್ರ ತಿಳಿಯೋದಿಲ್ಲ, ದಿಲ್ ಅನ್ನೋದು ಪಕ್ಕ 420 ಕಣ್ರೀ. ಒಂದೊಂದು ಸಲ, ನನ್ನ ಎದೆ ಬಗೆದು ನನ್ನ ಹೃದಯದಲ್ಲಿ ನೀವು ಹೇಗೆ ಕುಳಿತಿರುವುದು ಎಂದು ನೋಡ ಬಯಸುತ್ತೇನೆ. ಆದರೆ, ಅದು ಆಗದ ಕೆಲಸ. ಅದಕ್ಕೆ ನಾನು ಮೇಲಿಂದ ಮೇಲೆ ನನ್ನ ಎದೆ ಮೇಲೆ ನನ್ನ ಕೈಯನ್ನಿಟ್ಟು ಬಡಿತದಲ್ಲಿ ನಿಮ್ಮ ಹೆಸರನ್ನು ಕೇಳುತ್ತಾ ಮರೆಯುತ್ತೇನೆ. ನನ್ನ ಕಲ್ಪನೆಯನ್ನು ನೀವು ಕೇಳಿ ನನ್ನನ್ನು ಹುಚ್ಚ ಅಂತ ಮಾತ್ರ ತಿಳಿದುಕೊಳ್ಳಬೇಡಿ. ಪ್ರೇಮದ ಪರಿಣಾಮ ಈ ರೀತಿಯಾಗಿರುತ್ತದೆ ಅಂತ ನನಗೆ ನಿಮ್ಮಿಂದಲೇ ಗೊತ್ತಾಗಿದ್ದು. ನನ್ನ ಹೃದಯದ ಬಡಿತ ಈ ರೀತಿ ವೇಗವಾಗಿ ನೀವೇ ಬಡಿಯುತ್ತಿದ್ದಿರಿ. ಏನು ಮಾಡೋದು, ಗೊತ್ತಿಲ್ಲದೆ ನಿಮ್ಮನ್ನು ಹೃದಯದಲ್ಲಿ ಸೇರಿಸಿಕೊಂಡು ಬಿಟ್ಟಿದ್ದೇನೆ. ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನಿಜ ಹೇಳಿ. ನೀವು ಹೇಗೆ ನನ್ನ ಹೃದಯವನ್ನು ಸೇರಿಕೊಂಡಿರುವುದು? ಇನ್ನೂವರೆಗೂ ನನಗೆ ಈ ಪ್ರಶ್ನೆಗೆ ಉತ್ತರ ಮಾತ್ರ ದೊರಕಿಲ್ಲ"*

 ಎಂದಾಗ ಅವನ ಹುಚ್ಚುತನದ ಪ್ರಶ್ನೆಯನ್ನು ಕೇಳಿದ ಸುಮಾ, ಮಗು ತಡೆದುಕೊಳ್ಳುವುದಕ್ಕೆ ಆಗದೆ, ನಗತೊಡಗಿದಳು,. ಅಭಿ ಸಹ ನಗುತ್ತಲೇ

*" ಯಾಕೆ? ನನ್ನಂಥ ಹುಚ್ಚ ನಿಮಗೂ ಗಂಟುಬಿದ್ದ ಅಂತ ನನ್ನನ್ನು ಪರಿಹಾಸ್ಯ ಮಾಡಿಕೊಂಡು ನಗುತ್ತಿರುವುದು ಕಾಣುತ್ತೆ"*

 ಎಂದಾಗ ಸುಮಾ, ತನ್ನ ನಗುವನ್ನು ಹತೋಟಿಗೆ ತಂದು ಕೊಳ್ಳುತ್ತಾ,

*" ಅಯ್ಯೋ, ಹಾಗೇನಿಲ್ಲ. ಒಂದು ಹೆಣ್ಣು ಒಂದು ಗಂಡಿನ ಹೃದಯದ ಒಳಗೆ, ಒಂದು ಗಂಡು ಒಂದು ಹೆಣ್ಣಿನ ಹೃದಯದ ಒಳಗೆ, ಹೇಗೆ ಸೇರಿಕೊಳ್ಳುತ್ತಾರೆ ಎಂಬ ಪ್ರಶ್ನೆ ಅನಾದಿ ಕಾಲದಿಂದಲೂ ಇದೆ. ಇಲ್ಲಿಯವರೆಗೆ ಈ ಪ್ರಶ್ನೆಗೆ ಯಾರು ಉತ್ತರ ಕಂಡುಕೊಂಡಿಲ್ಲ. ಎಲ್ಲರ ಜೀವನದಲ್ಲಿ ಈ ಪ್ರಶ್ನೆ ಬಂದೇ ಬರುತ್ತದೆ. ಆದರೆ, ನಾನು ನೋಡಿದ ರೀತಿಯಲ್ಲಿ ಈ ಪ್ರಶ್ನೆಗೆ ಯಾರು ಉತ್ತರ ಕಂಡುಕೊಂಡಿಲ್ಲ. ನನ್ನ ಪ್ರಕಾರ, ಉತ್ತರವಿಲ್ಲದ ಪ್ರಶ್ನೆ ಎಂದರೆ ಇದೇ ಇರಬೇಕು"*

*" ಇದ್ದರೂ ಇರಬಹುದು. ನನಗಂತೂ ಗೊತ್ತಿಲ್ಲ. ನಾನಂತೂ ನಿಮ್ಮನ್ನು ನನ್ನ ಹೃದಯದಲ್ಲಿ ಅಧಿದೇವತೆಯನ್ನಾಗಿ ಮಾಡಿಕೊಂಡು, ನನ್ನ ಉಸಿರಿನ ಬಡಿತದಿಂದ ನಿಮ್ಮ ಹತ್ತಿರ ಯಾರೂ ಸುಳಿಯದಂತೆ ನೋಡಿಕೊಳ್ಳುತ್ತಿದ್ದೇನೆ. ನಿಮ್ಮ ಹೆಸರಿನ ಜಪಮಾಡುತ್ತ ನಿಮ್ಮ ಅನುಗ್ರಹವನ್ನು ಪಡೆಯಲು ಕಾದಿದ್ದೇನೆ. ನೀವು ಒಂದು ವೇಳೆ ನನ್ನ ಎದುರಿನಲ್ಲಿ ಬಂದರೆ, ಪರಿಮಳ ಬೀರುವ ಗುಲಾಬಿ ಹೂವಿನ ಹಾರವನ್ನು ನಿಮ್ಮ ಕೊರಳಿಗೆ ಹಾಕಿ, ದುಂಡು ಮಲ್ಲಿಗೆಯ ಮಾಲೆಯನ್ನು ನನ್ನ ಕೈಯಾರೆ ನಿಮ್ಮ ಮುಡಿಗೆ ಸಿಕ್ಕಿಸಿ, ನನ್ನ ಕಲ್ಪನೆಯಲ್ಲಿ ದಂತದಗೊಂಬೆಯಂತಿರುವ ನಿಮ್ಮನ್ನು, ನಿಜವಾಗಿಯೂ ದೇವತೆಯ ರೂಪದಲ್ಲಿ ಶೃಂಗರಿಸದಿದ್ದರೆ, ನೋಡಿ."*

 ಎಂದು ಅವನು ತನ್ನ ಮನಸ್ಸಿನ ಭಾವನೆಯನ್ನು ವಿವರಣೆ ಕೊಟ್ಟು ಹೇಳುತ್ತಿರುವಾಗ, ಅದನ್ನು ಕಣ್ಣುಮುಚ್ಚಿ ಕೇಳುತ್ತ ಕುಳಿತಿದ್ದ ಸುಮಾಳಿಗೆ, ನಿಜವಾಗಿ ಅವನು ತನ್ನ ಕಣ್ಣ ಮುಂದೆ ಬಂದು ಅವನು ಹೇಳಿದಂತೆ ತನ್ನನ್ನು ಶೃಂಗರಿಸಿದ ಎಂದು ಭಾವಿಸಿದಳು. ಹಾಗೆ ಅವನು ತನ್ನನ್ನು ಶೃಂಗರಿಸುವಾಗ ಅವನ ಕೈ ತನ್ನನ್ನು ಸ್ಪರ್ಶಿಸಿದಂತೆ ಭಾವಿಸಿಕೊಂಡು ರೋಮಾಂಚನಗೊಂಡಳು. ಆದರೆ ಹೊರಗಿನಿಂದ ಬಂದ ತಣ್ಣನೆಯ ಗಾಳಿ ಅವಳ ಮೈಯನ್ನು ಸ್ಪರ್ಶಿಸಿತು. ಗಾಳಿ ತನ್ನ ಮೈ ಸ್ಪರ್ಶಿಸಿದನ್ನು ಅಭಿ ತನ್ನ ಕೈಯಿಂದ ತನ್ನನ್ನು ಸ್ಪರ್ಶಿಸಿದ್ದಾನೆ ಎಂದು ಭಾವಿಸಿಕೊಂಡು, ರೋಮಾಂಚಿತಳಾಗಿ ಅದರ ಅನುಭವ ಪಡೆಯುತ್ತಿರುವಾಗ, ಮುಖದಲ್ಲಿ ನಾಚಿಕೆ ತನ್ನಿಂದತಾನೇ ಮೊಡಿ ಕೆನ್ನೆಗಳು ಕೆಂಪಾದವು. ಅದೇ ನಾಚಿಕೆಯ ಭಾವದಲ್ಲಿ

*"ಥೂ, ಹೋಗಿಪ್ಪ ನೀವು ತುಂಬಾ ತುಂಟರು"*

*" ನಾನು ಮೊದಲೇ ಹೇಳಿದ್ದೇನೆ. ನನ್ನ ಅಮ್ಮ ನನಗೆ ನಾನು ಕೃಷ್ಣನ ರೀತಿಯಲ್ಲಿ ಇರುತ್ತೇವೆ ಅಂತ ಹೇಳುತ್ತಾರೆ. ಅಂದಮೇಲೆ, ನನ್ನಲ್ಲಿ ತುಂಟತನ ಇರುವುದು ಸಹಜವಲ್ಲವೆ?"*

*" ನಾನೇನು ಉತ್ತರ ಹೇಳಬೇಕು? ನಿಮ್ಮ ತುಂಟತನದ ಬಗ್ಗೆ ನೀವು ಆಡುವ ಮಾತುಗಳಿಂದಲೇ ಗೊತ್ತಾಗುತ್ತದೆ. ಇನ್ನು, ನಿಜವಾಗಿ ನಾವು ಇಬ್ಬರೂ ಎದುರು ಬದಿರು ಆದಾಗ ಯಾವ ರೀತಿ ಆಗಬಹುದು? ನಿಮ್ಮ ತುಂಟಾಟ ಮಾತ್ರ ಇದಕ್ಕಿಂತಲೂ ಹೆಚ್ಚಾಗಿ ಇರುತ್ತದೆ ಅಂತ ನಾನು ಭಾವಿಸಿಕೊಂಡಿದ್ದೇನೆ. ಒಂದು ಮಾತು ಹೇಳಬೇಕಾದರೆ, ಹೆಣ್ಣು ಮಕ್ಕಳು ಯಾವಾಗಲೂ, ತುಂಟ ಗಂಡಸನ್ನು ಲೈಕ್ ಮಾಡುತ್ತಾರೆ. ಆದರೆ, ಗಂಡುಮಕ್ಕಳು ಮಾತ್ರ ಹೆಣ್ಣುಮಕ್ಕಳ ಎದುರಿನಲ್ಲಿ, ತಾವು ಡಿಸೆಂಟ್, ಮತ್ತು ಯಾವುದೇ ತುಂಟತನ ಮಾಡುವುದಿಲ್ಲ, ಅಂತ ಪೋಸ್ ಕೊಡುವುದನ್ನು ನೋಡಿ ನನಗೆ ಹಲವಾರು ಬಾರಿ ನಗು ಬಂದಿದೆ. "*

*" ಹೌದಾ? ಹಾಗಾದರೆ ನಾನು ನಾಳೆಯಿಂದ, ನನ್ನ ಆಫೀಸಿನಲ್ಲಿ ಇರುವ ಹೆಣ್ಣು ಮಕ್ಕಳ ಜೊತೆಗೆ ತುಂಟತನದಿಂದ ವರ್ತಿಸಿ ನೋಡುತ್ತೇನೆ. ನಿಮ್ಮ ಮಾತು ನಿಜವಾದಲ್ಲಿ, ಅವರು ಸಹ ನನ್ನನ್ನು ಇಷ್ಟಪಡುವವರು"*

 ಎಂದಾಗ ಈ ಮಾತಿನಿಂದ ಸುಮಾಳಿಗೆ ಸ್ವಲ್ಪ ಕಿರಿಕಿರಿ ಅನಿಸಿತು. ಆಕ್ಷೇಪಣೆ ಮಾಡುವ ದ್ವನಿಯಲ್ಲಿ,

*" ನಿಮ್ಮ ತಾಯಿ ನಿಮ್ಮನ್ನು ಕೃಷ್ಣನ ತರಹ ಅಂದಿದ್ದಾರೆ. ಆದರೆ ನೀವು ಕೃಷ್ಣ ಆಗಬೇಡಿ. ನೋಡಲು ಕೃಷ್ಣನ ತರಹ ಇದ್ದರೂ ಸಹ, ಹೃದಯ ರಾಮನ ತರಹ ಇದ್ದರೆ ಸಾಕು. ಎಲ್ಲ ಹುಡುಗಿಯರು ಬಯಸುವುದು ಇದನ್ನೇ"*

*" ಹೌದಾ?"*

  ಎಂದು ಪೆಚ್ಚಾದ ಧ್ವನಿಯಲ್ಲಿ ಅಭಿ ಅಂದಾಗ

*" ನಾನೇನು ಮಾತಿಗೆ ಜನರಲ್ ಆಗಿ ಹೇಳಿದರೆ ನೀವು ಮಾತ್ರ ಅದನ್ನು ಸ್ಪೆಷಲ್ ಆಗಿ ತೆಗೆದುಕೊಂಡರೆ ಹೇಗೆ? ನಾನು ಹೇಗೆ ಜನರಲ್ ಆಗಿ ಹೇಳಿದೆನೋ ನೀವು ಹಾಗೆ ಇದ್ದು ಬಿಟ್ಟರಾಯಿತು"*

 ಎಂದು ಹೇಳಿದಾಗ ಅವನು ಒಂದು ರೀತಿಯಿಂದ ನಿಟ್ಟುಸಿರುಬಿಟ್ಟ ಆಗ, ತನ್ನ ಮಾತಿನಿಂದ ಅಸಮಾಧಾನಗೊಂಡ ಇರುವಂತೆ ಸುಮಾಳಿಗೆ ಅನ್ನಿಸಿತು.

*" ಸರಿ, ಇನ್ನು ಮುಂದೆ ನೀವು ಹೇಳಿದಂತೆ ನಾನು ಕೇಳುತ್ತೇನೆ. ಇನ್ನು ಮುಂದೆ ನೀವು ನನ್ನ ಮಾಲೀಕರು, ಮತ್ತು ನಾನು ನಿಮ್ಮ ಆಳು. ಸರಿಯಲ್ಲವೇ?"*

 ಒಂದು ಹಾಸ್ಯದ ರೀತಿಯಲ್ಲಿ ಕೇಳಿದಾಗ, ಸುಮಾ

*" ನಮ್ಮಿಬ್ಬರಲ್ಲಿ, ಬಹುಜನ ಸಂಭೋದನೆ ಬೇಕಾ?"*

*" ನನಗೆ ಹೆಣ್ಣಿನ ಬಗ್ಗೆ ಗೌರವವಿದೆ. ಹೆಣ್ಣೊಂದು ಶಕ್ತಿ. ತನ್ನ ಮಡಿಲಿನಲ್ಲಿ ಒಬ್ಬ ಕಂದನನ್ನು ಒಂಬತ್ತು ತಿಂಗಳವರೆಗೆ, ಇಟ್ಟುಕೊಂಡು ಅದಕ್ಕೆ ಜನ್ಮ ನೀಡುವಾಗ, ಸತ್ತು ಬದುಕುತ್ತಾಳೆ. ಅದಕ್ಕೆ ಅವಳನ್ನು ಮಾತೆ ಅನ್ನುತ್ತಾರೆ. ಹೆಣ್ಣು ಎಂದರೆ ತಾಯಿ. ಯಾವುದೇ ಗಂಡಸಿಗೆ ಯಾವುದೇ ವಿಷಯದಲ್ಲಿ ಶಕ್ತಿ ತುಂಬಬೇಕಾದರೆ ಅದು ಹೆಣ್ಣಿನಿಂದ ಮಾತ್ರ ಸಾಧ್ಯ. ಗೊಂದಲದ ಗೂಡಾಗಿರುವ ಗಂಡಸಿನ ಮನಸ್ಸನ್ನು ಕಂಟ್ರೋಲ್ ಗೆ ತರುವ ಶಕ್ತಿ ಹಣ್ಣಿನಲ್ಲಿದೆ. ಅಂತ ಹೆಣ್ಣಿನ ಶಕ್ತಿ ನಿಮ್ಮಲ್ಲಿ ಇರುವಾಗ ಬಹುವಚನದಿಂದ ನಿಮ್ಮನ್ನು ಗೌರವಿಸುವ ನಿಟ್ಟಿನಲ್ಲಿ ನಾನು ಸಂಭೋಧನೆ ಮಾಡುತ್ತೇನೆ. ಅದರಿಂದ ನನಗೆ ಯಾವುದೋ ಒಂದು ತೃಪ್ತಿ ಮನಸ್ಸಿಗೆ ಸಿಗುತ್ತದೆ. ನಿಜ ಹೇಳಬೇಕಾದರೆ, ಇಲ್ಲಿಯತನಕ ಸಹ ನಾನು ಯಾವುದೇ ಹೆಣ್ಣಿಗೆ ನಮ್ಮ ತಾಯಿಯನ್ನು ಹಿಡಿದು ಒಂಟಿ ಭಾಷೆಯಲ್ಲಿ ಮಾತನಾಡಿಲ್ಲ "*

 ಎಂದು ಅವನು ಹೆಣ್ಣಿನ ಬಗ್ಗೆ ತನಗಿರುವ ಗೌರವವನ್ನು ಹೇಳಿದಾಗ, ಅದನ್ನು ಕೇಳಿದ ಸುಮಾ ಮನಸ್ಸಿನಲ್ಲಿಯೇ ಅವನ ಅಭಿಪ್ರಾಯದ ಕುರಿತು ಹೆಮ್ಮೆ ಪಟ್ಟುಕೊಂಡರು.

*" ನಾವು ಭೇಟಿಯಾಗುವ ಸಂದರ್ಭ ಯಾವಾಗ ಬರಬಹುದು?"*

 ಎಂದು ಸುಮಾ ಅಭಿಯನ್ನು ಪ್ರಶ್ನೆ ಮಾಡಿದಾಗ

*" ಇದಕ್ಕೆ ಉತ್ತರ ನಾಳೆ ಹೇಳುತ್ತೇನೆ. ಈಗ ಸಮಯ ಬಹಳವಾಗಿದೆ. ಮಲಗಿ. ನಾಳೆ ಮಾತನಾಡಿದರಾಯಿತು"*

 ಎಂದು ಹೇಳಿದಾಗ, ಸುಮಾ ಗಡಿಯಾರದ ಕಡೆಗೆ ನೋಡಿದಳು. ಮಧ್ಯರಾತ್ರಿ 1 ಗಂಟೆ 30 ನಿಮಿಷವಾಗಿತ್ತು. ಇನ್ನು ಮಾತು ಸಾಕು ಎಂದುಕೊಂಡು ಫೋನ್ ಡಿಸ್ಕನೆಕ್ಟ್ ಮಾಡಿದರು.



22


       ಬೆಳಿಗ್ಗೆ ಸುಮಾ ಎದ್ದಾಗ ಆರು ಗಂಟೆಯಾಗಿತ್ತು. ಹಿಂದಿನ ದಿನ ತಡರಾತ್ರಿಯವರೆಗೆ ಅಭಿ ಜೊತೆಯಲ್ಲಿ ಫೋನಿನಲ್ಲಿ ಆದ ಮಾತುಗಳನ್ನು ನೆನಪು ಮಾಡಿಕೊಂಡಳು. ಮನಸ್ಸು ತುಂಬಾ ಪ್ರಫುಲ್ಲವಾಯಿತು. ಬೇಗನೆ ಮನೆಯ ಎಲ್ಲ ಕೆಲಸವನ್ನು ಮುಗಿಸಿ, ಮತ್ತೆ ಕಾಲೇಜಿಗೆ ಹೋದಳು. ಕಾಲೇಜು ಮುಟ್ಟಿದಾಗ ಕ್ಲಾಸ್ ಶುರುವಾಗುವುದಕ್ಕೆ ಇನ್ನೂ ಸಮಯವಿತ್ತು. ಕಾವೇರಿ ಸಹ ಬಂದಿರಲಿಲ್ಲ. ಆಫೀಸಿನಲ್ಲಿ ವಿಚಾರಿಸಿದಾಗ ಇಂದು ಕಾವೇರಿ ರಜೆ ಎನ್ನುವ ವಿಷಯ ಗೊತ್ತಾಯಿತು. ಅವಳಿಗೆ ಫೋನ್ ಮಾಡಿದಾಗ, ಕಾವೇರಿ ಮಾತನಾಡಿ, ತನ್ನ ಗಂಡನಿಗೆ ಹುಷಾರಿಲ್ಲ ಹಾಸ್ಪಿಟಲ್ಗೆ ಕರೆದುಕೊಂಡು ಹೋಗಬೇಕಾಗಿದ್ದರಿಂದ ರಜೆ ಹಾಕಿರುತ್ತದೆ ಎಂದು ತಿಳಿಸಿದಳು. ಮರುದಿನ ಬರುವದಾಗಿ ಹೇಳಿದಳು.

      ಕಾವೇರಿಯು ಜೊತೆಗಿರದ ಕಾರಣ, ಸುಮಾಳಿಗೆ ತುಂಬಾ ಬೇಜಾರಾಗಿತ್ತು. ಸ್ಟಾಫ್ ರೂಮಿನಲ್ಲಿ ಒಬ್ಬಳೇ ಕುಳಿತುಕೊಂಡಳು. ಉಳಿಸಲು ಲೆಕ್ಚರರ್ ಗಳೆಲ್ಲ ತಮ್ಮ ತಮ್ಮ ಕ್ಲಾಸಿಗೆ ಹೋಗಿದ್ದರು. ಅಂದು ಸುಮಾಳಿಗೆ ಮೊದಲನೆಯ ಪಿರಿಯಡ್ ಇರಲಿಲ್ಲ. ಒಂದು ಪೀರಿಯಡ್ ಅವಧಿ ಮುಗಿಯುವವರೆಗೆ ಸುಮ್ಮನೆ ಕುಳಿತಿರಲು ಒಳಮನಸ್ಸು ಒಪ್ಪಲಿಲ್ಲ. ಹಾಗೆ ತನ್ನ ಫೋನ್ ತೆಗೆದು, ಫೇಸ್ಬುಕ್ ನೋಡತೊಡಗಿದಳು. ಅವಳಿಗೆ ಇದ್ದ ಸ್ನೇಹಿತರೆಲ್ಲ ಒಳ್ಳೊಳ್ಳೆಯ ಪೋಸ್ಟ್ ಮತ್ತು ವೀಡಿಯೊಗಳನ್ನು ಹಾಕಿದ್ದರು. ಆದರೆ ಸುಮಾಳಿಗೆ ಮಾತ್ರ, ಯಾವುದು ಇಷ್ಟವಾಗಲಿಲ್ಲ. ಬಾಲಿಶ ರೀತಿಯ ಟ್ಯಾಗ್ಗಳು, ವಿಡಿಯೋಗಳು ನೋಡುತ್ತಲೇ ಅವಳಿಗೆ ಬೇಜಾರಾಗಿತ್ತು. ಹಾಗೆ ನೋಡುತ್ತ ಹೋದಾಗ, ಒಂದು ಅತ್ಯಾಕರ್ಷಕ ನೋಟ್ ಕಣ್ಣಿಗೆ ಬಿತ್ತು.

*" ಪ್ರೀತಿಯಲ್ಲಿ ಚಿಗುರಿತು ನನ್ನ ಮನಸ್ಸು

 ಆಸೆಯಲ್ಲಿ ಅರಳಿತು ನನ್ನ ಮನಸ್ಸು

 ನನ್ನ ಮನಸ್ಸು ನನ್ನದಾಗಿದೆ

 ನಾ ಕಂಡ ಕನಸು

 ಬಾಡದಿರಲಿ ಹೂವಿನಂತ ಮನಸು

 ಎಂದಿಗೂ ನೀನು ನನ್ನ ಪ್ರೀತಿಸು"*

 ಇದನ್ನು ನೋಡುತ್ತಿದ್ದಂತೆ ಅವಳ ಮನಸ್ಸಿನಲ್ಲಿ ಪ್ರೀತಿಯ ತರಂಗಗಳು ಎದ್ದವು. ಹಾಗೆ ಆ ಲೈನುಗಳನ್ನು ಕಾಪಿ ಮಾಡಿಕೊಂಡು, ಮೆಸೆಂಜರ್ ದಲ್ಲಿ ಅಭಿಗೆ ಕಳುಹಿಸಿದಳು. ಇಂತಹ ಒಂದು ಕವಿತೆಗೆ ಅವನ ಪ್ರತಿಕ್ರಿಯೆ ಇದಕ್ಕಿಂತಲೂ ಒಳ್ಳೆಯ ರೀತಿಯಾಗಿ ರೋಮ್ಯಾಂಟಿಕ್ ಆಗಿ ಬರಬಹುದು ಎಂದು ಅವಳು ಊಹೆ ಮಾಡಿಕೊಳ್ಳುತ್ತಿದ್ದಳು.

     ಅಷ್ಟ್ರಲ್ಲಿ ಮೊದಲ ಪಿರಿಯೆಡ್ ಮುಗಿತ ಸಂಕೇತವಾಗಿ ಬೆಲ್ ಬಾರಿಸಿದಾಗ, ತನ್ನ ಮೊಬೈಲ್ ಆಫ್ ಮಾಡಿ ಕ್ಲಾಸಿಗೆ ಹೋಗಿ ಪಾಠ ಮಾಡಿ ಕೊಂಡು ಬಂದಳು. ಕಾಲೇಜು ಮುಗಿದಮೇಲೆ, ಮನೆಗೆ ಹೋಗಬೇಕೆಂದರೂ ಸಹ, ಕಾವೇರಿ ಮನೆಗೆ ಹೋಗಿ ಅವಳ ಪರಿಸ್ಥಿತಿಯನ್ನು ಗಮನಿಸಿಕೊಂಡು, ಅವಳ ಗಂಡನ ಯೋಗಕ್ಷೇಮ ವಿಚಾರಿಸಿಕೊಂಡು ಹೋದರಾಯಿತೆಂದುಕೊಂಡು, ತನ್ನ ಕಾರನ್ನು ಅವಳ ಮನೆಯ ಕಡೆಗೆ ತಿರುಗಿಸಿದಳು. ಕಾವೇರಿ ಮನೆ ತಲುಪಿದಾಗ, ಕಾವೇರಿ ಮನೆಕೆಲಸಗಳನ್ನು ಮಾಡುತ್ತಿದ್ದಳು. ತನ್ನ ಮನೆಯ ಮುಂದೆ ಕಾರು ಬಂದು ನಿಂತ ಸಪ್ಪಳ ಕೇಳಿದ ಅವಳು, ಬಾಗಿಲಿಗೆ ಬಂದು ನೋಡಿದಾಗ, ಸುಮಾ ತನ್ನ ಮನೆಗೆ ಬಂದಿದ್ದು ಕಂಡು ಅವಳಿಗೆ, ಸಂತೋಷವಾಯಿತು. ಅವಳನ್ನು ಒಳಗೆ ಬರಮಾಡಿಕೊಂಡು, ಹಾಲಿನಲ್ಲಿ ಕುಳ್ಳರಿಸಿದಳು. ಸುಮಾ, ಅವಳ ಗಂಡನ ಯೋಗಕ್ಷೇಮವನ್ನು ವಿಚಾರಿಸಿದಾಗ, ಬೆಡ್ ರೂಮಿನಲ್ಲಿ ಮಲಗಿದ್ದಾರೆ ಮತ್ತು ನಿದ್ರೆ ಬರುವಂತಹ ಇಂಜೆಕ್ಷನ್ ಡಾಕ್ಟರ್ ನೀಡಿದ್ದಾರೆ, ಮರುದಿನದವರೆಗೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ ಅಂತ ತಿಳಿಸಿದಳು. ಸುಮಾ ಬೇಡವೆಂದರೂ ಸಹ, ಅವಳಿಗೆ ಒತ್ತಾಯಪೂರ್ವಕವಾಗಿ ಅಲ್ಲಿಯೇ ಊಟ ಮಾಡಿಸಿದಳು. ಕಾವೇರಿ ಸಹ ಊಟ ಮಾಡಿದ ಕಾರಣ, ತನ್ನ ಜೊತೆಗೆ ಊಟ ಮಾಡಲು ಸುಮಾಳಿಗೆ ಒತ್ತಾಯ ಮಾಡಿದಾಗ, ಅವಳ ಪ್ರೀತಿಯ ಒತ್ತಾಯಕ್ಕೆ ಬೇಡವೆನ್ನಲು ಸುಮಾ, ಕಾವೇರಿಯ ಜೊತೆಗೆ ಊಟಕ್ಕೆ ಕುಳಿತಳು. ಊಟ ಮಾಡುತ್ತಿರುವಾಗ ಕಾವೇರಿ,

*" ಸುಮಿ, ಏನಂತಾನೆ ನಿನ್ನ ಲವ್ವರ್?"*

 ಎಂದು ಪ್ರಶ್ನೆ ಮಾಡಿದಾಗ, ಅಭಿಯ ನೆನಪಾಗಿ, ಹಿಂದಿನ ದಿನದ ಕಲ್ಪನೆಯ ಅನುಭವ ನೆನಪಾಗಿ, ಸುಮಾಳ ಮುಖ ಕೆಂಪಾಯಿತು. ಇದನ್ನು ಗಮನಿಸಿದ ಕಾವೇರಿ,

*" ಸುಮಿ, ಮ್ಯಾಟರ್ ತುಂಬಾ ಮುಂದುವರೆದಂತೆ ಕಾಣುತ್ತಿದೆ"*

 ಎಂದು ಹಾಸ್ಯ ಮಾಡಿದಾಗ, ಸುಮಾ

*" ಕಾವೇರಿ, ಅಂಥಾದ್ದೇನಿಲ್ಲ. ಹಾಗೇನು ನೀನು ಕಲ್ಪಿಸಿಕೊಳ್ಳಬೇಡ. ಏನೋ ನಿನ್ನೆ ಕೆಲವು ಮಾತುಗಳು ನಮ್ಮಿಬ್ಬರ ನಡುವೆ ಆಗಿವೆ. ಆದರೆ, ಇದಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ಕೊನೆಯಾಗುವುದು ಹೇಗೆ ಅಂತ ನನ್ನ ಯೋಚನೆ"*

*" ಇವೆಲ್ಲ ಬಿಡಿ ಸುಮಿ, ನೀನಂತೂ ಎಲ್ಲದಕ್ಕೂ ಗಟ್ಟಿಯಾಗಿ ಬಿಟ್ಟಿರುವೆ. ಯಾಕೆ ಭಯ. ನಿನಗೆ ಆಕ್ಷೇಪಣೆ ಮಾಡುವ ನಿನ್ನ ಸಂಬಂಧಿಕರು ಇಲ್ಲ. ಮತ್ತೆ ಯಾಕೆ ಚಿಂತೆ ಮಾಡುತ್ತೀಯಾ?"*

*" ಕಾವೇರಿ, ನೀನು ಹೇಳಿದಂತೆ ನನ್ನ ಮನೆಯಲ್ಲಿ ನನ್ನನ್ನು ಆಕ್ಷೇಪಣೆ ಮಾಡುವವರು ಯಾರು ಇಲ್ಲ. ಆದರೆ, ಅಭಿ ಮನೆಯಲ್ಲಿ ಮಾತ್ರ, ಅವನ ತಂದೆ ತಾಯಿ ಇದ್ದಾರೆ. ಒಂದು ವೇಳೆ ಅವರಿಂದ ಏನಾದರೂ ಆಕ್ಷೇಪಣೆ ಬಂದಲ್ಲಿ ಏನು ಮಾಡುವುದು ಅಂತ ನನ್ನ ಚಿಂತೆ"*

 ಎಂದು ತನ್ನ ಚಿಂತೆಯನ್ನು ಅವಳ ಮುಂದೆ ಹೇಳಿದಾಗ, ಕಾವೇರಿ ಗಂಭೀರವಾಗಿ,

*" ಸುಮಿ, ಇದು ನಿನ್ನ ಚಿಂತೆಯಲ್ಲ. ಅವನದು. ನಿನ್ನನ್ನು ಕೈ ಬಿಡುವುದಿಲ್ಲವೆಂದು ಅವನು ಮಾತು ಕೊಟ್ಟಿದ್ದಾನೆ ಅಂತ ನೀನು ಹೇಳಿರುವೆ. ಅಲ್ಲದೆ ನಾನು ಅವನ ಜೊತೆಗೆ ಮಾತನಾಡುವಾಗ, ನನ್ನ ಮುಂದೆಯೂ ಸಹ ಅವನು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾನೆ. ಒಂದುವೇಳೆ ಹಾಗೇನಾದರೂ ಆಕ್ಷೇಪಣೆ ಬಂದಲ್ಲಿ, ನಾನಂತೂ ಅವನೇನು ಹೊಣೆಗಾರನನ್ನಾಗಿ ಮಾಡಿ, ಅವನನ್ನೇ ಕೇಳುತ್ತೇನೆ. ನಾನು ಇರುವವರಿಗೆ ನೀನು ಯಾವ ಚಿಂತೆ ಮಾಡಬೇಡ. ನಿನ್ನ ಅಕ್ಕನ ಹಾಗೆ ನಾನು ನಿಂತು, ನಿನ್ನ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುತ್ತೇನೆ. ಒಂದು ಮಾತು ಹೇಳು, ಅಭಿ ಯನ್ನು ನೀನು ಮನಸಾರೆ ಒಪ್ಪಿಕೊಂಡಿರುವೆಯಾ?"*

*" ಕಾವೇರಿ, ಒಂದು ಹೆಣ್ಣು ಜೀವನದಲ್ಲಿ ಒಂದು ಬಾರಿ ಮಾತ್ರ, ತನ್ನ ಹೃದಯವನ್ನು ಬೇರೆಯವರಿಗೆ ಕೊಡುತ್ತಾಳೆ. ನನ್ನ ಜೀವನದಲ್ಲಿ ಇದು ಎರಡನೆಯ ಬಾರಿ. ಮೊದಲನೆಯ ಬಾರಿ ನನ್ನ ಗಂಡನಿಗೆ ನಾನು ಮನಸ್ಸು ಕೊಟ್ಟಿದ್ದೆ. ಅವರು ಹೋದ ನಂತರ ನನ್ನ ಹೃದಯ ಖಾಲಿ ಇದ್ದರೂ ಸಹ, ಅವರ ನೆನಪು ಮಾತ್ರ ಹೃದಯದಲ್ಲಿ ತುಂಬಿಕೊಂಡಿತ್ತು. ಆದರೆ ಆ ನೆನಪನ್ನು ನನ್ನ ಹೃದಯದಿಂದ ಅಭಿ ದೂರ ಮಾಡಿ, ಆ ಸ್ಥಾನದಲ್ಲಿ ಅವನು ಬಂದು ಕುಳಿತಿದ್ದಾನೆ. ಅಂದಮೇಲೆ, ನಾನು ಅವನಿಗೆ ಮನಸಾರೆ ನನ್ನ ಮನಸ್ಸನ್ನು ನೀಡಿದ್ದೇನೆ. ಇದರಲ್ಲಿ ಎರಡು ಮಾತಂತೂ ಇಲ್ಲವೇ ಇಲ್ಲ"*

 ಈ ಮಾತನ್ನು ಕೇಳಿದ ಕಾವೇರಿಗೆ ಸಮಾಧಾನವಾಯಿತು.

*" ಸುಮಿ, ಜೀವನದಲ್ಲಿ ನಿನಗೊಂದು ನೆಲೆ ಸಿಕ್ಕರೆ ನಿಧಿ ಸಿಕ್ಕಹಾಗೆ ಅಂತ ನನ್ನ ಭಾವನೆ. ನಿನ್ನೆ ಮಾಡಬೇಡ, ಎಲ್ಲವೂ ಸರಿಹೋಗುತ್ತೆ"*

 ಎಂದು ಕಾವೇರಿ ಹೇಳಿದಾಗ, ಅವಳ ಆಶಾಭಾವನೆ ಮಾತುಗಳನ್ನು ಕೇಳಿದ ಸುಮಾ, ಸಂತೋಷಗೊಂಡಳು.

      ಊಟ ಮುಗಿದ ಮೇಲೆ ಸ್ವಲ್ಪಹೊತ್ತು ಕಾವೇರಿಯ ಜೊತೆ ಕುಳಿತುಕೊಂಡು, ಸಾಯಂಕಾಲದ ಹೊತ್ತಿಗೆ ತನ್ನ ಮನೆಗೆ ಹೋದಳು. ಮತ್ತೆ ರಾತ್ರಿಯವರೆಗೆ ಅದು-ಇದು ಕೆಲಸ ಮಾಡಿ ಮುಗಿಸಿ, ಬೆಡ್ರೂಮಿಗೆ ಹೋಗಿ, ಕುಳಿತುಕೊಂಡಾಗ, ಪಕ್ಕದಮನೆಯ ಮುದುಕ ಮುದುಕಿ ಇಬ್ಬರೂ ಒಬ್ಬರಿಗೊಬ್ಬರು ಜಗಳಾಡಿ, ಕೊನೆಗೆ ಒಂದು ಹಾಡು ಹತ್ತಿತು.

*" ಆನಂದವೇ ಮೈ ತುಂಬಿದೆ

 ಆಕಾಶವೇ ಕೈ ಚಾಚಿದೆ

 ಸನಿಹದಲಿ ನೀನಿರಲು

 ಏನೊಂದು ಕಾಣದೆ"*

ಎಂದು ಹಿತವಾದ ಹಾಡು ಕೇಳಿಸತೊಡಗಿದೆ ಮೇಲೆ, ಮುದುಕ ಮುದುಕಿ ಇಬ್ಬರ ಜಗಳದಲ್ಲಿ, ಮುದುಕಿ ಗೆದ್ದಿರಬಹುದು ಎಂದು ಅಂದುಕೊಂಡಳು. ಅವರಿಬ್ಬರ ಜಗಳದ ರೀತಿಯನ್ನು ನೆನಪಿಸಿಕೊಳ್ಳುತ್ತಿದ್ದ ದಂತೆ ಸುಮಾಳಿಗೆ ನಗು ಉಕ್ಕಿ ಬಂತು.

       ಅಷ್ಟರಲ್ಲಿ, ಗಡಿಯಾರದ ಕಡೆಗೆ ನೋಡಿದಾಗ, 10:00 ಆಗಿಹೋಗಿತ್ತು. ಸಾಮಾನ್ಯವಾಗಿ ಅಭಿ, ಸಮಯಕ್ಕೆ ಸರಿಯಾಗಿ ಕಾಲ್ ಮಾಡುತ್ತಾನೆ. ಆದರೆ ಇಂದು ಮಾತ್ರ 15 ಐದು ನಿಮಿಷ ತಡವಾಗಿದ್ದರು ಅವನ ಕರೆಯ ಸುಳಿವು ಇಲ್ಲ. ಮೋಸ್ಟ್ಲಿ, ಬಿಜಿ ಇರಬಹುದು, ಇಲ್ಲ ಊಟ ಮಾಡುತ್ತಿರಬಹುದು ಎಂದುಕೊಂಡು, ಸ್ವಲ್ಪ ಹೊತ್ತು ನೋಡಿದರಾಯಿತು ಎಂದು ಕಾಯುತ್ತಾ ಕುಳಿತಳು. ಅರ್ಧ ಗಂಟೆ ಕಳೆದರೂ ಸಹ ಆಸಾಮಿ ನಾಪತ್ತೆ. ಮೆಸೆಂಜರ್ ತೆಗೆದು ನೋಡಿದಾಗ, ಬೆಳಿಗ್ಗೆಯಿಂದ ಆನ್ಲೈನ್ ಗೆ ಬಂದಿರಲಿಲ್ಲ ಅಭಿ. ತಾನು ಕಳುಹಿಸಿದ ಮೆಸೇಜ್ ಸಹ ಓದಿರಲಿಲ್ಲ. ಏನೋ ಆಗಿರಬಹುದೆಂಬ ಚಿಂತೆ ಅವಳ ಮನದಲ್ಲಿ ಬಂದಿತು. ಅವಳಿಗೆ ಗೊತ್ತಿಲ್ಲದೇ ಅವಳ ಮನಸ್ಸು, ಚಡಪಡಿಸತೊಡಗಿದೆ. ಅದೇ ಚಡಪಡಿಕೆಯಲ್ಲಿ ದೇವರಿಗೆ ಮನಸ್ಸಿನಲ್ಲಿ, ಕೈಮುಗಿದು ತನ್ನ ಅಭಿಗೆ ಏನೂ ಆಗಬಾರದು, ಅವನು ಸುರಕ್ಷಿತವಾಗಿರಲಿ ಎಂದು ಬೇಡಿಕೊಂಡಳು. ಅವಳಿಗೆ ಗೊತ್ತಿಲ್ಲದೇ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.

      ಅದೇ ವೇಳೆಗೆ ಯಾರೋ ಹೇಳಿದ ಮಾತು ನೆನಪಾಯಿತು. ಹಣೆಬರಹದಲ್ಲಿ ದೂರವಿದ್ದರೆ, ತಾವು ಪ್ರೀತಿಸಿದ ವ್ಯಕ್ತಿಗಳು ತಮ್ಮಿಂದ ಬೇಗನೆ ದೂರವಾಗುತ್ತಾರೆ. ತನ್ನ ಜೀವನದಲ್ಲಿ ಸಹ ಅದೇ ಆಗಿದೆ. ಸಾಯಬಾರದು ವಯಸ್ಸಿನಲ್ಲಿ ಗಂಡ ಸತ್ತುಹೋದ. ತಾನು ಬಹಳವಾಗಿ ನಂಬಿ ಪ್ರೀತಿಸುತ್ತಿದ್ದ ಅತ್ತೆ ಮತ್ತು ತಾಯಿ ಸಹ ತೀರಿಕೊಂಡಿದ್ದರು. ನನ್ನ ಜೀವನದಲ್ಲಿ ಅತಿಯಾಗಿ ಪ್ರೀತಿಸಿದ ಮೂರು ವ್ಯಕ್ತಿಗಳು ಇಂದು ತನ್ನ ಜೊತೆಗೆ ಇಲ್ಲದ್ದನ್ನು ನೆನಪು ಮಾಡಿಕೊಂಡು, ಅತಿಯಾಗಿ ಪ್ರೀತಿಸಿದರೆ ಇದೇ ರೀತಿ ಆಗುತ್ತದೆಯೆಂದು ತನ್ನನ್ನು ತಾನು ಕೇಳಿಕೊಂಡಳು. ಅದಕ್ಕೆ ಅವಳ ಮನ ಉತ್ತರಿಸಲಿಲ್ಲ. ಅಲ್ಲಿ ಉತ್ತರ ವಿದ್ದರೆ ತಾನೇ ಉತ್ತರಿಸಲು ಸಾಧ್ಯ. ಯಾಕೋ ತಡೆಯಲಾರದಂತೆ ತಳಮಳ ಅವಳ ಹೊಟ್ಟೆಯಲ್ಲಿ ಆಗತೊಡಗಿತು. ತಾನೇ ಅಭಿಗೆ ಫೋನ್ ಮಾಡಿದರೆ ಆಯಿತು ಎಂದುಕೊಂಡು, ತನ್ನ ಮೊಬೈಲ್ ಕೈಯಲ್ಲಿ ಹಿಡಿದು, ಮೆಸೆಂಜರ್ ಓಪನ್ ಮಾಡಿ, ಅದರ ಮುಖಾಂತರವಾಗಿ ಕಾಲ್ ಮಾಡಬೇಕು ಎನ್ನುವಷ್ಟರಲ್ಲಿ, ಅತ್ತಕಡೆಯಿಂದ ಅಭಿ ಕಾಲ್ ಮಾಡಿದ. ಲಗುಬಗೆಯಿಂದ ಕಾಲ್ ಸ್ವೀಕರಿಸಿದ ಸುಮಾ, ಸ್ವಲ್ಪ ಗಟ್ಟಿಯಾಗಿಯೇ,

*" ನಿಮ್ಮ ದಾರಿ ಕಾಯುತ್ತಾ ಇಲ್ಲಿ ಹೆಣ್ಣೊಂದು ಕುಳಿತಿರುತ್ತದೆ ಎಂಬ ಪರಿವೆ ನಿಮಗಿಲ್ಲವೇ? ಟೈಮ್ ಸೆನ್ಸ್ ನಿಮಗಿಲ್ಲವೇ?"*

 ಎಂದು ಸ್ವಲ್ಪ ಖಾರವಾಗಿ ಕೇಳಿದಾಗ, ಅಭಿ ಅತ್ತಿಂದ ನಗುತ್ತಾ,

*" ಇದೇ ಪ್ರಶ್ನೆ ನೀವು ಕೇಳುತ್ತೀರಿ ಎಂದು ನನಗೆ ಗೊತ್ತಿತ್ತು. ಇದೇ ವಿಷಯ ಕುರಿತು, ಇಷ್ಟು ಹೊತ್ತಿನ ತನಕ ನಾನು ಮಮ್ಮಿ ಜೊತೆಗೆ ಮಾತನಾಡುತ್ತಿದ್ದೆ."*

 ಎಂದು ಹೇಳಿದಾಗ, ಅವನ ಬಾಯಿಂದ ಅವನ ತಾಯಿಯ ಬಗ್ಗೆ ವಿಷಯ ತಿಳಿದ ಮೇಲೆ, ಒಂದು ರೀತಿಯಿಂದ ತಬ್ಬಿಬ್ಬಾದ ಸುಮಾ,

*" ನಿಮ್ಮ ತಾಯಿಗೆ, ನಮ್ಮ ವಿಷಯ ಹೇಳಿ ಬಿಟ್ಟಿರಾ?"*

*" ಇಂದಲ್ಲ ನಾಳೆ ಹೇಳಲೇಬೇಕಲ್ಲವೇ. ಇಂದು ಅಕಸ್ಮಾತ್ ಆಗಿ ನಮ್ಮ ತಾಯಿ ಬಂದಿದ್ದಾರೆ. ಇಲ್ಲೇ ಇದ್ದಾಳೆ. ನನ್ನ ಎದುರಿನಲ್ಲಿ. ನನ್ನ ಮದುವೆಯ ಸಲುವಾಗಿ ಪ್ರಸ್ತಾಪ ಮಾಡಲು, ನನ್ನ ಜೊತೆಗೆ ಜಗಳ ಮಾಡಿಕೊಂಡು ಹೋಗಲು ಮಮ್ಮಿ ಬಂದಿದ್ದಳು. ಆದರೆ ನಾನು ನಿಮ್ಮ ವಿಷಯವನ್ನು ಕೂಲಂಕುಶವಾಗಿ ಅವಳಿಗೆ ತಿಳಿಸಿದ್ದೇನೆ. ಇದೇ ಮಾತುಕತೆಯಲ್ಲಿ ಸಮಯ ಕಳೆದುಹೋಯಿತು. ಅದಕ್ಕಾಗಿ ಲೇಟ್ ಆಗಿದೆ. ಪ್ಲೀಸ್ ಸಾರಿ ರೀ"*

 ಎಂದು ದೈನ್ಯತೆಯಿಂದ ಅಭಿ ಅವಳನ್ನು ಕೇಳಿಕೊಂಡಾಗ ಮನಸ್ಸಿನಲ್ಲಿ ಅವನ ಮೇಲೆ ಇದ್ದ ಕೋಪವೆಲ್ಲ ಒಂದೇ ಸೆಕೆಂಡಿನಲ್ಲಿ ಕರಗಿಹೋಯಿತು. ಅವಳ ತಾಯಿಗೆ ತಮ್ಮಿಬ್ಬರ ವಿಷಯ ಗೊತ್ತಾಗಿದೆ ಎಂದಾಗ,

*" ಏನಂದ್ರು ನಿಮ್ಮ ತಾಯಿ?"*

 ಎಂದು ಸಾವಕಾಶವಾಗಿ ಅಳುಕುತ್ತ ಕೇಳಿದಾಗ,

*" ನೀವೇ ಮಾತನಾಡಿ, ಅವಳ ಕೈಯಲ್ಲಿ ಫೋನ್ ಕೊಡುತ್ತೇನೆ"*

 ಎಂದು ಹೇಳಿ, ತನ್ನ ತಾಯಿಯ ಕೈಯಲ್ಲಿ ಫೋನ್ ಕೊಟ್ಟುಬಿಟ್ಟ. ಅವನು ತನ್ನ ತಾಯಿಗೆ ಫೋನ್ ಕೊಡುತ್ತೇನೆ ಎಂದು ಹೇಳಿದಾಗ, ಮನಸ್ಸಿನ ಜೊತೆಗೆ ಅವಳ ಮೈ ಸಹ ಕಂಪಿಸತೊಡಗಿತು. ಮೊದಲ ಬಾರಿಗೆ ಅವನ ತಾಯಿಯ ಜೊತೆಗೆ ಮಾತನಾಡುತ್ತಿದ್ದೇನೆ, ಅವರ ಪರಿಚಯ ಸಹ ತನಗಿಲ್ಲ. ಅವರು ತಮ್ಮ ಬಗ್ಗೆ ಅವರು ಏನು ತಿಳಿದುಕೊಂಡಿರುತ್ತಾರೆ, ಅವರಿಗೆ ಯಾವ ರೀತಿಯಾದ ಭಾವನೆ ತನ್ನ ಮೇಲೆ ಬಂದಿರುವುದು ಎಂದು ಅಳುಕು ಮನದಲ್ಲಿ ಇತ್ತು. ಅಷ್ಟರಲ್ಲಿ ಅಭಿಯ ತಾಯಿ,

*" ಹಲೋ"*

 ಎಂದು ಸುಮಧುರವಾದ ಧ್ವನಿಯಲ್ಲಿ ಮಾತನಾಡಿದಾಗ, ಆ ದ್ವನಿ ಎಲ್ಲಿದ್ದರೂ ಸರಳತೆಯನ್ನು ಗಮನಿಸಿದ ಸುಮಾ, ಬಹುಶಃ, ಇವರು ತುಂಬಾ ಒಳ್ಳೆಯವರು ಇರಬೇಕು ಎಂದುಕೊಂಡು,

*" ಅಮ್ಮ ನಮಸ್ಕಾರ."*

 ಎಂದು ಸಂಪ್ರದಾಯದ ಪ್ರಕಾರ, ನಮಸ್ಕಾರ ಹೇಳಿ ಅವರೊಂದಿಗೆ ಮಾತಿಗೆ ಇಳಿದಳು. ಅವರು,

*" ನಿನ್ನ ಹೆಸರು ಸುಮಾ ತಾನೇ? ಸಾರಿ. ನಿನ್ನನ್ನು ಏಕವಚನದಲ್ಲಿ ಮಾತನಾಡಿಸಬಹುದೇ?"*

*" ಧಾರಾಳವಾಗಿ ಅಮ್ಮ. ನಾನು ನಿಮಗಿಂತ ವಯಸ್ಸಿನಲ್ಲಿ ಚಿಕ್ಕವಳು. ನನ್ನನ್ನು ನೀವು ಏಕವಚನದಲ್ಲಿ ಮಾತನಾಡಿಸಿದರೆ ನನಗೆ ಇರೋದು ಶ್ರೇಯಸ್ಸು"*

*" ತುಂಬಾ ಥ್ಯಾಂಕ್ಸ್ ಕಣಮ್ಮ. ನಾನು, ನನ್ನ ಮಗನ ಮದುವೆಯನ್ನು ಮಾಡಿಸುವ ಇಚ್ಛೆಯಿಂದ, ಹಲವಾರು ಹುಡುಗಿಯರ ಫೋಟೋಗಳನ್ನು ಜಾತಕದೊಂದಿಗೆ ತೆಗೆದುಕೊಂಡು ಬಂದು, ಅವನೊಂದಿಗೆ ಈ ಸಲವಾದರೂ ಜಗಳವಾಡಿ, ಮದುವೆಗೆ ಒಪ್ಪಿಸಲೇಬೇಕು ಅಂತ ತೀರ್ಮಾನ ಮಾಡಿಕೊಂಡು ಬಂದಿದೆ. ಆದರೆ, ನಾನು ಬರುವಷ್ಟರಲ್ಲಿ ನಿಮ್ಮಿಬ್ಬರ ನಡುವೆ, ನಡೆದ ಪ್ರೇಮ ಕಥೆ ಕೇಳಿ ನಾನು ಮೊದಲು ಶಾಕ್ ಆದೆ. ನಂತರ ನನ್ನ ಮಗ ನನಗೆ, ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿ ಹೇಳಿದ. ಇಷ್ಟು ಹೊತ್ತಿನ ತನಕ ನಿನ್ನ ಬಗ್ಗೆ ಅವನು ಬಹಳ ಮಾತನಾಡಿದ್ದಾನೆ. ಅವನು ನಿನ್ನ ಬಗ್ಗೆ ಹೇಳುವುದನ್ನು ಕೇಳಿದ ನಾನು, ನಿನ್ನನ್ನು ನೋಡಬೇಕೆಂದು ಅಪೇಕ್ಷೆ ಬಟ್ಟೆ. ಆದರೆ, ನೀನು ಅವನ ಮುಖ ನೋಡಿಲ್ಲ, ಅವನು ನಿನ್ನ ಮುಖ ನೋಡಿಲ್ಲ ಎಂಬ ವಿಷಯವನ್ನು ಕೇಳಿದ ಬಳಿಕ ನನಗೆ ವಿಚಿತ್ರ ವಾಯಿತು. ಯಾಕೆಂದರೆ, ಕೇವಲ ಹೃದಯದ ಬಡಿತದ ಮಿಡಿತದಿಂದ ಪ್ರೀತಿಸುವುದು ಈ ಯುಗದಲ್ಲಂತೂ ಸಾಧ್ಯವೇ ಇಲ್ಲದ ಪ್ರಸಂಗದಲ್ಲಿ, ನೀವಿಬ್ಬರೂ, ಒಬ್ಬರನ್ನೊಬ್ಬರು ನೋಡದೆ, ಪ್ರೀತಿಸಿ ರುವುದನ್ನು ಗಮನಿಸಿದಾಗ, ನಿಮ್ಮಿಬ್ಬರ ಹೃದಯ ಒಂದೇ ರೀತಿಯಾಗಿರುವುದು ಅಂತ ಅಂದುಕೊಂಡೆ. ನಿನಗೆ ಅಭ್ಯಂತರವಿಲ್ಲದಿದ್ದರೆ ನಿನ್ನ ಫೋಟೋ ಕಳುಹಿಸಲು ಸಾಧ್ಯವೇ? ನಾನೊಂದು ಬಾರಿ ನಿನ್ನನ್ನು ನೋಡಬೇಕು"*

 ಎಂದು ಅವರು ಹೇಳಿದಾಗ, ತಾನು ಮತ್ತು ಅಭಿ ಒಬ್ಬರನ್ನೊಬ್ಬರು ನೋಡಿಕೊಂಡಿಲ್ಲ, ಒಂದು ವೇಳೆ ತಾನು ಫೋಟೋ ಕಳುಹಿಸಿದ್ದರೆ, ಅದನ್ನು ಅಭಿ ಸಹ ನೋಡುವ ಸಂಭವವಿತ್ತು. ಒಂದು ವೇಳೆ ಹಾಗಾದಲ್ಲಿ, ತಮ್ಮಿಬ್ಬರ ಮನದಲ್ಲಿರುವ ಆಸೆ ಕರಗಿ ಹೋಗಿ ಬಿಡುತ್ತದೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಾಗ, ಅಭಿಯ ತಾಯಿ,

*" ಸುಮ, ನಾನು ನಿನ್ನ ಫೋಟೋ ನೋಡಿ ಒಂದೇ ಕ್ಷಣದಲ್ಲಿ ಅದನ್ನು ಡಿಲೀಟ್ ಮಾಡಿ ಬಿಡುತ್ತೇನೆ. ನೀನು ಹೇಗಿರುವೆ ಅಂತ ಅಭಿಗೆ ಮಾತ್ರ ಹೇಳುವುದಿಲ್ಲ. ಆದರೆ ನನಗೆ ಮಾತ್ರ ನಿನ್ನನ್ನು ನೋಡುವ ಆಸೆ. ನನ್ನ ಮಗನ ಸೆಲೆಕ್ಷನ್, ಸರಿಯಾಗಿಯೇ ಇರುತ್ತದೆ, ಅವನೇನಾದರೂ ತೀರ್ಮಾನ ತೆಗೆದುಕೊಂಡರೆ, ಸರಿಯಾಗಿ ತೆಗೆದುಕೊಂಡಿರುತ್ತಾರೆ ಅಂತ ನನಗೆ ಪಕ್ಕಾ ಗೊತ್ತು. ನನ್ನ ಸಮಾಧಾನಕರವಾಗಿ, ನಿನ್ನನ್ನು ನೋಡುವ ಉದ್ದೇಶದಿಂದ ಫೋಟೋ ಕೇಳುತ್ತಿದ್ದೇನೆ"*

 ಎಂದು ಅವರು, ಫೋಟೋ ನೋಡಿದ ಕೂಡಲೇ ಡಿಲೀಟ್ ಮಾಡುತ್ತೇನೆ ಎಂಬ ಭರವಸೆ ನೀಡಿದ ಮೇಲೆ, ಇಲ್ಲವೆಂದು ಹೇಳಿ ಅವರಿಗೆ ಅಗೌರವ ತೋರಿಸುವುದೂ ಬೇಡ ಎಂದುಕೊಂಡು, ಅದಕ್ಕೆ ಒಪ್ಪಿಕೊಂಡು, ಮೊಬೈಲ್ ದಲ್ಲಿ ಇದ್ದ ತನ್ನದೊಂದು ಫೋಟೋ ಕಳುಹಿಸಿದಳು.

     ಮೆಸೆಂಜರ್ ನಲ್ಲಿ ಸುಮಾಳ ಪೋಟೋ ಪ್ರಕಟವಾಗುತ್ತಿದ್ದಂತೆ, ಅದನ್ನು ನೋಡಿದ ಅವರ ತಾಯಿ,

*" ನಾನು ನೋಡಿದೆ ಸುಮ, ಮೊದಲು ನಿನ್ನ ಫೋಟೋ ಡಿಲೀಟ್ ಮಾಡು, ಇಲ್ಲವಾದರೆ ಅಭಿ ನೋಡುವ ಸಂಭವವಿದೆ. ನಿಮ್ಮಿಬ್ಬರ ಆಸೆಗೆ ನಾನು ನಡುವೆ ಬರುವುದಿಲ್ಲ. ಡಿಲೀಟ್ ಮಾಡು ನಂತರ ಮಾತನಾಡುತ್ತೇನೆ"*

 ಎಂದು ಅವರು ನುಡಿದಾಗ, ಸುಮಾ ಒಂದು ರೀತಿಯ ಸಂತೋಷದಿಂದ, ತನ್ನ ಫೋಟೋವನ್ನು ಡಿಲೀಟ್ ಮಾಡಿ ಮತ್ತೆ ಅವರ ಜೊತೆಯಲ್ಲಿ ಮಾತನಾಡತೊಡಗಿದಳು. ಅವರು,

*" ಸುಮಾ, ಅಭಿ ತುಂಬಾ ತುಂಟ ಹುಡುಗ. ಚಿಕ್ಕಂದಿನಿಂದಲೂ ಅವನನ್ನು ಸಂಭಾಳಿಸುವುದೇ ದೊಡ್ಡ ಕೆಲಸವಾಗಿತ್ತು. ನಿನಗೊಂದು ವಿಷಯ ಹೇಳ್ತೀನಿ. ಯಾರೂ ಮಾಡದ ಕೆಲಸವನ್ನು ನಾನು ಮಾಡುತ್ತೇನೆ ಎಂಬ ಹಠ ಮೊದಲಿನಿಂದಲೂ ನನ್ನ ಮಗನಿಗೆ. ನಿನ್ನನ್ನು ಪ್ರೀತಿಸಿರುವುದು ಸಹ, ಇದೇ ಕಾರಣಕ್ಕೆ ಅಂತ ಅಂದುಕೊಳ್ಳುತ್ತೀನಿ. ಆದರೆ ನನ್ನ ಮಗ ಹೂವಿನಂತ ಮನಸ್ಸುಳ್ಳವರು. ನನಗಿರುವುದು ಇವನೊಬ್ಬನೇ ಮಗ. ಇವನ ಸಂತೋಷವೇ ನಮ್ಮ ಕುಟುಂಬದ ಸಂತೋಷ. ಅಂದಹಾಗೆ, ನಿಮ್ಮಿಬ್ಬರ ನಡುವಿನ ವಯಸ್ಸಿನ ಅಂತರವನ್ನು ಸಹ ಅವನು ನನಗೆ ತಿಳಿಸಿದ್ದಾನೆ"*

 ಎಂದು ಹೇಳುತ್ತಿರುವಂತೆ, ವಯಸ್ಸಿನ ಅಂತರ ಮಾತಿನಲ್ಲಿ ಬಂದ ಕಾರಣ, ಸುಮಾಳ ಹೃದಯ ನಡುಗತೊಡಗಿತು. ಈ ವಿಷಯ ಕುರಿತು ಅವರ ಪ್ರತಿಕ್ರಿಯೆ ಹೇಗಿರಬಹುದು ಎಂದು ಅಂದುಕೊಳ್ಳುತ್ತಿರುವಾಗಲೇ,

*" ಸುಮಾ, ನಾನು ಮತ್ತು ಅಭಿಯ ತಂದೆ ಇಬ್ಬರೂ ಪ್ರೀತಿಸಿ ಮದುವೆಯಾದವರು. ನಮಗೆ ಹೃದಯದ ಬಡಿತವೇ ಏನು ಮತ್ತು ಪ್ರೀತಿ ಎಂದರೇನು ಎಂದು ಚೆನ್ನಾಗಿ ಗೊತ್ತು. ವಯಸ್ಸಿನ ಭೇದ ಅದೇನು ದೊಡ್ಡ ವಿಷಯವಲ್ಲ. ಅರ್ಥಮಾಡಿಕೊಂಡರೆ ಸಾಕು. ಮುಖ್ಯವಾಗಿ ಒಬ್ಬರನ್ನೊಬ್ಬರು ಅರಿತುಕೊಂಡು ಚೆನ್ನಾಗಿ ಜೀವನ ನಡೆಸಬೇಕು. ಅಂದಾಗ ಮಾತ್ರ ಪ್ರೀತಿ, ಪ್ರೀತಿಸಿದ್ದು, ಪ್ರೀತಿಸಿದವರನ್ನು ಹೊಂದಿದ್ದು ಸಾರ್ಥಕವಾಗಿ ಅದು ಸಾರ್ಥಕ ಜೀವನ ಎನ್ನಿಸಿಕೊಳ್ಳುತ್ತದೆ. ದೇವಾನುದೇವತೆಗಳು ಸಹ, ಪ್ರೀತಿಯ ಮೋಹದಿಂದ ಹೊರತಾಗಿಲ್ಲ. ಪುರಾಣಗಳನ್ನು ನೋಡಿದರೆ, ಸಾಕಷ್ಟು ದೇವತೆಗಳು ಸಹ ಪ್ರೀತಿಸಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು, ಅವರಿಗೂ ಸಹ ದೈವತ್ವವನ್ನು ನೀಡಿದವರು. ನಾವು ಯಕಶ್ಚಿತ ಇನ್ನು ಮಾನವರು, ಆ ಪ್ರೀತಿಯ ಬಲೆಯಿಂದ ಹೊರತಾಗಿರುವುದಕ್ಕೆ ನಮ್ಮಿಂದ ಸಾಧ್ಯವೇ ಇಲ್ಲ. ಯೋಚನೆ ಮಾಡಬೇಡ. ನಾನು, ಎರಡು ದಿನ ಬಿಟ್ಟು ದಿಲ್ಲಿಗೆ ಹೋಗಿ, ಅಭಿಯ ತಂದೆಯ ಜೊತೆಗೆ ಮಾತನಾಡಿ ಇದಕ್ಕೊಂದು ಮಧುರವಾದ ಕೊಂಡಿ ತಯಾರಿಸುತ್ತೇನೆ. ಒಂದು ಕೆಲಸ ಮಾಡು, ನಿನ್ನ ಮೊಬೈಲ್ ನಂಬರ್ ಹೇಳು. ನಾನು ನನ್ನ ಮೊಬೈಲಿನಲ್ಲಿ ಫೀಡ್ ಮಾಡಿಕೊಳ್ಳುತ್ತೇನೆ"*

 ಎಂದವರು ನೇರಾನೇರವಾಗಿ ತನ್ನ ಪ್ರೀತಿಯನ್ನು, ವಯಸ್ಸಿನ ಭೇದವಿಲ್ಲದೆ ಅಂಗೀಕಾರ ಮಾಡಿಕೊಂಡಾಗ, ಸುಮಾಳಿಗೆ ತುಂಬಾ ಸಂತೋಷವಾಯಿತು. ಅದೇ ಸಂತೋಷದಲ್ಲಿ ಅವಳು ತನ್ನ ಮೊಬೈಲ್ ಫೋನ್ ನಂಬರ್ ವಿಷಯ ತಾಯಿಗೆ ಕೊಟ್ಟುಬಿಟ್ಟಳು. ಅದನ್ನು, ಪಡೆದ ಅಭಿಯ ತಾಯಿ,

*" ಸುಮಾ, ಅಭಿಯ ಕೈಗೆ ಕೊಡ್ತೀನಿ ಮಾತನಾಡು."*

 ಎಂದು ಹೇಳಿ ಫೋನ್ ಅಭಿ ಕೈಗೆ ಕೊಟ್ಟರು.

*" ಹಲೋ, ಹೇಗಿತ್ತು ಸರ್ಪ್ರೈಸ್?"*

 ಎಂದು ತುಂಟತನದ ಧ್ವನಿಯಲ್ಲಿ ಕೇಳಿದಾಗ, ಸುಮಾ, ಸಂತೋಷದಿಂದ

*" ನನಗೆ ಏನು ಹೇಳಬೇಕು ಅಂತ ಮಾತ್ರ ಗೊತ್ತಾಗುತ್ತಿಲ್ಲ. ಯಾಕೋ ಗೊತ್ತಿಲ್ಲ ಇಂದು ನನಗೆ ಸಂತೋಷದಲ್ಲಿ ಮಾತುಗಳು ಬರುವ ಹಾಗೆ ಕಾಣುತ್ತಿಲ್ಲ ನಾಳೆ ಮಾತನಾಡೋಣವೇ?"*

 ಎಂದು ಅವನನ್ನು ಕೇಳಿದಾಗ

*" ಆಯ್ತು, ನಾನು ಸಹ ಮಮ್ಮಿ ಜೊತೆಗೆ ಮಾತನಾಡುವುದಿದೆ. ನಾಳೆ ಮಾತನಾಡೋಣ. ಗುಡ್ ನೈಟ್"*

 ಎಂದು ವಿಶ್ ಮಾಡಿ ಫೋನ್ ಇಟ್ಟ.

      ಇತ್ತ ಕಡೆಗೆ ಸುಮಾಳಿಗೆ ಎಲ್ಲವೂ ಅಯೋಮಯವಾಗಿತ್ತು. ಋಷಿಯ ತಂದೆ ತಾಯಿಗೆ ವಿಷಯ ಗೊತ್ತಾದರೆ, ಅವರು ಏನಾದರೂ ರಂಪಾಟ ಮಾಡುತ್ತಾರೆಂಬ ಭಯ ಅವಳ ಮನದಲ್ಲಿ ಕಾಡುತ್ತಿತ್ತು. ಆದರೆ, ಅಭಿ ತಾಯಿ ಮಾತನಾಡಿದ್ದನ್ನು ಕೇಳಿದ ಮೇಲೆ, ತನ್ನ ಯೋಚನೆ ತಲೆಕೆಳಗಾಗಿತ್ತು. ಅದು ಒಂದು ರೀತಿಯಲ್ಲಿ ಅವಳಿಗೆ ಸಂತೋಷ ತಂದಿತ್ತು. ಕಾವೇರಿಗೆ ಹೇಳಬೇಕೆಂದುಕೊಂಡರೂ ಸಹ, ರಾತ್ರಿ ಬಹಳವಾಗಿದೆ ಕಾರಣ, ಮರುದಿನ ಕಾಲೇಜಿಗೆ ಹೋದಾಗ ಹೇಳಿದರಾಯಿತು ಎಂದುಕೊಂಡು, ಪಕ್ಕದಮನೆಯ ಮುದುಕಿ ಹಚ್ಚಿದ ಹಾಡನ್ನು, ನೆನಪಿಸಿಕೊಳ್ಳುತ್ತಾ ನಿದ್ರೆಗೆ ಜಾರಿದಳು ಸುಮಾ.


23


ಬೆಳಿಗ್ಗೆ ಎದ್ದು ತನ್ನೆಲ್ಲ ಕೆಲಸ ಮುಗಿಸಿ, ಕಾಲೇಜಿಗೆ ಹೋದಳು. ಕಾವೇರಿ ಸಿಕ್ಕಳು. ಅವಳಿಗೆ ಹಿಂದಿನ ದಿನ ನಡೆದ ಎಲ್ಲ ವಿಷಯವನ್ನು ಹೇಳಿದಾಗ ಅವಳು ಸಹ ಸಂತೋಷ ಪಟ್ಟು, ಫ್ರೀ ಆದ ಮೇಲೆ ಮಾತನಾಡಿದರಾಯಿತು ಎಂದು ಹೇಳಿ ತನ್ನ ಕ್ಲಾಸ್ ಅಟೆಂಡ್ ಮಾಡಲು ಹೋದಳು. ಸುಮಾ ಸಹ ತನ್ನ ಕ್ಲಾಸ್ ಅಟೆಂಡ್ ಮಾಡಲು ಹೋದಳು. ಅಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಲಿರುವಾಗ ಕ್ಲಾಸ್ ಹತ್ತಿರ ಕಿಟಕಿಯಲ್ಲಿ ಯಾರೋ ಒಬ್ಬ ಮಹಿಳೆ ನಿಂತಿದ್ದು ಕಂಡು ಬಂತು. ಯಾರಿರಬಹುದು ಎಂದು ಅವಳಿಗೆ ಕುತೂಹಲ ಬಂದರೂ ಯಾರೋ ಸ್ಟೂಡೆಂಟ್ಸ್ ತಾಯಿ ಇರಬಹುದು ಎಂದುಕೊಂಡು ಅತ್ತ ಕಡೆಗೆ ಲಕ್ಷಕೊಡದೆ ಸುಮ್ಮನಾದಳು. ಸುಮಾರು 12 ಘಂಟೆಯ ಸುಮಾರಿಗೆ ಸುಮಾಳ ಎಲ್ಲ ಕ್ಲಾಸ್ ಮುಗಿದು ಅವಳು ಬಿಡುವಾದಳು. ಹಾಗೆ ಸ್ಟಾಫ್ ರೂಮಿನಲ್ಲಿ ಕುಳಿತುಕೊಂಡಾಗ, ಒಬ್ಬ ಸ್ಟೂಡೆಂಟ್ ಬಂದು, ಸ್ಟಾಫ್ ರೂಮಿನ ಹತ್ತಿರ ಇರುವ ಬಾಗಿಲಿನ ಹತ್ತಿರ ನಿಂತುಕೊಂಡು 

*"ಮಿಸ್"*

ಎಂದು ಅವಳನ್ನು ಕೂಗಿದ. 

*"ಏನು?"*

ಎಂದು ಅವನನ್ನು ಕೇಳಿದಾಗ, 

*"ಮಿಸ್, ನಿಮ್ಮ ಎಲ್ಲ ಕ್ಲಾಸ್ ಮುಗಿತಾ?"*

ಎಂದಾಗ ಒಳ್ಳೆ ಹೈಯರ್ ಆಫೀಸರ್ ತರ ಒಬ್ಬ ಸ್ಟೂಡೆಂಟ್ ಆಗಿ ಹೀಗೆಲ್ಲ ಮಾತಾಡ್ತಿದ್ದಾನೆ ಎಂದುಕೊಂಡು ಸ್ವಲ್ಪ ಸಿಟ್ಟಿನಲ್ಲಿ,

*"ಯಾಕೋ ನಿನಗದೆಲ್ಲ. ನೀನು ಸ್ಟೂಡೆಂಟ್, ಸ್ಟೂಡೆಂಟ್ ತರಹ ಬಿಹೇವ್ ಮಾಡು"*

ಎಂದು ಹೇಳಿದಾಗ ಆ ಸ್ಟೂಡೆಂಟ್ ಸ್ವಲ್ಪ ಹೆದರಿಕೆಯಿಂದ

*"ಸಾರೀ ಮಿಸ್, ನಾನು ಕೇಳಿದ್ದ್ದು ಅದಕ್ಕಲ್ಲ. ಅಲ್ಲಿ ಪಾರ್ಕಿಂಗ್ ಲಾಟ್ ದಲ್ಲಿ ಒಬ್ಬರು ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ನಾನು ಅಲ್ಲಿಗೆ ಹೋದಾಗ ನನ್ನನ್ನು ಕರೆದು ನಿಮ್ಮ ಕ್ಲಾಸ್ ಮುಗಿದಿದ್ದರೆ ಅವರನ್ನು ಬಂದು ಭೇಟಿಯಾಗಬೇಕು ಅಂತ ಹೇಳಿದ್ದಾರೆ"*

ಎಂದು ಹೇಳಿದಾಗ, ಸುಮಾಳಿಗೆ ಕುತೂಹಲ ಉಂಟಾಯಿತು. ತನ್ನನ್ನು ಯಾರು ಭೇಟಿಯಾಗಲು ಬಂದಿರಬಹುದು ? ಎಂದು ಯೋಚನೆ ಮಾಡತೊಡಗಿದಳು. ತನ್ನ ಸಂಬಂಧಿಕರಂತೂ ಯಾರಿಲ್ಲ. ಹಾಗಾದರೆ ಬಂದಿರುವವರು ಯಾರು? ಎಂದು ಅಂದುಕೊಳ್ಳುತ್ತ, ಸ್ಟಾಫ್ ರೂಮಿನಿಂದ ಹೊರಗೆ ಹೋಗಬೇಕೆನ್ನುವಷ್ಟರಲ್ಲಿ, ಕಾವೇರಿ ಬಂದಳು. ಅವಳು ಬಂದಿದ್ದು ನೋಡಿ 

*"ಕಾವೇರಿ, ನಿಂಗೇನಾದರೂ ಕ್ಲಾಸ್ ಇದೆಯಾ?"*

*"ಇಲ್ಲ ಎಲ್ಲ ಕ್ಲಾಸ್ ಮುಗಿತು"*

*"ಹಾಗಾದರೆ ನನ್ನ ಜೊತೆ ಬಾ"*

*"ಎಲ್ಲಿಗೆ?"*

*"ಪಾರ್ಕಿಂಗ್ ಲಾಟ್ ಹತ್ತಿರ ಯಾರೋ ನಿಂತುಕೊಂಡು ನನ್ನನ್ನು ಕರೆಯಲು ಕಳುಹಿಸಿದ್ದಾರೆ ಅದಕ್ಕೆ ಯಾರು ಅಂತ ನೋಡೋಣ"*

*"ಸರಿ ನಡಿ"*

ಎಂದು ಕಾವೇರಿ ಸುಮಾಳ ಜೊತೆಗೆ ಹೊರಟಳು. 

ಪಾರ್ಕಿಂಗ್ ಏರಿಯಾ ಹತ್ತಿರ ಹೋಗುತ್ತಿದ್ದಂತೆ, ಅಲ್ಲಿ ಒಂದು ಬಿಳಿ ಸ್ವಿಫ್ಟ್ ಕಾರು ನಿಂತಿತ್ತು. ಅದಕ್ಕೆ ಒರಗಿಕೊಂಡು ಒಬ್ಬ ಹೆಣ್ಣುಮಗಳು ನಿಂತಿದ್ದಳು. ಎತ್ತರವಾಗಿದ್ದ ಅವಳು ಫ್ಯಾಷನೆಬಲ್ ಆಗಿ ಸೀರೆ ಉಟ್ಟುಕೊಂಡಿದ್ದಳು, ಆದರೆ ಸಾಂಪ್ರದಾಯಿಕವಾಗಿ. ಹಣೆಯಲ್ಲಿ ಸುಂದರವಾದ ಕೆಂಪು ಬೊಟ್ಟು ಆ ಹೆಣ್ಣುಮಗಳ ಬಿಳಿ ಹಣೆಯಲ್ಲಿ ಎದ್ದು ಕಾಣುತ್ತಿತ್ತು. ಅವಳ ಮುಖಕ್ಕೆ ಆ ಕೆಂಪು ಬೊಟ್ಟು ತುಂಬಾ ಶೋಭೆ ತಂದಿತ್ತು. ಕೊರಳಲ್ಲಿ ಕಂಡು ಕಾಣದಂತಿರುವ ಸಣ್ಣನೆಯ ಮಂಗಳ ಸೂತ್ರ. ಈಗಿನ ಫ್ಯಾಷನ್ ಪ್ರಕಾರ ಧರಿಸಿಕೊಂಡಿದ್ದಳು. ಸಡಿಲವಾಗಿ ಕೂದಲು ಬಾಚಿ ಕಟ್ಟಿಕ್ನೋದು ಮೂಡಿ ತುಂಬಾ ಕನಕಾಂಬರ ಹೂವು ಮುಡಿದುಕೊಂಡಿದ್ದಳು. ಕಣ್ಣಿಗೆ ಗೋಲ್ಡನ್ ಫ್ರೇಮ್ ಇದ್ದ ಕನ್ನಡಕ, ಅವಳ ಮುಖಕ್ಕೆ ಒಂದು ರೀತಿಯಾಗಿ ಸೌಂದರ್ಯ ತಂದು ಕೊಟ್ಟಿತ್ತು. ಆದರೆ ಎಲ್ಲಿಯೋ ನೋಡುತ್ತಾ ಏನನ್ನೋ ಯೋಚನೆ ಮಾಡುತ್ತಿರುವಂತಿತ್ತು, ಅವಳು ನಿಂತ ಭಂಗಿ. ಹಾಗೆ ಅವಳ ಸಮೀಪಕ್ಕೆ ಹೋದಾಗ, ಇವರಿಬ್ಬರು ಬಂದ ಹೆಜ್ಜೆ ಸಪ್ಪಳದಿಂದ ಅವಳ ಯೋಚನೆಗೆ ಭಂಗವಾಗಿ, ಸಪ್ಪಳ ಬಂದ ಕಡೆಗೆ ತಿರುಗಿ ನೋಡಿದಾಗ ಸುಮಾ ಮತ್ತು ಕಾವೇರಿ ಕಂಡರು.

    ಸುಮಾ ಹಾಗೆ ಮುಂದೆ ಹೋಗಿ, 

*" ತಾವೇನಾ ನನ್ನನ್ನು ಬರಹೇಳಿದ್ದು?"*

 ಎಂದು ಸೌಮ್ಯವಾಗಿ ಕೇಳಿದಾಗ, ಆ ಹೆಣ್ಣುಮಗಳು ಒಂದು ಹೆಜ್ಜೆ ಮುಂದೆ ಬಂದು

*" ಸುಮ ಅಂದರೆ ನೀನೇನಾ?"*

 ಎಂದು ಆ ಮಹಿಳೆ ಸುಮಾಳನ್ನು ಪ್ರಶ್ನಿಸಿದಾಗ, ಇವರ ಧ್ವನಿಯನ್ನು ಎಲ್ಲೋ ಕೇಳಿದಂತೆ ಸುಮಾಳಿಗೆ ಭಾಸವಾದರೂ ಸಹ, ಕೂಡಲೇ ನೆನಪಿಗೆ ಬಾರದೇ,

*" ಹೌದು, ಆದರೆ ನೀವು ಯಾರು ಎಂದು ಮಾತ್ರ ನನಗೆ ತಿಳಿಯಲಿಲ್ಲ"*

 ಎಂದು ಹೇಳುತ್ತಿರುವಂತೆ, ಆ ಮಹಿಳೆ ಮುಂದೆ ಬಂದು ತನ್ನ ಕೈಯಿಂದ ಸುಮಾಳ ಕೆನ್ನೆಯನ್ನು ಪ್ರೀತಿಯಿಂದ ಸವರುತ್ತ,

*" ನಾನು ಅಭಿ ತಾಯಿ. ನಿನ್ನೆ ತಾನೆ ಫೋನಿನಲ್ಲಿ ನಿನ್ನ ಜೊತೆಗೆ ಮಾತನಾಡಿದ್ದೆ. ಇಷ್ಟು ಬೇಗ ಮರೆತೆಯಾ"*

 ಎಂದು ಪ್ರೀತಿಯಿಂದ ಮಾತನಾಡಿಸಿದಾಗ, ಸುಮಾಳಿಗೆ ಹಿಂದಿನ ದಿನ ರಾತ್ರಿ ಫೋನಿನಲ್ಲಿ ಅವರ ಜೊತೆಗೆ ಮಾತನಾಡಿದ್ದ ನೆನಪಾಗಿ, ಕೂಡಲೇ ಅವರ ಕಾಲಿಗೆರಗಿ ನಮಸ್ಕಾರ ಮಾಡಿದಳು. ಸುಮಾ ಬಗ್ಗಿ ನಮಸ್ಕಾರ ಮಾಡುತ್ತಿರುವಂತೆ, ಆ ಮಹಿಳೆ ತನ್ನೆರಡೂ ಕೈಗಳಿಂದ ಸುಮಾಳ ಭುಜವನ್ನು ಹಿಡಿದು ಮೇಲೆತ್ತಿ, ಅವಳನ್ನು ಪ್ರೀತಿಯಿಂದ ಆಲಿಂಗಿಸಿಕೊಂಡರು. ಹಾಗೆ ಆಲಂಗಿಸುತ್ತ,

*" ನನ್ನ ಮಗ ನಿಜವಾಗಿಯೂ ದಂತದಗೊಂಬೆಯನ್ನೇ ಆರಿಸಿದ್ದಾನೆ. ಅವನ ಸೆಲೆಕ್ಷನ್ ಯಾವಾಗಲೂ ಕರೆಕ್ಟ್ ಆಗಿರುತ್ತದೆ. ನಿನ್ನೆ ನಿನ್ನ ಜೊತೆಗೆ ನಾನು ಮಾತನಾಡಿದ ಮೇಲೆ, ನಿನ್ನನ್ನು ನೋಡಬೇಕೆಂಬ ಹಂಬಲ ನನಗೆ ಬಹಳವಾಗಿ ಕಾಡತೊಡಗಿತು. ನಿನ್ನನ್ನು ನೋಡದೆ, ಮರಳಿ ಹೋಗಬಾರದು ಎಂದುಕೊಂಡು, ಅಭಿ ಡ್ಯೂಟಿಗೆ ಹೋದಮೇಲೆ ನಾನು ಬಾಡಿಗೆ ಕಾರು ಮಾಡಿಕೊಂಡು ನೇರವಾಗಿ ನಿನ್ನನ್ನು ಭೇಟಿಯಾಗಲು ಇಲ್ಲಿಗೆ ಬಂದೆ. ನಾನು ಮತ್ತು ನನ್ನ ಮಗ ನಿನ್ನೆ ನಿನ್ನ ಬಗ್ಗೆ ಮಾತನಾಡುವ ವೇಳೆಯಲ್ಲಿ, ನೀನು ಇದೇ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿತ್ತು. ನಾನು ಇಲ್ಲಿಗೆ ಬಂದಿದ್ದು, ನನ್ನ ಮಗನಿಗೆ ಸಹ ಗೊತ್ತಿಲ್ಲ. ನೀವು ಇಬ್ಬರೂ ಈಗಲೇ ಒಬ್ಬರನ್ನೊಬ್ಬರು ನೋಡುವುದು ಬೇಡ ಅಂತ ಅಂದುಕೊಂಡಿದ್ದೀರಿ. ಅದಕ್ಕೆ ನಾನು ನಿಮ್ಮ ಆಸೆಗೆ ಕಲ್ಲು ಹಾಕಬಾರದು, ಎಂದುಕೊಂಡು ಅವನಿಗೆ ತಿಳಿಸಲಾಗಿದೆ ಇಲ್ಲಿಗೆ ಬಂದಿದ್ದೇನೆ. ನಾನು ಬಂದು ಭೇಟಿಯಾದ ವಿಷಯ ಮಾತ್ರ ನೀನು ಅವನಿಗೆ ತಿಳಿಸಬೇಡ. ನಿಮ್ಮ ನಿಮ್ಮಲ್ಲಿ ನೀವು ಪಡೆದುಕೊಳ್ಳಬೇಕಾಗಿರುವ ಎಕ್ಸೈಟ್ಮೆಂಟ್ ನಿಮಗೆ ಸಿಗುವುದಿಲ್ಲ. ನನ್ನಿಂದ ಅದು ಹಾಳಾಗುವುದು ಬೇಡ."*

 ಎಂದು ಹೇಳಿದಾಗ, ಅವರ ಮಾತಿನಲ್ಲಿಯೇ ಉದಾರತೆ, ಮತ್ತು ತಮ್ಮ ಮಗನ ಮತ್ತು ಮಗ ಆಯ್ಕೆ ಮಾಡಿದ ಹೆಣ್ಣಿನ ಮನಸ್ಸಿಗೆ ನೋವಾಗದಂತೆ ತಾವೇ ಅದಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದರು. ಈ ಸ್ವಭಾವ ಸುಮಾಳಿಗೆ ತುಂಬಾ ಇಷ್ಟವಾಯಿತು. ಅವಳು ಏನನ್ನೂ ಮಾತನಾಡದೆ ಸುಮ್ಮನೆ ನಿಂತಿದ್ದಳು. ಅದನ್ನು ಕಂಡ ಅಭಿ ತಾಯಿ ತಮ್ಮ ಮಾತನ್ನು ಮುಂದುವರೆಸುತ್ತ,

*" ಸುಮಾ, ನಿಜ ಹೇಳಬೇಕೆಂದರೆ, ನಾನು ನನ್ನ ಮಗನ ಜೊತೆಗೆ ಈ ಬಾರಿ ಜಗಳವಾಡಿ ಅವನನ್ನು ಮದುವೆಗೆ ಒಪ್ಪಿಸಬೇಕೆಂದು ನಿಶ್ಚಯಿಸಿಕೊಂಡು, ಹಲವಾರು ಜಾತಕ ಫೋಟೋಗಳನ್ನು ತಂದಿದ್ದೆ. ಆದರೆ ಇಲ್ಲಿ ಬಂದ ಮೇಲೆ ನನಗೆ ವಿಷಯ ತಿಳಿದಾಗ, ನಿನ್ನನ್ನು ಒಂದುಸಲ ನೋಡಬೇಕೆಂದು ನನಗೆ ತುಂಬಾ ಹಂಬಲವಾಯಿತು. ಅದಕ್ಕೆ ತಡೆಯಲಾರದೆ ನಾನು ಓಡಿ ಬಂದೆ. ನಾನು ಬಂದಿದ್ದರಿಂದ ನಿನ್ನ ಕ್ಲಾಸಿಗೆ ಆಗಲಿ, ನಿನ್ನ ಪ್ರೋಗ್ರಾಮುಗಳ ಈಗಾಗಲೇ ಡಿಸ್ಟರ್ಬ್ ಆಗಿದ್ದಲ್ಲಿ ಸಾರಿ"*

 ಎಂದು ಹೇಳುತ್ತಿದ್ದಂತೆ ಸುಮಾ,

*" ಅಯ್ಯೋ, ಹಾಗೆಲ್ಲ ಮಾತನಾಡಬೇಡಿ. ನಿಮ್ಮಿಂದ ನಮಗೆ ಯಾವ ತೊಂದರೆಯೂ ಆಗಿಲ್ಲ. ಆದರೆ ನೀವು ಬಂದಿದ್ದರಿಂದ ನಮಗೆ ಮಾತ್ರ ತುಂಬಾ ಸಂತೋಷವಾಗಿದೆ."*

  ಎಂದು ಹೇಳುತ್ತಿರುವಾಗ, ಕಾವೇರಿ, ಇವರಿಬ್ಬರ ಮಾತು ನಡುವಳಿಕೆಗಳನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದಳು. ಕಾವೇರಿಯನ್ನು ತೋರಿಸಿ ಸುಮಾ,

*" ಅಮ್ಮ, ಇವಳು ಕಾವೇರಿ. ಕಾಲೇಜಿನಲ್ಲಿ ನನ್ನ ಸಹಪಾಠಿ. ಅಷ್ಟೇ ಅಲ್ಲ ನನಗೆ ಅಕ್ಕ ಇದ್ದಂತೆ. ನನ್ನವರು ಅಂತ ಎಲ್ಲರನ್ನೂ ನಾನು ಕಳೆದುಕೊಂಡು ಅನಾಥನಾದ ಮೇಲೆ, ಈ ಅನಾಥೆಗೆ ಕಾವೇರಿ ಅಕ್ಕನಂತೆ ಬಂದಿದ್ದಾಳೆ. ನನ್ನನ್ನು ತನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತ ಬಂದಿರುವ ಈ ದೇವತೆ, ನನ್ನ ತಾಯಿಯ ಎಂದರೂ ಸಹ ತಪ್ಪಾಗುವುದಿಲ್ಲ"*

 ಎಂದು ಕಾವೇರಿಯನ್ನು ಪರಿಚಯಿಸಿದಾಗ, ತನಗಿಂತ ಹಿರಿಯರಾದ ಅಭಿಯ ತಾಯಿಯ ಕಾಲಿಗೆರಗಿ ಕಾವೇರಿ ನಮಸ್ಕರಿಸಿದಳು.

*" ಹಾಗೆಲ್ಲ ಸುಮಿ ಮಾತನ್ನು ಕೇಳಬೇಡಿ ಅಮ್ಮ, ನಾನು ಸಹ ಒಂದು ಹೆಣ್ಣು. ಹೆಣ್ಣಿನ ಕಷ್ಟ ಏನಿರುತ್ತದೆ ಅಂತ ನನಗೆ ಚೆನ್ನಾಗಿ ಗೊತ್ತು. ಅದಕ್ಕೆ ನನ್ನ ಕೈಲಾದ ಸಹಾಯವನ್ನು ಅವಳಿಗೆ ಮಾಡುತ್ತಾ ಬಂದಿದ್ದೇನೆ. ಅದನ್ನೇ ಈ ರೀತಿಯಾಗಿ ದೊಡ್ಡದಾಗಿ ಹೇಳುತ್ತಾಳೆ"*

 ಎಂದು ಹೇಳುತ್ತಿರುವಂತೆ ಅಭಿ ತಾಯಿ,

*" ಸುಮಾ, ನಿನ್ನವರು ಯಾರು ಇಲ್ಲ ಎಂದು ಎಂದಿಗೂ ತಿಳಿದುಕೊಳ್ಳಬೇಡ. ಈಗ ನಿನ್ನ ತಾಯಿಯ ಸ್ಥಾನದಲ್ಲಿ ನಾನಿರುವೆ. ನನ್ನನ್ನು ನಿನ್ನ ತಾಯಿಯೆಂದು ತಿಳಿದುಕೋ. ಈ ಕ್ಷಣದಿಂದ ನೀನು ನನ್ನ ಮಗಳು. ನನ್ನ ಮನೆಯನ್ನು ಬೆಳಗುವ ದೀಪ. ನೀನು ನಗು ನಗುತ್ತಾ ಇರುವಂತೆ ಮಾಡುವುದು ನನ್ನ ಧ್ಯೇಯ."*

 ಎಂದು ಮನಬಿಚ್ಚಿ ತಮ್ಮ ಪ್ರೀತಿಯನ್ನು ಸುಮಾಳಿಗೆ ಹೇಳಿದಾಗ ಅದನ್ನು ಕೇಳಿದ ಸುಮಾಳ ಕಣ್ಣಲ್ಲಿ ನೀರು ತುಂಬಿ ಬಂತು. ಅದನ್ನು ಕಂಡ ಅಭಿ ತಾಯಿ,

*" ನನ್ನ ಮಗಳು ಯಾವ ಕಾರಣಕ್ಕೂ ಕಣ್ಣಲ್ಲಿ ನೀರು ಹಾಕಬಾರದು. ಖುಷಿಯಾಗಿರಬೇಕು ಎಂದು ನಾನು ಬಯಸುತ್ತೇನೆ."*

*" ಇದು ದುಃಖದಿಂದ ಬಂದ ಕಣ್ಣೀರಲ್ಲ ಅಮ್ಮ, ನಿಮ್ಮಂತವರ ಆಸರೆ ಸಿಕ್ಕ ನನ್ನಂತ ತಬ್ಬಲಿ ಹಾಕುತ್ತಿರುವ ಆನಂದಬಾಷ್ಪ"*

*" ಸುಮಾ, ನಿನ್ನನ್ನು ನೀನು ತಪ್ಪು ಎಂದು ಎಂದಿಗೂ ಅಂದುಕೊಳ್ಳಬೇಡ. ತಬ್ಬಲಿ ಯಾರು ಗೊತ್ತೆ? ಪ್ರೀತಿ ಜಗತ್ತಿನಲ್ಲಿ ಸಿಗಲಾರದವರು ನಿಜವಾದ ತಬ್ಬಲಿ. ಪ್ರೀತಿ ಸಿಕ್ಕವರು ಎಂದಿಗೂ ತಬ್ಬಲಿಗಳಲ್ಲ"*

 ಎಂದು ಹೇಳಿದಾಗ, ಹಿಂದೆ ಒಂದು ಸಲ ಅಭಿ ಇದೇ ಮಾತನ್ನು ನನಗೆ ಹೇಳಿದ್ದು ನೆನಪಾಯಿತು.

*" ನಿನ್ನನ್ನು ನೋಡುವ ಆಸೆ ಇತ್ತು, ಬಂದೆ, ನೋಡಿದೆ, ನನ್ನ ಮಗನ ಸೆಲೆಕ್ಷನ್ ಬಗ್ಗೆ ನನಗೆ ತುಂಬಾ ಹೆಮ್ಮೆಯಾಗಿದೆ. ನಾನಿನ್ನು ಬರುತ್ತೇನೆ. ದಿಲ್ಲಿಗೆ ಹೋಗಿ, ನಮ್ಮ ಯಜಮಾನರ ಜೊತೆಗೆ ಮಾತನಾಡಿ, ಮುಂದಿನ ಕಾರ್ಯಕ್ರಮಕ್ಕೆ ಅಡಿಪಾಯ ಹಾಕೋಣ. ಇನ್ನೊಂದು ವಾರದಲ್ಲಿ, ನಿನ್ನ ಹೊಸ ಬಾಳು ಹೊಸ ರೀತಿಯಿಂದ ಪ್ರಾರಂಭಿಸಬೇಕು ಎಂದು ನಾನು ಅಂದುಕೊಂಡಿದ್ದೇನೆ. ನಾನಿನ್ನು ಹೋಗಿಬರುತ್ತೇನೆ."*

 ಎಂದು ಹೇಳಿ ಹೊರಡಲು ಅನುವಾದಾಗ, ಸುಮಾ,

*" ಅಮ್ಮ, ನೀವು ನನ್ನನ್ನು ಮಗಳು ಎಂದು ಅಂದಿರಿ. ಇಂದು ನೀವು ಈ ಮಗಳ ಮನೆಗೆ ಬಂದು, ಊಟ ಮಾಡಿಕೊಂಡು ಹೋಗತಕ್ಕದ್ದು. ನಿಮ್ಮನ್ನು ನಾನು ಬಿಡುವುದಿಲ್ಲ"*

 ಎಂದು ಪ್ರೀತಿಯಿಂದ ಸುಮಾ ಅವರನ್ನು ಕರೆದಾಗ, ಅವರು ನಗುತ್ತಾ,

*" ಆಯ್ತು ತಾಯಿ, ನಿನ್ನ ಇಚ್ಛೆಯಂತೆ ಆಗಲಿ. ನಿನ್ನ ಮನೆಗೆ ಬಂದು ನಿನ್ನ ಕೈ ಅಡುಗೆಯನ್ನು ಸವಿದು ಹೋಗುತ್ತೇನೆ"*

 ಎಂದು ಒಪ್ಪಿಕೊಂಡಾಗ ಸುಮಾಳ ಮನಸ್ಸಿಗೆ ಎಲ್ಲಿಲ್ಲದ ಸಂತೋಷ ಉಕ್ಕಿ ಬಂತು. ಸುಮಾಳ ಕಾರು ಸಹ ಸಹ ಅಲ್ಲಿಯೇ ಇತ್ತು. ಅಭಿ ತಾಯಿ ಮತ್ತು ಸುಮಾ, ಕಾವೇರಿಯನ್ನು ಸಹ ತಮ್ಮ ಜೊತೆಗೆ ಕರೆದುಕೊಂಡು ಸುಮಾಳ ಮನೆಗೆ ಹೊರಟರು. ಮೊದಲು ಬರಲು ಒಪ್ಪದ ಕಾವೇರಿ, ಅವರಿಬ್ಬರ ಪ್ರೀತಿಯ ಕರೆಗೆ ಇಲ್ಲವೆನ್ನಲಾಗದೆ ಅವರೊಟ್ಟಿಗೆ ಹೊರಟಳು. ಕಾವೇರಿ, ಅಭಿ ತಾಯಿ ಮತ್ತು ಸುಮಾ ಕುಡಿ, ಅವಳ ಕಾರಿನಲ್ಲಿ ಮನೆಗೆ ಹೊರಟರು. ಅಭಿ ತಾಯಿ ಕಾರು ಸುಮಾಳ ಕಾರನ್ನು ಹಿಂಬಾಲಿಸಿತು.

         ಸುಮಾ, ಅಭಿ ತಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಳು. ಅಭಿ ತಾಯಿ ಒಳಗೆ ಬರುತ್ತಿದಂತೆ, ಮನೆಯ ವಾತಾವರಣವನ್ನು ಗಮನಿಸಿದರು. ಶಿಸ್ತಿನಿಂದ ಮನೆ ಇಟ್ಟಿದ್ದು ನೋಡಿ, ಅವರಿಗೆ ಸುಮಾಳ ಬಗ್ಗೆ ಹೆಮ್ಮೆ ಅನ್ನಿಸಿತು. ಆದರೆ, ಕಣ್ಣಿನಲ್ಲಿಯೇ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸುಮಾ ಮೊದಲಿನಿಂದಲೂ ಶಿಸ್ತಿನ ಹೆಣ್ಣು. ಮನೆಯನ್ನು ತುಂಬಾ ಓರಣವಾಗಿ ಒಪ್ಪಟವಾಗಿ ಇಟ್ಟಿದ್ದಳು.  

     ಅವರನ್ನು ಹಾಲಿನಲ್ಲಿ ಕೂಡಿಸಿ, ತಾನು ಅಡುಗೆ ಮಾಡಲು ತಯಾರಾದಾಗ, ಕಾವೇರಿ ಸುಮಾಳ ಸಹಾಯಕ್ಕೆ ನಿಂತಳು. ಅಷ್ಟರಲ್ಲಿ ಸುಮಾಳ ತಾಯಿ ಅಡುಗೆಮನೆಗೆ ಬಂದರು. ಅವರೂ ಸಹ ತಾವು ಏನಾದರೂ ಮಾಡುತ್ತೇನೆ ಎಂದು ಹೇಳಿದಾಗ ಸುಮಾ ಅದಕ್ಕೆ ನಿರಾಕರಿಸಿ,

*"ಅಮ್ಮ, ನೀವು ಇಂದು ನನ್ನ ಅತಿಥಿ, ಮೇಲಾಗಿ ನನಗಿಂತ ಹಿರಿಯರು. ನಿಮ್ಮ ಕಡೆ ಕೆಲಸ ಮಾಡಿಸುವದು ನನಗೆ ಶ್ರೇಯಸ್ಕರವಲ್ಲ"*

ಎಂದು ಅವರಿಗೆ ಗೌರವ ನೀಡಿದಾಗ, ಅದರಿಂದ ಮನದಲ್ಲಿ ಸಂತೋಷ ಪಟ್ಟ ಅವರು,

*"ಆಯ್ತಮ್ಮಾ, ನಿನ್ನ ಇಚ್ಛೆಗೆ ನಾನ್ಯಾಕೆ ಅಡ್ಡ ಬರಲಿ. ಆದರೆ ನಾನು ಇಲ್ಲಿ ಕುಳಿತುಕೊಳ್ಳಬಹುದಲ್ಲವೇ? ಹಾಲಿನಲ್ಲಿ ಒಬ್ಬಳೇ ಕೂಡಲು ಬೇಜಾರು. *"

*"ಕುಳಿತುಕೊಳ್ಳಿ ಅಮಾ, ಆದರೆ ಏನೂ ಕೆಲಸ ಮಾಡತಕ್ಕದ್ದಲ್ಲ. ನಿಮ್ಮ ಮಗಳ ಕೈ ರುಚಿ ನೋಡುವದೇ ಒಂದು ಕೆಲಸ"*

ಎಂದು ನಗುತ್ತ ಕಾವೇರಿ ಹೇಳಿದಾಗ, ಅದಕ್ಕೆ ಎಲ್ಲಾರೂ ನಕ್ಕರು. ನಂತರ ಕಾವೇರಿ ಮತ್ತು ಸುಮಾ ಇಬ್ಬರೂ ಅಡುಗೆ ಮಾಡುತ್ತಾ ಅದು ಇದು ಮಾತನಾಡತೊಡಗಿದರು. ಅಭಿ ತಾಯಿ, ತಾನು ತನ್ನ ಗಂಡನ ಜೊತೆಗೆ ಪ್ರೇಮದಲ್ಲಿ ಬಿದ್ದದ್ದು, ಡೆಲ್ಲಿ ಗೆ ಹೋಗಿದ್ದು, ಅಲ್ಲಿ ಅಭಿ ಹುಟ್ಟಿದ್ದು, ಎಲ್ಲಹಿಂದಿನ ಘಟನೆಗಳನ್ನು ವಿವರವಾಗಿ ಹೇಳಿದಾಗ, ಅವರ ಕಥೆ ಕೇಳಿದ ಸುಮಾ ಮತ್ತು ಕಾವೇರಿ ಒಂದು ರೀತಿಯಲ್ಲಿ ಸಿನಿಮಾ ನೋಡಿದಂತಾಗಿತ್ತು. ಅಷ್ಟು ರೋಚಕವಾಗಿತ್ತು ಅವರ ಪ್ರೇಮ ಕಥೆ. ಅದರಲ್ಲಿ ಇಬ್ಬರ ಮನೆಯವರ ಸಿಟ್ಟು, ಸೇಡು, ಇತ್ಯಾದಿಗಳು ಒಳಗೊಂಡಿದ್ದರಿಂದ ಅದು ಒಂದು ಸಿನಿಮಾ ರೀತಿಯಲ್ಲಿ ಸುಮಾ ಮತ್ತು ಕಾವೇರಿಗೆ ಭಾಸವಾಗಿತ್ತು. ಅವರು ತಮ್ಮ ಕಥೆ ಹೇಳುವದನ್ನು ಮುಗಿಸಿ, ಸುಮಾಳ ಬಗ್ಗೆ ಕೇಳಿದಾಗ, ಸುಮಾ ತನ್ನ ಕಥೆಯನ್ನು ಸಂಪೂರ್ಣವಾಗಿ ಹೇಳಿದಳು. ಅದನ್ನು ಕೇಳಿದ ಅವರ ಕಣ್ಣಲ್ಲಿ ನೀರು ತುಂಬಿ,

*"ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದಿ ತಾಯಿ. ಪರವಾಯಿಲ್ಲ. ಇನ್ನು ಮುಂದೆ ನಿನಗೆ ಕಷ್ಟ ಮುಗಿಯಿತು ಅಂತಾನೆ ತಿಳಿದುಕೋ. ನನ್ನ ಮನೆಗೆ ಬರುವದೊಂದೇ ಬಾಕಿ ಅಲ್ಲಿಯವರೆಗೆ ಬಹಳ ಕಷ್ಟ ಪಡಬೇಡ. ನಿನ್ನ ಕಷ್ಟ ಎಲ್ಲ ಮುಗಿಯಿತು ಅಂತಾ ತಿಳಿದುಕೋ"*

ಎಂದು ಹೇಳಿ ಕಾವೇರಿ ಕಡೆಗೆ ತಿರುಗಿ,

*"ಕಾವೇರಿ, ಇನ್ನು ಸುಮಾ ನನ್ನ ಮನೆಗೆ ಅದೃಷ್ಟ ಲಕ್ಷ್ಮಿಯಾಗಿ ಬರುವವರೆಗೆ ನೀನು ಅವಳನ್ನು ಸರಿಯಾಗಿ ನೋಡಿಕೋ. ನನ್ನ ಸೊಸೆಗೆ ಯಾವುದೇ ಕಷ್ಟ ಬಾರದ ಹಾಗೆ ನೋಡಿಕೊಳ್ಳುವದು ನಿನ್ನ ಜವಾಬ್ದಾರಿ"*

ಎಂದು ಹೇಳಿದಾಗ ಅವರ ಮಾತನ್ನು ಕೇಳಿದ ಕಾವೇರಿ ಕಣ್ಣಲ್ಲಿ ನೀರು ಬಂದು,

*"ಅಮ್ಮ ನೀವು ಸುಮಾ ನಿಮ್ಮ ಮಗಳು ಎಂದು ಹೇಳಿದಾಗಲೇ ನಾನು ಅವಳ ಭವಿಷ್ಯದ ಬಗ್ಗೆ ಚಿಂತೆ ಮಾಡುವದನ್ನು ಬಿಟ್ಟುಬಿಟ್ಟೆ. ನಿಮ್ಮ ಹತ್ತಿರ ಅವಳು ಸುಖವಾಗಿ ಇರುತ್ತಾಳೆ ಅಂತ ನನಗೆ ಖಾತ್ರಿಯಾಗಿದೆ. ಆದರೆ ಒಂದೇ ನೋವು"*

ಎಂದು ಹೇಳಿದಾಗ ಸುಮಾ ಮತ್ತು ಅಭಿ ತಾಯಿ ಕಾವೇರಿಯನ್ನೇ ಗಾಬರಿಯಿಂದ ನೋಡುತ್ತಾ

*"ಏನಮ್ಮ ನೋವು?"*

ಎಂದು ಅಭಿಯ ತಾಯಿ ಕೇಳಿದಳು

*"ನಿಮ್ಮ ಮನೆಗೆ ಹೋದ ಮೇಲೆ ಸುಮಾ ನನ್ನನ್ನು ಮರೆಯುತ್ತಾಳೆ ಅಷ್ಟು ಮಾತ್ರ ನನಗೆ ಗ್ಯಾರಂಟಿಯಾಗಿದೆ"*

ಎಂದು ಹೇಳಿದಾಗ ಎಲ್ಲರೂ ನಕ್ಕರು. 

ಸುಮಾ ಅಡುಗೆ ಮಾಡಿ ಎಲ್ಲರೂ ಆರಾಮವಾಗಿ ಊಟ ಮಾಡಿದರು. ಸುಮಾ ತುಂಬಾ ಚನ್ನಾಗಿ ಅಡುಗೆ ಮಾಡಿದ್ದಳು. ಅದನ್ನು ಸ್ವೀಕರಿಸಿದ ಅಭಿ ತಾಯಿ ಅವಳ ಕೈಗುಣ ಹೊಗಳುತ್ತಲೇ ಊಟ ಮಾಡಿದರು.

   ಊಟ ಮುಗಿಯುತ್ತಿದಂತೆ ಸುಮಾ,

*"ಅಮ್ಮ ಸ್ವಲ್ಪ ರೆಸ್ಟ್ ಮಾಡಿ"*

ಎಂದು ಹೇಳಿದಾಗ 

*"ಬೇಡಮ್ಮ, ಅಭಿ ಡ್ಯೂಟಿ ಮುಗಿಸಿ ಬರುವದರ ಒಳಗಾಗಿ ನಾನು ಮನೆ ಮುಟ್ಟುತ್ತೇನೆ. ಇಲ್ಲವಾದರೆ ಅವನಿಗೆ ಗೊತ್ತಾಗುವ ಚಾನ್ಸ್ ಇದೆ. ಅದು ಆಗುವದು ಬೇಡ. ನಿಮ್ಮಿಬ್ಬರ ಕಮಿಟ್ಮೆಂಟ್ ನಡುವೆ ನಾನು ಅಡ್ಡವಾಗಬಾರದು ಅಂತ ನನ್ನ ಆಸೆ. ಹೇಗೂ ಕಾರ್ ಇದೆ, ಅದರಲ್ಲಿ ಮಲಗಿಕೊಂಡು ಹೋಗುತ್ತೇನೆ"* 

ಎಂದು ಹೇಳಿದಾಗ, ಅವರಿಗೆ ತಡೆ ಹಾಕುವದು ಸೂಕ್ತವಲ್ಲ ಎಂದುಕೊಂಡು ಸುಮಾ ಮತ್ತು ಕಾವೇರಿ ಅವರ ಮಾತಿಗೆ ಒಪ್ಪಿಕೊಂಡರು. ಅಭಿ ತಾಯಿ ತನ್ನ ಮೊಬೈಲ್ ನಂಬರ್ ಕೊಟ್ಟರು. ಅನಂತರ ಅವರು ಹೊರಗಾಗ, ಅವರನ್ನು ಕಾರಿನಲ್ಲಿ ಹತ್ತಿ ಕಳುಹಿಸುವ ತನಕ ಸುಮಾ ಮತ್ತು ಕಾವೇರಿ ಇಬ್ಬರೂ ನಿಂತಿದ್ದರು. ಕಾರು ಹೋಗುತ್ತಿರುವಂತೆ, ಸುಮಾಳನ್ನು ಕಾವೇರಿ ಗೇಟ್ ಮುಂದೆ ಅಪ್ಪಿಕೊಂಡು ಅವಳ ಗಲ್ಲಕ್ಕೆ ಮುತ್ತು ಕೊಟ್ಟಳು. ಅವಳಿಗೆ ಸಂತೋಷ ತಡೆಯುವದಾಗಿರಲಿಲ್ಲ. 

*"ಸುಮಿ, ನಿಜವಾಗಿ ನೀನು ಅದೃಷ್ಟವಂತಳು ಕಣೆ, ಮತ್ತೆ ನಿನ್ನ ಬಾಳು ಬಂಗಾರವಾಗುವದನ್ನು ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ ಕಣೆ"*

ಎಂದು ನಿಜವಾಗಿಯೂ ಸಂತೋಷ ಪಟ್ಟಳು. ಸುಮಾ ಸಹ ಸಂತೋಷದಿಂದ ಇದ್ದಳು. ಅಭಿ ತಾಯಿ ಹೋದ ಮೇಲೆ ಸಾಯಂಕಾಲದವರೆಗೆ ಕಾವೇರಿ ಸಹ ಸುಮಾಳ ಜೊತೆಗೆ ಇದ್ದಳು. ಸಾಯಂಕಾಲ 5 ಘಂಟೆಗೆ ಅವಳು ತನ್ನ ಮನೆಗೆ ಹೋದಳು. 

   ನಿಜವಾಗಿಯೂ ಸುಮಾ ತುಂಬಾ ಸಂತೋಷದಿಂದ ಇದ್ದಳು. ಅವಳು ತನ್ನ ಜೀವನದಲ್ಲಿ ಇಂಥದ್ದೊಂದು ತಿರುವು ಬರುತ್ತದೆ ಅಂತ ಸಹ ಅವಳಿಗೆ ಗೊತ್ತಿರಲಿಲ್ಲ. ಪ್ರವಾಹದಲ್ಲಿ ಸಿಕ್ಕಿಕೊಂಡ ಕುರಿಯಂತಾಗಿದ್ದ ಅವಳಿಗೆ ಅಭಿ ಆಸರೆಯಾಗಿದ್ದ. ಅವನ ತಾಯಿ ಅವಳನ್ನು ಕಂಡು ಧೈರ್ಯ ಹೇಳಿದ ಮೇಲಂತೂ ಅವಳಿಗೆ ಆನೆ ಬಲ ಬಂದ ಹಾಗಾಗಿತ್ತು. 

    ಅದೇ ಆನಂದದಲ್ಲಿ ಅವಳಿಗೆ ಅಭಿಗೆ ಏನಾದರೂ ಬರೆದು ಕಳುಹಿಸಬೇಕೆಂದಳು. ಆದರೆ ಏನು ಬರೆಯಬೇಕು ಅಂತ ಅವಳಿಗೆ ಗೊಂದಲವಾಯಿತು. ಮೊದಲು ಕುಳಿತು ಯೋಚನೆ ಮಾಡಿ ಕೊನೆಗೆ ಹಿಂದಿ ಕವಿತೆಯನ್ನು ಈ ರೀತಿಯಾಗಿ ಬರೆದು ಕಳುಹಿಸಿದಳು. 

*ಆಪ್ ಕ್ಯಾ ಜಾನೆ ಮುಜಕೋ ಸಮ್ಜತಿ ಹೈ ಕ್ಯಾ

ಮೈ ತೊ ಕುಚ್ ಭೀ ನಹಿ

ಇಸ್ ಖದರ್ ಪ್ಯಾರ್ ಇತ್ನಿ ಪ್ಯಾರ್ ಕಿ ಮೈ ರಖುನ್ಗಿ ಕಹಾ 

ಇಸ್ ಕದರ್ ಪ್ಯಾರ್ ರಖನೇ ಕಿ ಜಾಗಾ ನಹಿ

ಮೇರಿ ದಿಲ್ ಮೇರಿ ಜಾನ್ 

ಮುಜಕೋ ಇತ್ನಿ ಮೊಹಬ್ಬತ್ ನ ದೋ ಜಾನು

ಸೊಚಲೊ ಜಾನು 

ಇಸ್ ಕದರ್ ಪ್ಯಾರ್ ಕೈಸೇ ಸಂಭಾಲುಂಗ ಮೈ 

ಮೈ ತೊ ಕುಚ್ ಭೀ ನಹಿ ಹೂ 

ಪ್ಯಾರ್ 

ಪ್ಯಾರ್ ಅಗರ್ ಏಕ್ ಶೇಕ್ಸ ಕಾ ಮಿಲಿ ತೊ ಬಡಿ ಚೀಜ್ ಹೈ  

ಜಿಂದಗಿ ಕೆ ಲಿಯೇ 

ಹರ್ ಕಿಸಿ ಕೋ ಮಗರ್ ಎ ಭೀ ಮಿಲ್ತಾ ನಹಿ ಎ ಭೀ ಮಿಲ್ತಾ ನಹಿ 

ಮುಜಕೋ ಇತ್ನಿ ಮೊಹಬ್ಬತ್ ಮಿಲಿ ಆಪ್ ಸೆ 

ಎ ಮೇರಾ ಹಕ್ ನಹಿ ಮೇರಾ ತಕ್ದೀರ್ ಹೈ 

ಮೈ ಹರ್ ಕಿಸಿ ಕಿ ನಜರೊ ಮೇ ಕುಚ್ ಭೀ ನ ಥಾ

ಮೇರೇ ಆಂಖೊ ಮೇ ಅಬ್ ತಕ್ ಓ ತಸ್ವೀರ್ ಹೈ 

ಇಸ್ ಮೊಹಬ್ಬತ್ ಕೆ ಬದಲೇ ಮೈ ಕ್ಯಾ ನಜರ್ ದು

ಮೈ ತೊ ಕುಚ್ ಭೀ ನಹಿ 

ಇಜ್ಜತೆ ಶೌಹರತೇ ಚಾಹತೇ ಉಲ್ಫಾತೆ

ಕೊಯಿ ಭೀ ಚೀಜ್ ದುನಿಯಾ ಮೇ ರೆಹತಿ ನಹಿ 

ಆಜ್ ಮೈ ಹೂ ಜಹಾ ಕಲ್ ಕೊಯಿ ಓರ್ ಥಾ

ಆಜ್ ಮೈ ಹೂ ಜಹಾ ಕಲ್ ಕೊಯಿ ಓರ್ ಥಾ 

ಎ ಭೀ ಏಕ್ ದೌರ್ ಹೈ 

ಓ ಭೀ ಏಕ್ ದೌರ್ ಥಾ 

ಆಜ್ ಇತ್ನಿ ಮೊಹಬ್ಬತ್ ನ ದೋ ಜಾನು 

ಆಜ್ ಇತ್ನಿ ಮೊಹಬ್ಬತ್ ನ ದೋ ಜಾನು 

ಕೆ ಕಲ್ ಕೆ ಖಾತಿರ್ ಕುಚ್ ಭೀ ನ ರಹೇ 

ಆಜ್ ಕ ಪ್ಯಾರ್ ತೋಡಾ ಬಚಾ ಕರ್ ರಕೋ 

ಆಜ್ ಕ ಪ್ಯಾರ್ ತೋಡಾ ಬಚಾ ಕರ್ ರಕೋ 

ಮೇರೇ ಕಲ್ ಕೆ ಲಿಯೇ 

ಕಲ್ ಜೋ ಗುಂನಾಮ್ ಹೈ 

ಕಲ್ ಜೋ ಅಂಜಾನ್ ಹೈ  

ಕಲ್ ಜೋ ಸುಂಸಾನ್ ಹೈ 

ಕಲ್ ಜೋ ವೀರಾನ್ ಹೈ 

ಮೈ ತೊ ಕುಚ್ ಭೀ ನಹಿ ಮೈ ತೊ ಕುಚ್ ಭೀ ನಹಿ ಹೂ*

ಇದನ್ನು ಬರೆದು ಅವನ ಮೆಸೆಂಜರ್ ಗೆ ಕಳುಹಿಸಿದಳು. ಒಂದೊಂದು ಅಕ್ಷರವನ್ನು ಅವಳು ತನ್ನ ಹೃದಯದಿಂದ ಬರೆದು ಮುಗಿಸಿದ್ದಳು. ಪ್ರತಿ ಅಕ್ಷರದಲ್ಲಿ ಅಭಿಯೆಡೆಗಿನ ಪ್ರೀತಿ ಹೃದಯದಿಂದ ಹೃದಯದ ಬಡಿತವನ್ನು ಸ್ಪಷ್ಟವಾಗಿ ಹೇಳುತ್ತಿತ್ತು. ಅದನ್ನು ಕಳುಹಿಸಿದ ಮೇಲೆ ತಾನೇ ಅದನ್ನು ಹಲವಾರು ಬಾರಿ ಓದತೊಡಗಿದಳು. ಅಲ್ಲದೆ, ಆ ಮಾತುಗಳನ್ನು ತಾನು ಅವನಿಗೆ ಮುಂದೆ ಕೊಡಿಸಿಕೊಂಡು ಹೇಳುತ್ತಿರುವಂತೆ ಅಂದುಕೊಂಡಳು. ನಂತರ ತನ್ನ ಭಾವನೆಗಳಿಗೆ ತಾನೇ ನಕ್ಕು ಸಂಜೆಯ ಕೆಲಸಗಳನ್ನು ಮಾಡಲು ಹೊರಟಳು. 


24


ಸಾಯಂಕಾಲವಾಗುತ್ತಿದ್ದಂತೆ ಅವಳು ದೇವರ ಮುಂದೆ ದೀಪ ಹಚ್ಚಿ ಕೈ ಮುಗಿದು ಪ್ರಾರ್ಥಿಸಿದಳು. 

*"ದೇವರೇ, ಇಲ್ಲಿಯವರೆಗೆ ಅನಾಥೆಯಂತೆ ಇದ್ದ ನಾನು, ಇಂದು ನಿನ್ನ ದಯೆಯಿಂದ ಪ್ರೀತಿ ಮತ್ತೆ ದೊರಕುವಂತಾಗಿದೆ. ಅದಕ್ಕೆ ನಿನ್ನ ಕೃಪಾ ಕಾರಣ. ಏಕಾಂಗಿಯಾಗಿದ್ದ ನನ್ನನ್ನು ನೀನು ಏಕಾಂಗಿಯಾಗಿರಲು ಬಿಡಲಿಲ್ಲ. ಹೇಗೂ ನನ್ನನ್ನು ಒಂದು ದಡಕ್ಕೆ ಸೇರಿಸಬೇಕು ಅಂತ ನಿನ್ನ ತೀರ್ಮಾನವನ್ನು ನಾನು ಅಲ್ಲಗಳೆಯುವದಿಲ್ಲ. ನಿನ್ನ ಕೃಪೆ ಎಲ್ಲರ ಮೇಲೆ ಸದಾ ಹೀಗೆ ಇರಲಿ"*

ಎಂದು ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ಕೈ ಮುಗಿದು ಬೇಡಿಕೊಂಡಳು. ಹಾಗೆ ಭಕ್ತಿ ಭಾವದಿಂದ ದೇವರ ವಿಗ್ರಹದ ಕಡೆಗೆ ನೋಡಿದಾಗ ದೇವರು ನಗುತ್ತಿರುವಂತೆ ಕಾಣಿಸಿತು ಸುಮಾಳಿಗೆ. 

      ರಾತ್ರಿ ಊಟ ಮಾಡಿಕೊಂಡು ಅಭಿ ಫೋನ್ ದಾರಿ ಕಾಯುತ್ತ ಕುಳಿತಿರುವಾಗ, ಫೋನ್ ರಿಂಗಾಯಿತು. ನೋಡುತ್ತಿದ್ದಂತೆ ರಿಸಿಯ ತಾಯಿ ಫೋನ್ ಮಾಡಿದ್ದರು. ಸುಮಾ ಕರೆ ಸ್ವೀಕರಿಸಿದಾಗ,

*" ಸುಮಾ ನಾನಮ್ಮ ಅಭಿ ತಾಯಿ ಮಾತನಾಡುತ್ತಿರುವುದು"*

*" ಗೊತ್ತಾಯ್ತು ಅಮ್ಮ ಹೇಳಿ"*

*" ನಾನು ಡೆಲ್ಲಿಗೆ ಬಂದುಬಿಟ್ಟೆ. ಸಾಯಂಕಾಲ ಫ್ಲೈಟ್ ಹತ್ತಿಕೊಂಡು ಬಂದು ಈಗ ತಾನೆ ಮನೆ ಮುಟ್ಟಿದೆ."*

 ಎಂದಾಗ ಸುಮಾಳಿಗೆ ತುಂಬಾ ಆಶ್ಚರ್ಯವಾಯಿತು.

*" ಯಾಕಮ್ಮ ಬೇಗನೆ ಹೋಗಿಬಿಟ್ಟಿರಿ. ಇನ್ನೊಂದೆರಡು ದಿನ ಇದ್ದು ಇನ್ನೊಮ್ಮೆ ನನ್ನನ್ನು ಭೇಟಿಯಾಗಿ ಹೋಗಬೇಕಾಗಿತ್ತು ಅಲ್ಲವೇ"*

*" ನಾನು ಅಲ್ಲಿಗೆ ಬಂದ ಕೆಲಸ ಮುಗಿಯಿತು. ನನ್ನ ಮಗನಿಗಾಗಿ ಹೆಣ್ಣು ನೋಡಿ, ಮದುವೆ ನಿಶ್ಚಯ ಮಾಡಲು ಬಂದಿದ್ದೆ. ಆದರೆ ನಿನ್ನನ್ನು ನೋಡಿದ ಮೇಲೆ, ನನಗೆ ನನ್ನ ಕೆಲಸ ಈ ಮೊದಲೇ ನನ್ನ ಮಗ ಮಾಡಿದ್ದಾನೆಂದು ಗೊತ್ತಾದ ಕೂಡಲೇ ನಿನ್ನನ್ನು ಭೇಟಿಯಾದಾಗ, ಆದಷ್ಟು ಬೇಗನೇ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಮನೆತುಂಬಿಸಿಕೊಳ್ಳಬೇಕೆಂದುಕೊಂಡು, ನಮ್ಮ ಯಜಮಾನರಿಗೆ ಹೇಳಲು ಕೂಡಲೇ ಬಂದೆ. ಆದರೆ, ನಿಮ್ಮ ಯಜಮಾನರು ಇನ್ನೂ ಆಫೀಸಿನಿಂದ ಬಂದಿಲ್ಲ. ಬಂದ ಕೂಡಲೇ ಅವರಿಗೆ ವಿಷಯವನ್ನು ತಿಳಿಸುತ್ತೇನೆ. ನಾನು ದಿಲ್ಲಿಗೆ ಬಂದ ವಿಷಯ ನನಗೆ ಗೊತ್ತಿರಲಿ ಎಂದು ಫೋನ್ ಮಾಡಿದೆ. ಯಾವುದಕ್ಕೂ ನೀನು ತೊಂದರೆ ತಗೋಬೇಡ. ಎಲ್ಲವೂ ಒಳ್ಳೆಯದೇ ಆಗುತ್ತದೆ. ಚಿಂತೆ ಮಾಡಬೇಡ ತಾಯಿ. ಆದಷ್ಟು ಬೇಗನೆ ನಿನ್ನನ್ನು ನನ್ನ ಹತ್ತಿರ ಕರೆಸಿಕೊಳ್ಳುವ ಜವಾಬ್ದಾರಿ ನನ್ನದು."*

 ಎಂದು ಪ್ರೀತಿಯಿಂದ ಅವರು ಮಾತನಾಡಿದಾಗ, ಅವರು ತೋರಿಸಿದ ಪ್ರೀತಿಗೆ ಏನು ಹೇಳಬೇಕೆಂದು ಸುಮಾಳಿಗೆ ಗೊತ್ತಾಗದೆ ಸುಮ್ಮನಾಗಿ ಬಿಟ್ಟಳು. ಆದರೆ ಅಭಿ ತಾಯಿ ಮುಂದುವರೆದು,

*" ಸುಮಾ, ಮನದಲ್ಲಿ ಏನೋ ಹೆದರಿಕೆ ಇಟ್ಟುಕೊಳ್ಳಬೇಡ. ನಮ್ಮ ಯಜಮಾನರು ಮತ್ತು ನಾನು ಪ್ರೀತಿಸಿ ಮದುವೆಯಾದವರು. ಈ ರೀತಿಯಾಗಿ ಯಾರಾದರೂ ಪ್ರೀತಿ ಮಾಡಿದ್ದಲ್ಲಿ ಅವರು ಖಂಡಿತವಾಗಿಯೂ ಅದಕ್ಕೆ ಒಪ್ಪಿಗೆ ಕೊಟ್ಟೆ ಕೊಡುತ್ತಾರೆ. ಅಂತಹದರಲ್ಲಿ ತಮ್ಮ ಸ್ವಂತ ಮಗ ಪ್ರೀತಿಸಿದಾಗ ಒಪ್ಪಿಗೆ ಕೊಡಲಾರದೆ ಇರುವುದಿಲ್ಲ. ಅದರ ಬಗ್ಗೆ ನೀನೇನೂ ಚಿಂತಿಸಬೇಡ."*

 ಎಂದು ಹೇಳಿದಾಗ, ಅವರ ಮಾತಿನಿಂದ ಸುಮಾಳಿಗೆ ಧೈರ್ಯ ಬಂತು.

*" ಅಮ್ಮ, ನೀವು ದೊಡ್ಡವರು. ನಿಮ್ಮ ಮುಂದೆ ನಾನು ತುಂಬಾ ಚಿಕ್ಕವಳು. ಚಿಕ್ಕವರ ಕ್ಷೇಮವನ್ನು ದೊಡ್ಡವರು ಯಾವಾಗಲೂ ಬಯಸುತ್ತಾರೆಂದು ಕೇಳಿದ್ದೆ ಆದರಿಂದು ಮಾತ್ರ ಅನುಭವಕ್ಕೆ ಬಂತು."*

 ಎಂದು ಹೇಳುತ್ತಿರುವ ಅಷ್ಟರಲ್ಲಿ ಅವಳಿಗೆ ತನ್ನ ತಾಯಿ ಮತ್ತು ಅತ್ತೆ ನೆನಪಾದರು. ಅವರು ಸಹ ಇದೇ ರೀತಿಯಾಗಿ ಇದ್ದರು.

*" ಆಯ್ತಮ್ಮ, ನಾನು ಮತ್ತೆ ನಿನಗೆ ನಾಳೆ ಮಾತನಾಡುತ್ತೇನೆ. ನೀನು ಡ್ಯೂಟಿ ಮಾಡುವವಳು. ನಿನ್ನ ಸಮಯ ನನ್ನಿಂದ ಹಾಳಾಗಿದ್ದರೆ ಏನು ತಿಳಿದುಕೊಳ್ಳಬೇಡ"*

*" ಹಾಗೇನಿಲ್ಲಮ್ಮ, ನೀವು ನನ್ನ ಜೊತೆಗೆ ಕರೆಮಾಡಿ ಮಾತನಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಏನು ಹೇಳಬೇಕೆಂದು ತೋಚದೆ ಸುಮ್ಮನಾಗಿರುವೆ. ನನ್ನಿಂದ ನಿಮಗೆ ಏನಾದರೂ ತೊಂದರೆ ಹಾಗಿದ್ದಲ್ಲಿ ದಯವಿಟ್ಟು, ನಿಮ್ಮ ಮಗಳೆಂದು ತಿಳಿದುಕೊಂಡು ನನ್ನನ್ನು ಕ್ಷಮಿಸಿ"*

*" ಅಯ್ಯೋ, ಹಾಗ್ಯಾಕೆ ಮಾತನಾಡುತ್ತಿ ತಾಯಿ. ನಿನ್ನಿಂದ ಏನೂ ನನಗೆ ತೊಂದರೆಯಾಗಿಲ್ಲ. ಬದಲಾಗಿ ನೀನು ನಮ್ಮ ಮನೆಯ ಸದಸ್ಯೆಯಾಗಿ ಹೊರಟವಳು. ನಿಮ್ಮಿಂದ ನನಗೆ ಏನಾದರೂ ತೊಂದರೆ ಹೇಗಾಗುತ್ತದೆ. ಆಯ್ತು, ರಾತ್ರಿ ತಡವಾಗಿದೆ ಮಲಗಿಕೋ."*

 ಎಂದು ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದರು. ಅವರು ಆಡಿದ ಮಾತುಗಳನ್ನು, ನೆನಪಿಸಿಕೊಳ್ಳುತ್ತಲೇ ಹಾಸಿಗೆಯ ಮೇಲೆ ಸುಮಾ ಉರುಳಿದಳು. ಅವರು ತನ್ನೆಡೆಗೆ ತೋರುತ್ತಿದ್ದ ಕಾಳಜಿ ಪ್ರೀತಿ, ಅವಳನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ಹಾಗೆ, ಇದಕ್ಕೆಲ್ಲ ಕಾರಣ ಅಭಿ. ಈ ರೀತಿಯಾಗಿ ಅವನು ತನ್ನನ್ನು, ಕೆಣಕಿ ಪ್ರೀತಿಸದೆ ಹೋಗಿದ್ದಲ್ಲಿ, ಇಂಥ ಒಂದು ಸಮಯ ತನ್ನ ಜೀವನದಲ್ಲಿ ಬರುವುದಕ್ಕೆ ಸಾಧ್ಯವೇ ಇರಲಿಲ್ಲ, ಎಂದುಕೊಂಡು, ಹಾಗೆ ಅದನ್ನೇ ಯೋಚನೆ ಮಾಡುತ್ತಿರುವಾಗ, ಅಭಿ ಫೋನ್ ಮಾಡಿದ.

*" ಹಲೋ"*

*" ಏನು, ಮನದ ತುಂಬೆಲ್ಲ ಪ್ರೇಮವೇ ತುಂಬಿದಂತೆ ಆಗಿದೆ. ವಿಷಯ ಏನು?"*

 ಎಂದು ನಗುತ್ತ ಅಭಿ ಕೇಳಿದ,

*" ಇದಕ್ಕೆಲ್ಲ ಕಾರಣ ರೂ ನೀವಲ್ಲವೇ? ಗೊತ್ತಿದ್ದು ನನಗ್ಯಾಕೆ ಹೇಳುತ್ತಿರುವಿರಿ?"*

 ಎಂದು ಇವಳು ಸಹ ನಗುತ್ತಾ ಅವನಿಗೆ ಹೇಳಿದಾಗ,

*" ಅಕ್ಷರ ರೂಪದಲ್ಲಿ ಬರುವ ಶಬ್ದಗಳು ಮನಸ್ಸಿನಿಂದ ಬಂದಂತಿದೆ. ಆದರೂ, ಓದುವುದಕ್ಕೂ ಮತ್ತು ಬಾಯಿಂದ ಹೇಳುವುದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಅದಕ್ಕೆ ನಿಮ್ಮನ್ನು, ಇದೇ ವಿಷಯ ನಿಮ್ಮ ಬಾಯಿಂದ ಬರಲಿ ಎಂದು ನಾನು ನಿಮ್ಮನ್ನು ಕೇಳುತ್ತಿರುವೆ"*

*" ಬಾಯಿಂದ ಬರಬೇಕಾದ ವಿಷಯವನ್ನು, ಬರಹದಲ್ಲಿ ಕಳಿಸಿದ್ದೇನೆ. ನೀವು ಬಾಯಿಂದ ಓದಿ ಆ ವಿಷಯವನ್ನು ತಿಳಿದುಕೊಂಡರಾಯಿತು. ಬರೆದವಳು ನಾನೇ ಎಂದು ಕೇಳಿದ ಮಾತ್ರಕ್ಕೆ ಹೇಳಬೇಕು ಎಂಬುದು ಏನಿಲ್ಲವಲ್ಲ"*

 ಎಂದು ಸವಾಲಿನ ರೂಪದಲ್ಲಿ ನಗುತ್ತಾ, ಅವನ ಮಾತಿಗೆ ಉತ್ತರವನ್ನು ಹೇಳಿದಾಗ,

*" ನಾನೇನು ಓದಬಹುದು ಆದರೆ ಅದು ನೀವು ಓದಿದಂತೆ ಆಗುವುದಿಲ್ಲ. ಅರಿತವರು ನೀವು ಆಗಿದ್ದರಿಂದ ನಿಮ್ಮನ್ನು ನಾನು ಕೇಳುತ್ತಿದ್ದೇನೆ. ಹೇಳಬಹುದಲ್ಲವೆ"*

 ಎಂದು ಅವನು ಪ್ರತಿ ಸವಾಲಿನ ರೀತಿಯಲ್ಲಿ ನುಡಿದಾಗ, ಅವನ ಮಾತನ್ನು ಕೇಳಿದ ಸುಮಾ ನಾಚಿಕೊಂಡಳು.

*" ಒಂದು ಹೆಣ್ಣು, ಹೃದಯದ ಮಾತನ್ನು ಬರೆದು ತೋರಿಸಲಿಕ್ಕೆ ಸದ್ಯ ಹೊರತಾಗಿ ಬಾಯಿಂದ ಈ ರೀತಿಯಾಗಿ ಹೇಳಲು ಮಾತ್ರ ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ. ನಾನು ಜಗತ್ತಿನಲ್ಲಿರುವ ಹೆಣ್ಣೆ ಆಗಿದ್ದರಿಂದ, ನೀವು ಕೇಳಿದ ವಿಷಯವನ್ನು ಮಾತ್ರ, ನನ್ನಿಂದ ಹೇಳಲು ಸಾಧ್ಯವಿಲ್ಲ"*

*" ಒಂದು ಮಾತು ಹೇಳ್ತೀನಿ. ಈ ವಿಷಯದ ಬಗ್ಗೆ ನಿಮ್ಮಿಂದ ನಾನು ಕೇಳುತ್ತಾ, ಅದರ ಅನುಭವವನ್ನು ತೆಗೆದುಕೊಳ್ಳಬೇಕೆಂಬ ಆಸೆಯಿಂದ ಕೇಳಿದೆ. ನೀವು ಉತ್ತರಿಸಿದ ರೀತಿ ನಿಜವೇ ಆಗಿದ್ದರೂ ಸಹ, ಈಗ ನೀವು ಒಂದು ಹೆಣ್ಣು. ಆದರೆ ನಾವು ಇಬ್ಬರೂ ಒಂದಾದ ಮೇಲೆ ಯಾವಾಗಲಾದರೂ ನೀವು ಈ ವಿಷಯವನ್ನು ನನ್ನ ಸಮಕ್ಷಮ ಹೇಳಲೇ ಬೇಕಲ್ಲವೇ"*

*" ಆ ವೇಳೆಯಲ್ಲಿ ಹೇಳಬಹುದು. ಯಾಕೆಂದರೆ ನಮ್ಮಿಬ್ಬರ ಹೃದಯದ ಮಿಲನವಾಗಿ ಇಬ್ಬರೂ ಒಂದಾದಾಗ ಹೇಳಿದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ಈಗ ಮಾತ್ರ ಹೇಳಲು ಸಾಧ್ಯವಿಲ್ಲ"*

*" ಆಯ್ತಪ್ಪ, ಹೆಂಗಸರನ್ನು ಮಾತ್ರ ಮಾತಿನಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ಹಿರಿಯರು ಹೇಳಿದ್ದಾರೆ, ಹೆಣ್ಣಿನ ಮನಸ್ಸಿನ ಅಂತರಾಳವನ್ನು ಯಾರಿಂದಲೂ ತಿಳಿಯಲು ಸಾಧ್ಯವಿಲ್ಲವೆಂದು"*

 ಎಂದು ನಗುತ್ತ ಹೇಳಿದ, ಹಾಗೆ ತನ್ನ ಮಾತನ್ನು ಮುಂದುವರಿಸಿ,

*" ಅಂದಹಾಗೆ ನೆನಪಾಯಿತು, ಯಾಕೋ ಏನೋ ಗೊತ್ತಿಲ್ಲ, ಅಮ್ಮ ಮಾತ್ರ ಇಂದು ಹಟ ಮಾಡಿ ಊರಿಗೆ ಹೊರಟು ಹೋದಳು. ಇಷ್ಟು ಬೇಗ ಯಾಕೆ ಹೋಗುತ್ತೆ ಎಂದು ನಾನು ಅವಳೊಂದಿಗೆ ವಾದ ಮಾಡಿದಾಗ, ನಮ್ಮಿಬ್ಬರನ್ನು ಒಂದು ಮಾಡುವ ಉದ್ದೇಶದಿಂದ ಹೋಗುತ್ತಿದ್ದೇನೆ ಅಂತ ತಿಳಿಸಿ ಹೋದಳು. ಅಲ್ಲಿ ನಮ್ಮಪ್ಪ ಇನ್ನೇನು ರಾದ್ಧಾಂತ ಮಾಡುತ್ತಾನೆ ದೇವರೇ ಬಲ್ಲ."*

*"ಹಾಗೇನೂ ಆಗುವದಿಲ್ಲ. ನನಗೆ ವಿಶ್ವಾಸವಿದೆ. ಅವರು ಹಿರಿಯರು. ವಿಚಾರ ಮಾಡಿ ಒಳ್ಳೆ ನಿರ್ಧಾರ ತೆಗೆದುಕೊಳ್ತಾರೆ ನೀವೇ ನೋಡಿ"*

ಎಂದು ಅವನಿಗೆ ಅವಳು ಧೈರ್ಯ ಹೇಳಿದಾಗ 

*"ಆಯ್ತು. ನಾನು ಸಹ ಅದೇ ವಿಶ್ವಾಸದಲ್ಲಿ ಇದ್ದೇನೆ"*

ಎಂದು ಹೇಳಿದನು. ಮತ್ತೆ ಮರುದಿನ ಕರೆ ಮಾಡುವದಾಗಿ ಹೇಳಿ ಫೋನ್ ಡಿಸ್ ಕನೆಕ್ಟ್ ಮಾಡಿದರು. 

ಸುಮಾ ಬೆಳಿಗ್ಗೆ ಬೇಗನೆ ಎದ್ದು ತನ್ನ ಕೆಲಸ ಮಾಡುತ್ತಿರಬೇಕಾದರೆ, ಅವಳ ಫೋನ್ ರಿಂಗಾಯಿತು. ಇಷ್ಟು ಬೆಳಿಗ್ಗೆ ಯಾರು ಮಾಡಿರಬಹುದು ಎಂದು ನೋಡಿದಾಗ, ಅಭಿ ತಾಯಿಯ ಕರೆಯಾಗಿತ್ತು. ಇಷ್ಟು ಬೆಳಿಗ್ಗೆ ಬೆಳಿಗ್ಗೆ ಯಾಕೆ ಮಾಡಿರಬಹುದು ಎಂದು ಅಂದುಕೊಳ್ಳುತ್ತಲೇ ಅವಳು ಕರೆ ಸ್ವೀಕರಿಸಿ,

*"ಹೇಳಿ ಅಮ್ಮ"*

ಎಂದು ಸ್ವಲ್ಪ ಅಳುಕಿನಿಂದಲೇ ಅಂದಾಗ,

*"ಸುಮಾ, ನೀನು ಫ್ರೀ ಇದ್ದೀಯ ತಾನೇ?"*

*"ಹಾ ಇದ್ದೀನಿ, ಸ್ವಲ್ಪ ಹೊತ್ತಿನಲ್ಲಿ ಕಾಲೇಜಿಗೆ ಹೋಗಬೇಕು ಅದಕ್ಕೆ ರೆಡಿ ಆಗ್ತಿದ್ದೆ"*

*"ಹೌದಾ, ಸರಿ, ಒಂದು ಕೆಲಸ ಮಾಡು ಮಧ್ಯಾನ್ಹ 12 ಘಂಟೆಗೆ ಕಾಲ್ ಮಾಡ್ತೀನಿ ಮಾತಾಡೋಣ."*

ಎಂದು ಹೇಳಿದಾಗ ಸುಮಾಳ ಎದೆ ಧಸಕ್ಕಂದಿತು. ಯಾಕೆ ಏನೂ ವಿಷಯ ಹೇಳ್ತಿಲ್ಲ, ಒಗಟಿನಲ್ಲಿ ಮಾತನಾಡುತ್ತಿರುವರು ಎಂದುಕೊಂಡು 

*"ಏನು ವಿಷಯ ಅಂತ ಹೇಳಬಾರದೇ? ಅಮ್ಮಾ"*

*"ಅಯ್ಯೋ, ಹೇಳಿದೆನಲ್ಲ, ಗಡಿಬಿಡಿಯಲ್ಲಿ ಮಾತಾಡೋ ವಿಷಯವಲ್ಲ. ಸರಿಯಾಗಿ 12 ಘಂಟೆಗೆ ಫೋನ್ ಮಾಡ್ತೀನಿ"*

ಎಂದಷ್ಟೇ ಹೇಳಿದರು. ಅವರ ಮಾತಿನಲ್ಲಿ ಯಾವ ಭಾವ ಇತ್ತು ಅಂತ ಮಾತ್ರ ಸುಮಾಳಿಗೆ ಗೊತ್ತಾಗಲಿಲ್ಲ. ಏನು ವಿಷಯ ಮಾತನಾಡಲು ಬಯಸಿರುವರು ಎಂದು ಒಂದು ರೀತಿಯ ಚಿಂತೆಯಿಂದಲೇ ರೆಡಿ ಆಗಿ ಕಾಲೇಜಿಗೆ ಹೊರಟಳು. 

    ಕಾಲೇಜು ಮುಟ್ಟಿ ಪಾಠ ಮಾಡುವಾಗ ಸಹ ಅವಳಿಗೆ ತಲೆಯಲ್ಲಿ ಅಭಿ ತಾಯಿ ಸರಿಯಾಗಿ ತನ್ನ ಪ್ರಶೆಗೆ ಉತ್ತರ ನೀಡದೆ ಇದ್ದದ್ದು ಒಂದು ರೀತಿಯಲ್ಲಿ ಗಾಬರಿ ಮಾಡಿತ್ತು. ಏನು ವಿಷಯವಿರಬಹುದು. ಒಂದು ವೇಳೆ ಅಭಿಯ ತಂದೆ ತಮ್ಮ ವಿಷಯದ ಬಗ್ಗೆ ಏನಾದರೂ ನಕಾರಾತ್ಮಕ ನಿರ್ಧಾರ ತೆಗೆದುಕೊಂಡಿದ್ದರೆ ಹೇಗೆ ಎಂಬ ವಿಷಯ ಮನದಲ್ಲಿ ಕುಳಿತುಬಿಟ್ಟಿತು. ಅಭಿಗೆ ಫೋನ್ ಮಾಡಿ ಕೇಳಬೇಕೆಂದುಕೊಂಡರೆ, ಅವನ ಫೋನ್ ನಂಬರ್ ಸುಮಾ ಹತ್ತಿರ ಇರಲಿಲ್ಲ. ಅವನಿಗ್ಯಾಕೆ ತೊಂದರೆ ಕೊಡಬೇಕು ಎಂದು ಒಂದು ಸಲ ಅನ್ನಿಸಿದರೂ ಸಹ ಅವನಿಗೂ ಈ ವಿಷಯ ಸಂಬಂಧ ಪಟ್ಟಿದ್ದು ಎಂದುಕೊಂಡು ಕೊನೆಗೆ, 12 ಘಂಟೆಗೆ ಫೋನ್ ಮಾಡಿ ವಿಷಯ ತಿಳಿದುಕೊಂಡು ನಂತರ ಅಭಿಯ ಜೊತೆಗೆ ಮಾತನಾಡಿದರಾಯಿತು ಎಂದುಕೊಂಡಳು. ಆದರೂ ಮನಸ್ಸು ಒಂದು ರೀತಿಯಲ್ಲಿ ಭಯ ಬೀಳುತ್ತಿತ್ತು. ಏನು ಮಾಡುವಂತಿರಲಿಲ್ಲ. ಮೇಲಿಂದ ಮೇಲೆ ಗಡಿಯಾರದ ಕಡೆಗೆ ನೋಡುತ್ತಾ ಕಾಲ ಕಳೆಯುತ್ತಿದ್ದಳು. ಅದರ ವಿನಃ ಅವಳಿಗೆ ಬೇರೆ ಏನೂ ಮಾಡುವಂತಿರಲಿಲ್ಲ. 

    ಇದೆ ರೀತಿಯಲ್ಲಿ ಅವಳು ಪಾಠವನ್ನೂ ಸಹ ಅನ್ಯಮನಸ್ಕತೆಯಿಂದಲೇ ಮಾಡಿದಳು. ಹೇಗೂ ಕಾಟಾಚಾರಕ್ಕೆ ಪಾಠ ಮಾಡಿ ಬಂದು ಸ್ಟಾಫ್ ರೂಮಿನಲ್ಲಿ ಕುಳಿತುಕೊಂಡಳು. ಕಾವೇರಿ ಕ್ಲಾಸ್ ಮುಗಿಸಿಕೊಂಡು ಬಂದು ಸುಮಾಳನ್ನು ಮಾತನಾಡಿಸಿದಾಗ, ಸುಮಾ ಎಲ್ಲ ವಿಷ್ಯವನ್ನು ತಿಳಿಸಿದಳು. ಅದನ್ನು ಕೇಳಿದ ಕಾವೇರಿ, 

*"ಸುಮಿ, ಚಿಂತೆ ಮಾಡಬೇಡ. ಏನಾಗುತ್ತದೆಯೋ ನೋಡಿಯೇ ಬಿಡೋಣ. ಆದರೆ ಇಲ್ಲಿ ಸ್ಟಾಫ್ ರೂಮಿನಲ್ಲಿ ಮಾತನಾಡುವದು ಬೇಡ. ಪಾರ್ಕಿಂಗ್ ಏರಿಯಾ ಕಡೆಗೆ ಹೋಗೋಣ ಅಲ್ಲಿ ಮಾತನಾಡಿದರಾಯಿತು"*

ಎಂದು ಹೇಳಿದಾಗ, ಸುಮಾಲಿಗೂ ಸಹ ಕಾವೇರಿ ಹೇಳಿದ್ದು ಸರಿ ಅನ್ನಿಸಿತು. ಒಂದು ವೇಳೆ ಇಲ್ಲಿ ಸ್ಟಾಫ್ ರೂಮಿನಲ್ಲಿ ಮಾತನಾಡಿದರೆ ಯಾರಾದರೂ ಕೇಳಿಸಿಕೊಳ್ಳುವ ಸಾಧ್ಯತೆ ಇದೆ. ಅದು ಸುಮಾಳಿಗೆ ಬೇಡವಾಗಿತ್ತು. ತನ್ನ ವಿಷಯ ಇನ್ನೂ ಸರಿಯಾಗಿ ನಿರ್ಧಾರವಾಗದೆ, ಯಾರಿಗೂ ತಿಳಿಯುವದು ಅವಳಿಗೆ ಬೇಡವಾಗಿತ್ತು. ಗಡಿಯಾರವನ್ನು ನೋಡಿಕೊಂಡಾಗ ಘಂಟೆ ಹನ್ನೊಂದು ಮುಕ್ಕಾಲಾಗಿತ್ತು. ಇನ್ನು ಹದಿನೈದು ನಿಮಿಷದಲ್ಲಿ ಕರೆ ಬರಬಹುದಾಗಿತ್ತು. ಕಾವೇರಿ ಮತ್ತು ಸುಮಾ ಇಬ್ಬರೂ ಕೂಡಿಕೊಂಡು ಪಾರ್ಕಿಂಗ್ ಏರಿಯಾ ಕಡೆಗೆ ಹೊರಟರು. ಯಾಕೋ ಸುಮಾಳ ಮುಖ ಬಾಡಿದಂತಾಗಿತ್ತು. ಕಣ್ಣಲ್ಲಿ ನೀರು ತುಂಬಿಕೊಂಡಂತಾಗಿತ್ತು. ಅದನ್ನು ಗಮನಿಸಿದ ಕಾವೇರಿ, ಸುಮಾಳಿಗೆ 

*"ಸುಮಿ, ಒಂದು ಮಾತು ಹೇಳ್ತಿನಿ ಕೇಳು. ನೀನು ನಿನ್ನ ಮನಸ್ಸಿನಿಂದ ಪ್ರೀತಿಸಿರುವೆ. ಅದಕ್ಕೆ ಒಂದು ಅರ್ಥ ಇದೆ. ಪ್ರೀತಿಗೆ ಅರ್ಥ ಇದೆ. ಆದರೆ ಪ್ರೀತಿಯನ್ನು ಅರಿತುಕೊಳ್ಳಲಾರದವರಿಗೆ ನಿನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲದೆ ಹೋಗಿದ್ದಾರೆ ಮಾತ್ರ, ನಿನ್ನ ಪ್ರೀತಿಯನ್ನು ಅಲ್ಲಗಳೆಯುವರು. ಆದರೆ, ಒಂದು ಮಾತು ನೆನಪಲ್ಲಿಟ್ಟುಕೊ. ನೀನು ಗಟ್ಟಿಗಿತ್ತಿ. ಏನೇ ಬಂದರೂ ಎದುರಿಸುವ ಶಕ್ತಿ ನಿನ್ನಲ್ಲಿದೆ. ಒಂದು ವೇಳೆ ಈಗ ನಕಾರಾತ್ಮಕ ಪ್ರತಿಕ್ರಿಯೆ ಬಂದ್ರೂ ಸಹ, ನೀನು ಯೋಚಿಸಬೇಡ. ಸುಮ್ಮನಾಗು. ಕಥೆಯನ್ನು ಇಲ್ಲಿಗೆ ಮುಗಿಸಿಬಿಡು. ಮುಂದುವರಿಸುವದು ಬೇಡ. ಅಭಿ ಸಂಪರ್ಕವನ್ನು ಕಡಿದುಕೊಂಡರಾಯಿತು. ನಾನು ಬಾಯಿ ಮಾತಲ್ಲಿ ಹೇಳುವದೇನೋ ಸರಳವಾಗಿದೆ. ಆದರೆ, ಪ್ರಾಕ್ಟಿಕಲ್ ಆಗಿ ನಿನಗೆ ಅದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ಆದರೆ ಬೇರೆ ಮಾರ್ಗವಿಲ್ಲ. ಎದುರು ಹಾಕಿಕೊಂಡು ಜೀವನ ಪೂರ್ತಿ ನೋವು ಅನಾಥ ಪ್ರಜ್ಞೆ ಅನುಭವಿಸುವದಕ್ಕಿಂತ ಮೊಳಕೆಯಲ್ಲಿ ಚಿವುಟಿದರಾಯಿತಲ್ಲವೇ. ಯಾಕೋ ನಿನ್ನ ಪರಿಸ್ಥಿತಿ ನೋಡಿ ಹೇಳಬೇಕೆಂದುಕೊಂಡೆ. ನೆಗೆಟಿವ್ ಆಗಿ ಯೋಚನೆ ಮಾಡಿ ಹೇಳ್ತಿದ್ದೀನಿ. ತಪ್ಪು ತಿಳಿಯಬೇಡ. ಯಾವಾಗಲೂ ಒಬ್ಬರಕ್ಕಿಂತ ಹೆಚ್ಚು ಜನರು ಡಿಸಿಷನ್ ತೆಗೆದುಕೊಳ್ಳುವ ವಿಷಯವಾದರೆ ಅದಕ್ಕೆ ನೆಗೆಟಿವ್ ಥಿಂಕಿಂಗ್ ಪ್ರಕಾರ ವಿಚಾರ ಮಾಡಿದರೆ, ಪರಿಣಾಮವನ್ನು ಎದುರಿಸುವದು ಸುಲಭ. ಅದಕ್ಕೆ ಹೇಳಿದೆ. ತಪ್ಪು ತಿಳಿಯಬೇಡ."*

ಎಂದು ಹೇಳಿದಾಗ, ಸುಮಾ ಸರಕ್ಕನೆ ಕಾವೇರಿ ಕಡೆಗೆ ತಿರುಗಿ, ಅವಳೆರಡೂ ಕೈಗಳನ್ನು ಹಿಡಿದುಕೊಂಡು,

*"ಕಾವೇರಿ, ನೀನು ನನ್ನ ಅಕ್ಕ. ಯಾವಾಗಲೂ ಒಳ್ಳೆಯದನ್ನೆ ಬಯಸಿದವಳು. ನಿನ್ನ ಮಾತನ್ನು ನಾನು ತಪ್ಪು ತಿಳಿದುಕೊಳ್ಳುವದಿಲ್ಲ. ಆದರೆ ನನ್ನ ಮನಸ್ಸಿನ ಮೇಲೆ ನೆಗೆಟಿವ್ ಡಿಸಿಷನ್ ಪರಿಣಾಮವನ್ನು ಯೋಚನೆ ಮಾಡಿದ್ದಿಯ?"*

*"ಮಾಡಿದ್ದೇನೆ ಸುಮಿ. ಆದರೆ, ಈ ವಿಷಯ ನನಗೆ ಗೊತ್ತಾಗುವ ಮುಂಚಿತವಾಗಿ ನೀನು ನಿರ್ಧಾರ ತೆಗೆದುಕೊಂಡಾಗ ಅದನ್ನು ಬೇಡವೆನ್ನುವದಕ್ಕೆ ನನಗೆ ಮನಸ್ಸಾಗಲಿಲ್ಲ. ಆದರೆ ಎಲ್ಲೋ ಒಂದು ದೂರದ ಆಸೆ ಮನದಲ್ಲಿ ಬಂತು. ಒಂದು ವೇಳೆ ನಿನ್ನ ಜೀವನ ಒಂದು ಹಿತವಾದ ದಡವನ್ನು ಕಂಡುಕೊಂಡರೆ, ಅದಕ್ಕಿಂತ ಖುಷಿ ಏನಿದೆ ಅಂತ"*

ಎಂದು ಹೇಳಿ ಎತ್ತಲೋ ನೋಡುತ್ತಾ,

*"ಸುಮಿ, ಚಿಂತೆ ಮಾಡಬೇಡ. ಇಷ್ಟು ದಿನ ಬಂದಿದ್ದನ್ನು ಎದುರಿಸಿದ್ದಿ. ಕಣ್ಣೆದುರು ಇದ್ದವರನ್ನೇ ಕಳೆದುಕೊಂಡಾಗ ನೀನು ಧೈರ್ಯ ಕಳೆದುಕೊಂಡಿಲ್ಲ. ಆದರೆ ಈಗ ಕಣ್ಣೆದುರಿನಲ್ಲಿ ಇಲ್ಲದವನ ಜೊತೆಗೆ ನೀನು ಸಂಪರ್ಕಕ್ಕೆ ಬಂದು ಅವನ ಕಾರಣಕ್ಕೆ ನೀನು ನಲುಗುವದಕ್ಕೆ ನಾನು ಬಿಡುವದಿಲ್ಲ. ನಾನು ನಿನ್ನ ಅಕ್ಕ ಇನ್ನೂ ಇದ್ದೇನೆ."*

ಎಂದು ಹೇಳಿದಾಗ ಸುಮಾಳಿಗೆ ಧೈರ್ಯ ಬಂದಂತಾಯಿತು. ಅದರಂತೆ ಮನದಲ್ಲಿ, ಕಾವೇರಿ ಹೇಳುವದು ಮಾತಿನಲ್ಲಿ ಸುಲಭವಾಗಿದ್ದರೂ ಸಹ, ಮನದ ಬಡಿತ, ಮನದಲ್ಲಿ ಹುಟ್ಟಿದ್ದ ಪ್ರೇಮವನ್ನು ಹೇಗೆ ಅಳಿಸಬಹುದು? ಒಂದಲ್ಲ ಒಂದು ರೀತಿಯಾಗಿ ಅದು ಯಾವಾಗಲೂ ತನ್ನನ್ನು ಕಾಡುತ್ತಿರುತ್ತದೆ ಎಂದುಕೊಳ್ಳುತ್ತಿರುವಷ್ಟರಲ್ಲಿ, ಸುಮಾಳ ಫೋನ್ ರಿಂಗ್ ಆಯಿತು. ನೋಡಿದಾಗ ಅಭಿಯ ತಾಯಿ ಮಾಡಿದ್ದಳು. ಅಭಿಯ ತಾಯಿ ಹೆಸರು ನೋಡುತ್ತಿದ್ದಂತೆ, ಸುಮಾಳ ಕೈ ನಡುಗತೊಡಗಿತು. ಫೋನ್ ಬಂದಾಗಿದೆ,ಏನು ಹೇಳುತ್ತಾರೋ ಏನೋ ಎಂದು ಯೋಚನೆ ಮಾಡುತ್ತಲೇ ಫೋನ್ ಕಡೆಗೆ ನೋಡುತ್ತಿರುವಾಗ, ಪಕ್ಕದಲ್ಲಿದ್ದ ಕಾವೇರಿ ಅವಳ ಭುಜವನ್ನು ಹಿಡಿದು ಸ್ಪರ್ಶದಿಂದಲೇ ಅವಳಿಯೇ ಧೈರ್ಯ ಕೊಟ್ಟು ಫೋನ್ ರೆಸಿವ್ ಮಾಡಲು ಹೇಳಿದಳು. ಸುಮಾ ಒಂದು ಸಲ ಕಾವೇರಿ ಮುಖವನ್ನು ನೋಡುತ್ತಲೇ ನಡುಗುವ ಕೈಗಳಿಂದ ಫೋನ್ ರೆಸಿವ್ ಮಾಡಿದಳು. ಹಾಗೆ ಫೋನ್ ತನ್ನ ಕಿವಿಗೆ ಇಟ್ಟುಕೊಂಡು ನಡುಗುವ ಧ್ವನಿಯಿಂದ

*"ಹಲೋ"*

ಎಂದು ಹೇಳಿದಾಗ, ಅತ್ತ ಕಡೆಯಿಂದ ಅಭಿ ತಾಯಿ

*"ಹಲೋ ಸುಮಾ, ಹೇಗಿದ್ದೀಯಮ್ಮಾ?"*

ಎಂದು ಅಕ್ಕರೆಯಿಂದ ಕೇಳಿದಾಗ, 

*"ಚನ್ನಾಗಿದಿನಮ್ಮ"*

ಎಂದಷ್ಟೇ ಸಂಕ್ಷಿಪ್ತವಾಗಿ ಉತ್ತರಿಸಿದಳು. 

*"ಸಾರೀ ಅಮ್ಮ, ಬೆಳಿಗ್ಗೆ ನಿನಗೆ ವಿಷಯ ಹೇಳಬೇಕೆಂದುಕೊಂಡರೂ ನಿನಗೆ ಟೈಮ್ ಆಗಿದ್ದರಿಂದ ನಾನು ನಿನಗೆ ಡಿಸ್ಟರ್ಬ್ ಆಗಬಾರದೆಂದು ಏನೂ ಹೇಳಲಿಲ್ಲ."

ಎಂದು ತಮ್ಮ ವ್ಯಥನವನ್ನು ಹೇಳಿದಾಗ

*"ಪರವಾಯಿಲ್ಲಮ್ಮ"*

ಎಂದು ಹೇಳುತ್ತಾ, ಸುಮಾ, ಮನದಲ್ಲಿ ಇಷ್ಟೆಲ್ಲಾ ಸುತ್ತಿ ಬಳಸಿ ಮಾತನಾಡಿದ್ದು ನೋಡುತ್ತಿದ್ದರೆ ಮೋಸ್ಟ್ಲಿ ನೆಗೆಟಿವ್ ವಿಷಯ ಇರಬಹುದು ಎಂದುಕೊಂಡಳು. ಅದನ್ನು ಯೋಚನೆ ಮಾಡಿ ಯಾಕೋ ಮನದಲ್ಲಿ ಅವಳಿಗೆ ನಡುಕ ಬಂದಂತಾಯಿತು. ಇದನ್ನೆಲ್ಲಾ ಗಮನಿಸುತ್ತಾ ಕಾವೇರಿ ಅಲ್ಲಿಯೇ ನಿಂತಿದ್ದಳು. ಅಷ್ಟರಲ್ಲಿ ಅಭಿ ತಾಯಿ

*"ಸುಮಾ, ನಮ್ಮ ಯಜಮಾನರು ನಿನ್ನ ಜೊತೆಗೆ ಮಾತನಾಡಬೇಕಂತೆ. ಅವರ ಕೈಗೆ ಫೋನ್ ಕೊಡ್ತೀನಿ ಮಾತಾಡು"*

ಎಂದು ಹೇಳಿದಾಗ, ಮೊದಲ ಬಾರಿಗೆ ಒಬ್ಬ ಅಪರಿಚಿತ ವ್ಯಕ್ತಿ ಅಂದರೆ ಅಭಿ ತಂದೆಯ ಜೊತೆಗೆ ಮಾತನಾಡುವ ಪ್ರಸಂಗ ಬಂದಿದ್ದರಿಂದ, ಅವಳಿಗೆ ಏನೋ ಒಂದು ತರಹ ಆಯಿತು. ಹೆದರಿಕೆ ಸಹ ಆಗತೊಡಗಿತು. ಅವಳು ಯಾರೂ ಅಪರಿಚಿತರ ಜೊತೆಗೆ ಹೀಗೆ ಫೋನ್ ನಲ್ಲಿ ಮಾತನಾಡಿರಲಿಲ್ಲ. ಹಾಗೆ ಕಿವಿಗೆ ಫೋನ್ ಹಿಡಿದುಕೊಂಡಾಗ ಅತ್ತಲಿಂದ 

*"ಹಲೋ"* 

ಎಂದು ಗಡುಸಾದ ಧ್ವನಿಯೊಂದು ಕೇಳಿಬಂತು.

*"ನಮಸ್ಕಾರ ಸರ್"*

ಎಂದು ವಿನಮ್ರವಾಗಿ ಹೆದರಿಕೆಯಿಂದ ಸುಮಾ ಅವರಿಗೆ ನಮಸ್ಕಾರ ತಿಳಿಸಿದಳು. 

*"ನೀನು ಸುಮಾ ತಾನೇ?"*

*"ಹೌದು"*

*"ನಿನ್ನನ್ನು ಏಕ ವಚನದಲ್ಲಿ ಸಂಭೋದಿಸಬಹುದೇ?"*

*"ಹಾ"*

*"ನೀನು ನನ್ನ ಮಗನಲ್ಲಿ ಏನು ಕಂಡೆ"*

ಎಂದು ಅವರು ಗಡುಸಾದ ಧ್ವನಿಯಲ್ಲಿ ಕೇಳಿದಾಗ, ಕಾವೇರಿ ಪಕ್ಕದಲ್ಲಿದ್ದುದರಿಂದ, ಸುಮಾಳಿಗೆ ಏನೋ ಧೈರ್ಯ ಬಂದಂತಾಗಿ ಕಾವೇರಿಯ ಮುಖವನ್ನು ನೋಡುತ್ತಲೇ

*"ನಿಮ್ಮ ಮಗ ನನ್ನಲ್ಲಿ ಏನು ನೋಡಿದ್ದಾನೆ ಅದನ್ನು ನಾನು ಅವರಲ್ಲಿ ನೋಡಿದ್ದೇನೆ"*

ಎಂದು ಅಂದುಬಿಟ್ಟಳು. 

*"ಅಂದರೆ ನನ್ನ ಮಗ ನಿನ್ನಲ್ಲಿ ಏನು ನೋಡಿದ್ದಾನೆಂದು ನಾನು ಅವನನ್ನು ಕೇಳಬೇಕಾ?"*

*"ತಪ್ಪೇನು? ನಾನು ನಿಮಗೆ ಅಪರಿಚಿತಳು, ನೀವು ನಿಮ್ಮ ಮಗನಿಗೆ ಪರಿಚಿತರು. ಅಪರಿಚಿತರಿಗಿಂತ ಪರಿಚಿತರನ್ನು ಕೇಳಿ ತಿಳಿದುಕೊಂಡರೆ ವಿವರಣೆ ಸರಿಯಾಗಿ ಸಿಗುವದಕ್ಕೆ ಸಾಧ್ಯವಿದೆಯಲ್ಲವೇ?"*

ಎಂದು ಮೃದುವಾಗಿಯೇ ಅವರಿಗೆ ಉತ್ತರವನ್ನು ಹೇಳಿದಾಗ, ಅಭಿ ತಂದೆ,

*"ನೀನು ಹೇಳಿದರೆ ಉತ್ತಮವಲ್ಲವೇ?"*

*"ನಾನು ಒಂದು ವೇಳೆ ಸುಳ್ಳು ಹೇಳಬಹುದಲ್ಲವೇ? ನಿಮಗೆ ನಾನು ಮೂರನೆಯ ವ್ಯಕ್ತಿ ಎಂದ ಮೇಲೆ ನೀವು ನನ್ನನ್ನು ಕೇಳುತ್ತೀರೆಂದ ಮೇಲೆ, ನಿಮಗೆ ನಿಮ್ಮ ಮಗನ ಮಾತಿನ ಮೇಲೆ ನಂಬಿಕೆ ಇಲ್ಲವೆಂದಾಯಿತು."*

ಎಂದು ಹೇಳಿದಾಗ ಅದನ್ನು ಕೇಳಿಸಿಕೊಂಡ ಅವರ ಮುಖಭಾವ ಹೇಗಾಗಿರಬಹುದು ಎಂದು ತಾನೇ ಊಹೆ ಮಾಡಿಕೊಳ್ಳತೊಡಗಿದಳು. ಏನೋ ಒಂದು ಹಠ ಅವಳ ಮನದಲ್ಲಿ ಭಯದ ಜಾಗೆಯನ್ನು ಆವರಿಸ್ಕೊಂದುಬಿಟ್ಟಿತ್ತು. 

*"ನನ್ನ ಮಗನ ಮೇಲೆ ನನಗೆ ನಂಬಿಕೆ ಇದೆ. ಆದರೆ ನೀನೆ ಅವನನ್ನು ಮರುಳು ಮಾಡಿರಬಾರದ್ಯಾಕೆ"*

*"ನಾನ್ಯಾಕೆ ಮರಳು ಮಾಡಲಿ. ನನ್ನ ಪಾಡಿಗೆ ನಾನು ಇದ್ದೆ. ನಿಮ್ಮ ಮಗನೆ ನನ್ನನ್ನು ಮಾತನಾಡಿಸಿ ನಿರ್ಮಲವಾದ ನನ್ನ ಮನಸ್ಸಿನಲ್ಲಿ ಅವರಿಂದ ಹೇಳಾರಾದಂತಹ ಪ್ರೀತಿಯ ತರಂಗಗಳನ್ನು ಎಬ್ಬಿಸಿದ್ದಾರೆ. ನನ್ನ ಬದಲಾಗಿ ನೀವು ನಿಮ್ಮ ಮಗನ ಜೊತೆಗೆ ಒಂದು ಸಲ ಮಾತನಾಡದಿದ್ದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ"*

ಎಂದು ಅವಳು ಸ್ವಲ್ಪ ಗಡಸುತನವನ್ನು ತನ್ನ ಮಾತಿನಲ್ಲಿ ತಂದು ಹೇಳಿದಾಗ, ಅಭಿ ತಂದೆ ಅತ್ತ ಕಡೆಯಿಂದ

*"ಹಾಗಾದ್ರೆ ಒಂದು ನಾನು ಹೇಳಿದ ಕೆಲಸ ಮಾಡ್ತಿಯಾ? ಮಾಡ್ತಿಯಾ ಅಲ್ಲ ಮಾಡಲೇ ಬೇಕು"*

ಎಂದು ಹೇಳಿದಾಗ ಆದೇಶದ ರೀತಿಯಲ್ಲಿ ಅವರಿಂದ ಬಂದಾಗ,

*"ನಾನು ನಿಮ್ಮ ಆಳಲ್ಲವಲ್ಲ. ಅದು ಅಲ್ಲದೆ, ನೀವು ಅಲ್ಲಿ ನಾನು ಇಲ್ಲಿ ನಾನು ನಿಮ್ಮ ಕೆಲಸ ಹೇಗೆ ಮಾಡಲು ಸಾಧ್ಯ?"*

*"ಇಲ್ಲ ನೀನೆ ಮಾಡಬೇಕು. ಅದು ಏನೆಂದರೆ ನೀನು ನನ್ನ ಮಗನನ್ನು ಕೂಡಲೇ ಮದುವೆಯಾಗಲೇಬೇಕು ತಡ ಮಾಡದೆ"*

ಎಂದು ಹೇಳಿ ಜೋರಾಗಿ ನಗತೊಡಗಿದರು. ಒಮ್ಮೆಲೇ ಪರಿಸ್ಥಿತಿ ಬದಲಾಗಿದ್ದು ಕಂಡು ಸುಮಾಳಿಗೆ ಶಾಕ್ ಹೊಡೆದಂತಾಗಿ ಸುಮ್ಮನೆ ಪ್ರತಿಮೆಯಂತೆ ನಿಂತುಕೊಂಡಳು. ಏನು ಮಾತನಾಡಬೇಕು ಅಂತ ಅವಳಿಗೆ ಗೊತ್ತಾಗಲಿಲ್ಲ. ಅಲ್ಲದೆ, ತಾನು ಕೇಳಿದ್ದು ನಿಜವಾ ಸುಳ್ಳ, ಎಂಬುದು ಸಹ ಅವ್ಳಿಗೆ ಸರಿಯಾಗಿ ತಿಳಿಯಲಿಲ್ಲ. ಕನಸಿನಲ್ಲಿ ನಡೆದಂತೆ ನಡೆದು ಹೋಗಿತ್ತು ಇಷ್ಟು ಹೊತ್ತಿನ ಎಲ್ಲ ಘಟನೆ.

ಒಮ್ಮೆಲೇ ಅಯೋಮಯ ಸ್ಥಿತಿಯಲ್ಲಿ ಅವಳು ಇದ್ದಳು. ಬಾಯಿಂದ ಮಾತೆ ಹೊರಡಲಿಲ್ಲ. ಅವಳು ಹಾಗೆ ನಿಂತಿದ್ದು ನೋಡಿದ ಕಾವೇರಿ, ಸುಮಾಳ ಭುಜವನ್ನು ಹಿಡಿದು ಅಲುಗಾಡಿಸಿದಾಗ ಸುಮಾ ಅವಳತ್ತಲೇ ನೋಡುತ್ತಾ, ಮಾತನಾಡದೆ ತನ್ನ ಹೆಬ್ಬೆಟ್ಟನ್ನು ಮೇಲೆ ಮಾಡಿ ಸಕ್ಸಸ್ ಅಂತ ಹೇಳಿದಂತೆ ಸನ್ನೆ ಮಾಡಿದಾಗ, ಕಾವೇರಿ ಖುಷಿಯಿಂದ ಸುಮಾಳ ಹತ್ತಿರ ಬಂದು ಅವಳ ಕೆನ್ನೆ ಸವರಿದಳು. ಅತ್ತ ಕಡೆಯಿಂದ ಅಭಿ ತಂದೆ ಮಾತನಾಡುತ್ತ

*"ಸುಮಾ, ನನ್ನ ಹೆಂಡ್ತಿ ಬಂದು ಎಲ್ಲ ವಿಷಯ ತಿಳಿಸಿದಾಗ, ನಾನು ನಿನ್ನೆ ರಾತ್ರಿ ನಿಂಗೆ ಫೋನ್ ಮಾಡಬೇಕು ಅಂತ ಮಾಡಿದ್ದೆ. ಆದರೆ ಇವಳೇ ನೀನು ಮಲಗಿರಬಹುದು ಎಂದು ಹೇಳಿ ಇಂದು ಮಾಡಿದರಾಯಿತು ಎಂದುಕೊಂಡೆವು. ಆದರೆ, ಬೆಳಿಗ್ಗೆ ನೀನು ನಿನ್ನ ಡ್ಯೂಟಿಗೆ ಹೋಗಬೇಕು ಎಂದು ಹೇಳಿದಾಗ ಸಮಾಧಾನವಾಗಿ ಮಾತನಾಡಿದರಾಯಿತು ಎಂದುಕೊಂಡು ನಂತರ ಮಾತನಾಡಿದರಾಯಿತು ಎಂದುಕೊಂಡೆ. ಆದರೆ ನಿನಗೆ ನಾನೇ ವಿಷಯ ತಿಳಿಸಬೇಕು ಅಂತ ನನ್ನ ಆಸೆಯಿತ್ತು. ಅದಕ್ಕೆ ನನ್ನ ಹೆಂಡತಿಗೆ ಏನೂ ಹೇಳಬೇಡ ಅಂತ ಹೇಳಿದ್ದೆ. ನಿನ್ನ ಧ್ವನಿಯನ್ನು ನಾನು ಕೇಳಿದಾಗ, ನೀನು ದುಗುಡದಿಂದ ಇರುವದು ನನಗೆ ಗೊತ್ತಾಯಿತು. ಆದರೂ ಸ್ವಲ್ಪ ನಿನ್ನನ್ನು ಕಾಡಿದರಾಯಿತು ಎಂದುಕೊಂಡು ಸ್ವಲ್ಪ ಬಿರುಸಾಗಿ ಮಾತಾಡಿದೆ. ತಪ್ಪು ತಿಳಿಯಬೇಡ ತಾಯಿ. ನಿನ್ನೆ ನಿನ್ನ ಬಗ್ಗೆ ನನ್ನ ಹೆಂಡತಿ ನನ್ನ ಮುಂದೆ ಎಲ್ಲ ಹೇಳಿದ್ದಾಳೆ. ನಿನ್ನ ಫೋಟೋ ಸಹ ನೋಡಿದ್ದೇನೆ. ನನಗೆ ಮಗಳಿಲ್ಲ ಎಂಬ ಕೊರಗೊಂಡಿತ್ತು. ಅದನ್ನು ನೀನು ನೀಗಿಸಿದೆ. ನೀನು ನನ್ನ ಸೊಸೆಯಲ್ಲ ನನ್ನ ಮಗಳು."*

ಎಂದು ಹೇಳುತ್ತಿರುವಾಗ, ಅವರ ಹೃದಯಾಂತರಾಳದಿಂದ ಬಂದ ಮಾತುಗಳನ್ನು ಕೇಳುತ್ತಿದ್ದ ಸುಮಾಳಿಗೆ ಹೃದಯದ ತುಂಬಾ ದುಃಖ ಮತ್ತು ಸಂತೋಷ ಒಮ್ಮೆಲೇ ಉಕ್ಕಿ ಬರುತ್ತಿತ್ತು. ಅದರ ಪರಿಣಾಮವಾಗಿ ಕಣ್ಣಲ್ಲಿ ನೀರು ತುಂಬಿ ಬಂತು. ಇಷ್ಟು ವರ್ಷ ತನ್ನ ಗಂಡನನ್ನು ನಂತರ ಅತ್ತೆ ಮತ್ತು ಅಮ್ಮನನ್ನು ಕಳೆದುಕೊಂಡ ಮೇಲೆ ತಾನು ತಬ್ಬಲಿ, ಅನಾಥೆ ಎಂಬ ಭಾವನೆ ಅವಳನ್ನು ಸದಾ ಕಾಲ ಕಾಡುತ್ತಿತ್ತು. ಆದ್ರೆ, ಈಗ ಆ ಭಾವನೆಯನ್ನು ಹೋಗಲಾಡಿಸುವಂತೆ ಅಭಿಯ ಮುಖಾಂತರವಾಗಿ ಅವನ ತಂದೆ ತಾಯಿ ಸಿಕ್ಕಿದ್ದರು. ಅವರು ಬೇರೆ ಏನನ್ನೂ ಪ್ರಶ್ನಿಸದೆ ಮತ್ತು ಯೋಚನೆ ಮಾಡದೆ ನೇರವಾಗಿ, ಸುಮಾಳನ್ನು ತಮ್ಮವಳನ್ನಾಗಿ ಮಾಡಿಕೊಳ್ಳಲು ಒಪ್ಪಿಕೊಕೊಂಡಿರರು ಅವಳಿಗೆ ಇದು ನಿಜವೋ ಕನಸೋ ಎಂದು ಅರಿತುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಎಲ್ಲ ಪ್ರಸಂಗಗಳು ನಡೆದು ಹೋಗಿದ್ದು ಇತ್ತು. ತನ್ನ ಜೀವನದಲ್ಲಿ ಇಂಥ ಒಂದು ತಿರುವು ಬರುತ್ತದೆ ಅಂತ ಅವಳು ಅಂದುಕೊಂಡಿರಲಿಲ್ಲ. ತಾನು ತಬ್ಬಲಿಯಾದೆ ಸಾಯುವವರೆಗೆ ತಬ್ಬಲಿಯಾಗೆ ಇರಬೇಕಾಗುತ್ತದೆ ಅಂತ ಅಂದುಕೊಂಡಿದ್ದಳು. ಆದರೆ ಒಂದು ಅನಿರೀಕ್ಷಿತ ತಿರುವೊಂದು ಅವಳ ಬಾಳಿನಲ್ಲಿ ಬಂದು ಮತ್ತೆ ಅವಳ ಬಾಳು ಸುಸ್ಥಿತಿಗೆ ಬರುವ ಅವಕಾಶ ನೀಡಿತ್ತು. ಹಾಗೆ ಅವಳು ಮಾತನಾಡದೆ ಇದ್ದಾಗ ಅತ್ತ ಕಡೆಯಿಂದ ಅಭಿ ತಂದೆ,

*"ಸುಮಾ, ಆದಷ್ಟು ಬೇಗನೆ ನಮ್ಮ ಮನೆಗೆ ಬಂದು ಬಿಡಮ್ಮ. ಇನ್ನು ತಡ ಮಾಡುವದು ಬೇಡ. ಇನ್ನು 4 ದಿನ ಬಿಟ್ಟು, ಒಳ್ಳೆ ದಿನ ಇದೆ ಅಂತ ಗೊತ್ತಾಗಿದೆ. ನೀನು ಅಭಿ ಜೊತೆಗೆ ಬಂದು ಬಿಡು. ನಾನು ಅವನಿಗೆ ಹೇಳುತ್ತೇನೆ. ಅವನ ಜೊತೆಗೆ ನೀನು ಡೆಲ್ಲಿಗೆ ಬಂದು ಬಿಡು. ಒಂದು ಸಣ್ಣ ಕಾರ್ಯಕ್ರಮವನ್ನು ಮಾಡಿ ನಂತರ ಒಳ್ಳೆ ದಿನ ನೋಡಿಕೊಂಡು ಮದುವೆ ಮಾಡಿ ನಿನ್ನನ್ನ ನಮ್ಮ ಮನೆಗೆ ಬರಮಾಡಿಕೊಳ್ತೀನಿ. ಅಭಿ ಜೊತೆಗೆ ಡೆಲ್ಲಿಗೆ ಬಂದುಬಿಡಮ್ಮಾ. ನಾನು ಫ್ಲೈಟ್ ಟಿಕೆಟ್ ಅರೆಂಜ್ ಮಾಡ್ತೀನಿ. ಅಭಿಗೆ ಹೇಳ್ತಿನಿ"*

ಎಂದು ಹೇಳುತ್ತಿರುವಂತೆ ಅವರ ಮಾತಿನಲ್ಲಿ ಇದ್ದ ವಾತ್ಸಲ್ಯಕ್ಕೆ ಸುಮಾ ಕರಗಿ ಹೋಗಿ, 

*"ಆಯ್ತು ಸರ್, ನೀವು ಹೇಳಿದಂತೆ ಆಗಲಿ. ಖಂಡಿತವಾಗಿ ಬರ್ತೀನಿ. ನಿಮ್ಮಂಥ ಹಿರಿಯರ ಮಾರ್ಗದರ್ಶನ ಆಶೀರ್ವಾದ ಬೇಕು"*

ಎಂದು ಹೇಳುತ್ತಿರುವಾಗಲೇ ಅವರು

*"ತುಂಬಾ ಒಳ್ಳೆದಮ್ಮ ಹಾಗೆ ಮಾಡು, ನನ್ನ ಹೆಂಡ್ತಿ ಮಾತಾಡ್ತಾಳೆ ಇರು"*

ಎಂದು ಹೇಳಿ ತಮ್ಮ ಹೆಂಡತಿಗೆ ಫೋನ್ ಕೊಟ್ಟರು. ಅಭಿ ತಾಯಿ 

*"ಸುಮಾ, ಹೇಗಿದಿಯಮ್ಮ. ಇವರು ತಮ್ಮ ನಿರ್ಧಾರ ನನಗೆ ಹೇಳೋಕೆ ಬಿಡಲಿಲ್ಲ. ತಾವೇ ಹೇಳ್ತಿನಿ ನನಗೇನು ಹೇಳ್ಬೇಡ ಅಂತ ಹೇಳಿದ್ದರಿಂದ, ನಿಂಗೆ ನಾನು ಏನೂ ಹೇಳಿರಲಿಲ್ಲ. ಈಗ ಇವ್ರ ಮಾತು ಕೇಳಿದ್ರೆ, ನನಗಿಂತ ಅವಸರ ಇವರಿಗೆ ಇದ್ದಹಾಗೆ ಕಾಣುತ್ತೆ"*

ಎಂದು ಹೇಳುತ್ತಾ ನಗತೊಡಗಿದಾಗ ಸುಮಾಳಿಗೆ ನಾಚಿಕೆಯಾಯಿತು. ಅಷ್ಟರಲ್ಲಿ 

*"ಸುಮಾ ಅಲ್ಲಿ ಕಾವೇರಿ ಇರಬಹುದಲ್ಲವೇ?"*

*"ಇಲ್ಲೇ ಇದ್ದಾಳೆ"*

*"ಸರಿ ಅವಳ ಕೈಯಲ್ಲಿ ಕೊಡು"*

ಎಂದು ಹೇಳಿದಾಗ, ಸುಮಾ ತನ್ನ ಕೈಯಲ್ಲಿದ್ದ ಫೋನ್ ಕಾವೇರಿ ಕೈಯಲ್ಲಿ ಕೊಟ್ಟಳು. 

ಅಭಿ ತಾಯಿ ಕಾವೇರಿ ಜೊತೆಗೆ ಎಲ್ಲವನ್ನು ವಿವರವಾಗಿ ಹೇಳಿದಳು. ಅದನ್ನು ಕೇಳುತ್ತಲೇ ಕಾವೇರಿ

*"ಅಮ್ಮ, ನಿಮಗೆ ಹೇಗೆ ಕೃತಜ್ಞತೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ದಿಕ್ಕಿಲ್ಲಿದ ನನ್ನ ತಂಗಿಗೆ ನೀವು ದಿಕ್ಕಾದಿರಿ. ಅವಳಿಗೆ ಇನ್ನು ಮುಂದೆ ನೀವೇ ತಂದೆ ತಾಯಿ."*

ಎಂದು ಹೇಳಿ ಫೋನ್ ಡಿಸ್ ಕನೆಕ್ಟ್ ಮಾಡಿದಳು. 


25


ನಿಜವಾಗಿಯೂ ಕಾವೇರಿಗೆ ಸುಮಾಳಿಗಿಂತಲೂ ಖುಷಿಯಾಗಿತ್ತು. ಹಾಗೆ ಕಾವೇರಿ ಮುಂದಿನ ಸುಮಾಳ ಬರಬಹುದಾದ ಸುಖದ ದಿನಗಳ ಬಗ್ಗೆ ಮಾತನಾಡುತ್ತ ಇದ್ದಾಗ, ಒಮ್ಮೆಲೇ ಕಾವೇರಿ,

*"ಸುಮಿ, ಅಂದಹಾಗೆ ಟ್ರೀಟ್ ಯಾವಾಗ?"*

*"ನೀನು ಯಾವಾಗ ಹೇಳ್ತಿ ಆವಾಗ"*

*"ಈಗ್ಲೇ ನಡಿಯೇ, ಹೊಟ್ಟೆ ತುಂಬಾ ಹಸಿವಾಗ್ತಿದೆ"*

ಎಂದು ಹೇಳಿ ಸುಮಾಳನ್ನು ತನ್ನ ಜೊತೆಗೆ ಕರೆದುಕೊಂಡು ಕಾಲೇಜು ಕ್ಯಾಂಟೀನ್ ಕಡೆ ಹೊರಟರು. ಅಷ್ಟರಲ್ಲಿ ಸುಮಾಳ ಫೋನ್ ಮತ್ತೆ ರಿಂಗ್ ಆಯ್ತು. ನೋಡಿದಾಗ, ಅಭಿ ಮೆಸೆಂಜರ್ ದಿಂದ ರಿಂಗ್ ಮಾಡಿದ್ದ. ಅವನ ಕಾಲ್ ನೋಡುತ್ತಿರುವಂತೆ ಸುಮಾಳಿಗೆ ತುಂಬಾ ನಾಚಿಕೆಯಾಯಿತು. ಅವನು ಈ ಹೊತ್ತಿನಲ್ಲಿ ಕಾಲ್ ಮಾಡಿದ್ದು ಕಂಡ ಅವಳು ಅವನ ತಂದೆ ತಾಯಿ ಅವನ ಜೊತೆಗೆ ಮಾತನಾಡಿ ವಿಷಯ ತಿಳಿಸಿರಬಹುದು ಎಂದುಕೊಂಡಳು. ಕಾವೇರಿ ಅಭಿ ಕಾಲ್ ಬಂದಿದ್ದು ಅರ್ಥ ಮಾಡಿಕೊಂಡು, 

*"ಲೇ ಸುಮಿ, ನಾಚಿಕೊಳ್ಳಬೇಡವೇ, ಮಾತಾಡು"*

ಎಂದು ಹೇಳಿದಾಗ ನಾಚಿಕೆಯಿಂದಲೇ ಅವಳು ಕಾಲ್ ಎತ್ತಿದಳು. 

*"ಹಲೋ, ಇದೇನು ಈ ಹೊತ್ತಿನಲ್ಲಿ ಕಾಲ್"*

ಎಂದು ತಮಾಷೆಯಿಂದ ಮತ್ತು ನಾಚಿಕೆಯಿಂದ ಅವನನ್ನು ಕೇಳಿದಾಗ ಅಭಿ ಅತ್ತ ಕಡೆಯಿಂದ ನಗುತ್ತ

*"the first day you came into my life. I realised that, you will stay here until end. I will love you till the end of time"*

ಎಂದು ಹೇಳುತ್ತಲೇ ನಗುತ್ತಿರುವಾಗ, ಅವನ ಮಾತನ್ನು ಕೇಳಿದ ಸುಮಾ ನಾಚಿ ನೀರಾದಳು. ಬಹಳ ದಿನಗಳ ನಂತರ ಅವಳೆಡೆಗೆ ಒಂದು ಪ್ರೀತಿ ತುಂಬಿದ ಹೃದಯ ತನ್ನ ಪ್ರೀತಿಯನ್ನು ಹೇಳುತ್ತಿತ್ತು. ಬಹಳ ದಿನಗಳ ನಂತರ ಪ್ರಶಾಂತವಾಗಿದ್ದ ಸುಮಾಳ ಮನದ ಕೊಳದಲ್ಲಿ ಪ್ರೀತಿಯ ಮಧುರ ಭಾವನೆಯ ತರಂಗಗಳು ಎದ್ದಿದ್ದವು. ದೂರದಲ್ಲಿ ನಿಂದುಕೊಂಡ ಅಭಿ ಪ್ರೀತಿಯ ಕಲ್ಲನ್ನು ಒಗೆದು ಆ ತರಂಗಗಳನ್ನು ಎಬ್ಬಿಸಿದ್ದ. ಅವನು ಎಸೆದ ಆ ಪ್ರೀತಿಯ ಕಲ್ಲು ಅವಳ ಮನದ ಕೊಳದಲ್ಲಿ ಆಳದಲ್ಲಿ ಹೋಗಿ ಕುಳಿತುಕೊಂಡು ಬಿಟ್ಟಿತ್ತು. ಅದೇ ಪ್ರೀತಿಯನ್ನು ನಿಚ್ಚಳವಾಗಿ ವ್ಯಕ್ತಪಡಿಸುತ್ತ ಅಭಿ ಫೋನ್ ಮಾಡಿ ಇಂಗ್ಲಿಷ್ ದಲ್ಲಿ ಇಂದು ಡೈರೆಕ್ಟ್ ಆಗಿ ಹೇಳಿಬಿಟ್ಟ. 

*"ಏನು ನಾನು ಏನನ್ನೋ ಹೇಳಿದೆ ನೀವು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲವಲ್ಲ. ನಿಮ್ಮ ಅನಿಸಿಕೆ ಏನು ಅನಂತ್ ಹೇಳಬಾರದೇ?"*

ಎಂದು ಅವನು ಅಂಗಲಾಚಿದಂತೆ ಕೇಳಿಕೊಂಡಾಗ ಅವಳು ಸಹ ಇಂಗ್ಲೀಷಿನಲ್ಲಿ ತಾನೇನು ಕಡಿಮೆಯಿಲ್ಲ ಎಂದುಕೊಂಡು 

*"I love you not for you look like I love you for what you have inside"*

ಎಂದು ಹೇಳಿ ಅವನಿಗೆ ಕೇಳಿಸದಂತೆ ನಗತೊಡಗಿದಾಗ ಅವನು 

*"ಒಹೋ TFT ಅಂದ ಹಾಗಾಯ್ತು"*

*"*"TFT ಅಂದ್ರೆ ಏನು?"*

*” Tit For Tat"*

ಎಂದು ಹೇಳಿ ನಗತೊಡಗಿದ. 

ಅವನ ಮಾತನ್ನು ಕೇಳಿ ಸುಮಾ ಸಹ ನಗತೊಡಗಿದಳು. ಅವಳಿಗೆ ನಗು ತಡೆಯದಾಗಿತ್ತು. ಅವಳು ಅಷ್ಟು ಖುಷಿಯಾಗಿ ನಗುವದನ್ನು ಕಂಡ ಕಾವೇರಿ ಮನಸ್ಸಿನಲ್ಲಿ ದೇವರಿಗೆ, ಸುಮಾಳ ಬಾಳಲಿ ಖುಷಿ ಬಂದಿದೆ, ಅದನ್ನ ಯಾವಾಗಲೂ ಹೀಗೆ ಇರಲಿ ಎಂದು ಬೇಡಿಕೊಂಡಳು. 

*"ನಮ್ಮ ತಂದೆ ಒಮ್ಮೆಲೇ ನನಗೆ ಫೋನ್ ಮಾಡಿ, ನಿಮ್ಮನ್ನ 2 ದಿನ ಬಿಟ್ಟು ಡೆಲ್ಲಿಗೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ."*

ಎಂದು ಹೇಳುತ್ತಿರುವಂತೆಯೇ, ಸುಮಾಳ ಮನಸ್ಸಿನಲ್ಲಿ ತಾನು ಇನ್ನು 2 ದಿನದಲ್ಲಿ ತನ್ನ ಬಾಳಿಗೆ ತಿರುವು ಕೊಟ್ಟ ವ್ಯಕ್ತಿಯನ್ನು ನೋಡುತ್ತೇನೆ ಎಂದುಕೊಂಡಳು. ಆ ರೀತಿಯಾಗಿ ಅವಳು ಕಲ್ಪನೆಯಲ್ಲಿಯೇ ಅಭಿಯನ್ನು ಭೇಟಿಯಾಗಿರುವಂತೆ ಕಲ್ಪಿಸಿಕೊಳ್ಳತೊಡಗಿದಳು. ಅಭಿ ಮುಂದುವರೆದು,

*"ನೋಡಿ ಹೇಗೂ ಇನ್ನೆರಡು ದಿನಗಳಲ್ಲಿ 3 ದಿನದ ಸಾಲದ ರಜೆ ಇವೆ. ನೀವು ಇನ್ನೆರಡು ದಿನ ರಜೆ ಹಾಕಿದರೆ, ಒಟ್ಟು 5 ದಿನ ಆಗುತ್ತೆ. ಒಂದು ದಿನ ಹೋಗೋಕ್ಕೆ ಇನ್ನೊಂದು ದಿನ ಬರೋಕ್ಕೆ. ಉಳಿದ ಮೂರು ದಿನ ಡೆಲ್ಲಿಯಲ್ಲಿ ಹಾಯಾಗಿ ನಮ್ಮ ಮನೆಯಲ್ಲಿ ಮತ್ತು ನಮ್ಮ ಫ್ಯಾಮಿಲಿ ಕೂಡಿ ಸುತ್ತಾಡೋಣ"*

ಎಂದು ಹೇಳಿದಾಗ, ಸುಮಾ,

*"ಅದೆಲ್ಲ ಸರಿ, ಆದರೆ,........"*

ಎಂದು ರಾಗ ಎಳೆಯುತ್ತಿರಬೇಕಾದರೆ,

*"ಏನು ಆದರೆ ಅಂತ ರಾಗ ಎಳೆಯುತ್ತಿರುವಿರಿ? ನಿಮಗೆ ಬರಲು ಇಷ್ಟವಿಲ್ಲವಾ? ಅಮ್ಮನಿಗೆ ಹೇಳಲಾ?"*

*"ಅಯ್ಯೋ ಹಾಗೇನಿಲ್ಲ. ಆದರೆ ನಾನು ಈಗಲೇ ಬಂದರೆ ಹೇಗೆ ಅಂತ ಯೋಚನೆ ಮಾಡುತ್ತಿದ್ದೇನೆ"*

*"ಈಗಲೇ ಅಂದರೆ ಹೇಗೆ? ಮುಂದೆ ಆದರೂ ಬರಲೇಬೇಕಲ್ಲವೇ. ಪ್ರತಿ ಸಂದರ್ಭ ಪ್ರತಿ ವ್ಯಕ್ತಿಗೆ ಮೊದಲನೆಬಾರಿಗೆ ಬಂದೆ ಬರುತ್ತದೆ. ಆದರೆ ಪ್ರತಿ ಮೊದಲಿನ ಬಾರಿಗೆ ನಿಮ್ಮ ಹಾಗೆ ಯೋಚನೆ ಮಾಡುತ್ತಾ ಕುಳಿತರೆ, ಜೀವನದಲ್ಲಿ ಯಾರೂ ಹೀಗೆ ಇಲ್ಲಿಯವರೆಗೆ ಮುಂದು ಬರುತ್ತಿರಲಿಲ್ಲ. ಅಲ್ಲದೆ, ಸಮಾಜ ಇಂದಿಗೂ ಮುಂದೆ ಹೋಗುತ್ತಿರಲಿಲ್ಲ"*

ಎಂದು ಹೇಳುತ್ತಿರುವಂತೆ, ಅವಳಿಗೆ ಅಭಿಯ ಮಾತು ನಿಜ ಅನ್ನಿಸಿತು. ಆದರೂ ಅವಳು

*"ಆಯ್ತು ಸಂಜೆ ಹೇಳ್ತಿನಿ"*

ಎಂದು ಹೇಳಿದಾಗ, ಅಭಿ

*"ಹೇಳೋದಲ್ಲ, ರೆಡಿ ಆಗಲೇ ಬೇಕು. ಇಲ್ಲ ಅಂದ್ರೆ ಅಮ್ಮನಿಗೆ ಹೇಳ್ತಿನಿ ಅಷ್ಟೇ. ನಾನೇನಾದ್ರೂ ಅಮ್ಮನಿಗೆ ಹೇಳಿದ್ರೆ, ಅವಳು ಅಪ್ಪನ್ನ ಕರೆದುಕೊಂಡು ಬಂದು ನಮ್ಮಿಬ್ಬರನ್ನು ಕರೆದುಕೊಂಡು ಹೋಗಿಬಿಡ್ತಾಳೆ"*

ಎಂದು ಅವನು ಬಿಡದೆ ಇದ್ದಾಗ, ಸುಮಾ ಕೊನೆಗೂ 

*"ಸರಿ, ರೆಡಿ ಆಗ್ತೀನಿ"*

ಎಂದಷ್ಟೇ ಹೇಳಿದಾಗ ಅಭಿ ಖುಷಿಯಿಂದ 

*"ವಾವ್, ಆ ವೇಳೆ ಯಾವಾಗ ಬರುತ್ತದೆ ಅಂತ ನಾನು ಇವಾಗಿನಿಂದಲೇ ಕಾಯುತ್ತ ಕುಳಿತುಬಿಡುತ್ತೇನೆ"*

ಎಂದು ತುಂಟಾಟಮಾಡಿದಾಗ, ಸುಮಾಳಿಗೆ ನಾಚಿಕೆ ಬಂತು. 

*"ಸರಿ ರಾತ್ರಿ ಮಾತಾಡೋಣ. ನಿಮಗೊಂದು ಸುರ್ಪ್ರೈಸ್ ಕೊಡ್ತೀನಿ"*

ಎಂದು ಹೇಳಿ ಫೋನ್ ಇಟ್ಟುಬಿಟ್ಟ. 

ಸುಮಾ ಸಹ ತನ್ನ ಫೋನ್ ಆಫ್ ಮಾಡಿದಳು. ಅವಳನ್ನೇ ಕಾವೇರಿ ನೋಡುತ್ತಾ ನಿಂತಿದ್ದಳು. ಕಾವೇರಿ ಮನದಲ್ಲಿ ಅಂದುಕೊಳ್ಳುತಾಳಿದ್ದಳು. ಸ್ವಲ್ಪ ಹೊತ್ತಿನ ಮುಂಚೆ ಎಷ್ಟು ಬಾಡಿದ ಮುಖ ಹೊಂದಿದ್ದ ಕಾವೇರಿ ಈಗ ಹೇಗಾಗಿದ್ದಾಳೆ ಅಂತ. ಪ್ರಸಂಗಗಳು ಮತ್ತು ಮನಸ್ಥಿತಿ ಮನುಷ್ಯನ ಮೇಲೆ ಎಂಥ ಪರಿಣಾಮ ಬೀರುತ್ತವೆ ಅಂತ ಅಂದುಕೊಳ್ಳುತ್ತಿರುವಷ್ಟರಲ್ಲಿ ಸುಮಾ, ಅವಳ ಹತ್ತಿರ ಬಂದಳು. ಕ್ಯಾಂಟೀನ್ ಒಳಗೆ ಒಬ್ಬರೂ ಹೋದರು. ಅಲ್ಲಿ ತಿಂಡಿಗೆ ಆರ್ಡರ್ ಮಾಡಿ, ಸುಮಾ ಕಾವೇರಿಗೆ ಹೇಳತೊಡಗಿದಳು. 

*"ಕಾವೇರಿ, ಅಭಿ ತಾಯಿ ನಂಗೆ ಡೆಲ್ಲಿಗೆ ಬರಲು ತಿಳಿಸಿದ್ದಾರೆ"*

ಎಂದು ನಾಚಿಕೆಯಿಂದ ಹೇಳಿದಾಗ, 

*"ಗೊತ್ತಾಯ್ತು ನನಗೂ ಹೇಳಿದ್ರು. ಸುಮಿ, ಬೇರೆ ಯೋಚನೆ ಮಾಡಬೇಡ. ಹೋಗಿ ಬಾ. ನೀನು ಅಲ್ಲಿಯ ವಾತಾವರಣ ನೋಡಿದ ಹಾಗಾಗುತ್ತೆ. ಈಗ್ಲೇ ಹೋಗಿ ಪ್ರಿನ್ಸಿಪಾಲರಿಗೆ ಲೀವ್ ಲೆಟರ್ ಕೊಟ್ಟು ಬಿಡು."*

ಎಂದು ಹೇಳಿದಾಗ ಸುಮಾಳಿಗೆ ಕಾವೇರಿ ಹೇಳುವದು ಸರಿ ಅನ್ನಿಸಿತು. ಹಾಗೆ ಪ್ರಿನ್ಸಿಪಾಲ ರೂಮ್ ಕಡೆಗೆ ಹೋಗುವಾಗ, ಕಾವೇರಿ 

*"ಸುಮಿ, ಈಗ್ಲೇ ಎಲ್ಲ ವಿಷಯ ಹೇಳಬೇಡ್ವೇ. ಮೊದಲು ಹೋಗಿ ಬಾ, ನಂತ್ರ ನಿಧಾನವಾಗಿ ಹೇಳಿದ್ರಾಯ್ತು. ಈಗೇನೋ ಒಂದು ನೆಪ ಮಾಡಿದರಾಯಿತು."*

ಎಂದಾಗ ಸುಮಾಳಿಗೆ ಅವಳ ಮಾತು ಸರಿ ಇದೆ ಅಂತ ಅನ್ನಿಸಿ ಅದಕ್ಕೊಪ್ಪಿಕ್ಕೊಂದು ಹೋಗಿ ಪ್ರಿನ್ಸಿಪಲ್ ಗೆ ತಾನು ಊರಿಗೆ ಹೋಗಬೇಕಾಗಿದ್ದು ಅದಕ್ಕೆ ರಜೆ ಬೇಕು ಅಂತ ನೆಲಿ ಸ್ಯಾಂಕ್ಷನ್ ಮಾಡಿಸಿಕೊಂಡು ಬಂದಳು. ಡ್ಯೂಟಿ ಟೈಮ್ ಮುಗಿದಿದ್ದರಿಂದ, ಅವಳು ಮನೆಗೆ ಹೋದಳು. ಮನೆಗೆ ಹೋಗಬೇಕಾದರೆ, ದಾರಿಯಲ್ಲಿ ಅವಳಿಗೆ ಅಭಿಯ ಮತ್ತು ಅವನ ತಂದೆ ತಾಯಿಗಳ ಧ್ಯಾನದಲ್ಲಿ ಇದ್ದಳು. ಅವರು ಆಡಿದ ಮಾತುಗಳು, ತನಗೆ ನೀಡಿದ ಪ್ರೋತ್ಸಾಹ, ಧೈರ್ಯ ಅವರು ತನ್ನನ್ನು ತಮ್ಮ ಮನೆಯ ಸದಸ್ಯಳಾನ್ನಾಗಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದು ಎಲ್ಲ ತಿಳಿದ ಮೇಲೆ, ಅಭಿ ತಂದೆ ಅದಕ್ಕೆ ಒಪ್ಪಿಗೆ ಸೂಚಿಸಿದ್ದು, ಇವೆಲ್ಲವುಗಳನ್ನು ಅವಲೋಕನ ಮಾಡಿದಾಗ, ತನ್ನ ಕಷ್ಟದ ದಿನಗಳು ಮುಗಿದವು ಎಂದು ಅಂದುಕೊಂಡು ಮನಸ್ಸು ನಿರಾಳವಾಗಿತ್ತು. ಹಾಗೆ ಅದೇ ಗುಂಗಿನಲ್ಲಿ ಮನೆ ಮುಟ್ಟಿದಳು.

   ಮನೆಯಲ್ಲಿ ಒಳಗೆ ಹೋದಾಗ ಅವಳ ಮನದಲ್ಲಿ ಮಧುರವಾದ ಭಾವನೆಗಳು ಹರಡಿದ್ದವು. ಅದೇ ಭಾವನೆಯಲ್ಲಿ ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಅದೇ ಭಾವನೆಯಲ್ಲಿ ಮನೆಯ ಒಳಗೆ ಒಂದು ಸಲ ನೋಡಿದಾಗ, ಅವಳಿಗೆ ತನ್ನ ಮನೆ ತನ್ನ ಕಣ್ಣಿಗೆ ಹೊಸದಾಗಿ ಕಾಣುತ್ತಿರುವಂತೆ ಅನ್ನಿಸತೊಡಗಿತು. ತನ್ನ ಮನೆಯೇ ದಿನಾಲೂ ತನ್ನ ಕಣ್ಣಿಗೆ ತನ್ನಂತೆ ಏಕಾಕಿತನ ಹೊಂದಿದಂತೆ ಕಾಣುತ್ತಿದ್ದ ತನ್ನ ಮನೆ, ಇಂದು ಯಾಕೋ ತುಂಬಾ ಹೊಸದಾಗಿ ಕಾಣುತ್ತಿದೆ. ಪ್ರತಿ ವಸ್ತುವಿನಲ್ಲಿ ಜೀವಕಳೆ ತುಂಬಿ ಬಂದಿರುವಂತೆ ಅನ್ನಿಸತೊಡಗಿದೆ. ಹಾಲಿನಲ್ಲಿದ್ದ ಸೋಫಾ ನೋಡುತ್ತಿದ್ದಂತೆ ಅದರ ಮೇಲೆ ಯಾರೋ ಒಬ್ಬ ವ್ಯಕ್ತಿ ಕುಳಿತಿರುವಂತೆ ಅನ್ನಿಸತೊಡಗಿತು. ಆದರೆ ಮುಖ ಮಾತ್ರ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅಭಿ ತನ್ನ ಜೊತೆಗೆ ಮಾತಾಡಿದ್ದ ಅಂದಾಜಿನಿಂದ, ಅಲ್ಲಿ ಅಭಿ ಕುಳಿತುಕೊಂಡಿದ್ದಾನೆ ಅಂತ ಅವಳಿಗೆ ಅನ್ನಿಸತೊಡಗಿತು. ಆದರೆ ಮುಖ್ ಮಾತ್ರ ಮಂಜಾಗಿ ಕಾಣುತ್ತಿತ್ತು. ಬಹಳಮಾಡಿ ತಾನು ಅವನ ಮುಖ ನೋಡದ್ದರಿಂದ, ತನಗೆ ತನ್ನ ಮನಸ್ಸಿನ ಛಾಯೆ ಅಲ್ಲಿ ಮೂಡಿ ಆ ರೀತಿಯಾಗಿ ಕಾಣಿಸುತ್ತಿರಬಹುದು ಎಂದುಕೊಂಡಳು. ಅದು ನಿಜವಾಗಿತ್ತು. ತನ್ನ ಮನದಲ್ಲಿ ತಾನು ಅಭಿ ಹೇಗಿರಬಹುದು ಎಂದು ಕಲ್ಪಿಸಿಕೊಂಡಿದ್ದ ಅವಳು ತನ್ನ ಮನದ ಛಾಯೆಯನ್ನು ಅಲ್ಲಿ ನೋಡಿದ್ದಳು. ತನ್ನ ಕಲ್ಪನೆಗೆ ತಾನೇ ನಕ್ಕು ಒಳಗೆ ಹೋದಳು. 

   ಇಷ್ಟು ದಿನ ಮನ ಶೋಕರಾಗವನ್ನು ಹಾಡುತ್ತಿತ್ತು. ಆದರೆ ಇಂದು ಮಾತ್ರ ತನನಂ ತನನಂ ಎಂದು ಹಾಡುತ್ತಿತ್ತು. ಇಷ್ಟು ಮಧುರವಾದ ಅನುಭವವನ್ನು ಅವಳು ಬಾಳಿನಲ್ಲಿ ಅನುಭವಿಸಿರಲಿಲ್ಲ. ಮದುವೆಯಾಗುವ ವೇಳೆಯಲ್ಲಿ ಮನಸ್ಸಿನಲ್ಲಿ ಮಾಡುವೆ ಆಗುವ ಆಸೆ ಇದ್ದರೂ ಸಹ ಇವಾಗಿನಷ್ಟು ಪ್ರಬುದ್ಧತೆ ಮತ್ತು ಮನಸ್ಸು ಯೋಚನೆ ಮಾಡುವ ಶಕ್ತಿ, ಅದನ್ನು ಭಾವನೆಗಳಿಗೆ ಬದಲಾಯಿಸಿಕೊಂಡು, ಈ ರೀತಿಯಾಗಿ ಆನಂದಿಸುವ ಹಾಗೆ ಪರಿಸ್ಥಿತಿ ಆಗಿರಲಿಲ್ಲ. ಆದರೆ ಇಂದು ಮಾತ್ರ ಅವಳು ತನ್ನ ಭಾವನೆಗಳ್ಳನ್ನು ತನ್ನ ಕನಸನ್ನಾಗಿ ಮಾಡಿಕೊಂಡು ಅವುಗಳನ್ನು ತುಂಬಾ ಚನ್ನಾಗಿ ಅನುಭವಿಸುತ್ತಿದ್ದಾಳೆ. ಇದು ಭಾವ ಜೀವಿಯ ಲಕ್ಷಣ. ಈ ರೀತಿಯಾಗಿ ಒಬ್ಬ ವ್ಯಕ್ತಿ ತನ್ನ ಭಾವನೆಗಳಿಂದ ತನ್ನನ್ನು ಹೇಗೆ ಕನಸಿನ ಲೋಕಕ್ಕೆ ಕರೆದೊಯ್ಯುತ್ತಾನೆ ಅಂತ ತಾನೇ ಯೋಚನೆ ಮಾಡಿದಳು. ಅದಕ್ಕೆ ಇಂಥ ವ್ಯಕ್ತಿಗಳಿಗೆ ಭಾವಜೀವಿ ಅಂತ ಅನ್ನುತ್ತಾರೆ ಅಂದುಕೊಂಡಳು. 

   ಅದೇ ಮಧುರವಾದ ಭಾವನೆಯಲ್ಲಿ ಅವಳು ಮನೆಯ ಎಲ್ಲ ಕೆಲಸಗಳನ್ನು ಮಾಡಿದಳು. ತಾನು ಅಡುಗೆ ಮಾಡುತ್ತಿರಬೇಕಾದರೆ ಅಭಿ ತನ್ನ ಪಕ್ಕಕ್ಕೆ ಬಂದು ಅಡುಗೆ ಮಾಡಲು ಸಹಾಯ ಮಾಡುತ್ತಿರವಂತೆ ಅನ್ನಿಸುತ್ತಿತ್ತು. ತಾನು ಊಟಕ್ಕೆ ಕುಳಿತಾಗ, ಅವನು ತನ್ನೆದುರಿಗೆ ಬಂದು ಕುಳಿತು ತನ್ನ ಬಾಯಿಗೆ ತುತ್ತು ಹಾಕಿದಂತೆ ಅನ್ನಿಸುತ್ತಿತ್ತು. ಹಾಗೆ ತಾನೂ ಸಹ ತನ್ನ ತಟ್ಟೆಯಿಂದ ಅವನಿಗೆ ತುತ್ತು ಹಾಕಿದಂತೆ ಭಾಸವಾಗುತ್ತಿತ್ತು. ಹಾಗೆ ಮಧುರವಾದ ಭಾವನೆಯಲ್ಲಿ ಊಟ ಮುಗಿಸಿ, ತನ್ನ ಬೆಡ್ ರೂಮಿಗೆ ಹೋದಳು. 

   ಬೆಡ್ ರೂಮಿಗೆ ಹೋಗಿ ಬೆಡ್ ಮೇಲೆ ಉರುಳುತ್ತಿದ್ದಂತೆ, ಅವಳ ಕಣ್ಣೆದುರಿಗೆ ಅವನ ಗಂಡ ಮನುನ ಫೋಟೋ ಕಂಡಿತು. ಅವನ ಫೋಟೋ ನೋಡುತ್ತಾ ಹಾಗೆ ಮಲಗಿದಳು. ಫೋಟೋದಲ್ಲಿರುವ ತನ್ನ ಗಂಡ ಮನು ತನ್ನನ್ನೇ ನೋಡುತ್ತಾ ನಗುತ್ತಿರುವಂತೆ ಕಂಡಿತು. ಎಷ್ಟು ಒಳ್ಳೆಯ ಮನಸ್ಸಿನವನಿದ್ದ ಮನು. ತುಂಬಾ ಕಾಳಜಿಯಿಂದ ನನ್ನನ್ನು ನೋಡಿತ್ತಿದ್ದ ಅಂದುಕೊಂಡಳು. 

ಇಂದು ಅವನ ಫೋಟೋ ನೋಡುತ್ತಿದ್ದರೆ, ಅವನು ತನ್ನನ್ನೇ ನಗುತ್ತಲೇ ನೋಡುತ್ತಿರುವಂತೆ ಭಾಸವಾಯಿತು. ಅವನು ತನ್ನ ನಗುವಿನಿಂದ ಒಂದು ರೀತಿ ಅವಳಿಗೆ ತನ್ನ ನಿರ್ಧಾರದ ಬಗ್ಗೆ, ಹೊಸ ಬಾಳು ದೊರಕುವ ಬಗ್ಗೆ ಅವನು ಸಂತೋಷ ಪಡುತ್ತಿದ್ದಾನೆ ಅಂತ ಅನ್ನಿಸಿತು. ಹಾಗೆ ಅವನ ಫೋಟೋವನ್ನು ದಿಟ್ಟಿಸಿ ನೋಡುತ್ತಿರಲು, ಅವನ ಮುಖದಲ್ಲಿ ಸಂತೋಷ ಇದ್ದರೂ ಅದರಲ್ಲಿ ಪೂರ್ತಿಯಾದ ಸಂತೋಷ ಅವಳಿಗೆ ಕಾಣುತ್ತಿರಲಿಲ್ಲ. ತನ್ನ ಹೆಂಡತಿ ಈಗ ತನ್ನನ್ನು ಬಿಟ್ಟು ಹೊರಟಿದ್ದಾಳೆ ಅಂತ ಅವನಿಗೆ ಅನ್ನಿಸತೊಡಗಿತು. ಆ ಒಂದು ವೇದನೆ ಅವನ ಮುಖದಲ್ಲಿ ಕಂಡು ಬಂದಂತೆ ಅವಳಿಗೆ ಅನ್ನಿಸತೊಡಗಿತು. 

   ಮದುವೆಯಾದ ಹೊಸದರಲ್ಲಿ ಮನು, ಸುಮಾಳನ್ನು ತುಂಬಾ ಪ್ರೀತಿಸುತ್ತಿದ್ದ. ಅವನು ಸಾಯುವವರೆಗೂ ಸಹ, ಸುಮಾಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದ. ಅವರಿಬ್ಬರಿಗೂ ಸಹ, ತಾವು ಮದುವೆಯಾಗಿ ಎಷ್ಟೋ ವರ್ಷಗಳಾದವು ಅಂತ ಇಂದಿಗೂ ಅನ್ನಿಸಿರಲಿಲ್ಲ. ಆ ರೀತಿಯಾಗಿ ಸದಾ ಸಂತೋಷದಲ್ಲಿ ಅವರ ದಾಂಪತ್ಯ ಇತ್ತು. ಆದರೆ ಅಕಸ್ಮಾತಾಗಿ ಅವನ ಮರಣದಿಂದ ಆ ಸಂತೋಷ ಬಿರುಗಾಳಿಗೆ ಸಿಕ್ಕ ಗಾಳಿಪಟದಂತೆ ಅವಳ ಬಾಳಿನಿಂದ ಸಂತೋಷ ಎನ್ನುವದು ಹಾರಿ ಹೋಗಿತ್ತು. ಮನು ತೀರಿಕೊಂಡು ಬಳಿಕ ಅವನ ಸುಂದರವಾದ ಫೋಟೋವನ್ನು ತನ್ನ ಬೆಡ್ ರೂಮಿನಲ್ಲಿ ಇಟ್ಟುಕೊಂಡಿದ್ದಳು. ಮೊದಮೊದಲು ಅದನ್ನು ನೋಡುತ್ತಾ ಇದ್ದಾಗ, ಅವಳಿಗೆ ಮನು ತನ್ನ ಜೊತೆಗೆ ಮಾತನಾಡುತ್ತ ಇದ್ದಾನೆ ಅಂತ ಅನ್ನಿಸುತ್ತಿತ್ತು. ಅದು ಒಂದು ಅನೂಹ್ಯವಾದ ಫೀಲಿಂಗ್ ಆಗುತ್ತಿತ್ತು ಅವಳಿಗೆ. 

              ಹಾಗೆ ಅವಳು ಮನುನ ಫೋಟೋವನ್ನು ನೋಡುತ್ತಿರಬೇಕಾದರೆ, ಅವನು ತನ್ನನ್ನು ನೋಡುತ್ತಲೇ ಮಾತನಾಡುತ್ತಿದ್ದಾನೆ ಎಂದು ಅವಳಿಗೆ ಅನ್ನಿಸುತ್ತಿತ್ತು. ಇಂದೂ ಕೂಡ ಅವಳಿಗೆ ಅದೇ ರೀತಿಯಾಗಿ ಫೀಲ್ ಬರುತ್ತಿತ್ತು. ಅವನ ಫೋಟೋ ದಿಟ್ಟಿಸಿ ನೋಡುತ್ತಿರುವಾಗಲೇ, ಅವನು ಅವಳತ್ತಲೇ ನೋಡುತ್ತಾ, ನಿಂತಿದ್ದ. ಆದರೆ ಅವನು ಏನೋ ತನಗೆ ಹೇಳಲು ಬಯಸುತ್ತಿದ್ದಾನಂತೆ ಅಂತ ಅನ್ನಿಸಿತ್ತು ಸುಮಾಳಿಗೆ. ಹಾಗೆ ಅವನ ಫೋಟೋ ನೋಡುತ್ತಲೇ, ಅವಳು ಅಭಿ ಬಗ್ಗೆ ಮತ್ತು ಅವನ ತಂದೆ ತಾಯಿಗಳು ನಿರ್ಧಾರ ತೆಗೆದುಕೊಂಡು ತನ್ನನ್ನು ಡೆಲ್ಲಿಗೆ ಕರೆದ ಬಗ್ಗೆ ಯೋಚನೆ ಮಾಡುತ್ತಿರುವಾಗ ಆ ಯೋಚನೆಯನ್ನು ತಿಳಿದುಕೊಂಡಂತೆ ಅವಳಿಗೆ ಮನು ತನ್ನ ಜೊತೆಗೆ ಆ ವಿಷಯ ಕುರಿತು ಮಾತನಾಡುತ್ತಿದ್ದಾನೆ ಅಂತ ಅನ್ನಿಸತೊಡಗಿತು. 

    *"ಸುಮಿ, ನೀನು ನನ್ನ ಹೆಂಡತಿ. ಆದರೆ ನಾನು ನಿನ್ನ ಜೊತೆ ಜೀವನ ಮಾಡುವದಕ್ಕಾಗಲಿಲ್ಲ ಅಂತ ನನಗೆ ಖೇದವಿದೆ. ಆದ್ರೆ ನಾನು ನಿನ್ನನ್ನು ಆಗಲಿ ದೈಹಿಕವಾಗಿ ದೂರವಿದ್ದರೂ ಸಹ ಮಾನಸಿಕವಾಗಿ ನಿನ್ನ ಹತ್ರಾ