ಮಿತ್ರರು ಆದರು ಬೀಗರು
ಮಿತ್ರರು ಆದರು ಬೀಗರು
ಧ್ವನಿವರ್ಧಕದಿಂದ ಬರುವ ಸಂಸ್ಕೃತ ವೇದ ಮಂತ್ರಗಳ ಆಲಾಪದಿಂದ ಭಕ್ತಿಯ ವಾತಾವರಣ ನಿರ್ಮಾಣ ವಾಯಿತು. ಅಂದು ರಾಘವಪುರ್ ನಗರದ ಚೌಡೇಶ್ವರಿ ಬಡಾವಣೆಯ ‘ಮಂಜುನಾಥ’ ಮನೆಯಲ್ಲಿ ಬೆಳಗಿನ ಆರು ಗಂಟೆಯಿಂದ ವೇದಘೋಷ ಮೊಳಗುತ್ತ ಹೋಮ, ಹವನ ಕಾರ್ಯಕ್ರಮ ಅದ್ಧೂರಿ ಯಾಗಿ ನಡೆದವು. ನಿವೃತ್ತ ಕನ್ನಡ ಪ್ರಾದ್ಯಾಪಕ ವಿನಾಯಕ್ ಕಲ್ಲಾಪುರ ತಮ್ಮ ಮನೆಯ ವಿಶಾಲವಾದ ಮಹಡಿ ಮೇಲೆ ತಾತ್ಕಾಲಿಕ ಶೆಡ್ ಹಾಕಿ ಕಾಳಿ ಮಾತೆ. ವಿಗ್ರಹ ಪ್ರತಿಷ್ಠಾಪನೆ ಸಂಭ್ರಮ ದಿಂದ ನೆರವೇರಿ ಸಿದರು. ಸುಮಾರು ಒಂದು ನೂರು ಭಕ್ತಾದಿಗಳು ಅಲ್ಲಿ ಸೇರಿದ್ದರು. ಮಳೆಗಾಲ ಇದ್ದರೂ ಆ ದಿವಸ ವಾತಾವರಣ ಆಹ್ಲಾದಕರ ವಾಗಿರುವದು ಎಲ್ಲರಿಗೂ ಸಮಾಧಾನ.
ವಿನಾಯಕ್ ಅವರಿಗೆ ದೇವರಲ್ಲಿ ಭಕ್ತಿ ಬರುವದು, ಸತ್ಸಂಗ ಮಾಡುವದು ಹಾಗೂ ಮಹಡಿಮೇಲೆ ಕಾಳಿ ಮಾತೆ ವಿಗ್ರಹ ಪ್ರತಿಷ್ಟಾಪನೆ ಇವೆಲ್ಲಾ ಆಗುವದಕ್ಕೆ ಅವರ ಧರ್ಮಪತ್ನಿ ಅನುಪಮ ಬಹಳ ವರ್ಷಗಳ ಸತತ ಪ್ರಯತ್ನ ಮಾಡಿದ ಫಲ ಲಭಿಸಿತು. ಯಾವುದೇ ಒಳ್ಳೇಯ ಕೆಲಸ ಆಗಲು ಪತಿಯ ಹಿಂದೆ ಪತ್ನಿ ಇರುವಳು ಎಂಬುದನ್ನು ಅನುಪಮಾ ಸಿದ್ಧ ಮಾಡಿ ತೋರಿಸಿದಳು. ಅನುಪಮ ಹುಟ್ಟಿ ಬೆಳೆದಿದ್ದು ಸಂಪ್ರದಾಯಸ್ಥರ ಕುಟುಂಬದಲ್ಲಿ.
ವಿನಾಯಕ್ ಅವರಿಗೆ ಆಧ್ಯಾತ್ಮಿಕ ದ ಕಡೆಗೆ ಒಲವು ಬರುವದು ಅಷ್ಟೇ ಅಲ್ಲ ಅಕ್ಕಪಕ್ಕ ದವರನ್ನು ಸತ್ಸಂಗ ದಲ್ಲಿ ಬರುವ ಹಾಗೆ ಮಾಡುವಲ್ಲಿ ವಿನಾಯಕ ಯಶಸ್ವಿ ಆದರು.
ವಿನಾಯಕ ಅವರು ಸೇವೆಯಿಂದ ನಿವೃತ್ತರಾಗಿ ಸರಿಯಾಗಿ ಒಂದು ವರ್ಷ ಆರು ತಿಂಗಳು ಅದ ನಂತರ ಅವರು ಮಾಡಿದ ಪ್ರಪ್ರಥಮ ಕೆಲಸ ಕಾಳಿ ಮಂದಿರ ಸ್ಥಾಪನೆ, ಪೂಜೆ, ಭಜನೆ ಹಾಗು ಸತ್ಸಂಗ ಮಾಡುವ ಪವಿತ್ರ ಕೆಲಸಗಳು.
ಕೆಳಗಿನ ಮನೆಯಲ್ಲಿ ಮಡದಿ ಹಾಗೂ ಏಕೈಕ ಪುತ್ರ ಸಿವಿಲ್ ಇಂಜಿನಿಯರ್ ಮಂಜುನಾಥ್ ಜೊತೆಗೆ ವಾಸ. ಮನೆ ಮುಂದೆ ಶಾಮಿಯಾನ ಹಾಕಿ ಚೇರ್ ಗಳನ್ನು ಹಾಕಿದರು. ಭಾಗವಹಿಸಿದ ಪ್ರತಿ ಯೊಬ್ಬರೂ ತಮ್ಮ ಸ್ವ ಇಚ್ಛೆಯಿಂದ ಕಾಣಿಕೆ ಹಣ ಹಾಗು ಧಾನ್ಯ ಕೊಟ್ಟರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಇರುವದು ವಿಶೇಷ. ಇನ್ನೊಂದು ವಿಶೇಷ ವೆಂದರೆ ಪುರುಷರಿಗಿಂತಲೂ ಮಹಿಳೆಯರ ಸಂಖ್ಯೆ ಹೆಚ್ಚು ಇತ್ತು.
ಪ್ರತಿಷ್ಟಾಪನೆ, ಹೋಮ ಹವನ ನಡೆಸಿಕೊಡುವ ಪುರೋಹಿತರ ತಂಡದ ಮುಖ್ಯಸ್ಥ ಅನಿರುದ್ಧ ಶರ್ಮಾ ಅವರು ವಿವಿಧ ಪೂಜೆ ಬಗ್ಗೆ ಐದು ನಿಮಿಷ ಪ್ರವಚನ ಮಾಡಿದರು. ಮಂಜುನಾಥ, ತಂದೆಗೆ ಪೂರ್ಣ ಸಹಕಾರ ಮಾಡಿದ. ಅದೇ ಸಮಯದಲ್ಲಿ ಮನೆಯ ಔಟ್ ಹೌಸ್ ನಲ್ಲಿ ‘ಕಾಳಿ ಮಾತಾ ಹೌಸ್ ಬಿಲ್ಡಿಂಗ್ ಕ್ಯನ್ಸಲ್ ಟೆಂಟ್ಸ್’ ಆಫೀಸ ಉದ್ಘಾಟನೆ ಆಯಿತು.
ಪೂಜಾ ಕೈಂಕರ್ಯಗಳು ನಡೆಯುವಾಗ ವಿನಾಯಕ್ ಅವರ ಮೊಬೈಲ್ ಒಂದೇ ಸಮನೆ ರಿಂಗ್ ಆಗುತ್ತ ಇರುವದನ್ನು ಮಂಜುನಾಥ್ ನೋಡಿ ಯಾರು ಎನ್ನುವದು ಗೊತ್ತಾಯಿತು. ಕರೆ ಮಾಡಿದವರು ಬೇರೆ ಯಾರೂ ಆಗಿರದೆ ವಿನಾಯಕ್ ಅವರ ಸುಮಾರು 30 ವರ್ಷ ಗಳಿಂದ ಸಹೋದ್ಯೋಗಿ, ಚೆಡ್ಡಿ ದೋಸ್ತ ಹಾಗು ಪಕ್ಕದ ಮನೆ ಯಲ್ಲಿ ಇರುವ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ನಾಗಭೂಷಣ ರಾಜೂರು.
ಐದು ವರ್ಷಗಳ ಹಿಂದೆ ಇಬ್ಬರೂ ಅಕ್ಕಪಕ್ಕದ ನಿವೇಶನ ಒಟ್ಟಿಗೆ ಖರೀದಿ ಮಾಡಿ ಮುಂದೆ ಒಂದು ವರ್ಷ ಆದಮೇಲೆ ಒಂದೇ ತರಹದ ಎರಡು ಜೋಡಿ ಮನೆ ಕಟ್ಟಿಸಿದರು. ಗೃಹ ಪ್ರವೇಶ ಕೂಡಾ ಒಂದೇ ದಿವಸ ಮಾಡಿದರು. ಆದರೆ ಕಳೆದ ವರ್ಷದಿಂದ ಅವರಿಬ್ಬರ ಸಂಬಂಧ ಕೆಟ್ಟು ಅದು ವಿಕೋಪಕ್ಕೆ ಹೋಯಿತು. ನಾಗಭೂಷಣ್ ಅವರಿಗೆ ಕೋಪ ಬರಲು ಕಾರಣಗಳು ಅನೇಕ. ಎರಡೂ ಮನೆಗಳನ್ನು ಕಟ್ಟುವ ಜವಾಬ್ದಾರಿ ಮಂಜುನಾಥ್ ಗೆ ವಹಿಸಿದರು. ಅಂತಿಮವಾಗಿ ಲೆಕ್ಕಪತ್ರ ಮಾಡಿದಮೇಲೆ ನಾಗಭೂಷಣ್ ಅವರಿಗೆ ಮಂಜುನಾಥ್ ಮೇಲೆ ಆಕೌಂಟ್ಸ್ ನಲ್ಲಿ ಗೋಲ್ ಮಾಲ್ ಆಗಿರುವ ಅನುಮಾನ ಬಂದಿತು. ಇದರ ಬಗ್ಗೆ ಅನೇಕ ಸಲ ಸ್ನೇಹಿತರಲ್ಲಿ ವಾಗ್ವಾದ ಆಯಿತು. ಅಲ್ಲದೆ ಮಂಜುನಾಥ್ ಗೌಪ್ಯವಾಗಿ ತಮ್ಮ ಮಗಳು ಅಂಜನಾ ಜೊತೆಗೆ ಲವ್ ಮಾಡುವದು ತಿಳಿಯಿತು. ಅಂಜನಾ
ಬಿ. ಇ. ಆರ್ಕಿಟೆಕ್ಟ್ ಇದ್ದು ಆಗಲೇ ಆಫೀಸ್ ತೆಗೆದು ಕೆಲಸ ಪ್ರಾರಂಭ ಮಾಡಿದ್ದಳು. ಮಂಜುನಾಥ್ ಸಿವಿಲ್ ಇ0ಜನಿಯರ. ಅವನು ಅನುರೂಪನಾದ ಹುಡುಗ ಅಲ್ಲ ಎಂದು ಮಗಳಿಗೆ ಬುದ್ಧಿ ಹೇಳಿದರು. ನಾಗಭೂಷಣ್ ಮನೆಯಲ್ಲಿ ಟ್ಯೂಶನ್ ಕ್ಲಾಸ್ ನಡೆಸುತ್ತಿದ್ದರು. ವಿದೇಶದಿಂದ ಬಂದ ವಿದ್ಯಾರ್ಥಿ ಗಳು ಬಹಳ ಇರುವರು.
ಪಕ್ಕದ ಮನೆಯಲ್ಲಿ ಭಕ್ತಾದಿಗಳ ವಾದ್ಯಗಳಿಂದ ಕೂಡಿದ ಭಜನೆ ಅವರಿಗೆ ಕ್ಲಾಸ್ ನಡೆಸಲು ತೊಂದರೆ ಆಯಿತು. ಇದಲ್ಲದೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವ ಆಗಿ ಆಪ್ತ ಸ್ನೇಹಿತರು ವೈರಿಗಳು ಆದರು.
“ಅಂಕಲ್, ಅಪ್ಪಾ ಅವರು ಪೂಜೆಯಲ್ಲಿ ಇದ್ದಾರೆ. ನೀವು ಬೇಗನೆ ಪೂಜೆಗೆ ಬಂದು ಪ್ರಸಾದ ತೆಗೆದುಕೊಂಡು ಹೋಗಿ,”ಎಂದ.
“ನಿನ್ನ ಅಕ್ಕರೆಯ ಮಾತು ಬೇಡ ಮೊದಲು ಆಪ್ಪನನ್ನು ಕರೆ.”
ಆಗ ಮಂಜುನಾಥ್,”ಅಂಕಲ್, ಎಲ್ಲವೂ ಮುಗಿದಮೇಲೆ ಅಪ್ಪನಿಗೆ ನಿಮಗೆ ಭೇಟಿ ಆಗಲು ಹೇಳುವೆ,” ಎಂದ.
“ಅದೆಲ್ಲ ಆಗೋಲ್ಲ. ಈಗಲೇ ಕರೆ. ಇಲ್ಲದೆ ಹೋದರೆ ನಾನೇ ಬರುತ್ತೇನೆ.”
ಹೇಳಿದ ಹಾಗೆ ನಾಗಭೂಷಣ್ ಶಾಮಿಯಾನದ ಪ್ರವೇಶದಲ್ಲಿ ನಿಂತು,
“ಏ ವಿನಯ್, ಹೊರಗೆ ಬಾ,” ಎಂದು ಜೋರಾಗಿ ಸಿಟ್ಟಿನಿಂದ ಕೂಗಿದ.
ವಿನಯ್ ಕುಮಾರ್ ಹೊರಗೆ ಬಂದು,
“ಏ ಭೂಷಣ್, ಏಕೆ ಕೂಗಾಡುತ್ತಿ? ಮೊದಲು ಒಳಗೆ ಬಾ. ನಮ್ಮ ಎಲ್ಲಾ ಸಮಸ್ಯೆಗಳನ್ನು ಆಮೇಲೆ ಬಗೆಹರಿಸಿ ಕೊಳ್ಳೋಣ,” ಎಂದು ಕೈಜೋಡಿಸಿ ವಿನಂತಿ ಮಾಡಿದರು.
“ವಿನಯ್, ನಿನಗೆ ಪೂಜೆ ನಿಲ್ಲಿಸಲು ಹೇಳುತ್ತಾ ಇಲ್ಲ. ನನಗೂ ದೇವರಲ್ಲಿ ಭಕ್ತಿ ಇದೆ. ಧ್ವನಿ ವರ್ಧಕ ಈ ಕೂಡಲೇ ನಿಲ್ಲಿಸು. ಸಧ್ಯ ನಾನು ವಿದೇಶಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾ ಇದ್ದೇನೆ. ಅವರೆಲ್ಲ ತುಂಬಾ ದೂರದಿಂದ ಬಂದಿರುವರು. ಅವರನ್ನು ವಾಪಸ್ ಕಳಿಸಲು ಆಗುವದಿಲ್ಲ.”
“ದೋಸ್ತ, ನಾನು ಧ್ವನಿ ವರ್ಧಕ ಹಚ್ಚಲು ಅನುಮತಿ ತೆಗೆದು ಕೊಂಡಿದ್ದೇನೆ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ನೀನೇ ಹುಡುಗರನ್ನು ನಾಳೆ ಬಾ ಎಂದು ಹೇಳು. ಸುಮ್ಮನೆ ಗದ್ದಲ ಮಾಡದೇ ಒಳಗೆ ಬಂದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸು. ಆ ಹುಡುಗರನ್ನು ಕರೆದುಕೊಂಡು ಬಾ,” ಎಂದರು.
ಹೊರಗಡೆ ನಡೆದ ಜೋರಾದ ಮಾತು ಕೇಳಿ ಕೆಲವು ಭಕ್ತರು ಹೊರಗೆ ಬಂದರು. ಅವರಲ್ಲಿ ಒಬ್ಬರು,
“ನಾಗಭೂಷಣ್ ಸರ್, ದಯಮಾಡಿ ಇಂತಹ ಪುಣ್ಯ ಕಾರ್ಯದಲ್ಲಿ ವಿಘ್ನ ತರಬೇಡಿ.ಇದು ಜನರ ಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮ. ಈ ಪೂಜೆಯಿಂದ ನಿಮಗೂ ಒಳ್ಳೆಯದು ಆಗುತ್ತದೆ,” ಎಂದ.
ಆದರೂ ನಾಗಭೂಷಣ್ ಅವರ ಸಿಟ್ಟು ಕಡಿಮೆ ಆಗಲಿಲ್ಲ. ಒಳಗೆ ಇದ್ದ ಎಲ್ಲರೂ ಬಂದರು. ಇದರಿಂದ ನಾಗಭೂಷಣ್ ಪರಿಸ್ಥಿತಿ ಅರ್ಥ ಮಾಡಿಕೊಂಡು ಪಲಾಯನ ಮಾಡಿದ.
ಎಲ್ಲಾ ಕಾರ್ಯಕ್ರಮಗಳು ಸುವ್ಯವಸ್ಥಿತ ವಾಗಿ ಮುಗಿಯುವದಕ್ಕೆ ಸಾಯಂಕಾಲ ಏಳು ಗಂಟೆ ಆಯಿತು. ಆಶ್ಚರ್ಯದ ಸಂಗತಿ ಎಂದರೆ ನಾಗಭೂಷಣ್ ಅವರ ಪತ್ನಿ ಮಂದಾಕಿನಿ ಹಾಗೂ ಮಗಳು ಅಂಜನಾ ಬರಿ ಭಾಗವಹಿಸುವದಲ್ಲದೆ ಮಹಿಳೆಯರನ್ನು ಕೂಡಿಸುವದು ಮಗಳು ನೋಡಿಕೊಂಡರೆ ಅಮ್ಮ ಅಡುಗೆ ಕೆಲಸದಲ್ಲಿ ಸಹಾಯ ಮಾಡಿದಳು. ಮಂದಾಕಿನಿ ಹಾಗೂ ಅನುಪಮ ಆಪ್ತ ಸ್ನೇಹಿತೆಯರು. ಎಲ್ಲವೂ ಮುಗಿದಮೇಲೆ ಮಂದಾಕಿನಿ ಹಾಗೂ ಅಂಜನಾ ತಮ್ಮ ಮನೆಗೆ ಹೋಗಿ ವಿಶ್ರಾಂತಿ ತೆಗೆದು ಕೊಳ್ಳಲು ಸೋಫಾದಮೇಲೆ ಕುಳಿತು ಟಿ ವಿ ಆನ್ ಮಾಡಿದರು. ಸಪ್ಪಳ ಕೇಳಿ ಮಹಡಿ ಮೇಲೆ ಇದ್ದ ನಾಗಭೂಷಣ್ ಕೆಳಗೆ ಬಂದು ಕೋಪದಿಂದ,
“ನಾನು ಪ್ರತಿಭಟನೆ ಮಾಡಿದರೂ ನೀವು ಏಕೆ ಹೋದಿರಿ?” ಎಂದು ಕೇಳಿದರು.
ಆಗ ಅಂಜನಾ, “ಅಪ್ಪಾಜಿ, ವಿನಯ್ ಅಂಕಲ್ ನಮ್ಮೆಲ್ಲರಿಗೂ ಕಾಳಿ ಮಾತೆ ಪ್ರತಿಷ್ಟಾಪನೆ, ಹೋಮ, ಹಾಗೂ ಹವನ ಇಂತಹ ಪವಿತ್ರವಾದ ಕಾರ್ಯಕ್ರಮಗಳಿಗೆ ವ್ಯಯಕ್ತಿಕವಾಗಿ ನಮ್ಮ ಮನೆಗೆ ಬಂದು ಆಮಂತ್ರಣ ಕೊಟ್ಟರು. ನಿಮ್ಮ ಸಮಸ್ಯೆಗಳಿಗೂ ಪೂಜೆಗೂ ಏನೂ ಸಂಭಂದ ಇಲ್ಲ. ನೀವು ಅಲ್ಲಿಗೆ ಬಂದು ಜಗಳ ಮಾಡಿದ್ದು ನೋಡಿ ತುಂಬಾ ನೊಂದು ಕೊಂಡೆ.” ಎಂದಳು.
ವಕೀಲೆ ಎಂದು ಪ್ರಾಕ್ಟೀಸ್ ಮಾಡುತ್ತಿರುವ ಮಂದಾಕಿನಿ ಪತಿಯ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದಳು.
“ಭೂಷಣ್, ನಿನ್ನ ಸಂಭಂದಿ ಮಹೇಶ್ ನಿನ್ನ ತಲೆ ಕೆಡಿಸಿದ್ದಾನೆ. ವಿನಾಕಾರಣ ನೀನು ಆಪ್ತ ಸ್ನೇಹಿತ ವಿನಯ್ ಅವರ ಜೊತೆಗೆ ಮಹೇಶ್ ನ ಮಾತು ಕೇಳಿ ಸಮಸ್ಯೆ ಗಳನ್ನು ಸೃಷ್ಟಿ ಮಾಡಿದೆ. ವಿನಾಯಕ ಅವರು ಏನೂ ತಪ್ಪು ಮಾಡಿಲ್ಲ. ಮಹೇಶ್ ಒಬ್ಬ ಫ್ರಾಡ್ ಎಂದು ನನಗೆ ಚೆನ್ನಾಗಿ ಗೊತ್ತು. ಅವನು ರಾಘವ ಪೂರ್ ಶಾಖೆಯ ಸುವರ್ಣ ಬ್ಯಾಂಕ ನಲ್ಲಿ ಕ್ಲರ್ಕ್. ಅವನಿಗೆ ಬ್ಯಾಂಕ್ ಅಧಿಕಾರಿಗಳು ವಾರ್ನ್ ಮಾಡಿದರೂ ತನ್ನ ದುಷ್ಟ ಚಾಳಿ ಬಿಡಲಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಅವನು ವಿನಾಯಕ ಅವರಿಗೂ ಟೋಪಿ ಹಾಕಿದ್ದಾನೆ. ಅವರೇ ಬ್ಯಾಂಕ್ ಹೆಡ್ ಆಫೀಸಿನ ಉನ್ನತ ಅಧಿಕಾರಿಗಳಿಗೆ ದೂರು ಕೊಟ್ಟು ಮಹೇಶ್ ನನ್ನು ಕೆಲಸದಿಂದ ಅಮಾನತ್ತು ಮಾಡಿಸಿ ತಮ್ಮ ಹಣ ರಿಕವರಿ ಮಾಡಿಕೊಂಡರು. ನಾನು ನಿಮಗೆ ತಿಳಿಸಿ ಹೇಳಿದರು ಕೇಳದೆ ಗದ್ದಲ ಮಾಡಿದಿರಿ. ಆಗಿರುವದು ಆಗಿ ಹೋಯಿತು. ಈಗಲಾದರೂ ವಿನಯ್ ಜೊತೆಗೆ ಒಳ್ಳೇ ಸಂಭಂದ ಬೆಳೆಸಿ,” ಎಂದಳು.
“ಮಂದಾಕಿನಿ, ಯಾಕೆ ಮಹೇಶ್ ಗೆ ಬಯ್ದು ವಿನಯ್ ಗೆ ಹೋಗಳುತ್ತಿ? ನೀನು ವಿನಯ್ ಕೇಸ್ ತೆಗೆದುಕೊಂಡರೆ ನನ್ನ ಅಭ್ಯಂತರ ಏನೂ ಇಲ್ಲ. ಆದರೆ ಅಂಜನಾ - ಮಂಜುನಾಥ್ ಪ್ರೇಮ ಚೆಲ್ಲಾಟ ಗೊತ್ತಿದ್ದರೂ ಸುಮ್ಮನೆ ಯಾಕೆ ಇದ್ದಿ?”
“ಹೌದು ಭೂಷಣ್, ನಾನು ನ್ಯಾಯವಾದಿ. ನ್ಯಾಯ ಇರುವ ಕಡೆ ಹೋಗುವದು ಸಹಜ. ಅಂಜನಾ ತೆಗೆದುಕೊಂಡ ನಿರ್ಧಾರ ಸರಿ ಇದೆ. ಅದಕ್ಕೆ ಸುಮ್ಮನೆ ಇದ್ದೇನೆ,” ಎಂದಳು.
ನಾಗಭೂಷಣ್ ಮಗಳ ಕಡೆ ತಿರುಗಿ,
“ಅಂಜನಾ, ನಿನಗೆ ಬಿ ಇ ಆರ್ಕಿ ಟೆಕ್ಟರ್ ಮಾಡಿಸಲು ಎಷ್ಟು ಕಷ್ಟ ಪಟ್ಟೆ. ನಾನು ನಿನಗೆ ಮಂಜುನಾಥ್ ಬೇಡ ಎಂದರೂ ಅವನ ಜೊತೆಗೆ ಪ್ರೀತಿ ಮುಂದುವರೆಸಿದೆ. ಮಂಜು ನಾಥ್ ಸಿವಿಲ್ ಇಂಜಿನಿಯರ್ ಇದ್ದು ನಿನ್ನ ಬಾಳಸಂಗಾತಿ ಆಗುವ ಅರ್ಹತೆ ಇಲ್ಲ.”
“ಡ್ಯಾಡಿ, ನನಗೆ ಇಂದಿನ ಸ್ಥಾನ ಮಾನ ಸಿಗಲು ನಿಮ್ಮದೇ ಕೊಡುಗೆ. ಇದು ಸತ್ಯ. ಮ0ಜು ನಾಥ್ ತುಂಬಾ ಒಳ್ಳೆಯವನು. ಅವನು ನನಗೆ ಬಹಳಷ್ಟು ಜನರ ಪರಿಚಯ ಮಾಡಿಸಿದ್ದಾನೆ. ಅವನನ್ನು ನಾನು ಪ್ರೀತಿಸುತ್ತೇನೆ. ಇದರಲ್ಲಿ ಏನೂ ತಪ್ಪಿಲ್ಲಾ. ನಾನು ಈಗ ಪ್ರಬುದ್ಧ ಮಹಿಳೆ,” ಎಂದು ಧೈರ್ಯವಾಗಿ ಹೇಳಿದಳು.
“ಮಂದಾಕಿನಿ, ನಿನ್ನ ಮಗಳ ಪ್ರೇಮ ಕಥೆ ಮೊದಲೇ ನನಗೇಕೆ ಹೇಳಿಲ್ಲ?”
“ಭೂಷಣ್, ನಾನು ಸರಿಯಾದ ಸಮಯಕ್ಕೆ ಹೇಳುವದಾಗಿ ಸುಮ್ಮನಿದ್ದೆ. ಈಗ ಆ ಸಮಯ ಬಂದಿದೆ.”
ಇದೆಲ್ಲವನ್ನು ಕೇಳಿದ ನಾಗಭೂಷಣ್ ನೊಂದುಕೊಂಡು ಮಹಡಿಮೇಲೆ ತನ್ನ ಕೋಣೆಗೆ ಹೋದ. ಅಂದು ಆತನ ಮನಸ್ಸು ಗೊಂದಲದಲ್ಲಿ ಇದ್ದು ಬಹಳ ವಿಚಾರ ಮಾಡಿದ.
ಒಂದು ತಿಂಗಳು ಗತಿಸಿತು.
ಮಹೇಶ್ ಬಗ್ಗೆ ನಾಗಭೂಷಣ್ ವಿವರವಾದ ಮಾಹಿತಿ ಸಂಗ್ರಹ ಮಾಡಿದ. ಆಪ್ತ ಮಿತ್ರ ವಿನಯ್ ಮೇಲೆ ಅನುಮಾನ ಮಾಡಿದ್ದು ದೊಡ್ಡ ತಪ್ಪು ಅನಿಸಿ ಪಶ್ಚಾತ್ತಾಪ ಮಾಡಿಕೊಳ್ಳಲು ನಿರ್ಧಾರಿಸಿದ.
ಒಂದು ದಿವಸ ಬೆಳಗ್ಗೆ ಆರು ಗಂಟೆಗೆ ಕಾಫಿ ಕುಡಿಯುತ್ತ,
“ಮಂದಾಕಿನಿ, ನೀನು ಹೇಳಿದಂತೆ ವಿನಾಯಕ ನ ಮೇಲೆ ವಿನಾಕಾರಣ ಅಪಾರ್ಥ ಮಾಡಿ ಕೊಂಡೆ. ಅದಕ್ಕಾಗಿ ಬರುವ ಭಾನುವಾರ 25 ನೆ ಸೆಪ್ಟೆಂಬರ ಅಂಜನಾ 25 ನೆ ಹುಟ್ಟುಹಬ್ಬ. ಅದನ್ನು ಹೋಟೆಲ್ ಪಾರಿಜಾತ ದಲ್ಲಿ ಮಾಡಬೇಕು. ಆ ಪಾರ್ಟಿಯಲ್ಲಿ ವಿನಾಯಕ, ಅನುಪಮಾ ಹಾಗೂ ಮಂಜುನಾಥ್ ನಮ್ಮ ಅತಿಥಿಗಳು. ಅಂದೇ ಅಂಜನಾ, ಮಂಜುನಾಥ್ ಇವರಿಗೆ ಸಿಹಿ ಸುದ್ದಿ ತಿಳಿಸಬೇಕು.”
ಇದನ್ನು ಕೇಳಿದ ಮಂದಾಕಿನಿ ನಗುತ್ತ,
“ನಿಮಗೆ ಜ್ಞಾನೋದಯ ಆಯಿತು ವೆರಿ ಗುಡ್. ನೀವು ಎಷ್ಟು ಒಳ್ಳೆಯವರು,”ಎಂದಳು.
“ಹೊಗಳಿಕೆ ಬೇಡ,” ಎಂದರು ನಾಗಭೂಷಣ್ ನಗುತ್ತ.
ಅಲ್ಲಿಯೇ ಇದ್ದ ಅಂಜನಾ ಖುಷಿಯಿಂದ ಕುಣಿದಾಡಿದಳು.
ಭಾನುವಾರ ಎರಡೂ ಕುಟುಂಬದವರು ರಾತ್ರಿ ಎಂಟು ಗಂಟೆಗೆ ಹೋಟೆಲ್ಆ ಪಾರಿಜಾತ ಕ್ಕೆ ಆಗಮಿಸಿದರು.
ಮೊದಲು ನಾಗಭೂಷಣ್ ತನ್ನ ಮಿತ್ರನಿಗೆ ಆಲಿಂಗನ ಮಾಡಿ,
“ಏ ವಿನಯ್, ನನಗೆ ಕ್ಷಮಿಸು.”
“ಭೂಷಣ್, ಅದೊಂದು ಕಹಿ ಘಳಿಗೆ. ಅದನ್ನು ಆಗಲೇ ಮರೆತು ಬಿಟ್ಟೆ”
ಹಾಸ್ಯ ಮಾತುಗಳು ಮುಂದುವರೆದವು.
ಆಗ ನಾಗಭೂಷಣ್, ಅಂಜನಾ ಹಾಗೂ ಮಂಜುನಾಥ್ ಇಬ್ಬರನ್ನೂ ಕರೆದು ಆಶೀರ್ವಾದ ಮಾಡಿ
“ಅಂಜು ಮಂಜು ರಾಜಿ ಹೈ ತೋ ಕ್ಯಾ ಕರೆಗಾ ನಾಗಭೂಷಣ್.”
ಅವರ ಹಾಸ್ಯ ಮಾತು ಕೇಳಿ ನಗು ತಡೆಯದೇ ಎಲ್ಲರೂ ಜೋರಾಗಿ ನಕ್ಕರು. ಕೇಕ್ ಕಟ್ ಆಗಿ ಎಲ್ಲರೂ ಮನರಂಜನೆ ಮಾಡಿದರು. ನಂತರ ಮೊಬೈಲ್ ನಿಂದ ವಿವಿಧ ಭಂಗಿ ಗಳಲ್ಲಿ ಫೋಟೋಗಳನ್ನು ತೆಗೆದರು.
“ಹ್ಯಾಪಿ ಬರ್ತ ಡೇ ಅಂಜನಾ” ಎಂದು ಚಪ್ಪಾಳೆ ತಟ್ಟಿದ್ದರು. ಮಂಜುನಾಥ ಕೇಕ್ ಕಟ್ ಮಾಡಿದ ಪೀಸ್ ತೆಗೆದು ಆಂಜನ ಬಾಯಿಯಲ್ಲಿ ಇಟ್ಟ. ರುಚಿಕರವಾದ ಊಟ ಮುಗಿಸಿ ಎಲ್ಲರೂ ಮನೆಗೆ ಹೋದಾಗ ರಾತ್ರಿ ಒಂದು ಗಂಟೆ.

