Vaman Acharya

Abstract Thriller Children

4.4  

Vaman Acharya

Abstract Thriller Children

ರೈಲು ನಿಲ್ದಾಣದಲ್ಲಿ ಬಾಲಕ

ರೈಲು ನಿಲ್ದಾಣದಲ್ಲಿ ಬಾಲಕ

7 mins
436



"ಪುಟ್ಟ, ಒಬ್ಬನೇ ಇಲ್ಲಿ ಏಕೆ ಕುಳಿತಿದ್ದಿ?"

ರೇಲ್ವೆ ಸಿಗ್ನಲ್ ಮ್ಯಾನ್ ಅಬ್ದುಲ್ ಕೇಳಿದ.

ಗುಡ್ಡದೂರು ಒಂದು ಚಿಕ್ಕ ರೈಲು ನಿಲ್ದಾಣ. ಪ್ಲ್ಯಾಟ್ ಫಾರ್ಮ್ ಕೊನೆಗೆ ಮರದ ಕೆಳಗೆ ಇರುವ ಬೆಂಚ್ ಮೇಲೆ ಕುಳಿತ ಸುಮಾರು ಎಂಟು ವರ್ಷದ ಪುಟ್ಟ ಬಾಲಕ ಹರ್ಷ. ಆಗ ಸಮಯ ಬೆಳಗಿನ ಎಂಟು ಗಂಟೆ.

"ಅಂಕಲ್, ಇಂದು ಭಾನುವಾರ ನಮ್ಮ ಸ್ಕೂಲ್ ರಜೆ. ರೈಲುಗಳು ಓಡಾಡುವದನ್ನು, ತರಹ ತರಹದ ಪ್ರಯಾಣಿಕರನ್ನು ನೋಡುವದನ್ನು ಹಾಗೂ ಹೊಸ ವಿಷಯಗಳನ್ನು ತಿಳಿದು ಕೊಳ್ಳಬೇಕು," ಎಂದ.

ಪುಟ್ಟ ಹುಡುಗನ ದಿಟ್ಟ ನುಡಿ ಗಮನಿಸಿದ ಅಬ್ದುಲ್ ಗೆ ಆಶ್ಚರ್ಯವಾಗಿ,

"ಪುಟ್ಟ, ನಿನ್ನ ಅಪ್ಪ ಸೇತು ರಾಮ್ ಸರ್ ಈ ನಿಲ್ದಾಣದ ಸ್ಟೇಷನ್ ಮಾಸ್ಟರ್ ಮತ್ತು ನಿನ್ನ ತಾಯಿ ಮ್ಯಾಡಮ್ ರುಕ್ಮಿಣಿ ಶಾಲೆಯ ಶಿಕ್ಷಕಿ ನಿನಗೆ ಅನುಮತಿ ಕೊಟ್ಟಿರುವರೆ? 

"ಅಂಕಲ್, ಅವರು ಅನುಮತಿ ಕೊಟ್ಟಮೇಲೆ ಇಲ್ಲಿಗೆ ಬಂದಿರುವೆ."

"ಭೇಷ್" ಎಂದು ಅವನ ಬೆನ್ನು ತಟ್ಟಿ ನಗುತ್ತ ಮುಂದೆ ಹೋದ ಅಬ್ದುಲ್.

ಆ ನಿಲ್ದಾಣ ದಿಂದ ಹೋಗುವ ಬರುವ  ರೈಲುಗಳು ಬಹಳ ಇದ್ದರೂ ನಿಲುಗಡೆ ಆಗುವದು ಕೇವಲ ಎರಡು ರೈಲುಗಳು ಮಾತ್ರ. ಎರಡನೇ ತರಗತಿಯಲ್ಲಿ ಓದುತ್ತಿರುವ ಎಂಟು ವರ್ಷದ ಪುಟ್ಟ ಬಾಲಕ ಹರ್ಷ ರೈಲು ನಿಲ್ದಾಣದಲ್ಲಿ ಪ್ರತಿ ಭಾನುವಾರ ಬಹಳಷ್ಟು ಸಮಯ ಕಳೆಯುವನು. 

ಅವನು ಅಲ್ಲಿ ಏನು ಮಾಡುವನು?

 ಅಂದು ಭಾನುವಾರ ಹರ್ಷ ಮನೆಯಿಂದ ಬೆಳಗ್ಗೆ ಸ್ಟೇಷನ್ ಗೆ ಬಂದು ರೈಲುಗಳು ಓಡಾಡುವದನ್ನು ನೋಡಿದ. ಸ್ಟೇಷನ್ ಹೊರಗಡೆ ಇರುವ ಕ್ವಾರ್ಟರ್ಸ ಅವನ ಮನೆ. ಬೆಳಗಿನ ಏಳು ಗಂಟೆಗೆ ಸ್ನಾನ ಮಾಡಿದಮೇಲೆ ಅಮ್ಮನ ಜೊತೆಗೆ ದೇವರ ಪೂಜೆ ಮಾಡಿ ರೆಡಿ ಆದ.

"ಅಮ್ಮ, ನಾನು ರೈಲುಗಳನ್ನು ನೋಡಲು ಸ್ಟೇಷನ್ ಗೆ ಹೋಗುವೆ," ಎಂದ.

"ಪುಟ್ಟ, ಹುಷಾರು,"ಎಂದಳು.

ಆಯಿತು ಅಮ್ಮ ಎಂದು ಸೈಕಲ್ ಪೆಡಲ್ ತುಳಿಯುತ್ತ ಟ್ರಿನ್ ಟ್ರಿನ್ ಬೆಲ್ ಮಾಡುತ್ತ ಸಿನೆಮಾ ಹಾಡು ಹಾಡುತ್ತ ಹೋಗಿಯೇ ಬಿಟ್ಟ. 

ರೈಲುಗಳು ಹೋದ ಮೇಲೆ ನಿಲ್ದಾಣದಲ್ಲಿ ನಿ:ಶಬ್ದ. ಆ ಸಮಯದಲ್ಲಿ ಪುಸ್ತಕ ಓದುವನು. ಮನೆ ಬಿಟ್ಟು ಮೊದಲು ಸ್ಟೇಶನ್ ಪಕ್ಕದಲ್ಲಿ ಇರುವ ಮಾರುತಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನನ ಆದಮೇಲೆ ನಿಲ್ದಾಣಕ್ಕೆ ಬರುವನು. 

 ಅದೇ ಸಮಯದಲ್ಲಿ ಒಂದು ರೈಲು ಆಗಮನ ವಾಗುವದು. ಅದು ಸೇತುವೆ ಕೆಳಗೆ ಶಬ್ದ ಮಾಡುತ್ತ ಬರುವ ಬರುವ ದೃಶ್ಯ ನೋಡಿದರೆ ಮನಸ್ಸಿಗೆ ಮುದ ನೀಡುವದು ಎಂದು ಅವನಿಗೆ ಗೊತ್ತು. ರೈಲು ಆ ಸ್ಥಳದಲ್ಲಿ ಬರುತ್ತಿದ್ದಂತೆ ತನ್ನ ಮೊಬೈಲ್ ನಿಂದ ವಿಡಿಯೋ ಆ ದೃಶ್ಯ ಕ್ಲಿಕ್ ಮಾಡಿದ.  ನಂತರ ಅದನ್ನು ನೋಡಿದ ಅವನಿಗೆ ಖುಷಿ ಆಯಿತು. ನಂಬರ್ 7745 ಇರುವ ರೈಲು ಹಳದಿ ಹಾಗು ಕೆಂಪು ಬಣ್ಣದ ಬೋಗಿಗಳು ಇದ್ದು ಅದು ಮುಂಬೈ ಯಿಂದ ಚನ್ನೈ ಗೆ ಹೋಗುವದು. ಆ ರೈಲು ಗುಡ್ಡದೂರು ಸ್ಟೇಷನ್ ನಲ್ಲಿ ನಿಲುಗಡೆ ಇಲ್ಲ.

ಹರ್ಷ ಒಂದು ಕಡೆ ನಿಂತು ನಗುತ್ತ ಕೈ ಮೇಲೆ ಮಾಡಿ ಓಡುವ ಗಾಡಿಯಲ್ಲಿ ಇರುವ ಪ್ರಯಾಣಿಕರಿಗೆ 'ಹ್ಯಾಪಿ ಜರ್ನಿ' ಎಂಬ ದೊಡ್ಡ ಅಕ್ಷರಗಳ ತಾನೇ ಮಾಡಿದ ಫಲಕ ತೋರಿಸುವನು. ಪುಟ್ಟ ಹುಡುಗನನ್ನು ನೋಡಿದ ಪ್ರಯಾಣಿಕರು ಸಂತಸದಿಂದ ಕೈ ಮಾಡುವರು. ಕೆಲವರಂತೂ ಅವನ ಕಡೆಗೆ ಟಾಫಿ, ಚಾಕೊಲೇಟ್, ಬಿಸ್ಕತ್ ಎಸೆಯುವರು.  ಸ್ಟೇಷನ್ ಮಾಸ್ಟರ್ ಅಪ್ಪ ಹಿಡಿದ  ಹಸಿರು ನಿಶಾನೆ ಕಸಿದು ಕೊಂಡು ತಾನು ತೋರಿಸುವನು.

ಇವನ ಚಲನವಲನ ಗಮನಿಸಿದ ತಂದೆಗೆ ವಿಚಿತ್ರ ಅನಿಸಿದರೂ ಸುಮ್ಮನೆ ಇದ್ದರು. ಆದರೆ ತಾಯಿ ರುಕ್ಮಿಣಿಗೆ  ಇದು ಸರಿ ಬರುತ್ತಿರಲಿಲ್ಲ.  ಹರ್ಷ ರೈಲು ಗಳ ಓಡಾಟ ನೋಡುವದಕ್ಕೆ ಊಟ ತಿಂಡಿ ಮರೆತು ಬಿಡುವನು. ಅವನು ರೈಲುಗಳ ಆಗಮನ ನಿರ್ಗಮನದ ಸಮಯ ಪಟ ಪಟ ಹೇಳುವನು. ಯಾವ ಸಮಯಕ್ಕೆ ಎಲ್ಲಿ ಬಂದು ನಿಲ್ಲುವದು ಎನ್ನುವದು ಅವನಿಗೆ ಗೊತ್ತು.  

ಹರ್ಷನಿಗೆ ಸೈಕಲ್ ಮೇಲೆ ಅಡ್ಡಾಡುವದು ತುಂಬಾ ಇಷ್ಟ. ಗುಡ್ಡ ದೂರು ಗ್ರಾಮಕ್ಕೆ ಶಾಲೆಗೆ ಹೋಗಲು ಸೈಕಲ್ ಮೇಲೆ ಹೋಗಿ ಬರುವನು  ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಎರಡು ಗಂಟೆ ವರೆಗೆ ರೈಲು ಓಡಾಟ ಇರುವದಿಲ್ಲ.  ಈ ಸಮಯದಲ್ಲಿ ಅವನು ಮನೆಗೆ ಹೋಗಿ ಊಟ ಮಾಡಿ ಮತ್ತೆ ಬರುವನು. ಮನೆಯಿಂದ ಹೊರಗೆ ಬಂದರೆ ಅವನು ಸೈಕಲ್  ನಡೆಸುತ್ತ ಅಲ್ಲಲ್ಲಿ ನಿಲ್ಲಿಸುತ್ತ ಗೆಳೆಯರ ಜೊತೆಗೆ ಮಾತಾಡುತ್ತಾ ಬರುವನು. ಸೈಕಲ್ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ತಿರುಗಾಡುವನು.  

ಒಂದು ಚಿಕ್ಕ ನೋಟ ಬುಕ್ ನಲ್ಲಿ ಅವನು ರೈಲಿನ ಹೆಸರು, ಕೊನೆಯ ನಿಲ್ದಾಣಕ್ಕೆ ತೆಗೆದು ಕೊಳ್ಳುವ ಸಮಯ, ನಡುವೆ ಬರುವ ಮುಖ್ಯನಿಲ್ದಾಣಗಳ ಹೆಸರುಗಳು, ಒಟ್ಟು ಪ್ರಯಾಣಿಸುವ ಕಿಲೊಮೀಟರ್ ಹಾಗೂ ಫೇರ್ ಇವುಗಳ ಮಾಹಿತಿ ತಿಳಿದುಕೊಂಡು ಬರೆಯುವನು.

ಹರ್ಷ ನಿಗೆ ಎಲ್ಲ ರೈಲುಗಳ ಅಂದರೆ ಮುಂಬೈ- ಚೆನ್ನೈ, ಮುಂಬೈ-ಅಹ್ಮದಾಬಾದ್, ಮುಂಬೈ- ಬೆಂಗಳೂರು ಇವುಗಳ  ಮಾಹಿತಿ, ನಂಬರ್  ಅವುಗಳ ಬಣ್ಣ, ಗೊತ್ತಿರುವದು.   

ಅಂದು ವೃದ್ಧ ದಂಪತಿ ಮುಂಬಯಿ ಕಡೆ ಹೋಗುವ ರೈಲು ಹತ್ತಲು ಹರಸಹಾಸ ಮಾಡ ಬೇಕಾಯಿತು. ಕಾರಣ ನಿಲುಗಡೆ ಸಮಯ ಕೇವಲ ಒಂದು ನಿಮಿಷ. ಅವರ  ಕಷ್ಟವನ್ನು ಗಮನಿಸಿದ ಹರ್ಷ ಅವರನ್ನು ಬೋಗಿ ಬರುವ ಸ್ಥಳದಲ್ಲಿ ನಿಲ್ಲಿಸಿ ರೈಲು ಬಂದಮೇಲೆ ಓಡುತ್ತ  ಡ್ರೈವರ್ ಹತ್ತಿರ ಹೋಗಿ  ಒಂದು ನಿಮಿಷ ಕಾಯಲು ವಿನಂತಿ ಮಾಡಿದ. ಪುಟ್ಟ ಹುಡುಗನ ಸಹಾಸ ನೋಡಿದ ಡ್ರೈವರ್ ನಗುತ್ತ ಆಗಲಿ ಎಂದ. ವೃದ್ಧ ದಂಪತಿಗಳನ್ನು ಸುರಕ್ಷಿತವಾಗಿ ಹತ್ತಿಸಿದ.

"ಮಗು ನಿನಗೆ ಒಳ್ಳೆಯದಾಗಲಿ,' ಎಂದು ಅಜ್ಜ ಆಶೀರ್ವಾದ ಮಾಡಿದರು. ಅಜ್ಜಿ ತನ್ನ ಬ್ಯಾಗ್ ನಲ್ಲಿ ಇರುವ ಪೇಡಾ ಕೊಟ್ಟಳು. 

ಅದೇ ಸಮಯದಲ್ಲಿ ಓರ್ವ ಭಿಕ್ಷುಕಿ ಆರು ತಿಂಗಳು ಮಗುವನ್ನು ಎತ್ತಿಕೊಂಡು ಬೋಗಿಯಲ್ಲಿ ಹತ್ತಲು ಸಹಾಯ ಮಾಡಿ ಜೇಬಿನಲ್ಲಿ ಇರುವ ರೂಪಾಯಿ ಹತ್ತು ಆಕೆಗೆ ಕೊಟ್ಟ. 

ಅಂದು ಮಧ್ಯಾನ್ಹ ವೇಳೆ ಮುಗಿದು ಆಕಾಶದಲ್ಲಿ ಸೂರ್ಯ ಅಸ್ತಂಗತ ಆಗುವ ಸಮಯ ಸಮೀಪಿಸಿತು. ನಿಲ್ದಾಣದಲ್ಲಿ ಲೈಟ್ ಹಾಕುವ ಸಮಯ. ಹರ್ಷ ನ ಮೊಬೈಲ್ ಫೋನ್ ರಿಂಗ್ ಮೇಲಿಂದ ಮೇಲೆ ಆಗುತ್ತ ಇತ್ತು.  ಆತ ಯಾರದು ಎಂದು ಗೊತ್ತಾಯಿತು.

"ಹರ್ಷ ಬೇಗ ಮನೆಗೆ ಬಾರೋ.  ನಿನಗೆ ಹಸಿವೆ ಆಗಿಲ್ಲವೇ?." ಎಂದಳು ಅವನ ತಾಯಿ

"ಅಮ್ಮ, ಐದು ನಿಮಿಷದಲ್ಲಿ ಬರುವೆ." ಎಂದ

 ಕತ್ತಲು ಎಲ್ಲ ಕಡೆ ಆವರಿಸಿತು. ತಡವಾಯಿತು ಎಂದು ಅವನು ಹೊರಡಲು  ಸೈಕಲ್ ಹತ್ತಿದ. ಅದೇ ತಾನೇ ಬಂದ  ರೈಲು ಹೊರಡುವ ಸಿದ್ಧತೆಯಲ್ಲಿ ಇದ್ದಿತು. ಹರ್ಷ ನಿಂತು ಅದನ್ನು ನೋಡಿದ. ಅದು ನೀಲಿ ಮತ್ತು ಹಸಿರು ಬಣ್ಣದ ರೈಲು. ದಿಲ್ಲಿ ಕಡೆಗೆ  ಹೋಗುವದರಲ್ಲಿ ಇದ್ದಿತು. ಅದು ಬೆಂಗಳೂರು- ದಿಲ್ಲಿ ಹೋಗುವ ರೈಲು ಗುಡ್ಡ ದೂರು ನಿಲುಗಡೆ ಇರದೆ ಇದ್ದರೂ ಸಾವಕಾಶ ಹೋಯಿತು. ಪ್ಲಾಟ್ ಫಾರ್ಮ್ ಈ ಕಡೆ ಹೊರಗೆ ಏನೋ ಎಸೆದ ಶಬ್ದ ಕೇಳಿಸಿತು. 

 ಏನು ಅದು? ಎಂದು ಅವನಿಗೆ ತಿಳಿದು ಕೊಳ್ಳುವ ತವಕ. 

ಅದು ಮರದ ಮೇಲೆ ಬಿದ್ದು ರಸ್ತೆಯ ಬದಿ ಇರುವ ಪೊದೆಯಲ್ಲಿ  ಬಿದ್ದಿತು. ಹರ್ಷ ಅದನ್ನು ನೋಡಲು ಇಚ್ಚಿಸಿದ. ತನ್ನ ಸೈಕಲ್ ಅಲ್ಲಿಯೇ ನಿಲ್ಲಿಸಿ ಸಮೀಪದಲ್ಲಿ ಇರುವ ಪೊದೆಯ ಹತ್ತಿರ ಹೋದ. ಕತ್ತಲೆ ಯಲ್ಲಿ ಪೊದೆಯ ಒಳಗೆ ಹೋಗಲು ಹೆದರಿಕೆ ಆಯಿತು.  ನಂತರ ಅವನು ಅಲ್ಲಿಯೇ ನಿಂತು ಅಲ್ಲಿರುವ  ನಾಮಫಲಕ 'ರೇಲ್ವೇ ಆಸ್ತಿ ಪ್ರವೇಶ ನಿಷಿದ್ಧ' ಗಮನಿಸಿದ.

‘ಓ, ನಾನು ಅಲ್ಲಿಗೆ ಹೋಗಲು ಆಗದು.’ ಎಂದು ಅಂದುಕೊಂಡ

ಆದರೆ ಬೋಗಿಯಿಂದ ಬಿದ್ದ ವಸ್ತು ಏನು? ಮತ್ತೆ ತಲೆ ಮೇಲೆ ಕೈ ಇಟ್ಟು ಕೊಂಡ. ಆದರೂ ಪೊದೆ ಒಳಗೆ ಇಣುಕಿದ. ಕತ್ತಲೆ ಆಗಿರುವ ದರಿಂದ ಅದನ್ನು ನೋಡಲು ಆಗಲಿಲ್ಲ. ತನ್ನಲ್ಲಿ ಇರುವ ಮೊಬೈಲ್ ಲೈಟ್ ಹಾಕಿದ. ಪೊದೆಯ ಒಳಗೆ ಇರುವ ವಸ್ತುವಿನ ಚಿತ್ರ ತೆಗೆದು ಕೊಳ್ಳುವ ಪ್ರಯತ್ನ ಮಾಡಿದ. ಕ್ಯಾಮೆರ ದಲ್ಲಿ ಫ್ಲ್ಯಾಶ ಇರುವದು ಅವನಿಗೆ ಗೊತ್ತು. ಅದರ ಮೂಲಕ ಆಲ್ಲಿ ಒಂದು ಬ್ರೀಫಕೇಸ್ ಇರುವದನ್ನು ಗಮನಿಸಿದ. 

ಅದರಲ್ಲಿ  ಏನು ಇರಬಹುದು?  ಎನ್ನುವ ತವಕ ಹೆಚ್ಚಾಯಿತು. 

ಆಗ ಅವನಿಗೆ ಯಾರೋ ಕೂಗಿದ ಶಬ್ದ ಕೇಳಿಸಿತು. 

"ಯಾರು, ಇಲ್ಲಿ ಏನು ಮಾಡುತ್ತಿರುವೆ?'    

ಆ ದಢೂತಿ ಮನುಷ್ಯ ಮರಗಳ ಒಳಗಿನಿಂದ ಪೊದೆಯ ವರೆಗೆ ನಡೆದು ಬ೦ದ. ಅವನು ನೋಡಲು ಹೆದರಿಕೆ ಬರುವ ಹಾಗೆ ಇದ್ದ.  ಅವನ ಜೊತೆಗೆ ಒಂದು ದೊಡ್ಡ ನಾಯಿ ಇತ್ತು. ಅವನಲ್ಲಿ ಟಾರ್ಚ್ ಇರುವದರಿಂದ  ಹರ್ಷ ನ  ಮುಖ ದಮೇಲೆ ಬೆಳಕು ಹಾಕಿ, 

'ಯಾರೋ ನೀನು? ಎಂದ ಗದರಿಸಿದ.

ನಾಯಿ ಕೂಡ ಕೂಗುತ್ತ ಹರ್ಷ ನ ಕಡೆಗೆ ಹೋಯಿತು.

"ಗಾಬರಿ ಆಗಬೇಡ. ನಾಯಿ ಏನೂ ಮಾಡುವದಿಲ್ಲ." ಎಂದ ಆ ಧಡುತಿ ಮನುಷ್ಯ.

''ನಾನು ಹರ್ಷ, ನೀನು ಯಾರಪ್ಪ? 

ಬೆಳಕನ್ನು ನನ್ನ ಕಣ್ಣಿನ ಮೇಲೆ ಹಾಕಬೇಡ.'' ಎಂದ ಹರ್ಷ ಧೈರ್ಯದಿಂದ.

 'ಇಲ್ಲಿ ನೀನು ಏನು ಮಾಡು ತ್ತಿರುವೆ?' ಎಂದು ಕೇಳಿದ ಆ ದಢೂತಿ

'ನಾನು ರೈಲು ಗಳನ್ನು ನೋಡುತ್ತಾ ಇರುವೆ. ನೀನು ಯಾರು ಮೊದಲು ಹೇಳು?

ಬಾಲಕನ ಧೈರ್ಯ ನೋಡಿ ಅವನು ಚಕಿತನಾದ.

'ಬೇಗ ಮನೆಗೆ ಹೋಗು. ನೀನು ಇಲ್ಲಿಯೇ ನಿಂತರೆ ನಿನ್ನ ಜೀವಕ್ಕೆ ಅಪಾಯ." ಎಂದ 

ಹರ್ಷ ಪೊದೆಯ ಕಡೆಗೆ ತೋರಿಸಿ,

'ಅಲ್ಲಿ ಒಂದು ಬ್ರೀಫಕೇಸ್ ಇರುವದು. ಅದರ ಒಳಗೆ ಏನಿದೆ?"

''ಮಕ್ಕಳು ಅದೆಲ್ಲ ಕೇಳಬಾರದು." ಎಂದು ಗದರಿಸಿದ ಆ ವ್ಯಕ್ತಿ.

ಆದರೂ ಪಟ್ಟು ಬಿಡದ ಹರ್ಷ ಹೇಳುವವರೆಗೆ ಇಲ್ಲಿಂದ ಹೋಗುವದಿಲ್ಲ ಎಂದ.

 ನಾಯಿ ಕೂಗುತ್ತ ಹೇಮಂತನ  ಸಮೀಪ ಹೊಯಿತು. ಆಗ ಮತ್ತೆ ಮೊಬೈಲ್ ರಿಂಗ್  ಆಯಿತು. ತಾಯಿ ಯಿಂದ ಮತ್ತೊಂದು ಕರೆ. 'ಬೇಗೆ ಬಾರೋ ಮನೆಗೆ" ಎಂದಳು ಸಿಟ್ಟಿನಿಂದ.

 ನಾಯಿ ಕೂಗುವದನ್ನು ಹಾಗೆ ಮುಂದು ವರೆಸಿತು. 

'ಪ್ರಯಾಣಿಕರು ಖಾಲಿ ಆಹಾರ ಪೊಟ್ಟಣ ಪೊದೆಯಲ್ಲಿ ಎಸೆಯುವರು. ಮನೆಗೆ ಹೋಗು ಮತ್ತೆ ಇಲ್ಲಿ ಬರಬೇಡ." ಎಂದ ದಢೂತಿ 

''ಅದು ಬ್ರೀಫಕೇಸ್, ಆಹಾರ ಪೊಟ್ಟಣ ಅಲ್ಲ. ನೀನು ಸುಳ್ಳು ಹೇಳುತ್ತಿ." ಎಂದ ಹರ್ಷ

ಇವರಿಬ್ಬರ ಮಾತುಗಳು ಸ್ವಲ್ಪ ಸಮಯ ನಡೆಯುವಾಗ  ಪೋಲಿಸ್ ತಂಡ ಬಂದು ಆ ದಢೂತಿ ಮನುಷ್ಯನನ್ನು ಬಂಧಿಸಿಧರು. ಒಬ್ಬ ಪೋಲಿಸ್, ಪುಟ್ಟ  ಬಾಲಕ ಹರ್ಷ ನ ಬೆನ್ನು ತಟ್ಟಿ,

 "ಈ ಕದೀಮನನ್ನು ಮಾತನಾಡುತ್ತ ನಿಲ್ಲಿಸಿ ಒಳ್ಳೆಯ ಕೆಲಸ ಮಾಡಿದೆ. ನೀನು ಇಲ್ಲಿ ಇರದಿದ್ದರೆ ಅವನು ಬ್ರೀಫಕೇಸ್ ತೆಗೆದುಕೊಂಡು ಪರಾರಿ ಆಗುತ್ತಿದ್ದ." ಎಂದರು

 ಅದೇ ಪೋಲಿಸ್ ಹರ್ಷ ನನ್ನು ಅವನ ಮನೆಗೆ ಬಿಟ್ಟು ಬಂದ. ಬಾಲಕ ತನ್ನ ಸೈಕಲ್ ತೆಗೆದು ಕೊಂಡು ಹೋಗುವದು ಮರೆಯಲಿಲ್ಲ.

ಮಾರನೇ ದಿವಸ ತಿಳಿದು ಬಂದ ಸುದ್ದಿ ಪ್ರಕಾರ ಬ್ರೀಫಕೇಸ್ ನಲ್ಲಿ ದುಬೈ ದಿಂದ ಬಂದ ಸುಮಾರು ರೂಪಾಯಿ ಐವತ್ತು ಲಕ್ಷ ಬೆಲೆ ಬಾಳುವ ಚಿನ್ನದ ಬಿಸ್ಕತ್ ಆ ಮನುಷ್ಯನ ಮೂಲಕ ನಿಗದಿತ ಸ್ಥಳಕ್ಕೆ ಸಾಗಿಸುವದಾಗಿತ್ತು. 

ಮರು ದಿವಸ ಹರ್ಷ ನ ಧೈರ್ಯ ಹಾಗೂ ಅವನ ಸಹಾಸ ಗುಡ್ಡ ದೂರು ಗ್ರಾಮಸ್ಥರಿಗೆ ಗೊತ್ತಾಗಿ ಹರ್ಷನನ್ನು ನೋಡಲು ಬಂದರು. ಮುಂದೆ ಹದಿನೈದು ದಿವಸದ ನಂತರ ಹರ್ಷ ನ ತಂದೆ ಸೇತುರಾಮ ಅವರಿಗೆ ಬಡ್ತಿ ಆಗಿ ಬೆಂಗಳೂರಿಗೆ ವರ್ಗ ವಾಯಿತು. 

ಒಂದು ದಿವಸ ಸಾಯಂಕಾಲ ನಿಲ್ದಾಣದ ಆಫೀಸ್ ನಲ್ಲಿ ಸೇತುರಾಮ ಅವರ ವಿದಾಯ ಸಭೆ.  ಸೇತುರಾಮ ಜೊತೆಗೆ  ಅವರ ಪತ್ನಿ ರುಕ್ಮಿಣಿ, ಸಿಗ್ನಲ್ ಮ್ಯಾನ್ ಅಬ್ದುಲ್, ಪೋರ್ಟರ್ ಮುನಿರಾಜು, ದೇವಸ್ಥಾನದ ಅರ್ಚಕ ಜಯಕೃಷ್ಣ, ಗುಡಿಸಲು ಟೀ ಸ್ಟಾಲ್ ನ ಶಿವಾನಂದ, ಹಣ್ಣಿನ ಅಂಗಡಿಯ ಮಹಾರುದ್ರ ಹಾಗೂ ಪುಟ್ಟ ಹರ್ಷ ಭಾಗವಹಿಸಿದರು. ಸಭೆಯಲ್ಲಿ ಸೇತುರಾಮ ಅವರ ಬಗ್ಗೆ ಎಲ್ಲರೂ ಕಡಿಮೆ ಮಾತು ಆಡಿದರೆ, ಹರ್ಷ ನ ಬಗ್ಗೆ ಹೆಚ್ಚು ಮಾತನಾಡಿದರು. ಅವರಲ್ಲಿ ಟೀ ಅಂಗಡಿ ಶಿವಾನಂದ ಹರ್ಷನು  ಬಂಗಾರದ ಬಿಸ್ಕತ್ ಇರುವ ಬ್ರೀಫಕೇಸ್ ಹುಡುಕುವಲ್ಲಿ ಹರ್ಷ ಪೋಲಿಸರಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ.  ಮಹಾರುದ್ರ ಎದ್ದು ನಿಂತು ಹರ್ಷ ನಲ್ಲಿ ಇರುವ ಜ್ಞಾನದ ಬಗ್ಗೆ ಕೊಂಡಾಡಿದ. ನಂತರ ಹರ್ಷ ಎದ್ದು ನೀವೆಲ್ಲರೂ ಹಿರಿಯರು. ನನ್ನ ಮೇಲೆ ಇರುವ ನಿಮ್ಮ ಪ್ರೀತಿ ನಿಮ್ಮನ್ನು ಬಿಟ್ಟು ಹೋಗಲು ಮನಸ್ಸು ಆಗುವದಿಲ್ಲ ಎಂದು ಭಾವುಕನಾಗಿ ಜೋರಾಗಿ ಅತ್ತು ಬಿಟ್ಟ. ಆಗ ಎಲ್ಲರೂ ಒಬ್ಬೊಬ್ಬರಾಗಿ ಅವನನ್ನು ತಬ್ಬಿ ಕೊಂಡರು. ಎಲ್ಲರಿಗೂ ಹರ್ಷನ ನ ಮೇಲೆ ಇರುವ ಪ್ರೀತಿ ನೋಡಿ ತಂದೆ ತಾಯಿ ಕಣ್ಣಲ್ಲಿ ಆನಂದಭಾಷ್ಪ. ಉಪಹಾರ, ಟೀ, ವ್ಯವಸ್ಥೆ ಆಗಿತ್ತು. ಅಬ್ದುಲ್,  ಸಿಲ್ಕ ಶಾಲನ್ನು ಸೇತುರಾಮ್ ಅವರಿಗೆ ಹೊದಿಸಿದರು. ಜಯಕೃಷ್ಣ ಅವರು ಪುಟ್ಟ ಹರ್ಷ ನಿಗೆ ಜನರಲ್ ನಾಲೇಜ್ ಲೇಟೆಸ್ಟ ಎಡಿಷನ್ ಬುಕ್ ಗಿಫ್ಟ್ ಕೊಟ್ಟರು. ಮುನಿರಾಜು ಅವರು ಅಮ್ಮನವರಿಗೆ ಫ್ರೇಮ ಹಾಕಿದ ದೊಡ್ಡ ಹನುಮಂತ ದೇವರ ಫೋಟೋ ಕೊಟ್ಟರು. ಎಲ್ಲರೂ ಸೇತುರಾಮ ಹಾಗೂ ರುಕ್ಮಿಣಿ ಅವರಿಗೆ ನಮಸ್ಕಾರ ಮಾಡಿದರು. ಕೊನೆಗೆ ಸೇತುರಾಮ ಅವರು ಕಳೆದ ನಾಲ್ಕು ವರ್ಷ ಗುಡ್ಡದೂರು ನಿಲ್ದಾಣದಲ್ಲಿ ತಮಗೆ ಆದ ಅನುಭವ ಸ್ಮರಿಸುವಾಗ ಅವರ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿ ಎಂದರು. ರುಕ್ಮಿಣಿ ಅವರು ಇಲ್ಲಿಯವರಿಗೆ ಎಲ್ಲ ತರಹದ ಸಹಕಾರ ಕೊಟ್ಟಿರುವದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಳು. ವಂದನಾರ್ಪಣೆಯೊಂದಿಗಳೊಂದಿಗೆ ಸಭೆ ಮುಕ್ತಾಯ ವಾಯಿತು.

ಪುಟ್ಟ ಹರ್ಷ ನ ನೆನಪು ಅವರೆಲ್ಲರಿಗೂ ಹಾಗೆ ಉಳಿಯಿತು.



Rate this content
Log in

Similar kannada story from Abstract