Vaman Acharya

Abstract Classics Others

4  

Vaman Acharya

Abstract Classics Others

ಭಟ್ರು ಆದ್ರು ಶೆಟ್ರು

ಭಟ್ರು ಆದ್ರು ಶೆಟ್ರು

7 mins
279


ರಾತ್ರಿ ಒಂಭತ್ತು ಗಂಟೆ ಸಮಯ. ಅದೇ ತಾನೇ ಮನೆಗೆ ಬಂದ ಪತಿಗೆ ಪತ್ನಿ,

“ರೀ, ನಾನು ಒಬ್ಳೆ ಮನ್ಯಾಗ ಇದ್ದೀನಿ. ನಿಮ್ಮ ಹಾದಿ ನೋಡಿ ನೋಡಿ ಸಾಕು ಸಾಕಾಯ್ತು.  ಇವತ್ತಿನ ದಿನ ಖಾಸ್ ಇದೆ0ತ ನಿಮಗೆ ಗೊತ್ತಿಲ್ಲೇನು? ಇಂದು ನಮ್ಮ ಲಗ್ನ ಆಗಿ ಒಂದು ವರ್ಷ ಆಯ್ತು. ಸ್ಪೆಷಲ್ ಅಡಗಿ ಮಾಡಿನಿ. ನೀವು ಜಲ್ದಿ ಯಾಕ ಬರ0ಗಿಲ್ಲ? ಅಂಗಡ್ಯಾಗ್ ಕೂತ ಮ್ಯಾಲ ಮನೆಯಲ್ಲಿರುವ ಹೆಂಡ್ತಿ ಯನ್ನು ಮರೆತು ಬಿಡ್ತೀರಿ. ಫೋನ್ ಮಾಡಿದರೆ ಫೋನ್ ಎತ್ತುದಿಲ್ಲ,”  ಎಂದಳು ಒಂದು ವರ್ಷದ ಹಿಂದೆ ಮದುವೆ ಆದ ಕುಸುಮ ತನ್ನ ಗಂಡ  ಗುಂಡ ಭಟ್ರಿಗೆ ನಗುತ್ತ.

“ಹೌದೇ! ನಾನು ಜಲ್ದಿ ಬರಬೇಕು ಅನ್ನುದ್ರಾಗ ಬೇರೆ ಊರಿನಿಂದ ಬಂದ ನಾಲ್ಕೈದು ಜನ ತಲಿ ಶೂಲೆ ಮಾಡುವ ಗಿರಾಕಿ ಬಂದ್ರು. ಅವರು ಬಂದವರೇ ಅದು ಇದು ಕೇಳ್ಕೋತ ಕೊನೆಗೆ ವ್ಯಾಪಾರ ಮಾಡದೆ ಹೋದರು. ಅದ್ರಿಂದ ತಡ ಆಯ್ತು. ಭಡಕ್ಕನೆ ಒಂದು ಕಪ್ ಖಡಕ್ ಛಾ ಮಾಡು ಒಪ್ಪಾರಿ ತಲಿ ಹೊಡೆತಾ ಇದೆ. ಅಂಗಡ್ಯಾಗ ಹಯರಾಣ ಭಾಳ ಆಗ್ಯಾದ.”

“ಛಾ ಮಾಡುದಿಲ್ಲ. ಅಡಗಿ ಆಗ್ಯಾದ ಐದು ಮಿನಿಟ್ ನಾಗ ಕೈಕಾಲು ತೊಳ್ಕೊಂಡು ದೇವರ ಮುಂದೆ ಊದಿನ ಕಡ್ಡಿ ಹಚ್ಚಿ ನಮಸ್ಕಾರ ಮಾಡಿ ಊಟಕ್ಕೆ ಬರ್ರಿ.”

ಗುಂಡ ಭಟ್ರು ಹೆಂಡ್ತಿಗೆ ಅಂಜದೇ ಇದ್ದರೂ ಅಂಜಿದಂಗ ನಟನೆ ಮಾಡುವ ಕಲೆ ಗೊತ್ತು. ಮನಸಿನ್ಯಾಗ ಏನೇ ಅನಿಸಿದರೂ ಹೆಂಡ್ತಿಗೆ ಹೇಳದೇ ಬಾತ್ ರೂಮ್ ಒಳಗೆ ಹೋದರು.

ಈ ದಂಪತಿಗಳು ಆಗಾಗ ಮನರಂಜನೆ ಸಲುವಾಗಿ ಆಡು ಭಾಷೆ ಯಲ್ಲಿ ಸಂಭಾಷಣೆ ಮಾಡುವ ಅಭ್ಯಾಸ. ಇವರು ವಾಸವಾಗಿರು ವದು ಬೆಂಗಳೂರು, ಹನುಮಂತ ನಗರ ದ ಐದನೇ ಕ್ರಾಸ್, 1246, ‘ಸುಮಂಗಲ’ ಎನ್ನುವ ಸ್ವಂತ ಮನೆ. 

ಕುಸುಮ ಳ ಪಕ್ಕದ ಮನೆ ಉಷಾ ಗೆ ಇನ್ನೊಬ್ಬರ ಮನೆ ಯ ಕಾರಬಾರು ಮಾಡದೇ ಹೋದರೆ ಸಮಾಧಾನ ಆಗುವದಿಲ್ಲ. ಅದನ್ನು ಬೇರೆಯವರ ಜೊತೆಗೆ ಹಂಚಿ ಕೊಳ್ಳುವದು ಅಂದರೆ ಆಕೆಗೆ ತುಂಬಾ ಇಷ್ಟ. ಮಧ್ಯಾಹ್ನ ಸಮಯ ಮನೆಯಲ್ಲಿ ಗಂಡಸರು ಇರುವದಿಲ್ಲ. ಅಕ್ಕ ಪಕ್ಕದ ಗೆಳತಿಯರು ವನಜ, ಗಿರಿಜಾ, ಸುಮಾ, ಮಾಲತಿ ಅದೇ ಸಮಯ ಊಟ ಮುಗಿಸಿ ಉಷಾ ಕರೆಯುವ ದಾರಿ ನೋಡುತ್ತಿರುತ್ತಾರೆ. ಇವರಿಗೆ ಫೋನ್ ಮಾಡಿ ಕರೆದು ಅವರು ಬಂದಮೇಲೆ ಸ್ವಲ್ಪ ಹೊತ್ತು ಹರಟೆ. 

“ಏನ್ರಿ, ನಿಮಗೆ ‘ಆಜ್ ಕಿ ತಾಜಾ ಖಬರ್’ ಗೊತ್ತಿದೆಯಾ?” ಎಂದು ಪ್ರಾರಂಭ ಮಾಡಿದಳು ಉಷಾ.

“ಏನಮ್ಮ ಅದು? ಎಂದು ಉತ್ಸುಕತೆ ಯಿಂದ ಕೇಳಿದಳು ಸುಮಾ.

“ಒಂದು ತಿಂಗಳು ಹಿಂದೆ ನಮ್ಮ ಪಕ್ಕದ ನೂತನ ಮನೆಗೆ ವಾಸ್ತು ಶಾಂತಿ ಮಾಡಿ ಗೃಹ ಪ್ರವೇಶ ಮಾಡಿದ ಗಂಡ ಹೆಂಡ್ತಿ ಕುಸುಮ ಹಾಗೂ ಗುಂಡ ಭಟ್ರು ದಿನಾಲು ಜಗಳ ವಾಡುವರು. ಒಂದು ದಿವಸ ಗುಂಡ ಭಟ್ಟರು ರಾತ್ರಿ ಮನೆಗೆ ಬರುವಾಗ ಹೇಳಿದ ದಿನಸಿ ಸಾಮಾನು ತರುವದು ಮರೆತರೆ, ಮತ್ತೊಂದು ದಿವಸ ಸಿನೆಮಾ ನೋಡಲು ಹೋಗುವದಾಗಿ ಹೇಳಿ ಕೈ ಕೊಟ್ಟರೆ ಇಬ್ಬರಲ್ಲಿ ಜಗಳ. ಇಬ್ಬರಲ್ಲಿ ಹೊಂದಾಣಿಕೆ ಇಲ್ಲ,” ಎಂದಳು ಉಷಾ.

“ಇದೆಲ್ಲ ನಿನಗೆ ಹೇಗೆ ಗೊತ್ತು ಉಷಾ ಮೇಡಂ? ಬಹುಶ: ಅವರು ಜೋರಾಗಿ ಮಾತನಾಡುವ ದನ್ನು ನೀವು ಜಗಳ ಅನ್ನುತ್ತಿರಿ,” “ಎಂದಳು ಮಾಲತಿ.

“ಬೆಂಗಳೂರು ನಲ್ಲೆ ಹುಟ್ಟಿ ಬೆಳೆದು ಸ್ನಾತ ಕೋತ್ತರ ಪದವಿ ಫಸ್ಟ್ ಕ್ಲಾಸ್ ಪಾಸಾಗಿ ಕನ್ನಡ ಪ್ರಾಧ್ಯಾಪಕ ಳಾಗಿ ವಿದ್ಯಾ ನಿಕೇತನ ಕಾಲೇಜ್ ನಲ್ಲಿ ಕೆಲಸ ಮಾಡುತ್ತಿದ್ದ  ಕುಸುಮ, ಎಸ್ ಎಸ್ ಎಲ್ ಸಿ ಫೇಲಾದ ಉತ್ತರ ಕರ್ನಾಟಕ ದ ಗುಂಡ ಭಟ್ಟರ ಜೊತೆಗೆ ಮದುವೆ ಹೇಗಾ ಯಿತು?”ಎನ್ನುವದು ‘strange but true’,” ಎಂದಳು ಗಿರಿಜಾ.

“ಅದಕ್ಕೆ ಅನ್ನುವರು ‘ಪ್ರೀತಿ ಕುರುಡು’ ಅಂತ,” ಎಂದಳು ಮಾಲತಿ.

 “ಮದುವೆ ಆದ ಒಂದು ವರ್ಷ ದಲ್ಲಿ ಉತ್ತರ ಕರ್ನಾಟಕದ ಕನ್ನಡದ ಆಡು ಭಾಷೆಯಲ್ಲಿ ನಿರರ್ಗಳ ಮಾತ ನಾಡಲು ಕುಸುಮ ಕಲಿತಳು.” ಎಂದಳು ಸುಮಾ.

“ಕುಸುಮ ಹಾಗೂ ಗುಂಡ ಇವರಲ್ಲಿ ‘Love at first sight’ ಆಗಿರುವದು ಹೇಗೆ ಆದರು ಎನ್ನುವದು ಆಶ್ಚರ್ಯ,”  ಎಂದಳು ಮಾಲತಿ.

“ಗುಂಡ ಭಟ್ಟ 500 ಕಿಲೋಮೀಟರ್ ದೂರದ ಕುಗ್ರಾಮ ಹನುಮಗಿರಿ ಊರಿನಿಂದ ಬೆಂಗಳೂರು ಸಿಟಿಗೆ ಹೇಗೆ ಬಂದ? ಅರ್ಚಕನ ಮಗ ಗುಂಡ ಲಿಕ್ಕರ್ ಬಿಜನೆಸ್ ಮಾಡುವನು ಅಂದರೆ ಮತ್ತೊಂದು ಆಶ್ಚರ್ಯವಲ್ಲದೆ ಮತ್ತೇನು? ಅವರ ತಂದೆ ಭೀಮ ಭಟ್ಟ ರು ಪೂಜೆ, ಪುನಸ್ಕಾರ, ಅಧ್ಯಯನ ಹಾಗೂ ಅಧ್ಯಾಪನೆ ಮಾಡುವರು. ಈ ಮಗ ಅವೆಲ್ಲ ಬಿಟ್ಟು ಲಿಕ್ಕರ್ ವ್ಯಾಪಾರ ಮಾಡುವನು,” ಎಂದಳು ಮಾಲತಿ.

“ಅದಕ್ಕೆ ಅನ್ನುವರು ಕಲಿಯುಗ. ಕಲಿ ಕಾಲದಲ್ಲಿ ಇಂಥ  ಘಟನೆಗಳು ಸಾಮಾನ್ಯ,”

ಎಂದಳು ಉಷಾ.

ಎಲ್ಲರೂ ಜೋರಾಗಿ ನಕ್ಕರು.

“ಅದೆಲ್ಲ ಇರಲಿ. ಈ ಭಟ್ರು ಶಟ್ರು ಆಗಿರುವದು ಮೂರನೇ ಆಶ್ಚರ್ಯ,” ಎಂದಳು ಮಾಲತಿ. 

“ರಾಮ ರಾಮ ಶಿವ ಶಿವ ಶಾಂತಂ ಪಾಪಂ ದೇವರೇ ಕಾಪಾಡು,” ಎಂದಳು ಗಿರಿಜಾ.

“ಅಂದಹಾಗೆ ಈ ಕುಸುಮ ಯಾರು?” ಎಂದು ಕೇಳಿದಳು ಉಷಾ.

ಮುಂದಿನ ಮೀಟಿಂಗ್ ನಲ್ಲಿ ಪತ್ತೆ ಹಚ್ಚು ವದಾಗಿ ಹೇಳಿದ ಉಷಾ ಅಂದಿನ ಹರಟೆ ಅಲ್ಲಿಗೆ ಮುಗಿಸಿದರು.

****

ನೆರೆ ಹೊರೆಯವರು ತಮ್ಮ ಬಗ್ಗೆ ಆಡಿಕೊಳ್ಳು ತ್ತಿ ರುವ ಮಾತುಗಳು ಒಬ್ಬರಿಂದ ಇನ್ನೊಬ್ಬರ ವರೆಗೆ ಹೋಗಿ ಕೊನೆಗೆ ಕುಸುಮ ಕಿವಿಗೆ ಬಿದ್ದು ಆಕೆ ಇದನ್ನು ಪತಿಗೆ ತಿಳಿಸಿದಳು.

 “ಸರಿಯಾದ ಸಮಯ ಬಂದಾಗ ಉತ್ತರ ಕೊಡುವೆ. ಆನೆ ಗಂಭೀರ ವಾಗಿ ಹೋಗುತ್ತಿರು ವಾಗ ನಾಯಿಗಳು ಬೊಗಳುತ್ತವೆ,” ಎಂದ ಗುಂಡ ನಗುತ್ತ.

ಹನುಮಂತ ದೇವರ ಗುಡಿಯ ಅರ್ಚಕ ಭೀಮ ಭಟ್ಟರ ಏಕೈಕ ಸುಪುತ್ರ ಗುಂಡ ಭಟ್. ಇರುವ ಐದು ಎಕರೆ ಭೂಮಿ ಮಳೆ ಬಂದರೆ ಬೆಳೆ. ದೇವಸ್ಥಾನ ಕ್ಕೆ ಬರುವ ಭಕ್ತಾದಿಗಳು ತುಂಬಾ ಕಡಿಮೆ. ಅದರಿಂದ ಬರುವ ಆದಾಯ ತುಂಬಾ ಕಡಿಮೆ. ಗುಂಡ ತಾಯಿ ಇಲ್ಲದ ಮಗ. ಹಳ್ಳಿಯಲ್ಲಿ ಇರುವ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿ ಸಮೀಪದ ಪವನ್ ಪುರ್ ಪಟ್ಟಣದಲ್ಲಿ ಹೈಸ್ಕೂಲ್ ನಲ್ಲಿ ಅಭ್ಯಾಸ ಮಾಡಿದ. ಆದರೆ ಎಸ್ ಎಸ್ ಎಲ್ ಸಿ ಪಾಸಾಗಲಿಲ್ಲ. ಹಾಗೆ ನೋಡಿದರೆ ಅವನು ಮಾತನಾಡುವ ಗಾಂಭೀರ್ಯ,  ಸಮಸ್ಯ ಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಹೇಳುವ ಜಾಣತನ ಹಾಗೂ ಅಪ್ಪನ ಕಷ್ಟ ಸುಖದಲ್ಲಿ ಭಾಗಿ ಆಗಿ ಧೈರ್ಯ ಹೇಳುವ ಮನಸ್ಥಿತಿ ಇಷ್ಟೆಲ್ಲಾ ಗುಂಡನಿಗೆ ಇರುವದು ಆತ ನಿಗೆ ಹದಿನೈದು ವರ್ಷ ವಯಸ್ಸು ಇರುವಾಗ.  ಇಪ್ಪತ್ತು ವರ್ಷ ಆಗುವವರೆಗೆ ವರೆಗೆ ಗುಂಡ ಅಪ್ಪನಿಗೆ ದೇವಸ್ಥಾನ ದಲ್ಲಿ ಸಹಾಯಕ ನಾದ.

ಒಂದು ದಿವಸ ದೂರದ ಬೆಂಗಳೂರು ನಗರ ದಿಂದ ಪರಮೇಶ್ವರ್ ಶೆಟ್ಟಿ ಎನ್ನುವ ಸುಮಾರು ಐವತ್ತು ವರ್ಷ ದ ವ್ಯಕ್ತಿ ಹೆಂಡತಿ ಶಾರದಾ ಹಾಗೂ ಮಗಳು ಸುನಂದಾ ಜೊತೆಗೆ ಹನುಮ ಗಿರಿ ಇವರ ದೇವಸ್ಥಾನ ಕ್ಕೆ ಕಾರ್ ನಲ್ಲಿ ಬಂದರು. ಬಹಳ ದಿವಸ ಆದಮೇಲೆ ಯಾರೋ ದೊಡ್ಡ ಮನುಷ್ಯ ಆಗಮಿಸಿ ರುವದಕ್ಕೆ ಭೀಮ ಭಟ್ಟರಿಗೆ ಖುಷಿ ಆಯಿತು.

ಭೀಮ ಭಟ್ಟರು ಅವರಿಗೆ ಸ್ವಾಗತಸಿದರು. ಪರಸ್ಪರ ಪರಿಚಯ ಆಯಿತು. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ದೊಡ್ಡ ಎಕಸೈಜ್ ಕಂಟ್ರಾಕ್ಟರ್. ಹನುಮ ಗಿರಿ  ಹನುಮಂತ  ದೇವರು ಅವರ ಮನೆ ದೇವರು ಎಂದು ಗೊತ್ತಾಗಿ ಇಲ್ಲಿಗೆ ಬಂದಿರುವ ದಾಗಿ ಹೇಳಿದರು. ಭಟ್ಟರು ಅವರು ಹೇಳಿದ ಎಲ್ಲಾ ಸೇವೆ ಗಳನ್ನು ಶಾಸ್ತ್ರ ಪ್ರಕಾರ ಮಾಡಿ ತೀರ್ಥ ಪ್ರಸಾದ ವ್ಯವಸ್ಥೆ ಮಾಡಿದರು. ಆದರಾತಿಥ್ಯ ಚೆನ್ನಾಗಿ ಮಾಡಿರುವ ದರಿಂದ ಪರಮೇಶ್ವರ್ ಶೆಟ್ಟರಿಗೆ ಸಂತೋಷ ವಾಗಿ ಭಟ್ಟರಿಗೆ ದೊಡ್ಡ ಮೊತ್ತದ ದಕ್ಷಿಣೆ ಕೊಟ್ಟು ಮತ್ತೇನಾದರೂ ಸಹಾಯ ಬೇಕೆ ಎಂದರು.

ಆಗ ಭೀಮ ಭಟ್ಟರು,

 “ನನ್ನ ಮಗ ಗುಂಡ ನಿಗೆ ಬೆಂಗಳೂರು ನಲ್ಲಿ ಏನಾದರೂ ಕೆಲಸ ಕೊಡಿಸಿದರೆ ತುಂಬಾ ಉಪಕಾರ ವಾಗುವದು.” ಎಂದರು.

“ಭಟ್ಟರೆ ಅವಶ್ಯ ವಾಗಿ ಸಹಾಯ ಮಾಡುವೆ. ನಾಳೆ ಬೆಳಗ್ಗೆ ನಾವು ಹೊರಡು ತ್ತೇವೆ. ನಮ್ಮ ಜೊತೆಗೆ ಬೆಂಗಳೂರಿಗೆ ಗುಂಡ ನನ್ನು ಕರೆದುಕೊಂಡು ಹೋಗುತ್ತೇವೆ. ಅಂದಹಾಗೆ, ಗುಂಡ ಮಾಡಿದ ವಿದ್ಯಾಭ್ಯಾಸ ಹಾಗೂ ಅನುಭವ ಏನು?” ಎಂದರು

ಭೀಮಭಟ್ಟರು ಇರುವದೆಲ್ಲವನ್ನು ಹೇಳಿದರು.

“ಭಟ್ಟರೆ ಚಿಂತೆ ಮಾಡಬೇಡಿ. ಗುಂಡನಿಗೆ ಒಳ್ಳೇಯ ಕೆಲಸ ಕೊಡಿಸುವ ಜವಾಬ್ದಾರಿ ನನ್ನದು,” ಎಂದು ಆಶ್ವಾಸನೆ ಕೊಟ್ಟರು. 

ಭೀಮ ಭಟ್ಟರಿಗೆ ಮಗನನ್ನು ಬಿಟ್ಟು ಹೇಗೆ ಇರಬೇಕು ಎನ್ನುವ ಚಿಂತೆ ಆಯಿತು. ಮಗನ ಭವಿಷ್ಯ ನೋಡಿ ಆಗಲಿ ಎಂದರು. ಅಪ್ಪ, ಮಗ ಇಬ್ಬರಿಗೂ ಆನಂದ ವಾಯಿತು.

ಮರು ದಿವಸ ಬೆಳಗ್ಗೆ ಏಳು ಗಂಟೆಗೆ ಭೀಮಭಟ್ಟರು ಹನುಮಂತ ದೇವರಿಗೆ ಮಂಗಳಾರತಿ ಮಾಡಿದರು. ಆಗ ಗುಂಡ ಹನುಮಾನ್ ಚಾಲೀಸಾ ಪುಸ್ತಕ ಇಲ್ಲದೇ ಪೂರ್ತಿ ಪಠಿಸಿ ಅದರ ಅರ್ಥ ಸಂಕ್ಷಿಪ್ತದಲ್ಲಿ ಹೇಳಿದ. ಇದು ಶೆಟ್ಟಿ ಅವರಿಗೆ ತುಂಬಾ ಪರಿಣಾಮ ಆಯಿತು. ನಂತರ ಫಲಹಾರ ಆದಮೇಲೆ ಗುಂಡ ಅವರ ಜೊತೆಗೆ ಕಾರ್ ನಲ್ಲಿ ಕುಳಿತ. ಮಗನಿಗೆ ಬೀಳ್ಕೊಡುವಾಗ ಭೀಮ ಭಟ್ಟರ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು. ಕಾರು ಹೋಗುವ ತನಕ ಭೀಮ ಭಟ್ಟರು ಅಲ್ಲಿಯೇ ನಿಂತರು.

ಮಗ ಹೋದಮೇಲೆ ಭಟ್ಟರು ಏಕಾಂಗಿ ಆದರೂ ಜೊತೆಗೆ ಹನುಮಂತ ದೇವರು ಇದ್ದಾನಲ್ಲ ಎಂದು ಮನಸ್ಸಿಗೆ ಶಾಂತಿ ತಂದು ಕೊಂಡರು.

****

ಪರಮೇಶ್ವರ್ ಶೆಟ್ಟಿ ಅವರು ಗುಂಡ ನಿಗೆ ತಮ್ಮ ಮನೆಯಲ್ಲಿ ಇರುವ ಔಟ್ ಹೌಸ್ ನಲ್ಲಿ ಇರುವ ವ್ಯವಸ್ಥೆ ಮಾಡಿದರು. ನಾಲ್ಕೈದು ಕಡೆ ಕೆಲಸಕ್ಕಾಗಿ ಗುಂಡ ನಿಗೆ ಕಳಿಸಿದರು. ಎಲ್ಲೂ ಕೆಲಸ ಸಿಗದೇ ಮೂರು ತಿಂಗಳು ಆದಮೇಲೆ ಒಂದು ದಿವಸ ಗುಂಡ ತನ್ನ ಊರಿಗೆ ಹೋಗುವದಾಗಿ ಹೇಳಿದ.

ಆಗ ಶೆಟ್ಟಿ ಅವರು,

“ಗುಂಡ, ನಿನಗೆ ನಿನ್ನ ಊರಿಗೆ ವಾಪಸ್ ಕಳಿ ಸುವ ಮನಸ್ಸು ಆಗುತ್ತಾ ಇಲ್ಲ. ನೀನು ನಮ್ಮ ಲಿಕ್ಕರ್ ಶಾಪ್ ನಲ್ಲಿ ಕೆಲಸ ಮಡುತ್ತೀಯಾ? ಎಂದರು.

ಗುಂಡ ನಿಗೆ ಮೊದಲು ಧರ್ಮ ಸಂಕಟ ಆಯಿತು. ನಿರುದ್ಯೋಗಿ ಆಗಿ ಇರುವದಕ್ಕಿಂತ ಉದ್ಯೋಗಿ ಆಗಿರುವದು ಒಳ್ಳೆಯದು ಅಂದು ಕೊಂಡ.

“ಸರ್, ನೀವು ಕೊಟ್ಟ ಕೆಲಸ ಮಾಡಲು ರೆಡಿ. ಆದರೆ ನನಗೆ ಅಪ್ಪನ ಅನುಮತಿ ಅವಶ್ಯ,” ಎಂದ.

“ಆಯಿತು. ಬೇಕಾದರೆ ನಿನ್ನ ಊರಿಗೆ ಹೋಗಿ ಬಾ,” ಎಂದರು.

ಗುಂಡ ಫೋನ್ ಮೂಲಕ ಅಪ್ಪನಿಗೆ ಕೆಲಸದ ಬಗ್ಗೆ ತಿಳಿಸಿದ. ಭೀಮ ಭಟ್ಟರು ಭಾರವಾದ ಮನಸ್ಸು ಮಾಡಿ ಮಗನಿಗೆ ಆಗಲಿ ಎಂದರು. ಮರುದಿವಸ ದಿಂದ ಕೆಲಸ ಪ್ರಾರಂಭ ವಾಯಿತು.

ಒಂದು ತಿಂಗಳು ಆದ ಮೇಲೆ ಗುಂಡ ಒಂದು ವಾರದ ರಜೆ ಮೇಲೆ ತನ್ನ ಊರು ಹನುಮ ಗಿರಿ ಗ್ರಾಮಕ್ಕೆ ಹೋದ. ಅಲ್ಲಿಗೆ ಹೋದಮೇಲೆ ಪರಿಸ್ಥಿತಿ ಬೇರೆ ಆಯಿತು. ವಯೋಮಾನ ಹಾಗೂ ಅನಾರೋಗ್ಯ ದಿಂದ ಭೀಮ ಭಟ್ಟರು ದೈವಾಧೀನ ರಾದರು. ಗುಂಡನಿಗೆ ದಿಕ್ಕೇ ತೋಚದಂತೆ ಆಗಿ ಬಹಳ ದು:ಖ ಪಟ್ಟ. ಅವನ ಸಂಭಂಧಿಕರು ಬಂದು ಅಂತ್ಯಕ್ರಿಯೆ ಹಾಗೂ ಉಳಿದ ಕೆಲಸ ಮುಗಿಸಿದರು. ಅಂತ್ಯಕ್ರಿಯೆ ನಡೆಸಿಕೊಟ್ಟ ಕೃಷ್ಣ ಭಟ್ಟರಿಗೆ ಅರ್ಚಕ ಜವಾಬ್ದಾರಿ ವಹಿಸಿ ಬೆಂಗಳೂರು ಬಂದು ಗುಂಡ ಲಿಕ್ಕರ್ ಶಾಪ್ ನಲ್ಲಿ ಕೆಲಸ ಮುಂದು ವರೆಸಿದ.

ಹೀಗೆ ಐದು ವರ್ಷ ಕಳೆದವು.

ಈ ಅವಧಿಯಲ್ಲಿ ಗುಂಡನ ಪರಿಶ್ರಮ ದಿಂದ ಲಿಕ್ಕರ್ ವ್ಯವಹಾರ ಉತ್ತುಂಗಕ್ಕೆ ಹೋಯಿತು. ಪರಮೇಶ್ವರ್ ಶೆಟ್ಟಿ ಅವರು ಗುಂಡನಿಗೆ ಮತ್ತೊಂದು ಲಿಕ್ಕರ್ ಶಾಪ್ ನಡೆಸಲು ಬಂಡವಾಳ, ಅಂಗಡಿ ಕೊಟ್ಟರು. ಮಗಳು ಗುಂಡ ನಿಗೆ ಪ್ರೀತಿಸುವದು ತಿಳಿದು ಮೊದಲಿಗೆ ಸಿಟ್ಟು ಬಂದು ನಂತರ ಅವರ ಮದುವೆ ಮಾಡಿದರು.

ಒಂದು ದಿವಸ ಗುಂಡನ ಸಮಾಜದ ಹಿರಿಯರು ಬಂದು ಅಂತರ್ ಜಾತಿ ವಿವಾಹ ಏಕೆ ಮಾಡಿಕೊಂಡೆ ಎಂದು ಅವನಿಗೆ ಕೇಳಿದರು.

ಆಗ ಅವರಿಗೆ ಅವನು ಕೊಟ್ಟ ಉತ್ತರ ನಿಜವಾಗಿಯೂ ಅದ್ಭುತ.

ಅವನು ಕೊಟ್ಟ ಉತ್ತರ ವಾದರೂ ಏನು?

“ಪರಮೇಶ್ವರ್ ಶೆಟ್ಟಿ ಮಗಳು ಸುನಂದಾ ಹಾಗೂ ನಾನು ಇಬ್ಬರು ಪ್ರೀತಿಸಿ ಮದುವೆ ಆಗುವ ನಿರ್ಧಾರ ಮಾಡಿದೆವು. ಇದು ಶೆಟ್ಟಿ ದಂಪತಿಗಳಿಗೆ ಮನವರಿಕೆ ಆಗಿ ಅವರು ಸಂತೋಷ ದಿಂದ ಮದುವೆಗೆ ಒಪ್ಪಿದರು. ಕಾರಣ ಸುನಂದಾ ಅವರ ಸಾಕು ಮಗಳು. ಆಕೆ ಇಪ್ಪತ್ತು ವರ್ಷದ ಹಿಂದೆ ಅವರ ಮನೆಯಲ್ಲಿ ಸುಮಾರು ವರ್ಷಗಳಿಂದ ಅಡುಗೆ ಮಾಡುತ್ತಿದ್ದ ಪ್ರಭಾವತಿ ಹಾಗೂ ಮುಕುಂದ ಭಟ್ಟರ ಮಗಳು.  ಪ್ರಭಾವತಿ ಗರ್ಭವತಿ ಆಗಿ ಒಂಭತ್ತು ತಿಂಗಳು ಆದಮೇಲೆ ಪ್ರಸವ ಸಮಯದಲ್ಲಿ ಹೆಣ್ಣು ಮಗು ಹೆತ್ತು ವೇದನೆ ಉಲ್ಬಣ ವಾಗಿ  ಸಾಯು ವಾಗ ಹೆಣ್ಣು ಮಗುವನ್ನು ಶೆಟ್ಟಿ ದಂಪತಿಗಳಿಗೆ ಒಪ್ಪಿಸಿ ಕಣ್ಣು ಮುಚ್ಚಿದಳು. ಮುಕುಂದ ಭಟ್ಟರು ಮಡದಿ ವಿಯೋಗ ತಡೆಯಲು ಆಗದೇ ಆರು ತಿಂಗಳು ನಂತರ ಅವರು ಕೊನೆಯುಸಿರು ಎಳೆದರು. ನನ್ನ ವೃತ್ತಿ ಲಿಕ್ಕರ್ ಮಾರಾಟ ಇರಬಹುದು. ಇದು ಜೀವನೋಪಾಯಕ್ಕೆ ಮಾಡುವ ಕೆಲಸ. ಪ್ರವೃತ್ತಿ ಎಂದರೆ ನಾನು ಜನಿಸಿದ ಧರ್ಮದ ಧಾರ್ಮಿಕ ಕಟ್ಟಳೆ ಗಳನ್ನು ಚಾಚು ತಪ್ಪದೆ ಮಾಡುವೆ. ವೃತ್ತಿ ಹಾಗೂ ಪ್ರವೃತ್ತಿ ಯಲ್ಲಿ ಅಂತರ ಕಾಯ್ದು ಕೊಂಡಿದ್ದೇನೆ.”

ಸಮಾಜ ದವರು ತೆಪ್ಪಗಾಗಿ ಹೊರಟು ಹೋದರು.

ಮದುವೆ ಆದಮೇಲೆ ಗುಂಡ ಪತ್ನಿ ಹೆಸರು ಕುಸುಮ ಎಂದು ಬದಲಾಯಿಸಿದ. 

ಗುಂಡ ಭಟ್ರು ಆದ್ರು ಶೆಟ್ರು….?ಎನ್ನುವ ಪ್ರಶ್ನೆ ನಿಗೂಢ ವಾಗಿಯೇ ಉಳಿಯಿತು.

 


Rate this content
Log in

Similar kannada story from Abstract