Ashu Desai

Romance Classics Inspirational

4.5  

Ashu Desai

Romance Classics Inspirational

1) ಈ ಜೀವ ನಿನಗಾಗಿ

1) ಈ ಜೀವ ನಿನಗಾಗಿ

6 mins
391


ಅದೊಂದು ಸುಸಜ್ಜಿತವಾಗಿ ವೈಭವದಿಂದ ಸಿಂಗರಿಸಿಕೊಂಡು ತಯಾರಾದ ಒಂದು ಅವಾರ್ಡ್ ಫಂಕ್ಷನ್ ಹಾಲ್. ದೇಶದ ಅತ್ಯುನ್ನತ ಬ್ಯುಸಿನೆಸ್ persons ಎಲ್ಲಾ ಒಟ್ಟಿಗೆ ಸೇರಿದ ಸುಂದರ ಸಂಜೆ. ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಘಳಿಗೆ. ಕ್ಷಣ ಕ್ಷಣ ಕೂತುಹಲ ಕೆರಳಿಸುತ್ತಿದೆ. ಈ ವರ್ಷದ ಯಂಗ್ ಬ್ಯುಸಿನೆಸ್ ಐಕಾನ್ ನೋಡಲು ಎಲ್ಲರೂ ಕಾತರದಿಂದ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದಾರೆ. ಕಾರಣ, ಇಷ್ಟು ವರ್ಷ ಎಲೆ ಮರೆಯ ಕಾಯಂತೆ ಇದ್ದ ಒಂದು ಸಂಸ್ಥೆ ಇಂದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತನ್ನ ಛಾಪು ಮೂಡಿಸಿದೆ. ಕಳೆದ ವರ್ಷ ಆ ಕಂಪನಿಯ ಹೆಸರೇ ಕೇಳದ ಎಷ್ಟೋ ವ್ಯಕ್ತಿಗಳು ಇಂದು ಆ ಕಂಪನಿಯ ಪ್ರತಿನಿಧಿಯನ್ನು ಕಾಣಲು ಹಾತೊರೆಯುತ್ತಿದ್ದಾರೆ. ತನ್ನದೇ ಆದ ಅಸ್ತಿತ್ವ ರೂಪಿಸಿ ಕೇವಲ ಕೆಲವೇ ವರ್ಷದಲ್ಲಿ ಇಡೀ ಪ್ರಪಂಚವೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ ವ್ಯಕ್ತಿಯನ್ನು ಕಾಣಲೆಂದೇ ಎಷ್ಟೋ ಕಂಪನಿಯ ಒಡೆಯರು ಇಂದು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.


ಸಿಲಿಕಾನ್ ಸಿಟಿಯ ಒಂದು ಬೃಹತ್ ಹಾಲ್ ಅಲ್ಲಿ ನಡೆಯುತ್ತಿರುವ ಈ ಅವಾರ್ಡ್ ಫಂಕ್ಷನ್ ಗೆ ದೇಶದ ನಾನಾ ಕಡೆಯಿಂದ ಕಂಪನಿ ವಾರಸುದಾರರು, ಪ್ರತಿನಿಧಿಗಳು ಆಗಮಿಸಿದ್ದಾರೆ.


ಎಲ್ಲರ ಯೋಚನಾ ಲಹರಿಯನ್ನು ಕಡಿತಗೊಳಿಸಲು ನಿರೂಪಕರು, ಕಾರ್ಯಕ್ರಮದ ಆಯೋಜಕರು ಆಗಮಿಸಿ, ಎಲ್ಲರ ಚಿತ್ತ ತಮ್ಮತ್ತ ತಿರುಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.


ಫೈನಲಿ ಎಲ್ಲರೂ ಕಾಯುತ್ತಿದ್ದ ಆ ಘಳಿಗೆ ಸಮೀಪಿಸಿತು. ನಿರೂಪಕಿ ಅವರ ಹೆಸರನ್ನು ಅನೌನ್ಸ್ ಮಾಡಿದ ಕೂಡಲೇ ಎಲ್ಲರ ಕರತಾಡನ ಮೊಳಗಿತು. ಅವರು ಸ್ಟೇಜ್ ಹತ್ತಿದ ಕೂಡಲೇ ಆ ಆಕೃತಿಯನ್ನು ಕಂಡವರು ಒಂದು ಕ್ಷಣ ಮೂಕವಿಸ್ಮಿತರು. ಆ ಮುಖದ ಗಾಂಭೀರ್ಯವೇ ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತಿತ್ತು. ತಾವು ನೋಡುತ್ತಿರುವುದು ಸತ್ಯವಾ ಎಂದು ಅವಲೋಕಿಸಿದವರೆಷ್ಟೋ.


ಪೂರ್ಣ ಸಭೆಯೇ ನಿಶ್ಯಬ್ದ. ಆ ವ್ಯಕ್ತಿ ಅವಾರ್ಡ್ ಪಡೆದು ಮಾತನಾಡುತ್ತಿದ್ದರೆ ಇಡೀ ಸಭಾಂಗಣ ಪಿಂಡ್ರಾಪ್ ಸೈಲೆಂಟ್.


ಅವರು ತಮ್ಮ ಲಘು ಸಂಭಾಷಣೆ ಮುಗಿಸಿ ಸ್ಟೇಜ್ ಇಂದ ಕೆಳಗಿಳಿದು, ನಿರೂಪಕಿ ಧನ್ಯವಾದ ಅರ್ಪಿಸಿದಾಗಲೇ ಎಲ್ಲರೂ ವಾಸ್ತವಕ್ಕೆ ಮರಳಿದ್ದು.


ಅಷ್ಟಕ್ಕೂ ಆ ಅವಾರ್ಡ್ ಪಡೆದ ವ್ಯಕ್ತಿ ಒಂದು ಹುಡುಗಿ. ಅಲ್ಲದೇ ಅತೀ ಸಣ್ಣ ವಯಸ್ಸಿಗೇ ಆಕೆ ಮಾಡಿದ ಸಾಧನೆ ಅವರ ವಿಚಾರಕ್ಕೆ ಕಾರಣ. ಹೌದು ಆಕೆ ಹೆಸರು ಸ್ವೀಕೃತಿ. ವಯಸ್ಸು 29. ಸಾರ್ಥಕ ವೆಂಚರ್ಸ್ ನ CEO. ಕಂಪನಿ ಶುರು ಆದ ಕೆಲವೇ ವರ್ಷದಲ್ಲಿ ಮುಂಬೈ ನ ಟಾಪ್ 10 ಕಂಪನಿಗಳಲ್ಲಿ ಮೊದಲನೇ ಸ್ಥಾನ ಪಡೆದು ಬ್ಯುಸಿನೆಸ್ ಫೀಲ್ಡ್ ಅಲ್ಲೇ ಸಂಚಲನ ಮೂಡಿಸಿ ತನ್ನದೇ ಛಾಪು ಮೂಡಿಸಿ ದೇಶ ವಿದೇಶದ ಬಂಡವಾಳ ಹೂಡಿಕೆದಾರರು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.


ಸ್ಟೇಜ್ ಇಂದ ಕೆಳಗಿಳಿದ ಸ್ವೀಕೃತಿ ಗೆ ಎಲ್ಲರೂ ಶುಭಾಶಯ ತಿಳಿಸುವವರೇ. ಆಕೆಗೆ ಈ ಡಾಂಭಿಕ ಬದುಕು ಹಿಡಿಸದು. ಇಂತದ್ದರಿಂದ ಆಕೆ ಸ್ವಲ್ಪ ದೂರವೇ. ಆದರೆ ಇಂದು ಇದರ ಅನಿವಾರ್ಯ ಆಕೆಗೆ ಇತ್ತು. ಬೆಂಗಳೂರಿನಲ್ಲಿ ತನ್ನದೇ ಕಂಪನಿಯ ಒಡೆತನದಲ್ಲಿ ಬಡಬಗ್ಗರಿಗೆ ಅನುಕೂಲವಾಗುವಂತೆ ಒಂದು ಹಾಸ್ಪಿಟಲ್ ಸ್ಥಾಪಿಸುವ ಆಸೆ ಹೊತ್ತು, ಅದರ ಕಾರ್ಯಸಾಧನೆ ಯ ಮೊದಲ ಮೆಟ್ಟಿಲಾಗಿ ಈ ಅವಾರ್ಡ್ ಫಂಕ್ಷನ್ ಗೆ ಬಂದಿದ್ದು.


ಎಲ್ಲರೊಂದಿಗೆ ಮಾತನಾಡಿ ಎಲ್ಲರನ್ನೂ ನಾಳೆಯ ತನ್ನ ಪಾರ್ಟಿಗೆ ಆಹ್ವಾನಿಸಿ ಅಲ್ಲಿಂದ ಹೊರಟು ತಾನಿದ್ದ ಪಂಚತಾರಾ ಹೋಟೆಲ್ ಒಂದಕ್ಕೆ ಬಂದಳು.


'ಮೇಡಂ ಫಂಕ್ಷನ್ ತುಂಬಾ ಚನಾಗ್ ಆಯ್ತು ಅಲ್ವಾ


ನಾಳೆ ಬೆಳಗ್ಗೆ ಪ್ರೆಸ್ಸ್ ಮೀಟ್ ಇದೆ.. ಸಂಜೆ ಪಾರ್ಟಿ ' ನಾಳೆಯ ವರದಿ ಒಪ್ಪಿಸಿದಳು ಆಕೆಯ PA ನೀತಾ


'ನೀತಾ ನಿಂಗೆ ಎಷ್ಟು ಸಾರಿ ಹೇಳ್ಬೇಕು ನಾವಷ್ಟೇ ಇದ್ದಾಗ ಈ ಫಾರ್ಮಲಿಟೀಸ್ ಎಲ್ಲಾ ಬೇಡ ಅಂತ. ನೀನು ನನ್ನ ಮಾತನ್ನೇ ಕೇಳಲ್ಲ.'


'ಸಾರಿ ಮಾಮ್. ಈಗ ನೀವು ಒಬ್ಬ ಸೆಲೆಬ್ರಿಟಿ. ಯಂಗ್ ಬ್ಯುಸಿನೆಸ್ ಐಕಾನ್. ನಿಮ್ಮನ್ನ ಹೆಸರಿಟ್ಟು ಕರೆಯಲು ಸಾಧ್ಯವಾ ' ಚೇಷ್ಟೆ ಇತ್ತು ಧ್ವನಿಯಲ್ಲಿ


ನಾನು ಹೊರಗಿನ ಪ್ರಪಂಚಕ್ಕೆ ಏನೇ ಆದರೂ ನಿಂಗೆ ಮಾತ್ರ ಕೃತಿ ನೇ. ನಿನ್ನ ಬಹುವಚನ, ಅತೀ ಗೌರವ ಎಲ್ಲಿ ನಿನ್ನಿಂದ ನನ್ನ ದೂರ ಮಾಡುತ್ತದೆ ಅನ್ನೋ ಭಯ ' ದ್ವನಿಯಲ್ಲಿ ದುಃಖದ ಛಾಯೆ ಇಣುಕಿತ್ತು


'ಸಾರಿ ಕೃತಿ. ನಿನ್ನ ರೆಗಿಸೋಕೆ ಹಾಗೆ ಹೇಳ್ದೆ ಅಷ್ಟೇ. ಯು ಆರ್ ಆಲ್ವೇಸ್ ಮೈ ಬೆಸ್ಟ್ ಫ್ರೆಂಡ್. ಅದನ್ನ ಬದಲಾಯಿಸೋಕೆ ಯಾರಿಂದಾನು ಸಾಧ್ಯ ಇಲ್ಲ. ಅರ್ಥ ಆಯ್ತಾ. ಈ ಪುಟ್ಟ ತಲೇಲಿ ಇಲ್ದೆ ಇರೋ ಯೋಚನೆ ಎಲ್ಲಾ ಮಾಡದೇ ಸುಮ್ನೆ ಮಲ್ಗು. ನಾಳೆ ಪಾರ್ಟಿ ಮುಗದ್ರೆ, ಸ್ವಲ್ಪ ರಿಲೀಫ್. ನಾಡಿದ್ದು ನಿಂಗೆ ಯಾವುದೇ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಲ್ಲ. ಅವತ್ತು ನೀ ಹೇಳಿದ ಆಶ್ರಮಕ್ಕೆ ಹೋಗಿ ಬರೋಣ. ಅಲ್ಲೂ ನಿನ್ನ ಯಾವುದೇ ಐಡೆಂಟಿಫಯ್ ಹೇಳಬೇಡ ಅಂದಿದ್ದಕ್ಕೆ ಸಾಮಾನ್ಯರಂತೆ ಹೋಗಲು ಎಲ್ಲಾ ತಯಾರಿ ಮಾಡಿದ್ದೇನೆ. ಮೀಡಿಯಾದವರಿಗೆ ಗೊತ್ತಾದ್ರೆ ಸುಮ್ನೆ ನ್ಯೂಸ್ ಆಗುತ್ತೆ. ಸೋ ನಾವಿಬ್ಬರೇ ಹೋಗೋಣ. ಹೇಗೂ ನಾವು ಇನ್ನೂ ಕೆಲವು ತಿಂಗಳು ಬೆಂಗಳೂರಲ್ಲೇ ಇರ್ಬೇಕು. ನಮ್ಗೆ ಓಡಾಡೋಕೆ ಕಾರ್ ಅವಶ್ಯಕತೆ ಇದೆ. ಸರ್ ಅದಕ್ಕೆ ವ್ಯವಸ್ಥೆ ಮಾಡಿದ್ದಾರೆ. ನಾಳೆ ಹೊಸ ಕಾರ್ ಡೆಲಿವರಿ ಕೊಡ್ತಾರೆ. ಹಾಗೆ ನಾವು ಸ್ಟೇ ಆಗೋಕೆ ಡಾಕ್ಟರ್ ಮೆಹ್ತಾ ಅವರು ಅವರ ಫಾರ್ಮ್ ಹೌಸ್ ರೆಡಿ ಮಾಡಿದ್ದಾರೆ. ನಾವೊಮ್ಮೆ ಹೋಗಿ ನೋಡಿ ಅನುಕೂಲ ಆದ್ರೆ ಹೋಟೆಲ್ ಇಂದ ಅಲ್ಲಿ ಶಿಫ್ಟ್ ಆಗಬಹುದು. ನಾಳೆ ಪ್ರೆಸ್ ಮೀಟ್ ಮುಗಿದ ಮೇಲೆ ನೀ ಹೂ ಅಂದ್ರೆ ಮೆಹ್ತಾ ಅವ್ರಿಗೆ ಇನ್ಫಾರ್ಮ್ ಮಾಡ್ತೀನಿ. ಹೇಗೂ ಇನ್ನೆರೆಡು ದಿನ ಬಿಟ್ಟು ಅವರೊಂದಿಗೆ ಮೀಟಿಂಗ್ ಇದೆ. ಅವತ್ತೇ ಆದ್ರೂ ಓಕೆ. ನೀ ಹೇಗೆ ಹೇಳ್ತಿಯೋ ಹಾಗೆ ಮಾಡೋಣ ' ಉಸಿರು ಬಿಡದೆ ತನ್ನ ಕೆಲಸದ ಸಂಪೂರ್ಣ ವಿವರ ನೀಡಿ ತನ್ನ ದೀರ್ಘ ಸಂಭಾಷಣೆ ಮುಗಿಸಿದಳು ನೀತಾ


'ಉಸ್ಸಪ್ಪಾ......!!! ಆಯ್ತಾ ನಿಂದು. ಒಂದೇ ಉಸಿರಲ್ಲಿ ಎಲ್ಲಾ ವರದಿ ಒಪ್ಪಿಸಿದೆ. ಸರಿ, ನಾನು ಹೋಗಿ ಫ್ರೆಶ್ ಆಗಿ ಬರ್ತೀನಿ. ನಾನು ಸ್ವಲ್ಪ ಹೊತ್ತು ಮಲಗ್ತಿನಿ. ನಂಗೆ ಊಟ ಬೇಡ. ನೀನು ಇಲ್ಲೇ ರೂಂ ಗೆ ಬೇಕಿದ್ರೆ ತರ್ಸಿ ಊಟ ಮಾಡು. ಇಲ್ಲ ಒಬ್ಬಳೇ ಹೊರಗೆ ಹೋಗಿ ಬರೋದಿದ್ರು ನೋ ಪ್ರಾಬ್ಲೆಮ್ ' ಎಂದು ಬಾತ್ರೂಂ ಹೊಕ್ಕಳು ಕೃತಿ


'ಹೊರಗೆ ಎಷ್ಟೇ ಗಂಭೀರವಾಗಿ ಇದ್ದರೂ ನಿನ್ನದು ಇನ್ನೂ ಮಗು ಮನಸ್ಸು ಕೃತಿ. ನೀನು ಎಷ್ಟೇ ನಗ್ತಾ ಇದ್ದರೂ ನಿನ್ನ ನಗುವಿನ ಹಿಂದಿನ ದುಃಖ ನನ್ನ ಗಮನಕ್ಕೆ ಬರದೇ ಇರಲಾದು. ಆದ್ರೂ ಅದೇನು ಅಂತ ನನಗೆ ತಿಳಿಯುವ ಕೂತುಹಲ ಇಲ್ಲ. ನಾ ಬೇಡೋದು ನಿನ್ನ ಸಂತೋಷವನ್ನು ಮಾತ್ರ. ನೀನು ಯಾವಾಗ್ಲೂ ಖುಷಿಯಾಗಿ ಇರೋಕೆ ನಾನು ಏನು ಮಾಡೋಕೂ ಸಿದ್ದ ' ಸ್ವಗತ ನುಡಿದಳು ನೀತಾ


***********************


ಮೇಡಂ ಮೊದಲಿಗೆ ನಿಮ್ಗೆ ಯಂಗ್ ಬ್ಯುಸಿನೆಸ್ ಐಕಾನ್ ಅವಾರ್ಡ್ ಬಂದಿದ್ದಕ್ಕೆ congratulations ಎಂದು ಅಲ್ಲಿ ಸೇರಿದ್ದ ಪತ್ರಕರ್ತರೆಲ್ಲ ಅವಳನ್ನು ಅಭಿನಂದಿಸಿದರು.


ಥ್ಯಾಂಕ್ ಯು ಫ್ರೆಂಡ್ಸ್ ಎಂದು ಸ್ವೀಕೃತಿ ಅವರೆಲ್ಲರಿಗೂ ಮನಸ್ಫೂರ್ತಿಯಾಗಿ ಧನ್ಯವಾದ ಅರ್ಪಿಸಿದಳು.


ಮಾಮ್ ಇಷ್ಟು ಚಿಕ್ಕ ವಯಸ್ಸಿನಲ್ಲೇ, ಅದು ಕೇವಲ ಕೆಲವೇ ಬೆರಳೆಣಿಕೆಯಷ್ಟು ವರ್ಷದಲ್ಲಿ ಇಷ್ಟು ಸಾಧನೆ ಮಾಡಿರೋದಕ್ಕೆ ನಮಗೆ ಹೆಮ್ಮೆ ಆಗ್ತಾ ಇದೆ. ನೀವು ನಮ್ಮ ಹೆಣ್ಣು ಮಕ್ಕಳಿಗೆ ಸ್ಪೂರ್ತಿ. ಎಂದು ಪತ್ರಕರ್ತರ ಗುಂಪಲ್ಲಿದ್ದ ಒಬ್ಬ ಹೇಳಿದ.


ಎಗೈನ್ ಥ್ಯಾಂಕ್ ಯು ಫ್ರೆಂಡ್ಸ್ . ಬಟ್ ನಂಗೆ ಈ ತರ ಹೊಗಳಿಕೆ ಇಷ್ಟ ಆಗೋದಿಲ್ಲ. ಸೋ ಪ್ಲೀಸ್ ಸ್ಟಾಪ್ ದಿಸ್. ನಿಮ್ಗೆ ರಿಕ್ವೆಸ್ಟ್ ಮಾಡ್ತೀನಿ. ನಂಗೆ uncomfortable ಫೀಲ್ ಆಗ್ತಾ ಇದೆ ಎಂದು ನಯವಾಗೆ ಹೇಳಿದಳು.


ಓಕೆ ಮಾಮ್. ಸಾರಿ ಎಂದ ಆ ಪತ್ರಕರ್ತ 


That's ok ಎಂದು ಕೃತಿ ಸುಮ್ಮನಾದಳು.


ಮಾಮ್ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅಂತಾರೆ. ಆದರೆ, ಇಲ್ಲಿ ಮಹಿಳೆಯೇ ಯಶಸ್ಸು ಕಂಡಿರೋದ್ರಿಂದ ನಿಮ್ಮ ಹಿಂದೆ ಯಾವುದಾದರೂ ಪುರುಷ ಶಕ್ತಿ ಉಂಟೆ? ನಿಮ್ಮ ಸಾಧನೆಯ ಹಿಂದಿನ ಶಕ್ತಿ ಮತ್ತು ಸ್ಪೂರ್ತಿ ಯಾರು? ಎಂದು ಮತ್ತೊಬ್ಬರು ಪ್ರಶ್ನಿಸಿದರು. ಪತ್ರಕರ್ತರದ್ದು ನೇರ ಪ್ರಶ್ನೆ.


ಅವಳ ಚಂದದ ನಗುವೊಂದೆ ಅವಳ ಉತ್ತರ. ಅವಳ ನಗು ಕಂಡು ಮೈಮರೆತರು ಅವರೆಲ್ಲಾ, ಕರ್ತವ್ಯ ಮರೆಯದ ಮೀಡಿಯಾ ಸ್ನೇಹಿತರು ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿದಾಗ ವಾಸ್ತವಕ್ಕೆ ಬಂದ ಕೃತಿ.


ಹೌದು ನನ್ನ ಯಶಸ್ಸಿನ ಹಿಂದೆ ಒಂದು ಮಹಾನ್ ಶಕ್ತಿ ಇದೆ. ನನ್ನೆಲ್ಲಾ ಶಕ್ತಿ ಹಾಗೂ ಸ್ಪೂರ್ತಿ ಅವರೇ. ಅವರಿಲ್ಲದೆ ನನ್ನ ಯಶಸ್ಸು ಖಂಡಿತಾ ಇಲ್ಲ. ಇಂದು ನಾನು ಏನೇ ಸಾಧನೆ ಮಾಡಿದ್ದರೂ ಅದರ ಸಂಪೂರ್ಣ ಹಕ್ಕುದಾರರು ಅವರೇ. ನಾನು ಇಲ್ಲಿ ನಿಮಿತ್ತ ಮಾತ್ರ ಎಂದು ಹೆಮ್ಮೆಯಿಂದ ಹೇಳಿದಳು. ಅವಳ ಮಾತಲ್ಲಿ ಅವರ ಬಗ್ಗೆ ಅಭಿಮಾನ ತುಂಬಿತ್ತು.


ನಿಮ್ಮ ಮಾತು ಕೇಳ್ತಾ ಇದ್ರೆ ಅವ್ರು ನಿಮ್ಗೆ ತುಂಬಾ ಬೇಕಾದವರು ಅನ್ಸುತ್ತೆ? ಎಂದು ಮತ್ತೊಬ್ಬ ರಿಪೋರ್ಟರ್ ಕೇಳಿದಳು. ಅವಳ ಮಾತಲ್ಲಿ ಕಾತುರವಿತ್ತೋ, ವ್ಯಂಗ್ಯ ಇತ್ತೋ ತಿಳಿಯದು


ಖಂಡಿತ. ಅವ್ರು ನಮ್ಗೆ ತುಂಬಾನೇ ಬೇಕಾದವರು. ಅವರಿಲ್ಲದೆ ಇದ್ದಿದ್ರೆ ಸ್ವೀಕೃತಿ ಯ ಅಸ್ತಿತ್ವವೇ ಇರುತ್ತಿರಲಿಲ್ಲ. ಎಲ್ಲೋ IT ಕಂಪನಿಯಲ್ಲಿ ದಿನಚರಿಯ ಕೆಲಸ ಮಾಡುತ್ತಾ ದಿನ ಕಳೆಯುತ್ತಿದ್ದೆ. ಸಾರ್ಥಕ ದ ಹುಟ್ಟಿಗೆ ಕಾರಣಕರ್ತರು ಅವರು ಎಂದು ಟೀಕಿನಿಂದ ಹೇಳಿದವಳ ಮಾತಲ್ಲಿ ಆ ವ್ಯಕ್ತಿಯ ಬಗ್ಗೆ ಹೆಮ್ಮೆ ಇತ್ತು.


ಮಾಮ್ ಅವರ ಹೆಸರು ಎಂದು ತಕ್ಷಣ ಮತ್ತೊಬ್ಬ ಪ್ರಶ್ನಿಸಿದ.


ಸಾಂತ್ವನ್. ಹೆಸರಿಗೆ ತಕ್ಕಂತಹ ವ್ಯಕ್ತಿತ್ವ. ಎಲ್ಲರ ಕಷ್ಟ ನೋವುಗಳಿಗೆ ಸಾಂತ್ವಾನ ನೀಡಬಲ್ಲ ವ್ಯಕ್ತಿ. ಅವನೇ ಒಂದು ಶಕ್ತಿ ಎಂದು ಹೇಳಿದಳು. (ಅವಳ ಕಣ್ಣಲ್ಲಿನ ಹೊಳಪೇ ಹೇಳುತ್ತೆ ಅವನೆಡೆಗಿನ ಅವಳ ಗೌರವ)


ಮಾಮ್ ಒಂದು ಪರ್ಸನಲ್ ಕ್ವೆಶ್ಚನ್. ಅವರು ನಿಮಗೆ ಎನ್ ಆಗ್ಬೇಕು?? ಎಂದು ಮತ್ತೊಬ್ಬ ರಿಪೋರ್ಟರ್ ಕೇಳಿದ.


ಆ ರಿಪೋರ್ಟರ್ ಪ್ರಶ್ನೆಗೆ ತುಸು ಗಲಿಬಿಲಿಗೊಂಡ ಕೃತಿ ಹೆಚ್ಚು ಯೋಚಿಸದೇ ಸಾರ್ಥಕ ದ ಬೆನ್ನೆಲುಬು. ಎನ್ ಆಗ್ಬೇಕು ಅಂದ್ರೆ ಹೇಳೋದು ಸ್ವಲ್ಪ ಕಷ್ಟ. He's ಎವ್ರಿಥಿಂಗ್ ಫಾರ್ ಮಿ ಎಂದಳು.


ಅಂದ್ರೆ ಅರ್ಥ ಆಗ್ಲಿಲ್ಲ ಮಾಮ್ ಎಂದು ಮತ್ತದೇ ರಿಪೋರ್ಟರ್ ಗೊಂದಲದ ಮುಖ ಮಾಡಿ ಪ್ರಶ್ನಿಸಿದ.


ಇಷ್ಟೊತ್ತು ಸುಮ್ಮನಿದ್ದ ನೀತಾ ಮೀಡಿಯಾ ಅವರಿಗೆ ರೇಗಲು ಶುರು ಮಾಡಿದಳು. ನೋ ಮೋರ್ ಕ್ವೆಶ್ಚನ್ಸ್ ಪ್ಲೀಸ್. ವಯಕ್ತಿಕ ಪ್ರಶ್ನೆ ಕೇಳಬಾರದು ಎಂದು ನಿಮಗೆ ಮೊದಲೇ ತಿಳಿಸಿದ್ದೇವೆ. ಆದರೂ ನಿಮ್ಮೆಲ್ಲರ ಪ್ರಶ್ನೆಗೆ ಮೇಡಂ ತುಂಬಾ ತಾಳ್ಮೆಯಿಂದ ಉತ್ತರ ಕೊಡ್ತಾ ಇದ್ದಾರೆ. ಅದನ್ನ ನೀವುಗಳು ಯಾರು ದುರುಪಯೋಗ ಮಾಡಿಕೊಳ್ಳಲ್ಲ ಅನ್ಕೊಂಡಿದ್ದೀನಿ ಎಂದು ಒಂದು ಖಡಕ್ ವಾರ್ನಿಂಗ್ ಕೊಟ್ಟಳು.


ತಕ್ಷಣ ಒಬ್ಬ ರಿಪೋರ್ಟರ್ ಕ್ಷಮಿಸಿ ಮಾಮ್. ನಿವೊಬ್ರು ಸೆಲೆಬ್ರಿಟಿ. ಹಾಗಾಗಿ ವಯಕ್ತಿಕ ಪ್ರಶ್ನೆ ಕೇಳಿದೆ. ಸಾರಿ ಎಂದು ಕೃತಿಗೆ ಕ್ಷಮೆ ಯಾಚಿಸಿದ.


ಆ ರಿಪೋರ್ಟರ್ ಮಾತಿಗೆ, ಪರ್ವಾಗಿಲ್ಲ ಬಿಡಿ ಎಂದು ಒಂದು ನಗೆ ನಕ್ಕು ಸುಮ್ಮನಾದಳು ಕೃತಿ.


ಇಷ್ಟು ಹೊತ್ತು ಅವರೆಲ್ಲರ ಪ್ರಶ್ನೆಗಳಿಗೆ ಪಟ ಪಟ ಅಂತಾ ಕನ್ನಡದಲ್ಲೇ ಉತ್ತರ ಕೊಟ್ಟಳು ಕೃತಿ. ಅವಳ ಚೆಂದದ ಕನ್ನಡ ಮಾತು ಕೇಳಿ ಆಶ್ಚರ್ಯ ಪಟ್ಟ ಎಲ್ಲರೂ ಕಣ್ಣರಳಿಸಿ ಕೃತಿಯನ್ನೇ ನೋಡಿದರು. ಕುತೂಹಲ ತಡಿಯಲು ಆಗದ ರಿಪೋರ್ಟರ್ ಒಬ್ಬ ಮ್ಯಾಮ್ನಿ ಮ್ಗೆ ಇಷ್ಟು ಚಂದ ಕನ್ನಡ ಮಾತಾಡಲು ಹೇಗೆ ಸಾಧ್ಯ ಎಂದು ಕೇಳಿಯೇ ಬಿಟ್ಟ.


ಒಮ್ಮೆ ಎಲ್ಲರತ್ತ ನೋಡಿದ ಕೃತಿಗೆ ಅವರೆಲ್ಲರಿಗೂ ಆ ಪ್ರಶ್ನೆ ಕಾಡುತ್ತಿದ್ದದ್ದು ಅವರ ಕಣ್ಣಲ್ಲಿಯ ಕುತೂಹಲದಿಂದ ಅರಿವಾಗಿ, ನಕ್ಕು, ಬೇಸಿಕಲಿ ನಾವು ಕರ್ನಾಟಕದವರೇ. ನಾನು ಹುಟ್ಟಿ ಬೆಳೆದದ್ದು ಎಲ್ಲಾ ಮಲೆನಾಡಿನ ತಪ್ಪಲಲ್ಲಿ. ಓದಿದ್ದು ಬೆಂಗಳೂರಲ್ಲಿ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆಲವು ವರ್ಷ ಅಬ್ರಾಡ್ ಹೋಗಿದ್ದು, ಅಲ್ಲಿಂದ ಬಂದ ಮೇಲೆ ನಮ್ಮ ಸಾರ್ಥಕ ಜನ್ಮ ತಾಳಿದ್ದು. ಎಂದು ತನ್ನ ಭಾಷೆಯ ಹಿಂದಿನ ರಹಸ್ಯ ತಿಳಿಸಿದ್ದಳು.


'ನಮ್ಮವರೇ ಆಗಿ ಇಲ್ಲೇ ನಿವು ಏನಾದರು ಸಾಧನೆ ಮಾಡಬಹುದಿತ್ತು ಅಲ್ವಾ. ಮತ್ತೆ ಮುಂಬೈ ಕಡೆ ನಿಮ್ಮ ಪ್ರಯಾಣ? ಎಂದು ಮತ್ತೊಬ್ಬ ರಿಪೋರ್ಟರ್ ಪ್ರಶ್ನಿಸಿದ.


ಇಲ್ಲಿ ಅವಕಾಶಗಳ ಕೊರತೆ ಎಂದೇ ನಿಮ್ಮ ಅಭಿಪ್ರಾಯ?' ಎಂದು ತಕ್ಷಣ ಮತ್ತೊಬ್ಬ ರಿಪೋರ್ಟರ್ ಪ್ರಶ್ನಿಸಿದ.


'ಒಂದು ಕ್ಷಣ ಮೌನ ತಳೆದ ಕೃತಿ, ಕ್ಷಮಿಸಿ ನಾನು ಅವಕಾಶ ಹುಡುಕಿ ಮುಂಬೈ ಹೋದವಳು ಅಲ್ಲ. ನಮ್ಮ ಕಾರ್ಯ ಸಾಧನೆ ಎಲ್ಲಿ ಶುರು ಆಗುತ್ತೆ ಅನ್ನೊದಕ್ಕಿಂತ ಶುರು ಆದ ಕಾರ್ಯದ ಫಲಾಫಲ ಮುಖ್ಯ. ಮುಂಬೈ ಹೋಗಿದ್ದು ನಮ್ಮ ವಯಕ್ತಿಕ ಕಾರಣಗಳಿಂದ. ಹಾಗೇ ನಾವು ಎಲ್ಲೇ ಹೋದರೂ ನಮ್ಮ ಬೇರು ಇಲ್ಲಿಯದೆ. ಅದನ್ನ ನಾನು ಎಂದೂ ಮರೆತಿಲ್ಲ. ಅದಕ್ಕಾಗೇ ನನ್ನ ಮುಂದಿನ ಪ್ರಾಜೆಕ್ಟ್ ಈ ಊರಲ್ಲೇ ಶುರು ಮಾಡೋ ಆಸೆ ಹೊತ್ತು ಬಂದಿದ್ದೇನೆ. ನನಗೆ ನಿಮ್ಮ ಸಹಕಾರ ಖಂಡಿತ ಬೇಕು ' ಎಂದು ಕೈ ಮುಗಿದು ವಿನಂತಿಸಿದಳು.


ಅವಳ ಗತ್ತು, ಗಾಂಭೀರ್ಯ, ಮಾತಲ್ಲಿನ ನಾಜೂಕು, ಸರಳತೆ, ಅತೀ ಎನ್ನುವ ಮೇಕಪ್ ಇಲ್ಲದ ಸಹಜ ಸೌಂದರ್ಯ, ತುಂಬಿ ತುಳುಕುವ ವಿನಯ, ವಿಧೇಯತೆ, ವಯಸ್ಸಿಗೇ ಮೀರಿದ ಪ್ರಭುದ್ಧತೆ, ಸ್ವಲ್ಪವೂ ಅಹಂ ಇಲ್ಲದ ಸರಳ ಸಜ್ಜನಿಕೆ ಮೀಡಿಯಾ ಅವರಲ್ಲಿ ಅವಳ ಬಗೆಗಿನ ಗೌರವದ ಸ್ಥಾನವನ್ನು ಒಂದು ಪಟ್ಟು ಮೆಲಕ್ಕೇರಿಸಿತ್ತು.


ನಿಮ್ಮ ನ್ಯೂ ಪ್ರೊಜೆಕ್ಟ್ ಬಗ್ಗೆ ಮಾಹಿತಿ ತಿಳಿಯಬಹುದೇ ಎಂದು ಒಬ್ಬ ರಿಪೋರ್ಟರ್ ಕುತೂಹಲ ವ್ಯಕ್ತಪಡಿಸಿದ.


ಅದಕ್ಕೆ ಇನ್ನು ಕಾಲ ಕೂಡಿ ಬಂದಿಲ್ಲ. ಪ್ರೊಜೆಕ್ಟ್ finalize ಆದ ಕೂಡಲೇ ನಿಮಗೆ ಖಂಡಿತ ತಿಳಿಸುತ್ತೇನೆ. ದಯವಿಟ್ಟು ವ್ರಥಾ ಭಾವಿಸಬೇಡಿ ಎಂದು ವಿನಂತಿಸಿದಳು.


ಸರಿ ಮಾಮ್. ಹಾಗೆ ಆಗ್ಲಿ. ನಿಮ್ಮ ಹೊಸ ಪ್ರೊಜೆಕ್ಟ್ ಗೆ ನಮ್ಮೆಲ್ಲರ ಪರವಾಗಿ ಆಲ್ ದಿ ವೆರಿ ಬೆಸ್ಟ್ ಎಂದು ಒಕ್ಕೂರಲಿನಿಂದ ಹೇಳಿದರು.


ಥ್ಯಾಂಕ್ ಯು ಸೊ ಮಚ್ ಡಿಯರ್ಸ್ ಎಂದು ಚೆಂದದ ನಗು ಸೂಸುತ್ತ ಹೇಳಿದಳು ಕೃತಿ.


ಇವತ್ತು ನಮ್ಮ ಪ್ರೆಸ್ ಮೀಟ್ ಮುಗ್ಸೋಣ. ಮುಂದಿನ ಸಲ ಮತ್ತೆ ಮೀಟ್ ಆಗೋಣ ಬೈ. ಎಂದು ನೀತಾ ಎಲ್ಲರತ್ತ ನೋಡಿದಳು.


ಬೈ ಮಾಮ್. ಥ್ಯಾಂಕ್ ಯು ಫಾರ್ ಯುವರ್ ಕೋಆಪರೇಷನ್ ಎಂದು ಕೃತಿಗೆ ವಂದಿಸಿ ಹೊರಟರು.


ಅಲ್ಲಿಗೆ ಪ್ರೆಸ್ ಮೀಟ್ ಮುಗೀತು.


***********************

ಸಾಂತ್ವನ್ ಯಾರು? ಸಾಂತ್ವನ್ಗೂ ಸ್ವೀಕೃತಿಗೂ ಏನು ಸಂಬಂಧ? ಸ್ವೀಕೃತಿ ಕರ್ನಾಟಕದವಳೇ ಆದರೂ ಮುಂಬೈಗೆ ಹೋಗಿ ಬ್ಯುಸಿನೆಸ್ ಸ್ಟಾರ್ಟ್ ಮಾಡುವುದರ ಹಿಂದಿನ ಸತ್ಯಾಂಶ ಏನು?


ಮುಂದುವರೆಯುವುದು.....................


ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಏನಾದರೂ ತಪ್ಪಿದ್ದರೆ ತಿಳಿಸಿ. ತಿದ್ದಿಕೊಳ್ಳುವೆ. ಬರವಣಿಗೆಯಲ್ಲಿ ಅಂಬೆಗಾಲು ಇಡುತ್ತಿರುವ ಕೂಸು ನಾನು. ನಿಮ್ಮ ಪ್ರೋತ್ಸಾಹವೇ ನನಗೆ ನಡೆಯಲು ಚೈತನ್ಯ. ನಿಮ್ಮ ಅನಿಸಿಕೆ ಅಭಿಪ್ರಾಯಗಳ ನಿರೀಕ್ಷೆಯಲ್ಲಿ❤️




Rate this content
Log in

Similar kannada story from Romance