Ashwini Desai

Classics Inspirational Others

4  

Ashwini Desai

Classics Inspirational Others

ಸಿಹಿ ಕಹಿಗಳ ಸಮ್ಮಿಶ್ರಣ ಜೀವನ

ಸಿಹಿ ಕಹಿಗಳ ಸಮ್ಮಿಶ್ರಣ ಜೀವನ

2 mins
379


ಬದುಕಲ್ಲಿ ಸಿಹಿಯೇ ಬೇಕು ಎಂದರೆ ಅದು ಯಾವತ್ತಿಗೂ ಸಾಧ್ಯವಿಲ್ಲ. ಕಹಿ ಸಿಹಿಗಳ ಒಟ್ಟು ಹೂರಣವೇ ಬದುಕು. ಕಷ್ಟ ನೋವು ಬಂದಾಗ ಕುಗ್ಗದೆ, ಸಂತೋಷ ಖುಷಿಯ ಕ್ಷಣಗಳಿಗೆ ಹಿಗ್ಗದೇ ಬಂದದ್ದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿದಾಗ ಬಾಳು ಸುಂದರ ಹಾಗೂ ಸುಲಲಿತ.


ರೇಷ್ಮಾ ಕಡು ಬಡತನದಲ್ಲಿ ಬೆಳೆದ ಹೆಣ್ಣು. ಊಟಕ್ಕೆ ಇದ್ದರೆ ಬಟ್ಟೆಗೆ ಇಲ್ಲ ಎನ್ನುವ ಪರಿಸ್ಥಿತಿ. ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ತಂದೆ ತಾಯಿಯರಿಗೆ 5 ಹೆಣ್ಣು ಮಕ್ಕಳಲ್ಲಿ ರೇಷ್ಮಾ ಕೊನೆಯವಳು. 4 ಹೆಣ್ಣುಮಕ್ಕಳ ಮದುವೆ, ವರೋಪಚಾರ, ಅವರ ಬಾಣಂತನ, ಹೀಗೆ ಒಂದಾದ ಮೇಲೆ ಒಂದರಂತೆ ಮಾಡಿ ಮುಗಿಸುವಲ್ಲಿ ತಂದೆ ಹೈರಾಣಾಗಿ ಹೋಗಿದ್ದರು.


ದುಡಿಯಲು ಮೈಯಲ್ಲಿ ಶಕ್ತಿ ಇಲ್ಲ. ಮನದಲ್ಲಿ ಹುಮ್ಮಸ್ಸಿಲ್ಲ. ಬೆಳೆದ ಮಗಳು ಸೇರಗಲ್ಲಿ ಕೆಂಡದಂತೆ. ತಂದೆ ತಾಯಿಗೆ ಅವಳ ಜೀವನದ ಚಿಂತೆ. ಭವಿಷ್ಯದ ಯೋಚನೆ ಈಗ ಬಂದಿದೆ. ಹಿರಿ ಮಕ್ಕಳ ಬದುಕು ರೂಪಿಸುವಲ್ಲಿ ರೇಷ್ಮಾ ಬೆಳೆದುದರ ಅರಿವೇ ಅವರಿಗೆ ಇರಲಿಲ್ಲ.


ಬಡತನದ ಬೇಗೆಯಲ್ಲಿ ಅರಳಿದ ಸುಂದರ ಕುಸುಮ ರೇಷ್ಮಾ. ಬಿಸಿಲಿಗೆ ಮೈ ಚೆಲ್ಲಿ ತಂದೆಯ ದುಡಿಮೆಗೆ ಸಹಕರಿಸಿ ಮಗನ ಸ್ಥಾನ ತುಂಬಿ ದುಡಿಯುವ ರೇಷ್ಮಾ ಈಗ ತಂದೆಗೆ ಹೆಮ್ಮೆಯ ಮಗಳು. ಗಂಡು ಸಂತಾನ ಇಲ್ಲ ಎಂಬ ಕೊರಗು ನೀಗಿಸಿದ ಮಗಳು ತಂದೆಯ ಕಣ್ಣಿಗೆ ಮಗನಿಗಿಂತ ಹೆಚ್ಚು.


ಮೈಮೇಲೆ ಚಂದದ ಅರಿವೆ ಕಾಣದೇ ಎಂದೋ ಹಬ್ಬಕ್ಕೆ ತಂದಿದ್ದ ಲಂಗಾ ಬ್ಲೌಸ್ ಗೆ ತಾಯಿಯ ಹರಿದ ಸೀರೆಯ ತುಂಡು ತೇಪೆ ಹಾಕಿ ಹೊಲೆದು ಉಡುತ್ತಿದ್ದಳು.


ವಯಸ್ಸಾದ ತಂದೆಯ ಅನಾರೋಗ್ಯದ ಅನಿರೀಕ್ಷಿತ ಸಾವು ಅವಳನ್ನು ಮತ್ತಷ್ಟು ಹೈರಾಣಾಗಿಸಿತ್ತು. ಧೈರ್ಯಗೆಟ್ಟ ತಾಯಿಗೆ ಮನೋದೈರ್ಯ ತುಂಬಿ ಗಂಡು ದಿಕ್ಕಿಲ್ಲದ ಮನೆಗೆ ಗಂಡಸಾಗಿ ನಿಂತಳು.


ಊರ ಪಟೇಲರ ಮಗನೊಟ್ಟಿಗೆ ರಜೇಗೆಂದು ಊರಿಗೆ ಬಂದಿದ್ದ ಯಶಸ್ ರೇಷ್ಮಾಳನ್ನು ನೋಡಿ ಅವಳ ಸಹಜ ಸೌಂಧರ್ಯಕ್ಕೆ ಮನಸೋತು, ಅವಳ ಶ್ರಮದ ಜೀವನ ಕಂಡು ಮನ ಮರುಗಿತು.


ಊರಿಗೆ ಹಿಂತಿರುಗಿ ಹೋಗಿ ತನ್ನ ತಂದೆಯೊಂದಿಗೆ ಚರ್ಚಿಸಿ, ತಂದೆಯೊಟ್ಟಿಗೆ ಪಟೇಲರ ಮನೆ ಸೇರಿ ಮನದ ಇಂಗಿತ ತಿಳಿಸಿ ಅವರೊಟ್ಟಿಗೆ ರೇಷ್ಮಾಳ ಮನೆಗೆ ಹೋಗಿ ಅವಳ ತಾಯಿಯ ಮನವೊಲಿಸಿ ಅದೇ ಊರಿನ ದೇವರ ಸನ್ನಿದಾನದಲ್ಲಿ ಅವಳೊಂದಿಗೆ ವಿವಾಹವಾದನು.


ತಾಯಿ ಇಲ್ಲದ ಯಶಸ್ ರೇಷ್ಮಾ ತಾಯಿಯನ್ನು ತಾಮ್ಮೊಂದಿಗೆ ಕರೆದೊಯ್ಯುವ ಇಚ್ಛೆ ವ್ಯಕ್ತ ಪಡಿಸಿದಾಗ ಆ ತಾಯಿ ಮಗಳಿಬ್ಬರ ಕಣ್ಣಂಚು ಒದ್ದೆ ಆಯಿತು. ತಾಯಿ ಮಗಳ ಪಯಣ ಹೊಸ ಊರಿನತ್ತ ಹೊರಟಿತು.


ಯಶಸ್ ನ ಪ್ರೀತಿಯ ಮಡದಿಯಾಗಿ ಅವನ ತಂದೆಯ ಪ್ರೀತಿಯ ಸೊಸೆಯಾಗಿ, ಅಕಾಶ್ ಹಾಗೂ ಆದರ್ಶ್ ಗೆ ( ಯಶಸ್ ಹಾಗೂ ರೇಷ್ಮಾ ರ ಮುದ್ದಿನ ಮಕ್ಕಳು ) ಮುದ್ದಿನ ಮಮ್ಮಾ ಆಗಿ ಅವಳ ಬದುಕು ಇಂದು ಸಿಹಿಯ ಕಡಲು.


ಕಷ್ಟದಲ್ಲೇ ಬೆಳೆದವಳು ಒಂದೊತ್ತಿನ ಊಟಕ್ಕೂ ಹಲುಬುವವಳು ಇಂದು ಕೋಟಿಯ ಒಡತಿ. ಮನೆಯಲ್ಲಿ ಪ್ರತಿ ಕೆಲಸಕ್ಕೂ ಆಳು ಕಾಳು. ಗಂಡ ಮಕ್ಕಳ ಬೇಕು ಬೇಡ ನೋಡಿಕೊಳ್ಳುವುದೊಂದೇ ಅವಳ ಪ್ರಮುಖ ಕೆಲಸ. ಗಂಡನ ಇಚ್ಛೆ ಅರಿವ ಸತಿಯಾಗಿ ಮನೆಯ ಮಹಾಲಕ್ಷ್ಮಿಯಾಗಿ ಅವಳ ಬದುಕು ನಡೆಯುತ್ತಿದೆ. ಹುಟ್ಟಿದಂದಿನಿಂದ ಕಹಿಯನ್ನೇ ಉಂಡವಳ ಬದುಕಲ್ಲಿ ಇಂದು ಸಿಹಿಯೇ ತುಂಬಿಹುದು ಇದುವೇ ಜೀವನ ಕಹಿ ಸಿಹಿಗಳ ಸಮ್ಮಿಶ್ರಣ.. ಬೇವು ಬೆಲ್ಲದ ಸಮಾಗಮ....



Rate this content
Log in

Similar kannada story from Classics