Ashwini Desai

Drama Classics Inspirational

4  

Ashwini Desai

Drama Classics Inspirational

ಈ ಪಯಣ ನೂತನ

ಈ ಪಯಣ ನೂತನ

3 mins
412


ಯಾವಾಗಲೂ ಯಶ್ವಂತ್ ನ ನಿರ್ಭಾವ ಮುಖ ನೋಡಿ ನೋಡಿ ಬೇಸತ್ತ ಸಾರಿಕಾ ಇವತ್ತು ಮೊಟ್ಟ ಮೊದಲ ಬಾರಿಗೆ ಏನಾದರೂ ಆಗಲಿ ಯಶ್ವಂತ್ ಜೊತೆ ಮಾತಾಡಲೇ ಬೇಕು ಎಂದು ತೀರ್ಮಾನಿಸಿ, ಬೇಗ ಬೇಗ ಆಫೀಸಿನ ಕೆಲಸ ಮುಗಿಸಿ, ಯಶ್ವಂತ್ ಗೆ ಕಾಫೀ ಡೇ ಗೆ ಬರಲು ತಿಳಿಸಿ, ತಾನು ಅವನಿಗಾಗಿ ಕಾಯುತ್ತಾ ಕುಳಿತು, ಅವನೊಂದಿಗೆ ಏನೆಲ್ಲಾ ವಿಷಯ ಮಾತಾಡಬೇಕು? ಹೇಗೆ ಮಾತಾಡಬೇಕು? ಎಂದು ಒಂದು ದೊಡ್ಡ ಪಟ್ಟಿಯನ್ನೇ ಮನಸ್ಸಿನಲ್ಲಿ ಸಿದ್ದ ಪಡಿಸಿಕೊಂಡು ಯಶ್ವಂತ್ ಗಾಗೆ ಕಾಯ್ತಾ ಕುಳಿತಿರುತ್ತಾಳೆ. 


ಸಾರಿಕಾ ಒಂದು ಬಡ ಕುಟುಂಬದ ಹುಡುಗಿ. ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಒಂದು ಪುಟ್ಟ ಗ್ರಾಮದಲ್ಲಿ. ಇಬ್ಬರು ಅಕ್ಕಂದಿರು ಹಾಗೂ ಒಬ್ಬ ತಮ್ಮ. ಒಟ್ಟು 3 ಹೆಣ್ಣು ಹಾಗೂ 1 ಗಂಡು ಮಗುವಿನ ಪುಟ್ಟ ಸಂಸಾರ ಧನಂಜಯನದ್ದು. ( ಸಾರಿಕಾ ಅಪ್ಪ). ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಪ್ರೀತಿಗೆನೂ ಕೊರತೆ ಇರಲಿಲ್ಲ. ಬಡತನದ ಕಾರಣದಿಂದ ಹಿರಿಯರಾದ ಸಾರಿಕಾಳ ಅಕ್ಕಂದಿರು ಅಮೃತ ಹಾಗೂ ಸಮೃದ್ಧಿ ಓದಲು ಆಗಲಿಲ್ಲ. ಅವರು ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಚಿಕ್ಕವರಾಗಿದ್ದ ಕಾರಣ ಸಾರಿಕಾ ಹಾಗೂ ಆಕೆಯ ತಮ್ಮ ವೇದಾಂತ ಶಾಲೆಯ ಮೆಟ್ಟಿಲು ಹತ್ತಿದ್ದು.


ಸಾರಿಕಾ ಓದಿನಲ್ಲಿ ಬಹಳ ಚುರುಕು. ಆದರೆ ವೇದಾಂತನಿಗೆ ಓದು ತಲೆಗೆ ಹತ್ತಲೇ ಇಲ್ಲ. ಮಗನಿಗೆ ಎಷ್ಟು ಬುದ್ದಿ ಹೇಳಿದರೂ ಸರಿ ಹೋಗದಿದ್ದಾಗ ಧನಂಜಯ್ ಮಗನನ್ನು ಶಾಲೆ ಬಿಡಿಸಿ ತಮ್ಮೊಟ್ಟಿಗೆ ಗಾರೆ ಕೆಲಸಕ್ಕೆ ಕರೆದುಕೊಂಡು ಹೋದರು. ಸಾರಿಕಾ ತಂದೆ ತಾಯಿಗೆ ಯಾವುದೇ ಕಷ್ಟ ಕೊಡದೆ ಮೆರಿಟ್ ನಲ್ಲಿ ಪಾಸ್ ಆಗಿ ಸ್ಕಾಲ್ಲರ್ಷಿಪ್ ನಲ್ಲೇ ಓದಿ mba ಮುಗಿಸಿದಳು



ಮಗಳು ಓದಿ ಕೆಲಸಕ್ಕೆ ಸೇರಿದ ಮೇಲೆ ಧನಂಜಯ್ ಕುಟುಂಬ ಸ್ವಲ್ಪ ಸುಧಾರಿಸಿದೆ. ಗಂಡು ಮಗನಂತೆ ಮನೆಯ ಜವಾಬ್ದಾರಿಗಳನ್ನು ಎಲ್ಲ ತನ್ನ ಹೆಗಲ ಮೇಲೆ ಹೊತ್ತ ಸಾರಿಕಾ ತಾನೇ ಮುಂದೆ ನಿಂತು ಅಕ್ಕಂದಿರಿಬ್ಬರ ಮದುವೆ ಮಾಡಿ ಮುಗಿಸಿದಳು. ತಮ್ಮನಿಗೆ ಒಂದು ಸ್ವಂತ ಅಂಗಡಿ ಹಾಕಿ ಕೊಟ್ಟಳು. ಅವನ ದುಡಿಮೆ ಒಂದು ಹಂತ ತಲುಪಿದಾಗ ಅವನಿಗೂ ಒಂದು ಹುಡುಗಿ ಹುಡುಕಿ ಮದುವೆ ಮಾಡಿದಳು. 


ಇದರ ಮದ್ಯೆ ತಾಯಿಗೆ ಅನಾರೋಗ್ಯ ಬಂದು ತಾಯಿ ವಸುಂಧರೆ ಎಲ್ಲರನ್ನೂ ಅಗಲಿ ಹೋಗಿದ್ದರು. ತಂದೆಗೆ ಮಗಳ ಮೇಲೆ ಅಭಿಮಾನ ಗೌರವ ಹಾಗೇ ಪ್ರೀತಿ ಹೆಚ್ಚು. ಎಲ್ಲಾ ಜವಾಬ್ದಾರಿಗಳ ಮದ್ಯೆ ಸಾರಿಕಾಳಿಗೆ ತನ್ನ ವಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಇರಲಿಲ್ಲ. 


ಒಂದು ದಿನ ಧನಂಜಯ್ ತಾವೇ ಬಂದು ಮಗಳ ಬಳಿ ಅವಳ ಮುಂದಿನ ಭವಿಷ್ಯದ ಜೀವನ ಬಗ್ಗೆ ಚರ್ಚಿಸಿ, ಅವಳಿಗೆ ತಿಳಿ ಹೇಳಿದ್ದರು. ತಂದೆಯ ಮಾತು ಕೇಳಿ ಅವಳಲ್ಲಿ ಏನೋ ಒಂದು ಹೊಸ ಭಾವ ಮೂಡಿತು. 


4 ವರ್ಷದ ಹಿಂದೆ ತಾನು mba ಮುಗಿಸಿ ಕೆಲಸಕ್ಕೆ ಸೇರಿದಾಗ ಅಲ್ಲಿಯ ಸಹೋದ್ಯೋಗಿ ಆಗಿದ್ದ ಯಶ್ವಂತ್ ಸಾರೀಕಾಳ ಅಂದ ನೋಡಿ ಮೇಚಿದ್ದ. ಹಾಗೇ ಅವಳ ಬಳಿ ತನ್ನ ಪ್ರೇಮ ನಿವೇದನೆ ಕೂಡಾ ಮಾಡಿದ್ದ. ಆದರೆ ಸಾರಿಕಾ ಅದನ್ನು ನಯವಾಗಿಯೇ ತಿರಸ್ಕರಿಸಿ, ಅವನಿಗೆ ತನ್ನ ಜವಾಬ್ದಾರಿಗಳನ್ನು ವಿವರಿಸಿ ಹೋಗಿದ್ದಳು.


ಸಾರಿಕಾ ಳ ಮಾತು ಅವಳ ಪ್ರಬುದ್ಧತೆ ಕಂಡು ಅವನ ಮನ ಅವಳಿಗೆ ಮತ್ತಷ್ಟು ಸೋತಿತ್ತು. ತನ್ನ ಮನದಲ್ಲೇ ಪುಟ್ಟ ಗುಡಿ ಕಟ್ಟಿ ಅದರಲ್ಲಿ ತನ್ನ ಮನದನ್ನೆಯನ್ನು ಸ್ಥಾಪಿಸಿ, ಅವಳನ್ನು ಆರಾಧಿಸುತ್ತಿದ್ದ. ಆದರೆ ಮತ್ತೆಂದಿಗೂ ಅವಳ ಬಳಿ ತನ್ನ ಪ್ರೇಮ ನಿವೇದನೆ ಮಾಡಿರಲಿಲ್ಲ. ಸಂಸಾರದ ನೊಗ ಹೊತ್ತ ಸಾರಿಕಾ ಗೂ ಅತ್ತ ಕಡೆ ಗಮನ ಇರಲಿಲ್ಲ.


ಆದರೆ ನೆನ್ನೆ ಅವಳ ತಂದೆಯ ಮಾತು ಕೇಳಿ ಅವಳಲ್ಲಿ ಹೊಸ ಭಾವ ಮೂಡಿತ್ತು. ಅದನ್ನೇ ಯಶ್ವಂತ್ ನ ಬಳಿ ಮಾತನಾಡಲು ಇಂದು ತೀರ್ಮಾನಿಸಿದ್ದಳು.



ತನ್ನ ಮನದ ದೇವತೆ ಕರೆದಾಗ ಬರಲು ನಮ್ಮ ಯಶ್ವಂತ್ ನಿರಾಕರಿಸುತ್ತಾನ??


ತನ್ನವಳಿಗಾಗಿ ಗುಲಾಬಿ ಗುಚ್ಛ ಹಿಡಿದು ಕಾಫೀ ಡೇ ಪ್ರವೇಶಿಸಿದ. ಆದರೆ, ಅವಳು ಕರೆದ ಕಾರಣ ತಿಳಿಯದೇ ಮನದಲ್ಲೇ ಅಳುಕುತ್ತ ಅವಳ ಮುಂದೆ ಬಂದು ಕೂತ. ಕ್ಷಣಕಾಲ ಅವಳನ್ನೇ ನೋಡಿದ. 4 ವರ್ಷದ ನಂತರ ಅವಳನ್ನು ಹೀಗೆ ನೇರವಾಗಿ ನೋಡ್ತಾ ಇರೋದು. ಇಷ್ಟು ದಿನ ಅವಳ ಮುಂದೆ ಬರಲು ಧೈರ್ಯ ಸಾಲದೇ ಅವಳನ್ನು ನೋಡಲಾಗದೇ ಮರೆಯಲ್ಲಿ ನಿಂತು ಅವಳನ್ನು ನೋಡಿ ಖುಷಿ ಪಡ್ತಾ ಇದ್ದ



ಯೋಚನೆಯ ಸುಳಿಯಲ್ಲಿ ಕುಳಿತವಳಿಗೆ ಯಶ್ವಂತ್ ಬಂದ ಅರಿವೇ ಇರಲಿಲ್ಲ. ಕೊನೆಗೆ ಯಶ್ವಂತ್ ತಾನೇ ಮಾತಿಗಿಳಿದ. ಒಂದು ಕ್ಷಣ ಅವನ ಮುಖವನ್ನೇ ನೋಡುತ್ತಾ ಇದ್ದವಳಿಗೆ ತನಗರಿಯದೇ ತನ್ನ ಮನದಲ್ಲಿ ನವಿರಾದ ಅನುಭವ. ಏನೋ ಒಂದು ಸಂಚಲನ. ಅವಳ ಮುಖಭಾವವನ್ನು ತಿಳಿಯಲು ಯಶ್ವಂತ್ ಸೋತ.



ಸಾರಿಕಾ ತಾನೇ ಮಾತು ಆರಂಭಿಸಿ ತನಗಾಗಿ ಇಷ್ಟು ವರ್ಷ ಕಾದ ಯಶ್ವಂತ್ ಮುಂದೆ ತನ್ನ ನವಿರಾದ ಪ್ರೇಮ ನಿವೇದನೆ ಮಾಡಿದ್ದಳು. ಅವನಿಗೆ ಸ್ವರ್ಗಾನೆ ಅಂಗೈಯಲ್ಲಿ ಅನ್ನೋ ಅನುಭವ. ಹಲವು ವರ್ಷದ ಕಾಯುವಿಕೆಯ ನಂತರ ಒಂದಾದ ಜೋಡಿ ಜೀವಗಳು. ಅವರ ಖುಷಿಗೆ ರೆಕ್ಕೆಗಳ ಸಹಾಯವೇ ಇಲ್ಲದೇ, ಬಾನಂಚಿನಲ್ಲಿ ಹಾರಾಡಿದರು 


ಅವರ ಸ್ವಚ್ಛ್ರಂದ ಪ್ರೇಮಕ್ಕೆ ಇಂದು ಒಂದು ಹೊಸ ರೂಪ ಸಿಕ್ಕಿತ್ತು. ಸಾರಿಕಾ ಯಶ್ವಂತ್ ನ ಮದುವೆ ಯಾಗಿ ಅವನ ಬರಿದಾದ ಬಾಳಲ್ಲಿ ಹೊಸ ಚೇತನ ತುಂಬಲು ಅವನ ಮನ ಹಾಗೂ ಮನೆಯನ್ನು ಬೆಳಗಲು ಅವನ ಬಾಳಲ್ಲಿ ಬಲಗಾಲು ಇಟ್ಟು ಅವನ ಮನೆಗೆ ಗೃಹಪ್ರವೇಶ ಮಾಡಿದ್ದಳು. ಇಬ್ಬರಿಗೂ ಈ ಪಯಣ ನೂತನ. ಇಬ್ಬರಿಗೂ ಒಳ್ಳೆಯದಾಗಲಿ. ಅವರ ನವ ಜೀವನ ಸುಖವಾಗಿರಲಿ.. ನವ ಜೋಡಿಗೆ ಶುಭವಾಗಲಿ...


Rate this content
Log in

Similar kannada story from Drama