ಬಾಂಧವ್ಯ
ಬಾಂಧವ್ಯ
ಐಶೂ, ಶೃತಿ ಹಾಗೂ ಅನು ಮೂವರು ಆತ್ಮೀಯ ಸ್ನೇಹಿತೆಯರು. ಒಂದೇ ತಾಯಿ ಒಡಲಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ರೆ ಅವರ ಆತ್ಮೀಯತೆಯ ಆಳ ತಿಳಿದವರಿಗೆ ಮಾತ್ರ ಗೊತ್ತು. ಒಡಹುಟ್ಟಿದ ಅಕ್ಕ ತಂಗಿಯರು ಕೂಡಾ ತಾವು ಇವರಂತೆ ಇಲ್ಲವೆಂದು ಬೇಸರ ಪಡೋರು.
ಶೃತಿ ಒಂದು ಅಪಘಾತದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಐಶೂ ಹಾಗೂ ಅನು ಅವಳಿಗೆ ತಾಯಿಯ ನೆನಪು ಬಾರದಂತೆ ಅವಳು ನೊಂದುಕೊಳ್ಳದಂತೆ ತುಂಬಾ ಕಾಳಜಿ ಮಾಡುತ್ತಿದ್ದರು. ಕ್ರಮೇಣ ಎಲ್ಲರ ವಿದ್ಯಾಭ್ಯಾಸವೂ ಮುಗಿದು ಅನು ಮತ್ತು ಶೃತಿ ಮದುವೆ ನಿಶ್ಚಯವಾಗುತ್ತದೆ.
ಇಬ್ಬರ ಮದುವೆಯೂ ಒಂದೇ ವಾರಗಳ ಅಂತರದಲ್ಲಿ ನಿಶ್ಚಯವಾದ ಕಾರಣ ಶೃತಿ ಮದುವೆಗೆ ಅನು ಹಾಗೂ ಅನು ಮದುವೆಗೆ ಶೃತಿ ಪಾಲ್ಗೊಳ್ಳಲು ಸಾಧ್ಯವಾಗುವುದೇ ಇಲ್ಲ. ಸ್ನೇಹಿತೆಯರ ಎಲ್ಲಾ ಕಷ್ಟ ಸುಖ ದುಃಖಗಳಲ್ಲಿ ಒಬ್ಬರಿಗೊಬ್ಬರು ಯಾವಾಗಲೂ ಇರುತ್ತಿದ್ದ ಈ ಸ್ನೇಹಿತೆಯರು ತಮ್ಮ ಜೀವನದಲ್ಲಿ ಆಗುವ ಮಹತ್ತರ ತಿರುವಿಗೆ ಮಹತ್ತರ ಘಟ್ಟಕ್ಕೆ ತಾವು ಜೊತೆ ಇರಲು ಸಾಧ್ಯ ಆಗದ್ದನ್ನ ನೆನೆದು ಬೇಸರಿಸಿಕೊಳ್ಳುತ್ತಾರೆ.
ಇವರಿಬ್ಬರ ಮದುವೆಗೆ ಸಾಕ್ಷಿ ಆಗಿ ಇವರಿಗೆ ಇಬ್ಬರಿಗೂ ಜೋತೆಯಾದವಳು ಐಶೂ. ಅವಳಾದರೂ ಜೊತೆ ಇದಾಳೆ ಅನ್ನೋದೇ ಅವರಿಬ್ಬರಿಗೂ ಸಮಾಧಾನದ ವಿಷಯ.
ಅಂತೂ ಮದುವೆ ಮುಗಿದು ಇಬ್ಬರೂ ಸ್ನೇಹಿತೆಯರು ತಮ್ಮ ಹೊಸ ಮನೆಯ ಪ್ರವೇಶ ಮಾಡಿ ತಮ್ಮ ಹೊಸ ಜೀವನ ಶುರು ಮಾಡಿದರು. ಅವರ ಜೀವನ ಸುಖದ ಸುಪ್ಪತ್ತಿಗೆ ಅಲ್ಲದೇ ಇದ್ದರು ಸಾಮಾನ್ಯವಾಗಿ ನಡೆಯುತ್ತಿತ್ತು.
ಇತ್ತ ಐಶೂ ಇಬ್ಬರು ಸ್ನೇಹಿತೆಯರ ಮದುವೆ ಒಟ್ಟಿಗೆ ಮಾಡಿ ಕಳಿಸಿ ಅಕ್ಷರಶಃ ಒಬ್ಬಂಟಿ ಆಗಿದ್ದಳು. ತನ್ನ ಒಂಟಿತನ ಮರೆಯಲು ಒಂದು ಕಂಪನಿಯಲ್ಲಿ ಅಲ್ರಿಸಿಪ್ಷನ್ ಆಗಿ ಕೆಲಸಕ್ಕೆ ಸೇರಿದಳು. ಎಷ್ಟೇ ಬೀಡುವಿದ್ದರು ದಿನ ಆಗ್ದೆ ಇದ್ರು ವಾರಕ್ಕೊಮ್ಮೆ ಅಂತೂ ಗೆಳತಿಯರ ಮಾತು ಕತೆ ಗೆ ಕೊನೇನೆ ಇರ್ತಾ ಇರ್ಲಿಲ್ಲ.
ಐಶೂ ಗೆ ತಾನು ದಿನ ಓಡಾಡೋ ಬಸ್ ಕಂಡಕ್ಟರ್ ಒಬ್ಬನ ಪರಿಚಯ ಆಗುತ್ತೆ. ಪರಿಚಯ ಸ್ನೇಹವಾಗಲು ಬಹಳ ಸಮಯ ಹಿಡಿಯಲಿಲ್ಲ. ಕ್ರಮೇಣ ಅವರಿಬ್ಬರ ಮದ್ಯೆ ಪ್ರೀತಿ ಕೂಡಾ ಅಂಕುರಿಸಿತು. ಅದನ್ನ ಸ್ನೇಹಿತೆಯರ ಬಳಿ ಹೇಳಿಕೊಳ್ಳಲು ಏನೋ ಒಂದು ರೀತಿ ಮುಜುಗರ.
ಏಕೆಂದರೆ ಅವರು ಮೂರು ಜನ ಹೈಸ್ಕೂಲು ಮತ್ತು ಕಾಲೇಜ್ ನಲ್ಲಿ ತಮ್ಮ ಇತರೆ ಸ್ನೇಹಿತೆಯರು ಈ ಪ್ರೀತಿಯ ಜಾಲದಲ್ಲಿ ಬಿದ್ದು ಅಪ್ಪ ಅಮ್ಮನಿಗೆ ನೋವು ಕೊಟ್ಟಾಗಲೆ, ತಮ್ಮಲ್ಲಿ ಯಾರೊಬ್ಬರೂ ದೆ ಪ್ರೀತಿಯ ಜಾಲಕ್ಕೆ ಬೀಳಬಾರದು. ಮನೆಯವರ ಆಯ್ಕೆಯೇ ಅಂತಿಮ ಎಂದು ನಿರ್ಧರಿಸಿದ್ದರು. ಅದರಂತೆ ಅನು ಮತ್ತು ಶೃತಿ ಮದುವೆಯೂ ಆಯಿತು. ಆದರೆ ಇವಾಗ ಐಶೂ ಜೀವನದಲ್ಲಿ ಪ್ರೀತಿಯ ಸುಳಿ ಬಂದಾಗಿದೆ. ಅವಳಿಗೆ ಗೆಳತಿಯರೆಲ್ಲಿ ನೊಂದುಕೊಳ್ಳುವರೋ ಎಂಬ ಆತಂಕ.
ಒಂದೇ ಜೀವ ಮೂರು ದೇಹ ಅಂತಿದ್ದ ಇವರ ಮದ್ಯೆ ಮುಚ್ಚು ಮರೆ ಅಸಾದ್ಯ. ಅನು ಸ್ವಲ್ಪ ಸುಕ್ಷ್ಮ ಹುಡುಗಿ. ಅವಳಿಗೆ ಐಶುವಿನ ದ್ವ
ನಿ ಯ ಮೇಲೆ ಅವಳ ಮೇಲೆ ಅನುಮಾನ ಬಂದು ವಿಚಾರಿಸಿದಾಗ ಐಶೂ ಗೆ ಸತ್ಯ ಒಪ್ಪಿಕೊಳ್ಳದೇ ಬೇರೆ ದಾರಿ ಇಲ್ಲವಾಗಿ, ಸ್ನೇಹಿತೆಯರಿಗೆ ಎಲ್ಲವನ್ನೂ ವಿವರಿಸುತ್ತಾಳೆ.
ಐಶೂ ಇಷ್ಟ ಪಟ್ಟಿರೋದು ಒಬ್ಬ ಬಸ್ ಕಂಡಕ್ಟರ್ ಅಂತ ತಿಳಿದ ಮೇಲೆ ಅನುಗೆ ಇದು ಒಪ್ಪಿಗೆ ಬರಲ್ಲ. ದಿನಕ್ಕೆ ನಿನ್ನಂತ ಎಷ್ಟೋ ಹುಡುಗಿಯರ ಒಟ್ಟಿಗೆ ಬಸ್ ಅಲ್ಲಿ ಪ್ರಯಾಣ ಮಡ್ಬೇಕಾದವನು ನಿನ್ನೊಟ್ಟಿಗೆ ಪ್ರಮನಿಕನಾಗಿ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ, ಅವಳಿಂದ ಆ ಪ್ರಶ್ನೆಯನ್ನೇ ನಿರೀಕ್ಷಿಸದ ಐಶೂ ಗಾಭರಿ ಆಗುತ್ತಾಳೆ. ಆದರೂ ಸಾವರಿಸಿಕೊಂಡು ತನಗೆ ಅವನ ಮೇಲೆ ಸಂಪೂರ್ಣ ಒಪ್ಪಿಗೆ ಇರುವುದನ್ನು ಧೃಡವಾಗಿ ಸ್ನೇಹಿತೆಯರಿಗೆ ತಿಳಿಸುತ್ತಾಳೆ.
ತಮಗೆ ಇಷ್ಟ ಇಲ್ಲದೇ ಇದ್ದರೂ ತಮ್ಮ ಮದುವೆಯ ನಂತರ ಒಂಟಿತನ ಅನುಭವಿಸಿದ ಐಶುನ ಮನಸ್ತಿತಿ ಅರ್ಥ ಆಗಿ ತಾವೂ ಮದುವೆಗೆ ಒಪ್ಪುತ್ತಾರೆ. ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ಐಶೂ ಕೂಡಾ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾಳೆ.
ಎಲ್ಲರಿಗೂ ಒಂದೊಂದು ಮಗು ಆಗುತ್ತದೆ. ಎಲರೂ ಆರಾಮಾಗಿ ಇರುತ್ತಾರೆ. ಸ್ನೇಹಿತೆಯರ ವಾರಕ್ಕೊಮ್ಮೆ ಇದ್ದ ಮಾತು ಕತೆ ಈಗ ಮನೆಯ ಜಂಜಾಟದ ಮದ್ಯೆ ತಿಂಗಳಿಗೊಮ್ಮೆ ಆಗಿದೆ. ಇವರ ಗಂಡಂದಿರಿಗೆ ಕೂಡಾ ಇವರ ಸ್ನೇಹದ ಆಳದ ಅರಿವಿದ್ದ ಕಾರಣ ಅವರೂ ಏನೂ ಚಕಾರ ಎತ್ತುತ್ತಿರಲಿಲ್ಲ.
ಒಂದು ದಿನ ಐಶೂ ಗಂಡನ ನೋ ಇಂದ ಅನು ಗೆ ಮೆಸೇಜ್ ಒಂದು ಬರುತ್ತೆ. ಅನು ಇಟ್ಟಿದ್ದ ಸ್ಟೇಟಸ್ ಗೆ ರಿಪ್ಲೇ ಅದಾಗಿರುತ್ತೆ. ಸುಂದರಿ ಕಣೆ ನೀನು ಅನ್ನೋ ಮೆಸೇಜ್ ನೋಡಿ ಅನು ಗೆ ಮೈ ಎಲ್ಲಾ ಉರಿದು ಹೋಗುತ್ತೆ. ಆದರೂ ಕೋಪ ತೋರಿಸಿಕೊಳ್ಳದೆ ಥ್ಯಾಂಕ್ಸ್ ಅಣ್ಣ ಅಂತ ರಿಪ್ಲೇ ಮಾಡ್ತಾಳೆ. ತಕ್ಷಣ ಆ ಕಡೆ ಇಂದ ಅಣ್ಣ ಅಲ್ಲ ಅಂತ ಮತ್ತೆ ರಿಪ್ಲೇ ಬರುತ್ತೆ. ಈಗ ಅಂತೂ ಅನು ಕೋಪಕ್ಕೆ ಮಿತಿಯೇ ಇರಲ್ಲ.
ಚಿನ್ನದಂತಹ ಸ್ನೇಹಿತೆಯ ಜೀವನದಲ್ಲಿ ಇಂತಹ ದುಷ್ಟ ವ್ಯಕ್ತಿಯ ಜೊತೆಗಾತಿ. ತಿಳಿದರೆ ಹೇಗೆ ಸಹಿಸಿಯಾಳು ಎಂದು ಯೋಚಿಸುತ್ತಾ ಇವತ್ತು ಅವನ ಗ್ರಹಚಾರ ಬಿದಿಸುತ್ತಿನಿ. ಅಕ್ಕರೆ ಇಂದ ಅಣ್ಣ ಅಂತ ಕರೆದರೆ ಇವನಿಗೆ ಅದರ ಭಾಂದವ್ಯ ದ ಮೌಲ್ಯವೇ ಗೊತ್ತಿಲ್ಲ ಎಂದು ಅವನಿಗೆ ಬೈಯುತ್ತಾ ಮತ್ತೆ ಇನ್ನೇನು ಅಂತ ರಿಪ್ಲೇ ಮಾಡಿದವಳಿಗೆ ಆ ಕಡೆ ಇಂದ ಬಂದ ಪ್ರತ್ಯುತ್ತರ ಕಂಡು ಒಂದು ಕ್ಷಣ ನಡುಗಿಬಿಟ್ಟಳು.
ನಾನು ಕಣೆ ಐಶೂ ಎಂಬ ರಿಪ್ಲೈ ನೋಡಿ ತನ್ನ ದುಡುಕಿನಿಂದ ಆಗುವ ಅನಾಹುತದ ಅರಿವಾದವಳು ತಡ ಮಾಡದೆ ತನ್ನ ಅಣ್ಣ (ಐಶೂ ಗಂಡ,) ಹಾಗೂ ಐಶೂ ಬಳಿ ಕ್ಷಮೆ ಕೇಳುತ್ತಾಳೆ. ಇದ್ಯಾವುದರ ಅರಿವಿರದ ಆ ಗಂಡ ಹೆಂಡತಿ ಇವಳ್ಯಾಕೆ ತಮ್ಮಲ್ಲಿ ಕ್ಷಮೆ ಕೇಳುತ್ತಿದ್ದಾಳೆ ಎಂದು ಯೋಚಿಸಿ, ಕೇಳಿದರೆ, ಅನು ನೊಂದುಕೊಳ್ಳುವಳು ಎಂದು ಸುಮ್ಮನಾದರು
ತಾತ್ಪರ್ಯ::ನಮಗೆ ತಿಳಿದದ್ದೇ ಸತ್ಯ ಅಲ್ಲ. ಅನು ಒಂದು ಕ್ಷಣ ದುಡುಕಿನ ಕೈಗೆ ಬುದ್ಧಿ ಕೊಟ್ಟಿದ್ದರೆ, ಎಷ್ಟೋ ಮುಗ್ದ ಮನಸ್ಸುಗಳು ಒಡೆದು ಹೋಗುತ್ತಿದ್ದವು.