Ashwini Desai

Tragedy Classics Inspirational

4.5  

Ashwini Desai

Tragedy Classics Inspirational

ಪ್ರೀತಿ ಅಮರ

ಪ್ರೀತಿ ಅಮರ

4 mins
380


ನಾನು ನಿನ್ನನ್ನು ತುಂಬಾ ಅಂದ್ರೆ ತುಂಬಾ ಹಚ್ಕೊಂಡಿದ್ದೆ. ಆದ್ರೆ ನೀನು ಈ ರೀತಿ ಮಾಡ್ತೀಯ ಅಂಥ ನಾನು ಅಂದ್ಕೊಂಡಿರಲಿಲ್ಲ. ನೀನು ನನಗೆ ಮೋಸ ಮಾಡ್ಲಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ಪ್ರೀತಿನೂ ಮಾಡಲಿಲ್ಲ.


ನೀನು ಮಾಡಿರೋ ಸಹಾಯನ ನಾನು ಏನಂತ ವರ್ಣಿಸಲಿ, ಹೆಗಂಥ ಕೃತಜ್ಞತೆ ಸಲ್ಲಿಸಲಿ, ಯಾವ ರೀತಿ ಋಣ ತಿರಿಸಲಿ ಅನ್ನೋದೇ ನನಗೆ ತಿಳಿಯದ ಹಾಗೆ ಆಗಿದೆ. ನಿನ್ನ ಸಹಾಯಕ್ಕೆ ನಾನು ಚಿರಋಣಿ.


ನನಗ ತಂದೆ - ತಾಯಿ ಇಲ್ಲ, ನಾನೊಬ್ಬ ಅನಾಥೆ ಅಂತ ಹೇಳಿದಾಗ ನಿನ್ನ ಮನಸ್ಸಿಗೂ ತುಂಬಾ ನೋವಾಯಿತು ಅಂತ ಹೇಳಿದೆ. ನಾನು ಇರೋವರೆಗು ಇನ್ನೆಂದೂ ನೀನು ಅನಾಥಳಲ್ಲ. ನಿನ್ನ ಪಾಲಿಗೆ ನಾನು ಇದ್ದೇನೆ ಎಂದು ನನ್ನ ಕಣ್ಣೊರೆಸಿ, ಸಮಾಧಾನ ಮಾಡಿದ್ದೆ. ಆದರೆ ನೀ ಹೇಳಿದ ಮಾತನ್ನು ನೀನು ಉಳಿಸಿಕೊಂಡೆಯಾ?? 


ಕಾಲೇಜಿಗೆ ಸೇರೋಕೆ ದುಡ್ಡು ಇಲ್ಲ ಅಂದಾಗ ನೀನೇ ಅದರ ಜವಾಬ್ಧಾರಿ ತಗೊಂಡು, ನನ್ನ ಕಾಲೇಜ್ ಅಡ್ಮಿಷನ್ ಮಾಡಿಸಿದೆ ಅಷ್ಟೆ ಅಲ್ಲ, ಹಾಸ್ಟೆಲಿಗೆ ಸೇರಿಸಲು ನೀನೆ ಹಣ ತುಂಬಿದಿ. ಅವಾಗವಾಗ ನನ್ನ ಖರ್ಚಿಗೂ ಹಣ ಕೊಡ್ತಿದ್ದಿ. 


ನಾನು ನಿನಗೇನಾಗಬೇಕು, ಸಂಬಂಧಿನಾ, ಬಂದುವಾ ಅಥವಾ ನನ್ನ ಬಾಳನ್ನು ಹಂಚಿಕೊಳ್ಳುವವನಾ ಏನು? ಇದ್ಯಾವುದು ಅಲ್ಲ. ಆದರೆ ನನ್ನ ಮೇಲೆ ಏಕೆ ಇಷ್ಟೊಂದು ಅಕ್ಕರೆ, ಸ್ನೇಹ, ವಿಶ್ವಾಸ ನಿನಗೆ. ಅದು ನನಗೂ ತಿಳಿಯಲಿಲ್ಲಾ. ಹೀಗೆ ನಾನು ತುಂಬಾ ಸಾರಿ ಯೋಚಿಸಿದೆ. ಆದರೆ ಉತ್ತರ ಮಾತ್ರ ಶೂನ್ಯ.... ಹಿಂಗ ನಾನು 


ಕೆಲವು ಸಲ ನನ್ನ ಮನಸ್ಸಿನ ಮಾತು, ನನ್ನ ಭಾವನೆನ ನಿನ್ನ ಮುಂದ ಹೇಳಿಕೊಳ್ಳೋಣ ಅಂತಾ ತುಂಬಾ ಸಾರಿ ಪ್ರಯತ್ನವನ್ನು ಮಾಡಿದೆ ಆದರೆ ರಾತ್ರಿ ಎಲ್ಲಾ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿದ್ದು, ನೀನು ನನ್ನ ಕಣ್ಣ ಮುಂದೆ ಸುಳಿದಾಡಿದ ಕೂಡಲೇ ನನ್ನ ಹಿಂದಿನ ದಿನದ ಪ್ರಯತ್ನವೆಲ್ಲಾ ನೆಲ ಕಚ್ಚುತ್ತಿತ್ತು. ನಿನ್ನ ಮುಂದೆ ನಿಂತರೆ ಸಾಕು ನನಗೆ ಮಾತೇ ಹೊರಗೆ ಬರ್ತಾ ಇರಲಿಲ್ಲ. ಹೀಗಾಗಿ ನನ್ನ ಮನಸ್ಸಿನ ಮಾತು ಭಾವನೆ ನನ್ನಲ್ಲೇ ಮಾರೆಯಾಗಿ ಹೋದವು

ಕೊತೆತನಕ ನಿನ್ನಲ್ಲಿ ನನ್ನ ಭಾವನೆಗಳನ್ನು ಹೇಳದ ಹಾಗಾಯ್ತು.. ಈಗಲೂ ಅದು ಹಾಗೆ ಉಳಿದಿದೆ. ನನ್ನ ಬದುಕಿನ ಕೊನೆ ಕ್ಷಣದವರೆಗೂ ಅದು ಹಾಗೆ ಉಳಿಯುತ್ತೆ.


ಇವತ್ತು ನಾನು ಈ ಊರಿಗೆ ದೊಡ್ಡ ಡಾಕ್ಟರ್ ಆಗಿದಿನಿ. ಇದಕ್ಕೆಲ್ಲಾ ನೀನೇ ಕಾರಣಿಕರ್ತ. ನನ್ನೆಲ್ಲಾ ಸಾಧನೆಯ ಸ್ಪೂರ್ತಿ ನೀನೇ. ನನಗೆ ಪ್ರೋತ್ಸಾಹ ನೀಡಿ ನನ್ನಲ್ಲಿ ನೀನು ತುಂಬಿದ ದೈರ್ಯಗಳೆ ಕಾರಣ..


'ನೀನು ಒಂಟಿಯಲ್ಲಾ. ಅನಾಥೆ ಅಲ್ಲ. ನಿನ್ನ ಜೊತೆಗೆ ನಾನು ಇದೀನಿ ನೀನು ಧೈರ್ಯವಾಗಿರು' ಅಂಥಾ ನೀನು ನನಗೆ ಯಾವಾಗಲೂ ಹೇಳ್ತಾ ಇದ್ದೆ. ಆದ್ರೆ ಇವತ್ತು ಆ ಒಂಟಿತನ ನನ್ನ ಆವರಿಸಿದೆ. ಈ ಕೆಟ್ಟ ಪ್ರಪಂಚದಲ್ಲಿ ನೀನು ಮತ್ತೆ ನನ್ನ ಅನಾಥೆ ಮಾಡಿದೆ.. ನನ್ನ ಒಂಟಿಯಾಗಿ ಬಿಟ್ಟು ಹೋಗೋವಾಗ ನಿನಗೆ ಒಂದೇ ಒಂದು ಕ್ಷಣಕ್ಕೂ ನನ್ನ ನೆನಪೇ ಆಗಳಿಲ್ಲವಾ?? ಎಲ್ಲೇ ಆದ್ರೂ ನೀನು ಸುಖವಾಗಿ ಇದ್ರೆ ಸಾಕು. ನಿನ್ನ ಸುಖದಲ್ಲಿ ನನ್ನ ಸುಖ ಕಾಣುತ್ತಾ ದೂರದಲ್ಲಿ ನಿಂತೆ ನಿನ್ನ ನೋಡಿ ಖುಷಿ ಪಡೋಣ ಅಂದ್ರೆ ನೀನು ಅದಕ್ಕೂ ನನಗೆ ಅವಕಾಶ ಕೊಡದೆ ಹೋದೆ. ನಾನೆಷ್ಟು ದೌರ್ಭಾಗ್ಯಳು.


ನನ್ನನ್ನ ಒಂಟಿ ಮಾಡಿ ನೀನು ನನ್ನ ಬಿಟ್ಟು ಹೋಗಿ ಇವತ್ತಿಗೆ ಒಂದು ವರ್ಷ ಆಯ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀನೇ ನನ್ನ ಫಾರಿನ್ ಗೆ ಕಳಿಸಿದ್ದೆ. ಅವತ್ತು ನಾನು ಬಾರೋ ದಿನ. ಎಷ್ಟೋ ಯುಗ ಕಳೆದ ಮೇಲೆ ನಿನ್ನ ನೋಡ್ತಾ ಇದೀನಿ ಅನ್ನೋ ಫೀಲ್ ಅಲ್ಲಿ ತಾಯ್ನಾಡಿಗೆ ಬಂದೆ. ಆದ್ರೆ ನನ್ನ ಆಸೆ ನಿರಾಸೆ ಆಗೋಯ್ತು. ನಾನು ಎದುರು ನೋಡ್ತಾ ಇದ್ದ ಮುಖದ ದರುಶನ ನನಗೆ ಆಗ್ಲೇ ಇಲ್ಲ. ನಾನು ಬರ್ತಾ ಇರೋ ವಿಷಯ ನಿಂಗೆ ಗೊತ್ತಿದ್ದೂ ನೀನು ನನ್ನ ವೆಲ್ ಕಮ್ ಮಾಡೋಕೆ ಕಾತುರದಿಂದ ಕಾಯ್ತಾ ಇರೋದು ಬಿಟ್ಟು ಏರ್ಪೋರ್ಟ್ ಗೆ ಯಾಕೆ ಬಂದಿಲ್ಲ. ನಾನು ಅಂಕೊಂಡಿದ್ದು ಸುಳ್ಳಾ, ನೀನು ನನ್ ದಾರಿ ಎದುರು ನೋಡ್ತಾ ಇರ್ಲಿಲ್ವಾ, ಹಾಗಾದ್ರೆ ನನ್ನ ಮನಸ್ಸು ನನ್ನ ಹೃದಯ ನನಗೆ ಮೋಸ ಮಾಡಿತಾ ಅಂತೆಲ್ಲ ಯೋಚನೆ ಮಾಡ್ತಾ ಹೊರಗೆ ಬಂದೆ.


ಮೊದಲೇ ಅನಾಥೆ ಆದ ನನಗೆ ಈ ಭೂಮಿ ಮೇಲೆ ನಿನ್ನ ಬಿಟ್ರೆ ನನ್ನವರು ಅಂತ ಯಾರೂ ಇಲ್ಲ. ಅಂತದ್ರಲ್ಲಿ ಈ ಊರಲ್ಲಿ ಎಲ್ಲಿ ಹೋಗೋದು ಅಂತಾನೆ ತಿಳಿದೇ, ಸಪ್ತ ಸಾಗರ ದಾಟಿ ಬಂದವಳಿಗೆ ಏರ್ಪೋರ್ಟ್ ರೋಡ್ ದಾಟೋದು ಅಸಾದ್ಯ ಅನ್ನಿಸ್ತು. ಜಾತ್ರೇಲಿ ಕಳೆದ ಮಗು ಆಗಿದ್ದೆ ನಾನು. ಆದ್ರೂ ದೈರ್ಯ ಮಾಡ್ಕೊಂಡು ನಿನ್ನ ಮನೆ ದಾರೀನೆ ಹಿಡದೆ. ಅಲ್ಲಿ ನನಗೆ ಸ್ವಾಗತ ಕೋರಿದ್ದು ಬೀಗ ಜಡಿದ ಮನೆ ಬಾಗಿಲು. ಓನರ್ ಹತ್ರ ಕೇಳಿದ್ರೆ ಬೆಳಗ್ಗೆನೇ ಏರ್ಪೋರ್ಟ್ ಹೋಗ್ಬೇಕು ಅಂತ ಹೋಗಿದೀಯ ಅಂದ್ರು.


ನನ್ನ ನೀನು ಮರೆತಿಲ್ಲ ಅಂತ ಸ್ವಲ್ಪ ಸಮಾಧಾನ ಆಯ್ತು. ಬರೋವಾಗ ಟ್ರಾಫಿಕ್ ಇಂದ ತಡ ಆಯ್ತೇನೋ, ನಾನೇ ಕಾಯ್ದೆ, ಅವಸರ ಮಾಡಿ ಹೊರಟು ಬಂದೆ ಅಂತ ನನ್ನ ನಾ ಎಷ್ಟು ಶಪಿಸಿದೇನೋ. ಸಂಜೆ ವರೆಗೂ ಕಾದರೂ ನಿನ್ನ ಸುಳಿವಿಲ್ಲ. ಕರೆ ಮಾಡಿದರೆ ಸ್ವಿಚ್ ಆಫ್. ನಂಗೆ ನೀನಿರದೆ ಇಷ್ಟು ವರ್ಷ ಹೇಗೋ ಕಾದೆ. ಆದರೆ ಇವತ್ತು ಒಂದೊಂದು ಕ್ಷಣವೂ ಒಂದೊಂದು ಯುಗ. ರಾತ್ರಿ ಎಂಟು ಗಂಟೆ ಸುಮಾರಿಗೆ ನಿನ್ನ ಮೊಬೈಲ್ ಆನ್ ಆಗಿದೆ ಅಂತ ನೋಟಿಫಿಕೇಶನ್ ಬಂತು. ತಕ್ಷಣ ಕಾಲ್ ಮಾಡಿದೆ. ಆದ್ರೆ ಮಾತಾಡಿದ್ದು ನೀನಲ್ಲ. ಅವ್ರು ಎನ್ ಹೇಳ್ತಾ ಇದಾರೆ ಅನ್ನೋದು ನನಗೆ ಅರ್ಥ ಆಗ್ಲಿಲ್ಲ. ಅರ್ಥ ಆಗೋಕೆ ಮುಂದಿನ ಮಾತುಗಳು ಯಾವುವೂ ನನ್ನ ಕಿವಿಗೆ ತಾಕಿರಲಿಲ್ಲ. ಅವರ ಮೊದಲ ಮಾತು ಕೇಳೆ ನಾನು ಕುಸಿದು ಬಿದ್ದಿದ್ದೆ. ಕೈಲಿದ್ದ ಮೊಬೈಲ್ ಯಾವಾಗಲೋ ನೆಲ ಕಚ್ಚಿತು. 


ಅವರು ಹೇಳಿದ ವಿಳಾಸಕ್ಕೆ ಮನೆ ಓನರ್ ಜೊತೆಗೆ ಹೊರಟೆ. ಹಾದಿಯುದ್ದಕ್ಕೂ ಅವ್ಯಕ್ತ ಭಯ, ಏನೂ ಆಗದಿರಲಿ ಎಂದು ಅದೆಷ್ಟೋ ದೇವರಲ್ಲಿ ಮೊರೆ ಇಟ್ಟಿದ್ದೆ. ನಿನ್ನ ಮುಖ ನೋಡಲು ಆಕಾಶದಲ್ಲಿ ಹಾರಿ ಬಂದವಳಿಗೆ, ಈ ಬೆಂಗಳೂರಿನ ಟ್ರಾಫಿಕ್ ಅಲ್ಲಿ ಬರೋದು ತುಂಬಾ ಕಷ್ಟ ಆಯ್ತು. ಕಾರಣ ಯಾವಾಗ ನಿನ್ನ ಕಾಣತಿನೋ ಅನ್ನೋ ಆತುರ. ಅಂತೂ ನಮ್ಮ ಗಮ್ಯ ತಲುಪಿ ಓಡಿ ಒಳ ಬಂದೆ. ನಮ್ಮನ್ನು ಎದುರುಗೊಂಡದ್ದು ಇನ್ಸಪೆಕ್ಟರ್ ಧನಂಜಯ್. ನಾನು ಕರೆ ಮಾಡಿದಾಗ ಮಾತಾಡಿದ್ದು ಅವರೇ ಅಂತೆ.


ನಿನ್ನ ನಗು ಮುಖ ನೋಡಲು ಕಾತರಿಸಿದವಳಿಗೆ ಪೋಸ್ಟ್ ಮಾರ್ಟಂ ಆದ ಆಕ್ಸಿಡೆಂಟ್ ಇಂದ ರಕ್ತ ಸಿಕ್ತವಾದ ನಿನ್ನ ಮುಖ ನೋಡಲು ಭಯ ಆಯ್ತು. ನನ್ನ ದೈರ್ಯವೆ ನೀನು. ನೀನೇ ಇಲ್ಲ ಅಂದ ಮೇಲೆ ನನಗೆಲ್ಲಿಯ ದೈರ್ಯ. ಆವತ್ತು ಒಂದ್ ದಿನ ಆಕ್ಸಿಡೆಂಟ್ ಆಗಿ ನೀನು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಾ ಆಸ್ಪತ್ರೆಲಿ ಇದ್ದೆ. ಆಕ್ಸಿಡೆಂಟ್ ತೀವ್ರತೆ ಇಂದ ಅಲ್ಲೇ ನಿನ್ನ ಪ್ರಾನಾನೂ ಬಿಟ್ಟೆ. ನನಗಿನ್ನೂ ಆ ವಿಚಾರ ತಿಳಿದಿರಲಿಲ್ಲ. ಯಾಕಂದ್ರ ನಾನು ಆವಾಗ ನಿನ್ನ ಹತ್ರ ಇದ್ದಿರಲಿಲ್ಲ. ನನಗೆ ಈ ವಿಷಯವೇ ತಿಳಿದಿರಲಿಲ್ಲ. ಏರ್ಪೋರ್ಟ್ ಗೆ ಅಂತ ಹೊರಟ ನೀನು ಅವಸರದಲ್ಲಿ ಸಿಗ್ನಲ್ ಜಂಪ್ ಮಾಡಿ ಬಾರದ ಲೋಕಕ್ಕೆ ಹೊರಟು ಹೋದೆ. ಹಾಗಾಗಿ ಕೊನೆ ಗಳಿಗೆಯಲ್ಲೂ ನಿನ್ನ ಮುಖಾನೂ ನಾನು ನೋಡಾಕ ಆಗಲಿಲ್ಲಾ. ನಾನು ತುಂಬಾ ನತದ್ರುಷ್ಟಳು. ನಾನು ನಿನ್ನ ಮುಂದೆ ಎಲ್ಲ ವಿಷ್ಯಾನು ಹೇಳಬೇಕಿತ್ತು. ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ...


ಆದ್ರೆ ಏನು ಮಾಡ್ಲಿ, ಇವತ್ತು ನೀನು ನನ್ನ ಜೊತೆ ಇಲ್ದೆ ಒಬ್ಬಳೇ ನೋವು, ಸಂಕಟ, ವೇದನೆ ಅನುಭವಿಸ್ತಾ ಇದೀನಿ. ನೀನು ಇದ್ದಿದ್ರೆ ನಾನು ತುಂಬಾ ಸಂತೋಷ ಪಡ್ತಾ ಇದ್ದೆ ಈಗ ಆ ಸಂತೋಷನೂ ನಿನ್ನ ಜೊತೆಲೆ ಹೊರಟು ಹೊಗಿದೆ. ಈಗ ಮತ್ತೆ ಒಂಟಿತನ, ಅನಾಥ ಪ್ರಜ್ಞೆ ಮತ್ತೆ ನನ್ನ ಕಾಡ್ತಾ ಇದೆ.


ಮುಂದಿನ ಒಂದ್ ಜನ್ಮಾ ಇದ್ರೆ ಅದು ನಿನ್ನ ಜೋತೇನೆ ಬಾಳ್ತಿನಿ....


ಮುಕ್ತಾಯ...



Rate this content
Log in

Similar kannada story from Tragedy