BASAVARAJ ARABHANVI

Tragedy Inspirational

4.6  

BASAVARAJ ARABHANVI

Tragedy Inspirational

ರೇಷ್ಮೆಹುಳು ಕಲಿಸಿದೆ ಈ Quarantine

ರೇಷ್ಮೆಹುಳು ಕಲಿಸಿದೆ ಈ Quarantine

2 mins
273


ಮೊಟ್ಟೆ ಇಟ್ಟು ಮರಿ ಮಾಡಿ


ಗೂಡುಕಟ್ಟಿ ದಾರವ ನಿನದು


ದಾರದಿಂದಲೇ ಸೀರಿಯ ನೆನೆದು


ಮನುಷ್ಯನ ಮಾನ ಮುಚ್ಚುವೆ


ನೀ ಹೇಳು ಮಾನವ ಈ ಕ್ರಿಯೆ ನಿನಗಾಗಿಯೂ, ನಿನಗಾಗಿಯೇ.


ರೇಷ್ಮೆ ಹುಳು ತನ್ನ ಆತ್ಮ ಕ್ರಿಯೆಯನ್ನು ಎಲ್ಲರಿಗೂ ತೋರಿಸುವ ಆಸೆ. ತೋರ್ಪಡಿಸುತ್ತಾ ಮನುಷ್ಯನ ಮೇಲೆ ಧಿಕ್ಕಾರಕ್ಕ ಎಡೆಮಾಡಿದೆ.


ಎ ಮನುಷ್ಯನೇ ನಿನಗೇ ದಿಕ್ಕಾರ , ಎಲೆ ಮಾನವ ನಿನಗೆ ಧಿಕ್ಕಾರ.


ಎಂದು ಹೇಳುತ್ತಾ ಹುಳು. ಪ್ರಾಚೀನಕಾಲದಿಂದಲೂ ಪ್ರಸರಣ ಸುತ್ತಾ ಬರುತ್ತದೆ. ಆದರೆ ಆ ಮಾನವ ಯಾವುದಕ್ಕೂ ಎಡೆಮಾಡದೆ, ಪ್ರಸರಣಕ್ಕೆ ತಲೆ ಕೊಡದೆ ಮುನ್ನುಗ್ಗುತ್ತಾ ಇಲ್ಲಿವರೆಗೆ ಬಂದು ಹೋರಾಡುತ್ತಿದ್ದಾನೆ


ರೇಷ್ಮೆಹುಳು ತನ್ನನ್ನು ತಾನು ರಕ್ಷಣೆಗಾಗಿ ಹಲವಾರು ರೀತಿ ಕ್ರಿಯೆಗಳನ್ನು ಹೊಂದುತ್ತಾ ಬಂದಿದೆ. ಆದರೆ ಮಾನವ ತನ್ನ ಲಾಭಕ್ಕಾಗಿ ಹುಳವನ್ನು Quarantine ಎಂಬ ಹೆಸರಲ್ಲಿ ದಿಗ್ಬಂಧನಕ್ಕೆ ಒಳಗಾಯಿಸಿ ಖುಷಿ ಪಡುತ್ತಿದ್ದಾನೆ.

ಅರಣ್ಯ ಜೀವಿಯಾಗಿದ್ದ ಹುಳು ಡೊಮೆಸ್ಟಿಕ್ ಕೇಶನ್ (domestication) ಎಂಬ ಹೆಸರಿನಲ್ಲಿ ಮನುಷ್ಯ ಜೀವಿಯಾಗಿ ಮಾಡಿದ್ದಾನೆ.


ಆ ರೇಷ್ಮೆ ಹುಳು ಬೆಳೆಯಬೇಕಾದರೆ ಹಲವಾರು ರೀತಿಯಲ್ಲಿ ತನ್ನ ದೇಹವನ್ನು ಬದಲಾವಣೆ ಮಾಡುತ್ತಾ ಬರುತ್ತದೆ, ಪ್ರಾರಂಭದ ಹಂತದಲ್ಲಿ ಮೊಟ್ಟೆಯಿಂದ ಮರಿ ಮಾಡಲು ಬೇಕಾದ temperature ಮತ್ತು relative humidity ಕೊಟ್ಟು ‍ chowki ಮರಿ ಮಾಡುತ್ತಾನೆ, ಹಂತಹಂತವಾಗಿ ಬೇಕಾದಷ್ಟು ಆಹಾರವನ್ನು ಪೂರೈಸಿ larve ಮುಗಿಸುತ್ತಾ, ಗೂಡುಕಟ್ಟುವ ಹಂತಕ್ಕೆ ಬಂದೇ ಬಿಡುತ್ತೆ,

ಆದರೆ ಹುಳು Qurentine ಅಲ್ಲಿ ಇದ್ದಾಗ ಒಂದು ದಿನವೂ ಹೇಳಲಿಲ್ಲ, ನಾನು ಹೊರಗಡೆ ಹೋಗುತ್ತೇನೆ, ನಾನು ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ, ಸಿಗಲ್ಲ ವಸ್ತುವನ್ನು ಬಯಸುತ್ತೇನೆ, ಅಂತ. ಹಂತ ಹಂತವಾಗಿ ತನ್ನ ಕ್ರಿಯೆಯನ್ನು ಮುಗಿಸಿ ಸುಮಾರು ೧೫೦೦ ವರ್ಷಗಳಿಂದ ದಿಗ್ಬಂಧನ ದಲ್ಲಿದ್ದು ಪರಿಶ್ರಮ ಪಡುತ್ತಾ 48 ದಿನಗಳ ನಂತರ ನನ್ನ ಜೀವ ತ್ಯಾಗ ಮಾಡುತ್ತೆ.

ಎಲೆ ಮಾನವ ನೀನು ಮಾಡುತ್ತಿರುವುದು ಸರಿಯೇ!.

1500 ವರ್ಷಗಳಿಂದ ನನ್ನನ್ನು ದಿಗ್ಬಂಧನ ಒಳಗಾಯಿಸಿ ಬರುತ್ತಾ ಇದಿಯಾ, ಆದರೆ ನಿನ್ನ ರಕ್ಷಣೆಗೆ ನಿನ್ನನ್ನು ಬಂಧಿಸಿದಾಗ ಆಗದು ನಿನಗೆ.


ಕೂರೂನಾ ಮಹಾಮಾರಿ ಇಡೀ ಪ್ರಪಂಚವನ್ನೇ ಆಕ್ರಮಿಸಿ ಬಿಟ್ಟಿದೆ, ಚೀನಾದಲ್ಲಿ ಉಗಮವಾದ ಮಹಾಮಾರಿ ಇಡೀ ವಿಶ್ವವನ್ನೇ ಆವರಿಸಿ ಪ್ರಬಲಕಾರಿಯಾಗಿದೆ. ಅದರ ಪರಿಣಾಮ ಇಡೀ ವಿಶ್ವವೇ ತತ್ತರಿಸಿಹೋಗಿದೆ, ಅದರ ರೋಗ ಚಕ್ರ ಮುರಿಯಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡು, ಮಾನವರನ್ನು ಅದೇ Quarantine ಹೆಸರಲ್ಲಿ ದಿಗ್ಬಂಧನಕ್ಕೆ ಒಳಗಾಯಿಸಿ ಕಾವಲು ಕಾಯುತ್ತಿದೆ, ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ, ಸರ್ಕಾರ ಮುನ್ನೆಚ್ಚರಿಕೆಗಳುನ್ನು ಕೊಡುತ್ತಾ ಮುನ್ನುಗ್ಗುತ್ತಾ ಇದೆ,ಆದರೆ ಮಾನವ ಇದ್ಯಾವುದನ್ನು ಲೆಕ್ಕಿಸದೆ ತನ್ನ ಸಾರ್ಥಕತೆಯನ್ನು ಬೀರಲು ರೋಡಿಗೆ ಇಳಿಯುತ್ತಿದೆಯ್ಯಾ .

ಓ ಮಾನವ ನಿನಗೆ ಧಿಕ್ಕಾರ!, ದಿಕ್ಕಾರ!.

ನಿನ್ನ ರಕ್ಷಣೆಗೆ ಒಳಗೆ ಇರಲಾಗದು ನಿನಗೆ, ಆದರೆ ನನ್ನನ್ನು ಒಳಗೆ ಹಾಕಿ ಖುಷಿಪಟ್ಟಿದ್ದೇಯ್ಯಾ, ಆ ಬಂಧನದಲ್ಲಿ ನಾನು ಯಾವತ್ತು ನಿನಗೆ ಏನು ಬೇಕೆಂದು ಹೇಳಲಿಲ್ಲ ಆದರೆ ಈಗ ನಿನ್ನ WhatsApp status ನೋಡಲೂ ಆಗದು ನನಗೆ.

ಎಲೆ ಮಾನವ,ನಿನಗೆ ಇದು ಸರಿಯೆ?.

ನಾನು ಗೂಡು ಕಟ್ಟುವುದು ನೈಸರ್ಗಿಕ ಶತ್ರುವಿನಿಂದ ನನ್ನ ರಕ್ಷಣೆಗೆ ಹೊರತು, ನಿನ್ನ ಮಾನ ಮುಚ್ಚಲು ದಾರ ಕೊಡಲೆಂದ ಅಲ್ಲ, ಹೇ ಮನುಷ್ಯನೇ ನಿನ್ನ ರಕ್ಷಣೆಗೆ ಮೊದಲೇ ನೀನು Quarantine ಅಲ್ಲಿ ಇದ್ದಿದ್ದರೆ ನಿನ್ನ ನೈಸರ್ಗಿಕ ಶತ್ರು ಕೂರೂನಾ ಮಹಾಮಾರಿ ಇಂದ ತಪ್ಪಿಸಿಕೊಳ್ಳಲು ಸಾಮರ್ಥ್ಯ ಹೊಂದಿರುತ್ತದೆ. ಆದರೆ ಈ ಸ್ಥಿತಿ ಬರುತ್ತಿರಲಿಲ್ಲ ನಿನಗೆ.

" ಓ ಮನುಷ್ಯನೇ,ನಿನಗೆ ನಾ ಕಲಿಸಿದೆ ಈ Quarantine".



Rate this content
Log in

Similar kannada story from Tragedy