ಕತೆಯಲ್ಲ ಇದು ಜೀವನ
ಕತೆಯಲ್ಲ ಇದು ಜೀವನ
ದಾವಣಗೆರೆ ಜಿಲ್ಲೆಯಲ್ಲಿ ಬಹಳ ಹಿಂದೆ ಹತ್ತಿ ಗಿರಣಿ ಕೆಲಸಗಾರರಿಗಾಗಿಯೇ ತಲೆ ಎತ್ತಿದ್ದ ಒಂದು ಊರು. ವಿರುದಾ ನಗರ್. ಇದರ ಸಮೀಪವೇ ಆ ಕಾಲಕ್ಕೆ ತಮಿಳು ನಾಡಿನಿಂದ ಕೂಲಿಗಾಗಿ ಬಂದು ನಂತರದಲ್ಲಿ ದೊಡ್ಡ ಹತ್ತಿ ವ್ಯಾಪಾರಿಯಾದ ಕುಪ್ಪು ಸಾಮಿಯ ಹತ್ತಿಯ ದೊಡ್ಡ ಉಗ್ರಾಣ. ಹಿಂದೆಯೇ ಅವನ ಮನೆ. ಇವನದು ಹತ್ತಿಯನ್ನು ಬೇಲ್ ಮಾಡಿ ಬೇರೆ ಬೇರೆ ಊರುಗಳಿಗೆ ಕಳಿಸುವ ವಹಿ ವಾಟು. ಕುಪ್ಪುಸಾಮಿಗೆ ಮದುವೆಯಾಗಿ ಇಬ್ಬರು ಗಂಡು ಮಕ್ಕಳು. ಇಬ್ಬರು ಮಕ್ಕಳೂ ಅಂದಿನ ಮದರಾಸಿನಲ್ಲಿ ಕಾಲೇಜು ವ್ಯಾಸಂಗ ಮಾಡ್ತಾ ಇದ್ರು. ಗಟ್ಟಿ ಮುಟ್ಟಾಗಿದ್ದ ಕುಪ್ಪುಸಾಮಿಗೆ ಒಮ್ಮೆ ಕಾರಣವೇ ಇಲ್ಲದೆ ಎರಡೂ ಕಾಲುಗಳು ಭಯಂ ಕರ ನೋವು ಕಾಣಿಸಿಕೊಂಡು ನಡೆಯಲೂ ಸಹ ಒಬ್ಬರ ಸಹಾಯ ಪಡೆಯುವಂತಾಯ್ತು .ನಡೆಯ ಲಾಗದಷ್ಟು ಯಾತನೆ. ಎಲ್ಲ ರೀತಿಯ ಔಷಧೋಪ ಚಾರ ,ನಾಟಿ ಔಷಧಗಳೂ ಆಯ್ತು. ಪ್ರಯೋಜನ ವಾಗಲಿಲ್ಲ. ಜೊತೆಗೆ ಎರಡೂ ಕಾಲಿನಿಂದ ತಡೆಯ ಲಾಗದಷ್ಟು ದುರ್ವಾಸನೆ ಬೇರೆ. ಕುಪ್ಪುಸಾಮಿಯ ಹೆಂಡತಿ ರಾಧಮ್ಮ ಮೂಗಿಗೆ ಬಟ್ಟೆ ಕಟ್ಟಿ ಕೊಂಡೇ ಊಟ ತಿಂಡಿ ಕೊಡೋದು. ಕೋಣೆಯಲ್ಲಿ ಮಲಗಿ ಬಹಳ ಬೇಜಾರಾದರೆ ಹೊರಗೆ ಬರಲು ಮೊದಲೆ ಲ್ಲಾ ಸೋಂಟಕ್ಕೆ ಕೈ ಕೊಟ್ಟು ಸಹಾಯ ಮಾಡುತ್ತಿ ದ್ದವಳು ನಂತರದಲ್ಲಿ ತಮ್ಮ ಉಗ್ರಾಣದಲ್ಲಿ ಕೆಲಸ ಮಾಡುವ ಯಾರನ್ನಾದರೂ ಕರೆಯುತ್ತಿದ್ದಳು. ಪರೀಕ್ಷೆ ಮುಗಿದು ದೊಡ್ಡ ಮಗ ಮನೆಗೆ ಬಂದ. ತಂದಗೆ ಕಾಲು ನೋವು ಇರೋದು ಮಾತ್ರ ತಿಳಿ ದಿತ್ತೇ ಹೊರತು ಇಷ್ಟು ಉಲ್ಬಣವಾಗಿರೋದು ಗೊತ್ತಿರಲಿಲ್ಲ. ಮಗನನ್ನು ನೋಡಿ ಕಣ್ಣಲ್ಲಿ ನೀರು ಬಂತು. ಯಾವುದೋ ಎಣ್ಣೆ ಹಚ್ಚಿ ಬಿಳಿ ಬಟ್ಟೆ ಸು ತ್ತಿದ್ದಾರೆ. ಆ ಕೆಟ್ಟ ವಾಸನೆ ಆ ಎಣ್ಣೆಯದೇ ಇರ ಬಹುದು ಎಂದು ಅಪ್ಪನಿಗೆ ಹೇಳಿ ಸುಮ್ಮನಾ ದ .ಹೆಂಡತಿ ಮಗನಿಗೆ ತೊಂದರೆ ಬೇಡವೆಂದು ಒಂದು ದಿನ ಹಿಂದೆ ಇರುವ ಹತ್ತಿ ಉಗ್ರಾಣದಲ್ಲೇ ಮಂಚ ಹಾಕಿಸಿ ಕೊಂಡು ಅಲ್ಲಿಗೇ ಊಟ ತಿಂಡಿ ತಂದು ಕೊಡುವಂತೆ ಹೆಂಡತಿಗೆ ಹೇಳಿದ . ಅವ ಳಿಗೂ ಅದೇ ಬೇಕಾಗಿತ್ತು. ಕೆಲವು ದಿನಗಳ ನಂತರ ಅದನ್ನೂ ಯಾರಾದರೂ ಆಳುಗಳೇ ಮಾಡು ತ್ತಿದ್ದರು. ಕುಪ್ಪುಸಾಮಿ ಮಲಗಿರುವ ಸ್ಥಳದಿಂದ ಆಳುಗಳು ಕೆಲಸ ಮಾಡೋದನ್ನ ನೋಡ್ತಿದ್ದ. ಇವನು ಏನಾದರೂ ಹೇಳಿದರೆ ನಕ್ಕು ಹೊರಟು ಹೋಗುತ್ತಿದ್ದರೇ ಹೊರತು, ಯಜಮಾನ ಅಂತ ಮರ್ಯಾದೆ ಕೊಡುತ್ತಿರಲಿಲ್ಲ. ಇದರಿಂದಾಗಿ ಆಳುಗಳನ್ನ ಮಾತನಾಡಿಸುವುದನ್ನೂ ಬಿಟ್ಟ. ತಾನು ತಮಿಳು ನಾಡಿನಿಂದ ಬಂದು ಇಲ್ಲಿ ತನ್ನ ಹೆಂಡತಿ ಮಕ್ಕಳಿಗಾಗಿ ದುಡಿದು ಇಷ್ಟೆಲ್ಲಾ ಸಂಪಾ ದನೆ ಮಾಡಿದರೂ ಇಂದು ಅವರಿಂದಲೇ ದೂರ ವಾಗಿ ಇಂತಹ ಹೀನ ಸ್ಥಿತಿಯಲ್ಲಿ ಬದುಕ ಬೇಕಾ ಗಿರುವುದು ಯಾರಿಗೂ ಹೇಳಿಕೊಳ್ಳಲಾಗದ ಮನೋವ್ಯಥೆ. ಜೀವನವೇ ಬೇಸರ ವಾಗಿದ್ದ ಈ ಸಮಯದಲ್ಲಿ ಒಂದು ದಿನ ಬೆಳಗ್ಗೆ ಒಂದು ಹೆಂಗಸು ಇವನನ್ನು ನೋಡಲು ಬಂದಳು.ಅವಳಿಗೆ ಹತ್ತು ವರ್ಷಗಳ ಹಿಂದೆ ಬಹಳ ಕಷ್ಟದಲ್ಲಿದ್ದಾಗ ಕರೆದು ಕುಪ್ಪುಸಾಮಿ ಕೆಲಸ ಕೊಟ್ಟಿದ್ದ. ಆದರೆ ಯಾರನ್ನೋ ನಂಬಿ ಮೋಸ ಹೋಗಿ ಮತ್ತೆ ಅಲ್ಲಿ ಇಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವಾಗ , ಕುಪ್ಪುಸಾಮಿಯ ವಿಷಯ ಯಾರಿಂದಲೋ ತಿಳಿದು ತಕ್ಷಣ ನೋಡಲು ಬಂದಿದ್ದಾಳೆ. ಹೆದರ ಬೇಡಿ ಇದಕ್ಕೆ ಒಳ್ಳೆಯ ಔಷಧಿ ಇದೆ ಹೀಗೆಯೇ ಒಬ್ಬರಿಗೆ ಆಗಿದ್ದು ಆಮೇಲೆ ಸಂಪೂರ್ಣವಾಗಿ ಗುಣವಾಗಿರುವುದು ನಾನು ನೋಡಿದ್ದೇನೆ. ನಾಳೆ ಅವರನ್ನ ಇಲ್ಲಿಗೆ ಬರೋದಕ್ಕೆ ಹೇಳ್ತೀನಿ ಅಂದಾಗ ಕುಪ್ಪುಸಾಮಿಗೆ ಸಣ್ಣ ಆಸೆ ಚಿಗುರೊಡೆಯಿತು.
ಮಾರನೇ ದಿನ ಅವಳು ಹೇಳಿದಂತೆ ಒಬ್ಬ ಹೆಂಗ ಸಿನ ಜೊತೆ ಬಂದಳು. ಆ ಹೆಂಗಸು ಮಲಗಿದ್ದವನ ನ್ನ ತಲೆಯಿಂದ ಕಾಲಿನವರೆಗೂ ನೋಡಿ ಲುಂಗಿ ಯನ್ನ ಮೇಲಕ್ಕೆ ಸರಿಸಿ ಕಾಲುಗಳಿಗೆ ಸುತ್ತಿದ್ದ ಕೊಳ ಕು ಬಟ್ಟೆ ತೆಗೆದು ಬಿಸಾಡಿ .ಇಬ್ಬರೂ ಸೇರಿ ಕಷ್ಟ ಪಟ್ಟು ಬಿಸಿಲಲ್ಲಿ ಕರೆದು ತಂದು ಕೂಡಿಸಿದರು. ಅವನಿಗೆ ಬಿಸಿಲಿಗೆ ಬಂದು ಕೂತದ್ದು ಬಹಳ ಹಿತ ವಾಗಿತ್ತು. ಸುಮಾರು ಒಂದು ಗಂಟೆ ಆದಮೇಲೆ
ಮನೆಯಿಂದ ಯಾರೋ ತಂದಿಟ್ಟ ತಿಂಡಿ ತಾನೇ ತಿನಿಸಿ , ಟೀ ಕುಡಿಸಿ ಒಳಗೆ ಕರೆದು ತಂದು ಮಲ ಗಿಸಿ ಅವಳು ತಂದಿದ್ದ ಕೊಬರಿ ಎಣ್ಣೆ ಎರಡು ಕಾಲಿಗೂ ಹಚ್ಚಿ , ಅಯ್ಯಾ ಒಂದು ತಿಂಗಳಲ್ಲಿ ನೀವು ಮೊದಲಿನಂತೆ ನಡಯುವ ಹಾಗೆ ಮಾಡಿದರೆ ನನಗೆ ಏನು ಕೊಡ್ತೀರಿ ಅಂದಾಗ, ನೀನು ಏನು ಕೇಳಿದರೂ ಕೊಡ್ತೀನಿ ಅಂದ. ನನಗೇ ನೂ ಬೇಡಯ್ಯ ,ಇವಳು ಮೊದಲು ನಿಮ್ಮ ಹತ್ತಿರ ಕೆಲಸ ಮಾಡ್ತಾ ಇದ್ದಳು. ಈಗ ಎಲ್ಲೂ ಕೆಲಸ ಇಲ್ಲದೆ ,ಮನೆ ಕೆಲಸ ಮಾಡಿ ಕೊಂಡಿದಾಳೆ. ಇಲ್ಲೇ ಒಂದು ಕೆಲಸ ಕೊಡಿ ಅಯ್ಯ ಅಂದಳು. ಆಯ್ತು ಅಂದ.ನಾಳೆ ಬರ್ತೀನಿ ಅಂತ ಇಬ್ಬರೂ ಹೊರಟು ಹೋದರು. ಮಾರನೆಯ ದಿನ ತಾನು ಒಬ್ಬಳೇ ಬಂದಳು. ಬಂದವಳೇ ಬಹಳ ಆತ್ಮೀಯ ಮಾತ ನಾಡಿಸುತ್ತ ತಾನು ತಂದಿದ್ದ ಯಾವುದೋ ಸೊಪ್ಪಿನ ರಸವನ್ನು ನಿಧಾನವಾಗಿ ಬೆರಳಲ್ಲಿ ಹಚ್ಚಲು ನೋಡಿ ದಳು .ಅವನಿಗೆ ಮುಟ್ಟಿ ದರೆ ನೋವು. ಹೊರಗೆ ಹೋಗಿ ಕೆಲವು ಕೋಳಿ ಪುಕ್ಕಗಳನ್ನು ತಂದು ಅದ ರಲ್ಲಿ ಹಚ್ಚಿದಳು. ಎರಡು ಕಾಲುಗಳನ್ನು ಅವಳಿ ಮಕ್ಕಳುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಸುತ್ತಿ ದ್ದಂತೆ ಅವಳಿಗೆ ಭಾಸವಾಯ್ತು . ಕುಪ್ಪುಸಾಮಿ ಕಣ್ಣಲ್ಲಿ ಧಾರಾಕಾರ ನೀರು. ವಾಸನೆ ಅಂತ ಅಸ ಹ್ಯದಿಂದ , ನೋಡಲು ಸಹಾ ಬರದ ಹೆಂಡತಿ ಮಕ್ಕಳು ನೆನಪಾಗಿ ಹಾಗೇ ಇವಳ ಮುಖವನ್ನೇ ನೋಡುತ್ತಿದ್ದ. ಅಯ್ಯ ಏನಾಯ್ತು ಅಂದಳು ಉತ್ತರ ಇಲ್ಲದೆ ಮತ್ತೆ ಕಣ್ಣೀರು. ಬಗ್ಗಿ ಸೀರೆ ಸೆರಗಿನ ಅಂಚಿನಿಂದ ಕಣ್ಣೀರನ್ನು ಒರೆಸಿದಳು.
ಒಂದು ವಾರ ಹೀಗೆ ಪ್ರತಿದಿನ ಎಣ್ಣೆ ಹಚ್ಚಿ ಒಂದು ಗಂಟೆ ಬಿಸಿಲಲ್ಲಿ ಕೂಡಿಸೋದು ಮಾಡ್ತಿದ್ದಾಗ ಒಂ ದು ದಿನ ಹೆಂಡತಿ ರಾಧಮ್ಮ ಮಗನನ್ನು ಕರೆದು ಕಿಟಕಿ ಮೂಲಕ ತೋರಿಸಿ ಏನಾದರೂ ಗುಣ ವಾಗೋ ಲಕ್ಷಣ ಇದಯಾ ನೋಡು , ಅವನೇ ನಿಂತು ಕೊಳೋಕೆ ಪ್ರಯತ್ನ ಮಾಡುವ ಹಾಗಿದೆ ಅಂದಾಗ , ನೋ ಚಾನ್ಸ್ ಅಂತ ಹೇಳಿ ಹೊರಟು ಹೋದ ಮಗ. ಕುಪ್ಪುಸಾಮಿ ಇದುವರೆಗೂ ಆ ಹೆಂಗಸಿನ ಬಗ್ಗೆ ಕೇಳಿರಲಿಲ್ಲ .ಹೆಸರು ಮಾತ್ರ ಬಾ ಯಮ್ಮ ಅಂತ ಗೊತ್ತು .ಬಿಸಿಲಿನಲ್ಲಿ ಕೂತಿದ್ದಾಗ ಬಾಯಮ್ಮ ನಿಂದು ಯಾವೂರು ನಿನ್ನ ಹೆಸರು ನೋಡಿದರೆ ನೀವು ಮರಾಠಿಗಳು ಅಂತ ಕಾಣತ್ತೆ
ಅಂದಾಗ , ನೀವು ಹೇಳಿದ್ದು ಸರಿ . ನನ್ನಕತೆ ಏನು ಹೇಳೋದು . ನನ್ನ ತಂಗಿ ಹಾಗೆ ,.(ನಿನ್ನ ತಂಗಿ ಅಂ ದರೆ ಯಾರು . ನೆನ್ನ ನನ್ನ ಕರೆದುಕೊಂಡು ಬಂ ದೋಳು ,ನಿಮ್ಮ ಹತ್ತಿರ ಮೊದಲು ಕೆಲಸಕ್ಕೆ ಇದ್ದೋಳು )ನಾನೂ ಒಬ್ಬನನ್ನು ನಂಬಿ ಮೋಸ ಹೋದೆ. ನನ್ನ ಹೊಟ್ಟೆಯಲ್ಲಿ ಆರು ತಿಂಗಳ ಮಗು ಇದ್ದಾಗ ಅವನು ನಾಪತ್ತೆ ಆದ. ನನಗೆ ಮಗು ಬೇಕಿರಲಿಲ್ಲ ಆದರೂ ತಾಯಿ ಆಗಬೇಕಾಯ್ತು. ಒಂದು ದಿನ ರಾತ್ರಿ ನೋವು ತಡೆಯಲಾಗದೆ ನಾನೇ ಆ ರಾತ್ರಿ ನಮ್ಮೂರು , ಅಂದರೆ ತುಮ ಕೂರು ಸರ್ಕಾರಿ ಆಸ್ಪತ್ರೆಗೆ ಬಂದೆ. ತಡೆಯಲಾಗದ ಛಳಿ ಮೈ ನಡುಕ. ಮಧ್ಯ ರಾತ್ರಿ .ತಲೆ ಸುತ್ತಿ ಬಿದ್ದಿದ್ದು ಮಾತ್ರ ನೆನಪಿದೆ ಅಷ್ಟೇ.ಬೆಳಗ್ಗೆ ಎಚ್ಚರ ಆದಾಗ ಬೆಡ್ ಖಾಲಿ ಇಲ್ಲ ಅಂತ ಕೆಳಗೆ ಚಾಪೆ ಮೇಲೆ ಮಲಗಿಸಿದ್ದಾರೆ. ಪಕ್ಕದಲ್ಲಿ ನನ್ನ ಹಾಗೆ ಒಂದು ಹಳ್ಳಿ ಹೆಂಗಸು ಮಲಗಿದ್ದಳು .ಅವಳೇ ಹೇಳಿದ್ದು ನಿನಗೆ ಗಂಡು ಮಗು. ನೋಡೋಕೆ ಮುದ್ದಾಗಿತ್ತು ಆದರೆ ಪಾಪ ಹೆಸರಿಗೆ ಮಾತ್ರ ಹುಟ್ಟಿದೆ ಅಂತ, ಆದರೆ ಅದು ಸತ್ತೇ ಹುಟ್ಟಿ ದ್ದು .ಅಷ್ಟು ಹೊತ್ತಿಗೆ ಒಬ್ಬ ಮಗುವನ್ನ ನನಗೆ ತೋರಿಸಲು ತಂದು ದೂರದಿಂದಲೇ ನೋಡು ಅಂತ ಹೇಳಿ ಮುಟ್ಟಲೂ ಸಹಾ ಬಿಡಲಿಲ್ಲ. ಐದು ರೂಪಾಯಿ ಕೇಳಿದ ಏಕೆ ಮಗೂನ ಮುಟ್ಟಕ್ಕಾ ಅಂದ್ರೆ , ಇಲ್ಲ ಮಣ್ಣು ಮಾಡಕ್ಕೆ ಅಂದ. ನನ್ನ ಹತ್ತಿರ ಇರಲಿಲ್ಲ. ಅಲ್ಲೇ ಬಿದ್ದಿದ್ದ ಹರಕಲು ಈಚಲ ಚಾಪೆಯಲ್ಲಿ ಸುತ್ತಿ ತೊಗೊಂಡು ಹೋದ. ಕಿಟಕಿ ಇಂದಲೇ ನೋಡ್ತಾ ಇದ್ದೆ . ಆ ಪಾಪಿ ನನ್ನ ಕಂದಮ್ಮನನ್ನ ಕಸದ ತೊಟ್ಟಿಗೆ ಹಾಕಿ ಹೋದ. ಕೈಲಾಗದಿದ್ದರೂ ಕಷ್ಟಪಟ್ಟು ಓಡಿದೆ . ಅಷ್ಟರಲ್ಲಿ ಎಲ್ಲಿತ್ತೋ ಹತ್ತು ಹದಿನೈದು ಬೀದಿ ನಾಯಿಗಳು ಬಂದು ಬಿಟ್ಟವು. ಕಲ್ಲು ಹುಡುಕಿ ಅದಕ್ಕೆ ಎಸೆದು ಓಡಿಸಲು ನೋಡಿದೆ ,ನನಗೆ ಅಡ್ಡವಾಗಿ ಒಂದು ಲಾರಿ ಬಂದು ಬಿಟ್ಟು ಏನೂ ಕಾಣದಾಯ್ತು. ಲಾರಿ ಹೋದಮೇಲೆ ನೋಡಿದರೆ ತೊಟ್ಟಿಯಲ್ಲಿ ಮಗು ಇಲ್ಲ. ದೂರದಲ್ಲಿ ನಾಯಿಗಳಿಗೆ ಆಹಾರ ಆಗಿ ಹೋಗಿತ್ತು. ದುಃಖದಿಂದ ಹೋದರೆ ಹೋಗಲಿ ಅಂತ ಬಂದೆ. ಈ ನಾಟಿ ಔಷಧಿ ಮಾಡೋದು ನನ್ನ ತಂದೆಯಿಂದ ಕಲಿತೆ. ಅವರು ಸಿದ್ಧರ ಬೆಟ್ಟಕ್ಕೆ ಹೋಗಿ ಗಿಡ ಮೂಲಿಕೆಗಳನ್ನು ತಂದು ಔಷಧಿ ಮಾಡ್ತಾ ಇದ್ದುದನ್ನ ನೋಡಿ ಕಲಿತೆ. ಈಗ ಅದೇ ನನಗೆ ಊಟಕ್ಕೆ ದಾರಿ ಆಯಿತು ಅಂದಳು.
ಹದಿನೈದು ದಿನ ಕಳೆದಿದೆ. ಈಗ ಒಬ್ಬರ ಸಹಾಯ ಇಲ್ಲದೆ ತಾನೇ ನಿಂತು ಕೊಳ್ಳಲು ಪ್ರಯತ್ನ ಮಾಡ್ತಿ ದಾನೆ .ಇವರ ಮನೆ ಊಟದ ಬದಲು ಬಾಯಮ್ಮ ನ ಮನೆ ಊಟ. ವಾರಕ್ಕೆ ಎರಡು ದಿನ ಅವನ ಇಷ್ಟದ ಮಾಂಸದ ಊಟ. ಇವನ ಹತ್ತಿರ ಬರದೇ ದೂರದಿಂದ ನೋಡುತ್ತಿದ್ದ ಕೆಲಸದ ಆಳುಗಳು ಹತ್ತಿರ ಕೂತು ಮಾತನಾಡಿಸುತ್ತಿದ್ದಾರೆ .ಇವನಿಗೂ ಏನೋ ಒಂದು ಉತ್ಸಾಹ. ಸಣ್ಣ ಪುಟ್ಟ ಸಹಾಯ ಮಾಡಿದವರಿಗೆಲ್ಲಾ ಅವನ ತಲೆ ಕೆಳಗೆ ಇಟ್ಟು ಕೊಂಡಿದ್ದ ಕಾಸು ಕೊಡುತ್ತಿದ್ದಾನೆ .ಎರಡು ದಿನ ಬಾಯಮ್ಮ ಬರಲಿಲ್ಲ. ಅವಳ ಮನೆ ಎಲ್ಲಿ ಅಂತ ಯಾರಿಗೂ ಗೊತ್ತಿಲ್ಲ. ಅವಳ ತಂಗಿ ಸಹಾ ಬಹಳ ದಿನದಿಂದ ಕಂಡಿಲ್ಲ. ಹೀಗೆ ಒಂದು ವಾರ ಕಳೆದರೂ ಬಾಯಮ್ಮ ಮಾತ್ರ ಪತ್ತೆ ಇಲ್ಲ. ಹೆಂಡತಿ ಮಗನಿಗೆ ಹೇಳಿದರೆ ಅವರು ಹುಡುಕ ಬಹುದು ಅನ್ನೋ ಆಸೆಯಿಂದ ಮನೆ ಕಡೆ ಕಷ್ಟ ಪಟ್ಟು ಬರುವಾಗ ರಾತ್ರಿ ಹತ್ತು ಗಂಟೆ. ಬಾಗಿಲು ಹಾಕಿತ್ತು. ಕಿಟಕಿಯ ಹತ್ತಿರ ಬಂದು ಕೂಗಿದ. ಯಾರೂ ಉತ್ತರಿಸಲಿಲ್ಲ. ನಾಳೆ ಹೇಳೋಣ ಅಂತ ವಾಪಸ್ ಬರೋವಾಗ ದೀಪಗಳು ಆರಿಹೋಗಿ ಎಲ್ಲಾ ಕಡೆಯೂ ಕತ್ತಲು .ಎಲ್ಲೋ ಕಾಲಿಟ್ಟ. ಜಾರಿ ಕೆಳಗೆ ಬಿದ್ದ. ಏಳ ಲು ಬಹಳ ಪ್ರಯತ್ನ ಮಾಡಿ ಸೋತ. ಬೆಳಗ್ಗೆ ಕೆಲಸದ ಆಳುಗಳು ಬಂದು ನೋಡಿದಾಗಲೇ ತಿಳಿದದ್ದು ಕುಪ್ಪುಸಾಮಿಯ ಪ್ರಾಣಪಕ್ಷಿ ರಾತ್ರಿ ಯಾವಾಗಲೋ ಹಾರಿ ಹೋಗಿದೆ ಅಂತ.
ಹೆಂಡತಿ ಮಕ್ಕಳು ಒಂದು ವಾರಕ್ಕೆ ಯಾವುದೋ ಮದುವೆ ಅಂತ ಮದರಾಸಿಗೆ ಹೊರಟು ಹೋಗಿ ದ್ದಾರೆ. ಅವರಿಗೂ ತಿಳಿಸಲು ಸಾಧ್ಯವಾಗುತ್ತಿಲ್ಲ.
ಅದೇ ಸಮಯಕ್ಕೆ ವಾರದ ನಂತರ ಬಾಯಮ್ಮ ಬಂದಾಗ ಉಗ್ರಾಣದ ಸುತ್ತಲೂ ಜನ ಸೇರಿ ರುವುದು ನೋಡಿ ಅಲ್ಲಿದ್ದವರನ್ನ ಕೇಳಿ ವಿಷಯ ತಿಳಿದುಕೂಂಡು ,ಅಯ್ಯೋ ಸ್ವಲ್ಪ ದಿನ ಯಾರ ಸಹಾಯ ಇಲ್ಲದೇ ಅಯ್ಯನಿಗೆ ನಡೆಯುವ ಅಭ್ಯಾಸ ಆಗಲಿ ಅಂತ ನಾನೇ ಬರಲಿಲ್ಲ ಎಂದು ಹೇಳಿ ನಾನೇ ಅವನನ್ನು ಕೊಂದ ಹಾಗಾಯಿತು ಅಂತ ಅತ್ತು ಗೋಳಾಡಿದಳು.ಆದರೆ ಎಲ್ಲಾ ಮುಗಿದು ಹೋಗಿತ್ತು.