murali nath

Children Stories Inspirational Others

4.2  

murali nath

Children Stories Inspirational Others

ಪುಟ್ಟ ಕಥೆ

ಪುಟ್ಟ ಕಥೆ

2 mins
944



ಬಹಳ ಹಿಂದೆ ಒಂದು ಊರಿನಲ್ಲಿ ರಾಮಣ್ಣ ಎನ್ನುವ ಕಷ್ಟ ಪಟ್ಟು ದುಡಿಯುವ ಸುಮಾರು ಅರವತ್ತು ವರ್ಷದ ವ್ಯಕ್ತಿ ಇದ್ದ. ಮರಗಳನ್ನು ಕಡಿಯುವುದು ಇವನ ಕಾಯಕ. ಇವನಂತೆ ಬಹಳ ಜನ ಒಂದು ಕಾಗದ ಕಾರ್ಖಾನೆಗೆ ಮರ ಕತ್ತರಿಸಿ ಕಳುಹಿಸುವ ಕೆಲಸದಲ್ಲಿ ತೊಡಗಿದ್ದ ರಾದರೂ ಅವರೆಲ್ಲರೂ ಯುವಕರು. ರಾಮಣ್ಣ ಎಲ್ಲರಿಗಿಂತಲೂ ಮುಂಚೆಯೇ ಕೆಲಸಕ್ಕೆ ಬಂದು ,ಮಧ್ಯಾಹ್ನ ಮನೆಗೆ ಹೋಗಿ ಸುಮಾರು ಎರಡು ಗಂಟೆ ಮನೆಯಲ್ಲಿ ಇದ್ದು ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದ. ಕಾರ್ಖಾನೆಯ ಒಡೆಯನಿಗೆ ರಾಮಣ್ಣನ ಕಂಡರೆ ಬಹಳ ಇಷ್ಟ. ಕಾರಣ ಆ ವಯಸ್ಸಿನಲ್ಲೂ ಉಳಿದವರಿಗಿಂತಲೂ ಹೆಚ್ಚು ಮರಗಳನ್ನು ಕಡಿಯುತ್ತಿದ್ದ ಇವನನ್ನು ಕಂಡರೆ ಉಳಿದವರಿಗೆ ಬಹಳ ಕೋಪ..ಅದಕ್ಕೆ ಕಾರಣ ಯಾವಾಗಲೂ ಎಲ್ಲರ ಮುಂದೆ ರಾಮಣ್ಣ ನನ್ನ ಹೊಗಳುವುದು ಮತ್ತು ಅವನು ಕೇಳಿದಾಗಲೆಲ್ಲಾ ಹಣ ಸಾಲ ಕೊಡೋದು .

ಒಂದು ದಿನ ಎಲ್ಲರೂ ಸೇರಿ ಇದು ಅನ್ಯಾಯ. ರಾಮಣ್ಣ ದಿನವೂ ಎರಡು ಗಂಟೆ ಸಮಯ ಊಟಕ್ಕೆ ಅಂತ ಮನೆಗೆ ಹೋಗುತ್ತಾನೆ. ಆದರೆ ನಾವುಗಳು ಇಲ್ಲೇ ಊಟ ಮಾಡಿ ಅರ್ಧ ಗಂಟೆಯ ನಂತರ ಮತ್ತೆ ಕೆಲಸ ಮಾಡುತ್ತೇವೆ. ಸಂಜೆ ಆರು ಗಂಟೆಯ ಮೊದಲು ಯಾರೂ ಮನೆಗೆ ಹೋಗಲ್ಲ.ಹೀಗಿದ್ದರೂ ಅವನು ಹೇಗೆ ನಮಗಿಂತಲೂ ಹೆಚ್ಚು ಮರ ಕಡಿಯಲು ಸಾಧ್ಯ ಅಂತ ಧರಣಿ ಕೂತರು.

ಇವರ ಮಾತೆಲ್ಲಾ ಆಲಿಸಿ , ನಿಮ್ಮ ಮೇಲೆ ನನಗೆ ದ್ವೇಷ ಇಲ್ಲ. ರಾಮಣ್ಣ ಹೆಚ್ಚು ಮರ ಕಡಿಯುತ್ತಾನೋ ಇಲ್ಲವೋ ಎನ್ನುವುದು ನಿಮ್ಮ ಅನುಮಾನ .ಅದಕ್ಕೆ ನಾಳೆ ಎಲ್ಲರ ಮುಂದೆ ರಾಮಣ್ಣ ಎಷ್ಟು ಮರ ಕಡಿಯುತ್ತಾನೆ ಅಂತ ಎಣಿಸಿ ತೋರಿಸುತ್ತೇನೆ. ನೀವುಗಳೂ ಅವನಿಗಿಂತ ಹೆಚ್ಚು ಮರ ಕಡಿಯಬೇಕು ಹಾಗಿದ್ದರೆ ಮಾತ್ರ ನೀವುಗಳು ಹೇಳಿದ ಹಾಗೆ ನಾನು ಕೇಳ್ತೀನಿ ಅಂದ. ಎಲ್ಲರೂ ಒಪ್ಪಿ ,ಮಾರನೆಯ ದಿನ ಎಲ್ಲರೂ ಒಂದೊಂದು ಮರದ ಕೆಳಗೆ ಕೊಡಲಿ ಹಿಡಿದು ನಿಂತರು. ಕೆಲಸ ಆರಂಭ ಆಯ್ತು. ಎಂದಿನಂತೆ ರಾಮಣ್ಣ ಅವನ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ ಒಂದು ಗಂಟೆ. ಎಲ್ಲರೂ ಪ್ರತಿ ದಿನದಂತೆ ಅಲ್ಲೇ ಊಟಕ್ಕೆ ಹೋದರು .ರಾಮಣ್ಣ ಮಾತ್ರ ಮನೆಗೆ ಹೋದ. ರಾಮಣ್ಣ ಬರುವುದರ ಒಳಗೆ ಹೆಚ್ಚು ಮರ ಕಡಿದು ಬಿಡಬೇಕೆಂದು ಎಲ್ಲರೂ ಯೋಚಿಸಿದರು. ರಾಮಣ್ಣ ಯಾವಾಗಲೂ ಬರುವ ಹಾಗೆ ಎರಡು ಗಂಟೆ ಆದಮೇಲೆ ಬಂದು ಕಡಿಯಲು ಶುರು ಮಾಡಿದ .ಬೆಳಗ್ಗೆ ಬಂದಾಗ ಹೇಗೆ ಕಡಿಯುತ್ತಿದ್ದನೋ ಅದೇ ರೀತಿ ಅಷ್ಟೇ ವೇಗವಾಗಿ ಈಗ ಕಡಿಯುತ್ತಿದ್ದಾನೆ.ಆದರೆ ಉಳಿದವರಿಗೆ ಅದು ಸಾಧ್ಯ ವಾಗುತ್ತಿಲ್ಲ.

ಐದು ಗಂಟೆಗೆ ಎಲ್ಲರೂ ಕೆಲಸ ನಿಲ್ಲಿಸಿ ರಾಮಣ್ಣ ಇದ್ದ ಕಡೆ ಬಂದು ನೋಡಿದರೆ ಆಶ್ಚರ್ಯ. ಊಟದ ನಂತರ ಇವರೆಲ್ಲರಿಗಿಂತಲೂ ಹೆಚ್ಚು ಮರ ಕಡಿದು ಹಾಕಿದ್ದ .ಮಾಲೀಕ ರಾಮಣ್ಣನನ್ನ ಎಲ್ಲರ ಮುಂದೆಯೇ ಕೇಳಿದ. ನನಗೂ ಬಹಳ ದಿನಗಳಿಂದ ಇದನ್ನು ತಿಳಿಯಲು ಕುತೂಹಲ ಇತ್ತು. ಊಟದ ನಂತರ ಎಲ್ಲರಿಗಿಂತ ಹೆಚ್ಚಾಗಿ ನಿನಗೆ ಕಡಿಯಲು ಹೇಗೆ ಸಾಧ್ಯ ಎಂದಾಗ ರಾಮಣ್ಣ ಹೇಳಿದ ನಾನು ಮಧ್ಯಾಹ್ನ ಅಷ್ಟು ಸಮಯ ಊಟಕ್ಕೆ ಹೋಗೋದು ಊಟ ಮಾಡಿ ಮಲಗುವುದಕ್ಕೆಂದು ಇವರೆಲ್ಲ ತಿಳಿದಿದ್ದಲ್ಲಿ ಅದು ಸುಳ್ಳು. ನಾನು ಅರ್ಧ ಗಂಟೆಯಲ್ಲಿ ಊಟ ಮುಗಿಸಿ ನನ್ನ ಕೊಡಲಿಯನ್ನ ಉಜ್ಜಿ ಹರಿತ ಮಾಡಿ ಕೊಳ್ಳುತ್ತೇನೆ. ಅದಕ್ಕೆ ಊಟದ ನಂತರವೂ ಬೆಳಗ್ಗೆ ಕಡಿದಷ್ಟೇ ವೇಗವಾಗಿ ಕಡಿಯುತ್ತೇನೆ ಎಂದ.ಎಲ್ಲರೂ ತಲೆ ತಗ್ಗಿಸಿ ಅಲ್ಲಿಂದ ಹೊರಟು ಹೋದರು. 


ಬೇರೆಯವರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ಶ್ರಧ್ದೆ ಯಿಂದ ಮೇಲು ಕೀಳು ಎನ್ನದ ಯಾವುದೇ ಕೆಲಸ ಮಾಡಬೇಕಾದರೂ ದೇಹದ ಶಕ್ತಿಯ ಜೊತೆಗೆ ನಮ್ಮ ಮನಸ್ಸು ಎನ್ನುವ ಹರಿತ ಆಯುಧ ಎಷ್ಟು ಮುಖ್ಯ ಅಲ್ಲವೇ.






 



Rate this content
Log in