ಜೆನ್ ಕಥೆ
ಜೆನ್ ಕಥೆ


ಒಂದು ಊರ ಹೊರಗೆ ಒಂದು ಗುಡಿಸಲು. ಇಲ್ಲಿ ಸನ್ಯಾಸಿಯೊಬ್ಬ ಇರುತ್ತಿದ್ದ . ಒಂದು ಹುಣ್ಣಿಮೆ ಬೆಳದಿಂಗಳ ರಾತ್ರಿ ಪಕ್ಕದ ಊರಿನ ಒಬ್ಬ ಕಳ್ಳ ಎಲ್ಲೂ ಆ ರಾತ್ರಿ ಕಳ್ಳತನ ಮಾಡಲಾಗದ ಕಾರಣ ಈ ಗುಡಿಸಲು ಕಂಡು ಏನಿದ್ದರೂ ತೆಗೆದು ಕೊಂಡು ಹೋಗೋಣವೆಂದು ಮುಚ್ಚಿದ್ದ ತಡಿಕೆ ಬಾಗಿಲು ಅರ್ಧ ತೆಗೆದು ಒಳಗೆ ಹೋಗಿ ನೋಡಿದರೆ ಕತ್ತ ಲು .ಏನೇನೂ ಕಾಣುತ್ತಿಲ್ಲ. ಬಾಗಿಲು ಮತ್ತಷ್ಟು ಹಿಂದಕ್ಕೆ ಸರಸಿದ. ಹೊರಗಿನ ಬೆಳದಿಂಗಳ ಬೆಳಕಿ ನಿಂದ ಸ್ವಲ ಸ್ವಲ್ಪ ಕಂಡಿದೆ. ಆದರೆ ಕದಿಯಲು ಯಾವ ವಸ್ತುವೂ ಇಲ್ಲ.ಇನ್ನೇನು ಬರಿಗೈಯಲ್ಲಿ ಹೊರಗೆ ಬರಬೇಕೆಂದು ನೋಡುವಾಗ ಬಾಗಿಲ ಕಡೆಯಿಂದ ಬೆಳಕು. ಒಬ್ಬ ಸನ್ಯಾಸಿ , ಕಯ್ಯಲ್ಲಿ ಲಾಂದ್ರ ಹಿಡಿದು ಬರುತ್ತಿದ್ದಾನೆ.ಒಳಗೆ ಬಂದವನೆ ಯಾರು ನೀನು ಏನು ಬೇಕು ಅಂತ ಕೇಳಿದ. ನಾನೊಬ್ಬ ಕಳ್ಳ . ಇಂದು ಎಲ್ಲೂ ಕಳ್ಳತನ ಮಾಡ ಲು ಆಗದೆ ಬರುತ್ತಿದ್ದಾಗ ಈ ಗುಡಿಸಲಿನಲ್ಲಿ ಏನಾರೂ ಇರಬಹುದೆಂದು ನೋಡಿದರೆ ಇಲ್ಲಿ ಏನೂ ಇಲ್ಲ ಅಂದಾಗ ,ಅಯ್ಯೋ ನನ್ನ ಮನೆಗೆ ಬಂದು ಬರೀ ಕಯ್ಯಲ್ಲಿ ಹೋಗುವ ಹಾಗೆ ಆಯಿತು.ನನ್ನ ಹತ್ತಿರ ಛಳಿಗೆ ಹೊದೆಯಲು ಇರುವ ಈ ಶಾಲು ಬಿಟ್ಟರೆ ಬೇರೆ ಏನೂ ಇಲ್ಲ.ಬಹಳ ಛಳಿ ಇದೆ ಇದ ನ್ನು ತೆಗೆದುಕೊ ಅಂತ ಹೇಳಿ ತಾನೇ ಅವನ ಬುಜದ ಮೇಲೆ ಹಾಕಿ ,ಎಂದಾದರೂ ನಿನಗೆ ಬರಬೇಕೆ ನಿಸಿದರೆ ಮೊದಲೇ ತಿಳಿಸು .ನಿನ್ನನ್ನು ನಾನು ಬರಿಗೈಯಲ್ಲಿ ಕಳುಹಿಸಲ್ಲ ಎಂದಾಗ ಮೂಕನಂತೆ ನಿಂತುಬಿಟ್ಟ. ಕಳ್ಳ ಅಂತ ತಿಳಿದ ಮೇಲೂ ಇಷ್ಟು ಒಳ್ಳೆಯ ಮಾತನಾಡುವುದನ್ನ ಕೇಳಿ ಮಾತೇ ಹೊರಡದಾಯ್ತು. ನಮಸ್ಕಾರ ಮಾಡಿ ಅಲ್ಲಿಂದ ಹೊರಟ.
ಒಂದು ವರ್ಷದ ನಂತರ ಒಮ್ಮೆ ಒಬ್ಬ ಭಾರೀ ಶ್ರೀ ಮಂತನ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದ. ಆ ಊರಿನ ದಂಡನಾಯಕನ ಬಳಿ ಇವ ನನ್ನು ಕರೆತಂದಾಗ, ಇಷ್ಟು ವರ್ಷಗಳಿಂದ ನೀನು
ಕಳ್ಳತನ ಮಾಡಿ ಜೀವನ ಮಾಡುತ್ತಿದ್ದರೂ ನಿನಗೆ ಇದು ತಪ್ಪು ಮಾಡಬಾರದು ಅಂತ ಒಮ್ಮೆ ಯಾದ ರೂ ಅನಿಸಲಿಲ್ಲವೆ, ಎಂದು ಕೇಳಿದಾಗ ನನಗೆ ಇದು ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲ. ನಾನು ಕೂಲಿ ಕೆಲಸಕ್ಕೆ ಪ್ರಯತ್ನ ಮಾಡಿದೆ ಆದರೆ ಎಲ್ಲರೂ ನನ್ನ ಕಳ್ಳ ಅಂತಲೇ ತಿಳಿದು ಕೆಲಸ ಕೊಡಲು ಹೆದರುತ್ತಾರೆ. ಹಾಗಾಗಿ ಮತ್ತೆ ಇದೇ ವ್ರುತ್ತಿಯನ್ನ ಮುಂದು ವ ರಿಸಿದೆ ಎಂದ.ಆಗ ಆ ದಂಡ ನಾಯಕ ನೀನು ಹೇಳುವದರಲ್ಲೂಸತ್ಯದ ಅಂಶ ಇದೆ. ನಿನ್ನನ್ನ ಈಗ ಬಿಡುಗಡೆ ಮಾಡ ಬೇಕಾದರೆ ಈ ಊರಲ್ಲಿ ಯಾರಾದರೂ ಒಬ್ಬರು ಇವನು ಕಳ್ಳತನ ಮಾಡಿದರೂ ಯಾರಿಗೂ ಹಿಂಸೆ ಮಾಡಿಲ್ಲ, ಬಿಡುಗಡೆ ಮಾಡಿ ಎಂದು ಒಂದು ತಿಂಗ ಳ ಅವಧಿಯಲ್ಲಿ ಬಂದು ಹೇಳಿದರೆ ತಕ್ಷಣ ಬಿಡು ಗಡೆ ಮಾಡುತ್ತೇನೆಂದ. ಆದರೆ ಒಂದು ತಿಂಗಳ ಅವಧಿ ಮುಗಿಯುತ್ತ ಬಂದರೂ ಊರಲ್ಲಿ ಯಾರೂ ಮುಂದೆ ಬರಲಿಲ್ಲ. ಆ ಗುಡಿಸಲಿನಲ್ಲಿದ್ದ ಸನ್ಯಾಸಿ ಗೆ ಈ ವಿಷಯ ತಿಳಿದು ಅಲ್ಲಿಗೆ ಬಂದು, ಅಂದು ನಡೆದ ವಿಷಯವೆಲ್ಲವನ್ನೂ ತಿಳಿಸಿ ದಯ ವಿಟ್ಟು ಬಿಡುಗಡೆ ಮಾಡಿ .ಇನ್ನು ಮುಂದೆ ಇವನು ನನ್ನ ಜೊತೆಯಲ್ಲಿ ಇರುತ್ತಾನೆ. ಎಂದಾಗ ಅವನು ಅಂದು ಕೊಟ್ಟ ಶಾಲನ್ನ ಅಲ್ಲೇ ಹಿಂದುರಿಗಿಸಿ ಆ ಸಂನ್ಯಾಸಿ ಕಾಲಿಗೆ ಬಿದ್ದ ಆ ಕಳ್ಳ. ಅವನಿಗೆ ಬಿಡುಗಡೆ ಆಯಿತು.
ಕೆಲವೇ ವರ್ಷಗಳಲ್ಲಿ ಬದಲಾಗಿ ಜನರಿಗೆ ಜೀವನ ಎಂದರೇನು ಎನ್ನುವ ಬಗ್ಗೆ ಸ್ವಾರಸ್ಯಕರವಾಗಿ ಭೋಧನೆ ಮಾಡುತ್ತಿದ್ದ. ನಂತರದಲ್ಲಿ ಪ್ರಖ್ಯಾತ ಸಂತನಾದ.