murali nath

Inspirational Others Children

3  

murali nath

Inspirational Others Children

ಸಮಯ ಖರೀದಿ !

ಸಮಯ ಖರೀದಿ !

2 mins
556


 


ರಾಮ್ ಬಾಬುಗೆ ದಿನವಿಡೀ ಬಿಡುವಿಲ್ಲದ ಕೆಲಸ. ಕೆಲವು ಕಂಪನಿಗಳಿಗೆ ಹೋಗಿ ಅಲ್ಲಿನ ಉದ್ಯೋಗಿ ಗಳಿಗೆ ಉತ್ಪಾದನೆ ಮತ್ತು ಉತ್ಪಾದಕತೆ ಬಗ್ಗೆ ವಿವರ ವಾಗಿ ತಿಳಿಸಿ ಕೊಡುವ ಕೆಲಸ ಮಾಡುತ್ತಿರುತ್ತಾನೆ. ಬೆಳಗ್ಗೆ ಎಂಟು ಗಂಟೆಗೆ ಮನೆಯಿಂದ ಹೊರಟರೆ ರಾತ್ರಿ ಒಂಭತ್ತು ಅಥವಾ ಹತ್ತು ಗಂಟೆಗೆ ಮನೆಗೆ ಬರೋದು . ವಾರದ ಕೊನೆಯಲ್ಲಿಯೂ ಸೆಮಿನಾ ರ್, ಮೀಟಿಂಗ್, ವರ್ಕ್ ಶಾಪ್ ಅಂತ ಮನೆಯಲ್ಲಿ ಇರೋದು ಬಹಳ ಕಡಿಮೆ . ಶರತ್ ಇವರ ಒಬ್ಬನೇ ಮಗ . ಶರತ್ ಗೆ ತಂದೆ ಮುಖ ನೋಡೋದೇ ಕಷ್ಟ.

ಒಂದು ದಿನ ತಂದೆ ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದಾಗ ಶರತ್ ಮಲಗಿರಲಿಲ್ಲ. ಆಶ್ಚರ್ಯ ದಿಂದ ಕೇಳಿದ್ದಕ್ಕೆ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು .

 ಅಮ್ಮ ಹೇಳಿದರು , ನೀವು ಬೇರೆ ಬೇರೆ ಕಡೆ ಹೋಗಿ ಟ್ರೈನಿಂಗ್ ಕೊಡ್ತೀರಂತೆ, ಭಾಷಣ ಮಾ ಡ್ತೀರಂತೆ. ಹೌದು ಅಮ್ಮ ಸರಿಯಾಗೆ ಹೇಳಿದಾಳೆ. ಏನೀಗ ?. ಒಂದು ಗಂಟೆಗೆ ಎಷ್ಟು ಸಂಪಾದನೆ ಮಾಡ್ತೀರಿ. ಅದೆಲ್ಲಾ ನಿನಗೆ ಏಕೆ, ಅಮ್ಮ ಕೇಳು ಅಂತ ಹೇಳಿದಳಾ, ಸರಿ ಎರಡು ಸಾವಿರ ಒಂದು ಗಂಟೆಗೆ. ಮಲಗು ಹೋಗು .ಅಪ್ಪ ನನಗೆ ಮುನ್ನೂ ರು ರೂಪಾಯಿ ಬೇಕು ಕೊಡಿ ಅಂದ. ಆಗಲ್ಲ ಸ್ನೇಹಿತರ ಜೊತೆ ಹೋಗಿ ಮಜ ಮಾಡಕ್ಕೆ ಮುನ್ನೂರು ರೂಪಾಯಿ ನಾನು ಕೊಡಲ್ಲ ಅಂದರು ಕೋಪದಿಂದ. ಅವನ ರೂಮ್ ಗೆ ಹೋದ. ಹೆಂಡತಿ ಜೊತೆ ಊಟ ಮಾಡೋವಾಗ ನಡೆದ ವಿಷಯ ಹೇಳಕ್ಕೆ  ಹೋದಾಗ , ನನಗೆ ಎ‌ಲ್ಲಾ ಗೊತ್ತು‌ರೀ ಮುನ್ನೂರು ರೂಪಾಯಿ ನೀವು ಕೊಡಬಹುದಿತ್ತು. ಎಂದಾದರೂ ನಿಮ್ಮ ಹತ್ತಿರ ಕೇಳಿದಾನಾ. ಅವನೇನು ಬೇರೆ ಹುಡುಗರ ರೀತಿ ಅಲ್ಲಿ ಇಲ್ಲಿ ಸುತ್ತಾಡಕ್ಕೆ ಹೋಗ್ತಾನಾ ಅಂದಾಗ ,ನೀನು ಹೇಳೋದು ಸರಿ ಅಂತ ಎದ್ದು ಹೋಗಿ ರೂಮ್ ಬಾಗಿಲು ತಟ್ಟಿದರು . ತೆಗೆದೇ ಇತ್ತು.ಹಾಸಿಗೆ ಮೇಲೆ ಕೂತಿದ್ದ. ಹತ್ತಿರ ಹೋಗಿ ಶರತ್ ನಾನು ಯಾವುದೋ ಟೆನ್ಷನ್ ನಲ್ಲಿ ಬಂದಿದ್ದೆ. ಬೇಜಾರು ಮಾಡ್ಕೋ ಬೇಡ ಮುನ್ನೂರು ರೂಪಾಯಿ ಕೊಡ್ತೀನಿ, ಆದರೆ ಏತಕ್ಕೆ ಅಂತ ಕೇಳಬಹುದಾ ಅಂದಾಗ . ತಲೆ ದಿಂಬು ಸರಿಸಿ ತೋರಿಸಿ ಇದು ಅಜ್ಜಿ ದೊಡ್ಡಮ್ಮ ತಾತ ಇವರೆಲ್ಲ ಆಗಾಗ ನನಗೆ ಹುಂಡಿಗೆ ಅಂತ ಕೊಟ್ಟ ಹಣ. ಎಣಿಸಿದ್ದೇನೆ ಒಂದು ಸಾವಿರದ ಏಳು ನೂರು ಇದೆ ನೀವು ಮುನ್ನೂರು ಕೊಟ್ಟರೆ ಎರಡು ಸಾವಿರ ಆಗತ್ತೆ ಅದನ್ನ ನೀವೇ ತೊಗೊಂಡು ಒಂದು ದಿನ ಒಂದು ಗಂಟೆ ಬೇಗ ಬನ್ನಿ ನಿಮ್ಮ ಹತ್ತಿರ ಕೂತು ತುಂಬ ಮಾತನಾಡಬೇಕು ಅನಿಸತ್ತೆ ಅಪ್ಪ ಅಂದ.ರಾಮ್ ಬಾಬು ಕಣ್ಣಲ್ಲಿ ನೀರು. ಮಗನನ್ನು ಅಪ್ಪಿ ಕೊಂಡು ಹೇಳಿದರು, ಹಣ ಕೊಟ್ಟು ನನ್ನ ಸಮಯ ನೀನು ಕೇಳೋ ಕಾಲ ಬಂತಲ್ಲ ಅಂತ ನೊಂದು ,ಬೇಡಪ್ಪ ನಾಳೆಯಿಂದ ನಾನು ಸಂಜೆ ಹೊತ್ತು ಮತ್ತು ಭಾನುವಾರ ಯಾವ ಕಾರ್ಯಕ್ರಮಗಳನ್ನೂ ಒಪ್ಪಿಕೊಳ್ಳಲ್ಲ ಅಂದಾಗ, ಅಲ್ಲಿಗೆ ಹೆಂಡತಿಯೂ ಬಂದು ಸಮಾಧಾನ ಮಾಡಿದಳು. ಅಂದಿನಿಂದಲೇ ಆ ಪುಟ್ಟ ಸಂಸಾರದಲ್ಲಿ ಸದಾ ಸಂತೋಷ ನೆಮ್ಮದಿ ಇತ್ತು.



Rate this content
Log in

Similar kannada story from Inspirational