ಅಮ್ಮ
ಅಮ್ಮ
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ 💕
ಅಮ್ಮ ಎಂದರೆ ಸಾಕಾರ ಮೂರ್ತಿ
ಬಾಲ್ಯ ಎಷ್ಟು ಚಂದ ತಾಯಿಯವರ ಬೆಚ್ಚಗೆಯಿಂದ ಹೊರಗಡೆ ಬಂದಾಗ ಆ ಸಣ್ಣ ಕಣ್ಣುಗಳಲ್ಲಿ ನೀರು ತುಂಬಿ ಅಮ್ಮ ಅಮ್ಮ ಎಂಬ ಮಧುರ ದ್ವನಿ ಕೇಳಿದಾಗ ಮನಕ್ಕೆ ಎಷ್ಟು ಸಂತೋಷವಾಗುತ್ತದೆ ಎನ್ನುವುದು ನಮ್ಮನ್ನು ಸಾಕಿ ಸಲಹಿದ ತಾಯಿಯವರಿಗೆ ಸಲ್ಲುತ್ತದೆ.......
ಮಕ್ಕಳು ಹುಟ್ಟಿದಾಗ ಆಕೆಯ ಮುಖದಲ್ಲಿ ಮೂಡುವ ಸಂತೋಷ, ಆನಂದಕ್ಕೆ ಎಣೆಯಿಲ್ಲ. ಯಾರೇ ನೋಡಲು ಬಂದರು ಅವರ ದೃಷ್ಟಿ ಬೀಳಬಾರದು ಎಂದು ಕಪ್ಪು ದೊಡ್ಡ ಬಿಂದಿ ಹಾಕಿ ಮಗುವಲ್ಲಿ ನನ್ನ ನೋವು ಮರೆವಳು....
ಆ ಮಗುವಿಗೆ ಊಟ ಮಾಡಿಸುವಾಗ ಅಗಸದಲ್ಲಿ ಇರುವ ಚಂದ್ರನಿಗೆ ಒಂದು ತುತ್ತು ನಿನಗೆ ಎಂದು ಮಾಡಿಸುವಾಗ ಆ ಪುಟ್ಟ ಕೈಯಿಂದ ಮಗು ತಾಯಿಗೆ ಬಾಯಿ ಆ ಮಾಡಿ ಎಂದು ಹೇಳುವ ಪ್ರಯತ್ನ ಕಂಡ ಆ ಮನಕ್ಕೆ ಹೊಸ ಚೈತನ್ಯ ಮೂಡುವುದು...
ಮಲಗುವಾಗ ತಾನು ಅಮ್ಮನ ಮನೆಯಿಂದ ತೆಗೆದುಕೊಂಡು ಬಂದ ಸೀರೆಯಲ್ಲಿ ತನ್ನ ಮಗುವನ್ನು ಇಟ್ಟು ಜೋಗುಳ ಹಾಡುವಾಗ ಆ ಮಗು ಆ ಆ ಎಂದು ರಾಗ ಹಾಡುವಾಗ ಆಕೆಯು ತನ್ನ ಬಾಲ್ಯದಲ್ಲಿ ಮಾಡಿದ ಮತ್ತು ಸವಿದ ಕ್ಷಣ ಏನಿಸಿ ಒಮ್ಮೆ ಆ ಕಾಲದ ಜೀವನ ಯಾರಿಗೂ ಬೇಡ ಎಂದು ಮನದಲ್ಲೇ ಯೋಚಿಸುತ್ತಾಳೆ....
ಮಗುವಿನ ಮುಖ ನೋಡಿ ತನ್ನ ಸಾವಿರಾರು ಕಷ್ಟ ದುಃ
ಖ ಮರೆಯುವ ಸಂದರ್ಭದಲ್ಲಿ ಆಕೆಗೆ ವಿದ್ಯಾಭ್ಯಾಸ ಎಲ್ಲವೂ ಮುಗಿಸಿ ಉದ್ಯೋಗ ಹೋಗುವಾಗ..........
ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದರೆ ಇತ್ತ ಈ ಹೆಣ್ಣು ಮಗಳಿಗೆ ತನ್ನ ತಾಯಿಯವರನ್ನು ಬಿಟ್ಟು ಬರಲು ಅಸಾಧ್ಯ ವಾಗದೆ ಕೊರೊಗುತ್ತಾ ಇರುವಾಗ ತನ್ನ ಜೊತೆಯಲ್ಲಿ ಎಷ್ಟು ವರ್ಷ ಸಾಕಿ ಸಲಹಿದ ತಾಯಿಯವರನ್ನು ಕರೆದುಕೊಂಡು ಹೋಗಿ ಸಂತೋಷ ಇರುವ ಸಂದರ್ಭದಲ್ಲಿ.......
ತಂದೆಯವರ ಬಲವಂತಕ್ಕೆ ಬಲಿಯಾಗಿ ವಿವಾಹ ಬಂಧನ ಸಿಲುಕಿ ಗಂಡನ ಮನೆಗೆ ಹೋಗುವಾಗ ವಾಹನದಲ್ಲಿ ಕೂತುಕೊಂಡಾಗ ಒಮ್ಮೆ ತಾಯಿಯ ಮಡಿಲಿನಲ್ಲಿ ರೋದಿಸುವಾಗ ಆಕೆ ಅಮ್ಮ ಯಾಕೆ ಅಮ್ಮ ನಾನು ಎಷ್ಟು ಬೇಗ ನಿಮಗೆ ಬೇಡವಾದನೆ ಎಂದು ಪ್ರಶ್ನೆ ಮಾಡಿದಾಗ.....
ಅಮ್ಮ ಧೈರ್ಯ ಹೇಳಿ ತಾನು ತನ್ನ ತಾಯಿಯವರ ಮನೆಯಲ್ಲಿ ತಂದ ಆ ಸೀರೆಯನ್ನು ಕೊಟ್ಟು ಅಕ್ಕಿ ಕಾಯಿ ಕೊಡುವಾಗ ಆಕೆಗೆ ಒಮ್ಮೆ ಜೋರಾಗಿ ದುಃಖ ಬರುವುದು ಆದರು ಎಲ್ಲಿ ನಾನು ಅತ್ತರೆ ಅವಳು ಅಳುತ್ತಾಳೆ ಎಂದು ಮರೆಯಲ್ಲಿ ಕಣ್ಣೀರು ಹಾಕುವಾಗ........
ಆಕೆಯ ಪಯಣ ಸಾಗಿತು. ಈಕೆ ತನ್ನ ಮಗಳ ಸಣ್ಣವಳು ಇರುವಾಗ ಹಾಕಿದ ಉಡುಪಿನಲ್ಲಿ ತನ್ನ ಸುಖ ದುಃಖ ಹಂಚಿಕೊಳ್ಳುವಾಗ ಆಕೆಯು ತಾಯಿಯಾಗುವ ಸುದ್ದಿ ಕೇಳಿದಾಗ ಮನೆಯಲ್ಲೇ ತಯಾರಿ ಮಾಡಿದ ಚಕ್ಕುಲಿ ಲಡ್ಡು ಎಲ್ಲವನ್ನು ತೆಗೆದುಕೊಂಡು ಹೋಗಿ ತಿನ್ನಿಸುವಾಗ ಆಕೆಯ ಸಂತೋಷಕ್ಕೆ ಕೊನೆಯಿಲ್ಲ.