ನಿರ್ಧಾರದ ಪ್ರಾಮುಖ್ಯತೆ
ನಿರ್ಧಾರದ ಪ್ರಾಮುಖ್ಯತೆ
ಒಬ್ಬ ಕಳ್ಳ ಒಬ್ಬ ಊರಿನ ಪ್ರಮುಖನ ಮನೆಯಲ್ಲಿ ಕಳ್ಳತನ ಮಾಡಲು ಬಂದ. ಎಲ್ಲಾ ಕಡೆ ಹುಡುಕಿದರೂ ತನಗೆ ಬೇಕಾದ ಬೆಲೆಬಾಳುವ ವಸ್ತು ವಾಗಲಿ ಹಣವಾಗಲಿ ದೊರೆಯದೆ ಬೇಸರ ದಿಂದ ಹೋಗುವಾಗ ಕತ್ತಲಲ್ಲಿ ಮೂಟೆಯೊಂದು ಕಂಡು ಏನಿರಬಹುದು ಎಂದು ನೋಡಿದಾಗ ಅದು ಈರುಳ್ಳಿ ಮೂಟೆ. ಅದನ್ನೇ ಹೊತ್ತು ತೆಗೆದುಕೊಂಡು ಹೋಗಿ ಮಾರೋಣ ವೆಂದು ಬಗ್ಗಿದಾಗ ಯಾರೋ ಬೆನ್ನ ಮೇಲೆ ಕೈ ಇಟ್ಟ ಹಾಗಾಯ್ತು ನೋಡಿದರೆ ಕಾವಲುಗಾರ. ಅಲ್ಲೇ ಅವನನ್ನ ಬೆಳಗಾಗುವವರೆಗೂ ಕಟ್ಟಿ ಹಾಕಿ ಯಜಮಾನ ಬಂದ ನಂತರ ತಿಳಿಸಿದ.ಯಜಮಾನ ಕಳ್ಳನಿಗೆ ಹೇಳಿದ ನೀನು ಏನೂ ಕಳ್ಳತನ ಮಾಡಿಲ್ಲದಿರಬಹುದು ಆದರೆ ನಿನ್ನ ಉದ್ದೇಶ ಕಳ್ಳತನವೇ ಆದ್ದರಿಂದ ನೀನು ಶಿಕ್ಷೆ ಅನುಭವಿಸಲೇ ಬೇಕು. ನೂರು ರೂಪಾಯಿ ದಂಡ ಕೊಡು ಇಲ್ಲವೇ ನೂರು ಛಡಿ ಏಟು ಇಲ್ಲವೇ ಈ ಮೂಟೆಯಲ್ಲಿರುವ ನೂರು&nbs
p;ಈರುಳ್ಳಿ ತಿನ್ನಬೇಕು. ಯಾವುದಾದರೂ ನಿನ್ನ ಇಷ್ಟ ದಂತೆ ಶಿಕ್ಷೆ ಅನುಭವಿಸು ಎಂದಾಗ ಈರುಳ್ಳಿ ತಿನ್ನುವುದೇ ಮೇಲೆಂದು ಕಷ್ಟಪಟ್ಟು ತಿಂದ ಕಣ್ಣು ಮೂಗಲ್ಲಿ ನೀರು. ಎದ್ದು ಓಡಾಡಿ ಒಂದೊಂದೇ ತಿಂದು ಮಧ್ಯಾಹ್ನ ದ ಹೊತ್ತಿಗೆ ಹೇಗೋ ಅರವತ್ತು ತಿಂದ.ಇನ್ನು ತನ್ನಿಂದ ಸಾಧ್ಯವಿಲ್ಲವೆನಿಸಿದಾಗ, ಛಡಿ ಏಟು ತಿನ್ನುವುದೇ ಮೇಲು ಎಂದು ಅದಕ್ಕೆ ಒಪ್ಪಿಕೊಂಡಾಗ ಐವತ್ತು ಏಟುಬೀಳುವ ಹೊತ್ತಿಗೆ ತನ್ನಿಂದ ಆಗದೆಂದು ಕೂಗುತ್ತಾ ದಂಡ ಕಟ್ಟುತ್ತೇನೆ ಎಂದು ನೂರು ರೂಪಾಯಿ ಕೊಟ್ಟು ಹೊರ ನಡೆದ. ಇದು ಒಂದು ಕಾಲ್ಪನಿಕ ಕಥೆಯಾದರು, ನಾವು ತೆಗೆದು ಕೊಳ್ಳುವ ನಿರ್ಣಯ ಎಷ್ಟು ಮುಖ್ಯವೆಂದು ಸೂಚಿಸುತ್ತೆ. ಸಮಯಕ್ಕೆ ತಕ್ಕ ನಿರ್ಧಾರ ತೆಗೆದು ಕೊಳ್ಳದಿದ್ದರೆ, ಒಂದು ಉಳಿಸಲು ಹೋಗಿ ಎಲ್ಲವನ್ನೂ ಅನುಭವಿಸುವ ಮೂರ್ಖರಾಗಿ ಬಿಡುತ್ತೇವೆಂಬುದು ಇದರ ನೀತಿ.