ಹೃದಯವಂತರು
ಹೃದಯವಂತರು
.
ಇದು ಐವತ್ತು ವರ್ಷಗಳ ಹಿಂದೆ ಚಿಕ್ಕ ಬಳ್ಳಾಪುರದಲ್ಲಿ ನಡೆದ ಒಂದು ಘಟನೆ. ಒಬ್ಬ ಡಾಕ್ಟರ್ ಹೆಸರು ಶಿವಶಂ ಕರ್ ಮೊದಲಿಯಾರ್. ಅವರ ವಯಸ್ಸು ಆಗ ಸುಮಾ ರು ನಲವತ್ತೈದು ಇರಬಹುದು. ಆಗಿನ ಕಾಲದ ಡಾಕ್ಟರ್ ಅಂದರೆ ಕೈಯಲ್ಲಿ ಒಂದು ಮೆಡಿಕಲ್ ಕಿಟ್, ಬ್ರೇಸೆಸ್ ಹಾಕಿದ ದೊಗಲೆ ಪ್ಯಾಂಟ್. ಕತ್ತಿಗೆ ಟೈ, ಜೊತೆಗೆ ಒಬ್ಬ ಕಂಪೌಂಡರ್. ಆಗ LMP ಮಾಡಿದ್ದರೆ ಅವರೇ ದೊಡ್ಡ ವರು .ಊರಿಗೊಬ್ಬರೋ ಇಬ್ಬರೋ ಇಂತಹ ಡಾಕ್ಟರ್ ಗಳು . ಯಾರಿಗಾದರೂ ಆರೋಗ್ಯ ಸರಿ ಇಲ್ಲ ಅಂದರೆ ಅವರ ಮನೆಗೆ ಬಂದು ನೋಡುತ್ತಿದ್ದರು. ಇವರ ಎಲ್ಲಾ ಪೇಶೆಂಟ್ ಗಳನ್ನು ಮನೆಗೇ ಹೋಗಿ ನೋಡಿದ ಮೇಲೆ ಕ್ಲಿನಿಕ್ ಗೆ ಬರೋದು. ಆಗ ಬಹಳಷ್ಟು ಹಣವಂತರಿಗೆ, ದೊಡ್ಡ ಮನುಷ್ಯರಿಗೆ ಇವರು ಫ್ಯಾಮಿಲಿ ಡಾಕ್ಟರ್.
ಒಂದು ಸಲ ರಾತ್ರಿ ಹನ್ನೊಂದು ಆಗಿದೆ ಡಾಕ್ಟರ್ ಆಗ ತಾನೆ ಮಲಗಲು ತಯಾರಾಗ್ತಾ ಇದ್ದಾರೆ ಯಾರೋ ಬಾಗಿ ಲು ತಟ್ಟಿದ ಹಾಗಾಯ್ತು. ಇದೆಲ್ಲಾ ಅವರಿಗೆ ಮಾಮೂಲು. ಬಾಗಿಲು ತೆಗೆದು ನೋಡಿದರೆ ಏದುಸಿರು ಬಿಡುತ್ತಿದ್ದ ಒಬ್ಬ ಪೊಲೀಸ್ ಕಾನ್ಸ್ಟೇಬಲ್.
ಅವನು ಡಾಕ್ಟ್ರೇ ಒಂದು ಪ್ರಾಣ ಉಳಿಸಬೇಕಿದೆ ಬೇಗ ಬನ್ನಿ ಅಂದ. ಮರುಮಾತಾಡದೆ ಏನೂ ಎಲ್ಲಿ ಯಾರು ಅಂತ ಕೇಳದೆ ಪಂಚೆ ಮೇಲೊಂದು ಶರ್ಟ್ ಹಾಕ್ಕೊಂಡು ಕಿಟ್ ಹಿಡ್ಕೊಂಡು ಅವರ ಹಿಂದೆ ಹೊರಟರು. ಪೊಲೀಸ್ ಓಡುತ್ತಿದ್ದಾನೆ. ಇವರಿಗೆ ಆಗ್ತಿಲ್ಲ. ನಿಂತು ನಿಂತು ಹಿಂದೆ ನೋಡಿ ಓಡ್ತಾ ಇದಾನೆ . ಅಂತೂ ಒಂದು ಹಳೇ ಮನೆಯ ಹತ್ತಿರ ಬಂದು ಮಹಡಿ ಮೇಲೆ ಹತ್ತಬೇಕು ಸಾರ್ ಕೊಡಿ ಕಿಟ್ ಅಂತ ಕೈಯ್ಯಲ್ಲಿ ತೊಗೊಂಡು ಇಬ್ಬರೂ ಮರದ ಮೆಟ್ಟಿಲುಗಳನ್ನ ಹತ್ತಿ ಒಳಗೆ ಬಂದು ನೋಡಿದರೆ. ಒಂದು ಮರದ ಬೆಂಚ್ ಮೇಲೆ ಸುಮಾರು ಹದಿನೆಂಟು ವಯ ಸ್ಸಿನ ಹುಡುಗ ಮಲಗಿದ್ದಾನೆ. ಬದುಕಿ ಉಳಿವ ಲಕ್ಷಣ ಗಳಿಲ್ಲ. ಪ್ರಯತ್ನ ಮಾಡ್ತಾ ಇದ್ದಾರೆ. ಅವರ ಎಲ್ಲಾ ಅನು ಭವವನ್ನ ಪರೀಕ್ಷೆಗೆ ಒಡ್ಡಿ ಬೆವತು ಹೋಗಿದ್ದಾರೆ. ಹುಡುಗ ದೊಡ್ಡ ಉಸಿರು ತೆಗೆದುಕೊಂಡು ಸ್ವಲ್ಪ ಕಣ್ಣು ಬಿಡುವ ಪ್ರಯತ್ನ ಮಾಡಿದಾಗ ತಕ್ಷಣ ಒಂದು ಇಂಜೆಕ್ಷನ್ ಕೊಟ್ಟ ರು. ಸ್ವಲ್ಪ ಸಮಯದಲ್ಲಿ ದೊಡ್ಡದಾಗಿ ಕಣ್ಣು ಬಿಟ್ಟು ಸುತ್ತಲೂ ನೋಡಿದ. ಡಾಕ್ಟರ್ ಈಗ ದೊಡ್ಡ ಉಸಿರು ತೆಗೆದುಕೊಂಡು ಅವನನ್ನ ಕೇಳಿದರು. ಏನಿದೆಲ್ಲಾ ಏಕೆ ಹೀಗೆ ಮಾಡ್ಕೊಂಡಿ ಅಂತ. ಆಗ ಪಕ್ಕದಲ್ಲೇ ಇದ್ದ ಮನೆ ಮಾಲೀಕಳು ನಾನು ಹೇಳ್ತಿನಿ ಅಂತ ಹೇಳಿದಳು. ಇವನ ಹೆಸರು ರಾಜ. ಇವನಿಗೆ ತಂದೆ ಇಲ್ಲ. ಅಮ್ಮ ಇಬ್ಬರು ತಂಗಿಯರು ಊರಲ್ಲಿದ್ದಾರೆ. ಇವನ ಚಿಕ್ಕಪ್ಪ ಇಲ್ಲಿ ಒಬ್ಬ ಲಾಯರ್. ಅವರ ಹತ್ತಿರ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದಾನೆ. ಸಹವಾಸದೋಷ ಯಾರೋ ಹೇಳಿದರೆಂದು ಸುಲಭವಾಗಿ ಹಣ ಮಾಡಲು.ಕುದುರೆ ರೇಸ್ ಗೆ ಹೋಗಿ ನೂರು ರೂಪಾಯಿ ಕಳೆದು ಕೊಂಡಿ ದ್ದಾನೆ. ಇವನ ಚಿಕ್ಕಪ್ಪ ಊರಿಗೆ ಹೋಗಿದ್ದಾರೆ. ಅವರು ವಾಪಸ್ ಬರುವುದರ ಒಳಗೆ. ನೂರು ರೂಪಾಯಿ ಅಲ್ಲೇ ಇಡಬೇಕು. ಇವನ ಕೈಲಿ ಹೊಂದಿಸಲು ಆಗಿಲ್ಲ. ನಮ್ಮ ಮನೆಯಲ್ಲಿ ಗಿಡಗಳಿಗೆ ಸಿಂಪಡಿಸೋ ಫಾಲಿ ಡಾಲ್ ಅಲ್ಲಿ ನೋಡ್ದ. ಕುಡಿದು ಬಿಟ್ಟ ಡಾಕ್ಟರ್ ಅಂತ ಹೇಳಿದರು.
ಡಾಕ್ಟರ್ ಜೇಬಿನಿಂದ ನೂರು ರೂಪಾಯಿ ತೆಗೆದು, ತೊಗೊ ಇದು ಮತ್ತೆ ಕುದುರೆ ಬಾಲಕ್ಕೆ ಕಟ್ಟಕ್ಕಲ್ಲ. ವಾಪ ಸ್ ಅಲ್ಲೇ ಇಟ್ಟು. ಮುಂದೆ ಇಂತಹ ಕೆಲಸ ಮಾಡಲ್ಲ ಅಂತ ನನಗೆ ಭಾಷೆ ಕೊಡು ಅಂತ ಕೈ ಮುಂದೆ ಮಾಡಿ ದಾಗ. ಆ ಕಾನ್ಸ್ಟೇಬಲ್, ಸಾರ್ ನನಗೆ ಕೆಲಸಹೋದ್ರು ಪರವಾಗಿಲ್ಲ ಈ ಕೇಸ್ ರಿಜಿಸ್ಟರ್ ಮಾಡಲ್ಲ ಹುಡುಗನ ಜೀವನ ಹಾಳಾಗತ್ತೆ ಅಂದರು. ಪಕ್ಕದಲ್ಲಿದ್ದ ಮನೆ ಮಾಲೀಕಳು ಸಹಾ ನೋಡಪ್ಪ ನನಗೆ ನೀನು ಕೊಡ ಬೇಕಾದ ಮೂರು ತಿಂಗಳು ಬಾಡಿಗೆ ಕೊಡಬೇಡ. ಅದನ್ನ ಮನೆಗೆ ಕಳಿಸು ಅಮ್ಮ ಸಂತೋಷ ಪಡ್ತಾರೆ. ಅದಕ್ಕಿಂತ ಮುಖ್ಯ ನೀನು ಮುಂದೆ ಓದು. ಇನ್ನೂ ಚಿಕ್ಕ ವಯಸ್ಸು ನಾನು ಬೇಕಾದರೆ ಸಹಾಯ ಮಾಡ್ತೀನಿ ಅಂದಳು.
ಸುಮಾರು ಇಪ್ಪತ್ತು ವರ್ಷಗಳು ಕಳೆದಿದೆ. ಒಂದು ದಿನ ಯಾರೋ ಗಂಡ ಹೆಂಡತಿ ಇವರ ಕ್ಲಿನಿಕ್ ಗೆ ಬಂದಿ ದ್ದಾರೆ. ಪೇಶೆಂಟ್ ಗಳೆಲ್ಲ ಹೋದಮೇಲೆ ಇಬ್ಬರೂ ಒಳಗೆ ಬಂದು ಡಾಕ್ಟ್ರೇ ನನ್ನ ಗುರುತು ಸಿಗ್ತಾ. ನನ್ನ ಹೆಸರು ರಾಜ ಇವಳು ನನ್ನ ಹೆಂಡತಿ ಇದೇ ಊರಲ್ಲಿ ಈಗ ಸಾಲಿಸಿಟರ್. ನಾನು ಕ್ರಿಮಿನಲ್ ಲಾಯೆರ್. ಇವಳು ಇಲ್ಲಿ ಇರೋ ಕಾರ ಣ ನಾನೂ ಈಗ ಇಲ್ಲಿಗೆ ಶಿಫ್ಟ್ ಆದೆ . ಇಲ್ಲಿಗೆ ಬಂದ ತಕ್ಷಣ ನಿಮ್ಮ ಬಗ್ಗೆ ವಿಚಾರಿಸಿದೆ .ಇದ್ದಾರೆ ಇದೇ ಕ್ಲಿನಿಕ್. ಅಂತ ಹೇಳಿದರು. ಇಲ್ಲಿಗೆ ಸೀದಾ ಬಂದೆ. ಈಗ ಗೊತ್ತಾ ಯ್ತಾ ಅಂದ. ಇಲ್ಲ ಅಂದರು. ನೀವು ನನ್ನ ಪ್ರಾಣ ಉಳಿಸಿ ನೂರು ರೂಪಾಯಿ ಕೊಟ್ಟಿದ್ದು ನೆನೆಪು ಮಾಡಿಕೊಳ್ಳಿ ಅಂದ . ಆಗ ಹೇಳಿದರು ಹೇಗಿದೀಯಪ್ಪ ನನಗೆ ಎಲ್ಲಾ ಜ್ಞಾಪಕ ಬಂತು. ನಿನ್ನ ವೈಫ್ ಗೆ ವಿಷಯ ಗೊತ್ತಾ ಹೇಳಬಾರದ ಅಂದರು. ಪರವಾಗಿಲ್ಲ ಸಾರ್ ನಾನೇ ಎಲ್ಲಾ ಹೇಳಿದ್ದೇನೆ. ನೀವು ಅಂದು ಪ್ರಾಣ ಉಳಿಸಿದ್ದು ನೂರು ರೂಪಾಯಿ ಕೊಟ್ಟಿದ್ದು ಜೊತೆಗೆ ನನಗೆ ಮುಂದೆ ಓದು ಅಂತ ಆ ಮನೆಯ ಆಂಟಿ ಹೇಳಿದ್ದು ನನ್ನನ್ನ ಈ ದಿನ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮಾಡಿದೆ ಅಂದ. ಆ ದಿನಗಳನ್ನ ನೆನೆಯುತ್ತಾ ಕಾಫಿ ತರಿಸಿ ಮೂವ ರೂ ಕುಡಿದರು.