Unmask a web of secrets & mystery with our new release, "The Heel" which stands at 7th place on Amazon's Hot new Releases! Grab your copy NOW!
Unmask a web of secrets & mystery with our new release, "The Heel" which stands at 7th place on Amazon's Hot new Releases! Grab your copy NOW!

Kalpana Nath

Abstract Inspirational Others

3.6  

Kalpana Nath

Abstract Inspirational Others

ಬೂದಿ ಮುಚ್ಚಿದ ಕೆಂಡ

ಬೂದಿ ಮುಚ್ಚಿದ ಕೆಂಡ

3 mins
333



ನಾನು ಲತಾ ಹರೀಷ್. ನನ್ನ ಪತಿಗೆ ಬೆಂಗಳೂರಿಗೆ transfer ಆದ ಕಾರಣ ನಾನೂ ಇಲ್ಲಿ ಮನೆಗೆ ಹತ್ತಿರ ಇದೇ ಅಂತ ಈ ಶಾಲೆಯ ಪ್ರಿನ್ಸಿಪಾಲ್ ಗೆ ನನ್ನ ಹಿಂದೆ ಇದ್ದ ಶಾಲೆಯ experience ತಿಳಿಸಿದ ತಕ್ಷಣ ಒಂದನೇ ತಾರೀಖು join ಆಗಿ ಅಂದರು. ಹಾಗಾಗಿ ಇವತ್ತು ಮೊದ ಲ ದಿನ ಮೊದಲ ಕ್ಲಾಸ್. ತರಗತಿಗೆ ಹೋಗುವಾಗಲೇ ಹತ್ತು ಹಲವು ಪ್ರಶ್ನೆಗಳು ಕಾಡಿತ್ತಾದರೂ ಕ್ಲಾಸ್ ಹ್ಯಾಂಡ ಲ್ ಮಾಡೋದು ನನ್ನ ಅನುಭವಕ್ಕೆ ಏನೂ ಕಷ್ಟ ಆಗಲ್ಲ ಅನ್ನೋ ಮನೋ ಧೈರ್ಯದಿಂದ ಒಳಗೆ ಬಂದೆ. ಎಲ್ಲ ರನ್ನೂ ಒಂದು ಸಾರಿ ನೋಡಿ. ನನ್ನ ಹೆಸರು ಲತಾ ಹರೀಷ್ ಇಂದಿನಿಂದ ನಿಮ್ಮ ಕ್ಲಾಸ್ ಟೇಚರ್. ಹಿಂದೆ ಇದ್ದ ಮ್ಯಾತ್ಸ್ ಮೇಡಂ ಏಕೆ ಬರ್ತಾ ಇಲ್ಲ ಅಂತ ನಿಮಗೆಲ್ಲಾ ಗೊತ್ತಿದೆ ಅಂತ ಕಾಣತ್ತೆ. ಗೊತ್ತಲ್ವಾ ಅಂದಾಗ ಕೆಲವರು ಗೊತ್ತು ಕೆಲವರು ಗೊತ್ತಿಲ್ಲ ಅಂತ ಗಟ್ಟಿ ಧ್ವನಿಯಲ್ಲಿ ಕಿರು ಚಿದಾಗ ಗೊತ್ತಿರೋರು ಕೈ ಎತ್ತಿ ಅಂದೆ. ಎಣಿಸಿ ಇಪ್ಪತ್ತು. ಈಗ ಗೊತ್ತಿಲ್ಲದವರು ಕೈ ಎತ್ತಿ ಅಂದೆ. ಇಪ್ಪತ್ತೈದು ಅಂತ ಎಣಿಸಿ ,ಗೊತ್ತಿರೋರು ಗೊತ್ತಿಲ್ಲದವರಿಗೆ ಕ್ಲಾಸ್ ಆದಮೇ ಲೆ ಹೇಳ್ಬಿಡಿ ಅಂದಾಗ ಇಡೀ ಕ್ಲಾಸೇ ಓ ಅಂತ ಕಿರುಚಿ ಪಕ್ಕ

ದ ಕ್ಲಾಸ್ ನಲ್ಲಿದ್ದ ಪ್ರಿನ್ಸಿಪಾಲ್ ಆಶಾ ಮೇಡಮ್ ಏನಾ ಯ್ತು ಅಂತ ಓಡಿ ಬಂದರು . ವಿಷಯ ತಿಳಿದು ಅವರೂ ನಕ್ಕು ಗುಡ್ ಗುಡ್ ಅಂತ ಹೇಳಿ ಹೋದರು.

ಮಧ್ಯದ ಬೆಂಚಿನಲ್ಲಿ ಕಿಟಕಿ ಹತ್ತಿರ ಕೂತಿದ್ದವನೇ ಇಡೀ ಕ್ಲಾಸ್ ಗೆ ದೊಡ್ಡವನು. ತನಗೆ ಏನೂ ಸಂಭಂದವೇ ಇಲ್ಲ ಅನ್ನೋಹಾಗೆ ತಲೆ ಬಗ್ಗಿಸಿ ಏನೋ ಬರೀತಿರೋದು ಗಮನಿಸಿ ಆಮೇಲೆ ಮಾತಾಡ್ಸೋದೇ ಮೇಲು ಅಂತ ಮನಸಲ್ಲಿ ಅಂದು ಕೊಂಡು . Last bench ನಿಂದ ನೀವೇ introduce ಮಾಡ್ಕೋಳಿ ಅಂದೆ. ಆ ಹುಡುಗನ ಸರದಿ ಬಂದಾಗಲೂ ತಲೆ ಎತ್ತಲಿಲ್ಲ .Next ಅಂದಾಗ ಪಕ್ಕದಲ್ಲಿ ಇದ್ದವನು ಎದ್ದ. ಹಾಗೇ ಮುಂದುವರೆಯಿ ತು .ಅವನ ಬಗ್ಗೆ ಈಗ ಕುತೂಹಲ ಇನ್ನೂ ಹೆಚ್ಚಾಯ್ತು. ಅವನ ಬಗ್ಗೆ ಬೇರೆಯವರಿಂದ ತಿಳಿದು ಕೊಳ್ಳುವದೇ ಸೂಕ್ತ ಅಂತ ಅಂದಿನ ಕ್ಲಾಸ್ ಪ್ರಾರಂಭ ಮಾಡಿದೆ.

Staff room ಗೆ ಬಂದಾಗ ಬೆಳಗ್ಗೆ ಮಾತನಾಡಿದ್ದ ಸುಮಾ 

Next class ಗೆ prepare ಆಗ್ತಾ ಇದ್ದರು. ಒಂದು ನಿಮಿಷ ನಿಮಗೆ disturb ಮಾಡ್ತೀನಿ. last period 8th

B section handle ಮಾಡಿದೆ. ಒಬ್ಬ ಹುಡುಗ ಅವನ ಹೆಸರು ಇನ್ನೂ ಕೇಳಿಲ್ಲ. ಕ್ಲಾಸ್ ನಲ್ಲಿ ಅವನೇ ದೊಡ್ಡವ ನು ಅಂತ ಕಾಣತ್ತೆ. ನೀವು ಏನು ಕೇಳ್ತೀರಿ ಅಂತ ಗೊತ್ತಾ ಯ್ತು. ಅವನ ಹೆಸರು ರಾಹುಲ್ . ಫೇಲ್ ಆಗಿ ಅದೇ ಕ್ಲಾಸ್ ನಲ್ಲಿ ಇದಾನೆ. ಅವನ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳಬೇಡಿ. pricipal ಗೂ ಗೊತ್ತು. you can just ignore ಅಂದಾಗ ಯಾಕೆ ಹೀಗೆ ಹೇಳ್ತಾರೆ. ಒಬ್ಬರು 

ಗುರುವಾಗಿ ಹೀಗೆ ಹೇಳಬಹುದೇ ಅಂತ ಮನಸಲ್ಲಿ ಕೊರಿಯಕ್ಕೆ ಶುರುವಾಯಿತು.

ಮಾರನೇ ದಿನ ನೋಡಿದರೆ ಅವನು ಬಂದಿಲ್ಲ. ಒಳ್ಳೆಯ ದೇ ಆಯ್ತು ಅಂತ ಉಳಿದವರಿಂದ ಅವನ ಬಗ್ಗೆ ತಿಳಿದು ಕೊಳ್ಳುವ ಪ್ರಯತ್ನ ಮಾಡಿದೆ . ಮೇಡಂ ಅವನನ್ನ ಮಾತಾಡಿಸಬೇಡಿ ಅವನು ಒಳ್ಳೆಯವನಲ್ಲ. ಎಲ್ಲರೂ ಹೆದರ್ತಾರೆ.ಅವನಿಗೆ ಹೊರಗಡೆ ರೌಡಿ ಹುಡುಗರೇ 

Friends ಮೇಡಂ ಅಂದ ಒಬ್ಬ. ಅವರ ಅಣ್ಣಾನೂ ರೌಡಿ ಅಂತೆ ಮತ್ತೊಬ್ಬ ಹೇಳಿದ. ಎಲ್ಲಾ ಅಂತೆ ಕಂತೆ 

ಯಾರಾದರೂ ನೋಡಿದೀರಾ ಸ್ವಲ್ಪ ಜೋರು ಧ್ವನಿ ಯಲ್ಲೇ ಹೇಳಿದೆ.. ಯಾರೂ ಉತ್ತರಿಸಲಿಲ್ಲ.ನಾನೂ ಸ್ಟ್ರಿಕ್ಟ್ ಅಂತ ತೋರಿಸಕ್ಕೆ ಇದು ಪೀಠಿಕೆ ಆಯಿತು.

ಬಾಗಿಲಲ್ಲಿ ಯಾರೋ ಬಂದ ಹಾಗಾಗಿ ನೋಡಿದರೆ ಅದೇ ರಾಹುಲ್. may I get in madam ಅಂದ. why late 

ರಾಹುಲ್ ಅಂದಾಗ ಸೈಕಲ್ ಪಂಚರ್ ಆಯಿತು ಅಂದ.

ಇದೇ ಮೊದಲ ಸಲ permission ಕೇಳಿ ಒಳಗೆ ಬಂದಿ ರೋದು ಅಂತ ಆಮೇಲೆ ಹುಡುಗರಿಂದ ತಿಳಿಯಿತು.

ಹಿಂದಿನ ದಿನ ತಲೆ ಎತ್ತದೆ ಏನೋ ಬರೀತಾ ಇದ್ದೋನು. ಇವತ್ತು ನನ್ನ ಮುಖಾನೇ ನೋಡ್ತಾ ಇದಾನೆ. ಒಳಗೊಳಗೇ ಸ್ವಲ್ಪ ಭಯ ಆದರೂ ತೋರಿಸ್ಕೊಳ್ಳದೇ

ಪಾಠ ಮಾಡಿದೆ . Lunch break ಆದಮೇಲೆ ನಾನೇ ಒಂದು ಪಿರಿಯಡ್ ತೆಗದು ಕೊಳ್ಳ ಬೇಕಾಯಿತು. ಆಗ ರಾಹುಲ್ ಪುಸ್ತಕ ದಲ್ಲಿ ಮೊದಲಿನಂತೆ ಏನೋ ಬರೀತಾ ಇದ್ದ. ಈಗ ಧೈರ್ಯ ಮಾಡಿ ರಾಹುಲ್ ಏನು ಬರಿತಾ ಇರೋದು ಅಂತ ನನಗೆ ಹೇಳ್ತೀಯ. ಹೇಳಲ್ಲ ಅಂದ. ನಾನು ನಿನಗೆ ಟೀಚರ್ ಅಂತ ಕೇಳದೇ ನಿನ್ನ ಅಕ್ಕ ಅಂತ ಕೇಳಿದರೆ ಹೇಳ್ತೀಯಾ. ಅಕ್ಕ ಆದರೆ ಹೇಳೋದೇ ಇಲ್ಲ ಅಂದ.

ಅಷ್ಟು ಸೀಕ್ರೆಟ್ ಆದರೆ ಬೇಡಾ ಬಿಡು ಅಂದೆ. ಕ್ಲಾಸ್ ಮುಗಿಸಿ ಸ್ಟಾಫ್ ರೂಮ್ ಗೆ ಬಂದು ಚಾಕ್ ಪೌಡರ್ ನಿಂದ ನನ್ನ ಕಪ್ಪು ಕೈ ಬೆಳ್ಳಗಾಗಿದ್ದಕ್ಕೆ ಕೈ ತೊಳೀತಾ ಇದ್ದೆ.

ಸ್ಟಾಫ್ ರೂಮ್ ನಲ್ಲಿ ನಾನೊಬ್ಬಳೇ ಅಭ್ಯಾಸ ಬಲದಿಂದ

ಹಳೇ ಹಿಂದಿ ಹಾಡು ಹಂ ಮಾಡ್ತಾ ಕನ್ನಡಿಯಲ್ಲಿ ನೋಡಿ ದರೆ ಬಾಗಿಲ ಬಳಿ ರಾಹುಲ್ .ಒಂದು ಕ್ಷಣ ನಡುಗಿ ಹೋದೆ. ಏನು ಬೇಕು ಯಾಕಿಲ್ಲಿ ಬಂದಿ ಅಂತ ಏನೇನೋ 

ಬಡಬಡಾಂತ ಕೇಳಿ ನಾನೇ ಹೊರಗೆ ಬಂದೆ. ಆಗ ನೋ ಟ್ ಬುಕ್ ನನಗೆ ಕೊಟ್ಟು ಮೇಡಂ ನನಗೆ ಇವತ್ತು ನಮ್ಮ ಅಣ್ಣ ಹೇಳ್ದ ನಿಮ್ಮ ಹೊಸ ಮೇಡಂ ಒಳ್ಳೆಯ ಕವಿತೆ ಗಳನ್ನ ಬರೀತಾರೆ. ಇದುವರೆಗೂ ಹತ್ತು ಪುಸ್ತಕ ಗಳನ್ನು ಪಬ್ಲಿಷ್ ಮಾಡಿದಾರಂತೆ .ನೆನ್ನೆ ಟಿ.ವಿ. ಯಲ್ಲಿ ಇಂಟರ್ ವ್ಯೂ ನೋಡಿದಾಗಲೇ ನನಗೂ ತಿಳದದ್ದು ಅಂದ. ಅದಕ್ಕೆ ನಿಮಗೆ ನಾನು ಬರೆದಿರೋದನ್ನ ತೋರಿಸೋಣ ಅಂತ ಬಂದೆ ಅಂತ ನೋಟ್ ಬುಕ್ ಕೊಟ್ಟು ತಲೆ ಬಗ್ಗಿಸ ನಿಂತ. ನಾನು ಮನೇಲಿ ನೋಡಿ ನಾಳೆ ಹೇಳ್ತೀನಿ ಆಗತ್ತಾ ಅಂದೆ .ಆಯಿತು ಮೇಡಂ ಅಂತ ಹೊರಟು ಹೋದ.

ಮನೇಗೆ ಬಂದು ಕೈಕಾಲು ಸಹಾ ತೊಳೀದೆ ನೋಡಿದೆ. ಒಂದು ಕ್ಷಣ ನಾನೇ ನಂಬದಾದೆ ಅದ್ಬುತ ವಾಗಿ 

ಬರೆದಿದ್ದಾನೆ. ಹದಿನಾಲ್ಕು ಹದಿನೈದು ವಯಸ್ಸಿನ ಹುಡುಗ ಹೀಗೆ ಒಂದು ಹೆಣ್ಣನ್ನು ವರ್ಣಿಸಲು ಸಾಧ್ಯವೇ ಅಂತ ಅನುಮಾನ ಬಂತು.


ಮಾರನೆ ದಿನ ನನ್ನ ನಿರೀಕ್ಷೆ ಯಲ್ಲೇ ಇದ್ದ ಅದನ್ನ ಇಂದಿನ ವರೆಗೂ ಯಾರೂ ನೋಡದಿದ್ದ ಅವನ ಭಯ ಮಿಶ್ರಿತ ನಾಚಿಕೆಯ ಮುಖದಿಂದಲೇ ಗ್ರಹಿಸಿದೆ. ಕ್ಲಾಸ್ ನಲ್ಲಿ ಅದರ ಬಗ್ಗೆ ಎಲ್ಲಿ ಪ್ರಸ್ತಾಪ ಮಾಡಿ ಬಿಡುತ್ತೀನೋ ಅನ್ನು ವ ಆತಂಕ ಅವನಲ್ಲಿ ಇತ್ತು. ಅದು ನನಗೆ ಅರ್ಥ ವಾಯ್ತು. ಕ್ಲಾಸ್ ಮುಗಿಸಿ ಹೊರ ಬಂದಾಗ ಹಿಂದೆಯೇ ಬಂದ. ನನ್ನ ಫೋನ್ ನಂಬರ್ ಕೊಟ್ಟು ಸಂಜೆ ಮನೆಗೆ ಬರಲು ಹೇಳಿದೆ .ಮೊದಲು ಮೇಡಂ ನಿಮ್ನ ಮನೇಗಾ ಅಂದ ಹೌದು .ಬಾ ನಿನ್ನ ಕವನಗಳ ಬಗ್ಗೆ ಹೇಳೋದು ಬಹಳ ಇದೆ ಅಂದೆ .ಒಪ್ಪಿ ಬಂದ. ಹರೀಷ್ ಗೆ ಮೊದಲೇ ತಿಳಿಸಿದ್ದೆ.ಅವರೂ ಕೆಲವು ಕರೆಕ್ಷನ್ ಗಳನ್ನು ಹೇಳಿ ಬಹಳ

ಹೋಗಳಿದರು. ಅವನಿಗೆ ಯಾರೂ ಪ್ರೋತ್ಸಾಹಿಸದೆ ಹಾಗಾಗಿದ್ದ. ಅವನಲ್ಲಿ ಕವನ ಬರೆಯಲು ಅಘಾದವಾದ ಸಾಹಿತ್ಯ ಭಂಡಾರವೇ ಇದ್ದರೂ ಯಾರೂ ಗುರುತಿಸಿ ರಲಿಲ್ಲ. ಅಂದಿನಿಂದ ನನ್ನ ನೆಚ್ಚಿನ ಶಿಷ್ಯನಾದ ರಾಹುಲ್.


Rate this content
Log in

More kannada story from Kalpana Nath

Similar kannada story from Abstract