ಹೆಣ್ಣೇ!
ಹೆಣ್ಣೇ!


ಕೆಲವು ವರ್ಷಗಳ ಕೆಳಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನನ್ನ ಸ್ನೇಹಿತರೊಬ್ಬರನ್ನು ಕಾಣಲು
ಹೋಗಿದ್ದೆ.(ಇಲ್ಲಿ ಹೆಚ್ಚಾಗಿ ಹಳ್ಳಿ ಜನರೇ ಬರ್ತಾರೆ) ಅವನು ಮಗುವಿನ ನಿರೀಕ್ಷೆಯಲ್ಲಿ ಆತಂಕದಿಂದ ಲೇಬರ್ ವಾರ್ಡ್ ಹೊರಗೆ ನಿಂತಿದ್ದ. ಇವನಂತೆಯೇ ಇನ್ನೂ ಕೆಲವರು ಇದ್ದರು. ಮಗುವನ್ನು ಬಟ್ಟೆಯಲ್ಲಿ ಸುತ್ತಿ ಒಬ್ಬೊಬ್ಬ ಆಯಾ ಆಚೆ ಬಂದಾಗಲೂ ಎಲ್ಲರೂ ಅವಳ ಬಳಿ ಓಡುವುದು ಅವಳು ತಾಯಿ ಹೆಸರನ್ನು ಕೂಗಿ ಅವರ ಸಂಭಂಧಿಕರಿಗೆ ಮಗು ಮುಖ ತೋರಿಸೋದು , ಗಂಡಾದರೆ ಇನ್ನೂರು ಹೆಣ್ಣಾದರೆ ನೂರು ರೂಪಾಯಿ ಕೊಟ್ಟರೆ ಮಾತ್ರ ಸ್ವಲ್ಪ ಬಟ್ಟೆ ಸರಿಸಿ ತೋರಿಸಿ ಹೋಗುತ್ತಿ ದ್ದರು.
ಹೀಗೆ ಒಬ್ಬ ಆಯಾ ಹೊರಗೆ ಬಂದು ಸರಸ್ವತೀ... ಅಂತ ಕೂಗಿದಾಗ ಒಬ್ಬರು ಓಡಿ ಹೋಗಿ ಕೇಳುವ ಮೊದಲೇ
ಇನ್ನೂರು ಕೊಟ್ಟರು. ನೂರು ವಾಪಸ್ ಕೊಟ್ಟು ಹೆಣ್ಣು ಅಂದಳು .ಆದರೇನು ನನಗೆ ಹೆಣ್ಣೇ ಬೇಕು ಇಟ್ಟುಕೋ
ಅಂದ .ಆ ವ್ಯಕ್ತಿಯ ಕೈ ಕುಲುಕ ವೆರಿ ಗುಡ್ ಅಂದದ್ದು ಮಾತ್ರ ನನಗೆ ಇನ್ನೂ ನೆನೆಪಿದೆ.