The Stamp Paper Scam, Real Story by Jayant Tinaikar, on Telgi's takedown & unveiling the scam of ₹30,000 Cr. READ NOW
The Stamp Paper Scam, Real Story by Jayant Tinaikar, on Telgi's takedown & unveiling the scam of ₹30,000 Cr. READ NOW

Kalpana Nath

Children Stories Others Children

3  

Kalpana Nath

Children Stories Others Children

ದುರಾಸೆ

ದುರಾಸೆ

1 min
299ಒಬ್ಬ ರಾಜ. ಅವನ ದೇಶದಲ್ಲಿ ಎಲ್ಲರೂ ಸುಖವಾಗಿರ ಬೇಕೆಂದು ಹಗಲು ರಾತ್ರಿ ಎನ್ನದೇ ಬಡವರಿಗೆ ಸಹಾಯ ಮಾಡ್ತಾ ಇದ್ದ. ಒಂದು ದಿನ ಮಂತ್ರಿಯನ್ನ ಕರೆದು ಇನ್ನೂ ಯಾರಾದರೂ ಸುಖವಾಗಿಲ್ಲದೇ ಇದ್ದು ನಮಗೆ ತಿಳಿಸದೇ ಕಷ್ಟ ಪಡುತ್ತಿರಬಹುದು ಅಂತ ನನ್ನ ಆಲೋಚನೆ.ಅದಕ್ಕೆ ಯಾರಾದರೂ ಇನ್ನೂ ಕಷ್ಟದಲ್ಲಿದ್ದರೆ ಅಂತಹವರು ಬಂದು ನೂರು ಚಿನ್ನದ ನಾಣ್ಯಗಳನ್ನು ಅರಮನೆ ಯಿಂದ ಪಡೆದು ಕೊಳ್ಳಬಹುದು ಎಂದು ಪ್ರಚಾರ ಮಾಡಲು ಹೇಳಿದ .ಹಾಗೆ ಮಾಡಿದ ಕೆಲವೇ ನಿಮಿಷದಲ್ಲಿ ಅರಮ ನೆಯ ಮುಂಭಾಗ ಜನಗಳ ಉದ್ದ ಸಾಲು. ರಾಜ ಹೆದರಿ 

ಏನಿದು ಎಲ್ಲರೂ ಕಷ್ಟದಲ್ಲಿ ಇದ್ದಾರೆಯೇ ಎಂದು ಮಂತ್ರಿ ಯನ್ನ ಕೇಳಿದಾಗ ನ್ನ ಜೊತೆ ಮಾರುವೇಶದಲ್ಲಿ ಬನ್ನಿ ಎಂದು ಕರೆದು ಕೊಂಡು ಹೋಗಿ ಊರೆಲ್ಲಾ ಸುತ್ತಿದರೂ ಎಲ್ಲ ಮನೆಗಳೂ ಬೀಗ ಹಾಕಿ ಅರಮನೆ ಮುಂದೆ ಬಂದು ನಿಂತಿರುವುದು ಅರಿವಾಯ್ತು. ಹಾಗೆ ಬರುತ್ತಿರುವಾಗ ಒಬ್ಬ ವ್ಯಕ್ತಿ ಮಾತ್ರ ತನ್ನ ಕೆಲಸದಲ್ಲಿ ತಾನು ಯಾವ ಯೋಚನೆಯೂ ಇಲ್ಲದೆ ಹಾಡಿಕೊಂಡು ಇರೋದನ್ನ ಕಂಡು ನೀನೇಕೆ ಬಂಗಾರದ ನಾಣ್ಯಕ್ಕಾಗಿ ಅರಮನೆಗೆ ಹೋಗಿಲ್ಲ ಎಂದಾಗ ಅವನು ಈಗ ನಾನು ನಮ್ಮ ರಾಜನ ದಯೆಯಿಂದ ಸುಖವಾಗಿದ್ದೇನೆ .ಆ ನೂರು ನಾಣ್ಯ ಸಿಕ್ಕರೆ ಕಷ್ಟಗಳನ್ನು ಎದುರಿಸಲೂ ಸಿದ್ದವಾಗಬೇಕು‌. ಅದಕ್ಕೆ ನನಗೆ ಬೇಡ ಅಂದ. ಅವರೆಲ್ಲಾ ಯಾವ ಕಷ್ಟ ವಿಲ್ಲ ದಿದ್ದ ರೂ ಹಣದ ಆಸೆಗೆ ಬಂದವರೆಂದು ರಾಜನಿಗೆ ಅರ್ಥ ವಾಯ್ತು. ಮಂತ್ರಿಯನ್ನು ಹೊಗಳಿ ಅವರೆಲ್ಲರನ್ನೂ ಅಲ್ಲಿಂ ದ ಕಳಿಸಲು ಹೇಳಿದ.

ಎಲ್ಲಾ ಅನುಕೂಲ ಇದ್ದು ಸುಖವಾಗಿರುವ ಮನುಷ್ಯನಲ್ಲಿ ದುರಾಸೆ ಹುಟ್ಟಿದರೆ ಇದ್ದ ಸುಖವೂ ದೂರವಾಗುತ್ತೆ .


Rate this content
Log in