Best summer trip for children is with a good book! Click & use coupon code SUMM100 for Rs.100 off on StoryMirror children books.
Best summer trip for children is with a good book! Click & use coupon code SUMM100 for Rs.100 off on StoryMirror children books.

Kalpana Nath

Horror Classics Others


4  

Kalpana Nath

Horror Classics Others


ಮಿಡಿದ ಮನ

ಮಿಡಿದ ಮನ

3 mins 262 3 mins 262


ಚೆನ್ನೈ ಹತ್ತಿರ ಒಂದು ಆಹಾರ ಸಂಸ್ಕರಿಸುವ ಘಟಕ . ಇಲ್ಲಿ ಸುಮಾರು ಮೂರು ಸಾವಿರ ಉಧ್ಯೋಗಿಗಳು ಕೆಲಸ ಮಾಡ್ತಾರೆ. ಮುರುಗನ್ ಇಲ್ಲಿನ ಒಬ್ಬ ಸೆಕ್ಯುರಿಟಿ ಗಾರ್ಡ್. ಇವನು ಎಲ್ಲರನ್ನೂ ನಗು ಮುಖದಿಂದಲೇ ಸೆಲ್ಯೂಟ್ ಮಾಡಿ ಮಾತನಾಡಿಸಿದರೂ ಬೆರೆಳೆಣಿಕೆ ಯಷ್ಟು ಜನ ಮಾತ್ರ ಕೈ ಎತ್ತಿ ಹಲೋ ಅಂತಲೋ ನಮಸ್ಕಾರ ಅಂತ ಲೋ ಊಟಾ ಆಯ್ತಾ ಅಂತಾನೋ ಉತ್ತರಿಸುವರು. ಅದರಲ್ಲಿ ಮಂಗಳಂ ( Senior Labtechnician ) ಮಾತ್ರ ಒಂದು ನಿಮಿಷ ನಿಂತು ಊಟ ಆಯ್ತಾ ,ಕಾಫೀ ಆಯ್ತಾ ಮುರುಗಾ ಅಂತ ಆತ್ಮೀಯವಾಗಿ ಮಾತನಾಡಿಸುವುದು. ಏನಾದರೂ ಮನೆಯಿಂದ ವಿಶೇಷ ತಿಂಡಿ ಮಾಡಿದ್ದರೆ ತಪ್ಪದೇ ಅವನಿ ಗೂ ಅದರಲ್ಲಿ ಪಾಲು ಇದ್ದೇ ಇರುತ್ತಿತ್ತು.

      ಒಂದು ದಿನ ಸಣ್ಣದಾಗಿ ತುಂತುರು ಮಳೆ ಬರ್ತಾ ಇತ್ತು .ಆ ದಿನ ಬಸ್ ಮಿಸ್ ಆಗಿ ಮಂಗಳಂ ಆಟೋದ ಲ್ಲೇ ಬರಬೇಕಾಯಿತು. ಛತ್ರಿ ಬಹಳ ಒದ್ದೆ ಆಗಿದ್ದರಿಂದ ಮುರುಗನಿಗೆ ಹೇಳಿ ಇಲ್ಲೇ ಇರಲಿ ಒಣಗಿದ ಮೇಲೆ ಬಂ ದು ತೊಗೋತೀನಿ ಅಂತ ಹೇಳಿ ಒಳಗೆ ಹೋದರು. ಸಂಜೆಯೂ ಒಂದೇ ಸಮನೆ ಮಳೆ ಬರ್ತಾನೆ ಇದೆ. ಬಹಳ ಹೆಂಗಸರು ಒಂದು ಗಂಟೆ ಮೊದಲೇ permission ಕೇಳಿ ಮನೆಗೆ ಹೊರಟು ಹೋಗಿದ್ದರು. ಮಂಗಳಂ ಮಾತ್ರ ಕೆಲಸ ಮುಗಿಸಿ ಹೋಗಬೇಕೆಂದು ಅವರ lab ನಲ್ಲಿ ಉಳಿದರು. ಮಳೆ ಜೋರಾದರೂ ಒಳಗೆ ಗೊತ್ತಾಗಿಲ್ಲ. ಎರಡು ಮೂ ರು ಹೊಸ food product ಗಳ critical Testing ನಡಯುತ್ತಿತ್ತು. ಎದುರಿಗೆ ಇದ್ದ ಗಡಿಯಾರ ಆರೂವರೆ ಗಂಟೆ ತೋರಿಸುತ್ತಿದೆ .ಮತ್ತೆ ತಮ್ಮ ವಾಚ್ ನೋಡಿ ಕೊಂ ಡು ಕಿಟಕಿಯಲ್ಲಿ ನೋಡಿದರೆ ಹೊರಗೆ ಆಗಲೇ ಕತ್ತಲಾಗಿ ದೆ. ಮಳೆ ಸ್ವಲ್ಪ ನಿಂತ ಹಾಗಿದೆ. ಆದರೆ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗೋ ಹಾಗಿಲ್ಲ. ಹೊಸ ಬಾಸ್ ಒಳ್ಳೆಯವ ರು .ಈ ವರ್ಷ promotion ಗೆ ಅವರು help ಮಾಡಬೇ ಕಾದರೆ ನಾಳೆ results ತೋರಿಸಿ very good ಅಂತ ಅವರು appreciate ಮಾಡಬೇಕು ಹೀಗೆ ಏನೇನೋ ತಲೆಯಲ್ಲಿ ಯೋಚನೆಯ ಸುಳಿಗಳು ಸುತ್ತುತ್ತಾ ಇರೋ ವಾಗ ತಕ್ಷಣ ಎಲ್ಲಾ ಕಡೆ ಲೈಟ್ ಆಫ್ ಆಯ್ತು . ಎಲ್ಲಿ ನಿಂತಿದೀನಿ ಅಂತಾನೇ ಗೊತ್ತಾಗ್ತಿಲ್ಲ .ಕಿಟಕಿ ಕಡೆ ನೋಡಿ ದರೆ ದೊಡ್ಡದಾಗಿ ಮಿಂಚು ಬಂದು ಢಂ ಢಮಾರ್ ಅಂತ ಸಿಡಿಲು ಹೊಡೆಯಿತು. ಭಯಕ್ಕೆ ಮಕ್ಕಳಂತೆ ಗಟ್ಟಿಯಾಗಿ ಕಿರುಚಿದರು. ಕೈಗೆ ಸಿಗುವ ಹಾಗೆ ಹತ್ತಿರ ಮೊಬೈಲ್ ಸಹಾ ಇಲ್ಲ .ಬ್ಯಾಗ್ ಎಲ್ಲಿದೆ ಗೊತ್ತಾಗ್ತಾ ಇಲ್ಲ. ಎಲ್ಲಾ ಕಡೆ ಕತ್ತಲೆ . ಭಯ ಬೇರೆ..ಯಾರೂ ಇಲ್ಲ. ಏನು ಮಾಡಬೇಕೋ ತಿಳಿ ಯದೇ ಮನಸ್ಸಿನಲ್ಲೇ ತಿಳಿದ ಎಲ್ಲಾ ದೇವರನ್ನ ಬೇಡಿ ಕೊಂಡರು. ಮತ್ತೆ ಸಿಡಿಲು . ಎಂದೂ ಈ ರೀತಿ ಆಗಿರ ಲಿಲ್ಲ. ಈಗ ಇನ್ನೂ ಗಟ್ಟಿಯಾಗಿ ಕಿರುಚಿದರು. ಮಳೆ ಈಗ ಇನ್ನೂ ಜೋರಾಯ್ತು. ಏನಾದರೂ ಆಗಲಿ ಅಂತ ನಿಧಾ ನಕ್ಕೆ ಕಿಟಕಿಯ ದಿಕ್ಕಿನಲ್ಲಿ ಚಲಿಸಿ ಬಾಗಿಲ ಬಳಿ ಬಂದ ರು .ನೋಡಿದರೆ ಹೊರಗಡೆಯಿಂದ ಯಾರೋ ಬೀಗ ಹಾಕಿದ ಹಾಗೆ ಕಾಣ್ತಾ ಇದೆ. ಬಾಗಿಲು ಬಡಿದು ಯಾರಾದ ರೂ ಇದೀರಾ ಅಂತ ಗಟ್ಟಿ ಯಾಗಿ ಕೂಗಿದರು. ಉತ್ತರಿಸ ಲು ಯಾರೂ ಇಲ್ಲ. ಇಡೀ ರಾತ್ರಿ ಕರೆಂಟ್ ಬರದೇ ಹೋದ ರೆ ಅಂತ ಹೆದರಿ ಬಾಗಿಲ ಹತ್ತಿರಾನೇ ನೆಲದ ಮೇಲೆ ತೊಪ್ ಅಂತ ಅಳುತ್ತಾ ಕೂತರು. ಕತ್ತಲಲ್ಲಿ ಏನೇನೋ ವಿಚಿತ್ರ ಶಬ್ದಗಳು. ಕಣ್ಣು ಮುಚ್ಚಿದರೂ ಒಂದೇ ಬಿಟ್ಟರೂ ಒಂದೇ ಗಾಡಾಂಧಕಾರ ಕತ್ತಲು.

  ಇಲ್ಲಿ ಮುರುಗ ಛತ್ರಿ ಇಟ್ಟುಕೊಂಡು ಗೇಟ್ ಹತ್ತಿರ ಬಂದವರನ್ನೆಲ್ಲಾ ಮಂಗಳಂ ಬಗ್ಗೆ ಕೇಳಿದರೆ Ladies ಯಾರೂ ಇಲ್ಲ ಎಲ್ಲಾ ನಾಲ್ಕು ಗಂಟೆಗೆ ಹೊರಟು ಹೋದ ರು ಅಂತಾನೆ ಎಲ್ಲರೂ ಹೇಳ್ತಾ ಇದಾರೆ. .ಆದರೆ ನನ್ನ ನೋಡದೆ ಛತ್ರಿ ತೊಗೊಳ್ದೇ ಹೇಗೆ ಹೋದರು ಅಂತ ಇವನ ಚಿಂತೆ. ಮುರುಗನಿಗೆ ಏನೋ ಒಂದು ರೀತಿ ಹೇಳಿ ಕೊಳ್ಳಲು ಆಗದ ಸಂಕಟ . ಪಕ್ಕದಲ್ಲಿ ಇದ್ದ ಸೆಕ್ಯುರಿಟಿ ಕೇಳಿದಾ ಏನಪ್ಪಾ ಬೆಕ್ಕಿನ ತರಾ ಅತ್ತಿಂದಿತ್ತ ಓಡಾಡ್ತಾ ಇದ್ದೀಯೆ ಏನಾಯ್ತು .ಆಗ ಮುರುಗಾ ಕೇಳ್ದ ಕರೆಂಟು ಹೋದ ಮೇಲೆ ಎಲ್ಲಾ division ಬೀಗ ಚೆಕ್ ಮಾಡಿದ್ರಾ. ಹೌದು ನಾನೇ ಮಳೇಲಿ ಹೋಗಿ ನೋಡಿದೀನಿ ಅಂದ .ನಿಧಾನವಾಗಿ Lab ಮಾತ್ರ ಬೀಗ ಹಾಕದೇ ಹೊರಟು ಹೋಗಿದ್ರು ನಾನೇ ಬೇರೆ ಬೀಗ ಹಾಕಿ complaint bookನಲ್ಲಿ ಬರೆದಿದ್ದೀನಿ ನೋಡು ಅಂದ. ಮುರುಗನಿಗೆ ಏನಾಯಿತೋ ತಕ್ಷಣ key ತೊಗೊಂಡು ಛತ್ರಿ ಹಿಡ್ಕೊಂಡು ಓಡಿದ. ಅವನ ಹಿಂದೇನೆ ಏನಾಯ್ತು ಇವನಿಗೆ ಅಂತ ಇವನೂ ಹಿಂದೇನೇ ಮಳೇಲೇ ಓಡಿದ. ಆಗ ಸುಮಾರು ಎಂಟು ಗಂಟೆ. ಆಗ ಕರೆಂಟೂ ಬಂತು. ಒಳಗೆ ಬಂದು ಮೇಡಂ ಮೇಡಂ ಅತಾ ಕೂಗಿ ದೇವರ ದಯೆ ಮೇಡಂ ಹೊರಟು ಹೋಗಿದಾರೆ ಅಂತ ನಿಟ್ಟುಸಿರು ಬಿಟ್ಟ ಮುರುಗ.

ಏ ನಿನಗೇನಾದರೂ ಹುಚ್ಚು ಹಿಡಿದಿದೆಯಾ , ಎಲ್ಲಾ ನೋಡಿ ಬೀಗ ಹಾಕಿದೆ ಅಂತ ಹೇಳಿದರೂ ಓಡಿ ಬಂದ್ಯಲ್ಲ ಏಕೆ ಅಂತ ಹೇಳಿ ನಾಳೆ ಇದೆ ಆಯಮ್ಮನಿ ಗೆ ಪೂಜೆ . Director ಹತ್ತಿರ ಹೋಗಿ ತಪ್ಪಾಯ್ತು ಅಂತ ಕೈಕಟ್ಟಿ ನಿಲ್ಲಬೇಕು ಅಂದ. ಮುರುಗಾ ನಡಿ ಬಾಗಿಲು ಹಾಕು ಅಂದಾಗ ಏ ಇಲ್ನೋಡು ಯಾರು ಇವರು ಏಕೆ ಇಲ್ಲಿ ಹೀಗೆ ಬಿದ್ದು ಬಿಟ್ಟಿದಾರೆ ಅಂದ. ಟಾರ್ಚ್ ಮುಖದ ಹತ್ತಿರ ಹಿಡಿದು ನೋಡಿ ಕೂಡಿಸಲು ಪ್ರಯತ್ನ ಮಾಡಿದರೂ ಆಗ್ತಿಲ್ಲ. ನೀರು ತಂದು ಕುಡಿಸಕ್ಕೆ ನೋಡಿದರೆ ಕುಡೀತಿಲ.ಯಾರದೋ ಕಾರ್ ನಿಲ್ಲಿಸಿ ಕೊನೇಗೆ ಹತ್ತಿರದ ಆಸ್ಪತ್ರೆಗೆ ಕರೆದು ಕೊಂಡು ಹೋದರು ಸಮಾರು ಮಧ್ಯ ರಾತ್ರಿ ನಿಧಾನಕ್ಕೆ ಕಣ್ಣು ಬಿಟ್ಟರು. ಮುರುಗನ್ ಗೆ ಸಂತೋಷ ಆಯ್ತು. ನಡೆದ ಕಥೆ ಎಲ್ಲಾ ಹೇಳಿದರು. 

ಒಳಗೆ ಸರಿಯಾಗಿ ನೋಡದೆ ಬೀಗ ಹಾಕಿದ್ದ ಸೆಕ್ಯೂರಿಟಿ ಸಸ್ಪೆಂಡ್ ಆದ . ಪ್ರಾಣ ಉಳಿಸಿದ ಮುರುಗನ್ ಗೆ ಪ್ರಶಸ್ತಿ ನಂತರ ಬಡ್ಡಿ ಸಹಾ ಸಿಕ್ಕಿತು.


Rate this content
Log in

More kannada story from Kalpana Nath

Similar kannada story from Horror