Arjun Maurya

Horror Romance Action

4  

Arjun Maurya

Horror Romance Action

ಮೋಹಿನಿ

ಮೋಹಿನಿ

6 mins
490


ಅಯ್ಯೋ..ಅಯ್ಯೋ..

ಆ ನಡು ಕಾರ್ಗತ್ತಲಿನ ಸಮಯದಲ್ಲಿ ಇಡೀ ಗ್ರಾಮವೇ ಬೆಚ್ಚಿ ಬೀಳುವಂತೆ ಯುವತಿಯೊಬ್ಬಳ ಕಿರುಚುವಿಕೆ..!!

ಅಕ್ಕಪಕ್ಕದ ಮನೆಯ ಜನ ಸೇರಿದಂತೆ..ಊರಿಗೇ ಹಿರಿಯರೆಂದು ಖ್ಯಾತಿಗಳಿಸಿದ್ದ ಸುಮಾರು ಐವತ್ತು ದಾಟಿದ ಕೃಷ್ಣಭಟ್ಟರು ತಮ್ಮ ಸುಖನಿದ್ದೆಯಿಂದ ಎಚ್ಚೆತ್ತು ತಮ್ಮ ಹೊಸ ಮನೆ ದುರ್ಗಾನಿವಾಸದಿಂದ ಏದುಸಿರು ಬಿಡುತ್ತಾ ಆ ಭಯಾನಕ ಶಬ್ದ ಕೇಳಿಬಂದತ್ತ ಭಯವಿಹ್ವಲರಾಗಿ ಓಡಿದರು.ಆ ಮಧ್ಯರಾತ್ರಿಯಲ್ಲಿ ಊರಿಗೆ ಊರೇ ಆ ಕಡೆ ಓಡತೊಡಗಿತು..ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಏನಾಯ್ತು ಎಂದು ಕೇಳಲೂ ಸಮಯವಿಲ್ಲದಂತೆ ಓಡತೊಡಗಿದರು.

ಏನಾಯ್ತು? ಎಲ್ಲಿಂದ?

ಶAಕ್ರುಮೇಷ್ಟç ಬಾಡಿಗೆ ಮನೆಯಿಂದ..’ಆ ಮಾತು ಮಾತ್ರವೇ ಎಲ್ಲರಿಗೂ ಓಡುವ ದಿಕ್ಕನ್ನು ನಿರ್ಧರಿಸಿತ್ತು.

ದಡದಡನೆ ಶಂಕ್ರುಮೇಷ್ಟç ಬಾಡಿಗೆ ಮನೆಗೆ ಮುತ್ತಿದರು..ಕೃಷ್ಣಭಟ್ಟರು ಮೇಷ್ಟಿçಗೆ ಬಾಡಿಗೆಗೆ ಕೊಟ್ಟ ಹಳೇ ಮನೆ ಅದು..ಆ ಮನೆಯ ಬಾಗಿಲನ್ನು ಒಳ ತಳ್ಳಿದ ಕೆಲ ಯುವಕರು ಒಳಗಿನ ದೃಶ್ಯವನ್ನು ನೋಡಿ ಭಯದಿಂದ ತತ್ತರಿಸಿದರು. ಜೊತೆಯಾಗಿಯೇ ಒಳ ಬಂದ ಕೃಷ್ಣಭಟ್ಟರ ಹೃದಯವೇ ಹಾರಿದಂತಾಗಿ ಕುಸಿದುಬಿದ್ದರು. ಕೆಲವರು ಭಟ್ಟರನ್ನು ಹಿಡಿದುಕೊಂಡರು. ಎಲ್ಲರೂ ಆ ದೃಶ್ಯ ನೋಡಿ ದಂಗುಬಡಿದವರAತೆ ನಿಂತರು. ಎಲ್ಲರೂ ಮೂಕರಾಗಿಯೇ ನಿಂತಿದ್ದರು. ನೆಲದ ಮೇಲೆ ಯುವತಿಯೊಬ್ಬಳ ದೇಹವು ರಕ್ತದ ಮಡುವಿನಲ್ಲಿ ಅಂಗಾತ ಬಿದ್ದಿತ್ತು. ವಸ್ತçವೆಲ್ಲ ಅಸ್ತವ್ಯಸ್ತವಾಗಿ ತಲೆಕೂದಲು ಕೆದರಿತ್ತು.. ಹೊಟ್ಟೆಯಲ್ಲಿ ಚಾಕುವಿನ ಇರಿತದಿಂದ ಉಂಟಾದ ಗಾಯದಿಂದ ರಕ್ತ ಸಿಕ್ಕಾಪಟ್ಟೆ ಹರಿದಿತ್ತು..ರಕ್ತಸಿಕ್ತವಾದ ಹರಿತ ಚಾಕುವನ್ನು ಹಿಡಿದಿದ್ದ ಶಂಕ್ರಮೇಷ್ಟರರ ಕೈ..ಅವರ ಇಡೀ ದೇಹವೇ ನಡುಗುತ್ತಿತ್ತು..ವಿಪರೀತ ಬೆವತಿದ್ದರು..ತಮ್ಮ ಒಬ್ಬಳೇ ಮಗಳಾದ ಮೋಹಿನಿಯ ಭಯಂಕರ ಕೊಲೆ..!! ಕೃಷ್ಣಭಟ್ಟರ ದೃಷ್ಠಿ ಕಪ್ಪಾಗತೊಡಗಿತು..

ಸಾಧು ಸ್ವಭಾವದವರಾದ..ಊರಿನ ಜನರಿಂದ ಪ್ರೀತಿಗೆ ಪಾತ್ರರಾಗಿದ್ದ ಅವಿದ್ಯಾವಂತರಿಗೆ ಬುದ್ಧಿ ಹೇಳಿ..ಜನರಿಗೆ ಬದುಕುವ ಬಗ್ಗೆ ಒಳ್ಳೆ ಮಾರ್ಗದರ್ಶನ ನೀಡಿ..ಎಲ್ಲರೊಂದಿಗೂ ಬೆರೆತು ಮಾತಾಡುತ್ತಿದ್ದ ಮಲ್ಲಿಗೆ ಹೂವಿನಂಥ ಮನಸ್ಸುಳ್ಳ ಈ ಶಂಕ್ರಮೇಷ್ಟç ಇಂಥ ಭಯಂಕರ ಕೊಲೆ ಮಾಡಿದರೆ??..

***

ಅಪ್ಪಾಜೀ...ಯಾರೋ ಬಂದಿದ್ದಾರೆ ನಿಮ್ಮನ್ನ ನೋಡಲು.’ ಆ ರೂಮಿನ ಬಾಗಿಲ ಬಳಿ ನಿಂತು ಮೋಹಿನಿ ನುಡಿದಳು.

ನಿಶ್ಯಬ್ದವಾಗಿ ಕಾಶಿಮಣೆಯಲ್ಲಿ, ಮಗ್ನರಾಗಿ ಯಾರೊಂದಿಗೋ ಗಹನವಾದ ಚರ್ಚೆಯಲ್ಲಿದ್ದರು ಕೃಷ್ಣಭಟ್ಟರು. ರಾಶಿ ನೋಡಿ ಭವಿಷ್ಯ ನುಡಿಯುವುದರಲ್ಲಿ ಭಟ್ಟರದು ಎತ್ತಿದ ಕೈ. ನಾಲ್ಕು ದಿಕ್ಕುಗಳಿಗೂ ಇವರ ಹೆಸರು ಅಜರಾಮರ. ಏನಾದರೂ ಕಷ್ಟ, ದೋಷವಿದ್ದರೆ.... ಮಾಟ, ಮಂತ್ರ, ತಾಯಿತ ಎನ್ನುವವರಿಗೆ ಆಶಾಕಿರಣವೆಂದರೆ ಈ ಭಟ್ಟರು. ಈ ಊರಿಗೆ ಬಂದು ಸುಮಾರು ನಲವತ್ತು ವರ್ಷ ಪೂರೈಸಿದ್ದಾರೆ. ಈಗಲೂ ಇವರಿರುವಲ್ಲಿಗೇ ಬಡವರಿಂದ ಹಿಡಿದು ಬಲ್ಲಿದರವರೆಗೂ ನೂಕುನುಗ್ಗಲು. ಜನರಿಗೆ ಅಷ್ಟೊಂದು ನಿಷ್ಠೆಯಿತ್ತು ಇವರ ರಾಶಿ ಭವಿಷ್ಯ, ಮಾಟ ಮಂತ್ರದಲ್ಲಿ. ಆ ವಠಾರದ ಕೊನೆಯ ಅಂದರೆ ಸ್ವಲ್ಪವೇ ದೂರದಲ್ಲಿ ಇವರ ದೊಡ್ಡದಾದ ‘ಹೊಸ ಮನೆ ದುರ್ಗಾ ನಿವಾಸ. ಅದರ ಸ್ವಲ್ಪ ಆಚೆಗೆ ಒಂದು ದೊಡ್ಡದಾದ ಮಹಡಿಗಳುಳ್ಳ ಪಾಳು ಮನೆ. ಹಿಂದಿನ ಕಾಲದ ದೊಡ್ಡ ಮನೆಯಂತೆ. ಆದರೆ ಅಲ್ಲಿ ಯಾರೂ ವಾಸವಿಲ್ಲ. ಸುಮಾರು ಇಪ್ಪತ್ತು ವರುಷಗಳ ಹಿಂದೆ ಅಲ್ಲಿ ವಾಸವಾಗಿದ್ದ ಸಂಸಾರ, ಒಂದರ ನಂತರ ಒಂದರAತೆ ಹೆಣವಾಗಿ ಆ ಸಂಸಾರವೇ ನಾಶವಾಗಿತ್ತು. ಕೃಷ್ಣಭಟ್ಟರ ರಾಶಿ ಪ್ರಶ್ನೆ ಪ್ರಕಾರ ಎಷ್ಟೋ ವರ್ಷಗಳಿಂದ ಆ ಮನೆಯಲ್ಲಿ ಮೋಹಿನಿ ನೆಲೆಸಿದ್ದು ಗಂಡಸರನ್ನು, ಅದರಲ್ಲೂ ಯುವಕರನ್ನು ಕಂಡರೆ ಅವರನ್ನಾಕರ್ಷಿಸುವಂತ ರೂಪ ತೋರಿ ಕಾಮಸುಖ ಪಡೆದು, ಕೊನೆಗೆ ಅವರನ್ನು ರಕ್ತಕಾರಿಸಿ ಕೊಲ್ಲುವುದು. ಈ ವಿಷಯ ತಿಳಿದ ಊರಿನ ಜನ ಆ ಕಡೆಗೆ ಮುಖ ಕೂಡ ತೋರಿಸುತ್ತಿರಲಿಲ್ಲ. ಅಂತೂ ಆ ಮನೆಯನ್ನು ಕೃಷ್ಣಭಟ್ಟರೇ ವಹಿಸಿಕೊಂಡರು. ಊರಿಗೆ ಯಾರಾದರು ಪರರು ಬಂದರೆ ಬಾಡಿಗೆಗೆ ಕೊಡುತ್ತಿದ್ದರು. ಅದಕ್ಕೆ ಮುನ್ನ ಆ ಮನೆಯ ಇತಿಹಾಸವನ್ನು ಹೇಳುತ್ತಿದ್ದರು. ವಿಷಯ ಕೇಳಿದ ಕೂಡಲೇ ಒಂದಿಬ್ಬರು ಪಲಾಯನ ಮಾಡಿದರೆ, ರಾತ್ರಿ ದೊಡ್ಡ ಮನೆಯಲ್ಲಿ ತಂಗಿದ್ದು, ಆ ಭಯಂಕರ ಸದ್ದು ಗದ್ದಲದೊದಿಗೆ ಸಿಕ್ಕಾಪಟ್ಟೆ ಹೆದರಿ ಬೆಳಿಗ್ಗೆಯೇ ಖಾಲಿ ಮಾಡಿದವರು ಎಷ್ಟೋ ಮಂದಿ.

ತಮ್ಮ ಮನೆಗೆ ಯಾವುದೇ ಗಂಡಾAತರ ಬರಬಾರದೆಂದು ಭಟ್ಟರು ಬಿಗಿಭದ್ರಮಾಡಿ, ದುರ್ಗಾನಿವಾಸ’ ಎಂಬ ಹೆಸರನ್ನೂ ಇಟ್ಟು ಕೊಂಡಿದ್ದರು. ಮಗಳು ಮೋಹಿನಿಗೆ ತೊಂದರೆ ಬರಬಾರದೆಂದು ರಕ್ಷಾಯಂತ್ರದ ತಾಯಿತ ಕೂಡ ಕಟ್ಟಿದ್ದರು.

ರಾಶಿ ಮಣೆಯಿಂದ ಎದ್ದ ಭಟ್ಟರು ಆ ವ್ಯಕ್ತಿ ಕೊಟ್ಟ ನೂರರ ಮೂರು ನೋಟುಗಳನ್ನು ಪಡೆದುಕೊಂಡು ಪೆಟ್ಟಿಗೆ ಒಳಗೆ ಹಾಕಿ ಮುಚ್ಚಿದ್ದರು. ಆ ವ್ಯಕ್ತಿ ನಮಸ್ಕಾರ ಮಾಡಿ ಹೊರಟು ಹೋದ. ಪಂಚೆ ಸರಿಪಡಿಸಿಕೊಂಡು, ಜನಿವಾರ ನೀವುತ್ತಾ ಬಾಗಿಲಿನಿಂದ ಹೊರ ದಾಟಿದ ಭಟ್ಟರನ್ನು ನೋಡಿ ಮೊಗಸಾಲೆಯಲ್ಲಿ ಕುಳಿತಿದ್ದ ಶಂಕರ್ ಎದ್ದು ನಿಂತು

ನಮಸ್ಕಾರ’ ಎಂದನು.

ನಮಸ್ಕಾರ..ಪರವಾಯಿಲ್ಲ ಕುಳಿತುಕೊಳ್ಳಿ.... ಅಂದ್ಹಾಗೇ ತಾವು ರಾಶಿ ಕೇಳಲು ಬಂದವರೋ...ಹೊಗೆಸೊಪ್ಪನ್ನು ಎಲೆ ಅಡಿಕೆ ಜಗಿಯುತ್ತಿದ್ದ ಬಾಯಿಯೊಳಗೆ ತೂರಿಸಿ ದಿಟ್ಟಿಸಿ ನೋಡುತ್ತಾ ನುಡಿದರು ಭಟ್ಟರು.

ಇಲ್ಲ ಸಾರ್..ನಾನು ಇಲ್ಲಿರೋ ಪ್ರೌಢ ಶಾಲೆಗೆ ವರ್ಗವಾಗಿ ಬಂದಿದ್ದೇನೆ... ನನ್ನದು ಅಧ್ಯಾಪಕ ವೃತ್ತಿ...ಹೆಸ್ರು ಶಂಕರ್ ಅಂತ’

ಹೌದೋ!..ಸAತೋಷ ಏನಾದ್ರೂ ಸಹಾಯ ಆಗ್ಬೇಕಿತ್ತೋ..?’

ಏನಿಲ್ಲ ಸಾರ್, ನನಗೆ ದಿನಾ ಕೆಲಸ ಬಿಟ್ಟು ಬಂದು ತಂಗಲು ಒಂದು ಬಾಡಿಗೆ ರೂಂ ಬೇಕು.. ದಯವಿಟ್ಟು ಅದೊಂದು ಸಹಾಯ ಮಾಡಿ...’ ಶಂಕರ್ ಕೈಮುಗಿದು ಕೇಳಿದಾಗ, ಭಟ್ಟರು ಒಂದು ಕ್ಷಣ ಮೇಷ್ಟçನ್ನ ಕಾಲಿನಿಂದ ತಲೆಯವರೆಗೂ ಅಳೆದರು.

ಸುಮಾರು ಇಪ್ಪತ್ತಾರು ದಾಟಿದ ಯೌವನ ತುಂಬಿ ತುಳುಕುತ್ತಿರುವ ಯುವಕ. ನೀಳ ಮೂಗು, ತುಂಬಿದ ಗಲ್ಲ, ತೀಕ್ಷ÷್ಣ ಕಣ್ಣುಗಳು, ಚಿಗುರು ಮೀಸೆ, ಕ್ರಾಪು ಮಾಡಿ ಬಾಚಿದ ತಲೆಗೂದಲು, ಎತ್ತರಕ್ಕೆ ತಕ್ಕಂತೆ ಮೈಕಟ್ಟು, ನೋಡಿದಾಕ್ಷಣ ಆಕರ್ಷಿಸುವಂತ ರೂಪ ಲಕ್ಷಣ.

ಮೊಗಸಾಲೆಯಿಂದ ಹೊರ ನಡೆದು ಬೇಲಿಯ ಬುಡಕ್ಕೆ ತಾಂಬೂಲ ರಸವನ್ನು ಉಗಿದು ಬಂದ ಭಟ್ಟರು, ದೊಡ್ಡಮನೆಯ ವಿವರಗಳನ್ನೆಲ್ಲಾ ಮೇಷ್ಟç ಕಣ್ಣಿನ ಮುಂದೆ ನಡೆದಂತೆಯೇ ವಿವರಿಸಿ

ತಮಗೆ ಕಷ್ಟವಾಗೋದಾದ್ರೆ ನಮ್ಮನೆಯಲ್ಲೇ ರ‍್ಬೋದು...’ ಎಂದರು.

ಇAಥ ನಂಬಿಕೆಗಳಲ್ಲಿ ವಿಶ್ವಾಸವಿಲ್ಲದ ಮೇಷ್ಟುç ಭಟ್ಟರ ಮಾತಿಗೆ ನಕ್ಕು ನುಡಿದರು.

ರ‍್ವಾಗಿಲ್ಲ..ನನಗೆ ಅದೇ ಮನೆ ಸಾಕು...ಇವತ್ತಿನಿಂದಲೇ ಅಲ್ಲಿ ತಂಗುತ್ತೇನೆ....’

ಬೇಡ ಮಾರಾಯರೆ...ನೀವು ಅಲ್ಲಿ ಇವತ್ತು ತಯಾರಿ ಮಾಡಿ... ನಾಳೆಯಿಂದ ಇರಿ... ಇವತ್ತು ನಮ್ಮ ಮನೆಯಲ್ಲೇ ಊಟ ಮಾಡುವಿರಂತೆ....ಭಟ್ಟರೆAದರು.

ರ‍್ವಾಗಿಲ್ಲ ಸರ್ ಬೇಡ’

ಇಲ್ಲ ನೀವು ಇವತ್ತು ಇಲ್ಲೇ ಊಟ ಮಾಡಿ’ ಭಟ್ಟರ ಗಟ್ಟಿ ಮಾತಿಗೆ, ಮೇಷ್ಟುç ತಲೆಯಾಡಿಸಿದರು. ಭಟ್ಟರ ಮನೆಯ ಒಂದು ಕೋಣೆಯಲ್ಲೇ ತಂಗಿದರು.

ಆ ದಿನ ದೊಡ್ಡ ಮನೆಯಲ್ಲಿ, ಆ ವಿಶಾಲ ರೂಮನ್ನು ಸ್ವಚ್ಛಗೊಳಿಸಲು ಮೇಷ್ಟಿçಗೆ ನೆರವಾದವಳು ಮೋಹಿನಿ. ಕೃಷ್ಣಭಟ್ಟರ ನಿವಾಸವು ಮೇಷ್ಟಿçಗೆ ಪ್ರಿಯವಾಗಿತ್ತು. ಭಟ್ಟರಿಗೂ ಮೇಷ್ಟç ನಡೆನುಡಿ ಇಷ್ಟವಾಗಿತ್ತು. ದಿನಗಳುರುಳಿದಂತೆ ಮೋಹಿನಿ ಮೇಷ್ಟಿçಗೆ ಹತ್ತಿರವಾಗುತ್ತಿದ್ದಳು. ಮೇಷ್ಟç ಸ್ನೇಹ ಖುಷಿಯಾಗುತ್ತಿತ್ತು ಮೇಷ್ಟçನ್ನು ನೋಡುತ್ತಿದ್ದರೆ ಅವಳಿಗೆ ಗೌರವದ ಜತೆಗೆ ಅವಳಿಗರಿವಿಲ್ಲದಂತೆ ಆಸಕ್ತಿ-ಪ್ರೀತಿ ಮಿಡಿಯತೊಡಗಿತು..ಅದು ಅವಳಿಗರಿವಿಲ್ಲದಂತೆ ಮೂಡತೊಡಗಿತ್ತು. ಪ್ರತೀ ದಿನ ತಾನು ತನ್ನ ಬಾಡಿಗೆ ಮನೆಗೆ ಹೋಗೋಕ್ಕಿಂತ ಮುಂಚೆ ಮೇಷ್ಟುç ಭಟ್ಟರ ಮನೆಯಲ್ಲಿ ಊಟ ಮಾಡಿ ನಂತರ ಎಲೆ ಅಡಿಕೆ ಜಗಿದು, ಲೋಕಾರೂಢಿ ಮಾತನಾಡಿ ತೆರಳುತ್ತಿದ್ದರು.

***

ಮೇಷ್ಟಿçಗೆ ಆ ಹೊಸ ಜಾಗ, ಮೊದಲ ದಿನದಲ್ಲಿ ಸ್ವಲ್ಪ ವಿಚಿತ್ರ ಮತ್ತು ಭಯ ಮೂಡಿಸಿತ್ತು. ದೀಪದ ಮಂದ ಬೆಳಕು ಆ ದೊಡ್ಡ ಮನೆಯಲ್ಲಿ ಸ್ವಲ್ಪವೇ ಹರಡಿತ್ತು. ಮನೆಯೊಳಗೆ ಗವ್ವೆನಿಸುತ್ತಿತ್ತು. ಆ ಹಳೇ ಮನೆಯಲ್ಲಿ ಹೆಗ್ಗಣಗಳ ಕಾಟ ಬೇರೆ. ಮೇಷ್ಟುç ಮೆಲ್ಲನೆ ಮಂಚಕ್ಕೊರಗಿ ಆ ಕಡೆಯ ವಿಶಾಲ ಕಿಟಕಿ ಕಡೆ ನೋಡಿದರು. ಮಹಡಿ ಮೇಲಿನಿಂದ ದಡದಡನೆ ಬಂದ ಶಬ್ದಕ್ಕೆ ಗಲಿಬಿಲಿಗೊಂಡರು. ಸ್ವಲ್ಪ ಹೊತ್ತು ನಿಶ್ಯಬ್ದ. ಆ ವಿಶಾಲ ಕಿಟಕಿಯಲ್ಲಿ ಯಾರಾದರೂ ಬಂದರೆ ಕಂಡು ಹಿಡಿಯ ಬಹುದಾದಷ್ಟು ಬೆಳಕಿತ್ತು. ಪುನ: ವಿಚಿತ್ರ ದಡದಡ ಶಬ್ದ, ಕಿಟಕಿಯಲ್ಲಿ ಕಪುö್ಪ ಚಿತ್ರಣ ತೋರಿತು. ಮೇಷ್ಟç ಸ್ವಲ್ಪ ಗಲಿಬಿಲಿಗೊಂಡರು. ಸ್ವಲ್ಪ ಧೈರ್ಯ ತಂದುಕೊAಡು ಸ್ಪಷ್ಟವಾಗಿ ನೋಡಿದರು. ಮಿಯಾಂವ್’ ಎನ್ನುತ್ತಾ ಆ ನೆರಳು ದಾಟಿ ಹೋಯಿತು. ಬೆಕ್ಕು ಎಂದಾದಾಗ ನಿಟ್ಟುಸಿರು ಬಿಟ್ಟು ಮಲಗಿದರು. ನಿದ್ರೆ ಬರಲಿಲ್ಲವಾದರೂ ಹೊರಳಾಡಿದರು. ಭಟ್ಟರು ಹೇಳಿದ ಮಾತು ಪದೇ ಪದೇ ಜ್ಞಾಪಕಕ್ಕೆ ಬರುತ್ತಿತ್ತು. ಹೇಗೂ ಆ ರಾತ್ರಿ ಕಳೆದರು.

***

ದಿನಗಳುರುಳುತ್ತಿದ್ದವು...ಭೂತದ ಮನೆಯಲ್ಲಿ ಮಲಗುತ್ತಿದ್ದ ಮೇಷ್ಟçಲ್ಲಿ ಯಾವ ಬದಲಾವಣೆಯನ್ನು ಕಾಣದ ಕೇರಿಯ ಜನ ಮೂಕವಿಸ್ಮಿತರಾದರು. ಸಂಶಯದಿAದ ಕೇಳಿದ ಪ್ರಶ್ನೆಗೆ, ಮೇಷ್ಟುç ಮೂಢನಂಬಿಕೆ ವಿರುದ್ಧ ಹಲವಾರು ಮಾರ್ಗದರ್ಶನ ನೀಡಿ ಜನರಿಗೆ ಬುದ್ಧಿವಾದ ಹೇಳಿದ್ದರು. ಜನಗಳು ನಂಬಿದ್ದರೂ ದೊಡ್ಡ ಮನೆಗೆ ಮಾತ್ರ ಕಾಲಿಡಲಿಲ್ಲ. ಆದರೆ ಬುದ್ಧಿವಾದ ಹೇಳುವ ಮೇಷ್ಟುç ರಾತ್ರಿಯಾಯಿತೆಂದಾದಾಗ...ಆ ಮನೆಯಲ್ಲಿನ ವಿಚಿತ್ರ ಶಬ್ದಗಳ ನಡುವೆ ಭಯಪಡುತ್ತಿದ್ದುದು ಮಾತ್ರ ಯಾರಿಗೂ ಗೊತ್ತಿರಲ್ಲಿಲ್ಲ...ದಿನಾ ಒಂದಿಲ್ಲೊAದು ಅನುಭವ. ವಿಚಿತ್ರವಾಗಿ ಬರುವ ಶಬ್ದ..ಮನೆ ಬಿಟ್ಟು ಬೇರೆ ಕಡೆ ಹೋಗೋಣವೆಂದು ಅನ್ನಿಸುತ್ತಿತ್ತು. ಆದರೆ ಮರ್ಯಾದೆ ಪ್ರಶ್ನೆ..ತನ್ನನ್ನು ತಾನು ಕೊಚ್ಚಿಕೊಂಡು ಈ ಮನೆಗೆ ಕಾಲಿರಿಸಿದ್ದರು.

ಪಾಠ ಮುಗಿಸಿ ಬರುತ್ತಿದ್ದ ಮೇಷ್ಟುç ಭಟ್ಟರ ನಿವಾಸಕ್ಕೆ ಹೋಗುತ್ತಿದ್ದರು. ಅದೇ ಅವಕಾಶವೆನ್ನುವಂತೆ ಮೋಹಿನಿ ಕಾಫಿ ಹಿಡಿದು ಅವರ ಮುಂದೆ ಲಜ್ಜೆಯಿಂದ ನಿಲ್ಲುತ್ತಿದ್ದಳು. ಕಾಫಿ ಹೀರಿ ಲೋಟ ಕೊಡುವಾಗ ಪುನ: ಅದೇ ಸ್ನೇಹಪೂರ್ವಕ ನಗು..ಮೋಹಿನಿ ಅರ್ಥಾತ್ ಮೋಹಕ್ಕೊಳಗಾಗಿದ್ದಳು..ಮೇಷ್ಟುç ಮಾತ್ರ ಅದೇ ಸ್ನೇಹಪೂರ್ವಕ ನಗು.

***

ಮೋಹಿನಿಗರಿವಿಲ್ಲದಂತೆ ಅವಳ ಮನಸ್ಸು ಮೇಷ್ಟç ಕಡೆಗೆ ವಾಲುತ್ತಿದ್ದುದು ಅವಳ ಅರಿವನ್ನು ಮೀರಿತ್ತು. ಮೇಷ್ಟಿçಗೆ ಅದು ತಿಳಿದಿರಲಿಲ್ಲ. ಆದರೆ ಅವಳು ಅವರನ್ನೇ ಹಚ್ಚಿಕೊಂಡಿದ್ದಳು. ರಾತ್ರಿಯ ಅವಳ ಕನಸು ಮೇಷ್ಟಿçಗೇ ಮೀಸಲಾಗಬೇಕೆಂದು ಆಕೆ ನಿರ್ಧರಿಸಿದ್ದಳು. ಅವಳ ಸ್ನೇಹದ ಸ್ವರೂಪ ಪ್ರೇಮಕ್ಕೆ ತಿರುಗುತ್ತಿದೆ ಎಂಬುದರ ಅರಿವು ಮೇಷ್ಟಿçಗೂ ಇರಲ್ಲಿಲ್ಲ. ಅವರ ಮನದ ತುಂಬಾ ಭಟ್ಟರ ದೊಡ್ಡ ಮನೆಯಲ್ಲಿ ರಾತ್ರಿ ಕಾಡುವ ಮೋಹಿನಿಯ ಮೇಲೆ...?! ಅದು ನಿಜವಾಗ್ಲೂ ಇದೆಯೋ? ಇಲ್ಲವೋ?! ಎಂದು. ಇದೆ’ ಎಂದಾದರೆ???.. ಒಂದು ಕ್ಷಣ ಕಲ್ಪಿಸಿಕೊಳ್ಳಲೂ ಭಯವಾಯ್ತು. ಅದಾಗುವುದು ಮಾತ್ರ ಬೇಡ..ಮನ ನುಡಿಯುತ್ತಿತ್ತು.

***

ಅ ದಿನ ಮನೆಯಲ್ಲಿ ಏನೋ ಸಡಗರ. ಭಟ್ಟರ ಮನೆಗೆ ಹುಡುಗಿ ನೋಡಲು ಶಿರಸಿ ಕಡೆಯಿಂದ ಬಂದಿದ್ದರು. ಅಂತೂ ಹುಡುಗ ಮೋಹಿನಿಯನ್ನು ನೋಡಿ ಮೆಚ್ಚಿದ್ದನು. ಭಟ್ಟರಿಗೆ ಖುಷಿಯೋ ಖುಷಿ. ಮೋಹಿನಿಗಂತೂ ಈಗಲೇ ಹೋಗಿ ಮೇಷ್ಟಿçಗೆ ವಿಷಯ ತಿಳಿಸಿದರೇನು? ಅಂತಾಗಿತ್ತು. ಅಂತೂ ನಿಶ್ಚಿತಾರ್ಥದ ದಿನಾಂಕ ಭಟ್ಟರೇ ತಿಳಿಸಿದ ಮೇಲೆ ಶಿರಸಿಯ ನೆಂಟರು ಹೊರಟು ಹೋದರು. 

ರಾತ್ರಿ ಭಟ್ಟರೊಂದಿಗೆ ಮೇಷ್ಟುç ಮಾತನಾಡುತ್ತಿದ್ದರು. ಭಟ್ಟರು ಮೋಹಿನಿಯ ಮದುವೆ ವಿಷ್ಯ ಪ್ರಸ್ತಾಪಿಸಿದಾಗ, ಮೇಷ್ಟುç ಒಳ್ಳೆಯ ಹಾರೈಕೆಯ ಮಾತುಗಳನ್ನಾಡಿ ಸಂತೋಷ ವ್ಯಕ್ತಪಡಿಸಿದರು.

ಅಂತೂ ನಮ್ಮನ್ನು ಬಿಟ್ಟು ಹೋಗ್ತೀರಾ ಅಂತಾಯ್ತು...’ ಮೇಷ್ಟುç ಮೋಹಿನಿಯನ್ನು ನೋಡುತ್ತಾ ನುಡಿದರು, ಆ ನೋಟದಲ್ಲಿ ಅವಳು ಅವಳ ಇನಿಯನನ್ನು ಕಂಡಿದ್ದಳು. ಮೋಹಿನಿಗೆ ದು:ಖ ಒತ್ತರಿಸಿ ಬಂತು..ಒಮ್ಮೆ ಜೋರಾಗಿ ಅಳಬೇಕೆನಿಸಿತು.

ಕೃಷ್ಣಭಟ್ಟರು ಮೌನವಾಗಿದ್ದರು.

ಅವತ್ತು ಭಟ್ಟರು ಹಾಗೂ ಸ್ವಲ್ಪ ಜಾಸ್ತಿ ಹೊತ್ತೇ ಮಾತನಾಡಿದ್ದರು. ನಂತರ ವಾಚ್ ನೋಡಿದ ಮೇಷ್ಟುç ಅಲ್ಲಿಂದ ತನ್ನ ಬಾಡಿಗೆ ಮನೆ ಕಡೆ ಹೊರಟರು. ಭಟ್ಟರು ತಮ್ಮ ರೂಮಿನ ಕಡೆ ಹೆಜ್ಜೆ ಹಾಕಿದರು. ಮೇಷ್ಟುç ಮಾಮೂಲಿನಂತೆ ಇವತ್ತು ಕೂಡ ಆ ಕಡೆ ನೋಡಿದರು..ಮೋಹಿನಿಗೆ ಗುಡ್‌ನೈಟ್ ಹೇಳುವುದು ರೂಢಿ. ತುಂಬಾ ಹೊತ್ತಾದುದರಿಂದ ಪಾಪ ಮಲಗರ‍್ತಾಳೇನೋ ಅಂದುಕೊAಡರು. ಆದರೆ ಮೋಹಿನಿ ಮಲಗಿರಲಿಲ್ಲ..ಇವರನ್ನೇ ನೋಡುತ್ತಿದ್ದಳು.ಮೇಷ್ಟುç ಅವಳನ್ನು ಗಮನಿಸಿದರು..ಮಾಮೂಲಿನಂತೆ ಅವಳಿರಲ್ಲಿಲ್ಲ. ಆ ನಗು ಕೂಡ ಇರಲ್ಲಿಲ್ಲ. ಮೇಷ್ಟಿçಗೆ ತುಂಬಾ ನಗಲಾಗಲಿಲ್ಲ..ಆದರೂ ನಕ್ಕರು..ಗುಡ್‌ನೈಟ್ ಅಂದರು. ಸ್ವಲ್ಪ ಹೊತ್ತು ಮೌನ..ಮೇಷ್ಟುç ತಲೆತಗ್ಗಿಸಿ ನಡೆದರು.

ಅವಳಿಗೆ ಹೃದಯವೇ ಬಿರಿದಂತಾಯ್ತು..ಹೌದು! ಮೇಷ್ಟುç ನನ್ನನ್ನ ನಿಜವಾಗ್ಲೂ ಪ್ರೀತಿಸ್ತಿದ್ದಾರೆ.. ಇವತ್ತಿನ ಸನ್ನಿವೇಶದ ನೋವನ್ನು ನುಂಗುತ್ತಿದ್ದಾರೆ ಅಷ್ಟೆ. ಅವರನ್ನು ನಾನು ಗಾಢವಾಗಿ ಪ್ರೀತಿಸಿದ್ದೇನೆ ಎಂದೂ ಅವರಿಗೆ ಗೊತ್ತಿದೆ..ಹೇಗೂ ಧರ‍್ಯ ಮಾಡಿ ಅವರನ್ನು ಕೇಳಲೇಬೇಕು.. ಹೇಗೆ ಕೇಳುವುದು? ಮಂಚದಲ್ಲಿ ಹೊರಳಾಡಿದಳು..ನಿದ್ರೆ ಬರಲಿಲ್ಲ...ಪುನ: ಯೋಚಿಸಿದಳು.. ಅವರು ನನ್ನ ಸನಿಹವನ್ನು ಬಯಸುತ್ತಿದ್ದಾರೆಯೇ..ಹೌದು! ಅವರ ಜೊತೆ ಮಾತನಾಡಲೇಬೇಕು... ಆದದ್ದಾಗಲಿ ನನ್ನ ಮನದಾಸೆ ಅವರೊಂದಿಗೆ ಬಿಚ್ಚಿಡಬೇಕು.. ಅವರ ಅದೇ ಪ್ರೇಮಾಸ್ವಾದನೆಯ ನಗೆಯಲ್ಲಿ ಲೀನವಾಗಬೇಕು..ಅವರ ಮುಗ್ಧ ಮುಖದ ಸನಿಹ ನನ್ನ ತುಟಿಗಳನ್ನು ಕೊಂಡೊಯ್ಯಬೇಕು.. ಅವಳ ಕಣ್ಣಲ್ಲಿ ಏನೇನೋ ಕನಸುಗಳು ಹಾದು ಹೋಗುತ್ತಿದ್ದವು.

***

ಮಧ್ಯರಾತ್ರಿಯ ಆ ಸಮಯವೇಕೋ ಮೇಷ್ಟಿçಗೆ ನಿದ್ದೆ ಹತ್ತಲಿಲ್ಲ. ಹಾಸಿಗೆಯಲ್ಲಿ ಒದ್ದಾಡುತ್ತಿದ್ದರು. ಏಕೋ ಏನೋ ಬೇಡವೆಂದರೂ ಮೋಹಿನಿ ಮನದೊಳಗೆ ನುಗ್ಗಿದ್ದಳು. ನಿದ್ದೆ ಹತ್ತಲು ಒದ್ದಾಡುತ್ತಿದ್ದರೂ..ಅವರಿಗರಿವಿಲ್ಲದಂತೆ ಕನಸಿಗೆ ಜಾರಹತ್ತಿದ್ದರು. ಆದರೆ ಮಹಡಿ ಮೇಲಿಂದ ಜೋರಾಗಿ ಏನೋ ಬಿದ್ದಂತೆನಿಸಿ..ಗಾಬರಿಯಿAದ ಕಣ್ತೆರೆದರು. ಹೌದಲ್ಲ..ಇದು ಕನಸಲ್ಲ..ಇವತ್ತು ಯಾಕೋ ಸ್ವಲ್ಪ ಜಾಸ್ತಿನೇ ಶಬ್ದ ಬರುತ್ತಿದೆ. ಊರಿನ ಕೆಲ ಜನರ ಮುಂದೆ ಬಡಾಯಿಗೋಸ್ಕರ ಒಪ್ಪಿಕೊಂಡ ಈ ಮನೆ ರಾತ್ರಿಯಾಯಿತೆಂದರೆ ಪ್ರಾಣ ಹಿಂಡುತ್ತಿದೆ ಎಂದೆನಿಸಿತು. ನನಗೆ ಈ ಮನೆ ಬೇಕಾಗಿರಲಿಲ್ಲ ಯೋಚಿಸುತ್ತಿರುವಾಗಲೇ..ಯಾರೋ ಜೋರಾಗಿ ಉಸಿರೆಳೆದ ಶಬ್ದ..ಮೇಷ್ಟುç ಬೆವರತೊಡಗಿದರು..

ಯಾರು? ಅವರ ಧ್ವನಿ ಕ್ಷೀಣಿಸಿತ್ತು..

ತನ್ನ ಹೃದಯದ ಬಡಿತ ತನಗೇ ಕೇಳಿಸುತ್ತಿತ್ತು. ಮತ್ತೊಮ್ಮೆ ಯಾರೋ ಓಡಿದಂತಹ ಅನುಭವ..ತನಗೆ ತಾನೇ ಧೈರ್ಯ ತಂದುಕೊಳ್ಳುವಷ್ಟರ ಮಟ್ಟಿಗಿನ ಶಬ್ದವಾಗಿರಲಿಲ್ಲ ಅದು. ಇಡೀ ಊರಿಗೆ ಧೈರ್ಯ ತುಂಬುವ ನನಗೇಕೆ ಹೀಗೆ..ನಾನೇಕೆ ಬೆವರುತ್ತಿದ್ದೇನೆ. ಹೊದಿಕೆಯನ್ನು ಇನ್ನೂ ಎಳೆದುಕೊಂಡರು. ಹೃದಯ ನಿಂತAತೆ ಅನ್ನಿಸತೊಡಗಿದ್ದು..ದೂರದಿಂದ ಕೇಳಿ ಬಂದ ಝಲ್..ಝಲ್.. ಶಬ್ದದಿಂದ. ಭ್ರಮೆಯೇ?!..ಇನ್ನೊಮ್ಮೆ ಸ್ವಷ್ಟವಾಗಿ ಆಲಿಸಿದರು...ಹೌದು!..ಕಾಲ್ಗೆಜ್ಜೆಯ ಸಪ್ಪಳ....ಮೇಷ್ಟುç ಕಂಬಳಿಯನ್ನು ಸರಿಯಾಗಿ ಹೊದ್ದುಕೊಂಡರು. ಝಲ್...ಝಲ್...ಸ್ಪಷ್ಟವಾಗಿ ಕೇಳಿಸತೊಡಗಿತು...ಲಲನೆ ನಡೆದು ಬರುವಂತೆ..ನಡೆಯುತ್ತಾ ನಡೆಯುತ್ತಾ..ಒಂದೇ ಸಲ ಓಡಿ ಬಂದ್ಹಾಗೆ...ಝಲ್‌ಝಲ್‌ಝಲ್ ಓಡಿಬರುತ್ತಾ ದೊಡ್ಡ ಮನೆಯ ಹಟ್ಟಿಯಲ್ಲಿ ಕೇಳತೊಡಗಿತು..ಮೇಷ್ಟುç ಜೋರಾಗಿ ಕಿರುಚಬೇಕೆಂದುಕೊAಡರು.ಆಗಲಿಲ್ಲ ಮಾತು ಬರದಾಯ್ತು. ಧೈರ್ಯ ಮಾಡಿ ಹೊದಿಕೆಯನ್ನು ಸರಿಸಿ ನೋಡಿದರು.. ಅಷ್ಟೆ! ಹೃದಯವೇ ಬಾಯಿಗೆ ಬಂದAತಾಯ್ತು...ಕೈಕಾಲುಗಳು ನಡುಗಲಾರಂಭಿಸಿದವು..ಬೆವರು ನೀರಾಗಿ ಹರಿಯತೊಡಗಿತು..

ದಟ್ಟವಾದ ಕೂದಲುಗಳುಳ್ಳ ಕಪುö್ಪ ನೆರಳು ಅಲ್ಲಿ ನಿಂತಿತ್ತು...ಮೇಷ್ಟುç ಇವತ್ತು ತನ್ನ ಕೊನೆಯ ದಿನ ಎಂದು ತೀರ್ಮಾನಿಸಿದ್ದರು. ಅವರ ಕಣ್ಣಿನಲ್ಲಿ ಭಟ್ಟರು ಹೇಳಿದ ರಾಕ್ಷಸಿ ಮೋಹಿನಿಯ ವರ್ಣನೆ ಕಣ್ಣಿಗೆ ಕಟ್ಟಿದಂತೆ ಕಾಣಬರತೊಡಗಿತು..ಕಂಬಳಿಯನ್ನು ಪುನ: ಗಟ್ಟಿಯಾಗಿ ಹೊದ್ದುಕೊಂಡರು.. ಮೇಷ್ಟç ಹೃದಯ ಹೊಡೆತ ಅವರಿಗೇ ಜೋರಾಗಿ ಕೇಳಿಸುತಿತ್ತು....ಬಾಗಿಲು ಮೆಲ್ಲನೆ ತೆರೆಯಿತು... ಗಟ್ಟಿಯಾಗಿ ಭಟ್ಟರನ್ನು ಕರೆಯಲೇ?! ಬೇಡ... ಶಬ್ದ ಮಾಡದಂತೆ ಮಲಗಿಕೊಳ್ಳೋಣ... ಮೇಷ್ಟುç ಹೃದಯದಲ್ಲಿ ಹಲವಾರು ದೇವರುಗಳನ್ನು ನೆನೆದರು.. ಬಾಗಿಲು ಮುಚ್ಚಿದ ಶಬ್ದ....!

ಹಾಳಾದ ಬಾಗಿಲಿಗೆ ಚಿಲಕ ಕೂಡ ಇಲ್ಲ...! ಝಲ್...ಝಲ್ ಮೆಲ್ಲನೆ ಹತ್ತಿರ ಹತ್ತಿರ ನಡೆದು ಬಂದAತಾಯ್ತು... ಮೇಷ್ಟುç ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡರು.. ಅವರ ಬಲಗೈ ಮಗ್ಗಲಿನಲ್ಲಿದ್ದ ಚಾಕುವಿನ ಮೇಲಿದ್ದರೂ ಅದನ್ನು ಗಟ್ಟಿಯಾಗಿ ಹಿಡಿಯಲೋ ಬೇಡವೋ ಎಂದು ಮನ ಚಡಪಡಿಸುತ್ತಿತ್ತು. ಭಯದಿಂದ ಅಲುಗಾಡದೆ ಮಲಗಿದ್ದರು.. ಸ್ವಲ್ಪ ಹೊತ್ತು ನಿಶ್ಯಬ್ದ....ಝಲ್ ಝಲ್ ಶಬ್ದ.. ಮೆಲ್ಲನೆ ಹತ್ತಿರ ಬಂದು ನಿಂತAತೆ ಭಾಸವಾಯಿತು. ಹೌದು! ಇದು... ಇದು ನನ್ನನ್ನು ರಕ್ತಕಾರಿಸಿ ಕೊಂದೇ ಬಿಡುತ್ತದೆ...ಉಸಿರು ಬಿಗಿಹಿಡಿದು ಹಾಗೇ ಮಲಗಿದ್ದರು...ಕಂಬಳಿ ಮೆಲ್ಲನೆ ಕೆಳ ಜಾರಿತು..ಸಂಶಯವಿಲ್ಲ...! ಹೌದು ಪ್ರಾಣ ಹೋಗುತ್ತೆ..

ಗಟ್ಟಿಯಾಗಿ ಕಣ್ ಮುಚ್ಚಿದರು..ತರತರಹದ ನಡುಕ..ಬಿಸಿಯಾದ ಉಸಿರು ಮೇಷ್ಟç ಮುಖಕ್ಕೆ ಬೆಂಕಿಯAತೆ ತಗುಲಿತು.. ಜೊತೆಗೆ ದಟ್ಟ ಕೂದಲು ಉಸಿರಾಟಕ್ಕೆ ತಡೆಯೊಡ್ಡಿತು.. ಕುತ್ತಿಗೆಯಲ್ಲಿ ಕೈಯ ಸ್ವರ್ಶವಾಯಿತು.. ಮೇಷ್ಟುç ಬೆಚ್ಚಿದರು.. ಬೆವರಿದರು... ಮೋಹಿನಿ.. ರಕ್ತಕಾರಿಸುವುದು...?! ಅಷ್ಟೆ! ಗಟ್ಟಿಯಾಗಿ ಚಾಕು ಹಿಡಿದಿದ್ದ ಮೇಷ್ಟç ಬಲಗೈ ಬಲವಾಗಿ ಬೀಸಿತು... ಕ್ಷಣಾರ್ಧದಲ್ಲಿ ಮೋಹಿನಿಯ ವಿಚಿತ್ರ ಕಿರುಚುವಿಕೆ... ಇಡೀ ವಠಾರವೇ ನಡುಗುವಂಥ ಆರ್ತನಾದ...

**

ತಲೆಯಲ್ಲಿ ಕೊನೆಯ ಸನ್ನಿವೇಶದ ಚಿತ್ರಣ ಆಗಾಗ ಮೂಡಿದಾಗ..ವಿಚಿತ್ರ ಭಯ ಅವರಿಸಿ... ಆ ನಡುಗತ್ತಲಿನಲ್ಲಿ ಸೆರೆಮನೆಯಲ್ಲಿ ಮಲಗಿದ್ದ ಮೇಷ್ಟುç ಒಮ್ಮೆ ಗಟ್ಟಿಯಾಗಿ ಕಿರುಚಿದರು.

***


Rate this content
Log in

Similar kannada story from Horror