ಕೇಶವಿ ಕದಂಬ
ಕೇಶವಿ ಕದಂಬ
ಅಬ್ಬಿನಹೊಳಲು ಗ್ರಾಮದಲ್ಲಿ ರಾಜ ವಂಶಸ್ಥರಿಗೆ ಸೇರಿದ ಕದಂಬ ವಂಶದ ರಾಜಪಾಣಿ ಹಾಗೂ ಸಿಬಾದೇವಿ ದಂಪತಿಗೆ ಇಬ್ಬರು ಮಕ್ಕಳು. ಒಂದು ಹೆಣ್ಣು ಇಂಚರ, ಒಂದು ಗಂಡು ಕೇಶವ. ರಾಜಪಾಣಿ ತಂದೆ ಕೃಷ್ಣ ಕದಂಬ ಹಾಗೂ ತಾಯಿ ಲಕ್ಷ್ಮಿಕೃಷ್ಣ ಕದಂಬ, ತಮ್ಮ ವೀರ ಕದಂಬ (ವೀರ ಕದಂಬ ಬಲು ಬುದ್ಧಿವಂತ, ಹಣದ ಆಸೆ, ದುರಂತಗಳನ್ನು ಎದುರಿಸುವ ಜಾಣ, ಅಣ್ಣ ಎಂದರೆ ಪ್ರಾಣ ಅಣ್ಣನ ಮಾತು ಮೀರುವವನಲ್ಲ). ವೀರ ಕದಂಬನ ಹೆಂಡತಿ ಶಾರದ ಹಾಗೂ ಮಗ ರಾಜ ಕದಂಬ. ತುಂಬಾ ಮುದ್ದಾದ ಕುಟುಂಬ, ಎಲ್ಲರೂ ಸಂತೋಷವಾಗಿ ಇದ್ದರು, ಗೌರವಕ್ಕೆ ಹೆಚ್ಚು ಬೆಲೆ ಕೊಡುವ ಮನೆ, ಅತಿಥಿಗಳನ್ನು ಆದರದ ಸುಸ್ವಾಗತ ಕೋರುವ ಮನೆ, ಅನ್ನದಾನ, ವಸ್ತ್ರದಾನ, ಹಣದಾನ, ಎಲ್ಲದರಲ್ಲೂ ಸಹಾಯ ಮಾಡಲು ಮುಂದಿರುವ ಮನೆ.
ರಾಜಪಾಣಿಗೆ ಮೀಸೆಯಮೇಲೆ ಕೋಪ, ಮುಂಗೋಪಿ, ಆದರೆ ಒಬ್ಬರಿಗೆ ಅನ್ಯಾಯ ಮಾಡುವ ವ್ಯಕ್ತಿ ಅಲ್ಲ, ಆತನಿಗೆ ಹೆಣ್ಣಾದರು ಸರಿ ಗಂಡಾದರು ಸರಿ ದೊಡ್ಡವರ ಮಾತಿಗೆ ಬೆಲೆ ಕೊಡುವಂತವರಾಗಿರಬೇಕು, ಇತರರಿಗೆ ಸಹಾಯ ಮಾಡುವ ಗುಣ ಹೊಂದಿರಬೇಕು. ರಾಜಪಾಣಿಗೆ ಮದುವೆಯಾದ ಸುಮಾರು ೭ ರ‍್ಷಕ್ಕೆ ಇಂಚರ, ೯ ರ‍್ಷಕ್ಕೆ ಕೇಶವ ಜನಿಸಿದರು. ಇಂಚರ ಹುಟ್ಟಿದಾಗ ಇಲ್ಲದ ಸಂಭ್ರಮ ಕೇಶವ ಹುಟ್ಟಿದಾಗ ಬಂತು, ಕಾರಣ ಕೇಶವ ವಂಶೋದ್ಧಾರಕ. ರಾಜಪಾಣಿ ಹಾಗೂ ಲಕ್ಷ್ಮಿಕೃಷ್ಣ ಕದಂಬರವರಿಗೆ ಕೇಶವ ಎಂದರೆ ಎಲ್ಲಿಲ್ಲದ ಪ್ರೀತಿ, ರಾಜಪಾಣಿ ಕೇಶವ ಹುಟ್ಟಿದಾಗಲೆ ಬಂಗಾರದ ತೊಟ್ಟಿಲಲ್ಲಿ ಮಲಗಿಸುತ್ತಿದ್ದ, ಬಂಗಾರದ ತಟ್ಟೆಯಲ್ಲಿ ಊಟ ಸ್ವತಃ ತಾನೇ ತಿನಿಸುತ್ತಿದ್ದ. ಕೇಶವ ಮಲಗುವ ಕೊಠಡಿ ದೇವಲೋಕಕ್ಕೂ ಮೀರುವಂತಿತ್ತು. ಮಗನನ್ನು ಬಿಟ್ಟು ಒಂದು ತಾಸು ಕೂಡ ಇರಲಾರನು ತಂದೆ.
ಇಂಚರಳನ್ನು ೧೦ ನೇ ತರಗತಿಯವರೆಗೂ ಓದಿಸಿ, ಆಕೆಗೆ ಋತುಚಕ್ರ ಮೊದಲಾದಾಗ ಓದು ನಿಲ್ಲಿಸಿ ಮನೆಯಲ್ಲಿಯೇ ಇರಿಸಿದರು. ಕೇಶವ ೬ ರ‍್ಷದ ವರೆಗೂ ಚೆನ್ನಾಗಿಯೇ ಇದ್ದ, ಆದರೆ ಕಾಲ ಕ್ರಮೇಣ ಆತನಿಗೆ ಯುದ್ಧ, ಭೇಟೆ, ರಾಜನೀತಿ, ಓದು ಇವುಗಳ ಬಗ್ಗೆ ಗಮನ ಕಮ್ಮಿ ಆಗುತ್ತಾ ಬಂತು. ಹೆಣ್ಣು, ಸೀರೆ, ಅರಿಶಿಣ ಕುಂಕುಮ, ಬಳೆ, ಹೂವು, ಪೂಜೆ, ಒಂಟಿಯಾಗಿ ಇರುವುದು, ಗಂಡು ಮಕ್ಕಳನ್ನು ಕಂಡರೆ ನಾಚಿಕೊಳ್ಳುವುದು. ಹೀಗೆ ಹಲವಾರು ಆತನಿಗೆ ಸನಿಹವಾಗುತ್ತಾ ಬಂತು. ಹೀಗೆ ಆಗುವುದಕ್ಕೆ ಕಾರಣ ತಿಳಿಯದೆ ಕೇಶವ ಕಂಗಾಲಾಗುತ್ತಿದ್ದ. ರಾಜಪಾಣಿ ನಿಧಾನವಾಗಿ ಕೇಶವನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಾ ಬಂದ. ಕೇಶವನ ಅಭ್ಯಾಸಗಳು ಆತನ ರ‍್ತನೆಗಳು ಬರುಬರುತ್ತಾ ಹೆಣ್ಣಿನ ರ‍್ಯೆಯಂತೆ ಬದಲಾಗುತ್ತಾ ಬಂತು. ಕೇಶವನ ಈ ರೂಪಾಂತರವನ್ನು ಗಮನಿಸಿದ ರಾಜಪಾಣಿ, ದೊಡ್ಡ ವೈದ್ಯರ ಬಳಿ ತೋರಿಸಿದ. ರ‍್ಧ ತಾಸು ಪರಿಶೀಲನೆ ನಡೆಸಿದ ವೈದ್ಯರು ನಿಮ್ಮ ಮಗು ತ್ರಿಲಿಂಗಿಯಾಗಿ ಬದಲಾಗುತ್ತಿದ್ದಾನೆ, ಇದನ್ನು ನಿಲ್ಲಿಸಲು ಚಿಕಿತ್ಸೆ ಇಲ್ಲ ಎಂದು ಹೇಳಿದರು. ವಿಷಯ ತಿಳಿದು ರಾಜಪಾಣಿಗೆ ದಿಕ್ಕು ತೋಚದಂತಾಯಿತು. ಮುಂದೇನು ಗತಿ ಎಂದು ಆಲೋಚನೆಗೊಳಗಾದನು. ರಾಜಪಾಣಿಗೆ ಇದು ಸಹಿಸಲಾರದ ನೋವು, ಅವಮಾನ. ವೀರನಿಗೆ ವಿಷಯ ತಿಳಿಸಿ ನೋವು ಪಟ್ಟನು. ವೀರ ಅಣ್ಣನನ್ನು ಸಮಾಧಾನಪಡಿಸುತ್ತಾ, ಕೇಶವನಿಗೆ ಇನ್ನು ದೊಡ್ಡ ವೈದ್ಯರ ಬಳಿ ಅಥವ ವಿದೇಶದ ವೈದ್ಯರ ಬಳಿ ತೋರಿಸಿದರೆ ವಾಸಿ ಆಗಬಹುದೇನೋ ಪ್ರಯತ್ನಿಸೋಣ, ನಾಟಿ ವೈದ್ಯೆಯಲ್ಲಿ ಗುಣಮುಖನಾಗಬಹುದೇನೋ ನೋಡೋಣ ನೀವು ಭಯ ಪಡಬೇಡಿ ಎಂದು ಸಮಾಧಾನ ಪಡಿಸುತ್ತಿದ್ದನು. ಅಣ್ಣನಿಗೆ ಹೇಳಿದಂತೆ ವೀರ ದೇಶ ವಿದೇಶಗಳ ವೈದ್ಯರ ಬಳಿ ತೋರಿಸಿದ, ನಾಟಿ ವೈದ್ಯರ ಬಳಿ ತೋರಿಸಿದ ಆದರೆ ಏನೂ ಪ್ರಯೋಜನವಾಗಲಿಲ್ಲ. ರಾಜಪಾಣಿ ಸಹ ಪ್ರಯತ್ನಿಸಿದನು, ಅಣ್ಣ ತಮ್ಮಂದಿರ ಶತ ಪ್ರಯತ್ನಗಳು ವಿಫಲವಾಯಿತು. ಕಾಲ ಕೂಡ ಕೈತಪ್ಪಿತು. ಕೇಶವನಿಗೆ ಈಗ ೧೨ ರ‍್ಷ, ಪೈಜಾಮ ಉಡುವ ಬದಲು ಲಂಗಾ ದಾವಣಿ ಉಡುತಿದ್ದನು.
ಕೇಶವನನ್ನು ಊರಿನಲ್ಲಿ ಎಲ್ಲರೂ ಅವಮಾನ ಪಡಿಸುತ್ತಿದ್ದರು. ಕದಂಬ ವಂಶದ ವಂಶೋದ್ಧಾರಕ “ಕೇಶವ ಅಲ್ಲ, ಅಲ್ಲ ಕೀಶವಿ ಬರುತ್ತಿದ್ದಾಳೆ ನೋಡಿ!” ಎಂದು ಅಸಹ್ಯವಾಗಿ ಮಾತನಾಡುತ್ತಿದ್ದರು. ಕೊನೆಗೂ ಅವಮಾನ ತಾಳಲಾರದೆ ರಾಜಪಾಣಿ “ನಿನ್ನಿಂದ ಊರಲ್ಲಿ ನನಗೆ ಅವಮಾನ, ಕೋಜಾಳನ್ನು ಹೆತ್ತ ತಂದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ನಿನ್ನಂತವನನ್ನು ಹೆತ್ತ ಪಾಪಕ್ಕೆ ನನಗೆ ಸಾಯುವುದೇ ದಾರಿ. ಈ ಅವಮಾನಗಳನ್ನು ನಾನು ತಾಳಲಾರೆನು, ಇಲ್ಲ ನೀನು ಮನೆ ಬಿಟ್ಟು ಎಲ್ಲಾದರೂ ದೂರ ಹೊರಟಿಹೋಗು ಇಲ್ಲ ನಾನು ನಿಮ್ಮೆಲ್ಲರನ್ನು ಬಿಟ್ಟು ಹೋಗುತ್ತೇನೆ.” ಎಂದು ಕೋಪ ಹಾಗೂ ದುಃಖದಿಂದ ಹೇಳುತ್ತಾನೆ. ಬೇರೆ ದಾರಿ ಇಲ್ಲದೆ ಕೇಶವ ಬೆಂಗಳೂರಿಗೆ ಬಂದನು. ಅಲ್ಲಿ ಕೇಶವನಿಗೆ ದಿಕ್ಕು ತೋಚಲಿಲ್ಲ, ಮೊದಲಬಾರಿ ಊರು ಬಿಟ್ಟು ಬಂದಿದ್ದಾನೆ, ಯಾರೂ ಆತನನ್ನು ಸೇರಿಸಲಿಲ್ಲ. ಊಟ, ನಿದ್ದೆ ಇಲ್ಲದೆ ಕೇಶವ ಒಂದು ವಾರ ನರಕಯಾತನೆ ಅನುಭವಿಸಿದನು. ಕೇಶವ ಸುಸ್ತಾಗಿ ಬಿದ್ದಿದ್ದನ್ನು ಇನ್ನೊಬ್ಬ ತ್ರಿಲಿಂಗಿ ನವೀನ ಗಮನಿಸಿ ಮನೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಊಟ ತಿನಿಸಿ ಮಲಗಿಸಿದಳು. ಸ್ವಲ್ಪ ಸಮಯದ ನಂತರ ಕೇಶವ ಎದ್ದು “ನಾನು ಸಾಯುತ್ತೇನೆ ನನಗೆ ಈ ಸಮಾಜದಲ್ಲಿ ಬೆಲೆ ಇಲ್ಲ ಎಂದು ಅಳುತ್ತಿದ್ದನು. ಆಗ ನವೀನ “ಭಯ ಪಡಬೇಡ ನಿನ್ನ ಜೊತೆ ನಾನಿರುತ್ತೇನೆ, ಸಮಾಜ ಏನೇ ಅಂದರೂ ಚಿಂತಿಸಬೇಡ ನಮ್ಮ ಆಸೆಗಳಗೋಸ್ಕರ ನಾವು ಬದುಕೋಣ” ಎಂದು ಹೇಳಿ ಸಮಾಧಾನ ಪಡಿಸಿದಳು. ಹೀಗೆ ಅವರಿಬ್ಬರು ಪ್ರಾಣ ಸ್ನೇಹಿತರಾದರು. ಕೇಶವನನ್ನು ಯಾವುದೇ ಶಾಲೆ, ಗ್ರಂಥಾಲಯ ಸೇರಿಸಿಕೊಳ್ಳಲಿಲ್ಲ. ಆದರೆ ಕೇಶವ ದಿನಪತ್ರಿಕೆ, ಮೊಬೈಲ್, ಪುಸ್ತಕಗಳ ಸಹಾಯದಿಂದ ಓದಿ ರಾಜ್ಯಕ್ಕೆ ಕರ‍್ತಿ ತಂದನು. ಆತ ಅಂದುಕೊಂಡಂತೆ ಡಾಕ್ಟರ್ ಆದನು. ಇನ್ನೇನು ವೈದ್ಯನಾಗಬೇಕು ಅಷ್ಟರಲ್ಲಿ ನಾಲ್ಕು ಜನ ತ್ರಿಲಿಂಗಿಯ ವೇಷ ಧರಿಸಿ, “ನಿಮಗೆ ನಮ್ಮಿಂದ ಒಂದು ಉಡುಗೊರೆ ಇದೆ. ದಯವಿಟ್ಟು ಬನ್ನಿ” ಎಂದು ಪ್ರೀತಿಯಿಂದ ಮಾತನಾಡಿ ಮನೆಯಿಂದ ಹೊರಗೆ ಕರೆಸಿಕೊಂಡರು. ನವೀನ ಮನೆಯಲ್ಲಿಯೇ ಉಳಿದಳು. ಕೇಶವ “ಬೇಗನೆ ಬರುತ್ತೇನೆ” ಎಂದು ಹೇಳಿ ಅವರ ಜೊತೆ ಹೋದನು. ಆದರೆ ಅವರು ಕೇಶವನನ್ನು ಬಂಧಿಸಿ ಮತ್ತಿನ ಮದ್ದು ಕೊಟ್ಟರು. ಕೇಶವ ಕಣ್ಣು ತೆರೆದು ನೋಡಿದರೆ ಊರ ಆಚೆ ಹಾಳಾದ ಒಂದು ಮನೆಯಲ್ಲಿ ಕೇಶವ ಬಂಧಿತನಾಗಿದ್ದನು. ಆತನಿಗೆ ದಿಕ್ಕು ತೋಚದಂತಾಯಿತು, ಆ ನಾಲ್ಕು ಜನ ಬಂದು “ನಾವು ಗಂಡಸರು, ತ್ರಿಲಿಂಗಿಯ ವೇಷ ಧರಿಸಿ ನಿನ್ನನ್ನು ಅಪಹರಿಸದ್ದೇವೆ.” ಎಂದು ಹೇಳಿ ಮತ್ತು ಔಷದ ಕೊಟ್ಟು ವಿದೇಶದ ವೈಧ್ಯರ ಸಹಾಯದಿಂದ ಕೇಶವನ್ನು ಸಂಪೂರ್ಣ ಹೆಣ್ಣಾಗಿ ಬದಲಾಯಿಸಿ ಕೇಶವಿ ಎಂದು ಹೆಸರು ಕೊಟ್ಟು ಆಕೆಯನ್ನು ನಾಲ್ಕು ಜನ ಬಲವಂತ ಮಾಡಿ ಹಿಂಸಿಸಿ ಸಾಯಿಸಿದರು. ನವೀನ ಕೇಶವನ್ನು ಹುಡುಕದ ಜಾಗ ಇಲ್ಲ, ಪೋಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ಸಹ ಪ್ರಯೋಜನವಾಗಲಿಲ್ಲ. ಒಂದು ದಿನ ಕೇಶವನ ಜಾಡÀನ್ನು ತಿಳಿದು ನವೀನ ಹೋದಳು, ಆದರೆ ಕೇಶವ ಹೆಣ್ಣಾಗಿ ಶವವಾಗಿದ್ದಳು, ಹುಳಗಳು ಆಕೆಯನ್ನು ತಿನ್ನುತ್ತಿದ್ದವು, ಆಯಕೆ ನೆತ್ತಿಯ ಮೇಲೆ ಕೇಶವಿ ಎಂದು ಬರೆದಿದ್ದು, "ನಿನ್ನನ್ನು ಐದಾರು ದಿನಗಳಿಂದ ಹುಡುಕುತ್ತಿದ್ದೇನೆ ಆದರೆ ನಿನ್ನನ್ನು ಈ ಪರಿಸ್ಥಿತಿಯಲ್ಲಿ ನೋಡುತ್ತೇನೆ ಎಂದು ಅಂದುಕೊAಡಿರಲಿಲ್ಲ" ಎಂದು ನವೀನ ನೋವು ಪಡುತ್ತಾ ನಡೆದ ಘೋರವನ್ನು ನೋಡಿ ಸಹಿಸಲಾರದೆ ಸ್ಥಳದಲ್ಲಿಯೇ ಮೃತಪಟ್ಟಳು. ಕೇಶವಿ ಆಸೆಗಳೆಲ್ಲ ನಿರಾಸೆಯಾಯಿತು.
ಕೇಶವಿ ಸತ್ತ ೧೧ ದಿನಗಳ ನಂತರ ಆಕೆ ದೆವ್ವವಾಗಿದ್ದಳ್ಳು.
ಆ ದಿನ ರಾತ್ರಿ ೧೨ ಗಂಟೆ, ತಂಪಾದ ಗಾಳಿ ಹತ್ತು ನಿಮಿಷದ ಬಳಿಕ ಜೋರಾಗಿ ಗಾಳಿ ಬರಲು ಶುರುವಾಯಿತು, ವಿದ್ಯುತ್ ಸಂಪರ್ಕ ಕಡಿತವಾಯಿತು. ಶಾರದ ಬುಡ್ಡಿ ದೀಪ ಅಂಟಿಸಿದಳು, ಅಷ್ಟರಲ್ಲಿ ಯಾರೋ ಕರೆದಂತಾಯಿತು, ಹೊರಗಡೆ ಹೋಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ, ಮನೆ ಮೇಲೆ ಕರೆದಂತಾಯಿತು ಅಲ್ಲೂ ಯಾರು ಇರಲಿಲ್ಲ, ಮನೆಯ ಪ್ರತಿ ಮೂಲೆಯಿಂದ, ಕೊಠಡಿಗಳಿಂದ ಕರೆದಂತಾಯಿತು. ಎಲ್ಲಿ ನೋಡಿದರೂ ಯಾರೂ ಕಾಣಲಿಲ್ಲ್ಲ. ಭಯ ಪಟ್ಟು ಶಾರದೆ ನಿಂತಲ್ಲಿಯೇ ಕದಲದೇ ಇದ್ದಳು, ಅಷ್ಟರಲ್ಲಿ ಯಾರೋ ಜೋರಾಗಿ ನಗಾಡುವ ಶಬ್ದ, ನಡೆಯುವ ಗೆಜ್ಜೆ ಶಬ್ದ, ಅಳುವ ಶಬ್ದ, ಎನೊ ಹೇಳುತ್ತಿರುವ ಶಬ್ದ ಕೇಳಿಸಿತು. ಶಾರದ ಹೆದರಿ ಗಂಡನ ಹತ್ತಿರ ಓಡಿ ಹೋಗಿ ನಡೆದದ್ದೆಲ್ಲ ಹೇಳಿದಳು, ಆತ ನಂಬಲಿಲ್ಲ. ಶಾರದ ದಿಕ್ಕು ತೋಚದೆ ಒಂದು ಕಡೆ ಕುಳಿತುಕೊಂಡಳು. ಸ್ವಲ್ಪ ಸಮಯದ ನಂತರ ಶಾರದ ಕುಳಿತ ಎದುರು ಗೋಡೆಯ ಮೇಲೆ ಒಂದು ಹೆಂಗಸು ಕುಳಿತಿರುವಂತೆ ಅನಿಸಿತು, ಆ ಹೆಂಗಸು ಕೆಂಪು ಸೀರೆ ಧರಿಸಿ, ಅರಿಶಿನÀ ಕುಂಕುಮ, ಬಳೆ, ಹೂವು ಮುಡಿದಿದ್ದಳು. ಶಾರೆದೆ ಭಯದಿಂದ “ಯಾರು” ಎಂದು ಕೇಳಿದರೆ ಉತ್ತರಿಸದೇ ಅಳುತ್ತಾ, ಏನೋ ಹೇಳುತ್ತಾ ಇದ್ದಳು. ಶಾರದ ಭÀಯದಿಂದ ಹಿಂದೆ ತಿರುಗಿ ಗಂಡನನ್ನು ಕರೆಯಲು ಪ್ರಯತ್ನಿಸುತ್ತಿದ್ದಳು, ಆದರೆ ಅಷ್ಟರಲ್ಲಿ ನಿಶ್ಯಬ್ದ್ದವಾಯಿತು, ಭಯಪಟ್ಟ ಶಾರದ ಮುಂದೆ ತಿರುಗಿ ನೋಡಿದಳು. ಆಗ ಆ ಹೆಂಗಸು ಭಯಾನಕ ಮುಖವನ್ನು ಹತ್ತಿರಕ್ಕೆ ಬಂದು ತೋರಿಸುತ್ತಾ ಜೋರಾಗಿ, ಭಯಂಕರವಾಗಿ ಕಿರುಚಿದಳು, ಆಕೆಯ ಭÀಯಾನಕ ಮುಖವನ್ನು ನೋಡಿದ ಶಾರದ ತುಂಬಾ ಭಯಪಟ್ಟಳು. ಆ ಹೆಂಗಸು ಶಾರದಳನ್ನು ಭಯಂಕರವಾಗಿ ಸಾಯಿಸಿ, ನೆತ್ತಿಯ ಮೇಲೆ ಶಿವನ ಮೂರನೇ ಕಣ್ಣಿನ ಚಿತ್ರ ಬಿಡಿಸಿ ಮಾಯವಾದಳು. ಅಷ್ಟರಲ್ಲಿ ವ
ಿದ್ಯುತ್ ಬಂತು, ಶಾರದ ಅರಚಿದ ಶಬ್ದ ಕೇಳಿ ಎಲ್ಲರೂ ಓಡಿ ಬಂದು ನೋಡಿದರು, ಅಷ್ಟರಲ್ಲಿ ಶಾರದ ಶವವಾಗಿದ್ದಳು. ಶಾರದಳ ಈ ಪರಿಸ್ಥಿತಿಯನ್ನು ನೋಡಿ ಎಲ್ಲರೂ ನೋವು ಪಟ್ಟರು, ವೀರ ದುಃಖದಲ್ಲಿ ಮುಳುಗಿದನು, ಆದರೆ ಇಂಚರ ಚಿಕ್ಕ ನಗು ನಗುತ್ತಾ ಹೋದಳು. ಮರು ದಿನ ಇಂಚರ ಅಜ್ಜಿಯ ಕೊಠಡಿಗೆೆ ಹೋಗಿ ಮಾತನಾಡದೇ ರಾಜ ಕದಂಬನ ಭಾವಚಿತ್ರ ತೋರಿಸಿ ಅಜ್ಜಿಯನ್ನು ದೀನವಾಗಿ ನೋಡಿದಳು ಆಗ ಅಜ್ಜಿ "ರಾಜ ಶಾರದಳÉ ಅಂತ್ಯ ಸಂಸ್ಕಾರಕ್ಕೆ ಬರುತ್ತಾನೆ, ಯಾಕೆ ಎನಾಯಿತು ಇಂಚರ" ಎಂದು ಕೇಳಿದಳು. ಇಂಚರ ಎನೂ ಮಾತನಾಡದೇ ತನ್ನ ಕೊಠಡಿಗೆ ಹೊರಟುಹೋದಳು. ರಾಜ ಬಂದು ಅಮ್ಮನ ಶವದ ಮೇಲೆಬಿದ್ದು ಜೋರಾಗಿ ಅಳುತ್ತಾ ಅಮ್ಮನ ಅಂತ್ಯ ಸಂಸ್ಕಾರವನ್ನು ಮಾಡಿದನು. ಮರು ದಿನ ರಾಜ ಇಂಚರ ರೂಮಿಗೆ ಹೋದನು. ಇಂಚರ ಗೋಡೆಯ ಮೇಲೆ ಶಾರದ, ಲಕ್ಷಿö್ಮÃಕೃಷ್ಣ ಕದಂಬ, ವೀರ ಕದಂಬಗಳ ಭಾವಚಿತ್ರವನ್ನು ಬಿಡಿಸುತ್ತಿದ್ದಳು. ಅದರಲ್ಲಿ ಶಾರದ ಮುಖಕ್ಕೆ ಅಡ್ಡ ಗುರುತು ಹಾಕಿದಳು. ಇದನ್ನು ಕಂಡ ರಾಜ "ಇಂಚರ, ಏನಿದೆಲ್ಲ, ನಿನಗೆ ಏನಾಗಿದೆ?" ಎಂದು ಕೇಳುತಿದ್ದಂತೆ, ಇಂಚರ ರಕ್ತ ಕಣ್ಣಿನಿಂದ ರಾಜನನ್ನು ನೋಡಿ ಆತನನ್ನು ಮಾನಸಿಕವಾಗಿ ಬಂದಿಸಿದಳು. ರಾಜ ಮೌನದಿಂದ ಅಜ್ಜಿಯ ಕೊಠಡಿಗೆ ಹೋಗಿ,"ಕೇಶವಿ ಯಾರನ್ನು ಬಿಡುವುದಿಲ್ಲ, ಆಕೆಯೇ ಸಾವಿಗೆ ಕಾರಣವಾದವರೆಲ್ಲ ಸಾಯುತ್ತಾರೆ" ಎಂದು ಹೇಳುತ್ತಿದಂತೆಯೇ ಅಜ್ಜಿಯನ್ನು ರಾಜ ಭಯಂಕರವಾಗಿ ಹಿಂಸಿಸಿ, ಸಾಯಿಸಿ ಮತ್ತದೇ ಶಿವನ ಮೂರನೇ ಕಣ್ಣಿನ ಚಿತ್ರ ಬಿಡಿಸಿ ಅಲ್ಲಿಂದ ಹೊರಟು, ತನ್ನ ರೂಮಿಗೆ ಹೋಗಿ ಪ್ರಜ್ಞೆ ತಪ್ಪಿ ಬಿದ್ದನು. ಮರು ದಿನ ಬೆಳಗ್ಗೆ ಎದ್ದು ನೋಡಿದರೆ ಅಜ್ಜಿ ಸತ್ತು ಶವವಾಗಿದ್ದಳು. ಎಲ್ಲರೂ ದುಃಖದಲ್ಲಿ ಇದ್ದರು, ರಾಜ ಅಜ್ಜಿಯನ್ನು ಅÀಪ್ಪಿಕೊಂಡು ಅಳುತ್ತಿದ್ದನು, ಇಂಚರ ಮಾತ್ರ ಕಾಣಿಸಿ ಕಾಣಿಸದಂತೆ ನಗುತ್ತಾ ತನ್ನ ರೂಮಿಗೆ ಹೋದಳು. ಮನೆಯಲ್ಲಿ ಸಂಭವಿಸುತ್ತಿರುವ ಸಾವುಗಳನ್ನು ಮತ್ತು ಅವಾಂತರಗಳನ್ನು ರಾಜಪಾಣಿ ಗಮನಿಸುತ್ತಾ ಬಂದನು. ಇಂಚರ ಕೇಶವಿಯನ್ನು ಅಪಹರಿಸಿದ ಆ ನಾಲ್ಕು ರೌಡಿಗಳನ್ನು ಒಂದು ತಿಂಗಳ ಒಳಗೆ ಭಯಂಕರವಾಗಿ ಭಯ ಇಡಿಸಿದಳು "ನಿಮ್ಮನ್ನು ಕೇಶವಿ ಸುಮ್ಮನೆ ಬಿಡುವುದಿಲ್ಲ ಎಲ್ಲರೂ ಸಾಯುತ್ತೀರ" ಎಂದು ಹೇಳಿದಳು.
ಕೇಶವಿ ಅಂದರೆ ಇಂಚರ ದೇಹದಲ್ಲಿದ್ದ ದೆವ್ವ ರಾಜನನ್ನು ಕೇವಲ ೨೦ ದಿನಗಳಲ್ಲಿ ತ್ರಿಲಿಂಗಿಯಾಗಿ ಮಾಡಿದಳು, ರಾಜ ಹುಡುಗಿಯಾಗಿ ವರ್ತಿಸುತ್ತಿದ್ದನು. ರಾಜನ ಈ ವರ್ತನೆಗೆ ಭಯಪಟ್ಟ ವೀರ, ಇಂಚರ ಕೊಠಡಿಗೆ ಹೋಗಿ "ಏನಾಗುತ್ತಿದೆ ಈ ಮನೆಯಲ್ಲಿ" ಎಂದು ಜೋರಾಗಿ ಕೇಳಿದನು ಆಗ ಇಂಚರ ತನ್ನ ಭಯಂಕರ ಮುಖವನ್ನು ತೋರಿಸಿ "ನಾನು ನೀನು ನೋಡಬೇಕೆಂದಿದ್ದ ಕೇಶವಿ. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ" ಎಂದು ವೀರ ಕದಂಬನನ್ನು ಇಂಚರಳಲ್ಲಿ ಇರುವ ಕೇಶವ ಆತ್ಮ ಹೊರಗೆ ಬಂದು ವೀರನ ಕತ್ತು ಹಿಡಿದು ಮೇಲಿನಿಂದ ಕೆಳಕ್ಕೆ ಎಸೆದಳು, ಬಿದ್ದ ರಭಸಕ್ಕೆ ವೀರನ ಸೊಂಟ ಮುರಿದು ಹೋಯಿತು, ವೀರ ಜೋರಾಗಿ ಕಿರುಚಿದನು ಎಲ್ಲರೂ ಓಡಿ ಬಂದು ನೋಡಿದರೆ ವೀರ ಮತಿಸ್ಥಿಮಿತನಾಗಿ ಬಿದ್ದದ್ದನು. ಒಂದು ಅಮಾವಾಸೆ ದಿನ ವೀರ ಹಾಗೂ ರಾಜಪಾಣಿ ಮಂತ್ರವಾದಿಯನ್ನು ಕರಿಸಿ ಪೂಜೆ ಮಾಡಿಸಿ ಇಂಚರಳಲ್ಲಿ ಇದ್ದ ಕೇಶವಿ ಆತ್ಮವನ್ನು ಹೊರ ಕರೆಸಿದರು, "ಯಾರು ನೀನು? ನಿನಗೆ ಏನು ಬೇಕು?. ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಆಗ ಕೇಶವಿ, "ನಾನು ಕೇಶª,À ರಾಜಪಾಣಿ ಮಗ ಎಂದು ಹೇಳುತ್ತಾ ರಾಜಪಾಣಿಗೆ " ತಂದೆ, ನಿನ್ನ ಮುದ್ದು ತಮ್ಮನಿಗೆ ನಿಮಗಿಂತ ನಿಮ್ಮ ಆಸ್ತಿಯ ಮೇಲೆ ಆಸೆ ಜಾಸ್ತಿ, ಆತನ ಕಣ್ಣು ಆಸ್ತಿಯ ಮೇಲೆ ಬಿದ್ದಿದೆ, ಆದರೆ ಆ ಆಸ್ತಿ ಕದಂಬ ವಂಶಕ್ಕೆ ದೊಡ್ಡ ವಾರಸನಾದ ನನಗೆ ಬರುತ್ತದೆ ನಾನು ಇಲ್ಲವೆಂದರೆ ರಾಜನಿಗೆ ಸಿಗುತ್ತದೆ. ಶಾರದ, ಲಕ್ಷೀಕೃಷ್ಣ ಕದಂಬ ಹಾಗೂ ವೀರ ಕದಂಬರು ಸೇರಿ ನನ್ನನ್ನು ಮನೆಯಿಂದ ಹೊರ ಹಾಕಿದರೆ ಸರಿಹೋಗುತ್ತದೆ ಎಂದು ಯೋಚಿಸಿದರು ಆದರೆ ಕೇವಲ ನಾನು ಹೊರ ಹೋದರೆ ಆಸ್ತಿ ಆವರಿಗೆ ಸಿಗುವುದಿಲ್ಲ ನನ್ನನ್ನು ಸಾಯಿಸಿದರೆ ನಿಮಗೆ ಅನುಮಾನ ಬರುತ್ತದೆ ಎಂದು ತಿಳಿದು ನಾನು ಇದ್ದರೂ ನನಗೆ ಆಸ್ತಿ ಬರಬಾರದೆಂದರೆ ಅದಕ್ಕೆ ಒಂದೆ ದಾರಿ ನನ್ನನ್ನು ತ್ರಿಲಿಂಗಿಯಾಗಿ ಮಾಡುವುದು, ಅದಕ್ಕಾಗಿ ನನ್ನನ್ನು ಚಿಕ್ಕಂದಿನಿAದಲೇ ಮದ್ದು ಕೊಟ್ಟು ನಿಧಾನವಾಗಿ ತ್ರಿಲಿಂಗಿಯಾಗಿ ಬದಲಾಗುವಂತೆ ಮಾಡಿದನು, ಅವಮಾನ ತಾಳಲಾರದೆ ನೀವು ನನ್ನನ್ನು ಮನೆಯಿಂದ ಹೊರ ಹಾಕುವಂತೆ ಮಾಡಿದನು. ಅಲ್ಲಿಗೆ ನನ್ನ ತೊಂದರೆ ವೀರನಿಗೆ ತಪ್ಪಿತು, ಆಸ್ತಿ ರಾಜನಿಗೆ ಸಿಗುತ್ತದೆ ಎನ್ನುವಷ್ಟರಲ್ಲಿ ನಾನು ಚೆನ್ನಗಿ ಓದಿ ದೊಡ್ಡ ವೈದ್ಯನಾದೆನು, ರಾಜ್ಯಕ್ಕೆ ಕೀರ್ತಿ ತಂದೆನು. ತ್ರಿಲಿಂಗಿಯಾಗಿ ನಾನು ಸಮಾಜದಲ್ಲಿ ಆಗುವ ಅವಮಾನಗಳನ್ನು ಮುನ್ನುಗ್ಗಿ ವೈದ್ಯನಾದೆನೆಂದು ರ‍್ವ ಪಟ್ಟ ನೀವು ಆಸ್ತಿ ಮತ್ತೆ ನನಗೆ ಬರೆದುಕೊಡುತ್ತೀರ ಎಂದು ತಿಳಿದು ವೀರನು ನಾಲ್ಕು ರೌಡಿಗಳಿಂದ ನನ್ನನ್ನು ಅಪಹರಿಸಿ ತ್ರಿಲಿಂಗಿಯಾಗಿದ್ದ ನನ್ನನ್ನು ಪೂರ್ತಿ ಹೆಣ್ಣಿನಂತೆ ಮಾಡಿಸಿ ಒಂದು ವಾರದ ಕಾಲ ರೇಪ್ ಮಾಡಿಸಿ ಸಾಯಿಸಿ ನನ್ನ ನೆತ್ತಿಯ ಮೇಲೆ ಕೇಶವಿ ಎಂದು ಬರೆದು ಸಾಯಿಸಿದರು. ನನ್ನ ಸಾವು ಕಂಡ ನನ್ನ ಪ್ರಾಣ ಸ್ನೇಹಿತೆ ನವೀನ ಕೂಡ ಪ್ರಾಣ ಬಿಟ್ಟಳು” ಎಂದು ಅಳುತ್ತಾ ನಡೆದದ್ದೆಲ್ಲ ವಿವರಿಸಿದಳು. ಕೇಶವಿ ವಿಷಯ ತಿಳಿದ ಎಲ್ಲರೂ ದುಃಖದಲ್ಲಿ ಮುಳುಗಿದರು. ರಾಜಪಾಣಿ ತುಂಬಾ ದುಖಃಪಡುತ್ತಾ ವೀರನಿಗೆ " ಅಣ್ಣ ನನಗೆ ಆಸ್ತಿ ಬೇಕು, ನನ್ನ ಮಗನಿಗೆ ಸಿಂಹಾಸನ ಬೇಕು ಎಂದು ಕೇಳಿದರೆ ಕೊಟ್ಟುಬಿಡುತ್ತಿದ್ದೆನಲ್ಲವೋ, ಊರಿಗೆಲ್ಲಾ ಆಸರೆಯಾಗುವ ನಾನು ನಿನಗೆ ಆಸ್ತಿ ವಿಷಯದಲ್ಲಿ ಮೋಸ ಮಾಡುತ್ತೇನೆ ಎಂದು ಹೇಗೆ ಅಂದುಕೊAಡೆ, ಎಂಥ ದುರಂತಕ್ಕೆ ಕೈ ಹಾಕಿ ಬಿಟ್ಟೆ ನೀನು" ಎಂದು ಅಳುತ್ತಾ ನೋವು ಪಟ್ಟನು. ಕೇಶವಿ ಆತ್ಮನನ್ನು ಹೊರ ತಂದ ಮಂತ್ರವಾದಿಗಳು "ಕೇಶವಿ ನಡೆದದ್ದೆಲ್ಲಾ ನಡೆದುಹೋಯಿತು ಈಗ ನೀನು ಜೀವಂತವಾಗಿರುವವರನ್ನು ಸಾಯಿಸಿದರೆ ಹೋದ ನಿನ್ನ ಪ್ರಾಣ, ನಿನ್ನ ಸಾಧನೆ ಮರಳಿ ಬರುವುದಿಲ್ಲ, ಈ ದುರಂತಕ್ಕೆ ಸಂಬAಧವಿಲ್ಲದ ಇಂಚರಳನ್ನು ನೀನು ಮಾನಸಿಕವಗಿ ದೈಹಿಕವಾಗಿ ನರಳಿಸುತ್ತಿದ್ದೀಯ, ಎಲ್ಲರನ್ನು ಕ್ಷಮಿಸಿ ಇಲ್ಲಿಂದ ಹೊರಟುಹೋಗು" ಎಂದು ಹೇಳಿದರು. ಆಗ ಕೇಶವಿ "ಲಾಭ ಇದೆ ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿರುವೆ, ವೀರನ ಮಗ ರಾಜನನ್ನು ತ್ರಿಲಿಂಗಿಯಾಗಿ ಮಾಡಿದ್ದೀನಿ, ಒಂದು ಗಂಡು ಸಂಪೂರ್ಣ ಹೆಣ್ಣಾಗಿ ಆಕೆ ಬೈಲಾದಾಗ ಬರುವ ನೋವು ಹೇಗಿರುತ್ತೆ ಗೊತ್ತಾ?, ಒಂದು ಹುಡುಗ ಸಂಪೂರ್ಣ ಹೆಣ್ಣಾದಾಗ ಆಕೆ ಭರಿಸುವ ನೋವು ಹೇಗಿರುತ್ತೆ ಗೊತ್ತಾ?, ಸಮಾಜದಲ್ಲಿ ಅವರಿಗೆ ಆಗುವ ಅವಮಾನದ ನೋವು ಹೇಗಿರುತ್ತೆ ಗೊತ್ತಾ?, ಕಾಮಕಾರಿಗಳಿಂದ ಬಲಿಯಾದರೆ ಹೇಗಿರುತ್ತೆ ಗೊತ್ತಾ?, ತ್ರಿಲಿಂಗಿಯಾದ ಮೇಲೂ ಸಮಾಜದಲ್ಲಿ ಆಗುವ ಅವಮಾನಗಳನ್ನು ಸಹಿಸಿಕೊಂಡು ತನ್ನ ಆಸೆಗಳಿಗೋಸ್ಕರ ಬದುಕುವಾಗ ಆಕೆಯನ್ನು ಬಲಿ ಪಡೆದರೆ ಆಕೆಯ ವರ್ಣಿಸಲಾಗದ ನೋವು ಹೇಗಿರುತ್ತೆ ಗೊತ್ತಾ?," ಎಂದು ತನ್ನ ವಿಕೃತ ಮೊಖ ತೋರಿಸಿ ಕೋಪದಿಂದ "ನನ್ನ ಸಾವಿಗೆ ಕಾರಣರಾದವರನ್ನು ಸಾಯಿಸಿ ಶಿವನ ಕೋಪಕ್ಕೆ ಪ್ರತೀಕವಾದ ಮೂರನೇ ಕಣ್ನಿನ ಚಿತ್ರ ಅವರ ನೆತ್ತಿಯ ಮೇಲೆ ಬಿಡಿಸಿ ನನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದೇನೆ ಎಂದು ಮಂತ್ರವಾದಿಗಳಿಗೆ ಹೇಳಿದಳು.
೨ ನಿಮಿಷಗಳ ಕಾಲ ತನ್ನ ಕೋಪವನ್ನು ವಿಕೃತ ಮುಖದಿಂದ ತೋರಿಸಿ ಎಲ್ಲರನ್ನು ಭಯಪಡಿಸಿದಳು. ವೀರನನ್ನು ನೋಡುತ್ತಾ "ನಿನ್ನನ್ನು ಸಾಯಿಸದೆ ಕೇವಲ ಸೊಂಟ ಮುರಿದು ಬಿಟ್ಟಿದ್ದೀನಿ. ನಿನ್ನ ಮಗನನ್ನು ನಿನ್ನ ಕಣ್ಣು ಮುಂದೆಯೇ ತ್ರಿಲಿಂಗಿಯಾಗಿ ಮಾಡಿದ್ದೀನಿ, ಆದರೆ ನೀನು ಮಾಡಿದಂಗೆÉ ಅವನನ್ನು ಕಾಮಕಾರಿಗಳ ಕೈಯಲ್ಲಿ ಬಲಿಯಗಲು ಬಿಡುವುದಿಲ್ಲ, ಅವನನ್ನು ರಾಣಿ ಎಂದು ಪ್ರಪಂಚ ಗುರುತಿಸುವ ಹಾಗೆ ಮಾಡುತ್ತೇನೆ, ನನ್ನ ತಂದೆಗೆ, ನನಗೆ ಆದ ಅವಮಾನ ನಿನಗೂ ಆಗಬೇಕು, ಆ ೪ ಜನ ರೌಡಿಗಳನ್ನು ನಿನ್ನ ಕೈಯಿಂದಲೇ ಸಾಯಿಸಿ ನೀನು ಜೈಲುಪಾಲಾಗುವಂತೆ ಮಾಡುತ್ತೇನೆ. ಅವಮಾನ ತಾಳಲಾರದೇ ನೀನು ಜೈಲಲ್ಲಿ ಕೊರಗಿ ಕೊರಗಿ ನರಳಬೇಕು. ನನ್ನ ಸಾವಿಗೆ ರಾಣಿಗೆ ಯಾವುದೇ ಸಂಬAಧವಿಲ್ಲ ಅದಕ್ಕಾಗಿ ಅವಳನ್ನು ಸಾಯಿಸುವುದಿಲ್ಲ. ಚೆನ್ನಾಗಿ ಓದುವಂತೆ ಮಾಡಿ ದೊಡ್ಡ ವೈದ್ಯಳನ್ನಾಗಿ ಮಾಡುತ್ತೇನೆ, ರಾಣಿ ರಾಜನಾಗಿದ್ದಾಗ ನನ್ನನ್ನು ತುಂಬ ಪ್ರೀತಿಸುತ್ತಿದ್ದ, ಅದಕ್ಕಾಗಿ ರಾಣಿಯನ್ನು ನಾನು ಪ್ರಪಂಚ ಮೆಚ್ಚುವ ಹಾಗೆ ಮಾಡಿ, ಒಂದು ಮಂಗಳಮುಖಿ ವೈದ್ಯಳಾದರೆ ಹೇಗಿರುತ್ತದೆ ಎಂದು ತೋರಿಸುತ್ತೇನೆ.
"ವೀರ ಕದಂಬ ನಾನು ಹೇಳಿದ ಹಾಗೆ ಆ ನಾಲ್ಕು ರೌಡಿಗಳನ್ನು ಸಾಯಿಸಿ ಜೈಲಿಗೆ ಹೋಗಬೇಕು ಇಲ್ಲವೆಂದರೆ ನಾನು ವೀರನನ್ನು ಘೋರವಾಗಿ ಸಾಯಿಸುತ್ತೇನೆ, ಅವನು ನಾನು ಹೇಳಿದಹಾಗೆ ಮಾಡುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ" ಎಂದು ಮಂತ್ರವಾದಿಗಳಿಗೆ ಕೇಶವಿ ಹೇಳುತ್ತಾಳೆ. ಬೇರೆ ದಾರಿ ಇಲ್ಲದೆ ವೀರ ಕೆಶವಿ ಹೇಳಿದಹಾಗೆ ಮಾಡುತ್ತಾನೆ. ರಾಣಿ ಚೆನ್ನಾಗಿ ಓದಿ ವೈದ್ಯಳಾಗುತ್ತಾಳೆ. ಕೇಶವಿ ಆತ್ಮ ಆನಂದದಲಿ ತೇಲಾಡಿತು, ಆಕೆಯ ಆತ್ಮ ಶಾಂತಿಸಿತು. ರಾಜಪಾಣಿ ಕೇಶವಿ ಹೆಸರಲ್ಲಿ ದೊಡ್ಡ ಆಸ್ಪತ್ರೆ ತೆರೆಸಿ ಅದರಲ್ಲಿ ರಾಣಿಯನ್ನು ವೈದ್ಯಳನ್ನಾಗಿ ಇರಿಸಿ ಉಚಿತ ಚಿಕಿತ್ಸೆ ನೀಡಿಸಿದನು.
ಶುಭಂ
"ಸರ್ವೇ ಜನ ಸುಖಿನೋಭವಂತು, ಲೋಕಾಸಮಸ್ತ ಸುಖಿನೋಭವಂತು"