Pallavi S Suma

Abstract Drama Others

3  

Pallavi S Suma

Abstract Drama Others

ದೀಪಾ

ದೀಪಾ

1 min
148



ದೀಪಾ, ತುಂಬು ಗರ್ಭಿಣಿ ದೀಪಾವಳಿಗೆಂದು ತಾಯಿಯ ಮನಗೆ ಬಂದಿದ್ದಳು. ಹಬ್ಬದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತಾಯಿ ಕೋವಿಡ್ ಅಂಟು ವ್ಯಾಧಿಗೆ ಸಿಲುಕಿ ಸುಮಾರು ಒಂದು ತಿಂಗಳ ಕಾಲ ಮಗುವಿಗೆ ದೂರವಾದಳು. ಕಣ್ಣ ಮುಂದೆಯೇ ಮಗು ಅಳುತ್ತಿದ್ದರೂ ಹಾಲುಣಿಸಲು ಆಗುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಸಹಿಸಲಾರದೆ ದುಃಖಿತಳಾದಳು. ಒಂದು ತಿಂಗಳ ನಂತರ ರೋಗ ವಾಸಿಯಾಗಿ . ಮಗುವನ್ನು ನೋಡಲು ಕಾತುರದಿಂದ ಮನಗೆ ಬಂದು ನೋಡಿದರೆ ಮಗು ಇರಲಿಲ್ಲ. ಅಜ್ಜಿಯ ನಿರ್ಲಕ್ಷ್ಯದಿಂದ ಮಗುವನ್ನು ದುಷ್ಟರು ಕದ್ದುಬಿಟ್ಟಿದ್ದರು. ಈ ಅತೀವ ನೋವನ್ನು ಸಹಿಸಲಾರದೆ ಹುಚ್ಚಿಯಾದಳು. ಒಂದು ವರ್ಷವಾದರೂ ಮಗುವಿನ ಆಚೂಕಿ ತಿಳಿಯಲಿಲ್ಲ. ಒಂದು ವರ್ಷದ ಬಳಿಕ ಯಾರೋ ಕರೆದಂತೆನಿಸಿ, ತಾಯಿ ಗ್ರಾಮದೇವತೆಯ ಗುಡಿಯ ಹತ್ತಿರ ಹೋದಳು. ಅಂದು ದೀಪಾವಳಿ ಎಲ್ಲರೂ ಪೂಜೆಯಲ್ಲಿ ಮಿಂದೆದ್ದರು. ಗ್ರಾಮದೇವತೆಯ ಗುಡಿಯಲ್ಲಿ ಕಳೆದು ಹೋದ ಮಗು ಕುಳಿತಿತ್ತು. ತಾಯಿಯ ಹರುಷ ಆಗಸಕ್ಕೆ ಮೀರಿತು. ಕಂದಮ್ಮನ ಪ್ರೀತಿಯಲ್ಲಿ ತಾಯಿಗೆ ಹುಚ್ಚು ಮಾಯವಾಯಿತು. ಮಗು ತಾಯಿಯ ಮಡಿಲು ಸೇರಿತು. ದೀಪಾವಳಿ ಅವರ ಜೀವನದಲ್ಲಿ ಸಂತೋಷದ ದಿನವಾಗಿ ಉಳಿಯಿತು.




Rate this content
Log in

More kannada story from Pallavi S Suma

Similar kannada story from Abstract