jeevithashivaraj jeevithashivraj

Drama Inspirational Others

4  

jeevithashivaraj jeevithashivraj

Drama Inspirational Others

ಅವರ ಚಟವೇ ..ಮನಸ್ಸಿದ್ದರೆ ಮಾರ್ಗ

ಅವರ ಚಟವೇ ..ಮನಸ್ಸಿದ್ದರೆ ಮಾರ್ಗ

3 mins
470


ಕೇವಲ ಆಕರ್ಷಣೆಗಾಗಿ ಶುರುವಾದಂತಹ ಕುಡಿಯುವ ಹವ್ಯಾಸ ಅಭ್ಯಾಸವಾಗಿ ಚಟವಾಗಿ ತನ್ನ ಬದುಕನ್ನೇ ನಾಶ ಮಾಡುವಂತಹ ಪರಿಸ್ಥಿತಿ ಬಂದಾಗ ಎಚ್ಚೆತ್ತು ಕೊಂಡ ಬದಲಾಗಿ ಸ್ಪೂರ್ತಿದಾಯಕವಾಗಿ ಬದುಕು ನಡೆಸುತ್ತಿರುವಂತಹ ನೈಜ ಘಟನೆ ಆಧಾರಿತ ಕಥೆ ಇದಾಗಿದೆ.


ಕೇವಲ ಮತ್ತೊಬ್ಬರ ತೋರಿಕೆಗಾಗಿ ತಾವು ಅವರಿಗಿಂತ ಏನು ಕಡಿಮೆ ಇಲ್ಲ ಎಂದು ತೋರಿಸುವಂತಹ ಭಾವನೆಯಿಂದ ಶುರುವಾಗುವ ಅಭ್ಯಾಸ ಅಂದ್ರೆ ಅದು ಕುಡಿತದ ಚಟವೇ.


ಮೊದಲು ಸ್ನೇಹಿತರ ಜೊತೆಯಲ್ಲೋ, ಅಥವಾ ಬೇರೆಯವರು ಕುಡಿಯುವುದನ್ನು ನೋಡಿ ನಾವು ಒಂದ್ಸಲ ಯಾಕೆ ಟ್ರೈ ಮಾಡಬಾರದು ಅನ್ನುವ ಯೋಚನೆಯಲ್ಲೋ, ಸುಮ್ನೆ ಹಾಗೆ ಒಂದ್ಸಲ ಕುಡಿತಾರೆ ಅಷ್ಟೇ!

ಅದಾದ ನಂತರ ಸ್ವಲ್ಪ ದಿನಗಳು ಆದ ಬಳಿಕ ಮನಸ್ಸಿಗೆ ಏನೋ ಬೇಜಾರಾಗಿರುತ್ತೆ, ಮನೆಯಲ್ಲಿ ಸಣ್ಣ ಪುಟ್ಟ ಗಲಾಟೆ ಘರ್ಷಣೆಗಳೋ ಅಥವಾ ಮನಸ್ಸಿಗೆ ಖುಷಿಯಾಯಿತು ಅಂತಾನೋ ಒಟ್ಟಿನಲ್ಲಿ ಕುಡಿಯೋದಕ್ಕೆ ಒಂದು ನೆಪ ಅಂತ ಮಾಡ್ಕೊಂಡು ಖುಷಿಯಾಗಲಿ ದುಃಖವಾಗಲಿ ಮತ್ತೊಂದಾಗಲಿ ನೆಪ ಮಾಡ್ಕೊಂಡು ಕುಡೀತಾರೆ.


ಹೀಗೆ ಆಗೊಮ್ಮೆ ಈಗೊಮ್ಮೆ ಎಂದು ಇದ್ದಂತಹ ಹವ್ಯಾಸ ಪ್ರತಿದಿನ ಕುಡಿಯುವ ಅಭ್ಯಾಸವಾಗಿ ಮುಂಜಾನೆ ಕಾಫಿ ಕುಡಿಯುವ ಬದಲು ಮಧ್ಯ ಸೇವನೆ, ಊಟದ ಬದಲು ನೀರಿನ ಬದಲು ಮಧ್ಯವನ್ನೇ ಸೇವಿಸಬೇಕೆನ್ನುವ ಚಟವಾಗಿ ಮಾರ್ಪಾಡಾಗಿರುತ್ತೆ.


ಹೀಗೆ ಊಟ ತಿಂಡಿ ಇಲ್ಲವಾದರೂ ಪರವಾಗಿಲ್ಲ ಮಧ್ಯವಿಲ್ಲದೆ ಬದುಕಲಾರೆನು ಎಂಬ ಮಧ್ಯವೆಂಬ ಮಾಯೆಯೊಳಗೆ ಬಂದಿಯಾಗಿ ಬಿಡ್ತಾರೆ. ಅವರು ಮಧ್ಯದ ವ್ಯಸನಿಯಾಗಿ ಸುಮಾರು 20 ವರ್ಷಗಳನೇ ಕಳೆದುಬಿಡುತ್ತಾರೆ.


ಆದರೇ..... ಕೆಲವು ವರ್ಷಗಳು ಕಳೆದಂತೆ

ಇದ್ದಕ್ಕಿದ್ದಂತೆ ವಾಂತಿ, ಹೊಟ್ಟೆ ನೋವು, ಅಲ್ಲೆಂದರಲ್ಲಿ ತಲೆ ತಿರುಗಿ ಮೂರ್ಛೆ ಹೋಗಿ ಕೆಳೆಗೆ ಬಿಳ್ಳೊದೂ, ಹೀಗೆ ನಾನಾ ಬಗೆಯ ರೋಗಗಳು ಬಂದಾಗಲೂ ತಲೆ ಕೆಡಿಸಿಕೊಳ್ಳದೇ "ಮಧ್ಯ ನಾ ನಿನ್ನ ಬಿಟ್ಟು ಬದುಕಲಾರೆ! ಎಂಬ ಮನೋಭಾವನೆ ಇದ್ದಂತಹ ಮನುಷ್ಯನನ್ನು ಮನೆಯವರೇಲ್ಲರೂ ಒಟ್ಟಾಗಿ ಸೇರಿ ತಿರ್ಮಾನಿ‌ಸಿ ಆ ವ್ಯಕ್ತಿಯನ್ನು ಅವನಿಗೆ ತಿಳಿಸಿದೆ ಅವನ ಗಮನಕ್ಕೆ ಒಂದಿಷ್ಟು ಮಾಹಿತಿಯೂ ಸಿಗಾದ್ದಿದ್ದಹಾಗೆ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸುತ್ತಾರೆ. 


ಮನೆ, ಹೆಂಡತಿ, ಮಕ್ಕಳು ಎಂದು ಇರೊದ್ದಂನ್ನ ಬಿಟ್ಟು ಕೇವಲ ಆಕರ್ಷಣೆಗಾಗಿ ಶುರುವಾದ ಅಂತಹ ಕುಡಿಯುವ ಅಭ್ಯಾಸ ಚಟವಾಗಿ ಅವನ ಅರಿವಿಗೆ ಬಾರದಂತೆ ಅವನ್ನನ್ನು ಗುರುತು ಪರಿಚಯ ವಿಲ್ಲದ ಯಾವುದೋ ಊರಿನಲ್ಲಿ ಕುಡಿಯುವ ಚಟವನ್ನು ಬಿಡಲು ಸೇರಿಸಿರುತ್ತಾರೆ.


ಆತ ಬೆಳ್ಳಗೆ ಎದ್ದು ಕಣ್ಣು ಬಿಟ್ಟು ನೋಡಿದರೇ......,

ನಾನು ಎಲ್ಲಿ ಇದ್ದಿನಿ, ಯಾವ ಜಾಗ ಇದು? ಯಾರು ಇವರೆಲ್ಲಾ, ವಿಚಿತ್ರವಾಗಿ ಇದ್ದಾರಲ್ಲ? ಎಂತೆಲ್ಲ ಎಂತೆಂಥಹ ಯೋಚನೆಗಳು ಅವನ ತಲೆಯಲ್ಲಿ ಮೂಡಲು ಶುರುವಾಗ ತೋಡಗಿರುತ್ತದೆ. ಆಗಾ, ಆ ವ್ಯಾಸನ ಮುಕ್ತ ಕೇಂದ್ರದಲ್ಲಿ ಕೆಲಸಗಾರ ಕೆಲಸ ಮಾಡುತ್ತಾ ಇರುವುದ್ದನ್ನು ನೋಡಿ ಮಾತಾಡಿಸಲೂ ಮುಂದಾಗುತ್ತಾನೆ.,


ಆ ಕೆಲಸಗಾರ ಅವನ ಮಾತಿಗೆ ಕಿವಿಗೊಡದೆ ಏನು ಸಂಧಿಸಾದೇ ಸುಮ್ಮನೆ ಅವನ ಪಾಡಿಗೆ ಅವನು ಕೆಲಸ ಮೂಗಿಸಿ ಹೊರೆಟ್ಟು ಹೋಗುತ್ತಾರೆ.


ಆದ್ರೆ ಈ ವ್ಯಸನಿಗೆ ಮಾತ್ರ ಬೆಳಗಾಗೆದ್ದರೆ ಮಧ್ಯ ಸೇವಿಸುವ ಚಟದ ಜೊತೆಗೆ ತಾನು ಇಲ್ಲಿ ಯಾಕೆ ಇದ್ದಿನಿ?, ಯಾರ್ ಇವರೆಲ್ಲಾ, ಒಂದೇ ಒಂದು ಮಾತು ಯಾರು ಏನೂ ಹೇಳುತ್ತಿರಲಿಲ್ಲವಲ್ಲಾ! ಎಂಬ ಕೋಪ ಅವನಲ್ಲಿ ಅವನ್ನನ್ನು ಮತ್ತಷ್ಟು ಉಗ್ರಿಯನ್ನಾಗಿ ಮಾಡಲು ಪ್ರೇರೇಪಿಸುವಂತೆ ಮಾಡಿತ್ತು ಆ ದಿನ.

 ಒಂದು ದಿನ ಹೇಗೋ ಕಳೆಯಿತು,ಎರಡು ಮೂರು,ಎಂದು ಲೆಕ್ಕ ಹಾಕುತ್ತಾಲೇ ಮೂರು ಮಾಸ ಕಳೆದೇ ಹೋಯಿತು.


ಅಲ್ಲಿ ಬರುವವರೆಲ್ಲ ತನ್ನಂತೆಯೇ ವ್ಯಸನಿಗಳೆ, ಯಾರು ಯಾರೊಂದಿಗೂ ಹೆಚ್ಚು ಮಾತಾನಾಡುವ ಹಾಗಿಲ್ಲ. ಅವರು ಕೊಟ್ಟಾಗ ಕೊಟ್ಟಂತಹ ಊಟ, ತಿಂಡಿ, ಕಾಫಿ, ಟೀ, ಹಾಲು. ಇಷ್ಟೇ ಅಲ್ಲಿನ ಬದುಕು. 


ಹೊರಗಡೆ ರಾಜನಂತೆ ಇದ್ದಂತಹವರೆಲ್ಲರೂ ಅಲ್ಲಿ ಬಂಧನಕ್ಕೆ ತುತ್ತಾಗಿ ಇದ್ದಂತಹ ಖೈದಿಗಳೆನ ಬಹುದು. ಆ ರೀತಿಯ ಭಾಸ! 

ಯಾರ್ಯಾರೋ ಒಂದಿಷ್ಟು ಜನ ಬರುತ್ತಾರೆ,ಅವರಿಗೆ ಚಟ ಮುಕ್ತನಾಗಲೂ ಭಾಷಣ ಮಾಡಿ ಹೋಗುತ್ತಿದ್ದರು.


ಅಲ್ಲಿನ ಬದುಕು ನರಕ ಪೂರಕವೆಂಬಂತೆ ಅನ್ನುವ ಹಾಗೆ ಇತ್ತು. ಅಲ್ಲಿನ ನಿಯಮಗಳಂತೆ ಆರೂ ತಿಂಗಳು ಮುಗಿಸಿದ ಮಾರನೆಯ ದಿನ ಅವರ ಸಂಬಂಧಿಕರು ಬಂದು ಅವರನ್ನೂ ಕರೆದುಕೊಂಡು ಹೋಗಬೇಕು. ಹಾಗೆ ಆದರೂ ಅವರು ಇನ್ನೆಂದೂ ಕುಡಿಯುವುದಿಲ್ಲ ವೆಂದು ಸಿಹಿ ಹಾಕಿಟ್ಟು ಬರಬೇಕು.


ಒಮ್ಮೆಲೆ ಮನೆಯವರನ್ನೂ ನೊಡುವ ಆತೂರ ಕಾತೂರ ಹಾಗೆ ತನ್ನೆಗೆ ತಿಳಿಯದೆ ಇಲ್ಲಿ ಸೇರಿಸಿರುವ ಕೋಪ ಎಲ್ಲಾವನ್ನು ನುಂಗಿ ಕಣ್ಣ್ ಅಂಚಿನಲ್ಲಿ ನೀರು ತುಂಬಿ ಮನಸ್ಸಿಗೆ ಭಾರವಾಗಿ ಅತ್ತುಬಿಡುವರು.


ಮನೆಗೆ ಮರಳಿ ತಾನು ತನ್ನ ಕೆಲಸವೆಂದು ಇದ್ದರು. ತಿಂಗಳು ಕಳೆಯಿತು. ನಾವು ಸುಮ್ಮನೆ ಇದ್ದರು ಈ ಪ್ರಪಂಚ ನಮ್ಮ ಸುತ್ತ ಮುತ್ತಲಿನ ನಮ್ಮವರೇ ಅನಿಸಿಕೊಂಡವರೇ ನಮ್ಮನ್ನು ನಮ್ಮ ಪಾಡಿಗೆ ಇರೋಕೆ ಬಿಡಲ್ಲ. ಇವನು ತುಂಬಾ ಕುಡಿತದ ಚಟಕ್ಕೆ ಬಿದಿದ್ನಂತೆ ಇವರ ಮನೆಯವರು ಇವನಿಗೆ ಗೋತಿಲ್ಲದ ಹಾಗೆ ಯಲ್ಲೋ ದೂರ ಕರ್ಕೊಂಡು ಹೋಗಿ ಬಿಟ್ಟು ಬಂದಿದ್ದರಂತೆ.ಅಂತ ವ್ಯಂಗ್ಯ ವಾಗಿ ಮಾತಾಡಲು ಶುರು ಮಾಡಿದರು. ಮತ್ತದೇ ಭಾವ. ಹೋಗು ಮನಸ್ಸಿಗೆ ನೋವಾಗುತ್ತಿತ್ತು ಎಂದು ಯಾರಿಗೂ ತಿಳಿಯದಂತೆ ಕುಡಿ... ಹೀಗೆ ಅಭ್ಯಾಸದಿಂದ ಮತ್ತೆ ಕುಡಿಯುವ ಚಟದ ದಾಸರಾದರು.


ಹೀಗೆ ಮತ್ತಷ್ಟು ವರ್ಷಗಳು ಕಳೆದವು.

ಮನೆಯಲ್ಲಿ ಅವರನ್ನು ಕಂಡರೆ ಎಲ್ಲರಿಗೂ ಅಪಾರ ಪ್ರೀತಿ.ಆದ ಕಾರಣ ಅವರಿಗೆ ಏನೇ ಆದರೂ ಅವರು ಏನೇ ಅಂದರೂ ಅವರನ್ನು ಜೋಪನಾವಾಗಿ ಅವರು ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಿದ್ದರು.


ಅವರ ಚಟವೇ ಅವರಿಗೆ ಯಮ ಪಾಶವಾಗುತ್ತ ಹೊಯಿತು.

ಅದು ಅವರ ಅರಿವಿಗೆ ಬರಲು ಸ್ವಲ್ಪ ತಡವೆ ಆಯಿತು.


ಆದರೂ ಪರವಾಗಿಲ್ಲ ಎಚ್ಚೆತ್ತುಕೊಂಡರು ತನ್ನ ಆರೋಗ್ಯ ಕೈಕೊಟ್ಟಿದ್ದನ್ನು ಅವರು ಗಮನದಲ್ಲಿಟ್ಟುಕೊಂಡು ನನಾಗಾಗಿ ಕಷ್ಟಪಡುವ ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಬಾಳಬೇಕೆಂದು ತೀರ್ಮಾನಿಸಿ ಕುಡಿತದ ಚಟದಿಂದ ಹೊರಬರಬೇಕೆಂದು ಒಂದೇ ಕ್ಷಣಕ್ಕೆ ನಿರ್ಧರಿಸಿ ಹಾಗೆಯೇ ನಡೆದುಕೊಂಡು ಹೆಂಡತಿ ಮಕ್ಕಳೊಂದಿಗೆ ಖುಷಿಯಾದ ಸಂಸಾರ ನೆಮ್ಮದಿಯಾದ ಬದುಕನ್ನು ಸಾಗುತ್ತಿದ್ದಾರೆ.


ಸುಮಾರು 25 ವರ್ಷಗಳಿಂದ ಕುಡಿತದ ದಾಸರಾಗಿದ್ದ ಅವರನ್ನು ಕಂಡು ಹಲವರು ಪ್ರೇರಣೆಯಾಗಿ ಅಕ್ಕ ಪಕ್ಕ ಸುತ್ತಲಿನ ನೆರೆಹೊರೆಯವರು ಅವರು ಎಲ್ಲರೂ ಸಹ ಇವರನ್ನ ನೋಡಿ ಕುಡಿತದ ಚಟವನ್ನು ಆಯ್ಕೆಯನ್ನಾಗಿ ಮಾಡಿಕೊಳ್ಳದೆ ಕುಡಿತವನ್ನು ಸುಖ ಸುಮ್ಮನೆ ಒಂದು ಬಾರಿಯೂ ಪ್ರಯತ್ನಿಸಬಾರದೆಂದು ನಿರ್ಧರಿಸಿದ್ದಾರೆ.


ಎಷ್ಟು ಒಳ್ಳೆಯವರಾಗಿದ್ದರು ಮಧ್ಯವನ್ನು ಆಯ್ಕೆಯಾಗಿ ಮಾಡಿಕೊಂಡರೆ ಒಮ್ಮೆ ಅದನ್ನು ಸೇವಿಸಿದರು ಸಾಕು ಅದರ ಚಟ ಎಲ್ಲರನ್ನೂ ತನ್ನ ಮಾಯಾ ಜಾಲಾಕ್ಕೆ ಸೆಳೆದು ಅದರ ದುಷ್ಪರಿಣಾಮ ಬೀರುತ್ತದೆ.


ದಯವಿಟ್ಟು ಯಾರಾದರೂ ಸರಿ ಮಧ್ಯವನ್ನೇ ಆಗಲಿ ಧೂಮಪಾನವನ್ನು ಆಕರ್ಷಣೆಗಾಗಲಿ ಸುಮ್ಮನೆ ಒಮ್ಮೆ ಪ್ರಯತ್ನಿಸಲೆಂದಾದರೂ ಸರಿ ಪ್ರಯತ್ನಿಸಬೇಡಿ. ಅಭ್ಯಾಸ ಚಟವಾಗುವುದು ಸುಲಭ ಆದರೆ ಅದರಿಂದ ಮುಕ್ತನಾಗುವುದು ಮನಸಿದ್ದರೆ ನಿರ್ಧರಿಸಿದ್ದರೆ ಮಾತ್ರ ಸಾಧ್ಯ.


Rate this content
Log in

Similar kannada story from Drama