STORYMIRROR

jeevithashivaraj jeevithashivraj

Abstract Classics Inspirational

4  

jeevithashivaraj jeevithashivraj

Abstract Classics Inspirational

ಪ್ರತಿ ಮನೆಯ ಆಧಾರ ಸ್ತಂಭವೂ ಅವಳೇ..

ಪ್ರತಿ ಮನೆಯ ಆಧಾರ ಸ್ತಂಭವೂ ಅವಳೇ..

2 mins
307

ಮಹಿಳೆ ಮೊದಲು ತನ್ನ ಮನೆಗಾಗಿ ಶ್ರಮಿಸ್ತಾಳೆ, ಹಾಗೆ ಪ್ರೀತಿಸುತ್ತಾಳೆ.

ತನ್ನ ಅಕ್ಕಪಕ್ಕ ಇರೋರ ಅಭಿಪ್ರಾಯಗಳನ್ನ ಗೌರವಿಸ್ತಾಳೆ.

ಕೆಲವೊಮ್ಮೆ ತಪ್ಪು ಸರಿ ಹೇಳುವ ಪ್ರಯತ್ನದಲ್ಲಿ ಇದ್ದರೂ ಅವರವರ ಮನಸ್ಥಿತಿಗೆ ಅನುಸಾರವಾಗಿ ಅವರನ್ನ ಸರಿದಾರಿಯಲ್ಲಿ ಸಾಗುವ ರೀತಿ ಮಾಡ್ತಾಳೆ. ಅಷ್ಟು ಶಕ್ತಿ ಅಂತೂ ಖಂಡಿತ ಹೆಣ್ಣಿಗಿದೆ.


ಯಾವ ಗೃಹಿಣಿ ತನ್ನ ಮನೆಯ ಮನಸ್ಥಿತಿಗಳನ್ನ ಬೇಕು ಬೇಡಗಳನ್ನ ಅರ್ಥೈಸಿ ಎಲ್ಲವನ್ನು ಸಮನಾಗಿ ನಿಭಾಯಿಸಿಕೊಂಡು ಹೋಗ್ತಾಳೋ ಅಂತಹಾ ಗೃಹಿಣಿ ತನ್ನ ಸುತ್ತಮುತ್ತಲಿನ ಪರಿಸರವನ್ನ ಗ್ರಾಮವನ್ನ ಪಟ್ಟಣವನ್ನ ಅಷ್ಟೇ ಯಾಕೆ ಇಡೀ ದೇಶವನ್ನೇ ಕೂಡ ನಿಭಾಯಿಸುವಂತಹ ಶಕ್ತಿಯನ್ನ ಹೊಂದಿರುತ್ತಾಳೆ.


ಯಾವ ಅಡಿಗೆಗೆ ಎಷ್ಟು ಉಪ್ಪು, ಹುಳಿ, ಖಾರ, ಸಿಹಿ ಇರಬೇಕು ಎಂದು ಗೊತ್ತಿರುವ ಅವಳಿಗೆ ಅವಳ ಸುತ್ತಮುತ್ತಲೂ ಇರುವವರಿಗೆ ಯಾರ್ಯಾರಿಗೆ ಎಷ್ಟೆಷ್ಟು ಯಾವ್ಯಾವ ರೀತಿ ಸಿಗ್ಬೇಕು ಕೊಡಬೇಕು ಅನ್ನೋದು ಅವಳಿಗೆ ಗೊತ್ತಿರಲ್ವಾ!

ಖಂಡಿತವಾಗು ಒಬ್ಬ ಹೆಣ್ಣು ಮನಸು ಮಾಡಿದ್ರೆ ಇಡೀ ದೇಶವನ್ನೇ ನಡೆಸಬಹುದು.


ಎಲ್ಲವನ್ನು ಸಮದುಗಿಸ್ಕೊಂಡು ಪ್ರತಿಯೊಂದಕ್ಕೂ ಸರಿಸಮವಾಗಿ ಸಮನಾಗಿ ಎಲ್ಲರಿಗೂ ಸಿಗುವಂತೆ ಮಾಡಬೇಕು ಅಂದ್ರೆ ಈ ದೇಶದ ಆಡಳಿತ ನಡೆಸುವವರು ಒಬ್ಬ ಹೆಣ್ಣಾಗಿದ್ದರೆ ಇನ್ನೂ ಅತ್ಯುತ್ತಮವಾಗಿರುತ್ತೆ ಅನ್ನೋದು ನನ್ನ ಅಭಿಪ್ರಾಯ.


ಹಾಗಂತ ಹೆಣ್ಣು ಗಂಡಿನ ಭೇದಭಾವ ತಾರತಮ್ಯ ಮಾಡ್ತಾ ಇಲ್ಲ. ಮನೆಯನ್ನೇ ನಿಭಾಯಿಸುವ ಅವಳು ಯಾಕೆ ದೇಶವನ್ನು ನಿಭಾಯಿಸುವುದಿಲ್ಲ ಅನ್ನುವಂತಹ ಮಾತನ್ನ ವ್ಯಕ್ತಪಡಿಸುತ್ತಿದ್ದೇನೆ ಅಷ್ಟೇ.


ಹೆಣ್ಣು ಮನೇಲಿ ಶ್ರಮ ಪಟ್ಟರೆ.... ಗಂಡು ಹೊರಗಡೆ ಹೋಗಿ ಪರಿಶ್ರಮ ಪಡುತ್ತಾನೆ.


ಈಗಲೂ ಕೆಲವೊಬ್ಬರ ಮನಸ್ಥಿತಿ ತಾವೇ ಮೇಲು ಎನ್ನುವಂತ ಒಂದು ಅಹಂ ಭಾವದಿಂದ ಗಂಡು ಹೆಣ್ಣು ತಾರತಮ್ಯ ಮಾಡಬಹುದೇನೋ.... ಆದರೇ ಹೆಣ್ಣು ಗಂಡು ಇಬ್ಬರು ಸಮಾನರೇ. ಎರಡು ಕೈ ಇಂದ ಮಾತ್ರ ಚಪ್ಪಾಳೆ ಸಾಧ್ಯ. ಅನ್ನೋದನ್ನ ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು.


ಗಂಡು ಆ ಕ್ಷಣಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಂಡರೆ ಅದೇ ಹೆಣ್ಣು ಮುಂದಿನ ಪರಿಸ್ಥಿತಿಯ ಬಗ್ಗೆ ಗಮನವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ.

ಒಮ್ಮೆ ಆಡಿದ್ ಮಾತು ಒಡೆದು ಹೋದ ಮುತ್ತು ಯಾವುದೇ ಕಾರಣಕ್ಕೂ ಒಂದುಗೂಡಿಸೋಕಾಗೋದಿಲ್ಲ.

ಅನ್ನೋದು ಗೃಹಿಣಿಗೆ ಗೊತ್ತಿದೆ.


ಹೆಣ್ಣು ಅಭಲೇ ಅಲ್ಲ

ಹೆಣ್ಣು ಅಶಕ್ತಳು ಅಲ್ಲ

ಹೆಣ್ಣು ತಾಳ್ಮೆಗೆಡಿಯು ಅಲ್ಲ

ಹೆಣ್ಣು ಅಧೈರ್ಯವಂತಳು ಅಲ್ಲ

ಹೆಣ್ಣು ಕೋಪಿಷ್ಟಳು ಅಲ್ಲ

ಹೆಣ್ಣು ಅಕ್ಷರಸ್ಥಳ ಆಗಿರಲಿ ಅನಕ್ಷರಸ್ಥಳ ಆಗಿರಲಿ ಎಲ್ಲವನ್ನ ತಿಳಿದು ತಿಳಿಸುವ ಮಹಾನ್ ಶಕ್ತಿ.

ಹೆಣ್ಣು ಮಾತೃ ಸ್ವರೂಪದವಳು.

ದುಷ್ಟ ಶಿಕ್ಷಕಳು ಅವಳೇ

ಶಿಷ್ಟ ರಕ್ಷಕಳು ಅವಳೇ


ಹೆಣ್ಣು ಎಂಥಹಾ ಸಂದರ್ಭದಲ್ಲಿಯೂ ತನ್ನನ್ನ ನಂಬಿದವರನ್ನ ತನ್ ಜೊತೇಲಿರೋರನ್ನ ತನ್ನ ಸುತ್ತಮುತ್ತಲಿನ ಪರಿಸರದವರನ್ನ ತಾಳ್ಮೆಯಿಂದ ಪ್ರೀತಿಯಿಂದ ಧೈರ್ಯದಿಂದ ಸಹನೆಯಿಂದ ಯಾವುದೇ ಕ್ಷೇತ್ರದಲ್ಲಾದರೂ ಎಲ್ಲರೂ ಒಂದೇ ಎಂಬಂತೆ ನೋಡುವವಳು ಅನ್ನೋದಕ್ಕೆ ನಮ್ಮ "ಅಮ್ಮ ಸುಧಾ ಮೂರ್ತಿಅವರೆ" ನಮಗೆಲ್ಲಾ ನಮ್ಮ ಕಣ್ಮುಂದೆ ಇರುವ ವಿಶೇಷವಾದ ಶಕ್ತಿಯೊಂದರ ಉದಾಹರಣೆ.


ವಿದ್ಯೆಯಲ್ಲಿ ಆಗಲಿ ವಿನಯದಲ್ಲೇ ಆಗಲಿ, ತಾಳ್ಮೆಯಲ್ಲೇ ಆಗಲಿ, ಹಠದಲ್ಲೇ ಆಗಲಿ ಅವಳಿಗೆ ಸರಿಸಾಟಿ ಅವಳೇ.

ವಿದ್ಯೆ ಎಂದರೆ ಬರೀ ಓದು ಮಾತ್ರವಲ್ಲ ಪ್ರತಿಯೊಂದು ಕಲಿಕೆಯು ಕೂಡ ವಿದ್ಯೆಯೇ.

ತಾಯಿಯೇ ಮೊದಲ ಗುರು ಮನೆಯ ಮೊದಲ ಪಾಠಶಾಲೆ ಅಂತಾರೆ,

ಶಾಲೆಯ ಶಿಕ್ಷಣ ವಿದ್ಯೆಯನ್ನು ಕಲಿಸಿದರೆ ತಾಯಿಯ ಸಂಸ್ಕಾರ ಜೀವನ ಮೌಲ್ಯಗಳ ಬದುಕಿನ ಪಾಠವನ್ನು ಕಲಿಸಿಕೊಡುತ್ತದೆ.


ಇಷ್ಟೆಲ್ಲಾ ತಿಳಿದಿರುವ ಮಹಿಳೆ ರಾಜಕೀಯಕ್ಕೆ ಬರುವ ಆಲೋಚನೆ ಮಾಡಿದರೆ ಸಾಕು ಅವಳು ಆಡಳಿತ ನಡೆಸ್ತಾಳೆ ಅನ್ನೋದಕ್ಕಿಂತ ಅವಳೇ ಒಂದು ಶಕ್ತಿಯಾಗಿ ಮುನ್ನಡುಸ್ತಾಳೆ ಎಂದು ಹೇಳಬಹುದು.


ಪ್ರತಿ ಮನೆಯ ಆಧಾರ ಸ್ತಂಭವೂ ಅವಳೇ

ದೀಪದ ಜ್ಯೋತಿಯು ಅವಳೇ

ಭೂಮಿಯು ಅವಳೇ ನದಿಯು ಅವಳೇ

ಕಾಳಿಯೂ ಅವಳೇ ತಾಯಿಯು ಅವಳೇ

ಭಾರತಾಂಬೆಯು ಅವಳೇ ಕನ್ನಡಾಂಬೆಯು ಅವಳೇ

ನಮ್ಮವಳೆ ಸ್ತ್ರೀ ಕುಲದವಳೇ.....


ಓದಿದ ಎಲ್ಲರಿಗೂ ಧನ್ಯವಾದಗಳು.


இந்த உள்ளடக்கத்தை மதிப்பிடவும்
உள்நுழை

Similar kannada story from Abstract