ಮಾಸದ ಮಾಸಗಳ ನೆನಪು
ಮಾಸದ ಮಾಸಗಳ ನೆನಪು
ಶ್ರಾವಣ ಮಾಸದಿಂದ ಶುರುವಾಗೋ ಹಬ್ಬಗಳು ತಾಯರಿ ದೀಪಾವಳಿ ಹಬ್ಬ ಬರೋವರಿಗು ಅದೇ ಸಂಭ್ರಮ ಸಡಗರ ಮನೆ ಮನೆಗಳಲ್ಲಿ ಅಲ್ವಾ.
ಭಾದ್ರಪದ ಮಾಸದ ಸಮಯದಲ್ಲಿ ಬರುವ ಮಳೆ, ಗಾಳಿ,ಚಳಿ ಮತ್ತು ಎಳೆಬಿಸಿಲುಗಾಗಿ ಕಾಯುವ ಕಾತುರ ಬರುವ ಹಬ್ಬಗಳು, ಖುಷಿ ಸಂತೋಷ ಕೂಡ ವಿಭಿನ್ನ ರೀತಿಯ ಮಾಸದ ನೆನಪುಗಳ ಸೇರೆಮಾಲೆಯೇ ಹೌದು.
ವರ್ಷ ವರ್ಷವೂ ಹೊಸ ಹೊಸ ವಿಷಯವನ್ನು ಅರಿತು ಹೊಸತನ್ನವನ್ನ ತರುವ ಪ್ರತಿವರ್ಷವೂ ಒಂದೊಂದು ಸುಮಧುರ ಮಾಸದ ನೆನಪುಗಳ ಬಾಂಡರ.
ಮಳೆಯ ನಡುವೆ ಬರುವ ಹಬ್ಬಗಳ ತಾಯಾರಿ. ಕೆಲಸಕ್ಕೆ ಹೋದ ಅಪ್ಪ ಮಳೆಯಾ ಕಾರಣದಿಂದ ಇನ್ನೂ ಬಂದಿಲ್ಲ. ಅನ್ನೋ ಅಮ್ಮ, ಅಪ್ಪನಿಗಾಗಿ ಕಾಯುವ ಕಾತುರ,ಮಕ್ಕಳಿಗೆ ಅಪ್ಪ ಯಾವಾಗ ಬರುತ್ತಾರೋ.... ತಿಂಡಿ ಆಟ ಸಾಮನು ಹೋಸ ಬಟ್ಟೆ ಇನ್ನೂ ಯಾಕೆ ತರ್ಲಿಲಾ? ಯಾವಾಗ ತರುತ್ತಾರೋ ಅನ್ನೋ ಬಯಕೆ.
ಈ ಸಮಯದಲ್ಲಿ ಮನಸ್ಸಿನಲ್ಲಿ ನೂರಾರು ಪ್ರಶ್ನೆ. ಅಮ್ಮ ಮೋದಲೇ ಅಪ್ಪ ಇನ್ನೂ ಬರಲಿಲ್ಲ ಅನ್ನೋ ಕೋಪ. ಮಳೆ ಬರೋಕ್ಕೆ ಮುಂಚೆ ಬೇಗ ಬೇಗನೇ ಕೆಲಸ ಮುಗಿಸಿ ಬರೋಕೆ ಆಗಲ್ವಾ ಇವರ್ಗೆ...
ಅಂತ ಈಗಲೇ ಗೋಣುಗುತ್ತಾ ಇದಾಳೆ.
ಮತ್ತೆ ಹೋಗಿ ಅಪ್ಪ ಇನ್ನೂ ಯಾಕೆ ಬರ್ಲಿಲ್ಲ ತರ್ಲಿಲಾ.....
ಅಂತ ಕೇಳಿದ್ರೆ ಬೈಯುತ್ತಾರೆ ನ್ನೋ ಅನ್ನೋ ಭಯಾ.
ಇವೆಲ್ಲಾದರ ನಡುವೆ ಅಪ್ಪ ಬಂದ್ರೂ. ಅಮ್ಮ ಓಡಿ ಬಂದು ರೀ ಕೋನೆಗೂ ಇವತ್ತೆ ಬಂದ್ರಲ್ಲಾ. ಸಾಧ್ಯ!. ನಾನು ಹೇಳಿದ್ದೆಲ್ಲ ತಾಂದ್ರಾ? ಏನೆಲ್ಲಾ ತಂದಿದ್ದಿರಾ. ಕೋಡಿ ಬೇಗಾ ಅಂತ ಎಲ್ಲವನ್ನೂ ತೆಗೆದುಕೊಂಡು ಒಳಗೆ ಹಬ್ಬಕ್ಕೆ ತಾಯರಿ ಮಾಡೋಕೆ ಹೋದ್ರು.
ಈ ಕಡೆ ಮಕ್ಕಳು
ಅಪ್ಪ ನಿಮಗೆ ಬೇಗಾ ಬರೋಕೆ ಆಗಲ್ವಾ?
ಮಳೆ ಬರೋಕ್ಕೆ ಮುಂಚೆ ಅಮ್ಮ ಕಾಯ್ತಾ ಇದ್ರು ಗೊತ್ತಾ ನಿಮಗೆ. ಅಂತ ಹೇಳೋ ಅಷ್ಟು ಹೊತ್ತಿಗೆ ಅಪ್ಪ ತಂದಿರುವ ಚಾಕ್ಲೆಟ್ ಅಪ್ಪನ ಜೇಬಿನಿಂದ ಮೆತ್ತಗೆ ತೆಗೆದು ಕಣ್ಣು ಮುಚ್ಚಿ. ನಿಮಗೆ ಏನು ತಂದಿದ್ದಿನಿ ನೋಡಿ ಅಂತಿದ್ರು.
ಆ ಗಳಿಗೆ ಅ ಕ್ಷಣ ನಮ್ಮ ಪುಟ್ಟ ಮನಸ್ಸಿನ ಏನೋ ಸಂತೋಷ ವಿವರಣೆ ಕೋಡೋಕ್ಕೆ ಆಗೋದು ಇಲ್ಲ ಅಲ್ವಾ.
ಮಕ್ಕಳಿಗೆ ಹಬ್ಬ ಬಂದ್ರೆ ಹೊಸ ಬಟ್ಟೆ, ಆಟ ಸಾಮಾನುಗಳು ಸಿಗುತ್ತೆ ಅಂತ ಖುಷಿ. ಅಮ್ಮನಿಗೆ ಹಬ್ಬ ಬಂದರೆ ಅಪ್ಪನಿಗೆ ಕೆಲಸ ರಾಜಾ ಇರುತ್ತೆ. ಅಪ್ಪ ಮನೆಲಿ ಇರ್ತಾರೆ ಅಂತ ಖುಷಿ.ಇನ್ನು ಅಪ್ಪನಿಗೆ ಇವತ್ತು ಹೆಂಡತಿ ಮಕ್ಕಳು ಜೋತೆ ಇರೋಕ್ಕೆ ಅವರು ಜೋತೆ ಸಮಯ ಕಳೆಯಲು ಖುಷಿ ಇರ್ತಾಯಿತ್ತು.
ಆದ್ರೆ ಈವಾಗಿನ ಒತ್ತಡದ ಜೀವನದಲ್ಲಿ ಅಪ್ಪ ರಜಾ ಸಿಕ್ಕಾರೆ ಸಾಕು. ನಿದ್ದೆ ಮಾಡುವ ಎಂದು ಯೋಚಿಸುವ ಪರಿಸ್ಥಿತಿ.
ಇನ್ನೂ ಅಮ್ಮನು ಅಷ್ಟೇ ಮನೆಯಲ್ಲಿ ಮತ್ತು ಹೊರಗಡೆ ಎರಡು ಕಡೆ ಕೆಲಸ ಮಾಡುವುದರಿಂದ ಅಮ್ಮನಿಗೆ ಮತ್ತಷ್ಟು ಒತ್ತಡ .
ಸಿಕ್ಕಿದ ಸಮಯಕ್ಕೆ ಗಂಡ ಮಕ್ಕಳಿಗೆ ಏನಾದರೂ ತಿಂಡಿ ತಿನಿಸು ಮಾಡಿಕೋಡಬೇಕು ಎಂಬ ಮನೋಭಾವ.
ಇನ್ನೂ ಮಕ್ಕಳಿಗೆ ಕೇಳಿದ್ದೆಲ್ಲ ಸಿಗುವಾಗ ಮತ್ತಿನೇನು ಬೇಕಲ್ವಾ. ಅಪ್ಪ ಅಮ್ಮನ ಪ್ರೀತಿ ಏನು ಅನ್ನೋದು ಗೊತ್ತಾಗ್ತಾ ಇಲ್ಲ. ಈಗಿನ ಮಕ್ಕಳಿಗೆ ಹಬ್ಬಗಳ ಮಹತ್ವ ಏನು ಎಂಬುದನ್ನು ಹೇಳಿಕೊಡಕ್ಕೆ ಯಾರು ಇಲ್ಲದ ರೀತಿ ಆಗಿದೆ. ಒತ್ತಡದ ಜೀವನದಿಂದಾಗಿ ನಮ್ಮ ನಮ್ಮ ಮನೆಯ ಆಚಾರ-ವಿಚಾರ ಸಂಪ್ರದಾಯ ಸಂಸ್ಕಾರ ಎಲ್ಲವನ್ನೂ ಬಹುಶಃ ಮರಿತಾ ಬಂದಿದೀವಿ.
ಮೊದಲೆಲ್ಲಾ ಅಜ್ಜಿ-ತಾತ ಮನೆಯಲ್ಲಿ ಇರ್ತಾ ಇದ್ರು. ಅಜ್ಜಿ ಹಬ್ಬ ಆಚರಣೆಗಳನ್ನು ಹೇಳ್ತಾ ಮಾಡ್ತಾ ಇದ್ರು.ಆದ್ರೆ ಈಗೆಲ್ಲಾ ಯಾವುದೋ ದೂರದುರಿನಲ್ಲಿ ಅಜ್ಜಿ ತಾತ ಇರ್ತಾರೆ. ಅವರು ಹುಟ್ಟಿ ಬೆಳೆದ ಊರು ಬಿಟ್ಟು ಹೊರಗಡೆ ಬಂದು ಇರಲ್ಲ.ಮಕ್ಕಳಿಗೆ ಕಷ್ಟಪಟ್ಟು ಓದಿಸಿ ಒಂದೊಳ್ಳೆ ಕೆಲಸ ಕೊಟ್ಟಿರುತ್ತಾರೆ. ಮಕ್ಕಳು ಕೆಲಸಕ್ಕೆ ಸೇರಿದ ಮೇಲೆ ಅಲ್ಲೇ ಇದ್ದು ಬಿಡ್ತಾರೆ.
ಹೀಗೆ ನಮ್ಮ ಜೀವನ ಸಾಕ್ತಾ ಇದೆ.
ಆಗೆಲ್ಲ ಎಷ್ಟು ಬೇಕು ಅಷ್ಟು ದುಡಿಯುತ್ತಿದ್ದರು ನೆಮ್ಮದಿ ಇತ್ತು.
ಈಗ ಕೈ ತುಂಬಾ ದುಡ್ಡು ಬಂದ್ರು ನೆಮ್ಮದಿ ಇಲ್ಲ.
ಇನ್ಮುಂದೆ ಆದ್ರೂ ನಾವು ನಮ್ಮ ಮಕ್ಕಳಿಗೆ ಶಾಸ್ತ್ರ, ಸಂಪ್ರದಾಯ, ಧರ್ಮ ನಮ್ಮ ಮನೆಯ ಆಚಾರ ವಿಚಾರ ಎಲ್ಲವನ್ನೂ ಕನಿಷ್ಠ ಅರ್ಧ ಗಂಟೆ ಆದರೂ ಅವರಿಗೆ ಸಮಯ ಕೊಟ್ಟು ಹೇಳಿಕೊಳ್ಳೋಣ.
ನೀವೇನು ಹೇಳ್ತೀರಾ?
