jeevithashivaraj jeevithashivraj

Abstract Inspirational Others

4.2  

jeevithashivaraj jeevithashivraj

Abstract Inspirational Others

ತಿಮ್ಮಪ್ಪನ ದರ್ಶನ ಭಾಗ್ಯ

ತಿಮ್ಮಪ್ಪನ ದರ್ಶನ ಭಾಗ್ಯ

3 mins
283


ಎಲ್ಲರಿಗೂ ನಮಸ್ಕಾರ

ನೀವೇನಾದ್ರೂ ತಿರುಪತಿಗೆ ಹೋಗಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ?


ಆದ್ರೆ ಏನ್ ಮಾಡೋದು ಆನ್ಲೈನ್ ಬುಕಿಂಗ್ ಮಾಡಿ ತಿರುಪತಿಗೆ ಹೋಗೋಕೆ ಎರಡು ಮೂರು ತಿಂಗಳು ಕಾಯ್ಬೇಕು ಅಂತ ಬೇಸರನಾ?


ನೆನೆದ ಕೂಡಲೇ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಮಾಡ್ಬೇಕು ಅನ್ನೋವರಿಗಾಗಿ ಈ ಬ್ಲಾಗ್ ಹಾಗಿದ್ರೆ ಸಂಪೂರ್ಣವಾಗಿ ಓದಿ.


ತಿರುಪತಿ ಟ್ರಾವೆಲಿಂಗ್ ಪ್ಯಾಕೇಜ್ ಅಲ್ಲಿ 2008 ನೂರು ರೂಪಾಯಿಂದ 3500 ವರೆಗೂ ಒನ್ ಡೇ ದರ್ಶನದ ಸೌಕರ್ಯ ಇದ್ದೇ ಇರುತ್ತೆ‌. ಆದರೆ ಎಲ್ರಿಗೂ ಅಷ್ಟೊಂದು ದುಡ್ಡು ಕೊಟ್ಟು ಹೋಗಿ ಬರೋಕೆ ಸಾಧ್ಯನಾ!


ಬೆಂಗಳೂರಿನಿಂದ K s r t c ಕರ್ನಾಟಕ ಸರ್ಕಾರದ ಸಾರಿಗೆ ಬಸ್ ಸೌಲಭ್ಯದಿಂದ ಕೇವಲ 350 ರೂಪಾಯಿಗೆಲ್ಲ ನಾವು ತಿರುಪತಿಯನ್ನು ತಲುಪಬಹುದು. ನಾವೇನಾದ್ರೂ ರಾಜಹಂಸ ಬಸ್ ನಲ್ಲಿ ಹೋಗಬೇಕು ಅಂದ್ರೆ 500 ರೂ ಗಳು ಆಗುತ್ತದೆ. ಅದೇ ನಮಗೆ ಎಸಿ ಬಸ್ ಐರಾವತ ಬಸ್ ನಲ್ಲಿ ಹೋಗಬೇಕಂದ್ರೆ 700ರೂ. ಗಳು ಟಿಕೆಟ್ ಇರುತ್ತದೆ. ಇನ್ನೂ ಕಡಿಮೆ ವೆಚ್ಚದಲ್ಲಿ ನಾವು ತಿರುಪತಿ ಗೆ ಹೋಗ್ಬೇಕು ಅಂದ್ರೆ ರೈಲಿನಲ್ಲಿ ಪ್ರಯಾಣಿಸಬಹುದು.


ತಿರುಪತಿ ತಲುಪಿದ್ದಾಯಿತು, ಆದರೆ ಆನ್ಲೈನ್ ಬುಕಿಂಗ್ ಮಾಡೆ ಇಲ್ಲ ತಿಮ್ಮಪ್ಪನ ದರ್ಶನ ಹೇಗ್ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ ತಿರುಪತಿ ರೈಲ್ವೇ ಸ್ಟೇಷನ್ ಎದುರಗಡೆ ಇರೋ ಶ್ರೀ ವಿಷ್ಣು ಭವನದಲ್ಲಾದರೂ ಸರಿ ಅಥವಾ ಶ್ರೀನಿವಾಸ ಕಾಂಪ್ಲೆಕ್ಸ್ ಬಸ್ಟ್ಯಾಂಡ್ ಎದುರುಗಡೆ ಇರುವಂತಹ ಶ್ರೀನಿವಾಸ ಕಾಂಪ್ಲೆಕ್ಸ್ ಆದ್ರೂ ಸರಿ ಸರ್ವ ದರ್ಶನ ಫ್ರೀ ಟೋಕನ್ ಅಂತ ಕೊಡ್ತಾ ಇರ್ತಾರೆ. ಆ ಟೋಕನ್ ಕೊಡುವಂತಹ ಸಮಯ ಅವರು ಸರಿಯಾಗಿ ನಿಗದಿಪಡಿಸಿರೋದಿಲ್ಲ ಅವರಿಷ್ಟ ಬಂದಂತೆ ಟೋಕನ್ ನ ಕೊಡ್ತಾರೆ ಆದ್ರೆ ಸಂಜೆ ಏಳು ಬೆಳಗ್ಗೆ ಐದು ಈ ಸಮಯದಲ್ಲಿ ಯಾವಾಗ ಬೇಕಾದರೂ ಕೊಟ್ಟೆ ಕೊಡ್ತಾರೆ. ಮಧ್ಯಾಹ್ನದ ಸಮಯ ಯಾವುದೇ ರೀತಿ ಸಮಯ ನಿಗದಿಯಾಗಿರುವುದಿಲ್ಲ ಆದರೂ ಸಹ ಒಮ್ಮೆ ಕೊಡ್ತಾರೆ. ಅಥವಾ ಮಧ್ಯರಾತ್ರಿ ಎರಡು ಮೂರು ನಾಲ್ಕು ಐದು ಈ ಗಂಟೆಗಳಲ್ಲಿ 300 ರೂಗಳ ಸ್ಪೆಷಲ್ ದರ್ಶನ ಟಿಕೆಟ್ ಅನ್ನು ಸಹ ಕೊಡುತ್ತಾರೆ. ಮಧ್ಯರಾತ್ರಿ ಎರಡು ಗಂಟೆ ಸಮಯದಿಂದ ದೇವರ ದರ್ಶನಕ್ಕೆ ನಿಮಗೆ ಯಾವ ಸಮಯ ಬೇಕೋ ಆ ಸಮಯದಲ್ಲಿ ಟಿಕೆಟ್ ಗಳನ್ನು ನೀವು ಪಡೆಯಬಹುದು.


ತಿಮ್ಮಪ್ಪನ ಅನುಗ್ರಹ ಇದ್ರೆ ಹೋದ ದಿನವೇ ಟಿಕೆಟ್ ದರ್ಶನಕ್ಕೆ ಸಿಗ್ತದೆ. ಇನ್ನೊಂದು ಮಾತು ಶ್ರೀನಿವಾಸ ಕಾಂಪ್ಲೆಕ್ಸ್ ಅಲ್ಲಿ ರೂಮ್ ಸೌಲಭ್ಯ ಆನ್ಲೈನ್ ಬುಕಿಂಗ್ ಮಾಡುವವರಿಗಾಗಿ ಇದ್ದರೆ ಪಕ್ಕದಲ್ಲೇ ಇರುವ ಮಾಧವಂ ಅಲ್ಲಿ ರೂಮ್ ಸಿಕ್ಕರು ಸಿಗಬಹುದು ಇಲ್ಲ ಅಂದ್ರೆ ರೈಲ್ವೆ ಸ್ಟೇಷನ್ ಬಳಿ ಇರುವ ವಿಷ್ಣು ಭವನದಲ್ಲಿ ಒಂದು ಗಂಟೆ ಕಾದರೆ ಇದಿಷ್ಟು ಎಂಬಂತೆ ರೂಮುಗಳು ಎಂಬಂತೆ ದೊರಕುತ್ತವೆ. ಇಲ್ಲ ನಮಗೆ ರೂಮ್ ಸೌಲಭ್ಯ ಏನು ಬೇಡ ನಾವು ಸ್ನಾನ ಮಾಡಿ ಫ್ರೆಶ್ ಅಪ್ ಆಗಿ ಹೋಗಬೇಕು ಅಷ್ಟೇ ಅನ್ನೋದಾದರೆ ನಿಮಗೆ ಶ್ರೀನಿವಾಸ ಕಾಂಪ್ಲೆಕ್ಸ್ ದಿ ಬೆಸ್ಟ್ ಅಂತಾನೆ ಹೇಳಬಹುದು ಯಾಕೆಂದರೆ ಅಲ್ಲಿ ಎಲ್ಲಾ ಸೌಕರ್ಯಗಳು ನಿಮಗೆ ಉಚಿತವಾಗಿ ದೊರಕುತ್ತವೆ. ಹಾಗೆ ಅಷ್ಟೇ ಸ್ವಚ್ಛತೆಯನ್ನು ಕೂಡ ಕಾಯ್ದುಕೊಂಡಿದೆ. ಹಾಗೆ ಟಿಟಿಡಿಯಿಂದ ಮಧ್ಯಾಹ್ನ ಮತ್ತೆ ರಾತ್ರಿ ಅನ್ನ ಪ್ರಸಾದವನ್ನು ಕೂಡ ಕೊಡ್ತಾರೆ. ನಿಮ್ಮ ದರ್ಶನದ ಸಮಯವನ್ನು ನಿಗದಿಪಡಿಸಿಕೊಂಡು ಅಲ್ಲೇ ಇರುವಂತಹ ಗೋವಿಂದರಾಜು ಸ್ವಾಮಿ ದೇವಸ್ಥಾನ, ಹಾಗೆ ತಿರುಚನ್ನೂರು ಪದ್ಮಾವತಿ ಅಮ್ಮನವರು, ಕಲ್ಯಾಣ ವೆಂಕಟೇಶ, ಹಾಗೆ ಇನ್ನು ಹತ್ತು ಹಲವು ದೇವಸ್ಥಾನಗಳನ್ನ ಪ್ಯಾಕೇಜ್ ಮುಖಾಂತರ ತೆಗೆದುಕೊಂಡು ನೋಡಬಹುದು.

ಹಾಗೆ ನೀವು ಅಲಿಪಿರಿ (ಬೆಟ್ಟ ಹತ್ತಿಕೊಂಡು) ಮುಖಾಂತರ ಏನಾದರೂ ದೇವರ ದರ್ಶನ ಮಾಡೋಕೆ ಬಯಸುತ್ತಿದ್ದೀರಾ ಅಂದ್ರೆ ನಿಮಗೆ ಇನ್ನು ಸುಲಭವಾಗಿ ತಿಮ್ಮಪ್ಪನ ದರ್ಶನ ಆಗುತ್ತೆ. ಜೊತೆಗೆ ಇನ್ನೂ ಒಂದು ಲಾಡು ಕೂಡ ಎಕ್ಸ್ಟ್ರಾ ಸಿಗುತ್ತೆ. ಏನಾದ್ರೂ ಬೆಟ್ಟದ ಕಾಲ್ನಡಿಗೆ ಮುಖಾಂತರ ದೇವರ ದರ್ಶನ ಮಾಡ್ತಿದೀರಾ ಅಂದ್ರೆ ಬೆಳಗ್ಗಿನ ಜಾವ ಮೂರು ಗಂಟೆಯಿಂದ ಬೆಟ್ಟ ಹತ್ತಲು ಶುರು ಮಾಡಿ. ಬೆಳಗ್ಗೆ ಆರು ಗಂಟೆಗೆಲ್ಲ ನೀವು ಬೆಟ್ಟ ಹತ್ತಬಹುದು. ಇನ್ನೂ ಬೇಗನೆ ಸಹ ಬೆಟ್ಟವನ್ನು ಹತ್ತಬಹುದು. ಮಿನಿಮಮ್ ಅಂದ್ರೆ ನಾಲ್ಕು ಗಂಟೆಗಳ ಕಾಲಾವಕಾಶ ಬೇಕಾಗುತ್ತೆ ‌. ಪ್ರಯತ್ನ ಪಟ್ಟರೆ ಎರಡು ಮೂರು ಗಂಟೆಗೆಲ್ಲ ಬೆಟ್ಟನಾ ಹತ್ತಬಹುದು.


ಇನ್ನೊಂದು ಮಾಹಿತಿ ಬೆಟ್ಟದ ಮೇಲೆ ಯಾವಾಗಲೂ ರೂಮ್ ಗಳ ಸೌಕರ್ಯ ಇದ್ದೇ ಇರುತ್ತೆ ಅಂತ ಹೇಳಿಕಾಗೋದಿಲ್ಲ, ಈಗ ಬೇಸಿಗೆ ರಜೆ ಇರೋದ್ರಿಂದ ಯಾವುದಾದರೂ ವಿಶೇಷ ದಿನಗಳಲ್ಲಿ ತುಂಬಾ ಜನಗಳು ಇರೋದ್ರಿಂದ ರೂಂಗಳು ಸ್ವಲ್ಪ ಕಷ್ಟವೇ ಅನಬಹುದು ಆದರೆ ನಮ್ಮ ಕರ್ನಾಟಕದವರಿಗಾಗಿ ಕರ್ನಾಟಕ ಭವನ ಅಂತ ರೂಮ್ ಸೌಕರ್ಯ ಇದೆ. ವೆಚ್ಚ ದುಬಾರಿಯೇ ಎಂದರು ಸಹ ಬೇಕೆಂದೊಡನೆ ಕರ್ನಾಟಕದವರಿಗಾಗಿ ಕನ್ನಡ ಮಾತನಾಡುವವರಿಗಾಗಿ ಸಿಕ್ಕೆ ಸಿಗುತ್ತೆ ಅಂತ ಹೇಳಬಹುದು.


ಏನೇ ಆದ್ರೂ ಬೇಕೆನ್ದೊಡನೆ ತಿರುಪತಿ ತಿಮ್ಮಪ್ಪನ ದರ್ಶನ ಅವನ ಭಕ್ತಿ ಅನುಸಾರವಾಗಿ ದರ್ಶನಪ್ರಾಪ್ತಿಯಾಗುತ್ತೆ ಅಂತ ಹೇಳೋಕೆ ಬಯಸ್ತೇನೆ.


ತಿಮ್ಮಪ್ಪ ದಯೆ ನಿಮ್ಮ ಜೊತೆಗಿದ್ರೆ ಕೆಲವೇ ಗಂಟೆಗಳಲ್ಲಿ ಅವನ ದರ್ಶನವಾಗಬಹುದು. ದರ್ಶನಕ್ಕೆ ತಡವಾಗ್ತಿದೆ ಅಂದ್ರೇ ಅವನು ನಿಮ್ಮ ತಾಳ್ಮೆಯನ್ನ ಪರೀಕ್ಷಿಸುತ್ತಾ ಇದ್ದಾನೆ ಅಂತ ಭಾವಿಸಿ.

ತಿಮ್ಮಪ್ಪನ ಬೇಡದವರಿಲ್ಲ

ಬೇಡಿದ ವರವನ್ನು ಪಡೆಯದೆ ಇದ್ದವರು ಇಲ್ಲ.


ನನಗೆ ತಿಳಿದ ಒಂದಿಷ್ಟು ಮಾಹಿತಿ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತಾ ಓದಿದ ಎಲ್ಲರಿಗೂ ಧನ್ಯವಾದಗಳು.


Rate this content
Log in

Similar kannada story from Abstract