jeevithashivaraj jeevithashivraj

Children Stories Drama Others

4  

jeevithashivaraj jeevithashivraj

Children Stories Drama Others

ತಪ್ಪು ಯಾರದ್ದೂ ಅಲ್ಲ, ಆದ್ರೆ....

ತಪ್ಪು ಯಾರದ್ದೂ ಅಲ್ಲ, ಆದ್ರೆ....

3 mins
265


ಒಂದೂರಲ್ಲಿ ಒಂದು ಮನೆ.ಅಲ್ಲಿ ಒಂದು ಸಣ್ಣ ಕುಟುಂಬ. ಅವರು ತಮ್ಮ ಜೊತೆಗೆ ಒಂದು ಮಂಗ ಮತ್ತು ಒಂದಿಷ್ಟು ಮೇಕೆಗಳನ್ನು ಸಾಕಿಕೊಂಡು ತಮ್ಮ ಜೀವನೋಪಾಯನಕ್ಕೆ ಮಂಗನ ಆಟವನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಇದರಂತೆ.

ಜೊತೆಗೆ ಮೇಕೆಯ ಹಾಲು ಆರೋಗ್ಯಕ್ಕೆ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಶಕ್ತಿ ಹೊಂದಿದೆ. ಅಂತ ಹೇಳಿ ಮೇಕೆಯ ಹಾಲನ್ನು ಸಹ ಮಾರಿ ತಮ್ಮ ಜೀವನವನ್ನು ಹೇಗೋ ನಡೆಸಿಕೊಂಡು ಹೋಗ್ತಿದ್ರಂತೆ.

ಅವರು ಪ್ರತಿದಿನ ಸ್ವಲ್ಪ ಮೇಕೆಯ ಹಾಲಿನಿಂದ ಮೊಸರನ್ನು ತಯಾರಿಸಿ ತಮ್ಗೆ ಊಟಕ್ಕೆ ಆಗುತ್ತೆ ಅಂತ ಹೇಳಿ ಮೇಲ್ಚಾವಣಿಗೆ ಮಡಕೆಯ ಕುಡಿಕೆಯನ್ನು ಕಟ್ಟಿ ಇಟ್ಕೊಳ್ತಿದ್ರಂತೆ. ಹೀಗೆ ಎತ್ತಿಟ್ಟು ಕೊಳ್ಳುವುದನ್ನು ಪ್ರತಿ ಬಾರಿಯೂ ಮಂಗ ಗಮನಿಸುತ್ತಲೇ ಇತ್ತಂತೆ. ಆಗೆ ಒಮ್ಮೆ ಅವರೆಲ್ಲ ಹೊರಗಡೆ ಏನೋ ಕೆಲಸ ಮಾಡ್ತಾ ಇದ್ರಂತೆ, ಇದನ್ನೆಲ್ಲ ಗಮನಿಸಿದ ಮಂಗ ಒಳಗಡೆ ಯಾರು ಇಲ್ಲದ್ದನ್ನು ಕಂಡು ಮನೆ ಒಳಗಿನ ಮೇಲ್ಚಾವಣಿಯಲ್ಲಿದ್ದ ಮಡಕೆ ಅಲ್ಲಿನ ಮೊಸರನ್ನ ಒಮ್ಮೆ ರುಚಿ ನೋಡಿ, ಗಾಬರಿಯಿಂದ ಯಾರೋ ಬಂದರೆಂದು ಅಲ್ಲೇ ಇಟ್ಟು ಬಂದು ಬಿಡ್ತಂತೆ. ಹಾಗೆ ಮರುದಿನವೂ ಹೋಗಿ ರುಚಿ ನೋಡುತ್ತಾ, ಅದರ ಬಾಯಿಗೆ ರುಚಿಸುತ್ತಾ..... ಸಲ್ಪ ಸಲ್ಪವೇ ರುಚಿ ನೋಡುತ್ತಾ ನೋಡುತ್ತಲೇ ಎಲ್ಲವನ್ನು ತಿಂದು ಮುಗಿಸಿ ಬಿಡ್ತಂತೆ.


ಮಡಕೆಯಲ್ಲಿನ ಮೊಸರೆಲ್ಲ ಖಾಲಿಯಾಗಿದ್ದನ್ನು ಕಂಡು ಹಾಗೆ ಮನೆಯ ಬಳಿಯೇ ಮನೆಯವರು ಬರುತ್ತಿದ್ದನ್ನು ನೋಡಿ ಗಾಬರಿಯಿಂದ ಖಾಲಿ ಮಡಕೆಯ ಬೀಳಿಸಿದಂತೆ.


ಮನೆ ಒಡತಿ ಮನೆ ಒಳಗೆ ಬಂದು ನೋಡಿದರೇ..... ಮಡಿಕೆ ಕೆಳಗೆ ಬಿದ್ದು ಚೂರು ಚೂರು ಆಗಿದ್ದನ್ನು ಕಂಡು,

ಏನಾಯ್ತು? ಯಾಕ್ ಮಡಿಕೆ ಕೆಳಗಡೆ ಬಿದ್ದೋಗಿದೆ? ಅಂತ ಪ್ರಶ್ನೆಯನ್ನು ಮಾಡ್ತಾ ಮೇಕೆ ಕಡೆ ತಿರುಗಿ ನೋಡಿದಳಂತೆ!


ಮೇಕೆಯ ಬಾಯಿಯಲ್ಲಿ ಮೇತ್ತಿಕೊಂಡಿದ್ದಂತಹ ಮೊಸರನ್ನ ಕಂಡಿ ಮೇಕೆಯೇ ಮಡಿಕೆಯನ್ನು ಹೊಡೆದಾಕಿದೆ! ಅಂತ ಭಾವಿಸಿದಳಂತೆ!


ಹಾಗಿದ್ರೆ ಅವಳ್ಯಾಕೆ ಮೇಕೆ ಮೇಲೆಯೇ ದೂಷಣೆ ಅಪವಾದವನ್ನ ತನ್ನ ಮನಸ್ಸಿನಲ್ಲೆ ಹಾಕಿಕೊಂಡಳು.

ಅಲ್ಲಿ ಮಂಗಾನು ಇತ್ತಲ್ವಾ? ಆದ್ರೂ ಕೂಡ ಮೇಕೆಯದೇ ತಪ್ಪು ಅಂತ ಅವಳು ಹೇಗೆ ಭಾವಿಸಿರಬಹುದು.


ಹೇಳಿ ನೋಡೋಣ?

ಅವಳು ಕಣ್ಣಿಗೆ ಕಂಡಿದ್ದನ್ನ ಮಾತ್ರ ನಿಜ ಅಂತ ಅನ್ಕೊಂಡ್ಲು. ಹೌದು ಅಲ್ವಾ.

ಹಾಗಿದ್ದರೆ ಏನು ತಪ್ಪು ಮಾಡದೆ ಇರೋ ಮೇಕೆಯ ಮೇಲೆ ಸಂಶಯಿಸಿದ್ದು ಕೂಡ ಅವಳ ತಪ್ಪಲ್ವಾ?


ಹಾಗಿದ್ದರೆ ಏನು ಆಗಿರಬಹುದು? ಅವಳಿಗೆ ಯಾಕೆ ಆ ರೀತಿ ಮೇಕೆ ಮೇಲೆ ಸಂಶಯ ಬಂತು. ಹೇಳಿ?


ಯಾಕಂದರೆ ಮಂಗ ತಾನು ತಿಂದಂತಹ ಮೊಸರಿನ ಮಡಕೆಯನ್ನ ಮನೆ ಒಡತಿ ಒಳಗಡೆ ಮನೆ ಒಳಗಡೆ ಬರುತ್ತಿದ್ದನ್ನು ಕಂಡು ಗಾಬರಿ ಒಳಗಾಗಿ ತನ್ನ ಕೈಯಲ್ಲಿದ್ದಂತ ಮಡಿಕೆಯನ್ನು ಕೈ ಬಿಡ್ತು. ಹಾಗೆ ಆ ಜಾಗದಿಂದ ಓಡೋಗ್ಬೇಕು ಅಂತ ಹೇಳಿ ಮಂಗ ತನ್ನ ಮಂಗ ದಾಟದಿಂದ ಮೇಲ್ಚಾವಣಿಗೆ ಕಟ್ಟಿದಂತಹ ಹಗ್ಗವನ್ನು ಜೋರಾಗಿ ಹೇಳಿತು, ಹಾಗೆ ಆ ಮಡಿಕೆಯ ಮೇಲೆ ಮುಚ್ಚಿದಂತಹ ಸೊಪ್ಪಿನ ಬುತ್ತಿ ಕೆಳಗಡೆ ಬಿದ್ದಿತ್ತು.

ಅಲ್ಲೇ ಇದ್ದಂತಹ ಮೇಕೆ ಸೊಪ್ಪನ್ನ ಕಂಡ ತಕ್ಷಣ ಬಂದಿ ತಿನ್ನೋದಕ್ಕೆ ಬಾಯ್ ಹಾಕ್ತು. ಹಾಗಾಗಿ ತಿನ್ನುವ ಒಂದು ಬರದಲ್ಲಿ ಅಲ್ಲೇ ಹೊಡೆದು ಹೋಗಿದ್ದಂತಹ ಮಡಿಕೆಗಳ ಚೂರಿನಲ್ಲಿ ಇದ್ದಂತಹ ಮೊಸರಿನ ಕೆನೆ ಮೇಕೆ ಮೂತಿಗೆ ಮೆತ್ಕೊಂಡಿತ್ತು. ಮನೆ ಒಡತಿ ಒಳಗ್ ಬರುವಷ್ಟರಲ್ಲಿ ಮಂಗ ಮಂಗದಾಟದಿಂದ ಜಿಗಿದು ಹೊರಗಡೆ ಹೋಗಿತ್ತು! ಒಳಗಡೆ ಬಂದು ನೋಡಿದಾಗ ಮೇಕೆ ಕೆಳಗಡೆ ಬಿದ್ದಿದಂತಹ ಸೊಪ್ಪಿನ ಬುತ್ತಿಯನ್ನು ತಿಂತಿತ್ತು. ಸೊಪ್ಪನ್ನ ಕಂಡ್ ತಕ್ಷಣ ಮೇಕೆ ಸೊಪ್ಪನ್ನ ತಿನ್ನುವ ಸಲವಾಗಿ ಮೇಕೆ ಮೇಲಕ್ಕೆ ಹೆಗರಿ ಮಡಿಕೆ ನಾ ಹೊಡೆದಾಗಿ ಇರಬಹುದು ಅಂತ ಅವಳು ಭಾವಿಸಿದಳು.


ಆ ದಿನ ಸುಮ್ಮನಾದಳು. ಮತ್ತೆ ಮರುದಿನ ಮೊಸರನ್ನ ಮೇಲ್ಚಾವಣಿಯಲ್ಲಿ ಎತ್ತಿಟ್ಟಿದಳು. ಮಡಿಕೆಯಲ್ಲಿ ಒಮ್ಮೆ ರುಚಿ ನೋಡಿದ ಮಂಗ ಮರುದಿನವೂ ಮತ್ತೆ ಬಂತು. ರುಚಿ ನೋಡಿದ ಮಂಗ ಮೊಸರನ್ನ ಸುಮ್ನೆ ಬಿಡುತ್ತಾ? ಮರು ದಿನವು ಎಲ್ಲ ಮೊಸರನ್ನ ಖಾಲಿ ಮಾಡ್ತು. ಮಡಿಕೇನ ಇರೋ ಜಾಗದಲ್ಲಿ ಇಟ್ಟು ಹೊರಟು ಹೋಯಿತು. ಮನೆ ಒಡತಿ ಬಂದ್ಲು, ಖಾಲಿಯಾಗಿದ್ದ ಮಡಿಕೆಯನ್ನು ಕಂಡಳು. ನಿನ್ನೆ ಸೊಪ್ಪನ್ನು ಕಂಡು ಮೇಕೆ ಸೊಪ್ಪಿಗಾಗಿ ಮಡಿಕೆನ ಬಿಳಿಸಿ ಸೊಪ್ಪನ್ನೆಲ್ಲ ತಿಂದಿರಬಹುದು. ಆದರೆ ಇವತ್ತು ಮಡಿಕೆ ಇಲ್ಲೇ ಇದೆ ಮೊಸರು ಖಾಲಿಯಾಗಿದೆ, ಏನಾಗಿರಬಹುದು ಅಂತ ನಿಧಾನಕ್ಕೆ ತಾಳ್ಮೆಯಿಂದ ಯೋಚನೆ ಮಾಡುದ್ಲು. ಅಲ್ಲೇ ಮಂಗನೂ ಕೂಡ ಈ ಕಡೆನೇ ಗಮನಿಸ್ತಾ ಇದ್ದದ್ದನ್ನ ಕಂಡಳು! ಹೋ.... ಈ ಕೆಲಸ ಮಂಗನದೇ ಅಂತ ಗೊತ್ತಾಯ್ತು.


ಪಾಪ ನಿನ್ನೆ ಮೇಕೆ ಮೇಲೆ ಸಂಶಯ ಪಟ್ಬಿಟ್ಟನಲ್ಲ ಅಂತ ಮನಸ್ಸಿಗೆ ಬೇಜಾರು ಮಾಡಿಕೊಂಡು ಮೇಕೆಯನ್ನ ಎತ್ತಿ ಮುದ್ದಾಡುತ್ತಾ ಇದ್ದಳು.


ಅದಕ್ಕೆ ಹೇಳೋದು ಕಂಡಿದ್ದನ್ನ ನಿಜ ಅಂತ ನಂಬಬಾರದು ಅಂತ!



ಮಂಗ ಮೊಸರನ್ನ ತಿಂದು ಮೇಕೆ ಬಾಯಿಗೆ ಒರಿಸಿದಂತೆ!


ಈ ಗಾದೆ ಹೀಗೂ ಆಗಿರ್ಬಹುದು ಅನ್ನುವ ಕಲ್ಪನೆ ನನ್ನದು.

ಇಲ್ಲಿ ತಪ್ಪು ಯಾರದು ಇಲ್ಲ! ಮೇಲಕ್ಕೆ ಏನೋ ಎತ್ತಿಡುತ್ತಿದ್ದಾರೆ ಏನು ಇರಬಹುದು, ಅನ್ನೋ ಕುತೂಹಲದಿಂದ ಮಂಗ ಹೋಗಿ ಪರೀಕ್ಷಿಸಿತು.

ಹಾಗೆ ತಿನ್ನುವ ಪದಾರ್ಥ ಕಂಡು ಒಮ್ಮೆ ರಚಿ ನೋಡ್ತು, ಮರುದಿನ ಆ ರುಚಿಯನ್ನ ಮತ್ತೊಮ್ಮೆ ಸವಿಯಲೆಂದು ಮರಳಿ ಹೋಯಿತು. ರುಚಿ ಸವಿಯುತ್ತಾ ಪೂರ್ತಿ ಮಡಿಕೆ ಖಾಲಿ ಮಾಡ್ತು. ಅಷ್ಟರಲ್ಲೇ ಮನೆಯವರು ಮನೆ ಒಳಗೆ ಬರುತ್ತಿದ್ದಿದ್ದನ್ನು ಕಂಡು ಗಾಬರಿಯಿಂದ ಮಡಿಕೆ ಹೊಡೆದಾಕ್ತು. ಅಲೆದಂತ ಮೇಕೆಗಳು ಕೆಳಗ್ ಬಿದ್ದಂತಹ ಸೊಪ್ಪನ್ನ ಕಂಡು ‌ ಬಂದು ಮೇಯಲಿಕ್ಕೆ ಶುರು ಮಾಡಿದ್ವು. ಇದುನ್ನು ಕಂಡಂತಹ ಮನೆ ಒಡತಿ ಮೇಕೆಯೇ ತಿಂದಿರಬಹುದು ಅಂತ ಭಾವಿಸಿದಳು ಅಷ್ಟೇ!


ತಪ್ಪು ಯಾರದ್ದೂ ಅಲ್ಲ, ಆದ್ರೆ ಕೆಲವೊಮ್ಮೆ ನಷ್ಟವಂತೂ ಖಚಿತ!

ಮಂಗನ ಆಸೆಯಿಂದ ಆಗಿದ್ದ ಒಂದು ನಷ್ಟ ಏನಂದ್ರೆ ಮಡಿಕೆ ಬಿದ್ದು ಹೊಡೆದು ಹೋಗಿದ್ದು.

ಮತ್ತೊಂದು ಮಡಿಕೆಯನ್ನು ತೆಗೆದುಕೊಳ್ಳೋಕೆ ಅವನಿಗೆ ಎಷ್ಟು ಕಷ್ಟ ಇರುತ್ತೋ ಯಾರಿಗೆ ಗೊತ್ತು ಅಲ್ವಾ? ನಮ್ಮ ಆಸೆ ಮತ್ತೊಬ್ಬರು ಕಷ್ಟ ಪಡುವಂತೆ ಮಾಡಬಾರದು ಅಲ್ವಾ.


ಮಂಗನಿಗೆ ಗೊತ್ತಾಗ್ದೇ ಆಗಿದ ತಪ್ಪು,

ಬುದ್ಧಿ ಇದ್ದ ಮನುಷ್ಯರಾದ ನಾವು ಮಾಡಬಾರದು ಅನ್ನುವ ಕಥೆ ಸಾರಾಂಶ ಇದು.


ಹಾಗೆ ಯಾವುದೇ ಒಂದು ತಪ್ಪನಾದ್ರೂ ಕಂಡಿದ್ದನ್ನೇ ತಪ್ಪು ಅಂತ ಭಾವಿಸುವುದು ಕೂಡ ಒಂದು ರೀತಿ ತಪ್ಪೇ...

ಕೆಲವೊಮ್ಮೆ ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಕೂಡ ಸುಳ್ಳಾಗಬಹುದು, ನಿಧಾನಕ್ಕೆ ಯೋಚನೆ ಮಾಡಿ ಏನಾಗಿರಬಹುದು ಅಂತ ನಿಗ್ರಹಿಸಿ ತಾಳ್ಮೆಯಿಂದ ಗ್ರಹಿಸಿದ್ರೆ ಮಾತ್ರ ನಿಜ ಏನು ಅಂತ ಗೊತ್ತಾಗೋದು.


ಆಸೆಯೇ ದುಃಖಕ್ಕೆ ಮೂಲ

ತಾಳಿದವನು ಬಾಳಿಯಾನು

ಕೇಳಿಲ್ವಾ ಈ ಗಾದೆಗಳನ್ನಾ?


ಓದಿದ ಎಲ್ಲರಿಗೂ ಧನ್ಯವಾದಗಳು. ನನ್ನದೊಂದು ಪುಟ್ಟ ಪ್ರಯತ್ನ‌

ಧನ್ಯವಾದಗಳೊಂದಿಗೆ



Rate this content
Log in