jeevithashivaraj jeevithashivraj

Comedy Drama Inspirational

4  

jeevithashivaraj jeevithashivraj

Comedy Drama Inspirational

ಆತುರಾದ ಕೆಲಸಗಳಲ್ಲಿ ಇರಲಿ ಎಚ್ಚರಿಕ

ಆತುರಾದ ಕೆಲಸಗಳಲ್ಲಿ ಇರಲಿ ಎಚ್ಚರಿಕ

2 mins
306


ಅಂದು ಹಬ್ಬದ ತಯಾರಿ ಬಲು ಜೋರಾಗಿತ್ತು.ಅವಳು ಅಂದಿನ ದಿನದ ವಿಶೇಷ ಅಡುಗೆಗಳನ್ನು ತಯಾರಿಸುವಲ್ಲಿ ತಲ್ಲೀನಳಾಗಿದ್ದಳು. ಅಡುಗೆ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಅನ್ನವನ್ನು ಇಟ್ಟು ಇನ್ನೊಂದು ಪಾತ್ರೆಯಲ್ಲಿ ಬೇಳೆ ಬೇಯಲು ಇಟ್ಟು ತರಕಾರಿಗಳನ್ನು ಕತ್ತರಿಸಲು ಕೆಳಗೆ ಕುಳಿತು ಕೊಂಡಿದ್ದಳು.


ಅಷ್ಟರಲ್ಲಿ ಹೊರಗಡೆಯಿಂದ ಯಾರೋ ಕರೆದಂತಾಯಿತು. ಯಾರೆಂದು ನೋಡಲು ಹೋದವಳು ಅಲ್ಲಿಯೇ ಮಾತನಾಡುತ್ತಾ ಒಲೆಯ ಮೇಲೆ ಇಟ್ಟಿರುವುದನ್ನು ಮರೆತು ಅಲ್ಲೆ ಮಾತನಾಡಿಕೊಂಡು ನಿಂತುಬಿಟ್ಟಿದ್ದಳು.


ಅವಳ ಅತ್ತೆ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದರು. ಅವಳು ಸ್ವಲ್ಪ ಮರೆವಿನ ಸ್ವಭಾವದವಳು ಆದ್ದರಿಂದ ಅತ್ತೆ ಒಲೆಯ ಕಡೆ ಹೋಗಿ ಬಂದು ನೋಡಿಕೊಳ್ಳುತ್ತಿದ್ದರು. ಪಾತ್ರೆಯಲ್ಲಿ ಬೇಳೆ ಬೇಯಲು ಇಟ್ಟಿರುವ ತಡವಾಗುವುದಿಲ್ಲವೇ ಎಂದು ಪಾತ್ರೆಯಿಂದ ಕುಕ್ಕರಿಗೆ ಬೇಳೆಯನ್ನು ಹಾಕಿ ಬೇಯಲು ಇಟ್ಟಿದ್ದರು.



ಕುಕ್ಕರ್ ವಿಶಲ್ ಶಬ್ದವನ್ನು ಕೇಳಿ ಗಾಬರಿಯಾಗಿ ಒಳಗಡೆಗೆ ಓಡಿಬಂದಳು. ಅವಳು ಅಂದು ಒಬ್ಬಟ್ಟು ಮಾಡಲು ಪಾತ್ರೆಯಲ್ಲಿ ಬೇಳೆಯನ್ನು ಬೇಯಲು ಇಟ್ಟಿದ್ದಳು. ಆದರೆ ಅದನ್ನು ತಿಳಿಯದಂತೆ ಸಾರಿಗೆ ಇರಬಹುದೆಂದು ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ ಬಿಟ್ಟಿದ್ದರು.


ಕುಕ್ಕರ್ ಗೆ ಸ್ವಲ್ಪ ಪ್ರಮಾಣದ ಬೇಳೆ ಹಾಕಿ ಬೇಯಲು ಇಟ್ಟರೆ ಅದು ಮೂರು ವಿಶಲ್ ಬಂದರೂ ಕೂಡಾ ಪೂರ್ಣವಾಗಿ ಬೆಂದಿರುವುದಿಲ್ಲ, ಆದರೆ ಅತಿ ಹೆಚ್ಚು ಬೇಳೆಯನ್ನು ಹಾಕಿ ಒಂದು ವಿಶಲ್ ಕೂಗಿಸಿದರು ಸಾಕು ತುಂಬಾ ನುಣುಪಾಗಿ ಬೆಂದು ಬಿಟ್ಟಿರುತ್ತದೆ.


ಸರಿ ಇನ್ನೇನು ಮಾಡುವುದು ಎಂದು ಅದನ್ನು ಸಾರು ,ತೊವ್ವೆ ಮತ್ತು ಬೇಳೆಯ ಸಿಹಿಅನ್ನವೆಂದು ತಯಾರಿ ಮಾಡಿದಳು. ನಂತರ ಮತ್ತೇನೋ ಕೆಲಸದಲ್ಲಿ ಮಗ್ನಳಾದಳು.


ಆದರೆ ಮೊದಲಿಗೆ ಕರೆಂಟ್ ಹೋಗಬಹುದೆಂದು ರುಬ್ಬುವ ಪದಾರ್ಥಗಳನ್ನೆಲ್ಲಾ ರುಬ್ಬಿಟ್ಟು ಕೊಳ್ಳಬೇಕು, ಕರೆಂಟ್ ಇಲ್ಲವಾದರೆ ಏನ್ ಮಾಡೋದು? ಎಂದು ಮಿಕ್ಸಿಯಲ್ಲಿ ರುಬ್ಬಲು ಮಸಾಲ ಪದಾರ್ಥಗಳನ್ನು ಹಾಕಿ ರುಬ್ಬುತ್ತಿರುವಾಗ ಕರೆಂಟ್ ಮಧ್ಯದಲ್ಲಿ ಹೋಗಿತ್ತು. ಆದರೆ ಮಿಕ್ಸಿಯ ಸ್ವಿಚ್ಚನ್ನು ಆಫ್ ಮಾಡಲು ಮರೆತಿದ್ದಳು.

ಕರೆಂಟ್ ಹೋದ ಕಾರಣ ಅವಳು ಬೇರೆ ಕೆಲಸ ಮಾಡಲು ಹೋಗಿ ಅನ್ನ ಮತ್ತು ಬೇಳೆಯನ್ನು ಬೇಯಲು ಇಟ್ಟಿದ್ದಳು. ಆದರೆ ಅವಳ ಮರೆವಿನ ಪ್ರಭಾವದಿಂದಾಗಿ ಮರೆತೇ ಬಿಟ್ಟಿದ್ದಳು. ಆಗ ಅಡುಗೆಮನೆಯಲ್ಲಿ ಜೋರಾದ ಶಬ್ದ ಏನಾಯಿತು ಎಂದು ಗಾಬರಿಗೊಳಗಾಗಿ ಬಂದು ನೋಡಿದರೆ ತಕ್ಷಣವೇ ಕರೆಂಟ್ ಬಂದು ಮಿಕ್ಸಿ ತಾನಾಗಿಯೇ ತನ್ನ ಕೆಲಸವನ್ನು ಆರಂಭಿಸಿತ್ತು. ಮಸಾಲೆಯಲ್ಲ ಹೊರಗಡೆ ಎಗರಿ (ಚೆಲ್ಲಿ) ಅಡುಗೆಮನೆ ಪೂರ್ತಿ ಆಹಾ! ಯಪ್ಪ ದೇವರೇ..... ಎಂಬಂತಾಗಿತ್ತು.



ಮೊದಲೇ ಅತ್ತೆ ಮರೆವಿನ ಪ್ರಭಾವದಿಂದ ಇವಳು ಬೇಳೆ ಪಾತ್ರೆಯಲ್ಲಿ ಬೇಯಲು ಇಟ್ಟಿರಬಹುದು ಎಂದು ಕುಕ್ಕರ್ ಗೆ ಹಾಕಿದ್ದರಿಂದ ಒಂದು ಹೋಗಿ ಇನ್ನೊಂದ್ ಆಗಿತ್ತು. ಆದರೆ ಈಗ ನಿಜವಾಗಲೂ ಮರೆವಿನ ಪ್ರಭಾವದಿಂದ ಅಡುಗೆ ಮನೆಯಲ್ಲಾ ರಂಪ ರಾಮಾಯಣ (ಪಜೀತಿ) ಆಗಿತ್ತು.


ಹಬ್ಬದಡಿಗೆಯನ್ನು ಮನೆಯವರಿಗೆಲ್ಲಾ ವಿಶೇಷವಾಗಿ ತನ್ನ ಕೈಯಾರೆ ಅಡುಗೆ ಮಾಡಿ ಬಡಿಸಲೆಂದು ಹೋದವಳು ಅದನ್ನು ಶುಚಿಗೊಳಿಸುವಲೇ ಸಾಕ್ ಆದಳು.

ನಂತರ ಬೇಗ ಬೇಗ ಜಾಗ್ರತೆಯಿಂದ ನಿಗಾವಹಿಸಿ ಅಡುಗೆಗಳನ್ನು ಮಾಡಿದಳು.



ಕೆಲವೊಮ್ಮೆ ಹೀಗಾಗುವುದು ಸಹಜ.ನಮ್ಮ ನಮ್ಮ ಮನೆಗಳಲ್ಲಿ ಇಂತಹ ಘಟನೆಗಳು ಅದೆಷ್ಟೋ‌ ಸಲ ಆಗಿರುತ್ತೆ ಅಲ್ವಾ. ಯಾವುದೇ ಕೆಲಸವನ್ನು ಆಗಲಿ ಮಾಡುವಾಗ ತುಂಬಾ ಎಚ್ಚರಿಕೆಯಿಂದ ನಿಗಾವಹಿಸಿ ಮಾಡಬೇಕು.ಮನೆಯಲ್ಲೇ ಅಡುಗೆ ಮಾಡುವಂತಹ ಗೃಹಿಣಿಯರು ತಮ್ಮ ಪ್ರೀತಿಪಾತ್ರ ಗೋಸ್ಕರ ಅಡುಗೆ ಮಾಡುವಲ್ಲಿ ಅದೆಷ್ಟು ಶ್ರಮ ಪಟ್ಟಿರುತ್ತಾರೆ ಗೊತ್ತಾ.


ಆದರೆ ನಮ್ಮಂತಹ ಗೃಹಿಣಿಯರು ಆತುರಾತುರದಿಂದ ಮಾಡುವ ಕೆಲಸದಲ್ಲಿ ಪದೇಪದೇ ಆದರೂ ಗ್ಯಾಸ್ ಆಫ್ ಆಗಿದ್ಯಾ, ನೀರಿನ ನಲ್ಲಿ ನಿಲ್ಲಿಸಿದ್ದಿನಾ, ಮಿಕ್ಸಿ ಆಫ್ ಮಾಡಿದಿನಾ, ಅಂತಲ್ಲ ನೋಡಿಕೊಳ್ತಾ ಇರಬೇಕು. ಇಲ್ಲ ಅಂದ್ರೆ ಆಮೇಲೆ ಕಷ್ಟ ಪಡೋದು ನಾವೇ.


ಅಯ್ಯೋ, ಹಾಲು ಇಟ್ಟಿದ್ದೆ , ಅದನ್ನು ಮರೆತು ಬಂದು ಮೊಬೈಲ್ ಹಿಡಿದು ಬ್ಲಾಗ್ ಬರೆದಿದ್ದೀನಿ.

ಬಂದೆ ,ಬಂದೆ ,ಒಂದು ನಿಮಿಷ....😄😄😄😄😄😄



ಓದಿದ ಎಲ್ಲರಿಗೂ ಧನ್ಯವಾದಗಳು.

ನಿಮ್ಮ ಮನೆಯಲ್ಲೂ ಇಂತಹ ಘಟನೆಗಳು ನಡೆದಿದ್ರೆ ಕಮೆಂಟ್ ಅಲ್ಲಿ ತಿಳಿಸಿ. ಓದುವಾ...😄😄.



Rate this content
Log in

Similar kannada story from Comedy