Shubha Kamat

Comedy Drama Others

3.8  

Shubha Kamat

Comedy Drama Others

ಆಲ್ಫಾ ಕಾಗೆ

ಆಲ್ಫಾ ಕಾಗೆ

3 mins
38


ಅದೊಂದಿನ ಬೆಳಗ್ಗೆ ಎಂದಿನಂತೆ ಆಫೀಸ್ ಹೋಗುವ ಸಲುವಾಗಿ ಅಡುಗೆ ತಿಂಡಿ ಬರದಿಂದ ನಡಿತಾ ಇದೆ. ಅಂದು ನಮ್ಮನೇಲಿ ತುಂಬಾ ದಿನಗಳ ಮೇಲೆ ಇಡ್ಲಿ ಸಾಂಬಾರ್ ತಿಂಡಿ ಹಾಗೆ ನುಗ್ಗೆಕಾಯಿ ಸಾಂಬಾರ್ ಊಟಕ್ಕೆ ಬಾಕ್ಸಿಗೆ. ನಮ್ಮೂರಿನ ಸಾಂಬಾರ್ ಪುಡಿ ಆಹಾ ಮನೆ ತುಂಬ ಸಾಂಬಾರ್ ಪರಿಮಳ. ಒಂದು ಕ್ಷಣ ಮದುವೆಮನೆ ಅಡುಗೆಮನೆ ನೆನಪು ಕಣ್ಣೆದುರಿಗೆ ಬಂದು ಹೋಯಿತು. ಸರಿ ಹೆಂಗು ಸಾಂಬಾರ್ ಕುದಿತಾ ಇದೆ ಅಷ್ಟರಲ್ಲಿ ಹೋಗಿ ಗಾರ್ಡನ್ ಗಿಡಗಳಿಗೆ ನೀರ್ ಹಾಕೊಂಡ್ ಬರೋಣ ಅಂತ ಹೊರಟೆ. ಬಾಗಿಲು ತೆಗಿತಿದ್ದಂಗೆ ಒಂದು ಮರದ ಅಡಿಯಲ್ಲಿ ಎರಡು ಕಾಗೆಗಳು ಎನೋ ಮಾಡ್ತಿದಾವೆ. ಒಂದು ಕಾಗೆ ಮೇಲಿಂದ ಏನೋ ಸಿಗ್ನಲ್ ಕೊಡುತ್ತೆ ಇನ್ನೊಂದು ಕಾಗೆ ಕೆಳಗಡೆಯಿಂದ ಏನೋ ಸಿಗ್ನಲ್ ಕೊಡುತ್ತೆ ಏನೋ ಜೋರಾಗಿ ನಡಿತಾ ಇದೆ. ಒಂದ್ಸಲ ಅನ್ಸಿತು ಎಲ್ಲೋ ಪರಿಮಳಕ್ಕೆ ಬಂದಿದೆ ಅಂತ ಹೋಗ್ಲಿ ಬಿಡು ಅನ್ಕೊಂಡು ಸುಮ್ನೆ ನನ್ ಕೆಲ್ಸ ನಾನ್ ಮುಂದುವರಿಸಿದೆ.


ನಾನು ಹತ್ರ ಹೋಗ್ತಿದ್ದಂಗೆ ಒಂದು ಕಾಗೆ ಹಾರೋಯ್ತು. ಇನ್ನೊಂದು ಅಲ್ಲೇ ಕೂತ್ಕೊಂಡು ಏನೋ ಮಾಡ್ತಾ ಇತ್ತು. ಯಾಕೋ ಅದರ ವ್ಯವಹಾರ ನೋಡಿ ಸ್ವಲ್ಪ ವಿಚಿತ್ರ ಅನಿಸ್ತು ನಾನೆಷ್ಟು ಹತ್ರ ಹೋದ್ರು ಏನು ಹೆದರಿಕೊಳ್ಳದೆ ಅಲ್ಲಲ್ಲೇ ಒಡಾಡುತಿದೆ. ಇನ್ನೊಂದು ಕಾಗೆ ಅಲ್ಲೆಲ್ಲೋ ಮೇಲೆ ಕೂತ್ಕೊಂಡು ವಿಚಿತ್ರವಾಗಿ ಕೂಗುತ್ತಿದೆ. ನಾನು ನನ್ನ ಪಾಡಿಗೆ ನೀರು ಹಾಕಕ್ಕೆ ಶುರು ಮಾಡಿದೆ, ನೀರು ಮೈಮೇಲೆ ಸಿಡಿತಾ ಇದ್ದರು ಹಾರಿಹೋಗುವ ಯಾವುದೇ ಲಕ್ಷಣಗಳು ಕಾಣ್ತಾಇಲ್ಲ. ಯಾಕೋ ಈ ಕಾಗೆ ಕುರುಡಿರಬೇಕು ಅಂದ್ಕೊಂಡು ಅದಕ್ಕೇನೊ ತೊಂದ್ರೆಯಾಗದೆ ಇರೋ ತರ ಅದ್ ಕೂತಿರೋ ಜಾಗ ಬಿಟ್ಟು ಬೇರೆ ಕಡೆ ಎಲ್ಲ ನೀರು ಹಾಕಿದೆ. ಮೇಲ್ಗಡೆ ಕೂತಿರೋ ಕಾಗೆ ಮಾತ್ರ ತುಂಬಾನೇ ಕೂಗುತ್ತಿತ್ತು.


ನಾನು ಮನೆ ಒಳಗಡೆ ಬಂದು ಆಫೀಸಿಗೆ ರೆಡಿಯಾಗ್ತಿದ್ದ ನನ್ನ ಗಂಡನ ಹತ್ರ ಹೇಳ್ದೆ ಎಲ್ಲೊ ಪರಿಮಳಕ್ಕೆ ಎರಡು ಕಾಗೆಗಳು ಬಂದಿದ್ದಾವೆ, ಒಂದು ತುಂಬಾ ಧೈರ್ಯಶಾಲಿ ಅನಿಸುತ್ತೆ, ಮೈಮೇಲೆ ನೀರ್ ಬಿದ್ರು ಹಾರಿಲ್ಲ ಅಥವಾ ಕುರುಡು ಅನ್ಸತ್ತೆ. ತಿಂಡಿ ತಿಂತಿದ್ದ ನನ್ನ ಗಂಡ ಕಿಟಕಿ ಇಂದ ನೋಡಿ ಮೋಸ್ಟ್ಲಿ ಅದು ಮರಿ ಕಾಗೆ ಇರಬೇಕು ಅಂತ ಹೇಳಿದ್ರು. ಏನೋ ಹೋಗಲಿ ಬಿಡಿ ಅಂತ ಹೇಳಿ ನಾವು ನಮ್ ಕೆಲಸಕ್ಕೆ ಹೋದ್ವಿ.


ನಂದು ಆ ದಿನ ಮನೆಯಿಂದಾನೆ ಕೆಲಸ ಆಫೀಸ್ ಕಾಲ್ಗಳು ಶುರು ಆದ್ವು. ನಾನು ಮರೆತು ಹೋದೆ ಈವಿಷಯಾನ. ಸುಮಾರು ಮಧ್ಯಾಹ್ನದ ಸಮಯ, ಸ್ವಲ್ಪ ಸೆಕೆ ಆಗ್ತಾ ಇದೆ ಅಂತ ಕಿಡಕಿ ಬಾಗಿಲು ತೆಗೆದು ನೋಡಿದ್ರೆ ಇನ್ನೂ ಆ ಕಾಗೆ ಗಾರ್ಡನ್ ಅಲ್ಲೇ ಇದೆ ಇನ್ನೊಂದು ಕಾಗೆ ಕಾಂಪೌಂಡ್ ಮೇಲೆ ಕೂತು ಒಂದೇ ಸಮನೆ ಕೂಗತಿದೆ. ಈಗ ಎಲ್ಲೋ ಸ್ವಲ್ಪ ಕ್ಯೂರಿಯಾಸಿಟಿ ಹೆಚ್ಚಿಗೆ ಆಯ್ತು, ಸ್ವಲ್ಪ ಹೊತ್ತು ಕಿಟಕಿ ಹತ್ರ ನಿಂತು ನೋಡ್ತಾ ನಿಂತೆ ಏನ್ ಮಾಡ್ತಾ ಇದಾವೆ ಅಂತ. ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯ ಅರ್ಥ ಆಯ್ತು ಎಲ್ಲೋ ನನ್ ಗಂಡ ಹೇಳಿದ್ದು ಸತ್ಯ ಇರಬೇಕು ಅಂತ. ನೆಡೆರ್ಲ್ಯಾಂಡ್ಸಿನ್ ಕಾಗೆ ಆಗಿದ್ರಿಂದ ಮರಿ ಕಾಗೆನ ಗುರ್ತಿಸೋದು ಸ್ವಲ್ಪ ಕಷ್ಟ ಆಯ್ತು ಅನ್ಸತ್ತೆ. ಇಲ್ಲಿಎಲ್ಲಾ ಪ್ರಾಣಿ ಪಕ್ಷಿಗಳು ಸಾಮಾನ್ಯವಾಗಿ ದಷ್ಟ-ಪುಷ್ಟವಾಗಿ ಬೆಳೆದಿರುತ್ತವೆ. 


ಹಾಗೆ ಸ್ವಲ್ಪ ಹೊತ್ತು ಗಮನಿಸಿದರೆ ಆ ತಾಯಿ ಕಾಗೆ ತುಂಬಾ ಕಷ್ಟ ಪಡ್ತಾ ಇದೆ ಆ ಮರಿಕಾಗೆನಾ ಮನೆಗೆ ಕರ್ಕೊಂಡು ಹೋಗೋದು ಹೇಗೆ ಅಂತ ನಮ್ಮನೆ ಗಾರ್ಡನ್ ಹಿಂದೆ ಒಂದು ದೊಡ್ಡ ಮರ ಇದೆ ಎಲ್ಲೋ ಈ ಮರಿಕಾಗೆ ಬೆಳೆಗ್ಗೆ ಬೆಳೆಗ್ಗೆ ಮರದಿಂದ ಕೆಳಗಡೆ ಇಳಿದುಬಿಟ್ಟಿದೆ. ಇನ್ನೂ ರೆಕ್ಕೆಗಳು ಸರಿಯಾಗಿ ಬೆಳೆದಿಲ್ಲ ಅದಕ್ಕೆ ಹಾರಕ್ಕೆ ಇನ್ನು ಬರ್ತಾ ಇಲ್ಲ. ಕಷ್ಟಪಟ್ಟು ಒಂದೆರಡು ಹೆಜ್ಜೆ ದೂರ ಹಾರತಿದೆ. ಈಗ ನಮ್ಮನೆ ಕಾಂಪೌಂಡ್ ಒಳಗಡೆ ಬಂದುಬಿಟ್ಟಿದೆ ಹೊರಗಡೆ ಹೋಗಕ್ಕೆ ಏನಿಲ್ಲ ಅಂದ್ರು ಇನ್ನೂರು ಮೀಟರ್ ಮೇಲೆ ಹತ್ಬೇಕು ಈ ತಾಯಿ ಕಾಗೆ ಬಂದು ಏನೋ ಹೇಳಿ ಕೊಡ್ತಾ ಇದೆ, ಈ ಮರಿಕಾಗೆ ಒಂದೇ ಸಮನೆ ಅಳ್ತಾ ಇದೆ ಅನ್ನಿಸ್ತು. 


ಕೊನೆಗೂ ತಾಯಿ ಕಾಗೆ ನಮ್ಮ ಕಂಪೌಂಡ್ ಮೇಲೆ ಬೆಳೆದಿರೋ ದ್ರಾಕ್ಷಿ ಬಳ್ಳಿನ ನೋಡಿ ಎಲ್ಲಾನು ಚೆಕ್ ಮಾಡತ್ತೆ. ಅದು ಕಾಂಪೌಂಡ್ ಉದ್ದಕ್ಕೂ ಬೆಳೆದಿರುವುದನ್ನ ನೋಡುತ್ತೆ ಹೋಗಿ ಮರಿಕಾಗೆಗೆ ಅದರದ್ದು ರೆಂಬೆನಾ ಹತ್ತಕ್ಕೆ ಹೇಳಿಕೊಡತ್ತೆ. ಹಾಗೆ ಆ ಮರಿಕಾಗೆನು ಒಂದೊಂದೇ ರೆಂಬೆನಾ ಹತ್ತಿ ಕೊನೆಗೂ ಕಾಂಪೌಂಡ್ ಮೇಲೆ ಹತ್ತಿ ಕೂರುತ್ತೆ ಇದನ್ನೆಲ್ಲ ಗಮನಿಸ್ತಾ ಇರೋ ನನಗೆ ಒಂದು ಕ್ಷಣ ಖುಷಿಯಾಗುತ್ತೆ ಕೊನೆಗೂ ಮಾಡ್ಬಿಡ್ತು ಅಂತ.

ತಾಯಿ ಮತ್ತು ಮರಿ ಕಾಗೆ ಎರಡು ಫುಲ್ ಕುಶ್, ಸರಿ ಇನ್ನು ಮುಂದಿನ ದಾರಿ ಹೆಂಗೆ. ಇನ್ನು ಆ ಮರದತ್ರ ಹೋಗಕ್ಕೆ ನಮ್ಮ ಪಕ್ಕದ ಮನೆ ಕಾಂಪೌಂಡ್ ದಾಟಿ ಹೊರಗಡೆ ಹೋಗ್ಬೇಕು.ಈ ತಾಯಿ ಕಾಗೆ ಖುಷಿಯಲ್ಲಿ ಅದನ್ನ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಹಾರಕ್ಕೆ ಹೇಳತ್ತೆ. ಆ ಮರಿ ಕಾಗೆನು ತಾಯಿ ಹೇಳಿದಾಗೆ ಎಲ್ಲಾ ಶಕ್ತಿನೂ ಉಪಯೋಗಿಸಿ ಇನ್ನೊಂದು ಗೋಡೆ ಮೇಲೆ ಹಾರಕ್ಕೆ ರೆಡಿ ಆಗುತ್ತೆ. ಪಾಪ ಅದು ಇನ್ನು ಚಿಕ್ಕದು ಅದರ ಶಕ್ತಿ ಎಲ್ಲೂ ಸಾಲಲ್ಲ ಮತ್ತೆ ಕೆಳಗಡೆ ಬಿದ್ದು ಬಿಡುತ್ತೆ.

ಈ ಸಲ ಪಕ್ಕದ ಮನೆ ಕಂಪೌಂಡಲ್ಲಿ. ಪಾಪ ಈ ತಾಯಿ ಕಾಗೆಯ ಪಾಡು ನೋಡಕ್ಕಾಗದೆ ನಾನು ಕೆಲಸಕ್ಕೆ ಬಂದೆ. ಎಷ್ಟು ಹೊತ್ತಾದರೂ ಕಾಗೆ ಕೂಗು ಸೌಂಡು ನಿಂತಿರಲಿಲ್ಲ. ನಾನು ನನ್ನ ಕೆಲಸದಲ್ಲಿ ಮುಳುಗಿದೆ. ಊಟದ ಸಮಯ ಆಯ್ತು ಹಾಗೆ ಎದ್ದು ಕಿಟಕಿ ಕಡೆ ನೋಡಿದ್ರೆ ತಾಯಿ ಕಾಗೆ ಇನ್ನೂ ಅದರ ಪ್ರಯತ್ನ ಬಿಟ್ಟಿಲ್ಲ. ಮರಿ ಕಾಗೆ ಯಾಕೋ ಸುಸ್ತಾಗಿ ಕೂತಂಗಿತ್ತು.


ನಮ್ಮಮ್ಮ ಹೇಳೋರು ಈ ಮರಿಪಕ್ಷಿಗಳನ್ನ ಯಾವತ್ತೂ ಮುಟ್ಟಕ್ ಹೋಗ್ಬಾರ್ದು ಒಂದ್ ಸತಿ ಮನುಷ್ಯರು ಮುಟ್ಟಿದರೆ ಅವು ಆ ಮರಿಗಳನ್ನ ಹತ್ತಿರ ಸೇರಿಸಲ್ಲ ಅಂತ, ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಪಕ್ಕದ ಮನೆಯವರು ಕೂಡ ಏನೋ ಮಾಡ್ದೆ ಇರೋದನ್ನ ನೋಡಿ ಸುಮ್ಮನೆ ಇರೋದೇ ಬೆಸ್ಟು ಅನ್ಕೊಂಡು ಸುಮ್ನೆ ಊಟ ಮಾಡಿ ನನ್ ಕೆಲ್ಸಕ್ ಬಂದೆ. 


ಹಾಗೆ ಸುಮಾರು ನಾಲ್ಕು ಗಂಟೆ ಸಮಯ ಒಂದು ಕಾಲ್ ಮುಗುಸ್ಕೊಂಡು ಎದ್ದೆ ನೆನಪಾಯ್ತು ಬಂದು ಕಿಟಕಿ ಹತ್ರ ನೋಡ್ದೆ ತಾಯಿನು ಇಲ್ಲ ಮರಿ ಕಾಗೆ ಕೂಡ ಇರಲಿಲ್ಲ. ಎಲ್ಲೋ ಈ ತಾಯಿ ಕಾಗೆ ಸಕ್ಸಸ್ ಫುಲ್ಲಾಗಿ ಮರಿಯನ್ನುಕರ್ಕೊಂಡು ಮನೆಗೆ ಹೋಯಿತು ಅಂತ ಅನ್ಕೊಂಡು ಖುಷಿ ಆಯ್ತು. 


ಹಾಗೆ ಒಂದನಾಲ್ಕು ದಿನ ಬಿಟ್ಟು ಮತ್ತೆ ಅದೇ ಮರಿ ಕಾಗೆನ ಪಕ್ಕದ್ಮನೆ ಗಾರ್ಡನ್ ಹಟ್ ಮೇಲೆ ಕೂತಿರೋದ್ನ ನೋಡ್ದೆ ಸುಮ್ನೆ ಏನ್ ಕೂತಿರ್ಲಿಲ್ಲ ಬೀಳ್ದೆ ಇರೋ ತರ ಸರ್ಕಸ್ ಮಾಡ್ತಾ ನೇತಾಡ್ತಿತ್ತು.ಒಂದು ಸಲ ಆ ತಾಯಿ ಕಾಗೆಯ ಪರದಾಟನ ನೆನೆಸಿಕೊಂಡರೆ ಸಡನ್ ಆಗಿ ನನ್ನ ಅತ್ತಿಗೆ ನೆನಪಾದರು ನನ್ನ ಅಣ್ಣನ ಮಗ ಚಿಕ್ಕು ಈ ಮರಿ ಕಾಗೆ ತರ ತುಂಬಾ ತಲೆ ಹರಟೆ, ಒಂದು ಕ್ಷಣ ಆ ಕಡೆ ಈ ಕಡೆ ನೋಡುವಷ್ಟರಲ್ಲಿ ಏನೋ ಒಂದು ಕಿತಾಪತಿ ಮಾಡಿರ್ತಾನೆ.


ಚಿಕ್ಕಂದಿನಲ್ಲಿ ಬುದ್ದಿವಂತ ಕಾಗೆ ಕಥೆನ ಕೇಳಿದ್ವಿ, ಹೇಗೆ ಬುತ್ತಿವಂತಿಕೆಯಿಂದ ಕಾಗೆ ಮಡಿಕೆಯಲ್ಲಿರುವ ನೀರನ್ನು ಕುಡಿಯತ್ತೆ ಅಂತ ಇಂದು ಈ ಆಲ್ಫಾ ಕಾಗೆನಾ ನೆನಸ್ಕೊಂಡಾಗಲೆಲ್ಲ ಇಂದಿನ ಪೀಳಿಗೆಯ ಪೋಷಕರ ಪರದಾಟ ಕಣ್ಣು ಕಟ್ಟಿದಂಗಾಗುತ್ತೆ.



Rate this content
Log in

Similar kannada story from Comedy