ಅವಳ ದನಿ
ಅವಳ ದನಿ


"ಚಿನ್ನಿ.... ಚಿನ್ನಿ ಬೇಗ ಬಾ... ತಿಂಡಿ ಕೊಡು ಬಾ ಬಂಗಾರ ಕೆಲಸಕ್ಕೆ ಲೇಟ್ ಆಗ್ತಿದೆ ಬಂಗಾರಿ..!! ಏನ್ ಮಾಡ್ತಿದ್ಯ ನೀನು ಕಿಚನ್ ನಲ್ಲಿ ಇನ್ನು?" ರೂಮಿನಿಂದಲೇ ಹೇಳುತ್ತಾ ಬಂದ ಆರವ್..
"ಯಾಕೆ ಅಷ್ಟೊಂದು ಜೋರಾಗಿ ಕಿರುಚುತ್ತಾ ಇದೀಯ..? ಧ್ವನಿ ಸಹ ಡೈನಿಂಗ್ ಟೇಬಲ್ ಬಳಿ ಕುಳಿತು ಪೇಪರ್ ಓದುತ್ತ ಅವನ ಕಡೆ ನೋಡಿದ್ದಳು...
ಆರವ್ "ಮತ್ತೆ ನೀನು ತಿಂಡಿ ಕೊಡಕ್ಕೆ ಇಷ್ಟೋತ್ತು ಮಾಡಿದ್ರೆ ಹೇಗೆ..? ನಾನು ಕೆಲಸಕ್ಕೆ ಹೋಗೋದು ಬೇಡ್ವಾ..?" ಎಂದ ಅವಳ ಪಕ್ಕದಲ್ಲೇ ಕೂರುತ್ತ.
"ತಿಂದು ಹೋಗು ಯಾರು ಬೇಡ ಅಂದೋರು..? ನಾನೇನು ನಿನ್ನ ತಡೆದು ನಿಲ್ಲಿಸಿಲ್ಲ ಅಲ್ವಾ..!! ಕಿಚನ್ ನಲ್ಲಿ ತಿಂಡಿ ರೆಡಿ ಇದೆ ತಿನ್ಕೊಂಡು ಹೋಗು..!" ಎದ್ದು ನಿಂತಳು ಅಲ್ಲಿಂದ ಹೊರಡಲು ಅವನ ಎದುರಿಗೆ ಕುಳಿತುಕೊಳ್ಳಲು ಇಷ್ಟ ಪಡದೆ..
ಹೊರಟವಳನ್ನು ತಡೆದು ತೊಡೆಯ ಮೇಲೆ ಕೂರಿಸಿಕೊಂಡವನು "ಸ್ವಾರಿ ಚಿನ್ನು.. ನಾನು ಬೇಕು ಅಂತ ಮಾಡ್ತಿನ..? ಡ್ಯೂಟಿ ಕಣೆ..?? ಬೇಗ ಬಿಟ್ಟು ಬರಕ್ಕೆ ಆಗ್ಲಿಲ್ಲ..? ಐ ಪ್ರಾಮಿಸ್ ನೆಸ್ಟ್ ಟೈಮ್ ಮಿಸ್ ಮಾಡಲ್ಲ" ಎಂದಿದ್ದ ರಿಕ್ಯೂಸ್ಟ್ ಮಾಡಿಕೊಳ್ಳುತ್ತಾ..
"ನನ್ಗೆ ನಿನ್ ಪ್ರಾಮಿಸ್ ಏನು ಬೇಕಿಲ್ಲ..!! ಮತ್ತೆ ನೀನು ರಾತ್ರಿ ಡ್ರಿಂಕ್ ಮಾಡಿಕೊಂಡು ಬಂದಿದ್ದೆ" ಆರೋಪ ಬಂದಿತ್ತು ಅವಳ ಕಡೆಯಿಂದ..
ಅವನು "ಅದು ಜಸ್ಟ್ ಡ್ಯೂಟಿ ಮುಗಿದ್ಮೇಲೆ ಫ್ರೆಂಡ್ಸ್ ಎಳೆದುಕೊಂಡು ಹೋದ್ರು.. ಎರಡು ಪೆಗ್ ಅಷ್ಟೇ ಹಾಕಿದ್ದು..!' ಅಮಾಯಕವಾಗೆ ನುಡಿದಿದ್ದ...
"ನೋಡಿದ್ಯಾ ಕಳ್ಳ ಸಿಕ್ಕಕೊಂಡೇ..!! ಮೊದಲು ಡ್ಯೂಟಿ ಅಂದೆ..? ಈಗ ಫ್ರೆಂಡ್ಸ್ ಜೊತೆ ಡ್ರಿಂಕ್ ಅಂದೆ..?? ನಿನ್ನ ಯಾವ ಮಾತು ನಾನು ನಂಬಬೇಕು..? ಅದಕ್ಕೆ ನೀನು ನನಗೆ ಯಾವ ರೀತಿಯ ಪ್ರಾಮಿಸಸ್ ಮಾಡಬೇಡ..!" ಅವಳ ಮಾತು..
"ಪ್ಲೀಸ್ ಚಿನ್ನ ಸ್ವಾರಿ ಹೇಳಿದ್ನಲ್ಲ..!! ನಿನ್ನೆದು ನಿನ್ನೆಗೆ ಬಿಟ್ಟು ಬಿಡು..! ಐ ಪ್ರಾಮಿಸ್ ಕಣೆ ಸಂಜೆ ಬೇಗ ಬರ್ತಿನಿ ಮೂವಿಗೆ ಹೋಗಣ" ಭರವಸೆ ಕೊಟ್ಟ
ತನ್ನ ಗಲ್ಲ ಹಿಡಿದಿದ್ದ ಅವನ ಕೈ ಪಕ್ಕಕ್ಕೆ ತಳ್ಳಿ "ಏನು ಬೇಕಿಲ್ಲ ನೀನು ಆ ನಿನ್ನ ಡ್ಯೂಟಿ ಜೊತೆಗೆ ಸಂಸಾರ ಮಾಡಿಕೊಂಡು ಇರು..!! ನಾನು ನನ್ನ ಮಾವನೆ ಮೂವಿಗೆ ಹೋಗ್ತೀವಿ.. ನೀನೇನು ನಮ್ಮ ಜೊತೆಗೆ ಅಷ್ಟೊಂದು ಕಷ್ಟ ಪಟ್ಟುಕೊಂಡು ಬರೋ ಅವಶ್ಯಕತೆ ಇಲ್ಲ..!!" ಬೇರೆ ಕಡೆ ನೋಡುತ್ತಾ.
ಅವನು "ಅರ್ಥ ಮಾಡ್ಕೊ ಬಂಗಾರ..? ನಾನು ಏನು ಆರ್ಡಿನರಿ ಎಂಪ್ಲೋಯಿ ಅಲ್ಲ..?" ಎಂದವನ ಮಾತಿಗೆ
"ನನಗೆ ನೀನು ಪೂಸಿ ಹೊಡೆಯೋದು ಎಲ್ಲ ಬೇಕಿಲ್ಲ..!! ಹೋಗು..? ಹೋಗಿ ನಿನ್ನ ಆ ಡ್ಯೂಟಿ ಮಾಡ್ಕೊ" ಅವನ ಮಡಿಲಿನಿಂದ ಎದ್ದವಳನ್ನು...
ತಡೆದು ಹಿಡಿದುಕೊಂಡವನು "ಏನೇ ಮರ್ಯಾದೆಯಿಂದ ಕೇಳಿಕೊಳ್ತಾ ಇದಿನಿ ಅಂತ ಸ್ಕೊಪ್ ಕೊಡ್ತಾ ಇದೀಯ..?" ಗಟ್ಟಿಯಾಗಿ ಮಾತಾಡಿದ್ದ
.
ಅವಳು "ಏನು ಜೋರಾಗಿ ಮಾತಾಡಿದ್ರೆ ಭಯ ಪಡ್ಕೊಂಡು..!! ನಿನ್ನ ಮಾತು ಕೇಳ್ತೀನಿ ಅನ್ಕೊಂಡಿದಿಯ..?? ನೊ ವೇ ಚಾನ್ಸ್ ಇಲ್ಲ..!! ಮರ್ಯಾದೆಯಾಗಿ ನನ್ನ ಬಿಟ್ಟು ನಿನ್ನ ಡ್ಯೂಟಿಗೆ ಹೋಗೋದು ಕಲಿ..!" ಎಂದು ಅವಳು ಜೋರು ಮಾಡಿದ್ದಳು.
ಅವನು ಸಹ ಬಿಡದೆ "ಏನೇ ಹೆಂಡತಿ ಮೇಲೆ ಜೋರು ಮಾಡ್ಬಾರ್ದು ಅಂತ ನೋಡ್ತಿದ್ರೆ ನನಗೆ ಆವಾಜ್ ಹಾಕ್ತಿಯ..?? ಇವತ್ತು ನಿನ್ನ ಒಂದು ಕೈ ನೋಡ್ಕೋತೀನಿ..!!" ಎಂದು ಅವಳನ್ನು ತನ್ನೆಡೆಗೆ ಎಳೆದುಕೊಂಡಿದ್ದ
ಅವಳು ಅವನನ್ನು ದೂರ ತಳ್ಳಿ "ಹೋಗ್ ಹೋಗೋ.." ಎಂಬಂತೆ ನೋಡಿದ್ದಳು.
ಅವನು "ನಿನಗೆ ಗಂಡ ಅನ್ನೋನ ಬಗ್ಗೆ ಸ್ವಲ್ಪನು ಭಯ ಅನ್ನೋದೇ ಇಲ್ಲದೆ ಆಗಿದೆ..? ತೆಗೆದು ಎರಡು ಬಿಟ್ಟ ಅಂದ್ರೆ" ಎಂದು ಅವನು ಅವಳ ಮುಂದೆ ಬಂದು ನಿಲ್ಲುವ ಮೊದಲೇ ಹೊರಗಡೆಯಿಂದ ಒಳಗೆ ಬಂದ ಅವನ ಅಪ್ಪ "ಸಾಕು ನಿಲ್ಲಿಸೋ ನಿನ್ನ ಗಲಾಟೆ.. ಬೀದಿವರೆಗೆ ಕೇಳಿಸ್ತಿದೆ..!" ಎಂದಿದ್ದರು.
ಆರವ್ ಅವರ ಕಡೆ ನೋಡಿ "ನೋಡಿ ಅಪ್ಪ.. ಅವಾಗಿನಿಂದ ಒಳ್ಳೆ ಮಾತಿನಲ್ಲಿ ಹೇಳ್ತಾನೆ ಇದೀನಿ..? ನಾನು ಹೇಳೋದು ಅರ್ಥ ಮಾಡಿಕೊಳ್ಲದೆ ನನ್ನೇ ಬೈದು.. ತವರು ಮನೆಗೆ ಹೋಗ್ತೀನಿ ಅಂತ ಆವಾಜ್ ಬೇರೆ ಹಾಕ್ತಾ ಇದಾಳೆ..? ಇವಳು ಆವಾಜ್ ಹಾಕಿದ್ರೆ ನಾನು ಇವಳನ್ನ ಬೇಡಿಕೊಳ್ತಿನಿ ಅಂತ ಅಂದುಕೊಂಡು ಬಿಟ್ಟಿದಾಳೆ ಅನಿಸುತ್ತೆ..!! ನಾನು ಇತರ ಮಾತುಗಳಿಗೆ ಕರುಗೋ ಅಂತವನು ಅಲ್ಲ ಅಂತ ತೋರಿಸಿ ಕೊಡಬೇಕು ಇವಳಿಗೆ..!! ನೀವು ಸ್ವಲ್ಪೋತ್ತು ಸುಮ್ಮನಿರೀ.!! ಇದೆಲ್ಲ ನೀವು ಇವಳಿಗೆ ಕೊಟ್ಟಿರೋ ಸಲಿಗೆಯಿಂದಾನೆ ಆಗ್ತಾ ಇರೋದು..!!" ಎಂದು ನಾನ್ಸ್ಟಾಪ್ ಆಗಿ ಮಾತನಾಡುತ್ತಿದ್ದವನ ಕಿವಿ ಹಿಡಿದು
"ಏನಂದೆ ನನ್ನ ಸೊಸೆ ಬಗ್ಗೆ.. ಇನ್ನೊಂದು ಸರಿ ಹೇಳು..?" ಎಂದಿದ್ದರು ಸುಧಾಕರ್.
"ಬಿಡಿ ಅಪ್ಪ ಇದೆಲ್ಲ ನಿಮ್ಮಿಂದಾನೆ..? ನೋಡಿ ನನ್ನ ಹೇಗೆ ಆಡಿಕೊಳ್ತಾ ಇದಾಳೆ..!! ಆಗಲಿಂದ ಹೇಳ್ತ ಇದೀನಿ ಮುಖ್ಯವಾದ ಕೆಲಸದ ಮೇಲೆ ಹೋಗಿದ್ದೆ ಅಂತ ಆದ್ರೂ ಕಿವಿಗೆ ಹಾಕಿಕೊಳ್ತಾನೆ ಇಲ್ಲ..?" ಎಂದಿದ್ದ.
"ಏನು ಕಂದಾ ಆ ಮುಖ್ಯವಾದ ಕೆಲಸ?" ಗಂಭೀರವಾಗಿ ತಂದೆ ಕೇಳಿದ ಮಾತಿಗೆ ಉಗುಳು ನುಂಗಿದ್ದ ಆರವ್.. ಅವಳು "ಹೇಳು ಹೇಳು..
!! ಎಂಬಂತೆ ಹುಬ್ಬೇಗರಿಸಿದ್ದಳು...
"ಅಬ್ಬಾ.. ನಾನೇ ಸಿಕ್ಕಕಿಕೊಂಡೇ..!!" ಎಂದು ಹಣೆ ಹೊಡೆದುಕೊಂಡು ನೆಲದ ಮೇಲೆ ರಂಗೋಲಿ ಬಿಡಿಸುತ್ತ "ಅಪ್ಪ.. ಅದು ಏನು ಅಂದ್ರೆ.. ಅದು.. ಏನಾಯ್ತು ಅಂದ್ರೆ.. ಅದು" ತೊದಲುತ್ತ ತಲೆ ತಗ್ಗಿಸಿ ಮಾತನಾಡುತ್ತಿದ್ದ ಮಗನನ್ನು ವಿಚಿತ್ರವಾಗಿ ನೋಡಿದ್ದರು ಸುಧಾಕರ್....
"ಹ್ಮ್.. ಮಾತಾಡು..?" ಎಂದು ಅವರು ಹೇಳುತ್ತಲೇ ಅವರ ಕಾಲು ಹಿಡಿದವನು "ಕ್ಷಮಿಸ್ಬಿಡಿ ಅಪ್ಪ.. ಇದೆ ಲಾಸ್ಟ್ ಮತ್ತೆ ಡ್ರಿಂಕ್ ಮಾಡಲ್ಲ..!" ಎಂದ.
"ಮತ್ತೆ ಆಗ್ಲಿಂದ ನನ್ನ ಸೊಸೆ ಮೇಲೆ ದೌರ್ಜನ್ಯ ಮಾಡಿದ್ದು..?" ಎಂದರಿಗೆ..
"ನಾನು.. ನಾನು ಕ್ಷಮೆ ಕೇಳ್ತೀನಿ ಅಲ್ವಾ ಅಪ್ಪ.. ನಿಮ್ಮ ಸೊಸೆ ಬಂಗಾರ ಆದ್ರೆ ನಾನು ಕಬ್ಬಿಣ... ಇನ್ನೊಮ್ಮೆ ಕುಡಿದು ಬರಲ್ಲ.. ಬಂದ್ರು ಬೆಳಿಗ್ಗೆ ನಿಮ್ಮ ಸೊಸೆ ಮೇಲೆ ದೌರ್ಜನ್ಯ ಮಾಡಲ್ಲ..!" ಎಂದಿದ್ದ...
"ಅಂದ್ರೆ ನೀನು ಮತ್ತೊಮ್ಮೆ ಕುಡಿತಿಯ ಅಂತ ಹೇಳ್ತಿದೀಯ..?" ಅವನ ಮಾತಿನಲ್ಲಿ ಹೇಳಿದ್ದನ್ನು ತಿರುಗಿಸಿ ಕೇಳಿದ್ದರು...
ಅಪ್ಪ ತನ್ನ ಮಾತಿನಲ್ಲಿ ಸಹ ಪಾಯಿಂಟ್ ಹುಡುಕುತ್ತಲೇ ಮತ್ತೆ ಹಣೆ ಮೇಲೆ ಬಾರಿಸಿಕೊಂಡು "ಪ್ಲೀಸ್ ಅಪ್ಪ ಬಿಟ್ಬಿಡಿ.. ಬಾಯಿ ಜಾರಿ ಆಗೇ ಅಂದು ಬಿಟ್ಟೆ.. ಪ್ಲೀಸ್ ಪಾ..!!" ಅಲೋಸ್ಟ್ ಬೇಡಿಕೊಂಡೇ ಬಿಟ್ಟ...
ಮಗನ ಹುಡುಗಾಟಿಗೆ ನಕ್ಕ ಅಪ್ಪ "ಸರಿ ಮೊದಲು ಕೆಲಸಕ್ಕೆ ಹೋಗು..!" ಎನ್ನುತ್ತಲೇ ಕ್ಷಣ ಕೂಡ ಕಳೆಯದೆ ರೂಮಿಗೆ ಓಡಿದ್ದ ಚೇಂಜ್ ಮಾಡಿಕೊಂಡು ಬರಲು...
ಅಲ್ಲಿಯವರೆಗೆ ನಗುತ್ತ ಗಂಡ ಮಾವನ ಕಡೆ ನೋಡುತ್ತಿದ್ದ ಧ್ವನಿ ತನ್ನ ಮಾವನ ಜೊತೆಗೆ ಮನೆಗೆ ಬಂದ ಅಥಿತಿ ಕಡೆ ನೋಡಿ ನಗು ಸೂಸಿದ್ದಳು ಧ್ವನಿ...
ಮಾವ ಸುಧಾಕರ್ "ಕಂದಾ ಇವಳು ನನ್ನ ಫ್ರೆಂಡ್ ಮಗಳು..!! ಗ್ರೂಪ್ ಎಕ್ಸಾಮ್ಸ್ ಗೆ ಪ್ರಿಪರ್ ಆಗ್ತಿದ್ದಾಳಂತೆ ಅದಕ್ಕೆ ಆರವ್ ಬಳಿ ಇರೋ ಬೂಕ್ಸ್ ಕೊಡಿಸೋಣ ಅಂತ ಕರೆದುಕೊಂಡು ಬಂದೆ..!!" ಎಂದು ಆಕೆಯನ್ನು ಪರಿಚಯ ಮಾಡಿಸಿದರೆ ಅವಳ ಕಡೆಗೆ ಮತ್ತೊಮ್ಮೆ ನಗು ಸೂಸಿದ್ದಳು..
ಧ್ವನಿ ಅವಳ ಕಡೆಗೆ ನೋಡಿ ನಗುತ್ತಲೇ ತಾನು ನಕ್ಕು "ಹಾಯ್ ಐ ಆಮ್ ಸನ್ನಿಧಿ!" ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡವಳ ಕಡೆ ಮತ್ತೊಮ್ಮೆ ನಗು ಸೂಸಿದ್ದಳು ಧ್ವನಿ..
ಅವಳು ತನ್ನ ಹೆಸರು ಹೇಳಲಿಲ್ಲ ಎಂದು ಧ್ವನಿ ಕಡೆ ನೋಡಿ "ನಿಮ್ಮ ಹೆಸರು..?" ಎಂದು ಕೇಳಿದ್ದಳು..
ಅವಳು ಉತ್ತರಿಸುವ ಮೊದಲೇ ಡ್ಯೂಟಿ ಡ್ರೆಸ್ ನಲ್ಲಿ ಹೊರಗೆ ಬಂದ ಆರವ್ "ಹೆಸರು ಧ್ವನಿ.. ಮಾವನ ಮುದ್ದಿನ ಕೂಸು.. ನನ್ನ ಮುದ್ದಿನ ಮಡದಿ..!" ಎಂದಿದ್ದ.
ಅವಳು ಕೇಳಿದ ಪ್ರಶ್ನೆಗೆ ಆರವ್ ನಿಂದ ಉತ್ತರ ಬಂದ ತಕ್ಷಣ ಆರವ್ ಕಡೆ ನೋಡಿ "ಅವರೇ ಉತ್ತರ ಕೊಡ್ತಿದ್ರು ಅಲ್ವಾ..!" ಎಂದಿದ್ದಳು..
"ಕೊಡಬೇಕು ಅಂತ ಆಸೆ ಇದ್ರು ಕೊಡಲಾರಳು..!! ಬಿಕಾಸ್ ಶಿ ಇಸ್ Dumb.." ಎಂದಿದ್ದ..
ಆಶ್ಚರ್ಯದಿಂದ ಧ್ವನಿ ಕಡೆ ನೋಡಿ "ಮತ್ತೆ ನಾವು ಮೇಲೆ ಬರೋವಾಗ ಇವರ ಧ್ವನಿ ಕೇಳಿಸುತಿತ್ತು..??" ಎಂದು ಪ್ರಶ್ನಾರ್ಥವಾಗಿ ನೋಡಿದವಳಿಗೆ..
"ಅದು ನನ್ನ ಮಗನ ಟ್ಯಾಲೆಂಟ್ ಅಮ್ಮ ಸನ್ನಿಧಿ.. ಅವಳ ಮಾತಿಗೂ ಸಹ ಇವನೇ ದನಿಯಾಗಿದ್ದಾನೆ..!!" ಎಂದಿದ್ದರು ಸುಧಾಕರ್..
"ಅರ್ಥವಾಗಲಿಲ್ಲ ಅಂಕಲ್..!" ಎಂದು ಅವರ ಕಡೆ ನೋಡಿದವಳಿಗೆ..
"ಅವಳಿಗೆ ಮಾತು ಬರಲ್ಲ ಅನ್ನೋದನ್ನ ಅವನೇ ಮರಿಸ್ತಿದಮ್ಮ.. ಅವಳು ಮಾತನಾಡಿದ್ರೆ ಅವಳ ಧ್ವನಿ ಹೇಗಿರುತ್ತೆ ಅಂತ ಅವಳ ದನಿನ ಅವಳಿಗೆ ಕೇಳಿಸ್ತಾನೆ ಅವನ ಧ್ವನಿ ಮೂಲಕ..!! ಅವನಿಗೆ ಅವಳು ಅಂದ್ರೆ ಚಿಕ್ಕವಳಿಂದ ಪ್ರಾಣ.. ಹೊರಗೆ ಗಂಭೀರವಾಗಿರೋ ದೊಡ್ಡ ACP ಆದ್ರೂ ಮನೆಯೊಳಗೆ ಅವಳನ್ನ ಮುದ್ದು ಮಾಡೋ ಅಪ್ಪ ಅಮ್ಮ ಅವನೇ" ಎಂದು
"ಇವತ್ತು ಅವಳು ಅವನ ಮೇಲೆ ಕೋಪದಲ್ಲಿ ಇದಾಳೆ ಅವಳನ್ನ ಮತ್ತೆ ಪಾಟಹಿಸಕ್ಕೆ ಈ ನಾಟಕ ಎಲ್ಲ..!! ಅವಳಿಗೆ ಅವನ ಮೇಲೆ ಯಾವಾಗ ಕೋಪ ಮುನಿಸು ಬಂದು ಅವಳು ಮುದುಡಿ ಕೂತ್ಕೋತಾಳೊ ಅವಗೆಲ್ಲ ಅವನ ಇನ್ನೊಂದು ಟ್ಯಾಲೆಂಟ್ ಹೊರ ತೆಗೀತಾನೆ..!" ಎಂದು ನಕ್ಕಿದ್ದರು..
ಅವರದು ಚಿಕ್ಕಂದಿನ ಪ್ರೀತಿ ಎಂದು ತಿಳಿದು ಧ್ವನಿ ಎಂದರೆ ಆರವ್ ಗೆ ಎಷ್ಟು ಪ್ರೀತಿ ಎಂದು ಕ್ಷಣದಲ್ಲೇ ಅರ್ಥ ಮಾಡಿಕೊಂಡ ಸನ್ನಿಧಿ ಇಬ್ಬರ ಕಡೆ ನೋಡಿದ್ದಳು..
ಅವನು ಡೈನಿಂಗ್ ಟೇಬಲ್ ಮೇಲೆ ಕುಳಿತು ತಿಂಡಿ ತಿನ್ನುತ್ತಾ ಬೇಕಂತಲೇ ಅವಳ ಕೆನ್ನೆ ಸವರುತ್ತ ಕೀಟಲೆ ಮಾಡುತ್ತ ತಿಂಡಿ ತಿನ್ನುತ್ತಿದ್ದರೆ ಅವನ ಚೇಷ್ಟೆಗಳಿಗೆ ಕೋಪ ನಟಿಸಿಸುತ್ತಿದ್ದಳು ಅವಳು...
ಅವನು "ಪ್ಲೀಸ್ ಪ್ಲೀಸ್..!!" ಎನ್ನುತ್ತಿದ್ದರೆ ನಾಚಿಕೆಯಿಂದಲೇ ಅವನಿಗೆ ಸನ್ನೆ ಮಾಡಿ ವಾರ್ನಿಂಗ್ ಕೊಡುತ್ತಿದ್ದಳು..
ಅವರಿಬ್ಬರ ಕಲ್ಮಷವಂಟದ ಪ್ರೀತಿ ನೋಡಿ ಮೈ ಮರೆತಿದ್ದಳು ಸನ್ನಿಧಿ...
ಅವನ ಎಲ್ಲ ಚೇಷ್ಟೆ.. ಕೀಟಲೆ.. ಕೋಪ.. ಬೇಸರ.. ನೋವು.. ದರ್ಪ.. ಗಾಂಭೀರ್ಯಕ್ಕೂ ಅವಳ ಉತ್ತರ ನಗುವೊಂದೇ.. ಅದೇ ಅವಳ ದನಿ....
ಅವನ ಪ್ರೇಮದ ಕಡಲಿನಲ್ಲಿ ನಲಿದವಳ ನಗುವಿಗೆ ಅಳುವಿಗೆ ಅವನೇ ಅವಳ ದನಿ...
ಅವನ ಧ್ವನಿಯಲ್ಲಿ ಹೊರ ಬರುವ ಅವಳ ದನಿಗೆ ಇದೆ ನನ್ನ ಅರ್ಪಣೆ...
*******ಕೃಷ್ಣಾರ್ಪಣಾಮಸ್ತು******