Travel the path from illness to wellness with Awareness Journey. Grab your copy now!
Travel the path from illness to wellness with Awareness Journey. Grab your copy now!

murali nath

Comedy Tragedy Others

4.2  

murali nath

Comedy Tragedy Others

ಅತ್ತೆ v/sಸೊಸೆ ಒಂದು ಸಣ್ಣ ಕುಟುಂಬ

ಅತ್ತೆ v/sಸೊಸೆ ಒಂದು ಸಣ್ಣ ಕುಟುಂಬ

2 mins
397ಒಂದು ಸಣ್ಣ ಕುಟುಂಬ . ಗಂಡ ಹೆಂಡತಿ ಮತ್ತು ಅವಳ ಅತ್ತೆ. ಯಜಮಾನ ಬೆಳಗ್ಗೆ ಆರಕ್ಕೆ ಹೋದರೆ ಮನೆಗೆ ಬರೋದು ತಡರಾತ್ರಿ . ಮದುವೆಯಾಗಿ ಬಂದಾಗ ಇದ್ದ ಅತ್ತೆ ಸೊಸೆಯ ಅನ್ಯೋನ್ಯತೆ ಈಗಿಲ್ಲ. ಅತ್ತೆಗೆ ನಾ ಮಾಡೋ ಕೆಲಸದಲ್ಲಿ ಏನಾದರೂ ತಪ್ಪು ಕಂಡು ಹಿಡಿಯದಿದ್ದರೆ ಸಮಾಧಾನ ಇಲ್ಲ ಅಂತ ಸೊಸೆ. ನಮ್ಮ ಕಾಲದಲ್ಲಿ ಮಾಡ್ತಿದ್ದಂಗೆ ನಯ ನಾಜೂಕು ಇವಳು ಕಲ್ತಿಲ್ಲ ಅಂತ ಅತ್ತೆ. ಹೀಗೆ ಇಬ್ಬರೊಳಗೂ ಒಳಗೊಳಗೇ ಅಸಮಾಧಾನದ ಹೊಗೆ ಇದ್ದೇ ಇತ್ತು. ಸೊಸೆ ಕಾಫಿ ತಂದುಕೊಟ್ಟರೆ ಅರ್ಧ ಕುಡಿದು ಆಮೇಲೆ ಸಕ್ಕರೆ ಸಾಲದು ಪುಡಿ ಹೆಚ್ಚು ಅಂತ ಹೇಳಿ ಚೆಲ್ಲೋದು. ಸೊಸೆ ಟಿವಿ ಹಾಕಿದ್ರೆ ಒಳಗೆ ಎದ್ದು ಹೊರಟು ಹೋಗೋದು. ಹೀಗೆ ಏನು ಮಾಡಿದ್ರು ತಪ್ಪು ಅನ್ನೋ ಹಾಗೆ ಮಾಡ್ತಿದ್ರು. ಸುಸ್ತಾಗಿ ಬರೋ ಗಂಡನಿಗೆ ಹೇಳಿದ್ರೆ ಎಲ್ಲಿ ಕೋಪ ಮಾಡ್ಕೋತಾರೆ ಅಂತ ತಾಳ್ಮೆಯನ್ನು ಬೆಟ್ಟ ಮಾಡಿ ತನ್ನಲ್ಲೇ ಇಟ್ಟಿಕೊಂಡಿದ್ದಳು.


ಒಂದು ದಿನ ಹಾಲು ಬೇಕು ಅಂದಾಗ ಇಲ್ಲ ಅಂತ ಅಂದರೆ ಕೋಪ ಮಾಡ್ಕೋತಾರೆ ಅಂತ ತಾನೇ ಅಂಗಡಿಗೆ ಹೋಗಿ ತಂದು ಕಾಸಿ ಬೂಸ್ಟ್ ಹಾಕಿ ಕೊಟ್ಟು ಒಳಗೆ ಹೋದಾಗ ಲೋಟಾ ಕೆಳಗೆ ಬಿದ್ದ ಶಬ್ದ ಕೇಳಿ ಓಡಿ ಬಂದರೆ ಹಾಲೆಲ್ಲಾ ಚೆಲ್ಲಿಹೋಗಿದೆ. ಅತ್ತೆಗೆ ಮಾತಾಡಕ್ಕೆ ಆಗ್ತಾಇಲ್ಲ ಬಲಗೈ ಮೇಲಕ್ಕೆ ಎತ್ತಲೂ ಆಗ್ತಾಯಿಲ್ಲ. ಬಾಯಿ ಪಕ್ಕಕೆ ಹೋಗಿದೆ. ತಕ್ಷಣ ಗಂಡನಿಗೆ ಕಾಲ್ ಮಾಡಿದಳು. ಅವನು ಬಂದ ತಕ್ಷಣ ಆಸ್ಪತ್ರೆಗೆ ಹೋದರು.ಬಲಗಡೆ paralyse ಆಗಿದೆ recovery ಬಹಳ ನಿಧಾನ ಮನೆಯಲ್ಲೇ ನೋಡಿಕೊಳ್ಳಿ ಅಂತ tablet ಕೊಟ್ಟು ಕಳಿಸಿದರು.


ಮೊದಲಿಗಿಂತ ಈಗ ಸೊಸೆಗೆ ಜವಾಬ್ದಾರಿ ಜೊತೆ ಕೆಲಸಾನು ಹೆಚ್ಚಾಯ್ತು . ಮನೆಗೆ ಬಂದು ನೋಡುವ ನೆಂಟರಿಷ್ಟರು ಸ್ನೇಹಿತರು ದಿನವೂ ಯಾರಾದ್ರೂ ಇದ್ದೇ ಇರುತ್ತಿದ್ದರು. ಬರೋರೆಲ್ಲಾ ಅಡ್ವೈಸ್ ಮಾಡೋರೇ ಅತ್ತೆಯನ್ನ ಚೆನ್ನಾಗಿ ನೋಡಿಕೋ ಅಂತ. ಆಯ್ತು ಅಂತ ತಲೆ ಅಲ್ಲಾಡಿಸುತ್ತಿದ್ದಳು. ಒಂದು ದಿನ ಬೆಳಗ್ಗೆ ಕಾಫಿ ತಂದು ಕುಡಿಸೋಣ ಅಂತ ಸ್ಪೂನ್ ತರಕ್ಕೆ ಒಳಗೆ ಹೋದಾಗ ಅಕಸ್ಮಾತ್ ಹಿಂದೆ ತಿರುಗಿ ನೋಡಿದ್ರೆ ಎಡಗೈಯಿಂದ ಬೇಕಾಗಿ ಲೋಟ ಕೆಳಗೆ ತೆಗೆದು ಹಾಕಿದ್ದು ಕಂಡಾಗ ಬಹಳ ಕೋಪ ಬಂತು. ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ ಅಂತ ಸುಮ್ಮನೆ ಕತ್ತಿನ ಬಳಿ ಕೈ ಇಟ್ಟು ಹೆದರಿಸಿ ಬೇರೆ ಕಾಫಿ ತಂದು ಕುಡಿಸಿದಳು. ಅದೇ ಸಮಯಕ್ಕೆ ಗಂಡ ಬಂದು ಸೀದಾ ಅಮ್ಮನ ಹತ್ತಿರ ಬಂದು ಕುಳಿತ.ಅಮ್ಮ ಕೈಸನ್ನೆಯಲ್ಲೆ ತೋರಿಸಿದರು


ಸೊಸೆ ಕತ್ತು ಹಿಸುಕಿ ಸಾಯಿಸಿ ಬಿಡ್ತಾಳೆ ಅಂತ. ಮಗನಿಗೆ ಅರ್ಥವಾಗದೆ ಹೆಂಡತಿಯನ್ನ ಕೇಳಿದ ಅದಕ್ಕೆ ಅವಳು ಹೇಳಿದ್ದು ಏನ್ರೀ ಅಷ್ಟೂ ಗೊತ್ತಾಗ್ಲಿಲ್ವಾ ಅವರು ಹೇಳ್ತಿದ್ದಾರೆ ಅವರ ಕತ್ತಿನಲ್ಲಿರೋ ಸರಾ ನ ಸೊಸೆಗೆ ಬಿಚ್ಚಿ ಕೊಡು ಅಂತ. ಅಯ್ಯೋ ಆಯ್ತು ಅಂತ ತೆಗೆದು ಹೆಂಡತಿ ಯ ಕತ್ತಿಗೆ ಹಾಕಿಬಿಟ್ಟ. ಅದಕ್ಕೆಲ್ಲ ಏನು ಅವಸರ ಅಮ್ಮ ಮಲಗು . ನಾನು ಹೋಗ್ತೀನಿ ಅಂತ ರೂಮಿಗೆ ಹೋದ . ಕತ್ತಿನಲ್ಲಿದ್ದ ಸರಾ ತೋರಿಸಿ ಕೊಂಡು ನಗುತ್ತಾ ನಿಂತಿದ್ದಳು ಸೊಸೆ. ಆದರೆ ಅಂದಿನಿಂದ ಸೊಸೆ ಏನು ಹೇಳಿದ್ರು ಸುಮ್ಮನೆ ಒಪ್ಪಿಕೊಳ್ತಿದ್ರು ಭಯಕ್ಕೆ.ಅವಳಿಗೂ ಸಮಾಧಾನ ಬೇಗ ಹುಷಾರಾಗಿ ಅಂತ ಆಗಾಗ ಹೇಳೋದು ಕೇಳಿ ಅತ್ತೆಗೂ ಸಮಾಧಾನ.Rate this content
Log in

More kannada story from murali nath

Similar kannada story from Comedy