ದಾಹ
ದಾಹ


ಬೇಸಿಗೆಯ ಸುಡು ಬಿಸಿಲು. ಬರೀ ಕಲ್ಲು ಮುಳ್ಳುಗಳ ಕಾಡಿನ ದಾರಿ. ಹತ್ತಿ ಉರಿಯುವ ಬಿಸಿಲ ಝಳ.ಒಮ್ಮೆ ಒಬ್ಬನಿಗೆ ಈ ದಾರಿಯಲ್ಲಿ ನಡೆದು ಬಹಳ ಬಾಯಾರಿಕೆ,ಸುಸ್ತಾಗಿತ್ತು.. ಎಲ್ಲೂ ನೆರಳು ಕಾಣಲಿಲ್ಲ. ಕಷ್ಟಪಟ್ಟು ಹಾಗೆ ಬರುವಾಗ ಪಾಳುಬಿದ್ದ ಕಲ್ಲಿನ ಮಂಟಪ ಒಂದು ದೂರದಲ್ಲಿ ಕಾಣಿಸಿತು.ಹೇಗೋ ಅಲ್ಲಿಯವರೆಗೆ ತಲುಪಿದರೆ ಸಾಕೆಂದು ಹೋಗುತ್ತಿದ್ದಾನೆ. ಬಾಯಾರಿಕೆ ಹೆಚ್ಚಾಯ್ತು. ಕಷ್ಟಪಟ್ಟು ಅಂತೂ ಹತ್ತಿರ ಬಂದ. ಸ್ವಲ್ಪ ನೆರಳಲ್ಲಿ ಸುಧಾರಿಸಿಕೊಂಡು ಕುಡಿಯಲು ನೀರು ಇರಲು ಸಾಧ್ಯವಿಲ್ಲ. ಮತ್ತೇನಾದರೂ ಇರಬಹುದೇ ಅಂತ ಒಳಗೆ ಹೋದ.ಎಲ್ಲಾ ಎಂದೋ ಬಿದ್ದುಹೋದ ಮನೆಯಂತಿದೆ.ಹಾಗೆ ನೋಡಿ ಬರುವಾಗ ಅಲ್ಲಿ ಒಂದು ಬಾಟಲ್ ನೀರು ಕಂಡಾಗ ಮೊದಲು ಸಂತಸ ಜೊತೆಗೆ ಭಯವೂ ಆಯ್ತು.ಇಲ್ಲಿ ಕುಡಿ ಯುವ ನೀರು ಯಾರು ಇಟ್ಟಿರುತ್ತಾರೆ.ಅದು ಕುಡಿಯುವ ನೀರು ಅಂತ ನಂಬಬಹುದೇ ಕುಡಿದರೆ ಏನು ಬೇಕಾದರೂ ಆಗಬಹುದು. ಹೀಗೆ ಹೆದರಿ. ಹತ್ತಿರ ಹೋಗಿ ನೋಡಿದಾಗ ಅದರ ಕೆಳಗೆ ಒಂದು ಪತ್ರ ಕಣ್ಣಿಗೆ ಬಿತ್ತು.ಬಾಟಲ್ ಪಕ್ಕದಲ್ಲಿಟ್ಟು ತೆಗೆದು ಓದಿದ ಕನ್ನಡದಲ್ಲೇ ಬರೆದಿದ್ದಾರೆ..ನೀವು ಬಾಯಾರಿಕೆಯಿಂದ ಬಳಲಿದ್ದೀರಿ ಎಂದು ಗೊತ್ತು. ನಾನು ನಿಮ್ಮಂತೆ ಹೀಗೆ ಬಂದವನೇ. ಭಯ ಪಡುವುದು ಬೇಡ. ಈ ನೀರು ಕುಡಿಯಲು ಯೋಗ್ಯ ವಾಗಿದೆ. ದಯವಿಟ್ಟು ನೀರು ಕುಡಿಯುವ ಮೊದಲು ಇದನ್ನ ಪಕ್ಕದಲ್ಲೇ ಇರುವ ಹ್ಯಾಂಡ್ ಪಂಪ್ ಮೇಲೆ ಇರುವ ಸಣ್ಣ ರಂಧ್ರದಲ್ಲಿ ಇಷ್ಟು ನೀರೂ ಹಾಕಿ ಪಂಪ್ ಮಾಡಿ. ನಿಮಗೆ ಎಷ್ಟು ಬೇಕೋ ಅಷ್ಟು ನೀರು ಕುಡಿದು ಇದರಲ್ಲಿ ಮತ್ತೆ ನೀರು ತುಂಬಿಸಿ ಇಲ್ಲೇ ಪತ್ರದ ಕೆಳಗೆ ಇಡಿ. ನಿಮ್ಮಂತೆ ಮತ್ತಾರೋ ಬಾಯಾರಿಕೆ ಅಂತ ಬಂದವರ ಜೀವ ಉಳಿಸಿದಂತಾಗುತ್ತೆ. ದಯವಿಟ್ಟು ಹೀಗೆ ಮಾಡಿ. ಧನ್ಯವಾಗಳೊಂದಿಗೆ ನಿಮ್ಮ
ಮಿತ್ರ.
ಇದನ್ನ ಓದಿ ಒಂದು ಕ್ಷಣ ಯೋಚಿಸಿದ. ಬಾಯಾರಿಕೆ ಹೆಚ್ಚಿದೆ. ಕೈಯಲ್ಲಿ ನೀರಿನ ಬಾಟಲ್ ಇದೆ. ಪಂಪ್ ಗೆ ಹಾಕಿಬಿಟ್ಟರೆ ಅಕಸ್ಮಾತ್ ನೀರು ಅದರಿಂದ ಒತ್ತಿದರೂ ಬರದೇ ಹೋದರೆ ಏನು ಮಾಡೋದು . ಅರ್ಧ ಕುಡಿದು ಅರ್ಧ ಹಾಕೋಣ ಅಂದರೆ ಅದರಲ್ಲಿ ಬರೆದ
ಹಾಗೆ ಪೂರ್ತಿ ಒಂದು ಬಾಟಲ್ ಹಾಕಬೇಕು.ಹೀಗೆ ಇನ್ನೂ ಯೋಚಿಸಲು ಸಮಯವಿಲ್ಲ ಅಂತ ಧೈರ್ಯ ಮಾಡಿ ಪೂರ್ತಿ ಬಾಟಲ್ ಹಾಕಿದ ಪಂಪ್ ಮಾಡಲು ಕೈಲಿ ಶಕ್ತಿ ಇಲ್ಲ. ಸುಸ್ತಾಗಿದೆ.ನಿಧಾನ ಮಾಡಿದರೆ ನೀರು ಬರಲ್ಲ. ಕಷ್ಟಪಟ್ಟು ಒತ್ತಿದ ಬರಲಿಲ್ಲ. ಜೋರಾಗಿ ಒತ್ತಿದ ಸಣ್ಣಗೆ ನೀರು ಬಂತು . ಬಾಟಲ್ ಅದರ ಕೆಳಗಿಟ್ಟು ಮತ್ತೂ ಜೋರಾಗಿ ಒತ್ತಿದ. ಒಂದು ಬಾಟಲ್ ಮಾತ್ರ ನೀರು ಬಂತು. ಎಷ್ಟು ಒತ್ತಿದರೂ ಮತ್ತೆ ನೀರು ಬರಲಿಲ್ಲ.
ಈಗ ಇರುವ ಒಂದು ಬಾಟಲಿ ನೀರು ನಾನು ಕುಡಿದರೆ ನನ್ನ ಬಾಯಾರಿಕೆ ಏನೋ ನೀಗುತ್ತೆ. ಆದರೆ ಮತ್ತೆ ಯಾರಿಗೂ ನೀರೇ ಇಲ್ಲದ ಹಾಗೇ ಆಗುತ್ತೇ. ಅದು ಪಾಪದ ಕೆಲಸ. ಹೀಗೇ ಸಂದಿಗ್ದ ಸ್ಥಿತಿಯಲ್ಲಿರುವಾಗ , ಅಲ್ಲಿಗೆ ಇವನ ಹಾಗೇ ಮತ್ತೊಬ್ಬ ಬಂದು ಬಾಟಲ್ ನೋಡಿ ನೀರು ಕೇಳಿದ. ಅವನು ಇವನಿಗಿಂತಲೂ ಹೆಚ್ಚು ಬಳಲಿದ್ದಾನೆ. ಇಬ್ಬರೂ ಹಂಚಿಕೊಂಡು ಕುಡಿಯುವುದೇ ಉತ್ತಮ ಅಂತ ವಿಷಯ ಎಲ್ಲಾ ವಿವರಿಸಿದ.ಅದನ್ನ ಕೇಳಿದ ಮೇಲೆ ಅವನೂ ಸಹಾ ಬೇರೆಯವರಿಗೂ ಸಹಾಯವಾಗುವ ರೀತಿಯಾರೋ ಒಳ್ಳೆಯ ಉಪಾಯ ಮಾಡಿದ್ದಾರೆ.ನಾವು ಅದನ್ನ ಹಾಳು ಮಾಡುವುದು ಬೇಡ ದೇವರನ್ನ ನೆನೆದು ಮತ್ತೆ ಈ ಬಾಟಲ್ ನೀರನ್ನ ಆದರಲ್ಲಿ ಹಾಕು .ನಾನೂ ಸಹಾಯ ಮಾಡ್ತೀನಿ . ಇಬ್ಬರೂ ಕಷ್ಟ ಪಟ್ಟು ಒತ್ತೋಣ ಎಂದ.ವಿಧಿ ಇಲ್ಲದೇ ಇಬ್ಬರೂ ಜೊರಾಗಿಒತ್ತಿದರು.ನೀರು ಬರಲಿಲ್ಲ . ಒತ್ತೀ ಒತ್ತೀ ಸುಸ್ತಾಗಿ ಇಬ್ಬರೂ ಬಿದ್ದು ಬಿಟ್ಟರು. ಹಾಗೆ ಕಣ್ಣುಮುಚ್ಚಿದ್ದಾರೆ.ಮುಖವೆಲ್ಲಾ ಏನೋ ತಣ್ಣಗಾಗಿ ಕಣ್ಣು ಬಿಟ್ಟು ನೋಡಿದರೆ ನೀರು ಹರಿದು ಹೋಗ್ತಾ ಇದೆ. ಎದ್ದು ಬೇಕಾದಷ್ಟುಕುಡಿದರು. ನೀರು ನಿಂತೇ ಇಲ್ಲ. ಹೇಗೆ ನಿಲ್ಲಿಸ ಬೇಕು ಗೊತ್ತಾಗಲೇ ಇಲ್ಲ. ಇಬ್ಬರೂ ಪರದಾ ಡಿದರು. ಕೊನೆಗೆ ಅದರ ಮೇಲೆ ಒಂದು ಕೋಲಿನಿಂದ ಜೋರಾಗಿ ಹೊಡೆದ .ನೀರು ತಕ್ಷಣ ನಿಂತು ಹೊಯ್ತು.ಇಬ್ಬರೂ ಬಿಸಿಲಲ್ಲಿ ಬೆಂದು ಬಂದಿದ್ದ ಕಾರಣ ಸಾಕಷ್ಟು ನೀರು ಕುಡಿದು ಕುಣಿದು ಕುಪ್ಪಳಿಸಿದ್ದರು. ಆ ಸಂತೋಷದಲ್ಲಿ ಬಾಟಲಿಗೆ ಮತ್ತೆ ನೀರು ತುಂಬಿಸಿ ಇಡುವುದನ್ನು ಮರತೇ ಹೋದರು!