ವರ ಪರೀಕ್ಷೆ!
ವರ ಪರೀಕ್ಷೆ!
ಒಂದು ಹಳ್ಳಿ. ಬಹಳ ಹಿಂದೆ ಈ ಹಳ್ಳಿಯ ಹುಡುಗಿಯರನ್ನ ಮದುವೆ ಆಗ ಬೇಕಿದ್ದರೆ ಒಂದು ಕಾನೂನು ಪಾಲನೆಯಲ್ಲಿತ್ತು. ಇಲ್ಲಿನ ಆಂಜನೇಯ ದೇವಾಲಯದ ಮುಂದೆ ಇರುವ ದೊಡ್ಡ ಕಲ್ಲನ್ನು ಆ ಹುಡುಗ ಎತ್ತಬೇಕಾಗಿತ್ತು. ನಂತರವೇ ಹಳ್ಳಿಯ ಒಳಗೆ ಪ್ರವೇಶ. ಕೆಲವು ವರ್ಷಗಳ ನಂತರ ಅದನ್ನ ಒಂದು ಅಡಿ ಮೇಲಕ್ಕೆ ಎತ್ತಿದರೆ ಸಾಕಾಗಿತ್ತು. ಕ್ರಮೇಣ ಅದನ್ನು ಅಲ್ಲಾಡಿಸಿದರೆ ಸಾಕೆಂದರು. ಅದಾದ ಮೇಲೆ ಅದೇ ಕಲ್ಲಿನ ಮೇಲೆ ಒಂದೇ ಏಟಿಗೆ ತೆಂಗಿನಕಾಯಿ ಒಡೆಯ ಬೇಕೆಂದರು. ಅದೂ ಕೆಲವು ವೇಳೆ ಒಡೆಯದ ಕಾರಣ ಈಗ ಹೆಣ್ಣು ಕೇಳುವ ಹುಡುಗ ಕಲ್ಲನ್ನು ಮುಟ್ಟಿ ನಮಸ್ಕಾರ ಮಾಡಿದರೆ ಸಾಕಂತೆ !