JAISHREE HALLUR

Comedy Classics Inspirational

4  

JAISHREE HALLUR

Comedy Classics Inspirational

ನನ್ನ ನಲ್ಮೇಯ ಓದುವಿಕೆ.

ನನ್ನ ನಲ್ಮೇಯ ಓದುವಿಕೆ.

2 mins
320



ಅಂದಿನ ದಿನಗಳಲ್ಲಿ, ಓದುವುದೇ ಮಹಾಸಾಧನೆಯಾಗಿತ್ತು. ಊಟ , ನಿದ್ದೆಗಳನ್ನು ದೂರ ಸರಿಸಿ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು , ಓದುತ್ತಿದ್ದ ರಾತ್ರಿಗಳು. 

 ಮನೆಯಲ್ಲಿ ದೊಂಬಿ. ಹಗಲೊತ್ತು , ಮನೆಗೆಲಸ, ಶಾಲೆ, ಇತರ ತೊಡಕಿನಲಿ,  ತದೇಕ ಚಿತ್ತದಿಂದ ಓದಿ ಮನನ ಮಾಡಿಕೊಳ್ಳುವ ಹರಸಾಹಸವೇ ದಿನ ನಿತ್ಯ. 

  

  ನನ್ನ ಗೆಳತಿಯ ಮನೇ ಮುಂದೆ ದೊಡ್ಡದೊಂದು ಮರವಿತ್ತು. ಅವರ ಮನೇ ದೀಪದ ಬೆಳಕು ಮರದಡಿಯಲ್ಲಿ ಗೋಚರಿಸುತಿತ್ತು. ಮೇಲಾಗಿ ದಾರಿದೀಪದ ಬೆಳಕೂ ಸಹ. 


ಹಾಗಾಗಿ, ನಾನು ಓದುವುದಕ್ಕೋಸ್ಕರವೇ ಗೆಳತಿಯ ಮನೆಗೆ ಹೋಗುತ್ತಿದ್ದೆ. ಮರದಡಿಯಲಿ ಪ್ರಶಾಂತವಾಗಿ ಯಾವ ಗೊಂದಲವೂ ಇಲ್ಲದೇ ಓದು ಸಾಗುತಿತ್ತು. 


ನನ್ನ ಗೆಳತಿ ಮಾತ್ರ ನನ್ನೊಡನೆ ಓದುತ್ತಿರಲಿಲ್ಲ. ಅವಳ ಮನೆಯಲ್ಲಿ ಬಹಳ ಕಷ್ಟದ ವಾತಾವರಣ. ಮನೇ ಕೆಲಸದಲ್ಲೇ ನಿರತಳಾಗಿದ್ದಳು. 


ನಾನು ಮಾತ್ರ ಅದ್ಯಾವುದನ್ನೂ ತಲೆಗೆ ಹಚ್ಚಿಕೊಂಡವಳಲ್ಲ. ಅಮ್ಮ ದಿನಾ ಗೊಣಗಿದರೂ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. 

ಅಷ್ಟು ಓದುವುದು ಇರುತಿತ್ತು. 


ಆಗೆಲ್ಲಾ, ಟೀವಿ , ದಿನಪತ್ರಿಕೆಗಳು ಇರಲಿಲ್ಲ. ರೇಡಿಯೋ ಒಂದೇ ಮಾಧ್ಯಮವಾಗಿತ್ತು. ಸುದ್ದಿಗಳ ವಿವರ ಅದರ ಮೂಲಕವೇ. ನನ್ನ ಬೆಳಗು, ಸಂಸ್ಕೃತ ವಾರ್ತೆಯೊಂದಿಗೆ ಶುರುವಾಗುತಿತ್ತು.." ಪ್ರವಾಚಕಃ ಬಲದೇವಾನಂದ ಸಾಗರಃ"..


ನಂತರದ ದಿನಗಳಲ್ಲಿ ಕಾಲೇಜು, ಮಸ್ತಿ ಸ್ವಲ್ಪ ಇತ್ತು. ಆದರೂ ಓದುವ ಹವ್ಯಾಸ ಕಾದಂಬರಿಗಳ ಕಡೆ ಹರಿಯಿತು. ಅದರಲ್ಲೇ ಮೋಜು. 

ಅಮ್ಮನ ಕಣ್ತಪ್ಪಿಸಿ ಓದುವ ಹುಚ್ಚು ಹೆಚ್ಚಾಗಿತ್ತು. ಮನೆಗೆಲಸದಿಂದ ತಪ್ಪಿಸಿಕೊಳ್ಳಲು ಒಂದು ನೆಪ. 


ಅಪ್ಪನ ಕುಮ್ಮಕ್ಕು ನಂಗೆ. ಮಗಳು ಓದಲಿ, ಯಾಕೆ ಅವಳಿಗೆ ಕೆಲಸ ಹೇಳ್ತೀಯಾ ಅಂತ ಗಧರುವಿಕೆ. ನೀವೇ ಮುದ್ದು ಮಾಡಿ ಹಾಳು ಮಾಡಿದ್ದೀರಾ ಅವಳನ್ನು. 

ನಾಳೆ ಮದುವೆ ಮಾಡಿಕೊಂಡು ಹೋದ ಮನೇಲಿ ಹೀಗೇ ಮಾಡಿದರೇನು ಗತಿ..ಅಂತ ಅಮ್ಮನ ವಾದ. 


ನಾ ಯಾವುದಕ್ಕೂ ಜಗ್ಗಲಿಲ್ಲ. ಹೇಗೋ ಇಂಜಿನೀಯರಿಂಗ್ ಸೀಟು ಸಿಕ್ಕು , ಹಾಸ್ಟೇಲ್ ವಾಸ ಶುರುವಾಯಿತು. ಹೆತ್ತವರಿಂದ ದೂರವಾಗುವ ನೋವು. ಅದು ವಾಸ್ತವಕ್ಕೆ ತಂತು ನನ್ನ. 


ಆಗಲೂ ಓದು ನಿರಾತಂಕವಾಗಿ ಮುಂದುವರಿದ ವರ್ಷಗಳು. ಭಯಂಕರ ಹಣದ ಮುಗ್ಗಟ್ಟು. ಅಪ್ಪ ಹಲ್ಲುಮುಡಿಕಟ್ಟಿ ನನ್ನ ಓದಿಸಿದರು. ನಾನೂ ಓದಿದೆ. ಪಾಸಾದೆ. ಕೆಲಸವೂ ದೊರಕಿತು. ಮದುವೆಯೂ ಆಯಿತು, ಮಕ್ಕಳೂ ಆದವು. 

ಜೀವನ ಸುಗಮವಾಯಿತು. 

ಮಕ್ಕಳು ಬೆಳೆದು ಓದುವ ಹವ್ಯಾಸವನ್ನು ನನಗಿಂತಲೂ ಹೆಚ್ಚೇ ಮಾಡುತ್ತಿದ್ದಾರೆ. ಅದೇ ಖುಷಿ ನನಗೆ. ಮಗಳಿಗೆ ತಿಂಗಳಿಗೊಂದು ಕತೆಯ ಪುಸ್ತಕ ಕೊಂಡು ತರುತ್ತಾರೆ ಮನೆಯವರು. ಅವಳ ಆಂಗ್ಲ ಭಾಷೆ ನನಗಿಂತಲೂ ಉತ್ತಮ. ಇದೆಲ್ಲಾ ಸಾಧ್ಯವಾಗುವುದು ಸತತವಾಗಿ ಓದುವುದರಿಂದಲೇ ಅಲ್ಲವೇ? 

ಜ್ಞಾನವನ್ನು ಬರೀ ಪುಸ್ತಕಗಳಲ್ಲೇ ಕಂಡವಳು ನಾನು. ಇತ್ತೀಚೆಗೆ , ಮುಖಪುಟದ ಪರಿಚಯದಲ್ಲಿ , ಬರೆವಣಿಗೆ ಶುರುವಾಗಿ, ಪ್ರಪಂಚದ ಅನೇಕರ ಪರಿಚಯವಾಗಿದೆ. ಮೊಬಾಯಿಲ್ ಬಳಕೆ ಕೆಲವರಿಗೆ ಅದೂ ನನ್ನಂತವರಿಗೆ ವಿಸ್ಮಯ ಹಾಗೂ ಉಪಯುಕ್ತ ಉಪಕರಣವಾಗಿದೆ. ಈಗೀಗ ಪುಸ್ತಕದ ಉಪಯೋಗ ಕಡಿಮೆ. ಆದರೆ, ಮೊಬಾಯಿಲ್ನಿಂದ ತಿಳಿದುಬರುವ ವಿಷಯಗಳು ಹಲವಾರು. ಅದೂ ಕಡಿಮೆ ಸಮಯದಲ್ಲಿ. ಇದು ನನ್ನ ಗ್ರಹಿಕೆ. ಸಮಯ ಸಿಕ್ಕಾಗಲೆಲ್ಲಾ ನಾನು ಪ್ರತಿಕ್ರಿಯೆಗಳಿಗೇ ಒತ್ತು ಕೊಡುತ್ತೇನೆ. ಯಾಕೆಂದರೆ, ಅಲ್ಲಿ ವ್ಯಕ್ತವಾಗುವ ನನ್ನದೇ ಭಾವನೆಗಳ ಅನಾವರಣವಾದಾಗ ಖುಷಿ ಎನಿಸುತ್ತದೆ. ನನ್ನ ಭಾಷಾ ಶೈಲಿಯೂ ವೃಧ್ದಿಸುವಂತಾಗುತ್ತದೆ. ಇದು ನಾ ಕಂಡುಕೊಂಡ ಸತ್ಯ . ನೀವೂ ಓದಿಗೆ ಮಹತ್ವ ಕೊಡಿ...👍👌


ಈ ಓದುವ ಹವ್ಯಾಸ, ನನ್ನ ಶಾಲೆಯ ಕನ್ನಡ ಅಧ್ಯಾಪಕಿಯೊಬ್ಬರಿಂದ ಬಂದದ್ದು. ಅವರೇ ನನಗೆ ಸ್ಪೂರ್ಥಿಯಾಗಿದ್ದರು. ಇಂತಹ ಒಂದು ಹಂತಕ್ಕೆ ತಲುಪಲು ನನಗಿರುವ ಓದಿನ ಶ್ರದ್ಧೆ ಹಾಗೂ ನನ್ನ ಗುರುಗಳ ಪ್ರೇರಣೆ. ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ.


ಹಾಗೂ ನನ್ನ ಇತರ ಓದುಗರಿಗೆ ಈ ಮೂಲಕ ಹೇಳುವುದೇನೆಂದರೆ, ಮುಂದಿನ ಜನಾಂಗದ ಮಕ್ಕಳಿಗೂ ಓದುವ ಹವ್ಯಾಸವನ್ನು ಬೆಳೆಸಬೇಕು. ಅದರಿಂದಾಗುವ ಉಪಯೋಗವನ್ನು ತಿಳಿಯಪಡಿಸಬೇಕು. ಅನಕ್ಷರತ್ವವನ್ನು ತೊಡೆದು ಹಾಕುವ ಪ್ರಯತ್ನ ನಡೆಯಬೇಕು. ಆಗಲೆ ನಮ್ಮ ದೇಶದ ಮುನ್ನಡೆ ಸಾಧ್ಯ. ನನ್ನ್ನ ಎಲ್ಲ ಓದುಗರಿಗೆ ಧನ್ಯವಾದಗಳು.



Rate this content
Log in

Similar kannada story from Comedy