JAISHREE HALLUR

Classics Inspirational Thriller

4  

JAISHREE HALLUR

Classics Inspirational Thriller

ಮಡಿಕೇರಿಯಲ್ಲಿ ಒಂದು ರಾತ್ರಿ.

ಮಡಿಕೇರಿಯಲ್ಲಿ ಒಂದು ರಾತ್ರಿ.

3 mins
334


ಮಿತ್ರಮಿತ್ರೆಯರೆ....


ಇದೋ, ಇಲ್ಲಿ, ಈಗ , ನಾ ಬರೆಯ ಬೇಕೆಂದು ಒಂದು ವಾರದಿಂದಲೂ ಪ್ರಯತ್ನಿಸಿದ ನಂತರ ಈಗಷ್ಟೇ ಬಿಡುವಿನಿಂದ ಒಮ್ಮಸ್ಸಿನಿಂದ ಒಂಚೂರೂ ಬಿಡದೆ ಒದರಿಬಿಡೋಣಾ ಅನ್ನುವಷ್ಟು ಒಳಗೇ ಕಾದು ಕುಳಿತ ಹಲವು ಅನುಭವಗಳ ಮಾಲಿಕೆ ಇಲ್ಲಿದೆ ನೋಡಿ...


ಅದೇ, ಆ ದಿನ, ಮನೆಯಲ್ಲಿ ಯಾರೂ ಇಲ್ಲದಾಗ, ಮನಸೇಕೋ ಬಿಕೋ ಎಂದಾಗ, ತಟ್ಟನೆ ಕರೆಯೊಂದು ತೇಲಿ ಬಂತು ನನ್ನ ಮುದ್ದು ಊರಿನ ಹುಡುಗಿಯಿಂದ. ಆ ಕರೆ ಆಗ ಎಷ್ಟು ಹಿತವಾಗಿತ್ತೆಂದರೆ, ಓಡಿಬಿಡುವಷ್ಟು...ಅನಿಸಿತ್ತು.


ಬಸ್ಸ್ ಹತ್ತಿ, ಮಡಿಕೇರಿಗೆ ಟಿಕೆಟ್ ತೊಗೊಂಡಾಯ್ತು..


ಇದಕ್ಕೂ ಮುಂಚಿನ ಹರಸಾಹಸ, ಕತೆ ಹೇಳುವ ಸಮಯವಿಲ್ಲ ಈಗ.

ಹೇಳುವುದು ಬಹಳಷ್ಟಿದೆ.


ಮೈಸೂರು ರಸ್ತೆಯ ಬಸ್ ನಿಲ್ದಾಣದಲ್ಲಿ ಮಡಿಕೇರಿಗೆ ಹೊರಟು ನಿಂತ ಬಿಳೀ ಐರಾವತ ನನಗೆ ಸ್ವರ್ಗಲೋಕದ ಐರಾವತದಂತೇ ಭಾಸವಾಗಿತ್ತು..


ಮಡಿಕೇರಿಯ ಮಂಜು...

ಪುಟ್ನಂಜೀ ಹಾಡು,...

ರತ್ನನ್ ಪದಗಳು...

ಬೆಟ್ಟದ ಮೇಲೊಂದು ಪುಟ್ಟ ಮನೆ...

ಅದರೊಳಗೊಂದು ಸುಂದರ ಹುಡುಗಿ...

ಸುತ್ತಲೂ ಹೂವಿನ ರಾಶಿ....

ತೋಟದ ಹೂಗಳ ಸೌಗಂಧ...

ಆಹಾ!!! ಏನೇನೆಲ್ಲಾ ಕನಸುಗಳುಶಹಾದು ಹೋದವು ಮನಸಿನಲ್ಲಿ...


ಐದು ಗಂಟೆಗಳ ಕಾಲ ಬರೀ ಕನಸಿನಲ್ಲೇ ತೇಲಿದೆ. ಮಧ್ಯ ಮಧ್ಯ ಕರೆವಾಣಿಯಲ್ಲಿ ಇಂಪಾದ, ಆತ್ಮೀಯ ಕರೆಗೆ ಓಗೊಡುತ್ತಾ, 

ಕನಸಿನೋಕುಳಿಯಲ್ಲಿ ಮಿಂದು ಈಜುತ್ತಾ.....ಹೊರಗಿನ ಮಳೆಯ ಹನಿಯನ್ನು ಆಸ್ವಾಧಿಸುತ್ತಾ...

ಸಂಜೆ ಏಳರ ವೇಳೆಗೆ ಮಡಿಕೇರಿಯ ನಿಲ್ದಾಣವನ್ನು ತಲುಪುವಾಗ ಎದೆಬಡಿತ ಜೋರಾಗೇ ಇತ್ತು...ಗೆಳತಿಯನ್ನು ಕಾಣಲು...


ಪಾದ ನೆಲಕ್ಕೂರುತ್ತಿದ್ದಂತೆಯೆ ಫೋನಿನ ಕರೆ. ಸರಿ ಬಂದೆ ಎಂದ ಸ್ವರದಲ್ಲಿ ಅಷ್ಟೇ ಕುತೂಹಲ, ಆತುರ, ಎಲ್ಲವೂ ಇತ್ತು...


ಎದುರೆದುರು ಬಂದೆವು..ನಿಂತು ಒಬ್ಬರನ್ನೊಬ್ಬರು ನೋಡಿ ನಕ್ಕೆವು..

ಅವಳ ಕಣ್ಣಲ್ಲಿ ಆತಂಕ , ನಗು ಒಟ್ಟಿಗೆ ಮನೆಮಾಡಿದ್ದವು. ಜೊತೆಗಿದ್ದ ಅವಳ ಯಜಮಾನರೂ ಸಹ ನಾ ಬರುವ ಹಾದಿ ಕಾದು ಕಾದು ಸುಸ್ತಾಗಿ ನಿರಾಳವಾದ ನಿಟ್ಟುಸಿರು ಬಿಟ್ಟಂತೆ ಅನಿಸಿತು.

ನನಗೂ ಬಂದು ತಲುಪಿದ ಸಮಾಧಾನ..


ಗೆಳತಿಯ ವಿಜ್ರಭಿಸುವ ಐರಾವತ ರೆಡಿ ಇತ್ತು. ನನ್ನ ಲಗೇಜಿನ ಸಮೇತ, ಗಾಡಿಗೇರಿಸಿಕೊಂಡಳು...ಕಿಕ್ ಸ್ಟಾರ್ಟ್ ಮಾಡಿದಳು. ದ್ವಿಚಕ್ರವಾಹನ ವಿಮಾನದಂತೆ, ಮಡಿಕೇರಿ ಬೆಟ್ಟದ ಕಡೆ ಹಾರಿತು...ಅವಳ ಓಟದ ಪರಿಗೆ ನಾ ಅದುರಿಹೋಗಿದ್ದೆ...ಆ ರಸ್ತೆಗಳು ಏರುದಿಣ್ಣೆ, ಹಳ್ಳಗಳು, ಕತ್ತಲಿನ ಕಾಡುದಾರಿ ಭಯಂಕರ ಚಳಿಹುಟ್ಟಿಸಿತ್ತು...

ಹೊಸ ಜಾಗ. ಆದರೂ ಪ್ರೀತಿಯ ಗೆಳತಿ ಇರುವಾಗ ಭಯವೇನೂ ಅನಿಸಲಿಲ್ಲ...

ಕಂಡದ್ದು ಮೊದಲ ಭಾರಿಯಾದರೂ, ಮನದಲ್ಲಿ ಮನೆಮಾಡಿ ಬಹಳವೇ ವರ್ಷಗಳಾಗಿತ್ತು..ಮುಖಪುಟದ ಸ್ನೇಹಕ್ಕೊಂದು ನಮನ ನನ್ನಿಂದ...


ನನ್ನ ಕನಸಿನಂತೆಯೇ ಆ ಪುಟ್ಟ ಮನೆ, ಮನೆಯ ತುಂಬಾ ಜನ, ಜನರ ಮನದ ತುಂಬಾ ಪ್ರೀತಿ. ಆ ಪ್ರೀತಿಪೂರ ಹರಿಯುತ್ತಿತ್ತು ಬೆಂಗಳೂರಿನವರೆಗೆ. ನನ್ನನ್ನೇ ಸೆಳೆದು ತಂದ ಮಹಾನ್ ಸ್ನೇಹಸಿಂಧು...


ಕುಳ್ಳಿರಿಸಿ, ಬೆಚ್ಚಗೆ ಬಿಸಿ ಬಿಸಿ ಕಾಫೀಕೊಟ್ಟು, ಸತ್ಕರಿಸಿದವಳ ಮುಖ ತೆಳ್ಳಗೆ, ಬೆಳ್ಳಗೆ, ಆಗ ತಾನೆ ಅರಳಿದ ನಗುವ ಕುಸುಮದಂತೆ ಕಂಗೊಳಿಸಿದ್ದು ಬೆಳಕಿಗೆ ಬಂದಾಗ ಕಂಡಿತು..ನಾನೂ ನಕ್ಕೆ ಮೆಲ್ಲಗೆ..ಎಲ್ಲರ ನೋಟ ನನ್ನ ಮೇಲೇ...

ಇವಳನ್ನು ನೋಡಿದರೆ ಅಮ್ಮನ ವಯಸ್ಸಾಗಿದೆ, ಮಕ್ಕಳೂ ಮದುವೆಯಾಗಿ ಸೆಟಲ್ ಆದಂತಿದೆ...ಅದು ಹೇಗೆ ಪ್ರೀತಿ ಪ್ರೇಮಗಳ ಬಗ್ಗೆ ಮುಖಪುಟದಲ್ಲಿ ಕವಿತೆ ಬರೀತಾರೋ ಕಾಣೆ...ಎಂಬ ಸಂಶಯ ಆ ಹೊತ್ತು ಇವರೆಲ್ಲರ ಮನದಲ್ಲಿ ಬಂದಿರಲಿಕ್ಕೆ ಸಾಧ್ಯವಿತ್ತು. ಆ ಮುಖಭಾವ ಹೇಳುತ್ತಿತ್ತು..ಆದರೃ, ಬೇರೇನೇನೋ ಮಾತು, ಉಪಚಾರ, ಮನೆಮನೆಕತೆ...ಕಷ್ಟಸುಖ ಎಲ್ಲಾ ನಡೀತು ಮಧ್ಯ. ಅವಳ ಅತ್ತೆಯವರ ಮಾತುಶಮುಕ್ತವಾಗಿತ್ತು. ಸಂತೋಷ ತುಂಬಿ ತುಳುಕುತಿತ್ತು. ನಾ ಅಪರಿಚಿತಳೆಂಬ ಭಾವವೇ ಇರಲಿಲ್ಲ ಅಲ್ಲಿ. ಸದ್ದಿಲ್ಲದೇ ನಡೀತಿತ್ತು ಮನಸುಗಳ ಅಪಹರಣ....


ರಾತ್ರಿ ಊಟ .....

ಬಿಸಿ ಬಿಸಿ ಅನ್ನ ಸಾರು, ಚಪಾತಿ ಪಲ್ಯ, ನಂತರ ಸೊಗಸಾದ ಪಾಯಸ...ಆಹಾ...ಆ ಸವಿರುಚಿ...ಎಷ್ಟು ಬಣ್ಣಿಸಿದರೂ ಸಾಲದು....ಗೆಳತಿಯ ಪ್ರೀತಿ ಅದರಲ್ಲಿ ಅಡಗಿತ್ತು...


ಬಳಿಕ....ಮತ್ತೆ ಸಂಭಾಷಣೆಗಳ ಪೂರ...

ಮನೆಯ ಮುಂದಿನ ಕಾಡು..ಕತ್ತಲಿನಲ್ಲೂ ತನ್ನ ಗಾಂಭೀರ್ಯವನ್ನು ತೋರಿತ್ತು...ಮನೆಯ ಹಿಂಬದಿಯ ಬೆಟ್ಟ, ಎಷ್ಟು ಹತ್ತಿರವಿತ್ತೆಂದರೆ, ಮನೆಯ ಗೋಡೆಯೇ ಬೆಟ್ಟವಾಗಿತ್ತು....

ನಾನಾಗ ಊಹಿಸಿದ್ದು ಮಾತ್ರ ಭಯಂಕರ.. ಅಕಸ್ಮಾತ್, ಮಳೆ ಜೋರಾಗಿ ಬೆಟ್ಟದ ನೀರು ಹರಿದು ಬಂದರೆ ಮನೆಯ ಗತಿಯೇನು?😢😢 ಅಬ್ಬಾ! ನೆನಪಿಸಿಕೊಳ್ಳಲೂ ಅಂಜಿಕೆ...

ಇವರ ಪುಣ್ಯ! ಅಂತಾದೇನೂ ಆಗಿಲ್ಲ ಸಧ್ಯ..


ಮಕ್ಕಳು ಪಾಪದವು. ಜೀವಪ್ರೀತಿ ತೋರಿಸ್ತವೆ. ನನ್ನ ಮಕ್ಕಳ ಹಾಗಲ್ಲ. ಬಾಯ್ತುಂಬಾ ಮಾತಾಡೀಸ್ತವೆ, ನಾಚಿಕೆಯ ಸ್ವಭಾವ...ಮುದ್ದಾದ ಸಂಸಾರ...ನನಗೋ, ಎಲ್ಲವೂ ಹೊಸತನದ , ಸುಂದರ ದೃಶ್ಯಗಳೆ...


ಮಲಗುವ ಕೋಣೆಗೆ ಬಂದೆವು...ಗೆಳತಿಯೊಡನೆ ಏಕಾಂತ...

ಗುರುತು ಪರಿಚಯವಿಲ್ಲದವಳ ಜೊತೆ, ಮೊದಲ ಬಾರಿಗೆ ಭೇಟಿಯಾಗಿದ್ದೆವು...ಏನೇನೂ ಗೊತ್ತಿಲ್ಲ, ವಯಕ್ತಿಕವಾಗಿ...ನನಗಂತೂ ಏನು ಮಾತಾಡುವುದೆಂಬ ಲಕ್ಕಾಚಾರ...


ಹೊಸ ಜಾಗ, ಹಾಸಿಗೆ ಚಿಕ್ಕದು, ನಿದ್ದೆ ಬರಲಿಕ್ಕಿಲ್ಲ..ಆದರೂ ನಿಮಗೆ ತೊಂದರೆ ಆಗದಂತೆ ನೋಡಿಕೋಳ್ತೇನೆ ಆಯಿತಾ ಅನ್ನುವ ಆ ನೋಟ...ನನಗೆ ಬಹಳ ಅಪ್ಯಾಯಮಾನವಾಗಿತ್ತು...

ಹಾಸಿಗೆ ಹೇಗಿದ್ದರೇನು? ಮನಸು ಮೃದುವಾಗಿದೆಯಲ್ಲಾ...ಅಷ್ಟು ಸಾಕು ಗೆಳತಿ...


ಅಂಗಾತ ಮಲಗಿ ತಾರಸಿ ನೋಡಿದೆ..ಹೊದೆಯಲು ಬೆಚ್ಚಗಿನ ಕಂಬಳಿ, ಪಕ್ಕದಲ್ಲಿ ಪ್ರೀತಿಯ ಗೆಳತಿ, ಲೈಟು ಆಫ್ ಮಾಡಿದಾಗ ಕಂಡದ್ದು, ಒಂದು ಪ್ರಕರವಾದ ಬೆಳಕು..ತಾರಸಿಯಿಂದ ತೂರೀಬಂತು...

ಏನದು? ಇಷ್ಟೊಂದು ಬೆಳಕು? ಎಂದೆ...

ಅದಾ...ಬೆಳಕಿಂಡಿ...ಇಂದು ಬೆಳದಿಂಗಳಲ್ವಾ...ಚಂದ್ರನ ಬೆಳಕು ಬೀಳ್ತಿದೆ ಅಂದಳು...ಆಹಾ!!! 

ಆ ಸುಂದರ ಬೆಳದಿಂಗಳು, ಹೊಂಬೆಳಕಿನ ಕೆಳಗೆ ನಾವಿಬ್ಬರೂ ಮಿತ್ರೆಯರು ಮನಸಿನೊಳಗೇ ಆನಂದಿಸುತ್ತಿದ್ದೇವೆ...

ಎಂತಹ ಸೌಭಾಗ್ಯ ಅಲ್ವಾ...


ಈ ಮಾಳಿಗೆ ಮೂವತ್ತು ವರ್ಷದ ಹಿಂದಿನದಾಗಿತ್ತು..ಮರದ ಹಲಗೆಯಿಂದ ಮಾಡಿದ ತಾರಸಿ ಬಹಳ ಗಟ್ಟಿಮುಟ್ಟಾಗಿ ಎಂತಾ ಮಳೆಗೂ ಒಂಚೂರೂ ಸೋರದು. ಅದರ ಆಕಾರ...ತ್ರೀಕೋಣದಲ್ಲಿದ್ದು, ಇಳಿಜಾರಿನಲ್ಲಿ, ಹೆಂಚುಗಳನ್ನು ಜೋಡಿಸಿದ ಕಲೆ ಮನಮೋಹಕ...ಬೇಸಿಗೆಯಲ್ಲಿ, ತಂಪು, ಮಳೆಗಾಲದಲ್ಲಿ ಬೆಚ್ಚನೆಯ ಗೂಡು..ಬಹಳ ಸುಂದರವಾಗಿತ್ತು...

ಈಗಿನ ಎಂಜಿನೀಯರ್ ಗಳಿಗೆ ಇಂತಹ ಮನೆ ಕಟ್ಟಲು ಸಾಧ್ಯವಾಗಿಲ್ಲ ಬಿಡಿ. ಕಟ್ಟಿದ ಮೂರೇ ವರ್ಷಕ್ಕೆ ರಿಪೇರಿಗಳು ಕಾಣಿಸಿಕೊಳ್ತವೆ....


ಗೆಳತಿಯ ಮಾತಿನೊಂದಿಗೆ ಯಾವಾಗ ನಿದ್ದೆ ಬಂತೋ ಕಾಣೆ...


ಮುಂದುವರಿಯುವುದು...


Rate this content
Log in

Similar kannada story from Classics