STORYMIRROR

JAISHREE HALLUR

Classics Inspirational Thriller

4  

JAISHREE HALLUR

Classics Inspirational Thriller

ಕೊರೋನಾ ಇನ್ನಾ ಹತ್ತು ವರ್ಸ ಇರ್ತದಂತ..

ಕೊರೋನಾ ಇನ್ನಾ ಹತ್ತು ವರ್ಸ ಇರ್ತದಂತ..

2 mins
385

ಅಲ್ರೀ..ಮತ್ತ..

ನಾ ಎದ್ದು ಭಾಳ ಹೊತ್ತಾತು ನೋಡ್ರಿ..

ನೀವು ಇನ್ನಾ ಮಕ್ಕೊಂಡೀರೋ ಎದ್ದೀರೋ?


ಯಾರರೆ, ಒಂದ್ ಕಪ್ ಚಾ ತರಬಾರದಿತ್ತಾ?


ಈ ಜಾಗಾ ಎಷ್ಟು ಛೊಲೋ ಐತ್ ನೋಡ್ರಿ. ಚಂದನ್ ಗಿಡ, ಮರ ಬಳ್ಳಿ, ಹೂಗಳು, ಹಸಿರ ಹಸಿರು ತುಂಬೈತಿ.


ಮುಂಜಾನೆದ್ದು, ತಣ್ಣನ ಮನಸಿಲೆ, ಸ್ವಚ್ಛ ಗಾಳೀ ಸೇವನೆ ಮಾಡಿದ್ರ ಭಾಳ ಖುಷಿ ಆಕೈತ್ರೀ...


ಅಂದ್ಹಾಂಗ, ಮನ್ನೆ, ಹಿಂಗ ಬಂದ್ ಕುಂತಿದ್ನ್ಯಾ..

ಆಗ ಏನಾತ್ರಪಾ ಅಂದ್ರ ,

ಮರದ ಮ್ಯಾಲಿಂದ ಎರಡು ನವಿಲುಗಳು ಹಾರ್ಕೋತ ಕೆಳಗ ಬಂದ್ವು. ನನ್ನ ಮುಂದ ಓಡಾಡ್ಲಿಕ್ಕ ಹತ್ತಿದ್ವು. ಎಷ್ಟು ಚಂದ ಅಂತೀನ್ರಿ. ಅವುಗಳ ಬಣ್ಣಾನ ಬಣ್ಣ. ಎಂತಾ ಸೃಷ್ಟಿ!!!

ಕೊರಳ ಸುತ್ತಿನ ಸುಂದರ ನೇರಳೆ ಬಣ್ಣ, ಪುಕ್ಕದ ತುಂಬಾ ಹಸಿರು, ಗುಲಾಬಿ, ಹಳದೀ ಬಣ್ಣಗಳ ಮಿಶ್ರಣ..


ಅದೇನೋ ಅಂತಾರಲ್ಲಾ, ನವಿಲಿನ ನಡಿಗಿ...ಅಬ್ಬಾ! ಕಣ್ಣಿಂದ್ಲೇ ನೋಡಿದ ಖುಷೀ ಆತ್ರೀ..


ದೇವರ ಸೃಷ್ಟಿ ಅಪೂರ್ವ ಐತ್ರಿ. ನಾವೂ ನೀವೂ ಅದನ್ನ ಮಾಡಾಕ ಬರೂದಿಲ್ಲ ಬಿಡ್ರಿ..


ಅದಕ್ಕ ಈ ಸಾಧೂಸಂತರು, ಮನೀಮಠ ಬಿಟ್ಟು ಅಡವೀಗಿ ಹೋಕ್ಕಾರು.

ಯಾರಿಗ್ ಬೇಕ್ರೀ ಈ ಜಂಜಾಟ, ದುಡಿ, ಮಾಡು,ತಿನ್ನು,ತೊಳೀ, ಬಳೀ, ಅಂತ ಜೀವನಾನ ಮುಗುದುಹೋಕ್ಕೈತಿ.


ಅದರಾಗ, ಮಕ್ಕಳಾದರಂತೂ ಮುಗದ ಹೋತ್ರಿ. ಬರೇ ಅವುಕರದ...ತಿಕ್ಕೂದು, ತೊಳಿಯೂದ..ಮತ್ತ. ಬ್ಯಾರೆ ಏನಿಲ್ರಿ...


ಮತ್ತ ಒಂಜರಾನ ರೊಕ್ಕಾ ಪಕ್ಕಾ ಕೈಯ್ಯಾಗ ಕಂಡಿತಂದ್ರ ಅದರ ಕಥೀನ ಬ್ಯಾರೆ ಬಿಡ್ರೀ..

ಸಿನೇಮಾ ಏನ್, ಪಾರ್ಟೀ ಏನ್, ಪಿರೆಂಡ್ಸ್ ಏನ್, ಕುಡಿಯಾಣೇನ್, ಕುಣಿಯಾದೇನ್...ಬ್ಯಾಡ್ ತಗೀರಿ. ಹೇಳಾಕ ಸುರು ಮಾಡಿದ್ರ ಮುಗಿಯಾಣಲ್ಲದು...


ಈ ಒಗ್ಯಾಣ ಇರ್ತಾವಲ್ರೀ, ಅವೂ ಹಂಗ...ಮುಗಿಯಂಗಿಲ್ರಿ. ಎಷ್ಟು ಅರಿಬಿ, ಏನ್ ಕಥೀ...ದಿನಾ ಬೀಳೂದ...ವಾಶಿಂಗ್ ಮಸೀನ್ ಇರಲಿಲ್ಲಾಂದ್ರ ಏನ್ ಗತೀ ಅಂತೀನಿ...


ಇನ್ನ ಅಡಿಗೀ ಮನೀ ಕಥಿ ಕೇಳಬ್ಯಾಡ್ ನೋಡಪಾ...ಅದೊಂದು ಪ್ರಪಂಚಾನ ಐತಿ.

ಅವಗ ದ್ವಾಸೇ ಮಾಡಿದ್ರ, ಇಕೀಗಿ ಶ್ಯಾವೀಗಿ ಉಪ್ಪಿಟ್ಟಂತಾಳ. ಇವಗ ರೊಟ್ಟೀ ಮಾಡಿದರ, ಅಕೀಗೆ ಬ್ಯಾರೇನ ಬೇಕಾಗಿರ್ಥದ...ಇದೇನ್ ಹೋಟೇಲಂತ್ ತಿಳ್ಕೊಂಡಾರೇನ್ರೀ. ನಾನೂ ನೋಡಿ , ಮಾಡಿ ಬ್ಯಾಸ್ರಾಗ್ಯೇದಪಾ..

ನಾವು ನಮ್ಮಪ್ಪಾರಿಗೆ ಹಿಂಗ ತ್ರಾಸ ಕೊಟ್ಟಿಲ್ಲರೀ. ಕೊಟ್ಟಿದ್ದು ತಿಂತಿದ್ವಿ. ಕೊಟ್ರ ಸಾಕಿತ್ತು ನಮ್ಗ.


ಈ ಕೊರೋನಾ ಸಲ್ವಾಗಿ ಹೊರಗ ಹೋಗೂದಂತೂ ಬಂದಾಗ್ಯೇದ. ಮನಿಯಾಗ ಇದ್ದೂ ಇದ್ದೂ ಎಲ್ಲಾರ ಕಾಲುಕೈ ಜೂಂ ಹಿಡ್ದುಬಿಟ್ಟಿರ್ತಾವಂತ ಒಂಜರಾ ಸಣ್ಣ ಸಣ್ಣ ಕೆಲಸಾ ಹಚ್ಚಿದ್ನಿ, ಮನೇನ ಮಂದೀಗೆ. ಮಾಡಿದ್ರ ಕೇಳ್ರೀ..ಅವರಪ್ಪರಾಣೆ.


ಹೋಗ್ಲಿ, ನಾನ ದಣಿದು ಆಫೀಸಿಂದ ಮನೀಗಿ ಬಂದ್ರ, ನಾನ ಚಾ ಮಾಡ್ಕೋಬೇಕು, ನಾನ ಅಡಿಗಿ ಮಾಡಿ, ಬಡಿಸ್ಕೊಂಡು ತಿನ್ನಬೇಕು. ಇದೇನು ಕರ್ಮ ಅಂತೀನಿ.


ಕೊರೋನಾ ಇನ್ನಾ ಹತ್ತು ವರ್ಸ ಇರ್ತದಂತ..

ಮುಗೀತ್ ಕಥೀ. ಇದೇ ಜೀವನಾ. ಜೈಲಿಗೆ ಹೋದ್ಹಾಂಗ ನೋಡ್ರಿ. ಪ್ರಾಣಿಗಳೇ ಭಾಳ ಛೊಲೋ. ಎಲ್ಲೆಂದರಲ್ಲಿ ತಿರಗ್ಯಾಡಿಕೊಂಡಿರ್ತಾವು. ಅವುಕೂ ಕಾಲ ಬಂತಲ್ರಿ. ಅವರದಾ ಹವಾ ಈಗ. ಏನಂತೀರಿ...

ಬರ್ರೀ, ನಾನ ಚಾ ಮಾಡ್ತೀನಿ, ಕುಡಿಯಾಣು😊


Rate this content
Log in

Similar kannada story from Classics