JAISHREE HALLUR

Action Inspirational Thriller

4  

JAISHREE HALLUR

Action Inspirational Thriller

####ಸೆಂಟಿನಾವಾಂತರ- ಭಾಗ-೮.###

####ಸೆಂಟಿನಾವಾಂತರ- ಭಾಗ-೮.###

2 mins
345


ಸೆಂಟಿನಾವಾಂತರ-  ಭಾಗ-೮


  ಅಷ್ಟರಲ್ಲಿ ಮೀಟಿಂಗ್ ಮುಗಿದ ಹಾಗಿತ್ತು. ಒಳಗಿಂದ ಬೆಲ್ ರಿಂಗ್ ಆಯಿತು. ಆಫೀಸ್ ಬಾಯ್ ಒಳಹೋದ. ಎಲ್ಲರಿಗೂ ಟೀ ಕಾಫೀ ತಿಂಡಿಗಳ ಸರಬರಾಜಾಯಿತು. 

  ಕುಮಾರ್ ಮಾತ್ರ ಕೂತಲ್ಲಿಂದ ಅಲ್ಲಾಡಿರಲಿಲ್ಲ. ತಾನು ಬಂದ ಕೆಲಸ ಮುಗಿಸಿಯೇ ಹೋಗುವುದೆಂದು ತೀರ್ಮಾನಿದಂತಿತ್ತು. ರೀಟಾಳೊಡನೆ ಕುರಿತು,

" ಕೆಲ ಮಾಹಿತಿಗಳು ಬೇಕು" ಎಂದ ಗಂಭೀರ ದನಿಯಲ್ಲಿ. 

 " ಹೇಳಿ", ಎಂದಳು.

" ನೀವು ಇಲ್ಲಿ ಸೇರೋ ಮುಂಚೆ ಒಬ್ಬ ಹುಡುಗಿ ಇಲ್ಲಿ ಪೀ ಎ ಆಗಿದ್ದಳು. ಅವಳ ಬಗ್ಗೆ ವಿವರ ಬೇಕು. ಎಲ್ಲವೂ, ಫ್ಯಾಮಿಲೀ ಡೀಟೇಲ್ ಸಹಿತ" ,ಎಂದ.

  " ಓಹ್, ಸಿಗುತ್ತೆ ಬಿಡಿ. ಆ ಫಾಯಿಲ್ ಬಾಸ್ ಹತ್ತಿರಾನೆ ಇದೆ. ಯಾಕೆಂತಾಶಕೇಳಬಹುದಾ?, ಅವಳೂ ಇದರಲ್ಲಿ ಶಾಮೀಲಾಗಿದ್ದಾಳೆ ಅಂತ ಅನಿಸುತ್ತಾ ಸರ್...?"

ಕೂಲಾಗಿ ಏನೂ ಅರಿಯದವಳಂತೆ ಕೇಳಿದಳು.

" ಸಂಶಯ ಇಲ್ಲ. ಯಾಕೆಂದರೆ, ಕೊಲೆ ನಡೆದದ್ದು ಸಂಜೆ ಏಳರ ಸುಮಾರು. ಆಫೀಸ್ ಮುಗಿದ ಮೇಲೆ. ಆದರೆ ಅವಳು ಕೆಲವೇ ದಿನದಲ್ಲಿ ಕೆಲಸ ಬಿಟ್ಟದ್ದು ಸಂಶಯಾಸ್ಪದವಾಗಿ ಕಾಣುತ್ತಿದೆ" ಎಂದ.

" ಹೌದು...." ಎಂದು ಏನೋ ದೀರ್ಘ ಯೋಚನೇಲಿ ಬಿದ್ದಳು ರೀಟಾ. ತನ್ನ ಬಗ್ಗೆ ಮಾತ್ರ ಯಾವ ಸೂಚನೆಯನ್ನೂ ಕೊಡದಂತೆ ಎಚ್ಚರ ವಹಿಸಿದ್ದಳು. 

" ಅಂದ ಹಾಗೆ, ಈ ನಿಮ್ಮ ರಟ್ಟೆ ಮೇಲಿನ ಗಾಯ....." ಎನ್ನುತಾ....ಕುಮಾರ್ ನ ದೃಷ್ಟಿ ತನ್ನ ತೋಳಿನ ಮೇಲೆ ಬಿದ್ದದ್ದು ನೋಡಿ ಕೊಂಚ ಗಾಭರಿಯಾದರೂ ತೋರಿಸಿಕೊಳ್ಳದೇ, " ಇದಾ....?", ಎಂದು ಏನೋ ಹೇಳಲಿದ್ದಳು. 

" ಗೊತ್ತು ಬಿಡಿ, ನೀವು ಸ್ಟೋರ್ ರೂಂಮಲ್ಲಿ ರಾತ್ರಿ ಸಿಕ್ಕಾಕೊಂಡಾಗ ಕಿಟಕಿಯಿಂದ ಹಾರಿ ಬಚಾವಾದಾಗ ಆದ ಗಾಯ ಇದು. ನಿಜಾ ತಾನೆ?" ಎಂದ..

" ಬಿಟ್ಟ ಕಣ್ಣು ಬಿಟ್ಟಂತೇ ಅವನತ್ತ ನೋಡಿದ್ದಳು...ಇದು ಹೇಗೆ ಗೊತ್ತಾಯಿತೆಂದು...

" ನನಗೆಲ್ಲಾ ಗೊತ್ತಮ್ಮಣ್ಣೀ, ನಾನು ತುಂಬಾ ಕಡೆ ಕಣ್ಣಿಟ್ಟಿರ್ತೀನಿ. ನೀವು ಏನು ಮಾಡಿದರೂ ನನಗೆ ತಿಳಿದುಬಿಡುತ್ತೆ. ನೀವಷ್ಟೇ ಅಲ್ಲ. ಇಲ್ಲಿನ ಸಿಬ್ಬಂದ್ಧಿಗಳು ಯಾರೇ ಆಗಲಿ." 

" ಹೌದಾ..." ಉದ್ಗರಿಸಿದಳು....ತಾನಂದು ಶ್ಯಾಂ ಮನೆ ಕಿಟಕಿಯಿಂದ ಒಳನುಗ್ಗಿ ಕೀ ಹುಡುಕಲು ಹೋಗಿದ್ದು ಈತನಿಗೆ ತಿಳಿದಿರಲಿಕ್ಕಿಲ್ಲ ಎಂದು ಸುಮ್ಮನಾದಳು..ಆ ವಿಷಯದ ಬಗ್ಗೆ ಬಾಯಿ ಬಿಡಲಿಲ್ಲ. 

" ಹೌದು ಸರ್, ನಾನು ಯಾವುದೋ ಫಾಯಿಲ್ ಹುಡುಕುತ್ತಿದ್ದಾಗ, ಆ ಸೆಕ್ಯೂರಿಟೀ ಬಾಗಿಲು ಹಾಕೊಂಡು ಹೋಗಿದ್ದ. ಹಾಗಾಗಿ, ನಾನು ಕಿಟಕಿಯಿಂದ ಪಾರಾಗಬೇಕಾಯಿತು. ಈ ವಿಷಯ ಯಾರಿಗೂ ಹೇಳಿಲ್ಲ. ಎಲ್ಲರೂ ಗಾಭರಿಯಾಗ್ತಾರೆಂತ ಸುಮ್ಮನಿದ್ದೆ" ಎಂದಳು ಕೂಲಾಗಿ....

"ಆಯಿತು ಬಿಡಿ ಆ ವಿಷಯ..ಅಲ್ಲಿಗೇ ಮುಗೀತು". ಎಂದು ಮಾತು ತುಂಡರಿಸಿದ್ದ ಕುಮಾರ್.

 ರೀ ರೀಟಾ ಅವರೆ, ಇಂದು ಸಂಜೆ ನನ್ನ ಜೊತೆ ಬರ್ತೀರಾ. ನನ್ನ ಖರ್ಚಲ್ಲಿ ಕಾಫೀ ಶಾಪ್ನಲ್ಲಿ ನಿಮಗೆ ಟ್ರೀಟು " ಎಂದು ಇದ್ದಕ್ಕಿದ್ದಂತೆ ಬಂದ ಆಹ್ವಾನಕ್ಕೆ ಏನು ಉತ್ತರಿಸಬೇಕೆಂದು ಥಡಕಾಡಿದಿಗ, 

  

 ಅಷ್ಟರಲ್ಲಿ, ರೀಟಾಳ ಫೋನ್ ರಿಂಗಾಯಿತು. ಅಮ್ಮನ ಕರೆ.

" ಮನೇಗೆ ಬೇಗ ಬಾಮ್ಮಾ, ನಾನು ಹೊರಗೆ ಹೋಗಬೇಕು.." ಎಂದರು...

" ಸರಿ ಮಾ..ನೀನು ಹೋಗಿರು. ನಾ ಬರೋದು ಲೇಟಾಗಬಹುದು. ನೀ ನನಗೊಂದು ಫೋನ್ ಮಾಡು. ನಾ ಪಿಕ್ ಮಾಡ್ತೀನಿ..." ಹೇಳಿದಳು. 


ಇಂದು ಕಾಫೀ ಶಾಪ್ಗೆ ಹೋಗುವುದೆಂದು ತೀರ್ಮಾನಿಸಿ ಕುಮಾರ್ ಆಹ್ವಾನದ ಮೇರೆಗೆ. ಹೋಗಲು ಇಷ್ಟ ವಿಲ್ಲದಿದ್ದರೂ, ಕೆಲವು ಮಾಹಿತಿಗಳನ್ನು ತಾನು ತಿಳಿದುಕೊಳ್ಳಲೇ ಬೇಕಿತ್ತು. ಅದಕ್ಕಾಗಿ ಈ ಒಪ್ಪಿಗೆ ಸೂಚಿಸಿದಳು. 

 ಆಗ ನೆನಪಾಯಿತು, ನಿನ್ನೆ ರಾತ್ರಿ ತನ್ನ ಮನೆಗೆ ನುಗ್ಗಿದ ಕಳ್ಳ ಅಲ್ಮೇರಾ ಬೀಗ ತೆರೆದು ಫಾಯಿಲ್ ಗಳನ್ನು ಜಾಲಾಡಿದ್ದು, ತಾನು ಪಿಸ್ತೂಲು ತೋರಿಸಿದ್ದು, ಅವ ಪರಾರಿಯಾಗಿದ್ಧೂ ಏನಾದರೂ ಕುಮಾರ್ ಗೆ ತಿಳಿದಿದೆಯಾ..ಎಂಬ ಸಂಶಯವೂ ಮೂಡಿತು. ಈತ ಬಹಳವೇ ಫಾಸ್ಟ್ ಇರುವಂತಿದೆ . ಯಾವ ರೀತಿಯಲ್ಲಿ ಏನು ನಡೆಯಬಹುದೆಂದು ಊಹಿಸಲೂ ಸಾಧ್ಯವಿಲ್ಲ. ತಾನು ಇಲ್ಲಿ ಏನು ಹುಡುಕಲು ಬಂದಿದ್ದೀನಿ ಅನ್ನೋ ವಿಷಯ ಮಾತ್ರ ಈಗಲೇ ಹೇಳಕೂಡದು. ಈತ ಈ ಕೇಸ್ಗೆ ಸಂಬಂದ ಪಟ್ಟ ವಕೀಲ ಆದ್ದರಿಂದ , ಇಷ್ಟೆಲ್ಲಾ ತನಿಕೆ ಮಾಡ್ತಿರಬಹುದು. ತನ್ನ ಬಗ್ಗೆಯೂಷಮಾಡಬಹುದು. ಯಾವ ಸುಳಿವನ್ನೂ ಬಿಟ್ಟುಕೊಡಬಾರದು ಎಂದು ಮನದಲ್ಲೇ ಹುಶಾರಾದಳು..

" ಅಯ್ಯೋ! ಇದೇನು, ಕಾಫೀ ಕುಡಿಯೋಕೆ ಇಷ್ಟೊಂದು ಯೋಚನೆನಾ...ನಿಮ್ಮ ಬಾಸ್ಗೆ ಹೇಳಲಾ..." ಎಂದ ನಗುತ್ತಾ...

" ಬೇಡ ಬೇಡ, ಬರ್ತೀನಿ" ಎಂದಳು....

" ಗುಡ್ ಗರ್ಲಾ.."


 ಸಂದೀಪ್ನ ಚೇಂಬರ್ ಓಪನ್ ಆಯಿತು. ಬಂದವರೆಲ್ಲಾ ಒಬ್ಬೊಬ್ಬರಾಗಿ ಹಸನ್ಮುಖರಾಗಿ, ಕೈಕುಲುಕುತ್ತಾ , ಹೊರಬಂದರು. ಅವರ ಮುಖಗಳನ್ನೇ ಸೂಕ್ಷ್ಮವಾಗಿ ಕುಮಾರ್ ಗಮನಿಸುತ್ತಿದ್ದುದನ್ನು ರೀಟಾ ನೋಡಿದಳು. 


 ಬಾಸ್ , ಸಂದೀಪ್..ಹೊರಬಂದು, ಕುಮಾರ್ ಗೆ ಹಲೋ ಎಂದಾಗ ಎದ್ದು ನಿಂತು ಕೈ ಕುಲುಕಿ, ಒಳಗೆ ಹೋದರಿಬ್ಬರೂ..


ಹಾಗೆ ಹೋಗುವಾಗ, ಹಿಂದೆ ತಿರುಗಿ ರೀಟಾಳತ್ತ ಹೆಬ್ಬೆರಳನ್ನೆತ್ತಿ ಸನ್ನೆ ಮಾಡಿ ನಕ್ಕ ಕುಮಾರ್ , ರೀಟಾ ಅರ್ಥವಾಗದೇ ಹುಬ್ಬೇರಿಸಿದ್ದಳು...


(ಮುಂದುವರಿಯುವುದು...)


Rate this content
Log in

Similar kannada story from Action