JAISHREE HALLUR

Classics Inspirational Others

4  

JAISHREE HALLUR

Classics Inspirational Others

ನಾ ಕಂಡ ಅಪರೂಪದ ವ್ಯಕ್ತಿ.....

ನಾ ಕಂಡ ಅಪರೂಪದ ವ್ಯಕ್ತಿ.....

1 min
279



ಮೊನ್ನೆ ರಾತ್ರೀ ಕಾವೇರಿ ಎಕ್ಸ್ಪ್ರೆಸ್ ನಲ್ಲಿ ಪಯಣಿಸುವಾಗ ಎದುರು ಸೀಟಿನಲ್ಲಿ ಆಸೀನರಾದ ಹಿರಿಯರೊಬ್ಬರು ಮಾತಿಗಿಳಿದಾಗ...


ಆತನ ಹೆಸರು ಚಕ್ರಪಾಣೀ ಅಂತ...


ನಾನು--- ನೀವು ಎಲ್ಲಿ ಇಳಿಯೋದು ಸರ್?


ಚಕ್ರಪಾಣಿ-- ನಾನು ಮೈಸೂರಿನ ಹತ್ತಿರ ಒಂದು ಊರು.


ನಾನು... ಹೌದಾ...


ಚಕ್ರಪಾಣೀ.. ನೀವೂ ಮೈಸೂರಾ?


ನಾನು.... ಇಲ್ಲ ..ಬೆಂಗಳೂರು...


ನಂತರ ಮೌನ ಕೆಲಹೊತ್ತು. ನಾ ಊಟ ಮುಗಿಸಿದೆ. ಆತನ ಊಟ ಆಗಿತ್ತು. ಕೈಚೀಲಗಳೆರಡು ಸೀಟಿನ ಬಳಿ ಇದ್ದವು. ಹೊದೆಯಲು ಒಂದು ಶಾಲು. ಇಷ್ಟೇ ಆತನ ಬಳಿ ಕಂಡದ್ದು. 


ನಾನು ಮೊಬಾಯಿಲ್ ನಲ್ಲಿ ಮುಖ ಹುದುಗಿಸಿದೆ. 


ನಾನಿದ್ದ ಬೋಗಿ ತುಂಬಾ ಶಾಲಾ ಮಕ್ಕಳ ಕೂಟ. ಗಲಾಟೆಯೋ ಗಲಾಟೆ. ಹಾಡು ಕೇಳುವ ಹಾಗಿರಲಿಲ್ಲ. 

ಎಲ್ಲರೂ ಹೆಣ್ಣು ಮಕ್ಕಳೇ ಇದ್ದುದರಿಂದ ಇವರ ಹೊರತು ಬೇರೆ ಗಂಡಸರಿರಲಿಲ್ಲ. 


ಆ ಮಕ್ಕಳು ಇವರನ್ನು ಬೇರೆ ಸೀಟಿಗೆ ಹೋಗಲು ಕೇಳಿದಾಗ, ಕಾಲು ನೋವಿನ ಕಾರಣದಿಂದ ಮೇಲೆ ಹತ್ತಾಗೋಲ್ಲವೆಂದು ಅಲ್ಲೇ ಕುಳಿತರು. 


ಪಾಪ ಅನಿಸಿತು. ಆಯುರ್ವೇದದ ಚಿಕಿತ್ಸೆಗೆಂದು ಮೈಸೂರಿಗೆ ಹೋಗುತ್ತಿರುವುದಾಗಿ ತಿಳಿಸಿದರು. 


ನನಗೆ ಅಲ್ಲಿಯ ವಿವರ ಬೇಕಿತ್ತು. 


ಹಾಳೆಯಲ್ಲಿ ಬರೆದು ಕೊಟ್ಟರು. 


ಧನ್ಯವಾದಗಳು ಎಂದೆ. ಅವರಿಗೆ ಖುಷೀ ಆಗಿತ್ತು. 


ನನ್ನ ಬಗ್ಗೆ ಹೇಳಿಕೊಂಡಾಗ ಬಹಳ ಸಂತಸ ವ್ಯಕ್ತ ಪಡಿಸಿದರು. 


ನನಗೂ ಖುಷೀ ಆಯಿತು. 


ಆತ ನಡುನಡುವೆ ಗುನುಗುತ್ತಿದ್ದದ್ದು ಕಂಡಿತು. 


ನಾನು....     ನೀವು ಹಾಡುತ್ತೀರಾ ಸರ್..?


ಆತ....      ಹೂಂ ..ಹೀಗೆ ಒಮ್ಮೊಮ್ಮೆ ಇಷ್ಟ ಆದಾಗ ಹಾಡಿಕೊಳ್ಳುತ್ತೇನೆ. ಸಂಗೀತ ಅಂದರೆ ಜೀವ..


ನಾನು....     ಹೌದಾ...ಸಂತೋಷ. ನನಗೂ ಹಾಡೆಂದರೆ ತುಂಬಾ ಇಷ್ಟ..


ಆತ...        ಈ ಹಾಡು ಕೇಳಿದೀರಾ....

        ಶಿವಶಂಕರೀ.....ಶಿವಾನಂದನ ಹರೀ...

        ಘಂಟಸಾಲಾ ಹಾಡಿದ್ದು...?


ನಾನು....   ಓಹ್! ಗೊತ್ತು. ನನ್ನ ಮೆಚ್ಚಿನ ಗೀತೆ. ಹಾಡಿ ಸರ್....


ಆತ...    ( ಕಣ್ಮುಚ್ಚಿಕೊಂಡು...ಹಾಡಲು ಶುರು..)     


ಶಿವಶಂಕರೀ....ರಾಗಾಲಾಪನೆ....


ಮತ್ತೆ...ಮಂಜುನಾಥನ ಹಾಡು....


ಶಿವಂ ಶಿವಂ. ಶಂಭೋ...

.

ಪಲುಕೇ ಬಂಗಾರವಾಯಿನಾ...ಕೋದಂಡರಾಮಾ....


ರಾಗಂ ತಾಳಂ ಪಲ್ಲವೀ...ಶಂಕರಾಭರಮಂ...


ಸಾಗರ ಸಂಗಮ್ ಹಾಡುಗಳು....


ತಿರುಪತಿಗಿರಿವಾಸಾ...ಶ್ರೀವೆಂಕಟೇಶಾ....‌‌


ಮಲಯಮಾರುತ ರಾಗ....


ಚಕ್ರತೀರ್ಥ ಚಿತ್ರದ ಹಾಡುಗಳು..


ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ..

.

ಆಹಾ...‌‌.ನನ್ನಂತಹ ಭಾಗ್ಯಶಾಲಿಗಳಿಲ್ಲವೆನಿಸಿತು.. 

 

.ಆ ಗಳಿಗೆ ಅಮೋಘವಾಗಿತ್ತು.


 ಚಕ್ರಪಾಣಿಯವರಿಗೆ ನನ್ನಂತಹ ಕೇಳುಗರ ಅವಶ್ಯಕತೆಯಿತ್ತು. 


ನನ್ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.


 ದೇವರೇ ನನ್ನನ್ನು ಆ ಬೋಗಿಯಲ್ಲಿ ಬೇಟಿ ಮಾಡಿಸಿದಂತಿದೆಯೆಂದೂ ಹೇಳುವಾಗ ನಾನಂತೂ ಮೂಕವಿಸ್ಮಿತಳಾಗಿಹೋಗಿದ್ದೆ. 


ಏನು ಹೇಳಬೇಕೆಂದೇ ತಿಳಿಯದೇ ಧನ್ಯವಾದಗಳನ್ನು ಅರ್ಪಿಸಿದ್ದೆ. 


ಪಯಣ ಸುಮಧುರ ಸಂಗೀತಮಯವಾಗಿತ್ತು. 

ನಿದ್ದೆ ಹಾರಿಹೋಗಿತ್ತು. ಮನಸು ತಣಿದು ನಾಳಿನ ಬೆಳಗಿಗೆ ಕಾದು ಕುಳಿತಾಗ ಮುಂಜಾವಿನ ಮೂರರ ವೇಳೆ ಬೆಂಗಳೂರು ತಲುಪಿದ್ದೆ...


ಈಗ ಹೇಳಿ...ಗೆಳೆಯರೇ, ಇದೆಂತಹ ಸುಗಮ ಸನ್ನೀವೇಶ ಅಲ್ಲವೇ...

ನಿಮಗೂ ಹೀಗೆ ಆಗಿದ್ದುಂಟಾ ಎಂದಾದರೂ....?🏵 ಕಂಡ ಅಪರೂಪದ ವ್ಯಕ್ತಿ.....




Rate this content
Log in

Similar kannada story from Classics