JAISHREE HALLUR

Action Fantasy Thriller

4  

JAISHREE HALLUR

Action Fantasy Thriller

####ಸೆಂಟಿನಾವಾಂತರ- ಭಾಗ ೦೬

####ಸೆಂಟಿನಾವಾಂತರ- ಭಾಗ ೦೬

2 mins
255


#####ಸೆಂಟಿನಾವಾಂತರ####


ಭಾಗ- 0೬


ಮೀಟಿಂಗ್ ಗೆ ಹಿಂದಿನ ದಿನ ಅಂದರೆ, ರೀಟಾ ತನ್ನ ಪ್ಲಾನ್ ಪ್ರಕಾರ, ಸ್ಟೋರ್ ರೂಂನ ದಾಖಲೆಗಳನ್ನು ಪರಿಶೀಲಿಸುವ ದಿನ, ಸಂಜೆ ಹೊತ್ತು, ಶ್ಯಾಂ ಗೆ ಒಂದು ಕರೆ ಬಂದಿತ್ತು,..


" ಹಲೋ!" ಆಕಡೆಯಿಂದ ಹೆಂಡತಿಯ ದನಿ. ಶ್ಯಾಂ ಸುಂದರ್ ಫೋನಲ್ಲೇ " ಹಲೋ! ಹೇಳು," ಎಂದ.


 " ರೀ, ಹೊರಟ್ರಾ ಆಫೀಸಿಂದ?, ನಾನಿಲ್ಲೇ ಎಸ್ಟೀಮ್ ಮಾಲ್ ಗೆ ಬಂದಿದ್ದೆ. ಸ್ವಲ್ಪ ಜಾಸ್ತೀನೆ ಸಾಮಾನು ಖರೀದಿಸಿಬಿಟ್ಟೆ. ಬರ್ತಾ ಹಂಗೇ ನನ್ನ ಪಿಕಪ್ ಮಾಡ್ತೀರಾ?", ಎಂದಳು.


 ಶ್ಯಾಂ ಗಡಿಯಾರ ನೋಡಿಕೊಂಡ. ಗಂಟೆ ನಾಲ್ಕೂವರೆ ಆಗಿತ್ತು. ಇನ್ನೂ ಆಫೀಸ್ ಮುಚ್ಚೋಕೆ ಒಂದು ಗಂಟೆ ಟೈಮಿತ್ತು. ಹೋಗದಿದ್ದರೆ ಸುಮ್ಮನೆ ಕಿರಿ ಕಿರಿ ಶುರು ಮಾಡ್ತಾಳೆ ಎಂದು , "ಸರಿ ಮಾ ಬರ್ತೀನಿ. ಅಲ್ಲೇ ಇರು", ಎಂದು ಫೋನಿಟ್ಟ. 


  ಟೇಬಲ್ ಮೇಲಿದ್ದ ಫೈಲ್ಗಳನ್ನು ಮುಚ್ಚಿ, ಪೀಸಿ ಆಫ್ ಮಾಡಿ, ಹ್ಯಾಂಡ್ ಬ್ಯಾಗ್ ಕೈಗೆತ್ತಿಕೊಂಡು ಹೊರಡಲನುವಾದ. ಅಷ್ಟರಲ್ಲಿ ಬಾಗಿಲು ತೆರೆಯುತ್ತ, " ಮೇ ಐ ಕಮ್ ಇನ್ ಸರ್?" ಎನ್ನುತ ರೀಟಾ ಒಳಗಿಣಿಕಿದಳು. ಎದ್ದವ ಹಾಗೇ ಕೂತ. 


ಆಹಾ! ಸುವಾಸನೆ ಬರ್ತಿದೆ..ಎನ್ನುತ " ಕಮ್ ಇನ್" ಎಂದ.

ಅವನ ಮುಖ ಅರಿವಿಲ್ಲದೆ ಅರಳಿತ್ತು. ಪಾದರಸದಂತೆ ಹರಿದಾಡುವ ಸುಂದರಿಯಂತೆ ಗೋಚರಿಸುತ್ತಿದ್ದಳು ಅವನ ಕಣ್ಣಿಗೆ. ಅವಳು ಮಾತ್ರ ಗಮನಿಸಿಯೂ ಗಮನಿಸದಂತೆ ಗಂಭೀರವಾಗಿಯೇ ಇದ್ದಳು. 

  

 " ನಾಳೆ ಮೀಟಿಂಗ್ ಗೆ ಎಲ್ಲ ತಯಾರಿ ಆಗಿದೆ ಸರ್, ಪ್ರೆಸೆಂಟೇಷನ್ ಕಾಪೀ ಇದರಲ್ಲಿದೆ. ಒಂದ್ಸಲ ಪರಿಶೀಲಿಸಿಬಿಡಿ. ಏನಾದರೂ ತಪ್ಪಿದ್ದರೆ ತಿದ್ದಬಹುದು. ಡೆಲಿಗೇಟ್ಸ್ ಗೆ ಇನ್ವಿಟೇಶನ್ ಕಳಿಸಿಯಾಗಿದೆ. ಫೋನ್ ಕರೆ ಸಹಿತ ಮಾಡಿಯಾಗಿದೆ. ಈ ಫೈಲಲ್ಲಿ ಕೆಲವು ಡಾಕ್ಯೂಮೆಂಟ್ಸ ಹಾಗೂ ವಾರ್ಷಿಕ ವಿತ್ತದ ರಿಪೋರ್ಟ್ಗಳೂ ಸಹ ಲಗತ್ತಿಸಲಾಗಿದೆ. ನೀವು ಚೆಕ್ ಮಾಡಿ ಕೊಡಿ. " ಎನ್ನುತ್ತ ಯ್ಯಾನುಯಲ್ ಮೀಂಟ್- 2018 ಫೈಲನ್ನು ಎದುರಿಗಿಟ್ಟಳು. 


 ಶ್ಯಾಂ ..ಅವಳಾಡುವ ಮಾತು ಕೇಳಿಸಿಕೊಂಡನೋ ಇಲ್ಲವೋ ತಿಳಿಯದು. ಆದರೆ, ಅವಳ ಮುಖದಲ್ಲಾಗುತ್ತಿದ್ದ ಹಾವಭಾವಗಳನ್ನು ಮಾತ್ರ ತದೇಕ ಚಿತ್ತದಿಂದ ನೋಡುತ್ತಾ ಕುಳಿತಿರುವುದು ಅವಳಿಗೂ ಅರಿವಾಗಿತ್ತು. 

  ತುಂಬು ತೋಳಿನ ಸ್ಕೈ ಬ್ಲೂ ಶರ್ಟ್, ಕಪ್ಪು ಮಿಡ್ಡೀ ಧರಿಸಿ, ಕೂದಲನ್ನು ಎತ್ತಿ ಕಟ್ಟಿದ ತುರುಬಿನಲ್ಲಿ ರಮ್ಯವಾಗಿ ಕಂಡಳು. ಮದುವೆ ಯಾಗದ ಮೂವತ್ತರ ತರುಣಿ. ಪುಣ್ಯಾತ್ಮ ಯಾರೋ, ಎಲ್ಲಿದ್ದಾನೋ ಇವಳನ್ನು ಮದುವೆಯಾಗುವವ. ಲಕ್ಕೀ ಫೆಲ್ಲೋನೆ ಇರಬೇಕು. ಅವನ ಲೈಫೇ ಸೆಟಲ್..ಅನಿಸುತ್ತೆ..ಅಂತಾ..ಏನೇನೋ ಯೋಚನೆ ಮನದಲ್ಲಿ ಮೂಡಿತ್ತು.ಸಣ್ಣದಾಗಿ ತುಟಿಮೇಲೆ ಮುಗುಳುನಗೆ ಮೂಡಿದ್ದನ್ನು ಕಂಡು ರೀಟಾ, 


" ಹಲೋ! ಸರ್! ಏನು ಸಮಾಚಾರಾ..ತುಂಬಾ ಖುಷಿಯಲ್ಲಿರೋ ಹಾಗಿದೆ. ಎನೀ ಗುಡ್ ನ್ಯೂಸ್?" ನಕ್ಕಳು. 

ತುಂಬಾ ಚಂದ ಕಂಡಳು. 


" ಹೂಂ ರೀಟಾ! ,ನೀನು ಈ ಆಫೀಸಿಗೆ ಸೇರಿದಾಗಿಂದಾ ಅದೇನೋ ಹೊಸ ಕಳೆ ಬಂದಂತಾಗಿದೆ ನೋಡು. ಸದಾ ಯ್ಯಾಕ್ಟೀವ್ ಆಗಿ ಓಡಾಡುತ್ತಾ ಕೆಲಸ ಮಾಡುತ್ತಿರುವುದನ್ನು ನೋಡಿದರೇ ಸಾಕು ಸ್ಪೂರ್ಥಿ ಬಂದುಬಿಡುತ್ತದೆ. " ಎಂದ.


 "ಥ್ಯಾಂಕ್ಸ್! ಫಾರ್ ಯುವರ್ ಕಾಂಪ್ಲಿಮೆಂಟ್ಸ್" ಮತ್ತೆ ನಕ್ಕಳು. 


ಛೇ! ಇವತ್ತು ತಾನು ಹೊರಗೆ ಹೋಗುವ ಪ್ರಮೇಯವಿಲ್ಲದಿದ್ದರೆ ಇವಳೊಂದಿಗೆ ಹೊರಗೆ ಸುತ್ತಾಡಿ, ಒಂದು ಕಾಫೀನಾದ್ರೂ ಕುಡೀಬೇಕೆಂಬ ಆಸೆ ಚಿಗುರಿತು. 


  ತಕ್ಷಣ ನೆನಪಾಯಿತು. ಹೆಂಡತಿ ತನಗಾಗಿ ಕಾಯುತ್ತಿರುವುದು. 


 " ರೀಟಾ, ಐ ಆಮ್ ಲೀವಿಂಗ್ ಅರ್ಲೀ ಟುಡೇ. ಬಾಸ್ ಗೆ ಹೇಳ್ಬಿಡು ಅರ್ಜಂಟ್ ಮನೆ ಕಡೆ ಹೋಗಬೇಕು. ಗೃಹ ಮಂತ್ರಿ ಬುಲಾವ್.." ಎಂದ.


 " ಸರಿ ಸರ್", ಎಂದು ರೀಟಾ ಮುಂದೆ ನಡೆದು ಬಾಗಿಲು ತೆರೆದಳು. 


ಶ್ಯಾಂ ಬ್ಯಾಗ್ ಕೈಗೆತ್ತಿಕೊಂಡು ಅವಳ ಹಿಂದೆಯೇ ಬಂದಿದ್ದ. ಹಿಂದಿನಿಂದ ಅವಳ ಎತ್ತರದ ನಿಲುವನ್ನು ತನ್ನೊಂದಿಗೆ ಹೋಲಿಸಿದ್ದ. ಸಪೂರ ಮೈಮಾಟದ ಚಂದ ಹುಡುಗಿ, ಹೈ ಹೀಲ್ಸ್ ಧರಿಸಿ ನಡೆವಾಗ, ಹದಿಹರೆಯ ತುಂಬಿ ತುಳುಕಿತ್ತು.

ಅವಳು ಹೋಗುವುದನ್ನೇ ಎವೆಯಿಕ್ಕದೇ ನೋಡಿದ್ದ. ಸಣ್ಣಗೆ ಬಳುಕುವ ನಡಿಗೆ ಯಾಕೋ ತುಂಬಾನೇ ಇಷ್ಟ ಆದಂತಿತ್ತು. ಇವನ ನೋಟ ಅವಳನ್ನೇ ಹಿಂಭಾಲಿಸಿದ್ದನ್ನು ಪಕ್ಕಾ ಅರಿತಿದ್ದಳವಳು. ಬೇಕೆಂತಲೇ ಕೊಂಚ ಹೆಚ್ಚೇ ಬಳುಕಿ ನಡೆದಿದ್ದಳು, ತುಟಿಯಲ್ಲಿ ತುಂಟನಗೆ ತುಂಬಿಕೊಂಡು.


  ಸಂಜೆ ಅವಳಿಗೆ ಬಹಳ ಗಹನವಾದ ಕೆಲಸ ಸ್ಟೋರ್ ರೂಮಿನ ತಪಾಸಣೆ. ಕೀ ಕೈ ಸೇರಿದಾಗಿಂದ ಅಲ್ಲಿಗೆ ಹೋಗುವ ತವಕ ಹೆಚ್ಚಾಗಿತ್ತು. ಬಿಡುವು ಮಾಡಿಕೊಂಡು ಹೋಗಬೇಕಿಂದು. ಶ್ಯಾಂ ಬೇಗ ಹೋಗುತ್ತಿರುವುದು ಒಳ್ಳೇದೇ ಆಗಿತ್ತು. ತನ್ನ ಚಲನೆ ವಲನೆಯಲ್ಲಿ ಯಾರಿಗೂ ಸಂಶಯ ಬಾರದಂತೆ ಇರಬೇಕಾಗುತ್ತೆ. ತನ್ನ ಉದ್ದೇಶಗಳು ಆದಷ್ಟು ಬೇಗ ನೇರವೇರಬೇಕು ಎನ್ನುವ ಸಂಚಿನಲ್ಲಿದ್ದಳು. 


(ಮುಂದುವರಿಯುವುದು...)

.


Rate this content
Log in

Similar kannada story from Action