JAISHREE HALLUR

Action Inspirational Thriller

4  

JAISHREE HALLUR

Action Inspirational Thriller

##ಸೆಂಟಿನಾವಾಂತರ###. ಭಾಗ -೦೭

##ಸೆಂಟಿನಾವಾಂತರ###. ಭಾಗ -೦೭

3 mins
260



#ಸೆಂಟಿನಾವಾಂತರ#.  ಭಾಗ -೦೭


  ವರಾಂಡಾದಲ್ಲಿ ಹೂಕುಂಡಗಳು ಬರಲಿರುವ ಅತಿಥಿಗಳನ್ನು ಸ್ವಾಗತಿಸಲು ಕಾತರಿಸುತ್ತಿದ್ದವು.


  ಸೆಕ್ಯೂರಿಟೀ ಗೇಟುಗಳನ್ನು ತೆರೆದಿಟ್ಟು ಅಣಿಯಾಗಿದ್ದ. ಸರಿಯಾದ ವೇಳೆಗೆ ಒಂದೊಂದೇ ಕಾರುಗಳು ಬರಲಾಂಭಿಸಿದವು. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಬಂದವರೆಲ್ಲ...ಒಬ್ಬೊಬ್ಬರಾಗಿ, ಹಲೋ ಹಾಯ್ಗಳೊಂದಿಗೆ ಕುಶಲೋಪರಿ ವಿಚಾರಿಸುತ್ತ, ZEDEX ಕಂಪೆನೀಯ ಒಳಗೆ ನಡೆದರು....


  ಆಫೀಸಿನ ಸಿಬ್ಭಂದಿಗಳು ಆಗಲೇ ತಮ್ಮ ಸೀಟುಗಳಲ್ಲಿ ಆಸೀನರಾಗಿ ದಿನದ ಕಾರವಾಹಿಗಳನ್ನು ಶುರು ಮಾಡಿದ್ದರು. ಎಮ್ಡೀ ಸಂದೀಪ್...ಆಗಲೇ ಕ್ಯಾಬಿನ್ ನಲ್ಲಿದ್ದ. ಶ್ಯಾಂ ಸುಂದರ್..ಕಾನ್ಫೆರೆನ್ಸ್ ರೂಮಿನಲ್ಲಿ ಹಾಜರಾಗಿ ಹತ್ತು ನಿಮಿಷವೇ ಆಗಿತ್ತು. ತಾನು ಫುಲ್ ಸೂಟಿನಲ್ಲಿದ್ದುದನ್ನು ಕಂಡ ರೀಟಾ ಹುಬ್ಬೇರಿಸಿದ್ದನ್ನು ನೆನೆದು ತುಟಿಯರಳಿದಂತಿತ್ತು...


  ಮೀಟಿಂಗ್ ಸರಿಯಾಗಿ ಹತ್ತೂವರೆಗೆ ಶುರುವಾಯಿತು. ಎಲ್ಲ ಡೈರೆಕ್ಟರ್ಗಳೂ , ತಮ್ಮ ಅನಿಸಿಕೆಗಳೊಂದಿಗೆ ವ್ಯಕ್ತಪಡಿಸಲು ಸನ್ನದ್ದರಾಗಿದ್ದರು. ಸಂದೀಪ್ ನ ಕೆಲವು ವಿವರಣೆಗಳು, ಕಂಪೆನಿ ಕುರಿತಾಗಿದ್ದು, ಬೋರ್ಡ್ನ ಪರಾಮರ್ಶೆಗಾಗಿ ಮಂಡಿಸಲಾಗಿತ್ತು. ವರ್ಷಕ್ಕೊಮ್ಮೆ ನಡೆಯುವ ಈ ಒಕ್ಕೂಟ ಕೆಲವು ಮುಖ್ಯ ಆದೇಶಗಳನ್ನು ಹೊರಡಿಸಲು ಪರವಾನಿಗಾಗಿಯೂ , ಕೆಲವು ಸಂದಿಗ್ಧ ಸನ್ನಿವೇಶಗಳ ನಿರ್ವಹಣೆಗಾಗಿಯೂ ಮುಂದಿಡಲಾಗಿತ್ತು. 


  ಸಂದೀಪ್ ಕಂಪೆನೀ ವಿವರಗಳನ್ನು ಪ್ರೆಸೆಂಟೇಶನ್ ಮೂಲಕ ತೋರ್ಪಡಿಸಿದಾಗ, ಎಲ್ಲರಿಗೂ ಮೆಚ್ಚುಗೆಯಾಗಿತ್ತು. ನಡುವೆ , ಸೌರೌವ್ ಗುಪ್ತಾನ ಕೊಲೆ ಪ್ರಕರಣದ ಬಗ್ಗೆಯೂ ಚರ್ಚೆಯ ವಿಷಯವಾಗಿತ್ತು. ಕೊಲೆ ಆಗಿ ಆರು ತಿಂಗಳಾದರೂ ಇನ್ನೂ ಕೊಲೆಗಾರ ಪತ್ತೆಯಾಗದೇ ಇದ್ದದ್ದು ವಿಸ್ಮಯಕಾರಿಯಾಗಿತ್ತು. ಬಂದವರೆಲ್ಲ ಸಂದೀಪನನ್ನೇ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದರು. ಎಲ್ಲದಕ್ಕೂ , ಕೋರ್ಟು ತೀರ್ಮಾನವೇ ಕೊನೆಯದ್ದೆಂದು ಉತ್ತರಿಸಿದ್ದ. ಇಲ್ಲಿ ಮೀಟಿಂಗ್ ನಲ್ಲಿ ಬಹಿರಂಗ ಚರ್ಚೆ ಸಮಂಜಸವಲ್ಲ. ಎಂದೂ ಸ್ಪಷ್ಟ ಪಡಿಸಿದಾಗ ಎಲ್ಲರೂ ಸುಮ್ಮನಿದ್ದರು. ಸೌರೌವ್ ಗುಪ್ತಾನ ತಂದೆ ಇನ್ನೂ ಆಸ್ಪತ್ರೆಯಲ್ಲಿದ್ದ ಕಾರಣ ಕೇಸು ಏನೂ ಮುಂದಡಿಯಿಡುವ ಸೂಚನೆ ಕಂಡಿರಲಿಲ್ಲ. 


  ರೀಟಾ, ತಾನು ತಯಾರು ಮಾಡಿದ ಸಂಪೂರ್ಣ ಪ್ರೆಸೆಂಟೇಶನ್ ನಲ್ಲಿ , ಕಂಪೆನಿಯ ಶೇರ್ಸ್, ಮಾರುಕಟ್ಟೆ ಧರಗಳು, ವಾರ್ಷಿಕ ಬಜೆಟ್ ವಿವರ, ಲಾಭಾಂಶ, ನಷ್ಟ ಹಾಗೂ ಶೇರುದಾರರ ಬಗ್ಗೆಕೂಲಂಕುಷವಾಗಿ ವಿವರಣೆಯಿತ್ತಿದ್ದಳು. ಇದನ್ನು ಪ್ರಸ್ತುತ ಪಡಿಸುವಾಗ, ಸಂದೀಪ್ ಅವಳ ಕಾರ್ಯಚಾತುರ್ಯಕ್ಕೆ ಮನಸಲ್ಲೇ ಶ್ಲಾಘೀಸದೇ ಇರಲಿಲ್ಲ. 


  ಅಷ್ಟರಲ್ಲಿ, ಹೊರಗೆ ಕಾರಿನ ಸದ್ದು. ಕಪ್ಪು ಸೂಟುಧಾರಿಯೊಬ್ಬ , ಒಳಗೆ ನಡೆದು ಬರುತ್ತಿದ್ದುದು ಕಂಡು...ರೀಟಾಗೆ ಅನುಮಾನ ಶುರುವಾಯಿತು. ಮೀಟಿಂಗ್ ಶುರುವಾಗಿ ಇಷ್ಟೊತ್ತಾದ ಮೇಲೆ ಆಸಾಮಿ ಈಗ ಬರ್ತಿದ್ದಾನೆ. ಎಲ್ಲೋ ಎಡವಟ್ಟಾಗಿರಬೇಕೆಂದುಕೊಂಡಳು. ಆ ಸೂಟುಧಾರಿ ನೇರ ಸಂದೀಪ್ ನ ಕ್ಯಾಬಿನ್ಗೇ ನುಗ್ಗಿದ್ದ ಕಂಡು ರೀಟಾ. ಗಾಭರಿಯಾದಳು...


 " ಹಲೋ ,ಹಲೋ!, ಪ್ಲೀಜ್ ವೈಟ್, ಮೀಟಿಂಗ್ ನಡೀತಿದೆ . ಒಳಗೆ ಹೋಗೋ ಹಾಗಿಲ್ಲ" ಎಂದು ತಡೆದಳು.

 ಇತ್ತ ತಿರುಗಿದವ ಇವಳನ್ನೇ ನಖಶಿಖಾಂತ ಅಳೆದು ನೋಡಿ, ಅಲ್ಲೇ ಇದ್ದ ಕುರ್ಚಿಯೆಳೆದು ಅವಳೆದುರಿಗೆ ಕೂತೇಬಿಡೋದಾ...

  " ನೀವು ಮೀಟಿಂಗ್ ಅಟೆಂಡ್ ಮಾಡೋಕೆ ಬಂದವರಲ್ವಾ, ?" ಕೇಳಿದಳು.


ಅವನ ಮುಖದಲ್ಲಿ ತುಂಟ ನಗುವಿತ್ತು. ಇನ್ನಷ್ಟು ಹೊತ್ತು ಈ ಹುಡುಗೀನ ಸತಾಯಿಸಬೇಕು ಅಂತಾನೋ ಏನೋ...ಆದರೆ ಅದೇಕೋ ಮನಸು ಬರಲಿಲ್ಲ. ರೀಟಾಳನ್ನು ನೋಡುತ್ತಿದ್ದಂತೇ ಅರ್ಥವಾಗಿತ್ತು. ಇವಳು ಸಾಮಾನ್ಯದವಳಲ್ಲ. ಚಾಲಾಕಿನ ಹುಡುಗಿ ಅಂತ.


" ಐ ಸೀ!, ನೀವಿಲ್ಲಿಗೆ ಹೊಸಾ ಎಂಟ್ರೀ ಅನಿಸುತ್ತೆ. ಈ ಮುಂಚೆ ಬಂದಾಗ ಬೇರೊಬ್ಬಳಿದ್ದಳು...‌ಆಹ್ಹಾ! ಆಕೆಯ ಹೆಸರು. ನಮಿತಾ ಅಂತಾ....ನೆನಪಿದೆ ನನಗೆ..ಅವಳ ಬಗ್ಗೆ ಏನಾದರೂ ಸುಳಿವು ಗೊತ್ತಾ..." ಕೇಳಿದ.


" ಮೊದಲು ನೀವ್ಯಾರೆಂದು ಹೇಳಿ ಸರ್, ಆಮೇಲೆ ಆ ವಿಷಯ". ಎಂದಳು...

ತಿಳಿ ನೀಲಿ ಶರ್ಟ್ ವಿತ್ ಸ್ಕರ್ಟ್, ಮೇಲೆ ಕಪ್ಪು ತುಂಬುತೋಳಿನ ಕಪ್ಪು ಕೋಟಿನಲ್ಲಿ ಖಡಕ್ಕಾಗಿ ಕಂಡಳು. ಆದರೂ ಮುಖದಲ್ಲಿ ಇನ್ನೂ ಎಳಸು ಅಂತ ಅನಿಸಿತು ಅವನಿಗೆ. 


" ಐ ಆಮ್ ಅಡ್ವೋಕೇಟ್ ಕುಮಾರ್ ಕೆ ವಿ, ಫ್ರಂ ಕ್ರೈಂ ಬ್ರಾಂಚ್ ಡಿಪಾರ್ಟ್ಮೆಂಟ್, ಅಪಾಯಿಂಟೆಡ್ ಆಸ್ ಗವರ್ನ್ಮೆಂಟ್ ಕೌಂನ್ಸೆಲ್ಲರ್...ಫಾರ್ ದಿ ಸೌರೌವ್ ಗುಪ್ತಾ ಮರ್ಡರ್ ಕೇಸ್..‌", ಎನ್ನುತಾ ಹಸ್ತ ಚಾಚಿದ ಇವಳತ್ತ.


  ಅವಳಿಗರಿವಿಲ್ಲದೇ ಕೈ ಮುಂದೆ ಅದೇ ಚಾಚಿತ್ತು. ಕೈ ಕುಲುಕಿದ ರಭಸಕ್ಕೆ ಮುಂದಕ್ಕೆ ಬಾಗಿದಳು. ಮೃದುವಾದ ಹಸ್ತ ಆದರೆ, ಬಹಳ ಸೂಕ್ಷ್ಮ ಸ್ವಭಾವದವರೆಂದು ಅರ್ಥ. ಇವಳ ಕೈ ಮೃದುವಾಗಿಲ್ಲ. ಅಂದರೆ ಟಫ್ ಲೇಡಿ ಎಂದರ್ಥ. ಅವನದಾಜಿನಂತೆ....


  " ಓವ್! , ನೈಸ್ ಟು ಮೀಟ್ ಯೂ ಸರ್", ನಸುನಕ್ಕಳು...ಕೈ ಬಿಡಿಸಿಕೊಳ್ಳುತ್ತಾ....


 " ನಾನಿಲ್ಲಿ ಸೇರಿ....." ಎಂದು ಶುರು ಮಾಡಿದವಳನ್ನು ಅರ್ಧದಲ್ಲೇ ತಡೆದು, 

" ಗೊತ್ತು ಬಿಡ್ರಿ, ನೀವಿಲ್ಲಿಗೆ ಯಾವಾಗ ಸೇರಿದ್ರಿ, ಯಾಕೆ ಸೇರಿದ್ರಿ, ಯಾವ ಯಾವ ಕೆಲಸ ಕಲಿತ್ರಿ, ಎಲ್ಲಾ ನನಗ್ಗೊತ್ತು ರೀಟಾ ಅವರೆ..." ಕಣ್ಣು ಮಿಟುಕಿಸಿದ ರೀತಿಗೆ ರೀಟಾ ಸುಸ್ತು...ಯಪ್ಪಾ....ಏನೇನು ಗೊತ್ತಿದೆಯೋ ತನ್ನ ಬಗ್ಗೆ ಎಂದು ಆತಂಕದ ಗೆರೆ ಮೂಡಿದ್ದನ್ನು ಒಡನೇ ಗಮನಿಸಿದ್ದ. 


  ಹೆದರಬೇಡ್ರಿ, ನೀವು ನಿಮ್ಮ ಅಮ್ಮನ ಜೊತೆ ವಾಸವಾಗಿದ್ದು, ಇನ್ನೂ ಮದುವೆಯಾಗದೆ ಒದ್ದಾಡುತ್ತಿರೋದಂತೂ ಪಕ್ಕಾ ಗೊತ್ತು..."


 ಆಸಾಮಿ ಬಹಳ ಜೋರು ಹಾಗೂ ಫಾಸ್ಟ್ ಎಂದರಿತಳು. ಹುಶಾರಾಗಿರಬೇಕು ತಾನು ಎಂದು ಮನದಲ್ಲೇ ಅಂದುಕೊಂಡಳು..


ಆಫೀಸ್ ಬಾಯ್ ಯನ್ನು ಕರೆದು ಕಾಫೀ ತರಲು ಹೇಳಿದಳು...


" ವಾವೌ! ಹೇಗೆ ಗೊತ್ತಾಯಿತು? ನನಗೆ ಕಾಫೀ ಬೇಕೆಂದು?, ನೀವು ಸೈಕಾಲಾಜೀ ಓದಿದ್ದೀರಾ..‌" ಅವನ ಪ್ರಶ್ನೆಗೆ ಉತ್ತರಿಸದೇ ಮುಗುಳು ನಕ್ಕಳು...


" ಒಂದು ಅರ್ಥ ಆಗೋಲ್ಲ ಈ ಹೆಣ್ಮಕ್ಕಳ ನಗು. ಯಾಕೆ ನಗ್ತೀರಾಂತ ಹೇಳ್ಬಿಟ್ ನಗ್ರಿ..ನನಗೇನಂತಾ ಅರ್ಥ ಆದೀತು. ನಾನೇನೂ ಸೈಕಾಲಜೀ ಓದಿಲ್ಲರೀ..."


ಮೀಟಿಂಗ್ ಯಾವಾಗ ಮುಗಿಯುತ್ತಪ್ಪಾ...ಈ ಆಸಾಮೀ ಇಲ್ಲಿಂದ ಎದ್ದು ಹೋದರೆ ಸಾಕು ಅನಿಸಿ, ಮಾತು ಬದಲಿಸುತ್ತಾ...‌


" ಕೊಲೆ ಬಗ್ಗೆ ಏನಾದರೂ ಮಾಹಿತಿ ಸಿಕ್ತಾ..." ಕೇಳಿದಳು ಮೆಲ್ಲನೆ..

" ಓಹ್! ನಿಮ್ಮವರೆಗೂ ಬಂತಾ ಈ ವಿಷಯಾ...ಗುಡ್!. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದೊಂದು ಪೂರ್ವನಿಯೋಜಿತ ಕೊಲೆ ಅನಿಸುತ್ತೆ. ಒಳಗಿನ ಕೆಲವರ ಕೈವಾಡ ಇದೆ. ಈ ಕೇಸ್ ನಾನೇ ಡೀಲ್ ಮಾಡೋದು" . ಎಂದ.

ಅಷ್ಟರಲ್ಲಿ ಬಿಸಿ ಬಿಸಿ ಹಬೆಯಾಡುವ ಕಾಫೀ ಕಪ್ಪುಗಳನ್ನು ತಂದು ಆ ಹುಡುಗ ಇವರ ಮುಂದಿಟ್ಟ. ಅದರ ಪರಿಮಳ ಗಮ್ಮಂತ ಸೆಳೆಯಿತು. 


ಕುಮಾರ್ ಕಪ್ಪನ್ನು ಕೈಗೆತ್ತಿಕೊಂಡು, " ನೀವೂ ಕಾಫೀ ಪ್ರೀಯರಾ...ಒಳ್ಳೇದಾಯಿತು ಬಿಡಿ..." 


ಹೂಂಗುಟ್ಟಿದಳು..

" ಇದೇ ಬೀದೀಲಿ ಕೊನೆತಿರುವಿನಲ್ಲಿ, ಹೊಸಾದೊಂದು ರೆಸ್ಟೋರೆಂಟು ಓಪನ್ ಆಗಿದೆ. ಅಲ್ಲಿ ಅದೇನು ಮಸ್ತ್ ಕಾಫೀ ಮಾಡ್ತಾನೆ ಗೊತ್ತಾ...ನೀವೊಂದ್ಸಲ ಟೇಸ್ಟ್ ಮಾಡಬೇಕು ರಿ...ಸಖತ್ತಾಗಿರುತ್ತೆ..." ಇನ್ನೂ ಏನೇನೋ ಹೇಳುತ್ತಿದ್ದವನ ಎನರ್ಜೀ ಲೆವಲನ್ನೇ ಅಂದಾಜು ಮಾಡುತ್ತಾ ಕುಳಿತವಳನ್ನು ಕುಮಾರ್ ಎಚ್ಚರಿಸುತ್ತಾ...‌


ಹಲೋ! ಮೇಡಂ....ಕಾಫೀ ತಣ್ಣಗಾಯಿತು. ಮೊದಲೇ ಹೇಳಿದ್ರೆ, ನಾನೇ ಕುಡೀತಿದ್ದೆ...ಛೆ! ಅನ್ಯಾಯವಾಗಿ ವೇಸ್ಟ್ ಆಗೋಯ್ತಲ್ಲಾ...."


ಸುಮ್ಮನೆ ನಕ್ಕು ಕಾಫೀ ಕಪ್ ತುಟಿಗೇರಿಸಿದಳು...


(ಮುಂದುವರಿಯುವುದು....)



Rate this content
Log in

Similar kannada story from Action