JAISHREE HALLUR

Classics Inspirational Thriller

4  

JAISHREE HALLUR

Classics Inspirational Thriller

ನನ್ನ ದೇಶಕ್ಕೆ ಅಳಿಲು ಸೇವೆ.

ನನ್ನ ದೇಶಕ್ಕೆ ಅಳಿಲು ಸೇವೆ.

2 mins
364


ಅದೊಂದು ದಿನ.. 

ನಾನು ನನ್ನ ಎಂಜಿನೀಯರಿಂಗ್ ಕಾಲೇಜಿನ ಫೀಸ್ ಕಟ್ಟಲು ಕೊನೆಯ ದಿನಾಂಕವಿತ್ತು. ಹಣವಿರಲಿಲ್ಲ. ನಾನಿದ್ದದ್ದು ಹೆಣ್ಣು ಮಕ್ಕಳ ಹಾಸ್ಟೆಲ್ ನಲ್ಲಿ. ಹಾಸ್ಟೆಲ್ ಫೀಸು ಸಹ ಕಟ್ಟಬೇಕಾಗಿತ್ತು. ಆರು ತಿಂಗಳಿಗೊಮ್ಮೆ ಆರು ನೂರು ರೂಗಳು. ಅಪ್ಪ ಕಳಿಸುವ ಐನೂರು ರೂ ಯಾವುದಕ್ಕೂ ಸಾಲುತ್ತಿರಲಿಲ್ಲ. ತಿಂಗಳ ಕರ್ಚು ಸೇರಿ ಉಳಿದಿದ್ದು ಬರೀ ಐವತ್ತು ರೂ. ಏನು ಮಾಡುವುದೆಂದು ತೋಚದೆ ಕಂಗಾಲಾದ ದಿನ ಅಂದು. ಫೀಸು ಕಟ್ಟದಿದ್ದರೆ ಹಾಸ್ಟೆಲ್ ನಿಂದ ಹೊರಹಾಕುವ ಸಂದರ್ಭ ಇತ್ತು. ಚಿಂತಿಸಿ ಚಿಂತಿಸಿ ಸೊರಗಿ ಹೋಗಿದ್ದೆ. ಬೆಂಗಳೂರಿನಲ್ಲಿದ್ದ ಅಪ್ಪನಲ್ಲಿ ಕೇಳುವ ಧೈರ್ಯವಿರಲಿಲ್ಲ. ಅವರು ಬಹಳ ಕಷ್ಟ ಪಟ್ಟು ಸಂಸಾರ ತೂಗಿಸಿಕೊಂಡು ನನ್ನ ಖರ್ಚನ್ನೂ ನಿಭಾಯಿಸುವುದೇ ದೊಡ್ಡ ವಿಷಯವಾಗಿತ್ತು. ಅವರಿಗೆ ತೊಂದರೆ ಕೊಡುವ ಮನಸಿಲ್ಲ. 

ಆಗ, ಒಂದು ಆಲೋಚನೆ ಬಂತು. 

ಅಲ್ಲೇ ಹತ್ತಿರದಲ್ಲಿ ನಮ್ಮೂರಿತ್ತು. ಸಣ್ಣ ಹಳ್ಳಿ. ಚಿಕ್ಕಪ್ಪನ ಮನೆ,, ಹೊಲ, ರೈತ, ಬೆಳೆ ಪಸಲು, ಜೀವನ ಸುಗಮವಾಗಿತ್ತು. ಆ ಹೊತ್ತು ಚಿಕ್ಕಪ್ಪನ ನೆನಪಾಯಿತು. ಸರಿಯೆಂದು, ಬಸ್ಸು ಹತ್ತಿ ಊರ ದಾರಿ ಹಿಡಿದು ಹೊರಟರೆ. ಬೆಳಗಿನ ಜಾವವಾದ್ದರಿಂದ ಬೇಗನೆ ಊರುತಲುಪಿದೆ. ನನ್ನ ಬರುವಿಕೆಯಿಂದ ಆಶ್ಚರ್ಯವಾದರೂ ಏನೂ ಹೇಳದೇ ಕುಶಲೋಪರಿ ವಿಚಾರಿಸುತ್ತಾ ಮಾತನಾಡಿದರು. ಅವರ ಪುಟ್ಟ ಮಕ್ಕಳಿಗೆ ನಾನೆಂದರೆ ಇಷ್ಟ. 

. ಬಹಳ ಸಮಯ ವ್ಯರ್ಥ ಮಾಡದೇ ಬಂದ ಕಾರಣ ತಿಳಿಸಿದೆ. ಹಾಸ್ಟೆಲ್ ಫೀಸ್ ಕಟ್ಟಲು ಆರು ನೂರು ಅಗತ್ಯವಿದೆಯೆಂದು ಹೇಳಿದೆ. ಅಪ್ಪನ ಸ್ವಂತ ತಮ್ಮ. ಇಬ್ಬರೂ ಹೆಗಲಿಗೆ ಹೆಗಲು ಕೊಟ್ಟು ನಿಂತವರು. ವ್ಯಸಾಯಕ್ಕೆ ಬೇಕಾದ ಎಲ್ಲಾ ವ್ಯವಸ್ಥಗಳನ್ನು ಚಿಚಿಕ್ಕಪ್ಪನಿಗೆ ಸಹಾಯ ಮಾಡಿದ್ದು ಅಪ್ಪನಾದ್ದರಿಂದ ಈ ಹೊತ್ತಿನ ಬೇಡಿಕೆಯಿಟ್ಟೆ. 

ಆದರೆ, ತನ್ನ ಬಳಿ ಹಣವಿಲ್ಲವೆಂದು ಖಡಾಖಂಡಿತವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದರು ಚಿಕ್ಕಪ್ಪ. ನನಗಂತೂ ಬಹಳ ಬೇಸರವಾಯಿತು. ಯಾರ ಬಳಿಯಾದರೂ ಇಸಿದು ಕೊಡಬಹುದಿತ್ತು. ಆದರೆ,. ಹಾಗಾಗಲಿಲ್ಲ. ಇಲ್ಲವೇ ಇಲ್ಲವೆಂದು ಕೈಬಿಟ್ಟಾಗ ನನಗಲ್ಲಿರುವ ಮನಸ್ಸಾಗಲಿಲ್ಲ. ಹೊರಟುಬಿಟ್ಟೆ. 

ಕೈಯಲ್ಲಿ ಬಸ್ಸಿನ ಖರ್ಚಿಗೆಂದು ಇಪ್ಪತ್ತು ರೂ ಮಾತ್ರ ಇತ್ತು. ಊರ ಹೆದ್ದಾರಿಗೆ ಹೋಗುವ ಬಸ್ಸಿಗೆ ಐದು ರೂಪಾಯಿ ಬೇಕು. ಅದನ್ನು ಖರ್ಚು ಮಾಡಿದಲ್ಲಿ, ನಾನು ನನ್ನ ಹಾಸ್ಟೇಲಿಗೆ ಹೋಗಲು ಹಣ ಕೊರತೆಯಾಗುವುದೆಂದು ಹೆದ್ದಿರಿಯತನಕ ನಡೆದುಕೊಂಡು ಹೊರಟರೆ. ಉರಿ ಉರಿ ಬಿಸಿಲು ನೆತ್ತಿ ಮೇಲೆ. ಐದು ಕಿಲೋ ಮೀಟರ್ ದೂರದ ಮಣ್ಣು ರಸ್ತೆ. ಯಾರೂ ಮನುಷ್ಯರ ಸುಳಿವಿರಲಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ನೋವಿನಿಂದ ಕಂಬಗಳು ತುಂಬಿ ಬಂದವು. ಬಡತನದ ಬೇಗೆ ಕಾಡಿತ್ತು. 

ಹೇಗೋ ಹಾಸ್ಟೆಲ್ ಸೇರಿದೆ. ಸ್ನೇಹಿತರಾರೂ ಸಹಾಯ ಮಾಡುವ ಪರಿಸ್ಥಿತಿ ಯಲ್ಲಿರಲಿಲ್ಲ. ನಂತರ, ನಾನೇ ಧೈರ್ಯ ತಂದು ಕೊಂಡು ಹಾಸ್ಟೆಲ್ ವಾರ್ಡನ್ ಹತ್ತಿರ ಮುಂದಿನ ತಿಂಗಳು ಹಣ ಕಟ್ಟುವ ಅವಕಾಶ ಕೊಡಿ ಎಂದು ವಿನಂತಿಸಿದೆ. ಅವರಿಗೂ ನನ್ನ ಕಷ್ಟದ ಅರಿವಾಗಿತ್ತು. ಆಗಿನ ದಿನಗಳು ಐಶಾರಾಂ ಜೀವನವಾಗಿರಲಿಲ್ಲ. ಬಹಳವೇ ಕ್ಲಿಷ್ಟ ಬದುಕು. ವಾರ್ಡನ್ ಒಪ್ಪಿದರು. ದೇವರು ದೊಡ್ಡವ ನನನ್ನ ಪಾಲಿಗೆ. ಧನ್ಯವಾದಗಳನ್ನು ಅರ್ಪಿಸಿದ ರೂಮಿಗೆ ಬಂದೆ. 

ತಿಂಗಳ ಊಟದ ಖರ್ಚನ್ನೂ ಕಡಿಮೆ ಮಾಡುವ ಬಗ್ಗೆ ಯೋಚಿಸಿದೆ. ಎರಡು ಹೊತ್ತಿನ ಊಟಕ್ಕೆ ನೂರಾ ಐವತ್ತು. ಅದನ್ನು ಒಂದು ಹೊತ್ತಿಗೆ ಮಾಡಿದರೆ, ತಿಂಗಳಿಗೆ ಎಪ್ಪತೈದು ರೂ ಉಳಿಸಬಹುದೆಂದು, ಒಂದೇ ಊಟವನ್ನು ಮಾಡುವ ನಿರ್ಧಾರ ಮಾಡಿದೆ. ರಾತ್ರಿಯ ವೇಳೆ ಬರೀ ನೀರು ಕುಡಿದು ಮಲಗಿದೆ. ಹೀಗೇ ಒಂದಷ್ಟು ಹಣ ಹೊಂದಿಸಿ ಹಾಸ್ಟೆಲ್ ಫೀಸು ಕಟ್ಟುತ್ತಾ ಕೊನೆಯ ವರ್ಷದ ಎಂಜಿನೀಯರಿಂಗ್ ಮುಗಿಸಿದೆ. ಯಾವುದೇ ಅಡೆತಡೆಯಿಲ್ಲದೇ ಸುಸೂತ್ರವಾಗಿ ಪಲಿತಾಂಶವೂ ಬಂತು ನಾನು ಮೊದಲನೆಯ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದೆ. ಸಂತೋಷ ಕಣ್ಣೀರ ಒಒಟ್ಟಿಗೆ ಆದವು. ಊರಿಗೆ ಬಂದೆ. ಅಪ್ಪ ಅಮ್ಮನಿಗೆ ನಾನು ಹೆಮ್ಮೆಯ ಹೆಣ್ಣು ಮಗಳು. 

ಇಷ್ಟು ದಿನ ಅಪ್ಪ ನನಗೆ ಓದಿಸಿದರು. ಅವರಿಗೆ ನೆರವಾಗುವ ಸಮಯ ಬಂದಿತ್ತು. ನಾನು ನೌಕರಿ ಹುಡುಕಲಾರಂಬಿಸಿದೆ. ನನ್ನ ಪ್ರಯತ್ನ ವಿಫಲವಾಗಲಿಲ್ಲ. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಕೆಲಸ ದೊರೆಯಿತು. ದೇವರಿಗೆದು ಪೂಪೂಜೆ ಸಲ್ಲಿಸದ. ದೇದೇಶ ಸೇವೆಗೆ ನಾನು ಬದ್ಧ ಎಂಬ ಸಂಕಲ್ಪವನ್ನೂ ಮಾಡಿಕೊಂಡರೆ. ಅಪ್ಪ ನಿವೃತ್ತರಾದರು. ಸಂಸಾರದ ಭಾರ ನನ್ನ ಮೇಲೆ ಬಿತ್ತು. ತಮ್ಮ ತಂಗಿಯರ ಜವಾಬ್ಧಾರಿ ಇತ್ತು.. ಹಗಲಿರುಳೆನ್ನದೆ ದುಡಿದ. ನನ್ನ ಸಂಸಾರವೂ ಬೆಳೆಯಿತು. 

ನನ್ನ ಪದೋನ್ನತಿ ಆಯ್ತು. ಉತ್ತುಂಗ ಪಧವಿಗೇರಿದೆ. ಬಹಳ ಮುತುವರ್ಜಿಯ ಕೆಲಸಗಳು ನನ್ನ ಜವಾಬ್ಧಾರಿ ಗಳನ್ನು ಹೆಚ್ಚಿಸಿದವು. ಮೂವತ್ತೈದು ವರ್ಷಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಭಾರತ ದೇಶಕ್ಕೆ ನನ್ನ ಜೀವನದ ಕೊಡುಗೆಯಿದು. ನನ್ನ ಮಕ್ಕಳಿಗೂ ಇಂತಹದೇ ಹುದ್ದೆ ಸಿಗಲಿ ಎಂದು ಹಂಬಲವಿದೆ. ದೇಶಸೇವೆ ಉತ್ತಮ ಸೇವೆ. ನನ್ನ ಜೀವನ ಸಾರ್ತಕವಾಗಿದೆ. ಇನ್ನು ನಿವೃತ್ತಿಯಲ್ಲಿ ವಿಶ್ರಾಂತಿ ಅವಶ್ಯಕತೆಯಿದೆ ಎಂದು ಕಾದಿದ್ದೇನೆ. 

ಪ್ರೀಯ ಓದುಗರೆ, ಇದನ್ನು ಓದಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸಿರಿ. 



Rate this content
Log in

Similar kannada story from Classics