STORYMIRROR

Kalpana Nath

Comedy Others

4  

Kalpana Nath

Comedy Others

ಸ್ವರ್ಗದಲೂ ಮೋಸ

ಸ್ವರ್ಗದಲೂ ಮೋಸ

1 min
207


ಒಬ್ಬ ಸುಳ್ಳು ಸುದ್ದಿಯನ್ನೇ ಸದಾ ವರದಿಮಾಡುವ ಪತ್ರಿಕಾ ವರದಿಗಾರ ನರಕಕ್ಕೆ ಹೋಗುವ ದಾರಿಯಲ್ಲಿ ಸ್ವರ್ಗದ ಬೋರ್ಡ್ ನೋಡಿ ಕುತೂಹಲದಿಂದ ಇಣುಕಿ ನೋಡಿದ. ಬಾಗಿಲಲ್ಲಿ ಇದ್ದ ಕಾವಲುಗಾರ ತಡೆದು ವಿಚಾರಿಸಿದ. ಸ್ವರ್ಗದ ಹೆಸರಲ್ಲಿ ಬಹಳ ಮೋಸ ನಡೀತಾ ಇದೇ ಅಂತ ನನಗೆ ಗೊತ್ತಾಗಿ ವರದಿಮಾಡಲು ಇಲ್ಲಿಗೆ ಬಂದಿದೀನಿ ಅಂತ ID ತೋರಿಸಿದ. ಆದರೂ ಒಪ್ಪದೇ ಹೇಳಿದ. ಈಗಾಗಲೇ ಭರ್ತಿ ಆಗಿದೆ. ಅಲ್ಲಿ ಒಬ್ಬನಿಗೂ ಜಾಗ ಇಲ್ಲ. ಬಿಡಕ್ಕಾಗಲ್ಲ. ಒಂದು ಕೆಲಸಮಾಡು ನನ್ನ ಹೇಗಾದ್ರು ಮಾಡಿ ಹತ್ತೇ ನಿಮಿಷ ಒಳಗೆ ಬಿಡು. ಇಪ್ಪತ್ತು ಜನ ಆಚೆ ಬರೋ ಹಾಗೇ ಮಾಡ್ತೀನಿ ಅಂದ ನಿಜವೇ ಅಂತ ನಂಬಿ ಬಿಟ್ಟ. ಹೋದವನೇ ಜೋರಾಗಿ ಕೂಗಿ ಹೇಳಿದ. ದೀಪಾವಳಿ ಉಡುಗೊರೆ ಅಂತ ನರಕವನ್ನ ಹತ್ತುದಿನ ಸ್ವರ್ಗ ಮಾಡ್ತಾ ಇದಾರೆ. ಇದನ್ನ ರಿಪೋರ್ಟ್ ಮಾಡಕ್ಕೆ ಇಪ್ಪತ್ತು ಜನರ ಅವಷ್ಯಕತೆ ಇದೆ. ಅವರು ಮಾತ್ರ ಹತ್ತು ದಿನ ಅಲ್ಲೇ ಇರಬಹುದು. ಇದನ್ನ ಕೇಳಿದ್ದೇ ತಡ ಸತ್ಯವಾದ ವಿಷಗಳನ್ನೇ ವರದಿ ಮಾಡುತ್ತಿದ್ದ ಕಾರಣ ಸುಖವಾಗಿ ಸ್ವರ್ಗಸುಖ ಅನುಭವಿಸುತ್ತಿದ್ದ ಇವನ ಹಿಂದಿನ ಇಪ್ಪತ್ತು ವರದಿಗಾರರು ಎಲ್ಲವನ್ನೂ ಮರೆತು ವರದಿ ಮಾಡುವ ಆಸೆ ಹೊತ್ತು ಓಡಿಹೋದರು. ಕಾವಲುಗಾರ ಇಷ್ಟುಜನ ಹೋಗಿರಬೇಕಾದರೆ ನಿಜವೇ ಇರಬಹುದುದೆಂದು ತಾನೂ ಹೋದ. ಮೆತ್ತಗೆ ಈ ಸುಳ್ಳು ವರದಿಗಾರ ಸ್ವರ್ಗ ಸೇರಿದ. ಅವರೆಲ್ಲ ಪಾಪ ನರಕ ಸೇರಿದರು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Comedy