ಪಾಪದ ಲೆಕ್ಕ
ಪಾಪದ ಲೆಕ್ಕ


ಒಂದೂರಲ್ಲೊಬ್ಬ ರಾಜ. ಬಹಳ ದಯಾಳು. ಅವನ ಹುಟ್ಟಿದ ಹಬ್ಬವನ್ನು ವಿಜ್ರುಂಭಣೆ ಯಿಂದ ಆಚರಿಸಿಕೊಂಡಾಗ ಭೂರಿ ಭಕ್ಷ್ಯ ಗಳ ಅಡುಗೆ ಮಾಡಿಸಿ ಎಲ್ಲೆಡೆ ಊಟ ವ್ಯವಸ್ಥೆ ಮಾಡಿ ಸಿದ್ದ. ಎಲ್ಲಿನೋಡಿದರಲ್ಲಿ ಜನ. ಸ್ಥಳದ ಅಭಾವದಿಂದ ಎಷ್ಟೋ ಜನ ಬಯಲಲ್ಲೇ ಕೂತು ಊಟ ಮಾಡಿದರು.
ಹೀಗೆ ಊಟ ಮಾಡುವಾಗ ಆಕಾಶದಲ್ಲಿ ಹದ್ದು ಒಂದು ವಿಷ ಸರ್ಪ ವನ್ನು ಕಚ್ಚಿಕೊಂಡು ಹಾರಿ ಹೋಗುತ್ತಿತ್ತು. ಅದರ.ವಿಷದ ತೊಟ್ಟುಗಳು ಅಡುಗೆ ಮಾಡುವ.ಪಾತ್ರೆಗಳಲ್ಲಿ ಬಿತ್ತು. ಆದರೆ ಇದು ಯಾರಿಗೂ ಅರಿವಾಗಲಿಲ್ಲ. ಅಂದು ಇದನ್ನು ತಿಂದವರೆಲ್ಲಾ .ಅಸುನೀಗಿದರು. ರಾಜ ಈ ಬೀಭತ್ಸ ವಿಷಯ ತಿಳಿದು ದುಃಖಿತನಾದ.ಆದರೆ ಕಾರಣ ಮಾತ್ರ ತಿಳಿಯದಾದ.
ಈ ಕೇಸು ಚಿತ್ರ ಗುಪ್ತ ನ ಹತ್ತಿರ ಬಂತು. ಪ್ರಜಾಪಾಲಕನ ತಪ್ಪಲ್ಲ. ಅಡುಗೆ ಮಾಡುವನ ತಪ್ಪಲ್ಲ. ಬಯಲಲ್ಲಿ ಊಟ ಮಾಡಿದವರ ತಪ್ಪಲ್ಲ ಹದ್ದಿನ ತಪ್ಪಂತೂ ಅಲ್ಲವೇ ಅಲ್ಲ, ಹಾಗೆ ಪ್ರಾಣವೇ ಇಲ್ಲದ ಸರ್ಪವನ್ನು ದೂಷಿಸಲಾಗದು. ಈ ಪಾಪದ ಫಲವನ್ನು ಯಾರ ತಲೆಗೆ ಕಟ್ಟ ಬೇಕೆಂದು ತಲೆ ಕೆಡಿಸಿಕೊಂಡ ಚಿತ್ರ ಗುಪ್ತ .ಬೇರೆ ದೇವತೆಗಳಿಗೂ ಇದು ಬಿಡಿಸಲಾಗದ ಯಕ್ಷ ಪ್ರಶ್ನೆ ಆಯಿತು.
ಅಲ್ಲಿಗೆ ಬಂದ ಯಮ ಹೇಳಿದ. ಹೆದರ ಬೇಡ ಚಿತ್ರ ಗುಪ್ತ. ನಿನ್ನ ತಲೆ ನೋವಿಗೆ ನೋಡು ಪರಿಹಾರ ಅಲ್ಲಿದೆ ಅಂತ ತೋರಿಸಿ
ದ.
ಪಕ್ಕದ ದೇಶದ ಒಬ್ಬ ವ್ಯಕ್ತಿ ಕುದುರಯಿಂದ ಇಳಿದು ಒಂದು ಹೆಂಗಸನ್ನು ಕೇಳಿದ. ಈ ದೇಶದ ರಾಜನ ಬಗ್ಗೆ ಕೇಳಿದ್ದೇನೆ.
ಬಡವರ ಬಂಧು ,ದಯಾಳು ಅಂತ ಜನ ಹೊಗಳುತ್ತಾರೆ. ನಾನು ರಾಜನನ್ನು ಕಾಣಬೇಕು ಎಂದಾಗ. ಓಹ್ ಏನು ನಮ್ಮ
ಜನಗಳನ್ನೆಲ್ಲಾ ಸುಲಭವಾಗಿ ವಿಷ ಹಾಕಿ ಸಾಯಿಸಿದವನು ದಯಾಳುವೇ ಅಂದಾಗ , ಚಿತ್ರ ಗುಪ್ತ ತಟ್ಟನೆ ಅವಳ ಪಾಪದ ಲೆಕ್ಕಕ್ಕೆ ಇದನ್ನು ಸೇರಿಸಿ ನಿರಾಳವಾದ.