Kalpana Nath

Classics Inspirational Others

4  

Kalpana Nath

Classics Inspirational Others

ಗಿಳಿಯು ಪಂಜರದೊಳಿಲ್ಲ

ಗಿಳಿಯು ಪಂಜರದೊಳಿಲ್ಲ

4 mins
381



ತಂಬಿ ದೊರೆ ಒಳ್ಳೆಯ ಕಾರ್ಪೆಂಟರ್. ಒಳ್ಳೆಯ ಸಂಪಾದನೆ ಇದ್ದರೂ ಕಿತ್ತು ತಿನ್ನೋ ಬಡತನ . ಅದಕ್ಕೆ ಕಾರಣ ಅವನ ಕುಡಿತ. ದೊರೆಗೆ ಇಬ್ಬರು ಮಕ್ಕಳು ಶಾಂತಿ ಮತ್ತೆ ರಾಜಾ. ರಾಜಾ ತಂದೆಗೆ ತಕ್ಕ ಮಗ . ಕುಡಿತ ಇಲ್ಲದಿದ್ದರೂ ಜೂಜು ಕೋರ. ಶಾಂತಿಗೆ ಹದಿನೈದು ಹದಿನಾರು ವರ್ಷ ಆಗಿದ್ದಾಗ ದೂರದ ಊರಿನಿಂದ ಯಾರೋ ಒಂದು ದಿನ ಬಂದು ನಿಮ್ಮ ಮಗಳನ್ನ ಮದುವೆ ಮಾಡಿ ಕೊಡಿ ಚನ್ನಾಗಿ ನೋಡಿ ಕೊಳ್ತೀವಿ . ನಮಗೆ ಹೆಣ್ಣು ಮಕ್ಕಳು ಇಲ್ಲ ಮೂರೂ ಗಂಡು ಮಕ್ಕಳೇ .ನಿಮ್ಮ ಮಗಳನ್ನು ನಮ್ಮ ಮಗಳು ಅಂತ ನೋಡ್ಕೊತೀವಿ ಅಂತ ಹೇಳಿದಾಗ ದೊರೆ ನನ್ನ ಹತ್ತಿರ ಹತ್ತು ರೂಪಾಯಿ ಇಲ್ಲ .ಸಧ್ಯಕ್ಕೆ ಆಗಲ್ಲ ಒಂದು ವರ್ಷ ಆದ ಮೇಲೆ ಬೇಕಾದರೆ ನೋಡೋಣ ಅಂತ ಹೇಳಿದ. ನೀವು ಹತ್ತು ರೂಪಾಯಿ ಸಹಾ ಖರ್ಚು ಮಾಡೋದು ಬೇಡ . ಒಂದು ದೇವಸ್ಥಾನದಲ್ಲೋ ಚರ್ಚ್ ನಲ್ಲೋ ಮದುವೆ ಮಾಡಿಕೊಡಿ ಅಂದಾಗ , ದೊರೆ ನಮ್ಮ ಖರ್ಚು ಇದ್ದೇ ಇರತ್ತಲ್ಲ ಅಂತ ರಾಗ ತೆಗೆದ. ಅದಕ್ಕೂ ಯೋಚನೆ ಮಾಡ ಬೇಡಿ ನಿಮ್ಮ ಖರ್ಚು ನಾವೇ ನೋಡ್ಕೋತೀವಿ ಅಂದರು. ದೊರೆ ತಕ್ಷಣ ಒಪ್ಪಿದ. ಆಗತಾನೆ ದೋಸೆ ಹಿಟ್ಟು ತೊಗೊಂಡು ಒಳಗೆ ಬಂದ ಶಾಂತಿಯನ್ನ ನೋಡಿ ಹತ್ತಿರಕ್ಕೆ ಕರೆದು ಇವನು ಶ್ರೀನಿವಾಸ ಸೀನ, ಇವನು ನಾಗರಾಜ ನಾಗ, ಇವನು ಕುಮಾರ . ನಾನು ಇವರ ಅಮ್ಮ ರಾಣಿ. ನನ್ನ ಕೊನೇ ಮಗ ಕುಮಾರ ನಿನ್ನ ತುಂಬಾ ಇಷ್ಟ ಪಟ್ಟಿದಾನಂತೆ. ಇವನು ಇದೇ ಊರಲ್ಲಿ ಬಿಲ್ಡಿಂಗ್ ಕೆಲಸ ಮಾಡೋದು . ನಿಮ್ಮ ಅಪ್ಪಾನೂ ಒಪ್ಪಿದಾರೆ ಅಂದಾಗ , ಒಪ್ಪಿದಾರೆ ಅಂದರೆ ಮದುವೇನಾ ನನಗಾ ಅಂತ ಪಾಪ ಮನಸಿನಲ್ಲಿ ಅಂದು ಕೊಂಡು ಸುಮ್ಮನೆ ಮುಖದಲ್ಲಿ ಯಾವ ಬದಲಾವಣೆಯನ್ನೂ ತೋರಿಸದೆ ನಿಂತೇ ಇದ್ದಾಳೆ. ಎಲ್ಲಾ ಕೆಲಸ ಮುಗಿಸಿ ಒಂದು ವಾರ ಮೊದಲೇ ಬಂದು ಹೇಳ್ತೀವಿ ಆಯ್ತಾ ಅಂತ ಹೊರಟೇ ಬಿಟ್ರು. ಶಾಂತಿಗೆ ಏನಾಗ್ತಿದೆ ಅಂತ ಅರ್ಥ ಆಗ ಬೇಕಾದ್ರೆ ಅಪ್ಪಾನೇ ಎದ್ದು ಬಂದು ಹೇಳಬೇಕಾಯ್ತು. ಏನೂ ಮಾತಾಡ್ದೆ ಸುಮ್ಮನಿದ್ದಳು. ರಾತ್ರಿ ಅಣ್ಣ ಬಂದ ಮೇಲೆ ಅಪ್ಪ ಹೇಳಕ್ಕೂ ಮೊದಲು ಶಾಂತೀನೇ ದುಃಖದಿಂದ ಅಣ್ಣಾ ಬೆಳಗ್ಗೆ ಯಾರೋ ನಾಲ್ಕು ಜನ ಬಂದಿದ್ರು , ಅದರಲ್ಲಿ ಒಬ್ಬ ನನ್ನ ಮದುವೆ ಮಾಡ್ಕೋತಾನಂತೆ ಅಪ್ಪಾನೂ ಅದಕ್ಕೆ ಒಪ್ಪಿದಾರಂತೆ ಅಂದಾಗ ಕಾರ್ತಿಕ್ ಹೌದೇನಪ್ಪ ಅಂತ ಕೇಳಿದ. ಹೌದು ನಮ್ಮದು ಒಂದು ಪೈಸೆ ಖರ್ಚು ಇಲ್ಲ ಅವರೇ ನಮಗೆ ದುಡ್ಡು ಕೊಟ್ಟು ಮದುವೆ ಮಾಡ್ಕೋತಾರೆ. ಹಾಗಾದ್ರೆ ಸರಿ ಯಾವಾಗ ಕೊಡ್ತಾರಂತೆ ಎಷ್ಟು ಕೊಡ್ತಾರಂತೆ ಅಂತ ಆತುರಾತುರ ವಾಗಿ ಕೇಳಿದ. ಅದೆಲ್ಲಾ ಗೊತ್ತಿಲ್ಲ ಅವರೇ ಬರ್ತಾರಂತೆ ಅಂದ ಅಪ್ಪ. ಏನಪ್ಪಾ ಎಷ್ಟು ಕೊಡ್ತೀವಿ ಅಂತಾನೆ ಹೇಳ ದೇ ಹೇಗೆ ಮದುವೆಗೆ ಒಪ್ಪಿಗೆ ಕೊಟ್ಟಿ ನೀನು. ಮದುವೆ ಖರ್ಚು ಅವರದ್ದು . ಅದರ ಮೇಲೆ ನಮ್ಮದೂ ಖರ್ಚು ಇದೆ ಅಂತ ಹೇಳಿದೆ ಆಯ್ತು ಹೇಳಿ ಅದನ್ನೂ ನಾವೇ ಕೊಡ್ತೀವಿ ಅಂದಿದ್ದಾರೆ. ಹಾಗಾದರೆ ಸರಿ ನಾನೇ ಮಾತಾ ಡ್ತೀನಿ .ನೀನು ಅವರ ಹತ್ತಿರ ನಾನು ಇಲ್ಲದೇ ಇದ್ದಾಗ ದುಡ್ಡು ತೊಗೋಬೇಡ ಅಂದ ರಾಜಾ . ನೀನು ಯಾವ ದೊಡ್ಡ ಮನುಷ್ಯ . ಶಾಂತಿ ನನ್ನ ಮಗಳು ಅಮ್ಮ ಇಲ್ಲದೇ ಇದ್ರೂ ನಾನು ಗಿಣಿ ತರಾ ಸಾಕಿದೀನಿ. ಇದಕ್ಕೆ ನಿನಗೇನು ಸಂಭಂದ ಇಲ್ಲ. ನೀನು ಇಲ್ಲದೇ ಹೋದರೂ ಮದುವೆ ನಡಯತ್ತೆ ಆಯ್ತಾ ಅಂದ ದೊರೆ. ಆಗ ಶಾಂತಿ ಬಾ ಇಲ್ಲಿ ನಿನಗೆ ಮೊದಲು ಅವನನ್ನ ಮದುವೆ ಆಗಕ್ಕೆ ಇಷ್ಟ ಇದೆಯಾ ಹೇಳು ಅಂದ ರಾಜಾ. ಅಳ್ತಾನೇ ನನಗೋಸ್ಕರ ನೀವು ಜಗಳ ಆಡೋದು ಬೇಡ. ಅಪ್ಪಂಗೆ ದುಡ್ಡು ಬೇಕು ಅದಕ್ಕೋಸ್ಕರ ಏನು ಬೇಕಾದರೂ ಮಾಡ್ತಾರೆ ಅಂದಳು. ದುಡ್ಡು ನನಗೂ ಬೇಕು ನಾನೂ ಸಾಲ ಮಾಡ್ಕೊಂಡಿದೀನಿ. ಹಾಗಂತ ಅವರು ಎಷ್ಟು ಕೊಟ್ಟರೂ ತೊಗೋಳಕ್ಕೆ ಆಗತ್ತಾ. ಅವರೇ ಹುಡುಕಿಕೊಂಡು ಬಂದಿ ದಾರೆ ಅಂದರೆ ನಾವು ಹೆಚ್ಚಾಗಿ ಕೇಳಬೇಕು .ಈ ಅಪ್ಪಂಗೆ ಅದೆಲ್ಲಾ ಗೊತ್ತಾಗಲ್ಲ ಅಂದ.

     ಅಣ್ಣ ಏನೋ ಸಹಾಯ ಮಾಡ್ತಾನೆ ಅಪ್ಪನ್ನ ಸರಿ ಯಾಗಿ ಬೈತಾನೆ ಅಂತ ತಿಳಿದಿದ್ದ ಶಾಂತಿಗೆ ಉರಿಯೋ ಬೆಂಕಿಯಲ್ಲಿ ಬಿದ್ದ ಹಾಗಾಯಿತು. ಹೆತ್ತ ತಂದೆ ಒಡಹುಟ್ಟಿದ ಅಣ್ಣ ಕಟುಕನಿಗೆ ಮಾರುವ ಹಸುವಿನ ಸ್ಥಾನದಲ್ಲಿ ಇದ್ದ ಹಾಗಾಯ್ತು ಶಾಂತಿಯ ಸ್ಥಿತಿ. ಯಾರಲ್ಲಿ ಹೇಳೋದು . ಇಲ್ಲಿಂದ ತಪ್ಪಿಸಿ ಕೊಂಡರೂ ಎಲ್ಲಿಗೆ ಹೋಗೋದು ಅರ್ಥ ವಾಗ್ತಾ ಇಲ್ಲ.

 'ಅಳೋದು ಏಕಮ್ಮ ನಿನಗೆ ಇಷ್ಟ ಇಲ್ಲದಿದ್ದರೆ ಬೇಡ ಬಿಡು ಅನ್ನುವ ಆ ಸಾಂತ್ವನದ ಮಾತು ಹೇಳಬೇಕಿದ್ದ ಅಮ್ಮ ' ನೀ ಎಷ್ಟು ಅದ್ರುಷ್ಟ ಮಾಡಿದ್ದಿ ಇವರ ಕುಡಿತದ ಚಟಕ್ಕೆ ಮಗಳನ್ನೇ ಬಲಿ ಕೊಡೋದನ್ನ ನೋಡಕ್ಕೆ ಮೊದ ಲೇ ಹೊರಟು ಹೋದೆ ಅಂತ ರಾತ್ರಿಯೆಲ್ಲಾ ಗೋಳಾಡಿ ನಿದ್ದೆ ಮಾಡಲಿಲ್ಲ. ಬೆಳಗ್ಗೆ ಎದ್ದು ಪ್ರತಿದಿನದಂತೆ ಹಾಲು ತರಲು ಹೋದಳು. ಇವರ ರಸ್ತೆಯ ಕೊನೆಯಲ್ಲಿ ಮಾರಿಯಮ್ಮ ದೇವಸ್ಥಾನದ ಪೂಚಾಂಡಿ (ಪೂಜಾರಿ) ಅಲ್ಲೇ ಹಸು ಎಮ್ಮೆ ಹಾಲು ಕರೆದು ಮಾರ್ತಾನೆ. ಇವನು ಎಲ್ಲರಿಗೂ ಸಾಲ ಕೊಡ್ತಾನೆ ಅಂತ ಇಲ್ಲಿ ಹೆಚ್ಚು ಜನ ಬರ್ತಾರೆ . ಇವತ್ತು ಪೂಜಾರಿ ಇಲ್ಲ .ಅವನ ಮಗ ಪುಂಢರಿ ಹಾಲು ಹಾಕ್ತಾ ಇದ್ದ..ಪಾತ್ರೆ ತೊಗೊಂಡು ಹತ್ತಿರ ಬಂದೋಳು ಏಕೋ ಇವತ್ತು ಹಾಲು ಬೇಡ ಅಂತ ಹಿಂದೆ ಬಂದಳು. ಶಾಂತಿ ಶಾಂತಿ ಏಕೆ ಹತ್ತಿರ ಬಂದೋಳು ಹಾಗೆ ಹೋಗ್ತಾ ಇದ್ದೀಯೆ. ಏನಾಯ್ತು ಅಂತ ಕೇಳಿದ .ಅವಳ ಕಣ್ಣು ನೋಡಿ ಏನಾಯ್ತು ರಾತ್ರಿ ನಿದ್ದೆ ಮಾಡಿಲ್ವಾ ಅಂತ ಕೇಳಿದೆ. ಕಣ್ಣಲ್ಲಿ ಕಣ್ಣಿಟ್ಟು ಎಂದೂ ನೋಡಿದವನಲ್ಲ. ಆದರೆ ಹಾಲು ಹಾಕೋವಾಗ ಎಷ್ಟೋ ಸಲ ಬೇಕಾಗಿ ಮೈ ಕೈ ಮುಟ್ಟಿ ಶಾಂತಿ ಹತ್ತಿರ ಉಗಿಸಿ ಕೊಂಡಿದ್ದಿದೆ. ಏನಾಯ್ತು ಶಾಂತಿ ಅಂದಾಗ ಅಳೋದು ಬಿಟ್ಟು ಏನೂ ಮಾತಾಡ್ಲಿಲ್ಲ. ಪುಂಢರಿಗೆ ಮನಸ್ಸು ಕರಗಿ ಏನು ಸಹಾಯ ಬೇಕಾದರೂ ನಾನು ಮಾಡ್ತೀನಿ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ. ಪಳನಿ ಗೆ ಹೋಗಿದಾರೆ . ಬರೋದು ಒಂದು ವಾರ ಆಗತ್ತೆ. ದೇವಸ್ಥಾನಕ್ಕೆ ಆಮೇಲೆ ಬಾ ಮಾತಾಡೋಣ ಅಂತ ಹೇಳಿ ಪಾತ್ರೆ ಕಿತ್ತುಕೊಂಡು ತುಂಬ ಹಾಲು ಕೊಟ್ಟು 

ಕಳಿಸಿದ.

ಹತ್ತು ಗಂಟೆಗೆ ದೇವಸ್ಥಾನಕ್ಕೆ ಹೋದಳು. ಇವಳಿಗಾಗಿ

ಕಾದಿದ್ದ. ಬೇರೆ ಯಾರೂ ಇರಲಿಲ್ಲ. ಹೇಳು ಶಾಂತಿ ಏನು ತೊಂದರೆ ಅಂದಾಗ ಮತ್ತೆ ಅಳು. ಎಷ್ಟು ಅಳ್ತೀಯೋ ಅತ್ತು ಆಮೇಲೆ ಹೇಳು ಅಂತ ದೂರ ಹೋಗಿ ಕೂತ.

ದೂರದಿಂದಲೇ ನಡೆದದ್ದೆಲ್ಲಾ ಹೇಳಿದಳು. ಬೆಳಗ್ಗೆ ನಿಮ್ಮ ಮನೆಗೆ ಬಂದೋರು ಮೊದಲು ಈ ದೇವಸ್ಥಾನಕ್ಕೆ ಬಂದಿದ್ದರು. ಅವರು ಯಾವುದೋ ನಾಟಕದ ಕಂಪನಿ ಯವರು ಅಂದುಕೊಂಡೆ. ಅವರ ಮಾತಿನಿಂದ ನನಗೆ ತಿಳಿದದ್ದು ಆ ಹೆಂಗಸು ಅವರ ಅಮ್ಮ ಅಲ್ಲ. ಅವರು ಮೂರು ಹುಡುಗರೂ ಅಣ್ಣ ತಮ್ಮಂದಿರೂ ಅಲ್ಲ. ಹೌದು 

ಅವರು ಯಾವ ಊರು ಅಂತ ಹೇಳಿದ್ರುಅಂತ ಕೇಳಿದ. ತಿರುವಣ್ಣಾ ಮಲೈ .ಸುಳ್ಳು ಬೆಂಗಳೂರಿನ ಕೆ .ಜಿ ಹಳ್ಳಿಯ ವರು. ಇಲ್ಲಿಗೆ ಬಂದವರು ಯಾರೋ ಅವರ ಹತ್ತಿರ ಮಾತಾಡ್ತಿದ್ದಾಗ ಅವರೇ ಹೇಳಿದ್ದು ಹುಟ್ಟಿ ಬೆಳದದ್ದೆಲ್ಲಾ ಟ್ಯಾನರಿ ರಸ್ತೆ ಅಂತ. ಈಗ ಹೇಳು ನಿನ್ನ ನಿರ್ಧಾರ ಏನು .ನನ್ನ ಜೊತೆ ಯಾರೂ ಇಲ್ಲ .ಭಯ ಆಗತ್ತೆ. ಏನು ಮಾಡಬೇಕೋ ಒಂದೂ ಗೊತ್ತಾಗ್ತಿಲ್ಲ ಅಂದಳು .ಅಷ್ಟು ಹೊತ್ತಿಗೆ ದೇವರಿಗೆ ನಮಸ್ಕಾರ ಮಾಡಕ್ಕೆ ಒಬ್ಬರು ಬಂದು 

ಏನು ಪುಂಢ್ರೀ ಏಕೆ ಹುಡುಗಿ ಹೆದರದ ಹಾಗೆ ಕಾಣ್ತಾ ಇದೆ ಅಂತ ಕೇಳಿದರು. ಸಾರ್ ನೀವು ಪೋಲೀಸರ ಹತ್ತಿರ ಹೆಚ್ಚಾಗಿ ಮಾತಾಡ್ತಾ ಇರ್ತೀರಿ..ಹೊಸಬರು ಬಂದರೂ ಬೇಗ ನಿಮಗೆ ಪರಿಚಯ ಆಗ್ತಾರೆ ಹೇಗೆ ಸಾರ್.ನನ್ನ ಪ್ರಶ್ನೆ ಗೆ ನಿನ್ನ ದೊಂದು ಪ್ರಶ್ನೆನಾ .ಆಯಿತು ಈ ಹುಡುಗಿ ಯಾರು ಮೊದಲು ಹೇಳು.

ಸಾರ್ ಅರಳಿ ಮರದ ಪಕ್ಕದ ಮನೇಲಿ ಕಾರ್ಪೆಂಟರ್ ಇದಾನೆ .ಅದೇ ದೊರೆ ಕುಡುಕ ಆದರೂ ಒಳ್ಳೆಯ ಕೆಲಸಗಾರ ಗೊತ್ತು ಹೇಳು. ಅವನ ಮಗಳು ಈ ಶಾಂತಿ.

ಇವಳಿಗೆ ಮದುವೆ ಅಂತೆ . ಅಪ್ಪ ಅಣ್ಣ ಸೇರಿ ದುಡ್ಡು ತೊಗೊಂಡು ಮದುವೆ ಮಾಡ್ತಾ ಇದಾರೆ .ಆ ಪಾರ್ಟಿ ಸ್ಸಲ್ಪ ನನಗೆ ಡೌಟು ಅಂದ. ನಿನಗೆ ಎಷ್ಟಮ್ಮ ವಯಸ್ಸು ಅನ್ನೋ ಹೊತ್ತಿಗೆ ಮೊಬೈಲ್ ಕಾಲ್ ಬಂತು .ಅರ್ಜಂಟಾಗಿ ನಾನು ಸ್ಟೇಷನ್ ಗೆ ಹೋಗ್ಬೇಕು. ನಿನ್ನ ನಂಬರ್ ಕೊಡು ಅಂತ ತೆಗೆದುಕೊಂಡು ಹೋಗಿ ಹತ್ತು ನಿಮಿಷದಲ್ಲಿ ಫುಂಡ್ರಿ ಗೆ ಫೋನ್ ಮಾಡಿ ಹೇಳಿದರು. ಹೆದರೋದು ಬೇಡ. ಮದುವೆ ಆಗಲ್ಲ .ಇದನ್ನು ನೀವು ಇನ್ನು ಯಾರ ಹತ್ತಿರಾನೂ ಹೇಳಬೇಡಿ ಅಂತ ಧೈರ್ಯ ಕೊಟ್ಟರು.

ಒಂದು ವಾರದ ನಂತರ ಅವರು ಹೇಳಿದ ಹಾಗೆ ಬಂದು 

ಚರ್ಚ್ ನಲ್ಲಿ ಮದುವೆ. ನಾವು ಏಳು ಜನ ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗೋದು ಬೇಡ. ತೊಂದರೆ ಆಗತ್ತೆ. ಅಂತ ಹತ್ತು ಸಾವಿರ ಬ್ಯಾಗ್ ನಿಂದ ತೆಗೆದು ರಾಣಿ ದೊರೆಗೆ ಕೊಡೋ ಸಮಯಕ್ಕೆ ಸರಿಯಾಗಿ ಮಗ ರಾಜಾ ಬಂದು ಕಿತ್ತು ಕೊಂಡ. ದೊಡ್ಡ ಗಲಾಟೆ ಆಯ್ತು .ಮನೆ ಯಿಂದ ಎಲ್ಲಾ ಹೊರಗೆ ಬಂದರು .ಆಗಲೇ ಮನೆ ಮುಂದೆ ಪೋಲೀಸರು ಜೀಪ್ ಹತ್ತಿರ ನಿಂತಿದ್ದರು.

ರಾಜಾ ಹಣ ತೊಗೊಂಡು ಓಡಕ್ಕೆ ನೋಡಿದ ಅಷ್ಟ ರಲ್ಲಿ 

ಪೋಲೀಸರ ಕೈಗೆ ಸಿಕ್ಕಿಬಿದ್ದ .ಆ ನಾಲ್ಕು ಜನ ಬಂದಿದ್ದೋರು ತಲೆ ಬಗ್ಗಿಸಿಕೊಂಡು ಹೊರಗೆ ಬಂದ ತಕ್ಷಣ ನಾಲ್ಕು ಜನರನ್ನೂ ಹಿಡಿದು ವ್ಯಾನ್ ಹತ್ತಿಸಿದ ರು .ದೊರೆನ ಕರೆದು ದುಡ್ಡಿನಾಸೆಗೆ ನಿನ್ನ ಮಗಳನ್ನ ಬಾಂಬೆಗೆ ಕಳಿಸಿ ಬಿಡ್ತಿದ್ದೀಯಲ್ಲೋ ಹಲ್ಕಾ ಸೂ.....ಮ ಎಂತಾ ತಂದೇನೋ ನೀನು.ನಿನ್ನ ಮಗಳ ಅಧ್ರುಷ್ಟ ಚನ್ನಾಗಿತ್ತು ಬಚಾವಾಗಿದಾಳೆ. ನೀನು ನಿನ್ನ ಮಗ ಇಬ್ಬರೂ ಕಂಬಿ ಎಣಿಸಿ ಅಂದರು. ವ್ಯಾನ್ ಹೋಯಿತು. ಶಾಂತಿ ಫುಂಡ್ರಿ ನೋಡ್ತಾ ನಿಂತಿದ್ರು. 


ಪುಂಡ್ರೀನೆ ಒಪ್ಪಿದ್ದಕ್ಕೆ ಹದಿನೆಂಟು ಆದಮೇಲೆ ಪೋಲಿಸ್ ಸ್ಟೇಷನ್ ನಲ್ಲೇ ಅವರ ಮದುವೆ ಆಯ್ತು. ಈಗ ಚೆನ್ನಾಗಿ ದಾರೆ ಮೂರು ಮಕ್ಕಳು.


Rate this content
Log in

Similar kannada story from Classics